star fashion interview sanya ayyarStar Fashion Interview: ಯೂನಿಕ್‌ ಫ್ಯಾಷನ್‌ಗೆ ನಟಿ ಸಾನ್ಯ ಅಯ್ಯರ್‌ ಫಿದಾ! - Vistara News

ಫ್ಯಾಷನ್

Star Fashion Interview: ಯೂನಿಕ್‌ ಫ್ಯಾಷನ್‌ಗೆ ನಟಿ ಸಾನ್ಯ ಅಯ್ಯರ್‌ ಫಿದಾ!

ಕಿರುತೆರೆಯ ಪುಟ್ಟಗೌರಿ ಸೀರಿಯಲ್‌ (Star Fashion interview) ಖ್ಯಾತಿಯ ಸಾನಿಯಾ, ಬಿಗ್‌ಬಾಸ್‌ ಹೋಗಿ ಬಂದ ನಂತರ ಮತ್ತಷ್ಟು ಫ್ಯಾಷೆನಬಲ್‌ ಆಗಿದ್ದಾರೆ. ಅವರ ಒಂದೊಂದು ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳು ಸದಾ ಡಿಫರೆಂಟ್‌ ಆಗಿರುತ್ತವೆ. ಈ ಬಗ್ಗೆ ಸಾನ್ಯ ಅವರೇ ವಿಸ್ತಾರದೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.

VISTARANEWS.COM


on

Star Fashion Interview sanya ayyar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಂದರ್ಶನ: ಶೀಲಾ ಸಿ. ಶೆಟ್ಟಿ

ಪುಟ್ಟ ಗೌರಿ ಸೀರಿಯಲ್‌ ಮೂಲಕ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ನಟಿ ಸಾನ್ಯ ಅಯ್ಯರ್‌ (Star Fashion Interview), ಬಿಗ್‌ ಬಾಸ್‌ನಲ್ಲಿ ಕಾಣಿಸಿಕೊಂಡ ನಂತರ, ಇದೀಗ ತಮಿಳು ಸಿನಿಮಾ ಮೂಲಕ ನಾಯಕಿಯಾಗಿ ಹಿರಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಮೊದಲಿನಿಂದಲೂ ತಮ್ಮದೇ ಆದ ಸೆಲ್ಫ್‌ ಡಿಕ್ಲೇರ್ಡ್‌ ಫ್ಯಾಷನ್‌ (Star Fashion Interview) ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಲ್ಲಿ ಅಭಿಮಾನಿಗಳನ್ನು ಸೆಳೆಯುತ್ತಿದ್ದ ಸಾನ್ಯ ಅಯ್ಯರ್‌, ವೆಲ್ಹೊಜ್ಹ್‌ಇವ್‌ ಆಯೋಜಿಸಿದ್ದ ಇಂಡಿಯನ್‌ ವಿಮೆನ್‌ ಆಚಿವರ್ಸ್‌ ಆವಾರ್ಡ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಸ್ತಾರದ ಸಂದರ್ಶನದಲ್ಲಿ ತಮ್ಮ ಬಿಂದಾಸ್‌ ಫ್ಯಾಷನ್‌, ಸ್ಟೈಲ್‌, ಡ್ರೀಮ್‌ ಶಾಪಿಂಗ್‌ ಡೆಸ್ಟಿನಿ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು.

ಈಗಿನ ಯಂಗ್‌ ಜನರೇಷನ್‌ ಅಭಿಮಾನಿಗಳನ್ನು ಸೆಳೆಯುತ್ತಿರುವ ನೀವು ಫಾಲೋ ಮಾಡುವ ಫ್ಯಾಷನ್‌ ಯಾವುದು?

ನಾನಂತೂ ಟ್ರೆಂಡ್‌ ಸೆಟ್ಟರ್‌. ಯಾವತ್ತೂ ಫಾಲೋವರ್‌ ಅಲ್ಲ ಎಂಬುದನ್ನು ಮೊದಲು ಹೇಳಲು ಬಯಸುತ್ತೇನೆ. ಇನ್ನು, ನನಗೆ ನನ್ನದೇ ಆದ ಫ್ಯಾಷನ್‌ ರೂಲ್ಸ್‌ಗಳಿವೆ. ನನ್ನ ಫ್ಯಾಷನ್‌ ನನ್ನ ಕಂಫರ್ಟಬಲ್‌ಗೆ ತಕ್ಕಂತೆ ನನ್ನ ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಫ್ಯಾಷನ್‌ ಮಾಡುತ್ತೇನೆ.

ನಿಮ್ಮದೇ ಆದ ಸಿಗ್ನೇಚರ್‌ ಸ್ಟೈಲ್‌ ಏನು?

ಸದ್ಯಕ್ಕೆ ನನ್ನದೇ ಆದ ಯಾವುದೇ ಸಿಗ್ನೇಚರ್‌ ಸ್ಟೈಲ್‌ಗೆ ಸ್ಟಿಕ್‌ ಆಗಿಲ್ಲ! ಯಾವುದು ನನಗಿಷ್ಟವೋ ಅಥವಾ ಆಯಾ ಸಂದರ್ಭಕ್ಕೆ ಹೊಂದುತ್ತದೆಯೊ ಅದನ್ನೇ ನಾನು ಪ್ರಿಫರ್‌ ಮಾಡುತ್ತೇನೆ.

Star Fashion Interview

ಇದನ್ನೂ ಓದಿ; Priyanka Upendra Interview: ಸ್ಯಾಂಡಲ್‌ವುಡ್‌ ನಟಿ ಪ್ರಿಯಾಂಕಾ ಉಪೇಂದ್ರ ಸಿಗ್ನೇಚರ್‌ ಸ್ಟೈಲ್‌ ಏನು?

ನಿಮಗೆ ಯಾವ ಬಗೆಯ ಸ್ಟೈಲ್‌ ಸ್ಟೇಟ್‌ಮೆಂಟ್ಸ್‌ ಇಷ್ಟ?

ಅದು ಯೂನಿಕ್‌ ಆಗಿರಬೇಕು. ಎಲ್ಲರೂ ಧರಿಸುವ ಯೂನಿಫಾರ್ಮ್ ನಂತೆ ಕಾಣಬಾರದು. ಹಾಗಾಗಿ ಪ್ರತಿಯೊಂದರಲ್ಲೂ ಡಿಫರೆಂಟ್‌ ಆಗಿರುವುದನ್ನು ಬಯಸುತ್ತೇನೆ.

ನಿಮ್ಮ ಡ್ರೀಮ್‌ ಶಾಪಿಂಗ್‌ ಡೆಸ್ಟಿನೇಷನ್‌ ಯಾವುದು?

ಫ್ಯಾಷನ್‌ ಹಬ್‌ ಪ್ಯಾರೀಸ್‌….!

ಸದಾ ನಿಮಗಿಷ್ಟವಾಗುವ ಅಟೈರ್‌ ಯಾವುದು? ಯಾಕೆ?

ನಿಮಗೆ ಅಚ್ಚರಿಯಾಗಬಹುದು. ನನಗೆ ಸೀರೆ ಇಷ್ಟ! ಇದು ಧರಿಸಿದಾಗ ಫೆಮಿನೈನ್‌ ಲುಕ್‌ ನೀಡುತ್ತದೆ ಹಾಗೂ ನೋಡುಗರಿಗೆಲ್ಲರಿಗೂ ಪ್ರಿಯವಾಗುತ್ತದೆ. ಹಾಗೆಂದು ಕೇವಲ ಸೀರೆ ಮಾತ್ರ ಎಂದಲ್ಲ! ಇತರೇ ಉಡುಪುಗಳು ಇಷ್ಟವಾಗುತ್ತವೆ. ಅದು ಆಯಾ ಸಂದರ್ಭಕ್ಕೆ ನಿರ್ಧರಿತವಾಗುತ್ತವೆ.

ಬ್ಯೂಟಿ ಅಥವಾ ಫ್ಯಾಷನ್‌ಗೆ ಸಾಥ್‌ ನೀಡುವ ನೀವು ಬಿಟ್ಟಿರಲಾಗದ ವಸ್ತು ಯಾವುದು?

ಲಿಪ್‌ಸ್ಟಿಕ್ಸ್‌. ನನ್ನ ಬಳಿ ಸಾಕಷ್ಟು ಕಲೆಕ್ಷನ್‌ ಇದೆ. ಮೇಕಪ್‌ನಲ್ಲಿ ಏನಿರದಿದ್ದರೂ ಸರಿಯೇ, ಲಿಪ್‌ಸ್ಟಿಕ್‌ ಬೇಕೇ ಬೇಕು.

ನೀವು ಪರ್ಫ್ಯೂಮ್‌ ಲವರ್‌ ಅಂತೆ?

ಹೌದು. ನನಗೆ ಪರ್ಫ್ಯೂಮ್‌ ಅಂದ್ರೆ ಸಖತ್‌ ಇಷ್ಟ. ಇದು ಯಾವುದೇ ವ್ಯಕ್ತಿಯ ಅಭಿರುಚಿ ಬಗ್ಗೆ ತಿಳಿಸುತ್ತದೆ ಎನ್ನಬಹುದು.

ನೀವು ಎಷ್ಟೇ ಫ್ಯಾಷನೆಬಲ್‌ ಆಗಿದ್ದರೂ ಸದಾ ಧರಿಸುವ ಆಕ್ಸೆಸರೀಸ್‌ ರುದ್ರಾಕ್ಷಿ, ಯಾಕೆ?

ಎಲ್ಲರಿಗೂ ಗೊತ್ತಿರುವಂತೆ ನಾನು ಸ್ಪಿರಿಚ್ಯುಯಲ್‌ ವ್ಯಕ್ತಿ. ರುದ್ರಾಕ್ಷಿ ಸರವು ಸದಾ ಸಕಾರಾತ್ಮಕ ವೈಬ್ಸ್‌ ಹೊಂದಿರುತ್ತದೆ. ನನ್ನನ್ನು ಉತ್ತಮ ಮಾರ್ಗದಲ್ಲಿ ನಡೆಸುತ್ತದೆ. ಫ್ಯಾಷನ್‌ಗಾಗಿ ನಾನು ಇದನ್ನು ಧರಿಸಿಲ್ಲ! ನನ್ನ ದೈವದ ನಂಬಿಕೆಯಿಂದ ಇಷ್ಟ ಪಟ್ಟು ಧರಿಸುತ್ತೇನೆ.

ಚಿತ್ರ ಕೃಪೆ: ಗಿರೀಶ್‌ ಕುಮಾರ್‌ ಎಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
1 Comment

1 Comment

  1. Ashwini

    14 March 2023, 8:34 PM at 8:34 pm

    She has been the Fav. Saanya❤❤❤ Keep growing… ❤❤

Leave a Reply

Your email address will not be published. Required fields are marked *

ಫ್ಯಾಷನ್

Summer Holiday Fashion: ಸೀಸನ್‌ ಟ್ರೆಂಡ್‌ನ ಟಾಪ್‌ ಲಿಸ್ಟ್‌ನಲ್ಲಿ ಸಮ್ಮರ್‌ ಹಾಲಿಡೇ ಫ್ಯಾಷನ್‌

ಸಮ್ಮರ್‌ ಸೀಸನ್‌ನಲ್ಲಿ (Summer Holiday Fashion) ಟ್ರಾವೆಲ್‌ ಮಾಡುವವರು ಹೆಚ್ಚು. ಈ ಹಾಲಿಡೇ ಫ್ಯಾಷನ್‌ ನೋಡಲು ಫ್ಯಾಷೆನೆಬಲ್‌ ಮಾತ್ರವಲ್ಲ, ಆರಾಮ ಎಂದೆನಿಸಬೇಕು. ಈ ಸೀಸನ್‌ಗೆ ತಕ್ಕಂತೆ ಯಾವ್ಯಾವ ಬಗೆಯ ಹಾಲಿಡೇ ಫ್ಯಾಷನ್‌ವೇರ್‌ಗಳು ಟ್ರೆಂಡಿಯಾಗಿವೆ ಎಂಬುದರ ಬಗ್ಗೆ ಫ್ಯಾಷನಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Summer Holiday Fashion
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್‌ ಸೀಸನ್‌ನ ಹಾಲಿಡೇಗೆ (Summer Holiday Fashion) ಮ್ಯಾಚ್‌ ಆಗುವಂತಹ ನಾನಾ ಬಗೆಯ ಹಾಲಿಡೇ ಫ್ಯಾಷನ್‌ವೇರ್‌ಗಳು ಮಾರುಕಟ್ಟೆಗೆ ಈಗಾಗಲೇ ಲಗ್ಗೆ ಇಟ್ಟಿದ್ದು, ಟ್ರಾವೆಲ್‌ ಪ್ರಿಯರನ್ನು ಸೆಳೆದಿವೆ. ಯೂನಿಸೆಕ್ಸ್‌ ಡಿಸೈನ್‌ನ ಶಾರ್ಟ್ಸ್, ಪ್ಯಾಂಟ್ಸ್, ಟೀ ಶರ್ಟ್ಸ್, ಹುಡುಗಿಯರ ಸ್ಲಿಟ್‌ ಸ್ಕರ್ಟ್ಸ್, ಗಿಡ್ಡನಾದ ಪಲ್ಹಾಜೊ ಪ್ಯಾಂಟ್ಸ್‌, ಸ್ಲಿವ್‌ಲೆಸ್‌ ಟಾಪ್‌-ಕುರ್ತಾ , ಕ್ರಾಪ್‌ ಟಾಪ್ಸ್, ಹುಡಗ-ಹುಡುಗಿಯರು ಧರಿಸಬಹುದಾದ ಗಿಂಗ್ನಂ ಸ್ಟೈಲ್‌ನ ಬರ್ಮುಡಾ, ಸ್ಲಿವ್‌ಲೆಸ್‌ ಬನಿಯನ್‌ ಶೈಲಿಯ ಟೀ ಶರ್ಟ್ಸ್, ಗೋವಾ ಸ್ಟೈಲ್‌ ಶಾರ್ಟ್ಸ್‌ಗಳು ಬಿಡುಗಡೆಯಾಗಿ, ಬೇಡಿಕೆ ಹೆಚ್ಚಿಸಿಕೊಂಡಿವೆ. ಎಥ್ನಿಕ್‌ ಸ್ಟೈಲ್‌ನ ಉಡುಪುಗಳಿಗಿಂತ ಕ್ಯಾಶುವಲ್‌ ಔಟ್‌ಫಿಟ್‌ಗಳಿಗೆ ಮಾನ್ಯತೆ ಹೆಚ್ಚಾಗಿದೆ.

Model Wearing Maxi Dress

ಲಾಂಗ್‌ ಹಾಲಿಡೇ ಫ್ಯಾಷನ್‌ ವೇರ್ಸ್

ಇನ್ನು ಲಾಂಗ್‌ ಹಾಲಿಡೇಸ್‌ ಟೂರ್‌ಗೆ ಹೋಗುವುದಾದಲ್ಲಿಆದಷ್ಟೂ ಲೈಟ್‌ವೇಟ್‌ ಉಡುಪುಗಳನ್ನು ಆಯ್ಕೆ ಮಾಡಿ. ಟೂರ್‌ ಸ್ಪಾಟ್‌ಗಳಲ್ಲಿ ಸಮ್ಮರ್‌ ಸೀಸನ್‌ಗೆ ಹೊಂದುವಂತಹ ಉಡುಪುಗಳು ದೊರಕುತ್ತವೆ. ಅಲ್ಲಿಯೂ ಕೊಳ್ಳಬಹುದು. ಹುಡುಗಿಯರು ಹೆಚ್ಚು ಪ್ರಿಪೇರ್‌ ಆಗಬೇಕಾಗುತ್ತದೆ. ಆದರೆ, ಹುಡುಗರ ವಿಷಯದಲ್ಲಿ ಹಾಗಿಲ್ಲ, ಹೋದೆಡೆಯೇ ಒಂದೆರೆಡು ಟೀ ಶರ್ಟ್ಸ್ ಹಾಗೂ ಬರ್ಮುಡಾ ಕೊಂಡರಾಯಿತು, ಹೆಚ್ಚು ತೆಲೆ ಬಿಸಿಯಿಲ್ಲ ಎನ್ನುತ್ತಾರೆ ಫ್ಯಾಷನಿಸ್ಟಾ ರಾಜ್‌.

Picnic Holiday Wears

ಪಿಕ್‌ನಿಕ್‌ ಹಾಲಿಡೇ ವೇರ್ಸ್

ಇದೀಗ ಟ್ರೆಂಡಿಯಾಗಿರುವ ಬಣ್ಣ ಬಣ್ಣದ ರೆಸಾರ್ಟ್‌ವೇರ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಹುಡುಗಿಯರು ಉದ್ದುದ್ದದ ಲಾಂಗ್‌ ಸ್ಕರ್ಟ್ಸ್ ಆವಾಯ್ಡ್‌ ಮಾಡಿ. ಫುಲ್‌ ಸ್ಲೀವ್‌ ಬೇಡ. ಲೇಯರ್‌ ಲುಕ್‌ಗೆ ಬೈ ಹೇಳಿ. ಬೇಸಿಗೆಯಲ್ಲಿ ಬ್ರೈಟ್‌ ಹಾಗೂ ಪಾಸ್ಟೆಲ್‌ ಕಲರ್ಸ್‌ ಆಯ್ಕೆ ಮಾಡಿ. ವಾಟರ್‌ ಫಾಲ್ ಅಥವಾ ಅಮ್ಯೂಸ್‌ಮೆಂಟ್‌ ಸ್ಪಾಟ್‌ಗಳಿಗೆ ಆದಷ್ಟೂ ಮೈಗೆ ಅಂಟದಂತಹ ವಾಟರ್‌ ಪ್ರೂಫ್‌ ಶಾಟ್ರ್ಸ್, ಟೈಟ್ಸ್ ಹಾಗೂ ಟೀ ಶಟ್ರ್ಸ್ ಆಯ್ಕೆ ಮಾಡಿ. ಕೇಪ್ರೀಸ್‌, ಕ್ಯೂಲೆಟ್ಸ್‌ ಕೂಡ ಬೆಸ್ಟ್‌.

 colors dress

ಫ್ರೆಶ್‌ ಕಲರ್ಸ್ ಡ್ರೆಸ್‌ಗೆ ಆದ್ಯತೆ ನೀಡಿ

ಹಾಲಿಡೇಗೆ ಹೋಗುವಾಗ ಆದಷ್ಟೂ ಮನಸ್ಸಿಗೆ ಉಲ್ಲಾಸ ನೀಡುವಂತಹ ಕಲರ್‌ ಉಡುಪುಗಳ ಆಯ್ಕೆ ಮಾಡಿ. ಯಾವುದೇ ಕಾರಣಕ್ಕೂ ಬ್ಲಾಕ್‌, ಕಾಫಿ ಕಲರ್‌, ಡೀಪ್‌ ಬ್ಲ್ಯೂ ವರ್ಣದ ಉಡುಪುಗಳು ಬೇಡ. ಇವು ಬಿಸಿಲ ಶಾಖವನ್ನು ಹೀರುತ್ತವೆ. ನಿತ್ರಾಣಗೊಳಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಫ್ಲೋರಲ್‌ ಹಾಗೂ ಗಿಂಗ್ನಂ ಔಟ್‌ಫಿಟ್‌ಗಳು ಫ್ರೆಶ್‌ ಫೀಲಿಂಗ್‌ ನೀಡುತ್ತವೆ.

Comfortable footwear

ಕಂಫರ್ಟಬಲ್‌ ಫುಟ್‌ವೇರ್‌ ಆಯ್ಕೆ

ಹಿಲ್‌ ಸ್ಟೇಷನ್‌ ಅಥವಾ ಹೆಚ್ಚು ನಡೆಯುವಂತಹ ಜಾಗಗಳಿಗೆ ಹೋಗುತ್ತಿರುವುರಾದರೇ ಶೋ ಪ್ರಿಫರ್‌ ಮಾಡಿ. ಹೈ ಹೀಲ್ಸ್ ಆವಾಯ್ಡ್‌ ಮಾಡಿ. ಆದಷ್ಟೂ ಫ್ಲಿಪ್‌ ಫ್ಲಾಪ್‌ನಂತಹ ಆರಾಮ ಎನಿಸುವ ಹೊಸ ಬಗೆಯ ಫುಟ್‌ವೇರ್‌ಗೆ ಸೈ ಎನ್ನಿ.

ಇದನ್ನೂ ಓದಿ: Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

ಹಾಲಿಡೇ ಎಂಜಾಯ್‌ ಮಾಡಲು ಹೀಗೆ ಮಾಡಿ

  • ಔಟ್‌ಫಿಟ್‌ಗೆ ಹೆಚ್ಚು ಆಕ್ಸೆಸರೀಸ್‌ ಧರಿಸುವುದು ಬೇಡ.
  • ಹಾಲಿ ಡೇ ಔಟ್‌ಫಿಟ್‌ ಸೀಸನ್‌ಗೆ ತಕ್ಕಂತಿರಲಿ.
  • ಬೆಲೆಬಾಳುವ ಜ್ಯುವೆಲರಿ ಧರಿಸಬೇಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

ಈ ಬೇಸಿಗೆಯಲ್ಲಿ ಟೊರ್ನ್‌ ಜೀನ್ಸ್‌ ಪ್ಯಾಂಟ್‌ (Torn Jeans Styling Tips) ಖರೀದಿಸುವವರು ಹಾಗೂ ಧರಿಸುವವರು ಮೊದಲಿಗಿಂತ ಹೆಚ್ಚಾಗಿದ್ದಾರೆ. ಇವನ್ನು ಧರಿಸುವವರು ಒಂದಿಷ್ಟು ಅಂಶಗಳನ್ನು ಮರೆಯದೇ ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವು ಯಾವುವು? ಇಲ್ಲಿದೆ ವಿವರ.

VISTARANEWS.COM


on

Torn Jeans Styling Tips
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟೊರ್ನ್‌ ಜೀನ್ಸ್‌ ಧರಿಸುವ ಹುಡುಗಿಯರು (Torn Jeans Styling Tips) ಕೇವಲ ಫ್ಯಾಷನ್‌ಗೆ ಮಾತ್ರ ಬೆಲೆ ನೀಡದೇ, ಇವನ್ನು ಧರಿಸುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸ್ಟೈಲಿಂಗ್‌ ಮಾಡುವುದು ಉತ್ತಮ ಎನ್ನುತ್ತಾರೆ. ಇಲ್ಲವಾದಲ್ಲಿ, ನೋಡುಗರ ಕೆಂಗಣ್ಣಿಗೆ ಗುರಿಯಾಗಬಹುದು ಅಥವಾ ಧರಿಸುವವರಿಗೆ ಮುಜುಗರವಾಗಬಹುದು. ಹಾಗಾಗಿ ಈ ಪ್ಯಾಂಟ್‌ ಪ್ರಿಯರು ಆದಷ್ಟೂ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಅಂದಹಾಗೆ, ಟೊರ್ನ್‌ ಜೀನ್ಸ್‌ ಫ್ಯಾಷನ್‌ ನಿನ್ನೆ ಮೊನ್ನೆಯದಲ್ಲ! ಸುಮಾರು ವರ್ಷಗಳಿಂದಲೂ ಇದು ನಾನಾ ಅವತಾರಗಳಲ್ಲಿ ಮಾಡರ್ನ್‌ ಹುಡುಗಿಯರನ್ನು ಆವರಿಸಿಕೊಂಡಿದೆ. ಕೆಲವು ಚಿಂದಿ ಉಡುಗೆಯಂತೆ ಕಂಡರೇ, ಇನ್ನು ಕೆಲವು ಫ್ಯಾಷೆನಬಲ್‌ ಪ್ಯಾಂಟ್‌ನಂತೆ ಕಾಣಬಹುದು. ಇದು ಆಯ್ಕೆ ಮಾಡುವವರ ಹಾಗೂ ಧರಿಸುವವರ ಮೇಲೆ ನಿರ್ಧರಿತವಾಗಿರುತ್ತದೆ. ಇದಕ್ಕೆ ಪೂರಕ ಎಂಬಂತೆ, ಇಂದಿನ ಜೆನ್‌ ಜಿ ಹುಡುಗಿಯರ ಫೇವರೇಟ್‌ ವಾರ್ಡ್ರೋಬ್‌ ಲಿಸ್ಟ್‌ನಲ್ಲೂ ಇವು ಸ್ಥಾನ ಪಡೆದುಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

ಟೊರ್ನ್‌ ಪ್ಯಾಂಟ್‌ ಆಯ್ಕೆ ಹೀಗಿರಲಿ

ಟೊರ್ನ್‌ ಪ್ಯಾಂಟ್‌ ಆಯ್ಕೆ ಮಾಡುವಾಗ ಮೊದಲು ಆ ಪ್ಯಾಂಟ್‌ನ ವಿನ್ಯಾಸ ಅದರಲ್ಲೂ, ಯಾವ ಮಟ್ಟಿಗೆ ಟೊರ್ನ್‌ ಆಗಿದೆ ಎಂಬುದನ್ನು ಮೊದಲು ಗಮನಿಸಬೇಕು. ಯಾವ ಭಾಗದಲ್ಲಿ ಈ ಟೊರ್ನ್‌ ವಿನ್ಯಾಸವಿದೆ. ಕಾಲಿನ ಭಾಗದಲ್ಲಾದರೇ ಓಕೆ. ಅದೇ ತೊಡೆ ಅಥವಾ ಹಿಂಭಾಗದಲ್ಲಿ ಇದ್ದರೇ ಖರೀಸಬೇಡಿ. ಇದ್ದರೂ ಧರಿಸುವುದನ್ನು ಆವಾಯ್ಡ್‌ ಮಾಡಿ. ಇದು ನಿಮ್ಮನ್ನು ಇತರರ ಮುಂದೆ ಮುಜುಗರಕ್ಕೆ ಈಡುಮಾಡಬಹುದು.

Torn Jeans Styling Tips

ಸಂದರ್ಭಕ್ಕೆ ತಕ್ಕಂತೆ ಧರಿಸಿ

ಯಾವುದೇ ಟ್ರೆಡಿಷನಲ್‌ ಕಾರ್ಯಕ್ರಮಕ್ಕೆ ಇವನ್ನು ಧರಿಸಬೇಡಿ. ಅದರಲ್ಲೂ ಶುಭ ಸಮಾರಂಭಗಳಲ್ಲಿ ಈ ಪ್ಯಾಂಟ್‌ನಲ್ಲಿ ಕಾಣಿಸಿಕೊಳ್ಳಲೇಬೇಡಿ. ಹಿರಿಯರ ಸಮ್ಮುಖದಲ್ಲಿ ನಡೆಯುವ ಪ್ರೋಗ್ರಾಂಗಳಲ್ಲೂ ಕೂಡ ಇವನ್ನು ಧರಿಸಬೇಡಿ. ಅವರ ಕಂಗೆಣ್ಣಿಗೆ ನೀವು ಗುರಿಯಾಗಬೇಕಾದಿತು.

Torn Jeans Styling Tips

ಚಿಂದಿ ಚಿಂದಿಯಾಗಿರುವ ಟೊರ್ನ್‌ ಪ್ಯಾಂಟ್‌ ಬೇಡ

ಫ್ಯಾಷನ್‌ನಲ್ಲಿದೆ ಎಂದು ಚಿಂದಿ ಚಿಂದಿಯಾಗಿರುವ ಟೊರ್ನ್‌ ಪ್ಯಾಂಟ್‌ ಆಯ್ಕೆ ಬೇಡ. ಇವು ನಿಮ್ಮನ್ನು ಬಿಕ್ಷುಕರಂತೆ ಬಿಂಬಿಸಬಹುದು. ನೀವು ಹುಡುಗ ಅಥವಾ ಹುಡುಗಿಯಾಗಿರಬಹುದು. ಅದು ಯಾರೇ ಆಗಿರಲಿ, ನಿಮ್ಮ ಘನತೆಗೆ ತಕ್ಕುದಾದುದಲ್ಲ ಎಂಬುದು ನೆನಪಿರಲಿ. ಕಚೇರಿಗಂತೂ ಧರಿಸುವುದೇ ಬೇಡ. ಆಫೀಸ್‌ನ ಮೀಟಿಂಗ್‌ಗಳಲ್ಲೂ ಇವನ್ನು ಧರಿಸಬೇಡಿ.

Torn Jeans Styling Tips

ಔಟಿಂಗ್‌ -ವೀಕೆಂಡ್‌ಗೆ ಮಾತ್ರ ಸೀಮಿತವಾಗಿರಲಿ

ಸ್ನೇಹಿತರೊಂದಿಗೆ ಅಥವಾ ಔಟಿಂಗ್‌-ವೀಕೆಂಡ್‌ ಹೋಗುತ್ತಿದ್ದಲ್ಲಿ ಆಗ ಮಾತ್ರ ಟೊರ್ನ್‌ ಪ್ಯಾಂಟ್‌ ಧರಿಸಿ. ಇದು ಹಾಲಿಡೇ ಲುಕ್‌ಗೂ ಮ್ಯಾಚ್‌ ಆಗುತ್ತದೆ. ಫ್ಯಾಷೆನಬಲ್‌ ಆಗಿ ಕಾಣಿಸುತ್ತದೆ.

ಇದನ್ನೂ ಓದಿ: Wedding Season Hair Fashion: ವೆಡ್ಡಿಂಗ್‌ ಸೀಸನ್‌ನಲ್ಲಿ ಎಂಟ್ರಿ ನೀಡಿದ ಆರ್ಟಿಫಿಶಿಯಲ್‌ ಹೇರ್‌ ಎಕ್ಸ್‌ಟೆನ್ಷನ್ಸ್‌!

ಟೊರ್ನ್‌ ಪ್ಯಾಂಟ್‌ ಲೆಂಥ್‌

ಕೇಪ್ರಿಸ್‌ನಂತಿರುವ, ಆಂಕೆಲ್‌ ಲೆಂಥ್‌ ಅಥವಾ ಶಾರ್ಟ್ಸ್‌ ಟೊರ್ನ್‌ ಲೆಂಥ್‌ನವು ಇಂದು ಟ್ರೆಂಡ್‌ನಲ್ಲಿವೆ. ಸೀಸನ್‌ಗೆ ಹೊಂದುವಂತದ್ದನ್ನು ಸೆಲೆಕ್ಟ್‌ ಮಾಡಬಹುದು. ಇವಕ್ಕೆ ಸೂಕ್ತ ಟಾಪ್‌ಗಳನ್ನು ಮ್ಯಾಚ್‌ ಮಾಡಬಹುದು. ಒಟ್ಟಿನಲ್ಲಿ, ನಿಮ್ಮ ಪಸನಾಲಿಟಿಗೆ ಹೊಂದುವಂತದ್ದನ್ನು ಮಾತ್ರ ಧರಿಸಿ, ಕಾಣಿಸಿಕೊಳ್ಳಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Wedding Season Hair Fashion: ವೆಡ್ಡಿಂಗ್‌ ಸೀಸನ್‌ನಲ್ಲಿ ಎಂಟ್ರಿ ನೀಡಿದ ಆರ್ಟಿಫಿಶಿಯಲ್‌ ಹೇರ್‌ ಎಕ್ಸ್‌ಟೆನ್ಷನ್ಸ್‌!

ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ ನಾನಾ ಬಗೆಯ ಆರ್ಟಿಫೀಶಿಯಲ್‌ ಹೇರ್‌ (Wedding Season Hair Fashion) ಎಕ್ಸ್‌ಟೆನ್ಷನ್‌ಗಳು ಹೇರ್‌ ಸ್ಟೈಲಿಂಗ್‌ಗೆ ಎಂಟ್ರಿ ನೀಡಿವೆ. ಕೂದಲ ವಿನ್ಯಾಸಕ್ಕೆ ಸಾಥ್‌ ನೀಡುವ ಇವು ಲೆಕ್ಕವಿಲ್ಲದಷ್ಟು ಬಗೆಯಲ್ಲಿ ಆಗಮಿಸಿವೆ. ಅವು ಯಾವ್ಯುವು? ಹೇಗೆಲ್ಲಾ ಸಿಂಗರಿಸಿಕೊಳ್ಳಲು ಸಹಕಾರಿಯಾಗಿವೆ ಎಂಬುದರ ಬಗ್ಗೆ ಹೇರ್‌ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Wedding Season Hair Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ, ಶೆಟ್ಟಿ, ಬೆಂಗಳೂರು
ಈ ವೆಡ್ಡಿಂಗ್‌ ಸೀಸನ್‌ನಲ್ಲಿ ನಾನಾ ಬಗೆಯ ಆರ್ಟಿಫಿಶಿಯಲ್‌ ಹೇರ್‌ ಎಕ್ಸ್‌ಟೆನ್ಷನ್‌ಗಳು (Wedding Season Hair Fashion) ಗ್ರ್ಯಾಂಡ್‌ ಹೇರ್‌ ಸ್ಟೈಲಿಂಗ್‌ಗೆ ಎಂಟ್ರಿ ನೀಡಿವೆ. ಬ್ರೈಡಲ್‌ ಹೇರ್‌ಸ್ಟೈಲ್‌ಗೆ ಮಾತ್ರವಲ್ಲ, ಎಲ್ಲಾ ವರ್ಗದ ಮಹಿಳೆಯರ ಬಗೆಬಗೆಯ ಕೂದಲ ವಿನ್ಯಾಸಕ್ಕೆ ಸಾಥ್‌ ನೀಡುವ ಇವು, ಲೆಕ್ಕವಿಲ್ಲದಷ್ಟು ಬಗೆಯಲ್ಲಿ ಆಗಮಿಸಿವೆ. ವೆಡ್ಡಿಂಗ್‌ ಸೀಸನ್‌ನ ಹೇರ್‌ಸ್ಟೈಲ್‌ ಟ್ರೆಂಡ್‌ನೊಳಗೆ ಸೇರಿಕೊಂಡಿವೆ. ಇದರೊಂದಿಗೆ ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್‌ಗೆ ನಾಂದಿ ಹಾಡಿವೆ. ಕ್ಯಾಶುವಲ್‌ ಹೇರ್‌ಸ್ಟೈಲ್‌ಗಳಿಗಿಂತ ಎಥ್ನಿಕ್‌ ಲುಕ್‌ ನೀಡುವ ಕೂದಲ ವಿನ್ಯಾಸದೊಳಗೆ ಸೇರಿಕೊಂಡಿವೆ.

Wedding Season Hair Fashion

ಎಥ್ನಿಕ್‌ ಹೇರ್‌ಸ್ಟೈಲ್‌ಗೆ ಸಾಥ್‌

“ಕೇವಲ ವೆಡ್ಡಿಂಗ್‌ ಸಮಾರಂಭಗಳಲ್ಲಿ ಮಾತ್ರವಲ್ಲ, ಯಾವುದೇ ಎಥ್ನಿಕ್‌ ಲುಕ್‌ ನೀಡುವಂತಹ ಶುಭ-ಸಮಾರಂಭಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಈ ಹೇರ್‌ ಎಕ್ಸ್‌ಟೆನ್ಷನ್‌ಗಳು ತಮ್ಮ ಜಾದೂ ಮೂಡಿಸಿವೆ. ನೋಡಲು ಸೆಲೆಬ್ರೆಟಿ ಲುಕ್‌ ನೀಡುವ ಇವು ಎಂತಹದ್ದೇ ಕೂದಲಿಗೂ ಮ್ಯಾಚ್‌ ಆಗುತ್ತವೆ. ಅದರಲ್ಲೂ ಟ್ರೆಡಿಷನಲ್‌ ಲುಕ್‌ ನೀಡುವಂತವು ಹೆಚ್ಚು ಬೇಡಿಕೆ ಹೆಚ್ಚಿಸಿಕೊಂಡಿವೆ” ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಇವು ಕೃತಕವಾದರೂ ನೈಜವಾಗಿ ಕಾಣುವಂತಹ ಮೆಟಿರಿಯಲ್‌ನಲ್ಲಿ ಬಂದಿವೆ ಎನ್ನುತ್ತಾರೆ.

ಟ್ರೆಂಡಿಯಾಗಿರುವ ಹೇರ್‌ ಎಕ್ಸ್‌ ಟೆನ್ಷನ್ಸ್‌

ಶಾರ್ಟ್‌ ಕರ್ಲಿ, ಲಾಂಗ್‌ ಕರ್ಲಿ, ಸ್ಟ್ರೇಟ್‌, ಮೆಸ್ಸಿ ರಿಂಕಲ್ಸ್‌ ಹೇರ್‌, ರಿಂಗ್ಲೇಟ್ಸ್‌, ಬ್ರೈಡಲ್‌ ಲುಕ್ಸ್‌ ಸ್ಟೈಲ್‌ನವು, ನಾನಾ ಶೈಲಿಯ ಹೇರ್‌ ಬನ್‌ ಪ್ಲಸ್‌ ಎಕ್ಸ್‌ಟೆನ್ಷನ್‌, ಹಾಫ್‌ ಆಂಡ್‌ ಹಾಫ್‌ ಮೆಸ್ಸಿ ಕರ್ಲಿ ಡಿಸೈನ್‌ನವು. ಸಿಂಪಲ್‌ ಹಾಗೂ ಡಿಸೈನ್‌ ಹೇರ್‌ ಎಕ್ಸ್‌ಟೆನ್ಷನ್‌ಗಳು ಇಂದು ಫ್ಯಾನ್ಸಿ ಸ್ಟೋರ್‌ಗಳಲ್ಲಿ ಲಭ್ಯ. ಅಷ್ಟೇಕೆ! ಆನ್‌ಲೈನ್‌ ಫ್ಯಾನ್ಸಿ ಸ್ಟೋರ್‌ಗಳಲ್ಲೂ ಬಗೆಬಗೆಯಾಗಿರುವಂತವನ್ನು ಕಾಣಬಹುದು. ಇನ್ನು, ಬೆಲೆಯ ವಿಷಯಕ್ಕೆ ಬಂದಲ್ಲಿ, ಆಯಾ ಡಿಸೈನ್‌ಗೊಂಡಿರುವ ಹೇರ್‌ ಎಕ್ಸ್‌ಟೆನ್ಷನ್‌ ವಿನ್ಯಾಸಕ್ಕೆ ತಕ್ಕಂತೆ ಬೆಲೆ ನಿಗದಿಯಾಗಿರುತ್ತದೆ. ಒಂದೊಂದಕ್ಕೂ ಒಂದೊಂದು ಬೆಲೆ. ಉದಾಹರಣೆಗೆ., ಸಿಂಪಲ್‌ ರಿಂಕಲ್‌ ಲಾಂಗ್‌ ಹೇರ್‌ ಎಕ್ಸ್‌ಟೆನ್ಷನ್‌ಗೆ ಸರಿ ಸುಮಾರು 700 ರಿಂದ 800 ರೂ.ಗಳವರೆಗೂ ಬೆಲೆ ಇದೆ. ಹಾಫ್‌ ಆಂಡ್‌ ಹಾಫ್‌ ಹೇರ್‌ ಬನ್‌ ಫ್ರಿ ಕೂದಲಿನವಕ್ಕೆ ಡಿಸೈನ್‌ಗೆ ತಕ್ಕಂತೆ ಬೆಲೆ. ಇನ್ನು ಕ್ರಿಸ್ಟಲ್‌ ಹಾಗೂ ಪರ್ಲ್‌ ಹಾಕಿ ಡಿಸೈನ್‌ ಮಾಡಿದವಕ್ಕೆ ಹೆಚ್ಚು ಬೆಲೆ. ಕಡಿಮೆ ಎಂದರೂ 200 ರೂ. ಗಳಿಂದ ಆರಂಭವಾಗುತ್ತವೆ. ಹೆಚ್ಚೆಂದರೇ ಹತ್ತು ಸಾವಿರ ರೂ.ಗಳವರೆಗೂ ಇದೆ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ಗಳು.

Wedding Season Hair Fashion

ಯಾರಿಗೆ ಯಾವುದು?

ಶಾರ್ಟ್‌ ಹೇರ್‌ಸ್ಟೈಲ್‌ನವರಿಗೆ ಆದಷ್ಟೂ ಲೈಟ್‌ವೈಟ್‌ ಇರುವಂತವನ್ನು ಆಯ್ಕೆ ಮಾಡುವುದು ಉತ್ತಮ. ಯಾಕೆಂದರೇ, ಇವು ಭಾರವಾಗಿದ್ದಲ್ಲಿ, ಕಳಚಿ ಬೀಳಬಹುದು ಹಾಗೂ ತಲೆನೋವು ಬರಬಹುದು. ಇನ್ನು ಉದ್ದ ಕೂದಲಿನವರು ಆದಷ್ಟೂ ಮೆಸ್ಸಿ ಹೇರ್‌ಸ್ಟೈಲ್‌ನವನ್ನು ಆಯ್ಕೆ ಮಾಡಬಹುದು. ಇವು ಕೂದಲನ್ನು ಹರಡಿದಂತೆ ಹಾಗೂ ದಪ್ಪಗಿರುವಂತೆ ಬಿಂಬಿಸುತ್ತವೆ. ಇನ್ನು ಮೀಡಿಯಂ ಸೈಝ್‌ ಕೂದಲು ಹೊಂದಿರುವವರು ಅವರ ಕೂದಲಿನ ವಾಲ್ಯೂಮ್‌ಗೆ ತಕ್ಕಂತೆ ಆಯ್ಕೆ ಮಾಡಬೇಕು.

Wedding Season Hair Fashion

ಮದುವೆ ಸಮಾರಂಭಗಳಿಗಾದಲ್ಲಿ ಆಯ್ಕೆ ಹೀಗಿರಲಿ

  • ಕ್ರಿಸ್ಟಲ್‌ ಹಾಗೂ ಪರ್ಲ್‌ ಡಿಸೈನ್‌ನವನ್ನು ಸೆಲೆಕ್ಟ್‌ ಮಾಡಿ.
  • ಸುರುಳಿ ಸುತ್ತಿದಂತಿರುವವು ಇದೀಗ ಟ್ರೆಂಡ್‌ನಲ್ಲಿವೆ.
  • ಮಿಕ್ಸ್‌ ಮ್ಯಾಚ್‌ ಇರುವಂತಹ ಬ್ರೈಡಲ್‌ ಲುಕ್‌ ನೀಡುವ ಗ್ರ್ಯಾಂಡ್‌ ವಿನ್ಯಾಸದವನ್ನು ಧರಿಸಿ.
  • ಮೇಕಪ್‌ ಮುಗಿದ ನಂತರ ಹೇರ್‌ಸ್ಟೈಲ್‌ಗೆ ಸಿಕ್ಕಿಸಿ.
  • ನಿಮ್ಮ ಹೇರ್‌ ಕಲರ್‌ಗೆ ಮ್ಯಾಚ್‌ ಆಗುವಂತ ಹೇರ್‌ ಎಕ್ಸ್‌ಟೆನ್ಷನ್‌ ಸೆಲೆಕ್ಟ್‌ ಮಾಡಿ.

(ಲೇಖಕಿ ಪತ್ರಕರ್ತೆ)

ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ಹುಡುಗಿಯರನ್ನು ಸವಾರಿ ಮಾಡುತ್ತಿರುವ 5 ಶೈಲಿಯ ಗ್ಲಾಮರಸ್‌ ಟಾಪ್‌ಗಳಿವು

Continue Reading

ಫ್ಯಾಷನ್

Summer Fashion: ಬೇಸಿಗೆಯಲ್ಲಿ ಹುಡುಗಿಯರನ್ನು ಸವಾರಿ ಮಾಡುತ್ತಿರುವ 5 ಶೈಲಿಯ ಗ್ಲಾಮರಸ್‌ ಟಾಪ್‌ಗಳಿವು

ಈ ಬೇಸಿಗೆಯಲ್ಲಿ ಹುಡುಗಿಯರಿಗೆ ಗ್ಲಾಮರಸ್‌ ಲುಕ್‌ ನೀಡುವ 5 ಬಗೆಯ ಫ್ಯಾಷೆನಬಲ್‌ ಟಾಪ್‌ಗಳು ಟ್ರೆಂಡಿಯಾಗಿವೆ. ಅವು ಯಾವುವು? ಹೇಗೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಇಲ್ಲಿದೆ (Summer Fashion) ವಿವರ.

VISTARANEWS.COM


on

Summer Fashion
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬೇಸಿಗೆಯಲ್ಲಿ ಹುಡುಗಿಯರಿಗೆ (Summer Fashion) ಗ್ಲಾಮರಸ್‌ ಲುಕ್‌ ನೀಡುವ 5 ಬಗೆಯ ಫ್ಯಾಷೆನಬಲ್‌ ಟಾಪ್‌ಗಳು ಟ್ರೆಂಡಿಯಾಗಿವೆ. ಕಾಲೇಜು ಹುಡುಗಿಯರು ಮಾತ್ರವಲ್ಲ, ವೀಕೆಂಡ್‌ನಲ್ಲಿ ಉದ್ಯೋಗಸ್ಥ ಯುವತಿಯರು ಕೂಡ ಧರಿಸತೊಡಗಿದ್ದಾರೆ. ಇವು ನೋಡಲು ಗ್ಲಾಮರಸ್‌ ಆಗಿ ಕಾಣಿಸುವುದರೊಂದಿಗೆ ಇವು ಕಂಫರ್ಟಬಲ್‌ ಲುಕ್‌ ನೀಡುತ್ತವೆ ಎಂಬ ಕಾರಣದಿಂದಾಗಿ ಇವುಗಳ ಬೇಡಿಕೆ ಮೊದಲಿಗಿಂತ ಹೆಚ್ಚಾಗಿದೆ.

Summer Fashion

ಆನ್‌ಲೈನ್‌ನಲ್ಲಿ ಹೆಚ್ಚಿದ ಡಿಮ್ಯಾಂಡ್‌

ಶಾಪಿಂಗ್‌ ಸೆಂಟರ್‌ ಹಾಗೂ ಮಾಲ್‌ಗಳ ಶಾಪ್‌ಗಳಿಗಿಂತ ಆನ್‌ಲೈನ್‌ನಲ್ಲಿ ಸಮ್ಮರ್‌ ಟಾಪ್‌ಗಳ ಡಿಮ್ಯಾಂಡ್‌ ಹೆಚ್ಚಾಗಿದೆಯಂತೆ. ಹಾಗೆಂದು ಅಪರೆಲ್‌ ಸಂಸ್ಥೆಯ ಸಮೀಕ್ಷೆ ಬಹಿರಂಗಪಡಿಸಿದೆ. ಇದಕ್ಕೆ ಕಾರಣ, ಬೇಕಾದ ರೀತಿಯ ವಿನ್ಯಾಸ ಹಾಗೂ ಡಿಸೈನ್‌ಗಳು ಅತಿ ಸುಲಭವಾಗಿ ದೊರೆಯುತ್ತಿರುವುದು ಹಾಗೂ ಕಡಿಮೆ ಬೆಲೆಗೆ ಸಿಗುತ್ತಿರುವುದು. ಅದರಲ್ಲೂ ಬಾಲಿವುಡ್‌ ಸೆಲೆಬ್ರೆಟಿಗಳು ಧರಿಸುವಂತಹ ಡಿಸೈನ್‌ನವು ಅತಿ ಹೆಚ್ಚು ದೊರಕುತ್ತಿವೆ. ಇನ್ನು, ಇವುಗಳಿಗೆ ಬೇಡಿಕೆಯು ಹೆಚ್ಚಿದೆ ಎನ್ನುತ್ತಾರೆ ಫ್ಯಾಷನ್‌ ಸಮೀಕ್ಷೆ. ಇದರೊಂದಿಗೆ ಎಲ್ಲಾ ಸೈಝ್‌ನವರಿಗೂ ಆನ್‌ಲೈನ್‌ನಲ್ಲಿ ದೊರೆಯುತ್ತಿರುವುದು ಒಂದು ಕಾರಣವಾದರೇ, ರಿಟರ್ನ್‌ ಪಾಲಿಸಿ ಮತ್ತೊಂದು. ಪ್ಲಸ್‌ ಸೈಝಿನವರಿಗೂ ಇವು ಲಭ್ಯವಾಗುತ್ತಿರುವುದು ಮಹಿಳೆಯರನ್ನೂ ಸೆಳೆಯಲು ಕಾರಣವಾಗಿದೆ ಎನ್ನುತ್ತಾರೆ ಫ್ಯಾಷನ್‌ ಸಮೀಕ್ಷಾ ವರದಿಗಾರರು. ಅವರ ಪ್ರಕಾರ, ಸಮ್ಮರ್‌ ಸೀಸನ್‌ನಲ್ಲಿ ಸಾಕಷ್ಟು ಡಿಸೈನ್‌ನವು ಟ್ರೆಂಡಿಯಾಗಿರುವುದರೊಂದಿಗೆ ಆನ್‌ಲೈನ್‌ ವ್ಯಾಪಾರ ವಹಿವಾಟು ಹೆಚ್ಚಿಸಿವೆಯಂತೆ.

Summer Fashion

ಟ್ಯೂಬ್‌ ಟಾಪ್ಸ್‌

ಯಾವುದೇ ಸ್ಟ್ರಾಪ್‌ ಹಾಗೂ ಶೋಲ್ಡರ್‌ ಇಲ್ಲದ ಈ ಟಾಪ್‌ಗಳು ಸದ್ಯ ಜೆನ್‌ ಜಿ ಹುಡುಗಿಯರ ಫೇವರೇಟ್‌ ಲಿಸ್ಟ್‌ನಲ್ಲಿವೆ. ಬಾಲಿವುಡ್‌ ಸೆಲೆಬ್ರೆಟಿಗಳ ಮೊದಲ ಚಾಯ್ಸ್‌ನಲ್ಲಿವೆ. ಬಾಲಿವುಡ್‌ ತಾರೆಯರೇ ಈ ಟಾಪ್‌ಗಳನ್ನು ಅತಿ ಹೆಚ್ಚಾಗಿ ಧರಿಸುತ್ತಾರೆನ್ನಲಾಗಿದೆ. ಫಿಟ್ಟಿಂಗ್‌ ಇರುವಂತಹ ಟ್ಯೂಬ್‌ ಟಾಪ್‌ಗಳ ಆಯ್ಕೆ ಮಾಡುವುದು ಉತ್ತಮ.

Summer Fashion

ಬ್ಲೌಸ್‌ ಟಾಪ್‌

ನೋಡಲು ಸೀರೆಯ ಗಿಡ್ಡನಾದ ಬ್ಲೌಸ್‌ನಂತೆ ಕಾಣುವ ಇವು ಕೂಡ ಈ ಸೀಸನ್‌ನಲ್ಲಿವೆ. ಸ್ಕರ್ಟ್‌, ಪ್ಯಾಂಟ್‌ಗಳ ಮೇಲೆ ಹುಡುಗಿಯರು ಧರಿಸುವುದನ್ನು ಕಾಣಬಹುದು. ನಾನಾ ಶೈಲಿಯಲ್ಲಿ ಇವು ಲಭ್ಯ. ಬೇಕಿದ್ದಲ್ಲಿ ಸೀರೆಯೊಂದಿಗೂ ಇವನ್ನು ಮಿಕ್ಸ್‌ ಮ್ಯಾಚ್‌ ಮಾಡಿ ಇಂಡೋ-ವೆಸ್ಟರ್ನ್‌ ಲುಕ್‌ ನೀಡಬಹುದು.

ಕ್ಯಾಮಿಸೋಲ್‌ ಟಾಪ್‌

ಇವು ಕೂಡ ಅತಿ ಹೆಚ್ಚು ಚಾಲ್ತಿಯಲ್ಲಿರುವ ಸಮ್ಮರ್‌ ಟಾಪ್‌ಗಳು. ಇವು ದಶಕಗಳಿಂದಲೇ ಸಮ್ಮರ್‌ ಸೀಸನ್‌ ಟ್ರೆಂಡ್‌ನಲ್ಲಿವೆ. ಯಾವತ್ತೂ ಸೀಸನ್‌ ಫ್ಯಾಷನ್‌ನಿಂದ ಹೊರಗೆ ಬಿದ್ದಿಲ್ಲ! ಮುಂದಿನ ಸೀಸನ್‌ನಲ್ಲಿ ಇವುಗಳ ಮೇಲೆ ಜಾಕೆಟ್‌ ಧರಿಸಿ ಲೇಯರ್‌ ಲುಕ್‌ ನೀಡಬಹುದು.

Summer Fashion

ಆಫ್‌ ಶೋಲ್ಡರ್‌ ಕ್ರಾಪ್‌ ಟಾಪ್‌

ಟೀ ಶರ್ಟ್‌ನಂತೆ ಉದ್ದವಾಗಿದ್ದ ಆಫ್‌ ಶೋಲ್ಡರ್‌ ಟಾಪ್‌ಗಳು ಇದೀಗ ಕ್ರಾಪ್‌ ಆಗಿವೆ. ಹೊಟ್ಟೆಯ ಮೇಲೆ ನಿಲ್ಲುತ್ತವೆ. ಭುಜಗಳ ಹತ್ತಿರ ಎಕ್ಸ್‌ಪೋಸ್‌ ಆಗಿರುತ್ತವೆ. ಇವನ್ನು ಪ್ಯಾಂಟ್‌, ಮಿಡಿ, ಸ್ಕರ್ಟ್‌ ಎಲ್ಲವೊಂದಿಗೂ ಧರಿಸಬಹುದು.

Summer Fashion

ಸ್ಟ್ರಾಪ್‌ ಟಾಪ್‌

ನಾನಾ ಶೇಡ್‌ನ ಸ್ಟ್ರಾಪ್‌ ಟಾಪ್‌ಗಳು ಈ ಸೀಸನ್‌ನಲ್ಲಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಅವುಗಳಲ್ಲಿ ನೂಡಲ್ಸ್‌ ಸ್ಟ್ರಾಪ್‌, ಸ್ಪೆಗೆಟಿ ಕ್ರಾಪ್‌ ಟಾಪ್‌ಗಳು ಹೆಚ್ಚು ಟೀನೇಜ್‌ ಹುಡುಗಿಯರನ್ನು ಬರ ಸೆಳೆದಿವೆ. ಎಲ್ಲಾ ಬಗೆಯ ಪ್ಯಾಂಟ್‌ ಜೊತೆ ಲಾಂಗ್‌ ಸ್ಕರ್ಟ್‌ ಜೊತೆ ಮ್ಯಾಚ್‌ ಮಾಡಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Saanya Iyer: ಗ್ರ್ಯಾಂಡ್‌ ಲೆಹೆಂಗಾದಲ್ಲಿ ರಾಣಿಯಂತೆ ಕಂಗೊಳಿಸಿದ ನಟಿ ಸಾನ್ಯಾ ಅಯ್ಯರ್‌

Continue Reading
Advertisement
Bengaluru Rain
ಕರ್ನಾಟಕ5 hours ago

Bengaluru Rain: ಸಿಲಿಕಾನ್‌ ಸಿಟಿಯಲ್ಲಿ ವರುಣನ ಆರ್ಭಟ; ಜಲಾವೃತವಾದ ರಸ್ತೆಗಳು, ನೆಲಕ್ಕುರುಳಿದ 16 ಮರ

Rohit Sharma
ಪ್ರಮುಖ ಸುದ್ದಿ5 hours ago

Rohit Sharma : 4 ರನ್​ಗೆ ಔಟಾಗಿ ಕಣ್ಣೀರು ಸುರಿಸಿದ ರೋಹಿತ್​ ಶರ್ಮಾ; ಇಲ್ಲಿದೆ ವಿಡಿಯೊ

PM Narendra Modi
ದೇಶ5 hours ago

ತಮ್ಮ ಬಗ್ಗೆ ಟ್ರೋಲ್‌ ಮಾಡಿದ್ದನ್ನೂ ಮೆಚ್ಚಿದ ಮೋದಿ; ಮಮತಾ ಬ್ಯಾನರ್ಜಿ ನೋಟಿಸ್; ಯಾರು ಸರ್ವಾಧಿಕಾರಿ?

School Children
ಸಂಪಾದಕೀಯ5 hours ago

ವಿಸ್ತಾರ ಸಂಪಾದಕೀಯ: ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ, ಇ-ಮೇಲ್‌ ಕಿಡಿಗೇಡಿಗಳಿಗೆ ಕಠಿಣ ಪಾಠ ಕಲಿಸಬೇಕಿದೆ

IPL 2024
ಕ್ರೀಡೆ5 hours ago

IPL 2024 : ಸೂರ್ಯನ ಪ್ರತಾಪಕ್ಕೆ ಮಂಕಾದ ಸನ್​; ಮುಂಬೈಗೆ 7 ವಿಕೆಟ್​ ಭರ್ಜರಿ ಗೆಲುವು

Narendra Modi
ದೇಶ5 hours ago

Maldives: ಭಾರತೀಯರೇ, ದಯಮಾಡಿ ಬನ್ನಿ ಎಂದ ಮಾಲ್ಡೀವ್ಸ್‌ ಸಚಿವ; ಬಾಯ್ಕಾಟ್‌ ಪೆಟ್ಟಿಗೆ ಥಂಡಾ!

DK Shivakumar
ಕರ್ನಾಟಕ5 hours ago

Prajwal Revanna Case: ದೇವರಾಜೇಗೌಡ ನನ್ನ ವಿರುದ್ಧ ಸುಳ್ಳು ಅಪಾದನೆ ಮಾಡಿದ್ದಾರೆ ಎಂದ ಡಿಕೆಶಿ

T20 World Cup 2024
ಕ್ರೀಡೆ5 hours ago

T20 World Cup 2024 : ಕೇಸರಿಯ ರಂಗು; ಟೀಮ್​ ಇಂಡಿಯಾದ ಟಿ20 ವಿಶ್ವ ಕಪ್​​ ಜೆರ್ಸಿ ಬಿಡುಗಡೆ

108 Ambulance
ಕರ್ನಾಟಕ6 hours ago

108 Ambulance: 108 ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ದಿನೇಶ್ ಗುಂಡೂರಾವ್

IPL 2024
ಪ್ರಮುಖ ಸುದ್ದಿ6 hours ago

IPL 2024 : ಮುಂಬೈ ಚಾ ರಾಜಾ ರೋಹಿತ್​ ಶರ್ಮಾ ಎಂದು ಕೂಗಿದ ಹೇಡನ್​ ಪುತ್ರಿ ಗ್ರೇಸ್​​; ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ10 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ10 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ10 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ24 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ1 day ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ1 day ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 day ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌