Pathaan Movie: ಶಾರುಖ್‌ ಪೈರಸಿ ವಿರುದ್ಧ ಹೋರಾಡಲು ಮನವಿ ಮಾಡಿದ್ದರೂ ಲೀಕ್‌ ಆಯ್ತು ʻಪಠಾಣ್ʼ ಸಿನಿಮಾ! - Vistara News

ಬಾಲಿವುಡ್

Pathaan Movie: ಶಾರುಖ್‌ ಪೈರಸಿ ವಿರುದ್ಧ ಹೋರಾಡಲು ಮನವಿ ಮಾಡಿದ್ದರೂ ಲೀಕ್‌ ಆಯ್ತು ʻಪಠಾಣ್ʼ ಸಿನಿಮಾ!

ಬಿಡುಗಡೆಗೆ (Pathaan Movie) ಮುಂಚಿತವಾಗಿ, ಪೈರಸಿ ವಿರುದ್ಧ ಹೋರಾಡಲು ಅಭಿಮಾನಿಗಳನ್ನು ಒತ್ತಾಯಿಸುವ ವಿಡಿಯೊಗಳನ್ನು ತಂಡವು ಹಂಚಿಕೊಂಡಿದೆ. ಇದರ ಹೊರತಾಗಿಯೂ, ಪಠಾಣ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಆರೋಪಿಸಲಾಗಿದೆ.

VISTARANEWS.COM


on

Pathaan Movie leaked
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಶಾರುಖ್‌ ಅಭಿನಯದ ಪಠಾಣ್‌ (Pathaan Movie) ಜನವರಿ 25 ರಂದು ಬಿಡುಗಡೆಯಾಗಿದೆ. ನಾಲ್ಕು ವರ್ಷಗಳ ನಂತರ ತಮ್ಮ ನೆಚ್ಚಿನ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಮತ್ತೆ ಥಿಯೇಟರ್‌ನಲ್ಲಿ ನೋಡಲು ಅಭಿಮಾನಿಗಳು ತುಂಬ ಉತ್ಸುಕರಾಗಿದ್ದರು. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಅದರ ಬಿಡುಗಡೆಗೆ ಮುಂಚಿತವಾಗಿ, ಪೈರಸಿ ವಿರುದ್ಧ ಹೋರಾಡಲು ಅಭಿಮಾನಿಗಳನ್ನು ಒತ್ತಾಯಿಸುವ ವಿಡಿಯೊಗಳನ್ನು ತಂಡವು ಹಂಚಿಕೊಂಡಿದೆ. ಇದರ ಹೊರತಾಗಿಯೂ, ಪಠಾಣ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಆರೋಪಿಸಲಾಗಿದೆ. ಹೀಗಿದ್ದಾಗ್ಯೂ, ಅಭಿಮಾನಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ.

ಆನ್‌ಲೈನ್‌ನಲ್ಲಿ ಲೀಕ್‌ ಆಯ್ತಾ ಪಠಾಣ್‌?

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅವರ ಪೈರಸಿ ವಿರೋಧಿ ಮನವಿಯ ಹೊರತಾಗಿಯೂ, ಪಠಾಣ್‌ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ವರದಿಗಳ ಪ್ರಕಾರ, ಪಠಾಣ್ ಈಗಾಗಲೇ ಹಲವಾರು ಪೈರಸಿ ವೆಬ್‌ಸೈಟ್‌ಗಳಾದ ತಮಿಳ್‌ರಾಕರ್ಸ್‌, ಫಿಲ್ಮಿರ್ವಾಪ್‌, ಫಿಲ್ಮಿಜಿಲ್ಲಾ, 123 ಮೂವೀಸ್‌, ಹಲವಾರು ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಲೀಕ್‌ ಆಗಿದೆ. ವರದಿಯ ಪ್ರಕಾರ, ಪಠಾಣ್‌ 240p , 360p, 480p, 720p, 1080p ಮತ್ತು HD ಸ್ವರೂಪಗಳಲ್ಲಿ ಲಭ್ಯವಿದೆ ಎನ್ನಲಾಗಿದೆ. ಈ ಬಗ್ಗೆ ಶಾರುಖ್‌ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ʻʻ“ಪಠಾಣ್ ಭಾರತಕ್ಕಾಗಿ ಹೋರಾಡುತ್ತಿದ್ದಂತೆ, ಪೈರಸಿ ವಿರುದ್ಧ ಹೋರಾಡಲು ನೀವು ಕೂಡ ನಮ್ಮ ಚಿತ್ರರಂಗಕ್ಕೆ ಸೈನಿಕರಾಗಬಹುದು. ಪಠಾಣ್ ಚಿತ್ರವನ್ನು ಥಿಯೇಟರ್‌ಗಳಲ್ಲಿ ಮಾತ್ರ ವೀಕ್ಷಿಸಿ ಮತ್ತು ಪೈರಸಿ ಬೇಡ ಎಂದು ಹೇಳಿ. ಅಧಿಕಾರ ನಿಮ್ಮ ಕೈಯಲ್ಲಿದೆ. @yashrajfilms.com (sic) ವರದಿಯಲ್ಲಿ ನಮಗೆ ಸೂಚಿಸಿʼʼಎಂದು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Pathaan Movie: ಸಣ್ಣ ಬದಲಾವಣೆಗಳೊಂದಿಗೆ ತೆರೆಗೆ ಅಪ್ಪಳಿಸಿದ ʻಪಠಾಣ್ʼ, ಕೇಸರಿ ಬಿಕಿನಿ ವಿವಾದ ಏನಾಯ್ತು?

ಇದನ್ನೂ ಓದಿ: Pathaan Movie: ವಿಶ್ವಾದ್ಯಂತ ಪಠಾಣ್‌ ಗರ್ಜನೆ: ಭಾರತದಲ್ಲಿ 300 ಪ್ರದರ್ಶನಗಳನ್ನು ಹೆಚ್ಚಿಸಿದ ಚಿತ್ರತಂಡ

ಪಠಾಣ್ ಸಿನಿಮಾ ಮೊದಲ ಶೋ ಬೆಳಗ್ಗೆ (Pathaan review) 6 ಗಂಟೆಗೆ ಶುರುವಾಗಿದೆ. ಶಾರುಖ್, ದೀಪಿಕಾ ಪಡುಕೋಣೆ ಮತ್ತು ಜಾನ್ ಹೊರತುಪಡಿಸಿ, ಅಶುತೋಷ್ ರಾಣಾ ಮತ್ತು ಡಿಂಪಲ್ ಕಪಾಡಿಯಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Election Results 2024: ಕಂಗನಾ, ಸುರೇಶ್‌ ಗೋಪಿ, ಶತ್ರುಘ್ನ ಸಿನ್ಹಾ ಸೇರಿ ಹಲವು ನಟ–ನಟಿಯರ ಗೆಲುವು

Election Results 2024 : ಗಾಂಧಿ ಕುಟುಂಬದ ಕ್ಷೇತ್ರ ಅಮೇಠಿಯಲ್ಲಿ ಸ್ಮೃತಿ ಇರಾನಿಗೆ ಸೋಲಾಗಿದೆ. ನಟಿ ಮತ್ತು ಬಿಜೆಪಿ ನಾಯಕಿ ಕಂಗನಾ ರಣಾವತ್‌ (Kangana Ranaut) ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ (Election Results 2024) ಗೆದ್ದು ಬೀಗಿದ್ದಾರೆ. ರಮಾನಂದ್ ಸಾಗರ್ ಅವರ `ರಾಮಾಯಣ’ ಶೋನ ಭಗವಾನ್ ರಾಮನ ಪಾತ್ರದಲ್ಲಿ ಹೆಸರುವಾಸಿಯಾಗಿರುವ ನಟ ಅರುಣ್ ಗೋವಿಲ್ ಅವರು ಗೆದ್ದಿದ್ದಾರೆ.

VISTARANEWS.COM


on

Election Results 2024 in celebrities
Koo

ಬೆಂಗಳೂರು: ನಟಿ ಮತ್ತು ಬಿಜೆಪಿ ನಾಯಕಿ ಕಂಗನಾ ರಣಾವತ್‌ (Kangana Ranaut) ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ (Election Results 2024) ಗೆದ್ದು ಬೀಗಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್‌ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 72,088 ಮತಗಳಿಂದ ವಿನ್‌ ಆಗಿದ್ದಾರೆ.

ಟಿವಿ ರಾಮ ಅರುಣ್ ಗೋವಿಲ್

ರಮಾನಂದ್ ಸಾಗರ್ ಅವರ `ರಾಮಾಯಣ’ ಶೋನ ಭಗವಾನ್ ರಾಮನ ಪಾತ್ರದಲ್ಲಿ ಹೆಸರುವಾಸಿಯಾಗಿರುವ ನಟ ಅರುಣ್ ಗೋವಿಲ್ ಅವರು ಉತ್ತರ ಪ್ರದೇಶದ ಮೀರತ್‌ನಿಂದ ಗೆದ್ದಿದ್ದಾರೆ.

ಸುರೇಶ್‌ ಗೋಪಿ

ಈ ಹಿಂದಿನ ಲೋಕಸಭೆ ಚುನಾವಣೆ (2019)ಯಲ್ಲಿಯೂ ಸುರೇಶ್‌ ಗೋಪಿ ಉತ್ತಮ ಪ್ರದರ್ಶನ ತೋರಿದ್ದರು. ಶೇ. 28.19ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ಆಗ ಸಿಪಿಐಯ ರಾಜಾಜಿ ಮ್ಯಾಥ್ಯೂ ಥಾಮಸ್ ಶೇ. 30.85 ಮತ ಪಡೆದಿದ್ದರು. ಕಾಂಗ್ರೆಸ್‌ನ ಟಿ.ಎಸ್.ಪಾರ್ಥಪನ್ ಶೇ. 39.83ರಷ್ಟು ಮತ ಪಡೆದು ಜಯ ಗಳಿಸಿದ್ದರು. ಅವರು 4,15,089 ಮತಗಳನ್ನು ಗಳಿಸಿ 3,21,456 ಮತಗಳನ್ನು ಪಡೆದ ಸಿಪಿಐಯ ರಾಜಾಜಿ ಮ್ಯಾಥ್ಯೂ ಥಾಮಸ್ ಅವರನ್ನು ಸೋಲಿಸಿದ್ದರು.

ಇದನ್ನೂ ಓದಿ: Election Results 2024: 5 ಬಾರಿಯ ಸಂಸದನ ವಿರುದ್ಧ ಚೊಚ್ಚಲ ಪ್ರಯತ್ನದಲ್ಲೇ ಭರ್ಜರಿ ಗೆಲುವು ಸಾಧಿಸಿದ ಯೂಸುಫ್ ಪಠಾಣ್

ಶತ್ರುಘ್ನ ಸಿನ್ಹಾ (ಟಿಎಂಸಿ, ಅಸನ್ಸೋಲ್)

ಪಶ್ಚಿಮ ಬಂಗಾಳ ಅಸನ್ಸೋಲ್‌ ಕ್ಷೇತ್ರದಿಂದ ಬಾಲಿವುಡ್ ನಟ ಹಾಗೂ ರಾಜಕಾರಣಿ, ಬಿಹಾರಿ ಬಾಬು ಎಂದೇ ಖ್ಯಾತರಾಗಿರುವ ಶತ್ರುಘ್ನ ಸಿನ್ಹಾ ಟಿ ಎಂ ಸಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ 63,000 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸುರಿಂದರ್‌ ಸಿಂಗ್‌ ಅಹ್ಲುವಾಲಿಯಾ ಅವರನ್ನು ಸೋಲಿಸಿದ್ದಾರೆ.

ಹೇಮಾ ಮಾಲಿನಿ (ಬಿಜೆಪಿ, ಮಥುರಾ)

2024ರ ಲೋಕಸಭಾ ಚುನಾವಣೆಯಲ್ಲೂ ಮಥುರಾ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಿರುವ ಹೇಮಾ ಮಾಲಿನಿ, ಈ ಬಾರಿಯೂ ಗೆಲುವು ಸಾಧಿಸಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಾಜವಾದಿ ಪಾರ್ಟಿಯ ಸುರೇಶ್ ಸಿಂಗ್ ಅವರನ್ನು 106924 ಮತಗಳ ಅಂತರದಿಂದ ಸೋಲಿಸಿದ್ದಾರೆ.

ರಾಧಿಕಾ ಶರತ್‌ಕುಮಾರ್ (ಬಿಜೆಪಿ, ವಿರುದ್‌ನಗರ)
ನಟಿ ರಾಧಿಕಾ ಶರತ್‌ಕುಮಾರ್ ಅವರು ತಮಿಳುನಾಡಿನ ವಿರುದ್‌ನಗರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ ಸೋತಿದ್ದಾರೆ.

ಸ್ಮೃತಿ ಇರಾನಿ

ಗಾಂಧಿ ಕುಟುಂಬದ ಕ್ಷೇತ್ರ ಅಮೇಠಿಯಲ್ಲಿ ಸ್ಮೃತಿ ಇರಾನಿಗೆ ಈ ಬಾರಿ ಸೋಲಾಗಿದೆ. ಗಾಂಧಿ ಕುಟುಂಬದ ಬಲಗೈ ಬಂಟ ಕಿಶೋರಿ ಲಾಲ್‌ ಶರ್ಮಾ ಇಲ್ಲಿ ಇರಾನಿಗೆ ಸೋಲಿನ ರುಚಿ ತೋರಿಸಿದ್ದಾರೆ. ಈ ಮೂಲಕ ಕಳೆದ ಬಾರಿ ರಾಹುಲ್‌ ಗಾಂಧಿಯನ್ನೇ ಸೋಲಿಸಿದ್ದ ಇರಾನಿ, ಇದೀಗ ಅವರ ಬಂಟನ ಕೈಯಲ್ಲಿ ಸೋಲು ಕಾಣುವಂತಾಗಿದೆ.

ಮನೋಜ್ ತಿವಾರಿ (ಬಿಜೆಪಿ, ಈಶಾನ್ಯ ದೆಹಲಿ)

ಈಶಾನ್ಯ ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಭೋಜ್‌ಪುರಿ ನಟ, ಗಾಯಕ ಮನೋಜ್ ತಿವಾರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕನ್ಹಯ್ಯ ಕುಮಾರ್ ವಿರುದ್ಧ ಭರ್ಜರಿ ಮತಗಳಿಂದ ಗೆದ್ದಿದ್ದಾರೆ.

ರವಿ ಕಿಶನ್

ರಾಜಕಾರಣಿ ಹಾಗೂ ಬಿಜೆಪಿ ನಾಯಕ ರವಿ ಕಿಶನ್ ಉತ್ತರ ಪ್ರದೇಶದ ಗೋರಖ್‌ಪುರ ಕ್ಷೇತ್ರದಿಂದ 74,536 ಮತಗಳ ಅಂತರದಿಂದ ಗೆದ್ದಿದ್ದಾರೆ.

ಪವನ್ ಸಿಂಗ್

ಜನಪ್ರಿಯ ಭೋಜ್‌ಪುರಿ ನಟ ಮತ್ತು ಗಾಯಕ ಪವನ್ ಸಿಂಗ್ ಬಿಹಾರದ ಕಾರಕಟ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮುನ್ನಡೆ ಸಾಧಿಸಿದ್ದಾರೆ.

Continue Reading

ಬಾಲಿವುಡ್

Election Results 2024: ಕಂಗನಾ ರಣಾವತ್‌ ಎದುರು ʼಮಂಡಿʼಯೂರಿದ ಖ್ಯಾತ ರಾಜಕಾರಣಿಯ ಮಗ!

Election Results 2024: 2024ರ ಚುನಾವಣೆಯ ಫಲಿತಾಂಶದ ದಿನದಂದು ಕಂಗನಾ ತಮ್ಮ ತಾಯಿಯ ಆಶೀರ್ವಾದವನ್ನು ಪಡೆದಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಟನೆ ತೊರೆಯುವುದಾಗಿ ಕಂಗನಾ ರಣಾವತ್‌ ಈಗಾಗಲೇ ಘೋಷಣೆ ಮಾಡಿದ್ದಾರೆ. ಕಂಗನಾ ರಣಾವತ್‌ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ ಸ್ಪರ್ಧಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 65,807 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

VISTARANEWS.COM


on

Election Results 2024 Kangana Ranaut on lead
Koo

ಬೆಂಗಳೂರು: ನಟಿ ಮತ್ತು ಬಿಜೆಪಿ ನಾಯಕಿ ಕಂಗನಾ ರಣಾವತ್‌ (Kangana Ranaut) ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ (Election Results 2024) ಗೆದ್ದು ಬೀಗಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್‌ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ ಸ್ಪರ್ಧಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 72,088 ಮತಗಳಿಂದ ವಿನ್‌ ಆಗಿದ್ದಾರೆ. ಆ ಮೂಲಕ ನಟಿಯ ಗೆಲುವು ಖಚಿತವಾಗಿದೆ.

“ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡುವ ಪರಿಣಾಮಗಳನ್ನು ಅವರು ಅನುಭವಿಸಬೇಕಾಗುತ್ತದೆ. ನನ್ನ ‘ಜನ್ಮಭೂಮಿ’ ಹಿಮಾಚಲ ಪ್ರದೇಶದಲ್ಲಿ ಜನರ ಸೇವೆಯನ್ನು ಮುಂದುವರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಗುರಿಯಲ್ಲಿ ನಾನು ಸೈನಿಕನಾಗಿ ಕೆಲಸ ಮಾಡುತ್ತೇನೆ. ಬಹುಶಃ, ಬೇರೊಬ್ಬರು ತಮ್ಮ ಬ್ಯಾಗ್‌ ಪ್ಯಾಕ್ ಮಾಡಿ ಹೊರಡಬೇಕಾಗುತ್ತದೆ. ಆದರೆ ನಾನು ಇಲ್ಲಿ ಇದ್ದೇ ಇರುತ್ತೇನೆʼʼಎಂದು ಗೆಲ್ಲುವ ಮುಂಚೆ ಕಂಗನಾ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Election Results 2024: ಇಂದೋರ್‌ನಲ್ಲಿ NOTAಕ್ಕೆ ಲಭಿಸಿತು ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮತ; ಹಿಂದಿನ ದಾಖಲೆಗಳೆಲ್ಲ ಉಡೀಸ್‌

2024ರ ಚುನಾವಣೆಯ ಫಲಿತಾಂಶದ ದಿನದಂದು ಕಂಗನಾ ತಮ್ಮ ತಾಯಿಯ ಆಶೀರ್ವಾದವನ್ನು ಪಡೆದಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಟನೆ ತೊರೆಯುವುದಾಗಿ ಕಂಗನಾ ರಣಾವತ್‌ ಈಗಾಗಲೇ ಘೋಷಣೆ ಮಾಡಿದ್ದಾರೆ. ಆಜ್‌ ತಕ್‌ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆ ಈ ಘೋಷಣೆ ಮಾಡಿದ್ದಾರೆ. “ನೀವು ಮಂಡಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದರೆ ಏನೆಲ್ಲ ಮಾಡುತ್ತೀರಿ” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ಮಂಡಿಯಲ್ಲಿ ಗೆಲುವು ಸಾಧಿಸಿದ ಬಳಿಕ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಆದರೆ, ನಮ್ಮ ಬಳಿ ತುಂಬ ಒಳ್ಳೆಯ ನಟಿ ಇದ್ದಾರೆ. ದಯಮಾಡಿ ನೀವು ಬಿಟ್ಟು ಹೋಗಬೇಡಿ ಎಂಬುದಾಗಿ ಹೆಚ್ಚಿನ ನಿರ್ದೇಶಕರು ಹೇಳುತ್ತಾರೆ. ಹೌದು, ನಾನೊಬ್ಬ ಒಳ್ಳೆ ನಟಿ ನಿಜ. ಇದೇ ಮೆಚ್ಚುಗೆಯನ್ನು ಸ್ವೀಕರಿಸಿ ನಾನು ಮುಂದೆ ಹೋಗುತ್ತೇನೆ” ಎಂದು ತಿಳಿಸಿದ್ದಾರೆ. ಆ ಮೂಲಕ ಬಾಲಿವುಡ್‌, ನಟನೆ ತ್ಯಜಿಸುವುದನ್ನು ಅವರು ದೃಢಪಡಿಸಿದ್ದಾರೆ.

Continue Reading

Lok Sabha Election 2024

Election Results 2024: ಮತ ಎಣಿಕೆಯ ಮೊದಲು ತಾಯಿಯಿಂದ ಮೊಸರು-ಸಕ್ಕರೆಯ ಆಶೀರ್ವಾದ ಪಡೆದ ಕಂಗನಾ!

Election Results 2024: ಕಂಗನಾ ತಾಯಿಯ ಆಶೀರ್ವಾದ ಪಡೆದ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. . “ತಾಯಿಯೇ ದೇವರ ರೂಪ, ಇಂದು ನನ್ನ ತಾಯಿ ನನಗೆ ಮೊಸರು ಮತ್ತು ಸಕ್ಕರೆಯನ್ನು ತಿನ್ನಿಸುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

VISTARANEWS.COM


on

Election Results 2024 leading from Mandi, takes her mother's blessings
Koo

ಬೆಂಗಳೂರು: ನಟಿ ಮತ್ತು ಬಿಜೆಪಿ ನಾಯಕಿ ಕಂಗನಾ ರಣಾವತ್‌ (Kangana Ranaut) ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ (Election Results 2024) ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. 2024ರ ಚುನಾವಣೆಯ ಫಲಿತಾಂಶದ ದಿನದಂದು ಅವರು ತಮ್ಮ ತಾಯಿಯ ಆಶೀರ್ವಾದವನ್ನು ಪಡೆದರು. ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ. ವಿಕ್ರಮಾದಿತ್ಯ ಸಿಂಗ್ ಅವರು 6 ಬಾರಿ ಸಿಎಂ ಆಗಿದ್ದ ವೀರಭದ್ರ ಸಿಂಗ್ ಹಾಗೂ ಹಾಲಿ ಮಂಡಿ ಸಂಸದೆ ಪ್ರತಿಭಾ ಸಿಂಗ್ ಅವರ ಪುತ್ರ.

ಕಂಗನಾ ತಾಯಿಯ ಆಶೀರ್ವಾದ ಪಡೆದ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. . “ತಾಯಿಯೇ ದೇವರ ರೂಪ, ಇಂದು ನನ್ನ ತಾಯಿ ನನಗೆ ಮೊಸರು ಮತ್ತು ಸಕ್ಕರೆಯನ್ನು ತಿನ್ನಿಸುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

ತಮ್ಮ ಗೆಲುವಿನ ವಿಶ್ವಾಸದಲ್ಲಿರುವ ಕಂಗನಾಗೆ ಇದು ದೊಡ್ಡ ದಿನ. “ಮಂಡಿಯು ಹೆಣ್ಣು ಮಕ್ಕಳಿಗೆ ಆಗುವ ಅವಮಾನಗಳನ್ನು ನಾನು ಸಹಿಸುವುದಿಲ್ಲ. ಹಿಮಾಚಲ ಪ್ರದೇಶ ನನ್ನ ‘ಜನ್ಮಭೂಮಿ’ ಮತ್ತು ನಾನು ಇಲ್ಲಿ ಜನರ ಸೇವೆಯನ್ನು ಮುಂದುವರಿಸುತ್ತೇನೆʼʼ ಎಂದು ಕಂಗನಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: AP Election results 2024 live: ಆಂಧ್ರ ಪ್ರದೇಶ ವಿಧಾನಸಭೆ: ಭರ್ಜರಿ ಗೆಲುವಿನತ್ತ ಟಿಡಿಪಿ

ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಟನೆ ತೊರೆಯುವುದಾಗಿ ಕಂಗನಾ ರಣಾವತ್‌ ಈಗಾಗಲೇ ಘೋಷಣೆ ಮಾಡಿದ್ದಾರೆ. ಆಜ್‌ ತಕ್‌ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆ ಈ ಘೋಷಣೆ ಮಾಡಿದ್ದಾರೆ. “ನೀವು ಮಂಡಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದರೆ ಏನೆಲ್ಲ ಮಾಡುತ್ತೀರಿ” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ಮಂಡಿಯಲ್ಲಿ ಗೆಲುವು ಸಾಧಿಸಿದ ಬಳಿಕ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಆದರೆ, ನಮ್ಮ ಬಳಿ ತುಂಬ ಒಳ್ಳೆಯ ನಟಿ ಇದ್ದಾರೆ. ದಯಮಾಡಿ ನೀವು ಬಿಟ್ಟು ಹೋಗಬೇಡಿ ಎಂಬುದಾಗಿ ಹೆಚ್ಚಿನ ನಿರ್ದೇಶಕರು ಹೇಳುತ್ತಾರೆ. ಹೌದು, ನಾನೊಬ್ಬ ಒಳ್ಳೆ ನಟಿ ನಿಜ. ಇದೇ ಮೆಚ್ಚುಗೆಯನ್ನು ಸ್ವೀಕರಿಸಿ ನಾನು ಮುಂದೆ ಹೋಗುತ್ತೇನೆ” ಎಂದು ತಿಳಿಸಿದ್ದಾರೆ. ಆ ಮೂಲಕ ಬಾಲಿವುಡ್‌, ನಟನೆ ತ್ಯಜಿಸುವುದನ್ನು ಅವರು ದೃಢಪಡಿಸಿದ್ದಾರೆ.

Continue Reading

ಬಾಲಿವುಡ್

Swara Bhasker: ತೂಕ ಹೆಚ್ಚಾಗಿದ್ದರಿಂದ ಸಿನಿಮಾಗಳಲ್ಲಿ ಕೆಲಸ ಸಿಗುತ್ತಿಲ್ಲ; ಬಾಡಿ ಶೇಮ್‌ ಮಾಡಿದಕ್ಕೆ ಸ್ವರಾ ಭಾಸ್ಕರ್ ಗರಂ!

Swara Bhasker: ಸ್ವರಾ ಮತ್ತು ಕಂಗನಾ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2011 ರಲ್ಲಿ ʻತನು ವೆಡ್ಸ್ ಮನು’ ಮತ್ತು 2015 ರಲ್ಲಿ `ತನು ವೆಡ್ಸ್ ಮನು ರಿಟರ್ನ್ಸ್’. ಇತ್ತೀಚಿನ ಸಂದರ್ಶನದಲ್ಲಿ, ಸ್ವರಾ ಅವರಿಗೆ ಕಂಗನಾ ಕುರಿತು ಪ್ರಶ್ನೆ ಎದುರಾಯಿತು. ಆಗ ಸ್ವರಾ ಮಾತನಾಡಿ ʻʻಕಂಗನಾ ಹಾಗೂ ನನಗೆ ಬಹಳಷ್ಟು ವ್ಯತ್ಯಾಸವಿದೆ. ಕಂಗನಾ ಪ್ರತಿ ಬಾರಿ ಸರ್ಕಾರದ ಪರವಾಗಿ ಮಾತ್ರ ಧ್ವನಿ ಎತ್ತುತ್ತಾರೆ. ಆದರೆ ನಾನು ಹಾಗಲ್ಲ. ನಾನು ಯಾವಾಗಲೂ ಅಧಿಕಾರದಲ್ಲಿರುವವರನ್ನು ಪ್ರಶ್ನಿಸಲು ಧ್ವನಿ ಎತ್ತುತ್ತೇನೆʼʼಎಂದಿದ್ದರು.

VISTARANEWS.COM


on

Swara Bhaskar angry as news outlet
Koo

ಬೆಂಗಳೂರು: ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ (Swara Bhasker) ಅವರು 2023ರ ಸೆಪ್ಟೆಂಬರ್ 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ (Fahad Ahmad) ಅವರು ಸ್ವರಾ ಅವರ ಪತಿಯಾಗಿದ್ದಾರೆ. ಇದೀಗ ಮಾಧ್ಯಮವೊಂದು ಸ್ವರಾ ಭಾಸ್ಕರ್ ತೂಕ ಹೆಚ್ಚಾದ ಕಾರಣ ಸಿನಿಮಾಗಳಲ್ಲಿ ಅವರಿಗೆ ಕೆಲಸ ಸಿಗುತ್ತಿಲ್ಲ ಎಂದು ವರದಿ ಮಾಡಿವೆ. ಈ ರೀತಿ ಬಾಡಿ ಶೇಮ್‌ ಮಾಡಿದ ಸುದ್ದಿಗೆ ಸ್ವರಾ ಈಗ ಖಡಕ್‌ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಲೇಖನದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಸ್ವರಾ ಭಾಸ್ಕರ್ ಬರೆದಿದ್ದಾರೆ, “ದೇವನಾಗರಿ ಲಿಪಿಯನ್ನು ಓದಲು ಸಾಧ್ಯವಾಗದವರಿಗೆ, ಕೆಲವು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ ಇತ್ತೀಚಿನ ತಾಯಿಯ ಕುರಿತು ಹಾಕಿರುವ ಸುದ್ದಿಯಾಗಿದೆʼʼ ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ತೂಕ ಹೆಚ್ಚಾಗುವುದರಿಂದ, ಸ್ವರಾ ಅವರಿಗೆ ಕೆಲಸ ಸಿಗುತ್ತಿಲ್ಲ ಎಂದು ಸುದ್ದಿ ಮಾಡಿದ ಮಾಧ್ಯಮಕ್ಕೆ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ.

ಸ್ವರಾ ಭಾಸ್ಕರ್ ಮ್ತತು ಫಹಾದ್ ಅಹ್ಮದ್ ಅವರು ಕೋರ್ಟ್‌ನಲ್ಲಿ ವಿವಾಹವಾಗಿದ್ದರು. ಬಳಿಕ ಮಾರ್ಚ್ ತಿಂಗಳಲ್ಲಿ ಹಳದಿ, ಸಂಗೀತ, ವೆಡ್ಡಿಂಗ್ ರಿಸೆಪ್ಷನ್ ಸೇರಿದಂತೆ ಅನೇಕ ಮದುವೆಯ ಕಾರ್ಯಕ್ರಮಗಳನ್ನು ನಡೆಸಿದ್ದರು. ಜೂನ್ ತಿಂಗಳಲ್ಲಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಅವರು ಘೋಷಿಸಿದ್ದರು.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ಕಂಗನಾ ರಣಾವತ್ ( Kangana Ranaut ) ಅವರಿಗೆ ಹಿಂದಿ ಚಲನಚಿತ್ರೋದ್ಯಮದ ಅನೇಕ ನಟಿ ನಟಿಯರ ಜತೆ ವೈಮನಸ್ಸು ಇದೆ. ಅವರಲ್ಲಿ ಒಬ್ಬರು ಸ್ವರಾ ಭಾಸ್ಕರ್ (Swara Bhasker). ಕಂಗನಾ ಅವರು ಸ್ವರಾ ಅವರನ್ನು ‘ಬಿ-ಗ್ರೇಡ್ ನಟಿ’ ಎಂದು ಈ ಹಿಂದೆ ಕರೆದಿದ್ದರು. ನಟಿ ಮತ್ತು ರಾಜಕಾರಣಿ ಸ್ವರಾ ತಮಗೆ ಹಾಗೂ ಕಂಗನಾ ನಡುವೆ ಇರುವ ವ್ಯತ್ಯಾಸದ ಬಗ್ಗೆ ಕೆಲವು ದಿನಗಳ ಹಿಂದೆ ಮಾತನಾಡಿದ್ದರು.

ಸ್ವರಾ ಮತ್ತು ಕಂಗನಾ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2011 ರಲ್ಲಿ ʻತನು ವೆಡ್ಸ್ ಮನು’ ಮತ್ತು 2015 ರಲ್ಲಿ `ತನು ವೆಡ್ಸ್ ಮನು ರಿಟರ್ನ್ಸ್’. ಇತ್ತೀಚಿನ ಸಂದರ್ಶನದಲ್ಲಿ, ಸ್ವರಾ ಅವರಿಗೆ ಕಂಗನಾ ಕುರಿತು ಪ್ರಶ್ನೆ ಎದುರಾಯಿತು. ಆಗ ಸ್ವರಾ ಮಾತನಾಡಿ ʻʻಕಂಗನಾ ಹಾಗೂ ನನಗೆ ಬಹಳಷ್ಟು ವ್ಯತ್ಯಾಸವಿದೆ. ಕಂಗನಾ ಪ್ರತಿ ಬಾರಿ ಸರ್ಕಾರದ ಪರವಾಗಿ ಮಾತ್ರ ಧ್ವನಿ ಎತ್ತುತ್ತಾರೆ. ಆದರೆ ನಾನು ಹಾಗಲ್ಲ. ನಾನು ಯಾವಾಗಲೂ ಅಧಿಕಾರದಲ್ಲಿರುವವರನ್ನು ಪ್ರಶ್ನಿಸಲು ಧ್ವನಿ ಎತ್ತುತ್ತೇನೆʼʼಎಂದಿದ್ದರು.

Continue Reading
Advertisement
Election Results 2024
Lok Sabha Election 202417 seconds ago

Election Results 2024: ಮೂರನೇ ಬಾರಿ ಸರ್ಕಾರ ರಚಿಸಲು ಎನ್‌ಡಿಎ ತಯಾರಿ; ಕೇಂದ್ರ ಸಚಿವ ಸಂಪುಟದ ಸಭೆ

Valmiki Corporation Scam
ಪ್ರಮುಖ ಸುದ್ದಿ4 mins ago

Valmiki Corporation Scam : ವಾಲ್ಮಿಕಿ ನಿಗಮ ಹಗರಣ; ಆಂಧ್ರದ ಫಸ್ಟ್​​ ಬ್ಯಾಂಕ್ ಅಧ್ಯಕ್ಷ . ಸಚಿವ ನಾಗೇಂದ್ರ ಆಪ್ತರ ಬಂಧನ

Election Results 2024
Lok Sabha Election 202439 mins ago

Election Results 2024: ಸರ್ಕಾರ ರಚನೆಯ ಕಸರತ್ತು; ಒಂದೇ ವಿಮಾನದಲ್ಲಿ ದೆಹಲಿಗೆ ಹಾರಿದ ನಿತೀಶ್ ಕುಮಾರ್, ತೇಜಸ್ವಿ ಯಾದವ್

Nitish Kumar election results 2024
ಪ್ರಮುಖ ಸುದ್ದಿ43 mins ago

Election Results 2024: ನಿತೀಶ್‌ ಕುಮಾರ್‌ರಿಂದ ಪ್ರಧಾನಿ ಸ್ಥಾನಕ್ಕೆ ಬೇಡಿಕೆ, ಇಂಡಿಯಾ ಸೇರ್ಪಡೆ? ಸುಳಿವು ನೀಡಿದ ಎರಡು ಬೆಳವಣಿಗೆ!

Suicide attempt
ಪ್ರಮುಖ ಸುದ್ದಿ44 mins ago

Suicide Attempt : ಕಾಮಗಾರಿ ನಡೆಸಿದ 9 ಕೋಟಿ ರೂಪಾಯಿ ಬಿಲ್​ಬಾಕಿ , ಗುತ್ತಿಗೆದಾರನಿಂದ ಆತ್ಮಹತ್ಯೆ ಯತ್ನ

Murder Case
ಪ್ರಮುಖ ಸುದ್ದಿ1 hour ago

Murder News : ಹಾಸನದಲ್ಲಿ ನಟೋರಿಯಸ್​ ರೌಡಿ ಚೈಲ್ಡ್​ ರವಿ ಬರ್ಬರ ಕೊಲೆ

Election Results 2024
Lok Sabha Election 20241 hour ago

Election Results 2024: ಅತಿ ಹೆಚ್ಚು ಮತ್ತು ಅತಿ ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿಗಳಿವರು!

Chikkodi Lok Sabha Result:
ಪ್ರಮುಖ ಸುದ್ದಿ2 hours ago

Chikkodi Lok Sabha Result : ಕಾಂಗ್ರೆಸ್​ ವಿಜಯೋತ್ಸವದಲ್ಲಿ ಪಾಕಿಸ್ತಾನ ಪರ ಜೈಕಾರ ಕೂಗಿದ ಜಮೀರನ ಬಂಧನ

Election Results 2024 chandrababu naidu nitish kumar 2
ಪ್ರಮುಖ ಸುದ್ದಿ2 hours ago

Election Results 2024: ನಿತೀಶ್‌ಕುಮಾರ್, ಚಂದ್ರಬಾಬು ನಾಯ್ಡು ನೆರವಿಲ್ಲದೆ ಮೋದಿ ಸರ್ಕಾರ ನಡೆಸಲಾಗದೆ?

Election Results 2024
ದೇಶ2 hours ago

Election Results 2024: ಸುದೀರ್ಘ ಅವಧಿಗೆ ಪ್ರಧಾನಿ ಆಗ್ತಾರಾ ಮೋದಿ?; ನೆಹರೂ, ಇಂದಿರಾ ಸಾಲಿಗೆ ಸೇರೋದು ಪಕ್ಕಾನಾ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ1 day ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌