Shehbaz Sharif: ಆರ್ಥಿಕವಾಗಿ ಕಂಗೆಟ್ಟ ಪಾಕ್‌ನಲ್ಲೊಬ್ಬ ಮಹಾ ದಾನಿ, ಟರ್ಕಿ, ಸಿರಿಯಾಗೆ 248 ಕೋಟಿ ರೂ. ದಾನ, ಮೆಚ್ಚಿದ ಪ್ರಧಾನಿ - Vistara News

ವಿದೇಶ

Shehbaz Sharif: ಆರ್ಥಿಕವಾಗಿ ಕಂಗೆಟ್ಟ ಪಾಕ್‌ನಲ್ಲೊಬ್ಬ ಮಹಾ ದಾನಿ, ಟರ್ಕಿ, ಸಿರಿಯಾಗೆ 248 ಕೋಟಿ ರೂ. ದಾನ, ಮೆಚ್ಚಿದ ಪ್ರಧಾನಿ

Shehbaz Sharif: ಪಾಕಿಸ್ತಾನದ ಅನಾಮಧೇಯ ವ್ಯಕ್ತಿಯೊಬ್ಬರು ಭೂಕಂಪದಿಂದ ತತ್ತರಿಸಿಹೋಗಿರುವ ಟರ್ಕಿ ಹಾಗೂ ಸಿರಿಯಾಗೆ 248 ಕೋಟಿ ರೂ. ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

VISTARANEWS.COM


on

Shehbaz Sharif
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಸ್ಲಾಮಾಬಾದ್:‌ ಪಾಕಿಸ್ತಾನಕ್ಕೆ ಪಾಕಿಸ್ತಾನವೇ ಹಣಕಾಸು ಬಿಕ್ಕಟ್ಟಿನಿಂದ ಬಳಲುತ್ತಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನ ಪರದಾಡುವಂತಾಗಿದೆ. ದೇಶದ ಬಹುತೇಕ ಜನ ಜೀವನ ನಡೆಸುವುದೇ ಕಷ್ಟವಾಗಿದೆ. ತಮ್ಮ ದೇಶದ ಪರಿಸ್ಥಿತಿಯೇ ಹೀಗಿರುವಾಗ ಭೂಕಂಪದಿಂದ ನಲುಗಿಹೋಗಿರುವ ಟರ್ಕಿ ಹಾಗೂ ಸಿರಿಯಾಗೆ ಪಾಕಿಸ್ತಾನದ ವ್ಯಕ್ತಿಯೊಬ್ಬ ೨೪೮ ರೂ. (೩೦ ದಶಲಕ್ಷ ಡಾಲರ್‌) ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದಕ್ಕೆ ಪ್ರಧಾನಿ ಶೆಹಬಾಜ್‌ ಷರೀಫ್‌ (Shehbaz Sharif) ಸಂತಸ ವ್ಯಕ್ತಪಡಿಸಿದ್ದಾರೆ.

“ಅಪರಿಚಿತ ವ್ಯಕ್ತಿಯೊಬ್ಬರು ಟರ್ಕಿ ಹಾಗೂ ಸಿರಿಯಾಗೆ ೨೪೮ ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅಮೆರಿಕದಲ್ಲಿರುವ ಟರ್ಕಿ ರಾಯಭಾರ ಕಚೇರಿಯಲ್ಲಿ ಅವರು ಎರಡೂ ದೇಶಗಳ ನೆರವಿಗಾಗಿ ದೇಣಿಗೆ ನೀಡಿದ್ದಾರೆ. ಇಂತಹ ಪರೋಪಕಾರದ ನಡೆಯು ಎಲ್ಲ ವಿಕೋಪಗಳು, ಅಪಸವ್ಯಗಳನ್ನು ಮೀರಿ ಮಾನವೀಯತೆಯ ಗೆಲುವಿಗೆ ಕಾರಣವಾಗುತ್ತದೆ” ಎಂದು ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಪಾಕಿಸ್ತಾನ ಸರ್ಕಾರವು ಕೂಡ ಟರ್ಕಿ ಹಾಗೂ ಸಿರಿಯಾಗೆ ನೆರವು ನೀಡಲು ಮುಂದಾಗಿದೆ. ಸಂತ್ರಸ್ತರ ನೆರವಿಗಾಗಿ ಸರ್ಕಾರ ಕೂಡ ಸಮಿತಿ ರಚಿಸಿದೆ ಎಂದು ಶೆಹಬಾಜ್‌ ಮಾಹಿತಿ ನೀಡಿದ್ದಾರೆ. ಟರ್ಕಿ ಹಾಗೂ ಸಿರಿಯಾದಲ್ಲಿ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ ೩೪ ಸಾವಿರ ದಾಟಿದೆ.

ಇದನ್ನೂ ಓದಿ: Pakistan economic crisis : ಪಾಕಿಸ್ತಾನ 2024ರ ಮಾರ್ಚ್‌ ವೇಳೆಗೆ ದಿವಾಳಿ ಸಂಭವ : ವರದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Physical Assualt: 2 ವರ್ಷದ ಮಗುವನ್ನೇ ಲೈಂಗಿಕ ಕ್ರಿಯೆಗಾಗಿ ಮಾರಲು ಯತ್ನಿಸಿದ್ದ ದುಷ್ಟ ದಂಪತಿ ಬಂಧನ

ಎರಡು ವರ್ಷದ ಮಗಳೊಂದಿಗೆ ಲೈಂಗಿಕ ಚಟುವಟಿಕೆ ನಡೆಸಲು (Physical Assualt) ಹಣ ಪಾವತಿಸಲು ಸಿದ್ಧರಿರುವ ಪುರುಷರನ್ನು ಆನ್‌ಲೈನ್ ಚಾಟ್‌ರೂಮ್ ನಲ್ಲಿ ಹುಡುಕುತ್ತಿದ್ದ ಕ್ರಾಲಿ ಮತ್ತು ಟ್ರಿಪ್ ದಂಪತಿಯನ್ನು ಅಮೆರಿಕದಲ್ಲಿ ಜಾರ್ಜಿಯಾದ ಗ್ರೋವ್‌ಟೌನ್ ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

By

Physical Assault
Koo

ಜಾರ್ಜಿಯಾ: ಎರಡು ವರ್ಷದ ಮಗಳನ್ನು ಲೈಂಗಿಕ ಚಟುವಟಿಕೆಗಾಗಿ (Physical Assualt) ಮಾರಾಟ ಮಾಡಲು ಯತ್ನಿಸಿದ ದುಷ್ಟ ದಂಪತಿಯನ್ನು ಅಮೆರಿಕದಲ್ಲಿ (america) ಜಾರ್ಜಿಯಾದ (Georgia) ಗ್ರೋವ್‌ಟೌನ್ ಪೊಲೀಸರು ಬಂಧಿಸಿದ್ದಾರೆ. ಆಶ್ಲೀ ಕ್ರಾಲಿ (26) ಜೇಮ್ಸ್ ಟ್ರಿಪ್ (29) ಬಂಧಿತರು.

ಕ್ರಾಲಿ ಮತ್ತು ಟ್ರಿಪ್ ತಮ್ಮ 2 ವರ್ಷದ ಮಗಳೊಂದಿಗೆ ಲೈಂಗಿಕ ಚಟುವಟಿಕೆ ನಡೆಸಲು ಹಣ ಪಾವತಿಸಲು ಸಿದ್ಧರಿರುವ ಪುರುಷರನ್ನು ಹುಡುಕುತ್ತಿದ್ದರು. ಇದಕ್ಕಾಗಿ ಆನ್‌ಲೈನ್ ಚಾಟ್‌ರೂಮ್ ಅನ್ನು ಬಳಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಕ್ರಾಲಿ ಅಶ್ಲೀಲ ವಿಡಿಯೋಗಳನ್ನು ತಯಾರಿಸಿ ಅದನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದರು. ಇದರಲ್ಲಿ ಕೆಲವು ವಿಡಿಯೋಗಳು ಅಂಬೆಗಾಲಿಡುವ ಮಕ್ಕಳು ಸೇರಿದಂತೆ ಅವರ ಮಕ್ಕಳನ್ನು ಒಳಗೊಂಡಿವೆ. ಟ್ರಿಪ್ ತನ್ನ ಅಪ್ರಾಪ್ತ ವಯಸ್ಸಿನ ಸಂಬಂಧಿಗಳೊಂದಿಗೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕ್ರಾಲಿಯ ಅನುಮತಿಯನ್ನೂ ಪಡೆಯುತ್ತಿದ್ದನು.

ಇದನ್ನೂ ಓದಿ: Physical assualt : ಅಣ್ಣ ಕರೀತಾನೆ ಎಂದು ಹೇಳಿ ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್ ; ನಾಲ್ವರಿಂದ ಸಾಮೂಹಿಕ ಅತ್ಯಾಚಾರ

ಇವರ ಆರೈಕೆಯಲ್ಲಿದ್ದ ಎಲ್ಲಾ ಮಕ್ಕಳನ್ನು ಅವರ ಮನೆಯಿಂದ ಅಧಿಕಾರಿಗಳು ತ್ವರಿತವಾಗಿ ರಕ್ಷಣೆ ಮಾಡಿದ್ದಾರೆ. ಕ್ರಾಲಿ ವಿರುದ್ಧ ಮಕ್ಕಳ ಮೇಲೆ ಕಿರುಕುಳ ಮತ್ತು ಕಂಪ್ಯೂಟರ್ ಅಥವಾ ಎಲೆಕ್ಟ್ರಾನಿಕ್ ಪೋರ್ನೋಗ್ರಫಿ ಮತ್ತು 2007ರ ಮಕ್ಕಳ ಶೋಷಣೆ ಮತ್ತು ತಡೆಗಟ್ಟುವಿಕೆ ಕಾಯಿದೆಯನ್ನು ಉಲ್ಲಂಘಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ. ಟ್ರಿಪ್ ವಿರುದ್ಧ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಸದ್ಯ ಇಬ್ಬರನ್ನೂ ಕೊಲಂಬಿಯಾ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ. ತನಿಖೆ ಮುಂದುವರಿಸಲಾಗಿದ್ದು ಹೆಚ್ಚುವರಿ ಆರೋಪಗಳನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ: ಬಾಲಕಿ ಸಾವು

ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ 13 ವರ್ಷದ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿ ಮೃತಪಟ್ಟಿರುವ ಘಟನೆ ಕಲ್ಬುರ್ಗಿ ನಗರದ ಸಬ್ ಅರ್ಬನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲೈಂಗಿಕ ದೌರ್ಜನ್ಯದಿಂದ ತೀವ್ರ ರಕ್ತಸ್ರಾವ ಉಂಟಾಗಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಜ್ಜಿ ಅಂಗಡಿ ವ್ಯಾಪಾರಿ ಸರ್ಫರಾಜ್ (30) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿಯ ಮನೆಗೆ ಹೋಗಿ ಹೆದರಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ತೀವ್ರ ರಕ್ತ ಸ್ರಾವವಾಗಿ ಬಾಲಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ದಲಿತ ಸೇನೆ ಕಾರ್ಯಕರ್ತರು ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ.

Continue Reading

ವಿದೇಶ

Ex CIA Officer: ಪಾಕಿಸ್ತಾನದಲ್ಲಿ ಉಗ್ರರನ್ನು ತಾಲಿಬಾನ್ ಮೂಲಕ ಕೊಲ್ಲುತ್ತಿರುವ ಭಾರತ; ಅಮೆರಿಕ ಗುಪ್ತಚರ ಇಲಾಖೆ ಮಾಜಿ ಅಧಿಕಾರಿ ಹೇಳಿಕೆ

Ex CIA Officer: CIAನ ಮಾಜಿ ಅಧಿಕಾರಿ ಸಾರಾ ಆಡಂ ಶಾನ್‌ ರ್ಯಾನ್‌ ಶೋ ಎಂಬ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದು, ಈ ವಿಡಿಯೋವನ್ನು ಜೂ.10ರಂದು ಯೂಟ್ಯೂಬ್‌ನಲ್ಲಿ ಪ್ರಕಟಿಸಲಾಗಿತ್ತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದೆ. ಭಾರತ ತಾಲಿಬಾನ್‌ಗಳಿಗೆ 10 ಮಿಲಿಯನ್‌ ಡಾಲರ್‌ ಹಣ ನೀಡಿದೆ ಮಾತ್ರವಲ್ಲದೇ ತಾಲಿಬಾನ್‌ಗಳ ಮುಖಂಡ ಮುಲ್ಲಾ ಹಿಬಾತುಲ್ಲಾ ಅಖುಂಡಜಾದಾಗೆ ಭದ್ರತೆ ನೀಡುತ್ತಿದೆ.

VISTARANEWS.COM


on

Ex CIA Officer
Koo

ಹೊಸದಿಲ್ಲಿ: ಭಾರತ ತನ್ನ ವಿರುದ್ಧ ದುಷ್ಕೃತ್ಯ ಎಸಗುವ ಪಾಕಿಸ್ತಾನ(Pakistan) ಉಗ್ರರನ್ನು ಮಟ್ಟ ಹಾಕಲು ತಾಲಿಬಾನ್‌(Taliban)ಗಳಿಗೆ ಹಣ ನೀಡುತ್ತಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ(Ex CIA Officer) ಮಾಜಿ ಅಧಿಕಾರಿ ಎಂದು ಹೇಳಿಕೆ ನೀಡುವ ಮೂಲಕ ಬಾಂಬ್‌ ಸಿಡಿಸಿದ್ದಾರೆ. ಪಾಕಿಸ್ತಾನದಲ್ಲಿ ನೆಲೆಯೂರಿ ಕಾಶ್ಮೀರದಲ್ಲಿ ಜಿಹಾದ್‌ ಹೋರಾಟ ಮಾಡುತ್ತಿರುವ ಲಷ್ಕರ್‌-ಎ ತೊಯ್ಬಾ, ಜೈಷ್‌-ಎ-ಮೊಹಮ್ಮದ್‌, ಹಿಜ್ಬುಲ್‌ ಮುಜಾಹಿದ್ದೀನ್‌ ಮತ್ತು ಅಲ್‌ ಬದ್ರ್‌ ಮುಜಾಹಿದ್ದೀನ್‌ ಸಂಘಟನೆಗಳನ್ನು ಗುರಿಯಾಗಿ ದಾಳಿಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

CIAನ ಮಾಜಿ ಅಧಿಕಾರಿ ಸಾರಾ ಆಡಂ ಶಾನ್‌ ರ್ಯಾನ್‌ ಶೋ ಎಂಬ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದು, ಈ ವಿಡಿಯೋವನ್ನು ಜೂ.10ರಂದು ಯೂಟ್ಯೂಬ್‌ನಲ್ಲಿ ಪ್ರಕಟಿಸಲಾಗಿತ್ತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದೆ. ಭಾರತ ತಾಲಿಬಾನ್‌ಗಳಿಗೆ 10 ಮಿಲಿಯನ್‌ ಡಾಲರ್‌ ಹಣ ನೀಡಿದೆ ಮಾತ್ರವಲ್ಲದೇ ತಾಲಿಬಾನ್‌ಗಳ ಮುಖಂಡ ಮುಲ್ಲಾ ಹಿಬಾತುಲ್ಲಾ ಅಖುಂಡಜಾದಾಗೆ ಭದ್ರತೆ ನೀಡುತ್ತಿದೆ. ಆಮೂಲಕ ತನ್ನ ವಿರುದ್ಧ ಇರುವ ಉಗ್ರರನ್ನು ತಾಲಿಬಾನ್‌ ಮೂಲಕ ಕೊಲ್ಲುತ್ತಿದೆ. ಅದೂ ಅಲ್ಲದೇ ಖಲಿಸ್ತಾನಿ ಉಗ್ರರ ಸಾವಿನ ಹಿಂದೆಯೂ ಭಾರತದ ಕೈವಾಡವಿರುವ ಸಾದ್ಯತೆ ಇದೆ ಎಂದು ಹೇಳಿದ್ದಾರೆ.

ಭಾರತ ತಾಲಿಬಾನ್‌ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಲಾಹೋರ್‌, ಕರಾಚಿ ಮತ್ತು ಪಾಕಿಸ್ತಾನದ ಇತರೆ ಭಾಗಗಳಲ್ಲಿ ದಾಳಿಗಳನ್ನು ನಡೆಸುತ್ತಿದೆ.ಭಾರತ ಗುರಿಯಾಗಿಸಿರುವ ಉಗ್ರರಲ್ಲಿ ಹಲವರು ಕಳೆದ 30ವರ್ಷಗಳಿಂದ ಮೋಸ್ಟ್‌ ವಾಟೆಂಟ್‌ ಉಗ್ರಗಾಮಿಗಳಾಗಿದ್ದರು. 18 ಉಗ್ರರ ಪಟ್ಟಿಯನ್ನು ನಾನೂ ನೋಡಿದ್ದೇನೆ. ಸದ್ಯ ಅವರೆಲ್ಲಾ ಬದುಕಿದ್ದರೋ ಇಲ್ಲವೋ ತಿಳಿದಿಲ್ಲ. ಆ 18 ಉಗ್ರರು ಯಾರೆಂಬುದು ನನಗೆ ಗೊತ್ತಿದೆ. ಏಕೆಂದರೆ ಕೆಲವು ಕಾಲ ನಾನ್ ಕಾಶ್ಮೀರದಲ್ಲಿ ಕೆಲಸ ಮಾಡಿದ್ದೆ. ಆ ಎಲ್ಲರೂ ಲಷ್ಕರ್‌-ಎ ತೊಯ್ಬಾ, ಜೈಷ್‌-ಎ-ಮೊಹಮ್ಮದ್‌, ಹಿಜ್ಬುಲ್‌ ಮುಜಾಹಿದ್ದೀನ್‌ ಮತ್ತು ಅಲ್‌ ಬದ್ರ್‌ ಮುಜಾಹಿದ್ದೀನ್‌ ಸಂಘಟನೆಗೆ ಸೇರಿದವರಾಗಿದ್ದರು.

ತಾಲಿಬಾನ್‌ ಸಂಘಟನೆ ಮುಲ್ಲಾ ಯಾಕೂಬ್‌ಗೆ 10 ಮಿಲಿಯನ್‌ ಡಾಲರ್‌ ಭಾರತ ನೀಡಿತ್ತು. ಆ ಹಣ ನೇರವಾಗಿ ಗೆಕ್ಕೋ ನೆಲೆಗೆ ತಲುಪಿದೆ. ಈ ಸ್ಥಳದಲ್ಲೇ ತಾಲಿಬಾನ್‌ಗಳ ಮುಖಂಡ ಮುಲ್ಲಾ ಹಿಬಾತುಲ್ಲಾ ಅಖುಂಡಜಾದಾ ಭದ್ರತೆ ನೀಡಲಾಗುತ್ತಿದೆ. ಬಹುಷಃ ಆತನ ಭದ್ರತೆಗೆಂದೇ ಭಾರತ ಅಷ್ಟೋಂದು ಹಣವನನು ವ್ಯಯಿಸುತ್ತಿದೆ. ಇಷ್ಟೆಲ್ಲಾ ಖರ್ಚು ಮಾಡುತ್ತಿರುವ ಭಾರತ ಅದರ ಬದಲಿಗೆ ಏನಾದರೂ ನಿರೀಕ್ಷಿಸದೇ ಇರುತ್ತದೆಯೇ? ಪಾಕಿಸ್ತಾನದಲ್ಲಿರುವ ಕಾಶ್ಮೀರಿ ಉಗ್ರರನ್ನು ಹತ್ಯೆಗೆ ಭಾರತ ತಾಲಿಬಾನ್‌ಗಳನ್ನು ಬಳಸಿಕೊಳ್ಳುತ್ತಿರುವುದು ಖಚಿತ ಎಂದು ಹೇಳಿದ್ದಾರೆ.

ಇದನ್ನೂ ಓದಿ: Vikram Misri: ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ಆಯ್ಕೆ; ಚೀನಾ ವಿಷಯದಲ್ಲಿ ಇವರು ಎಕ್ಸ್‌ಪರ್ಟ್!

Continue Reading

ವಿದೇಶ

Maya Neelakantan: ಅಮೆರಿಕವನ್ನು ಹುಚ್ಚೆಬ್ಬಿಸಿದ 10 ವರ್ಷದ ಭಾರತೀಯ ಗಿಟಾರ್‌ ಬಾಲೆ ಮಾಯಾ ನೀಲಕಂಠನ್‌, ಯಾರೀಕೆ?

Maya Neelakantan: ಇದೀಗ ಅಮೆರಿಕಾದ ಹೊಸ ರಾಕ್ ಮ್ಯೂಸಿಕ್‌ ಡಾರ್ಲಿಂಗ್‌ ಆಗಿರುವ ಮಾಯಾ ನೀಲಕಂಠನ್‌ 10 ವರ್ಷದ ಗಿಟಾರ್ ಪ್ರತಿಭೆ. ರಾಕ್ ಸಂಗೀತದ ಅಸಾಧಾರಣ ಪ್ರತಿಭೆ ಮತ್ತು ಉತ್ಸಾಹವನ್ನು ಪ್ರದರ್ಶಿಸಿದ‌ ಮಾಯಾ, ಜಡ್ಜ್‌ಗಳ ಮನಗೆದ್ದರು.

VISTARANEWS.COM


on

maya neelakantan
Koo

ನ್ಯೂಯಾರ್ಕ್‌: ಭಾರತ (India) ಮೂಲದ 10 ವರ್ಷದ ಬಾಲಕಿ ಮಾಯಾ ನೀಲಕಂಠನ್ (Maya Neelakantan) ಇತ್ತೀಚೆಗೆ “ಅಮೆರಿಕಾಸ್ ಗಾಟ್ ಟ್ಯಾಲೆಂಟ್” (America’s got Talent) ಕಾರ್ಯಕ್ರಮದಲ್ಲಿ ತಮ್ಮ ಅಗಾಧ ಪ್ರತಿಭೆಯಿಂದ ನೋಡುಗರನ್ನು ಹುಚ್ಚೆಬ್ಬಿಸಿದರು. ಭಾರತೀಯ ಕ್ಲಾಸಿಕಲ್‌ (Classical) ಮತ್ತು ಪಾಪ್‌ ಫ್ಯೂಶನ್‌ (pop Fusion) ಮಾಡಿದ ನೋಟ್‌ ಅನ್ನು ಗಿಟಾರ್‌ನಲ್ಲಿ (Guitar) ನುಡಿಸಿ ಪ್ರೇಕ್ಷಕರಲ್ಲಿ ಪುಳಕ ಮೂಡಿಸಿದರು.

ಇದೀಗ ಅಮೆರಿಕಾದ ಹೊಸ ರಾಕ್ ಮ್ಯೂಸಿಕ್‌ ಡಾರ್ಲಿಂಗ್‌ ಆಗಿರುವ ಮಾಯಾ ನೀಲಕಂಠನ್‌ 10 ವರ್ಷದ ಗಿಟಾರ್ ಪ್ರತಿಭೆ. ರಾಕ್ ಸಂಗೀತದ ಅಸಾಧಾರಣ ಪ್ರತಿಭೆ ಮತ್ತು ಉತ್ಸಾಹವನ್ನು ಪ್ರದರ್ಶಿಸಿದ‌ ಮಾಯಾ, ಜಡ್ಜ್‌ಗಳ ಮನಗೆದ್ದರು. ತನ್ನ ಆಡಿಷನ್‌ಗಾಗಿ ಭಾರತದಿಂದ ಪ್ರಯಾಣಿಸಿದ ಮಾಯಾ, ಪಾಪಾ ರೋಚ್‌ನ “ಲಾಸ್ಟ್ ರೆಸಾರ್ಟ್” ಆಲ್ಬಂನ ನಿರೂಪಣೆಯೊಂದಿಗೆ ತೀರ್ಪುಗಾರರನ್ನು ಬೆರಗುಗೊಳಿಸಿದಳು. ಆತ್ಮವಿಶ್ವಾಸದಿಂದ ಗಿಟಾರ್ ನುಡಿಸಿ ರೋಮಾಂಚನಗೊಳಿಸಿದಳು.

ಮಾಯಾ ಕುಟುಂಬ ಜೊತೆಗಿದ್ದು ತೆರೆಮರೆಯಲ್ಲಿ ಅವಳನ್ನು ಹುರಿದುಂಬಿಸಿತು. ಮಾಯಾ ಕೌಶಲ್ಯ ತೀರ್ಪುಗಾರರಾದ ಸೈಮನ್ ಕೋವೆಲ್, ಸೋಫಿಯಾ ವೆರ್ಗರಾ, ಹೈಡಿ ಕ್ಲುಮ್ ಮತ್ತು ಹೋವೀ ಮ್ಯಾಂಡೆಲ್ ಅವರ ವಿಸ್ಮಯಕ್ಕೆ ಕಾರಣವಾಯಿತು. ಮಾಯಾ ತೀರ್ಪುಗಾರರು ಮತ್ತು ಪ್ರೇಕ್ಷಕರಿಂದ ಸಮಾನವಾಗಿ ಚಪ್ಪಾಳೆಗಳನ್ನು ಪಡೆದರು. ಈಗಾಗಲೇ ಎಲ್ಲಾ ಸೋಶಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಮಾಯಾ ಗಿಟಾರ್‌ ನುಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ವೀಡಿಯೊ ಲಕ್ಷಾಂತರ ವೀಕ್ಷಣೆಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಪಡೆದಿದೆ.

“ಭಾರತೀಯ ಉಡುಗೆ ಧರಿಸಿ ರಾಕ್ ಸಂಗೀತ ನುಡಿಸಿದ ನಿಮ್ಮ ಬಗ್ಗೆ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ನೀವು ನಿಜವಾಗಿಯೂ ಆಶೀರ್ವದಿಸಲ್ಪಟ್ಟಿದ್ದೀರಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಮ್ಮ ಪ್ರತಿಭೆಗೆ ಯಾವುದೇ ಮಿತಿಯಿಲ್ಲ” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಟೂಲ್, ಮೆಟಾಲಿಕಾ ಮತ್ತು ಸ್ಲೇಯರ್ ಅವರ ಹಾಡುಗಳನ್ನು ಒಳಗೊಂಡಿರುವ ನೀಲಕಂಠನ್ ಅವರ ರಾಕ್ ಮತ್ತು ಗಿಟಾರ್‌ ನುಡಿಸುವಿಕೆಗಳು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯಗೊಳಿಸಿವೆ. 2022ರಲ್ಲಿ ಅವರು ಗಿಟಾರ್ ವಾದಕ ಆಡಮ್ ಜೋನ್ಸ್ ಅವರ “7ಎಂಪೆಸ್ಟ್” ನಿರೂಪಣೆಯೊಂದಿಗೆ ಪ್ರಭಾವಿಸಿದರು. ಮಾಯಾ ನೀಲಕಂಠನ್ ತನ್ನ ಇನ್ನೊಬ್ಬ ಗಿಟಾರ್‌ ಐಕಾನ್‌ ಗ್ಯಾರಿ ಹಾಲ್ಟ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಅವರಿಂದ ಉಡುಗೊರೆ ಪಡೆದಿದ್ದಾಳೆ. ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಆಕೆ ಆತನನ್ನು ಭೇಟಿಯಾದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾಳೆ. ಅವನ ಸಂಗ್ರಹದಿಂದ ಗಿಟಾರ್ ಅನ್ನು ಉಡುಗೊರೆಯಾಗಿ ಸ್ವೀಕರಿಸಿದಳು.

ಚಿಕ್ಕ ವಯಸ್ಸಿನಿಂದಲೇ ಸಂಗೀತದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡ ನೀಲಕಂಠನ್, ಥ್ರಾಶ್ ಮೆಟಲ್, ಟೂಲ್ ಹಾಡುಗಳು ಮತ್ತು ಭಾರತೀಯ ಶಾಸ್ತ್ರೀಯ ಕರ್ನಾಟಕ ಸಂಗೀತವನ್ನು ನುಡಿಸುತ್ತಾಳೆ. ಹಲವಾರು ಸಂದರ್ಭಗಳಲ್ಲಿ ನೇರ ಪ್ರದರ್ಶನ ನೀಡಿದ್ದಾಳೆ. ಕೇವಲ ಐದು ವರ್ಷದವಳಾಗಿದ್ದಾಗ ಆಕೆ ಆಟಿಕೆ ಗಿಟಾರ್ ನುಡಿಸುತ್ತಾ ಮನೆಯಲ್ಲಿ ನೃತ್ಯ ಮಾಡುತ್ತಿದ್ದಳಂತೆ. ಇದೇ ಆಸಕ್ತಿ ಆಕೆಯನ್ನು ನುರಿತ ಗಿಟಾರ್ ವಾದಕನಾಗಲು ಅವಳನ್ನು ಪ್ರೇರೇಪಿಸಿತು.

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ನೀಲಕಂಠನ್ ಅವರ ವೀಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವಳನ್ನು “ದೇವತೆಗಳ ಭೂಮಿಯಿಂದ ಬಂದ ರಾಕ್ ದೇವತೆ” ಎಂದು ಉಲ್ಲೇಖಿಸಿದ್ದಾರೆ. ಮಹೀಂದ್ರಾ ಗ್ರೂಪ್ ಪ್ರತಿ ವರ್ಷ ಮುಂಬೈನಲ್ಲಿ ಆಯೋಜಿಸುವ ಮಹೀಂದ್ರಾ ಬ್ಲೂಸ್ ಫೆಸ್ಟಿವಲ್‌ನಲ್ಲಿ ಈಕೆ ಕಾರ್ಯಕ್ರಮ ನೀಡಲು ಅರ್ಹಳು ಎಂದು ಮಹೀಂದ್ರಾ ಹೇಳಿದ್ದಾರೆ.

ಇದನ್ನೂ ಓದಿ: Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

Continue Reading

ವಿದೇಶ

Physical relationship: ಕೈದಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದ ಮಹಿಳಾ ಜೈಲಾಧಿಕಾರಿ ಬಗ್ಗೆ ಶಾಕಿಂಗ್‌ ವಿಚಾರ ಬಯಲು

Physical relationship: ಎಕ್ಸ್‌ನಲ್ಲಿ ಭಾರೀ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿರುವ ಜೈಲಿನ ಸಿಬ್ಬಂದಿ ಅಲ್ಲಿನ ಕೈದಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ. ಇದನ್ನು ಅದೇ ಕೋಣೆಯಲ್ಲಿದ್ದ ಮತ್ತೊರ್ವ ಖೈದಿ ತನ್ನ ಮೊಬೈಲ್‌ನಲ್ಲಿ ಶೂಟ್‌ ಮಾಡಿಕೊಂಡಿದ್ದಾನೆ.

VISTARANEWS.COM


on

Physical relationship
Koo

ಲಂಡನ್‌: ಜೈಲಿನ ಮಹಿಳಾ ಸಿಬ್ಬಂದಿ ಕೈದಿಯ ಜೊತೆ ಲೈಂಗಿಕ ಕ್ರಿಯೆ(Physical relationship) ನಡೆಸಿರುವ ಶಾಕಿಂಗ್‌ ಘಟನೆ ಇಂಗ್ಲೆಂಡ್‌ನ ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದ್ದಂತೆ ಈ ಮಹಿಳಾ ಪೊಲೀಸ್‌ ಸಿಬ್ಬಂದಿ ಯಾರು ಎಂಬ ಬಗ್ಗೆ ಶಾಕಿಂಗ್‌ ವಿಚಾರವೊಂದು ಬಯಲಾಗಿದೆ. ಹಾಗಿದ್ದರೆ ಈ ಕೃತ್ಯ ಎಸಗಿರುವ ಈ ಮಹಿಳೆ ಯಾರು? ಇಲ್ಲಿದೆ ಸಂಪೂರ್ಣ ವರದಿ.

ಜೈಲಿನಲ್ಲಿ ಖೈದಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಕೆಯ ಹೆಸರು ಲಿಂಡಾ ಡಿ ಸೋಜಾ. 31ವರ್ಷದ ಈಕೆ ದಕ್ಷಿಣ ಲಂಡನ್‌ನಲ್ಲಿರುವ ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲಿ ಜೈಲಿನಲ್ಲಿ ಅಧಿಕಾರಿಯಾಗಿದ್ದಳು. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಆಕೆ ತಕ್ಷಣ ಕೆಲಸಕ್ಕೆ ರಾಜೀನಾಮೆ ನೀಡಿದ್ದಾಳೆ. ಲಿಂಡಾಳ ಸಹೋದರಿ ಆಂಡ್ರೈನಾ ಪ್ರತಿಕ್ರಿಯಿಸಿದ್ದು, ಲಿಂಡಾ ಮತ್ತು ಪತಿ ನಾತನ್‌ 2023ರ ʼಓಪನ್ ಹೌಸ್: ದಿ ಗ್ರೇಟ್ ಸೆಕ್ಸ್ ಎಕ್ಸ್‌ಪರಿಮೆಂಟ್ʼ ಎಂಬ ಟಿವಿ ಶೋ ಸ್ಪರ್ಧಿಗಳಾಗಿದ್ದರು. ಅದೂ ಅಲ್ಲದೇ ಆಕೆ ಅಡಲ್ಡ್‌ ವಿಡಿಯೋ ಫ್ಲ್ಯಾಟ್‌ಫಾರ್ಮ್‌ನಲ್ಲಿ ಸೀಕ್ರೆಟ್‌ ಅಕೌಂಟನ್ನೂ ಹೊಂದಿದ್ದಾಳೆ ಎಂದು ಹೇಳಿದ್ದಾಳೆ.

ವೈರಲ್‌ ಆಗಿರುವ ವಿಡಿಯೋದಲ್ಲೇನಿದೆ?

ಎಕ್ಸ್‌ನಲ್ಲಿ ಭಾರೀ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿರುವ ಜೈಲಿನ ಸಿಬ್ಬಂದಿ ಅಲ್ಲಿನ ಕೈದಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ. ಇದನ್ನು ಅದೇ ಕೋಣೆಯಲ್ಲಿದ್ದ ಮತ್ತೊರ್ವ ಖೈದಿ ತನ್ನ ಮೊಬೈಲ್‌ನಲ್ಲಿ ಶೂಟ್‌ ಮಾಡಿಕೊಂಡಿದ್ದಾನೆ. ಕೈಯಲ್ಲಿ ಸಿಗರೇಟ್‌ ಹಿಡಿದು ವಿಡಿಯೋ ಮಾಡುತ್ತಿರುವ ಆ ವ್ಯಕ್ತಿ ” ಹಾಯ್‌.. ನಾವು ಇವತ್ತು ಇತಿಹಾಸ ಸೃಷ್ಟಿಸಿದ್ದೇವೆ. ನಾನು ಹೇಳುತ್ತಿರುವುದು ಇದೇ ವಿಚಾರವನ್ನು ಎಂದು ಹೇಳುತ್ತಾ ಕ್ಯಾಮೆರಾವನ್ನು ತಿರುಗಿಸುತ್ತಾನೆ. ಅಲ್ಲಿ ಜೈಲಿನ ಸಿಬ್ಬಂದಿ ಮತ್ತು ಕೈದಿ ಲೈಂಗಿಕ ಚಟುವಟಿಕೆಯಲ್ಲಿ ಭಾಗಿರುವುದನ್ನು ಕಾಣಬಹುದಾಗಿದೆ. ಅದೂ ಅಲ್ಲೇ ಇದ್ದ ಬೆಡ್‌ ಮೇಲೆ ಕೈದಿಗಳ ಬಟ್ಟೆ ಬಿದ್ದಿರುವುದನ್ನು ಕಾಣಬಹುದಾಗಿದೆ.

ಇನ್ನು ಇದೇ ಸಂದರ್ಭದಲ್ಲಿ ಮತ್ತೊರ್ವ ಖೈದಿ ಸೆಲ್‌ ಒಳಗೆ ಬರಲು ಯತ್ನಿಸುತ್ತಾರೆ. ಆಗ ವಿಡಿಯೋ ಮಾಡುತ್ತಿದ್ದವನು “ಸ್ವಲ್ಪ ಹೊತ್ತು ಇರು” ಅಂತಾನೆ. ಆಮೇಲೆ ಕ್ಯಾಮೆರಾವನ್ನು ಸುತ್ತ ತಿರುಗಿಸುತ್ತಾ “ಇದು ವಾಂಡ್‌ವರ್ಥ್‌ ಜೈಲು” ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಈ ಘಟನೆ ಬಗ್ಗೆ ಲಂಡನ್‌ ಪೊಲೀಸರು ಪ್ರತಿಕ್ರಿಯಿಸಿದ್ದು, ಇದು ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲೆ ನಡೆದಿರುವ ಘಟನೆ ಎಂಬುದು ಸ್ಪಷ್ಟವಾಗಿದೆ. ಕೇಸ್‌ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೆ ಯಾವುದೇ ಬಂಧನವಾಗಿಲ್ಲ. ಕಾನೂನು ಸಚಿವಾಲಯದ ಜೊತೆಗೂ ಮಾತುಕತೆ ನಡೆದಿದೆ ಎಂದು ಹೇಳಿದ್ದಾರೆ.

HMP ಜೈಲು ಸೇವೆಯ ವಕ್ತಾರರು ಮಾತನಾಡಿ, ಘಟನೆಯು ಇತ್ತೀಚೆಗೆ ಸಂಭವಿಸಿದೆ ಎಂದು ಭಾವಿಸಲಾಗಿದೆ, ಮಹಿಳಾ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸಿಬ್ಬಂದಿ ಭ್ರಷ್ಟಾಚಾರವನ್ನು ಸಹಿಸಲಾಗುವುದಿಲ್ಲ ಮತ್ತು ಈ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಜೈಲು ಅಧಿಕಾರಿಯ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ:Prajwal Revanna Case: ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್‌; ಬಂಧಿಸದಂತೆ ಹೈಕೋರ್ಟ್ ಆದೇಶ

Continue Reading
Advertisement
shubham milk price hike
ಪ್ರಮುಖ ಸುದ್ದಿ11 seconds ago

Milk Price Hike: ಹಾಲಿನ ದರ 4 ರೂ. ಹೆಚ್ಚಳ? ಶುಭಂ ಗೋಲ್ಡ್‌ ದರ ಏರಿಕೆ

irat Kohli's Heartfelt Tribute to Anushka Sharma
ಕ್ರಿಕೆಟ್8 mins ago

Virat Kohli: ಈ ಗೆಲುವು ನನ್ನದಷ್ಟೇ ಅಲ್ಲ, ನಿನ್ನದು ಕೂಡ ಎಂದು ಪತ್ನಿಗೆ ಪ್ರೀತಿ ವ್ಯಕ್ತಪಡಿಸಿದ ವಿರಾಟ್‌ ಕೊಹ್ಲಿ!

Birla Opus
ವಾಣಿಜ್ಯ19 mins ago

Birla Opus: ಬಿರ್ಲಾ ಪೇಂಟ್ ಜಾಹೀರಾತು ನಿಮಗೂ ಇಷ್ಟ ಆಗಿರಬೇಕಲ್ಲವೇ? ಇದರ ಸಂದೇಶ ಏನು? ಹಿನ್ನೆಲೆ ಏನು? ಕುತೂಹಲಕರ ಮಾಹಿತಿ

Kalki 2898 AD Prabhas Film Hits Jackpot 500 Cr WW In Opening
ಟಾಲಿವುಡ್33 mins ago

Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಕಂಡ ʻಕಲ್ಕಿʼ: ಪ್ರಭಾಸ್‌ ಅಬ್ಬರಕ್ಕೆ ಬಾಕ್ಸ್ ಆಫೀಸ್‌ ಧೂಳೀಪಟ!

hosur airport
ಪ್ರಮುಖ ಸುದ್ದಿ38 mins ago

Hosur Airport: ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಹೊಣೆ ಬಿಐಎಎಲ್‌ಗೆ! ಕರ್ನಾಟಕಕ್ಕೆ ಟಕ್ಕರ್‌ ಕೊಟ್ಟ ತಮಿಳುನಾಡು

Healthy Foods For Kidney
ಆರೋಗ್ಯ58 mins ago

Healthy Foods For Kidney: ನಮ್ಮ ಕಿಡ್ನಿ ಆರೋಗ್ಯವಾಗಿರಲು ಈ ಆಹಾರ ಸೇವನೆ ಸೂಕ್ತ

bengal assault case
ಕ್ರೈಂ1 hour ago

Assault Case: ಜೋಡಿಗೆ ಥಳಿತ; ʼಇದು ಮುಸ್ಲಿಂ ರಾಷ್ಟ್ರ…ʼ ಎಂದ ತೃಣಮೂಲ ಶಾಸಕ

karnataka Weather Forecast
ಮಳೆ2 hours ago

Karnataka Weather : ಸಾಧಾರಣದಿಂದ ಭಾರಿ ಮಳೆ ಸಾಧ್ಯತೆ; ಕರಾವಳಿ-ಮಲೆನಾಡಿಗೆ ಎಚ್ಚರಿಕೆ

Vastu Tips
ಧಾರ್ಮಿಕ3 hours ago

Vastu Tips: ಮನೆಯ ದ್ವಾರದಲ್ಲಿ ಗಣೇಶನ ವಿಗ್ರಹ ಇಡುವುದು ಸರಿಯೇ?

Bengaluru-Mysuru highway
ಕರ್ನಾಟಕ3 hours ago

Bangalore–Mysore Expressway : ಇಂದಿನಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ಮಾರ್ಟ್‌ ಟ್ರಾಫಿಕ್‌ ಸಿಸ್ಟಂ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ15 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು20 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌