Uttunga cooperative society: ಉತ್ತುಂಗ ಸೌಹಾರ್ದ ಪತ್ತಿನ ಸಹಕಾರಿ ಸಂಘದಿಂದ ವಿಸ್ತಾರ ನ್ಯೂಸ್‌ ಚೇರ್ಮನ್‌, ಎಂಡಿ ಎಚ್‌.ವಿ. ಧರ್ಮೇಶ್‌ಗೆ ಸನ್ಮಾನ - Vistara News

ಕರ್ನಾಟಕ

Uttunga cooperative society: ಉತ್ತುಂಗ ಸೌಹಾರ್ದ ಪತ್ತಿನ ಸಹಕಾರಿ ಸಂಘದಿಂದ ವಿಸ್ತಾರ ನ್ಯೂಸ್‌ ಚೇರ್ಮನ್‌, ಎಂಡಿ ಎಚ್‌.ವಿ. ಧರ್ಮೇಶ್‌ಗೆ ಸನ್ಮಾನ

Uttunga cooperative society: ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ನಲ್ಲಿ ಉತ್ತುಂಗ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ವತಿಯಿಂದ ವಿಸ್ತಾರ ನ್ಯೂಸ್ ಚೇರ್ಮನ್‌, ವ್ಯವಸ್ಥಾಪಕ ನಿರ್ದೇಶಕರಾದ ಧರ್ಮೇಶ್ ಅವರನ್ನು ಮಂಗಳವಾರ ಸನ್ಮಾನಿಸಲಾಯಿತು.

VISTARANEWS.COM


on

Vistara News MD HV Dharmesh felicitated by Uttunga Cooperative Society
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಗರದ ವಿಲ್ಸನ್‌ ಗಾರ್ಡನ್‌ನ ಉತ್ತುಂಗ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ (Uttunga cooperative society) ವತಿಯಿಂದ ವಿಸ್ತಾರ ನ್ಯೂಸ್ ಚೇರ್ಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್‌ ವಿ ಧರ್ಮೇಶ್ ಅವರನ್ನು ಮಂಗಳವಾರ ಸನ್ಮಾನಿಸಲಾಯಿತು. ಸಂಘದಿಂದ ಪ್ರತಿವರ್ಷ ಒಬ್ಬರು ಸಾಧಕರನ್ನು ಪರಿಚಯಿಸುವ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷದ ವಾರ್ಷಿಕ ಸಭೆಗೆ ಮುಖ್ಯ ಅತಿಥಿಗಳಾಗಿ ಧರ್ಮೇಶ್ ಅವರನ್ನು ಕರೆಸಿ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಉತ್ತುಂಗ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ವೇಣುಗೋಪಾಲ್, ಧರ್ಮೇಶ್ ಅವರು ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ವಿಸ್ತಾರ ನ್ಯೂಸ್ ಚಾನೆಲ್ ಮೂಲಕ ವಿಭಿನ್ನ ಕಾರ್ಯಕ್ರಮ ನೀಡುತ್ತಿರುವ ಇವರು‌ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿರುವುದು ಸಂತಸ ತಂದಿದೆ ಎಂದರು.

ಇದನ್ನೂ ಓದಿ | Technology : ತಂತ್ರಜ್ಞಾನದ ಬಳಕೆಯಿಂದ ಭಾರತ 2047ಕ್ಕೆ ಅಭಿವೃದ್ಧಿ ಹೊಂದಿದ ದೇಶ: ಪ್ರಧಾನಿ ಮೋದಿ

ವಿಸ್ತಾರ ನ್ಯೂಸ್ ಚಾನೆಲ್ ಚೇರ್ಮನ್‌ ಮತ್ತು ಎಂ.ಡಿ. ಧರ್ಮೇಶ್‌ ಮಾತನಾಡಿ, ಉತ್ತುಂಗ ಸೌಹಾರ್ದ ಪತ್ತಿನ ಸಹಕಾರ ಸಂಘದ ಕೆಲಸವು ಹೀಗೆ ಮುಂದುವರಿಯಲಿ. ನಮ್ಮಿಂದ ಎಲ್ಲ ರೀತಿಯ ಸಹಕಾರ ಸದಾ ಇರುತ್ತದೆ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉತ್ತುಂಗ ಸೌಹಾರ್ದ ಪತ್ತಿನ ಸದಸ್ಯರು, ಬಲಿಜ ಸಮುದಾಯದ ಮುಖಂಡರು ಸೇರಿ ಹಲವರು ಭಾಗಿಯಾಗಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Prajwal Revanna : ಸೆಕ್ಸ್​ ಸ್ಕ್ಯಾಂಡಲ್​ ಆರೋಪಿ ಪ್ರಜ್ವಲ್​ ನೋಡಲು ನೂಕುನುಗ್ಗಲು!

Prajwal Revanna : ಕೇವಲ ಹಾಸನ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ದೇಶವೇ ಕಂಡ ಅತ್ಯಂತ ದೊಡ್ಡ ಸೆಕ್ಸ್​ ಸ್ಕ್ಯಾಂಡಲ್​ನ ಆರೋಪಿ ಎನಿಸಿಕೊಂಡರು. ಹೀಗಾಗಿ ಪ್ರಜ್ವಲ್ ಅವರ ಬಗ್ಗೆ ಜನರ ಕೌತುಕ ಹೆಚ್ಚಾಗಿತ್ತು. ಅದು ಕೋರ್ಟ್​ ಆವರಣದಲ್ಲಿ ಪ್ರಕಟಗೊಂಡಿತು.

VISTARANEWS.COM


on

Prajwal Revanna
Koo

ಬೆಂಗಳೂರು : ಪೆನ್​ಡ್ರೈವ್​ ಸೆಕ್ಸ್​ ಸ್ಕ್ಯಾಂಡಲ್​ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ನೋಡುವುದಕ್ಕಾಗಿ ಬೆಂಗಳೂರಿನ ಎಸಿಎಮ್​ಎಮ್​ ಕೋರ್ಟ್​ (ACMM) ಬಳಿ ನೂಕು ನುಗ್ಗಲು ಉಂಟಾಗಿತ್ತು. ಪ್ರಜ್ವಲ್ ಅವರದ್ದು ಎನ್ನಲಾದ ವಿಡಿಯೊಗಳನ್ನು ಕದ್ದು ಮುಚ್ಚಿ ನೋಡಿ ಚರ್ಚಿಸಿದ್ದ ಮಂದಿಯೆಲ್ಲ ಈ ಬಾರಿ ಕೋರ್ಟ್​ ಆವರಣದಲ್ಲಿ ನಿಂತು ಅವರನ್ನು ನೋಡಲು ಮುಗಿ ಬಿದ್ದರು. ವಕೀಲರು ಹಾಗೂ ಜೆಡಿಎಸ್​ ಹಾಗೂ ಪ್ರಜ್ವಲ್ ಅವರ ಅಭಿಮಾನಿಗಳೂ ಈ ವೇಳೆ ಕೋರ್ಟ್​ ಆವರಣದಲ್ಲಿ ಜಮಾಯಿಸಿದ್ದರು ಎಂದು ಹೇಳಲಾಗಿದೆ.

ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೊಗಳ ಪೆನ್​ಡ್ರೈವ್​ ಚುನಾವಣೆ ವೇಳೆ ಹಾಸನ, ಮಂಡ್ಯ ಹಾಗೂ ಬೆಂಗಳೂರಿನ ಕೆಲವು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ದೊರಕಿದ್ದವು. ಬಳಿಕ ಅದು ಡಿಜಿಟಲ್ ರೂಪ ಪಡೆದ ಎಲ್ಲೆಡೆ ಮೊಬೈಲ್ ಮೂಲಕ ಪ್ರಸರಣಗೊಂಡಿದ್ದವು. ಅಲ್ಲಿಯ ತನಕ ಕೇವಲ ಹಾಸನ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ದೇಶವೇ ಕಂಡ ಅತ್ಯಂತ ದೊಡ್ಡ ಸೆಕ್ಸ್​ ಸ್ಕ್ಯಾಂಡಲ್​ನ ಆರೋಪಿ ಎನಿಸಿಕೊಂಡರು. ಹೀಗಾಗಿ ಪ್ರಜ್ವಲ್ ಅವರ ಬಗ್ಗೆ ಜನರ ಕೌತುಕ ಹೆಚ್ಚಾಗಿತ್ತು. ಅದು ಕೋರ್ಟ್​ ಆವರಣದಲ್ಲಿ ಪ್ರಕಟಗೊಂಡಿತು.

ಪ್ರಜ್ವಲ್​ ರೇವಣ್ಣ ಏಪ್ರಿಲ್​ 26ರಂದು ಜರ್ಮನಿಗೆ ಹಾರಿದ ಬಳಿಕದಿಂದ 33 ದಿನಗಳ ಕಾಲ ಅಲ್ಲೇ ಉಳಿದುಕೊಂಡಿದ್ದರು. ಅಂತೆಯೇ ಗುರುವಾರ ರಾತ್ರಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿಂದ ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಕೋರ್ಟ್​ಗೆ ಹಾಜರುಪಡಿಸಿದ್ದರು.

ಇದನ್ನೂ ಓದಿ: Prajwal Revanna : ನನ್ನ ತೇಜೋವಧೆಯಾಗಿದೆ; ಪ್ರತಿ ದೂರು ನೀಡಲು ಪ್ರಜ್ವಲ್ ರೇವಣ್ಣ ಸಿದ್ಧತೆ

ಪ್ರಜ್ವಲ್​ ರೇವಣ್ಣ ಕೋರ್ಟ್​ಗೆ ಬರುತ್ತಾರೆ ಎಂದು ತಿಳಿದ ತಕ್ಷಣ ಜನರ ಕುತೂಹಲ ಹೆಚ್ಚಾಯಿತು. ತಕ್ಷಣ ಅಭಿಮಾನಿಗಳು, ಕುತೂಹಲಿಗರು ಹಾಗೂ ವಕೀಲರ ದಂಡು ಜಮಾಯಿಸಿತ್ತು. ಗಂಟೆಗಟ್ಟಲೆ ಕಾದ ಅವರೆಲ್ಲರೂ ಪ್ರಜ್ವಲ್ ಅವರನ್ನು ಪೊಲೀಸ್​ ಜೀಪ್​ನಲ್ಲಿ ಕರೆ ತರುವ ವೇಳೆ ಎದ್ದು ನೋಡಿದರು.

ಜಡ್ಜ್‌ ಎದುರು ಕೈಕಟ್ಟಿ ನಿಂತ ಪ್ರಜ್ವಲ್‌ ರೇವಣ್ಣ; ಎಂಥ ಸ್ಥಿತಿ!

ಬೆಂಗಳೂರು: ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಸುಮಾರು 35 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ (Prajwal Revanna Case) ಭಾರತಕ್ಕೆ ಬಂದಿದ್ದು, ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನು, ಶುಕ್ರವಾರ (ಮೇ 31) ಮಧ್ಯಾಹ್ನ ಪ್ರಜ್ವಲ್‌ ರೇವಣ್ಣ ಅವರನ್ನು ಬೆಂಗಳೂರಿನ (Bengaluru) 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬರೀ ಅನ್ನ-ಸಾಂಬಾರ್‌ ಸೇವಿಸಿ ನ್ಯಾಯಾಧೀಶರ ಎದುರು ಕೈಕಟ್ಟಿ ನಿಂತರು.

ಎಸ್‌ಐಟಿ ಪರ ಹಿರಿಯ ವಕೀಲ, ಎಸ್‌ಪಿಪಿ ಅಶೋಕ್‌ ನಾಯ್ಕ್‌ ವಾದ ಮಂಡಿಸಿದರು. ಬಟ್ಟೆ ಬಿಚ್ಚಿಸುವುದಕ್ಕೂ, ಬಲವಂತ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ವಿಡಿಯೊ ರೆಕಾರ್ಡ್‌ ಮಾಡುವಾಗ ಮುಖ ಮರೆಮಾಚಲಾಗಿದೆ. ಆದರೆ, ಇದು ಅವರೇ ಅಂತ ಕೆಲ ಸಾಕ್ಷ್ಯಗಳಿವೆ. ವಿದೇಶದಲ್ಲಿ ಅರೆಸ್ಟ್‌ ಆಗುತ್ತೇನೆ ಅಂತ ಈಗ ದೇಶಕ್ಕೆ ಬಂದಿದ್ದಾರೆ. ಸಂತ್ರಸ್ತೆಯರ ಮೇಲೆ ಬಲ ಪ್ರಯೋಗವಾಗಿದೆ. ಹೆದರಿಸಿ ಕಿರುಕುಳ ನೀಡಿದ್ದಾರೆ. ಹಾಗಾಗಿ, ಪ್ರಜ್ವಲ್‌ ರೇವಣ್ಣ ಅವರನ್ನು 15 ದಿನ ಎಸ್‌ಐಟಿ ಕಸ್ಟಡಿಗೆ ನೀಡಬೇಕು ಎಂಬುದಾಗಿ ತಿಳಿಸಿದರು.

Continue Reading

ಕರ್ನಾಟಕ

Prajwal Revanna Case: ಪ್ರಜ್ವಲ್‌ಗೆ ಎಸ್‌ಐಟಿ ಕಸ್ಟಡಿ ಖಚಿತ; ಆರೋಪಿ ಪರ-ವಿರೋಧ ವಾದ ಹೀಗಿತ್ತು

Prajwal Revanna Case: ಎಸ್‌ಐಟಿ ಪರ ಹಿರಿಯ ವಕೀಲ, ಎಸ್‌ಪಿಪಿ ಅಶೋಕ್‌ ನಾಯ್ಕ್‌ ಹಾಗೂ ಪ್ರಜ್ವಲ್‌ ರೇವಣ್ಣ ಪರ ವಕೀಲ ಅರುಣ್‌ ವಾದ ಮಂಡಿಸಿದರು. ಎಸ್‌ಐಟಿ ಕಸ್ಟಡಿಗೆ ನೀಡಬೇಕು ಎಂಬುದಾಗಿ ಅಶೋಕ್‌ ನಾಯ್ಕ್‌, ಜಾಮೀನು ನೀಡಬಹುದು ಎಂದು ಅರುಣ್‌ ವಾದ ಮಂಡಿಸಿದರು. ಇವರಿಬ್ಬರ ವಾದ-ಪ್ರತಿವಾದ ಹೇಗಿತ್ತು? ಸಂಕ್ಷಿಪ್ತ ವರದಿ ಇಲ್ಲಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದ ಭೀತಿಯಿಂದ 35 ದಿನಗಳಿಂದ ವಿದೇಶದಿಂದ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ (Prajwal Revanna Case) ಬೆಂಗಳೂರಿಗೆ ವಾಪಸಾಗಿದ್ದು, ಎಸ್‌ಐಟಿ ಅಧಿಕಾರಿಗಳು ಅವರನ್ನು 42ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಎಸ್‌ಐಟಿ ಪರ ಹಿರಿಯ ವಕೀಲ, ಎಸ್‌ಪಿಪಿ ಅಶೋಕ್‌ ನಾಯ್ಕ್‌ ಹಾಗೂ ಪ್ರಜ್ವಲ್‌ ರೇವಣ್ಣ ಪರ ವಕೀಲ ಅರುಣ್‌ ವಾದ ಮಂಡಿಸಿದರು. ಎಸ್‌ಐಟಿ ಕಸ್ಟಡಿಗೆ ನೀಡಬೇಕು ಎಂಬುದಾಗಿ ಅಶೋಕ್‌ ನಾಯ್ಕ್‌, ಜಾಮೀನು ನೀಡಬಹುದು ಎಂದು ಅರುಣ್‌ ವಾದ ಮಂಡಿಸಿದರು. ಇವರಿಬ್ಬರ ವಾದ-ಪ್ರತಿವಾದ ಹೀಗಿದೆ…

“ಸಂತ್ರಸ್ತೆಯರ ಮೇಲೆ ಪ್ರಜ್ವಲ್‌ ರೇವಣ್ಣ ಬಲ ಪ್ರಯೋಗ ಮಾಡಿದ್ದಾರೆ. ಸಂತ್ರಸ್ತೆಯರನ್ನು ಹೆದರಿಸಿ, ಬೆದರಿಸಿ ಕಿರುಕುಳ ನೀಡಿದ್ದಾರೆ. ಬಟ್ಟೆ ಬಿಚ್ಚಿಸುವುದಕ್ಕೂ ಬಲವಂತ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ಯಾವುದೇ ವಿಡಿಯೊಗಳಲ್ಲೂ ಮುಖ ಕಾಣದಂತೆ ರೆಕಾರ್ಡ್ ಮಾಡಲಾಗಿದೆ. ಆದರೆ, ಅವರು ಪ್ರಜ್ವಲ್‌ ಎಂಬುದಕ್ಕೆ ಸಾಕ್ಷ್ಯಗಳಿವೆ. ಇದರಿಂದಾಗಿ ಪ್ರಜ್ವಲ್‌ ರೇವಣ್ಣ ಅವರನ್ನು ವಿಚಾರಣೆ ನಡೆಸುವ ಅವಶ್ಯಕತೆ ಇದೆ. ಹಾಗಾಗಿ, ಅವರನ್ನು 15 ದಿನ ಎಸ್‌ಐಟಿ ಕಸ್ಟಡಿಗೆ ವಹಿಸಬೇಕು” ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಇದೇ ವೇಳೆ, ಪ್ರಕರಣದ ಮೆರಿಟ್ ಮೇಲೆ ವಾದ ಮಂಡಿಸಿ ಎಂದು ಕೋರ್ಟ್‌ ಅಶೋಕ್‌ ನಾಯ್ಕ್‌ ಅವರಿಗೆ ಸೂಚಿಸಿದರು. ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಜಡ್ಜ್ ಕೆ.ಎನ್‌.ಶಿವಕುಮಾರ್ ಅವರು ಸೂಚಿಸಿದರು. “ಅಂತಾರಾಷ್ಟ್ರೀಯ ಮಟ್ಟದಲ್ಲಿ ನ್ಯೂಸ್‌ ಆಗಿದೆ. ಹಾಸನದಲ್ಲಿ ಧರಣಿ ಅಂತ ಮಾಹಿತಿ ಇದೆ” ಎಂದು ವಕೀಲ ಹೇಳಿದಾಗಕೇಸ್ ಮೆರಿಟ್ ಮೇಲೆ ವಾದಕ್ಕೆ ಜಡ್ಜ್ ಸೂಚನೆ ನೀಡಿದರು.

ಪ್ರಜ್ವಲ್‌ ಪರ ವಕೀಲ ಆಕ್ಷೇಪ

“ಎಸ್‌ಐಟಿ ಕಸ್ಟಡಿಗೆ ಕೇಳಿದ್ದಕ್ಕೆ ಪ್ರಜ್ವಲ್‌ ರೇವಣ್ಣ ಪರ ವಕೀಲ ಅರುಣ್‌ ಆಕ್ಷೇಪ ವ್ಯಕ್ತಪಡಿಸಿದರು. ಏಪ್ರಿಲ್ 28ರಿಂದ ಮೇ 2ರವರೆಗೂ ಅತ್ಯಾಚಾರ ಅಂತ ಆರೋಪ ಇಲ್ಲ. ಪೊಲೀಸರು ತಮಗೆ ಇಷ್ಟ ಬಂದ ರೀತಿ ಪದಗಳನ್ನು ಬಳಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕೇವಲ CrPC 161 ಅಡಿ ಹೇಳಿಕೆ ಆಧರಿಸಿ ಅತ್ಯಾಚಾರ ಆರೋಪ ಕೇಸ್ ದಾಖಲಿಸಲಾಗಿದೆ. ಬೆಂಗಳೂರಿನಲ್ಲಿ ದೂರು ರೆಡಿ ಮಾಡಿಕೊಂಡು ಹೊಳೆನರಸೀಪುರದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ” ಎಂದರು.

ಪಟ್ಟು ಸಡಿಲಿಸದ ಅಶೋಕ್‌ ನಾಯ್ಕ್

ಅರುಣ್‌ ಅವರ ವಾದ ಮಂಡನೆಗೆ ಅಶೋಕ್‌ ನಾಯ್ಕ್‌ ಅವರು ಅಸಮಾಧಾನ ವ್ಯಕ್ತಪಡಿಸಿದರು. “‘ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದು ಭೀತಿಯಿಂದ ಈಗ ಬಂದಿದ್ದಾರೆ. ಇದಕ್ಕೆ ಮೊದಲೂ ಫ್ಲೈಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದರು. ಪೆನ್‌ಡ್ರೈವ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ತೀನಿ ಅಂತ ದೇಶ ಬಿಟ್ಟಿದ್ದರು. ತಲೆಮರೆಸಿಕೊಂಡು ಹೋಗಲೆಂದು ದೇಶ ಬಿಟ್ಟು ಓಡಿ ಹೋಗಿದ್ದರು. ಫಾರಿನ್‌ನಲ್ಲೇ ಅರೆಸ್ಟ್‌ ಆಗ್ತೀನಿ ಅನ್ನೋ ಭೀತಿಯಿಂದ ಬಂದಿದ್ದಾರೆ. ದೇಶ ಬಿಟ್ಟು ಓಡಿ ಹೋಗಿದ್ದ ಬಗ್ಗೆ ಯಾವುದೇ ಮಾಹಿತಿಯನ್ನೂ ಕೊಟ್ಟಿರಲಿಲ್ಲ. ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ ದೇಶಾದ್ಯಂತ ಸುದ್ದಿ ಆಗಿದೆ” ಎಂದು ತಿಳಿಸಿದರು.

ಸಂತ್ರಸ್ತೆ ಮನೆಗೆ ಬೆಂಕಿ ಬಿದ್ದಿದೆ, ಆ ಮಹಿಳೆಯರು ದೂರು ಕೊಡಲು ಬರುತ್ತಿಲ್ಲ. ಪ್ರಜ್ವಲ್ ಮೇಲಿರುವ ಎಲ್ಲ ಗಂಭೀರ ಆರೋಪಗಳ ಬಗ್ಗೆ ವಿಚಾರಣೆ ಮಾಡುವ ಅಗತ್ಯವಿದೆ. ಆರೋಪಿಯ ಮದರ್ ಡಿವೈಸ್, ರೆಕಾರ್ಡಿಂಗ್‌ ಡಿವೇಸ್‌ ಸೀಸ್‌ ಆಗಬೇಕು. ಆರೋಪಿ ಪ್ರಜ್ವಲ್‌ ರೇವಣ್ಣ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಬೇಕು. ಎರಡನೇ ಆರೋಪಿ ಪ್ರಜ್ವಲ್ ರೇವಣ್ಣ ಬಗ್ಗೆ ಸಾಕ್ಷ್ಯ ಕಲೆ ಹಾಕಲು ಕಸ್ಟಡಿ ಬೇಕು” ಎಂದರು.

ರೂಮ್‌ ಕ್ಲೀನ್‌ ಇಲ್ಲ ಎಂದು ಪ್ರಜ್ವಲ್‌ ಅಳಲು

ವಿಚಾರಣೆಯ ಆರಂಭದಲ್ಲಿಯೇ ಪ್ರಜ್ವಲ್‌ ರೇವಣ್ಣಗೆ ಕೋರ್ಟ್‌ ಜಡ್ಜ್‌ ನಿಮ್ಮ ಹೆಸರೇನು ಎಂದು ಕೇಳಿದರು. ಹಾಗೆಯೇ, ಯಾವಾಗ ಬಂಧಿಸಿದರು? ಎಲ್ಲಿ ಬಂಧಿಸಿದರು ಎಂಬುದಾಗಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರಜ್ವಲ್.‌ “ಎಸ್‌ಐಟಿ ವಶದಲ್ಲಿದ್ದೇನೆ. ರೂಮ್‌ ಸರಿಯಾಗಿಲ್ಲ, ಟಾಯ್ಲೆಟ್‌ ಸರಿಯಾಗಿಲ್ಲ. ಕೋಣೆ ಕ್ಲೀನ್‌ ಇಲ್ಲ” ಎಂದು ತಿಳಿಸಿದರು. ಆಗ ನ್ಯಾಯಾಧೀಶರು, “ಎಸ್‌ಐಟಿಯವರು ಕಿರುಕುಳ ಕೊಟ್ರಾ” ಎಂದು ಪ್ರಶ್ನಿಸಿದರು. ಅದಕ್ಕೆ ಪ್ರಜ್ವಲ್‌, “ಕಿರುಕುಳ ಕೊಟ್ಟಿಲ್ಲ. ರೂಮ್‌ ಕ್ಲೀನ್‌ ಇಲ್ಲ, ಟಾಯ್ಲೆಟ್‌ ಸ್ವಚ್ಛವಾಗಿಲ್ಲ” ಎಂದರು.

ಇದನ್ನೂ ಓದಿ: Prajwal Revanna Case: ಅನ್ನ-ಸಾಂಬಾರ್‌ ತಿಂದು ಜಡ್ಜ್‌ ಎದುರು ಕೈಕಟ್ಟಿ ನಿಂತ ಪ್ರಜ್ವಲ್‌ ರೇವಣ್ಣ; ಎಂಥ ಸ್ಥಿತಿ!

Continue Reading

ಕ್ರೈಂ

Road Accident : ಸ್ಕೂಟರ್‌ ಪಲ್ಟಿಯಾಗಿ ದಂಪತಿ ನರಳಾಟ; ನೆರವಿಗೆ ಧಾವಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

Road Accident : ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ದಂಪತಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ನೆರವಿಗೆ ಧಾವಿಸಿದ್ದರು. ಇತ್ತ ಹಾಸನದಲ್ಲಿ ಕುಡಿದು ಅಡ್ಡಾದಿಡ್ಡಿಯಾಗಿ ಕಾರು ಓಡಿಸಿದ್ದಲ್ಲದೇ, ಬಸ್ಸಿಗೆ ಅಡ್ಡ ಹಾಕಿ ಆವಾಜ್‌ ಹಾಕಿದ ಕುಡುಕ ಚಾಲಕನನ್ನು ಹಿಡಿದು ಥಳಿಸಿದ್ದಾರೆ.

VISTARANEWS.COM


on

By

Road Accident
Koo

ಶಿವಮೊಗ್ಗ: ಸವಾರನ ನಿಯಂತ್ರಣ ತಪ್ಪಿದ ಸ್ಕೂಟರ್‌ ಅಪಘಾತಕ್ಕೀಡಾಗಿದ್ದು, ನಡು ರಸ್ತೆಯಲ್ಲಿ ದಂಪತಿ (Road Accident) ಗೋಳಾಡಿದ್ದಾರೆ. ಶಿವಮೊಗ್ಗದ ಸಾಗರ ತಾಲೂಕಿನ ಆನಂದಪುರ ಸಮೀಪದ ಹೊಸಗುಂದ ಬಳಿ ಘಟನೆ ನಡೆದಿದೆ. ಸ್ಕೂಟರ್‌ ಪಲ್ಟಿಯಾದ ಹಿನ್ನೆಲೆಯಲ್ಲಿ ದಂಪತಿ ರಸ್ತೆ ಬದಿ ಬಿದ್ದು ನರಳಾಡುತ್ತಿದ್ದರು. ಇದೇ ಮಾರ್ಗದಲ್ಲಿ ಆನಂದಪುರ ಕಡೆಗೆ ಆಗಮಿಸುತ್ತಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ನೆರವಿಗೆ ಧಾವಿಸಿದ್ದಾರೆ.

ಅಪಘಾತದಿಂದ ಒದ್ದಾಡುತ್ತಿದ್ದ ಗಾಯಾಳು ದಂಪತಿಯನ್ನು ಕೂಡಲೇ ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅದೃಷ್ಟವಶಾತ್ ಶಾಸಕರ ಸಮಯ ಪ್ರಜ್ಞೆಯಿಂದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾಸನದಲ್ಲಿ ಕುಡುಕ ಚಾಲಕನಿಗೆ ಧರ್ಮದೇಟು

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿದ ಚಾಲಕನೊಬ್ಬ ಸಾರಿಗೆ ಬಸ್‌ಗೆ ಅಡ್ಡ ಹಾಕಿದ್ದಾನೆ. ಬಳಿಕ ಬಸ್‌ವೊಳಗೆ ಹೋಗಿ ಬಸ್‌ ಡೈವರ್‌ಗೆ ಅವಾಜ್‌ ಹಾಕಿದ್ದಾನೆ. ಇದರಿಂದ ಸಿಟ್ಟಾದ ಚಾಲಕ ಹಾಗೂ ಪ್ರಯಾಣಿಕರು ಕುಡುಕನಿಗೆ ಧರ್ಮದೇಟು ನೀಡಿದ್ದಾರೆ.

ಹಾಸನ: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದಲ್ಲದೇ, ಕುಡುಕನೊಬ್ಬ ಸಾರಿಗೆ ಬಸ್‌ಗೆ ಅಡ್ಡಲಾಗಿ ಕಾರು ನಿಲ್ಲಿಸಿ ಅವಾಜ್‌ ಹಾಕಿದ್ದಾನೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಭೈರಾಪುರ ಬಳಿ ಘಟನೆ ನಡೆದಿದೆ. ಬಸ್‌ವೊಳಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಕುಡುಕನಿಗೆ ಜನರು ಧರ್ಮದೇಟು ನೀಡಿದ್ದಾರೆ.

ಸಾರಿಗೆ ಬಸ್‌ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿತ್ತು. ಕಂಠಪೂರ್ತಿ ಕುಡಿದು ಹಾಸನದ ಕಡೆಗೆ ಬರುತ್ತಿದ್ದ ಕಾರು ಚಾಲಕ, ಅದೇ ಮತ್ತಿನಲ್ಲಿ ಎದುರಿಗೆ ಬಂದ ಬಸ್‌ಗೆ ಅಡ್ಡಹಾಕಿದ್ದಾನೆ. ಮಾತ್ರವಲ್ಲ ಬಸ್ಸಿನಲ್ಲಿ ಇದ್ದವರಿಗೆ ಅವಾಜ್‌ ಹಾಕಿ ನಿಂದಿಸಿದ್ದಾನೆ. ಈತನ ಹುಚ್ಚಾಟಕ್ಕೆ ಸಿಟ್ಟಾದ ಪ್ರಯಾಣಿಕರು, ಚಾಲಕನೊಟ್ಟಿಗೆ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Self Harming : ವೆಗಾ ಸಿಟಿ ಮಾಲ್‌ ಮೇಲಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ

ಕುಸಿದು ಬಿದ್ದ ಮನೆಯ ಚಾವಣಿ; ಮಣ್ಣಿನಡಿ ಸಿಲುಕಿ ಮಕ್ಕಳಿಬ್ಬರು ಸಾವು

ಬಾಗಲಕೋಟೆ: ಮನೆಯ ಚಾವಣಿ ಕುಸಿದ ಪರಿಣಾಮ ಇಬ್ಬರು ಮಕ್ಕಳು ದಾರುಣವಾಗಿ (Rooftop collapse) ಮೃತಪಟ್ಟಿದ್ದಾರೆ. ಬಾಗಲಕೋಟೆಯ ಕಂದಗಲ್ಲ ಗ್ರಾಮದಲ್ಲಿ ಘಟನೆ ನಡೆದಿದೆ. ಗೀತಾ ಈಶ್ವರಯ್ಯಾ ಆದಾರಪುರಮಠ (15), ರುದ್ರಯ್ಯಾ ಈಶ್ವರಯ್ಯಾ ಆದಾಪುರಮಠ (10) ಮೃತ ದುರ್ದೈವಿಗಳು.

40-50 ವರ್ಷಗಳಷ್ಟು ಹಳೆಯ ಮನೆಗೆ ಮಣ್ಣಿನ ಚಾವಣಿ ಇತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆ ಸೋರಿಕೆಯಾಗಿತ್ತು. ಈ ವೇಳೆ ಚಾವಣಿಗೆ ಮಣ್ಣು ಹಾಕಿ ತಟ್ಟಿ ಸರಿಮಾಡಿಕೊಂಡಿದ್ದರು. ಆದರೆ ಶುಕ್ರವಾರ ಏಕಾಏಕಿ ಮನೆ ಚಾವಣಿ ಕುಸಿದಿದೆ. ಮನೆಯೊಳಗೆ ಇದ್ದ ಮಕ್ಕಳಿಬ್ಬರ ಮೇಲೆ ರಭಸವಾಗಿ ಮಣ್ಣು ಬಿದ್ದಿದೆ.

Rooftop collapse The roof of the house that collapsed Two children die after being trapped under mud

ಈ ದುರ್ಘಟನೆ ನಡೆದಾಗ ಮನೆಯಲ್ಲಿ ಮಕ್ಕಳ ತಂದೆ-ತಾಯಿ ಇರಲಿಲ್ಲ. ಮಕ್ಕಳ ಮೇಲೆ ಚಾವಣಿ ಬಿದ್ದ ಪರಿಣಾಮ ಹೊರಬರಲು ಆಗದೆ ಮಣ್ಣಲ್ಲಿ ಸಿಲುಕಿದ್ದಾರೆ. ಇತ್ತ ಕೂಡಲೇ ಸ್ಥಳೀಯರ ಸಹಾಯದಿಂದ ಮಕ್ಕಳನ್ನು ಹೊರತೆಗೆಯಲಾಯಿತು. ಇಳಕಲ್ಲ ತಾಲ್ಲೂಕಾಸ್ಪತ್ರೆಗೆ ಸಾಗಿಸಲಾಯಿತಾದರೂ ಮಕ್ಕಳಿಬ್ಬರು ಬದುಕುಳಿಯಲಿಲ್ಲ.

 Rooftop collapse

ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆಗೆ ಶಾಸಕ ವಿಜಯಾನಂದ ಕಾಶಪ್ಪನರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬೆಳೆದು ನಿಂತ ಮಕ್ಕಳನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರು ಹಾಕಿದರು. ಬಾಗಲಕೋಟೆಯ ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಈ ದುರಂತ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Self Harming : ವೆಗಾ ಸಿಟಿ ಮಾಲ್‌ ಮೇಲಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ

Self Harming : ವೆಗಾ ಸಿಟಿ ಮಾಲ್‌ನ ನಾಲ್ಕನೇ ಮಹಡಿ ಮೇಲಿಂದ ಬಿದ್ದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಗುರುತು ಪತ್ತೆಯಾಗಿಲ್ಲ, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

VISTARANEWS.COM


on

By

Self harming
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿರುವ ವೆಗಾ ಸಿಟಿ ಮಾಲ್‌ (Vega City Mall) ಮೇಲಿಂದ ಬಿದ್ದು ವ್ಯಕ್ತಿಯೊಬ್ಬ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ಶುಕ್ರವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮಾಲ್‌ನ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೂಡಲೇ ಅಲ್ಲಿದ್ದ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಆದರೆ ನಾಲ್ಕನೇ ಮಹಡಿಯಿಂದ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿತ್ತು. ತೀವ್ರ ರಕ್ತಸ್ರಾವವಾಗಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತನ ಗುರುತು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಮೈಕೋ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಮಾಲ್‌ಗೆ ಇವನೊಬ್ಬನೇ ಬಂದಿದ್ದನ್ನಾ ಅಥವಾ ಈತನೊಟ್ಟಿಗೆ ಬೇರೆಯಾರಾದರೂ ಇದ್ದರಾ ಎಂಬುದರ ಕುರಿತು ಸಿಸಿ ಟಿವಿ ಪರಿಶೀಲನೆ ಮಾಡಲಾಗುತ್ತಿದೆ.

ಇದನ್ನೂ ಓದಿ: Rooftop collapse : ಕುಸಿದು ಬಿದ್ದ ಮನೆಯ ಚಾವಣಿ; ಮಣ್ಣಿನಡಿ ಸಿಲುಕಿ ಮಕ್ಕಳಿಬ್ಬರು ಸಾವು

ಹುಲಿಗೆಮ್ಮ ದೇವಿ ಜಾತ್ರೆಗೆ ಹೊರಟಿದ್ದ ಪಾದಯಾತ್ರಿ ಮೇಲೆ ಹರಿದ ಲಾರಿ; ಓರ್ವ ಸಾವು, ಮತ್ತೋರ್ವ ಗಂಭೀರ

ಕೊಪ್ಪಳ: ಹುಲಿಗೆಮ್ಮ ದೇವಿ ಜಾತ್ರೆ (Huligemma Temple) ನಿಮಿತ್ತ ಪಾದಯಾತ್ರೆ ಕೈಗೊಂಡಿದ್ದ ಭಕ್ತರ ಮೇಲೆ ಲಾರಿಯೊಂದು (Lorry Hit) ಹರಿದಿದೆ. ಪಾದಯಾತ್ರೆ ಹೊರಟಿದ್ದವರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ರಭಸಕ್ಕೆ ಓರ್ವ ಭಕ್ತ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ.

ಕೊಪ್ಪಳ ತಾಲೂಕಿನ ಕೆರಳ್ಳಿ ಫ್ಲೈಓವರ್ ಬಳಿ ಘಟನೆ ನಡೆದಿದೆ. ಯಮನೂರಪ್ಪ ಸಣ್ಣಮನಿ (34) ಮೃತ ದುರ್ದೈವಿ. ಯಮನೂರಪ್ಪ ಬಾಗಲಕೋಟಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ನಿವಾಸಿ ಆಗಿದ್ದಾರೆ. ಯಮನೂರಪ್ಪ ಹಾಗೂ ಮಹಾಂತೇಶ್‌ ಹುಲಿಗೆಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಹೊರಟ್ಟಿದ್ದರು.

ಈ ವೇಳೆ ಹಿಂಬದಿಯಿಂದ ಬಂದ ಲಾರಿಯು ಪಾದಯಾತ್ರಿಗಳಿಗೆ ಡಿಕ್ಕಿ ಹೊಡೆದಿದೆ. ಯಮನೂರಪ್ಪ ಮೇಲೆ ಲಾರಿ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟರೆ, ಮಹಾಂತೇಶ್‌ ಫ್ಲೈಓವರ್‌ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಬಿದ್ದ ರಭಸಕ್ಕೆ ಅವರ ಕಾಲಿನ ಪಾದವೇ ತುಂಡಾಗಿ ಬಿದ್ದಿತ್ತು. ಸದ್ಯ ಸಾವು- ಬದುಕಿನ ಮಧ್ಯೆ ಹೋರಾಡುತ್ತಿರುವ ಗಾಯಾಳು ಮಹಾಂತೇಶ್‌ನನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Prajwal Revanna
ಪ್ರಮುಖ ಸುದ್ದಿ5 mins ago

Prajwal Revanna : ಸೆಕ್ಸ್​ ಸ್ಕ್ಯಾಂಡಲ್​ ಆರೋಪಿ ಪ್ರಜ್ವಲ್​ ನೋಡಲು ನೂಕುನುಗ್ಗಲು!

Prajwal Revanna Case
ಕರ್ನಾಟಕ6 mins ago

Prajwal Revanna Case: ಪ್ರಜ್ವಲ್‌ಗೆ ಎಸ್‌ಐಟಿ ಕಸ್ಟಡಿ ಖಚಿತ; ಆರೋಪಿ ಪರ-ವಿರೋಧ ವಾದ ಹೀಗಿತ್ತು

Road Accident
ಕ್ರೈಂ11 mins ago

Road Accident : ಸ್ಕೂಟರ್‌ ಪಲ್ಟಿಯಾಗಿ ದಂಪತಿ ನರಳಾಟ; ನೆರವಿಗೆ ಧಾವಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

Bomb threat
ದೇಶ12 mins ago

Bomb Threat: ನಿಲ್ಲುತ್ತಲೇ ಇಲ್ಲ ಹುಸಿಬಾಂಬ್‌ ಕರೆ ಹಾವಳಿ; ಮತ್ತೆ ಬೆದರಿಕೆ-ವಿಮಾನ ತುರ್ತು ಭೂಸ್ಪರ್ಶ

MS Dhoni's last-ball Heroics
ಕ್ರಿಕೆಟ್26 mins ago

MS Dhoni’s last-ball Heroics: ಧೋನಿ ಮಿಂಚಿನ ವೇಗದ ರನೌಟ್​; ಭಾರತಕ್ಕೆ 1 ರನ್‌ ರೋಚಕ ಜಯ; ಇದು ಮರೆಯಲಾಗದ ನೆನಪು

Bujji and Bhairava Prabhas animated show raises
ಒಟಿಟಿ30 mins ago

Bujji and Bhairava: ಅಮೆಜಾನ್​ಗೆ ಬಂದ ‘ಕಲ್ಕಿ’ಯ ಬುಜ್ಜಿ-ಭೈರವ; ಹೆಚ್ಚಾಯ್ತು ‘ಕಲ್ಕಿ 2898 ಎಡಿ’ ನಿರೀಕ್ಷೆ!

Self harming
ಬೆಂಗಳೂರು35 mins ago

Self Harming : ವೆಗಾ ಸಿಟಿ ಮಾಲ್‌ ಮೇಲಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ

Prajwal Revanna Case
ಕರ್ನಾಟಕ37 mins ago

Prajwal Revanna Case: ಅನ್ನ-ಸಾಂಬಾರ್‌ ತಿಂದು ಜಡ್ಜ್‌ ಎದುರು ಕೈಕಟ್ಟಿ ನಿಂತ ಪ್ರಜ್ವಲ್‌ ರೇವಣ್ಣ; ಎಂಥ ಸ್ಥಿತಿ!

Heat Wave
ದೇಶ40 mins ago

Heat Wave: ಬಿಸಿಗಾಳಿ ಶಾಖಕ್ಕೆ ಉತ್ತರ ಭಾರತ ಸಂಪೂರ್ಣ ತತ್ತರ; ಎಮರ್ಜೆನ್ಸಿ ಘೋಷಣೆ ಆಗುತ್ತಾ?

Rooftop collapse in bagalakota
ಬಾಗಲಕೋಟೆ55 mins ago

Rooftop collapse : ಕುಸಿದು ಬಿದ್ದ ಮನೆಯ ಚಾವಣಿ; ಮಣ್ಣಿನಡಿ ಸಿಲುಕಿ ಮಕ್ಕಳಿಬ್ಬರು ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ1 day ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌