Bangalore Metro : 2032ಕ್ಕೆ ಬೆಂಗಳೂರು ನಿವಾಸಿಗಳಿಗೆ ಕೂಗಳತೆಯಲ್ಲಿ ಮೆಟ್ರೋ ಸೇವೆ! - Vistara News

ಕರ್ನಾಟಕ

Bangalore Metro : 2032ಕ್ಕೆ ಬೆಂಗಳೂರು ನಿವಾಸಿಗಳಿಗೆ ಕೂಗಳತೆಯಲ್ಲಿ ಮೆಟ್ರೋ ಸೇವೆ!

ಎರಡು ಹೊಸ ಮಾರ್ಗಗಳು ಹಾಗೂ ಎರಡು ಮಾರ್ಗಗಳ ವಿಸ್ತರಣೆ ಮೂಲಕ ನಗರದ ಬಹುತೇಕ ಪ್ರದೇಶಕ್ಕೆ ಮೆಟ್ರೊ ಸೇವೆ (Bangalore Metro) ದೊರೆಯಲಿದೆ.

VISTARANEWS.COM


on

Bengaluru Metro
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಾಹನ ದಟ್ಟಣೆಯಲ್ಲಿ ಸಿಲುಕಿ ಬೇಸತ್ತಿರುವ ಬೆಂಗಳೂರು ನಿವಾಸಿಗಳಿಗೆ ಆಹ್ಲಾದಕರ ಸುದ್ದಿಯೊಂದಿದೆ. 2032ರ ವೇಳೆಗೆ ನಗರದ ಮೆಟ್ರೋ ಸಂಚಾರದ (Bangalore Metro) ವ್ಯಾಪ್ತಿ ಇನ್ನಷ್ಟು ವಿಸ್ತರಣೆಗೊಳ್ಳಲಿದ್ದು ಮನೆಯಿಂದ 1ರಿಂದ2 ಕಿಲೋ ಮೀಟರ್​ ದೂರದಲ್ಲಿ ಮೆಟ್ರೋ ಸ್ಟೇಷನ್​ ಸಿಗಲಿದೆ. ಸ್ವಂತ ವಾಹನವನ್ನು ಮನೆಯಲ್ಲಿಯೇ ಬಿಟ್ಟು ಮೆಟ್ರೋದ ಮೂಲಕವೇ ಮನೆಯಿಂದ ಕಚೇರಿಗೆ ಮತ್ತು ಕಚೇರಿಯಂದ ಮನೆಗೆ ಹೋಗಲು ಸಾಧ್ಯವಾಗಲಿದೆ. ರಾಜ್ಯ ಸರಕಾರ ಹೊಸದಾಗಿ ನಾಲ್ಕು ಮೆಟ್ರೋ ಮಾರ್ಗಗಳನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ನಗರದ ಬಹುತೇಕ ಕಡೆಗೆ ಮೆಟ್ರೊ ರೈಲಿನ ಸೇವೆ ಲಭಿಸಲಿದ್ದು 2032ರ ವೇಳೆಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಕರ್ನಾಟಕವನ್ನು ಒಂದು ಒಂದು ಟ್ರಿಲಿಯನ್​ ಡಾಲರ್​ ಆರ್ಥಿಕತೆಗೆ ಏರಿಸುವ ಉದ್ದೇಶದಿಂದ ರಾಜ್ಯ ಸರಕಾರ ಮೆಟ್ರೋ ಸಂಪರ್ಕದ ಹೊಸ ಕಾರ್ಯ ಯೋಜನೆಯನ್ನು ಪ್ರಕಟಿಸಿದೆ. ಅದರಲ್ಲಿ ನಾಲ್ಕು ಹೊಸ ಮೆಟ್ರೋ ರೈಲು ಮಾರ್ಗಗಳನ್ನು ಪ್ರಕಟಿಸಲಾಗಿದೆ. ಕರ್ನಾಟಕ ಸರಕಾರದ ಯೋಜನಾ ಮತ್ತು ಅಂಕಿಅಂಶ ಇಲಾಖೆ ಹಾಗೂ ಫಿಕಿಯ ಸಹಭಾಗಿತ್ವದಲ್ಲಿ ಯೋಜನೆಯನ್ನು ಸಿದ್ದಪಡಿಸಲಾಗಿದೆ.

ಹೊಸ ಕಾರ್ಯಯೋಜನೆಯಲ್ಲಿ ಎರಡು ಹೊಸ ಮಾರ್ಗಗಳನ್ನು ಪರಿಚಯಿಸಲಾಗಿದೆ ಹಾಗೂ ಮೂರನೇ ಹಂತದ ಮೆಟ್ರೋ ಯೋಜನೆಯ ವಿಸ್ತರಣೆ ಮಾಡಲಾಗುತ್ತದೆ. ಒಟ್ಟು 27 ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚದ ಮೆಟ್ರೋ ಯೋಜನೆ. ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಎಮ್​ಜಿ ರೋಡ್​ ತನಕದ ಈ ಯೋಜನೆಯಲ್ಲಿ ಮಾರತಹಳ್ಳಿ ಹಾಗೂ ವೈಟ್​ಫೀಲ್ಡ್​ ಮೂಲಕ ಹಾದು ಹೋಗಲಿದೆ. 16 ಕಿಲೋ ಮೀಟರ್ ಉದ್ದದ ಈ ಮೆಟ್ರೊ ಮಾರ್ಗಕ್ಕೆ 9600 ಕೋಟಿ ರೂಪಾಯಿ ಬೇಕಾಗುತ್ತದೆ. ತಣಿಸಂದ್ರದ ಮೂಲಕ ನಾಗವಾರದಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗಿನ 25 ಕಿಲೋಮೀಟರ್​ ಯೋಜನೆಗೆ 10 ಸಾವಿರ ಕೋಟಿ ಯೋಜನಾ ವೆಚ್ಚ ಅಂದಾಜಿಸಲಾಗಿದೆ.

ವೈಟ್​ಫೀಲ್ಡ್​ನಿಂದ ಹೊಸಕೋಟೆಯ ತನಕದ 6 ಕಿಲೋಮೀಟರ್​ ಹಾಗೂ ಬನ್ನೇರುಘಟ್ಟದಿಂದ ಜಿಗಣಿ ತನಕದ 12 ಕಿಲೋ ಮೀಟರ್​ ಮೆಟ್ರೋ ಮಾರ್ಗದ ವಿಸ್ತರಣೆಯಾಗಿದೆ. ಇದಕ್ಕೆ ಅನುಕ್ರಮವಾಗಿ 2400 ಕೋಟಿ ರೂಪಾಯಿ ಹಾಗೂ 4,800 ಕೋಟಿ ರೂಪಾಯಿ ಅಂದಾಜು ವೆಚ್ಚ ಪ್ರಕಟಿಸಲಾಗಿದೆ.

ಇದನ್ನೂ ಓದಿ : Metro Phase 4: ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ಮೆಟ್ರೊ 4ನೇ ಹಂತದಲ್ಲಿ ಬಿಡದಿ ಮಾಗಡಿಗೆ ಸಂಪರ್ಕ!

ನಮ್ಮ ಮೆಟ್ರೋ ಇದೀಗ 56 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುತ್ತಿದೆ. ಅದೇ ರೀತಿ ಸಿಲ್ಕ್​ ಬೋರ್ಡ್​ ಜಂಕ್ಷನ್​ನಿಂದ ಕೆಂಪೇಗೌಡ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ವರೆಗಿನ 58.1 ಕಿಲೋ ಮೀಟರ್​ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಹಾಲಿ ವರ್ಷದಲ್ಲಿ 40 ಕಿಲೋ ಮೀಟರ್ ಸಂಚಾರ ಆರಂಭಿಸಲು ಯೋಜನೆ ರೂಪಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Sharan Prakash Patil: ಮೆಡಿಕಲ್‌ ಕಾಲೇಜುಗಳಲ್ಲಿ ವ್ಯಾಸ್ಕ್ಯುಲಾರ್‌ ವಿಭಾಗ ಪ್ರಾರಂಭ : ಸಚಿವ ಶರಣಪ್ರಕಾಶ್‌ ಪಾಟೀಲ್‌

Sharan Prakash Patil : ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿ ವ್ಯಾಸ್ಕ್ಯುಲಾರ್‌ ವಿಭಾಗ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಲುಬುರುಗಿ, ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿಯೂ ಆರಂಭವಾಗಲಿದ್ದು, ವಿಕ್ಟೋರಿಯಾ ಹಾಗೂ ಸಂಜಯ್‌ ಗಾಂಧೀ ಆಸ್ಪತ್ರೆಯಲ್ಲಿಯೂ ವಿಭಾಗ ತೆರೆಯುವ ಉದ್ದೇಶವಿಟ್ಟುಕೊಂಡಿದ್ದೇವೆ ಎಂದರು.

VISTARANEWS.COM


on

Sharan Prakash Patil
Koo

ಬೆಂಗಳೂರು: ವ್ಯಾಸ್ಕ್ಯುಲಾರ್‌ ಸಮಸ್ಯೆಗಳನ್ನು ಪತ್ತೆ ಹಚ್ಚಲು ಹಾಗೂ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡಲು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ವ್ಯಾಸ್ಕ್ಯುಲಾರ್‌ ವಿಭಾಗ ಪ್ರಾರಂಭ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ (Sharan Prakash Patil) ತಿಳಿಸಿದರು. ಅವರು ವ್ಯಾಸ್ಕ್ಯುಲಾರ್‌ ಸೊಸೈಟಿ ಆಫ್‌ ಇಂಡಿಯಾ ಹಾಗೂ ವ್ಯಾಸ್ಕಾರ್‌ ವತಿಯಿಂದ ನಗರದ ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ವಾಕಥಾನ್‌ ಗೆ ಚಾಲನೆ ನೀಡಿ ಮಾತನಾದಡಿದರು.

ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿ ವ್ಯಾಸ್ಕ್ಯುಲಾರ್‌ ವಿಭಾಗ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಲುಬುರುಗಿ, ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿಯೂ ಆರಂಭವಾಗಲಿದ್ದು, ವಿಕ್ಟೋರಿಯಾ ಹಾಗೂ ಸಂಜಯ್‌ ಗಾಂಧೀ ಆಸ್ಪತ್ರೆಯಲ್ಲಿಯೂ ವಿಭಾಗ ತೆರೆಯುವ ಉದ್ದೇಶವಿಟ್ಟುಕೊಂಡಿದ್ದೇವೆ ಎಂದರು.

ಹಿರಿಯ ವ್ಯಾಸ್ಕ್ಯುಲಾರ್‌ ಸರ್ಜನ್‌ ಡಾ.ಕೆ.ಆರ್.ಸುರೇಶ್‌ ಮಾತನಾಡಿ ಹೃದಯಾಘಾತದಂತೆ(ಹಾರ್ಟ್‌ ಅಟ್ಯಾಕ್‌) ಲೆಗ್‌ ಅಟ್ಯಾಕ್‌ ಕೂಡ ಮನುಷ್ಯನಿಗೆ ಪ್ರಾಣಾಂತಿಕವಾಗಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದಿದ್ದರೆ ಕಾಲು ಕತ್ತರಿಸುವ ಸಂದರ್ಭ ಉಂಟಾಗಿ ಜೀವಕ್ಕೆ ಹಾನಿಯಾಗಲಿದೆ. ಧೂಮಪಾನ, ಮಧುಮೇಹ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಉತ್ತಮ. ನಡೆಯುವಾಗ ಕಾಲಿನಲ್ಲಿ ನೋವು ಕಂಡು ಬಂದರೆ, ಕಾಲಿನಲ್ಲಿ ಜೋಮು ಹಾಗೂ ತಂಪಿನಂತಹ ಲಕ್ಷಣಗಳು ಕಂಡು ಬಂದಾಗ ಹತ್ತಿರದ ವ್ಯಾಸ್ಕ್ಯುಲಾರ್‌ ಸರ್ಜನ್‌ ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: Spandana Vijay Raghavendra: ಸ್ಪಂದನ ಅಗಲಿ ಒಂದು ವರ್ಷ, ಭಾವುಕ ಪೋಸ್ಟ್‌ ಮಾಡಿದ ವಿಜಯ್‌ ರಾಘವೇಂದ್ರ

ವ್ಯಾಸ್ಕಾರ್ ಅಧ್ಯಕ್ಷರಾದ ಡಾ.ವೆಂಕಟೇಶ್‌ ರೆಡ್ಡಿ ಮಾತನಾಡಿ ಕಳೆದ ಮೂರು ದಶಕಗಳಿಂದ ವ್ಯಾಸ್ಕ್ಯುಲರ್‌ ಸರ್ಜನ್ ಅಸೋಸಿಯೇಷನ್‌ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದ್ದು, ದಿವಂಗತ ಡಾ.ಎನ್.ಕೆ ಭಗವಾನ್‌ ದೂರದೃಷ್ಠಿ ಹಾಗೂ ಪ್ರಸ್ತುತ ಡಾ.ಕೆ.ಆರ್.ಸುರೇಶ್‌ರವರ ಮಾರ್ಗದರ್ಶನದಲ್ಲಿ ಸಹಸ್ತ್ರಾರು ಶಸ್ತ್ರಚಿಕಿತ್ಸೆಗಳ ಮೂಲಕ ಸಾವಿರಾರು ರೋಗಿಗಳು ಶ್ವಾಶ್ವತ ಅಂಗವಿಕಲರಾಗುವುದನ್ನು ತಪ್ಪಿಸಿರುವುದು ಹೆಮ್ಮೆಯ ಸಂಗತಿಯಾಗಿದ್ದು ವ್ಯಾಸ್ಕಾರ್‌ ಅರಿವು ಕಾರ್ಯಕ್ರಮ ನಿರಂತರವಾಗಿರಲಿದೆ ಎಂದು ಎಂದರು.

ಕಂಠೀರವ ಸ್ಟೇಡಿಯಂನಿಂದ ಆರಂಭವಾದ ವಾಕಥಾನ್‌ ಕಸ್ತೂರ್ಬಾ ರಸ್ತೆ, ವಿಧಾನಸೌಧ, ನೃಪತುಂಗ ರಸ್ತೆ ಮುಖಾಂತರ ಕಂಠೀರವ ಸ್ಟೇಡಿಯಂನಲ್ಲಿ ಅಂತ್ಯಗೊಂಡಿತು. ರಾಜ್ಯದ ಸಾವಿರಕ್ಕೂ ಹೆಚ್ಚು ವೈದ್ಯರು, ವೈದ್ಯಕೀಯ ವಿದ್ಯಾರ್ಥಿ, ಶೂಶ್ರೂಷಕ ಸಿಬ್ಬಂಧಿ ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.

ರಾಜೀವ್‌ ಗಾಂಧೀ ಆರೋಗ್ಯ ವಿಶ್ವವಿದ್ಯಾಲಯ ಕುಲಪತಿ ರಮೇಶ್‌ ಎಂ.ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ,ಜಯದೇವ ಕಾರ್ಡಿಯಾಕ್‌ ಆಸ್ಪತ್ರೆಯ ವ್ಯಾಸ್ಕ್ಯುಲಾರ್‌ ಸರ್ಜನ್‌ ಡಾ.ಮುರುಳಿ ಕೃಷ್ಣ,ರಾಷ್ಟ್ರೀಯ ಭದ್ರತೆ ಮಾಜಿ ಸಲಹೆಗಾರರಾದ ಪದ್ಮವಿಭೂಷಣ ವಿ.ಕೆ.ಆತ್ರೆ, ವಿಎಸ್‌ಐನ ಅಧ್ಯಕ್ಷರಾದ ಡಾ.ವಿವೇಕಾನಂದ್‌, ರಾಜ್ಯ ವ್ಯಾಸ್ಕರ್‌ ಸೊಸೈಟಿ ಕಾರ್ಯದರ್ಶಿ ಡಾ.ವಿಷ್ಣು, ಚಿತ್ರನಟಿ ಸಂಜನಾ ಗಲ್ರಾನಿ ಮುಂತಾದವರಿದ್ದರು

Continue Reading

ರಾಯಚೂರು

Actor Darshan: ಆಂಜನೇಯನ ಮೂರ್ತಿ ಜೊತೆಗೆ ದರ್ಶನ್‌ ಫೋಟೋ ಇಟ್ಟು ಪೂಜೆ! ಕಿಡಿ ಕಾರಿದ ಭಕ್ತರು

Actor Darshan: ಮಸರಕಲ್ ಲಕ್ಷ್ಮೀ ರಂಗನಾಥ ದೇಗುಲದ ಎದುರಲ್ಲಿರುವ ಆಂಜನೇಯ ಮೂರ್ತಿಯ ಜೊತೆಗೆ ನಟ ದರ್ಶನ್ ಫೋಟೋಗಳನ್ನು ಇಟ್ಟು ಪೂಜೆ ಸಲ್ಲಿಸಲಾಗಿತ್ತು. ಅರ್ಚಕರ ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

VISTARANEWS.COM


on

actor darshan photo with god
Koo

ರಾಯಚೂರು: ದೇವರ ಮೂರ್ತಿಯ (God Idol) ಜೊತೆಗೆ ಕೊಲೆ ಆರೋಪಿ (Murder Suspect) ನಟ ದರ್ಶನ್‌ (Actor Darshan) ಫೋಟೋ ಇಟ್ಟು ಪೂಜೆ (worship) ಮಾಡಿರುವ ರಾಯಚೂರಿನ (Raichur News) ದೇವಾಲಯದ ಅರ್ಚಕರ ನಡೆಗೆ ಭಾರಿ ವಿರೋಧ ವ್ಯಕ್ತವಾಗಿದೆ.

ರಾಯಚೂರಿನ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಪ್ರಸಿದ್ಧ ದೇಗುಲ ಲಕ್ಷ್ಮೀ ರಂಗನಾಥ ದೇವಾಲಯದಲ್ಲಿ ಈ ಅಪಸವ್ಯ ನಡೆದಿದೆ. ಪೂಜೆ ಮಾಡಿದ ಅರ್ಚಕರು ಹಾಗೂ ಪೂಜೆ ಮಾಡಿಸಿದ ದರ್ಶನ್‌ ಫ್ಯಾನ್ಸ್‌ ಇದೀಗ ಭಕ್ತರ ಅಸಮಾಧಾನಕ್ಕೆ ತುತ್ತಾಗಿದ್ದಾರೆ.

ಮಸರಕಲ್ ಲಕ್ಷ್ಮೀ ರಂಗನಾಥ ದೇಗುಲದ ಎದುರಲ್ಲಿರುವ ಆಂಜನೇಯ ಮೂರ್ತಿಯ ಜೊತೆಗೆ ನಟ ದರ್ಶನ್ ಫೋಟೋಗಳನ್ನು ಇಟ್ಟು ಪೂಜೆ ಸಲ್ಲಿಸಲಾಗಿತ್ತು. ಅರ್ಚಕರ ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಉದ್ಭವ ಮೂರ್ತಿ, ಪ್ರತಿಷ್ಠಾಪನಾ ಮೂರ್ತಿಯ ಮೇಲೆ ಕೊಲೆ ಆರೋಪಿ ದರ್ಶನ್ ಪೋಟೋ ಇಟ್ಟು ಪೂಜೆ ಮಾಡಿರುವುದನ್ನು ಭಕ್ತರು ಪ್ರಶ್ನಿಸಿದ್ದಾರೆ.

ದೇವರ ಮೂರ್ತಿಯ ಜೊತೆಗೆ ಕೊಲೆ ಆರೋಪಿಯ ಫೋಟೋ ಇಟ್ಟು ಪೂಜೆ ಮಾಡಿಸುವ ಮೂಲಕ ದೇಗುಲದ ಅರ್ಚಕರು ಹಾಗೂ ದರ್ಶನ್ ಅಭಿಮಾನಿಗನು ಭಕ್ತರ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ. ದರ್ಶನ್ ಕೊಲೆ ಆರೋಪಿಯಾಗಿ ಜೈಲಿನಲ್ಲಿದ್ದಾರೆ. ಕೊಲೆ ಆರೋಪಿಯ ಫೋಟೋ ಗರ್ಭಗುಡಿಯಲ್ಲಿ ಇಟ್ಟು ಪೂಜೆ ಮಾಡುವ ಅಗತ್ಯ ಏನಿದೆ? ಇದು ಕನ್ನಡ ಸಂಸ್ಕೃತಿಯಲ್ಲ. ಅಭಿಮಾನಿಗಳಿಗೆ ದರ್ಶನ್ ಮೇಲೆ ಅಭಿಮಾನ ಇರಬಹುದು.‌ ಆದರೆ ಮನೆಯಲ್ಲಿ ಹೀಗೆ ಪೂಜೆ ಮಾಡಲಿ. ಸಾರ್ವಜನಿಕ ದೇವಾಲಯದಲ್ಲಿ ಹೀಗೆ ಮಾಡುವುದು ಸಲ್ಲದು ಎಂದು ಕನ್ನಡ ಹೋರಾಟಗಾರರು ರಾಂಗ್‌ ಆಗಿದ್ದಾರೆ.

ಈ ವಿಚಾರದಲ್ಲಿ ಅರ್ಚಕರು ಹಾಗೂ ಪೂಜೆ ಮಾಡಿಸಿದವರ ವಿರುದ್ಧ ಹೋರಾಟ ಮಾಡುತ್ತೇವೆ. ನೀವು ದೇವರ ಪುರೋಹಿತರು ಅಂತ ಹೇಳಲು ನಮಗೆ ನಾಚಿಕೆ ಆಗುತ್ತದೆ. ಕ್ಷಮೆ ಕೇಳಿ ಎಂದು ರಾಯಚೂರಲ್ಲಿ ಕನ್ನಡ ಪರ ಹೋರಾಟಗಾರ ಅಶೋಕ್ ಕುಮಾರ್ ಜೈನ್ ಕಿಡಿ ಕಾರಿದ್ದಾರೆ.

ಸ್ಪಂದನ ಅಗಲಿ ಒಂದು ವರ್ಷ, ಭಾವುಕ ಪೋಸ್ಟ್‌ ಮಾಡಿದ ವಿಜಯ್‌ ರಾಘವೇಂದ್ರ

ಬೆಂಗಳೂರು: ನಟ (Sandalwood Actor) ವಿಜಯ್​ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನ (Spandana Spandana Vijay Raghavendra) ಅವರು ಮೃತಪಟ್ಟು (Spandana Death) ಒಂದು ವರ್ಷವೇ ಕಳೆದಿದ್ದು, ಅಗಲಿದ ಪತ್ನಿಯನ್ನು ನೆನೆದುಕೊಂಡು ವಿಜಯ್‌ ರಾಘವೇಂದ್ರ ಸೋಶಿಯಲ್‌ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷ ಹೃದಯಾಘಾತದಿಂದ ನಿಧನರಾಗಿದ್ದ ಪತ್ನಿಯನ್ನು ನೆನೆದು ವಿಜಯ್​ ರಾಘವೇಂದ್ರ ಇಂದು ಸೋಶಿಯಲ್​ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಪ್ರೀತಿಯ ಸಂದೇಶ ಹಾಗೂ ಫೋಟೋ ಪೋಸ್ಟ್‌ ಮಾಡಿದ್ದಾರೆ. ʼಐ ಲವ್ ಯು ಚಿನ್ನ.. ಮೌನದಲಿ ಅರಳಿದ ನಗು ನಿನ್ನದು.. ನೀ ನಡೆದ ಹಾದಿಯ ನೆನಪಿನ ಬೆಳಕು ನನ್ನದುʼ ಎಂದು ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

ಸ್ಪಂದನಾ ಅವರು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಮ್ ಅವರ ಪುತ್ರಿ. ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಅವರು 2007ರ ಆಗಸ್ಟ್ 26ರಂದು ಮದುವೆ ಆಗಿದ್ದರು. ಈ ದಂಪತಿಗೆ ಶೌರ್ಯ ಹೆಸರಿನ ಮಗ ಇದ್ದಾನೆ.

ಕಳೆದ ವರ್ಷ ಬ್ಯಾಂಕಾಕ್ ಪ್ರವಾಸದಲ್ಲಿದ್ದ ವೇಳೆ ಸ್ಪಂದನಾ ಅವರಿಗೆ ಹೃದಯಾಘಾತವಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ಮಾಡಲಾಯಿತು. ಆದರೆ ಅಷ್ಟರಲ್ಲಿ ಅವರು ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಆ.8ರಂದು ಬೆಂಗಳೂರಿಗೆ ತಂದು ಅತ್ಯಸಂಸ್ಕಾರಗಳನ್ನು ಮಾಡಲಾಗಿತ್ತು. ಸ್ಪಂದನಾ ಅವರ ನಿಧನ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಆಘಾತವನ್ನು ಉಂಟು ಮಾಡಿತ್ತು. ಹಲವು ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ವಿಜಯ್‌ ರಾಘವೇಂದ್ರಗೆ ಸಾಂತ್ವನ ಹೇಳಿದ್ದರು.

ಇದನ್ನೂ ಓದಿ: Actor Yash: ಧರ್ಮಸ್ಥಳದಲ್ಲಿ ರಾಕಿಂಗ್ ಸ್ಟಾರ್ ಯಶ್, ಟಾಕ್ಸಿಕ್‌ ಶೂಟಿಂಗ್‌ಗೂ ಮುನ್ನ ಟೆಂಪಲ್‌ ರನ್

Continue Reading

ಕರ್ನಾಟಕ

MUDA scam: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

MUDA scam: ಮುಡಾ ಅಕ್ರಮದಲ್ಲಿ ಸಿಎಂ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಈಗಾಗಲೇ ಸಚಿವ ಸಂಪುಟ ರಾಜ್ಯಪಾಲರಿಗೆ ಉತ್ತರ ನೀಡಿದೆ.
ರಾಜ್ಯ ಸರ್ಕಾರ ಕಳುಹಿಸಿರುವ ನಿರ್ಣಯವನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಪರಿಶೀಲನೆ ಮಾಡುತ್ತಿದ್ದಾರೆ. ಒಂದೆಡೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಡಲು ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ಟೀಮ್‌ನಿಂದ ಕಾನೂನು ಹೋರಾಟಕ್ಕೆ ಸಿದ್ಧತೆ ಶುರುವಾಗಿದೆ.

VISTARANEWS.COM


on

MUDA scam
Koo

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಮತ್ತೊಂದು ದೂರು ದಾಖಲಾಗಿದೆ. ತಮ್ಮ ಪ್ರಭಾವ ಬೀರಿ ಅಕ್ರಮವಾಗಿ ಜಮೀನು ಡಿನೋಟಿಫೈ ಮಾಡಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ (MUDA scam) ವಿರುದ್ಧ ಪ್ರಕರಣ ದಾಖಲಿಸಲು ಕೋರಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಎಂಬುವವರು ದೂರು ರಾಜ್ಯಪಾಲರಿಗೆ ನೀಡಿದ್ದಾರೆ.

ರಾಜ್ಯಪಾಲರಿಗೆ ದಾಖಲೆ ಸಮೇತ ದೂರು ನೀಡಿರುವ ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, 1979ರಲ್ಲಿ ಮೈಸೂರು ತಾಲೂಕು ವರುಣದ ಉತ್ತನಹಳ್ಳಿಯಲ್ಲಿ ಆಶ್ರಯ ಮನೆಗಳಿಗಾಗಿ ಭೂಸ್ವಾಧೀನ ಮಾಡಿದ್ದ ಜಮೀನಿಗೆ 30 ವರ್ಷದ ಬಳಿಕ ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಮರಪ್ಪ ಎಂಬುವವರ ಹೆಸರಿಗೆ 1.39 ಎಕರೆ ಜಮೀನು ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು. ಮರಪ್ಪ ಎಂಬುವವರಿಗೆ ಸಂಬಂಧವೇ ಇರದಿದ್ದರೂ ನಕಲಿ ದಾಖಲೆ ಆಧರಿಸಿ ಮರಪ್ಪ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ ಎಂದು ದೂರುದಾರ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಪತ್ರ ಆಧರಿಸಿ 14 ತಿಂಗಳ ಬಳಿಕ 1.39 ಎಕರೆಯನ್ನು ಅಂದಿನ ಮೈಸೂರು ಡಿಸಿ ಡಿನೋಟಿಫೈ ಮಾಡಿದ್ದರು. ಆದರೆ, ಡಿಸಿ ಆದೇಶ ಪ್ರಶ್ನಿಸಿ ಫಲಾನುಭವಿಗಳು ಮರು ದೂರು ಸಲ್ಲಿಸಿದ್ದರು. ಮೂಲ ಜಮೀನಿನ ಮಾಲೀಕರು ಮರಪ್ಪ ಅಲ್ಲ, ಆದರೂ ಅವರ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ. ಡಿನೋಟಿಫೈ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ಕೂಡ ಭಾಗಿಯಾದ ಹಿನ್ನೆಲೆ ಸಿಎಂ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.

ಸಿಎಂಗೆ ಪ್ರಾಸಿಕ್ಯೂಷನ್‌ ಭಯ

ಮುಡಾ ಅಕ್ರಮದಲ್ಲಿ ಸಿಎಂ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಈಗಾಗಲೇ ಸಚಿವ ಸಂಪುಟ ರಾಜ್ಯಪಾಲರಿಗೆ ಉತ್ತರ ನೀಡಿದೆ. ರಾಜ್ಯ ಸರ್ಕಾರ ಕಳುಹಿಸಿರುವ ನಿರ್ಣಯವನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಪರಿಶೀಲನೆ ಮಾಡುತ್ತಿದ್ದಾರೆ. ಒಂದೆಡೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಡಲು ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ಟೀಮ್‌ನಿಂದ ಕಾನೂನು ಹೋರಾಟಕ್ಕೆ ಸಿದ್ಧತೆ ಶುರುವಾಗಿದೆ.

ಸಿಎಂ ಸಿದ್ದರಾಮಯ್ಯಗೆ ರಾಜಭವನದಿಂದ ಮೂರನೇ ನೋಟೀಸ್ ಜಾರಿ! ಯಾಕೆ ಪದೇ ಪದೆ ನೋಟೀಸ್‌?

thawar chand gehlot cm siddaramaiah Governor versus state
thawar chand gehlot cm siddaramaiah Governor versus state

ಬೆಂಗಳೂರು: ಬಹುಕೋಟಿ ಮುಡಾ ಹಗರಣ (MUDA Scam) ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಮೂರನೇ ನೋಟೀಸ್ (Notice) ಅನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Governor Thawar Chand Gehlot) ಜಾರಿ ಮಾಡಿದ್ದಾರೆ.

ಮೊದಲ ನೋಟೀಸ್ ಅನ್ನು ಜುಲೈ ಮೂರನೇ ವಾರದಲ್ಲಿ ಜಾರಿ ಮಾಡಿದ್ದ ರಾಜ್ಯಪಾಲರು, ಬಂದು ಮಾಹಿತಿ ಕೊಡುವಂತೆ ಸೂಚಿಸಿದ್ದರು. ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕವಾಗಿ ಚರ್ಚೆ ಆಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕೊಡುವಂತೆ ಸೂಚಿಸಿದ್ದರು.

ಜುಲೈ 26ನೇ ತಾರೀಕು ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ನೀಡಿದ ದೂರು ಆಧರಿಸಿ ಎರಡನೇ ನೋಟೀಸ್ ಕಳಿಸಲಾಗಿತ್ತು. ಅಬ್ರಹಾಂ ಸಲ್ಲಿಸಿದ್ದ ದೂರಿನಲ್ಲಿ, ಈ ಪ್ರಕರಣವನ್ನು ಪ್ರಾಸಿಕ್ಯೂಶನ್‌ಗೆ ಯಾಕೆ ಕೊಡಬಾರದು ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಲ್ಹೋಟ್ ಶೋಕಾಸ್ ನೋಟೀಸ್ ನೀಡಿದ್ದರು.

ಆಗಸ್ಟ್ 5ನೇ ತಾರೀಕು ರಾಜ್ಯಪಾಲರು ಮೂರನೇ ನೋಟೀಸ್ ಜಾರಿ ಮಾಡಿದ್ದಾರೆ. ಕಳೆದ ವಾರ ಕ್ಯಾಬಿನೆಟ್‌ ಸಭೆಯಲ್ಲಿ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದ್ದ ಸಂಪುಟ, ನೋಟೀಸ್‌ ಹಿಂಪಡೆಯುವಂತೆ ಹೇಳಿತ್ತು. ಹೀಗಾಗಿ ಮತ್ತೆ ಕೇಸ್‌ನಲ್ಲಿ ಕ್ಲಾರಿಫಿಕೇಷನ್ ಕೊಡುವಂತೆ ನೋಟೀಸ್ ಜಾರಿ ಮಾಡಲಾಗಿದೆ.

ರಾಜ್ಯಪಾಲರು ಪದೇ ಪದೆ ನೋಟೀಸ್ ಕೊಡುತ್ತಿರುವುದೇಕೆ?

ಈ ಹಿಂದಿನ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಪ್ರಕರಣದಲ್ಲಿ ಆದುದೇ ರಾಜ್ಯಪಾಲರ ಈಗಿನ ನಡೆಗೆ ಕಾರಣ ಎನ್ನಲಾಗಿದೆ. ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಆದೇಶವನ್ನು ಯಡಿಯೂರಪ್ಪ ಪ್ರಶ್ನೆ ಮಾಡಿದ್ದರು. ರಾಜ್ಯಪಾಲರು ಅನುಮತಿ ಕೊಡುವಾಗ ಆರೋಪದ ಬಗ್ಗೆ ಮುಖ್ಯಮಂತ್ರಿಗಳಿಂದ ಮಾಹಿತಿ ಪಡೆಯುವ ಪ್ರಕ್ರಿಯೆಯನ್ನು ಸರಿಯಾಗಿ ನಡೆಸಿಲ್ಲ. ಆತುರಾತುರವಾಗಿ ನಿರ್ಧಾರ ಮಾಡಿ ನೋಟೀಸ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರವನ್ನು ಅಭದ್ರ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಹೀಗಾಗಿ ಪೊಲಿಟಿಕಲ್ ಮೈಲೇಜ್ ಪಡೆಯಲು ಈ ನಿರ್ಧಾರ ಮಾಡಿದ್ದರು ಎಂದು ಯಡಿಯೂರಪ್ಪ ವಾದ ಮಾಡಿದ್ದರು. ಯಡಿಯೂರಪ್ಪ ವಾದವನ್ನು ಹೈಕೋರ್ಟ್ ಒಪ್ಪಿತ್ತು. ಜನಪ್ರತಿನಿಧಿಗಳ ಸರ್ಕಾರದ ನೇತೃತ್ವ ವಹಿಸಿರುವವರ ವಿರುದ್ಧ ಪ್ರಾಸಿಕ್ಯೂಶನ್‌ಗೆ ಕೊಡುವಾಗ ಮೂರು ಬಾರಿ ನೋಟೀಸ್ ಹಾಗೂ ಮೂರು ಬಾರಿ ಲೀಗಲ್ ಓಪಿನಿಯನ್ ಪಡೆದು ಮುಂದುವರಿಯಬೇಕು ಎಂದು ಹೈಕೋರ್ಟ್ ಆದೇಶ ಮಾಡಿತ್ತು. ನಂತರ ಯಡಿಯೂರಪ್ಪ ಈ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರು.

ಇದನ್ನೂ ಓದಿ: CM Siddaramaiah: ಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ತಕ್ಷಣ ಪರಿಹಾರ; ಸಿದ್ದರಾಮಯ್ಯ ಸೂಚನೆ

ಹೀಗಾಗಿ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಆರೋಪ ಕೇಳಿ ಬಂದಿರುವುದರಿಂದ, ಕಾನೂನು ಪ್ರಕ್ರಿಯೆ ಮಾಡುವಾಗ ಯಾವುದೇ ಲೋಪ ಆಗದಂತೆ ರಾಜ್ಯಪಾಲರು ಪದೇ ಪದೆ ನೋಟೀಸ್ ನೀಡುತ್ತಿದ್ದಾರೆ. ನಿನ್ನೆ ದೆಹಲಿಯಿಂದ ರಾಜ್ಯಕ್ಕೆ ಮರಳಿರುವ ರಾಜ್ಯಪಾಲರು ಲೀಗಲ್‌ ಪ್ರಕ್ರಿಯೆ ಚುರುಕುಗೊಳಿಸಿದ್ದಾರೆ. ಇದಕ್ಕೆ ಕ್ಯಾಬಿನೆಟ್‌ ಹಾಗೂ ಮುಖ್ಯಮಂತ್ರಿಗಳ ಕಡೆಯಿಂದ ಪ್ರತಿಕ್ರಿಯೆ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ಕಳೆದ ವಾರವಿಡೀ ಮುಖ್ಯಮಂತ್ರಿಗಳು ಕಾನೂನು ತಜ್ಞರು, ವಕೀಲರ ಜೊತೆಗೆ ಈ ವಿಚಾರವನ್ನು ಚರ್ಚಿಸಿದ್ದರು. ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಸಿಎಂ ಹೈಕೋರ್ಟ್‌ಗೆ ತೆರಳುವ ಸಾಧ್ಯತೆ ಇದೆ.

Continue Reading

ವಿಜಯಪುರ

Road Accident : ಅಂಗನವಾಡಿಗೆ ಹೊರಟಿದ್ದ ಬಾಲಕನ ಬಲಿ ಪಡೆದ ಖಾಸಗಿ ಶಾಲಾ ವಾಹನ

Road Accident : ವಿಜಯಪುರದಲ್ಲಿ ಯಮರೂಪಿಯಾಗಿ ಬಂದ ಶಾಲಾವಾಹನವೊಂದು ಐದು ವರ್ಷದ ಬಾಲಕನನ್ನು ಬಲಿ ಪಡೆದಿದೆ. ಶಿವಮೊಗ್ಗದಲ್ಲಿ ಸಾರಿಗೆ ಬಸ್‌ವೊಂದು ಹೊತ್ತಿ ಉರಿದಿದೆ.

VISTARANEWS.COM


on

By

Road Accident
Koo

ವಿಜಯಪುರ: ಅಂಗನವಾಡಿ ಬಾಲಕನ ಮೇಲೆ ಖಾಸಗಿ ಶಾಲಾ ವಾಹನ (Road Accident) ಹರಿದಿದೆ. ವಿಜಯಪುರ ಜಿಲ್ಲೆಯ ನಿಡಗುಂಡಿ ತಾ. ಅರಳದಿನ್ನಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಸವರಾಜ್ ಮಂಜುನಾಥ ಚೋಪಡೆ (5) ಮೃತ ದುರ್ದೈವಿ.

ಬಸವರಾಜ್‌ ಅಂಗನವಾಡಿಗೆ ಹೊರಟಿದ್ದ. ರಸ್ತೆ ದಾಡುವಾಗ ಏಕಾಏಕಿ ಖಾಸಗಿ ಶಾಲಾ ವಾಹನವು ಬಾಲಕಿಗೆ ಗುದ್ದಿದೆ. ಕೆಳಗೆ ಬಿದ್ದವನ ಮೇಲೆ ಹರಿದಿದೆ. ನಿಡಗುಂದಿಯ ಬಿಎಂಎಸ್‌ (BMS) ಶಾಲೆಯ ವಾಹನ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ನಿಡಗುಂದಿ ಪೊಲೀಸರ ದೌಡಾಯಿಸಿದ್ದು, ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪಿಎಸ್‌ಐ ಶಿವಾನಂದ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲಾ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Murder case : ರಾಮನಗರದಲ್ಲಿ ಸಂಬಂಧಿಕರಿಂದಲೇ ಯುವಕನ ಬರ್ಬರ ಹತ್ಯೆ

ಶಿವಮೊಗ್ಗದಲ್ಲಿ ಹೊತ್ತಿ ಉರಿದ ಸಾರಿಗೆ ಬಸ್

ಚಲಿಸುತ್ತಿದ್ದ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಅದೃಷ್ಟವಶಾತ್‌ ಭಾರಿ ಅನಾಹುತವೊಂದು ತಪ್ಪಿದೆ. ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಕೆಲವೇ ಕ್ಷಣದಲ್ಲಿ ಹೊತ್ತಿ ಉರಿದಿದೆ. ಬಸ್ಸಿನಲ್ಲಿದ್ದ 12 ಮಂದಿ ಪ್ರಯಾಣಿಕರು ಪಾರಾಗಿದ್ದಾರೆ. ಶಿವಮೊಗ್ಗದ ಸಾಗರ ಪಟ್ಟಣದ ಜೋಗ ರಸ್ತೆಯ ಕೆಎಸ್ ಆರ್ ಟಿಸಿ ಡಿಪೋ ಬಳಿ ಘಟನೆ ನಡೆದಿದೆ. ಭಟ್ಕಳದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಸುಟ್ಟಿ ಕರಕಲಾಗಿದೆ.

ನಿಂತಿದ್ದ ಟಿಪ್ಪರ್ ಲಾರಿಗೆ ಆಂಬ್ಯುಲೆನ್ಸ್ ಡಿಕ್ಕಿ

ನಿಂತಿದ್ದ ಟಿಪ್ಪರ್ ಲಾರಿಗೆ ಆಂಬ್ಯುಲೆನ್ಸ್‌ವೊಂದು ಡಿಕ್ಕಿ ಹೊಡೆದಿದ್ದು, ವ್ಯಕ್ತಿಯೊಬ್ಬ ಗಂಭೀರ ಗಾಯಗೊಂಡಿದ್ದಾರೆ. ಶಿವಮೊಗ್ಗದ ನಗರದ ಹೊರವಲಯದ ಮಲವಗೊಪ್ಪ – ನಿದಿಗೆ ಗ್ರಾಮದ ಬಳಿ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಆಂಬ್ಯುಲೆನ್ಸ್‌ ಜಖಂ ಆಗಿದೆ. ಆಂಬ್ಯುಲೆನ್ಸ್‌ ಭದ್ರಾವತಿ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದಾಗ ಟಿಪ್ಪರ್‌ ಲಾರಿಗೆ ಡಿಕ್ಕಿಯಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Sharan Prakash Patil
ಬೆಂಗಳೂರು12 mins ago

Sharan Prakash Patil: ಮೆಡಿಕಲ್‌ ಕಾಲೇಜುಗಳಲ್ಲಿ ವ್ಯಾಸ್ಕ್ಯುಲಾರ್‌ ವಿಭಾಗ ಪ್ರಾರಂಭ : ಸಚಿವ ಶರಣಪ್ರಕಾಶ್‌ ಪಾಟೀಲ್‌

actor darshan photo with god
ರಾಯಚೂರು18 mins ago

Actor Darshan: ಆಂಜನೇಯನ ಮೂರ್ತಿ ಜೊತೆಗೆ ದರ್ಶನ್‌ ಫೋಟೋ ಇಟ್ಟು ಪೂಜೆ! ಕಿಡಿ ಕಾರಿದ ಭಕ್ತರು

MUDA scam
ಕರ್ನಾಟಕ29 mins ago

MUDA scam: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

PRO KABADDI LEAGUE
ಕ್ರೀಡೆ29 mins ago

PRO KABADDI LEAGUE : ಪ್ರೊ ಕಬಡ್ಡಿ ಲೀಗ್ ಉಳಿಸಿಕೊಂಡ ಆಟಗಾರರ ಪಟ್ಟಿ ಪ್ರಕಟ! ಪವನ್ ಸೆಹ್ರಾವತ್, ಪ್ರದೀಪ್ ನರ್ವಾಲ್ ಹರಾಜಿಗೆ

Road Accident
ವಿಜಯಪುರ52 mins ago

Road Accident : ಅಂಗನವಾಡಿಗೆ ಹೊರಟಿದ್ದ ಬಾಲಕನ ಬಲಿ ಪಡೆದ ಖಾಸಗಿ ಶಾಲಾ ವಾಹನ

Stock Market
ವಾಣಿಜ್ಯ55 mins ago

Stock Market: ಮಹಾ ಕುಸಿತದಿಂದ ಚೇತರಿಕೆಯ ಹಾದಿಯಲ್ಲಿ ಷೇರುಪೇಟೆ; ಸೆನ್ಸೆಕ್ಸ್‌ 921, ನಿಫ್ಟಿ 285 ಪಾಯಿಂಟ್‌ ಜಿಗಿತ

spandana vijay raghavendra
ಸಿನಿಮಾ58 mins ago

Spandana Vijay Raghavendra: ಸ್ಪಂದನ ಅಗಲಿ ಒಂದು ವರ್ಷ, ಭಾವುಕ ಪೋಸ್ಟ್‌ ಮಾಡಿದ ವಿಜಯ್‌ ರಾಘವೇಂದ್ರ

Muhammad Yunus
ಪ್ರಮುಖ ಸುದ್ದಿ1 hour ago

Muhammad Yunus : ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನುಸ್​ ಬಾಂಗ್ಲಾ ಮಧ್ಯಂತರ ಸರ್ಕಾರದ ಸಲಹೆಗಾರ

murder case
ರಾಮನಗರ1 hour ago

Murder case : ರಾಮನಗರದಲ್ಲಿ ಸಂಬಂಧಿಕರಿಂದಲೇ ಯುವಕನ ಬರ್ಬರ ಹತ್ಯೆ

Gold Rate Today
ಚಿನ್ನದ ದರ2 hours ago

Gold Rate Today: ಕೊನೆಗೂ ಇಳಿಯಿತು ಬಂಗಾರದ ದರ; ಇಂದು ಚಿನ್ನ ಇಷ್ಟು ಅಗ್ಗ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ2 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ5 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ7 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌