Kangana Ranaut : ಮತ್ತೆ ಕೆರಳಿದ ಕಂಗನಾ; ನನ್ನ ವಿರುದ್ಧ ಬೇಹುಗಾರಿಕೆ ನಡೆಯುತ್ತಿದೆ ಎಂದು ಇನ್​ಸ್ಟಾ ಪೋಸ್ಟ್​ ಹಾಕಿದ ನಟಿ - Vistara News

ಬಾಲಿವುಡ್

Kangana Ranaut : ಮತ್ತೆ ಕೆರಳಿದ ಕಂಗನಾ; ನನ್ನ ವಿರುದ್ಧ ಬೇಹುಗಾರಿಕೆ ನಡೆಯುತ್ತಿದೆ ಎಂದು ಇನ್​ಸ್ಟಾ ಪೋಸ್ಟ್​ ಹಾಕಿದ ನಟಿ

ತಮ್ಮ ವಿರುದ್ಧ ಬಾಲಿವುಡ್​ನ ಸ್ವಜನ ಪಕ್ಷಪಾತದ ಗ್ಯಾಂಗ್​ ಒಂದು ಬೇಹಗಾರಿಕೆ ನಡೆಸುತ್ತಿದೆ ಎಂದು ಕಂಗನಾ ರಣಾವತ್ (Kangana Ranaut) ಆರೋಪಿಸಿದ್ದಾರೆ.

VISTARANEWS.COM


on

Kangana Kantara
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಬಾಲಿವುಡ್​ ನಟಿ ಕಂಗನಾ ರಣಾವತ್ (Kangana Ranaut) ಹಾಗೂ ವಿವಾದಗಳಿಗೆ ಬಿಡದ ನಂಟು. ಅವರು ನೀಡುವ ಪ್ರತಿ ಹೇಳಿಕೆಯೂ ವಿದಾದಗಳಿಗೆ ಈಡಾಗುತ್ತವೆ. ಇದೀಗ ಅವರು ಹಾಕಿರುವ ಇನ್​ಸ್ಟಾಗ್ರಾಮ್​ ಪೋಸ್ಟ್​ ಒಂದು ಮತ್ತೊಮ್ಮೆ ವಿವಾದ ಸೃಷ್ಟಿಸಿದೆ. ಆದರಲ್ಲಿ ಅವರು ಬಾಲಿವುಡ್​ನಲ್ಲಿ ಸಕ್ರಿಯರಾಗಿರುವ ದಂಪತಿ ಬಗ್ಗೆ ಕಿಡಿ ಕಾರಿದ್ದಾರೆ. ಆದರೆ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಹೀಗಾಗಿ ಅವರು ಯಾರನ್ನು ಬೈದು ಪೋಸ್ಟ್​ ಹಾಕಿದ್ದಾರೆ ಎಂಬ ಅನುಮಾನ ಶುರುವಾಗಿದೆ.

ಬಾಲಿವುಡ್​ನ ಕ್ಯಾಸನೋವಾ (asanova) ಹಾಗೂ ಅವರ ಪತ್ನಿ ನನ್ನ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದಾರೆ. ನನ್ನ ವೈಯಕ್ತಿಕ ಸಂಗತಿಗಳನ್ನು ತಿಳಿದುಕೊಂಡು ಫೋಟೊಗಳನ್ನು ತೆಗೆಯುತ್ತಿದ್ದಾರೆ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ. ಹೀಗಾಗಿ ಅವರನ್ನು ಕಾಡುತ್ತಿರುವ ಕ್ಯಾಸನೋವಾ ಮತ್ತು ಆತನ ಪತ್ನಿ ಯಾರೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಬಾಲಿವುಡ್ ನಟ ರಣಬೀರ್​ ಕಪೂರ್ ಹಾಗೂ ಪತ್ನಿ ಅಲಿಯಾ ಭಟ್​ ಉದ್ದೇಶಿಸಿ ಕಂಗನಾ ಈ ಸಂದೇಶ ಹಾಕಿದ್ದಾರೆ ಎಂದ ಹೇಳಲಾಗುತ್ತಿದೆ. ಈ ಹಿಂದೆಯೂ ಅವರಿಬ್ಬರ ಬಗ್ಗೆ ಅಲಿಯಾ ನೇರವಾಗಿ ಆರೋಪ ಮಾಡಿದ್ದರು. ಕಂಗನಾ ತಮ್ಮ ಸಂದೇಶದಲ್ಲಿ ನೆಪೋಟಿಸಮ್​ (ಸ್ವಜನಪಕ್ಷಪಾತ) ಎಂಬ ಆರೋಪವನ್ನೂ ಮಾಡಿದ್ದಾರೆ. ನನ್ನ ವಿರುದ್ಧ ಬೇಹುಗಾರರನ್ನು ಬಿಟ್ಟವರು ಬಾಲಿವುಡ್​ ನೆಪೋಟಿಸಮ್​ ಕ್ಲಬ್​ನ ಉಪಾಧ್ಯಕ್ಷ ಎಂಬುದಾಗಿಯೂ ಆರೋಪಿಸಿದ್ದಾರೆ.

ಕಂಗನಾ ಆರೋಪವೇನು?

ನನ್ನ ವಿರುದ್ಧ ಬಾಲಿವುಡ್​ನ ನೆಪೋಟಿಸಮ್​ನ ಕ್ಯಾಸನೋವಾ ಹಾಗೂ ಆತನ ಪತ್ನಿ ಬೇಹುಗಾರಿಕೆ ಮಾಡುತ್ತಿದ್ದಾರೆ. ನಾನು ಹೋದಲೆಲ್ಲ ಬೆನ್ನ ಹಿಂದೆ ಬರುತ್ತಿದ್ದಾರೆ. ದಾರಿಯಲ್ಲಿ ಹೋಗುವಾಗ ಮಾತ್ರವಲ್ಲ ನಮ್ಮ ಮನೆಯ ಸುತ್ತಲೂ ಸುಳಿದಾಡುತ್ತಿದ್ದಾರೆ. ಪಾರ್ಕಿಂಗ್ ಮತ್ತು ಟೆರೇಸ್​ ಕಡೆಗೆ ಜೂಮ್ ಲೆನ್ಸ್ ಇಟ್ಟುಕೊಂಡು ನೋಡುತ್ತಿದ್ದಾರೆ. ಬೆಳಗ್ಗೆ 6.30ಕ್ಕೆ ಬಂದು ನನ್ನ ಫೋಟೊ ತೆಗೆದಿದ್ದಾರೆ. ನನ್ನ ದಿನಚರಿ ಅವರಿಗೆ ಗೊತ್ತಾಗಿದ್ದು ಹೇಗೆ? ಅವರು ಚಿತ್ರವನ್ನು ತೆಗೆದುಕೊಂಡು ಮಾಡುವುದಾದರೂ ಏನು? ಈಗಷ್ಟೇ ನಾನು ನನ್ನ ಬೆಳಗ್ಗಿನ ಅವಧಿಯ ಕೊರಿಯೊಗ್ರಾಫ್​ ಅಭ್ಯಾಸ ಮುಗಿಸಿದೆ. ಅಷ್ಟರಲ್ಲೇ ಹಲವಾರು ಫೋಟಗ್ರಾಫರ್​ಗಳು ಬಂದಿದ್ದಾರೆ.

ನನ್ನ ವೃತ್ತಿಪರ ಡೀಲ್​ಗಳ ಕುರಿತ ವಾಟ್ಸ್​ಆ್ಯಪ್​ ಮಾಹಿತಿಗಳನ್ನು ಕದಿಯಲಾಗಿದೆ ಹಾಗೂ ನನ್ನ ವೈಯಕ್ತಿಕ ವಿಚಾರಗಳನ್ನೂ ತಿಳಿದುಕೊಳ್ಳಲಾಗಿದೆ. ಇದನ್ನು ನನ್ನ ಮನೆ ಬಾಗಿಲಿಗೆ ಬಂದು ನನ್ನ ಮೇಲೆ ಒತ್ತಾಯ ಹೇರಿದ್ದ ನೆಪೋಟಿಸಮ್​ ಮಾಫಿಯಾದ ಹೆಣ್ಣು ಬಾಕನೇ ಮಾಡಿದ್ದಾನೆ. ಆತ ಸ್ವಜನಪಕ್ಷಪಾತ ಮಾಫಿಯಾದ ಉಪಾಧ್ಯಕ್ಷ ಹಾಗೂ ತನ್ನ ಪತ್ನಿಗೆ ಮಹಿಳಾ ಕೇಂದ್ರಿತ ಸಿನಿಮಾಗಳನ್ನು ಮಾಡುವಂತೆ ಒತ್ತಾಯ ಮಾಡಿದವನಾದ್ದಾನೆ ಎಂದು ಕಂಗನಾ ಬರೆದಿದ್ದಾರೆ.

ಇದನ್ನೂ ಓದಿ : Kangana Ranaut : ಕಿಯಾರಾ-ಸಿದ್ಧಾರ್ಥ್​​ ಜೋಡಿ ಬಗ್ಗೆ ಇನ್​ಸ್ಟಾಗ್ರಾಂ ಸ್ಟೋರಿ ಹಾಕಿದ ಕಂಗನಾ ರಣಾವತ್‌

ನನ್ನ ಮೇಲಿನ ಬೇಹುಗಾರಿಕೆ ವಿಚಾರ ಆತನ ಪತ್ನಿಗೂ ಗೊತ್ತಿದೆ. ಆಕೆಯ ಸಹಕಾರವೂ ಇದೆ. ನಾನು ನನ್ನ ಸಹೋದರ ಮದುವೆಯಲ್ಲಿ ಉಟ್ಟಿರುವಂಥ ಸೀರೆಯನ್ನು ಆಕೆ ತೊಟ್ಟಿದ್ದಾಳೆ. ನನ್ನ ಮನೆಯಂಥದ್ದೇ ಇಂಟೀರಿಯರ್​ ಮಾಡಿದ್ದಾರೆ. ನನ್ನ ಸ್ಟೈಲಿಸ್ಟ್​ಗಳನ್ನು ಬಳಸಿಕೊಂಡಿದ್ದಾರೆ. ಎಲ್ಲ ರೀತಿಯಲ್ಲಿ ನನಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Sonakshi Sinha: ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ಸೋನಾಕ್ಷಿ ಸಿನ್ಹಾ ಅದ್ಧೂರಿ ಮದುವೆ?

Sonakshi Sinha: ಸೋನಾಕ್ಷಿ 2010ರಲ್ಲಿ ʻದಬಾಂಗ್‌ʼ ಸಿನಿಮಾದಿಂದ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರೆ, ಜಹೀರ್ ಅವರ ಮೊದಲ ಚಿತ್ರ 2019ರಲ್ಲಿ ತೆರೆ ಕಂಡ ʻನೋಟ್‌ಬುಕ್ʼ ಆಗಿತ್ತು. ʻಡಬಲ್ ಎಕ್ಸ್‌ಎಲ್‌ʼ ಸಿನಿಮಾದಲ್ಲಿ ಜಹೀರ್ ಇಕ್ಬಾಲ್ ಹಾಗೂ ಸೋನಾಕ್ಷಿ ಸಿನ್ಹಾ ಒಟ್ಟಿಗೆ ನಟಿಸಿದ್ದರುಈ ಹಿಂದೆ ಸಲ್ಮಾನ್‌ ಖಾನ್‌ ಅವರ ಸಹೋದರಿ ಅರ್ಪಿತಾ ಖಾನ್‌ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸೋನಾಕ್ಷಿಯನ್ನು “ಅತ್ತಿಗೆ” ಎಂದು ಕರೆದಿದ್ದರು. ಕೆಲವೇ ಕ್ಷಣಗಳಲ್ಲಿ ಆ ಸ್ಟೋರಿಯನ್ನು ಡಿಲೀಟ್‌ ಮಾಡಿದ್ದರು ಕೂಡ. ಆಗ ಸೋನಾಕ್ಷಿ ಹಾಗೂ ಜಹೀರ್‌ ನಡುವೆ ಸಂಬಂಧ ಇದೆ ಎಂಬ ಸುದ್ದಿ ವೈರಲ್‌ ಆಗಿತ್ತು. .

VISTARANEWS.COM


on

Sonakshi Sinha to marry boyfriend Zaheer Iqbal on June 23
Koo

ಬೆಂಗಳೂರು: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ತಮ್ಮ ಬಾಯ್‌ಫ್ರೆಂಡ್‌ ನಟ ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಸೋನಾಕ್ಷಿ ಮತ್ತು ಜಹೀರ್ ದಕ್ಷಿಣ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಆದರೆ ಜೋಡಿ ಎಲ್ಲಿಯೂ ತಮ್ಮ ಮದುವೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಸೋನಾಕ್ಷಿ ಹಾಗೂ ಜಹೀರ್ ಹಲವು ವರ್ಷಗಳಿಂದ ಸುತ್ತಾಟ ನಡೆಸುತ್ತಿದ್ದರೂ ಪ್ರೀತಿ ವಿಚಾರವನ್ನು ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇವರು ಈಗ ವಿವಾಹ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸೋನಾಕ್ಷಿ 2010ರಲ್ಲಿ ʻದಬಾಂಗ್‌ʼ ಸಿನಿಮಾದಿಂದ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರೆ, ಜಹೀರ್ ಅವರ ಮೊದಲ ಚಿತ್ರ 2019ರಲ್ಲಿ ತೆರೆ ಕಂಡ ʻನೋಟ್‌ಬುಕ್ʼ ಆಗಿತ್ತು. ʻಡಬಲ್ ಎಕ್ಸ್‌ಎಲ್‌ʼ ಸಿನಿಮಾದಲ್ಲಿ ಜಹೀರ್ ಇಕ್ಬಾಲ್ ಹಾಗೂ ಸೋನಾಕ್ಷಿ ಸಿನ್ಹಾ ಒಟ್ಟಿಗೆ ನಟಿಸಿದ್ದರು.

ಮುಂಬೈನ ಬಾಸ್ಟಿಯನ್​ನಲ್ಲಿ ವಿವಾಹ ನಡೆಯಲಿದೆ ಎನ್ನಲಾಗಿದೆ. ಜಹೀರ್ ಅವರನ್ನು ಸೋನಾಕ್ಷಿ ಭೇಟಿ ಮಾಡಿದ್ದು ಸಲ್ಮಾನ್ ಖಾನ್ ಮೂಲಕ. ಸಲ್ಲು ಹಾಗೂ ಜಹೀರ್ ಗೆಳೆಯರು. ಭೇಟಿ ಬಳಿಕ ಸೋನಾಕ್ಷಿ ಹಾಗೂ ಜಹೀರ್ ಮಧ್ಯೆ ಫ್ರೆಂಡ್​ಶಿಪ್ ಬೆಳೆಯಿತು. ಆ ಬಳಿಕ ಅದು ಪ್ರೀತಿಗೆ ತಿರುಗಿತು ಎನ್ನಲಾಗಿದೆ.

ಕಳೆದ ವಾರ ಸೋನಾಕ್ಷಿ ಅವರ ಹುಟ್ಟುಹಬ್ಬದಂದು, ಜಹೀರ್ ಹಲವು ಫೋಟೊಗಳನ್ನು ಹಂಚಿಕೊಂಡಿದ್ದರು. ಮೊದಲ ಚಿತ್ರದಲ್ಲಿ ಸೋನಾಕ್ಷಿ ಅವರನ್ನು ಜಹೀರ್ ಬಿಗಿಯಾಗಿ ಅಪ್ಪಿಕೊಳ್ಳುವುದು ಇದೆ. “ಜನ್ಮದಿನದ ಶುಭಾಶಯಗಳು ಸೋನಾʼʼಎಂದು ಶೀರ್ಷಿಕೆ ನೀಡಿದ್ದರು.

ಈ ಹಿಂದೆ ಸಲ್ಮಾನ್‌ ಖಾನ್‌ ಅವರ ಸಹೋದರಿ ಅರ್ಪಿತಾ ಖಾನ್‌ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸೋನಾಕ್ಷಿಯನ್ನು “ಅತ್ತಿಗೆ” ಎಂದು ಕರೆದಿದ್ದರು. ಕೆಲವೇ ಕ್ಷಣಗಳಲ್ಲಿ ಆ ಸ್ಟೋರಿಯನ್ನು ಡಿಲೀಟ್‌ ಮಾಡಿದ್ದರು ಕೂಡ. ಆಗ ಸೋನಾಕ್ಷಿ ಹಾಗೂ ಜಹೀರ್‌ ನಡುವೆ ಸಂಬಂಧ ಇದೆ ಎಂಬ ಸುದ್ದಿ ವೈರಲ್‌ ಆಗಿತ್ತು.

ಇದನ್ನೂ ಓದಿ: Sonakshi Sinha : ಪ್ರೀತಿಯಲ್ಲಿ ಬಿದ್ದ ಸೋನಾಕ್ಷಿ, ಲವ್‌ ಯು ಎಂದು ಪೋಸ್ಟ್‌ ಹಾಕಿದ ಬಾಯ್‌ಫ್ರೆಂಡ್‌ ಯಾರು ನೋಡಿ!

ಸೋನಾಕ್ಷಿ ಕೊನೆಯದಾಗಿ ಸಂಜಯ್ ಲೀಲಾ ಬನ್ಸಾಲಿಯವರ ಸಿರೀಸ್‌ ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಕಾಣಿಸಿಕೊಂಡಿದ್ದರು. ಹೀರಾಮಂಡಿ: ದಿ ಡೈಮಂಡ್ ಬಜಾರ್‌ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಮನಿಶಾ ಕೊಯಿರಾಲಾ, ರಿಚಾ ಚಡ್ಡಾ, ಸಂಜೀದಾ ಶೇಖ್, ಅದಿತಿ ರಾವ್ ಹೈದರಿ, ಶರ್ಮಿನ್ ಸೆಗಲ್ ಮೆಹ್ತಾ, ಫರೀದಾ ಜಲಾಲ್, ಫರ್ದೀನ್ ಖಾನ್ ಮತ್ತು ಅಧ್ಯಯನ್ ಸುಮನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Continue Reading

ಬಾಲಿವುಡ್

Kangana Ranaut: ಪ್ರಮಾಣ ವಚನ ಸಮಾರಂಭದಲ್ಲಿ ಬಿಳಿ ಸೀರೆಯಲ್ಲಿ ಮಿಂಚಿದ ಕಂಗನಾ!

ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದರು. ನಟಿಯ ಮುಂದೆ ಕಾಂಗ್ರೆಸ್ ಪಕ್ಷದ ನಾಯಕ ವಿಕ್ರಮಾದಿತ್ಯ ಸಿಂಗ್ ಇದ್ದರು. ಕಂಗನಾ ಅವರನ್ನು 74,755 ಮತಗಳಿಂದ ಸೋಲಿಸಿದರು.ಕಂಗನಾ ರಣಾವತ್ ಜೂನ್ 6 ರಂದು ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್ಎಫ್ ಕಾನ್ಸ್‌ಟೇಬಲ್ ಕಪಾಳಮೋಕ್ಷ ಮಾಡಿದ್ದರು.

VISTARANEWS.COM


on

Kangana Ranaut Looks Gorgeous In A White Saree
Koo

ಬೆಂಗಳೂರು: ಕಂಗನಾ ರಣಾವತ್ (Kangana Ranaut) ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಗೆದ್ದಿದ್ದಾರೆ. ಪ್ರಮಾಣ ವಚನ ಸಮಾರಂಭದಲ್ಲಿ ಕಂಗನಾ ಭಾಗಿಯಾಗಿದ್ದರು. ಕಂಗನಾ ಪ್ರಮಾಣ ವಚನ ಸಮಾರಂಭದಲ್ಲಿ ಸೀರೆಯಲ್ಲಿ ಮಿಂಚಿದ್ದಾರೆ. ಬಿಳಿ ಸೀರೆಯಲ್ಲಿ ನಟಿ ಕಂಗೊಳಿಸಿದ್ದಾರೆ. ಶಾರುಖ್ ಖಾನ್, ಅಕ್ಷಯ್ ಕುಮಾರ್, ವಿಕ್ರಾಂತ್ ಮಾಸ್ಸೆ, ಮತ್ತು ಅನುಪಮ್ ಖೇರ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು.

ಸಮಾರಂಭದ ಕೇಂದ್ರ ಬಿಂದುವಿನಂತೆ ಬಿಟೌನ್‌ ಕ್ವೀನ್‌ ಕಂಗೊಳಿಸುತ್ತಿದ್ದರು. ಬಿಳಿ ಬಣ್ಣದ ಸೀರೆಯಲ್ಲಿ, ಮುತ್ತಿನ ನೆಕ್ಲೇಸ್‌ ಧರಿಸಿ ಕಂಗನಾ ಕಾಂತಿಯುತವಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..ಸ್ವತಃ ವಿಡಿಯೊ ಹಂಚಿಕೊಂಡಿರುವ ಕಂಗನಾ ‘ಪ್ರಮಾಣ ದಿನದಂದು ನನ್ನ ನೋಟ’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.

ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದರು. ನಟಿಯ ಮುಂದೆ ಕಾಂಗ್ರೆಸ್ ಪಕ್ಷದ ನಾಯಕ ವಿಕ್ರಮಾದಿತ್ಯ ಸಿಂಗ್ ಇದ್ದರು. ಕಂಗನಾ ಅವರನ್ನು 74,755 ಮತಗಳಿಂದ ಸೋಲಿಸಿದರು.

ಇದನ್ನೂ ಓದಿ: Sushant Singh: ಕೇದಾರನಾಥಕ್ಕೆ ಭೇಟಿ ಕೊಟ್ಟಾಗ ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸಹೋದರಿ!

ಕಂಗನಾ ರಣಾವತ್ ಜೂನ್ 6 ರಂದು ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್ಎಫ್ ಕಾನ್ಸ್‌ಟೇಬಲ್ ಕಪಾಳಮೋಕ್ಷ ಮಾಡಿದ್ದರು. 2020 ರಲ್ಲಿ, ಕಂಗನಾ ರಣಾವತ್‌ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ ಪಂಜಾಬ್​ನ ಮಹಿಳೆಯೊಬ್ಬರನ್ನು ತಪ್ಪಾಗಿ ಅಂದಾಜಿಸಿದ್ದರು. ಅದಕ್ಕಿಂತ ಹಿಂದೆ ಶಾಹೀನ್ ಬಾಗ್​ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಲ್ಕಿಸ್ ಬಾನೊ ಅವರು ಎಂದುಕೊಂಡಿದ್ದರು. ಪ್ರತಿಭಟನೆಗೆ ಬರುವ ಮಹಿಳೆಯರೆಲ್ಲರೂ 100 ರೂಪಾಯಿಗೆ ಸಿಗುತ್ತಾರೆ ಎಂದು ಹೇಳಿದ್ದರು. ಇದು ದೊಡ್ಡ ವಿವಾದ ಸೃಷ್ಟಿಸಿತ್ತು. ಅಂದ ಹಾಗೆ ಕಂಗನಾಗೆ ಹೊಡೆದ ಕಾನ್​ಸ್ಟೇಬಲ್​ ಕುಲ್ವಿಂದರ್ ಕೌರ್​ ತಾಯಿಯೂ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಂಗನಾ ಹೇಳಿಕೆಯಿಂದ ಕೋಪಗೊಂಡಿದ್ದ ಅವರು ಪ್ರತಿಕಾರ ತೀರಿಸಲು ಕಾದಿದ್ದರು. ಅಂತೆಯೇ ಚಂಡಿಗಢದಲ್ಲಿ ತಪಾಸಣಾ ಕೇಂದ್ರಕ್ಕೆ ಬರುತ್ತಿದ್ದಂತೆ ಕಪಾಳ ಮೋಕ್ಷ ಮಾಡಿದ್ದಾರೆ.

Continue Reading

ಬಾಲಿವುಡ್

Poonam Pandey: ಪೂನಂ ಪಾಂಡೆಯ ರೆಸಿಪಿಗಿಂತ ಏಪ್ರನ್ ಮೇಲೆ ನೆಟ್ಟಿಗರ ಕಣ್ಣು; ರಸಿಕರ ಕಣ್ಣರಳಿಸಿದ ಹಾಟ್‌ ಬೆಡಗಿ!

ಪೂನಂ ಪಾಂಡೆ (Poonam Pandey) ಅವರು ಗರ್ಭಕಂಠ ಕ್ಯಾನ್ಸರ್‌ನಿಂದ (Cervical Cancer) ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಡಿ, ಮರುದಿನ ‘ಇಲ್ಲ ನಾನು ಸತ್ತಿಲ್ಲ’ ಎಂದು ನಟಿ ನೀಡಿದ ಸ್ಪಷ್ಟನೆ ಕೂಡ ಭಾರಿ ಸುದ್ದಿಯಾಗಿತ್ತು. ಇದೀಗ ಪೂನಂ ಪಾಂಡೆ (Poonam Pandey) ಬಿಳಿ ಬಣ್ಣದ ಏಪ್ರನ್ ಧರಿಸಿ, ತಲೆಗೊಂಡು ಚೆಫ್ ಟೋಪಿ ಹಾಕಿ ಕೇಕ್ ತಯಾರಿಸುವುದು ಹೇಗೆ ಎಂದು ಹೇಳಿದ್ದಾರೆ.

VISTARANEWS.COM


on

Poonam Pandey making cake with ice cream with hot look
Koo

ನಟಿ ಪೂನಂ ಪಾಂಡೆ (Poonam Pandey) ಟಾಪ್‌ಲೆಸ್‌ ಅವತಾರಗಳು ಹೊಸದಲ್ಲ . ಆಗಾಗ ತನ್ನ ಮೈಮಾಟವನ್ನು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಕ್ಕೀಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.

ಇದೀಗ ಪೂನಂ ಬಿಳಿ ಬಣ್ಣದ ಏಪ್ರನ್ ಧರಿಸಿ, ತಲೆಗೊಂಡು ಚೆಫ್ ಟೋಪಿ ಹಾಕಿ ಕೇಕ್ ತಯಾರಿಸುವುದು ಹೇಗೆ ಎಂದು ಹೇಳಿದ್ದಾರೆ.

ಈ ಬಾರಿ ಪೂನಂ ಪಾಂಡೆ ಹಾಟ್ ಆಗಿ ಕಾಣಿಸಿಕೊಂಡು ಕೇಕ್ ವಿಥ್ ಐಸ್‌ಕ್ರೀಂ ರೆಸಿಪಿ ಟಿಪ್ಸ್ ನೀಡಿದ್ದಾರೆ. ಆದರೆ ಅಭಿಮಾನಿಗಳ ಕಣ್ಣು ಪೂನಂ ಪಾಂಡೆ ಧರಿಸಿದ ಏಪ್ರನ್ ಮೇಲೆ ಇತ್ತು. ಪೂನಂ ಫ್ಯಾನ್ಸ್‌ ಕಮೆಂಟ್‌ ಮೂಲಕ ಏಪ್ರನ್ ಕುರಿತಾಗಿಯೇ ಮಾತನಾಡಿದ್ದಾರೆ.

ಇದನ್ನೂ ಓದಿ: Radhika Merchant: ಪ್ರಿವೆಡ್ಡಿಂಗ್‌ಗೆ ಅಂಬಾನಿ ಸೊಸೆ ಧರಿಸಿದ್ದು 65 ವರ್ಷ ಹಳೆಯ ಸ್ಕರ್ಟ್‌! ಇದರ ಬೆಲೆ?

ಚಾಕ್ಲೆಟ್ ಕೇಕ್ ತಯಾರಿಸಿದ್ದಾರೆ ಪೂನಂ. ಚಾಕ್ಲೆಟ್ ಕೇಕ್ ಜತೆಗೆ ಐಸ್‌ಕ್ರೀಮ್ ಹಾಕಿ ಸವಿದಿದ್ದಾರೆ. ತಮ್ಮ ಈ ಐಸ್‌ ಕ್ರೀಮ್ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಕೂಡ ಪೂನಂ ಪಾಂಡೆ ಹಂಚಿಕೊಂಡಿದ್ದಾರೆ. ಕೆಲವರು ನಿಮ್ಮ ರೆಸಿಪಿ ಮತ್ತು ನೀವು ಎರಡು ಅದ್ಭುತ ಎನ್ನುತ್ತಿದ್ದಾರೆ. ಪೂನಂ ಪಾಂಡೆಯ ಸೌಂದರ್ಯವನ್ನೂ ಹಾಡಿ ಹೊಗಳುತ್ತಿದ್ದಾರೆ.

Continue Reading

ಸಿನಿಮಾ

Narendra Modi: ಪ್ರಧಾನಿ ಮೋದಿಗೆ ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಮಹಾಪೂರ !

Narendra Modi: ಮೋದಿ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಶಾರುಖ್ ಖಾನ್, ಅಕ್ಷಯ್ ಕುಮಾರ್, ಕಂಗನಾ ರಣಾವತ್‌, ವಿಕ್ರಾಂತ್ ಮಾಸ್ಸೆ ಮತ್ತು ಇತರ ಸೆಲೆಬ್ರಿಟಿಗಳು ಇದ್ದರು. ನರೇಂದ್ರ ಮೋದಿ ಅವರ ಜತೆಗೆ ಹಲವು ಸಂಸದರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶದಲ್ಲಿ 10 ವರ್ಷಗಳ ಬಳಿಕ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಟಿಡಿಪಿ, ಜೆಡಿಯು, ಜೆಡಿಎಸ್‌ ಹಾಗೂ ಎಲ್‌ಜೆಪಿ ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

VISTARANEWS.COM


on

Narendra Modi Oath Ceremony Celebs Congratulate PM Modi
Koo

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತ ಪಡೆದ ಬೆನ್ನಲ್ಲೇ ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ (Narendra Modi Oath) ಸ್ವೀಕರಿಸಿದ್ದಾರೆ. ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಪ್ರಮಾಣವಚನ ಬೋಧಿಸಿದಿರು. ಮೋದಿ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಶಾರುಖ್ ಖಾನ್, ಅಕ್ಷಯ್ ಕುಮಾರ್, ಕಂಗನಾ ರಣಾವತ್‌, ವಿಕ್ರಾಂತ್ ಮಾಸ್ಸೆ ಮತ್ತು ಇತರ ಸೆಲೆಬ್ರಿಟಿಗಳು ಇದ್ದರು. ಸೆಲೆಬ್ರಿಟಿಗಳು ಮೋದಿ ಅವರಿಗೆ ವಿಶ್‌ ಮಾಡಿದ್ದು ಹೀಗೆ.

“3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು… ಕೌಶಲ್ಯ, ಅಭಿವೃದ್ಧಿ, ಶಿಕ್ಷಣ ಮತ್ತು ದೇಶದ ಸುರಕ್ಷತೆಯ ಕಡೆಗಿನ ನಿಮ್ಮ ಬದ್ಧತೆಗೆ ನಾವು ಧನ್ಯರು’…”ಎಂದು ನಟ ರಿಷಬ್‌ ಶೆಟ್ಟಿ ಎಕ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: PM Narendra Modi: “ಒಕ್ಕೂಟ ವ್ಯವಸ್ಥೆಯ ಆಶಯ…” ಪ್ರಧಾನಿ ಮೋದಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

ನಟ ಅಜಯ್ ದೇವಗನ್ “ಪ್ರಧಾನಿ ನರೇಂದ್ರಮೋದಿ ಜಿ ಅವರ ಮರು ಆಯ್ಕೆಯಾಗಿದ್ದಕ್ಕೆ ಅಭಿನಂದನೆಗಳು! ಅವರ ಬುದ್ಧಿವಂತಿಕೆ ಮತ್ತು ಸಹಾನುಭೂತಿಯಿಂದ ಸಮೃದ್ಧಿ ಮತ್ತು ಶ್ರೇಷ್ಠತೆಯ ಕಡೆಗೆ ಭಾರತವನ್ನು ಮಾರ್ಗದರ್ಶನ ಮಾಡುವಲ್ಲಿ ನಿರಂತರ ಯಶಸ್ಸನ್ನು ಬಯಸುತ್ತೇವೆ, ”ಎಂದು ಬರೆದುಕೊಂಡಿದ್ದಾರೆ.


ರಾಜ್‌ಕುಮಾರ್ ರಾವ್ ಅವರು ಎಕ್ಸ್‌ನಲ್ಲಿ “ಈ ಐತಿಹಾಸಿಕ ಮೂರನೇ ಸತತ ಗೆಲುವಿಗಾಗಿ ನಮ್ಮ ಗೌರವಾನ್ವಿತ ಪ್ರಧಾನಿ ಮೋದಿ ಜೀ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ನಮ್ಮ ದೇಶವು ಅಭಿವೃದ್ಧಿಗೆ ಬರಲಿ. ದೇವರು ನಿಮ್ಮನ್ನು ಆಶೀರ್ವದಿಸಲಿ ಸರ್ʼʼಎಂದು ಬರೆದುಕೊಂಡಿದ್ದಾರೆ.


ಅನುಪಮ್ ಖೇರ್ ಹೀಗೆ ಬರೆದುಕೊಂಡಿದ್ದಾರೆ “ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ. ಇಂದು ನಿಮ್ಮನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಗಿದೆ. ದೇಶವಾಸಿಗಳಿಗಾಗಿ ನೀವು ಹಗಲಿರುಳು ಮಾಡುತ್ತಿರುವ ಶ್ರಮ ಸ್ಪೂರ್ತಿದಾಯಕ! ನಿಮ್ಮ ರಕ್ಷಣೆಗಾಗಿ ನನ್ನ ತಾಯಿ ಕಳುಹಿಸಿದ ರುದ್ರಾಕ್ಷಿ ಮಾಲೆಯನ್ನು ನೀವು ಸ್ವೀಕರಿಸಿದ ಗೌರವವನ್ನು ನಾವು ಯಾವಾಗಲೂ ಸ್ಮರಿಸುತ್ತೇವೆ. ಜೈ ಹೋ. ಜೈ ಹಿಂದ್!” ಎಂದು ಬರೆದುಕೊಂಡಿದ್ದಾರೆ.

“ಹೃತ್ಪೂರ್ವಕ ಅಭಿನಂದನೆಗಳು ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಅವರಿಗೆ. ವಸುಧೈವ ಕುಟುಂಬಕಮ್‌ನ ತತ್ತ್ವಚಿಂತನೆಗಳಲ್ಲಿ ಪ್ರೀತಿ ಮತ್ತು ದಯೆಯಿಂದಾಗಿ ನೀವು ಕರುಣೆಯಿಂದ ನಮ್ಮನ್ನು ಅದ್ಭುತವಾದ ಬೆಳವಣಿಗೆ, ಪ್ರಗತಿ, ಸಮೃದ್ಧಿಯ ಯುಗಕ್ಕೆ ಕೊಂಡೊಯ್ಯುತ್ತೀರಿ. ಮತ್ತು ಜಗತ್ತು ವಿಸ್ಮಯದಿಂದ ನೋಡುವ ವೈಭವಯುತ ರಾಷ್ಟ್ರವನ್ನಾಗಿ ಮಾಡುತ್ತೀರಿ ಎಂದು ನಮಗೆ ತಿಳಿದಿದೆ. ನಿಮಗೆ ದೇವರು ಒಳ್ಳೆಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಆರ್ ಮಾಧವನ್ ಬರೆದಿದ್ದಾರೆ.

ಇದನ್ನೂ ಓದಿ: Niveditha Gowda: ಚಂದನ್‌ ಶೆಟ್ಟಿ-ನಿವೇದಿತಾ ನಡುವಿನ ವಯಸ್ಸಿನ ಅಂತರವೆಷ್ಟು?

ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಭಾಗಿ

ಸಮಾರಂಭದಲ್ಲಿ ರಜನಿಕಾಂತ್ ಅವರು ಭಾಗಿಯಾಗಿದ್ದರು. ಚೆನ್ನೈನಿಂದ ದೆಹಲಿಗೆ ತೆರಳುತ್ತಿದ್ದಾಗ ಸುದ್ದಿಗಾರರೊಂದಿಗೆ ನಟ ಮಾತನಾಡಿ ʻʻನಾನು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದೇನೆ. ಇದು ಅತ್ಯಂತ ಐತಿಹಾಸಿಕ ಕಾರ್ಯಕ್ರಮ. ಸತತ ಮೂರನೇ ಅವಧಿಗೆ ಮೋದಿ ಅವರು ಅಧಿಕಾರ ಸ್ವೀಕರಿಸುತ್ತಿದ್ದಾರೆ. ನರೇಂದ್ರ ಮೋದಿಯವರ ದೊಡ್ಡ ಸಾಧನೆಯಾಗಿದೆ, ಅವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಇದು ಪ್ರಜಾಪ್ರಭುತ್ವದ ಆರೋಗ್ಯಕರ ಸಂಕೇತವಾಗಿದೆʼʼಎಂದರು.ವಿಶೇಷವೆಂದರೆ ತಮಿಳುನಾಡಿನಲ್ಲಿ ಬಿಜೆಪಿಗೆ ಒಂದು ಸೀಟು ಸಹ ಬಂದಿಲ್ಲ.

ನರೇಂದ್ರ ಮೋದಿ ಅವರ ಜತೆಗೆ ಹಲವು ಸಂಸದರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶದಲ್ಲಿ 10 ವರ್ಷಗಳ ಬಳಿಕ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಟಿಡಿಪಿ, ಜೆಡಿಯು, ಜೆಡಿಎಸ್‌ ಹಾಗೂ ಎಲ್‌ಜೆಪಿ ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದ ಲೈವ್‌ ವೀಕ್ಷಣೆಗೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಎಲ್‌ಇಡಿ ಪರದೆ, ಟಿವಿಗಳ ವ್ಯವಸ್ಥೆ ಮಾಡಿದ್ದರು. ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುತ್ತಲೇ ಭಾರತ್‌ ಮಾತಾ ಕೀ ಜೈ, ಮೋದಿ ಮೋದಿ ಎಂಬ ಘೋಷಣೆಗಳು ಮೊಳಗಿದವು.

Continue Reading
Advertisement
Yuva Rajkumar divorce reaction by shiva Rajkumar
ಸ್ಯಾಂಡಲ್ ವುಡ್8 mins ago

Yuva Rajkumar: ಸತ್ಯವಾಗಿಯೂ ʻಯುವʼ ಡಿವೋರ್ಸ್‌ ವಿಚಾರ ನಮಗೆ ಗೊತ್ತಿಲ್ಲ ಎಂದ ಶಿವಣ್ಣ!

Self Harming
ರಾಯಚೂರು13 mins ago

Self Harming : ಮಾನಸಿಕ ಖಿನ್ನತೆ; ಮಗಳ ಜತೆ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ

Narendra Modi 3.20
ಪ್ರಮುಖ ಸುದ್ದಿ55 mins ago

Narendra Modi 3.0 : ಮೋದಿ ಅಧಿಕಾರಕ್ಕೆ ಬಾರದಿರಲಿ ಎಂದು ಕಾದು ಕೂತು, ಕೊನೆಗೂ ಅಭಿನಂದನೆ ತಿಳಿಸಿದ ಪಾಕಿಸ್ತಾನ!

Election Results 2024
ಕರ್ನಾಟಕ58 mins ago

Election Results 2024: ಟಾರ್ಗೆಟ್ 20 ರೀಚ್ ಆಗಲು ವಿಫಲ; ಎಐಸಿಸಿಯಿಂದ ಪರಾಮರ್ಶೆ ಸಮಿತಿ, ಸಚಿವರ ಮೇಲೆ ತೂಗುಗತ್ತಿ!

Yuva Rajkumar Allegation of cruelty against wife
ಸ್ಯಾಂಡಲ್ ವುಡ್1 hour ago

Yuva Rajkumar: ರಾಘಣ್ಣ ದಂಪತಿ ವಿರೋಧದ ನಡುವೆಯೂ ಯುವನಿ​ಗೆ ಮದ್ವೆ ಮಾಡಿಸಿದ್ದು ‘ಅಪ್ಪು’!

UGCET 2024
ಬೆಂಗಳೂರು1 hour ago

UGCET 2024: ಸಿಇಟಿ ಅಪ್‌ಡೇಟ್‌; ಮೊದಲ ದಿನ 250 ವಿಕಲಚೇತನರ ವೈದ್ಯಕೀಯ ತಪಾಸಣೆ

Reasi Terror Attack
ಪ್ರಮುಖ ಸುದ್ದಿ1 hour ago

Reasi Terror Attack : ಉಗ್ರರ ಮುಂದೆ ಸತ್ತಂತೆ ನಟಿಸಿ ಬದುಕುಳಿದ ಹಿಂದೂ ಯಾತ್ರಿಗಳು…

murder case
ಮೈಸೂರು2 hours ago

Murder Case : ಮೈಸೂರಿನಲ್ಲಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಕೊಲೆ

pm narendra modi leopord
ಪ್ರಮುಖ ಸುದ್ದಿ2 hours ago

PM Narendra Modi: ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಿಗೂಢ ಪ್ರಾಣಿ! ವಿಡಿಯೋ ಇದೆ ನೋಡಿ

Yuva Rajkumar son of raghavendra Rajkumar yuva divorce
ಸ್ಯಾಂಡಲ್ ವುಡ್2 hours ago

Yuva Rajkumar: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಯುವ ರಾಜ್​ಕುಮಾರ್​ ; ಅಣ್ಣಾವ್ರ ಕುಟುಂಬದಲ್ಲಿ ಇದೇ ಮೊದಲ ಪ್ರಕರಣ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌