ವಿಸ್ತಾರ ಸಂಪಾದಕೀಯ : ‘ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ’ ಅಭಿಯಾನಕ್ಕೆ ಜನ ಬೆಂಬಲ ಆಶಾದಾಯಕ - Vistara News

ನಮ್ಮೂರ ಶಾಲೆ

ವಿಸ್ತಾರ ಸಂಪಾದಕೀಯ : ‘ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ’ ಅಭಿಯಾನಕ್ಕೆ ಜನ ಬೆಂಬಲ ಆಶಾದಾಯಕ

ರಾಜ್ಯದ ಶೇ.50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಮುಖ್ಯವಾಗಿ ಗ್ರಾಮೀಣ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಿದರೆ ಲಕ್ಷಾಂತರ ಮಕ್ಕಳನ್ನು ಪ್ರೋತ್ಸಾಹಿಸಿದಂತೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಸ್ತಾರ ನ್ಯೂಸ್‌ ಆರಂಭಿಸಿರುವ ‘ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ’ ಸರ್ಕಾರಿ ಶಾಲಾ ದತ್ತು ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವಿಸ್ತಾರ ನ್ಯೂಸ್​ ಮತ್ತು ಬಾಲ ಉತ್ಸವ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ವಿಧಾನಸೌಧದಲ್ಲಿ ಮಂಗಳವಾರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಇಲಾಖೆಯ ಅಧಿಕಾರಿಗಳ ಮತ್ತು ವಿಸ್ತಾರ ನ್ಯೂಸ್​ ಹಾಗೂ ಬಾಲ ಉತ್ಸವ ಸಂಸ್ಥೆಯ ಪ್ರತಿನಿಧಿಗಳ ಉನ್ನತ ಮಟ್ಟದ ಸಭೆಯಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು. ಇದೊಂದು ಮಹತ್ವದ ಬೆಳವಣಿಗೆ.

ವಿಸ್ತಾರ ನ್ಯೂಸ್ ನ ಈ ಅಭಿಯಾನವನ್ನು ಕಳೆದ ನವೆಂಬರ್​ ತಿಂಗಳಲ್ಲಿ ಶಿಕ್ಷಣ ಸಚಿವರೇ ಉದ್ಘಾಟಿಸಿದ್ದರು. ಇದುವರೆಗೆ 60ಕ್ಕೂ ಹೆಚ್ಚು ಗಣ್ಯರು ಪ್ರತಿದಿನ ಬೆಳಗ್ಗೆ ʼನ್ಯೂಸ್​ ಮಾರ್ನಿಂಗ್ʼ​ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಆಗಮಿಸಿ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಲು ಬದ್ಧತೆ ಪ್ರದರ್ಶಿಸಿದ್ದಾರೆ. ಕುಡಚಿ ಶಾಸಕ ಪಿ.ರಾಜೀವ್​ ಸೇರಿದಂತೆ ಹಲವರು ಅವರು ಓದಿದ ಪ್ರಾಥಮಿಕ ಶಾಲೆಗಳನ್ನು ಮಾದರಿ ಶಾಲೆಯಾಗಿ ರೂಪಿಸುವ ಪಣ ತೊಟ್ಟಿದ್ದು, ದತ್ತು ಪಡೆದುಕೊಳ್ಳಲು ಮುಂದಾಗಿದ್ದಾರೆ. ಇನ್ನು ಕೆಲವರು ಮಹನೀಯರು ತಮ್ಮದೇ ಆದ ಪ್ರತಿಷ್ಠಿತ ಖಾಸಗಿ ಶಾಲೆ ಹೊಂದಿದ್ದರೂ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸುವ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಇದು ಆಶಾದಾಯಕ ಬೆಳವಣಿಗೆ ಮಾತ್ರವಲ್ಲ, ಜನಪರ ಮತ್ತು ಪ್ರಾಮಾಣಿಕ ಅಭಿಯಾನಕ್ಕೆ ಜನ ಬೆಂಬಲ ಇದ್ದೇ ಇರುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ.

ದೇಶದಲ್ಲಿಯೇ ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆ ಅತ್ಯುತ್ತಮವಾಗಿದೆ. ಆದರೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ, ಅದನ್ನು ಬೆಳೆಸುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಸಮಯವಿದು. ಕರ್ನಾಟಕದಲ್ಲಿ ಶೇ.50ಕ್ಕೂ ಅಧಿಕ ಮಕ್ಕಳಿಗೆ ಸರ್ಕಾರಿ ವಿದ್ಯಾಸಂಸ್ಥೆಗಳೇ ಪ್ರಾಥಮಿಕ ಶಿಕ್ಷಣದ ಮೂಲವಾಗಿವೆ. ಹಾಗಾಗಿ ಈ ಶಾಲೆಗಳನ್ನು ಪೋಷಿಸಿದರೆ ಲಕ್ಷಾಂತರ ಮಕ್ಕಳನ್ನು ಪೋಷಿಸುವುದು ಎಂದೇ ಅರ್ಥ. ಬಡವರು, ಕೆಳಮಧ್ಯಮ ವರ್ಗದವರು ಒಂದರಿಂದ 12ನೇ ತರಗತಿಯವರೆಗೂ ಉಚಿತ ಶಿಕ್ಷಣ ನೀಡುವ ಅಥವಾ ನಾಮಮಾತ್ರ ಶುಲ್ಕ ಪಡೆಯುವ ಸರ್ಕಾರಿ ಶಾಲೆಗಳನ್ನೇ ನೆಚ್ಚಿಕೊಂಡಿದ್ದಾರೆ. ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆಯಬೇಕು ಎಂಬುದು ವಿಶ್ವಸಂಸ್ಥೆಯ ಪ್ರಮುಖರೂ ಸೇರಿದಂತೆ ಎಲ್ಲ ಪ್ರಾಜ್ಞರ ಆಶಯ. ಇದಕ್ಕಾಗಿಯೇ ನಮ್ಮ ಒಕ್ಕೂಟ ಸರ್ಕಾರ 2009ರಲ್ಲಿ ʼಉಚಿತ ಹಾಗೂ ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ಕಾಯಿದೆʼಯನ್ನು ಕೂಡ ಜಾರಿಗೆ ತಂದಿದೆ.

ನಮ್ಮ ಸರ್ಕಾರಿ ಶಾಲೆಗಳು ದೇಶದಲ್ಲೇ ಮಾದರಿಯಾಗಬೇಕು ಎಂಬ ಕನಸಿಗೆ ಜೀವ ತುಂಬುವ ಸಮಯವಿದು. ಶಾಲೆಗೆ ಅತ್ಯುತ್ತಮ ಸ್ವಂತ ಕಟ್ಟಡವಿರಬೇಕು. ಒಳ್ಳೆಯ ಶಿಕ್ಷಕರೊಂದಿಗೆ ಉದ್ಯಾನ, ಉತ್ತಮ ಶೌಚಾಲಯ, ವಿದ್ಯುತ್‌ ಹಾಗೂ ಶುದ್ಧೀಕೃತ ಕುಡಿಯುವ ನೀರು, ಕಂಪ್ಯೂಟರ್‌, ಲ್ಯಾಬ್‌ ಹಾಗೂ ಕಲಿಕೋಪಕರಣಗಳು, ಸಾಕಷ್ಟು ಗ್ರಂಥಗಳುಳ್ಳ ಲೈಬ್ರರಿ, ಸ್ಮಾರ್ಟ್‌ ಕ್ಲಾಸ್‌ಗಳೆಲ್ಲವೂ ಇರಬೇಕು. ಆಗ ಮಾತ್ರ ನಾವು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಸರಿಗಟ್ಟಲು ಸಾಧ್ಯ. ವಿಸ್ತಾರ ನ್ಯೂಸ್‌ ವಾಹಿನಿ ಇದಕ್ಕಾಗಿಯೇ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಎಂಬ ಅಭಿಯಾನವನ್ನು ಆರಂಭಿಸಿದೆ. ಸರ್ಕಾರಿ ಇನ್ನಷ್ಟು ಉತ್ತಮಗೊಳ್ಳಲು ಏನಾಗಬೇಕಿದೆ, ಇಲ್ಲಿನ ಮೂಲಸೌಕರ್ಯಗಳಲ್ಲಿ ಯಾವ ಕೊರತೆಯಿದೆ, ಅದನ್ನು ಹೇಗೆ ತುಂಬಬಹುದು, ದಾನಿಗಳು ಹೇಗೆ ನೆರವಾಗಬಹುದು, ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುತ್ತಿರುವವರು ಮತ್ತಿತರ ದಾನಿಗಳ ಕುರಿತು ಕ್ಷಕಿರಣ ಬೀರುವ ಕಾರ್ಯಕ್ರಮವಿದು. ಸರ್ಕಾರಿ ಶಾಲೆಗಳು ಸಾರ್ವಜನಿಕರ ಶಾಲೆಗಳಾಗಿರುವುದರಿಂದ ಸಾರ್ವಜನಿಕರೇ ಒಳಗೊಂಡು ಇವುಗಳನ್ನು ಮಾದರಿ ಶಾಲೆಗಳಾಗಿ ರೂಪಿಸುವುದು ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವಂತಾಗಬೇಕು ಎಂಬುದು ಈ ಅಭಿಯಾನದ ಉದ್ದೇಶ. ಈ ಅಭಿಯಾನಕ್ಕೆ ವ್ಯಕ್ತವಾದ ಸ್ಪಂದನೆ ಪ್ರೋತ್ಸಾಹದಾಯಕವಾಗಿದೆ. ಸಾಕಷ್ಟು ಮಂದಿ ಪೂರಕವಾಗಿ ಸ್ಪಂದಿಸಿದ್ದಾರೆ. ಸರ್ಕಾರ, ಇನ್ನಷ್ಟು ವ್ಯಕ್ತಿಗಳು, ಸಂಸ್ಥೆಗಳು ಕೈಜೋಡಿಸಿದಾಗ ಮಾತ್ರ ಸರ್ವಾಂಗೀಣ ಶಾಲೆಗಳ ಸುಧಾರಣೆ ಸಾಧ್ಯ. ನಾಡಿನ ಜವಾಬ್ದಾರಿಯುತ ಪ್ರಜೆಗಳಾಗಿ ನಾವೆಲ್ಲರೂ ಇದರಲ್ಲಿ ಕೈಜೋಡಿಸಿದಾಗ ʼಮಾದರಿ ಶಾಲೆʼಯ ಕನಸು ನನಸಾಗುತ್ತದೆ.

ಇದನ್ನೂ ಓದಿ | ವಿಸ್ತಾರ ನ್ಯೂಸ್‌ನ ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ ಅಭಿಯಾನ: ಶಿಕ್ಷಣ ಇಲಾಖೆ ಜತೆ ಮಹತ್ವದ ಒಡಂಬಡಿಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕರ್ನಾಟಕ

ಸಮುದಾಯದ ಸಹಕಾರದಿಂದ ಸ್ಮಾರ್ಟ್ ಆದ ಕುನ್ನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ!

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಹಳೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ಅಭಿವೃದ್ಧಿ ಪಡಿಸಿರುವ ರೀತಿ ಎಲ್ಲರ ಗಮನ ಸೆಳೆಯುತ್ತಿದೆ.

VISTARANEWS.COM


on

kunnal Government School became smart with the cooperation of the community
Koo

ರಾಜ್ಯದ ಸರ್ಕಾರಿ ಶಾಲೆಗಳು ಸಮಗ್ರವಾಗಿ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ನಿಮ್ಮ ನೆಚ್ಚಿನ ʻವಿಸ್ತಾರ ನ್ಯೂಸ್‌ʼ ʻನಮ್ಮೂರ ಶಾಲೆ ನಮ್ಮೆಲ್ಲರ ಶಾಲೆʼ ಎಂಬ ವಿಶೇಷ ಅಭಿಯಾನ ಆರಂಭಿಸಿದ್ದು, ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಈ ಆಶಯದಂತೆ ಉತ್ತರ ಕರ್ನಾಟಕದ ಸರ್ಕಾರಿ ಶಾಲೆಯೊಂದನ್ನು ಗ್ರಾಮದ ಶಿಕ್ಷಣ ಪ್ರೇಮಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ಅಭಿವೃದ್ಧಿ ಪಡಿಸುತ್ತಿದ್ದಾರೆ. ಈ ಶಾಲೆಯ ಹೆಸರು ʻಕುನ್ನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆʼ.

ಹೌದು, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದಲ್ಲಿರುವ ಈ ಶಾಲೆಯನ್ನು ಗ್ರಾಮಸ್ಥರು ʻನಮ್ಮೂರ ಹೆಮ್ಮೆಯ ಶಾಲೆʼಯಾಗಿ ಅಭಿವೃದ್ಧಿ ಪಡಿಸಿದ್ದಾರೆ. ಈ ಮೂಲಕ ಈ ಭಾಗದ ಸರ್ಕಾರಿ‌ ಶಾಲೆಯ ಮಕ್ಕಳು ಉತ್ಕೃಷ್ಟ ಮಟ್ಟದ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಪಡೆಯುವಂತೆ ಮಾಡಿದ್ದಾರೆ. ಇಡೀ ಜಿಲ್ಲೆಯೇ ಈಗ ಈ ಶಾಲೆಯತ್ತ ನೋಡುವಂತಾಗಿದೆ.

ramdurg taluk kunnal government school

ಹತ್ತು ಹಲವು ಸಾಧನೆ

ಕುನ್ನಾಳ ಗ್ರಾಮವು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೊನೆಯ ಹಳ್ಳಿಯಾಗಿದ್ದು, 2022-23 ನೇ ಸಾಲಿನಲ್ಲಿ ಒಟ್ಟು 253 ವಿದ್ಯಾರ್ಥಿಗಳು 1 ರಿಂದ 8 ನೇ ತರಗತಿಗಳಲ್ಲಿ ಓದಿದ್ದಾರೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಸಾಧನೆ ಗಮನಾರ್ಹವಾಗಿದೆ. ದೈಹಿಕ ಶಿಕ್ಷಕ ಬಿ ಬಿ ಹಾಲೊಳ್ಳಿ ಮಾರ್ಗದರ್ಶನದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ ವಿಭಾಗದಲ್ಲಿ ಮೂರು ಬಾರಿ ರಾಷ್ಟಮಟ್ಟದ ಖೋ ಖೋ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ 2ನೇ ಮಿನಿ ಓಲಿಂಪಿಕ್ಸ್‌ನಲ್ಲಿ ಈ ಶಾಲೆಯ ಬಾಲಕಿಯರ ಖೋ ಖೋ ತಂಡ ಮಿನಿ ಓಲಿಂಪಿಕ್ಸ್‌ ಟ್ರೋಪಿಯನ್ನು ಮುಡಿಗೇರಿಸಿಕೊಂಡಿದೆ.

ಖೇಲೋ ಇಂಡಿಯಾದಲ್ಲಿಯೂ ಕೂಡ ಈ ಶಾಲೆಯ ವಿದ್ಯಾರ್ಥಿಗಳ ಸಾಧನೆ ಮಾಡಿದ್ದು, ಗ್ರಾಮ, ಶಾಲೆ ಹಾಗೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶಾಲೆಯ ಶಿಕ್ಷಕರಾದ ಬಿ ಬಿ ಹಾಲೊಳ್ಳಿ, ವಾಯ್ ಟಿ. ಬಾರ್ಕಿ, ಎಸ್ ಎ ಕಳ್ಳಿ, ಎಫ್‌. ಎನ್. ಕುರಬೇಟ, ವಿ. ಆರ್. ಅಣ್ಣಿಗೇರಿ, ಕೆ. ಬಿ‌. ಮಾಳಪ್ಪ ಹಾಗೂ ಅಶ್ವಿನಿ ಟಿ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ಶಾಲೆಯ ವಿದ್ಯಾರ್ಥಿಗಳಾದ ಮೇಘಾ ಹಕ್ಕಿ, ಸವಿತಾ ನಾಡಗೌಡ್ರ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರೆ, 2020-21 ನೇ ಸಾಲಿನ ಖೇಲೋ ಇಂಡಿಯಾ ಸ್ಪರ್ಧೆಯ ಖೋ ಖೋ ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳಾದ ಲಕ್ಷ್ಮೀ ಹಿರೇಮಠ ಹಾಗೂ ಅಪೂರ್ವ ಹಿರೇಮಠ ಪ್ರಶಸ್ತಿ ಪಡೆದಿದ್ದಾರೆ. 2021-22 ನೇ ಸಾಲಿನ NMMS ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ಸವಿತಾ ನಾಡಗೌಡ್ರ, ಚನ್ನಮ್ಮ ಸಿದ್ನಾಳ, ತಂಗೆವ್ವ ಕಳ್ಳಿ ರಾಜಲಕ್ಷ್ಮೀ ಉತ್ತೀರ್ಣರಾಗಿದ್ದಾರೆ.

ಶಾಲೆಯಲ್ಲಿ ಪ್ರತಿ ವರ್ಷವೂ ಶಾಲಾ ಮಟ್ಟದ ಇಂಗ್ಲಿಷ್ ಫೆಸ್ಟ್‌ ಆಯೋಜಿಸಿ, ಶಾಲೆಯಲ್ಲಿ ಇಂಗ್ಲಿಷ್‌ ವಾತಾವರಣ ನಿರ್ಮಿಸಲಾಗುತ್ತಿದೆ. ಇಂಗ್ಲಿಷ್ ಗ್ರಾಮರ್, ಸ್ಪೋಕನ್ ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರಗಳನ್ನು ಕೂಡ ನಡೆಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲಾಗುತ್ತಿದೆ. 2019-20 ನೇ ಸಾಲಿನ ಜಿಲ್ಲಾ ಮಕ್ಕಳ ಪ್ರಶಸ್ತಿಗೆ ಈ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿನಿ ಸವಿತಾ ನಾಡಗೌಡ್ರ ಭಾಜನರಾಗಿದ್ದಾರೆ.

ramdurg taluk kunnal government school

ಡಿಜಿಟಲ್‌ ತಂತ್ರಜ್ಞಾನ ಬಳಕೆ

ಈ ಶಾಲೆಯಲ್ಲಿ ತಂತ್ರಜ್ಞಾನ ಆದಾರಿತ ಕಲಿಕೋಪಕರಣಗಳನ್ನು ಬಳಸಿ ತರಗತಿಗಳನ್ನು ನಡೆಸುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನದ ಲಾಭವೂ ದೊರೆಯುತ್ತಿದೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ TeachMint ಮೂಲಕ ಎಲ್ಲ ತರಗತಿಗಳಿಗೆ ಆನಲೈನ್ ಬೋಧನೆ, Pschool App, Live Worksheet ಗಳನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಕೋವಿಡ್ ನಡುವೆಯೂ ಮಕ್ಕಳಿಗೆ ಕಲಿಕಾ ಕೊರತೆಯಾಗದಂತೆ ಶಿಕ್ಷಕರು ನೋಡಿಕೊಂಡಿದ್ದಾರೆ.

ವಿದ್ಯಾರ್ಥಿ ವೇತನದ ಆನಲೈನ್ ಅರ್ಜಿಗಳನ್ನು ಈ ಶಾಲೆಯ 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳೇ ಸಲ್ಲಿಸುವಷ್ಟು ತಂತ್ರಜ್ಞಾನದಲ್ಲಿ ಪಳಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ದೇಣಿಗೆಯ ಸಹಕಾರದಿಂದ ನಿರ್ಮಿಸಿದ ಸುಸಜ್ಜಿತ “ಗೂಗಲ್ ಡಿಜಿಲ್ಯಾಬ್” (ಕಂಪ್ಯೂಟರ್ ಲ್ಯಾಬ್). ಸುಮಾರು 2.5 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡ “ಗೂಗಲ್ ಡಿಜಿಲ್ಯಾಬ್” ಮೂಲಕ 6 ರಿಂದ 8 ನೇ ತರಗತಿಯ ಬಹುತೇಕ‌ ಮಕ್ಕಳು ಕಂಪ್ಯೂಟರ್‌ ಬಳಕೆಯ ಕುರಿತು ಬೇಸಿಕ್‌ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ, Microsoft Word, Microsoft Excel ಹಾಗೂ Power Point Presentation ಗಳನ್ನು ಬಳಸುತ್ತಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರೆಲ್ಲ ಕೂಡಿ ನಮ್ಮೂರ ಸರಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಬೇಕೆಂಬ ಇಚ್ಛಾಶಕ್ತಿಯ ಫಲವಾಗಿ ಕೆಲವೇ ತಿಂಗಳುಗಳಲ್ಲಿ ಶಾಲೆಯಲ್ಲಿ ಸಮಾಜ ವಿಜ್ಞಾನ, ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ “ಯುನಿವರ್ಸ್‌ ನ್ಯಾನೋ ಇನ್ನೋವೇಟಿವ್ ಲ್ಯಾಬ್” ಆರಂಭವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯಗಳನ್ನು ಪ್ರಯೋಗ ಹಾಗೂ Hands on Material ಗಳ ಮೂಲಕ ಕಲಿಯುವ ಅವಕಾಶ ಲಭ್ಯವಾಗಿದೆ. ಇದಲ್ಲದೆ, 1.50 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ “ಜ್ಞಾನ ದೀವಿಗೆ ಗ್ರಂಥಾಲಯ” ವನ್ನು ನಿರ್ಮಿಸಲಾಗಿದೆ. ಈ ಗ್ರಂಥಾಲಯವನ್ನು ಶಾಲಾ ಅವಧಿಯ ನಂತರ ಶಾಲೆಯ ಹಳೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕಾಗಿ ಬಳಸುತ್ತಿರುವುದು ಭರವಸೆಯ ಆಶಾಕಿರಣವಾಗಿದೆ.

“ಸಮುದಾಯವೇ ಶಾಲೆಯ ರಾಯಭಾರಿಗಳು” ಎಂಬ ವಾಕ್ಯದಲ್ಲಿ ಅಪಾರ ಭರವಸೆಯನ್ನು ಇಟ್ಟು ಮುಂದಡಿ ಇಟ್ಟಿರುವ ಶಾಲಾ ಶಿಕ್ಷಕ ಬಳಗ, ಸ್ಥಳೀಯ ಯುವಕ ಸಂಘಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ. ʻಭಗತ್ ಸಿಂಗ್‌ ಯೂತ್‌ ಕ್ಲಬ್‌ʼ ಕುನ್ನಾಳ ಇವರು ಪ್ರತೀ ವರ್ಷ ಭಗತ್ ಸಿಂಗ್‌ ಜಯಂತಿಯಂದು ವಿನೂತನ‌ ರೀತಿಯಲ್ಲಿ ಈ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇವರ ಸಹಕಾರದಿಂದಲೇ ಶಾಲೆಯ ಹೊರಗೋಡೆಯ ಕಪ್ಪು ಹಲಗೆಗಳ ಮೇಲೆ ಸ್ವಾತಂತ್ರ್ಯ ಹೋರಾಟಗಾರರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ, ರಾಷ್ಟ್ರೀಯ ಚಿಹ್ನೆಗಳ ಹಾಗೂ ಮಕ್ಕಳ ಕಲಿಕೆಗೆ ಉಪಯುಕ್ತವಾದ ಚಿತ್ರಗಳನ್ನು ಬರೆಯಿಸಲಾಗಿದೆ. ಸಾಲುಮರದ ತಿಮ್ಮಕ್ಕ ಹೆಸರಿನ ಇಕೋ ಕ್ಲಬ್ ಅಡಿಯಲ್ಲಿ ವನ‌ಮಹೋತ್ಸವಗಳ ಮೂಲಕ ಹಸಿರು ಶಾಲೆಯನ್ನಾಗಿಸಲಾಗಿದೆ.

ramdurg taluk kunnal government school

ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದೆ ಶಾಲೆ

ಶಾಲೆಯ ಎಲ್ಲ ಚಟುವಟಿಕೆಗಳ ಮಾಹಿತಿಗಾಗಿ “ನಮ್ಮೂರ ಸರಕಾರಿ ಶಾಲೆ ಕುನ್ನಾಳ” ಎಂಬ ಹೆಸರಿನ ಫೇಸ್‌ಬುಕ್ ಪುಟವನ್ನು ಈ ಶಾಲೆಯು ಹೊಂದಿದ್ದು, ಫೇಸ್ ಬುಕ್ ಬಳಕೆದಾರರು ಶಾಲಾ ಚಟುವಟಿಕೆಗಳನ್ನು ನಿರಂತರವಾಗಿ ನೋಡಬಹುದಾಗಿದೆ. ಈ ಮೂಲಕ ಶಾಲೆಯ ಕುರಿತು ಮಾಹಿತಿ ಪಡೆದ ಬೆಳಗಾವಿಯ ಪ್ರತಿಷ್ಠಿತ ಲೇಕವ್ಯೂವ್ ಆಸ್ಪತ್ರೆಯ ವೈದ್ಯ ಶಶಿಕಾಂತ ಕುಲಗೊಡ ಶಾಲೆಗೆ ಭೇಟಿ ನೀಡಿ, ತಮ್ಮ ನೇತೃತ್ವದ ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಷನ್ ಧನ ಸಹಾಯದಿಂದ 75 ಇಂಚಿನ Interactive Smart Board ಒಳಗೊಂಡ ಸ್ಮಾರ್ಟ್ ಕ್ಲಾಸ್ ಕಂ English Language Lab ನಿರ್ಮಿಸಿದ್ದಾರೆ.

FIT India ನೋಂದಾಯಿತ ಶಾಲೆಯಾಗಿದ್ದು ಇದರಡಿಯಲ್ಲಿ ಸಮುದಾಯ, ಪಾಲಕರು ಹಾಗೂ ಯುವಕರಿಗಾಗಿ ಯೋಗಾಥಾನ್, ʻಏಕ್‌ ಭಾರತ ಶ್ರೇಷ್ಠ ಭಾರತ್‌ʼ ಉಪಕ್ರಮಗಳ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಾಲೆಯಲ್ಲಿ ಜರುಗುವ ಎಲ್ಲ ಕಾರ್ಯಕ್ರಮಗಳ ಸಂಘಟನೆ ಹಾಗೂ ನಿರೂಪಣೆಯ ಜವಾಬ್ದಾರಿಯನ್ನು ಸಹ ಶಿಕ್ಷಕರ ಸಹಕಾರದಿಂದ ಮಕ್ಕಳೇ ನಿರ್ವಹಿಸುವುದು ಮಕ್ಕಳ ಕ್ರಿಯಾಶೀಲತೆಯನ್ನು ಎತ್ತಿ ತೋರಿಸುತ್ತಿದೆ.

ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಶ್ರೀಕಾಂತ ಮಕ್ಕಳಗೇರಿ ಹಾಗೂ ಉಪಾಧ್ಯಕ್ಷ ಹಣಮಂತ ಗಾಣಿಗೇರ ಉತ್ತಮ ಗುಣಮಟ್ಟದ ಪ್ರಿಂಟರ್ ಕಂ ಝೆರಾಕ್ಸ್‌ ಮೆಷಿನ್‌ ನೀಡಿದ್ದಾರೆ. ಗ್ರಾಮದ ಎಂಜಿನಿಯರ್ ಸುನೀಲ ಮಳಲಿ ಲ್ಯಾಪ್‌ಟಾಪ್ ಒಂದನ್ನು ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ. ಸಂತೋಷ ಜಕಾತಿ ಕಂಪ್ಯೂಟರ್ ಲ್ಯಾಬ್‌ನ ಯು.ಪಿ.ಎಸ್ ವ್ಯವಸ್ಥೆಯನ್ನು ಮಾಡಿಸಿದ್ದಾರೆ. ಸಮುದಾಯದ ಶಕ್ತಿಯಿಂದಲೇ ಮಾದರಿ ಶಾಲೆಯಾಗಿ ಬದಲಾಗಿರುವ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟ್ಟಕಡೆಯ ಹಳ್ಳಿ ಕುನ್ನಾಳ ಶಾಲೆಯ ಮಕ್ಕಳ ಮುಖದ ಮೇಲೆ ಮಂದಹಾಸ ಮೂಡಿದೆ.

ಈ ಶಾಲೆಯ ಯಶೋಗಾಥೆ ತಾಲೂಕು ಹಾಗೂ ಜಿಲ್ಲೆಯ ಹಲವಾರು ಶಾಲೆಗಳಿಗೆ ಪ್ರೇರಣೆಯಾಗಿ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಎಸ್.ಡಿ.ಎಮ್.ಸಿ ಪದಾಧಿಕಾರಿಗಳು ಹಾಗೂ ಶಿಕ್ಷಣ ಪ್ರೇಮಿಗಳು ಶಾಲೆಗೆ ಭೇಟಿ ನೀಡುತ್ತಿದ್ದಾರೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಶಾಲೆಯ ಶಿಕ್ಷಕ ಉಮೇಶ್ವರ ಸೋಮಪ್ಪ ಮರಗಾಲ ತಿಳಿಸಿದ್ದಾರೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ : ‘ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ’ ಅಭಿಯಾನಕ್ಕೆ ಜನ ಬೆಂಬಲ ಆಶಾದಾಯಕ

Continue Reading
Advertisement
Kodava Family Hockey Tournament Website Launched
ಕೊಡಗು3 ವಾರಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು3 ವಾರಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ3 ವಾರಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ3 ವಾರಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ3 ವಾರಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ3 ವಾರಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು3 ವಾರಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ3 ವಾರಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ3 ವಾರಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ4 ವಾರಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ1 ವರ್ಷ ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ12 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್3 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌