Sleep Awareness Week: ನಿದ್ದೆಯ ಹೊತ್ತಿನಲ್ಲಿ ಜಾಗೃತರಾಗಿ ಇರಬೇಡಿ! - Vistara News

ಆರೋಗ್ಯ

Sleep Awareness Week: ನಿದ್ದೆಯ ಹೊತ್ತಿನಲ್ಲಿ ಜಾಗೃತರಾಗಿ ಇರಬೇಡಿ!

ಪ್ರತಿ ವರ್ಷ ಮಾರ್ಚ್‌ 12ರಿಂದ 18ರವರೆಗೆ ನಿದ್ದೆ ಜಾಗೃತಿ ಸಪ್ತಾಹ (Sleep Awareness Week) ಆಚರಿಸಲಾಗುತ್ತದೆ. ಅಂದರೆ, ನಿದ್ದೆ ಬಿಟ್ಟು ಜಾಗೃತರಾಗಿರುವಂತಿಲ್ಲ ಎಂಬ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇದನ್ನು ಆಚರಿಸಲಾಗುತ್ತದೆ.

VISTARANEWS.COM


on

Sleep Awareness Week
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಹಾಭಾರತದ ಅರ್ಜುನನ ಕಥೆ ಹೇಳುವಾಗ, ಆತ ನಿದ್ದೆಯನ್ನು (Sleep Awareness Week) ನಿಯಂತ್ರಿಸಿಕೊಳ್ಳಬಲ್ಲವನಾಗಿದ್ದ ಎಂಬಂತೆ ಚಿತ್ರಿಸಲಾಗುತ್ತದೆ. ಅರ್ಜುನನದ್ದೇನು ಮಹಾ! ಯುದ್ಧ ಅಥವಾ ಇನ್ಯಾವುದೋ ಅಗತ್ಯ ಸಂದರ್ಭಗಳಲ್ಲಿ ಮಾತ್ರವೇ ಆತನಿಗೆ ನಿದ್ದೆಯನ್ನು ಗೆಲ್ಲುವ ಅಗತ್ಯ ಇರುತ್ತಿತ್ತು. ಈಗಿನ ಜನರನ್ನು ನೋಡಿ, ಅವರಿಗೆ 365 ದಿನಗಳೂ ಒಂದಿಲ್ಲೊಂದು ಯುದ್ಧವೇ. ಹಾಗಾಗಿ ದಿನಾ ನಿದ್ದೆ ಬಿಡುತ್ತಾರೆ; ಅಥವಾ ನಿದ್ದೆಯೇ ಅವರ ಬಳಿ ಸುಳಿಯುವುದಿಲ್ಲ. ಆ ಮಟ್ಟಿಗೆ ಈಗಿನವರೆಲ್ಲಾ ವಿಜಯರೇ! ಆದರೆ ನಿದ್ದೆಯಿಲ್ಲದೆ ಕಿರಿಯ ವಯೋಮಾನದಲ್ಲೇ ಸಾವಿಗೀಡಾಗುತ್ತಿರುವುದನ್ನು ನೋಡಿದಾಗ ವಿಜಯ ಯಾರದ್ದು ಎಂಬ ಪ್ರಶ್ನೆ ಏಳುತ್ತದೆ.

ಪ್ರತಿ ವರ್ಷ ಮಾರ್ಚ್‌ ತಿಂಗಳ 12ನೇ ತಾರೀಖಿನಿಂದ 18ರವರೆಗೆ ನಿದ್ದೆ ಜಾಗೃತಿ ಸಪ್ತಾಹವಿದು. ಅಂದರೆ, ನಿದ್ದೆ ಬಿಟ್ಟು ಜಾಗೃತರಾಗಿರುವಂತಿಲ್ಲ ಎಂಬ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇದನ್ನು ಆಚರಿಸಲಾಗುತ್ತದೆ. ನಿದ್ದೆ ತಾನೇ? ಯಾವಾಗಲಾದರೂ, ಎಷ್ಟೊತ್ತಿಗಾದರೂ ಮಾಡಿದರಾಯಿತು ಎನ್ನುವಂತಿಲ್ಲ. ಕಾರಣ, ನಮ್ಮ ದೇಹಕ್ಕೆ ವಿಶ್ರಾಂತಿಗೆಂದೇ ಒಂದು ಲಯವಿದ್ದು, ಸರ್ಕಾಡಿಯನ್‌ ರಿದಂ ಎಂದು ಅದನ್ನು ಕರೆಯಲಾಗುತ್ತದೆ. ಅದೇ ಲಯವಾಗಿಬಿಟ್ಟರೆ ಆರೋಗ್ಯವೇ ಏರುಪೇರು. ತಜ್ಞರು ಹೇಳುವ ಪ್ರಕಾರ, ಆಹಾರದ ಕೊರತೆಯಿಂದ ಸಾಯುವುದಕ್ಕಿಂತ ಕ್ಷಿಪ್ರವಾಗಿ ನಿದ್ದೆಯ ಕೊರತೆಯಿಂದ ಸಾವು ಬರುತ್ತದಂತೆ. ಹಾಗಾಗಿ ನಿದ್ದೆಯ ಬಗ್ಗೆ ಅರಿವಿನ ಸಪ್ತಾಹಕ್ಕೆ ಮಹತ್ವ ಒದಗಿದೆ.

ನಿದ್ದೆ ಸಮೀಕ್ಷೆ

ಫಿಟ್‌ನೆಸ್‌ ಸಂಸ್ಥೆಯೊಂದು ಇತ್ತೀಚಿನ ವರ್ಷಗಳಲ್ಲಿ ವಿಸ್ತೃತವಾಗಿ ನಿದ್ದೆಯ ಬಗ್ಗೆ ಸಮೀಕ್ಷೆ ನಡೆಸಿದೆ. ಇದರಲ್ಲಿ ನಿದ್ದೆಯ ಬಗ್ಗೆ ಜನರಲ್ಲಿರುವ ಕೆಲವು ಆತಂಕಕಾರಿ ಪ್ರವೃತ್ತಿಗಳು ಬೆಳಕಿಗೆ ಬಂದಿದ್ದು, ಇತ್ತೀಚಿನ ವರ್ಷಗಳಲ್ಲಿ ಆರೋಗ್ಯಗಳು ಕುಸಿಯುತ್ತಿರುವುದೇಕೆ ಎಂಬ ಪ್ರಶ್ನೆಗೆ ಪರೋಕ್ಷ ಉತ್ತರ ದೊರೆತಂತಿದೆ. ಶೇ. 38ರಷ್ಟು ಭಾರತೀಯರು ತಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡಿಕೊಂಡೇ ನಿದ್ದೆಗೆಡುತ್ತಾರಂತೆ. ಹಾಗೆಯೇ, ಶೇ. 87 ಮಂದಿಗೆ ಮಲಗುವ ಮೊದಲು ತಮ್ಮ ಫೋನ್‌ ನೋಡುವುದು ಮಾಮೂಲಿ. ನಿದ್ದೆಗೆ ಜಾರುವ ಮುನ್ನ ಅಥವಾ ಹಾಸಿಗೆಯಲ್ಲಿ ಫೋನ್‌ ಹಿಡಿಯುವುದು ಸರಿಯಲ್ಲ ಎಂಬುದನ್ನು ತಾತ್ವಿಕವಾಗಿ ಎಲ್ಲರೂ ಒಪ್ಪಿದರೂ, ಪಾಲಿಸುವವರು ನಿಜಕ್ಕೂ ವಿರಳ.

ಕಳೆದ ಆರು ವರ್ಷಗಳಿಂದ ನಡೆಸಲಾದ ಈ ಸಮೀಕ್ಷೆಯಲ್ಲಿ 2.5 ಲಕ್ಷ ಮಂದಿಯನ್ನು ಮಾತಾಡಿಸಲಾಗಿತ್ತು. ಅದರಲ್ಲೂ ಕಳೆದೊಂದು ವರ್ಷದಲ್ಲಿ ಸುಮಾರು 10,000 ಮಂದಿ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಭಾರತದ ಎಲ್ಲಾ ನಗರಗಳು ಮತ್ತು ಎಲ್ಲಾ ವಯೋಮಾನ, ಲಿಂಗ ಇತ್ಯಾದಿಗಳನ್ನು ಈ ಸಮೀಕ್ಷೆ ಒಳಗೊಂಡಿತ್ತು. ಈ ಸಮೀಕ್ಷೆಯ ಪ್ರಕಾರ, ರಾತ್ರಿ 11 ಗಂಟೆಯ ಒಳಗೆ ನಿದ್ದೆ ಮಾಡುವವರು ಶೇ. 45ರಷ್ಟು ಜನ ಮಾತ್ರ. ಆದರೆ ಕಳೆದ ಸಾಲಿನಲ್ಲಿ ಈ ಪ್ರಮಾಣ ಮತ್ತೂ ಕಡಿಮೆಯಿದ್ದು, ಶೇ. 34ರಷ್ಟು ಮಂದಿಯಷ್ಟೇ ಬೇಗ ಮಲಗುವವರಾಗಿದ್ದರು. ಬೇಗ ಮಲಗುವವರ ಪ್ರಮಾಣ ಈ ವರ್ಷಕ್ಕೆ ಸುಧಾರಿಸಿದರೂ, ಏಳುವಾಗ ದೇಹ-ಮನಸ್ಸುಗಳು ಉಲ್ಲಾಸದಿಂದ ಇರುತ್ತವೆ ಎಂದವರ ಸಂಖ್ಯೆ ಇನ್ನಷ್ಟು ಕುಸಿದಿದೆ.

Sleep Awareness Week

ನಿದ್ದೆ ಮತ್ತು ಅದರ ಸುತ್ತಮುತ್ತಲಿನ ಅಭ್ಯಾಸಗಳು ಆರೋಗ್ಯಕರವಾಗಿ ಉಳಿದಿಲ್ಲ ಎಂಬ ಬಗ್ಗೆ ಸಮೀಕ್ಷೆಯ ವರದಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಹಿಳೆಯರಿಗಿಂತ ಪುರುಷರು ಏಳುವಾಗ ಹೆಚ್ಚು ಉಲ್ಲಾಸದ ಅನುಭವವಾಗುವ ಬಗ್ಗೆ ಹೇಳಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ಈ ವರ್ಷದಲ್ಲಿ ಆಫೀಸುಗಳಲ್ಲಿ ಜನರಿಗೆ ನಿದ್ದೆ ಬರುವ ಪ್ರಮಾಣ ಶೇ. 21ರಷ್ಟು ಹೆಚ್ಚಾಗಿದೆಯಂತೆ. ಕೆಲಸದ ವೇಳೆಯಲ್ಲಿ ಆಯಾಸದಿಂದ ನಿದ್ದೆ ಬರುತ್ತದೆ ಎಂದು ಶೇ. 59 ಪುರುಷರು ಹೇಳಿದರೆ, ಮಹಿಳೆಯರಲ್ಲಿ ಈ ಪ್ರಮಾಣ ಶೇ. 67ರಷ್ಟು. ಅಂದರೆ, ಪುರುಷರಿಗಿಂತ ಮಹಿಳೆಯರೇ ಹೆಚ್ಚು ನಿದ್ದೆಗೆಡುತ್ತಿದ್ದಾರೆ ಎನ್ನಬಹುದೇನೊ.

ಒಂದು ಭರವಸೆಯ ಅಂಶವೆಂದರೆ, ಯುವಜನತೆ, ಅಂದರೆ 18ಕ್ಕಿಂತ ಮೇಲ್ಪಟ್ಟವರಲ್ಲಿ ನಿದ್ದೆಯ ಅಗತ್ಯದ ಬಗ್ಗೆ ಜಾಗೃತಿ ಹೆಚ್ಚಿದೆ. ಈ ವಯೋಮಾನದವರಲ್ಲಿ ರಾತ್ರಿ 10 ಗಂಟೆಗೆ ಮೊದಲು ಮಲಗುವ ಅಭ್ಯಾಸವು ಕಳೆದ ವರ್ಷಕ್ಕಿಂತ ಈ ವರ್ಷ ಶೇ. 65ರಷ್ಟು ಹೆಚ್ಚಿದೆಯಂತೆ. ಅದರಲ್ಲೂ 18ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಬೇಗ ಮಲಗುವ ಅಭ್ಯಾಸ ಶೇ. 200ರಷ್ಟು ವೃದ್ಧಿಸಿದೆಯಂತೆ. ರಾತ್ರಿ ವೇಳೆ ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಸಂಖ್ಯೆ ಹೆಚ್ಚುತ್ತಿದ್ದು, ಸ್ಮಾರ್ಟ್‌ ಫೋನುಗಳು ಬೀರುವ ಕಿರಣಗಳು ಮತ್ತು ಜಾಲತಾಣಗಳಲ್ಲಿ ನೋಡುವ ವಿಷಯಗಳಿಂದಾಗಿ ಜನ ಇನ್ನಷ್ಟು ಮತ್ತಷ್ಟು ನಿದ್ರಾಹೀನರಾಗುತ್ತಿದ್ದಾರೆ.

ಇದನ್ನೂ ಓದಿ: Good Sleep Benefits: ಒಳ್ಳೆಯ ನಿದ್ದೆಯ ಲಾಭಗಳೇನು ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Health Insurance: ಕ್ಯಾಶ್​ಲೆಸ್​ ಕ್ಲೈಮ್‌ ಗಳಿಗೆ ಆಸ್ಪತ್ರೆಯಲ್ಲಿ ಇನ್ನು ಹೆಚ್ಚು ಹೊತ್ತು ಕಾಯಬೇಕಿಲ್ಲ; ಇಲ್ಲಿದೆ ಹೊಸ ನಿಯಮ

ಮೂರು ಗಂಟೆಗಳ ಒಳಗೆ ಆಸ್ಪತ್ರಗಳಲ್ಲಿ ನಗದು ರಹಿತ ಆರೋಗ್ಯ ವಿಮಾ (Health Insurance) ಕ್ಲೈಮ್ ಗಳನ್ನು ಸಲ್ಲಿಸಬೇಕು ಎಂದು ಐಆರ್ ಡಿಐಎ ಸೂಚಿಸಿದೆ. ಹಿಂದಿನ 55 ಆದೇಶಗಳನ್ನು ರದ್ದುಗೊಳಿಸಿ ಒಂದು ಸಮಗ್ರ ಆದೇಶವನ್ನು ಹೊರಡಿಸಲಾಗಿದೆ. ಇದರಲ್ಲಿ ಮಾಡಿರುವ ಬದಲಾವಣೆಗಳು ಇಂತಿವೆ.

VISTARANEWS.COM


on

By

Health Insurance
Koo

ಬೆಂಗಳೂರು: ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (IRDAI) ಆರೋಗ್ಯ ವಿಮಾ ಪಾಲಿಸಿಗಳ (Health Insurance) ಮಾನದಂಡಗಳಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. 55 ಸುತ್ತೋಲೆಗಳನ್ನು ರದ್ದುಗೊಳಿಸಿ ಆರೋಗ್ಯ ವಿಮಾ ಉತ್ಪನ್ನಗಳ ಕುರಿತು ಸಮಗ್ರವಾಗಿ ಒಂದು ಸುತ್ತೋಲೆ ಪ್ರಕಟಿಸಿದೆ. ಪ್ರಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ (hospital discharge) ವಿನಂತಿ ಸ್ವೀಕರಿಸಿದ ಕ್ಯಾಶ್​ಲೆಸ್​ ಕ್ಲೈಮ್ ಗಳನ್ನು ಮೂರು ಗಂಟೆಗಳ ಒಳಗೆ ಇತ್ಯರ್ಥಗೊಳಿಸಬೇಕು ಐಆರ್ ಡಿಎಐ ಸೂಚಿಸಿದೆ.

ಯಾವುದೇ ಸಂದರ್ಭದಲ್ಲಿ ಪಾಲಿಸಿದಾರರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಹೆಚ್ಚು ಕಾಯುವಂತೆ ಮಾಡಬಾರದು. ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ ಆಸ್ಪತ್ರೆಯಿಂದ ವಿಧಿಸಲಾದ ಹೆಚ್ಚುವರಿ ಮೊತ್ತವನ್ನು ವಿಮಾದಾರರು ಭರಿಸಬೇಕಾಗುತ್ತೆ ಎಂದು ಕಂಪನಿ ತಿಳಿಸಿದೆ. ತುರ್ತು ಸಂದರ್ಭಗಳಲ್ಲಿ ಬರುವ ನಗದು ರಹಿತ ವಿನಂತಿಯನ್ನು ವಿಮಾದಾರರು ತಕ್ಷಣವೇ ನಿರ್ಧರಿಸಬೇಕು ಎಂದು ಐಆರ್ ಡಿ ಎಐ ಹೇಳಿದೆ.

2024ರ ಜುಲೈ 31ರೊಳಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ವಿಮಾದಾರರಿಗೆ ಆದೇಶಿಸಿರುವ ಐಆರ್ ಡಿಎಐ ನಗದು ಕ್ಯಾಶ್​ಲೆಸ್​​ ವಿನಂತಿಗಳನ್ನು ಸ್ವೀಕರಿಸಲು ವಿಮಾದಾರರು ಆಸ್ಪತ್ರೆಯಲ್ಲಿ ಹೆಲ್ಪ್​ ಡೆಸ್ಕ್‌ಗಳನ್ನು ಸಹ ವ್ಯವಸ್ಥೆಗೊಳಿಸಬಹುದು ಎಂದು ಹೇಳಿದೆ.


ಇತರ ಕೆಲವು ಬದಲಾವಣೆಗಳು ?

ಲಭ್ಯವಿರುವ ಉತ್ಪನ್ನಗಳ ಮೂಲಕ ಪಾಲಿಸಿದಾರರಿಗೆ ವಿಮಾ ಕಂಪನಿಗಳು ವ್ಯಾಪಕ ಆಯ್ಕೆಗಳನ್ನು ಒದಗಿಸಬೇಕು ಎಂದು ಐಆರ್ ಡಿಎಐ ಹೇಳಿದೆ. ಅದೇ ಉದ್ದೇಶವನ್ನು ಪೂರೈಸಲು, ವಿಮಾದಾರರು ಎಲ್ಲಾ ವಯಸ್ಸಿನವರು, ಪ್ರದೇಶಗಳು, ಔದ್ಯೋಗಿಕ ವಿಭಾಗಗಳು, ವೈದ್ಯಕೀಯ ಪರಿಸ್ಥಿತಿಗಳು/ ಚಿಕಿತ್ಸೆಗಳು, ಎಲ್ಲಾ ರೀತಿಯ ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣೆ ಒದಗಿಸುವವರಿಗೆ ವೈವಿಧ್ಯಮಯ ವಿಮಾ ಉತ್ಪನ್ನಗಳನ್ನು ಒದಗಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ: Health Insurance Benefits : ಉದ್ಯೋಗಿಗಳ ಆರೋಗ್ಯ ವಿಮೆ ಏಕೆ ಮಹತ್ವಪೂರ್ಣ? ಇಲ್ಲಿದೆ ಡಿಟೇಲ್ಸ್

ಹಲವು ಆರೋಗ್ಯ ವಿಮಾ ಪಾಲಿಸಿಗಳನ್ನು ಹೊಂದಿರುವ ಪಾಲಿಸಿದಾರನು ಸ್ವೀಕಾರಾರ್ಹ ಕ್ಲೈಮ್ ಮೊತ್ತವನ್ನು ಪಡೆಯುವ ಪಾಲಿಸಿ ಆಯ್ಕೆಯನ್ನು ಹೊಸ ಸುತ್ತೋಲೆಯಲ್ಲಿ ಪಡೆಯುತ್ತಾನೆ. ವಿಮಾದಾರರು ಪ್ರತಿ ಪಾಲಿಸಿ ಡಾಕ್ಯುಮೆಂಟ್ ಜೊತೆಗೆ ಗ್ರಾಹಕರ ಮಾಹಿತಿ ಶೀಟ್​​ (CIS) ಒದಗಿಸಬೇಕಾಗುತ್ತದೆ. ಪಾಲಿಸಿ ಅವಧಿಯಲ್ಲಿ ಯಾವುದೇ ಕ್ಲೈಮ್‌ಗಳು ಮಾಡದಿದ್ದರೆ ವಿಮಾ ಮೊತ್ತವನ್ನು ಹೆಚ್ಚಿಸುವ ಅಥವಾ ಪ್ರೀಮಿಯಂ ಮೊತ್ತವನ್ನು ರಿಯಾಯಿತಿ ಮಾಡಬೇಕಾಗುತ್ತದೆ.

ಒಂದು ವೇಳೆ ಪಾಲಿಸಿದಾರರು, ಚಾಲ್ತಿಯಲ್ಲಿರು ಪಾಲಿಸಿಯನ್ನು ಯಾವುದೇ ಸಮಯದಲ್ಲಿ ರದ್ದುಮಾಡಲು ಬಯಸಿದರೆ ಅವಧಿ ಪ್ರೀಮಿಯಂ/ ಅನುಪಾತದ ಪ್ರೀಮಿಯಂನ ಮರುಪಾವತಿ ಮಾಡಬೇಕಾಗುತ್ತದೆ.

ರೋಗಿಯನ್ನು ದಾಖಲಿಸುವ ಮೊದಲು ವಿಮಾ ಕಂಪನಿಯು ಆಸ್ಪತ್ರೆಯ ಟಿಪಿಎ ಡೆಸ್ಕ್‌ಗೆ ಪೂರ್ವ-ಅನುಮೋದನೆಯನ್ನು ಒದಗಿಸಿದ ಮೇಲೂ ಶೇ.43ರಷ್ಟು ವಿಮಾ ಪಾಲಿಸಿದಾರರು ತಮ್ಮ “ಆರೋಗ್ಯ ವಿಮೆ” ಕ್ಲೈಮ್‌ಗಳನ್ನು ಪಡೆಯಲು ತೊಂದರೆಗಳನ್ನು ಎದುರಿಸಿದ್ದಾರೆ ಎಂದು ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ. ಕೆಲವು ಪ್ರಕರಣಗಳಲ್ಲಿ, ರೋಗಿಯು ಡಿಸ್ಚಾರ್ಜ್‌ಗೆ ಸಿದ್ಧವಾದ ಅನಂತರ 10- 12 ಗಂಟೆಗಳ ಬಳಿಕ ಕ್ಲೇಮ್​ ನೀಡಲಾಗಿದೆ.

Continue Reading

ಬೆಂಗಳೂರು

Fortis Hospital: ರಾಜ್ಯದಲ್ಲೇ ಮೊದಲ ಬಾರಿಗೆ ಅಪರೂಪದ ಶಸ್ತ್ರಚಿಕಿತ್ಸೆ

Fortis Hospital: ರಾಜ್ಯದಲ್ಲಿ ಮೊದಲ ಬಾರಿಗೆ ಫೋರ್ಟಿಸ್‌ ಆಸ್ಪತ್ರೆಯು ಮಿಜೋರಾಂ ರಾಜ್ಯದ 75 ವರ್ಷದ ವನ್ಲಾಲಸಂಗ ಎಂಬ ರೋಗಿಗೆ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್‌ಮೆಂಟ್ (TAVR) ನಡೆಸುವ ಮೂಲಕ ಅತ್ಯಾಧುನಿಕ ಎಡ್ವರ್ಡ್ಸ್ ಸೇಪಿಯನ್ 3 ಅಲ್ಟ್ರಾ ವಾಲ್ವ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದೆ.

VISTARANEWS.COM


on

First successful TAVR surgery in the state at Fortis Hospital
Koo

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಫೋರ್ಟಿಸ್‌ ಆಸ್ಪತ್ರೆಯು (Fortis Hospital) 75 ವರ್ಷದ ರೋಗಿಗೆ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್‌ಮೆಂಟ್ (TAVR) ನಡೆಸುವ ಮೂಲಕ ಅತ್ಯಾಧುನಿಕ ಎಡ್ವರ್ಡ್ಸ್ ಸೇಪಿಯನ್ 3 ಅಲ್ಟ್ರಾ ವಾಲ್ವ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ನಗರದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಹಿರಿಯ ಸಲಹೆಗಾರ ಡಾ. ಬಿ.ವಿ. ಶ್ರೀನಿವಾಸ್ ಪ್ರಸಾದ್ ಅವರ ಆರೈಕೆ ಮತ್ತು ಮೇಲ್ವಿಚಾರಣೆಯಲ್ಲಿ ಕೇವಲ 45 ನಿಮಿಷಗಳಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಲಾಗಿದೆ.

ಇದನ್ನೂ ಓದಿ: Uttara Kannada News: ಸಂಸ್ಕಾರಯುತ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮುಂಚೂಣಿ: ಹರಿಪ್ರಕಾಶ್‌ ಕೋಣೆಮನೆ

ಈ ಕುರಿತು ಡಾ. ಬಿ.ವಿ. ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಮಿಜೋರಾಂ ರಾಜ್ಯದ 75 ವರ್ಷದ ವನ್ಲಾಲಸಂಗ ಎಂಬ ರೋಗಿಯು ಈ ಮೊದಲು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ಅವರಿಗೆ ಹೃದಯದ ಮಹಾಪಧಮನಿಯ ಕವಾಟವು ಚಿಕ್ಕದಾಗುತ್ತಾ ಸಾಗಿದೆ. ಇದರಿಂದ ಇವರ ಹೃದಯಕ್ಕೆ ಸೂಕ್ತ ರೀತಿಯಲ್ಲಿ ರಕ್ತ ಪರಿಚಲನೆ ಸಾಧ್ಯವಾಗುತ್ತಿರಲಿಲ್ಲ. ಕಾಲಕ್ರಮೇಣ ಇದು ವಿಕೋಪಕ್ಕೆ ತಿರುಗಿ, ಅವರು ಎಂದಿನಂತೆ ನಡೆಯಲು ಸಹ ಸಾಧ್ಯವಾಗದೇ ಗಾಲಿಕುರ್ಚಿಯಲ್ಲಿ ಓಡಾಡುವಂತಾಯಿತು.

ಇದಕ್ಕೆ ಸೂಕ್ತ ಚಿಕಿತ್ಸೆಗಾಗಿ ಸಾಕಷ್ಟು ಆಸ್ಪತ್ರೆಗೆ ತೆರಳಿದರೂ ಸಾಧ್ಯವಾಗಲಿಲ್ಲ. ಬಳಿಕ ಬನ್ನೇರುಘಟ್ಟದಲ್ಲಿರುವ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಇವರ ಪರಿಸ್ಥಿತಿಯನ್ನು ಅವಲೋಕಿಸಿ ಇವರಿಗೆ ಟಿಎವಿಆರ್‌ (TAVR) ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಿದೆವು. ಸಾಂಪ್ರದಾಯಿಕ ಹೃದಯ ಕವಾಟ ಬದಲಿ ಶಸ್ತ್ರಚಿಕಿತ್ಸೆಯಿಂದ ಹೆಚ್ಚಿನ ಅಪಾಯದ ಜತೆಗೆ, ಚೇತರಿಕೆಯ ಅವಧಿಯೂ ದೀರ್ಘವಾಗಿದೆ. ಹೀಗಾಗಿ ನೂತನ ಚಿಕಿತ್ಸೆಯಾದ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟ ರಿಪ್ಲೇಸ್‌ಮೆಂಟ್ (TAVR) ಮೂಲಕ ಶಸ್ತ್ರಚಿಕಿತ್ಸೆ ನಡೆಸಿದೆವು. ಇದು ಕಡಿಮೆ ಅಪಾಯ ನೀಡಲಿದ್ದು, ವೇಗವಾಗಿ ಚೇತರಿಸಿಕೊಳ್ಳಬಹುದಾಗಿದೆ ಎಂದವರು ತಿಳಿಸಿದರು.

ಇದನ್ನೂ ಓದಿ: Karnataka Weather : ರಾಜ್ಯಾದ್ಯಂತ ಜೂನ್‌ ಮೊದಲ ವಾರ ಅಬ್ಬರಿಸಲಿದ್ಯಾ ಮಳೆ; ಕುಸಿಯಲಿದೆ ತಾಪಮಾನ

ಈ ನೂತನ ಶಸ್ತ್ರಚಿಕಿತ್ಸೆಯು ರಾಜ್ಯದಲ್ಲೇ ಮೊದಲ ಬಾರಿಗೆ ನಡೆದಿರುವುದು ವಿಶೇಷ. 45 ನಿಮಿಷಗಳ ಈ ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯು ಕೆಲವೇ ಗಂಟೆಗಳಲ್ಲಿ ಸ್ವತಂತ್ರವಾಗಿ ನಡೆಯಲು ಪ್ರಾರಂಭಿಸಿದರು ಎಂದು ಅವರು ವಿವರಿಸಿದರು.

Continue Reading

ಆರೋಗ್ಯ

Prevention Of Obesity: ಆರೋಗ್ಯಪೂರ್ಣ ಜೀರ್ಣಕ್ರಿಯೆ ಮೂಲಕ ಬೊಜ್ಜು ನಿವಾರಣೆ ಸಾಧ್ಯ

ದೇಹದಲ್ಲಿ ಅತಿಯಾಗಿ ಕೊಬ್ಬು ಶೇಖರಣೆಯಾದಾಗ ಬೊಜ್ಜು ಬರುತ್ತದೆ. ಇದನ್ನು BMIಯಿಂದ ಅಳೆಯಲಾಗುತ್ತದೆ. ಬೊಜ್ಜಿನ ಸಮಸ್ಯೆಯಿಂದ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳು ಬರುತ್ತವೆ. ಜೀರ್ಣಕ್ರಿಯೆಗೆ ಕರುಳಿನ ಆರೋಗ್ಯವೇ ಪ್ರಧಾನ. ಇದು ಜಠರದಲ್ಲಿ ಬ್ಯಾಕ್ಟೀರಿಯಾ, ಕಿಣ್ವಗಳು, ಸೂಕ್ಷ್ಮಜೀವಿಗಳ ಸಮತೋಲಿತ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಕರುಳು ಆರೋಗ್ಯವಾಗಿದ್ದರೆ, ಜೀರ್ಣಕ್ರಿಯೆ, ಪೋಷಕಾಂಶಗಳ ಹೀರಿಕೊಳ್ಳುವಿಕೆ, ರೋಗನಿರೋಧಕ ಶಕ್ತಿ ಹಾಗೂ ಮಾನಸಿಕ ಆರೋಗ್ಯ (Prevention of obesity) ಉತ್ತಮವಾಗಿರುತ್ತದೆ

VISTARANEWS.COM


on

Prevention Of Obesity
Koo

ಬೊಜ್ಜಿನ ಸಮಸ್ಯೆಯು (Prevention of obesity) ಆಧುನಿಕ ಯುಗದಲ್ಲಿ ಎಲ್ಲರನ್ನೂ ಬೆಂಬಿಡದೆ ಕಾಡುತ್ತಿರುವ ಅತಿದೊಡ್ಡ ಜಾಗತಿಕ ಸಮಸ್ಯೆಯಾಗಿದೆ. ಬೊಜ್ಜು ದೇಹದ ಆಕಾರದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಜೊತೆಗೆ ಸಂಪೂರ್ಣ ಆರೋಗ್ಯ ಹಾಗೂ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಅತಿಯಾಗಿ ಕೊಬ್ಬು ಶೇಖರಣೆಯಾದಾಗ ಬೊಜ್ಜು ಬರುತ್ತದೆ. ಇದನ್ನು BMIಯಿಂದ ಅಳೆಯಲಾಗುತ್ತದೆ. ಬೊಜ್ಜಿನ ಸಮಸ್ಯೆಯಿಂದ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳು ಬರುತ್ತವೆ. ಜೀರ್ಣಕ್ರಿಯೆಗೆ ಕರುಳಿನ ಆರೋಗ್ಯವೇ ಪ್ರಧಾನ. ಇದು ಜಠರದಲ್ಲಿ ಬ್ಯಾಕ್ಟೀರಿಯಾ, ಕಿಣ್ವಗಳು, ಸೂಕ್ಷ್ಮಜೀವಿಗಳ ಸಮತೋಲಿತ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಕರುಳು ಆರೋಗ್ಯವಾಗಿದ್ದರೆ, ಜೀರ್ಣಕ್ರಿಯೆ, ಪೋಷಕಾಂಶಗಳ ಹೀರಿಕೊಳ್ಳುವಿಕೆ, ರೋಗನಿರೋಧಕ ಶಕ್ತಿ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ನ್ಯೂಟ್ರೀಷನಿಸ್ಟ್ ಕನ್ಸಲ್ಟೆಂಟ್ ಡಾ. ಸಂಜನಾ ಪ್ರೇಮ್‌ಲಾಲ್ ತಿಳಿಸಿದರು.

healthy internal organs of human digestive system

ಮಾನವನ ದೇಹವು ಸಂಪೂರ್ಣವಾಗಿ ಆರೋಗ್ಯವಾಗಿರಬೇಕು ಎಂದರೆ ಜೀರ್ಣಕ್ರಿಯೆ ಹಾಗೂ ತೂಕದ ನಡುವಿನ ಸಂಬಂಧ ಮುಖ್ಯವಾಗಿದೆ. ಕರುಳಿನ ಮೈಕ್ರೋಬಯೋಟಾದಲ್ಲಿನ ಅಸಮತೋಲನವೇ ತೂಕ ಹೆಚ್ಚಾಗಲು ಮತ್ತು ಜೀರ್ಣಕ್ರಿಯೆ ಅಸ್ವಸ್ಥತೆಗೆ ಕಾರಣವಾಗಿರುತ್ತದೆ. ಅಷ್ಟೇ ಅಲ್ಲದೆ ತೂಕ ನಿರ್ವಹಣೆಗೆ ಅಡೆತಡೆ ಉಂಟುಮಾಡುತ್ತದೆ. ಹೆಚ್ಚಿನ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವುದಾದರೆ, ಜೀರ್ಣಕ್ರಿಯೆ, ಪೋಷಕಾಂಶಗಳ ಹೀರಿಕೊಳ್ಳುವಿಕೆ, ಹಸಿವು ನಿಯಂತ್ರಿಸುವುದು, ಉರಿಯೂತ, ಚಯಾಪಚಯ ಹಾಗೂ ಹಾರ್ಮೋನ್‌ಗಳ ಅಸಮತೋಲನ ವಿಷಯಗಳಲ್ಲಿ ಕರುಳಿನ ಆರೋಗ್ಯ ಹೇಗಿದೆ ಎಂಬುದನ್ನು ಗುರುತಿಸಬೇಕು. ಇವುಗಳು ಪರಿಣಾಮಕಾರಿ ತೂಕ ನಿರ್ವಹಣೆಗೆ ಸಹಕಾರಿಯಾಗುತ್ತದೆ.

ಶಿಸ್ತು ಮೀರಿದ ಆಹಾರ

ಅಶಿಸ್ತಿನ ಆಹಾರ ಕ್ರಮ, ಔಷಧಿಗಳ ಅತಿಯಾದ ಬಳಕೆ ಮತ್ತು ಒತ್ತಡದಿಂದ ಕರುಳಿನಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಇದು ತೂಕ ಹೆಚ್ಚಳಕ್ಕೆ ಹಾಗೂ ಬೊಜ್ಜಿನ ಸಮಸ್ಯೆಗೆ ಕಾರಣವಾಗಬಹುದು. ಈ ಲೇಖನದಲ್ಲಿ ತಿಳಿಸಿರುವ ಸೂತ್ರಗಳನ್ನು ಅನುಸರಿಸುವ ಮೂಲಕ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಜೊತೆಗೆ ಆರೋಗ್ಯಕರವಾದ ತೂಕವನ್ನು ಹೊಂದಲು ಅನುಕೂಲವಾಗಲಿದೆ ಎಂದು ಡಾ. ಸಂಜನಾ ಪ್ರೇಮ್‌ಲಾಲ್‌ ಹೇಳಿದ್ದಾರೆ.

Healthy digestive system Lemon Water Benefits

ಆರೋಗ್ಯಕರ ಜೀರ್ಣಕ್ರಿಯೆಗೆ ಏನು ಮಾಡಬೇಕು?

ಹೆಚ್ಚು ಸಸ್ಯಹಾರ ಸೇವನೆ: ಹಣ್ಣು, ತರಕಾರಿ, ದವಸ ಹಾಗೂ ಧಾನ್ಯಗಳನ್ನು ಸೇವಿಸಿದರೆ, ಅವುಗಳಲ್ಲಿ ರೋಗನಿರೋಧಕ ಶಕ್ತಿ ಹಾಗೂ ಫೈಬರ್ ಸಮೃದ್ಧವಾಗಿರುತ್ತದೆ, ಇದರಿಂದ ಜೀರ್ಣಕ್ರಿಯೆ ಸುಲಭವಾಗಿರುತ್ತದೆ.

ಪ್ರಿಬಯಾಟಿಕ್ ಮತ್ತು ಪ್ರೋಬಯಾಟಿಕ್ ಆಹಾರ ಸೇವನೆ

ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಗಾಗಿ ಜೆರುಸಲೇಮ್ ಆರ್ಟಿಚೋಕ್ಸ್, ಶತಾವರಿ, ಹಾಗೂ ಕಿಮ್ಚಿ & ಸೌರ್ಕ್ರಾಟ್‌ನಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು.

drink water

ಹೈಡ್ರೇಟೆಡ್ ಆಗಿರುವುದು

ಹೆಚ್ಚು ನೀರು ಕುಡಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹಾಗೂ ಮಲಬದ್ಧತೆ ತಡೆಯುವುದರ ಜೊತೆಗೆ ಕರುಳಿನ ಒಳಪದರದ ಆರೋಗ್ಯವನ್ನು ಕಾಪಾಡುತ್ತದೆ.

ಆಹಾರವನ್ನು ಜಗಿದು ತಿನ್ನುವುದು

ಉತ್ತಮ ಜೀರ್ಣಕ್ರಿಯೆಗೆ ಪೋಷಕಾಂಶಗಳ ಹೀರಿಕೊಳ್ಳುವಿಕೆ ಹಾಗೂ ಜೀರ್ಣಕ್ರಿಯೆಯ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಆಹಾರವನ್ನು ಸಂಪೂರ್ಣವಾಗಿ ಜಗಿದು ತಿನ್ನಬೇಕು.

Sleeping Tips

ಉತ್ತಮ ನಿದ್ರೆ

ಹಾರ್ಮೋನ್ ಸಮತೋಲನ ಮತ್ತು ಕರುಳಿನ ಆರೋಗ್ಯಕ್ಕೆ ಉತ್ತಮ ನಿದ್ರೆ ಅತ್ಯಗತ್ಯ. ಹೀಗಾಗಿ ಪ್ರತಿದಿನ ರಾತ್ರಿ ಗುಣಮಟ್ಟದ ನಿದ್ರೆಯನ್ನು ಮಾಡಬೇಕು.

ಉತ್ತಮ ಅಡುಗೆ ಎಣ್ಣೆ ಬಳಸಿ

ಉತ್ತಮ ಆರೋಗ್ಯಕ್ಕಾಗಿ ವರ್ಜಿನ್ ಆಲಿವ್ ಎಣ್ಣೆ ಹಾಗೂ ತೆಂಗಿನ ಎಣ್ಣೆಯನ್ನು ಬಳಸಿ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಉರಿಯೂತ ಕಡಿಮೆಯಾಗುತ್ತದೆ.

exercise

ವ್ಯಾಯಾಮ

ದೈಹಿಕ ಚಟುವಟಿಕೆಯು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹೀಗಾಗಿ ನಿಮ್ಮ ದಿನಚರಿಯಲ್ಲಿ ವ್ಯಾಯಾಮವನ್ನು ಸೇರಿಸಿಕೊಳ್ಳಬೇಕು.

ಸರಿಯಾದ ಸಮಯಕ್ಕೆ ತಿನ್ನಿ

ಜೀರ್ಣಕ್ರಿಯೆ ಉತ್ತಮವಾಗಿರಲು ಪ್ರತಿ ಊಟದ ನಡುವೆ 3 ರಿಂದ 4 ಗಂಟೆಗಳ ಅಂತರವಿರಲಿ. ಇದರಿಂದ ಹೊಟ್ಟೆ ಉಬ್ಬರಿಕೆ ಹಾಗೂ ಮಲಬದ್ಧತೆಯಂತಹ ಸಮಸ್ಯೆಗಳು ಕಂಡು ಬರುವುದಿಲ್ಲ.

Stress Reduction Health Benefits Of Hot Water Bath

ಒತ್ತಡ ನಿರ್ವಹಣೆ

ಒತ್ತಡವನ್ನು ನಿರ್ವಹಿಸಲು ಧ್ಯಾನ, ಯೋಗ ಮಾಡುವುದರಿಂದ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ. ಕರುಳು ಆರೋಗ್ಯವಾಗಿರಲು ಈ ಕೆಲಸಗಳನ್ನು ಮಾಡದಿರಿ

ಒಂದೇ ತರಹದ ಆಹಾರ ಸೇವನೆ

ಪ್ರತಿನಿತ್ಯ ಒಂದೇ ತರಹದ ಆಹಾರ ಸೇವನೆಯನ್ನು ಮಾಡದಿರುವುದು ಒಳಿತು. ಈ ರೀತಿ ಮಾಡುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಹೀಗಾಗಿ ಹಣ್ಣು, ತರಕಾರಿ, ದವಸ ಹಾಗೂ ಸಿರಿಧಾನ್ಯಗಳ ಸೇವನೆಯಿಂದ ಕರುಳಿನ ಆರೋಗ್ಯಕ್ಕೆ ಅನುಕೂಲವಾಗಲಿದೆ.

beautiful asian young woman eating healthy food Sleep Tips

ಹೆಚ್ಚು ಆಹಾರ ಸೇವನೆ

ಹೆಚ್ಚು ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಅಗತ್ಯ ಹಾಗೂ ಉತ್ತಮ ಆಹಾರವನ್ನು ಸರಿಯಾಗಿ ಜಗಿದು ತಿನ್ನಬೇಕು. ಜೊತೆಗೆ ಹಸಿವಾದಾಗ ಮಾತ್ರ ಆಹಾರ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಸಂಸ್ಕರಿಸಿದ ಆಹಾರ ಸೇವನೆ

ಸಂಸ್ಕರಿಸಿದ ಆಹಾರ ಸೇವನೆ‌ ಒಳ್ಳೆಯದಲ್ಲ. ಇದರಿಂದ ಪೋಷಕಾಂಶಗಳ ಕೊರತೆ ಉಂಟಾಗುವುದರ ಜೊತೆಗೆ ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಜೀರ್ಣಕ್ರಿಯೆಗೆ ಬೇಳೆ ಕಾಳುಗಳು, ದವಸಧಾನ್ಯಗಳು, ಹೆಚ್ಚು ಪ್ರೊಟೀನ್ ಇರುವ ಆಹಾರವನ್ನು ಸೇವಿಸಬೇಕು.

Selection of Colorful Sweets

ಕೃತಕ ಸಿಹಿ ಪದಾರ್ಥಗಳ ಸೇವನೆ

ಕೃತಕ ಸಿಹಿ ಪದಾರ್ಥಗಳ ಸೇವನೆಯಿಂದ ಕರುಳಿನ ಆರೋಗ್ಯ ಹಾಳಾಗುತ್ತದೆ. ಹೀಗಾಗಿ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾದ ಜ್ಯೂಸ್ ಹಾಗೂ ತಾಜಾ ಹಣ್ಣುಗಳನ್ನು ಸೇವಿಸುವುದು ಒಳಿತು.
ಉರಿಯೂತವನ್ನುಂಟು ಮಾಡುವ ಅಡುಗೆ ಎಣ್ಣೆ

ಬಳಕೆ ನಿಷೇಧ

ಕ್ಯಾನೋಲ, ಕಡಲೆಕಾಯಿ ಮತ್ತು ಸೂರ್ಯಕಾಂತಿಯಂತಹ ಅಡುಗೆ ಎಣ್ಣೆ ಬಳಕೆಯನ್ನು ಕಡಿಮೆ ಮಾಡಿ. ಇವುಗಳಿಂದ ಉರಿಯೂತ ಉಂಟಾಗುವುದರ ಜೊತೆಗೆ ಜೀರ್ಣಾಂಗ ವ್ಯವಸ್ಥೆ ಹದಗೆಡುತ್ತದೆ. ಉತ್ತಮ ಕರುಳಿನ ಆರೋಗ್ಯಕ್ಕಾಗಿ ಸಂಪೂರ್ಣವಾಗಿ ಸಂಸ್ಕರಿಸದ ಸಸ್ಯ ಆಧಾರಿತ ಆಹಾರಗಳನ್ನು ಹೆಚ್ಚು ಬಳಸಿ.

ಇದನ್ನೂ ಓದಿ: Nosebleeds In Summer: ಬೇಸಿಗೆಯ ತಾಪಕ್ಕೆ ಮೂಗಿನಲ್ಲಿ ರಕ್ತಸ್ರಾವವೇ? ತಡೆಯಲು ಇಲ್ಲಿವೆ ಸರಳ ಉಪಾಯ

ದೈಹಿಕ ಮತ್ತು ಮಾನಸಿಕ ಆರೋಗ್ಯದ ನಿರ್ಲಕ್ಷ್ಯ

ದೈಹಿಕ ಹಾಗೂ ಮಾನಸಿಕ ಆರೋಗ್ಯ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ, ಒತ್ತಡ ನಿರ್ವಹಣೆ ಹಾಗೂ ಸ್ವಯಂ ಆರೈಕೆಗೆ ಸಮಯ ಮೀಸಲಿಡಬೇಕು.
ಬೊಜ್ಜು ನಿವಾರಿಸಲು ಜೀರ್ಣಕ್ರಿಯೆ ಹೆಚ್ಚಿಸಿಕೊಳ್ಳುವುದರ ಜೊತೆಗೆ ವ್ಯಾಯಾಮ ಮಾಡುವುದು ಪ್ರಮುಖ ಸೂತ್ರ. ಉತ್ತಮ ಆಹಾರ ಪದ್ದತಿ, ಸ್ಥಿರವಾದ ದೈಹಿಕ ಚಟುವಟಿಕೆ, ಸರಿಯಾದ ನಿದ್ರೆ, ಒತ್ತಡ ನಿರ್ವಹಣೆ, ತೂಕ ನಿಯಂತ್ರಣ ಕೂಡ ಅತ್ಯಗತ್ಯವಾಗಿರುತ್ತದೆ. ಸಣ್ಣ ಬದಲಾವಣೆಗಳು ಸಹ ಕರುಳಿನ ಆರೋಗ್ಯ ಹಾಗೂ ತೂಕ ನಿರ್ವಹಣೆಯಲ್ಲಿ ದೀರ್ಘಕಾಲದ ಯಶಸ್ಸನ್ನು ನೀಡುತ್ತದೆ ಎಂದು ತಜ್ಞೆ ಸಂಜನಾ ಪ್ರೇಮ್‌ಲಾಲ್‌ ಸಲಹೆಗಳನ್ನು ನೀಡಿದ್ದಾರೆ.

Continue Reading

ಆರೋಗ್ಯ

Fruit and Veggie Smoothies: ಹಣ್ಣು, ತರಕಾರಿಗಳ ಆರೋಗ್ಯಕರ ಸ್ಮೂದಿ ಎಂಬ ಟ್ರೆಂಡ್‌! ಒಳ್ಳೆಯದೇ, ಕೆಟ್ಟದ್ದೇ?

ಒಂದಿಷ್ಟು ಹಣ್ಣುಗಳನ್ನು ಸೇರಿಸಿ ಮಾಡುವ ಸ್ಮೂದಿ, ತರಕಾರಿಗಳನ್ನು ಸೇರಿಸಿ ಮಾಡುವ ಸ್ಮೂದಿ, ಬೀಜಗಳು ಒಣ ಹಣ್ಣುಗಳು, ವೇಗನ್‌ ಹಾಲು ಇತ್ಯಾದಿ ಇತ್ಯಾದಿ ಹಲವು ಬಗೆಯನ್ನು ಸೇರಿಸಿ ಮಾಡಬಹುದಾದ ಸ್ಮೂದಿಗಳು ಬಹುತೇಕರ ಜೀವನದಲ್ಲಿ ಇಂದು ಪ್ರತಿನಿತ್ಯದ ಆಹಾರ. ಹಲವು ಪೋಷಕಾಂಶಗಳನ್ನು ಒಳಗೊಂಡ, ಒಮ್ಮೆಲೇ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಸುಲಭವಾಗಿ ದೇಹಕ್ಕೆ ಸಿಗುವಂತೆ ಮಾಡಬಲ್ಲ, ಸುಲಭ ಸರಳವಾದ, ಫಟಾಫಟ್‌ ಮಾಡಬಹುದಾದ ಆಯ್ಕೆ ಇದು ಎಂಬುದರಲ್ಲಿ (Fruit and Veggie Smoothies) ಯಾವ ಸಂಶಯವೂ ಇಲ್ಲ. ಆದರೆ…

VISTARANEWS.COM


on

Fruit and Veggie Smoothie
Koo

ಸದ್ಯದ ಯುವಜನರ ಆಹಾರದ ಟ್ರೆಂಡ್‌ ಎಂದರೆ ಅದು ಸ್ಮೂದಿ. ಬಹಳ ಸುಲಭವಾಗಿ ಮಾಡಬಲ್ಲ, ಹೊಟ್ಟೆ ತುಂಬಿಸಿಕೊಳ್ಳಬಹುದಾದ ಹಾಗೂ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾದ ಟ್ರೆಂಡ್‌ ಆದ ಆಹಾರ ಕ್ರಮ. ಒಂದಿಷ್ಟು ಹಣ್ಣುಗಳನ್ನು ಸೇರಿಸಿ ಮಾಡುವ ಸ್ಮೂದಿ, ತರಕಾರಿಗಳನ್ನು ಸೇರಿಸಿ ಮಾಡುವ ಸ್ಮೂದಿ, ಬೀಜಗಳು ಒಣ ಹಣ್ಣುಗಳು, ವೇಗನ್‌ ಹಾಲು ಇತ್ಯಾದಿ ಇತ್ಯಾದಿ ಹಲವು ಬಗೆಯನ್ನು ಸೇರಿಸಿ ಮಾಡಬಹುದಾದ ಸ್ಮೂದಿಗಳು ಬಹುತೇಕರ ಜೀವನದಲ್ಲಿ ಇಂದು ಪ್ರತಿನಿತ್ಯದ ಆಹಾರ. ಹಲವು ಪೋಷಕಾಂಶಗಳನ್ನು ಒಳಗೊಂಡ, ಒಮ್ಮೆಲೇ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಸುಲಭವಾಗಿ ದೇಹಕ್ಕೆ ಸಿಗುವಂತೆ ಮಾಡಬಲ್ಲ, ಸುಲಭ ಸರಳವಾದ, ಫಟಾಫಟ್‌ ಮಾಡಬಹುದಾದ ಆಯ್ಕೆ ಇದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಹಾಗಾದರೆ, ಈ ಸ್ಮೂದಿಗಳನ್ನು ಕುಡಿಯುವುದರಿಂದ, ದೇಹಕ್ಕೆ ಹಣ್ಣು, ತರಕಾರಿ, ಬೀಜಗಳನ್ನು ತಿಂದಷ್ಟೇ ಲಾಭಗಳು ದೊರೆಯುತ್ತವೆಯೇ ಎಂಬ ಬಗ್ಗೆ ನಿಮಗೆ ಪ್ರಶ್ನೆ ಉದ್ಭವಿಸಿದಲ್ಲಿ ಅದಕ್ಕೆ (Fruit and Veggie Smoothies) ಉತ್ತರ ಇಲ್ಲಿದೆ.

  • ನೀವು ಸ್ಮೂದಿಗಾಗಿ ಬಳಸುವ ಹಣ್ಣು ಹಂಪಲಾಗಿರಬಹುದು, ತರಕಾರಿಗಳಿರಬಹುದು, ಬೀಜ ಒಣಹಣ್ಣುಗಳಿರಬಹುದು, ಅವುಗಳನ್ನು ಹಾಗೆಯೇ ಜಗಿದು ತಿಂದರೆ ಆ ಜಗಿಯುವ ಪ್ರಕ್ರಿಯೆಯಲ್ಲಿ ಬಾಯಲ್ಲಿ ಲಾಲಾರಸವೂ ಅಂದರೆ ಜೊಲ್ಲೂ ಕೂಡಾ ಅದಕ್ಕೆ ಸೇರುತ್ತದೆ. ಈ ರಸ ಜೀರ್ಣಕ್ರಿಯೆಗೆ ಸಹಾಯ ಮಾಡುವ ರಸ. ಜೊತೆಗೆ ಇದು ಬಾಯಿಯನ್ನು ತೇವವಾಗಿ ಇಟ್ಟುಕೊಳ್ಳುವ ರಸವಾದ್ದರಿಂದ ಇದು ಬಾಯಿಯ ಮೂಲಕ ದೇಹಕ್ಕೆ ಇನ್‌ಫೆಕ್ಷನ್‌ ಹೋಗದಂತೆಯೂ ರಕ್ಷಿಸುತ್ತದೆ. ಸ್ಮೂದಿ ಮಾಡಿ ಕುಡಿಯುವುದರಿಂದ ದೇಹದ ಈ ನೈಸರ್ಗಿಕ ಕ್ರಿಯೆಯನ್ನೇ ನೀವು ದೂರ ಮಾಡಿ ಸುಲಭವಾಗಿ ಆಹಾರವನ್ನು ಹೊಟ್ಟೆಗೆ ಕಳುಹಿಸುತ್ತಿದ್ದೀರಿ ಎಂದಾಯಿತು. ಬಾಯಿಗೆ ಕೆಲಸವೇ ಇಲ್ಲ. ಜೀರ್ಣಕ್ರಿಗೆ ಸಹಾಐ ಆಡುವ ಅಂಶಗಳೂ ಅಲ್ಲಿ ಸೇರಲಿಲ್ಲ!
  • ಸ್ಮೂದಿಯನ್ನು ಕುಡಿಯುವುದರಿಂದ ಬಾಯಿಗೆ ಕೆಲಸವಿಲ್ಲದೆ ಅದು ನೇರವಾಗಿ ಹೊಟ್ಟೆಗೆ ಇಳಿಯುತ್ತದೆ. ಅಲ್ಲಿ ನಿಮ್ಮ ಜೊಲ್ಲುರಸ ಅಂದರೆ ಲಾಲಾರಸ ಈ ಆಹಾರದ ಜೊತೆಗೆ ಸರಿಯಾಗಿ ಸೇರಲಿಲ್ಲ ಅಂತಾಯಿತು. ಇದರಿಂದಾಗಿ ನಿಮ್ಮ ಜೀರ್ಣಕ್ರಿಯೆಯ ಸಾಮರ್ಥ್ಯ ನಿಧಾನವಾಗಿ ಕುಂಠಿತವಾಗುತ್ತಾ ಬರುತ್ತದೆ. ಕೇವಲ ಜೀರ್ಣಕ್ರಿಯೆಯಷ್ಟೇ ಅಲ್ಲ, ರೋಗನಿರೋಧಕ ಶಕ್ತಿಯೂ ಕುಂಠಿತವಾಗುತ್ತಾ ಬರುತ್ತದೆ. ಇಂತಹ ಬಗೆಯ ಆಹಾರಕ್ಕೇ ದೇಹ ಹೊಂದಿಕೊಂಡು, ಜೀರ್ಣ ಮಾಡುವ ಶಕ್ತಿ ಇಳಿಕೆಯಾಗುತ್ತದೆ.
  • ಸ್ಮೂದಿಯು ದ್ರವರೂಪದಲ್ಲಿರುವುದರಿಂದ ಸಹಜವಾಗಿಯೇ, ಸ್ಮೂದಿಯಲ್ಲಿರುವ ನೈಸರ್ಗಿಕ ಸಕ್ಕರೆ ಬಹುಬೇಗನೆ ರಕ್ತಕ್ಕೆ ಸೇರಿ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಇದ್ದಕ್ಕಿದ್ದಂತೆ ಏರಿಕೆಯಾಗುತ್ತದೆ. ಇದರಿಂದಾಗಿ ಸುಸ್ತಿನ ಅನುಭವ, ತಲೆಸುತ್ತಿನಂತ ಸಮಸ್ಯೆಗಳೂ ಮುಂದೆ ತಲೆದೋರಬಹುದು. ಹಣ್ಣುಗಳು, ಹಂಪಲುಗಳು ಹಾಗೂ ತರಕಾರಿಗಳಲ್ಲಿರುವ ನಾರಿನಂಶ ಸರಿಯಾಗಿ ಹೊಟ್ಟೆ ಸೇರದೆ, ವ್ಯರ್ಥವಾಗಬಹುದು. ಪೋಷಕಾಂಶವೂ ನಷ್ಟವಾಗಬಹುದು. ಇವೆಲ್ಲವನ್ನೂ ಜಗಿದು ತಿನ್ನುವಾಗ ಸಿಗಬಃಉದಾದ ಆರೋಗ್ಯದ ಲಾಭಗಳೆಲ್ಲವೂ ಸ್ಮೂದಿಯ ಮೂಲಕ ಸಿಗದೇ ಹೋಗುವ ಸಾಧ್ಯತೆಗಳೇ ಹೆಚ್ಚು.
  • ಕೆಲವು ಮಂದಿಗೆ ದೇಹದಲ್ಲಿರುವ ಸಕ್ಕರೆಯ ಅಂಶದ ಏರಿಕೆಯಿಂದಾಗಿ ತಕ್ಷಣ ತಲೆಸುತ್ತು, ತಲೆನೋವು ಮತ್ತಿತರ ಸಮಸ್ಯೆಯೂ ಕಾಡಬಹುದು. ಆದರೆ, ಸ್ಮೂದಿಗೆ ಬಳಸಿದ ಹಣ್ಣು ಹಂಪಲು ಅಥವಾ ತರಕಾರಿ, ಒಣ ಹಣ್ಣು ಬೀಜಗಳನ್ನು ಹಾಗೆಯೇ ತಿನ್ನುವುದರಿಂದ ಈ ಪರಿಣಾಮಗಳು ಕಾಣಿಸಿಕೊಳ್ಳಲಾರದು. ಹಾಗಾಗಿ, ಸ್ಮೂದಿಗಿಂತ ಹಾಗೆಯೇ ತಿನ್ನುವುದೇ ಆರೋಗ್ಯಕ್ಕೆ ಹೆಚ್ಚು ಸೂಕ್ತ ಎಂಬುದನ್ನು ನೆನಪಿಡಿ.

ಇದನ್ನೂ ಓದಿ: Nosebleeds In Summer: ಬೇಸಿಗೆಯ ತಾಪಕ್ಕೆ ಮೂಗಿನಲ್ಲಿ ರಕ್ತಸ್ರಾವವೇ? ತಡೆಯಲು ಇಲ್ಲಿವೆ ಸರಳ ಉಪಾಯ

Continue Reading
Advertisement
Prajwal Revanna Case
ಕರ್ನಾಟಕ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೊನೆಗೂ ಬಂಧನ; ಮುಂದೇನಾಗುತ್ತದೆ? ಏನಿದೆ ಪ್ರಕ್ರಿಯೆ?

Prajwal Revanna Case
ಪ್ರಮುಖ ಸುದ್ದಿ1 hour ago

Prajwal Revanna Case: ಪ್ರಜ್ವಲ್ ರೇವಣ್ಣ ಬಂಧನ ಆಗಿದ್ದು ಹೇಗೆ? ಏರ್​ಪೋರ್ಟ್​​ನಲ್ಲಿ ನಡೆದ ಪ್ರಕ್ರಿಯೆಗಳೇನು?

Prajwal Revanna Case
ಕರ್ನಾಟಕ1 hour ago

Prajwal Revanna Case: ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಪ್ರಜ್ವಲ್‌ ರೇವಣ್ಣ ಕೊನೆಗೂ ಬಂಧನ; ಏರ್‌ಪೋರ್ಟ್‌ನಲ್ಲೇ ಅರೆಸ್ಟ್!

3 Indian companies have featured in Time magazines list of 100 most influential companies in the world
ದೇಶ3 hours ago

Reliance Industries: ಟೈಮ್ ಮ್ಯಾಗಜೀನ್‌ನ ಜಗತ್ತಿನ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌

Murder News
ಪ್ರಮುಖ ಸುದ್ದಿ4 hours ago

Murder News : ಬಾಯ್​ಫ್ರೆಂಡ್​ ಜತೆ ಸೇರಿ ಅಪ್ಪ, ತಮ್ಮನನ್ನು ಕೊಂದು ಕತ್ತರಿಸಿ ಫ್ರಿಜ್​ನಲ್ಲಿಟ್ಟಿದ್ದ 16ರ ಬಾಲಕಿ

Reserve Bank of India
ದೇಶ4 hours ago

Reserve Bank of India : ಭಾರತದ ಬ್ಯಾಂಕ್​ಗಳಲ್ಲಿವೆ ವಾರಸುದಾರರಿಲ್ಲದ 78,213 ಕೋಟಿ ರೂಪಾಯಿ!

Modi Meditation
ದೇಶ4 hours ago

Modi Meditation: ಧ್ಯಾನ ಮಾಡುವ 45 ಗಂಟೆಯೂ ಆಹಾರ ಸೇವಿಸಲ್ಲ ಮೋದಿ; 2 ದಿನ ಪಾನೀಯವೇ ಆಹಾರ!

Virat kohli
ಕ್ರಿಕೆಟ್5 hours ago

Virat Kohli : ವಿರಾಟ್​ ಕೊಹ್ಲಿ ಟೀಕಿಸಿದ ನ್ಯೂಜಿಲ್ಯಾಂಡ್​ ಮಾಜಿ ಆಟಗಾರನಿಗೆ ಕೊಲೆ ಬೆದರಿಕೆ!

Hindu Janajagruthi Samithi demands declaration of Zakir Naik as international terrorist
ಬೆಂಗಳೂರು5 hours ago

Zakir Naik: ಜಾಕೀರ್ ನಾಯಕ್‌ನನ್ನು ಭಯೋತ್ಪಾದಕನೆಂದು ಘೋಷಿಸಿ; ಹಿಂದೂ ಜನಜಾಗೃತಿ ಸಮಿತಿ ಆಗ್ರಹ

Necessary Preparation for North East Graduate Constituency Election Voting says DC M S Diwakar
ವಿಜಯನಗರ6 hours ago

MLC Election: ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆಯ ಮತದಾನಕ್ಕೆ ಸಿದ್ಧತೆ: ಡಿಸಿ ಎಂ.ಎಸ್. ದಿವಾಕರ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ13 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌