Priyanka Upendra Interview: ಸ್ಯಾಂಡಲ್‌ವುಡ್‌ ನಟಿ ಪ್ರಿಯಾಂಕಾ ಉಪೇಂದ್ರ ಸಿಗ್ನೇಚರ್‌ ಸ್ಟೈಲ್‌ ಏನು? - Vistara News

ಫ್ಯಾಷನ್

Priyanka Upendra Interview: ಸ್ಯಾಂಡಲ್‌ವುಡ್‌ ನಟಿ ಪ್ರಿಯಾಂಕಾ ಉಪೇಂದ್ರ ಸಿಗ್ನೇಚರ್‌ ಸ್ಟೈಲ್‌ ಏನು?

ಸ್ಯಾಂಡಲ್‌ವುಡ್‌ ಬ್ಯೂಟಿಫುಲ್‌ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra Interview) ನಟನೆಗೂ ಮುನ್ನವೇ ಫ್ಯಾಷನ್‌ ಲೋಕದಲ್ಲೂ ಹೆಜ್ಜೆ ಇಟ್ಟಿದ್ದರಂತೆ. ಸಿನಿಮಾ ಲೋಕಕ್ಕೆ ಕಾಲಿಡಲು ಫ್ಯಾಷನ್‌ ಲೋಕವೇ ಕಾರಣ ಎಂದು ತಮ್ಮ ಆರಂಭದ ಫ್ಯಾಷನ್‌ ಪೇಜೆಂಟ್‌ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ವಿಸ್ತಾರ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

VISTARANEWS.COM


on

Star Fashion Interview
ಚಿತ್ರಗಳು: ಪ್ರಿಯಾಂಕಾ ಉಪೇಂದ್ರ, ನಟಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಂದರ್ಶನ: ಶೀಲಾ ಸಿ. ಶೆಟ್ಟಿ

ಸ್ಯಾಂಡಲ್‌ವುಡ್‌ನ ಬ್ಯೂಟಿಫಿಲ್‌ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra Interview) ಯಾರಿಗೆ ಗೊತ್ತಿಲ್ಲ? ಕೋಲ್ಕೋತಾ ಬೆಡಗಿಯಾಗಿದ್ದ ಇವರು ಫ್ಯಾಷನ್‌ ಪೇಜೆಂಟ್‌ನಲ್ಲಿ ವಿಜೇತರಾದ ನಂತರವೇ ನಟಿಯಾಗಿದರಂತೆ. ಹಾಗೆಂದು ಅವರೇ ಹೇಳಿದ್ದಾರೆ. ನನಗಂತೂ ಫ್ಯಾಷನ್‌ ಶೋಗಳೆಂದರೆ ನನ್ನ ಹಳೆಯ ದಿನ ನೆನಪಾಗುತ್ತದೆ. ಸಿನಿಮಾಗಿಂತ ಮುಂಚೆಯ ಆರಂಭದ ದಿನಗಳು ಮನದಲ್ಲಿ ಸುಳಿದಾಡುತ್ತವೆ ಎನ್ನುತ್ತಾರೆ. ಈ ಬಗ್ಗೆ ಅವರು ವಿಸ್ತಾರ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ, ತಮ್ಮ ಸಿಗ್ನೇಚರ್‌ ಸ್ಟೈಲ್‌ ಹಾಗೂ ಫ್ಯಾಷನ್‌ ಲವ್‌ ಬಗ್ಗೆ ಮಾತನಾಡಿದ್ದಾರೆ.

Star Fashion Interview
ಪ್ರಿಯಾಂಕಾ ಉಪೇಂದ್ರ

ವಿಸ್ತಾರ: ಫ್ಯಾಷನ್‌ ಶೋ ಎಂದಾಕ್ಷಣ ನಿಮ್ಮಕಣ್ಣರಳುತ್ತದಲ್ಲ? ಇದಕ್ಕೆ ಕಾರಣವೇನು?

ಸಿನಿಮಾದಲ್ಲಿ ನಟಿಸುವ ಮುನ್ನ ನಾನು ಕೂಡ ಕೋಲ್ಕೋತಾದಲ್ಲಿ ನಡೆದ ಪೇಜೆಂಟ್‌ನಲ್ಲಿ ಭಾಗವಹಿಸಿ ವಿಜೇತಳಾಗಿದ್ದೆ. ಅಂದು ಮಾಡಿದ ರ್ಯಾಂಪ್‌ ವಾಕ್‌ ಇಂದಿಗೂ ನಾನು ಮರೆತಿಲ್ಲ! ಎಷ್ಟೇ ಬಾರಿ ರ್ಯಾಂಪ್‌ ಏರಿದರೂ ಕೂಡ ಖುಷಿಯಾಗುತ್ತೆ. ಮತ್ತೊಮ್ಮೆ ನನ್ನ ಹಿಂದಿನ ರ್ಯಾಂಪ್‌ ದಿನಗಳು ನೆನಪಾಗುತ್ತೆ. ಅದಕ್ಕೆ ಇರಬೇಕು ಅಷ್ಟೊಂದು ಕಾನ್ಫಿಡೆನ್ಸ್‌ ಆಗಿ ರ್ಯಾಂಪ್‌ ವಾಕ್‌ ಮಾಡುತ್ತೇನೆ.

Star Fashion Interview

ಎಷ್ಟು ಬಾರಿ ಧರಿಸಿದರೂ ಮತ್ತೊಮ್ಮೆ ಧರಿಸಬೇಕೆಂಬ ಇಚ್ಛೆಯಾಗುವ ಫೇವರೇಟ್‌ ಅಟೈರ್‌ ಯಾವುದು?

ಸೀರೆ. ಹೌದು. ನನಗೆ ಸೀರೆ ಉಡುವುದೆಂದರೇ ಸಖತ್‌ ಇಷ್ಟ. ಎಷ್ಟು ಬಾರಿ ಎಷ್ಟೇ ಸೀರೆ ಉಟ್ಟರೂ ಮತ್ತೊಮ್ಮೆ ಉಡಲು ಆಸೆಯಾಗುತ್ತದೆ. ಅಷ್ಟೊಂದು ಇಷ್ಟ ನನಗೆ. ನನ್ನ ಬಳಿ ಸಾಕಷ್ಟು ಸೀರೆಗಳ ಕಲೆಕ್ಷನ್‌ ಇದೆ. ಒಂದೊಂದು ಬಾರಿಯೂ ಸೀರೆಯನ್ನು ಮೊದಲ ಬಾರಿ ಸೀರೆ ಉಟ್ಟಂತೆ ಉತ್ಸಾಹದಿಂದ ಉಡುತ್ತೇನೆ.

Star Fashion Interview

ವಿವಾಹಿತರ ಫ್ಯಾಷನ್‌ ಪೇಜೆಂಟ್‌ನಲ್ಲಿ ಭಾಗವಹಿಸಲು ಬಯಸುವ ಮಹಿಳೆಯರಿಗೆ ಯಾವ ರೀತಿಯ ಸಲಹೆ ನೀಡಲು ಬಯಸುತ್ತೀರಾ?

ಆತ್ಮವಿಶ್ವಾಸದಿಂದ ಭಾಗವಹಿಸಿ. ವಿಜೇತರಾಗುವುದೇ ಮುಖ್ಯವಲ್ಲ! ಭಾಗವಹಿಸುವುದು ಮುಖ್ಯ. ಈ ಸಂದರ್ಭದಲ್ಲಿ ನಿಮಗೆ ಕಲಿಯಲು ಸಾಕಷ್ಟು ಅವಕಾಶಗಳು ದೊರೆಯಬಹುದು. ಇದಕ್ಕೆ ಪೂರಕ ಎಂಬಂತೆ, ಮಿಸೆಸ್‌ ಇಂಟರ್‌ನ್ಯಾಷನಲ್‌ ಸೂಪರ್‌ ಕ್ವೀನ್‌ ಪೇಜೆಂಟ್‌ ಕೂಡ ಮಹಿಳೆಯರಿಗೆ ಸಾಕಷ್ಟು ಸಪೋರ್ಟ್ ಮಾಡುತ್ತಿದೆ.

ನಿಮ್ಮ ಸಿಗ್ನೇಚರ್‌ ಸ್ಟೈಲ್‌ ಏನು ?

ಅದು ಕೂಡ ಸೀರೆ. ಯಾಕೆಂದರೆ ನಾನು ಸೀರೆಯ ಟ್ರೆಡಿಷನಲ್‌ ಲುಕ್‌ನಲ್ಲಿ ಮಾತ್ರ ಒಂದೇ ರೀತಿ ಕಾಣಿಸುತ್ತೇನೆ. ಹಾಗಾಗಿ ಸೀರೆ ನನ್ನ ಸಿಗ್ನೇಚರ್‌ ಸ್ಟೈಲನ್ನು ಪ್ರತಿಬಿಂಬಿಸುತ್ತದೆ.

Star Fashion Interview

ನೀವು ಪಾಲಿಸುವ ಫ್ಯಾಷನ್‌ ಸ್ಟೇಟ್‌ಮೆಂಟ್‌ ಏನು?

ನನಗೆ ಎಲ್ಲಾ ಬಗೆಯ ಉಡುಪುಗಳು ಇಷ್ಟವಾಗುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಅವು ನನಗೆ ಕಂಫರ್ಟಬಲ್‌ ಫೀಲಿಂಗ್‌ ನೀಡಬೇಕಷ್ಟೇ! ವಿನ್ಯಾಸಗಳು ಅಷ್ಟೇ! ನೋಡಲು ಟ್ರೆಂಡಿಯಾಗಿರಬೇಕು. ಮನಮೋಹಕವಾಗಿರಬೇಕು.

ಫ್ಯಾಮಿಲಿಯೊಂದಿಗೆ ಟ್ರೆಡಿಷನಲ್‌ ಅಟೈರ್‌ ಧರಿಸಿ ಪ್ರತಿ ಹಬ್ಬ ಆಚರಿಸುತ್ತೀರಲ್ಲ! ಈ ಔಟ್‌ಫಿಟ್‌ ಪ್ಲಾನಿಂಗ್‌ ಯಾರದ್ದು?

ಎಲ್ಲರೂ ಎಥ್ನಿಕ್‌ ಅಟೈರ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂದು ಒಟ್ಟಾಗಿ ನಿರ್ಧಾರ ಮಾಡುತ್ತೀವಿ. ನಂತರ ಎಲ್ಲರೂ ಅವರವರ ಅಭಿರುಚಿಗೆ ತಕ್ಕಂತೆ ಟ್ರೆಡಿಷನಲ್‌ವೇರ್‌ನಲ್ಲಿ ಕಾಣಿಸಿಕೊಳ್ಳುತ್ತಿವಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Sandalwood Star Fashion: ಸ್ಯಾಂಡಲ್‌ವುಡ್‌ ನಟಿ ಸಂಯಕ್ತಾ ಹೆಗ್ಡೆ ಲೈಫ್‌ಸ್ಟೈಲ್‌ಗೆ ತಕ್ಕಂತೆ ಬದಲಾಗುವ ಫ್ಯಾಷನ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Raveena tandon Saree fashion: ಜಯಂತಿ ಬಲ್ಲಾಳ್‌ ಡಿಸೈನರ್‌ ಸೀರೆಯಲ್ಲಿ ನಟಿ ರವೀನಾ ಟಂಡನ್‌ ಜಾದೂ!

ಮೈಸೂರಿನ (Raveena tandon Saree fashion) ಸೆಲೆಬ್ರೆಟಿ ಡಿಸೈನರ್‌ ಜಯಂತಿ ಬಲ್ಲಾಳ್‌ ಅವರ ಡಿಸೈನರ್‌ ರೇಷ್ಮೆ ಸೀರೆ ಹಾಗೂ ಬ್ಲೌಸ್‌ನಲ್ಲಿ ಬಾಲಿವುಡ್‌ ನಟಿ ರವೀನಾ ಟಂಡನ್‌ ಮಿಂಚಿದ್ದಾರೆ. ಹಾಗಾದಲ್ಲಿ ಅವರು ಉಟ್ಟ ಸೀರೆಯ ವಿಶೇಷತೆಯೇನು? ಈ ಬಗ್ಗೆ ಡಿಸೈನರ್‌ ಜಯಂತಿ ಬಲ್ಲಾಳ್‌ ಅವರು ವಿಸ್ತಾರ ನ್ಯೂಸ್‌ಗೆ ವಿವರಿಸಿದ್ದಾರೆ.

VISTARANEWS.COM


on

Raveena tandon Saree fashion magic in Jayanthi Ballal designer
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮೈಸೂರಿನ ಸೆಲೆಬ್ರೆಟಿ ಡಿಸೈನರ್‌ ಜಯಂತಿ ಬಲ್ಲಾಳ್‌ ಅವರ ಡಿಸೈನರ್‌ ಸೀರೆ ಹಾಗೂ ಬ್ಲೌಸ್‌ನಲ್ಲಿ ಬಾಲಿವುಡ್‌ ನಟಿ, ಮಸ್ತ್‌ ಮಸ್ತ್‌ ಬೆಡಗಿ ರವೀನಾ ಟಂಡನ್‌ (Raveena tandon Saree fashion) ಮಿಂಚಿದ್ದಾರೆ.
ಹೌದು. ನಟಿ ರವೀನಾ ಟಂಡನ್‌ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಜಯಂತಿ ಅವರು ಡಿಸೈನ್‌ ಮಾಡಿದ ವಿಶೇಷವಾದ ಟ್ರೆಡಿಷನಲ್‌ ರೇಷ್ಮೆ ಸೀರೆಗೆ ವಿನ್ಯಾಸಗೊಳಿಸಲಾದ ಬ್ಲೌಸ್‌ ಧರಿಸಿ ದೇವತೆಯಂತೆ ಕಂಗೊಳಿಸಿದ್ದಾರೆ.

ಬಾಲಿವುಡ್‌ ನಟಿ ರವೀನಾ ಸೀರೆ ಪ್ರೇಮ

ಅಂದಹಾಗೆ, ರವೀನಾ ಟಂಡನ್‌ ಮೈಸೂರಿನ ಜಯಂತಿ ಬಲ್ಲಾಳ್‌ ಡಿಸೈನರ್‌ ಸೀರೆಯಲ್ಲಿ ಕಂಗೊಳಿಸಿರುವುದು ಇದು ಮೊದಲೇನಲ್ಲ! ಈಗಾಗಲೇ ಮೈಸೂರು ಫ್ಯಾಷನ್‌ ವೀಕ್‌ನಲ್ಲೂ ಕೂಡ ಅವರ ಡಿಸೈನರ್‌ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡು, ರ್ಯಾಂಪ್‌ ಮೇಲೆ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿದ್ದರು. ಸೀರೆ ಪ್ರಿಯರ ಮನಗೆದ್ದಿದ್ದರು. ಇದರೊಂದಿಗೆ ಆಗಲೂ ಜಯಂತಿ ಅವರ ಸೀರೆ ವಿನ್ಯಾಸದ ಬಗ್ಗೆ ಹಾಡಿ ಹೊಗಳಿದ್ದರು.

ಜಯಂತಿ ಬಲ್ಲಾಳ್‌ ಡಿಸೈನರ್‌ ರೇಷ್ಮೆ ಸೀರೆ ವಿಶೇಷತೆ

ಬಾಲಿವುಡ್‌ ನಟಿ ರವೀನಾ ಟಂಡನ್‌ ಅವರಿಗೆ ಪ್ರಿಯವಾಗುವಂತಹ ಶೇಡ್ಸ್‌ ಹಾಗೂ ಡಿಸೈನ್‌ನ ಸೀರೆ ವಿನ್ಯಾಸಗೊಳಿಸಿರುವ ಜಯಂತಿ ಅವರು ಈ ಸೀರೆ ಬಗ್ಗೆ ಹೇಳುವುದು ಹೀಗೆ. ಪರಿಶುದ್ಧ ಕಂಚಿ ಸಿಲ್ಕ್‌ ಸೀರೆಯನ್ನು ಪಲ್ಲುವಿನ ಕಡೆ ಮಾತ್ರವಲ್ಲದೆ, ಸೀರೆಯ ನಾನಾ ಕಡೆ ಗೋಲ್ಡ್‌ ವರ್ಕ್ನಿಂದ ವಿನ್ಯಾಸಗೊಳಿಸಲಾಗಿದೆ. ಸಿಲ್ವರ್‌ ಜರ್ದೋಸಿ ವರ್ಕ್‌ ಜೊತೆಜೊತೆಗೆ ಪರ್ಲ್‌ ಹಾಗೂ ಸಿಕ್ವೀನ್ಸ್‌ ಹ್ಯಾಂಡ್‌ ವರ್ಕ್‌ ಮಾಡಲಾಗಿದೆ. ಪ್ರಿಶೀಯಸ್‌ ಸ್ಟೋನ್ಸ್‌ ಲುಕ್‌ನಂತೆ ಬಿಂಬಿಸುವ ಕುಂದನ್‌ ವರ್ಕ್‌ ಕೂಡ ಮಾಡಲಾಗಿದೆ. ಇಡೀ ಸೀರೆಯ ಒಡಲು ಬುಟ್ಟಾ ಹೊಂದಿದೆ. ತೀರಾ ಲೈಟ್‌ವೈಟ್‌ ಆಗಿರುವ ಇದು ಬ್ಯೂಟಿಫುಲ್‌ ಬ್ರೈಡಲ್‌ ಸೀರೆ ಎಂದು ವಿವರಿಸುತ್ತಾರೆ ಡಿಸೈನರ್‌ ಜಯಂತಿ. ಸೀರೆಗಳನ್ನು ಅತ್ಯಾಕರ್ಷಕವಾಗಿ ಡಿಸೈನ್‌ಗೊಳಿಸುವುದರೊಂದಿಗೆ ಅದ್ಭುತ ನೆಕ್‌ಲೈನ್‌ ಇರುವಂತಹ ಬ್ಲೌಸನ್ನು ಕೂಡ ಅತ್ಯಾಕರ್ಷಕವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮೈಸೂರಿನ ಸಂಸ್ಕೃತಿಯ ದ್ಯೋತಕ

ಇಡೀ ಸೀರೆ ಹಾಗೂ ಬ್ಲೌಸನ್ನು ಸಿದ್ಧಗೊಳಿಸಲು ಸರಿ ಸುಮಾರು 90 ಗಂಟೆಗಳ ಕಾಲ ಹಿಡಿದಿದ್ದು, 4 ಮಂದಿ ಆರ್ಟಿಸನ್ಸ್‌ ಇದನ್ನು ಸಿಂಗರಿಸುವಲ್ಲಿ ಕಾರ್ಯೊನ್ಮುಖರಾಗಿದ್ದರು ಎನ್ನುತ್ತಾರೆ ಜಯಂತಿ ಬಲ್ಲಾಳ್‌. ಮೈಸೂರಿನ ಕಲ್ಚರ್‌ ಹಾಗೂ ಹೆರಿಟೇಜ್‌ ಪ್ರತಿಬಿಂಬಿಸುವ ವಿನ್ಯಾಸಕ್ಕೆ ಆದ್ಯತೆ ನೀಡಲಾಗಿದೆ ಎನ್ನುತ್ತಾರೆ ಅವರು.

ಇದನ್ನೂ ಓದಿ: Neha Murder case : ನ್ಯಾಯಾಧೀಶರ ಎದುರೆ ನೇಹಾ ಕೊಲೆ ಆರೋಪಿ ಫಯಾಜ್‌ನ DNA ಮಾದರಿ ಸಂಗ್ರಹ!

ರವೀನಾ-ಜಯಂತಿ ಸೀರೆ ಕೆಮಿಸ್ಟ್ರಿ

ಬಾಲಿವುಡ್‌ ನಟಿ ರವೀನಾ ಟಂಡನ್‌ ಹಾಗೂ ಡಿಸೈನರ್‌ ಜಯಂತಿ ಬಲ್ಲಾಳ್‌ ಅವರ ಸೀರೆ ಕೆಮಿಸ್ಟ್ರಿ ಸಖತ್‌ ಆಗಿದೆ. ಇದಕ್ಕೆ ಪ್ರತ್ಯಕ್ಷ ಸಾಖ್ಷಿ ಪ್ರತಿಬಾರಿ ರವೀನಾ ಒಂದೂ ಮಾತನಾಡದೇ ಜಯಂತಿ ಅವರ ಸೀರೆಯುಟ್ಟು ಸಿಂಗಾರಗೊಳ್ಳುವುದು. ಸಂತಸಪಡುವುದು. ನೀವು ಏನೇ ಡಿಸೈನ್‌ ಮಾಡಿದ್ದರೂ ಸರಿಯೇ !ಅದರ ಬಗ್ಗೆ ಯೋಚಿಸುವಂತೆಯೇ ಇಲ್ಲ! ಆ ಮಟ್ಟಿಗೆ ಜಯಂತಿ ಡಿಸೈನ್‌ ಮಾಡಿದ ಸೀರೆ ಆಕರ್ಷಕವಾಗಿರುತ್ತದೆ ಎಂದು ಹಾಡಿ ಹೊಗಳುತ್ತಾರೆ ರವೀನಾ. ಇನ್ನು, ಜಯಂತಿಯವರು ಮುಂಬಯಿಗೆ ಹೋದಾಗ ರವೀನಾ ಮನೆಗೆ ಭೇಟಿ ನೀಡುವ ಅವರು ಸ್ನೇಹಿತರಂತೆ ಟೈಮ್‌ ಕಳೆಯುತ್ತಾರೆ. ಒಟ್ಟಿನಲ್ಲಿ, ರವೀನಾ ಅವರ ಮೈಸೂರು ವಿಸಿಟ್ಸ್‌ ಜಯಂತಿಯವರ ಸೀರೆಯೊಂದಿಗೆ ಕನೆಕ್ಟ್‌ ಆಗಿದೆ ಎನ್ನಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ದೇಶ

Reliance Retail: ರಿಲಯನ್ಸ್‌ ರಿಟೇಲ್‌ನಲ್ಲಿ ಎಎಸ್‌ಒಎಸ್‌ ಬ್ರ್ಯಾಂಡ್‌ನ ಉತ್ಪನ್ನಗಳು ಈಗ ಲಭ್ಯ

Reliance Retail: ಬ್ರಿಟನ್‌ನ ಪ್ರಮುಖ ಆನ್‌ಲೈನ್‌ ಫ್ಯಾಷನ್‌ ಕಂಪನಿ ಎಎಸ್‌ಒಎಸ್‌ ನ (ಎಸೋಸ್‌) ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ರಿಲಯನ್ಸ್‌ ರಿಟೇಲ್‌ ಕಂಪನಿಯು ದೀರ್ಘಾವಧಿಯ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ ರಿಲಯನ್ಸ್‌ ರಿಟೇಲ್‌ ಕಂಪನಿಯು ಭಾರತದಲ್ಲಿ ತನ್ನ ಆನ್‌ಲೈನ್‌ ಮತ್ತು ಆಫ್‌ಲೈನ್‌ ಪ್ಲಾಟ್‌ಫಾರಂಗಳಲ್ಲಿ (ASOS) ಎಎಸ್‌ಒಎಸ್‌ನ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲಿದೆ. ಎಎಸ್‌ಒಎಸ್‌ ಕಂಪನಿಯು ಜಗತ್ತಿನಾದ್ಯಂತ ಯುವ ಪೀಳಿಗೆಯಲ್ಲಿ ಜನಪ್ರಿಯವಾಗಿದ್ದು, 200ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿ ಕಂಪನಿಯ ಉತ್ಪನ್ನಗಳು ಲಭ್ಯವಿವೆ.

VISTARANEWS.COM


on

ASOS brand products are available at Reliance Retail
Koo

ನವದೆಹಲಿ: ಬ್ರಿಟನ್‌ನ ಪ್ರಮುಖ ಆನ್‌ಲೈನ್‌ ಫ್ಯಾಷನ್‌ ಕಂಪನಿ ಎಎಸ್‌ಒಎಸ್‌ ನ (ಎಸೋಸ್‌) ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ರಿಲಯನ್ಸ್‌ ರಿಟೇಲ್‌ (Reliance Retail) ಕಂಪನಿಯು ದೀರ್ಘಾವಧಿಯ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ, ರಿಲಯನ್ಸ್‌ ರಿಟೇಲ್‌ ಕಂಪನಿಯು ಭಾರತದಲ್ಲಿ ತನ್ನ ಆನ್‌ಲೈನ್‌ ಮತ್ತು ಆಫ್‌ಲೈನ್‌ ಪ್ಲಾಟ್‌ಫಾರಂಗಳಲ್ಲಿ (ASOS) ಎಎಸ್‌ಒಎಸ್‌ನ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲಿದೆ.

ಎಎಸ್‌ಒಎಸ್‌ ಕಂಪನಿಯು ಜಗತ್ತಿನಾದ್ಯಂತ ಯುವ ಪೀಳಿಗೆಯಲ್ಲಿ ಜನಪ್ರಿಯವಾಗಿದ್ದು, 200ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿ ಕಂಪನಿಯ ಉತ್ಪನ್ನಗಳು ಲಭ್ಯವಿವೆ.

ಇದನ್ನೂ ಓದಿ: Udupi News: ಮೂವರು ಸಾಧಕರಿಗೆ ಭಂಡಾರಕೇರಿ ಮಠದ ಪ್ರಶಸ್ತಿ; ಬೆಂಗಳೂರಿನಲ್ಲಿ ಮೇ 20ರಂದು ಪ್ರಶಸ್ತಿ ಪ್ರದಾನ

ಈ ಕುರಿತು ರಿಲಿಯನ್ಸ್‌ ರಿಟೇಲ್‌ ವೆಂಚರ್ಸ್‌ನ ನಿರ್ದೇಶಕಿ ಇಶಾ ಅಂಬಾನಿ ಮಾತನಾಡಿ, ನಮ್ಮ ಫ್ಯಾಷನ್‌ ಕುಟುಂಬಕ್ಕೆ ಎಎಸ್‌ಒಎಸ್‌ ಅನ್ನು ಸ್ವಾಗತಿಸುತ್ತೇವೆ. ಜಾಗತಿಕ ಫ್ಯಾಷನ್‌ ಅನ್ನು ಭಾರತದ ಮಾರುಕಟ್ಟೆಗೆ ತರುವ ನಿಟ್ಟಿನಲ್ಲಿ ಇದೊಂದು ಮಹತ್ವದ ಮೈಲಿಗಲ್ಲು. ಭಾರತದ ರಿಟೇಲ್‌ ಮಾರುಕಟ್ಟೆಯಲ್ಲಿ ನಮಗಿರುವ ಸ್ಥಾನವನ್ನು ಈ ಪಾಲುದಾರಿಕೆಯು ಸೂಚಿಸುತ್ತದೆ. ಅಲ್ಲದೆ, ನಮ್ಮ ಗ್ರಾಹಕರು ಬಯಸುವ ಫ್ಯಾಷನ್‌ ಉತ್ಪನ್ನಗಳನ್ನು ಅವರಿಗೆ ಒದಗಿಸುವ ಖಾತರಿಯನ್ನೂ ನೀಡುತ್ತದೆ ಎಂದು ತಿಳಿಸಿದರು.

ಈ ಬಗ್ಗೆ ಎಎಸ್‌ಒಎಸ್‌ (ASOS) ನ ಸಿಇಒ ಜೋಸ್‌ ಆಂಟೋನಿಯೋ ಮಾತನಾಡಿ, ರಿಲಯನ್ಸ್‌ ರಿಟೇಲ್‌ ಜತೆಗೂಡಿ ನಮ್ಮ ಫ್ಯಾಷನ್‌ ಬ್ರ್ಯಾಂಡ್‌ಗಳಲ್ಲಿ ಕೆಲವೊಂದನ್ನು ನಾವು ಭಾರತದ ಗ್ರಾಹಕರಿಗೆ ನೀಡಲು ಉತ್ಸುಕರಾಗಿದ್ದೇವೆ. ಮುಖ್ಯವಾಗಿ ಜಗತ್ತಿನಲ್ಲಿಯೇ ಬ್ರಿಟಿಷ್‌ ಫ್ಯಾಷನ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಎಎಸ್‌ಒಎಸ್‌ ವಿನ್ಯಾಸವನ್ನು ನೀಡಲು ಕಾತುರರಾಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Bengaluru News: ವ್ಯಾಸ-ದಾಸ ಸಾಹಿತ್ಯ ಜ್ಞಾನ ಪ್ರಸಾರಕ್ಕೆ ಮಾನ್ಯತೆ ನೀಡಿ; ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ

ಆರ್‌ಐಎಲ್‌ (ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌) ಸಮೂಹದ ಎಲ್ಲಾ ರೀಟೇಲ್‌ ಕಂಪನಿಗಳನ್ನು ಒಳಗೊಂಡಿರುವ ಕಂಪನಿಯೇ ರಿಲಿಯನ್ಸ್‌ ರಿಟೇಲ್‌ ವೆಂಚರ್ಸ್‌ ಲಿಮಿಟೆಡ್‌ (ರಿಲಯನ್ಸ್‌ ರಿಟೇಲ್‌). ರಿಲಯನ್ಸ್‌ ರಿಟೇಲ್‌ 18,836ಕ್ಕೂ ಅಧಿಕ ಮಳಿಗೆಗಳು ಮತ್ತು ಡಿಜಿಟಲ್‌ ಇ-ಕಾಮರ್ಸ್‌ ಮೂಲಕ ಕಾರ್ಯಾಚರಿಸುತ್ತದೆ. ರಿಲಯನ್ಸ್‌ ರಿಟೇಲ್‌ ಕಂಪನಿಯು ತನ್ನ ಹೊಸ ವಾಣಿಜ್ಯ ಯೋಜನೆಯ ಭಾಗವಾಗಿ 30 ಲಕ್ಷಕ್ಕೂ ಅಧಿಕ ವ್ಯಾಪಾರಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

Continue Reading

ಫ್ಯಾಷನ್

Namratha Gowda: ರೆಡ್‌ ರಫಲ್‌ ಲೇಯರ್‌ ಮ್ಯಾಕ್ಸಿ ಡ್ರೆಸ್‌ನಲ್ಲಿ ನಟಿ ನಮ್ರತಾ ಗೌಡ ಹಾಲಿಡೇ ಲುಕ್‌!

Namratha Gowda: ರೆಡ್‌ ಶೇಡ್‌ನ ಅಸ್ಸೆಮ್ಮಿಟ್ರಿಕಲ್‌ ರಫಲ್‌ ಲೇಯರ್‌ ಮ್ಯಾಕ್ಸಿ ಡ್ರೆಸ್ನಲ್ಲಿ ನಟಿ ನಮ್ರತಾ ಗೌಡ, ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಇದ್ಯಾವ ಬಗೆಯ ಔಟ್‌ಫಿಟ್‌ ಎಂಬುದರ ಬಗ್ಗೆ ಸ್ಟೈಲಿಸ್ಟ್ ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Namrata Gowda Holiday Look in Red Ruffle Layered Maxi Dress
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟಿ ನಮ್ರತಾ ಗೌಡ (Namratha Gowda) ರೆಡ್‌ ಕಲರ್‌ನ ರಫಲ್‌ ಲೇಯರ್‌ ಮ್ಯಾಕ್ಸಿಯಲ್ಲಿ ಬಿಂದಾಸ್‌ ಹಾಲಿ ಡೇ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಮ್ಮರ್‌ ಸೀಸನ್‌ನ ಹಾಲಿ ಡೇ ಲುಕ್‌ಗೆ ಸೈ ಎಂದಿದ್ದು, ಸಾಮಾನ್ಯವಾದ ಔಟ್‌ಫಿಟ್‌ಗೆ ಮೊರೆ ಹೋಗದೇ ಕೊಂಚ ಡಿಫರೆಂಟ್‌ ಲುಕ್‌ ನೀಡುವ ಡ್ರೆಸ್‌ ಧರಿಸಿ, ಹಾಲಿ ಡೇ ಫ್ಯಾಷನ್‌ ಪ್ರಿಯರ ಗಮನ ಸೆಳೆದಿದ್ದಾರೆ.

ಬೀಚ್‌ ಸೈಡ್‌ ಹಾಲಿ ಡೇ ಲುಕ್‌

“ಹಾಲಿ ಡೇ ಫ್ಯಾಷನ್‌ ಎಂದಾಕ್ಷಣ ಅದರಲ್ಲೂ ನಟಿ ಎಂದಾಕ್ಷಣಾ ಬಿಕಿನಿ ಇಲ್ಲವೇ ತೀರಾ ಎಕ್ಸ್ಪೋಸಿಂಗ್‌ ಉಡುಪುಗಳನ್ನು ಊಹಿಸುತ್ತಾರೆ. ಆದರೆ, ಈ ಬಾರಿ ನಟಿ ಸಮ್ರತಾ ಗೌಡ ಕೊಂಚ ಡಿಫರೆಂಟ್‌ ಆಗಿ ಬಿಂಬಿಸುವ ಡ್ರೆಸ್‌ ಧರಿಸಿದ್ದಾರೆ. ಇದು ಬೀಚ್‌ ಸೈಡ್‌ ಹಾಲಿಡೇ ಫ್ಯಾಷನ್‌ಗೆ ಮ್ಯಾಚ್‌ ಮಾಡಿದ್ದಾರೆ. ಅದರಲ್ಲೂ ಬಿಸಿಲಲ್ಲಿ ಕೊಂಚ ತಿಳಿ ವರ್ಣದ ಉಡುಪಿನ ಬದಲಾಗಿ ರೆಡ್‌ ಕಲರ್‌ ಆಯ್ಕೆ ಮಾಡಿದ್ದಾರೆ. ಇದು ಅವರ ಬದಲಾದ ಹಾಲಿಡೇ ಫ್ಯಾಷನ್‌ ಹೈಲೈಟ್‌ ಮಾಡುತ್ತದೆ” ಎಂದು ಹೇಳುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಾನ್‌. ಅವರ ಪ್ರಕಾರ, ನಮ್ರತಾ ಈ ಬಾರಿ ಡಾರ್ಕ್‌ ಶೇಡ್‌ ಔಟ್‌ಫಿಟ್ಸ್‌ ಆಯ್ಕೆ ಮಾಡಿರುವುದು ವಿಭಿನ್ನ ಲುಕ್‌ಗಾಗಿ ಎಂಬುದು ತಿಳಿದು ಬರುತ್ತದೆ ಎಂದಿದ್ದಾರೆ.

ಏನಿದು ಹಾಲ್ಟರ್‌ ನೆಕ್‌ ರಫಲ್‌ ಲೇಯರ್‌ ಮ್ಯಾಕ್ಸಿ ?

ನೋಡಲು ಸ್ಟ್ರಾಪ್‌ನಂತೆ ಕಾಣುವ ಹಾಲ್ಟರ್‌ ನೆಕ್‌ಲೈನ್‌ ಇರುವ ರಫಲ್‌ ಲೇಯರ್‌ ಮ್ಯಾಕ್ಸಿಯು ಅಸ್ಸೆಮ್ಮಿಟ್ರಿಕಲ್‌ ಡಿಸೈನ್‌ ಒಳಗೊಂಡಿರುತ್ತದೆ. ಇದೊಂದು ಸಮ್ಮರ್‌ ಸೀಸನ್‌ ಫ್ಯಾಷನ್‌ವೇರ್‌ ಆಗಿದೆ. ಬಾಲಿವುಡ್‌ಗರ ಫೇವರೇಟ್‌ ಹಾಲಿಡೇ ಫ್ಯಾಷನ್‌ನಲ್ಲಿದೆ. ನಾನಾ ಶೇಡ್‌ಗಳಲ್ಲಿ ದೊರೆತರೂ, ಇದೀಗ ರೆಡ್‌ ಕಲರ್‌ನವು ಅತಿ ಹೆಚ್ಚು ಟ್ರೆಂಡಿಯಾಗಿವೆ. ಪದರ ಪದರದಂತೆ ಕಾಣುವ ಈ ಲೇಯರ್‌ ಶಿಫಾನ್‌ ರೆಕ್ಕೆ ಪುಕ್ಕದಂತಹ ಡಿಸೈನ್ಸ್‌ ಹಾಗೂ ಸೈಡ್‌ ಸ್ಲಿಟ್‌ ಜೊತೆಗೆ ಶೋಲ್ಡರ್‌ ಎಕ್ಸ್ಪೋಸ್‌ ಮಾಡುವ ನೆಕ್‌ಲೈನ್ಸ್‌ ಎಲ್ಲವೂ ಈ ಸಮ್ಮರ್‌ ಬಿಸಿಲಿಗೆ ಹೊಂದುತ್ತದೆ ಎಂದು ಡಿಟೇಲ್‌ ನೀಡುತ್ತಾರೆ ಫ್ಯಾಷನಿಸ್ಟಾಗಳು. ಅವರ ಪ್ರಕಾರ, ಈ ಬಗೆಯ ನೆಕ್‌ಲೈನ್‌ ಸಮ್ಮರ್‌ ಸೀಸನ್‌ನ ಬೆಸ್ಟ್‌ ಡಿಸೈನ್ಸ್.‌ ಇನ್ನು, ರಫಲ್‌ ಡಿಸೈನ್ಸ್‌ ಶಿಫಾನ್‌ದ್ದಾದರಿಂದ ಲೈಟ್‌ವೈಟ್‌ ಆಗಿರುತ್ತವೆ. ಸ್ಲಿಟ್‌ ಕಾಲಿನ ಅಂದಕ್ಕೆ ಬಿಂದಾಸ್‌ ಟಚ್‌ ನೀಡುತ್ತವೆ ಎನ್ನುತ್ತಾರೆ.

ಇದನ್ನೂ ಓದಿ: Cannes 2024 Fashion: ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸೆಲೆಬ್ರೆಟಿಗಳ ಫ್ಯಾಷನ್‌ ಟ್ರೆಂಡ್‌ ಹೇಗಿದೆ ನೋಡಿ!

ನಮ್ರತಾ ಹಾಲಿಡೇ ಫ್ಯಾಷನ್‌ ಲವ್‌

ನಟಿ ನಮ್ರತಾ ಕೂಡ ಹಾಲಿ ಡೇ ಫ್ಯಾಷನ್‌ ಲವ್ವರ್‌ ಎನ್ನಬಹುದು. ಯಾಕೆಂದರೇ, ಅವರು ಎಲ್ಲೇ ಹೋಗಲಿ ಆಯಾ ಸ್ಥಳಗಳಿಗೆ ತಕ್ಕಂತೆ ಇಲ್ಲವೇ, ಟ್ರೆಂಡಿಯಾಗಿರುವ ಬಿಂದಾಸ್‌ ಉಡುಪುಗಳನ್ನೇ ಧರಿಸುತ್ತಾರೆ. ಮುಲಾಜು ನೋಡದೇ ತಮ್ಮ ಆಸೆ-ಅಭಿಲಾಷೆಗೆ ತಕ್ಕಂತೆ ಬಿಂದಾಸ್‌ ಔಟ್‌ಫಿಟ್ಸ್‌ ಧರಿಸುತ್ತಾರೆ. ಇದು ಅವರ ಬಿಂದಾಸ್‌ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌ ಬಿಂಬಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ಗಳು.

ಈ ಔಟ್‌ಫಿಟ್‌ನಲ್ಲಿ ನೀವೂ ನಮ್ರತಾರಂತೆ ಕಾಣಲು ಹೀಗೆ ಮಾಡಿ

  • ಪ್ರಯೋಗಾತ್ಮಕ ಡಿಸೈನರ್‌ವೇರ್‌ ಸೆಲೆಕ್ಟ್‌ ಮಾಡಿ.
  • ಹಾಲ್ಟರ್‌ ನೆಕ್‌ ಡ್ರೆಸ್‌ ಬಿಂದಾಸ್‌ ಲುಕ್‌ ನೀಡುತ್ತದೆ.
  • ಸ್ಲಿಟ್‌ ಡ್ರೆಸ್‌ಗಳು ಕಾಲುಗಳನ್ನು ಆಕರ್ಷಕವಾಗಿ ಬಿಂಬಿಸುತ್ತವೆ.
  • ಸಿಂಪಲ್‌ ಮೇಕಪ್‌ ಹಾಗೂ ಹೇರ್‌ಸ್ಟೈಲ್‌ಗೆ ಸೈ ಎನ್ನಿ.
  • ಹಾಲಿಡೇಯಲ್ಲಿ ಧರಿಸುವ ಸ್ಯಾಂಡಲ್ಸ್‌ ಫ್ಲಾಟಾಗಿರಲಿ.
  • ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವ ಕಲರ್‌ ಡ್ರೆಸ್‌ ಆಯ್ಕೆ ಮಾಡಿ.
  • ಶೋಲ್ಡರ್‌ಗೆ ಹಾಲ್ಟರ್‌ ನೆಕ್‌ ಹೊಂದುತ್ತದೆಯೇ ಎಂಬುದನ್ನು ಮೊದಲೇ ಟ್ರಯಲ್‌ ಮಾಡಿ ನೋಡಿ.
  • ಹಾಲ್ಟರ್‌ ನೆಕ್‌ ಡ್ರೆಸ್‌ ಧರಿಸಿದಾ ಕತ್ತಿಗೆ ಆಕ್ಸೆಸರೀಸ್‌ ಧರಿಸಬೇಡಿ.
  • ಹಾಲಿ ಡೇ ಫ್ಯಾಷನ್‌ ಟ್ರೆಂಡ್‌ ಫಾಲೋ ಮಾಡಿ, ನಂತರ ಡಿಸೈಡ್‌ ಮಾಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Cannes 2024 Fashion: ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸೆಲೆಬ್ರೆಟಿಗಳ ಫ್ಯಾಷನ್‌ ಟ್ರೆಂಡ್‌ ಹೇಗಿದೆ ನೋಡಿ!

ಈಗಾಗಲೇ ಆರಂಭವಾಗಿರುವ ಪ್ರತಿಷ್ಠಿತ ಕಾನೆ ಫಿಲ್ಮ್ ಫೆಸ್ಟಿವಲ್‌ನಲ್ಲಿ ಹಾಲಿವುಡ್‌-ಬಾಲಿವುಡ್‌ ಸೇರಿದಂತೆ ನಾನಾ ಕ್ಷೇತ್ರದ ಫ್ಯಾಷನ್‌ ಐಕಾನ್‌ಗಳು, ರೆಡ್‌ಕಾರ್ಪೆಟ್‌ನಲ್ಲಿ ತಮ್ಮತಮ್ಮ ಫ್ಯಾಷನ್‌ವೇರ್ಸ್ ಅನಾವರಣಗೊಳಿದರು. ಮೊದಲ ದಿನವೇ ಯಾರ್ಯಾರು ಹೇಗೆಲ್ಲ ಕಾಣಿಸಿಕೊಂಡರು ಎಂಬುದರ ಕುರಿತಂತೆ ಫ್ಯಾಷನ್‌ ವಿಮರ್ಶಕರು ರಿವ್ಯೂ ನೀಡಿದ್ದು, ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Cannes 2024 Fashion celebrities trend
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಮತ್ತೊಮ್ಮೆ ಸೆಲೆಬ್ರೆಟಿಗಳ (Cannes 2024 Fashion) ಫ್ಯಾಷನ್‌ ಟ್ರೆಂಡ್‌ಗೆ ಸಾಕ್ಷಿಯಾಗುತ್ತಿದೆ. ಹೌದು, ಈಗಾಗಲೇ ಆರಂಭವಾಗಿರುವ ವಿಶ್ವದ ಪ್ರತಿಷ್ಠಿತ 77ನೇ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಹಾಲಿವುಡ್‌-ಬಾಲಿವುಡ್‌ ಸೇರಿದಂತೆ ನಾನಾ ಕ್ಷೇತ್ರದ ಫ್ಯಾಷನ್‌ ಐಕಾನ್‌ಗಳು ಪಾಲ್ಗೊಂಡು ತಮ್ಮದೇ ಆದ ಫ್ಯಾಷನ್‌ವೇರ್ಸ್ ಅನಾವರಣಗೊಳಿಸತೊಡಗಿದ್ದಾರೆ.

ಫ್ಯಾಷನ್‌ ವಿಮರ್ಶಕರ ರಿವ್ಯೂ
” ಈ ಬಾರಿಯ ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಎಂದಿನಂತೆ ನಾನಾ ಧಿರಿಸು ಹಾಗೂ ಗೌನ್‌ಗಳ ಅನಾವರಣದಿಂದಲೇ ಆರಂಭವಾಗಿದೆ. ಸ್ಪರ್ಧೆಗಿಳಿದವರಂತೆ ತಾರೆಯರು ಕೂಡ ಊಹೆಗೂ ಮೀರಿದ ಡಿಸೈನರ್‌ವೇರ್‌ಗಳಲ್ಲಿ ಕಾಣಿಸತೊಡಗಿದ್ದಾರೆ. ಹಾಲಿವುಡ್‌ ತಾರೆಯರು ನಾನ್‌ ವೇರಬಲ್‌ ಡಿಸೈನರ್‌ವೇರ್‌ಗಳಿಗೆ ಆದ್ಯತೆ ನೀಡಿದರೇ, ನಮ್ಮ ರಾಷ್ಟ್ರದ ಸೆಲೆಬ್ರೆಟಿಗಳು ವೇರಬಲ್‌ ಪ್ಲಸ್‌ ನಾನ್‌ ವೇರಬಲ್‌ ಡಿಸೈನರ್‌ ಗೌನ್‌ಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಇನ್ನು ಸಾಕಷ್ಟು ದಿನಗಳು ಈ ಫೆಸ್ಟಿವಲ್‌ ನಡೆಯುವುದರಿಂದ ಈಗಲೇ ಏನೂ ಹೇಳಲಾಗದು” ಎನ್ನುತ್ತಾರೆ ಫ್ಯಾಷನ್‌ ದಿಗ್ಗಜರಾದ ಸೆಲೆಬ್ರೆಟಿ ಡಿಸೈನರ್‌ ನೀರಜ್‌ ವರ್ಮಾ.
” ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಬಾಲಿವುಡ್‌ ನಟಿ ಐಶ್ವರ್ಯಾ ರೈ ಪ್ರತಿಬಾರಿಯೂ ವಿನೂತನ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿಯೂ ನಿರೀಕ್ಷೆ ಇದೆ. ಇನ್ನು ಕಿಯಾರಾ, ಶೋಭಿತಾ, ಜಾಕ್ವೇಲಿನ್‌ ಹಾಗೂ ಅದಿತಿ ರಾವ್‌ ಹೈದರಿ ಕೂಡ ಮುಂಬರುವ ದಿನಗಳಲ್ಲಿ ಭಾಗವಹಿಸಲಿದ್ದು, ಇವರ ಡಿಸೈನರ್‌ವೇರ್‌ಗಳ ಬಗ್ಗೆಯೂ ಸಾಕಷ್ಟು ಕುತೂಹಲವಿದೆ” ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರಾದ ರೋಹನ್‌ ರಾಜ್‌.

ಇದನ್ನೂ ಓದಿ: Sandalwood Actress At Cannes 2023: ಮತ್ತೊಮ್ಮೆ ಕಾನ್‌ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಸ್ಯಾಂಡಲ್‌ವುಡ್‌ ನಟಿ ಇತಿ ಆಚಾರ್ಯ

ಟಿವಿ ತಾರೆ ದೀಪ್ತಿಯ ಆಕರ್ಷಕ ಲಾಂಗೆಸ್ಟ್‌ ಗೌನ್‌

ಆರಂಭದಲ್ಲೆ, ಟಿವಿ ತಾರೆ ದೀಪ್ತಿ ಸದ್ವಾನಿಯ ಹಳದಿ ಕಲರ್‌ ರಫಲ್‌ ನೆಟ್ಟೆಡ್‌ ಗೌನ್‌ ಕಾನೆ ಫೆಸ್ಟಿವಲ್‌ನ ಆರಂಭದ ದಿನದಲ್ಲೆ ಎಲ್ಲರನ್ನು ಸೆಳೆಯಿತು. ಆಂಚಲ್‌ ಕಾಚರ್‌ ಡಿಸೈನ್‌ನ ಈ ಗೌನ್‌ ಮೊದಲನೆ ದಿನದ ಅತಿ ಉದ್ದನೆಯ ಗೌನ್‌ ಎಂದು ರೆಕಾರ್ಡ್‌ ಮಾಡಿತು.

ಶಾರ್ಕ್‌ ಟ್ಯಾಂಕ್‌ ಖ್ಯಾತಿಯ ನಮಿತಾ ತಾಪರ್‌ ಲುಕ್‌:

ಉದ್ಯಮಿ ಹಾಗೂ ಶಾರ್ಕ್‌ ಟ್ಯಾಂಕ್‌ ಖ್ಯಾತಿಯ ನಮಿತಾ ಟಾಪರ್‌ರ ಪಾಸ್ಟೆಲ್‌ ಶೇಡ್‌ನ ಆಫ್‌ ಶೋಲ್ಡರ್‌, ಸ್ಲಿಟ್‌ ಇರುವ ಬಲೂನ್‌ ಸ್ಲೀವ್‌ನ ಗೌನ್‌ ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯಿತು.

ಡಿಸೈನರ್‌ವೇರ್‌ ಕಾಪಿ ಮಾಡಿದ ಊರ್ವಶಿ

ಪಿಂಕ್‌ ಗೌನ್‌ನಲ್ಲಿ ಊರ್ವಶಿ ಚಂದನಾಗಿ ಕಾಣಿಸಿದರೂ, ದೀಪಿಕಾ ಪಡುಕೋಣೆಯ ಗೌನ್‌ ಕಾಪಿ ಮಾಡಿದ ಬಿರುದು ದೊರೆಯಿತು.

ಹಾಲಿವುಡ್‌ ತಾರೆಯರ ಬೆಸ್ಟ್‌ ಲುಕ್ಸ್‌

ನಟಿ ನೌಮಿ ಕಾಂಪ್ಬೆಲ್‌ ಬ್ಲಾಕ್‌ ಶೇಡ್‌ ಆರ್ಕಿವ್‌ ಚಾನೆಲ್‌ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡರೇ, ಅನ್ಯಾ ಟಾಯ್ಲರ್‌ ಡಿಯೋರ್‌ ಶೋಲ್ಡರ್‌ಲೆಸ್‌ ಕ್ರೀಮಿಶ್‌ ಸಿಂಡ್ರೆಲ್‌ ಗೌನ್‌ನಲ್ಲಿ ಗಮನ ಸೆಳೆದರು. ಕ್ರಿಸ್‌ ಹೆಮ್ಸ್ವರ್ತ್‌ – ಎಲ್ಸಾ ಕಪಲ್‌ ಕಾಂಟ್ರಸ್ಟ್‌ ಬ್ಲಾಕ್‌ & ವೈಟ್‌ ಔಟ್‌ಫಿಟ್‌ನಲ್ಲಿ ರೆಡ್‌ ಕಾರ್ಪೆಟ್‌ ತುಳಿದರು. ಲಾ ರೋಚ್‌ ಬ್ಲಾಕ್‌ ಶೈನಿಂಗ್‌ ಕೋಟ್‌ ಶರ್ಟ್-ಪ್ಯಾಂಟ್‌ನಲ್ಲಿ, ಸಬ್ರು ಡಬ್ಬಲ್‌ ಶೇಡ್‌ ವನ್‌ ಶೋಲ್ಡರ್‌ ಗೌನ್‌ನಲ್ಲಿ, ಗ್ರೇಟಾ ರೆಡ್‌ ಫಿಶ್‌ಟೇಲ್‌ ಗೌನ್‌ನಲ್ಲಿ, ಇವಾ ಬಾಲ್ಮೈಮ್‌ ಶಿಮ್ಮರ್‌ ಗೌನ್‌ನಲ್ಲಿ ಫ್ಯಾಷನ್‌ ಪ್ರಿಯರನ್ನು ಸೆಳೆದರು. ಇವರೊಂದಿಗೆ ಸಿನಿಮಾ ಪ್ರೀಮಿಯರ್‌ ಟೀಮ್‌ನವರು ನಾನಾ ಶೈಲಿಯ ಡಿಸೈನರ್‌ವೇರ್ಗಳಲ್ಲಿ ಕಾಣಿಸಿಕೊಂಡರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Kannada New Movie powder Teaser Out
ಸ್ಯಾಂಡಲ್ ವುಡ್10 mins ago

Kannada New Movie: ಬಹು ನಿರೀಕ್ಷಿತ ʻಪೌಡರ್‌ʼ ಸಿನಿಮಾ ಟೀಸರ್‌ ಔಟ್‌!

Drowned in water
ರಾಮನಗರ10 mins ago

Drowned In water : ನಮಾಜ್‌ ಮುಗಿಸಿ ಈಜಲು ಹೋದ ಮೂವರು ನೀರುಪಾಲು; ಐವರು ಪ್ರಾಣಾಪಾಯದಿಂದ ಪಾರು

Illegal sand mining
ಕರ್ನಾಟಕ11 mins ago

Illegal Sand Mining: ಅಕ್ರಮ ಮರಳುಗಾರಿಕೆ: ಪೊಲೀಸರು, ಅಧಿಕಾರಿಗಳಿಗೆ ರಕ್ಷಣೆ ಕೊಡುವಂತೆ ಗ್ರಾಮಸ್ಥರ ಮನವಿ!

RCB vs CSK
ಕ್ರಿಕೆಟ್13 mins ago

RCB vs CSK: ಚಿನ್ನಸ್ವಾಮಿಯಲ್ಲಿ ಆರ್​ಸಿಬಿ-ಚೆನ್ನೈ ತಂಡಗಳ ಐಪಿಎಲ್​ ದಾಖಲೆ ಹೇಗಿದೆ?

Narayana Murthy
ದೇಶ19 mins ago

Narayana Murthy: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳಿಗೆ ಕತ್ತರಿ? ನಾರಾಯಣ ಮೂರ್ತಿ ಶಾಕಿಂಗ್‌ ಹೇಳಿಕೆ

IPL 2024
ಪ್ರಮುಖ ಸುದ್ದಿ28 mins ago

IPL 2024 : ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ವಿಜೇತರು ಯಾರು ಎಂದು ತಿಳಿಸಿದ ಬ್ರಿಯಾನ್ ಲಾರಾ

Job Alert
ಉದ್ಯೋಗ28 mins ago

Job Alert: ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Bomb Blast
ದೇಶ35 mins ago

Bomb Blast: ಚೆಂಡೆಂದು ಭಾವಿಸಿ ಬಾಂಬ್‌ ಎತ್ತಿಕೊಂಡ ಮದರಸಾ ವಿದ್ಯಾರ್ಥಿ; ಸ್ಫೋಟಕ್ಕೆ ಮೌಲಾನಾ ಸಾವು

KSRTC BUS Woman locks in window of KSRTC bus after going to spit
ಬೆಂಗಳೂರು37 mins ago

KSRTC Bus : ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ

banned plastic seized by corporation in Mysore
ಮೈಸೂರು39 mins ago

Mysore News: ಮೈಸೂರಿನಲ್ಲಿ ಪಾಲಿಕೆಯಿಂದ ನಿಷೇಧಿತ ಪ್ಲಾಸ್ಟಿಕ್‌ ವಶ; 1.61 ಲಕ್ಷ ರೂ. ದಂಡ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ10 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ11 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ24 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌