Railway police constable arrested for stealing goldGold Theft: ಸಿವಿಲ್‌ ಪೊಲೀಸ್‌ ಎಂದು ರೈಲು ಬಿಟ್ಟು 2 ಕೆಜಿ ಚಿನ್ನ ಕದ್ದ ರೈಲ್ವೆ ಪೊಲೀಸರು; ಕೊನೆಗೂ ಸಿಕ್ಕಿಬಿದ್ದರು - Vistara News

ಕರ್ನಾಟಕ

Gold Theft: ಸಿವಿಲ್‌ ಪೊಲೀಸ್‌ ಎಂದು ರೈಲು ಬಿಟ್ಟು 2 ಕೆಜಿ ಚಿನ್ನ ಕದ್ದ ರೈಲ್ವೆ ಪೊಲೀಸರು; ಕೊನೆಗೂ ಸಿಕ್ಕಿಬಿದ್ದರು

Gold Theft: ಬೆಂಗಳೂರಿನಲ್ಲಿ ಚಿನ್ನದ ವ್ಯಾಪಾರಿಗಳಿಂದ ಬರೋಬ್ಬರಿ 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನದ ಗಟ್ಟಿಯನ್ನು ಕದ್ದು ಪರಾರಿ ಆಗಿದ್ದವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಚಿನ್ನದ ಗಟ್ಟಿ ಕದ್ದವರು ರೈಲ್ವೆ ಪೊಲೀಸರು ಎಂದು ತಿಳಿದು ಬಂದಿದೆ.

VISTARANEWS.COM


on

Thieves steal gold bars from fake cops
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇಲ್ಲಿನ ಆನಂದ್ ರಾವ್ ಸರ್ಕಲ್ (Anand Rao Circle) ಬಳಿ ಅಪರಿಚಿತರಿಬ್ಬರು ಪೊಲೀಸರೆಂದು ಹೇಳಿ 1 ಕೋಟಿ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಯನ್ನು (Gold Theft) ದೋಚಿ ಪರಾರಿ ಆಗಿದ್ದರು. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ (Upparpet Police Station) ದೂರು ದಾಖಲಾಗಿತ್ತು. ಇದೀಗ ತನಿಖೆ ನಡೆಸಿದಾಗ ಆ ಕಳ್ಳರು ಪೊಲೀಸರೆಂದು ತಿಳಿದು ಬಂದಿದೆ. ರೈಲ್ವೆ ಪೊಲೀಸ್‌ ಕಾನ್ಸ್‌ಟೇಬಲ್‌ಗಳಾದ (Railway police Constable) ಜ್ಞಾನೇಶ್ ಹಾಗೂ ವಟಾವಟಿ ಬಂಧಿತ ಆರೋಪಿಗಳಾಗಿದ್ದಾರೆ.

ಅಬ್ದುಲ್ ರಜಾಕ್, ಮಲ್ಲಯ್ಯ ಹಾಗೂ ಸುನೀಲ್ ಎಂಬುವವರು ರಾಯಚೂರಿನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾಲೀಕರ ಸೂಚನೆಯಂತೆ ಚಿನ್ನದ ಗಟ್ಟಿ ಖರೀದಿಗೆ ಬೆಂಗಳೂರಿಗೆ ಸೋಮವಾರ (ಮಾ.13) ಬಂದಿದ್ದರು. ಸುಮಾರು 2 ಕೆ.ಜಿ 200 ಗ್ರಾಂ ತೂಕದ ಚಿನ್ನದ ಗಟ್ಟಿ ಖರೀದಿ ಮಾಡಿ ಬಸ್ಸಿನಲ್ಲಿ ಕುಳಿತಿದ್ದರು.

ಈ ವೇಳೆ ಸುನೀಲ್ ಬಸ್ಸಿನಲ್ಲಿ ಕುಳಿತಿದ್ದರೆ, ಚಿನ್ನದ ಗಟ್ಟಿ ಇದ್ದ ಬ್ಯಾಗ್ ಸಮೇತ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಶೌಚಾಲಯಕ್ಕೆ ಹೊರಟಿದ್ದರು. ಈ ವೇಳೆ ಅಲ್ಲಿಗೆ ಬಂದ ಕಾನ್ಸ್‌ಟೇಬಲ್‌ ಜ್ಞಾನೇಶ್‌ ಹಾಗೂ ವಟಾವಟಿ ಐಡಿ ಕಾರ್ಡ್‌ವೊಂದನ್ನು ತೋರಿಸಿ ತಾವು ಸಿವಿಲ್‌ ಪೊಲೀಸರೆಂದು ಹೇಳಿ ಅವರನ್ನು ತಡೆದಿದ್ದಾರೆ. ಎರಡು ತಿಂಗಳಿನಿಂದ ನೀವೂ ಗೋಲ್ಡ್ ಸ್ಮಗ್ಲಿಂಗ್‌ ಮಾಡುತ್ತಿದ್ದೀರ ಎಂದು ಬೆದರಿಸಿ, ಥೇಟ್‌ ಸಿವಿಲ್‌ ಪೊಲೀಸರಂತೆ ಹಿಂಬದಿ ಪ್ಯಾಂಟ್ ಹಿಡಿದು ಕರೆದೊಯ್ದಿದ್ದರು. ನಂತರ ರೇಸ್ ಕೋರ್ಸ್, ಚೌಡಯ್ಯ ರಸ್ತೆ ಸೇರಿದಂತೆ ಹಲವೆಡೆ ಸುತ್ತಾಡಿ ಬಳಿಕ ತಳ್ಳಿ ಆಟೋದಲ್ಲಿ ಪರಾರಿಯಾಗಿದ್ದರು.

ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿತ್ತು. ಮೊದಲಿಗೆ ಇದು ದೂರುದಾರನ ಕಡೆಯವರೋ ಅಥವಾ ಚಿನ್ನ ನೀಡಿದ್ದ ಬೆಂಗಳೂರಿನ ಶಾಪ್ ಸಿಬ್ಬಂದಿಯ ಕೃತ್ಯ ಎಂಬುದು ಮೇಲ್ನೋಟಕ್ಕೆ ಶಂಕಿಸಲಾಗಿತ್ತು. ಪೊಲೀಸ್ ಡಾಟಾ ಬೇಸ್‌ನಲ್ಲಿರುವ ಮಾಹಿತಿಯನ್ನು ಪರಿಶೀಲಿಸಿದಾಗ ರೈಲ್ವೆ ಪೊಲೀಸ್‌ ಕಾನ್ಸ್‌ಟೇಬಲ್‌ಗಳೇ ಆರೋಪಿಗಳೆಂದು ತಿಳಿದು ಬಂದಿದೆ.

ಸಿಸಿಟಿವಿಯಲ್ಲಿ ಕಾಣಿಸಿದ್ದ ಮುಖವನ್ನು ಸ್ಕ್ಯಾನ್ ಮಾಡಿ ಸೂಪರ್ ಇಂಪೋಝ್ ಮಾಡಿದಾಗ ಆರೋಪಿಗಳ ಚಹರೆ ಸ್ಪಷ್ಟವಾಗಿತ್ತು. ಆ ಫೋಟೊವನ್ನು ರಾಜ್ಯದ ಎಲ್ಲ ವಿಭಾಗದ ಪೊಲೀಸರ ಡಾಟಾಬೇಸ್‌ನಲ್ಲಿ ಪರಿಶೀಲನೆ ನಡೆಸಿದಾಗ ಅಸಲಿ ಸಂಗತಿ ಹೊರಬಿದ್ದಿದೆ‌. 2019ರ ಬ್ಯಾಚ್‌ನ ರೈಲ್ವೆ ಪೊಲೀಸ್ ಆಗಿರುವ ಜ್ಞಾನೇಶ್ ಹಾಗು ವಟಾವಟಿ ಚಿನ್ನ ಕದ್ದು ತಮ್ಮ ರೂಂನಲ್ಲಿ ಅಡಿಗಿಸಿಟ್ಟಿದ್ದರು ಎಂಬುದು ಬಳಿಕ ಗೊತ್ತಾಗಿದೆ.

ಇದನ್ನೂ ಓದಿ:Fraud Case: ನಕಲಿ ಐಪಿಎಸ್‌ನಿಂದ ಕೋಟಿ ಕೋಟಿ ಲೂಟಿ; ಅಸಲಿ ಪೊಲೀಸರನ್ನೂ ಯಾಮಾರಿಸಿದ್ದು ಹೇಗೆ?

ಸದ್ಯ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಖುದ್ದು ಡಿಸಿಪಿ ಲಕ್ಷ್ಮಣ ನಿಂಬರಗಿಯವರೇ ವಿಚಾರಣೆ ನಡೆಸುತ್ತಿದ್ದಾರೆ. ಈ ಮೊದಲು ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದರಾ ಎಂಬ ಮಾಹಿತಿ ಈಗ ಹೊರ ಬರಬೇಕಿದೆ. ಇದರಲ್ಲಿ ಪೊಲೀಸ್ ಸಿಬ್ಬಂದಿ, ಮೇಲಧಿಕಾರಿಗಳ ಕೈವಾಡ ಇರುವುದರ ಬಗ್ಗೆ ಶಂಕೆ ಹಿನ್ನೆಲೆ ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೊಳಪಡಿಸಲಾಗಿದೆ‌.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ಕೆಎಸ್‌ಸಿಎಗೆ ಮತ್ತೆ ಸಂಕಷ್ಟ; ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲ ನೀರಿನ ಮೂಲದ ವಿವರ ಕೇಳಿದ ಎನ್‌ಜಿಟಿ!

IPL 2024: ಎನ್‌ಜಿಟಿ ಮುಖ್ಯಸ್ಥ ನ್ಯಾ. ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು, ಕ್ರೀಡಾಂಗಣದಲ್ಲಿ ಬಳಕೆಯಾಗುತ್ತಿರುವ ನೀರಿನ ಎಲ್ಲಾ ಮೂಲ, ಕ್ರೀಡಾಂಗಣದಲ್ಲಿರುವ ಬೋರ್‌ವೆಲ್‌, ಒಳಚರಂಡಿ ಸಂಸ್ಕರಣಾ ಘಟಕದ ಬಳಕೆ ಬಗ್ಗೆ 4 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್​ 13ಕ್ಕೆ ನಿಗದಿಪಡಿಸಿದೆ.

VISTARANEWS.COM


on

IPL 2024
Koo

ಬೆಂಗಳೂರು: ಬೆಂಗಳೂರಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದ ವೇಳೆಯೂ(bangalore water crisis) ಚಿನ್ನಸ್ವಾಮಿ(m chinnaswamy) ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯ​ ಪಂದ್ಯಾವಳಿಗಳನ್ನು ನಡೆಸಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. 3 ವಾರಗಳ ಹಿಂದೆ ನೀರಿನ ಬಳಕೆ ಕುರಿತು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ವರದಿ ಕೇಳಿತ್ತು. ಇದೀಗ ಪಂದ್ಯಗಳಿಗೆ ಬಳಸಿರುವ ನೀರಿನ ಮೂಲ ಹಾಗೂ ಕ್ರೀಡಾಂಗಣದಲ್ಲಿರುವ 400 ಅಡಿ ಆಳದ ನಾಲ್ಕು ಕೊಳವೆ ಬಾವಿಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ಜನರು ನೀರಿಲ್ಲದೇ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಹೆಚ್ಚು ನೀರು ಬಳಸುವ ಐಪಿಎಲ್‌ ಪಂದ್ಯಗಳನ್ನು ನಡೆಸುವುದು ಸೂಕ್ತವಲ್ಲ, ಹೀಗಾಗಿ ಬೆಂಗಳೂರಿನನಲ್ಲಿ ನಡೆಯುವ ಪಂದ್ಯಗಳನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡಬೇಕು ಎಂದು ಸಾರ್ವಜನಿಕ ವಲಯದಿಂದ ಸರ್ಕಾರಕ್ಕೆ ಮನವಿ ಬಂದಿತ್ತು. ಈ ವೇಳೆ ಕೆಎಸ್​ಸಿಎ ಆಡಳಿತ ಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ದ ನೀರು ಬಳಕೆ ಮಾಡುಲಾಗುತ್ತದೆ ಎಂದು ಹೇಳಿ ಪಂದ್ಯವಾವಳಿಯನ್ನು ನಡೆಸಿತ್ತು.

ಇದನ್ನೂ ಓದಿ IPL 2024: ಬರೋಬ್ಬರಿ 12 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಗೆಲುವು ಸಾಧಿಸಿದ ಕೆಕೆಆರ್​

ಈ ವೇಳೆ ಸ್ಪಷ್ಟನೆ ನೀಡಿದ್ದ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶುಭೇಂದು ಘೋಷ್, ನೀರಿಗೆ ಸಂಬಂಧಿಸಿದಂತೆ ನಮಗೆ ಯಾವುದೇ ಸಮಸ್ಯೆ ಇಲ್ಲ. ರಾಜ್ಯ ಸರ್ಕಾರವು ಹೊರಡಿಸಿರುವ ನೀರು ಬಳಕೆ ಮಾರ್ಗಸೂಚಿಯನ್ನು ನಾವು ಪಾಲಿಸುತ್ತೇವೆ. ಪಿಚ್ ಮತ್ತು ಹೊರಾಂಗಣಕ್ಕಾಗಿ ನಾವು ಯೋಗ್ಯವಾದ ನೀರನ್ನು ಬಳಸುವುದಿಲ್ಲ. ನೀರಿನ ಮೌಲ್ಯ ಏನೆಂಬುವುದು ನಮಗೆ ತಿಳಿದಿದೆ. ಎಸ್‌ಟಿಪಿ ಘಟಕದ ನೀರನ್ನು ನಾವು ಬಳಸುತ್ತಿದ್ದೇವೆ. ಕ್ರೀಡಾಂಗಣದಲ್ಲಿ ಕೆಲವು ಕಾರ್ಯಗಳಿಗಾಗಿ ಬಳಸಲು ಕೂಡ ಇದೇ ಸಂಸ್ಕರಿತ ನೀರು ಬಳಕೆ ಮಾಡುತ್ತಿದ್ದೇವೆ ಎಂದು ಹೇಳಿದ್ದರು.

ಪಂದ್ಯಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಿರುವುದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠ ಗಂಭೀರವಾಗಿ ಪರಿಗಣಿಸಿದ್ದು, ನೀರಿನ ಬಳಕೆಯ ಪ್ರಸ್ತುತ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಆದೇಶಿಸಿ ಮೇ 2ಕ್ಕೆ ಎರಡನೇ ಹಂತದ ವಿಚಾರಣೆಯನ್ನು ನಿಗದಿಪಡಿಸಿತ್ತು.

ಇದೀಗ ವಿಚಾರಣೆ ನಡೆದಿದ್ದು, ಎನ್‌ಜಿಟಿ ಮುಖ್ಯಸ್ಥ ನ್ಯಾ. ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು, ಕ್ರೀಡಾಂಗಣದಲ್ಲಿ ಬಳಕೆಯಾಗುತ್ತಿರುವ ನೀರಿನ ಎಲ್ಲಾ ಮೂಲ, ಕ್ರೀಡಾಂಗಣದಲ್ಲಿರುವ ಬೋರ್‌ವೆಲ್‌, ಒಳಚರಂಡಿ ಸಂಸ್ಕರಣಾ ಘಟಕದ ಬಳಕೆ ಬಗ್ಗೆ 4 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್​ 13ಕ್ಕೆ ನಿಗದಿಪಡಿಸಿದೆ. ಮುಂದಿನ ವಿಚಾರಣೆಗೆ ಇನ್ನೂ ಮೂರು ತಿಂಗಳು ಬಾಕಿ ಇದ್ದು ಈ ವೇಳೆಗಾಗಲೇ ಐಪಿಎಲ್​ ಪಂದ್ಯ ಕೂಡ ಮುಕ್ತಾಯ ಕಂಡಿರುತ್ತದೆ. ಹೀಗಾಗಿ ಈ ಬಾರಿಯ ಆರ್​ಸಿಬಿ ಪಂದ್ಯಗಳಿಗೆ ಯಾವುದೇ ಅಡ್ಡಿ ಉಂಟಾಗದು. ಚಿನ್ನಸ್ವಾಮಿಯಲ್ಲಿ ಇನ್ನು ಕೇವಲ 2 ಪಂದ್ಯ ಮಾತ್ರ ಬಾಕಿ ಉಳಿದಿದೆ. ಇದರಲ್ಲಿ ಒಂದು ಒಂದ್ಯ ಇಂದು(ಶನಿವಾರ) ನಡೆಯಲಿದೆ.

Continue Reading

ಬೆಂಗಳೂರು

Bribery Case : ಕಾಸಿನ ಜತೆಗೆ ಎಣ್ಣೆ ಕೊಟ್ರಷ್ಟೇ ಫೈಲ್‌ ಮೂಮ್ಮೆಂಟ್‌ ; ಇದು ಕುಡುಕ ಪಂಚಾಯಿತಿ ಪಿಡಿಓ ಲಂಚಾವತಾರ

Bribery Case: ಪಿಡಿಓ ಅಧಿಕಾರಿಯ ಲಂಚಾವತಾರಕ್ಕೆ ಜನರು ಸುಸ್ತಾಗಿದ್ದಾರೆ. ಸರ್ಕಾರಿ ಕೆಲಸ ಆಗಬೇಕೆಂದರೆ ಆ ಸರ್ಕಾರಿ ಅಧಿಕಾರಿಗೆ ಹಣದೊಂದಿಗೆ, ದುಬಾರಿ ಮದ್ಯದ ಬಾಟೆಲ್‌ ಕೊಡಿಸಲೇಬೇಕು.

VISTARANEWS.COM


on

By

Bribery Case in Bengaluru news
Koo

ಬೆಂಗಳೂರು: ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಮಾತು ಕೇವಲ ಗೋಡೆಗಳ ಮೇಲಿನ ಬರಹಕ್ಕೆ ಅಷ್ಟೇ ಸೀಮಿತವಾಗಿದೆ. ಕೆಲಸ ಮಾಡುವ ಜಾಗ ದೇವಾಲಯ ಎನ್ನುವ ಕಾಲ ಮಾಯವಾಗಿ ಬಹಳ ದಿನಗಳೇ ಕಳೆದಿವೆ. ಸದ್ಯ ಇಲ್ಲೊಬ್ಬ ಅಧಿಕಾರಿ ದೇವಾಲಯವನ್ನೇ ಅಪವಿತ್ರ (Bribery Case) ಮಾಡಿದ್ದಾನೆ. ಕೆಲಸ ಆಗ್ಬೇಕು ಸರ್ ಎಂದು ಆತನ ಬಳಿ ಹೋದರೆ ಹಣದ ಜತೆಗೆ ಎಣ್ಣೆಗೆ ಡಿಮ್ಯಾಂಡ್ ಮಾಡುತ್ತಾನೆ. ದುಡ್ಡು‌, ಡ್ರಿಂಕ್ಸ್ ಮುಂದಿಟ್ಟರೆ ಸಾಕು ರೂಲ್ಸ್ ಬ್ರೇಕ್ ಮಾಡಿ ನಿಮಗೆ ಬೇಕಾದ ರೆಕಾರ್ಡ್ಸ್ ರೆಡಿಯಾಗುತ್ತಂತೆ.

ಅಂದಹಾಗೇ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಪಿಡಿಓ ಲಂಚಾವತಾರದ ಕಥೆ ಇದು. ಕಣ್ಣೂರು ಗ್ರಾಮ ಪಂಚಾಯಿತಿ ಪಿಡಿಓ ಮುನಿಚಿಕ್ಕಯ್ಯ ಎಂಬಾತನ ಲಂಚಾವತಾರಕ್ಕೆ ಜನ ಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಲ್ಯಾಂಡ್ ಕನ್ವರ್ಷನ್ ಆಗದಿದ್ದರೂ ಲೇಔಟ್ ನಿರ್ಮಾಣಕ್ಕೆ ಅನುಮತಿ ನೀಡುತ್ತಾರೆ. ರೆವಿನ್ಯೂ ಸೈಟ್‌ಗಳ ಖಾತೆ ಮಾಡಿಕೊಳ್ಳಲು ಒಂದು ಲಕ್ಷ ರೂ. ಫಿಕ್ಸ್ ಮಾಡಿದ್ದರಂತೆ.

ಅರ್ಜಿದಾರನೊಬ್ಬ ಅಕ್ರಮವಾಗಿ ನಿರ್ಮಾಣವಾಗಿದ್ದ ಲೇಔಟ್‌ನ ಕಾಮಗಾರಿ ತಡೆಯೋದಕ್ಕೆ ಅರ್ಜಿ ನೀಡಿದ್ದರು. ನಿಮ್ಮ ಕೆಲಸ ಮುಗಿತು ಅಂದುಕೊಳ್ಳಿ‌.. ಆದರೆ ನನಗೆ ದುಬಾರಿ ಮದ್ಯದ ಬಾಟೆಲ್‌ ಕೊಡಿ ಎನ್ನುತ್ತಾನಂತೆ. ಈ ರೀತಿ ನೂರಾರು ಖಾತೆಯನ್ನು ಅಕ್ರಮ ಎಸಗಿದ್ದಾರೆ. ಅಕ್ರಮದ ಬಗ್ಗೆ ದೂರು ನೀಡಿದರೂ ಹಿರಿಯ ಅಧಿಕಾರಿಗಳಿಂದ ಯಾವುದೇ ಕ್ರಮ ಇಲ್ಲ ಅರ್ಜಿದಾರರು ಕಿಡಿಕಾರುತ್ತಿದ್ದಾರೆ.

ಇದನ್ನೂ ಓದಿ:Accident News: ಬಿರುಗಾಳಿಗೆ ಕೂಲಿಂಗ್ ಶೀಟ್ ತಲೆ ಮೇಲೆ ಬಿದ್ದು ವ್ಯಕ್ತಿ ಸಾವು; ಬಿಸಿಲಾಘಾತಕ್ಕೆ ಇಬ್ಬರು ಬಲಿ

ರೆಸ್ಟೋರೆಂಟ್‌ನಲ್ಲಿ ಪತ್ನಿಯನ್ನು ಹೊಡೆದು ಕೊಂದ ಮಾಜಿ ಸಚಿವ; ಶಾಕಿಂಗ್‌ ವಿಡಿಯೋ ಎಲ್ಲೆಡೆ ವೈರಲ್‌

ಕಜಕೀಸ್ತಾನ: ರೆಸ್ಟೋರೆಂಟ್‌ವೊಂದರಲ್ಲಿ ಮಾಜಿ ಸಚಿವನೋರ್ವ ತನ್ನ ಪತ್ನಿಯನ್ನು ದಾರುಣವಾಗಿ ಥಳಿಸಿದ್ದು, ಪರಿಣಾಮವಾಗಿ ಎಂಟು ಗಂಟೆಗಳಲ್ಲಿ ಆಕೆ ಕೊನೆಯುಸಿರೆಳೆದಿರುವ ಘಟನೆ ಕಜಕೀಸ್ತಾನ(Kajakistan)ದಲ್ಲಿ ನಡೆದಿದೆ. ಘಟನೆಯ ಶಾಕಿಂಗ್‌ ವಿಡಿಯೋ(Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಬೆಚ್ಚಿಬೀಳುವಂತಿದೆ. ಕಜಕೀಸ್ತಾನದ ಮಾಜಿ ಆರ್ಥಿಕ ಸಚಿವನಾಗಿದ್ದ ಕುವಾಂಡಿಕ್ ಬಿಶಿಂಬಾಯೆವ್ ತನ್ನ 31 ವರ್ಷದ ಸಲ್ತಾನೇಟ್‌ ನ್ಯೂಕೆನೋವಾ ಮೇಲೆ ಈ ಡೆಡ್ಲಿ ಅಟ್ಯಾಕ್‌(Deadly Attack) ಮಾಡಿದ್ದಾನೆ. ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಪತ್ನಿ ಕೂದಲು ಹಿಡಿದು ಎಳೆದು ತಂದ ಬಿಶಿಂಬಾಯೆವ್, ಆಕೆಯ ಮುಖಾಮೂತಿ ನೋಡದೇ ಚಚ್ಚುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಈ ಘಟನೆ ನಡೆದಿದ್ದು, ಗಂಭೀರವಾವಾಗಿ ಗಾಯಗೊಂಡಿದ್ದ ಸಲ್ತಾನೇಟ್‌ ನ್ಯೂಕೆನೋವಾ ಎಂಡು ಗಂಟೆಗಳ ಬಳಿಕ ಕೊನೆಯುಸಿರೆಳೆದಿದ್ದಾಳೆ. ಈ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ವಿಚಾರಣೆ ವೇಳೆ ಸಿಸಿಟಿವಿ ವಿಡಿಯೋವನ್ನು ಪ್ರದರ್ಶಿಸಲಾಯಿತು. ಹೀಗಾಗಿ ಈ ವಿಚಾರ ಮತ್ತೊಮ್ಮೆ ಸುದ್ದಿಯಾಗಿದೆ. ಇನ್ನು ಈ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಮಧ್ಯ ಏಷ್ಯಾದ ರಾಷ್ಟಗಳ ಹತ್ತು ಸಾವಿರಕ್ಕೂ ಅಧಿಕ ಜನರು ಸಹಿ ಹಾಕಿರುವ ಅರ್ಜಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ.

ಇದನ್ನೂ ಓದಿ: Mallikarjuna Kharge: ಪ್ರಧಾನಿ ಮೋದಿ ವಡೋದರಾ ಬಿಟ್ಟು ವಾರಣಾಸಿಗೆ ಓಡಲಿಲ್ಲವೇ?; ಖರ್ಗೆ ಕಿಡಿ

ಬಿಶಿಂಬಾಯೆವ್ (44) ಮಾಜಿ ಪ್ರಧಾನಿ ನರ್ಸುಲ್ತಾನ್ ನಜರ್ಬಯೇವ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ಹಿಸುತ್ತಿದ್ದ. 2018ರಲ್ಲಿ ಲಂಚ ಪ್ರಕರಣದಲ್ಲಿ ಆತ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಕಳೆದ ವರ್ಷದ ನವೆಂಬರ್‌ನಲ್ಲಿ ಆತನ ಪತ್ನಿ ಸಂಬಂಧಿಕರ ರೆಸ್ಟೋರೆಂಟ್‌ವೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಒಂದು ವಾರದವರೆಗೆ ಬಿಶಿಂಬಾಯೆವ್ ತನಗೇನು ಗೊತ್ತಿಲ್ಲ, ತಾನೊಬ್ಬ ಅಮಾಯಕ ಎಂಬಂತೆ ಪೊಲೀಸರ ಎದುರು ನಟಿಸಿದ್ದ. ಆತನ ವಿರುದ್ಧ ಸಾಕ್ಷ್ಯಾಧಾರ ಸಿಗದಂತೆ ರೆಸ್ಟೋರೆಂಟ್‌ ಮಾಲೀಕ, ಸಿಬ್ಬಂದಿಗಳೂ ಸಹಕರಿಸಿದ್ದರು. ಆದರೆ ಕೋರ್ಟ್‌ನಲ್ಲಿ ತಾನೇ ಆಕೆಯಲ್ಲಿ ಹೊಡೆದು ಸಾಯಿಸಿರೋದಾಗಿ ಒಪ್ಪಿಕೊಂಡಿದ್ದಾನೆ.

ವೈದ್ಯರ ಮಾಹಿತಿ ಪ್ರಕಾರ ಸಲ್ತಾನೇಟ್‌ ನ್ಯೂಕೆನೋವಾ ತಲೆಗೆ ಗಂಭೀರವಾಗಿ ಏಟು ಬಿದ್ದ ಕಾರಣ ಆಕೆ ಮೃತಪಟ್ಟಿದ್ದಳು. ಇನ್ನು ಆಕೆಯ ಸಹೋದರ ಕೋರ್ಟ್‌ನಲ್ಲಿ ಸಾಕ್ಷಿ ಹೇಳಿದ್ದು, ತನ್ನ ಸಹೋದರಿ ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ಆಗಲೇಬೇಕೆಂದು ಒತ್ತಾಯಿಸಿದ್ದಾನೆ. ಈಗಾಗಲೇ ಮೃತಳಿಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ವಕೀಲರು ಕೋರ್ಟ್‌ಗೆ ಸಲ್ಲಿಸಿದ್ದಾರೆ. ರಷ್ಯಾದಂತೆ ಕಜಕೀಸ್ತಾದಲ್ಲೂ ಪುರುಷ ಪ್ರಧಾನ ಸಂಸ್ಕೃತಿ ಚಾಲ್ತಿಯಲ್ಲಿದ್ದು, ಹೀಗಾಗಿ ಕೌಟುಂಬಿಕ ಕಲಹ, ಲೈಂಗಿಕ ದೌರ್ಜನ್ಯ ಮೊದಲಾದ ಅಪರಾಧಗಳು ಹೆಚ್ಚಾಗಿವೆ.2018ರಲ್ಲಿ ವಿಶ್ವಸಂಸ್ಥೆ ನೀಡಿರುವ ವರದಿ ಪ್ರಕಾರ ಪ್ರತಿ ವರ್ಷ 400 ಕ್ಕೂ ಅಧಿಕ ಮಹಿಳೆಯರು ಕೌಟುಂಬಿಕ ಕಲಹಕ್ಕೆ ಬಲಿಯಾಗುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Prajwal Revanna Case: ಮೊಮ್ಮಗನ ದೆಸೆಯಿಂದ ದೇವೇಗೌಡರ ಆರೋಗ್ಯ ಏರುಪೇರು, ಕುಟುಂಬದಿಂದ ತೀವ್ರ ನಿಗಾ

Prajwal Revanna Case: ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು, ಹಿರಿಮಗ ಹಾಗೂ ಮೊಮ್ಮಗನ ಹಗರಣಗಳಿಂದಾಗಿ ತೀವ್ರವಾಗಿ ನೊಂದಿದ್ದಾರೆ. ಇದರಿಂದಾಗಿ, ಇತ್ತೀಚೆಗೆ ತಾನೇ ಆಗಿರುವ ಬಿಜೆಪಿ- ಜೆಡಿಎಸ್‌ ಮೈತ್ರಿಯ ಮೇಲೂ ದುಷ್ಪರಿಣಾಮ ಆಗುವ ಸಾಧ್ಯತೆಯೂ ಅವರನ್ನು ಬಾಧಿಸುತ್ತಿದೆ.

VISTARANEWS.COM


on

HD Deve gowda prajwal revanna case
Koo

ಬೆಂಗಳೂರು: ಮೊಮ್ಮಗ, ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಪೆನ್ ಡ್ರೈವ್ ಪ್ರಕರಣ (Pen drive Case) ಉಂಟುಮಾಡಿರುವ ಚಿಂತೆ ಹಾಗೂ ಒತ್ತಡದ ದೆಸೆಯಿಂದ ಮಾಜಿ ಪ್ರಧಾನಿ ದೇವೇಗೌಡರ (hd Deve gowda) ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ದೇವೇಗೌಡ ಕುಟುಂಬದ ಸದಸ್ಯರು ಅಲರ್ಟ್‌ ಆಗಿದ್ದು, ತೀವ್ರ ನಿಗಾ ಇರಿಸಿದ್ದಾರೆ.

ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು, ಹಿರಿಮಗ ಹಾಗೂ ಮೊಮ್ಮಗನ ಹಗರಣಗಳಿಂದಾಗಿ ತೀವ್ರವಾಗಿ ನೊಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಈ ಪ್ರಕರಣದಲ್ಲಿ ಕೈ ತೊಳೆದುಕೊಂಡು ಬೆನ್ನು ಹತ್ತಿರುವುದು ಇನ್ನಷ್ಟು ಚಿಂತೆ ಮೂಡಿಸಿದೆ. ಇದರಿಂದಾಗಿ, ಇತ್ತೀಚೆಗೆ ತಾನೇ ಆಗಿರುವ ಬಿಜೆಪಿ- ಜೆಡಿಎಸ್‌ ಮೈತ್ರಿಯ ಮೇಲೂ ದುಷ್ಪರಿಣಾಮ ಆಗುವ ಸಾಧ್ಯತೆಯೂ ಅವರನ್ನು ಬಾಧಿಸುತ್ತಿದೆ.

ಈ ಹಿನ್ನೆಲೆಯಲ್ಲಿ ದೇವೇಗೌಡರು ಹಾಗೂ ಪತ್ನಿ ಚೆನ್ನಮ್ಮ ಆರೋಗ್ಯದ ಬಗ್ಗೆಯೂ ಕುಟುಂಬದ ಸದಸ್ಯರು ತೀವ್ರ ನಿಗಾ ವಹಿಸುತ್ತಿದ್ದಾರೆ. ಹೆಣ್ಣು ಮಕ್ಕಳು ಸಂಪೂರ್ಣ ಮೇಲ್ವಿಚಾರಣೆ ಹೊತ್ತಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ಎರಡೂ ಟೈಮ್ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. “ಟಿವಿ ನೋಡಬೇಡಿ.. ಸಂಪೂರ್ಣ ರೆಸ್ಟ್ ಮಾಡಿ” ಎಂದು ದೇವೇಗೌಡರಿಗೆ ವೈದ್ಯರು ಕೂಡ ಸಲಹೆ ನೀಡಿದ್ದಾರೆ.

ನಿನ್ನೆ ದೇವೇಗೌಡರ ಅಳಿಯ, ಹೃದಯ ತಜ್ಞ ಡಾ. ಸಿ.ಎನ್‌ ಮಂಜುನಾಥ್ ಗೌಡರ ಮನೆಗೆ ಭೇಟಿ ನೀಡಿ ನಿಯಮಿತ ತಪಾಸಣೆ ನಡೆಸಿದ್ದಾರೆ. ಇತರ ನುರಿತ ವೈದ್ಯರಿಂದಲೂ ತಪಾಸಣೆ ನಡೆದಿದೆ. ಪುತ್ರಿಯರು ದೇವೇಗೌಡರ ಮನೆಯಲ್ಲಿಯೇ ಉಳಿದುಕೊಂಡಿದ್ದು, ದೇವೇಗೌಡರ ಕೋಣೆಯಲ್ಲಿ ಒಬ್ಬ ವ್ಯಕ್ತಿಯನ್ನು ಸದಾ ನೋಡಿಕೊಳ್ಳಲು ಇರಿಸಿದ್ದಾರೆ.

ರೇವಣ್ಣ ಕೂಡ ಕಣ್ಮರೆ

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ (Pen Drive Case) ಪ್ರಕರಣದಲ್ಲಿ ರೇವಣ್ಣಗೆ ಎಸ್ಐಟಿ ಮೂರನೇ ನೋಟೀಸ್ ಹಾಗೂ ಕೊನೆಗೆ ಲುಕೌಟ್ ನೋಟೀಸ್ (Lookout notice) ಜಾರಿಯಿಂದಾಗಿ ಮತ್ತಷ್ಟು ಸಂಕಷ್ಟ ಎದುರಾಗಿದೆ. ರೇವಣ್ಣ ಅವru ವಿದೇಶಕ್ಕೆ ಹಾರಬಹುದು ಎಂಬ ಮುಂದಾಲೋಚನೆಯಿಂದ ಲುಕೌಟ್‌ ನೋಟೀಸ್‌ ಜಾರಿ ಮಾಡಲಾಗಿದ್ದು, ಈಗ ಅವರು ಯಾವುದೇ ಏರ್‌ಪೋರ್ಟ್‌ ಮೂಲಕ ಹಾದು ಹೋಗಲು ಸಾಧ್ಯವಿಲ್ಲದಾಗಿದೆ.

ವಿದೇಶದಲ್ಲಿದ್ದುಕೊಂಡು ಲೈಂಗಿಕ ಹಗರಣ (Pen drive case) ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ (Prajwal Revanna Case) ವಿರುದ್ಧ ರೆಡ್ ಕಾರ್ನರ್ ನೊಟೀಸ್ (Red Corner Notice) ಜಾರಿ ಮಾಡಲು ಎಸ್‌ಐಟಿ (SIT) ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಇನ್ನೊಂದೆಡೆ ಭವಾನಿ ರೇವಣ್ಣ ಅವರಿಗೂ ವಿಚಾರಣೆಗೆ ಎಸ್‌ಐಟಿ ಬುಲಾವ್‌ ಮಾಡಿದೆ.

ಸದ್ಯ ರೇವಣ್ಣ ವಿರುದ್ಧ ತನಿಖೆಗೆ ಒಳಗಾಗಬೇಕಾದ ಗಂಭೀರ ಆರೋಪವಿದೆ. ಮೈಸೂರಿನಲ್ಲಿ ಸಂತ್ರಸ್ತೆಯ ಪುತ್ರ ರೇವಣ್ಣ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲು ಮಾಡಿದ್ದಾರೆ. ಹೀಗಾಗಿ ರೇವಣ್ಣಗೆ ಎಸ್ಐಟಿ ಮುಂದೆ ಹಾಜರಾಗಲು ನೋಟೀಸ್ ನೀಡಲಾಗಿದೆ. ಆದರೆ ಕಳೆದ ಎರಡು ದಿನಗಳಿಂದ ರೇವಣ್ಣ ನಾಪತ್ತೆಯಾಗಿದ್ದಾರೆ. ಅವರು ಅತ್ತ ಎಚ್.ಡಿ ದೇವೇಗೌಡರ ನಿವಾಸದಲ್ಲಿಯಾಗಲೀ, ಈತ್ತ ಬಸವನಗುಡಿಯ ತಮ್ಮ ನಿವಾಸದಲ್ಲಿಯಾಗಲೀ, ಹಾಸನದ ಎರಡು ನಿವಾಸಗಳಲ್ಲಾಗಲೀ ಇಲ್ಲ.

ಹೀಗಾಗಿ ಅವರು ಬಂಧನದ ಭೀತಿಯಿಂದ ಅಜ್ಞಾತ ಸ್ಥಳಕ್ಕೆ ಎಸ್ಕೇಪ್ ಆಗಿರಬಹುದು ಎಂದು ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಸದ್ಯ ರೇವಣ್ಣ ಅವರಿಗೆ ಬಂಧನದ ಭಯ ಕಾಡುತ್ತಿದೆ. ಕಿಡ್ನಾಪ್ ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ತೀರ್ಪು ನೋಡಿಕೊಂಡು ನಿರ್ಧಾರ ಮಾಡಲಿದ್ದಾರೆ. ಜಾಮೀನು ಸಿಕ್ಕರೆ ಎಸ್ಐಟಿ ಮುಂದೆ ಬರುವುದು, ಇಲ್ಲವೇ ಮೇಲಿನ ಕೋರ್ಟ್ ಮೊರೆ ಹೋಗೋಣ ಎಂದು ರೇವಣ್ಣ ಪರ ವಕೀಲರು ಹೇಳಿದ್ದಾರೆ.

ಇದನ್ನೂ ಓದಿ: Prajwal Revanna Case: ಹಾಸನ ಸಂಸದರ ನಿವಾಸದ ಗೇಟಿಗೆ ಬೀಗ; ನಿವಾಸದ ಕೀ ನಾಪತ್ತೆ! ಎಚ್‌ಡಿ ರೇವಣ್ಣ ಕೂಡ ಗಾಯಬ್!‌

Continue Reading

ಮಳೆ

Accident News: ಬಿರುಗಾಳಿಗೆ ಕೂಲಿಂಗ್ ಶೀಟ್ ತಲೆ ಮೇಲೆ ಬಿದ್ದು ವ್ಯಕ್ತಿ ಸಾವು; ಬಿಸಿಲಾಘಾತಕ್ಕೆ ಇಬ್ಬರು ಬಲಿ

Accident News: ಪ್ರತ್ಯೇಕ ಕಡೆಗಳಲ್ಲಿ ನಡೆದ ಅವಘಡದಲ್ಲಿ ಮೂವರು ಮೃತಪಟ್ಟಿದ್ದಾರೆ. ಮೈಸೂರಲ್ಲಿ ಮಳೆ ಸಹಿತ ಜೋರಾಗಿ ಬೀಸಿದ ಗಾಳಿಗೆ ಕೂಲಿಂಗ್‌ ಶೀಟ್‌ ತಲೆ ಮೇಲೆ ಬಿದ್ದು ವ್ಯಕ್ತಿಯೊಬ್ಬರು ದಾರುಣ ಅಂತ್ಯ ಕಂಡಿದ್ದಾರೆ. ಇತ್ತ ರಾಯಚೂರಲ್ಲಿ ರಣ ಬಿಸಿಲಿಗೆ ಇಬ್ಬರು ಬಲಿಯಾಗಿದ್ದಾರೆ.

VISTARANEWS.COM


on

By

Accident news
Koo

ಮೈಸೂರು/ರಾಯಚೂರು: ನಿನ್ನೆ ಶುಕ್ರವಾರ ಬೀಸಿದ ಬಿರುಗಾಳಿಗೆ ಕೂಲಿಂಗ್‌ ಶೀಟ್‌ ಕಳಚಿ ವ್ಯಕ್ತಿಯೊಬ್ಬರ ತಲೆ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಕುಸಿದು ಬಿದ್ದ ವ್ಯಕ್ತಿ ಸ್ಥಳದಲ್ಲೇ (Accident News) ಮೃತಪಟ್ಟಿದ್ದಾರೆ. ಮೈಸೂರಿನ ಆಲನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಕುಮಾರ್ (34) ಮೃತ ದುರ್ದೈವಿ.

ಮಾರಶೆಟ್ಟಹಳ್ಳಿ ಗ್ರಾಮದ ನಿವಾಸಿಯಾದ ಶಿವಕುಮಾರ್‌ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದ. ಈ ವೇಳೆ ಜೋರಾಗಿ ಬಿರುಗಾಳಿ ಬೀಸಿದ್ದು, ಕೂಲಿಂಗ್ ಶೀಟ್ ನೇರವಾಗಿ ಶಿವಕುಮಾರ್‌ ತಲೆ ಮೇಲೆ ಬಿದ್ದಿದೆ. ಪರಿಣಾಮ ಗಂಭೀರ ಗಾಯಗೊಂಡ ಶಿವಕುಮಾರ್‌ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇಬ್ಬರನ್ನು ಬಲಿ ಪಡೆದ ರಾಯಚೂರು ರಣ ಬಿಸಿಲು

ಒಂದು ಕಡೆ ಬಿರುಗಾಳಿ ಸಹಿತ ಮಳೆ ಮತ್ತೊಂದು ಕಡೆ ರಣ ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ರಾಯಚೂರಿನಲ್ಲಿ ಪ್ರತ್ಯೇಕ ಕಡೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅತಿಯಾದ ಬಿಸಿಲಿನ ತಾಪಮಾನದಿಂದ ಮಲ್ಲಯ್ಯ ಹಾಗೂ ಆಂಜನೇಯ ಎಂಬುವವರು ಮೃತಪಟ್ಟಿದ್ದಾರೆ.

ರಾಯಚೂರಿನ ಮಸ್ಕಿ ಪಟ್ಟಣದಲ್ಲಿ ಬಿಸಿಲಿನ ತಾಪಕ್ಕೆ ಬಿಎಂಟಿಸಿ ಬಸ್ ಕಂಡಕ್ಟರ್ ಮೃತಪಟ್ಟಿದ್ದಾರೆ. ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ಮಲ್ಲಯ್ಯ (45) ಬಿಸಿಲಿನ ತಾಪ ತಾಳಲಾರದೆ ಕುಸಿದು ಬಿದ್ದಿದ್ದು, ಪ್ರಾಣಪಕ್ಷಿ ಹಾರಿ ಹೋಗಿದೆ.

ಮಲ್ಲಯ್ಯ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ರಜೆ ಮೇಲೆ ಸ್ವಗ್ರಾಮ ಮಸ್ಕಿಯ ಹಸಮಕಲ್‌ಗೆ ಬಂದಿದ್ದರು. ಮಧ್ಯಾಹ್ನ ಮಸ್ಕಿ ಪಟ್ಟಣದಲ್ಲಿ ಕಿರಾಣಿ ಸಾಮಾನು ತರಲು ಬಂದಾಗ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಆರೋಗ್ಯವಾಗಿದ್ದ ವ್ಯಕ್ತಿ ಬಿಸಿಲತಾಪಕ್ಕೆ ಜೀವಬಿಟ್ಟಿದ್ದಾರೆ.

ಇತ್ತ ರಾಯಚೂರು ತಾಲೂಕಿನ ಜಾಲಿಬೆಂಚಿಯಲ್ಲೂ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಜಾಲಿಬೆಂಚಿಯ ಆಂಜನೇಯ (45) ಮೃತ ದುರ್ದೈವಿ. ಆಂಜನೇಯ ಹೊಲದಿಂದ ಕೆಲಸ ಮುಗಿಸಿ ಮನೆಗೆ ಬರುವಾಗ ಸುಸ್ತಾಗಿ ಬಿದ್ದು ಮೃತಪಟ್ಟಿದ್ದಾರೆ. ನಿತ್ಯ 44-46°C ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ಅನಾವಶ್ಯಕವಾಗಿ ಹೊರಗೆ ಓಡಾಡದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಮೈಸೂರಿನಲ್ಲಿ ಏಕಾಏಕಿ ಹೊತ್ತಿ ಉರಿದ ಬೈಕ್

ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ನಿನ್ನೆ ಶುಕ್ರವಾರ ಮಧ್ಯಾಹ್ನ ಏಕಾಏಕಿ ಬೈಕ್‌ವೊಂದು ಹೊತ್ತಿ ಉರಿದಿದೆ. ಬಿಸಿಲ ತಾಪಕ್ಕೆ ಇದ್ದಕ್ಕಿದ್ದಂತೆ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್‌ ಯಾರಿಗೂ ಪ್ರಾಣಹಾನಿ ಆಗಿಲ್ಲ.

ಇದನ್ನೂ ಓದಿ: Drama Artist: ಶಕುನಿಯಾಗಿ ಗರ್ಜಿಸುತ್ತಿರುವಾಗಲೇ ಹೃದಯಾಘಾತ; ಮೊಬೈಲ್‌ನಲ್ಲಿ ಸೆರೆಯಾಯ್ತು ಕಲಾವಿದನ ಕೊನೆಯ ಕ್ಷಣ

ರಾಯಚೂರಲ್ಲಿ ಬಿಸಿಲಾಜ್ಞೆ; ಮಧ್ಯಾಹ್ನ 12-4ರ ವರೆಗೆ ಹೊರಬರದಂತೆ ಡಿಸಿ ಕಟ್ಟಾಜ್ಞೆ!

ರಾಯಚೂರು/ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಉರಿ ಬಿಸಿಲು ಜನರನ್ನು ಸುಸ್ತು (Karnataka Weather Forecast) ಮಾಡಿದೆ. ಅದರಲ್ಲೂ ಉತ್ತರ ಕರ್ನಾಟಕದ ಮಂದಿ ಕುಂತರೂ ನಿಂತರೂ ಬೆವರು ಸುರಿಸುವಂತಾಗಿದೆ. ಬಿಸಿಲಿನ ಆಜ್ಞೆಗೆ ಜನರು ಹೊರಬರಲು ಆಗದೆ ಅಘೋಷಿತ ಬಂದ್‌ ನಿರ್ಮಾಣವಾಗಿದೆ. ಸದ್ಯ ಅತಿಯಾದ ಬಿಸಿಲಿಗೆ ತತ್ತರಿಸಿದ ರಾಯಚೂರು ಜನರು ಮಧ್ಯಾಹ್ನ ಹೊರಗೆ ಬಾರದಂತೆ ರಾಯಚೂರು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.

ಮುಂದಿನ ಒಂದು ವಾರ ಮತ್ತಷ್ಟು ಗರಿಷ್ಠ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ 44 ರಿಂದ 46 ಡಿ.ಸೆ ನಷ್ಟು ತಾಪಮಾನ ದಾಖಲಾಗುತ್ತಿದೆ. ಇದರಿಂದ ಅನಾರೋಗ್ಯ ಸಮಸ್ಯೆ ಜತೆಗೆ ಬಿಸಿಲಾಘಾತಕ್ಕೆ ಸಾವು ಸಂಭವಿಸಬಹುದು. ಹಾಗಾಗಿ ಮಧ್ಯಾಹ್ನ 12 ರಿಂದ 4 ಗಂಟೆವರೆಗೂ ಹೊರಗೆ ಹೋಗದಿರಿ ಎಂದು ಡಿಸಿ ಎಲ್ ಚಂದ್ರಶೇಖರ ನಾಯಕ್ ಸಲಹೆ ನೀಡಿದ್ದಾರೆ. ಹೊರಗೆ ಹೋಗಲೇಬೇಕಾದ ಅವಶ್ಯಕತೆ ಇದ್ದರೆ ಶುದ್ಧ ಕುಡಿಯುವ ನೀರಿನ ಬಾಟಲ್ ಕೊಂಡೊಯ್ಯಿರಿ. ಟೋಪಿ ಅಥವಾ ಛತ್ರಿ ಬಳಸಿ, ಆದಷ್ಟು ನೆರಳಿನ ಪ್ರದೇಶಗಳಲ್ಲಿ ಓಡಾಡಿ. ಬಾಯಾರಿಕೆ ಆಗದಿದ್ದರೂ ಆಗಾಗ ನೀರು ಕುಡಿಬೇಕು. ಯಾವಾಗಲೂ ನಿಮ್ಮ ಬಳಿ ನೀರು ಇಟ್ಟುಕೊಂಡಿರಿ ಎಂದು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ ನಾಯಕ್ ಸಲಹೆ ನೀಡಿದ್ದಾರೆ. ಹಾಗೆಯೇ ಮನೆ- ಕಚೇರಿಗಳಲ್ಲಿ ಪಕ್ಷಿಗಳಿಗೂ ನೀರನ್ನು ತುಂಬಿ ಇಡಿ ಎಂದಿದ್ದಾರೆ.

karnataka weather forecast

ತುಮಕೂರಲ್ಲಿ ಬಿಸಿ ಗಾಳಿ; ಹಸುಗಳಿಗೆ ತೇವದ ಗೋಣಿಚೀಲದ ಹೊದಿಕೆ

ತುಮಕೂರು ಜಿಲ್ಲೆಯಲ್ಲೂ ಬಿಸಿ ಗಾಳಿಯು ಆತಂಕವನ್ನು ಹೆಚ್ಚಿಸಿದೆ. ಪಾವಗಡ ತಾಲೂಕಿನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಬಿಸಿಲ ಬೇಗೆಗೆ ಪ್ರಾಣಿ ಪಕ್ಷಿಗಳೂ ಹೈರಾಣಾಗಿವೆ. ಇತ್ತ ರೈತರು ದನ ಕರುಗಳಿಗೆ ಒದ್ದೆ ಮಾಡಿದ ಗೋಣಿಚೀಲ ಹಾಕುತ್ತಿದ್ದಾರೆ. ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆಯಲ್ಲಿ ಹಸುಗಳಿಗೆ ತೇವದ ಗೋಣಿಚೀಲದ ಹೊದಿಕೆ ಹಾಕಿ, ತಂಪು ಮಾಡುತ್ತಿದ್ದಾರೆ.

ಬಿಸಿಲಿನ ಹೊಡೆತ- ಚಿಕ್ಕಬಳ್ಳಾಪುರ ಪ್ರವಾಸಿತಾಣ ಖಾಲಿ ಖಾಲಿ

ಇತ್ತ ಚಿಕ್ಕಬಳ್ಳಾಪುರದಲ್ಲೂ ಅತಿಯಾದ ತಾಪಮಾನದಿಂದಾಗಿ ಪ್ರವಾಸಿ ತಾಣಗಳು ಪ್ರವಾಸಿಗರು ಇಲ್ಲದೆ ಬಣಗುಡುತ್ತಿದೆ. ನಂದಿ ಬೆಟ್ಟ, ಈಶಾ ಫೌಂಡೇಶನ್ ಜನರಿಲ್ಲದೆ ಖಾಲಿ ಖಾಲಿಯಾಗಿದೆ. ಬಿಸಿಲಿನ ತಾಪಕ್ಕೆ ಜನರು ಮನೆ ಬಿಟ್ಟು‌ ಕದಲದ ಕಾರಣಕ್ಕೆ ಮಧ್ಯಾಹ್ನ 12 ಗಂಟೆ ಬಳಿಕ ಚಿಕ್ಕಬಳ್ಳಾಪುರದಲ್ಲಿ ಆಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಪ್ರತಿನಿತ್ಯ ಪ್ರವಾಸಿಗರಿಂದ ಗಿಜುಗುಡುತಿದ್ದ ನಂದಿಬೆಟ್ಟ ಖಾಲಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
IPL 2024
ಕ್ರೀಡೆ6 mins ago

IPL 2024: ಕೆಎಸ್‌ಸಿಎಗೆ ಮತ್ತೆ ಸಂಕಷ್ಟ; ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲ ನೀರಿನ ಮೂಲದ ವಿವರ ಕೇಳಿದ ಎನ್‌ಜಿಟಿ!

Amith Shah
ದೇಶ16 mins ago

Amit Shah: ಕಾಂಗ್ರೆಸ್ ಹಿಂದುಳಿದ, ಪರಿಶಿಷ್ಟರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಿದೆ; ನಾವು ತೆಗೆದುಹಾಕುತ್ತೇವೆ: ಅಮಿತ್ ಶಾ

Bribery Case in Bengaluru news
ಬೆಂಗಳೂರು18 mins ago

Bribery Case : ಕಾಸಿನ ಜತೆಗೆ ಎಣ್ಣೆ ಕೊಟ್ರಷ್ಟೇ ಫೈಲ್‌ ಮೂಮ್ಮೆಂಟ್‌ ; ಇದು ಕುಡುಕ ಪಂಚಾಯಿತಿ ಪಿಡಿಓ ಲಂಚಾವತಾರ

HD Deve gowda prajwal revanna case
ಬೆಂಗಳೂರು21 mins ago

Prajwal Revanna Case: ಮೊಮ್ಮಗನ ದೆಸೆಯಿಂದ ದೇವೇಗೌಡರ ಆರೋಗ್ಯ ಏರುಪೇರು, ಕುಟುಂಬದಿಂದ ತೀವ್ರ ನಿಗಾ

MP High Court
ದೇಶ29 mins ago

MP High Court: ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ; ಮಹತ್ವದ ತೀರ್ಪು ಪ್ರಕಟಿಸಿದ ಕೋರ್ಟ್‌

Aishwarya Rajinikanth new house priceless reaction Rajinikanth
ಕಾಲಿವುಡ್35 mins ago

Aishwarya Rajinikanth: ಮಗಳ ಹೊಸ ಮನೆ ಕಂಡು ಹುಬ್ಬೇರಿಸಿದ ರಜನಿಕಾಂತ್!

Josh Baker
ಕ್ರೀಡೆ37 mins ago

Josh Baker: 6 ವಿಕೆಟ್‌ ಪಡೆದು ಸ್ನೇಹಿತನ ಮನೆಯಲ್ಲಿ ಶವವಾಗಿ ಪತ್ತೆಯಾದ ಇಂಗ್ಲೆಂಡ್ ಕ್ರಿಕೆಟಿಗ

International Firefighters Day 2024
ಪ್ರಮುಖ ಸುದ್ದಿ53 mins ago

International Firefighters Day 2024: ಇಂದು ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ; ಜೀವ ರಕ್ಷಕರಿಗೊಂದು ಸಲಾಂ

Nijjar Killling
ವಿದೇಶ55 mins ago

Nijjar Killing: ನಿಜ್ಜರ್‌ ಹಂತಕರ ಫೊಟೋ ರಿಲೀಸ್‌; ಭಾರತದತ್ತ ಮತ್ತೆ ಬೊಟ್ಟು ಮಾಡಿದ ಕೆನಡಾ

Vettaiyan Movie Rajinikanth And Amitabh Bachchan Poses Together
ಸಿನಿಮಾ57 mins ago

Vettaiyan Movie: ಸೂಟು ಬೂಟು ಹಾಕಿಕೊಂಡು ಸ್ಟೈಲಿಶ್‌ ಆಗಿ ಪೋಸ್‌ ಕೊಟ್ಟ ರಜನಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ20 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌