Rishab Shetty: ಕಾಂತಾರ ಚಿತ್ರದ ಬಳಿಕ ಬೊಮ್ಮಾಯಿಗೆ ರಿಷಬ್‌ ಶೆಟ್ಟಿ ಮನವಿ ಸಲ್ಲಿಸಿದ್ದೇನು? - Vistara News

ರಾಜಕೀಯ

Rishab Shetty: ಕಾಂತಾರ ಚಿತ್ರದ ಬಳಿಕ ಬೊಮ್ಮಾಯಿಗೆ ರಿಷಬ್‌ ಶೆಟ್ಟಿ ಮನವಿ ಸಲ್ಲಿಸಿದ್ದೇನು?

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಫೋಟೊವನ್ನು ಹಂಚಿಕೊಂಡು,ಇದರ ಹಿಂದೆ (Rishab Shetty) ಮಹತ್ವದ ಉದ್ದೇಶವಿತ್ತು ಎನ್ನುವುದನ್ನೂ ಅವರು ಹೇಳಿಕೊಂಡಿದ್ದಾರೆ.

VISTARANEWS.COM


on

What did Rishabh Shetty request to Bommai after Kantara
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಕಾಂತಾರ ಸಿನಿಮಾ ಸಕ್ಸೆಸ್‌ ಬಳಿಕ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಫೋಟೊವನ್ನು ಹಂಚಿಕೊಂಡು, ಇದರ ಹಿಂದೆ ಮಹತ್ವದ ಉದ್ದೇಶವಿತ್ತು ಎನ್ನುವುದನ್ನೂ ಅವರು ಹೇಳಿಕೊಂಡಿದ್ದಾರೆ. ಕಾಡಂಚಿನ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದು, ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸೋಷಿಯಲ್‌ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ.

ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾ ಬಳಿಕ ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮುಖ್ಯಮಂತ್ರಿಗಳ ಮುಂದೆ ಇಟ್ಟಿದ್ದು, ಪರಿಹರಿಸುವುದಾಗಿ ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿ ʻʻಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳುʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rishab Shetty: ಮಗಳು ರಾದ್ಯಾ ಜನುಮದಿನದಂದು ಸ್ಪೆಷಲ್‌ ವಿಡಿಯೊ ಹಂಚಿಕೊಂಡ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ

ರಿಷಬ್‌ ಶೆಟ್ಟಿ ಪೋಸ್ಟ್‌

ಪ್ರಿಕ್ವೆಲ್‌ ಆಗಿ ಬರಲಿದೆ ಕಾಂತಾರ 2

ಕಾಂತಾರ-1 ಸಿಕ್ವೆಲ್‌ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್‌ (Prequel film) ಆಗಿ ಮೂಡಿಬರಲಿದೆ. ಕಾಂತಾರ-2 ಸಿನಿಮಾ ಕಾಂತಾರಕ್ಕಿಂತ ಮೊದಲಿನ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಇದಾಗಿದೆ. ಕಾಂತಾರ-2, 2024ರಲ್ಲಿ ಥಿಯೇಟರ್‌ಗೆ ಬರಲಿದೆ ಎಂದು ರಿಷಬ್‌ ಖಚಿತಪಡಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: “ನಾನು ಇಸ್ಲಾಂ ವಿರೋಧಿ ಅಲ್ಲ, ಆದರೆ ಮುಸ್ಲಿಮರು…”; ಕಾಂಗ್ರೆಸ್‌ ಆರೋಪದ ಬಗ್ಗೆ ಮೋದಿ ಹೇಳಿದ್ದೇನು?

Narendra Modi:ಕಾಂಗ್ರೆಸ್‌ನವರು ನಮ್ಮನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಾ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಇದು ಮಾಜಿ ಪ್ರಧಾನಿ ದಿವಂಗತ ನೆಹರೂ ಕಾಲದಿಂದಲೂ ನಡೆಯುತ್ತಿದೆ. ತಮ್ಮನ್ನು ತಾವು ಮುಸ್ಲಿಮರ ಸ್ನೇಹಿ ಪಕ್ಷ ಎಂದು ಹೇಳುತ್ತಲೇ ಬಂದಿದೆ. ಇದರಿಂದ ಸಾಕಷ್ಟು ಲಾಭ ಪಡೆದಿದೆ. ಹೀಗಾಗಿಯೇ ಅವರು ಅನಾವಶ್ಯಕವಾಗಿ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ. ಭಯ ಹುಟ್ಟಿಸಿ ರಾಜಕೀಯ ಲಾಭ ಪಡೆಯುವದೇ ಅವರ ಕೆಲಸವಾಗಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರನ್ನು ಪ್ರತಿಪಕ್ಷಗಳು ಮುಸ್ಲಿಂ ಮತ್ತು ಇಸ್ಲಾಂ ವಿರೋಧಿ ಎಂದು ಕರೆಯುವುದು ಸರ್ವೇ ಸಾಮಾನ್ಯ ವಿಚಾರ. ಇದೀಗ ಇದೇ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಧಾನಿ ಮೋದಿ, ನಾನು ಇಸ್ಲಾಂ(Islam) ಅಥವಾ ಮುಸ್ಲಿಂ ವಿರೋಧಿ(Anti Muslim) ಅಲ್ಲ. ಮುಸ್ಲಿಂ ಸಮುದಾಯದವರು ತಮ್ಮ ಭವಿಷ್ಯದ ಬಗ್ಗೆ ಚಿಂತಿಸಲಿ ಎಂಬುದನಷ್ಟೇ ನಾನು ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ಆರೋಪವವನ್ನು ತಳ್ಳಿ ಹಾಕಿದ್ದಾರೆ

ಕಾಂಗ್ರೆಸ್‌ನವರು ನಮ್ಮನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಾ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಇದು ಮಾಜಿ ಪ್ರಧಾನಿ ದಿವಂಗತ ನೆಹರೂ ಕಾಲದಿಂದಲೂ ನಡೆಯುತ್ತಿದೆ. ತಮ್ಮನ್ನು ತಾವು ಮುಸ್ಲಿಮರ ಸ್ನೇಹಿ ಪಕ್ಷ ಎಂದು ಹೇಳುತ್ತಲೇ ಬಂದಿದೆ. ಇದರಿಂದ ಸಾಕಷ್ಟು ಲಾಭ ಪಡೆದಿದೆ. ಹೀಗಾಗಿಯೇ ಅವರು ಅನಾವಶ್ಯಕವಾಗಿ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ. ಭಯ ಹುಟ್ಟಿಸಿ ರಾಜಕೀಯ ಲಾಭ ಪಡೆಯುವದೇ ಅವರ ಕೆಲಸವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಆದರೆ ಮುಸ್ಲಿಂ ಸಮುದಾಯ ಎಚ್ಚೆತ್ತುಕೊಂಡಿದೆ. ನಮ್ಮ ಸರ್ಕಾರ ತ್ರಿವಳಿ ತಲಾಖ್‌ ರದ್ದುಗೊಳಿಸಿದಾಗ ಅನೇಕ ಮುಸ್ಲಿಂ ಸಹೋದರಿಯರು ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದರು. ಅಲ್ಲದೇ ನನಗೆ ಅವರ ಬಗ್ಗೆ ನಿಜವಾದ ಕಾಳಜಿ ಎಂಬುದು ಅವರಿಗೆ ಅರ್ಥವಾಗಿತ್ತು. ನಾನು ಆಯುಷ್ಮಾನ್‌ ಯೋಜನೆ ಜಾರಿಗೊಳಿಸಿದಾಗ ಎಲ್ಲರೂ ಸಂಸತ ವ್ಯಕ್ತಪಡಿಸದ್ದರು. ಕೋವಿಡ್‌ ಲಸಿಕೆ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದಾಗ ನಾನು ಯಾರ ಬಗ್ಗೆಯೂ ತಾರತಮ್ಯ ಹೊಂದಿಲ್ಲ ಎಂಬುದು ಎಲ್ಲರಿಗೂ ಮನವರಿಕೆ ಆಗಿತ್ತು. ಪ್ರತಿಪಕ್ಷಗಳ ಸುಳ್ಳು ಬಯಲಾಗಿರೋದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿಯೇ ಅವರು ಜನರನ್ನು ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಸುಳ್ಳುಗಳ ಮೇಲ್ ಸುಳ್ಳು ಹೇಳುತ್ತಾ ಇದ್ದಾರೆ. ನನ್ನನ್ನು ಮುಸ್ಲಿಂ ವಿರೋಧಿ ಎಂದು ಬ್ರ್ಯಾಂಡ್‌ ಮಾಡುತ್ತಿದ್ದಾರೆ ಎಂದು ಪ್ರಧಾನಿ ಟಾಂಗ್‌ ಕೊಟ್ಟರು.

ಇದನ್ನೂ ಓದಿ:Narendra Modi: ಮತದಾನದ ಬಳಿಕ ಮಗುವನ್ನು ಎತ್ತಿ ಆಡಿಸಿದ ಪ್ರಧಾನಿ ಮೋದಿ; ವಿಡಿಯೋ ನೋಡಿ

ನಾನು ಮಸಲ್ಮಾನರಿಗೆ ಮನವಿ ಮಾಡುವುದು ಇಷ್ಟೇ.. ಸ್ವಯಂ ಅವಲೋಕನ ಮಾಡಿಕೊಳ್ಳಿ. ದೇಶ ಪ್ರಗತಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಿಮ್ಮ ಸಮದಾಯಕ್ಕೆ ಏನಾದರೂ ಕೊರತೆ ಕಂಡು ಬಂದಲ್ಲಿ ಅದು ಏನು? ಯಾಕಾಗಿ ಕೊರತೆ ಉಂಟಾಗಿದೆ ? ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿರುವಾಗ ನಮಗೇಕೆ ಸೌಲಭ್ಯಗಳು ಸಿಗುತ್ತಿರಲಿಲ್ಲ ಎಂದು ಯೋಜನೆ ಮಾಡಿ. ನಿಮ್ಮ ಮಕ್ಕಳ ಭವಿಷ್ಯದ ಬಗೆ ಚಿಂತನೆ ಇರಲಿ. ಯಾವ ಸಮುದಾಯದ ಜನರೂ ಕಾರ್ಮಿಕರಂತೆ ಬದುಕುವುದು ನನಗೆ ಇಷ್ಟವಿಲ್ಲ. ದೇಶದಲ್ಲಿರುವ ಎಲ್ಲಾ ಸಮುದಾಯಗಳ ಬಡ ಜನರಿಗೆ ಸರ್ಕಾರದ ಎಲ್ಲಾ ಸವಲತ್ತುಗಳು, ಮೀಸಲಾತಿ ಸಿಗಲೇಬೇಕು ಎಂಬುದು ನನ್ನ ಆಶಯ. ನಾನು ಯಾವುತ್ತೂ ಮುಸ್ಲಿಮರ ಮೀಸಲಾತಿ ಕಿತ್ತು ಹಾಕುತ್ತೇನೆ ಎಂದು ಹೇಳಿಲ್ಲ. ನಾನು ಹೇಳಿರುವುದು ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡುವುದು ಸರಿಯಲ್ಲ ಎಂಬುದಷ್ಟೇ. ಸಾವಿರಾರು ವರ್ಷಗಳಿಂದ ದಲಿತರಿಗೆ ಅನ್ಯಾಯ ಆಗುತ್ತಿದೆ. ಅದಕ್ಕಾಗಿ ಅವರಿಗೆ ನಮ್ಮ ಸಂವಿಧಾನದಲ್ಲಿ ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ. ಯಾವ ಪಕ್ಷವೂ ಇದನ್ನು ವಿರೋಧಿಸಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.

Continue Reading

Lok Sabha Election 2024

Lok Sabha Election 2024: ಮತ ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ; ಮತದಾನ ಮಾಡಲು ಕನ್ನಡದಲ್ಲೇ ಕರೆ

Lok Sabha Election 2024: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಜರಾತ್‌ನ ಅಹಮದಾಬಾದ್‌ನ ನಿಶಾನ್‌ ಹೈಯರ್‌ ಸೆಕಂಡರಿ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಸುತ್ತ ನೆರೆದಿದ್ದ ಸಾವಿರಾರು ಜನರತ್ತ ಕೈ ಬೀಸುತ್ತ ಮತದಾನ ಕೇಂದ್ರಕ್ಕೆ ತೆರಳಿ ವೋಟು ಮಾಡಿದರು. ರಸ್ತೆಯುದ್ದಕ್ಕೂ ನಿಂತಿದ್ದ ಜನರು ಮೋದಿ ಪರ ಘೋಷಣೆ ಕೂಗಿದರು.

VISTARANEWS.COM


on

Lok Sabha Election 2024
Koo

ಗಾಂಧಿನಗರ: ಲೋಕಸಭಾ ಚುನಾವಣೆ (Lok Sabha Election 2024)ಯ ಮೂರನೇ ಹಂತದ ಮತದಾನ ಆರಂಭವಾಗಿದೆ. 93 ಕ್ಷೇತ್ರಗಳಲ್ಲಿ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಅದರಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಗುಜರಾತ್‌ನ ಅಹಮದಾಬಾದ್‌ನ ನಿಶಾನ್‌ ಹೈಯರ್‌ ಸೆಕಂಡರಿ ಶಾಲೆ (Nishan Higher Secondary School)ಯ ಮತದಾನ ಕೇಂದ್ರದಲ್ಲಿ ಬೆಳಗ್ಗೆ 7.45ರ ಸುಮಾರಿಗೆ ತಮ್ಮ ಹಕ್ಕು ಚಲಾಯಿಸಿದರು. ಕೇಂದ್ರ ಸಚಿವ ಅಮಿತ್‌ ಶಾ (Amit Shah) ಅವರೊಂದಿಗೆ ಆಗಮಿಸಿದ ಅವರು ಸುತ್ತ ನೆರೆದಿದ್ದ ಸಾವಿರಾರು ಜನರತ್ತ ಕೈ ಬೀಸುತ್ತ ಮತದಾನ ಕೇಂದ್ರಕ್ಕೆ ತೆರಳಿ ವೋಟು ಮಾಡಿದರು. ಈ ಮಧ್ಯೆ ಎಲ್ಲರೂ ಮತದಾನ ಮಾಡುವಂತೆ ಅವರು ಕನ್ನಡದಲ್ಲೇ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಮತದಾನ ಕೇಂದ್ರದ ಬಳಿಗೆ ಪ್ರಧಾನಿ ಸುಮಾರು 7.30ರ ಹೊತ್ತಿಗೆ ಆಗಮಿಸಿದ್ದರು. ಅಮಿತ್‌ ಶಾ ಪ್ರಧಾನಿಯನ್ನು ಸ್ವಾಗತಿಸಿದರು. ಬಳಿಕ ಇಬ್ಬರು ನಾಯಕರು ಸುತ್ತ ನೆರೆದಿದ್ದ ಸಾವರ್ಜನಿಕರತ್ತ ಕೈ ಬೀಸುತ್ತ ಮತಗಟ್ಟೆಗೆ ತೆರಳಿದರು. ರಸ್ತೆಯುದ್ದಕ್ಕೂ ನಿಂತಿದ್ದ ಜನರು ಮೋದಿ ಪರ ಘೋಷಣೆ ಕೂಗಿದರು. ಈ ಮಧ್ಯೆ ಅಭಿಮಾನಿಗಳಿಗೆ ಮೋದಿ ಆಟೋಗ್ರಾಫ್‌ ನೀಡುವುದನ್ನೂ ಮರೆಯಲಿಲ್ಲ. ಅಮಿತ್‌ ಶಾ ಸ್ಪರ್ಧಿಸುತ್ತಿರುವ ಗಾಂಧಿನಗರದಲ್ಲಿಯೂ ಇಂದು ಮತದಾನ ನಡೆಯಲಿದ್ದು, ಕೆಲ ಹೊತ್ತಿನಲ್ಲೇ ಅವರು ಹಕ್ಕು ಚಲಾಯಿಸಲಿದ್ದಾರೆ.

ಹಕ್ಕು ಚಲಾಯಿಸಿದ ಗಣ್ಯರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿಯಲ್ಲಿ ಮತ ಚಲಾಯಿಸಿದರು. ಅಜಿತ್ ಅವರ ಪತ್ನಿ ಸುನೇತ್ರಾ ಮತ್ತು ತಾಯಿ ಕೂಡ ಬಾರಾಮತಿಯ ಕಟೇವಾಡಿ ಮತಗಟ್ಟೆಯಲ್ಲಿ ಬೆಳಿಗ್ಗೆ ಮತದಾನ ಮಾಡಿದರು.

ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಲು ಕರೆ

ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ ಅವರು, ಈ ಮೂರನೇ ಹಂತದಲ್ಲಿ ಎಲ್ಲರೂ ಹಕ್ಕು ಚಲಾಯಿಸುವ ಮೂಲಕ ದಾಖಲೆ ಪ್ರಮಾಣದ ಮತದಾನಕ್ಕೆ ಕಾರಣವಾಗಬೇಕು ಎಂದು ಕರೆ ನೀಡಿದ್ದಾರೆ. ʼʼಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ” ಎಂದು ಅವರು ಬರೆದುಕೊಂಡಿದ್ದಾರೆ.

ಕರ್ನಾಟಕ ಸೇರಿ ಒಟ್ಟು 93 ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದೆ. ಇದರಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೂ ಸೇರಿವೆ. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Lok Sabha Election 2024: ಮೂರನೇ ಹಂತದ ಮತದಾನ ಆರಂಭ; ಇಂದು ವೋಟು ಮಾಡಲಿದ್ದಾರೆ ಮೋದಿ, ಅಮಿತ್‌ ಶಾ

ಮತದಾನ ನಡೆಯುವ ರಾಜ್ಯಗಳು

ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು (2), ಅಸ್ಸಾಂ (4), ಬಿಹಾರ (5), ಛತ್ತೀಸ್‌ಗಢ (7), ದಾದ್ರಾ, ಗೋವಾ (2), ಗುಜರಾತ್ (25), ಕರ್ನಾಟಕ (14), ಮಹಾರಾಷ್ಟ್ರ (11), ಮಧ್ಯಪ್ರದೇಶ (8), ಉತ್ತರ ಪ್ರದೇಶ (10) ಮತ್ತು ಪಶ್ಚಿಮ ಬಂಗಾಳ (4)ಗಳಲ್ಲಿ ಮತದಾನ ನಡೆಯುತ್ತಿದೆ. ಸೂರತ್ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆಲುವು ಸಾಧಿಸಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌-ರಾಜೌರಿ ಲೋಕಸಭಾ ಕ್ಷೇತ್ರಕ್ಕೂ ಇಂದೇ ಮತದಾನ ನಿಗದಿಯಾಗಿತ್ತು. ಆದರೆ ಪ್ರತಿಕೂಲ ಹವಾಮಾನ ಕಾರಣದಿಂದ ಚುನಾವಣಾ ಆಯೋಗ ಇತ್ತೀಚೆಗೆ ಇದನ್ನು ಮೇ 25ಕ್ಕೆ ಮುಂದೂಡಿತ್ತು.

Continue Reading

Lok Sabha Election 2024

Lok Sabha Election 2024: ಮೂರನೇ ಹಂತದ ಮತದಾನ ಆರಂಭ; ಇಂದು ವೋಟು ಮಾಡಲಿದ್ದಾರೆ ಮೋದಿ, ಅಮಿತ್‌ ಶಾ

Lok Sabha Election 2024: ದೇಶದ 11 ರಾಜ್ಯ ಮತ್ತು ಕೇಂದ್ರಾಡಳಿತದ ಪ್ರದೇಶಗಳ 93 ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ಆರಂಭವಾಗಿದೆ. ವಿಶೇಷ ಎಂದರೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಗುಜರಾತ್‌ನ ಅಹಮದಾಬಾದ್‌ನಲ್ಲಿ ಮತದಾನ ಮಾಡಲಿದ್ದಾರೆ. ಮೂರನೇ ಹಂತದಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 8.39 ಕೋಟಿ ಮಹಿಳೆಯರು ಸೇರಿದಂತೆ 17.24 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದು, 18.5 ಲಕ್ಷ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 1.85 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

VISTARANEWS.COM


on

Lok Sabha Election 2024
Koo

ನವದೆಹಲಿ: ಕರ್ನಾಟಕ ಸೇರಿ ದೇಶದ ವಿವಿಧ ಕಡೆ ಲೋಕಸಭಾ ಚುನಾವಣೆ (Lok Sabha Election 2024)ಯ ಮೂರನೇ ಹಂತದ ಮತದಾನ ಆರಂಭವಾಗಿದೆ. ದೇಶದ 11 ರಾಜ್ಯ ಮತ್ತು ಕೇಂದ್ರಾಡಳಿತದ ಪ್ರದೇಶಗಳ 93 ಕ್ಷೇತ್ರಗಳಲ್ಲಿನ ಮತದಾರರು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ವಿಶೇಷ ಎಂದರೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಗುಜರಾತ್‌ನ ಅಹಮದಾಬಾದ್‌ನಲ್ಲಿ ಮತದಾನ ಮಾಡಲಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದ ಆಡಳಿತಾರೂಢ ಬಿಜೆಪಿಗೆ ಈ ಹಂತ ಪ್ರಮುಖ ಎನಿಸಿಕೊಂಡಿದೆ. ಮೂರನೇ ಹಂತದಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕೇಂದ್ರ ಸಚಿವರಾದ ಅಮಿತ್ ಶಾ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮನ್ಸುಖ್ ಮಾಂಡವಿಯಾ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್ (ವಿದಿಶಾ) ಮತ್ತು ದಿಗ್ವಿಜಯ್ ಸಿಂಗ್ (ರಾಜ್‌ಗಢ) ಅವರ ಭವಿಷ್ಯ ಇಂದೇ ನಿರ್ಧಾರವಾಗಲಿದೆ. ಜತೆಗೆ ಪ್ರಮುಖ ಬಿಜೆಪಿ ನಾಯಕರಾದ ಪುರುಷೋತ್ತಮ್ ರೂಪಾಲಾ (ರಾಜ್‌ಕೋಟ್‌), ಪ್ರಹ್ಲಾದ್ ಜೋಶಿ (ಧಾರವಾಡ) ಮತ್ತು ಎಸ್‌.ಪಿ. ಸಿಂಗ್ ಬಘೇಲ್ (ಆಗ್ರಾ) ಅವರಿಗೂ ಈ ಹಂತ ನಿರ್ಣಾಯಕವಾಗಲಿದೆ.

ಗುಜರಾತ್‌ನಲ್ಲಿ ಒಟ್ಟು 26 ಕ್ಷೇತ್ರಗಳಲ್ಲಿ ಈ ಪೈಕಿ ಒಂದು ಕಡೆ ಈಗಾಗಲೇ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿದೆ. ಇನ್ನು ಉಳಿದ 25, ಮಹಾರಾಷ್ಟ್ರದ 11, ಉತ್ತರ ಪ್ರದೇಶದ 10, ಕರ್ನಾಟಕದ 28 ಸ್ಥಾನಗಳ ಪೈಕಿ 14, ಛತ್ತೀಸ್‌ಗಢದ 7, ಬಿಹಾರದ 5, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ತಲಾ 4 ಮತ್ತು ಗೋವಾದ ಎಲ್ಲ 2, ಮಧ್ಯಪ್ರದೇಶದ 9 ಸ್ಥಾನಗಳಿಗೆ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಜತೆಗೆ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು (2 ಸ್ಥಾನಗಳು)ಗಳಲ್ಲಿಯೂ ಇಂದು ವೋಟಿಂಗ್‌ ನಡೆಯಲಿದೆ.

ಪಶ್ಚಿಮ ಬಂಗಾಳದಲ್ಲಿ ನಾಲ್ಕು ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಲಿದ್ದು, ಎಡ ಪಕ್ಷ-ಕಾಂಗ್ರೆಸ್ ಒಕ್ಕೂಟ ಮತ್ತು ಟಿಎಂಸಿ ನಡುವೆ ಅಲ್ಪಸಂಖ್ಯಾತ ಮತಗಳ ವಿಭಜನೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಚಾರ ಫಲಿತಾಂಶವನ್ನು ನಿರ್ಣಯಿಸುವ ಸಾಧ್ಯತೆ ಇದೆ.

ಉತ್ತರ ಪ್ರದೇಶದ 10 ಲೋಕಸಭಾ ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ಮತದಾನ ನಡೆಯಲಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಕುಟುಂಬ ಎಲ್ಲರ ಗಮನ ಸೆಳೆದಿದೆ. ಡಿಂಪಲ್ ಯಾದವ್ ಅವರು ತಮ್ಮ ಮಾವ ಮುಲಾಯಂ ಸಿಂಗ್ ಯಾದವ್ ಅವರ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಗೆದ್ದ ಮೈನ್ಪುರಿ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳುವ ಗುರಿ ಹೊಂದಿದ್ದಾರೆ. ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರ ಪುತ್ರ ಅಕ್ಷಯ ಯಾದವ್ ಅವರು ಗೆದ್ದಿದ್ದ ಫಿರೋಜಾಬಾದ್ ಸ್ಥಾನವನ್ನು ಮರಳಿ ಪಡೆಯಲು ಪ್ರಯತ್ನಿಸಲಿದ್ದಾರೆ.

ಇದನ್ನೂ ಓದಿ: ತಮ್ಮ ಬಗ್ಗೆ ಟ್ರೋಲ್‌ ಮಾಡಿದ್ದನ್ನೂ ಮೆಚ್ಚಿದ ಮೋದಿ; ಮಮತಾ ಬ್ಯಾನರ್ಜಿ ನೋಟಿಸ್; ಯಾರು ಸರ್ವಾಧಿಕಾರಿ?

ಈ ಹಂತದಲ್ಲಿ 8.39 ಕೋಟಿ ಮಹಿಳೆಯರು ಸೇರಿದಂತೆ 17.24 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದು, 18.5 ಲಕ್ಷ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 1.85 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮೊದಲ ಎರಡು ಹಂತಗಳಲ್ಲಿ 189 ಸ್ಥಾನಗಳಿಗೆ ಮತದಾನ ಪೂರ್ಣಗೊಂಡಿತ್ತು. ಮುಂದಿನ ನಾಲ್ಕು ಹಂತಗಳು ಮೇ 13, ಮೇ 20, ಮೇ 25 ಮತ್ತು ಜೂನ್ 1ರಂದು ನಡೆಯಲಿವೆ. ಜೂನ್ 4ರಂದು ಫಲಿತಾಂಶ ಘೋಷಣೆಯಾಗಲಿದೆ.

Continue Reading

ಪ್ರಮುಖ ಸುದ್ದಿ

Lok Sabha Election : ಇಂದು 2ನೇ ಹಂತದ ವೋಟಿಂಗ್​; ನಿಮ್ಮ ‘ಮತ’ ಕಳವಾದರೆ ಹೀಗೆ ಮಾಡಿ..

Lok Sabha Election : ಒಂದು ವೇಳೆ ಅಕ್ರಮವಾಗಿ ಅಥವಾ ಆಕಸ್ಮಿಕವಾಗಿ ನಮ್ಮ ಮತವನ್ನು ಬೇರೆಯವರು ಚಲಾಯಿಸಿದರೆ ಏನು ಮಾಡಬೇಕು, ಹೀಗಾದಾಗ ನಮ್ಮ ಮತದಾನದ ಹಕ್ಕನ್ನು ನಾವು ಮತ್ತೆ ಚಲಾಯಿಸಲು ಸಾಧ್ಯವೇ ? ಈ ಸಂದರ್ಭದಲ್ಲಿ ನಾವು ಏನು ಕ್ರಮ ಕೈಗೊಳ್ಳಬಹುದು ಮೊದಲಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

Lok Sabha Election
Koo

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಎರಡನೇ ಹಂತದ ಮತದಾನವು ಮಂಗಳವಾರ (ಮೇ 7) ನಿಗದಿಯಾಗಿದೆ. ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ ಈ ಹಂತದಲ್ಲಿ ಚುನಾವಣೆ ನಡೆಯಲಿದೆ. ಮತದಾನದ ದಿನ ಹತ್ತಿರ ಬಂದ ಬಳಿಕವೂ ಇನ್ನೂ ಮತದಾರರಲ್ಲಿ (voters) ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಇರುತ್ತವೆ . ಇದರಲ್ಲಿ ನಮ್ಮ ಮತವನ್ನು (vote) ಬೇರೆಯವರು ಚಲಾವಣೆ ಮಾಡಿದರೆ ಏನಾಗುತ್ತದೆ ಎಂಬ ಪ್ರಶ್ನೆ ಖಂಡಿತಾ ಇರುತ್ತದೆ. ಹಾಗಾದರೆ ಈ ಸಂದರ್ಭದಲ್ಲಿ ನೀವು ಏನು ಮಾಡಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ದೇಶದ ಬಹುದೊಡ್ಡ ಚುನಾವಣೆಗಾಗಿ ಚುನಾವಣಾ ಅಧಿಕಾರಿಗಳು (election officers), ವಿವಿಧ ಪಕ್ಷಗಳ ಅಭ್ಯರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಈಗಾಗಲೇ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಆದರೆ ಇದರಲ್ಲಿ ಬಹುದೊಡ್ಡ ಪಾಲುದಾರ ಪ್ರತಿಯೊಬ್ಬ ಮತದಾರ. ಅವರ ಅಧಿಕಾರ, ಹಕ್ಕನ್ನು ಬೇರೆಯವರು ಚಲಾಯಿಸಲು ಸಾಧ್ಯವಿಲ್ಲ. ಒಂದು ವೇಳೆ ಅಕ್ರಮವಾಗಿ ಅಥವಾ ಆಕಸ್ಮಿಕವಾಗಿ ನಮ್ಮ ಮತವನ್ನು ಬೇರೆಯವರು ಚಲಾಯಿಸಿದರೆ ಏನು ಮಾಡಬೇಕು, ಹೀಗಾದಾಗ ನಮ್ಮ ಮತದಾನದ ಹಕ್ಕನ್ನು ನಾವು ಮತ್ತೆ ಚಲಾಯಿಸಲು ಸಾಧ್ಯವೇ ? ಈ ಸಂದರ್ಭದಲ್ಲಿ ನಾವು ಏನು ಕ್ರಮ ಕೈಗೊಳ್ಳಬಹುದು ಮೊದಲಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಬೇರೆಯವರು ನಮ್ಮ ಮತ ಚಲಾಯಿಸಬಹುದೇ?

ಬೇರೆಯವರು ನಮ್ಮ ಮತ ಚಲಾಯಿಸಲು ಸಾಧ್ಯವಿಲ್ಲ. ಒಂದು ವೇಳೆ ಚಲಾಯಿಸಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗದಿಂದ ಒಂದು ನಿಬಂಧನೆಯನ್ನು ಮಾಡಲಾಗಿದೆ. ಮತದಾರನ ಬಳಿ ವೋಟರ್ ಐಡಿ ಮತ್ತು ವೋಟಿಂಗ್ ಸ್ಲಿಪ್ ಇದ್ದರೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ. ಆದರೆ ನಿಮ್ಮ ಮತವನ್ನು ಟೆಂಡರ್ಡ್ ಬ್ಯಾಲೆಟ್ ಪೇಪರ್ ಎಂದು ಗುರುತಿಸಲಾಗುತ್ತದೆ ಮತ್ತು ಪ್ರತ್ಯೇಕವಾಗಿ ಇರಿಸಲಾಗುತ್ತದೆ.

ತಕ್ಷಣ ದೂರು ನೀಡಿ

ಮತಗಟ್ಟೆ ಅಧಿಕಾರಿಯು ಮತಗಟ್ಟೆಯೊಳಗೆ ಬರುವಾಗ ನಿಮ್ಮ ಮತವು ಈಗಾಗಲೇ ಚಲಾವಣೆಯಾಗಿದೆ ಎಂದು ತಿಳಿಸಿದರೆ ಭಾರತೀಯ ಚುನಾವಣಾ ಕಾಯಿದೆ 1961ರ ಅಡಿಯಲ್ಲಿ ಯಾರಾದರೂ ನಿಮ್ಮ ಹೆಸರಿನಲ್ಲಿ ಮತ ಚಲಾಯಿಸಿದರೆ ತಕ್ಷಣ ಸ್ಥಳದಲ್ಲಿರುವ ಪ್ರಿಸೈಡಿಂಗ್ ಅಧಿಕಾರಿಗೆ ದೂರು ನೀಡಿ. ಆಗ ಟೆಂಡರ್ಡ್ ಮತವನ್ನು ಚಲಾಯಿಸಲು ಕಾನೂನು ನಿಮಗೆ ಅವಕಾಶ ನೀಡುತ್ತದೆ.

ಇದನ್ನೂ ಓದಿ: Lok Sabha Election 2024: ಮತದಾನ ಮಾಡಲು ದುಬೈನಿಂದ ಗಂಗಾವತಿಗೆ ಆಗಮಿಸಿದ ದಂಪತಿ

ಚುನಾವಣಾ ನಿಯಮಗಳ ನಿಯಮ 49ಪಿ ಪ್ರಕಾರ ಟೆಂಡರ್ಡ್ ಬ್ಯಾಲೆಟ್ ಪೇಪರ್ ಅನ್ನು ನಿಮಗೆ ನೀಡಲಾಗುತ್ತದೆ ಮತ್ತು ಟೆಂಡರ್ ಮಾಡಿದ ಮತಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸಹಿ ಮಾಡಬೇಕಾಗುತ್ತದೆ. ವಿದ್ಯುನ್ಮಾನ ಮತಯಂತ್ರದಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ. ಟೆಂಡರ್ ಮಾಡಿದ ಮತಪತ್ರವು ಬ್ಯಾಲೆಟ್ ಯೂನಿಟ್‌ನಲ್ಲಿ ಪ್ರದರ್ಶಿಸಲಾದ ಬ್ಯಾಲೆಟ್ ಪೇಪರ್‌ನಂತೆಯೇ ಇರುತ್ತದೆ. ಟೆಂಡರ್ಡ್ ಬ್ಯಾಲೆಟ್ ಪೇಪರ್ ಅನ್ನು ಪ್ರಿಸೈಡಿಂಗ್ ಅಧಿಕಾರಿಗೆ ಮರಳಿ ನೀಡಬೇಕು.

ಹೇಗೆ ಮತ ಹಾಕುವುದು?

ಬಾಣದ ಕ್ರಾಸ್ ಮಾರ್ಕ್ ರಬ್ಬರ್ ಸ್ಟಾಂಪ್ ಸಹಾಯದಿಂದ ನಿಮ್ಮ ಅಭ್ಯರ್ಥಿಯ ಆಯ್ಕೆಯನ್ನು ಗುರುತಿಸಿದ ಅನಂತರ ನೀವು ಟೆಂಡರ್ ಮಾಡಿದ ಮತಪತ್ರವನ್ನು ಪ್ರಿಸೈಡಿಂಗ್ ಅಧಿಕಾರಿಗೆ ಹಸ್ತಾಂತರಿಸಬೇಕು. ಅವರು ಅದನ್ನು ಪ್ರತ್ಯೇಕ ಕವರ್‌ನಲ್ಲಿ ಇಡುತ್ತಾರೆ.

ಚಾಲೆಂಜ್ಡ್ ವೋಟ್

ಟೆಂಡರ್ ಮಾಡಿದ ಬ್ಯಾಲೆಟ್ ಪೇಪರ್ ಅನ್ನು ಚಾಲೆಂಜ್ಡ್ ವೋಟ್ ಎಂದೂ ಕರೆಯುತ್ತಾರೆ. ಬಳಿಕ ನಿಮ್ಮ ಜಾಗದಲ್ಲಿ ಯಾರು ಮತ ಹಾಕಿದ್ದಾರೆ ಎಂಬುದನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸಿ ಅದನ್ನು ತೆಗೆದು ನಿಮ್ಮ ಮತವನ್ನು ಎಣಿಕೆಗೆ ಹಾಕಲಾಗುತ್ತದೆ.

ಗುರುತಿನ ಪುರಾವೆ ನೀಡಬೇಕು

ಮತದಾರರಾಗಿ ನಿಮ್ಮ ಗುರುತಿನ ಬಗ್ಗೆ ಯಾವುದೇ ಅಭ್ಯರ್ಥಿಯ ಪೋಲಿಂಗ್ ಏಜೆಂಟ್‌ ಪ್ರಶ್ನಿಸಿದರೆ ಚುನಾವಣಾ ಅಧಿಕಾರಿಗಳು ನಿಮ್ಮ ಗುರುತಿನ ಪುರಾವೆಯನ್ನು ಕೇಳುತ್ತಾರೆ. ಇದಕ್ಕಾಗಿ ನೀವು ಎಪಿಕ್ ಅಥವಾ ಪಾಸ್‌ಪೋರ್ಟ್, ರೇಷನ್ ಕಾರ್ಡ್‌ನಂತಹ ಯಾವುದೇ ದಾಖಲೆಯನ್ನು ಹೊಂದಿರಬೇಕು. ಆದರೂ ಅವರು ಸವಾಲು ಮಾಡಿ ಮತದಾನಕ್ಕೆ ಅನುಮತಿ ನೀಡದೇ ಇದ್ದರೆ ಪ್ರಿಸೈಡಿಂಗ್ ಅಧಿಕಾರಿಯಿಂದ ಲಿಖಿತ ದೂರನ್ನು ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ.

ಎಷ್ಟು ಮತದಾರರು?

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಸುಮಾರು 97 ಕೋಟಿ ಭಾರತೀಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಭಾರತದಲ್ಲಿ 96.88 ಕೋಟಿ ಜನರು ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ, ಇದು ವಿಶ್ವದ ಅತಿದೊಡ್ಡ ಮತದಾರರ ಪೂಲ್ ಆಗಿದೆ. ಆಯೋಗದ ಪ್ರಕಾರ, 2019 ರ ಲೋಕಸಭಾ ಚುನಾವಣೆ ಬಳಿಕ ನೋಂದಾಯಿತ ಮತದಾರರ ಸಂಖ್ಯೆ ಶೇ. 6ರಷ್ಟು ಹೆಚ್ಚಾಗಿದೆ

Continue Reading
Advertisement
Salman Khan
ಸಿನಿಮಾ5 mins ago

Salman Khan: ಸಲ್ಮಾನ್‌ ಖಾನ್‌ ಮನೆ ಎದುರು ಫೈರಿಂಗ್‌ ಕೇಸ್‌; ಐದನೇ ಆರೋಪಿಯ ಬಂಧನ

Dharamsala Stadium
ಕ್ರೀಡೆ8 mins ago

Dharamsala Stadium: ಧರ್ಮಶಾಲಾದಲ್ಲಿ ಅನಾವರಣಗೊಂಡ ದೇಶದ ಮೊದಲ ಹೈಬ್ರಿಡ್‌ ಕ್ರಿಕೆಟ್ ಪಿಚ್​ನ ವಿಶೇಷತೆ ಏನು?

Gold rate today
ಚಿನ್ನದ ದರ9 mins ago

Gold Rate Today: ಚಿನ್ನದ ಬೆಲೆ ಗ್ರಾಂಗೆ ₹33 ಏರಿಕೆ; 24 ಕ್ಯಾರಟ್‌ ಬಂಗಾರದ ದರ ಇಂದು ₹7,238

Narendra Modi
ದೇಶ16 mins ago

Narendra Modi: “ನಾನು ಇಸ್ಲಾಂ ವಿರೋಧಿ ಅಲ್ಲ, ಆದರೆ ಮುಸ್ಲಿಮರು…”; ಕಾಂಗ್ರೆಸ್‌ ಆರೋಪದ ಬಗ್ಗೆ ಮೋದಿ ಹೇಳಿದ್ದೇನು?

Job Alert
ಉದ್ಯೋಗ49 mins ago

Job Alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

LIQUID NITROGEN
ಬೆಂಗಳೂರು51 mins ago

Liquid Nitrogen : ಕಾಟನ್ ಕ್ಯಾಂಡಿ ಬಳಿಕ ಕರ್ನಾಟಕದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿಷೇಧ

IPL 2024
ಕ್ರೀಡೆ55 mins ago

IPL 2024: ಬಸ್‌ ಕಂಡಕ್ಟರ್‌ಗಳಿಗೆ ವಿಶೇಷ ಉಡುಗೊರೆ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್

prajwal ravanna case dk shivakumar poster
ಪ್ರಮುಖ ಸುದ್ದಿ1 hour ago

Prajwal Revanna Case: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಪೋಸ್ಟರ್ ವಾರ್‌

Naxal activities
ದೇಶ1 hour ago

Naxal activities: 6 ಕುಕ್ಕರ್‌ ಬಾಂಬ್‌, IED ಸ್ಫೋಟಕಗಳು ಪತ್ತೆ; ತಪ್ಪಿದ ಭಾರೀ ನಕ್ಸಲ್‌ ಅಟ್ಯಾಕ್‌

Rohit Sharma
ಕ್ರೀಡೆ2 hours ago

Rohit Sharma: ರೋಹಿತ್ ಶರ್ಮ​ ಕಣ್ಣೀರಿಗೆ ಅಸಲಿ ಕಾರಣ ಇದಂತೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ17 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ18 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ18 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌