Viral Video : ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಮ್ಮನನ್ನು ತಬ್ಬಿಕೊಂಡ ಮರಿ ಕೋತಿ; ಇದು ಕರುಳು ಹಿಂಡುವ ವಿಡಿಯೊ - Vistara News

ವೈರಲ್ ನ್ಯೂಸ್

Viral Video : ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಮ್ಮನನ್ನು ತಬ್ಬಿಕೊಂಡ ಮರಿ ಕೋತಿ; ಇದು ಕರುಳು ಹಿಂಡುವ ವಿಡಿಯೊ

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಯನ್ನು ಅದರ ಮರಿಯು ಎಬ್ಬಿಸುವುದಕ್ಕೆ ಯತ್ನಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಸ್ತೆ ಅಪಘಾತಗಳಲ್ಲಿ ಹೆಚ್ಚು ಬಲಿಯಾಗುವುದೆಂದರೆ ಅದು ಪ್ರಾಣಿಗಳು. ಪ್ರಾಣಿಗಳಿಗೆ ವಾಹನದಿಂದ ಡಿಕ್ಕಿ ಹೊಡೆಸಿ, ಅದನ್ನು ತಿರುಗಿಯೂ ನೋಡದೆ ಹೋಗುವ ಕೆಟ್ಟ ಮನಸ್ಥಿತಿಗೆ ಮಾನವರು ತಲುಪಿಬಿಟ್ಟಿದ್ದಾರೆ. ಅದೇ ರೀತಿ ಅಪಘಾತವಾಗಿ ಸಾವನ್ನಪ್ಪಿದ ಕೋತಿಯೊಂದನ್ನು ಅದರ ಮರಿ ತಬ್ಬಿಕೊಂಡು ಎಬ್ಬಿಸಲು ಯತ್ನಿಸುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಕರುಳು ಹಿಂಡುವಂತಿರುವ ಆ ವಿಡಿಯೊ ವೈರಲ್ (Viral Video) ಆಗಿದೆ.

ಇದನ್ನೂ ಓದಿ: Viral Video : ಅಳುತ್ತಲೇ ವರದಿ ಮಾಡಿದ ಪತ್ರಕರ್ತೆ; ಕ್ಷಮಿಸಿ ಬಿಡಿ ಎಂದು ಕೇಳಿಕೊಂಡ ವಿಡಿಯೊ ವೈರಲ್
ಈ ವಿಡಿಯೊ ಅಸ್ಸಾಂನದ್ದು ಎನ್ನಲಾಗಿದೆ. ಅರಣ್ಯ ಅಧಿಕಾರಿಯಾಗಿರುವ ಸುಶಾಂತ್ ನಂದ ಅವರು ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೋತಿಯೊಂದು ರಸ್ತೆ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದೆ. ಅದರ ಮರಿಯು ತಾಯಿಯನ್ನು ತಬ್ಬಿ ಹಿಡಿದುಕೊಳ್ಳುತ್ತಿದೆ. ಮುಖವನ್ನು ಹಿಡಿದುಕೊಳ್ಳುತ್ತಿದೆ. ಸುತ್ತಲೂ ನಿಂತ ಜನರನ್ನು ಕಂಡು ಭಯಗೊಂಡು, “ಅಮ್ಮಾ, ಎದ್ದೇಳು ಹೋಗೋಣ” ಎನ್ನುವಂತೆ ಕೂಗುತ್ತಿದೆ.


ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅನೇಕರು ವಿಡಿಯೊವನ್ನು ತಮ್ಮ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. “ಕಣ್ಣೀರು ತರಿಸುವ ವಿಡಿಯೊ” ಎಂದು ಕಮೆಂಟ್ ಮಾಡಲಾರಂಭಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಏಕಾಏಕಿ ಕುಸಿದು ಸಾವನ್ನಪ್ಪಿದ ಮೆಡಿಕಲ್ ಸಿಬ್ಬಂದಿ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯ ಸ್ತಂಭನದಿಂದ ಹಠಾತ್ ಸಾವನ್ನಪ್ಪಿದ್ದು, ಇದರ ದೃಶ್ಯ ಮೆಡಿಕಲ್ ಸ್ಟೋರ್ ನ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಇದನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ಹೈದರಾಬಾದ್‌: ಮೆಡಿಕಲ್ ಸ್ಟೋರ್‌ನಲ್ಲಿ (medical store) ಕೆಲಸ ಮಾಡುತ್ತಿದ್ದ 37 ವರ್ಷದ ವ್ಯಕ್ತಿಯೊಬ್ಬರು ಹೃದಯ ಸ್ತಂಭನದಿಂದ (cardiac arrest) ಹಠಾತ್ ಸಾವನ್ನಪ್ಪಿರುವ ಘಟನೆ ಮೇ 5ರಂದು ಹೈದರಾಬಾದ್‌ನ (Hyderabad) ಮೇಡ್ಚಲ್ ಮಲ್ಕಾಜ್‌ಗಿರಿ ಜಿಲ್ಲೆಯ ಕೀಸರ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪಳ್ಳಿಯ ಸತ್ಯನಾರಾಯಣ ಕಾಲೋನಿಯಲ್ಲಿ ನಡೆದಿದೆ. ಇದರ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮೆಡಿಕಲ್ ಸ್ಟೋರ್‌ನ ಸಿಸಿಟಿವಿ ದೃಶ್ಯದಲ್ಲಿ ಮೆಡಿಕಲ್ ಸ್ಟೋರ್ ನ ಬಿಲ್ಲಿಂಗ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಮುರಳಿ ಎಂಬಾತ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಸಮೀಪದಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ಆಘಾತದಿಂದ ಆತನತ್ತ ಧಾವಿಸಿ ಆತನನ್ನು ಬದುಕಿಸಲು ಯತ್ನಿಸಿದ. ಆದರೂ ಪ್ರಯೋಜನವಾಗಲಿಲ್ಲ.

ಈ ಹಿಂದೆಯೂ ತೆಲಂಗಾಣದಲ್ಲಿ ಇದೇ ರೀತಿಯ ಹೃದಯ ಸ್ತಂಭನದ ಘಟನೆಗಳು ವರದಿಯಾಗಿವೆ. ಕಳೆದ ವರ್ಷ ಮೇಡ್ಚಲ್‌ನಲ್ಲಿ ಮನೆಯಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿಯೊಬ್ಬರು ಹೃದಯ ಸ್ತಂಭನಕ್ಕೆ ಬಲಿಯಾಗಿದ್ದರು. ಅದಕ್ಕೂ ಮುನ್ನ ಸಿಎಂಆರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದ.


ಹಠಾತ್ ಮತ್ತು ಅನಿರೀಕ್ಷಿತವಾಗಿರುವ ಈ ಘಟನೆಗಳ ಬಗ್ಗೆ ಅನೇಕರು ಆಶ್ಚರ್ಯ ಪಡುವಂತೆ ಮಾಡಿದೆ. ಇದಕ್ಕೆ ಕಾರಣವಾಗುವ ನಿರ್ದಿಷ್ಟ ಅಂಶಗಳನ್ನು ನಿರ್ಧರಿಸಲು ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ಮಾಡುವುದು ಅತ್ಯಗತ್ಯವಾದರೂ, ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸಲು ಆರೋಗ್ಯ ಪರಿಸ್ಥಿತಿ ಅಥವಾ ಜೀವನಶೈಲಿಯ ಅಂಶಗಳು ಕಾರಣ ಎನ್ನುತ್ತಾರೆ ತಜ್ಞರು.

ಮಕ್ಕಳ ಎದುರೇ ತಂದೆಯ ಸಾವು

ಮೂವರು ಚಿಕ್ಕ ಮಕ್ಕಳ ಎದುರೇ ತಂದೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನ ಕ್ಲಬ್‌ನಲ್ಲಿ ನಡೆದಿದ್ದು, ಇದರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮೀರತ್‌ನ ಜೈದಿ ಫಾರ್ಮ್‌ನ ನಿವಾಸಿ ಅರ್ಷದ್ (25) ಹತ್ಯೆಯಾದ ವ್ಯಕ್ತಿ. ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳು ಮತ್ತು ಮಗನೊಂದಿಗೆ ಮೀರತ್‌ನ ಕ್ಲಬ್‌ಗೆ ಬಂದಿದ್ದಾಗ ಈ ಘಟನೆ ನಡೆದಿತ್ತು.

ಇದನ್ನೂ ಓದಿ: K Annamalai: ಮೇಕೆಯ ತಲೆಗೆ ಅಣ್ಣಾಮಲೈ ಫೋಟೊ ಅಂಟಿಸಿ ಕಡಿದ ಡಿಎಂಕೆ ಕಾರ್ಯಕರ್ತರು!

ಲೋಹಿಯಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ಅರ್ಷದ್ ಮಕ್ಕಳೊಂದಿಗೆ ಭದಾನದಲ್ಲಿರುವ ಕ್ಲಬ್‌ನ ಈಜುಕೊಳಕ್ಕೆ ತೆರಳಿದ್ದರು. ಜನರಿಂದ ತುಂಬಿದ್ದ ಕ್ಲಬ್‌ನಲ್ಲಿ ಅರ್ಷದ್ ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಗಲೇ ಈ ಘಟನೆ ನಡೆದಿದೆ. ಈ ಘಟನೆ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಅರ್ಷದ್ ತನ್ನ ಫೋನ್ ಅನ್ನು ನೋಡುತ್ತಿದ್ದಂತೆ ಒಬ್ಬ ವ್ಯಕ್ತಿ ಅವರನ್ನು ಜನರ ಗುಂಪಿನಿಂದ ಪ್ರತ್ಯೇಕಿಸಲು ಪ್ರಯತ್ನಿಸಿದ್ದು, ಕೂಡಲೇ ಆತನ ಮೇಲೆ ಗುಂಡಿನ ದಾಳಿ ನಡೆದಿದೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಆರೋಪಿಗಳು ಅರ್ಷದ್ ಅವರ ತಲೆಗೆ ಅತಿ ಸಮೀಪದಿಂದ ಪಾಯಿಂಟ್ ಬ್ಲಾಂಕ್ ರೇಂಜ್‌ ನಲ್ಲಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಹಳೆ ವೈಷಮ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.

Continue Reading

ವೈರಲ್ ನ್ಯೂಸ್

K Annamalai: ಮೇಕೆಯ ತಲೆಗೆ ಅಣ್ಣಾಮಲೈ ಫೋಟೊ ಅಂಟಿಸಿ ಕಡಿದ ಡಿಎಂಕೆ ಕಾರ್ಯಕರ್ತರು!

K Annamalai: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಕೊಯಮತ್ತೂರು (Coimbatore) ಕ್ಷೇತ್ರದಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ (K Annamalai) ಕಣಕ್ಕೆ ಇಳಿದು ಕಾರ್ಯಕರ್ತರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದರು. ಪ್ರಬಲ ಪೈಪೋಟಿ ಒಡ್ಡಿದ್ದ ಅವರು ಕೊನೆಗೆ ಡಿಎಂಕೆಯ ಗಣಪತಿ ಪಿ. ರಾಜ್‌ಕುಮಾರ್ ವಿರುದ್ಧ ಸೋಲು ಕಂಡಿದ್ದರು. ಇದೀಗ ಡಿಎಂಕೆ ಕಾರ್ಯಕರ್ತರು ವಿಜಯೋತ್ಸವ ಆಚರಿಸುವ ವೇಳೆ ಅಣ್ಣಾಮಲೈ ವಿರುದ್ಧ ಅತಿರೇಕದ ವರ್ತನೆ ತೋರಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

VISTARANEWS.COM


on

K Annamalai
Koo

ಚೆನ್ನೈ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಕೊಯಮತ್ತೂರು (Coimbatore) ಕ್ಷೇತ್ರದಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ (K Annamalai) ಕಣಕ್ಕೆ ಇಳಿದು ಕಾರ್ಯಕರ್ತರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದರು. ಪ್ರಬಲ ಪೈಪೋಟಿ ಒಡ್ಡಿದ್ದ ಅವರು ಕೊನೆಗೆ ಡಿಎಂಕೆಯ ಗಣಪತಿ ಪಿ. ರಾಜ್‌ಕುಮಾರ್ ವಿರುದ್ಧ ಸೋಲು ಕಂಡಿದ್ದರು. ಇದೀಗ ಡಿಎಂಕೆ ಕಾರ್ಯಕರ್ತರು ವಿಜಯೋತ್ಸವ ಆಚರಿಸುವ ವೇಳೆ ಅಣ್ಣಾಮಲೈ ವಿರುದ್ಧ ಅತಿರೇಕದ ವರ್ತನೆ ತೋರಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video). ಜತೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಡಿಎಂಕೆ ಕಾರ್ಯಕರ್ತರು ಮೇಕೆಯ ತಲೆಗೆ ಅಣ್ಣಾಮಲೆ ಅವರ ಫೋಟೊ ತೂಗು ಹಾಕಿ ಬಳಿಕ ಅದರ ತಲೆ ಕಡಿಯುವ ವಿಡಿಯೊ ಇದಾಗಿದ್ದು, ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ರಸ್ತೆಯಲ್ಲಿ ನೆತ್ತರು ಚೆಲ್ಲಿದ್ದು, ವಿಕೃತಿ ಮೆರೆದ ಡಿಎಂಕೆ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಅದೊಂದು ಜನನಿಬಿಡ ರಸ್ತೆ. ಅಲ್ಲಿ ಡಿಎಂಕೆ ಕಾರ್ಯಕರ್ತರೆಲ್ಲ ಗುಂಪುಗೂಡಿದ್ದಾರೆ. ಇವರ ಮಧ್ಯೆ ಮೇಕೆಯೊಂದಿದೆ. ಮೇಕೆಯ ಕುತ್ತಿಗೆಗೆ ಅಣ್ಣಾಮಲೈ ಅವರ ಫೋಟೊವನ್ನು ತೂಗು ಹಾಕಲಾಗಿದೆ. ಬಳಿಕ ಓರ್ವ ಮೇಕೆಯ ಹಿಂದಿನ ಕಾಲನ್ನು ಹಿಡಿದುಕೊಳ್ಳುತ್ತಾನೆ. ಲುಂಗಿ ಸುತ್ತಿಕೊಂಡಿದ್ದ ಓರ್ವ ಕತ್ತಿ ಹಿಡಿದು ಬಳಿಗೆ ಬಂದು ಮೇಕೆಯ ಕತ್ತು ಕಡಿಯುತ್ತಾನೆ. ರಕ್ತ ರಸ್ತೆಯ ಮೇಲೆ ಚೆಲ್ಲುತ್ತದೆ. ಇಷ್ಟಕ್ಕೇ ಸುಮ್ಮನಾಗದ ಡಿಎಂಕೆ ಕಾರ್ಯಕರ್ತರು ಅಣ್ಣಾಮಲೈ ಅವರ ಫೋಟೊವನ್ನು ರಕ್ತದಲ್ಲಿ ಅದ್ದುತ್ತಾರೆ. ಜತೆಗೆ ʼʼಅಣ್ಣಾಮಲೈ ಮೇಕೆ ಬಲಿ” ಎಂದು ಘೋಷಣೆ ಕೂಗುತ್ತಾರೆ.

ಐಎಸ್‌ಐಎಸ್‌ ರೀತಿಯ ಶೈಲಿ

ಸದ್ಯ ಈ ವಿಡಿಯೊ ದೇಶಾದ್ಯಂತ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಈ ವಿಡಿಯೊ ಹಂಚಿಕೊಂಡು ʼಐಸಿಸ್ ಶೈಲಿಯ ದ್ವೇಷʼ ಎಂದು ಕರೆದಿದ್ದಾರೆ. ʼʼಇದು ಐಸಿಸ್ ಮಾದರಿಯ ದ್ವೇಷ ಸಾಧನೆ. ಕೊಯಮತ್ತೂರಿನಲ್ಲಿ ತಮ್ಮ ವಿಜಯವನ್ನು ಆಚರಿಸಲು ಡಿಎಂಕೆ ಕಾರ್ಯಕರ್ತರು ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಅಣ್ಣಾಮಲೈ ಅವರ ಫೋಟೊ ಇರುವ ಮೇಕೆಯನ್ನು ಕೊಂದು ವಿಕೃತಿ ಮೆರೆದಿದ್ದಾರೆ. ಅಣ್ಣಾಮಲೈ ಒಬ್ಬ ರೈತನ ಮಗ ಮತ್ತು ಅವರ ಕುಟುಂಬವು ಮೇಕೆಗಳನ್ನು ಸಾಕುತ್ತದೆ. ಈ ಹಿಂದೆ ಮೇಕೆ ಸಾಕಣೆಯ ಬಗ್ಗೆ ಅಣ್ಣಾಮಲೈ ಅವರನ್ನು ಡಿಎಂಕೆ ಅಪಹಾಸ್ಯ ಮಾಡಿತ್ತು. ಇದೀಗ ಸಂವಿಧಾನ ಉಳಿಸಿ ಎಂದು ಕೂಗುವ ಗುಂಪು ನಿಶ್ಯಬ್ದವಾಗಿದೆʼʼ ಎಂದು ಅವರು ಬರೆದುಕೊಂಡಿದ್ದಾರೆ.

ಈ ವಿಡಿಯೊಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, “ಸನಾತನ ಧರ್ಮ ವಿರೋಧಿ ಇಂಡಿ ಮೈತ್ರಿಕೂಟವು ಎಂದಾದರೂ ಅಧಿಕಾರಕ್ಕೆ ಬಂದರೆ ಹಿಂದೂಗಳನ್ನು ಈ ರೀತಿ ಹತ್ಯೆ ಮಾಡುತ್ತದೆ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿದ ಆಘಾತದಿಂದ ಇನ್ನೂ ಹಲವರು ಹೊರ ಬಂದಿಲ್ಲ. ʼʼಈ ರೀತಿಯ ವರ್ತನೆಯನ್ನು ನೀವು ಸಮರ್ಥಿಸುತ್ತೀರಾ?ʼʼ ಎಂದು ಒಬ್ಬರು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮತ್ತು ತಮಿಳುನಾಡು ಪೊಲೀಸರನ್ನು ಟ್ಯಾಗ್‌ ಮಾಡಿ ಪ್ರಶ್ನಿಸಿದ್ದಾರೆ. ʼʼರೋಗಗ್ರಸ್ಥ ರಾಜ್ಯʼʼ ಎಂದು ಇನ್ನೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಮಕ್ಕಳ ಎದುರೇ ತಂದೆಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

Continue Reading

ವೈರಲ್ ನ್ಯೂಸ್

Viral Video: ಹೃದಯ ಸ್ತಬ್ಧಗೊಳಿಸುವ ಈ 3ಡಿ ದೃಶ್ಯ ನೋಡಿ! ಇನ್ನಾದರು ಸುರಕ್ಷಿತವಾಗಿ ವಾಹನ ಚಲಾಯಿಸಿ

3ಡಿ ಕಲಾವಿದ ಮಜಿದ್ ಮೌಸವಿ ಅವರ ಕೈ ಚಳಕದಿಂದ ನಿರ್ಮಾಣವಾಗಿರುವ ಸುರಕ್ಷಿತ ವಾಹನ ಚಾಲನೆ ಬಗ್ಗೆ ಎಚ್ಚರಿಕೆ ನೀಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, (Viral Video) ವೀಕ್ಷಕರ ಹೃದಯ ಸ್ತಬ್ದಗೊಳಿಸುವಂತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಜಾಗೃತಗೊಳಿಸುವಂತೆ ಮಾಡಿದೆ ಮಾತ್ರವಲ್ಲದೇ ಸಾಕಷ್ಟು ಚರ್ಚೆಯನ್ನೂ ಹುಟ್ಟು ಹಾಕಿದೆ.

VISTARANEWS.COM


on

By

Viral Video
Koo

ಕಲ್ಪನೆ ಮತ್ತು ವಾಸ್ತವವನ್ನು ಸೇರಿಸಿ ಮಾಡುವ ಆಕರ್ಷಕ ವಿಡಿಯೋಗಳಿಗೆ (video) ಹೆಸರುವಾಸಿಯಾಗಿರುವ ಪ್ರತಿಭಾವಂತ 3ಡಿ ಕಲಾವಿದ (3D artist) ಮಜಿದ್ ಮೌಸವಿ (Majid Mousavi) ಇದೀಗ ಮತ್ತೊಂದು ವಿಡಿಯೋವೊಂದನ್ನು (Viral Video) ಸಾಮಾಜಿಕ ಜಾಲತಾಣದಲ್ಲಿ (social media) ಹಾಕಿದ್ದು, ಇದು ಸಾಕಷ್ಟು ಮಂದಿಯ ಗಮನ ಸೆಳೆದಿದೆ.

ಅವರ ಇತ್ತೀಚಿನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಜಾಗೃತಗೊಳಿಸುವಂತೆ ಮಾಡಿದೆ ಮಾತ್ರವಲ್ಲದೇ ಸಾಕಷ್ಟು ಚರ್ಚೆಯನ್ನೂ ಹುಟ್ಟು ಹಾಕಿದೆ.

ವಿಡಿಯೋದಲ್ಲಿ ಏನಿದೆ?

ಈ ವಿಡಿಯೋ ನೆಟ್ಟಿಗರನ್ನು ಚಿಂತೆಗೀಡು ಮಾಡುವಂತೆ ಮಾಡಿರುವುದು ಮಾತ್ರವಲ್ಲ ಜಾಗೃತಿಯನ್ನೂ ಮೂಡಿಸಿದೆ. ವಾಹನ ಚಾಲನೆ ಮಾಡುವಾಗ ವೇಗದ ಮಿತಿಗಳನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಅವರು ಈ ವಿಡಿಯೋ ಮೂಲಕ ಹೇಳಿದ್ದಾರೆ.

ಅಜಾಗರೂಕ ಚಾಲನೆಯ ಪರಿಣಾಮಗಳ ಕುರಿತು ಹೇಳುವ ಈ ವಿಡಿಯೋದಲ್ಲಿ ಖಾಲಿ ರಸ್ತೆಯಲ್ಲಿ ಬೈಕರ್ ವೇಗವಾಗಿ ವಾಹನ ಚಲಾಯಿಸುವುದನ್ನು ತೋರಿಸುತ್ತದೆ.

ಒಬ್ಬ ಬೈಕ್ ಸವಾರ ಟ್ರಕ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಾನೆ. ಆಗ ಅವನು ರಸ್ತೆಯ ಇನ್ನೊಂದು ಬದಿಗೆ ಚಲಿಸುತ್ತಾನೆ ಮತ್ತು ವೇಗವಾಗಿ ಬರುವ ಟ್ರಕ್‌ ಗೆ ಡಿಕ್ಕಿಯಾಗುತ್ತಾನೆ. ಅಲ್ಲಿಗೆ ಒಂದು ವಿಡಿಯೋ ಕ್ಲಿಪ್ ನಿಲ್ಲುತ್ತದೆ.

ಮುಂದಿನ ಶಾಟ್‌ನಲ್ಲಿ ರಸ್ತೆ ಬದಿಯಲ್ಲಿ ನಿಂತಿರುವ ಭೂತದ ಆಕೃತಿಯನ್ನು ಕಾಣಬಹುದು. ವಿಡಿಯೋದಲ್ಲಿ ಬೈಕರ್ ಮತ್ತು ಟ್ರಕ್ ಡ್ರೈವರ್ ನಡುವಿನ ಅಪಘಾತವನ್ನು ತೋರಿಸಲಾಗಿದೆ.


ಈ ಪೋಸ್ಟ್ ಅನ್ನು ಒಂದು ವಾರದ ಹಿಂದೆ ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಬಳಿಕ ಇದು 156 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಪೋಸ್ಟ್ 11 ಮಿಲಿಯನ್ ಲೈಕ್‌ಗಳನ್ನು ಪಡೆದಿದ್ದು, ಇದರ ಸಂಖ್ಯೆಗಳು ಹೆಚ್ಚುತ್ತಿವೆ. ಕೆಲವರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Rahul Dravid: ಸುದ್ದಿಗೋಷ್ಠಿಯಲ್ಲಿ ಉರ್ದು ಮಾತನಾಡಿದ ರಾಹುಲ್​ ದ್ರಾವಿಡ್​; ವಿಡಿಯೊ ವೈರಲ್​

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿ, ಓ ದೇವರೇ. ನಾನು ತುಂಬಾ ಹೆದರುತ್ತಿದ್ದೆ. ನಾನು ಬೈಕ್ ಓಡಿಸುತ್ತಿದ್ದೇನೆ ಎಂದು ಭಾವಿಸಿದೆ ಮತ್ತು ಸಣ್ಣ ಹೃದಯಾಘಾತವಾದಂತಾಯಿತು ಎಂದು ಹೇಳಿದ್ದಾನೆ.

ಇನ್ನೊಬ್ಬ, ನನ್ನ ಆತ್ಮವು ನನ್ನ ದೇಹವನ್ನು ತೊರೆದಿದೆ! ಅದ್ಭುತ ಎಡಿಟಿಂಗ್ ಎಂದು ಹೇಳಿದ್ದಾರೆ.

ಮತ್ತೊಬ್ಬ, ಹಾಗಾಗಿಯೇ ರಸ್ತೆಗಳಲ್ಲಿ ಜಾಗರೂಕರಾಗಿರಬೇಕು. ಅದು ಖಾಲಿಯಾಗಿರುವುದರಿಂದ ಅಜಾಗರೂಕರಾಗಿರಬೇಕೆಂದು ಅರ್ಥವಲ್ಲ ಎಂದು ತಿಳಿಸಿದ್ದಾರೆ. ಇನ್ನೊಬ್ಬರು ಇದು ಆಟ ಎಂದು ಹೇಳುವವರಿಗೆ ಇದು ನಿಜ ಜೀವನದಲ್ಲಿಯೂ ನಡೆಯುತ್ತದೆ. ಜಾಗರೂಕರಾಗಿರಿ ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಇದು ನನಗೆ ಹೃದಯಾಘಾತವನ್ನು ನೀಡಿತು ಎಂದು ಹೇಳಿದ್ದಾರೆ.

Continue Reading

ಕ್ರೀಡೆ

Rahul Dravid: ಸುದ್ದಿಗೋಷ್ಠಿಯಲ್ಲಿ ಉರ್ದು ಮಾತನಾಡಿದ ರಾಹುಲ್​ ದ್ರಾವಿಡ್​; ವಿಡಿಯೊ ವೈರಲ್​

Rahul Dravid: ಟಿ20 ವಿಶ್ವಕಪ್​ ಟೂರ್ನಿ ಬಳಿಕ ರಾಹುಲ್​ ದ್ರಾವಿಡ್​ ಅವರು ಭಾರತ ತಂಡದ ಕೋಚ್​ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈಗಾಗಲೇ ಅವರು ತಮ್ಮ ಈ ನಿರ್ಧಾರವನ್ನು ಕೂಡ ಪ್ರಕಟಿಸಿದ್ದಾರೆ. ದ್ರಾವಿಡ್ ನವೆಂಬರ್ 2021ರಲ್ಲಿ ಭಾರತ ತಂಡದ ಕೋಚ್ ಆಗಿ ಆಯ್ಕೆಯಾದರು.

VISTARANEWS.COM


on

Rahul Dravid
Koo

ನ್ಯೂಯಾರ್ಕ್​: ಟೀಮ್​ ಇಂಡಿಯಾ ಇಂದು(ಬುಧವಾರ) ಐರ್ಲೆಂಡ್(India vs Ireland)​ ವಿರುದ್ಧ ತನ್ನ ಮೊದಲ ಟಿ20 ವಿಶ್ವಕಪ್(T20 World Cup 2024)​ ಪಂದ್ಯವನ್ನಾಡಲಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಮುಖ್ಯ ಕೋಚ್(head coach Rahul Dravid)​ ರಾಹುಲ್ ದ್ರಾವಿಡ್(Rahul Dravid)​ ಅವರು ಉರ್ದುವಿನಲ್ಲಿ(Dravid Speaks Urdu) ಮಾತನಾಡಿ ಎಲ್ಲರನ್ನು ಅಚ್ಚರಿ ಪಡುವಂತೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದ್ರಾವಿಡ್​ ತಮ್ಮ ತಂಡದ ತಯಾರಿಯ ಬಗ್ಗೆ ಮಾತನಾಡುವ ವೇಳೆಯಲ್ಲಿ ಉರ್ದು ಭಾಷೆಯಲ್ಲಿಯೂ ಮಾತನಾಡಿದರು. ‘ಈ ಸ್ವರೂಪದ ಕ್ರಿಕೆಟ್​ನಲ್ಲಿ ಯಾರನ್ನೂ ಕಡೆಗಣಿಸಲು ಅಥವಾ ಯಾರನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಉರ್ದುವಿನಲ್ಲಿ ಹೇಳಿ ಜೋರಾಗಿ ನಕ್ಕಿದ್ದಾರೆ. ಜತೆಗೆ ವೆಲ್​ ಡನ್​ ರಾಹುಲ್​ ಎಂದು ಸ್ವತಃ ತಮ್ಮನ್ನು ತಾವೇ ಪ್ರಶಂಶಿಸಿದ್ದಾರೆ. ಈ ವೇಳೆ ಸುದ್ದಿಗೋಷ್ಠಿಯಲ್ಲಿದ್ದ ಪತ್ರಕರ್ತರು ಕೂಡ ಜೋರಾಗಿ ನಗಾಡಿದ್ದಾರೆ. ದ್ರಾವಿಡ್ ಉರ್ದುವಿನಲ್ಲಿ ಮಾತನಾಡಿದ ವಿಡಿಯೊ ವೈರಲ್(viral video)​ ಆಗಿದೆ.

ಇದನ್ನೂ ಓದಿ Rahul Dravid: ಕೋಚ್ ಹುದ್ದೆಯಲ್ಲಿ ಮುಂದುವರಿಯಲ್ಲ; ಅಧಿಕೃತ ಹೇಳಿಕೆ ನೀಡಿದ ದ್ರಾವಿಡ್


ಟಿ20 ವಿಶ್ವಕಪ್​ ಟೂರ್ನಿ ಬಳಿಕ ರಾಹುಲ್​ ದ್ರಾವಿಡ್​ ಅವರು ಭಾರತ ತಂಡದ ಕೋಚ್​ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈಗಾಗಲೇ ಅವರು ತಮ್ಮ ಈ ನಿರ್ಧಾರವನ್ನು ಕೂಡ ಪ್ರಕಟಿಸಿದ್ದಾರೆ. ದ್ರಾವಿಡ್ ನವೆಂಬರ್ 2021ರಲ್ಲಿ ಭಾರತ ತಂಡದ ಕೋಚ್ ಆಗಿ ಆಯ್ಕೆಯಾದರು. ದ್ರಾವಿಡ್ ಕೋಚ್​ ಆದಾಗ ಅವರ ಮೇಲೆ ಅತಿಯಾದ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ಅವರ ಕೋಚಿಂಗ್​ ಅವಧಿಯಲ್ಲಿ ಕಂಡು ಬರಲಿಲ್ಲ. ಹೀಗಾಗಿ ಅವರ ಕೋಚಿಂಗ್​ ಬಗ್ಗೆ ಹಲವು ಟೀಕೆಗಳು ಕೂಡ ವ್ಯಕ್ತವಾಗಿತ್ತು. ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಹೆಡ್ ಕೋಚ್ ಆದ ಬಳಿಕ ನಿರೀಕ್ಷಿತ ಯಶಸ್ಸು ತಂಡಕ್ಕೆ ಸಿಕ್ಕಿಲ್ಲ. ಅಂಡರ್​-19 ಕ್ರಿಕೆಟ್​ ಮಾರ್ಗದರ್ಶನದಲ್ಲಿ ಅವರಿಗೆ ಸಿಕ್ಕಷ್ಟು ಯಶಸ್ಸು ಸೀನಿಯರ್ಸ್‌ ತಂಡದಲ್ಲಿ ಸಿಗಲಿಲ್ಲ.

ದ್ರಾವಿಡ್​ಗೆ ಟೀಮ್​ ಇಂಡಿಯಾದ ಕೋಚಿಂಗ್​ ಬಗ್ಗೆ ಮೊದಲಿನಿಂದಲೇ ಆಸಕ್ತಿ ಇರಲಿಲ್ಲ. ಆದರೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಅಂದಿನ ಅಧ್ಯಕ್ಷ ಸೌರವ್ ಗಂಗೂಲಿ ಅವರ ಒತ್ತಾಯದ ಮೇರೆಗೆ ದ್ರಾವಿಡ್​ ಕೋಚ್​ ಹುದ್ದೆ ವಹಿಸಿಕೊಂಡಿದ್ದರು. ಕೊನೆಯ ಬಾರಿಗೆ ಕೋಚಿಂಗ್​ ನಡೆಸುತ್ತಿರುವ ದ್ರಾವಿಡ್​ ಟಿ20 ವಿಶ್ವಕಪ್​ನಲ್ಲಾದರೂ ಕಪ್​ ಗೆದ್ದು ಗೆಲುವಿನ ವಿದಾಯ ಸಿಗಲಿ ಎನ್ನುವುದು ಕ್ರಿಕೆಟ್​ ಅಭಿಮಾನಿಗಳ ಆಶಯ.

Continue Reading
Advertisement
T 20 Wordl Cup
ಕ್ರೀಡೆ1 hour ago

T20 World Cup : ಕ್ರಿಕೆಟ್​ ಕೂಸು ಅಮೆರಿಕ ತಂಡದ ವಿರುದ್ಧ ಸೋತ ಪಾಕಿಸ್ತಾನ

Stock Market Crash
ಪ್ರಮುಖ ಸುದ್ದಿ5 hours ago

Stock Market Crash : ವಿದೇಶಿ ಹೂಡಿಕೆಗಳು ಬರದಂತೆ ರಾಹುಲ್ ಗಾಂಧಿ ಪಿತೂರಿ ಮಾಡುತ್ತಿದ್ದಾರೆ; ಬಿಜೆಪಿಯಿಂದ ತಿರುಗೇಟು

sunil chhetri
ಪ್ರಮುಖ ಸುದ್ದಿ5 hours ago

Sunil Chhetri : ಕಣ್ಣೀರು ಹಾಕುತ್ತಲೇ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಡಿ ವಿದಾಯ ಹೇಳಿದ ಸುನಿಲ್​ ಛೆಟ್ರಿ

Shri Bhandara Keri Mutt Shri Vidyesh Theertha Swamiji ashirvachan
ಕರ್ನಾಟಕ5 hours ago

Mysore News: ಅಧ್ಯಯನದಲ್ಲಿ ಆನಂದ ಕಾಣುವವರು ಮಾತ್ರ ಉನ್ನತ ಮಟ್ಟದ ಜ್ಞಾನಾರ್ಜನೆ ಮಾಡಲು ಸಾಧ್ಯ: ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ

Gadag News
ಕರ್ನಾಟಕ6 hours ago

Gadag News : ಕ್ಷುಲ್ಲಕ ಕಾರಣಕ್ಕೆ ಗಲಾಟೆ, ಮನೆಗಳಿಗೆ ನುಗ್ಗಿ ದೊಣ್ಣೆ, ಬಡಿಗೆಗಳಿಂದ ಹಲ್ಲೆ

Rain News
ಕರ್ನಾಟಕ6 hours ago

Rain News: ಪ್ರತ್ಯೇಕ ಮಳೆ ಅವಘಡ; ಸಿಡಿಲು ಬಡಿದು ಬಾಲಕ, ಮಹಿಳೆ ದುರ್ಮರಣ

Disciplinary action if cases of mother and child deaths recur DC Diwakar warns
ಆರೋಗ್ಯ7 hours ago

Vijayanagara News: ತಾಯಿ, ಶಿಶು ಮರಣ ಪ್ರಕರಣ ಮರುಕಳಿಸಿದರೆ ಶಿಸ್ತು ಕ್ರಮ: ಡಿಸಿ ದಿವಾಕರ್

BJP State Spokesperson Hariprakash konemane pressmeet at yallapura
ಕರ್ನಾಟಕ7 hours ago

Uttara Kannada News: ಉ.ಕ ಜಿಲ್ಲೆ ಬಿಜೆಪಿಯ ಗಟ್ಟಿನೆಲ ಎಂಬುದು ಮತ್ತೊಮ್ಮೆ ಸಾಬೀತು: ಹರಿಪ್ರಕಾಶ್‌ ಕೋಣೆಮನೆ

Trekking tragedy
ಬೆಂಗಳೂರು7 hours ago

Trekking Tragedy: ಉತ್ತರಾಖಂಡ ಚಾರಣ ದುರಂತದಲ್ಲಿ ಪಾರಾದ 13 ಚಾರಣಿಗರು ಬೆಂಗಳೂರಿಗೆ ವಾಪಸ್

Unemployment Rate
ಪ್ರಮುಖ ಸುದ್ದಿ7 hours ago

Unemployment Rate : ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಒಂದೇ ವರ್ಷದಲ್ಲಿ ಶೇಕಡಾ 4 ಇಳಿಕೆ; ವರದಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ16 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌