Apoorva Rai Allegation: ಮಿಸೆಸ್‌ ಯೂನಿವರ್ಸ್ ಪೇಜೆಂಟ್‌ ಬಗ್ಗೆ ಮೈಸೂರಿನ ಸ್ಪರ್ಧಿ ಅಪೂರ್ವ ರೈ ನೇರವಾಗಿ ಆರೋಪಿಸಿದ್ದೇನು? - Vistara News

ಫ್ಯಾಷನ್

Apoorva Rai Allegation: ಮಿಸೆಸ್‌ ಯೂನಿವರ್ಸ್ ಪೇಜೆಂಟ್‌ ಬಗ್ಗೆ ಮೈಸೂರಿನ ಸ್ಪರ್ಧಿ ಅಪೂರ್ವ ರೈ ನೇರವಾಗಿ ಆರೋಪಿಸಿದ್ದೇನು?

ಮಿಸೆಸ್‌ ಯೂನಿವರ್ಸ್ (Apoorva Rai Controversy) ಪೇಜೆಂಟ್‌ಗೆ ತೆರಳಿದ್ದ , ಮೈಸೂರಿನ ಅಪೂರ್ವ ರೈ, ತಾಯ್ನಾಡಿಗೆ ಮರಳಿದ್ದು, ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್‌ ಸ್ಪರ್ಧೆಯ ಆಯೋಜಕರ ವಿರುದ್ಧ ದನಿಯೆತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ವರದಿ.

VISTARANEWS.COM


on

Apoorva Rai
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಳೆದ ವಾರದ ಕೊನೆಯಲ್ಲಿ ಬಲ್ಗೆರಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಮಿಸೆಸ್‌ ಯೂನಿವರ್ಸ್ ಪೇಜೆಂಟ್‌ನಲ್ಲಿ ಆಯೋಜಕರು ಸ್ಪರ್ಧಿಗಳಿಂದ ಹಣ ಪಡೆದು ವಿಜೇತರನ್ನು ಆಯ್ಕೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ, ಇತರೇ ಅರ್ಹ ಸ್ಪರ್ಧಿಗಳನ್ನು ಕಡೆಗಣಿಸಿ, ವಂಚಿಸಿದ್ದಾರೆ ಎಂದು ವಿವಾಹಿತರಿಗೆಂದು ನಡೆದ ಮಿಸೆಸ್‌ ಯೂನಿವರ್ಸ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಮೈಸೂರಿನ ಅಪೂರ್ವ ರೈ (Allegation) ನೇರವಾಗಿ ಆರೋಪಿಸಿದ್ದಾರೆ.

ಈ ಕುರಿತಂತೆ ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಕಳೆದ ಒಂದು ವರ್ಷಗಳ ಕಾಲ ಈ ಪೇಜೆಂಟ್‌ಗಾಗಿ ಪ್ರೊಫೆಷನ್‌ ಹಾಗೂ ಫ್ಯಾಮಿಲಿ ಎಲ್ಲವನ್ನು ಬದಿಗಿಟ್ಟು, ಗ್ರೂಮಿಂಗ್‌, ಮೇಕ್‌ಓವರ್‌ ಎಂದೆಲ್ಲಾ ಕಷ್ಟಪಟ್ಟು ಸಿದ್ಧತೆ ನಡೆಸಿ , ಆತ್ಮವಿಶ್ವಾಸದಿಂದ ಮುನ್ನೆಡೆದರೂ, ಕೊನೆಯ ಕ್ಷಣಗಳಲ್ಲಿ ಅರ್ಹತೆಯಿಲ್ಲದ ಸ್ಪರ್ಧಾಳುಗಳನ್ನು ಹಣ ಪಡೆದು ಆಯ್ಕೆ ಮಾಡಿರುವುದು ತಮಗೆ ಬೇಸರ ಮೂಡಿಸಿದೆʼʼ ಎಂದು ಪೇಜೆಂಟ್‌ ವಿರುದ್ಧ ನಾನಾ ಆರೋಪದ ಸುರಿಮಳೆಯನ್ನೇಗೈದಿದ್ದಾರೆ.

ಲಕ್ಷಾಂತರ ರೂ. ಖರ್ಚು

ಪೇಜೆಂಟ್‌ನಲ್ಲಿ ರಿಜಿಸ್ಟರ್‌ಗಾಗಿ ಲಕ್ಷಾನುಗಟ್ಟಲೇ ಶುಲ್ಕ ವೆಚ್ಚ ಮಾಡಿ ಗ್ರೂಮಿಂಗ್‌, ಮೇಕ್‌ಓವರ್‌, ಡಿಸೈನರ್‌ವೇರ್‌ ಎಂದೆಲ್ಲಾ ದಶ ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದು, ವಿಜೇತಳಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರೂ, ಅಲ್ಲಿ ಕೊನೆಯ ದಿನ ನಡೆದ ಸನ್ನಿವೇಶವೇ ಬೇರೆಯಾಗಿತ್ತು. ಭಾರತೀಯಳಾಗಿ ಮಿಸೆಸ್‌ ಯೂನಿವರ್ಸ್ ಬೆಸ್ಟ್‌ ಬಾಡಿ, ಮಿಸೆಸ್‌ ಯೂನಿವರ್ಸ್ ಟಾಪ್‌ ಏಷಿಯಾದಂತಹ ಸಬ್‌ ಟೈಟಲ್‌ಗಳನ್ನು ಪಡೆದು ಅರ್ಹತೆ ಸುತ್ತಿಗೆ ಎಂಟ್ರಿ ಪಡೆದರೂ, ಅಚ್ಚರಿ ಎಂಬಂತೆ, ಕೊನೆಯ ಕ್ಷಣಗಳಲ್ಲಿ ಅರ್ಹತೆ ಹೊಂದಿಲ್ಲದವರಿಗೆ ಟಾಪ್‌ ಸ್ಥಾನ ನೀಡಿ, ವಿಜೇತರನ್ನಾಗಿ ಅನೌನ್ಸ್‌ ಮಾಡಲಾಯಿತು. ಇದನ್ನು ಮನಗಂಡ ಒಂದಿಷ್ಟು ಸ್ಪರ್ಧಿಗಳು ವಿರುದ್ಧ ದನಿ ಎತ್ತಿದರೂ ಆಯೋಜಕರು ತಲೆಕೆಡಿಸಿಕೊಳ್ಳಲಿಲ್ಲ! ಹಾಗಾಗಿ ತಾಯ್ನಾಡಿಗೆ ಮರಳಿ ಬಂದ ನಂತರ, ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡುತ್ತಿದ್ದೇನೆ ಹಾಗೂ ಸಬ್‌ ಟೈಟಲ್‌ ಹಿಂತಿರುಗಿಸುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: Ramp News: ಶೈನ್‌ ಟ್ಯಾಗ್‌ನ 3ನೇ ಸೀಸನ್‌ ಫ್ಯಾಷನ್‌ ಶೋನಲ್ಲಿ ನಯಾ ಡಿಸೈನರ್‌ ವೇರ್ಸ್‌ ಪ್ರದರ್ಶನ

ನ್ಯಾಷನಲ್ ಡೈರೆಕ್ಟರ್‌ಗಳ ಕೈವಾಡ

ʻʻಅಷ್ಟೇ ಅಲ್ಲದೇ ಈ ಪ್ರಕರಣಕ್ಕೆ ನ್ಯಾಷನಲ್ ಡೈರೆಕ್ಟರ್‌ಗಳ ಕೈವಾಡ ಕೂಡ ಇದೆ. ಮೊದಲೇ ನ್ಯಾಷನಲ್ ಡೈರೆಕ್ಟರ್‌ಗಳು ಬುಕ್‌ ಮಾಡಿರುವುದರಿಂದ ಕೆಲವರು ಮೊದಲೆ ಅಲ್ಲಿಗೆ ಹೋಗಿದ್ದರು. ಇಲ್ಲಿ‌ ಪ್ರತಿಭೆಗೆ ಯಾವುದೇ ಅವಕಾಶ ಇಲ್ಲ ಕೇವಲ‌ ಹಣ ಮಾತ್ರ. ಇದು ನನಗೆ ತುಂಬ ನೋವು ತಂದಿಂದೆ, ನನ್ನಂತೆ ಯಾರು ಕೂಡ ಮೋಸ ಹೋಗಬಾರದು ಎಂದುʼʼ ಅಪೂರ್ವ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಥೋಮಾ ಕ್ರಿಯೇಷನ್ ಮುಖಾಂತರ ಇವೆಂಟ್‌ನಲ್ಲಿ ಅಪೂರ್ವ ರೈ ಭಾಗಿ ಆಗಿದ್ದರು.

ಜಾಗೃತಿ ಮೂಡುವುದು ಅಗತ್ಯ

ಇನ್ನು ಮುಂದೆ ಈ ರೀತಿಯ ಪೇಜೆಂಟ್‌ಗಳಲ್ಲಿ ಭಾಗವಹಿಸುವವರು ಮೊದಲೇ ಕೂಲಂಕಶವಾಗಿ ಪೇಜೆಂಟ್‌ನ ಎಲ್ಲ ವಿವರಗಳನ್ನು ತಿಳಿದುಕೊಂಡು ಭಾಗವಹಿಸುವುದು ಅವಶ್ಯ. ಇಲ್ಲವಾದಲ್ಲಿ ಸುಖಾಸುಮ್ಮನೆ ದೊಡ್ಡ ಮೊತ್ತದ ಹಣ ಕಳೆದುಕೊಳ್ಳಬೇಕಾಗುತ್ತದೆ. ನಾನು ಇಲ್ಲಿಯವರೆಗೂ ಯಾವುದೇ ಕಾನೂನಿನ ಸಹಾಯ ತೆಗೆದುಕೊಂಡಿಲ್ಲ. ಹಾಗೆಂದು ಎಲ್ಲಾ ಪೇಜೆಂಟ್‌ಗಳು ಹೀಗೆಯೇ ಇರುತ್ತವೆ ಎಂಬುದಲ್ಲ. ಈ ಕ್ಷೇತ್ರದಲ್ಲಿ ಮುಂದುವರೆಯಲು ಬಯಸುವ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶ ನನ್ನದಾಗಿದೆ ಎಂದು ಅಪೂರ್ವ ರೈ ಹೇಳಿದರು.

ಇದನ್ನೂ ಓದಿ: Cow Slaughter : ಹುಬ್ಬಳ್ಳಿ ಕಸಾಯಿ ಖಾನೆಗಳಲ್ಲಿ ಗೋವುಗಳ ಮಾರಣಹೋಮ ಆರೋಪ; ಕಾನೂನು ಕ್ರಮಕ್ಕೆ ಬಜರಂಗ ದಳ ಆಗ್ರಹ

ಅಪೂರ್ವ ರೈ ಹಿನ್ನೆಲೆ ಏನು?

ಫೆಮೀನಾ ಮಿಸ್‌ ಇಂಡಿಯಾ ಫೈನಲಿಸ್ಟ್‌ ಆಗಿದ್ದ ಅಪೂರ್ವ ರೈ ಮೈಸೂರಿನ ನಿವಾಸಿ.ವಾಸ್ತವವಾಗಿ ಅಪೂರ್ವ ರೈ ಒಬ್ಬ ವ್ಯಾಪಾರ ಮಹಿಳೆ ಮತ್ತು ವೃತ್ತಿಪರ ರೂಪದರ್ಶಿ. 2022 ರಲ್ಲಿ, ಅವರು ಮಿಸೆಸ್ ಸೌತ್ ಪೆಸಿಫಿಕ್ ಏಷ್ಯಾ ಯೂನಿವರ್ಸ್ 2022 (south Pacific Asia Universe 2022) ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪ್ರಶಸ್ತಿಯನ್ನು ಗೆದ್ದ ನಂತರ, ಅಪೂರ್ವ ರೈ ಅವರು ಮಾಧ್ಯಮದ ಸಂದರ್ಶನದಲ್ಲಿ ತಾನು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದೇನೆ ಎಂದು ಬಹಿರಂಗಪಡಿಸಿದರು. ಸದ್ಯ ಅವರಿಗೆ 3 ವರ್ಷದ ಮಗನಿದ್ದಾನೆ. ಅಪೂರ್ವ ರೈ ತಮ್ಮದೇ ಆದ ಸ್ಕ್ರೀನ್ ಕೇರ್ ಕಾಸ್ಮೆಟಲಾಜಿಕಲ್ ಕ್ಲಿನಿಕ್ ಅನ್ನು ಹೊಂದಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Anant Ambani: ಅನಂತ್ ಅಂಬಾನಿ ಬಳಿ ಇವೆ 300 ಕೋಟಿಯ ವಾಚ್‌ಗಳು! ಎಂಥೆಂಥ ಗಡಿಯಾರಗಳಿವೆ ನೋಡಿ!

ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ (radhika merchant) ಅವರನ್ನು ಇದೇ ತಿಂಗಳ 12ರಂದು ಮುಂಬಯಿನ (mumbai) ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (BKC) ಪ್ರಸಿದ್ಧ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿರುವ ಅನಂತ್ ಅಂಬಾನಿ (Anant Ambani) ಅವರ ಸಂಗ್ರಹದಲ್ಲಿರುವ ದುಬಾರಿ ವಾಚ್ ಗಳು ಯಾವುದು, ಇದರ ಬೆಲೆ ಎಷ್ಟು ಗೊತ್ತೇ?

VISTARANEWS.COM


on

By

Anant Ambani
Koo

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (RIL) ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಹಾಗೂ ರಿಲಾಯನ್ಸ್ ಫೌಂಡೇಶನ್ ನ (Reliance Foundation) ಸಂಸ್ಥಾಪಕಿ ನೀತಾ ಅಂಬಾನಿ (nita ambani) ಅವರ ಕೊನೆಯ ಪುತ್ರ ಅನಂತ್ ಅಂಬಾನಿ (Anant Ambani) ತಮ್ಮ ಮದುವೆಯ ಕಾರಣದಿಂದ ಕಳೆದ ಒಂದು ವರ್ಷದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ (radhika merchant) ಅವರನ್ನು ಇದೇ ತಿಂಗಳ 12ರಂದು ಮುಂಬಯಿನ (mumbai) ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (BKC) ಪ್ರಸಿದ್ಧ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಈ ನಡುವೆ ಇದೀಗ ಅನಂತ್ ಅಂಬಾನಿ ಅವರ ಸಂಗ್ರಹದಲ್ಲಿರುವ ದುಬಾರಿ ವಾಚ್ ಎಲ್ಲರ ಗಮನ ಸೆಳೆಯುತ್ತಿದೆ.

ಕ್ಯುರೇಟೆಡ್ ಮತ್ತು ಅತ್ಯದ್ಭುತ ದುಬಾರಿ ವಾಚ್ ಸಂಗ್ರಹಣೆಗಾಗಿ ಹೆಸರುವಾಸಿಯಾಗಿರುವ ಅನಂತ್ ಅಂಬಾನಿ ಅವರ ಬಳಿ ಇರುವ ಕೆಲವು ಅಸಾಧಾರಣ ವಾಚ್ ಸಂಗ್ರಹದ ಕುರಿತು ಕಿರು ಮಾಹಿತಿ ಇಲ್ಲಿದೆ.


ಪಾಟೆಕ್ ಫಿಲಿಪ್ ಗ್ರ್ಯಾಂಡ್ ಮಾಸ್ಟರ್ ಚೈಮ್

ಅನಂತ್ ಅಂಬಾನಿ ಗ್ರ್ಯಾಂಡ್ ಮಾಸ್ಟರ್ ಚೈಮ್ ಸೇರಿದಂತೆ ಪಾಟೆಕ್ ಫಿಲಿಪ್ ಅವರ ಅತ್ಯಂತ ದುಬಾರಿ ಕೈಗಡಿಯಾರಗಳಲ್ಲಿ ಎರಡನ್ನು ಹೊಂದಿದ್ದಾರೆ. ಪಾಟೆಕ್‌ ನ ಅತ್ಯಂತ ದುಬಾರಿ ಕೈಗಡಿಯಾರ ಇದಾಗಿದೆ. ಇದುವರೆಗೆ ಇದರ ಏಳು ವಾಚ್‌ಗಳನ್ನು ಮಾತ್ರ ಮಾಡಲಾಗಿದೆ. ಇದು ಇತ್ತೀಚೆಗೆ ಹರಾಜಿನಲ್ಲಿ 31 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 2.58 ಬಿಲಿಯನ್ ರೂ.ಗಳಾಗಿದೆ.


ಆಡೆಮರ್ಸ್ ಪಿಗುಯೆಟ್ ರಾಯಲ್ ಓಕ್ ಕಾನ್ಸೆಪ್ಟ್ ಜಿಎಂಟಿ ಟೂರ್‌ಬಿಲ್ಲನ್

ರಾಯಲ್ ಓಕ್‌ನ 30ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಬಿಡುಗಡೆ ಮಾಡಲಾದ ಈ ದಪ್ಪ ಗಡಿಯಾರವು ಟೈಟಾನಿಯಂ ಕೇಸ್ ಮತ್ತು ಅಸ್ಥಿಪಂಜರ ಮಾದರಿಯ ಡಯಲ್ ಅನ್ನು ಒಳಗೊಂಡಿದೆ. ಅದರ ಸಂಕೀರ್ಣ ಕಾರ್ಯವಿಧಾನ ಮೋಡಿ ಮಾಡುವಂತಿದೆ. ಮೈ ಯ ಶಾಖ ಮತ್ತು ಜಿಎಂಟಿ ಕಾರ್ಯದೊಂದಿಗೆ ಇದು ಕಾರ್ಯ ನಿರ್ವಹಿಸುತ್ತದೆ. ಇದರ ಅಂದಾಜು ಬೆಲೆ 1.9 ಕೋಟಿ ರೂ.


ಪಾಟೆಕ್ ಫಿಲಿಪ್ ನಾಟಿಲಸ್ ಟ್ರಾವೆಲ್ ಟೈಮ್

ಪಾಟೆಕ್ ಫಿಲಿಪ್ ವಾಚ್‌ ನ ಅತ್ಯಂತ ಅಪರೂಪದ ವಾಚ್ ಇದಾಗಿದ್ದು, ಮಾಣಿಕ್ಯ, ವಜ್ರ ಬಿಳಿ ಚಿನ್ನವನ್ನು ಒಳಗೊಂಡಿದೆ. ಅತ್ಯಂತ ಐಷಾರಾಮಿ ಕೈಗಡಿಯಾರವಾದ ಇದು ಕೆಂಪು ಮಾಣಿಕ್ಯ, ಹಸಿರು ಪಚ್ಚೆಗಳಿಂದ ಅಲಂಕರಿಸಲ್ಪಟ್ಟಿದೆ. ಇದರ ಅಂದಾಜು ಬೆಲೆ 8.2 ಕೋಟಿ ರೂ.

ಇದನ್ನೂ ಓದಿ: Nita Ambani: 50-60 ಬನಾರಸಿ ಸೀರೆ ಖರೀದಿಸಿದ ನೀತಾ ಅಂಬಾನಿ: ಸೀರೆಯ ದರ ಎಷ್ಟು?


ರಿಚರ್ಡ್ ಮಿಲ್ಲೆ ಆರ್ ಎಮ್ 56-01 ಟೂರ್‌ಬಿಲ್ಲನ್

ರಿಚರ್ಡ್ ಮಿಲ್ಲೆ ಆರ್ ಎಮ್ 56-01 ಶುದ್ಧ, ಸ್ಫಟಿಕದಂತಹ ನೀಲಮಣಿಯನ್ನು ಹೊಂದಿದೆ. ಇದು ಅಸಾಧಾರಣ ಬಾಳಿಕೆ ಮತ್ತು ಸ್ಕ್ರಾಚ್ ಪ್ರತಿರೋಧವನ್ನು ಹೊಂದಿದೆ. ಹಸಿರು ನೀಲಮಣಿಯನ್ನು ಒಳಗೊಂಡಿರುವ ಇದರ ಅಂದಾಜು ಬೆಲೆ 25 ಕೋಟಿ ರೂ.


ಪಾಟೆಕ್ ಫಿಲಿಪ್ ಸ್ಕೈ ಮೂನ್ ಟೂರ್ಬಿಲ್ಲಾನ್

ಪಾಟೆಕ್ ಫಿಲಿಪ್ ರಚಿಸಿದ ಅತ್ಯಂತ ಅಪರೂಪದ ಕೈಗಡಿಯಾರಗಳಲ್ಲಿ ಸ್ಕೈ ಮೂನ್ ಟೂರ್‌ಬಿಲ್ಲನ್ ನಲ್ಲಿ ಕ್ಯಾಲೆಂಡರ್, ಚಂದ್ರನ ಚಲನೆಯ ಸೂಚಕ ಸೇರಿದಂತೆ ಹನ್ನೆರಡು ವಿಶೇಷತೆಗಳನ್ನು ಒಳಗೊಂಡಿದೆ. ಇದರ ಸಂಕೀರ್ಣ ವಿನ್ಯಾಸ ಮತ್ತು ಅಸಾಧಾರಣ ಕರಕುಶಲತೆಯು ಸ್ವಿಸ್ ವಾಚ್‌ಮೇಕಿಂಗ್ ಅನ್ನು ಅತ್ಯುತ್ತಮವಾಗಿಸಿದೆ. ಇದರ ಅಂದಾಜು ಬೆಲೆ 54 ಕೋಟಿ ರೂ.

Continue Reading

ಫ್ಯಾಷನ್

Fashion Show News: ಸಿಇಎಸ್‌ ಫ್ಯಾಷನ್‌ ಡಿಸೈನಿಂಗ್‌ ವಿದ್ಯಾರ್ಥಿಗಳ ರ‍್ಯಾಂಪ್‌ ಶೋ

Fashion Show News: ಉದ್ಯಾನನಗರಿಯ ಯಲಹಂಕ ದಲ್ಲಿರುವ ಸಿಇಎಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿಯ ಭಾವಿ ಡಿಸೈನರ್‌ಗಳು ಅಂದರೆ, ಅಲ್ಲಿನ ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿದ, ಭಿನ್ನ-ವಿಭಿನ್ನ ಡಿಸೈನರ್‌ವೇರ್‌ಗಳ ಪ್ರದರ್ಶನ ಯಶಸ್ವಿಯಾಗಿ ನಡೆಯಿತು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Fashion Show News
ಚಿತ್ರಗಳು : ಸಿ ಇಎಸ್‌ ಇನ್‌ಸ್ಟಿಟ್ಯೂಸ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ ಫ್ಯಾಷನ್‌ ಶೋ ಚಿತ್ರಗಳು.
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರಯೋಗಾತ್ಮಕ ಥೀಮ್‌ಗೆ ತಕ್ಕಂತೆ ಡಿಸೈನರ್‌ವೇರ್‌ಗಳನ್ನು (Fashion Show News) ಸಿದ್ಧಪಡಿಸಿದ್ದ ಉದ್ಯಾನನಗರಿಯ ಯಲಹಂಕದ ಸಿಇಎಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿಯ ಭಾವಿ ಡಿಸೈನರ್‌ಗಳು ನೆರೆದಿದ್ದ, ಪ್ರೇಕ್ಷಕರಿಂದ ಪ್ರಶಂಸೆಯ ಸುರಿಮಳೆ, ಸಿಳ್ಳೆ ಹಾಗೂ ಚಪ್ಪಾಳೆ ಗಿಟ್ಟಿಸಿಕೊಂಡರು.

Fashion Show News

ಸಾಗರ ಸಂರಕ್ಷಣೆ ಕುರಿತ ಡಿಸೈನರ್‌ವೇರ್ಸ್

ಕಪ್ಪೆ ಚಿಪ್ಪು, ಶಂಖದಂತಹ ನಾನಾ ಬಗೆಯ ಸೀ ಶೆಲ್‌ ಆಕ್ಸೆಸರೀಸ್‌ಗಳಿಂದ ವಿನ್ಯಾಸಗೊಳಿಸಿದ ವೈಟ್‌ ಡ್ರೆಸ್‌, ಸಮುದ್ರ ಹಾಗೂ ಸಾಗರವನ್ನು ಉಳಿಸಿ-ರಕ್ಷಿಸಿ ಎಂಬ ಸಂದೇಶವನ್ನು ಹೊಂದಿದಂತಹ ಬ್ಲ್ಯೂ ಡಿಸೈನರ್‌ವೇರ್‌ ಸೇರಿದಂತೆ, ನಾನಾ ಬಗೆಯ ಓಶನ್‌ ಥೀಮ್‌ ಹೊಂದಿದಂತಹ ಸಿಇಎಸ್‌ ಡಿಸೈನರ್‌ಗಳ ವೆರೈಟಿ ಡಿಸೈನರ್‌ ಡ್ರೆಸ್‌ಗಳನ್ನು ಧರಿಸಿದ ಮಾಡೆಲ್‌ಗಳು ರ್ಯಾಂಪ್‌ ಮೇಲೆ ಪರಿಸರ ಸಂರಕ್ಷಣೆ ಕುರಿತ ಸಂದೇಶ ಸಾರಿದರು.

Fashion Show News

ವೆಸ್ಟರ್ನ್‌ ಡೆನಿಮ್‌ಗೆ ನಾನಾ ಲುಕ್‌

ಇದುವರೆಗೂ ಡೆನಿಮ್‌ನಲ್ಲಿ ಜೀನ್ಸ್ ಪ್ಯಾಂಟ್‌, ಶಾರ್ಟ್ಸ್, ಸ್ಕರ್ಟ್ಸ್ ನೋಡಿ ಗೊತ್ತು! ಆದರೆ, ಇದರಲ್ಲಿ ಲೆಹೆಂಗಾ, ಹಾಗೂ ಇಂಡಿಯನ್‌ ಔಟ್‌ಫಿಟ್‌ಗಳನ್ನು ಪ್ರಯೋಗ ಮಾಡಿದರೇ ಹೇಗೆ? ಎಂದು ಯೋಚಿಸಿ, ಡಿಸೈನ್‌ ಮಾಡಿದ್ದ ಡಿಸೈನರ್‌ಗಳ ನಾನಾ ಬಗೆಯ ಡೆನಿಮ್‌ ಇಂಡಿಯನ್‌ ಔಟ್‌ಫಿಟ್‌ಗಳು ಭಾಗವಹಿಸಿದ್ದ ಹುಡುಗಿಯರನ್ನು ಸೆಳೆದವು.

ಮೈಸೂರ್‌ ಸಿಲ್ಕ್ ಸೀರೆ ಶೋ

ಇವೆಲ್ಲದರ ಮಧ್ಯೆ, ಜೆನ್‌ ಜಿ ಹುಡುಗಿಯರು ಇಂಡೋ-ವೆಸ್ಟರ್ನ್‌ ಶೈಲಿಯಲ್ಲಿ ಉಟ್ಟ ನಾನಾ ಬಗೆಯ ಟ್ರೆಡಿಷನಲ್‌ ಮೈಸೂರ್ ಸಿಲ್ಕ್ ಸೀರೆಗಳು ಮಹಿಳೆಯರನ್ನು ಮನಸೆಳೆದವು. ಇನ್ನು, ಮಾಡೆಲ್‌ಗಳೊಂದಿಗೆ ಮಹಿಳಾ ಐಎಎಸ್‌ ಅಧಿಕಾರಿ ಶಾಲಿನಿ ರಜನೀಶ್‌ ಹಾಗೂ ಫ್ಯಾಷನ್‌ ಲೇಖಕಿ, ರಾಜ್ಯ ಪೇಜೆಂಟ್‌ಗಳ ಜ್ಯೂರಿ ಸಲಹೆಗಾರರಾದ ಶೀಲಾ ಸಿ. ಶೆಟ್ಟಿ ಕೂಡ ವಿದ್ಯಾರ್ಥಿಗಳೊಂದಿಗೆ ರ‍್ಯಾಂಪ್‌ ವಾಕ್‌ ಮಾಡಿ, ಡಿಸೈನರ್‌ಗಳನ್ನು ಹುರಿದುಂಬಿಸಿದರು.

ಜಿ. ಎಂ ಶಿರಹಟ್ಟಿ ಪ್ರೋತ್ಸಾಹ

ಶೋನಲ್ಲಿ ಭಾಗವಹಿಸಿದ್ದ ದೂರದರ್ಶನದ ಮಾಜಿ ಡೈರೆಕ್ಟರ್‌ ಜಿ. ಎಂ. ಶಿರಹಟ್ಟಿ ಅವರು ಮಾತನಾಡಿ, ಪ್ರತಿಭಾನ್ವಿತ ಡಿಸೈನರ್‌ಗಳು ಮುಂದೊಮ್ಮೆ ಈ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಲಿದ್ದಾರೆ ಎಂದು ಹೇಳಿದರು.
ಗ್ರಾಜುಯೇಷನ್‌ ಡೇಯಲ್ಲಿ ನಡೆದ ಡಿಸೈನರ್‌ ಆವಾರ್ಡ್‌ನಲ್ಲಿ, ಸೆಲೆಬ್ರೆಟಿ ಡಿಸೈನರ್‌ ಸಂಜಯ್‌ ಚೊಲರಿಯಾ ಪ್ರಶಸ್ತಿ ಸ್ವಿಕರಿಸಿದರು. ರ‍್ಯಾಪರ್‌ ಅವಿನಾಶ್‌ ಕಾರ್ಯಕ್ರಮ ನಿರೂಪಿಸಿದರು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Kids Fashion: ಮಕ್ಕಳ ಕ್ಯೂಟ್‌ ಲುಕ್‌ಗೆ ಸಾಥ್‌ ನೀಡುವ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್!

Continue Reading

ಫ್ಯಾಷನ್

Off Shoulder Tops Fashion: ನೀವೂ ಆಫ್‌ ಶೋಲ್ಡರ್‌ ಟಾಪ್‌ ಧರಿಸಬಹುದು! ಆದರೆ ಈ ಎಚ್ಚರಿಕೆ ವಹಿಸಿ

ಶೋಲ್ಡರ್ ಇಲ್ಲದ ಟಾಪ್‌ಗಳು (Off Shoulder Tops Fashion) ಧರಿಸುವುದು ಇಷ್ಟವಾದರೂ ಹೆಚ್ಚಾಗಿ ನಾವು ಇದರಲ್ಲಿ ಕಂಫರ್ಟ್ ಆಗಿರೋದು ಸಾಧ್ಯವಿಲ್ಲ. ಇದನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಸ್ಟೈಲಿಶ್ ಆಗಿ ಮಿಂಚಬಹುದು ಮಾತ್ರವಲ್ಲ ನೀವು ಹೆಚ್ಚು ಕಂಫರ್ಟ್ ಆಗಿ ಇರಬಹುದು. ಅದಕ್ಕಾಗಿ ಇಲ್ಲಿದೆ ಟಿಪ್ಸ್.

VISTARANEWS.COM


on

By

Off Shoulder Tops Fashion
Koo

ಶೋಲ್ಡರ್ ಇಲ್ಲದ ಟಾಪ್‌ಗಳು (Off Shoulder Tops Fashion) ಹೆಚ್ಚು ಸ್ಟೈಲಿಶ್ (stylish) ಲುಕ್ ನೀಡುವುದು ಮಾತ್ರವಲ್ಲ ಇದು ಟ್ರೆಂಡಿ (trendy) ಆಯ್ಕೆಯೂ ಹೌದು. ಆದರೆ ಹೆಚ್ಚಿನವರಿಗೆ ಇದನ್ನು ಧರಿಸುವುದು, ನಿರ್ವಹಣೆ ಮಾಡುವುದು ಸವಾಲಿನ ಕೆಲಸ. ಹೀಗಾಗಿ ಇಷ್ಟವಿದ್ದರೂ ಇಂತಹ ದಿರಸು ಹಾಕಿಕೊಂಡು ಹೊರಗೆ ಹೋಗಲು ಬಹುತೇಕ ಮಂದಿ ಹಿಂಜರಿಯುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಶೋಲ್ಡರ್ ಇಲ್ಲದ ದಿರಸು ಧರಿಸಿದರೆ ಹೆಚ್ಚು ಕಂಫರ್ಟ್ ಫೀಲ್ ಆಗುವುದು ಮಾತ್ರವಲ್ಲ ಎಲ್ಲರ ನಡುವೆ ಸ್ಟೈಲಿಶ್ ಆಗಿಯೂ ಮಿಂಚಬಹುದು.

ಶೋಲ್ಡರ್ ಇಲ್ಲದ ದಿರಸುಗಳನ್ನು ಧರಿಸಲು ಈ ಆರು ಪ್ರಮುಖ ಸಲಹೆಗಳನ್ನು ಪಾಲಿಸಿ. ಆಗ ನೀವೂ ಸ್ಟೈಲಿಶ್ ಆಗಿ ಮಿಂಚಬಹುದು.

ಸ್ಟ್ರಾಪ್ ಇಲ್ಲದ ಬ್ರಾ ಆಯ್ಕೆ ಮಾಡಿ

ಶೋಲ್ಡರ್ ಇಲ್ಲದ ದಿರಸು ಧರಿಸಿ ಹೆಚ್ಚು ಕಂಫರ್ಟ್ ಆಗಬೇಕಾದರೆ ಸ್ಟ್ರಾಪ್ ಇಲ್ಲದ ಬ್ರಾ ಆಯ್ಕೆ ಮಾಡಬೇಕು. ಇದು ಆಫ್-ದ-ಶೋಲ್ಡರ್ ಟಾಪ್‌ಗಳಿಗೆ ಹೆಚ್ಚು ಬೆಂಬಲವನ್ನು ನೀಡುತ್ತದೆ. ಮುಖ್ಯವಾಗಿ ಎದೆ ಭಾಗ ಅಗಲವಾಗಿದ್ದರೆ ಸರಿಯಾದ ಒಳ ಉಡುಪು ಆಯ್ದುಕೊಳ್ಳುವುದು ಬಹು ಮುಖ್ಯವಾಗಿರುತ್ತದೆ. ಬ್ರ್ಯಾಂಡೆಡ್ ಒಳ ಉಡುಪುಗಳನ್ನು ಆಯ್ಕೆ ಮಾಡಿ. ಇದರಲ್ಲಿ ಒಳ ಉಡುಪಿನ ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ ನಯವಾದ ಮತ್ತು ಆಕರ್ಷಕವಾದ ಸ್ಟ್ರಾಪ್ ಗಳನ್ನು ಹೊಂದಿರುತ್ತದೆ. ಇಂತವುಗಳು ಹೆಚ್ಚು ಕಂಫರ್ಟ್ ಕೊಡುತ್ತದೆ ಮತ್ತು ದಿರಿಸಿನ ಮೇಲಿನ ಅನುಮಾನವನ್ನು ಮನಸ್ಸಿನಿಂದ ತೊಡೆದು ಹಾಕುತ್ತದೆ.


ಸ್ಟ್ರಕ್ಚರ್ಡ್ ಟಾಪ್ಸ್

ಶೋಲ್ಡರ್ ಇಲ್ಲದ ದಿರಸು ಧರಿಸುವಾಗ ಮೇಲ್ಭಾಗದಲ್ಲಿ ಹೆಚ್ಚುವರಿ ಬೆಂಬಲ ಮತ್ತು ಸಹಾಯಕ್ಕೆ ಬಿಲ್ಟ್-ಇನ್ ಬೋನಿಂಗ್, ಅಂಡರ್‌ವೈರ್ ಅಥವಾ ನೆಕ್‌ಲೈನ್ ಸುತ್ತಲೂ ದಪ್ಪವಾದ ರಬ್ಬರ್ ಬ್ಯಾಂಡ್‌ ಇರುವುದನ್ನು ಖಚಿತಪಡಿಸಿಕೊಳ್ಳಿ. ರಚನಾತ್ಮಕ ಮೇಲ್ಭಾಗಗಳು ಹೆಚ್ಚು ಸ್ಟೈಲಿಶ್ ಲುಕ್ ನೀಡುವುದು ಮಾತ್ರವಲ್ಲ ದೇಹದ ಗಾತ್ರಕ್ಕೆ ತಕ್ಕಂತೆ ಸರಿಯಾಗಿ ಹೊಂದಿಕೆಯಾಗುವಂತೆ ಮಾಡಿ ಕೊಂಚ ಸ್ಲಿಮ್ ಮತ್ತು ಫಿಟ್ ಆಗಿರುವಂತೆ ತೋರಿಸುತ್ತದೆ.

ಮೃದು ಬಟ್ಟೆಗಳಿಗೆ ಆದ್ಯತೆ ನೀಡಿ

ಆಫ್-ದಿ-ಶೋಲ್ಡರ್ ಟಾಪ್‌ಗಳಿಗಾಗಿ ಹೆಚ್ಚು ದಪ್ಪವಾದ ಬಟ್ಟೆಗಳು ಸರಿಯಾದ ಆಯ್ಕೆಯಲ್ಲ. ತೆಳು ಮತ್ತು ಮೃದುವಾದ ಬಟ್ಟೆಗಳು ಹೆಚ್ಚು ಕಂಫರ್ಟ್ ಫೀಲ್ ಕೊಡುತ್ತದೆ. ಹತ್ತಿ, ಲೆನಿನ್ ಬಟ್ಟೆಗಳಿಂದ ವಿನ್ಯಾಸಗೊಳಿಸಿರುವ ದಿರಿಸನ್ನು ಆಯ್ಕೆ ಮಾಡಿಕೊಳ್ಳಬಹುದು.


ಸರಿಯಾದ ಬಾಟಮ್ ದಿರಸನ್ನು ಆಯ್ಕೆ ಮಾಡಿ

ಶೋಲ್ಡರ್ ಇಲ್ಲಿದ ದಿರಸು ಧರಿಸುವಾಗ ಸರಿಯಾದ ಬಾಟಮ್ ದಿರಸನ್ನು ಆಯ್ಕೆ ಮಾಡುವುದು ಕೂಡ ಬಹು ಮುಖ್ಯವಾಗಿದೆ. ಇದು ಶೋಲ್ಡರ್ ಲೆಸ್ ಟಾಪ್‌ಗಳಿಗೆ ಸಪೋರ್ಟಿವ್ ಆಗಿದ್ದರೆ ಹೆಚ್ಚು ಕಂಫರ್ಟ್ ಫೀಲ್ ಕೊಡುತ್ತದೆ. ಹೊಕ್ಕುಳ ಬಳಿ ಬರುವ ಜೀನ್ಸ್ ಅಥವಾ ಸ್ಕರ್ಟ್‌ ಗಳನ್ನು ಆಯ್ಕೆ ಮಾಡುವುದು ಮತ್ತು ಹೆಚ್ಚು ದಪ್ಪ, ಅಗಲವಾದ ಎಲಾಸ್ಟಿಕ್ ಇರುವ ಶೋಲ್ಡರ್ ಲೆಸ್ ಟಾಪ್ ಗಳಿಗೆ ಸ್ಟೈಲಿಶ್ ಲುಕ್ ನೀಡುತ್ತದೆ ಮಾತ್ರವಲ್ಲ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಎ-ಲೈನ್ ಸ್ಕರ್ಟ್‌ಗಳು ಮತ್ತು ವೈಡ್ ಲೆಗ್ ಪ್ಯಾಂಟ್‌ಗಳು ಹೆಚ್ಚು ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

ಸರಿಯಾದ ವಿನ್ಯಾಸವನ್ನು ಆಯ್ಕೆ ಮಾಡಿ

ಶೋಲ್ಡರ್ ಲೆಸ್ ಟಾಪ್ ಗಳಲ್ಲಿ ಭುಜದ ಮೇಲ್ಭಾಗ ಸಮಾನವಾಗಿ ಇರುವುದಿಲ್ಲ. ಎದೆ ಭಾಗ ದೊಡ್ಡದಾಗಿರುವವರಿಗೆ ಕಂಠರೇಖೆಯ ದಿರಿಸುಗಳು ಹೆಚ್ಚು ಸುಂದರವಾಗಿ ಕಾಣುತ್ತದೆ. ಇದು ಎದೆಯ ಭಾಗದಲ್ಲಿ ಸುತ್ತುವರೆದಿರುವ ಲೇಯರ್‌ಗಳು, ರಫಲ್ಸ್ ಅಥವಾ ಇತರ ವಿಶೇಷ ವಿನ್ಯಾಸವನ್ನು ಒಳಗೊಂಡಿರುತ್ತದೆ.


ಸೂಕ್ತ ಆಭರಣ ಧರಿಸಿ

ಶೋಲ್ಡರ್ ಲೆಸ್ ಟಾಪ್‌ಗಳನ್ನು ಆಯ್ಕೆ ಮಾಡುವಾಗ ದಪ್ಪ ಕಿವಿಯೋಲೆಗಳು, ನೆಕ್ಲೇಸ್‌ಗಳು ಕೂಡ ಗಮನ ಸೆಳೆಯುವಂತಿರಬೇಕು. ನೆಕ್ಲೇಸ್ ಧರಿಸಲು ಇಷ್ಟವಿಲ್ಲದೇ ಇದ್ದರೆ ಸ್ಟ್ರೈಕಿಂಗ್ ಕಿವಿಯೋಲೆಗಳನ್ನು ಆಯ್ಕೆ ಮಾಡಿ. ಇದರೊಂದಿಗೆ ಆಕರ್ಷಕ ಬೆಲ್ಟ್‌ ಗಳು ಸ್ಟೈಲಿಶ್ ಲುಕ್ ನೀಡುತ್ತದೆ ಮಾತ್ರವಲ್ಲ ಇದು ಸೊಂಟದ ಭಾಗ ಬಿಗಿಗೊಳಿಸಲು ಅದ್ಭುತವಾದ ಪರಿಕರವಾಗಿದೆ.

Continue Reading

ಫ್ಯಾಷನ್

Kids Fashion: ಮಕ್ಕಳ ಕ್ಯೂಟ್‌ ಲುಕ್‌ಗೆ ಸಾಥ್‌ ನೀಡುವ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್!

Kids Fashion: : ಚಿಣ್ಣರ ಸೆಲೆಬ್ರೇಷನ್‌ಗೆ ಸಾಥ್‌ ನೀಡುವಂತಹ ನಾನಾ ಬಗೆಯ ಹೆಡ್‌ಬ್ಯಾಂಡ್‌ಗಳು ಕಾಲಿಟ್ಟಿದ್ದು, ಅವುಗಳಲ್ಲಿ ರ‍್ಯಾಬಿಟ್‌ & ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್‌ಗಳು ಟ್ರೆಂಡಿಯಾಗಿವೆ. ಇವುಗಳಲ್ಲಿ ಯಾವ್ಯಾವ ಬಗೆಯವು ದೊರೆಯುತ್ತಿವೆ. ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Kids Fashion: Bunny Ears Head Bands for Kids' Cute Look!
ಚಿತ್ರಗಳು : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಕ್ಕಳನ್ನು ಕ್ಯೂಟಾಗಿ ಬಿಂಬಿಸುವ ಪಾರ್ಟಿ ಹಾಗೂ ಸೆಲೆಬ್ರೇಷನ್‌ಗೆ ಸಾಥ್‌ ನೀಡುವಂತಹ ನಾನಾ ಬಗೆಯ ರ‍್ಯಾಬಿಟ್‌ & ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. “ಹೆಣ್ಣುಮಕ್ಕಳ ಕೂದಲ ಸೌಂದರ್ಯವನ್ನು ಹೆಚ್ಚಿಸುವಂತಹ ಹೇರ್‌ ಆಕ್ಸೆಸರೀಸ್‌ನಲ್ಲಿ, ಇದೀಗ ರ‍್ಯಾಬಿಟ್‌ ಹಾಗೂ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್‌ಗಳು (kids fashion) ಬಂದಿದ್ದು, ನಾನಾ ಕಲರ್‌ಗಳಲ್ಲಿ ಬಿಡುಗಡೆಗೊಂಡಿವೆ. ತಲೆಯ ಮೇಲೆ ಧರಿಸಿದಾಗ ಮಕ್ಕಳನ್ನು ಮುದ್ದು ಮುದ್ದಾಗಿ ಬಿಂಬಿಸುತ್ತವೆ. ಅಲ್ಲದೇ, ಸೆಲೆಬ್ರೇಷನ್‌ಗೆ ಸಾಥ್‌ ನೀಡುತ್ತವೆ” ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ರಿಂಕು. ಅವರ ಪ್ರಕಾರ, ಬನ್ನಿ ಹಾಗೂ ರ‍್ಯಾಬಿಟ್‌ ಇಯರ್ಸ್ ಹೆಡ್‌ ಬ್ಯಾಂಡ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಬಂದಿರುವುದು ಬೇಡಿಕೆ ಹೆಚ್ಚಾಗಲು ಕಾರಣ ಎನ್ನುತ್ತಾರೆ.

kids fashion

ಏನಿದು ರ‍್ಯಾಬಿಟ್‌ & ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್

ಮೊಲದ ಉದ್ದನಾದ ಕಿವಿಗಳನ್ನು ಹೋಲುವ ವಿನ್ಯಾಸದ ಹೆಡ್‌ ಬ್ಯಾಂಡ್‌ಗಳನ್ನು ಹೀಗೆ ಕರೆಯಲಾಗುತ್ತದೆ. ಕೆಲವು ಫರ್‌ನಂತಹ ಮೆಟಿರಿಯಲ್‌ನಲ್ಲಿ ದೊರೆಯುತ್ತವೆ. ಇನ್ನು ಕೆಲವು ಮಕ್ಕಳ ಬರ್ತ್ ಡೇ ಪಾರ್ಟಿಗೆ ಹೊಂದುವಂತಹ ಮಿರಮಿರ ಮಿನುಗುವ ಡಿಸೈನ್‌ನಲ್ಲಿ ಸಿಗುತ್ತವೆ. ಇನ್ನು, ಕೆಲವು ರಬ್ಬರ್‌ಬ್ಯಾಂಡ್‌ನಂತಹ ವಿನ್ಯಾಸದಲ್ಲೂ ಲಭ್ಯ. ಬ್ಲಾಸಂ ಫ್ಲವರ್ಸ್, ಸ್ಯಾಟಿನ್‌ ಫ್ಯಾಬ್ರಿಕ್‌ನ ಪೋಲ್ಕಾ ಡಾಟ್ಸ್, ಇಯರ್‌ ಮಫ್‌ ಶೈಲಿಯವು, ಎಲ್‌ಇಡಿ ಅಥವಾ ಬ್ಯಾಟರಿ ಶೆಲ್‌ನಿಂದ ಮಿರಮಿರ ಮಿನುಗುವ ಲೈಟ್ಸ್‌ನ ಹೆಡ್‌ ಬ್ಯಾಂಡ್ಸ್, ಕ್ಯಾಂಡಿ ಕಲರ್ಸ್ ಬನ್ನಿ ಹೆಡ್‌ ಬ್ಯಾಂಡ್ಸ್, ನಾಟ್‌ ಬನ್ನಿ ಹೆಡ್‌ ಬ್ಯಾಂಡ್ಸ್, ಮಲ್ಟಿ ಕಲರ್‌ನ ಬನ್ನಿ ಬ್ಯಾಂಡ್ಸ್, ಹಾಲೋಗ್ರಾಫ್‌ನ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್‌ ಚಾಲ್ತಿಯಲ್ಲಿವೆ.

ಆನ್‌ಲೈನ್‌ನಲ್ಲಿ ಬನ್ನಿಇಯರ್ಸ್ ಹೆಡ್‌ ಬ್ಯಾಂಡ್ಸ್

ಇನ್ನು, ಆನ್‌ಲೈನ್‌ನಲ್ಲಿ ರ‍್ಯಾಬಿಟ್‌ ಅಥವಾ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್‌ಗಳ ವಿನ್ಯಾಸಗಳಿಗೆ ಬರವಿಲ್ಲ. ಮ್ಯಾಚಿಂಗ್‌ ಹೆಡ್‌ ಬ್ಯಾಂಡ್‌ನಿಂದಿಡಿದು ಚಿಣ್ಣರ ಪಾರ್ಟಿ ಹೆಡ್‌ ಬ್ಯಾಂಡ್‌ಗಳು ಲಭ್ಯ. ಆ ಮಟ್ಟಿಗೆ ಸಾಕಷ್ಟು ಆಪ್ಷನ್‌ಗಳಿವೆ ಎನ್ನುತ್ತಾರೆ ಮಾರಾಟಗಾರರು.

kids fashion

ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್ ಆಯ್ಕೆಗೆ 5 ಸಿಂಪಲ್‌ ಟಿಪ್ಸ್

  • ಪಾರ್ಟಿಗಾದಲ್ಲಿ ಆದಷ್ಟೂ ಮಿನುಗುವ ಹೆಡ್‌ ಬ್ಯಾಂಡ್ಸ್ ಆಯ್ಕೆ ಮಾಡಿ.
  • ಚಿಕ್ಕ ಮಕ್ಕಳಿಗಾದಲ್ಲಿ ಸಾಫ್ಟ್ ಫ್ಯಾಬ್ರಿಕ್‌ ಅಥವಾ ಫರ್‌ನಂತವನ್ನು ಸೆಲೆಕ್ಟ್ ಮಾಡಿ.
  • ಪುಟ್ಟ ಕಂದಮ್ಮಗಳಿಗೆ ಎಲ್‌ಇಡಿ ಲೈಟ್‌ನಂತವು ಬೇಡ. ಅದೇನಿದ್ದರೂ ಫೋಟೋಶೂಟ್‌ಗೆ ಮಾತ್ರವಿರಲಿ.
  • ಸೆಟ್‌ ಹೆಡ್‌ ಬ್ಯಾಂಡ್‌ಗಳು ದೊರೆಯುತ್ತವೆ.
  • ಕೂದಲಿಗೆ ಸಿಕ್ಕಿ ಹಾಕಿಕೊಳ್ಳದಂತಹ, ಒತ್ತದಂತಹ ಹೆಡ್‌ ಬ್ಯಾಂಡ್‌ ಆಯ್ಕೆ ನಿಮ್ಮದಾಗಿರಲಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Monsoon Rain Boots Fashion: ಮಕ್ಕಳ ಮಾನ್ಸೂನ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಬಗೆಯ ರೈನ್‌ ಬೂಟ್ಸ್

Continue Reading
Advertisement
train service
ಬೆಂಗಳೂರು2 mins ago

Train services: ಗೋಲಗುಂಬಜ್ ಎಕ್ಸ್‌ಪ್ರೆಸ್‌ ವೇಳಾಪಟ್ಟಿ ಪರಿಷ್ಕರಣೆ; ಬೆಂಗಳೂರಿನಿಂದ ವಿಶೇಷ ರೈಲುಗಳ ಓಡಾಟ

Pawan Kalyan
ದೇಶ12 mins ago

Pawan Kalyan: ವೇತನವೇ ಬೇಡ ಎಂದ ಪವನ್‌ ಕಲ್ಯಾಣ್‌- ಮತ್ತೊಮ್ಮೆ ಗಮನ ಸೆಳೆದ ಆಂಧ್ರ ಡಿಸಿಎಂ

actor darshan crazy fans
ವೈರಲ್ ನ್ಯೂಸ್16 mins ago

Actor Darshan: ದರ್ಶನ್‌ ಮೇಲಿನ ಅಂಧಾಭಿಮಾನ; ಮಗನನ್ನೇ ಕೈದಿ ಮಾಡಿದ ಹುಚ್ಚು ಫ್ಯಾನ್!

Harshika Poonacha
ಸ್ಯಾಂಡಲ್ ವುಡ್27 mins ago

Harshika Poonacha: ಮದುವೆಯಾಗಿ ವರ್ಷದೊಳಗೆ ಸಿಹಿ ಸುದ್ದಿ ಹಂಚಿಕೊಂಡ ಹರ್ಷಿಕಾ ಪೂಣಚ್ಚ–ಭುವನ್

Jasprit Bumrah
ಕ್ರೀಡೆ31 mins ago

Jasprit Bumrah: ವಿಶ್ವಕಪ್​ ಗೆದ್ದ ಖುಷಿಯಲ್ಲಿ ಜಸ್​ಪ್ರೀತ್​ ಬುಮ್ರಾಗೆ ಟ್ರೀಟ್​ ಕೊಡಿಸಿದ ಪತ್ನಿ

Virat Kohli
ಕ್ರಿಕೆಟ್1 hour ago

Virat Kohli: ನನ್ನ ​ಅಹಂಕಾರವೇ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣ ಎಂದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

crimes in karnataka physical abuse
ಕ್ರೈಂ1 hour ago

Physical Abuse: ಎಚ್‌ಐವಿ ಪೀಡಿತ ವ್ಯಕ್ತಿಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ, ಚಿನ್ನಾಭರಣ ದರೋಡೆ

Indian Origin Businessman
ವಿದೇಶ1 hour ago

Indian Origin Businessman: 8,300 ಕೋಟಿ ರೂ. ವಂಚನೆ; ಭಾರತೀಯ ಮೂಲದ ಅಮೆರಿಕದ ಉದ್ಯಮಿಗೆ ಜೈಲು

Ms Universal Petite 2024
ಕರ್ನಾಟಕ1 hour ago

Ms Universal Petite 2024: ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಕನ್ನಡತಿ, ಶಿರಸಿ ಮೂಲದ ಡಾ. ಶ್ರುತಿಗೆ ಕಿರೀಟ

Parliament Sessions
ರಾಜಕೀಯ2 hours ago

Parliament Sessions: ಲೋಕಸಭೆಯಲ್ಲಿ ಇಂದು ಮೋದಿ ಭಾಷಣ; ರಾಹುಲ್‌ ಗಾಂಧಿ ಆರೋಪಗಳಿಗೆ ಪ್ರಧಾನಿ ಉತ್ತರವೇನು? ಇಲ್ಲಿದೆ Live

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ17 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌