Viral News: 85ರ ವ್ಯಕ್ತಿಯನ್ನು ಮದುವೆಯಾದ 24 ವರ್ಷದ ಯುವತಿ, ಮದುವೆಯ ಫೋಟೊಗಳು ವೈರಲ್ - Vistara News

ವಿದೇಶ

Viral News: 85ರ ವ್ಯಕ್ತಿಯನ್ನು ಮದುವೆಯಾದ 24 ವರ್ಷದ ಯುವತಿ, ಮದುವೆಯ ಫೋಟೊಗಳು ವೈರಲ್

Viral News: ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ ಎಂಬ ಮಾತಿದೆ. ಆದರೆ, ಅಮೆರಿಕದಲ್ಲಿ ಮದುವೆಗೂ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಜೋಡಿಯೊಂದು ಸಾಬೀತುಪಡಿಸಿದೆ.

VISTARANEWS.COM


on

US Marriage
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್‌: ಸಾಮಾನ್ಯವಾಗಿ ಮದುವೆಯಾಗುವ ವರ ಹಾಗೂ ವಧುವಿನ ವಯಸ್ಸಿನ ಅಂತರ ೨-೩ ವರ್ಷ ಇದ್ದರೆ ಉತ್ತಮ ಎಂಬ ಮಾತಿದೆ. ಕೆಲವೊಂದು ಸಲ ವಧುವೇ ವರನಿಗಿಂತ ಒಂದೆರಡು ವರ್ಷ ಹಿರಿಯವಳಾಗಿರುತ್ತಾಳೆ. ಆಗ, ಒಂದೆರಡು ವರ್ಷ ಅಂತರ ಸಾಮಾನ್ಯ ಎಂಬ ಮಾತುಗಳು ಕೇಳಿಬರುತ್ತವೆ. ಆದರೆ, ಅಮೆರಿಕದಲ್ಲಿ ಮದುವೆಯಾದ ವಧು ಹಾಗೂ ವರನ ನಡುವೆ ೬೧ ವರ್ಷ ಅಂತರವಿದೆ. ಆದರೂ, ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದು, ಮದುವೆಯಾದ ಫೋಟೊಗಳು ವೈರಲ್‌ (Viral News) ಆಗಿವೆ.

ಹೌದು, ೨೪ ವರ್ಷದ ಯುವತಿಯು ೮೫ ವರ್ಷದ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಟ್ಟೆ ತೊಳೆಯುವ ಕೆಲಸದಲ್ಲಿದ್ದ ಮಿರಾಕಲ್‌ ಪೋಗ್‌ಳನ್ನು ಚಾರ್ಲ್ಸ್‌ ಪೋಗ್‌ ೨೦೧೯ರಲ್ಲಿ ಭೇಟಿಯಾದರು. ಭೇಟಿ ಸ್ನೇಹಕ್ಕೆ ತಿರುಗಿತು, ಸ್ನೇಹ ಪ್ರೀತಿಗೆ ತಿರುಗಿ, ಈಗ ಇಬ್ಬರೂ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

“ನಾವಿಬ್ಬರೂ ಭೇಟಿಯಾದಾಗ ಯಾವುದೇ ಭಾವನೆ ಇರಲಿಲ್ಲ. ಆದರೆ, ಚಾರ್ಲ್ಸ್‌ ಅವರು ದಿನ ಕಳೆದಂತೆ ಹತ್ತಿರವಾದರು. ನನ್ನಲ್ಲೊಂದು ವಿನೀತ ಭಾವ ಮೂಡಿಸಿದರು. ಅವರ ಜತೆ ಇದ್ದರೆ ನಾನು ಖುಷಿಯಿಂದ ಇರುತ್ತೇನೆ ಎಂದು ಅನಿಸಿತು. ಹಾಗಾಗಿ, ವಯಸ್ಸಿನ ಹಂಗು ತೊರೆದು ಮದುವೆಯಾದೆ” ಎಂದು ಮಿರಾಕಲ್‌ ಹೇಳಿದ್ದಾರೆ. ಅಂದಹಾಗೆ, ಮಿರಾಕಲ್‌ನ ಅಜ್ಜನಿಗಿಂತ ಆಕೆಯ ಗಂಡ ಚಾರ್ಲ್ಸ್‌ ಹಿರಿಯ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral Video: ಇದು ಬಾಲ್‌ ಬ್ಯಾಲೆನ್ಸಿಂಗ್‌ ಡಾಗ್‌, ಹೇಗಿದೆ ನೋಡಿ ವೈರಲ್‌ ವಿಡಿಯೊ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Siddharth Mallya: ವೈವಾಹಿಕ ಜೀವನಕ್ಕೆ ಕಾಲಿರಿಸಿದ ವಿಜಯ್‌ ಮಲ್ಯ ಪುತ್ರ ಸಿದ್ಧಾರ್ಥ್‌

Siddharth Mallya: ಬಹುಕಾಲದ ಗೆಳತಿ ಜಾಸ್ಮಿನ್‌ಗೆ(Siddharth Mallya Marries GF Jasmine) 2023ರ ಆರಂಭದಲ್ಲಿ ಸಿದ್ಧಾರ್ಥ್ ಪ್ರಪೋಸ್ ಮಾಡಿದ್ದರು. ಕ್ಯಾಲಿಫೋರ್ನಿಯಾದಲ್ಲಿನ ಹ್ಯಾಲೋವಿನ್ ಪಾರ್ಟಿಯಲ್ಲಿ ಸಿದ್ದಾರ್ಥ್ ಹಾಗೂ ಜಾಸ್ಮಿನ್ ಇಬ್ಬರು ಜತೆಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಸಿದ್ದಾರ್ಥ್ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರು.

VISTARANEWS.COM


on

Siddharth Mallya
Koo

ಲಂಡನ್‌: ಮದ್ಯದ ದೊರೆ, ಆರ್​ಸಿಬಿ ಫ್ರಾಂಚೈಸಿಯ ಮಾಜಿ ಮಾಲಿಕ ವಿಜಯ್‌ ಮಲ್ಯ(Vijay Mallya) ಅವರ ಪುತ್ರ ಸಿದ್ಧಾರ್ಥ್‌ ಮಲ್ಯ (Siddharth Mallya) ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್(Jasmine) ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಿದ್ಧಾರ್ಥ್‌ ಮಲ್ಯ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಜಾಸ್ಮಿನ್ ಜತೆಗಿರುವ ಫೋಟೊ ಪೋಸ್ಟ್‌ ಮಾಡಿ ಶೀಘ್ರದಲ್ಲೇ ವಿವಾಹವಾಗುವುದಾಗಿ ಘೋಷಿಸಿದ್ದರು. ಇದೀಗ ಈ ಜೋಡಿ ಲಂಡನ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದೆ.

ವರ್ಷದ ಹಿಂದೆಯೇ ಪ್ರಪೋಸ್

ಬಹುಕಾಲದ ಗೆಳತಿ ಜಾಸ್ಮಿನ್‌ಗೆ(Siddharth Mallya Marries GF Jasmine) 2023ರ ಆರಂಭದಲ್ಲಿ ಸಿದ್ಧಾರ್ಥ್ ಪ್ರಪೋಸ್ ಮಾಡಿದ್ದರು. ಕ್ಯಾಲಿಫೋರ್ನಿಯಾದಲ್ಲಿನ ಹ್ಯಾಲೋವಿನ್ ಪಾರ್ಟಿಯಲ್ಲಿ ಸಿದ್ದಾರ್ಥ್ ಹಾಗೂ ಜಾಸ್ಮಿನ್ ಇಬ್ಬರು ಜತೆಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಸಿದ್ದಾರ್ಥ್ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರು. ಇದಕ್ಕೆ ಜಾಸ್ಮಿನ್ ಗ್ರೀನ್ ಸಿಗ್ನಲ್ ನೀಡಿದ್ದರು. ಬಳಿಕ ಈ ಜೋಡಿ ಕಳೆದ ವರ್ಷವೇ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಜಾಸ್ಮಿನ್ ಅವರು ರಿಂಗ್​ ತೊಟ್ಟ ಫೋಟೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುವ ಮೂಲಕ ಮದುವೆಯಾದ ವಿಚಾರವನ್ನು ಖಚಿತಪಡಿಸಿದ್ದಾರೆ.

ದೀಪಿಕಾ ಜತೆ ಪ್ರೀತಿಯಲ್ಲಿ ಬಿದ್ದಿದ್ದ ಸಿದ್ಧಾರ್ಥ್‌

ಕೆಲವು ವರ್ಷಗಳ ಹಿಂದೆ ಬಾಲಿವುಡ್‌ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್‌ ಮಲ್ಯ ಡೇಟಿಂಗ್‌ ನಡೆಸುತ್ತಿದ್ದರು. ಇವರು ಐಪಿಎಲ್‌ ಪಂದ್ಯಗಳಿಗೆ ಜತೆಯಾಗಿ ತೆರಳುತ್ತಿದ್ದರು. ಒಂದೊಮ್ಮೆ ಇಬ್ಬರು ಪಂದ್ಯ ವೀಕ್ಷಿಸುತ್ತಿರುವಾಗಲೇ ಪರಸ್ಪರ ಚುಂಬಿಸಿ ಸದ್ದು ಮಾಡಿದ್ದರು. ಆರಂಭದಲ್ಲಿ ದೀಪಿಕಾ ಕಿಂಗ್‌ ಫಿಷರ್‌ ಕ್ಯಾಲಂಡರ್‌ಗೆ ಮಾಡೆಲ್‌ ಆಗಿದ್ದರು. ಆ ವೇಳೆ ಸಿದ್ಧಾರ್ಥ್‌ನ ಪರಿಚಯವಾಗಿತ್ತು. ಬಳಿಕ ಇಬ್ಬರು ಜತೆಗೆ ಹಲವು ಕಡೆ ಸುತ್ತಾಡುತ್ತಾ ಗಾಸಿಪ್‌ಗೆ ಆಹಾರವಾಗಿದ್ದರು. ಅದಾಗ್ಯೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಾಯ್ಬಿಟ್ಟಿರಲಿಲ್ಲ.

ಇದನ್ನೂ ಓದಿ IPL 2024 : ಕೊಹ್ಲಿಯನ್ನು ಹೊಗಳಿ ಆರ್​​ಸಿಬಿಗೆ ವಿದಾಯ ಹೇಳಿದ ವಿಜಯ್​ ಮಲ್ಯ

ಬಳಿಕ ಕಾರಣಾಂತರಗಳಿಂದ ಈ ಜೋಡಿ ಬೇರ್ಪಟ್ಟಿತ್ತು. ದೀಪಿಕಾ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರು. ಬಳಿಕ ರಣವೀರ್‌ ಸಿಂಗ್‌ ಜತೆ ಸಪ್ತಪದಿ ತುಳಿದರು. ಇತ್ತ ಸಿದ್ಧಾರ್ಥ್‌ ತಂದೆ ಜತೆಗೆ ಲಂಡನ್‌ಗೆ ಹಾರಿ ಅಲ್ಲೇ ನೆಲೆಸಿದರು. ಬ್ರೇಕಪ್‌ ಆದ ಆರಂಭದಲ್ಲಿ ಸಿದ್ಧಾರ್ಥ್‌ ಸನ್ಯಾಸತ್ವ ಸ್ವೀಕರಿಸುತ್ತಾರೆ ಎಂಬೆಲ್ಲ ಸುದ್ದಿ ಹರಡಿದ್ದವು. ಲಂಡನ್‌ಗೆ ಪರಾರಿಯಾದ ಬಳಿಕ ಸಿದ್ದಾರ್ಥ್ ಮತ್ತು ಜಾಸ್ಮಿನ್ ಆತ್ಮೀಯರಾಗಿದ್ದರು.

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿದ ಸಿದ್ಧಾರ್ಥ್‌ ಮಲ್ಯ ಲಂಡನ್‌ನಲ್ಲಿ ಶಿಕ್ಷಣ ಪೂರೈಸಿದರು. ಪದವಿ ಪಡೆದ ನಂತರ ಅವರು ಮಾಡೆಲ್‌ ಮತ್ತು ನಟನಾಗಿ ವೃತ್ತಿ ಜೀವನ ಆರಂಭಿಸಿದರು. ಬ್ರಾಹ್ಮಣ ನಮನ್ (Brahman Naman), ಬೆಸ್ಟ್‌ ಫೇಕ್‌ ಫ್ರೆಂಡ್ಸ್‌ (Best Fake Friends) ಮುಂತಾದ ಚಿತ್ರಗಳಲ್ಲಿ ನಟಿಸಿದರು. ಬಳಿಕ ಅಭಿನಯದಿಂದ ದೂರ ಸರಿದಿದ್ದರು.

Continue Reading

ತಂತ್ರಜ್ಞಾನ

Elon Musk: ಕೆಲವೇ ವರ್ಷಗಳಲ್ಲಿ ಮೊಬೈಲ್‌ ಫೋನೇ ಇರುವುದಿಲ್ಲ; ಬರಲಿದೆ ಹೊಸ ತಂತ್ರಜ್ಞಾನ!

ಮೆದುಳಿನ ಚಿಪ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯೂರಾಲಿಂಕ್‌ ಈಗಾಗಲೇ ಮೊದಲ ಮಾನವ ಪ್ರಯೋಗ ನಡೆಸುತ್ತಿದ್ದು, ಎರಡನೇ ಪ್ರಯೋಗಕ್ಕೆ ಮುಂದಾಗಿದೆ. ಈ ನಡುವೆ ನ್ಯೂರಾಲಿಂಕ್‌ನ ಸಿಇಒ ಎಲಾನ್ ಮಸ್ಕ್ (Elon Musk) ಎಕ್ಸ್‌ನಲ್ಲಿ ಮಾಡಿರುವ ಟ್ವಿಟ್ ಸಾಕಷ್ಟು ಮಂದಿಯ ಕುತೂಹಲಕ್ಕೆ ಕಾರಣವಾಗಿದೆ.

VISTARANEWS.COM


on

By

Elon Musk
Koo

ನ್ಯೂರಾಲಿಂಕ್‌ನ (Neuralink) ಮೆದುಳಿನ ಚಿಪ್‌ಗಳು (brain chip) ಭವಿಷ್ಯದಲ್ಲಿ ಫೋನ್‌ಗಳನ್ನು ಬದಲಾಯಿಸಲಿದೆ. ಭವಿಷ್ಯದಲ್ಲಿ ಯಾರೂ ಮೊಬೈಲ್ ಬಳಸೋದಿಲ್ಲ ಎಂದು ನ್ಯೂರಾಲಿಂಕ್‌ನ ಸಿಇಒ ಎಲಾನ್ ಮಸ್ಕ್ (Elon Musk) ಭವಿಷ್ಯ ನುಡಿದಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ (x) ಪೋಸ್ಟ್ ಮಾಡಿರುವ ಅವರು, ಭವಿಷ್ಯದಲ್ಲಿ ಯಾವುದೇ ಫೋನ್‌ಗಳು ಇರುವುದಿಲ್ಲ, ಕೇವಲ ನ್ಯೂರಾಲಿಂಕ್‌ಗಳು ಎಂದು ಹೇಳಿದ್ದಾರೆ.

ಮೆದುಳಿನ ಚಿಪ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯೂರಾಲಿಂಕ್‌ ಈಗಾಗಲೇ ಮೊದಲ ಮಾನವ ಪ್ರಯೋಗ ನಡೆಸುತ್ತಿದೆ. 29 ವರ್ಷದ ನೋಲ್ಯಾಂಡ್ ಅರ್ಬಾಗ್ ಎಂಬವರ ಮೇಲೆ ಈ ಪ್ರಯೋಗ ಮಾಡಲಾಗಿದೆ.
ತಮ್ಮ ಹಣೆಯ ಮೇಲೆ ನ್ಯೂರಲ್ ನೆಟ್‌ವರ್ಕ್ ವಿನ್ಯಾಸದೊಂದಿಗೆ ಫೋನ್ ಅನ್ನು ಹಿಡಿದಿರುವ ಮಸ್ಕ್‌ನ ಎಐ ರಚಿತ ಚಿತ್ರವನ್ನು ಇದರೊಂದಿಗೆ ಪೋಸ್ಟ್ ಮಾಡಿದ್ದಾರೆ.


ಇದನ್ನು ನೋಡಿರುವ ಕೆಲವರು ತಮ್ಮ ಸಾಧನಗಳನ್ನು ಆಲೋಚನೆಯಿಂದ ನಿಯಂತ್ರಿಸಲು ನ್ಯೂರಾಲಿಂಕ್ ಇಂಟರ್‌ಫೇಸ್ ಅನ್ನು ಸ್ಥಾಪಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಹೊಸ ಎಕ್ಸ್ ಫೋನ್ ನಲ್ಲಿ ನಿಯಂತ್ರಿಸಲು ನಿಮ್ಮ ಮೆದುಳಿನಲ್ಲಿ ನ್ಯೂರಾಲಿಂಕ್ ಇಂಟರ್ ಫೇಸ್ ಅನ್ನು ಸ್ಥಾಪಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ನ್ಯೂರಾಲಿಂಕ್‌ನ ಮೊದಲ ಬಾರಿಗೆ ಪ್ರಯೋಗಿಸಿರುವ ಮಾನವ ಅರ್ಬಾಗ್ ಎಂಟು ವರ್ಷಗಳ ಹಿಂದೆ ಅಪಘಾತದ ಅನಂತರ ಭುಜದಿಂದ ಕೆಳಕ್ಕೆ ಪಾರ್ಶ್ವವಾಯುವಿಗೆ ಒಳಗಾದರು. ಅವರು ಜನವರಿ 28ರಂದು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅದರ ಬಳಿಕ ನ್ಯೂರಾಲಿಂಕ್ ಬ್ಲಾಗ್‌ಪೋಸ್ಟ್‌ನಲ್ಲಿ ಈ ಕುರಿತು ವಿವರವಾದ ಮಾಹಿತಿಯನ್ನು ಬಹಿರಂಗಪಡಿಸಿತು.

ಮಾರ್ಚ್‌ನಲ್ಲಿ ನ್ಯೂರಾಲಿಂಕ್ ಅರ್ಬಾಗ್‌ನ ಪ್ರಗತಿಯನ್ನು ಪ್ರದರ್ಶಿಸುವ ವಿಡಿಯೋವನ್ನು ಹಂಚಿಕೊಂಡಿದೆ. ಈ ವೀಡಿಯೊದಲ್ಲಿ ನ್ಯೂರಾಲಿಂಕ್‌ನ ಬಿಸಿಐ ಚಿಪ್ ತನ್ನ ಅಂಗವೈಕಲ್ಯವನ್ನು ತಾನು ಇಷ್ಟಪಡುವ ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹೇಗೆ ಸಹಾಯ ಮಾಡಿದೆ ಎಂದು ಹೇಳಿದ್ದು, ಈಗ ತಾವು ಚೆಸ್ ಆಡುವುದರ ಬಗ್ಗೆ ಅವರು ತಮ್ಮ ಸಂತೋಷ ಹೊರಹಾಕಿದ್ದರು.

ಪ್ರತಿದಿನ ನಾನು ಹೊಸದನ್ನು ಕಲಿಯುತ್ತಿದ್ದೇನೆ ಎಂಬಂತೆ ತೋರುತ್ತದೆ. ಇದನ್ನು ನನಗೆ ಮಾಡಲು ಸಾಧ್ಯವಾಗಿರುವುದು ಅದೃಷ್ಟ ಎಂದು ಅರ್ಬಾಗ್ ಹೇಳಿದ್ದಾರೆ. ಎರಡನೇ ಪ್ರಯೋಗದಲ್ಲಿ ಪಾಲ್ಗೊಳ್ಳುವವರಿಗೆ ಅರ್ಜಿಗಳನ್ನು ಸ್ವೀಕರಿಸಲು ನ್ಯೂರಾಲಿಂಕ್ ಈಗ ಮುಕ್ತವಾಗಿದೆ ಎಂದು ಮಸ್ಕ್ ಇತ್ತೀಚೆಗೆ ಘೋಷಿಸಿದರು.

ನ್ಯೂರಾಲಿಂಕ್ ಪ್ರಯೋಗದಲ್ಲಿ ಎರಡನೇ ವ್ಯಕ್ತಿಯಾಗಿ ಪಾಲ್ಗೊಳ್ಳುವವರಿಗೆ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಇದು ನಮ್ಮ ಟೆಲಿಪತಿ ಸೈಬರ್ನೆಟಿಕ್ ಬ್ರೈನ್ ಇಂಪ್ಲಾಂಟ್ ಆಗಿದ್ದು ಅದು ನಿಮ್ಮ ಫೋನ್ ಮತ್ತು ಕಂಪ್ಯೂಟರ್ ಅನ್ನು ಯೋಚಿಸುವ ಮೂಲಕ ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: Bajaj CNG Bike: ವಿಶ್ವದ ಮೊದಲ ಸಿಎನ್‌ಜಿ ಬೈಕ್‌; ಬಜಾಜ್‌ನಿಂದ ಜುಲೈ 5ರಂದು ಬಿಡುಗಡೆ

ಅಪಾಯಕಾರಿ ಎಂದಿರುವ ಪ್ರಾಣಿ ಅರೈಕೆ ತಜ್ಞ

ಈ ಬೆಳವಣಿಗೆಯ ನಡುವೆಯೇ ನ್ಯೂರಾಲಿಂಕ್‌ಗೆ ಹಲವು ಸವಾಲುಗಳು ಎದುರಾಗಿದೆ. ನ್ಯೂಯಾರ್ಕ್ ಪೋಸ್ಟ್‌ ವರದಿ ಪ್ರಕಾರ, ಪ್ರಾಣಿಗಳ ಆರೈಕೆ ತಜ್ಞ ಲಿಂಡ್ಸೆ ಶಾರ್ಟ್ ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಪ್ರಾಣಿಗಳಲ್ಲಿ ನ್ಯೂರಾಲಿಂಕ್‌ಗಳನ್ನು ಹಾಕಿ ನೋಡಿಕೊಳ್ಳುವಾಗ ಸರಿಯಾದ ರಕ್ಷಣಾ ಸಾಧನಗಳನ್ನು ಒದಗಿಸಲು ಕಂಪನಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಪ್ರಾಣಿಗಳಲ್ಲಿ ಕೆಲವು ಅಪಾಯಕಾರಿ ವೈರಸ್ ಅನ್ನು ಹೊತ್ತಿದ್ದು, ಅದು ಗಂಭೀರವಾದ ಮೆದುಳಿನ ಹಾನಿ ಅಥವಾ ಮಾನವರಲ್ಲಿ ಸಾವಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

Continue Reading

ವಿದೇಶ

Hinduja Family: ಮನೆಗೆಲಸದವರ ಮೇಲೆ ದೌರ್ಜನ್ಯ; ಹಿಂದುಜಾ ಕುಟುಂಬದ ನಾಲ್ವರಿಗೆ 4.5 ವರ್ಷ ಜೈಲು!

Hinduja Family: ಪ್ರಕಾಶ್‌ ಹಿಂದುಜಾ ಹಾಗೂ ಅವರ ಕುಟುಂಬಸ್ಥರು ಮನೆಗೆಲಸದ ಮಹಿಳೆಗೆ ಕಡಿಮೆ ಸಂಬಳ ನೀಡುವುದು, ದಿನಕ್ಕೆ 18 ಗಂಟೆ ಕೆಲಸ ಮಾಡಿಸುವುದು ಸೇರಿ ಹಲವು ರೀತಿಯ ದೌರ್ಜನ್ಯ ಎಸಗಿದ್ದಾರೆ ಎಂಬುದಾಗಿ ಸ್ಟಿಟ್ಜರ್‌ಲ್ಯಾಂಡ್‌ ಕೋರ್ಟ್‌ನಲ್ಲಿ ಸಾಬೀತಾಗಿದೆ. ಹಾಗಾಗಿ, ನ್ಯಾಯಾಲಯವು ಪ್ರಕಾಶ್‌ ಹಿಂದುಜಾ ಸೇರಿ ನಾಲ್ವರಿಗೆ ಜೈಲು ಶಿಕ್ಷೆ ವಿಧಿಸಿದೆ.

VISTARANEWS.COM


on

Hinduja Family
Koo

ಜಿನೀವಾ:‌ ವಿಶ್ವದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ, ಭಾರತ ಮೂಲದ ಉದ್ಯಮಿ ಪ್ರಕಾಶ್‌ ಹಿಂದುಜಾ (Prakash Hinduja) ಸೇರಿ ಅವರ ಕುಟುಂಬದ (Hinduja Family) ನಾಲ್ವರಿಗೆ ಸ್ವಿಟ್ಜರ್‌ಲ್ಯಾಂಡ್‌ ನ್ಯಾಯಾಲಯವು (Swiss Court) ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮನೆಯಲ್ಲಿ ಸಾಕಿದ ನಾಯಿಗೆ ವ್ಯಯಿಸುವ ಹಣಕ್ಕಿಂತ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕಡಿಮೆ ಸಂಬಳ ನೀಡುವುದು, ಅಗತ್ಯಕ್ಕಿಂತ ಹೆಚ್ಚು ದುಡಿಸುವುದು ಸೇರಿ ಹಲವು ರೀತಿಯಲ್ಲಿ ದೌರ್ಜನ್ಯ ಎಸಗಿದ ಕಾರಣ ನಾಲ್ವರಿಗೂ ನ್ಯಾಯಾಲಯವು ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಹಿಂದುಜಾ ಕುಟುಂಬದ ಉದ್ಯಮಿ ಪ್ರಕಾಶ್‌ ಹಿಂದುಜಾ, ಅವರ ಪತ್ನಿ ಕಮಲ್, ಮಗ ಅಜಯ್ ಹಾಗೂ ಸೊಸೆ ನಮ್ರತಾ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದ, ಹಿಂದುಜಾ ಕುಟುಂಬದ ಮ್ಯಾನೇಜರ್‌ ನಜೀಬ್‌ ಜಿಯಾಜಿಗೆ 18 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಸ್ವಿಟ್ಜರ್‌ಲ್ಯಾಂಡ್‌ನ ಕಾರ್ಮಿಕ ಕಾನೂನು ಉಲ್ಲಂಘನೆ, ಮಾನವ ಕಳ್ಳಸಾಗಣೆ, ಮನೆಗೆಲಸದವರ ಮೇಲೆ ದೌರ್ಜನ್ಯ ಸೇರಿ ಹಲವು ಪ್ರಕರಣಗಳಲ್ಲಿ ನಾಲ್ವರನ್ನೂ ದೋಷಿಗಳು ಎಂದು ಕೋರ್ಟ್‌ ತೀರ್ಪು ನೀಡಿ, ಶಿಕ್ಷೆ ವಿಧಿಸಿದೆ.

ಹಿಂದುಜಾ ಕುಟುಂಬವು ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿರುವ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮಹಿಳೆಯೊಬ್ಬಳಿಗೆ ಕಡಿಮೆ ಸಂಬಳ ನೀಡಿದ್ದಾರೆ. ಆಕೆಯನ್ನು ವಾರದಲ್ಲಿ ಏಳು ದಿನಗಳ ಕಾಲ ಹಾಗೂ ಪ್ರತಿದಿನ 18 ಗಂಟೆಕಾಲ ಕೆಲಸ ಮಾಡಿದ್ದಕ್ಕೆ ಕೇವಲ ಏಳು ಸ್ವಿಸ್, ಅಂದರೆ ದಿನಕ್ಕೆ 650 ರೂ. ಸಂಬಳ ನೀಡಿದ್ದಾರೆ. ಆದರೆ ಅವರು ಮನೆಯಲ್ಲಿ ಸಾಕಿದ ನಾಯಿಗೆ ಮಾತ್ರ ವಾರ್ಷಿಕವಾಗಿ 8,584 ಸ್ವಿಸ್ (ಸುಮಾರು 8 ಲಕ್ಷ ರೂ.) ಖರ್ಚು ಮಾಡುತ್ತಾರೆ. ಹಾಗಾಗಿ ಹಿಂದುಜಾ ಕುಟುಂಬದವರು ತಮ್ಮ ಸೇವಕರಿಗಿಂತ ಸಾಕು ನಾಯಿಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ ಎಂದು ಮಹಿಳೆಯು ಕೋರ್ಟ್‌ ಮೊರೆ ಹೋಗಿದ್ದರು. ಅವರ ಪರವಾಗಿ ಸ್ವಿಟ್ಜರ್‌ಲ್ಯಾಂಡ್ ನ್ಯಾಯಾಲಯದ ಸರ್ಕಾರಿ ವಕೀಲ ಯವೆಸ್ ಬರ್ಟೋಸಾ ವಾದ ಮಂಡಿಸಿದ್ದರು.

ಅಷ್ಟೇ ಅಲ್ಲದೇ ಹಿಂದುಜಾ ಕುಟುಂಬದವರು ಮನೆ ಕೆಲಸದ ಮಹಿಳೆಯ ಪಾಸ್‌ಪೋರ್ಟ್ ಕಿತ್ತುಕೊಂಡು ಅನುಮತಿಯಿಲ್ಲದೇ ಮನೆಯಿಂದ ಹೊರಬರದಂತೆ ನಿರ್ಬಂಧ ಹೇರಿದೆ. ಕೆಲಸದವರಿಗೆ ರಜೆ ಕೂಡ ನೀಡುತ್ತಿರಲಿಲ್ಲ. ಅಲ್ಲದೇ ಕರೆನ್ಸಿಯಲ್ಲಿ ಸಂಬಳ ನೀಡುತ್ತಿದ್ದ ಕಾರಣ ಅವರಿಗೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಖರ್ಚು ಮಾಡಲು ಹಣವಿರುತ್ತಿರಲಿಲ್ಲ ಎಂದು ವಕೀಲರು ವಾದ ಮಂಡಿಸಿದ್ದರು. ಈಗ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

ಬ್ರಿಟನ್‌ನಲ್ಲಿ ಹಿಂದುಜಾ ಕುಟುಂಬವೇ ಶ್ರೀಮಂತ ಕುಟುಂಬ

ಕೆಲ ತಿಂಗಳ ಹಿಂದಷ್ಟೇ, ಭಾರತ ಮೂಲದ ಗೋಪಿಚಂದ್‌ ಹಿಂದುಜಾ ಹಾಗೂ ಅವರ ಕುಟುಂಬವು ಬ್ರಿಟನ್‌ನ ಶ್ರೀಮಂತ ಕುಟುಂಬ ಅಥವಾ ಉದ್ಯಮಿ ಎಂಬ ಖ್ಯಾತಿಗೆ ಭಾಜನವಾಗಿದೆ. ಅಷ್ಟೇ ಅಲ್ಲ, ಸತತ ಮೂರನೇ ವರ್ಷವೂ ಹಿಂದುಜಾ ಕುಟುಂಬವೇ ಅತ್ಯಂತ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರವಾಗಿದೆ.

‘ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌’ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಗೋಪಿಚಂದ್‌ ಹಿಂದುಜಾ ಅವರೇ ಬ್ರಿಟನ್‌ನ ಶ್ರೀಮಂತ ಉದ್ಯಮಿ ಎನಿಸಿದ್ದಾರೆ. ಇವರ ಆಸ್ತಿಯ ಒಟ್ಟು ಮೌಲ್ಯವು 37 ಶತಕೋಟಿ ಪೌಂಡ್ಸ್‌ (ಸುಮಾರು 3.9 ಲಕ್ಷ ಕೋಟಿ ರೂ.) ಇದೆ. ಬ್ರಿಟನ್‌ನವರೇ ಆದ ಸರ್‌ ಲೆನಾರ್ಡ್‌ ಬ್ಲಾವಾಟ್ನಿಕ್‌ (29 ಶತಕೋಟಿ ಪೌಂಡ್ಸ್)‌, ಡೇವಿಡ್‌, ಸೈಮನ್‌ ರುಬೇನ್‌ ಮತ್ತು ಕುಟುಂಬ (24.98 ಶತಕೋಟಿ ಪೌಂಡ್ಸ್)‌, ಸರ್‌ ಜಿಮ್‌ ರ‍್ಯಾಟ್‌ಕ್ಲಿಫ್‌ (23 ಶತಕೋಟಿ ಪೌಂಡ್ಸ್)‌ ಆಸ್ತಿಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Gopi Hinduja: ನಮ್ಮನ್ನಾಳಿದ ಬ್ರಿಟನ್‌ನಲ್ಲಿ ಭಾರತದ ಉದ್ಯಮಿಯೇ ಅತ್ಯಂತ ಸಿರಿವಂತ; ಯಾರಿವರು?

Continue Reading

ವಿದೇಶ

Sexual Assault Case: ಲೈಂಗಿಕ ದೌರ್ಜನ್ಯ; ಕೋಕಕೋಲಾ ಕಂಪನಿ ಉತ್ತರಾಧಿಕಾರಿಗೆ 7,200 ಕೋಟಿ ರೂ. ದಂಡ!

ಲೈಂಗಿಕ ದೌರ್ಜನ್ಯ ಆರೋಪಿಯಾಗಿರುವ (Sexual Assault Case) ಕೋಕ-ಕೋಲಾ ಕಂಪನಿಯ ಉತ್ತರಾಧಿಕಾರಿ ಅಲ್ಕಿ ಡೇವಿಡ್ ತನ್ನ ಮಾಜಿ ಉದ್ಯೋಗಿಗೆ 900 ಮಿಲಿಯನ್ ಡಾಲರ್ ಪಾವತಿಸಲು ಲಾಸ್ ಏಂಜಲೀಸ್ ನ್ಯಾಯ ಮಂಡಳಿ ತೀರ್ಪು ನೀಡಿದೆ. ಇತಿಹಾಸದಲ್ಲೇ ಇದು ಲೈಂಗಿಕ ಹಾನಿಗಾಗಿ ವಿಧಿಸಲಾದ ಇದುವರೆಗಿನ ಅತಿದೊಡ್ಡ ಪರಿಹಾರ ಮೊತ್ತವಾಗಿದೆ.

VISTARANEWS.COM


on

By

Sexual Assault Case
Koo

ಲಾಸ್ ಏಂಜಲೀಸ್: ಕೋಕ-ಕೋಲಾ (Coca-Cola) ಕಂಪನಿಯ ಉತ್ತರಾಧಿಕಾರಿ ಅಲ್ಕಿ ಡೇವಿಡ್ (Alki David) ವಿರುದ್ಧ ಲೈಂಗಿಕ ದೌರ್ಜನ್ಯ (Sexual Assault Case) ಆರೋಪ ಸಾಬೀತಾಗಿದ್ದು, ಮಾಜಿ ಉದ್ಯೋಗಿಗೆ 900 ಮಿಲಿಯನ್ ಡಾಲರ್ (7,200 ಕೋಟಿ ರೂ.) ಪಾವತಿಸಲು ಲಾಸ್ ಏಂಜಲೀಸ್ (Los Angeles) ನ್ಯಾಯ ಮಂಡಳಿ ತೀರ್ಪು ನೀಡಿದೆ. ಇದು ಇತಿಹಾಸದಲ್ಲಿ ಲೈಂಗಿಕ ಹಾನಿಗಾಗಿ ವಿಧಿಸಲಾದ ಇದುವರೆಗಿನ ಅತಿದೊಡ್ಡ ಪರಿಹಾರ ಮೊತ್ತವಾಗಿದೆ ಎನ್ನಲಾಗಿದೆ.

ವಕೀಲರ ಪ್ರಕಾರ 2016- 2019ರ ನಡುವೆ ಮೂರು ವರ್ಷಗಳ ಕಾಲ ಜೇನ್ ಡೋ ಎಂಬ ಮಹಿಳೆ ಅಲ್ಕಿ ಡೇವಿಡ್ ಅವರಿಂದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾಗಿದ್ದರು. ಮಾಜಿ ನಿರ್ಮಾಣ ಸಹಾಯಕ ಮಹಿಮ್ ಖಾನ್ 2019ರಲ್ಲಿ ಡೇವಿಡ್ ವಿರುದ್ಧ ದೂರು ನೀಡಿದ್ದು, ಬಳಿಕ ಡೇವಿಡ್‌ಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಲೈಂಗಿಕ ದುರ್ವರ್ತನೆಯನ್ನು ಒಳಗೊಂಡ ಹಲವಾರು ಇತರ ಪ್ರಕರಣಗಳಲ್ಲಿ ಡೇವಿಡ್ ತಪ್ಪಿತಸ್ಥರೆಂದು ಕಂಡುಬಂದಿದೆ. ಕಂಪನಿಗಳು ಇವರ ವಿರುದ್ಧ ಸುಮಾರು 70 ಮಿಲಿಯನ್ ಡಾಲರ್‌ನಷ್ಟು ಮೊತ್ತದ ಹಾನಿಯನ್ನು ಪಾವತಿಸಲು ಒತ್ತಾಯಿಸಿವೆ.

ಜೇನ್ ಡೋ ಪ್ರಕರಣ

ಮೂವತ್ತು ವರ್ಷದ ಮಾಡೆಲ್ ಜೇನ್ ಡೋ ಅವರು ಹೊಲೊಗ್ರಾಮ್ ಯುಎಸ್‌ಎನಲ್ಲಿ ಡೇವಿಡ್‌ಗಾಗಿ ಕೆಲಸ ಮಾಡಿದ್ದರು. ಕೆಲಸದ ಆರಂಭದಿಂದಲೂ ಕಚೇರಿಯಲ್ಲಿ ಡೇವಿಡ್‌ನ ವರ್ತನೆಯ ಬಗ್ಗೆ ಜೇನ್ ಡೋ ಬಗ್ಗೆ ಅನುಮಾನವಿತ್ತು. ಯಾಕೆಂದರೆ ಡೇವಿಡ್ ತಮ್ಮ ಇಚ್ಛೆಗೆ ವಿರುದ್ಧವಾಗಿ ಚುಂಬಿಸಿದ್ದಾರೆ ಎಂದು ಮಹಿಳಾ ಸಹೋದ್ಯೋಗಿಯೊಬ್ಬರು ಡೋಗೆ ತಿಳಿಸಿದ್ದರು.

2016ರಲ್ಲಿ ಗ್ರೀಸ್‌ನಲ್ಲಿರುವ ಖಾಸಗಿ ದ್ವೀಪಕ್ಕೆ ವ್ಯಾಪಾರ ಪ್ರವಾಸದಲ್ಲಿದ್ದಾಗ ಡೋ ಗೆ ಡೇವಿಡ್ ಚುಂಬಿಸಲು ಪ್ರಯತ್ನಿಸಿದ್ದರು. ಅದನ್ನು ಡೋ ನಿರಾಕರಿಸಿದ್ದರು. ಬಳಿಕ ಡೇವಿಡ್‌ ಕ್ಷಮೆಯಾಚಿಸಿದ್ದರು.

ಇದನ್ನೂ ಓದಿ: Accident Case : ವಿದ್ಯಾರ್ಥಿನಿಗೆ ಗುದ್ದಿದ ತುತುಕುಡಿ ಎಕ್ಸ್‌ಪ್ರೆಸ್‌ ರೈಲು; ಫುಟ್‌ಪಾತ್ ಏರಿ ಅಂಗಡಿಗೆ ನುಗ್ಗಿದ ಪಿಕಪ್ ವಾಹನ

ಆ ಬಳಿಕ ಆಕೆಯನ್ನು ವಜಾಗೊಳಿಸಲಾಯಿತು. 2018ರವರೆಗೆ ಡೇವಿಡ್‌ನೊಂದಿಗೆ ಸಂವಹನ ನಡೆಸಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಅದರ ಅನಂತರ ಡೇವಿಡ್ ತನ್ನ ಗಾಂಜಾ ಉತ್ಪಾದನಾ ಸಂಸ್ಥೆಯಾದ ಸ್ವಿಸ್-ಎಕ್ಸ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡುವ ಪ್ರಸ್ತಾಪವನ್ನು ಮಾಡಿದರು. ಮಹಿಳೆ ಕೆಲಸವನ್ನು ಒಪ್ಪಿಕೊಂಡ ಅನಂತರ ತನ್ನ ಹೊಟೇಲ್‌ಗೆ ಆಕೆಯನ್ನು ಕರೆಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾಗಿತ್ತು. ಅಲ್ಲದೇ 2019ರಲ್ಲಿ ಸಣ್ಣ ಕೋಣೆಯಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ವಾರ್ಷಿಕ ಶ್ರೀಮಂತ ಪಟ್ಟಿಯ ಪ್ರಕಾರ ಡೇವಿಡ್ ಅವರ ಪ್ರಸ್ತುತ 3.7 ಶತಕೋಟಿ ಡಾಲರ್ ಸಂಪತ್ತಿನ ಮಾಲೀಕ ಎನ್ನಲಾಗಿದೆ.

Continue Reading
Advertisement
Surrogacy Leaves
ಪ್ರಮುಖ ಸುದ್ದಿ2 hours ago

Surrogacy Leaves: ಬಾಡಿಗೆ ತಾಯ್ತನದ ನಿಯಮ ಬದಲಿಸಿದ ಕೇಂದ್ರ; ಇನ್ನು ಸಿಗಲಿದೆ 6 ತಿಂಗಳು ರಜೆ!

T20 world Cup 2024
ಕ್ರೀಡೆ2 hours ago

T20 World Cup 2024 : ಇಂಗ್ಲೆಂಡ್ ವಿರುದ್ಧ ಯುಎಸ್​​ಎ ತಂಡಕ್ಕೆ 10 ವಿಕೆಟ್​ ಹೀನಾಯ ಸೋಲು

SBI
ದೇಶ3 hours ago

SBI: ನಿಮ್ಮೂರಿಗೂ ಬರಲಿದೆ ಎಸ್‌ಬಿಐ ಹೊಸ ಬ್ರ್ಯಾಂಚ್;‌ 400 ಶಾಖೆ ತೆರೆಯಲು ಬ್ಯಾಂಕ್‌ ನಿರ್ಧಾರ

IND vs SA
ಪ್ರಮುಖ ಸುದ್ದಿ3 hours ago

IND VS SA : ದಕ್ಷಿಣ ಆಫ್ರಿಕಾ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರ ಕ್ರಿಕೆಟ್ ತಂಡ

T20 world cup 2024
ಪ್ರಮುಖ ಸುದ್ದಿ3 hours ago

T20 World Cup 2024 : ಅಮೆರಿಕ ವಿರುದ್ಧವೂ ಸೋತ್ರಲ್ಲೋ… ಪಾಕ್​ ಪಾರ್ಲಿಮೆಂಟ್​ನಲ್ಲೂ ವಿಶ್ವ ಕಪ್ ಸೋಲಿನ ಚರ್ಚೆ!

Rahul Gandhi
ದೇಶ4 hours ago

Rahul Gandhi: ಎಲ್ಲರೂ ಬೈಯುವಾಗ ನೀವು ಪ್ರೀತಿ ಕೊಟ್ರಿ; ವಯನಾಡು ಜನತೆಗೆ ರಾಹುಲ್‌ ಗಾಂಧಿ ಭಾವುಕ ಪತ್ರ

Babar Azam
ಪ್ರಮುಖ ಸುದ್ದಿ4 hours ago

Babar Azam: ಮ್ಯಾಚ್​ ಫಿಕ್ಸಿಂಗ್ ಆರೋಪ ಮಾಡಿದವನ ಮೇಲೆ 1 ಕೋಟಿ ರೂ. ಮಾನನಷ್ಠ ಮೊಕದ್ದಮೆ ಹೂಡಿದ ಬಾಬರ್ ಅಜಮ್​

Abbi Falls
ಕರ್ನಾಟಕ5 hours ago

Abbi Falls: ಅಬ್ಬಿ ಫಾಲ್ಸ್ ಬಳಿ ಸೆಲ್ಫಿ ಕ್ರೇಜ್‌ಗೆ ಯುವಕ ಬಲಿ; ಕೊಡಗಿನಲ್ಲಿ ಮತ್ತೆ ಪ್ರವಾಸಿಗರ ಮೇಲೆ ಹಲ್ಲೆ

Shakib Al Hasan
ಪ್ರಮುಖ ಸುದ್ದಿ5 hours ago

Shakib Al Hasan : ನಿವೃತ್ತಿಯಾಗು ಶಕಿಬ್…, ಬಾಂಗ್ಲಾ ಮಾಜಿ ನಾಯಕನ ಮೇಲೆ ಮತ್ತೆ ಗುಡುಗಿದ ಸೆಹ್ವಾಗ್​

Vashu Bhagnani
ಸಿನಿಮಾ5 hours ago

Vashu Bhagnani: ‘ಬೆಲ್ ಬಾಟಮ್’ ಚಿತ್ರದ ನಿರ್ಮಾಪಕ ದಿವಾಳಿ; ಕಚೇರಿ ಕಟ್ಟಡ ಸೇಲ್!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು7 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು7 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌