Purushothama Sanmana | ಗುಜರಾತ್‌ನ ಧನುಬೆನ್‌, ಮಗನ್ ಭಾಯ್ ರೈತ ಕುಟುಂಬಕ್ಕೆ ʻಪುರುಷೋತ್ತಮ ಸನ್ಮಾನʼ - Vistara News

ಕರ್ನಾಟಕ

Purushothama Sanmana | ಗುಜರಾತ್‌ನ ಧನುಬೆನ್‌, ಮಗನ್ ಭಾಯ್ ರೈತ ಕುಟುಂಬಕ್ಕೆ ʻಪುರುಷೋತ್ತಮ ಸನ್ಮಾನʼ

Purushothama Sanmana | ಜ.27ರಂದು ನಡೆಯುವ ಪುರುಷೋತ್ತಮ ಸನ್ಮಾನ ಕಾರ್ಯಕ್ರಮದಲ್ಲಿ ಸಾವಯವ ಕೃಷಿರಾಗಿರುವ ಗುಜರಾತ್‌ನ ಧನುಬೆನ್, ಮಗನ್ ಭಾಯ್ ಕುಟುಂಬವನ್ನು ಸನ್ಮಾನಿಸಲಾಗುವುದು. ಈ ಕಾರ್ಯಕ್ರಮಕ್ಕೆ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಲಾಗಿದೆ.

VISTARANEWS.COM


on

Purushothama Sanmana gujarat family theerthahalli
ಪ್ರಶಸ್ತಿ ಪುರಸ್ಕೃತರಾಗುವ ದಂಪತಿ ಕುಟುಂಬ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತೀರ್ಥಹಳ್ಳಿ: ಸಾವಯವ ಕೃಷಿಯ ಹರಿಕಾರ ‘ಕೃಷಿ ಋಷಿ’ ದಿವಂಗತ ಪುರುಷೋತ್ತಮ ರಾಯರು ಹಾಗೂ ಅವರ ಧರ್ಮ ಪತ್ನಿ ಶಾಂತಾ ಪುರುಷೋತ್ತಮ ರಾಯರ ನೆನಪಿನಲ್ಲಿ “ಪುರುಷೋತ್ತಮ ಸನ್ಮಾನ” (Purushothama Sanmana) ಕಾರ್ಯಕ್ರಮವು ನಗರದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜ.27ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.

ಪ್ರಶಸ್ತಿ ಪುರಸ್ಕೃತರಾಗುವ ದಂಪತಿ

ತೀರ್ಥಹಳ್ಳಿಯ ಪುರುಷೋತ್ತಮ ರಾವ್‌ ಕೃಷಿ ಸಂಶೋಧನಾ ಪ್ರತಿಷ್ಠಾನವು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಸಾಧಕರಾಗಿರುವ ಗುಜರಾತ್‌ನ ಧನುಬೆನ್ ಮತ್ತು ಮಗನ್ ಭಾಯ್ ಕುಟುಂಬವನ್ನು ಸನ್ಮಾನಿಸಲಾಗುವುದು. ಪ್ರತಿಷ್ಠಾನದ ಅಧ್ಯಕ್ಷ ವರದಾಚಾರ್ ಎಸ್. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ್ ಭೇಂಡೆ ಭಾಗವಹಿಸುವರು. ಪ್ರತಿಷ್ಠಾನದ ಉಪಾಧ್ಯಕ್ಷರೂ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ಉಪಸ್ಥಿತರಿರುವರು. ಅಂದು ಸಾವಯವ ಕೃಷಿ ಉತ್ಪನ್ನಗಳು, ಪುಸ್ತಕಗಳು, ದೇಸಿ ಬೆಳೆ ಬೀಜಗಳ ಪ್ರದರ್ಶನ ಇರುತ್ತದೆ.

ಈ ಕಾರ್ಯಕ್ರಮಕ್ಕೆ ಕೃಷಿ ಪ್ರಯೋಗ ಪರಿವಾರ, ಸಾವಯವ ಕೃಷಿ ಪರಿವಾರ, ಸುಭಿಕ್ಷಾ ಆರ್ಗಾನಿಕ್ ಫಾರ್ಮ್ಸ್‌ ಮಲ್ಟಿಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ಲಿ. ಹಾಗೂ ರಾಜ್ಯದ ವಿವಿಧ ತಾಲೂಕಿನ ಸಾವಯವ ಕೃಷಿ ಪರಿವಾರಗಳು ಸಹಕಾರ ನೀಡುತ್ತಿವೆ. ಈ ಕಾರ್ಯಕ್ರಮಕ್ಕೆ ರಾಜ್ಯದೆಲ್ಲೆಡೆಯಿಂದ ಸಾವಯವ ಕೃಷಿಕರು ಹಾಗೂ ಗ್ರಾಹಕರು ಆಗಮಿಸಬೇಕೆಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ವರದಾಚಾರ್ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದ್ದಾರೆ.

ಪುರುಷೋತ್ತಮ ರಾಯರು ಮತ್ತು ಶಾಂತಾ ಪುರುಷೋತ್ತಮ ರಾಯರು

ಇದನ್ನೂ ಓದಿ | Stray Cattle : ಬೆಂಗಳೂರು ವಾಹನ ಸವಾರರಿಗೆ ಬಿಡಾಡಿ ದನಗಳ ಕಾಟ: ರಸ್ತೆಯಲ್ಲಿ ದನಗಳು ಕಂಡರೆ ಈ ಸಂಖ್ಯೆಗೆ ಕರೆ ಮಾಡಿ

ಪ್ರತಿಷ್ಠಾನದ ಕಿರು ಪರಿಚಯ

ತೀರ್ಥಹಳ್ಳಿಯ ಕೃಷಿ ಋಷಿ ದಿ. ಪುರುಷೋತ್ತಮ ರಾಯರು ಸಾವಯವ ಕೃಷಿಯ ಪ್ರಯೋಗ, ಪ್ರಚಾರಾಂದೋಲನದ ನೇತೃತ್ವ ವಹಿಸಿಕೊಂಡವರು. ಅವರ ಪ್ರೇರಣೆಯಿಂದ ಸಾವಯವ ಕೃಷಿಯನ್ನು ಅಳವಡಿಸಿಕೊಂಡ ರೈತರ ಸಂಖ್ಯೆ ನೂರಾರು. ಅವರು ತಮ್ಮ ಕರ್ಮಭೂಮಿ ‘ಕೃಷಿ ನಿವಾಸ’ವನ್ನು ಸಾವಯವ ಕೃಷಿಯಲ್ಲಿ ಪ್ರಯೋಗ, ಪ್ರಚಾರ ಮತ್ತು ಶಿಕ್ಷಣ ಕಾರ್ಯಗಳಿಗಾಗಿ ಮೀಸಲಿಟ್ಟಿವರಾಗಿದ್ದರು. 1998ರಲ್ಲಿ ವಿಧಿವಶರಾದರು. ಹೀಗಾಗಿ ಅವರ ಆಶಯದಂತೆ 1999ರಲ್ಲಿ ಅಸ್ತಿತ್ವಕ್ಕೆ ಬಂದ ಪುರುಷೋತ್ತಮ ರಾವ್‌ ಕೃಷಿ ಸಂಶೋಧನಾ ಪ್ರತಿಷ್ಠಾನವು ಕಳೆದ 24 ವರ್ಷಗಳಿಂದ ಸಾವಯವ ಕೃಷಿ ಮತ್ತು ಗ್ರಾಮ ವಿಕಾಸಗಳಿಗೆ ಪೂರಕವಾಗುವ ಪ್ರಯೋಗ, ಪ್ರಚಾರ, ಪ್ರಕಾಶನ ಹಾಗೂ ಶಿಕ್ಷಣ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದೆ. ಪ್ರತಿಷ್ಠಾನವು ಪ್ರತಿ ವರ್ಷ ಶ್ರೀ ಪುರುಷೋತ್ತಮ ರಾವ್ ಹಾಗೂ ಶ್ರೀಮತಿ ಶಾಂತಾ ಪುರುಷೋತ್ತಮ ರಾವ್ ದಂಪತಿಗಳ ಸವಿ ನೆನಪಿನಲ್ಲಿ ಸಾವಯವ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕೃಷಿಕ ದಂಪತಿಗೆ ಅಥವಾ ಸಂಸ್ಥೆಗೆ ‘ಪುರುಷೋತ್ತಮ ಸನ್ಮಾನ’ವನ್ನು ನೀಡಿ ಗೌರವಿಸುತ್ತಿದೆ.

ಇದನ್ನೂ ಓದಿ |Viral Video : ಐದು ವರ್ಷ ಬಾಲಕನೇ ಪೊಲೀಸರಿಗೆ ಮುಖ್ಯಸ್ಥ! ವೈರಲ್‌ ಆಯ್ತು ಈ ವಿಶೇಷ ವಿಡಿಯೊ

ಪುರುಷೋತ್ತಮ ಸನ್ಮಾನಕ್ಕೆ ಭಾಜನರಾದವರ ಕಿರು ಪರಿಚಯ

ಭೂಮಿಯನ್ನು ತಾಯಿಯಂತೆ ಕಾಣುವುದು ಎಂದರೇನು ಎಂಬ ಪ್ರಶ್ನೆಗೆ ಉತ್ತರ ಎನ್ನುವಂತೆ ಬದುಕುತ್ತಿರುವ ಅಪರೂಪದ ರೈತ ಕುಟುಂಬ ಧನುಬೆನ್ ಮತ್ತು ಮಗನ್ ಭಾಯ್ ಅವರದು. ಗುಜರಾತ್‌ನ ಕಟ್‌ ಜಿಲ್ಲೆಯಲ್ಲಿನ ಅಂಜ‌ ತಾಲೂಕಿನ ನಿಂಗಲ್ ಗ್ರಾಮದಲ್ಲಿ ಇವರು ತಮ್ಮ ಮಗ, ಸೊಸೆ, ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಈ ಪರಿವಾರವು ಭೂಮಿಗೆ ಕಿಂಚಿತ್ತೂ ವಿಷವುಣಿಸದೇ ಮರುಭೂಮಿ ಸೆರಗಿನ ಜವುಳು ಭೂಮಿಯಲ್ಲಿ ಅಕ್ಷರಶಃ ಚಿನ್ನದ ಬೆಳೆ ತೆಗೆಯುತ್ತಿದೆ. ಪರಿಸರ ಸ್ನೇಹಿ ಬೆಳೆ ಪದ್ಧತಿ, ಹೈನುಗಾರಿಕೆ, ಸಾವಯವ ಗೊಬ್ಬರ ಬಳಕೆ, ದೇಸಿ ತಳಿಗಳ ಬಳಕೆ, ನೀರಿನ ಸದ್ಬಳಕೆ.. ಹೀಗೆ ರೈತರ ಬದುಕಿನ ಭಾಗವಾಗಿರುವ ಎಷ್ಟೋ ಜಿಜ್ಞಾಸೆಗಳಿಗೆ ಇವರ ಕೃಷಿಯಲ್ಲಿ ಉತ್ತರವಿದೆ. ಕಠಿಣ ಪರಿಶ್ರಮ, ನಂಬಿದ ತತ್ತ್ವದ ಶ್ರದ್ಧೆಯ ಪಾಲನೆ ಈ ಕುಟುಂಬವನ್ನು ಇತರ ರೈತ ಕುಟುಂಬಗಳಿಗಿಂತ ಭಿನ್ನ ಎನ್ನುವಂತೆ ಮಾಡಿದೆ.

ಇದನ್ನೂ ಓದಿ | Congress Protest : ರಸ್ತೆ ಗುಂಡಿಗಳ ರಾಜಧಾನಿ ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್‌ ವಾಗ್ದಾಳಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Union Budget 2024: ವಾರ್ಷಿಕ 7.5 ಲಕ್ಷ ವೇತನ ಪಡೆಯುವವರಿಗೆ ಯಾವುದೇ ತೆರಿಗೆ ಇಲ್ಲ: ನಿರ್ಮಲಾ ಸೀತಾರಾಮನ್

Union Budget 2024: ಕರ್ನಾಟಕಕ್ಕೆ ಹತ್ತು ವರ್ಷದಲ್ಲಿ ಯುಪಿಎ ಸರ್ಕಾರ 81,791 ಕೋಟಿ ಅನುದಾನ ನೀಡಿದೆ. ಎನ್‌ಡಿಎ ಸರ್ಕಾರ 2,95,818 ಅನುದಾನ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

VISTARANEWS.COM


on

Union Budget 2024
Koo

ಬೆಂಗಳೂರು: ವಾರ್ಷಿಕ 7.5 ಲಕ್ಷ ವೇತನ ಪಡೆಯುವವರಿಗೆ ಯಾವುದೇ ತೆರಿಗೆ ಇಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನದ (Union Budget 2024) ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಮಾಹಿತಿ ಕೊಡುತ್ತಿದೆ. ಕೇಂದ್ರದಿಂದ ಯಾವುದೇ ಬಾಕಿ ಇಲ್ಲ. ಹತ್ತು ವರ್ಷದಲ್ಲಿ ಯುಪಿಎ ಸರ್ಕಾರ 81,791 ಕೋಟಿ ಅನುದಾನ ನೀಡಿದೆ. ಎನ್‌ಡಿಎ ಸರ್ಕಾರ 10 ವರ್ಷಗಳಲ್ಲಿ 2,95,818 ಅನುದಾನ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ 60,679 ಕೋಟಿ ಗ್ರ್ಯಾಂಟ್ ಇನ್ ಏಡ್ ನೀಡಲಾಗಿದ್ದು, ಮೋದಿ ಸರ್ಕಾರದಲ್ಲಿ 2,36,955 ಕೋಟಿ ನೀಡಲಾಗಿದೆ. ಯುಪಿಎ ವಾರ್ಷಿಕ 8,179 ಕೋಟಿಯಾದರೆ, ಮೋದಿ ಸರ್ಕಾರದಲ್ಲಿ ವಾರ್ಷಿಕ 45,485 ಕೋಟಿ ನೀಡಲಾಗಿದೆ.

ಕಲಬುರಗಿಯ ಪಿಎಂ ಮಿತ್ರಾ ಮೆಗಾ ಟೆಕ್ಸ್‌ಟೈಲ್ಸ್ ಪಾರ್ಕ್‌ಗೆ 200 ಕೋಟಿ ಅನುದಾನ ನೀಡಲಾಗಿದೆ. ಕರ್ನಾಟಕದಲ್ಲಿ ರೈಲ್ವೆಗೆ 2009-14ರವರೆಗೂ 835 ಕೋಟಿ ನೀಡಲಾಗಿತ್ತು. 2024-25ನೇ ಸಾಲಿನ ಬಜೆಟ್‌ನಲ್ಲಿ 7,559 ಕೋಟಿ ನೀಡಲಾಗಿದೆ. ರೈಲ್ವೆ ಹಳಿಗಳ ನಿರ್ಮಾಣಕ್ಕೆ, 47,016 ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ. 7 ಒಂದೇ ಭಾರತ್ ರೈಲು ಸಂಚರಿಸುತ್ತಿವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಐಐಟಿ ಧಾರವಾಡ ಸ್ಥಾಪನೆ ಆಗಿದೆ. ತುಮಕೂರಿನಲಿ ಸೌತ್ ಇಂಡಿಯಾ ಕಾರಿಡಾರ್ ನಡೆಯುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಗಾಗಿ 6,428 ಕೋಟಿ ಅನುದಾನ ನೀಡಲಾಗಿದೆ. 7 ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದ್ದು, 1,600 ಕೋಟಿ ವೆಚ್ಚದಲ್ಲಿ ಖಾಸಗಿ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್ ಬೆಂಗಳೂರಿನಲ್ಲಿ ನಿರ್ಮಾಣ ಮಾಡಲಾಗಿದೆ.

4,600 ಕಿ.ಮೀ ರಸ್ತೆ ನಿರ್ಮಾಣ ಆಗಿದೆ. ಭಾರತ್ ಮಾಲಾ ಯೋಜನೆಯಡಿ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಸೇರಿ ಮೂರು ಎಕ್ಸ್‌ಪ್ರೆಸ್ ವೇ ನಿರ್ಮಾಣವಾಗುತ್ತಿವೆ ಎಂದು ಹೇಳಿದರು.

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕರ್ನಾಟಕ ಸರ್ಕಾರ ಪೆಟ್ರೋಲ್, ಡೀಸೆಲ್, ಹಾಲು, ಗೈಡ್‌ಲೈನ್ಸ್ ವ್ಯಾಲ್ಯೂ, ಇವಿ ವಾಹನಗಳ ದರ ಎಲ್ಲವೂ ಹೆಚ್ಚಳ ಮಾಡಿದೆ. ಉದ್ಯೋಗ ಸೃಷ್ಟಿ ಸಂಪೂರ್ಣ ಕುಸಿದಿದೆ. ಕಳೆದ ವರ್ಷ ಆದಾಯ ಬಜೆಟ್ ಮಂಡನೆಯಾಗಿತ್ತು, ಒಂದೇ ವರ್ಷದಲ್ಲಿ ಖೋತಾ ಬಜೆಟ್ ಆಗಿದೆ. ಎಸ್‌ಸಿ, ಎಸ್‌ಟಿ ಯೋಜನೆಯಿಂದ ಹಣ ತೆಗೆಯಲಾಗಿದೆ. ವಾಲ್ಮೀಕಿ ಹಗರಣ ನಿಮಗೆಲ್ಲಾ ಗೊತ್ತಿದೆ ಎಂದು ತಿಳಿಸಿದರು.

ಉದ್ಯೋಗ ವಿಚಾರವಾಗಿ ದೆಹಲಿಯಲ್ಲಿ ತಿಳಿಸಿದ್ದೇನೆ. ಯುವಕರಿಗೆ ಉದ್ಯೋಗ, ಎಂಎಸ್‌ಎಂಇ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಮೂರು ರೀತಿ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದ್ದು, ಮೊದಲ ಬಾರಿ ಉದ್ಯೋಗಕ್ಕೆ ಬರುವವರಿಗಾಗಿ ಉದ್ಯೋಗ, ನವೋದ್ಯಮ 4.0 ಕೈಗಾರಿಕೆಗಳಿಗಾಗಿ ಸ್ಕಿಲ್ ಟ್ರೈನಿಂಗ್ ನೀಡಲಾಗುತ್ತಿದೆ. ಇದರಿಂದ ಹೊಸ ಕಂಪನಿಗಳು ನೇಮಕಕ್ಕೆ ಸಹಾಯವಾಗಲಿದೆ. ಯುವಕರು ಓದಲು ಕಡಿಮೆ ಬಡ್ಡಿ ದರದಲ್ಲಿ 7.5ಲಕ್ಷದವರೆಗೂ ಸಾಲ ನೀಡಲಾಗುತ್ತದೆ, ಸ್ಕಿಲ್ ಟ್ರೈನಿಂಗ್‌ಗಾಗಿ ಸಾಲ ನೀಡಲಾಗುತ್ತದೆ. ಎಂಎಸ್‌ಎಂಇ ಮೂಲಕ ಹೆಚ್ಚು ಉದ್ಯೋಗ ನೀಡಲಾಗುತ್ತಿದೆ ಎಂದು ತಿಳಿಸಿದರು

ಸಂಶೋಧನೆ ಮತ್ತು ಅಭಿವೃದ್ಧಿ (R&D)ಯಿಂದ ಬೆಂಗಳೂರಿಗೆ ಹೆಚ್ಚು ಉಪಯೋಗ ಆಗಲಿದೆ. ಬೆಂಗಳೂರಿನಲ್ಲಿ ಸ್ಪೇಸ್ ರಿಸರ್ಚ್ ಈ ಹಿಂದಿನಿಂದಲೂ ನಡೆಯುತ್ತಿದೆ. ಹೀಗಾಗಿ ರಿಸರ್ಚ್‌ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಇದರಿಂದ ಹೆಚ್ಚು ಅನುಕೂಲ ಆಗಲಿದೆ. ಏಂಜೆಲ್ ಟ್ಯಾಕ್ಸ್ ಕೂಡ ಅನೇಕ ಜನರಿಗೆ ಲಾಭ ಆಗಲಿದೆ. ಕರ್ನಾಟಕ ಕೂಡ ಇದರ ಲಾಭ ಪಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ | Mann Ki Baat: ಪ್ಯಾರಿಸ್ ಒಲಿಂಪಿಕ್ಸ್​: ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಂತೆ ʼಮನ್​ ಕಿ ಬಾತ್​ʼನಲ್ಲಿ ಮೋದಿ ಕರೆ

ಇನ್ನು ಬಜೆಟ್‌ನಿಂದ ಮಹಿಳೆಯರಿಗೆ ಹೆಚ್ಚು ಅನುಕೂಲ ಆಗಲಿದೆ. ಮಹಿಳೆಯರಿಗೆ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಕೃಷಿ ಮತ್ತು ಸಂಶೋಧನೆಯಲ್ಲಿ ಕರ್ನಾಟಕ ಹೆಚ್ಚು ಲಾಭ ಪಡೆದಿದೆ. ಬೆಂಗಳೂರು ಮತ್ತು ರಾಯಚೂರಿನಲ್ಲಿ ಇದರ ಉಪಯೋಗವಾಗಿದೆ. ಅದರಲ್ಲೂ ಹೆಚ್ಚು ಉತ್ತರ ಕರ್ನಾಟಕಕ್ಕೆ ಅನುಕೂಲ ಆಗಿದೆ ಎಂದು ತಿಳಿಸಿದರು.

ವಾಲ್ಮೀಕಿ ನಿಗಮ ಹಗರಣದ ಬಗ್ಗೆ ಪ್ರತಿಕ್ರಿಯಿಸಿ, ಈ ಅಕ್ರಮದ ಬಗ್ಗೆ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಏನು ಹೇಳುತ್ತೀರಿ? ಬ್ಯಾಂಕ್ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಿ. ಕೇಂದ್ರ ಸರ್ಕಾರದ ಸಿಬ್ಬಂದಿ ಆದರೂ ಸರಿ ಅವರನ್ನು ಬಂಧನ ಮಾಡಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

Continue Reading

ಚಿಕ್ಕೋಡಿ

Assault Case : ಠಾಣೆಗೆ ಬಂದ ಮಹಿಳೆಗೆ ಜಾಡಿಸಿ ಒದ್ದ ಖಡಕಲಾಟ ಪಿಎಸ್‌ಐ!

Assault Case : ಠಾಣೆಗೆ ಬಂದ ಮಹಿಳೆಗೆ ಪಿಎಸ್‌ಐವೊಬ್ಬರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಮಹಿಳೆಯ ಹೊಟ್ಟೆಗೆ ಜಾಡಿಸಿ ಒದ್ದು ನರಳಾಡುವಂತೆ ಮಾಡಿದ್ದಾರೆ. ಸದ್ಯ ಮಹಿಳೆಯನ್ನು ಬಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

VISTARANEWS.COM


on

By

Assault case
Koo

ಚಿಕ್ಕೋಡಿ: ಮಹಿಳೆಯೊಬ್ಬರು ವ್ಯಾಜ್ಯದ ಸಲುವಾಗಿ ಪೊಲೀಸ್‌ ಠಾಣೆಗೆ ತೆರಳಿದ್ದರು. ಈ ವೇಳೆ ಮಹಿಳಾ ಪಿಎಸ್‌ಐ ಜಾಡಿಸಿ ಒದ್ದು ಹಲ್ಲೆ (Assault Case) ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಖಡಕಲಾಟ ಠಾಣೆಯಲ್ಲಿ ಘಟನೆ ನಡೆದಿದೆ. ಮಹಿಳಾ ಪಿಎಸ್‌ಐ ಅನಿತಾ ರಾಠೋಡ ಎಂಬುವವರು ಮಹಿಳೆಯ ಹೊಟ್ಟೆಗೆ ಜಾಡಿಸಿ ಒದ್ದಿದ್ದಾರೆ. ನಿರ್ದಯಿ ಪೊಲೀಸ್ ಅಧಿಕಾರಿಯಿಂದ ಮಹಿಳೆಯ ಮೇಲೆ ಹಲ್ಲೆಗೆ ಕುಟುಂಬಸ್ಥರು ಕಿಡಿಕಾರಿದ್ದಾರೆ.

ಪೂನಂ ಮಾಯಣ್ಣವರ ಎಂಬಾಕೆ ಅಣ್ಣ-ತಮ್ಮಂದಿರ ವ್ಯಾಜ್ಯದ ಸಲುವಾಗಿ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಖಡಕಲಾಟ ಪಿಎಸ್‌ಐ ಅನಿತಾ ರಾಠೋಡ ಪೂನಂ ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರ ಅಸ್ವಸ್ಥಳಾಗಿದ್ದ ಪೂನಂ ಮಾಯಣ್ಣಳನ್ನು ಕುಟುಂಬಸ್ಥರು ಕೂಡಲೇ ನಿಪ್ಪಾಣಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಪೂನಂ ನರಳಾಡುತ್ತಿದ್ದು, ಪಿಎಸ್‌ಐ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇಷ್ಟಕ್ಕೂ ಠಾಣೆಗೆ ಬಂದ ಮಹಿಳೆಗೆ ಪಿಎಸ್‌ಐ ಅನಿತಾ ಹಲ್ಲೆ ಮಾಡಿದ್ದು ಯಾಕೆ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ: Road Accident : ಕುಡಿದು ಕಾರು ಓಡಿಸಿ ಪ್ರಾಣ ಕಳೆದುಕೊಂಡ ಇಬ್ಬರು ಯುವಕರು ; ಕಾರ್ಕಳದಲ್ಲಿ ಸಿಲಿಂಡರ್ ಸ್ಫೋಟ

ಕೈ ಕಟ್‌ ಮಾಡಿದ ರೌಡಿಗಳ ಕಾಲಿಗೆ ಪೊಲೀಸರ ಗುಂಡೇಟು

ರಾಮನಗರ: ಬೆಳ್ಳಂಬೆಳಿಗ್ಗೆ ರೌಡಿಶೀಟರ್‌ಗಳ (Rowdysheeters) ಮೇಲೆ ಕನಕಪುರ ನಗರ ಪೊಲೀಸರು (Kanakapura Police) ಗುಂಡು ಹಾರಿಸಿ (Police Firing) ಬಂಧಿಸಿದ್ದಾರೆ. ವ್ಯಕ್ತಿಯೊಬ್ಬನ ಕೈ ಕತ್ತರಿಸಿ (Assault Case) ಪರಾರಿಯಾಗಿದ್ದ ರೌಡಿಗಳನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಕನಕಪುರ ಟೌನ್ ಸಿಪಿಐ ಮಿಥುನ್ ಶಿಲ್ಪಿ ಹಾಗೂ ಪಿಎಸ್ಐ ಮನೋಹರ್ ಅವರಿಂದ ಫೈರಿಂಗ್ ನಡೆದಿದೆ. ಹರ್ಷ ಅಲಿಯಾಸ್ ಕೈಮ, ಕರುಣೇಶ್ ಅಲಿಯಾಸ್ ಕಣ್ಣ ಗಾಯಗೊಂಡ ರೌಡಿಶೀಟರ್‌ಗಳು. ಕಗ್ಗಲೀಪುರದ ವ್ಯಾಲಿ ಸ್ಕೂಲ್ ರೋಡ್ ಬಳಿ ಪೊಲೀಸರಿಂದ ಫೈರಿಂಗ್ ನಡೆದಿದೆ.

ಕಳೆದ ವಾರ ಕನಕಪುರದ ಮಾಳಗಾಳು ಬಡಾವಣೆಯಲ್ಲಿ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಒಬ್ಬ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೈ ಕಟ್ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಆರೋಪಿಗಳನ್ನು ಬಂಧಿಸುವಂತೆ ದಲಿತ‌‌ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇಂದು ಮುಂಜಾನೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಹೋಗಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಈ ರೌಡಿಗಳು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದು ಅವರನ್ನು ಬಂಧಿಸಿದ್ದಾರೆ. ಹಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ರಾಜಶೇಖರ್, ಶಿವಕುಮಾರ್ ಎಂಬವರಿಗೂ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.

ವಿಚ್ಛೇದಿತ ನರ್ಸ್‌ ಜೊತೆ ಲವ್ವಿ ಡವ್ವಿ; ಪೊಲೀಸಪ್ಪನಿಗೇ ಕಾನೂನು ರುಚಿ ತೋರಿಸಿದ ಪತ್ನಿ

ರಾಯಚೂರು: ವಿಚ್ಛೇದಿತ ನರ್ಸ್‌ ಒಬ್ಬಾಕೆಯೊಂದಿಗೆ ಲವ್ವಿ ಡವ್ವಿ (Illicit Relationship) ಹೊಂದಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ (Police constable) ಒಬ್ಬಾತನಿಗೆ ಆತನ ಪತ್ನಿ ಕಾನೂನು ಅಸ್ತ್ರದ ಮೂಲಕ ಪಾಠ ಕಲಿಸಲು ಮುಂದಾಗಿದ್ದಾರೆ. ಘಟನೆ ರಾಯಚೂರಿನ ದೇವದುರ್ಗದಲ್ಲಿ ನಡೆದಿದೆ.

ಸಿರವಾರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಜ್ ಮಹಮ್ಮದ್ ಎಂಬಾತನ ಮೇಲೆ ಆತನ ಪತ್ನಿಯಿಂದ ಕೇಸು ಬಿದ್ದಿದೆ. ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಮಹಿಳಾ ಪೇದೆ ಆಗಿರುವ ಪ್ಯಾರಿ ಬೇಗಂ ಎಂಬಾಕೆ ಈತನ ಪತ್ನಿ ಹಾಗೂ ದೂರು ಸಲ್ಲಿಸಿದವರು. ರಾಜ್ ಮಹಮ್ಮದ್ ಮತ್ತು ಪ್ಯಾರಿ‌ ಬೇಗಂ ಪ್ರೀತಿಸಿ ಮದುವೆಯಾದವರು. ಆದರೆ ಇತ್ತೀಚೆಗೆ ರಾಜ್‌ ಮಹಮ್ಮದ್‌ ಇನ್ನೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ.

ಕವಿತಾ ಆಸ್ಪತ್ರೆ ನರ್ಸ್ ಸರಳ ಎಂಬಾಕೆಯ ಜೊತೆ ಸುಮಾರು 4-5 ವರ್ಷಗಳಿಂದ ವಿವಾಹೇತರ ಸಂಬಂಧ ನಡೆಸಿದ್ದ. ಇವರಿಬ್ಬರನ್ನೂ ಮನೆಯೊಂದರಲ್ಲಿ ರೆಡ್ ಹ್ಯಾಂಡ್ ಆಗಿ ಪ್ಯಾರಿ ಬೇಗಂ ಹಿಡಿದಿದ್ದರು. ಬಳಿಕ ಪೊಲೀಸರಿಗೆ ಒಪ್ಪಿಸಿ ಪತಿ ವಿರುದ್ಧವೇ ಎಸ್ಪಿಗೆ ದೂರು ನೀಡಿದ್ದಾರೆ. ಎಸ್‌ಪಿಯನ್ನು ಭೇಟಿ ಮಾಡಿ, ‌ಬಳಿಕ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರಾಜ್ ಮಹಮ್ಮದ್, ರಿಜಿಯಾ ಬೇಗಂ, ಮೈಬೂಬ್ ಮತ್ತು ಸ್ಟಾಫ್ ನರ್ಸ್ ಸರಳ ವಿರುದ್ಧ ರಾಯಚೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗರ್ಭಪಾತ, ವರದಕ್ಷಿಣೆ ಕಿರುಕುಳ (Dowry harassment), ಕೊಲೆ ಯತ್ನ (Murder attempt) ಸೇರಿದಂತೆ ಹಲವು ಆರೋಪಗಳನ್ನು ಗಂಡನ ವಿರುದ್ಧ ಪ್ಯಾರಿ ಬೇಗಂ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Valmiki Corporation Scam: 10 ಕೆಜಿ ಚಿನ್ನದ ಗಟ್ಟಿ ಮನೆಯಲ್ಲಿಟ್ಟಿದ್ದ ವಾಲ್ಮೀಕಿ ನಿಗಮ ಹಗರಣದ ಆರೋಪಿ! ಇನ್ನೂ 5 ಕಿಲೋ ಗಾಯಬ್

Valmiki Corporation Scam: ಆರೋಪಿಯು ಹೈದರಾಬಾದ್‌ನ ಫ್ಲಾಟ್‌ನಲ್ಲಿ ಅಡಗಿಸಿಟ್ಟಿದ್ದ 8 ಕೋಟಿ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಆರೋಪಿ ಸತ್ಯನಾರಾಯಣ ವರ್ಮಾ ವಾಲೀಕಿ ಹಗರಣದ ಹಣದಲ್ಲೇ ಚಿನ್ನ ಖರೀದಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ 15 ಕೆಜಿ ಚಿನ್ನದ ಬಿಸ್ಕೆಟ್‌ಗಳ ಬಗ್ಗೆ ಬಾಯಿ ಬಿಟ್ಟಿದ್ದು, ಅದರಂತೆ ಹೈದ್ರಾಬಾದ್‌ನ ತನ್ನ ಫ್ಲಾಟ್‌ನಲ್ಲಿ 10 ಕೆಜಿ ಚಿನ್ನದ ಗಟ್ಟಿ ಇಟ್ಟಿರುವುದಾಗಿ ಹೇಳಿದ್ದ.

VISTARANEWS.COM


on

valmiki corporation scam satyanarayana varma
Koo

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ (Valmiki Corporation Scam) ಬಹುಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಐಡಿ (CID) ಹಾಗೂ ಎಸ್‌‍ಐಟಿ (SIT) ಅಧಿಕಾರಿಗಳು, ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಮನೆಯಲ್ಲಿ ಅಡಗಿಸಿಟ್ಟಿದ್ದ ಬರೋಬ್ಬರಿ 10 ಕೆಜಿ ಚಿನ್ನದ ಬಿಸ್ಕೆಟ್‌ಗಳನ್ನು (Gold Biscuits) ವಶಕ್ಕೆ ಪಡೆದಿದೆ.

ಆರೋಪಿಯು ಹೈದರಾಬಾದ್‌ನ ಫ್ಲಾಟ್‌ನಲ್ಲಿ ಅಡಗಿಸಿಟ್ಟಿದ್ದ 8 ಕೋಟಿ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಆರೋಪಿ ಸತ್ಯನಾರಾಯಣ ವರ್ಮಾ ವಾಲೀಕಿ ಹಗರಣದ ಹಣದಲ್ಲೇ ಚಿನ್ನ ಖರೀದಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ 15 ಕೆಜಿ ಚಿನ್ನದ ಬಿಸ್ಕೆಟ್‌ಗಳ ಬಗ್ಗೆ ಬಾಯಿ ಬಿಟ್ಟಿದ್ದು, ಅದರಂತೆ ಹೈದ್ರಾಬಾದ್‌ನ ತನ್ನ ಫ್ಲಾಟ್‌ನಲ್ಲಿ 10 ಕೆಜಿ ಚಿನ್ನದ ಗಟ್ಟಿ ಇಟ್ಟಿರುವುದಾಗಿ ಹೇಳಿದ್ದ.

ಇದೀಗ ಎಸ್‌‍ಐಟಿ ತನಿಖಾ ತಂಡ ಚಿನ್ನದ ಬಿಸ್ಕೆಟ್‌ಗಳನ್ನು ವಶಕ್ಕೆ ಪಡೆದು ಉಳಿದ 5 ಕೆಜಿ ಚಿನ್ನದ ಬಿಸ್ಕೆಟ್‌ಗಾಗಿ ಶೋಧ ನಡೆಸುತ್ತಿದೆ. ಒಟ್ಟಾರೆ ವಾಲೀಕಿ ನಿಗಮದ ಹಣದಿಂದ ಸತ್ಯನಾರಾಯಣ ವರ್ಮಾ ಬರೋಬ್ಬರಿ 35 ಕೆಜಿ ಚಿನ್ನದ ಬಿಸ್ಕೆಟ್‌ ಖರೀದಿ ಮಾಡಿರುವ ಮಾಹಿತಿಯನ್ನು ತನಿಖಾ ತಂಡ ಕಲೆ ಹಾಕಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸತ್ಯನಾರಾಯಣ ವರ್ಮಾ ನಾಪತ್ತೆಯಾಗಿದ್ದ. ಎಸ್‌‍ಐಟಿ ತಂಡ ಸತತ ಒಂದು ವಾರ ಕಾಲ ಹುಡುಕಾಟ ನಡೆಸಿದ್ದರಾದರೂ ಪತ್ತೆಯಾಗಿರಲಿಲ್ಲ.

ತದನಂತರ ವರ್ಮಾ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ಹೈದ್ರಾಬಾದ್‌ನಲ್ಲಿರುವುದು ಗೊತ್ತಾಗಿತ್ತು. ತಕ್ಷಣ ತನಿಖಾ ತಂಡ ಹೈದರಾಬಾದ್‌ಗೆ ತೆರಳಿ ಈತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ನಗರಕ್ಕೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಿದಾಗ ಹಣ ಹಾಗೂ ಚಿನ್ನದ ಬಗ್ಗೆ ತಿಳಿಸಿದ್ದ. ಸತ್ಯನಾರಾಯಣ ವರ್ಮಾ ಬಂಧನಕ್ಕೊಳಗಾಗುವ ವೇಳೆಗಾಗಲೇ ಹಣ, ಚಿನ್ನವನ್ನು ಬೇರೆಬೇರೆ ಕಡೆಗೆ ಸಾಗಿಸಿದ್ದ. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹಣ ಹಾಗೂ ಫ್ಲಾಟ್‌ ಖರೀದಿ ಬಗ್ಗೆ ಸತ್ಯನಾರಾಯಣ ವರ್ಮಾ ಬಾಯ್ಬಿಟ್ಟಿದ್ದ.

ತದನಂತರ ನ್ಯಾಯಾಲಯದಿಂದ ಸರ್ಚ್‌ ವಾರೆಂಟ್‌ ಪಡೆದು ಎಸ್‌‍ಐಟಿ ತಂಡ ಹೈದ್ರಾಬಾದ್‌ಗೆ ತೆರಳಿ ವರ್ಮಾಗೆ ಸೇರಿದ ಫ್ಲಾಟ್‌ ಶೋಧ ನಡೆಸಿತ್ತು. ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ 8 ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ. ಹೈದರಾಬಾದ್‌ನ ಸೀಮಾಪೇಟೆ, ಮೀಯಾಪುರದಲ್ಲಿ ವಾಸವಿ ಬಿಲ್ಡರ್ಸ್‌ನಲ್ಲಿ ತಲಾ 2 ಫ್ಲಾಟ್‌ ಸೇರಿ ಬರೋಬ್ಬರಿ 11 ಫ್ಲಾಟ್‌ ಖರೀದಿಸಿರುವ ಬಗ್ಗೆ ಎಸ್‌‍ಐಟಿಗೆ ಮಾಹಿತಿ ಲಭ್ಯವಾಗಿದೆ.

ವಾಲ್ಮೀಕಿ ನಿಗಮ ಹಗರಣ; ಇಡಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್‌!

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ ಕೇಸ್‌ (Valmiki Corporation Scam)ನಲ್ಲಿ ಇಡಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್‌ ದಾಖಲಿಸಲಾಗಿದೆ. ಈ ಮೂಲಕ ಕೇಂದ್ರ ತನಿಖಾ ಸಂಸ್ಥೆ ಜತೆ ರಾಜ್ಯ ಸರ್ಕಾರ ನೇರ ಸಂಘರ್ಷಕ್ಕೆ ಇಳಿಯಿತಾ ಎನ್ನುವ ಪ್ರಶ್ನೆ ಮೂಡಿದೆ. ಮಾಜಿ ಸಚಿವ ಬಿ.ನಾಗೇಂದ್ರ (B Nagendra) ಹೆಸರು ಹೇಳುವಂತೆ ಒತ್ತಡ, ಮಾನಸಿಕವಾಗಿ ಹಿಂಸೆ ನೀಡಲಾಗಿದೆ ಎಂಬ ಆರೋಪದಲ್ಲಿ ಇಡಿ ಅಧಿಕಾರಿಗಳ ವಿರುದ್ಧ ವಿಲ್ಸನ್‌ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಈ ಹಿಂದಿನ ನಿರ್ದೇಶಕ ಕಲ್ಲೇಶ್ ಬಿ. ನೀಡಿದ ದೂರಿನ ಮೇರೆಗೆ ಇಡಿ ಅಧಿಕಾರಿಗಳಾದ ಮಿತ್ತಲ್ ಹಾಗೂ ಮುರುಳಿ ಕಣ್ಣನ್ ಮೇಲೆ ಪ್ರಕರಣ ದಾಖಲಾಗಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಬಂಧನವಾಗಿರುವ ಮಾಜಿ ಸಚಿವ ನಾಗೇಂದ್ರ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ ವಿಚಾರಣೆ ವೇಳೆ ಮಾಜಿ ಸಚಿವ ನಾಗೇಂದ್ರ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ಒತ್ತಡ ಹೇರಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ನಿಗಮದ ಈ ಹಿಂದಿನ ಎಂಡಿ ಕಲ್ಲೇಶ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇಡಿ ಕಚೇರಿ ಶಾಂತಿನಗರದಲ್ಲಿ ಇರುವುದರಿಂದ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬಿಎನ್‌ಎಸ್‌ ಕಾಯ್ದೆಯಡಿ ಕೇಸ್

ಸೆಕ್ಷನ್ 3(5), 351(2), 352ರಡಿ (ಕ್ರಿಮಿನಲ್ ಬೆದರಿಕೆ ಮತ್ತು ಶಾಂತಿ ಹದಗೆಡಿಸುವ ಉದ್ದೇಶದಿಂದ ಅವಮಾನ ಆರೋಪ) ಎಫ್‌ಐಆರ್‌ ದಾಖಲಿಸಿಕೊಂಡಿರುವ ವಿಲ್ಸನ್ ಗಾರ್ಡನ್ ಪೊಲೀಸರು ಇಡಿ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಆರೋಪಗಳ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಿದ್ದಾರೆ. ಸದ್ಯ ಮುಂದಿನ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳ ಪೊಲೀಸರು ಚರ್ಚಿಸುತ್ತಿದ್ದಾರೆ.

ಇದನ್ನೂ ಓದಿ: TA Sharavana: 108 ಆಂಬ್ಯುಲೆನ್ಸ್‌ಗೆ 7 ವರ್ಷ ಕಳೆದರೂ ಹೊಸ ಟೆಂಡರ್‌ ಇಲ್ಲ ಯಾಕೆ? ಟಿ. ಎ. ಶರವಣ ಪ್ರಶ್ನೆ

Continue Reading

ಮಳೆ

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka Rain : ಹಲವೆಡೆ ರಭಸವಾಗಿ ಬೀಸುತ್ತಿರುವ ಗಾಳಿ-ಮಳೆಗೆ ಅವಾಂತರವೇ ಸೃಷ್ಟಿಯಾಗಿದೆ. ಮನೆ ಮೇಲೆ ತೆಂಗಿನ ಮರ ಬಿದ್ದರೆ, ಹಲವೆಡೆ ಸೇತುವೆಗಳು ಮುಳುಗಡೆಯಾಗಿ, ದೇವಸ್ಥಾನಗಳು ಜಲಾವೃತಗೊಂಡಿದೆ. ಜತೆಗೆ ಉಕ್ಕಿ ಹರಿಯುತ್ತಿರುವ ನದಿ ನೀರು ಸೇವಿಸದಂತೆ ಸೂಚನೆ ನೀಡಲಾಗಿದೆ.

VISTARANEWS.COM


on

By

karnataka Rain
Koo

ತುಮಕೂರು: ರಾಜ್ಯಾದ್ಯಂತ ಮಳೆಯು (Karnataka Rain) ಅಬ್ಬರಿಸುತ್ತಿದ್ದು, ರಭಸವಾಗಿ ಬೀಸುತ್ತಿರುವ ಗಾಳಿಗೆ ಮರಗಳು, ವಿದ್ಯುತ್‌ ಕಂಬಗಳು ನೆಲಕ್ಕೆ ಅಪ್ಪಿಸುತ್ತಿದೆ. ಸದ್ಯ ತುಮಕೂರಿನ ತುರುವೇಕೆರೆ ತಾಲೂಕಿನ ದಬ್ಬೆಘಟ್ಟ ಹೋಬಳಿಯ ಮಾವಿನ ಕೆರೆ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ತೆಂಗಿನ ಮರವೊಂದು ಮನೆ ಮೇಲೆ ಉರುಳಿ ಬಿದ್ದಿದೆ. ಮಾವಿನಕೆರೆ ಗ್ರಾಮದ ನಿಂಗಮ್ಮ ಎಂಬುವರ ಮನೆ ಮೇಲೆ ತೆಂಗಿನ ಮರ ಬಿದ್ದಿದೆ.

ಸಣ್ಣನಂಜೇಗೌಡ ಎಂಬುವರ ತೋಟದ ತೆಂಗಿನ ಮರ ಬಿದ್ದು ಅವಾಂತರವೇ ಸೃಷ್ಟಿಯಾಗಿದೆ. ನಿಂಗಮ್ಮ ಎಂಬುವರ ಮನೆಯ ಮೇಲೆ ಮರ ಬಿದ್ದು, ಜಖಂಗೊಂಡಿದೆ. ನಿಂಗಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೆಂಗಿನ ಮರಗಳು ಎತ್ತರವಾಗಿದ್ದು ತೀರಾ ಹಳೆ ಮರಗಳಾಗಿವೆ. ಹಳೆಯದಾದ ತೆಂಗಿನ ಮರಗಳನ್ನು ತೆರವುಗೊಳಿಸುವಂತೆ ಕೆಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾ.ಪಂ ಪಿಡಿಒಗೆ ಮನವಿ ಪತ್ರ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ನದಿ ತೀರದಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷ

ಬೆಳಗಾವಿಯ ಬೈಲಹೊಂಗಲ ತಾಲೂಕಿನ ಮಾಟೋಳ್ಳಿ ಗ್ರಾಮದ ನದಿ ತೀರದಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷವಾಗಿದೆ. ಮಲಪ್ರಭಾ ನದಿ ತೀರದಲ್ಲಿ ಸುಮಾರು 10 ಅಡಿ ಉದ್ದದ ಮೊಸಳೆಯು ಕಾಣಿಸಿಕೊಂಡಿದೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಬೃಹತ್ ಗಾತ್ರದ ಮೊಸಳೆ ಕಂಡು ಗ್ರಾಮಸ್ಥರು ಭಯಗೊಂಡಿದ್ದಾರೆ. ನದಿ ತೀರಕ್ಕೆ ಹೋಗದಂತೆ ಜಿಲ್ಲಾಡಳಿತ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆ

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ಹೊರ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಮೇಲೆ ಸಂಚಾರ ನಿರ್ಬಂಧಿಸಲಾಗಿದ್ದು, ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಹಂಚಿನಾಳ, ಯರಗೋಡಿ, ಕಡದರಗಡ್ಡಿ, ಯಳಗುಂದಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ನಡುಗಡ್ಡೆಯಲ್ಲಿ ವಾಸಿಸುವ ಜನರಿಗೆ ಸಂಪೂರ್ಣ ಜಲದಿಗ್ಭಂಧನ ಹಾಕಲಾಗಿದೆ. ರೈತರ ಪಂಪ್ ಸೆಟ್, ಪೈಪ್‌ಗಳು ಮುಳುಗಡೆಯಾಗಿದೆ.

ಇದೇ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿಕೊಂಡು ಕುರಿಗಾಹಿಗಳು ಪೇಚಿಗೆ ಸಿಲುಕಿದರು. ಮುಳುಗಡೆಯಾದ ಶೀಲಹಳ್ಳಿ ಸೇತುವೆ ಬಳಿಯ ಗುಡ್ಡದಲ್ಲಿ ಕುರಿಗಳನ್ನು ಮೇಯಲುಬಿಟ್ಟು,ಮೂವರು ಕುರಿಗಾಹಿಗಳು ಬೆಟ್ಟ ಇಳಿದಿದ್ದರು. ಈ ವೇಳೆ ಧುಮ್ಮಿಕ್ಕಿ ಹರಿಯಿತ್ತಿರುವ ನದಿ ನೋಡಿ‌ ಬೆಚ್ಚಿ ಬಿದ್ದರು. ಕೆಲಹೊತ್ತು ಹೇಗೆ ಸುರಕ್ಷಿತವಾಗಿ ಸ್ಥಳ ತಲುಪ ಬೇಕೆಂದು ಗೊತ್ತಾಗದೇ ಕಂಗಾಲಾಗಿದ್ದರು. ಸುಮಾರು ಒಂದು ಗಂಟೆ ಬೆಟ್ಟದಲ್ಲೇ ಅತ್ತಿತ್ತ ಓಡಾಡಿ, ಬಳಿಕ ಮತ್ತೊಂದು ದಡದಲ್ಲಿ ವ್ಯಕ್ತಿಯೊಬ್ಬ ಸೂಚಿಸಿದ ದಿಕ್ಕಿನತ್ತ ಹೊರಟು ಹೋದರು.

ಇತ್ತ ತುಂಗಭದ್ರಾ ಡ್ಯಾಂನಿಂದ 1,50,000 ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತಿರುವುದರಿಂದ ರಾಯಚೂರಿನ ಎಲೆಬಿಚ್ಚಾಲಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ರಾಯರ ಜಪದ ಕಟ್ಟೆಗೆ ಮುಳುಗಿದೆ. ಜಪದ ಕಟ್ಟೆ ಬಳಿ ತೆರಳದಂತೆ ಆಡಳಿತ ಮಂಡಳಿ ಬ್ಯಾರಿಕೇಡ್ ಅಳವಡಿಸಿ-ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿ. ರಾಯಚೂರಿನ ಕೃಷ್ಣಾ ತೀರದ ಮತ್ತೊಂದು ದೇವಸ್ಥಾನ ಜಲಾವೃತಗೊಂಡಿದೆ. ಕೊಪ್ಪರದಲ್ಲಿರೊ ಲಕ್ಷ್ಮೀ ನರಸಿಂಹ ದೇವಸ್ಥಾನ ಮುಳುಗುಡೆಯಾಗಿದೆ. ದೇವಸ್ಥಾನ ಜಲಾವೃತ ಹಿನ್ನೆಲೆ ಅರ್ಚಕರು ನೀರಲ್ಲೇ ನಡೆದುಕೊಂಡು ಹೋಗಿ ಪೂಜಾ ಕೈಂಕರ್ಯ ನಡೆಸಿದ್ದಾರೆ.

ಇದನ್ನೂ ಓದಿ: Mysuru News : ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆ

ರೌದ್ರಾವತಾರ ತಾಳಿದ ಐತಿಹಾಸಿಕ ಮದಗದ ಕೆರೆ

ಚಂದ್ರದ್ರೋಣ ಪರ್ವತದ ಸಾಲಿನ ಗಿರಿ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಐತಿಹಾಸಿಕ ಮದಗದ ಕೆರೆ ರೌದ್ರಾವತಾರ ತಾಳಿದೆ. ತಾತ್ಕಾಲಿಕವಾಗಿ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಮದಗದ ಕೆರೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಟ್ ಆಗಿದೆ. ಸಖರಾಯಪಟ್ಟಣ-ಮದಗದ ಕೆರೆ-ಮದಗದ ಕೆರೆ- ಮುಸ್ಲಾಪುರ ರಸ್ತೆ ಸಂಪರ್ಕ ಬಂದ್‌ ಆಗಿದೆ. ಸಾವಿರಾರು ಎಕರೆ ತೋಟ, ಜಮೀನುಗಳು ಜಲಾವೃತಗೊಂಡಿದೆ

ನದಿಯ ನೀರು ನೇರವಾಗಿ ಸೇವಿಸದಂತೆ ಸೂಚನೆ

ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ದೇವಸ್ಥಾನಕ್ಕೆ ಬರುವ ಭಕ್ತರು, ನದಿ ದಡದ ಗ್ರಾಮಸ್ಥರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ನದಿಯಲ್ಲಿ ಪ್ರವಾಹ ಇರುವ ಹಿನ್ನೆಲೆಯಲ್ಲಿ ನದಿಗೆ ಇಳಿಯದಂತೆ ಭದ್ರತಾ ಸಿಬ್ಬಂದಿ, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಗ್ರಾಮಸ್ಥರು ನದಿಯ ನೀರು ನೇರವಾಗಿ ಸೇವಿಸದಂತೆ ಸೂಚನೆ ನೀಡಲಾಗಿದೆ. ಇದರಿಂದ ವಾಂತಿ- ಬೇಧಿ ಕಾಣಿಸಿಕೊಳ್ಳುವ ಸಾಧ್ಯತೆ ಎಂದು ಪ್ರಚಾರ ಮಾಡಲಾಗುತ್ತಿದೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಗ್ರಾಮದ ನದಿಯ ದಡದಲ್ಲಿನ ಹೊಳೆ ಬಸವವೇಶ್ವರ ದೇವಸ್ಥಾನ‌ ಮುಳುಗಡೆಯಾಗಿದೆ. ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿದೆ. ಹೀಗಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ.

ದೇವಸ್ಥಾನಕ್ಕೆ ನುಗ್ಗಿದ ಘಟಪ್ರಭೆ

ಘಟಪ್ರಭೆಯ ರುದ್ರ ಪ್ರತಾಪಕ್ಕೆ ದೇವಸ್ಥಾನಕ್ಕೆ ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದ ಪ್ರಸಿದ್ಧ ಉದ್ದಮ್ಮ ದೇವಸ್ಥಾನ ಮುಳುಗುಡೆಯಾಗಿದೆ. ನೀರಿಲ್ಲಿಯೇ ದೇವಸ್ಥಾನದ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ಇನ್ನೂ ಸುಣಧೋಳಿ ಗ್ರಾಮಕ್ಕೂ ಘಟಪ್ರಭಾ ನದಿ ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ಜಡಿಸಿದ್ದೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ದೇವಸ್ಥಾನ ಆವರಣದ ಮಳಿಗೆಗಳಿಗೂ ನುಗ್ಗಿದ ನೀರು ನುಗ್ಗಿದ್ದು, ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗುವ ಆತಂಕವಿದೆ.

ಇನ್ನೂ ಮುಸುಗುಪ್ಪಿ‌ ಗ್ರಾಮವು ದ್ವೀಪದಂತಾಗಿದೆ. ಗ್ರಾಮದ ೪೫೦ ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮುಸುಗುಪ್ಪಿ ಗ್ರಾಮಸ್ಥರು ನಡುಮಟ್ಟದ ನೀರಲ್ಲಿ ಸರ್ಕಸ್ ಮಾಡಿಕೊಂಡು ಓಡಾಡುವಂತಾಗಿದೆ. ಗ್ರಾಮದ ಲಕ್ಷ್ಮೀ ದೇವಿ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಬಹುತೇಕ‌ ಗ್ರಾಮಸ್ಥರು ಜಲಾವೃತವಾದ ಗ್ರಾಮದಿಂದ ಕಾಳಜಿ‌ ಕೇಂದ್ರಕ್ಕೆ ಶಿಫ್ಟ್ ಆಗಿದ್ದಾರೆ.

ಇನ್ನೂ ಮುಸಗುಪ್ಪಿ ಗ್ರಾಮದಲ್ಲಿ ಲಕ್ಷ್ಮಿ ದೇವಿ ದೇವಸ್ಥಾನ ಮಾತ್ರವಲ್ಲದೇ ಬ್ಯಾಂಕ್, ಕಲ್ಯಾಣ ಮಂಟಪವು ಮುಳುಗಿದೆ. ದೇವಸ್ಥಾನ ಮುಂಭಾಗದ ಮಳಿಗೆಗಳು, ರಂಗಮಂದಿರ, ಮನೆ ಕೂಡ ಮುಳುಗಡೆಯಾಗಿದೆ. ನದಿಯಿಂದ ಅರ್ಧ ಕಿಮೀ ದೂರದಲ್ಲಿರುವ ದೇವಸ್ಥಾನ, ಊರಿಗೆ ನೀರು ನುಗ್ಗಿದೆ. ನೀರು ಬರುವ ಸುದ್ದಿ ತಿಳಿದು ವರಮಹಾಲಕ್ಷ್ಮಿ ಬ್ಯಾಂಕ್ ಸಿಬ್ಬಂದಿ ಹಣ ಸೇರಿ ಸಾಮಾಗ್ರಿ ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಗ್ರಾಮದ 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಜಲಾವೃತವಾಗಿದ್ದು, ಸೇತುವೆ ರಸ್ತೆ ಸೇರಿ ಎಲ್ಲವೂ ನೀರಲ್ಲಿ ತೇಲಿ ಹೋಗುವ ಸ್ಥಿತಿ ಇದೆ. ಬೆಳೆದ ಬೆಳೆ ಕೊಚ್ಚಿ ಹೋಗಿದೆ.

ಹೇಮಾವತಿ ಜಲಾಶಯಕ್ಕೆ ಇಂದಿನಿಂದ ಸಾರ್ವಜನಿಕರಿಗೆ ಪ್ರವೇಶ

ಭಾನುವಾರದಿಂದ (ಜು.28) ಹೇಮಾವತಿ ಜಲಾಶಯಕ್ಕೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಹಾಸನದ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹೊರಹರಿವು ಬಿಡಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಹೊರಹರಿವು ಬಿಡುತ್ತಿದ್ದ ಕಾರಣ ಹೇಮಾವತಿ ಅಣೆಕಟ್ಟು ವಿಭಾಗದ ಅಧಿಕಾರಿಗಳು ಜಲಾಶಯಕ್ಕೆ ನಿರ್ಬಂಧ ಹೇರಿದ್ದರು. ಇದೀಗ ಮಳೆ ಕಡಿಮೆಯಾದ ಕಾರಣ ಕಡಿಮೆ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Anant Ambani Marriage
Latest2 mins ago

Anant Ambani Marriage: ಅನಂತ್ ಅಂಬಾನಿ ಅರಿಶಿನ ಶಾಸ್ತ್ರದ ವಿಡಿಯೋ ವೈರಲ್; ಕುಣಿದು ಕುಪ್ಪಳಿಸಿದ ಹಾರ್ದಿಕ್ ,ರಣವೀರ್ ಸಿಂಗ್!

Sexual Harassment
ಪ್ರಮುಖ ಸುದ್ದಿ9 mins ago

Sexual Harassment : ರಿಕ್ಷಾದಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಚಾಲಕ

Viral Video
ವೈರಲ್ ನ್ಯೂಸ್14 mins ago

Viral Video: ಶೇ. 100ರಷ್ಟು ಆದಾಯ ತೆರಿಗೆಯನ್ನು ಹೀಗೂ ಉಳಿಸಬಹುದಂತೆ ನೋಡಿ!

Union Budget 2024
ಕರ್ನಾಟಕ18 mins ago

Union Budget 2024: ವಾರ್ಷಿಕ 7.5 ಲಕ್ಷ ವೇತನ ಪಡೆಯುವವರಿಗೆ ಯಾವುದೇ ತೆರಿಗೆ ಇಲ್ಲ: ನಿರ್ಮಲಾ ಸೀತಾರಾಮನ್

Paris Olympics Badminton
ಕ್ರೀಡೆ19 mins ago

Paris Olympics Badminton: ಗೆಲುವಿನ ಶುಭಾರಂಭ ಮಾಡಿದ ಪಿ.ವಿ. ಸಿಂಧು

Health Tips
ಪ್ರಮುಖ ಸುದ್ದಿ20 mins ago

Health Tips : ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ 5 ವಿಧದ ಸೂಪ್ ಸೇವಿಸಿ

Naveen Sajju debuts movie titled first look out
ಸಿನಿಮಾ31 mins ago

Naveen Sajju: ಗುಡ್‌ ನ್ಯೂಸ್‌ ಕೊಟ್ಟ ʻಚುಕ್ಕಿತಾರೆ ಸೀರಿಯಲ್‌ʼ ನಟ ನವೀನ್‌ ಸಜ್ಜು: ಶುಭ ಕೋರಿದ ಫ್ಯಾನ್ಸ್‌!

Assault case
ಚಿಕ್ಕೋಡಿ40 mins ago

Assault Case : ಠಾಣೆಗೆ ಬಂದ ಮಹಿಳೆಗೆ ಜಾಡಿಸಿ ಒದ್ದ ಖಡಕಲಾಟ ಪಿಎಸ್‌ಐ!

Mann Ki Baat
ದೇಶ42 mins ago

Mann Ki Baat: ಪ್ಯಾರಿಸ್ ಒಲಿಂಪಿಕ್ಸ್​: ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಂತೆ ʼಮನ್​ ಕಿ ಬಾತ್​ʼನಲ್ಲಿ ಮೋದಿ ಕರೆ

valmiki corporation scam satyanarayana varma
ಕ್ರೈಂ45 mins ago

Valmiki Corporation Scam: 10 ಕೆಜಿ ಚಿನ್ನದ ಗಟ್ಟಿ ಮನೆಯಲ್ಲಿಟ್ಟಿದ್ದ ವಾಲ್ಮೀಕಿ ನಿಗಮ ಹಗರಣದ ಆರೋಪಿ! ಇನ್ನೂ 5 ಕಿಲೋ ಗಾಯಬ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 hour ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ19 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ1 day ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ1 day ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ3 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

ಟ್ರೆಂಡಿಂಗ್‌