ವಿಸ್ತಾರ TOP 10 NEWS : ರಾಜ್ಯದ ರೈಲ್ವೇಗೆ 9 ಪಟ್ಟು ಹೆಚ್ಚು ಹಣದಿಂದ, ಪ್ರಜಾಧ್ವನಿಯಲ್ಲಿ ಒಡಕಿನ ದನಿವರೆಗಿನ ಪ್ರಮುಖ ಸುದ್ದಿಗಳಿವು - Vistara News

ಕರ್ನಾಟಕ

ವಿಸ್ತಾರ TOP 10 NEWS : ರಾಜ್ಯದ ರೈಲ್ವೇಗೆ 9 ಪಟ್ಟು ಹೆಚ್ಚು ಹಣದಿಂದ, ಪ್ರಜಾಧ್ವನಿಯಲ್ಲಿ ಒಡಕಿನ ದನಿವರೆಗಿನ ಪ್ರಮುಖ ಸುದ್ದಿಗಳಿವು

ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.

VISTARANEWS.COM


on

vistara-top-10-news union govt preference to karnataka railway to difference in prajadhwani and more news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1. Union Budget 2023: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಈ ಬಾರಿ 7561 ಕೋಟಿ ರೂ.! ಇದು ದಾಖಲೆಯ ಅನುದಾನ
ಈ ಬಾರಿ ಕರ್ನಾಟಕದ (Karnataka) ರೈಲ್ವೇ ಯೋಜನೆಗಳಿಗಾಗಿ (Indian Railway) ಬಜೆಟ್‌ನಲ್ಲಿ (Union Budget 2023) ಅತ್ಯಧಿಕ ಹಣವನ್ನು ಹಂಚಿಕೆ ಮಾಡಲಾಗಿದೆ. ಒಟ್ಟು 7561 ಕೋಟಿ ರೂ. ಮೀಸಲಿಡಲಾಗಿದೆ. ಇದು ಈ ಹಿಂದೆ ನೀಡುತ್ತಿದ್ದ ಮೊತ್ತಕ್ಕೆ ಹೋಲಿಸಿದರೆ, 9 ಪಟ್ಟು ಹೆಚ್ಚು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ತಿಳಿಸಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಕರ್ನಾಟಕದ ವಿಧಾನಸಭೆಗೆ ಚುನಾವಣೆ ನಡೆಯಲಿರುವುದರಿಂದ, ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಅದೇ ರೀತಿ, ರೈಲ್ವೆ ಯೋಜನೆಗಳಿಗೂ ಹೆಚ್ಚಿನ ಹಣವನ್ನು ಎತ್ತಿಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Budget 2023 : ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಗರಿಷ್ಠ ಅನುದಾನ ನೀಡಲಾಗಿದೆ: ಅರುಣ್ ಸಿಂಗ್

2. Parliament Session: ಬಜೆಟ್​ ಅಧಿವೇಶನಕ್ಕೆ ಅದಾನಿ ಅಡ್ಡಿ; ಎರಡೂ ಸದನಗಳ ಕಲಾಪ ಫೆ.6ಕ್ಕೆ ಮುಂದೂಡಿಕೆ
ಅದಾನಿ ಸಮೂಹವು ಷೇರು ವ್ಯವಹಾರದಲ್ಲಿ ಅಕ್ರಮ ಎಸಗಿದೆ ಎಂದು ಅಮೆರಿಕ ಮೂಲದ ಹಿಂಡೆನ್​ಬರ್ಗ್​ ಸಂಶೋಧನಾ ಸಂಸ್ಥೆ ವರದಿ ಮಾಡಿದ ಬೆನ್ನಲ್ಲೇ, ಆ ಸಮೂಹದ ಷೇರು ದೊಡ್ಡಮಟ್ಟದಲ್ಲಿ ಕುಸಿತವಾಗಿದೆ. ಪ್ರಸಕ್ತ ಸಾಲಿನ ಬಜೆಟ್​ ಅಧಿವೇಶನದಲ್ಲಿ (Parliament Session) ಇದೇ ವಿಷಯವೀಗ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜನವರಿ 31ರಂದು ಬಜೆಟ್​ ಅಧಿವೇಶನ ಪ್ರಾರಂಭವಾಗಿ, ಫೆ.1ರಂದು ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡಿಸಿದ್ದಾರೆ. ಅದರ ಮರುದಿನದಿಂದಲೂ ಸಂಸತ್ತಿನಲ್ಲಿ ಅದಾನಿ ವಿಷಯವನ್ನೇ ಇಟ್ಟುಕೊಂಡು ಪ್ರತಿಪಕ್ಷಗಳು ಗದ್ದಲ ಎಬ್ಬಿಸುತ್ತಿವೆ. ತತ್ಪರಿಣಾಮ ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ಫೆ.6ರವರೆಗೆ ಮುಂದೂಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Adani Group shares : ಅದಾನಿ ಷೇರುಗಳಲ್ಲಿ ಹೂಡಿಕೆಯಿಂದ ಎಸ್‌ಬಿಐ, ಎಲ್‌ಐಸಿಗೆ ಈಗಲೂ ಲಾಭ : ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಅದಾನಿ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿದ್ದು, ಷೇರುಗಳ ಮೌಲ್ಯ ಕುಸಿತದ ಬಳಿಕವೂ ಎಲ್‌ಐಸಿ, ಎಸ್‌ಬಿಐಗೆ ಲಾಭವಾಗಿದೆ ಎಂದು ತಿಳಿಸಿದ್ದಾರೆ. ಅದಾನಿ ಗ್ರೂಪ್‌ ಷೇರುಗಳಲ್ಲಿ (Adani Group shares) ಎಸ್‌ಬಿಐ ಮತ್ತು ಎಲ್‌ಐಸಿಯ ಹೂಡಿಕೆಗಳು ನಿಗದಿಯ ಮಿತಿಯೊಳಗೆಯೇ ಇದ್ದು, ಈಗಲೂ ಲಾಭದಾಯಕವಾಗಿದೆ ಎಂದು ಹೇಳಿದ್ದಾರೆ. ಎಸ್‌ಬಿಐ ಮತ್ತು ಎಲ್‌ಐಸಿ ವಿವರವಾದ ಹೇಳಿಕೆಗಳನ್ನು ಬಿಡುಗಡೆಗೊಳಿಸಿವೆ. ಎಸ್‌ಬಿಐ ಮುಖ್ಯಸ್ಥರು ಕೂಡ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Ramesh Jarakiholi : ರಮೇಶ್‌ ಜಾರಕಿಹೊಳಿ ದೆಹಲಿ ಭೇಟಿ ಸಕ್ಸೆಸ್‌; ಅಮಿತ್‌ ಶಾ ಜತೆ 10 ನಿಮಿಷ ಚರ್ಚೆ, ಏನೆಲ್ಲಾ ಹೇಳಿದ್ರು?
ತನ್ನ ವಿರುದ್ಧದ ವಿವಾದಾತ್ಮಕ ಲೈಂಗಿಕ ಸಿಡಿ ಪ್ರಕರಣ ಡಿ.ಕೆ. ಶಿವಕುಮಾರ್‌ ಅವರ ಷಡ್ಯಂತ್ರದ ಫಲ ಎಂದು ಆಪಾದಿಸುತ್ತಿರುವ ರಮೇಶ್‌ ಜಾರಕಿಹೊಳಿ ಅವರು ಇದರ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅದನ್ನು ಸಾಧಿಸುವುದಕ್ಕಾಗಿ ದೆಹಲಿಗೆ ಹೋಗಿರುವ ಅವರು, ಕೊನೆಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಈ ಹೋರಾಟದಲ್ಲಿ ಮೊದಲ ಯಶಸ್ಸು ಸಿಕ್ಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Prajadhwani : ಡಿ.ಕೆ. ಶಿವಕುಮಾರ್‌ಗೂ ಕೇರ್‌ ಮಾಡದ ರಮೇಶ್‌ ಕುಮಾರ್‌: ತವರು ಜಿಲ್ಲೆಯ ರ‍್ಯಾಲಿಗಳಿಗೆ ಗೈರಾದ ಮಾಜಿ ಸಚಿವ
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷವನ್ನು ಸಜ್ಜುಗೊಳಿಸಲು ಆರಂಭಿಸಿರುವ ಪ್ರಜಾಧ್ವನಿ ಯಾತ್ರೆಯಲ್ಲಿ (Prajadhwani) ಯಾತ್ರೆಯಲ್ಲಿ ಒಡಕಿನ ಧ್ವನಿಗಳು ಗೋಚರಿಸಲು ಆರಂಭಿಸಿವೆ. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕೋಲಾರ ಜಿಲ್ಲೆಯಿಂದಲೇ ಪ್ರಜಾಧ್ವನಿಗೆ ಚಾಲನೆ ನೀಡಿದರೂ ಮಾಜಿ ಸಚಿವ ಹಾಗೂ ಸಿದ್ದರಾಮಯ್ಯ ಆಪ್ತ ಕೆ.ಆರ್‌. ರಮೇಶ್‌ ಕುಮಾರ್‌ ಗೈರಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Administrative Reforms : 20 ಅಂಕ ಪಡೆದರೂ SSLC ಪಾಸ್‌; 3,457 ಕಿರಿಯ ಪ್ರಾಥಮಿಕ ಶಾಲೆಗಳ ವಿಲೀನ: ಆಡಳಿತ ಸುಧಾರಣಾ ವರದಿ ಶಿಫಾರಸು
ಶಾಲೆಯ ನಂತರ ಕಾಲೇಜಿಗೆ ತೆರಳುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ, ಎಸ್‌ಎಸ್‌ಎಸ್‌ಎಲ್‌ ಸಿ ಪರೀಕ್ಷೆಯ ಥಿಯರಿ ಪರೀಕ್ಷೆಯಲ್ಲಿ 20 ಅಂಕ ಪಡೆದರೂ ಪಾಸ್‌ ಮಾಡಬಹುದು, ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು 3,457 ಕಿರಿಯ ಪ್ರಾಥಮಿಕ ಶಾಲೆಗಳ ವಿಲೀನ ಮಾಡಬಹುದು ಎನ್ನುವುದೂ ಸೇರಿ ಅನೇಕ ಶಿಫಾರಸುಗಳನ್ನು ಕರ್ನಾಟಕ ಸರ್ಕಾರ ರಚಿಸಿದ್ದ ಎರಡನೇ ಆಡಳಿತ ಸುಧಾರಣಾ ಆಯೋಗ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Administrative Reforms : ಮಕ್ಕಳಿಗೆ 5 ಮೊಟ್ಟೆ, ಸರ್ಕಾರಿ ವೈದ್ಯರ ಖಾಸಗಿ ʼಸೇವೆʼ ಬಂದ್‌, KPSC ಸದಸ್ಯರ ಕಡಿತ: ಆಡಳಿತ ಸುಧಾರಣಾ ವರದಿ ಶಿಫಾರಸು

7. Terror Threat: ಮುಂಬಯಿ ಮೇಲೆ ದಾಳಿ ನಡೆಸುವುದಾಗಿ ರಾಷ್ಟ್ರೀಯ ತನಿಖಾ ದಳಕ್ಕೆ ಬೆದರಿಕೆ ಸಂದೇಶ; ದೇಶದ ಎಲ್ಲ ಪ್ರಮುಖ ನಗರಗಳಲ್ಲೂ ಕಟ್ಟೆಚ್ಚರ
ಮುಂಬಯಿ ಮಹಾನಗರದಲ್ಲಿ ಭಯೋತ್ಪಾದಕ ದಾಳಿ ನಡೆಸುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ)ಕ್ಕೆ ಬೆದರಿಕೆ ಮೇಲ್​ ಸಂದೇಶ ಬಂದಿದೆ. ಇ-ಮೇಲ್​ ಕಳಿಸಿದಾತ ತನ್ನ ಹೆಸರು ಹೇಳಿಕೊಂಡಿಲ್ಲ, ಆದರೆ ತಾನು ತಾಲಿಬಾನ್​ ಉಗ್ರ ಎಂದು ಹೇಳಿಕೊಂಡಿದ್ದಾನೆ. ತಮಗೆ ಬಂದ ಇ-ಮೇಲ್​ ಸಂದೇಶವನ್ನು ರಾಷ್ಟ್ರೀಯ ತನಿಖಾ ದಳ ಪೊಲೀಸರ ಗಮನಕ್ಕೆ ತಂದಿದೆ. ಅದರ ಬೆನ್ನಲ್ಲೇ ಮುಂಬಯಿ ಸೇರಿ, ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಷ್ಟೇ ಅಲ್ಲ, ಬೆಂಗಳೂರು ಸೇರಿ ದೇಶದ ಎಲ್ಲ ಮಹಾನಗರಗಳಲ್ಲೂ ಪೊಲೀಸ್ ಕಣ್ಗಾವಲು ಇಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Ayodhya Ram Mandir: ಅಯೋಧ್ಯೆ ರಾಮಮಂದಿರ ಸ್ಫೋಟಿಸುವುದಾಗಿ ಬೆದರಿಕೆ; ಭದ್ರತೆಗೆ ಹೆಚ್ಚಿನ ಪೊಲೀಸ್​ ಸಿಬ್ಬಂದಿ ನಿಯೋಜನೆ

8. Viral Video: ಪಾಕಿಸ್ತಾನವನ್ನೇ ಪುಡಿಗಟ್ಟುತ್ತಿದ್ದಾರೆ ಭಯೋತ್ಪಾದಕರು; ಕರಾಚಿ ಮಸೀದಿಯ ಮೇಲೆ ಹತ್ತಿ ಮಿನಾರ್​ಗಳ ಧ್ವಂಸ
ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಪಾಕಿಸ್ತಾನಕ್ಕೆ, ಆ ದೇಶವೇ ಹುಟ್ಟಿಸಿದ ಉಗ್ರರೂ ಭೂತಗಳಂತೆ ಕಾಡುತ್ತಿದ್ದಾರೆ. ಜನವರಿ 30ರಂದು ಪೇಷಾವರ ಮಸೀದಿ ಮೇಲೆ ಬಾಂಬ್​ ದಾಳಿಯಾಗಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ದಾಳಿಯ ಹೊಣೆಯನ್ನು ತೆಹ್ರೀಕ್‌ ಇ ತಾಲಿಬಾನ್‌ ಪಾಕಿಸ್ತಾನ (ಟಿಟಿಪಿ) ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಅದರ ಬೆನ್ನಲ್ಲೇ ಇನ್ನೊಂದು ಉಗ್ರ ಸಂಘಟನೆ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ (TLP terrorists)ದ ಭಯೋತ್ಪಾದಕರು ಈಗ ಕರಾಚಿಯಲ್ಲಿರುವ ಅಹ್ಮದಿ ಮಸೀದಿಯ ಗೋಪುರಸ್ತಂಭಗಳನ್ನೆಲ್ಲ ಧ್ವಂಸ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Bangalore traffic: ಬೆಂಗಳೂರು ಟ್ರಾಫಿಕ್‌ಗೆ ಬಲಿಯಾದ ಕಂದಮ್ಮ, ಆಂಬ್ಯುಲೆನ್ಸ್‌ನಲ್ಲೇ ಹೋದ ಜೀವ
ಬೆಂಗಳೂರಿನ ಟ್ರಾಫಿಕ್‌ನಿಂದಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಒಂದೂವರೆ ವರ್ಷದ ಎಳೆಯ ಕಂದ ಆಂಬ್ಯುಲೆನ್ಸ್‌ನಲ್ಲೇ ಮೃತಪಟ್ಟ ಘಟನೆ ನೆಲಮಂಗಲದಲ್ಲಿ ನಡೆದಿದೆ. ಮಗುವಿನ ತಂದೆ ತಾಯಿ ಸಹ ಆಸ್ಪತ್ರೆಯಲ್ಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. BBC Documentary : ‌ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ ನಿಷೇಧ, ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ನೋಟಿಸ್
2002ರಲ್ಲಿ ನಡೆದಿದ್ದ ಗೋದ್ರಾ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿಯವರು ತಪ್ಪಿತಸ್ಥರು ಎಂಬಂತೆ ಬಿಂಬಿಸಿ ಚಿತ್ರಿಸಿರುವ ಬಿಬಿಸಿ ಡಾಕ್ಯುಮೆಂಟರಿ(BBC Documentary) ಪ್ರಸಾರಕ್ಕೆ ಕೇಂದ್ರ ಸರ್ಕಾರ ವಿಧಿಸಿರುವ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್‌, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದೆ. ತನ್ನ ಆದೇಶಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ, ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು ಎಂದಿರುವ ಸುಪ್ರೀಂಕೋರ್ಟ್‌, 2023ರ ಏಪ್ರಿಲ್‌ನಲ್ಲಿ ಮುಂದಿನ ವಿಚಾರಣೆ ನಡೆಸಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Mysuru Bengaluru Expressway Toll : ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್‌ ಸಂಗ್ರಹ ಫೆ.15ರಿಂದ ಆರಂಭ
  2. Murder Case: ಮಂಗಳೂರು ಜ್ಯುವೆಲ್ಲರಿಗೆ ನುಗ್ಗಿ ನೌಕರನಿಗೆ ಚಾಕು ಇರಿದು ಕೊಂದ ಮುಸುಕುಧಾರಿ
  3. BSF Recruitment 2023: ಬಿಎಸ್‌ಎಫ್‌ನ 1410 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
  4. ಬೇಹುಗಾರಿಕೆಗಾಗಿ ಅಮೆರಿಕಕ್ಕೆ ಬಲೂನ್​ ಬಿಟ್ಟ ಚೀನಾ; ಹೊಡೆದುರುಳಿಸಲು ಹಿಂದೇಟು ಹಾಕುತ್ತಿರುವ ಪೆಂಟಗನ್​!
  5. PSI Scam : ಪಿಎಸ್‌ಐ ಹಗರಣದ ಎಫ್‌ಐಆರ್‌, ಎಲ್ಲ ದಾಖಲೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಆದೇಶ
  6. ಮೊಗಸಾಲೆ ಅಂಕಣ: ಭದ್ರಾ ಮೇಲ್ದಂಡೆ: ರಾಜ್ಯದ ಮೊದಲ ಕೇಂದ್ರ ಯೋಜನೆ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Rain News: ಕುಷ್ಟಗಿಯಲ್ಲಿ ಸಿಡಿಲು ಬಡಿದು ರೈತ ಸಾವು, ಯುವಕನಿಗೆ ಗಂಭೀರ ಗಾಯ

Rain News: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಚನಾಳ ಗ್ರಾಮದ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಸಿಡಿಲು ಬಡಿದು ರೈತ ಮೃತಪಟ್ಟಿದ್ದಾರೆ.

VISTARANEWS.COM


on

Rain News
ಧಾರಾಕಾರ ಮಳೆಗೆ ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯ ರೈಸ್ ಮಿಲ್ ಕಾಂಪೌಂಡ್ ಕುಸಿದಿದೆ.
Koo

ಕೊಪ್ಪಳ: ಸಿಡಿಲು ಬಡಿದು (Lightning strike) ರೈತ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಚನಾಳ ಗ್ರಾಮದಲ್ಲಿ ನಡೆದಿದೆ. ಉತ್ತಮ ಮಳೆ (Rain News) ಹಿನ್ನೆಲೆಯಲ್ಲಿ ಜಮೀನಿನಲ್ಲಿ ಬಿತ್ತನೆ ಸಲುವಾಗಿ ಕೃಷಿ ಚಟುವಟಿಕೆ ಮಾಡುತ್ತಿದ್ದಾಗ ಅವಘಡ ನಡೆದಿದ್ದು, ಈಶಪ್ಪ ಕಳಮಳ್ಳಿ (40) ಮೃತ ರೈತ.

ಮಳೆ ಬಂದ ಖುಷಿಯಲ್ಲಿ ಎತ್ತುಗಳೊಂದಿಗೆ ರೈತ ಭೂಮಿ ಹದ ಮಾಡುತ್ತಿದ್ದ. ಈ ವೇಳೆ ಸಿಡಿಲು ಬಡಿದು ರೈತ ಈಶಪ್ಪ ಕಳಮಳ್ಳಿ ಮೃತಪಟ್ಟಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ರೈತನ ಸಹೋದರ ಪಾರಾಗಿದ್ದಾನೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸಿಡಿಲು ಬಡಿದು ಯುವಕನಿಗೆ ಗಂಭೀರ ಗಾಯ

ಧಾರವಾಡ: ಸಿಡಿಲು ಬಡಿದು ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದ ಮುಗದ ಗ್ರಾಮದ ಕೆರೆ ಬಳಿ ನಡೆದಿದೆ. ಇಂದು ಮಧ್ಯಾಹ್ನ ಸುರಿದ ಸಿಡಿಲು ಸಹಿತ ಮಳೆ ವೇಳೆ ಅವಘಡ ನಡೆದಿದೆ. ದಡ್ಡಿಕಮಲಾಪುರ ಗ್ರಾಮದ ನಿವಾಸಿ ರವಿ ಕೊರಮಡ್ಡಿ ಗಾಯಾಳು. ಇದೆ ವೇಳೆ ಸಿಡಿಲಿಗೆ ಎಮ್ಮೆ ಕರು ಬಲಿಯಾಗಿದೆ. ಗಂಭೀರ ಗಾಯಗೊಂಡ ಯುವಕನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಇದನ್ನೂ ಓದಿ | Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಶಿವಮೊಗ್ಗದಲ್ಲಿ ಕಾಂಪೌಂಡ್ ಕುಸಿತ

ಶಿವಮೊಗ್ಗ: ಧಾರಾಕಾರ ಮಳೆಗೆ ಕಾಂಪೌಡ್‌ ಕುಸಿದಿರುವುದು ನಗರದಲ್ಲಿ ಭಾನುವಾರ ನಡೆದಿದೆ. ತೀರ್ಥಹಳ್ಳಿ ರಸ್ತೆಯ ಪೆಟ್ರೋಲ್ ಬಂಕ್ ಪಕ್ಕದ ರೈಸ್ ಮಿಲ್ ಕಾಂಪೌಂಡ್ ಕುಸಿದಿದೆ.

ಚಿಕ್ಕಮಗಳೂರಿನ ಬಯಲು ಸೀಮೆ ಭಾಗದಲ್ಲಿ ಭಾರಿ ಮಳೆ

ಚಿಕ್ಕಮಗಳೂರು: ಜಿಲ್ಲೆಯ ಬಯಲು ಸೀಮೆ ಭಾಗದಲ್ಲಿ ವರುಣ ಅಬ್ಬರಿಸಿದ್ದಾರೆ. ಒಂದು ಗಂಟೆ ಸುರಿದ ಭಾರಿ ಮಳೆಗೆ ರಸ್ತೆ ಸಂಪರ್ಕ ಕಡಿತವಾಗಿರುವುದು ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ ಕಂಡುಬಂದಿದೆ. ರಸ್ತೆಯ ಮೇಲೆ ನದಿಯಂತೆ ಹಳ್ಳದ ನೀರು ಹರಿದಿದ್ದರಿಂದ ದಂದೂರು ಹಾಗೂ ಚೀರನಹಳ್ಳಿ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಭಾರಿ ಮಳೆಯಿಂದಾಗಿ ಶಿವನಿ ಹೋಬಳಿ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಜನರು ಪರದಾಡುವಂತಾಗಿದೆ.

ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka rain

ವಿಜಯನಗರ/ಬೆಂಗಳೂರು: ರಾಜ್ಯಾದ್ಯಂತ ಭಾನುವಾರ ಹಲವೆಡೆ ಗುಡುಗು ಸಹಿತ ಮಳೆ (Karnataka Rain) ಅಬ್ಬರಿಸಿದೆ. ವಿಜಯನಗರ ಜಿಲ್ಲೆಯಲ್ಲಿ ಅರ್ಧ ಗಂಟೆಗೂ ಅಧಿಕ ಸಮಯ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದೆ. ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಜಾನುವಾರುಗಳು ಮೃತಪಟ್ಟಿವೆ. ಕೋರಿ ಮಲಿಯಪ್ಪ ಎಂಬ ರೈತರಿಗೆ ಸೇರಿದ ಎತ್ತುಗಳನ್ನು ಹೊಲದಲ್ಲಿ ಮರದಡಿ ಕಟ್ಟಿ ಹಾಕಿದ್ದರು. ಈ ವೇಳೆ ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟಿವೆ. ಅಂದಾಜು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಎತ್ತುಗಳು ಸಾವನ್ನಪ್ಪಿದ್ದರಿಂದ ರೈತ ಕೋರಿ ಮಲಿಯಪ್ಪ ಕಂಗಲಾಗಿದ್ದಾರೆ.

ಬೆಂಗಳೂರು, ಆನೇಕಲ್‌ನಲ್ಲಿ ಗುಡುಗು ಸಹಿತ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ಮಳೆ ಮುಂದುವರಿದಿದೆ. ಸಂಜೆಗೆ ಆವರಿಸುತ್ತಿದ್ದ ಮಳೆ ಭಾನುವಾರ ಬೆಳಗಿನಿಂದಲೇ ಅಬ್ಬರಿಸುತ್ತಿದೆ. ಎಂಎಸ್ ಬಿಲ್ಡಿಂಗ್ , ವಿಧಾನಸೌಧ , ಶಿವಾನಂದ ಸರ್ಕಲ್, ಶಿವಾಜಿನಗರ ಸೇರಿದಂತೆ ಮೆಜೆಸ್ಟಿಕ್‌ ಸುತ್ತಮುತ್ತ ಮಧ್ಯಾಹ್ನ ಶುರುವಾದ ಮಳೆಯು ಸುಮಾರು 1 ಗಂಟೆಗೂ ಹೆಚ್ಚು ಸಮಯ ಆವರಿಸಿತ್ತು. ಆಗಾಗ ಬರುತ್ತಿದ್ದ ಗುಡುಗು ಜನರನ್ನು ಬೆಚ್ಚಿ ಬೀಳಿಸುತ್ತಿತ್ತು. ಕೆ.ಆರ್ ಸರ್ಕಲ್, ಕಬ್ಬನ್ ಪಾರ್ಕ್ ರಸ್ತೆ, ಲಾಲ್ ಬಾಗ್ ರಸ್ತೆ, ರಾಜಾಜಿನಗರ, ರಾಜಕುಮಾರ್ ರಸ್ತೆಯಲ್ಲಿಯೂ ಮಳೆಯಾಗಿದೆ. ಯಲಹಂಕ, ನ್ಯೂ ಟೌನ್, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಪುಟ್ಟೇನಹಳ್ಳಿ, ಏರ್‌ಪೋರ್ಟ್‌ ರೋಡ್‌ನಲ್ಲಿ ಮಳೆಯಾಗಿದೆ.

ಇತ್ತ ಆನೇಕಲ್ ಭಾಗದಲ್ಲೂ ಧಾರಾಕಾರ ಮಳೆಯಾಗಿತ್ತು. ಭಾನುವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಆಗಮಿಸಿದ ಮಳೆಯು ಆನೇಕಲ್, ಅತ್ತಿಬೆಲೆ, ಸರ್ಜಾಪುರ ಭಾಗದಲ್ಲಿ ಅಬ್ಬರಿಸಿತ್ತು. ಕಳೆದೊಂದು ವಾರದಿಂದ ನಿರಂತರ ಮಳೆಯಿಂದಾಗಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಧಾರವಾಡದಲ್ಲೂ ಮಳೆ

ಪೇಡಾನಗರಿ ಧಾರವಾಡದಲ್ಲೂ ವರುಣನ ಅಬ್ಬರ ಮುಂದುವರಿದಿದೆ. ಮಧ್ಯಾಹ್ನದ ವೇಳೆ ಶುರುವಾದ ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ವಿಜಯನಗರದಲ್ಲಿ ಮರಕ್ಕೆ ಬಡಿದ ಸಿಡಿಲು

ವಿಜಯನಗರದಲ್ಲಿ ಗುಡುಗು ಸಿಡಿಲು ಸಮೇತ ಮಳೆಯಾಗುತ್ತಿದ್ದು, ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಹೊಸಪೇಟೆ ತಾಲೂಕಿನ ಕೆರೆ ತಾಂಡಾ ಗ್ರಾಮದಲ್ಲಿ ಮರಕ್ಕೆ ಸಿಡಿಲು ಬಡಿದಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ, ಕಮಲಾಪುರ, ಹಂಪಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಇತ್ತ ಹೊಸಪೇಟೆ ಹೃದಯ ಭಾಗದಲ್ಲಿ ರಸ್ತೆ ಮೇಲೆ ನೀರು ನಿಂತು ಅವಾಂತರವೇ ಸೃಷ್ಟಿಯಾಗಿತ್ತು. ನೂರು ಹಾಸಿಗೆ ಆಸ್ಪತ್ರೆ, VNC ಕಾಲೇಜಿಗೆ ಹೋಗುವ ರಸ್ತೆ ಮೇಲೆ ನೀರು ನಿಂತಿತ್ತು. ಕೆಲ ಸಮಯ ವಾಹನಗಳ ಸಂಚಾರ ಅಡಚಣೆ ಉಂಟಾಯಿತು

ಇದನ್ನೂ ಓದಿ: Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ದಾವಣಗೆರೆಯಲ್ಲಿ ನೆಲ ಕಚ್ಚಿದ ಬೆಳೆ

ಶನಿವಾರ ಸುರಿದ ಮಳೆಯಿಂದ ಭತ್ತದ ಬೆಳೆ‌ಯು ನೆಲ ಕಚ್ಚಿದೆ. ದಾವಣಗೆರೆಯ ದೊಡ್ಡಬಾತಿ ಗ್ರಾಮದ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಎಕರೆ ಭತ್ತದ ಬೆಳೆ ನಾಶವಾಗಿದೆ. ಉಮೇಶ್ ಎಂಬ ಯುವ ರೈತ ಬೆಳೆದಿದ್ದ ಎರಡು ಎಕರೆ ಭತ್ತ ಸಂಪೂರ್ಣ ನಾಶವಾಗಿತ್ತು. ಬರಗಾಲದ ಸಂದರ್ಭದಲ್ಲಿ ಬೋರ್ ವೆಲ್ ನೀರಿನಲ್ಲಿ ಭತ್ತ ಬೆಳೆ ಬೆಳೆದಿದ್ದರು. ಎಕರೆಗೆ 25 ರಿಂದ 30 ಸಾವಿರ ಖರ್ಚು ಮಾಡಿ ಬೆಳೆದಿದ್ದ ಬೆಳೆಯು ರಾತ್ರಿ ಸುರಿದ ಮಳೆಗೆ ಸಂಪೂರ್ಣ ನಾಶವಾಗಿದೆ. ಮಳೆ ಬಾರದೇ ಕಷ್ಟ ಅನುಭವಿಸಿದ ರೈತರಿಗೆ ಈಗ ಮಳೆ ಬಂದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

ದೇವೇಗೌಡ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವಲ್ಲ; ಹೊಸ ಆಡಿಯೊದಲ್ಲಿ ಶಿವರಾಮೇಗೌಡ ಸ್ಫೋಟಕ ಹೇಳಿಕೆ

Prajwal Revanna Case: ನೀವು ಡಿ.ಕೆ.ಶಿವಕುಮಾರ್‌ ಅವರ ಜತೆ ಕೈಜೋಡಿಸಿದರೆ ಯಾವ ಸಹಾಯ ಬೇಕೋ ಎಲ್ಲವನ್ನೂ ಮಾಡುತ್ತಾರೆ. ಜೆಡಿಎಸ್‌ಅನ್ನು ಎನ್‌ಡಿಎಯಿಂದ ಆಚೆಗೆ ಹಾಕಲು ನಾನೇ ನರೇಂದ್ರ ಮೋದಿ ಅವರಿಗೆ ಒತ್ತಾಯ ಮಾಡುತ್ತೇನೆ. ಇನ್ನೇನು ವಿಡಿಯೊಗಳು ಇವೆಯೋ, ಎಲ್ಲವನ್ನೂ ನಮಗೆ ಕೊಡಿ. ದೇವೇಗೌಡ ಕುಟುಂಬವನ್ನು ಬಲಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂಬುದಾಗಿ ದೇವರಾಜೇಗೌಡ ಅವರಿಗೆ ಶಿವರಾಮೇಗೌಡ ಭರವಸೆ ನೀಡಿದ ಆಡಿಯೊ ಈಗ ಸಂಚಲನ ಮೂಡಿಸಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಎಸಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಡಿಯೊ ಲಭ್ಯವಾಗಿದ್ದು, ಇದು ಈಗ ಸಂಚಲನ ಮೂಡಿಸಿದೆ. ವಕೀಲ ದೇವರಾಜೇಗೌಡ (Devaraje Gowda) ಹಾಗೂ ಮಾಜಿ ಸಂಸದ ಎಲ್‌.ಆರ್.ಶಿವರಾಮೇಗೌಡ (LR Shivarame Gowda) ಅವರ ಮಧ್ಯೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೊ ಬಯಲಾಗಿದ್ದು, “ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಕುಟುಂಬವನ್ನು ಬಲಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಷ್ಟಕ್ಕೂ, ದೇವೇಗೌಡ ಅವರು ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲವಲ್ಲ” ಎಂಬುದಾಗಿ ಶಿವರಾಮೇಗೌಡ ಹೇಳಿದ್ದಾರೆ.

“ನೀವು ಡಿ.ಕೆ.ಶಿವಕುಮಾರ್‌ ಅವರ ಜತೆ ಕೈಜೋಡಿಸಿದರೆ ಯಾವ ಸಹಾಯ ಬೇಕೋ ಎಲ್ಲವನ್ನೂ ಮಾಡುತ್ತಾರೆ. ಜೆಡಿಎಸ್‌ಅನ್ನು ಎನ್‌ಡಿಎಯಿಂದ ಆಚೆಗೆ ಹಾಕಲು ನಾನೇ ನರೇಂದ್ರ ಮೋದಿ ಅವರಿಗೆ ಒತ್ತಾಯ ಮಾಡುತ್ತೇನೆ. ಇನ್ನೇನು ವಿಡಿಯೊಗಳು ಇವೆಯೋ, ಎಲ್ಲವನ್ನೂ ನಮಗೆ ಕೊಡಿ. ದೇವೇಗೌಡ ಕುಟುಂಬವನ್ನು ಬಲಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನೀವು ಯಾವುದಕ್ಕೂ ಹೆದರಬೇಡಿ. ನಿಮಗೆ ಏನು ಹೆಲ್ಪ್‌ ಬೇಕೋ ಅದನ್ನು ಡಿಕೆಶಿ ಮಾಡುತ್ತಾರೆ” ಎಂಬುದಾಗಿ ಶಿವರಾಮೇಗೌಡ ಭರವಸೆ ನೀಡಿರುವುದು ಆಡಿಯೊದಲ್ಲಿದೆ.

ವಿಡಿಯೊ ಕೊಡಿ ಎಂಬುದಕ್ಕೆ ಉತ್ತರಿಸಿದ ದೇವರಾಜೇಗೌಡ, “ಅಣ್ಣ ಇದು ಹೆಣ್ಣುಮಕ್ಕಳ ಮಾನ ಮರ್ಯಾದೆ ಪ್ರಶ್ನೆ ಅಲ್ಲವೇ? ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದಿದ್ದಾರೆ. ಅದಕ್ಕೆ ಶಿವರಾಮೇಗೌಡ, “ನಿನಗೆ ಏನು ಸಹಾಯ ಬೇಕೋ ಅದನ್ನು ಮಾಡುತ್ತಾರೆ. ಅಷ್ಟಕ್ಕೂ, ನೀನೇನೂ ಹಾಸನದಲ್ಲಿ ಪೆನ್‌ಡ್ರೈವ್‌ ಹಂಚಿಲ್ಲ. ಹಂಚಿದರೂ ಅದರಲ್ಲಿ ತಪ್ಪೇನಿಲ್ಲ. ನೀನೊಬ್ಬ ವಕೀಲನಾಗಿ ಹೀಗೆ ಹೆದರಿದರೆ ಹೇಗೆ? ಏನೂ ಆಗುವುದಿಲ್ಲ. ಯಾವ ವಿಡಿಯೊ ಇದೆ ನಮಗೆ ಕೊಡು” ಎಂದಿದ್ದಾರೆ.

ಗೌಡರು ಸೂಸೈಡ್‌ ಮಾಡಿಕೊಂಡಿಲ್ವಲ್ಲ

“ಕುಮಾರಸ್ವಾಮಿ ಅವರೇ ವಿಡಿಯೊಗಳನ್ನು ಬಿಟ್ಟಿದ್ದಾರೆ ಎಂಬುದಾಗಿ ಹೇಳು. ಆ ದೇವೇಗೌಡರ ಮಕ್ಕಳು ಏನೂ ಕಡಿಮೆ ಇಲ್ಲ. ದೇವೇಗೌಡರು ಇಷ್ಟಾದರೂ ಆತ್ಮಹತ್ಯೆ ಮಾಡಕೊಂಡಿಲ್ಲವಲ್ಲ. ಪ್ರಜ್ವಲ್‌ ರೇವಣ್ಣ ಬೆಳೆಯುತ್ತಿದ್ದಾನೆ. ಕುಮಾರಸ್ವಾಮಿ ಅವರಿಗೆ ತಮ್ಮ ಮಗ ಮುಂದೆ ಬರಬೇಕು ಎಂಬ ಆಸೆ ಇದೆ. ಹಾಗಾಗಿ, ಕುಮಾರಸ್ವಾಮಿ ಅವರೇ ವಿಡಿಯೊಗಳನ್ನು ಹಂಚಿದ್ದಾರೆ ಎಂಬುದಾಗಿ ಹೇಳಿ” ಎಂದು ದೇವರಾಜೇಗೌಡ ಅವರಿಗೆ ಶಿವರಾಮೇಗೌಡ ಹೇಳಿರುವುದು ಆಡಿಯೊದಲ್ಲಿ ದಾಖಲಾಗಿದೆ. ಇದು ಈಗ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ನೀಡಿದೆ.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್‌ ಕೇಸ್‌ಗೆ ಟ್ವಿಸ್ಟ್;‌ ದೇವರಾಜೇಗೌಡ, ಡಿಕೆಶಿ ಆಡಿಯೊ ಬಯಲು, ಇಲ್ಲಿದೆ ಸ್ಫೋಟಕ ಮಾಹಿತಿ

Continue Reading

ರಾಜಕೀಯ

R Ashok: ರಾಜ್ಯದಲ್ಲಿ ಮಳೆಗಿಂತ ಹೆಚ್ಚಾಗಿ ಕೊಲೆಗಳೇ ನಡೆಯುತ್ತಿವೆ: ಆರ್‌.ಅಶೋಕ್‌ ಕಿಡಿ

R Ashok: ಪ್ರಜ್ವಲ್‌ ರೇವಣ್ಣ ಪ್ರಕರಣ ಮುಚ್ಚಿಹಾಕಲು ಎಸ್‌ಐಟಿ ಸಿದ್ಧತೆ ನಡೆಸುತ್ತಿದ್ದು, ಸರ್ಕಾರವೇ ಅಪರಾಧಿ ಸ್ಥಾನದಲ್ಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

VISTARANEWS.COM


on

R Ashok
ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ವಿಪಕ್ಷ ನಾಯಕ ಆರ್‌.ಅಶೋಕ್‌ ಭೇಟಿಯಾಗಿ ಜನ್ಮದಿನದ ಶುಭಾಶಯ ತಿಳಿಸಿದರು.
Koo

ಬೆಂಗಳೂರು: ರಾಜ್ಯದಲ್ಲಿ ಕೊಲೆ, ಕಳ್ಳತನ, ದರೋಡೆ ಹೆಚ್ಚಾಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೌಡಿ, ಕೊಲೆಗಡುಕರಿಗೆ ಹಬ್ಬ. ಈ ಹಬ್ಬಕ್ಕೆ ಕಾಂಗ್ರೆಸ್ಸೇ ನೇರ ಕಾರಣ. ಇತ್ತೀಚೆಗೆ ಹತ್ಯೆಯಾದ ಅಂಜಲಿ ಕುಟುಂಬದವರು ಕೊಲೆಗಾರರನ್ನು ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ. ಆದರೆ ರಾಜ್ಯ ಸರ್ಕಾರವೇ ಅಪರಾಧಿ ಸ್ಥಾನದಲ್ಲಿದ್ದು, ಸರ್ಕಾರವನ್ನೇ ಗಲ್ಲಿಗೇರಿಸಬೇಕು. ಮಳೆ ಸುರಿಯುವುದಕ್ಕಿಂತ ಹೆಚ್ಚಾಗಿ ಕೊಲೆಗಳು ನಡೆಯುತ್ತಿವೆ. ಇದರಿಂದ ಗೃಹ ಇಲಾಖೆಯು ಡಾ.ಜಿ.ಪರಮೇಶ್ವರ್‌ ಅವರ ಕೈಯಲ್ಲಿಲ್ಲ. ಇದನ್ನು ಬೇರೆ ಯಾರೋ ಹೈಜಾಕ್‌ ಮಾಡಿ ನಡೆಸುತ್ತಿದ್ದಾರೆ ಎನಿಸುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ (R Ashok) ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಾಜೇಗೌಡ ಸ್ವತಃ ಹೇಳಿಕೆ ನೀಡಿ, ಡಿ.ಕೆ.ಶಿವಕುಮಾರ್‌ ಅವರ ಆಡಿಯೊ ಬಿಡುಗಡೆ ಮಾಡಿದ್ದಾರೆ. ನಿಜ ಇರುವುದಕ್ಕೆ ದಾಖಲೆ ಬಿಡುಗಡೆ ಮಾಡಿದ್ದು, ಅದಕ್ಕಾಗಿ ಅವರ ಬಂಧನವಾಗಿದೆ. ಲೋಕಸಭೆ ಚುನಾವಣೆಯ ಸಮಯದಲ್ಲಿ ಎಚ್ಚರವಾಗಿರಬೇಕೆಂದು ಹೀಗೆ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾಗುವುದನ್ನೂ ತಡೆಯುವ ಉದ್ದೇಶ ಡಿ.ಕೆ.ಶಿವಕುಮಾರ್‌ ಅವರಿಗಿದೆ ಎಂದರು.

ಇದನ್ನೂ ಓದಿ | BY Vijayendra: ವಿಧಾನಪರಿಷತ್ ವಿವಿಧ ಕ್ಷೇತ್ರಗಳ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ; ಬಿ.ವೈ.ವಿಜಯೇಂದ್ರ

ಸುರ್ಜೇವಾಲ, ಡಿ.ಕೆ.ಶಿವಕುಮಾರ್‌, ಸಿಎಂ ಸಿದ್ದರಾಮಯ್ಯ ಸೇರಿ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಈಗಾಗಲೇ ದಲಿತ ನಾಯಕರನ್ನು ಮುಗಿಸಿದ್ದಾರೆ. ಇದೇ ರೀತಿ ಒಕ್ಕಲಿಗರನ್ನು ಮುಗಿಸಲು ಯೋಜನೆ ರೂಪಿಸಿದ್ದಾರೆ. ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕಿದೆ. ಆದರೆ ಸಿಬಿಐ ಬಳಿ ಹೋದರೆ ಸರ್ಕಾರದಲ್ಲಿ ಇರುವವರೇ ಕಂಬಿ ಎಣಿಸಬೇಕಾಗುತ್ತದೆ. ಇಡೀ ಗೃಹ ಇಲಾಖೆಯರನ್ನು ಬೇರೆ ಯಾರೋ ಹೈಜಾಕ್‌ ಮಾಡಿ ನಡೆಸುತ್ತಿದ್ದಾರೆ. ಮಾಜಿ ಸಚಿವ ರೇವಣ್ಣ ಅವರನ್ನು ಬಂಧಿಸಿದಂತೆ ಚಾಲಕನನ್ನು ಬಂಧಿಸಿಲ್ಲ. ಪೊಲೀಸರು ಕಾಂಗ್ರೆಸ್‌ ನಾಯಕರು ಹೇಳಿದಂತೆ ಕೇಳುತ್ತಾರೆ ಎಂದರು.

ಪ್ರಜ್ವಲ್‌ ರೇವಣ್ಣ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ. ಆದರೆ ವೀಡಿಯೋ ಹಂಚಿದವರ ವಿರುದ್ಧ ಕ್ರಮ ವಹಿಸಿಲ್ಲ. ಹೀಗೆ ಕಾಂಗ್ರೆಸ್‌ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಪ್ರಕರಣವನ್ನು ಮುಚ್ಚಿಹಾಕಲು ಎಸ್‌ಐಟಿ ಸಿದ್ಧತೆ ಮಾಡುತ್ತಿದೆ ಎಂದರು.

ಇದನ್ನೂ ಓದಿ | Arvind Kejriwal: “ತಾಕತ್‌ ಇದ್ರೆ ಅರೆಸ್ಟ್‌ ಮಾಡಿ…”; ಪ್ರಧಾನಿ ಮೋದಿಗೆ ಕೇಜ್ರಿವಾಲ್‌ ಓಪನ್‌ ಚಾಲೆಂಜ್‌

ದೇವೇಗೌಡರ ಭೇಟಿ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಭೇಟಿಯಾಗಿ ಜನ್ಮದಿನದ ಶುಭಾಶಯ ತಿಳಿಸಿದ್ದೇನೆ. ಇದೇ ವೇಳೆ ರಾಜ್ಯ ರಾಜಕೀಯದ ಕುರಿತಾಗಿ ಕೆಲವು ಮಾತನಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಅಶೋಕ್‌ ತಿಳಿಸಿದರು.

Continue Reading

ಕರ್ನಾಟಕ

Prajwal Revanna Case: ಪೆನ್‌ಡ್ರೈವ್‌ ಕೇಸ್‌ಗೆ ಟ್ವಿಸ್ಟ್;‌ ದೇವರಾಜೇಗೌಡ, ಡಿಕೆಶಿ ಆಡಿಯೊ ಬಯಲು, ಇಲ್ಲಿದೆ ಸ್ಫೋಟಕ ಮಾಹಿತಿ

Prajwal Revanna Case: ಲಭ್ಯವಾಗಿರುವ ಆಡಿಯೊ ಪ್ರಕಾರ, ಮೊದಲು ದೇವರಾಜೇಗೌಡ ಹಾಗೂ ಎಲ್‌.ಆರ್.ಶಿವರಾಮೇಗೌಡ ದೂರವಾಣಿಯಲ್ಲಿ ಮಾತನಾಡಿದ್ದಾರೆ. “ನಾನು ಫೋನ್‌ಅನ್ನು ಡಿ.ಕೆ.ಶಿವಕುಮಾರ್‌ ಅವರಿಗೆ ಕೊಡುತ್ತೇನೆ. ಏನೇನಾಗಿದೆ ಎಲ್ಲದರ ಕುರಿತು ಮಾಹಿತಿ ಕೊಡು” ಎಂಬುದಾಗಿ ಶಿವರಾಮೇಗೌಡ ಅವರು ದೇವರಾಜೇಗೌಡರಿಗೆ ತಿಳಿಸುತ್ತಾರೆ. ಇದಾದ ಬಳಿಕ ದೇವರಾಜೇಗೌಡ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಪೆನ್‌ಡ್ರೈವ್‌ ಕೇಸ್‌ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಈಗ ಲಭ್ಯವಾಗಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣಕ್ಕೆ (Prajwal Revanna Case) ಸಂಬಂಧಿಸಿದಂತೆ ಮತ್ತೊಂದು ಆಡಿಯೊ ಬಯಲಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಾಸನ ಪೆನ್‌ಡ್ರೈವ್‌ ಕೇಸ್‌ಗೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ (Devarajegowda), ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ (LR Shivarame Gowda) ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ಅವರ ನಡುವಿನ ದೂರವಾಣಿ ಸಂಭಾಷಣೆ ಎನ್ನಲಾದ ಆಡಿಯೊ ಲಭ್ಯವಾಗಿದ್ದು, ಮಾತುಕತೆಯು ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಕುರಿತೇ ಇವರು ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

ಲಭ್ಯವಾಗಿರುವ ಆಡಿಯೊ ಪ್ರಕಾರ, ಮೊದಲು ದೇವರಾಜೇಗೌಡ ಹಾಗೂ ಎಲ್‌.ಆರ್.ಶಿವರಾಮೇಗೌಡ ದೂರವಾಣಿಯಲ್ಲಿ ಮಾತನಾಡಿದ್ದಾರೆ. “ನಾನು ಫೋನ್‌ಅನ್ನು ಡಿ.ಕೆ.ಶಿವಕುಮಾರ್‌ ಅವರಿಗೆ ಕೊಡುತ್ತೇನೆ. ಏನೇನಾಗಿದೆ ಎಲ್ಲದರ ಕುರಿತು ಮಾಹಿತಿ ಕೊಡು” ಎಂಬುದಾಗಿ ಶಿವರಾಮೇಗೌಡ ಅವರು ದೇವರಾಜೇಗೌಡರಿಗೆ ತಿಳಿಸುತ್ತಾರೆ. ಇದಾದ ಬಳಿಕ ದೇವರಾಜೇಗೌಡ ಅವರು ಡಿಸಿಎಂ ಡಿ.ಕೆ.ಶಿವಕುಮಾರ್‌ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.

ಇಲ್ಲಿದೆ ಆಡಿಯೊ ಸಂಭಾಷಣೆ

“ಏನೇನಾಯ್ತು? ಏನಿದೆ ಪರಿಸ್ಥಿತಿ” ಎಂಬುದಾಗಿ ಡಿ.ಕೆ.ಶಿವಕುಮಾರ್‌ ಕೇಳುತ್ತಾರೆ. ಆಗ ದೇವರಾಜೇಗೌಡ ಅವರು, “ಸದ್ಯದ ಪರಿಸ್ಥಿತಿಯಲ್ಲಿ ನಾಳೆ ಕೋರ್ಟ್‌ನಲ್ಲಿ ಸ್ಟೇ ಆಗೋ ಚಾನ್ಸ್‌ ಇದೆ. ಸರಿಯಾಗಿ ದೂರು ಕೊಟ್ಟಿಲ್ಲ. ಮಹಿಳೆ ನೀಡಿರುವ ಹೇಳಿಕೆ ಹಾಗೂ ನಡೆದಿರುವ ಘಟನೆ ಮಧ್ಯೆ ಹಲವು ವರ್ಷ ವ್ಯತ್ಯಾಸ ಇದೆ. ಆದರೆ, ಎಸ್‌ಐಟಿಯವರು ಮಹಿಳೆಯನ್ನು ಕರೆದುಕೊಂಡು ಹೋಗಿ ವಿಚಾರಣೆ, ತನಿಖೆ ನಡೆಸಿದರೆ ಸೀರಿಯಸ್‌ ಕೇಸ್‌ ಆಗುತ್ತದೆ. ಆದರೆ, ಮಹಿಳೆಯು ಪ್ರಕರಣದಲ್ಲಿ ಸ್ಟ್ರಾಂಗ್‌ ಇಲ್ಲ” ಎಂದಿದ್ದಾರೆ.

ಇದಾದ ಬಳಿಕ ಡಿ.ಕೆ.ಶಿವಕುಮಾರ್‌, “ಏನಾದರೂ ಬೇರೆ ಎವಿಡೆನ್ಸ್‌ ಇದೆಯಾ” ಎಂದು ಪ್ರಶ್ನಿಸಿದ್ದಾರೆ. ಆಗ, ದೇವರಾಜೇಗೌಡ ಅವರು “ಯಾವುದೇ ಎವಿಡೆನ್ಸ್‌ ಇಲ್ಲ” ಎಂದಿದ್ದಾರೆ. ಇದಾದ ಬಳಿಕ ಇಬ್ಬರ ನಡುವಿನ ಮಾತುಕತೆ ಮುಗಿದಿದೆ. ದೇವರಾಜೇಗೌಡ ಅವರು ಜೈಲಿಗೆ ಹೋಗುವ ಮೊದಲು ನಡೆದ ಮಾತುಕತೆ ಇದಾಗಿದೆ ಎಂದು ಮೂಲಗಳು ತಿಳಿಸಿವೆ.

ದೇವರಾಜೇಗೌಡ ಗಂಭೀರ ಆರೋಪ

ಪೆನ್‌ಡ್ರೈವ್‌ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ ಅವರ ಬಗ್ಗೆ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ. “ಪೆನ್‌ ಡ್ರೈವ್‌ ಪ್ರಕರಣದ ಹಿಂದೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇದ್ದಾರೆ. ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಬಳಿ ಪೆನ್‌ಡ್ರೈವ್‌ ತರಿಸಿಕೊಂಡು ಎಲ್ಲವನ್ನೂ ರೆಡಿ ಮಾಡಿದ್ದು ಡಿಕೆಶಿ, ಇದರಲ್ಲಿ ಸುಮ್ಮನಾಗಲು 100 ಕೋಟಿ ರೂಪಾಯಿ ಆಫರ್‌ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಎಲ್.ಆರ್. ಶಿವರಾಮೇಗೌಡ ಮೂಲ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ನೇರವಾಗಿ ನನ್ನ ಜತೆಗೆ ಮಾತನಾಡಿದ್ದಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Prajwal Revanna Case: ಕಾಂಗ್ರೆಸ್‌ ಸರ್ಕಾರದಿಂದ ಪ್ರಜ್ವಲ್‌ ಕೇಸ್‌ ನಿಯಂತ್ರಣ; ಡೈವರ್ಟ್‌ ಮಾಡಲು ಬಿಜೆಪಿಗರ ಮೇಲೆ ದಾಳಿ ಎಂದ ಅಶೋಕ್‌!

Continue Reading
Advertisement
RCB vs CSK
ಕ್ರೀಡೆ16 mins ago

RCB vs CSK: ಆನ್​ಲೈನ್​ ವೀಕ್ಷಣೆಯಲ್ಲೂ ದಾಖಲೆ ಬರೆದ ಆರ್​ಸಿಬಿ-ಚೆನ್ನೈ ಪಂದ್ಯ

Rain News
ಕರ್ನಾಟಕ29 mins ago

Rain News: ಕುಷ್ಟಗಿಯಲ್ಲಿ ಸಿಡಿಲು ಬಡಿದು ರೈತ ಸಾವು, ಯುವಕನಿಗೆ ಗಂಭೀರ ಗಾಯ

Prajwal Revanna Case
ಕರ್ನಾಟಕ44 mins ago

ದೇವೇಗೌಡ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವಲ್ಲ; ಹೊಸ ಆಡಿಯೊದಲ್ಲಿ ಶಿವರಾಮೇಗೌಡ ಸ್ಫೋಟಕ ಹೇಳಿಕೆ

Rohit Sharma
ಕ್ರೀಡೆ57 mins ago

Rohit Sharma: ಐಪಿಎಲ್ ಪ್ರಸಾರಕರ ವಿರುದ್ಧ ಕಿಡಿ ಕಾರಿದ ಹಿಟ್​ಮ್ಯಾನ್​ ರೋಹಿತ್​

R Ashok
ರಾಜಕೀಯ1 hour ago

R Ashok: ರಾಜ್ಯದಲ್ಲಿ ಮಳೆಗಿಂತ ಹೆಚ್ಚಾಗಿ ಕೊಲೆಗಳೇ ನಡೆಯುತ್ತಿವೆ: ಆರ್‌.ಅಶೋಕ್‌ ಕಿಡಿ

Thailand Open 2024
ಬ್ಯಾಡ್ಮಿಂಟನ್2 hours ago

Thailand Open 2024: ಥಾಯ್ಲೆಂಡ್‌ ಓಪನ್‌ ಗೆದ್ದ ಭಾರತದ ಚಿರಾಗ್‌-ಸಾತ್ವಿಕ್‌ ಜೋಡಿ

Prajwal Revanna Case
ಕರ್ನಾಟಕ2 hours ago

Prajwal Revanna Case: ಪೆನ್‌ಡ್ರೈವ್‌ ಕೇಸ್‌ಗೆ ಟ್ವಿಸ್ಟ್;‌ ದೇವರಾಜೇಗೌಡ, ಡಿಕೆಶಿ ಆಡಿಯೊ ಬಯಲು, ಇಲ್ಲಿದೆ ಸ್ಫೋಟಕ ಮಾಹಿತಿ

Money Guide
ಮನಿ-ಗೈಡ್2 hours ago

Money Guide: ಪ್ಯಾನ್‌ ಕಾರ್ಡ್‌ ಇಲ್ಲದೆಯೂ ಸಿಬಿಲ್‌ ಸ್ಕೋರ್‌ ಪರಿಶೀಲಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

Road Accident
ಕ್ರೈಂ2 hours ago

Road Accident: ಬೆಂಗಳೂರು, ಗದಗದಲ್ಲಿ ಸರಣಿ ಅಪಘಾತ; ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಮನೆಗಳೇ ಭಸ್ಮ

Janhvi Kapoor felt sexualised at the age of 12
ಬಾಲಿವುಡ್2 hours ago

Janhvi Kapoor: 12ನೇ ವಯಸ್ಸಿನಲ್ಲಿಯೇ ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೊ ಅಪ್‌ಲೋಡ್‌ ಆಗಿತ್ತು ಎಂದ ಶ್ರೀದೇವಿ ಮಗಳು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌