Low Bp, heart problem on the rise in Bengaluru policePolice Health Issues: ಬೆಂಗಳೂರು ಪೊಲೀಸರಲ್ಲಿ ಹೆಚ್ಚಾಗುತ್ತಿದೆ Low Bp, ಹೃದಯ ಸಮಸ್ಯೆ; ಕಾಳಜಿಗೆ ಮುಂದಾದ ಅಧಿಕಾರಿಗಳು - Vistara News

ಆರೋಗ್ಯ

Police Health Issues: ಬೆಂಗಳೂರು ಪೊಲೀಸರಲ್ಲಿ ಹೆಚ್ಚಾಗುತ್ತಿದೆ Low Bp, ಹೃದಯ ಸಮಸ್ಯೆ; ಕಾಳಜಿಗೆ ಮುಂದಾದ ಅಧಿಕಾರಿಗಳು

Police Health Issues: ಇತ್ತೀಚೆಗೆ ಹೃದಯಾಘಾತ (Heart disease) ಹಾಗೂ ಲೋ ಬಿಪಿ (Low Bp) ಸಮಸ್ಯೆಯಿಂದಾಗಿ ಪೊಲೀಸರು ಜೀವಬಿಟ್ಟಿದ್ದರು. ಒತ್ತಡದ ಜತೆ ಜತೆಗೆ ಹಗಲಿರುಳು ಶ್ರಮವಹಿಸುವ ಪೊಲೀಸ್‌ ಸಿಬ್ಬಂದಿಯಲ್ಲಿ ಇದೀಗ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿದೆ.

VISTARANEWS.COM


on

Low Bp, heart problem on the rise in Bengaluru police
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಧಾನಸಭಾ ಚುನಾವಣೆಗೆ (karnataka election 2023) ಕೌಂಟ್‌ಡೌನ್‌ ಶುರುವಾಗಿದೆ. ಚುನಾವಣೆ ಸಮಯ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಖಾಕಿ ಪಡೆಗಳು ಹಗಲಿರುಳು ಎನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹೊತ್ತಲ್ಲೇ ಪೊಲೀಸ್‌ ಸಿಬ್ಬಂದಿಯಲ್ಲಿ ಎದೆನೋವು, ಅಧಿಕ, ಕಡಿಮೆ ರಕ್ತದೊತ್ತಡ ಸೇರಿದಂತೆ ಅನಾರೋಗ್ಯ ಸಮಸ್ಯೆಗಳು (Police Health Issues) ಕಾಡುತ್ತಿವೆ. ಹೀಗಾಗಿ ಸಿಬ್ಬಂದಿಯ ಆರೋಗ್ಯ ಕಾಳಜಿಗೆ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.

Police Health Issues Low Bp, heart problem on the rise in Bengaluru police
ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಪೊಲೀಸ್‌ ಸಿಬ್ಬಂದಿಗೆ ವೈದ್ಯರ ಸಲಹೆ

ಆಗ್ನೇಯ ವ್ಯಾಪ್ತಿಗೆ ಬರುವ 14 ಪೊಲೀಸ್‌ ಸ್ಟೇಷನ್‌ಗಳ ಪೈಕಿ 800 ಸಿಬ್ಬಂದಿಗೆ 8 ವಿಧದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇವರಲ್ಲಿ ಶೇಕಡ 20%ರಷ್ಟು ಮಂದಿ ಹೈ ಹಾಗೂ ಲೋ ಬಿಪಿ ಸಮಸ್ಯೆಯನ್ನು ಹೊಂದಿದ್ದಾರೆ. ಉಳಿದ 20%ರಷ್ಟು ಮಂದಿಗೆ ಗ್ಯಾಸ್ಟಿಕ್‌ ಹಾಗೂ ಎದೆನೋವಿನ ಸಮಸ್ಯೆ ಕಾಡುತ್ತಿರುವ ಬಗ್ಗೆ ವರದಿ ಆಗಿದೆ.

Police Health Issues
ಜಯದೇವ ಆಸ್ಪತ್ರೆ ಹಾಗೂ ಅಪೋಲೊ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ

ಇತ್ತೀಚೆಗೆ ಹೃದಯಾಘಾತ ಹಾಗೂ ಲೋ ಬಿಪಿ ಸಮಸ್ಯೆಯಿಂದಾಗಿ ಕರ್ತವ್ಯದಲ್ಲಿರುವಾಗಲೇ ಪೊಲೀಸರು ಮೃತಪಡುತ್ತಿದ್ದಾರೆ. ಒತ್ತಡದೊಂದಿಗೆ ಹಗಲಿರುಳು ಶ್ರಮವಹಿಸುವ ಪೊಲೀಸ್‌ ಸಿಬ್ಬಂದಿಯಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿದೆ. ಇದರಿಂದ ಎಚ್ಚೆತ್ತಿರುವ ಹಿರಿಯ ಅಧಿಕಾರಿಗಳು ತಮ್ಮ ಸಿಬ್ಬಂದಿಯ ಆರೋಗ್ಯಕ್ಕೆ ಒತ್ತು ನೀಡುತ್ತಿದ್ದಾರೆ.

ಆಗ್ನೇಯ ವಿಭಾಗದ ಪೊಲೀಸರಲ್ಲಿ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿದೆ. ಹೀಗಾಗಿ ಕೆಲಸ ಅವಧಿಯಷ್ಟೇ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಈಗಾಗಲೇ ಜಯದೇವ ಹೃದ್ರೋಗ, ಅಪೋಲೋ ಆಸ್ಪತ್ರೆ ಸಹಯೋಗದಲ್ಲಿ ಎಲ್ಲ ಸಿಬ್ಬಂದಿಗೆ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ.

Police Health Issues Low Bp, heart problem on the rise in Bengaluru police
ಆರೋಗ್ಯ ತಪಾಸಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವ ಡಿಸಿಪಿ ಸಿ.ಕೆ ಬಾಬ

ಈ ಸಂಬಂಧ ಪ್ರತಿಕ್ರಿಯಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬ, ಎಂಟು ವಿಧದಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯದ ಸಮಸ್ಯೆ ಇರುವವರನ್ನು ಪ್ರತ್ಯೇಕ ಗ್ರೂಪ್ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಒತ್ತಡದ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಆರೋಗ್ಯ ಕಾಳಜಿ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಲೋ ಬಿಪಿಯಿಂದಾಗಿ ಎಎಸ್‌ಐ ಮೃತ್ಯು; ಬೈಕ್‌ನಲ್ಲಿ ಸಾಗುತ್ತಿದ್ದಾಗಲೇ ಉರುಳಿಬಿದ್ದರು

ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದ ಎಎಸ್‌ಐ (ASI Death) ಒಬ್ಬರು ಮೃತಪಟ್ಟಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೈ ಶ್ರೀನಿವಾಸ್ (59) ಮೃತ ದುರ್ದೈವಿ. ಶ್ರೀನಿವಾಸ್‌ ಲೋ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದು, ವಾರದ ಹಿಂದೆ ಬೈಕ್‌ನಲ್ಲಿ ಸಾಗುತ್ತಿದ್ದಾಗಲೇ ಕುಸಿದುಬಿದ್ದಿದ್ದರು. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಲೋ ಬಿಪಿ ಸಮಸ್ಯೆ ಉಂಟಾಗಿ ಅವರು ಬೈಕ್‌ನಿಂದ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Road Accident: ಅಪರಿಚಿತ ವಾಹನ ಡಿಕ್ಕಿಯಾಗಿ ಪೊಲೀಸ್ ಪೇದೆ ಸಾವು; ಮರಳು ಟ್ರ್ಯಾಕ್ಟರ್ ಪಲ್ಟಿ ಹೊಡೆದು ಚಾಲಕ ಮೃತ್ಯು

ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಇತ್ತೀಚೆಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಪ್ರಾಣ ಕಳೆದುಕೊಳ್ಳುತ್ತಿರುವುದು ಹೆಚ್ಚಾಗಿದೆ. ಹೆಚ್ಚಿನ ಮಂದಿ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಇತ್ತೀಚೆಗೆ ಅಧ್ಯಯನವೊಂದು ತಿಳಿಸಿತ್ತು.

ಪ್ರಮುಖ ಸುದ್ದಿಗಳನ್ನು ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Diabetes Management Tips: ಈ ಏಳು ಪಾನೀಯಗಳನ್ನು ಸೇವಿಸಿ, ಮಧುಮೇಹ ನಿಯಂತ್ರಿಸಿ

ನೈಸರ್ಗಿಕವಾಗಿ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಆಯುರ್ವೇದ ಸೂಚಿಸುವ ಏಳು ಗಿಡಮೂಲಿಕೆ ಪಾನೀಯಗಳು ಇವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹವನ್ನು (Diabetes Management Tips) ನಿಯಂತ್ರಿಸಬಹುದು.

VISTARANEWS.COM


on

By

Diabetes Management Tips
Koo

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರನ್ನು ಕಾಡುವ ಕಾಯಿಲೆ ರಕ್ತದೊತ್ತಡ (blood pressure) ಮತ್ತು ಮಧುಮೇಹ (diabetes). ರಕ್ತದೊತ್ತಡವಾದರೆ ಬಹುಬೇಗನೆ ತನ್ನ ಇರುವಿಕೆಯನ್ನು ಸೂಚಿಸುತ್ತದೆ. ಆದರೆ ಮಧುಮೇಹ ಹೆಚ್ಚಿನವರಿಗೆ ಗೊತ್ತೇ ಆಗುವುದಿಲ್ಲ. ಮಧುಮೇಹದಿಂದ ಬಳಲುತ್ತಿರುವವರು ನೀವಾಗಿದ್ದರೆ ನೈಸರ್ಗಿಕವಾಗಿ ದೇಹದಲ್ಲಿ ಇನ್ಸುಲಿನ್ (insulin) ಉತ್ಪಾದನೆಯನ್ನು ಹೆಚ್ಚಿಸುವ ಹಲವು ಆಯುರ್ವೇದ ಗಿಡಮೂಲಿಕೆಯ (Ayurvedic herbal) ಪಾನೀಯಗಳಿವೆ.

ಮಧುಮೇಹವು ಇಂದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಕಾಡುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಆರೋಗ್ಯಕರ ಜೀವನ ನಡೆಸಲು ಮಧುಮೇಹದ ಲಕ್ಷಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ಪುರಾತನ ಭಾರತೀಯ ವೈದ್ಯಕೀಯ ಪದ್ಧತಿಯಾದ ಆಯುರ್ವೇದವು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ನೈಸರ್ಗಿಕ ಚಿಕಿತ್ಸೆಗಳನ್ನು ಶಿಫಾರಸು ಮಾಡುತ್ತದೆ. ಮಧುಮೇಹದ ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡುವ ಏಳು ಪ್ರಸಿದ್ಧ ಆಯುರ್ವೇದ ಪಾನೀಯಗಳಿವೆ.

ಆಯುರ್ವೇದವು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ನೈಸರ್ಗಿಕ ಪದಾರ್ಥಗಳ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಆಯುರ್ವೇದದ ಪಾನೀಯಗಳು ಔಷಧೀಯ ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಹಣ್ಣುಗಳನ್ನು ದೈನಂದಿನ ಜೀವನದಲ್ಲಿ ಸೇರಿಸಲು ನೆಚ್ಚಿನ ವಿಧಾನವಾಗಿದೆ. ಇದು ಕೇವಲ ರುಚಿಕರವಲ್ಲ ಆದರೆ ಸುಧಾರಿತ ಸೇರಿದಂತೆ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ.


ದಾಲ್ಚಿನ್ನಿ ಮತ್ತು ಮೆಂತ್ಯ

ದಾಲ್ಚಿನ್ನಿ ಮತ್ತು ಮೆಂತ್ಯ ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ದಾಲ್ಚಿನ್ನಿ ಮತ್ತು ಮೆಂತ್ಯಯೊಂದಿಗೆ ಒಂದು ಕಪ್ ಚಹಾ ಮಾಡಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಹೆಚ್ಚಿಸುತ್ತದೆ. ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಈ ಪದಾರ್ಥಗಳು ಮಧುಮೇಹ ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಹಾಗಲಕಾಯಿ

ಹಾಗಲಕಾಯಿಯನ್ನು ಆಯುರ್ವೇದದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಪರಿಣಾಮಕ್ಕಾಗಿ ಪ್ರಶಂಸಿಸಲಾಗುತ್ತದೆ. ಇದರ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನಗೊಳಿಸಬಹುದು. ನೈಸರ್ಗಿಕವಾಗಿ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಬಹುದು.


ನೆಲ್ಲಿಕಾಯಿ

ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಆಮ್ಲಾ ಜ್ಯೂಸ್ ಮಧುಮೇಹವನ್ನು ನಿರ್ವಹಿಸಲು ಪ್ರಸಿದ್ಧವಾದ ಆಯುರ್ವೇದ ಟಾನಿಕ್ ಆಗಿದೆ. ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಆಮ್ಲಾವು ಮೇದೋಜ್ಜೀರಕ ಗ್ರಂಥಿಯ ಕಾರ್ಯಗಳನ್ನು ಮತ್ತು ಇನ್ಸುಲಿನ್ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ. ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಅರಿಶಿನ

ಅರಿಶಿನವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲನ್ನು ಕುಡಿಯುವುದು ಉರಿಯೂತವನ್ನು ಕಡಿಮೆ ಮಾಡುತ್ತದೆ, ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಅರಿಶಿನದಲ್ಲಿರುವ ಅಗತ್ಯ ಸಂಯುಕ್ತವಾದ ಕರ್ಕ್ಯುಮಿನ್ ಸ್ವಾಭಾವಿಕವಾಗಿ ಮಧುಮೇಹದ ಲಕ್ಷಣಗಳನ್ನು ನಿರ್ವಹಿಸಬಲ್ಲದು.

ಬೇವಿನ ಎಲೆ

ಔಷಧೀಯ ಗುಣಗಳು ಸಮೃದ್ಧವಾಗಿರುವ ಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಸ್ವಲ್ಪ ಕಹಿಯಾಗಿದ್ದರೂ, ಬೇವಿನ ಎಲೆಯ ಚಹಾವು ಪರಿಣಾಮಕಾರಿ ಆಯುರ್ವೇದ ಪಾನೀಯವಾಗಿದ್ದು ಅದು ರಕ್ತದಲ್ಲಿನ ಗ್ಲೂಕೋಸ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ.


ನಿಂಬೆ ಮತ್ತು ಶುಂಠಿ

ನಿಂಬೆ ಮತ್ತು ಶುಂಠಿ ಆರೋಗ್ಯದ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ. ಶುಂಠಿ ಮತ್ತು ನಿಂಬೆಯ ಬೆಚ್ಚಗಿನ ಪಾನೀಯವು ದೇಹವನ್ನು ನಿರ್ವಿಷಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದು ನೈಸರ್ಗಿಕವಾಗಿ ಇನ್ಸುಲಿನ್ ಉತ್ಪಾದನೆ ಮಾಡುತ್ತದೆ.

ಇದನ್ನೂ ಓದಿ: FSSAI Warning: ನೀವು ತಿನ್ನುವ ಮಾವಿನ ಹಣ್ಣು ಸುರಕ್ಷಿತವಾಗಿದೆಯೇ?

ತ್ರಿಫಲ

ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣವು ಮೂರು ಹಣ್ಣುಗಳನ್ನು ಒಳಗೊಂಡಿದೆ: ಆಮ್ಲಾ, ಬಿಭಿಟಕಿ ಮತ್ತು ಹರಿತಕಿ. ತ್ರಿಫಲಾ ಚಹಾವು ಒಟ್ಟಾರೆ ಆರೋಗ್ಯ ಮತ್ತು ಜೀರ್ಣಕಾರಿ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

Continue Reading

ಆರೋಗ್ಯ

Health Tips Kannada: ಸನ್‌ಸ್ಕ್ರೀನ್‌ ಕುರಿತು ನಿಮಗೆಷ್ಟು ಗೊತ್ತು?

ಬಿಸಿಲಿಗೆ ಹೊರಗೆ ಹೋಗುವಾಗ ಸನ್‌ಸ್ಕ್ರೀನ್‌ (Sunscreen) ಹಚ್ಚಿಕೊಳ್ಳುವ ಸಲಹೆ ಸಾಮಾನ್ಯವಾಗಿ ಎಲ್ಲರಿಂದ ಬರುತ್ತದೆ. ಆದರೆ ಸೌಂದರ್ಯ ತಜ್ಞರಿಂದ ಬರುವ ಸಲಹೆಗಳಲ್ಲಿ ಬಹಳಷ್ಟನ್ನು ಪಾಲಿಸಲು ಸಾಧ್ಯವಿಲ್ಲ ಎಂದೇ ಭಾವಿಸುತ್ತೇವೆ. ಆದರೆ ಬಿರುಬೇಸಿಗೆಯಲ್ಲಿ ನಿಯಮಿತವಾಗಿ ಸನ್‌ಸ್ಕ್ರೀನ್‌ ಬಳಕೆ ಮಾಡುವುದರಿಂದ ಚರ್ಮ ಸುಟ್ಟು ಕೆಂಪಾಗುವುದು, ಸುಕ್ಕಾಗುವುದು, ಕಪ್ಪು ಕಲೆಗಳು ಬರುವಂಥ ಬಹಳಷ್ಟು ತೊಂದರೆಗಳನ್ನು ತಪ್ಪಿಸಬಹುದು. ಆದರೆ ಈ ಬಗ್ಗೆ ಹಲವಾರು ತಪ್ಪು ತಿಳಿವಳಿಕೆಗಳು ಚಾಲ್ತಿಯಲ್ಲಿವೆ. ಇವು ಏನು ಎಂಬ ಮಾಹಿತಿ (Health Tips Kannada) ಇಲ್ಲಿದೆ.

VISTARANEWS.COM


on

Health Tips Kannada
Koo

ಸನ್‌ಸ್ಕ್ರೀನ್‌ (Sunscreen) ಕುರಿತಾಗಿ ಬಹಳಷ್ಟು ತಪ್ಪು ಕಲ್ಪನೆಗಳು ಚಾಲ್ತಿಯಲ್ಲಿವೆ. ಸೂರ್ಯನ ಬಿಸಿಲಲ್ಲಿರುವ ಅತಿನೇರಳೆ ಕಿರಣಗಳು ಚರ್ಮಕ್ಕೆ ಹಾನಿ ಮಾಡುವುದನ್ನು ತಡೆಗಟ್ಟುವ ಉದ್ದೇಶ ಇದನ್ನು ಬಳಸುವುದರ ಹಿಂದಿದೆ. ತೀವ್ರ ಬಿಸಿಲಿಗೆ ಹೋಗುವಾಗ ಸನ್‌ಬ್ಲಾಕ್‌ ಜೊತೆಗೆ ಉದ್ದ ತೋಳಿನ ವಸ್ತ್ರಗಳನ್ನು ಧರಿಸುವುದು ಇನ್ನೂ ಒಳ್ಳೆಯದು.
ಬಿಸಿಲಿಗೆ ಹೊರಗೆ ಹೋಗುವಾಗ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವ ಸಲಹೆ ಸಾಮಾನ್ಯವಾಗಿ ಎಲ್ಲರಿಂದ ಬರುತ್ತದೆ. ಆದರೆ ಸೌಂದರ್ಯ ತಜ್ಞರಿಂದ ಬರುವ ಸಲಹೆಗಳಲ್ಲಿ ಬಹಳಷ್ಟನ್ನು ಪಾಲಿಸಲು ಸಾಧ್ಯವಿಲ್ಲ ಎಂದೇ ಭಾವಿಸುತ್ತೇವೆ. ಆದರೆ ಬಿರುಬೇಸಿಗೆಯಲ್ಲಿ ನಿಯಮಿತವಾಗಿ ಸನ್‌ಸ್ಕ್ರೀನ್‌ ಬಳಕೆ ಮಾಡುವುದರಿಂದ ಚರ್ಮ ಸುಟ್ಟು ಕೆಂಪಾಗುವುದು, ಸುಕ್ಕಾಗುವುದು, ಕಪ್ಪು ಕಲೆಗಳು ಬರುವಂಥ ಬಹಳಷ್ಟು ತೊಂದರೆಗಳನ್ನು ತಪ್ಪಿಸಬಹುದು. ಆದರೆ ಈ ಬಗ್ಗೆ ಹಲವಾರು ತಪ್ಪು ತಿಳುವಳಿಕೆಗಳು ಚಾಲ್ತಿಯಲ್ಲಿವೆ. ಏನವು ಎಂಬುದನ್ನು (Health Tips Kannada) ನೋಡೋಣ.

Woman hand apply sunscreen

ಮೋಡವಿರುವಾಗ ಸನ್‌ಸ್ಕ್ರೀನ್‌ ಬೇಡ

ಹಾಗೇನಿಲ್ಲ. ಮೋಡವಿರುವಾಗ ಸೂರ್ಯ ಕಾಣುವುದಿಲ್ಲ ಎನ್ನುವುದು ನಿಜವಾದರೂ, ಮೋಡದಡಿಗಿನ ಬಿಸಿಲು ಸಹ ಸಾಕಷ್ಟು ಸುಡುತ್ತದೆ. ತೀರ ಮಳೆ ಬರುವಾಗಿನ ಸಂದರ್ಭವನ್ನು ಹೊರತು ಪಡಿಸಿ, ಮೋಡ ಇರುವಾಗಲೂ ಚರ್ಮ ಸುಡಬಹುದು. ಹಾಗಾಗಿ ಸನ್‌ಸ್ಕ್ರೀನ್‌ ಕ್ರೀಮ್‌, ಸ್ಪ್ರೇ, ಸ್ಟಿಕ್‌ ಮುಂತಾದ ಯಾವುದನ್ನಾದರೂ ಬಳಸುವುದು ಒಳ್ಳೆಯದು.

Woman Putting Sunblock on Back

ಕಪ್ಪು ಬಣ್ಣದವರಿಗೆ ಸನ್‌ಸ್ಕ್ರೀನ್‌ ಬೇಡ

ಬಿಳಿ ಬಣ್ಣದವರ ಚರ್ಮ ಬಿಸಿಲಿಗೆ ಸುಟ್ಟು ಕೆಂಪಾಗುವುದು ಎದ್ದು ಕಾಣುತ್ತದೆ. ಆನಂತರ ಕಪ್ಪಾಗುವುದು ಸಹಜ. ಇದರರ್ಥ ಚರ್ಮದ ಬಣ್ಣ ಕಪ್ಪಾಗಿದ್ದರೆ ಬಿಸಿಲು ಸುಡುವುದಿಲ್ಲ ಎಂದಲ್ಲ, ಸುಟ್ಟಿದ್ದು ಕಾಣುವುದಿಲ್ಲ ಅಷ್ಟೆ. ಕಪ್ಪು ಚರ್ಮದಲ್ಲಿ ಮೆಲನಿನ್‌ ಇರುವುದು ಸ್ವಲ್ಪ ಹೆಚ್ಚು ಎನ್ನುವುದು ನಿಜ. ಆದರೆ ಅವರಿಗೂ ಸನ್‌ಬ್ಲಾಕ್‌ ಬೇಕು. ಯಾವುದೇ ಬಣ್ಣದವರಿಗಾದರೂ ಬಿಸಿಲಿಗೆ ಚರ್ಮ ಸುಡುವುದರಲ್ಲಿ ವ್ಯತ್ಯಾಸವಿಲ್ಲ.

ವಿಟಮಿನ್‌ ಡಿ ಕೊರತೆ

ಸದಾ ಕಾಲ ಸನ್‌ಸ್ಕ್ರೀನ್‌ ಹಚ್ಚಿಕೊಂಡೇ ಇದ್ದರೆ ವಿಟಮಿನ್‌ ಡಿ ಕೊರತೆಯಾಗಬಹುದು ಎಂಬುದು ಹಲವರ ವಾದ. ಆದರೆ ಹಾಗೇನಿಲ್ಲ. 365 ದಿನವೂ ಸನ್‌ಸ್ಕ್ರೀನ್‌ ಹಚ್ಚಿಕೊಂಡಿದ್ದರೆ, ವಿಟಮಿನ್‌ ಡಿ ಉತ್ಪಾದನೆಗೆ ಕೊಂಚ ಹಿನ್ನಡೆ ಆಗುವ ಸಾಧ್ಯತೆ ಇಲ್ಲದಿಲ್ಲ. ಆದರೆ ಸಾಧಾರಣವಾಗಿ ಯಾರೂ ಆ ಪ್ರಮಾಣದಲ್ಲಿ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದಿಲ್ಲ.

ಮೇಕಪ್‌ನಲ್ಲಿ ಇರುವಷ್ಟು ಎಸ್‌ಪಿಎಫ್‌ ಸಾಕಾಗುತ್ತದೆ

ಇಲ್ಲ, ಸಾಕಾಗುವುದಿಲ್ಲ. ಬಹಳಷ್ಟು ಬಾರಿ ಮೇಕಪ್‌ಗಳಲ್ಲಿ 30 ಎಸ್‌ಪಿಎಫ್‌ ಸನ್‌ಬ್ಲಾಕ್‌ ಸೇರಿಕೊಂಡಿರುವುದು ಹೌದು. ಆದರೆ ಸನ್‌ಸ್ಕೀನ್‌ನಷ್ಟು ಧಾರಾಳವಾಗಿ ಮೇಕಪ್‌ ಬಳಕೆಯಾಗುವುದಿಲ್ಲ. ಹಾಗಾಗಿ ಇದರಲ್ಲಿರುವ ಸನ್‌ಬ್ಲಾಕ್‌ ನಂಬಿಕೊಳ್ಳುವ ಬದಲು, ಪ್ರತ್ಯೇಕ್ ಸನ್‌ಸ್ಕ್ರೀನ್‌ ಉಪಯೋಗಿಸುವುದು ಉತ್ತಮ.

Woman Applying Sunscreen on Face

ಹೆಚ್ಚು ಎಸ್‌ಪಿಎಫ್‌ ಎಂದರೆ ಹೆಚ್ಚು ರಕ್ಷಣೆ

ಹಾಗಲ್ಲ, ಹೆಚ್ಚಿನ ಎಸ್‌ಪಿಎಫ್‌ ಇದ್ದರೆ ರಕ್ಷಣೆಯ ಪ್ರಮಾಣ ಹೆಚ್ಚು ಎಂದೇನಿಲ್ಲ. ಬದಲಿಗೆ, ಸಮಯ ದೀರ್ಘ ಎಂದಾಗಬಹುದು. ಉದಾ, 30 ಎಸ್‌ಪಿಎಫ್‌ ಇದ್ದರೆ ಎಷ್ಟು ಅತಿನೇರಳೆ ಕಿರಣಗಳನ್ನು ತಡೆಯುತ್ತದೋ 60 ಎಸ್‌ಪಿಎಫ್‌ ಇದ್ದರೆ ಅದರ ದುಪ್ಪಟ್ಟು ಅತಿನೇರಳೆ ಕಿರಣಗಳನ್ನು ತಡೆಯುತ್ತದೆ ಎಂದು ಅರ್ಥವಲ್ಲ. ಇದು ಎಷ್ಟು ದೀರ್ಘ ಕಾಲ ಯುವಿ ಕಿರಣಗಳನ್ನು ತಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ ಹೊರತು, ಎಷ್ಟು ಶೇಕಡಾ ತಡೆಯುತ್ತದೆ ಎಂದಲ್ಲ.

ವಾಟರ್‌ಪ್ರೂಫ್‌ ಇರುತ್ತದೆ

ಬಹಳಷ್ಟು ಕಂಪೆನಿಗಳು ಹಾಗೆಂದು ಹೇಳಿಕೊಳ್ಳುತ್ತವೆ. ಆದರೆ ವೃತ್ತಿಪರ ಈಜುಗಾರರು ಬಳಸುವಂಥ ಕೆಲವು ವಾಟರ್‌ ರೆಸಿಸ್ಟೆಂಟ್‌ ಸನ್‌ಬ್ಲಾಕ್‌ಗಳ ಹೊರತಾಗಿ, ಸಂಪೂರ್ಣ ವಾಟರ್‌ಪ್ರೂಫ್‌ ಇರುವುದು ಬಹಳ ಕಡಿಮೆ. ಹಾಗಾಗಿ ನೀರು, ಬೆವರು ಮುಂತಾದವುಗಳಿಂದ ಒದ್ದೆಯಾದಾಗ, ಒರೆಸಿದರೆ ಮತ್ತೆ ಸನ್‌ಸ್ಕ್ರೀನ್‌ ಬೇಕಾಗುತ್ತದೆ.

ಇದನ್ನೂ ಓದಿ: Hair Conditioner: ರಾಸಾಯನಿಕ ಹೇರ್‌ ಕಂಡೀಷನರ್‌ ಬಿಡಿ; ಈ 5 ನೈಸರ್ಗಿಕ ಹೇರ್ ಕಂಡೀಷನರ್ ಬಳಸಿ

ಎಲ್ಲರಿಗೂ ಒಂದೇ ಥರದ್ದು ಸಾಕು

ಇದೂ ತಪ್ಪು. ಒಂದೊಂದು ರೀತಿಯ ಚರ್ಮದವರಿಗೆ ಒಂದೊಂದು ರೀತಿಯ ಸನ್‌ ಬ್ಲಾಕ್‌ ಬೇಕಾಗಬಹುದು. ಎಣ್ಣೆ ಚರ್ಮದವರಿಗೆ ಜೆಲ್‌ ಸ್ವರೂಪದ ಸನ್‌ ಬ್ಲಾಕ್‌ಗಳು ಹೆಚ್ಚು ಉಪಯುಕ್ತ. ಇದರಿಂದ ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚಿಕೊಳ್ಳುವುದಿಲ್ಲ. ಒಣ ಚರ್ಮದವರಿಗೆ ಮಾಯಿಶ್ಚರೈಸರ್‌ ಜೊತೆಗಿರುವ ಸನ್‌ಸ್ಕ್ರೀನ್‌ ಅನುಕೂಲಕರ. ಸೂಕ್ಷ್ಮ ಚರ್ಮದವರು ಬೇಬಿ ಸನ್‌ಬ್ಲಾಕ್‌ ಉಪಯೋಗಿಸುವುದು ಕ್ಷೇಮ.

Continue Reading

ಆರೋಗ್ಯ

Sweat Problem: ದುರ್ಗಂಧದ ಬೆವರಿನ ಸಮಸ್ಯೆಗೆ ಇಲ್ಲಿವೆ ನೈಸರ್ಗಿಕ ಪರಿಹಾರಗಳು!

ಬೆವರಿ ನೀರಾಗಿ ಹರಿದು, ಒದ್ದೆಯಾಗಿ ನೆನೆಯುವುದಷ್ಟೇ ಅಲ್ಲ, ಅಕ್ಕಪಕ್ಕದವರೆಲ್ಲರ ಬೆವರ ಗಂಧವೂ ನಮ್ಮ ಮೂಗಿನ ಹೊಳ್ಳೆಯೊಳಕ್ಕೆ ದಾಳಿ ಮಾಡಿ ಅಲ್ಲಿರುವುದೇ ಕಷ್ಟಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಬೆವರುವುದು ಸಾಮಾನ್ಯ ಲಕ್ಷಣವೇ ಆದರೂ, ಬೆವರಿನ ದುರ್ಗಂಧ ಖಂಡಿತವಾಗಿಯೂ ಮುಜುಗರ ತರಿಸುವಂಥದ್ದೇ ಆಗಿದೆ. ಇದಕ್ಕೆ (sweat problem) ಏನು ಪರಿಹಾರ?

VISTARANEWS.COM


on

Sweat Problem
Koo

ಬಿರುಬೇಸಿಗೆಯಲ್ಲಿ ಯಾರಿಗೆ ಬೆವರುವುದಿಲ್ಲ ಹೇಳಿ! ಅದರಲ್ಲೂ ತುಂಬಿದ ಬಸ್‌, ಕಿಕ್ಕಿರಿದು ನೆರೆದಿರುವ ಜನಸಂದಣಿಯ ನಡುವೆ ಇರುವುದು ಸುಲಭದ ಮಾತಲ್ಲ. ಬೆವರಿ ನೀರಾಗಿ ಹರಿದು, ಒದ್ದೆಯಾಗಿ ನೆನೆಯುವುದಷ್ಟೇ ಅಲ್ಲ, ಅಕ್ಕಪಕ್ಕದವರೆಲ್ಲರ ಬೆವರ ಗಂಧವೂ ನಮ್ಮ ಮೂಗಿನ ಹೊಳ್ಳೆಯೊಳಕ್ಕೆ ದಾಳಿ ಮಾಡಿ ಅಲ್ಲಿರುವುದೇ ಕಷ್ಟಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಬೆವರುವುದು ಸಾಮಾನ್ಯ ಲಕ್ಷಣವೇ ಆದರೂ, ಬೆವರಿನ ದುರ್ಗಂಧ ಖಂಡಿತವಾಗಿಯೂ ಮುಜುಗರ ತರಿಸುವಂಥದ್ದೇ ಆಗಿದೆ. ಕೆಲವರಿಗೆ ಕಡಿಮೆ ಬೆವರಿದರೆ, ಇನ್ನೂ ಕೆಲವರಿಗೆ ಬೆವರುವುದೇ ಒಂದು ಸಮಸ್ಯೆ. ಇದಕ್ಕೆ ಕಾರಣಗಳು ಅನೇಕ. ಕೆಲವರ ಆಹಾರಭ್ಯಾಸದಿಂದ ಈ ಸಮಸ್ಯೆ ಕಾಡಿದರೆ, ಇನ್ನೂ ಕೆಲವರಿಗೆ ಬೊಜ್ಜು, ಹೃದಯದ ಸಮಸ್ಯೆ, ಥೈರಾಯ್ಡ್‌ ಸಮಸ್ಯೆ, ಒತ್ತಡ, ಮಧುಮೇಹ, ಮೆನೋಪಾಸ್‌ ಹೀಗೆ ನಾನಾ ಆರೋಗ್ಯ ಸಮಸ್ಯೆಗಳಿಂದಲೂ ಹೀಗಾಗುತ್ತದೆ. ಆದರೆ, ಬೆವರಿನ ದುರ್ಗಂಧದಿಂದ ಪಾರಾಗಲು ಅನೇಕರು ಹಲವು ವಿಧಾನಗಳಿಂದ ಪ್ರಯತ್ನಿಸುತ್ತಾರೆ. ಮಾರುಕಟ್ಟೆಯಲ್ಲಿ ಇದಕ್ಕೆ ಬಗೆಬಗೆಯ ಡಿಯೋಡರೆಂಟ್‌ ಹಾಗೂ ಪರಿಮಳ ದ್ರವ್ಯಗಳ ಮೂಲಕ ಉತ್ತರ ಸಿಗುತ್ತದೆಯಾದರೂ, ಅವೆಲ್ಲ ತಾತ್ಕಾಲಿಕ ಉತ್ತರಗಳಾದುವು. ಕೆಲವು ನೈಸರ್ಗಿಕ ವಿಧಾನಗಳಿಂದ ಬೆವರಿನ ದುರ್ಗಂಧಕ್ಕೆ ಮುಕ್ತಿ ಹಾಡಬಹುದು. ಆ ಕೆಲವು ಉಪಾಯಗಳು (sweat problem) ಇಲ್ಲಿವೆ.

Apple cider vinegar for Fungal Infection Home Remedies

ಆಪಲ್‌ ಸೈಡರ್‌ ವಿನೆಗರ್

ಆಪಲ್‌ ಸೈಡರ್‌ ವಿನೆಗರ್‌ನಲ್ಲಿ ಆಸ್ಟ್ರಿಂಜೆಂಟ್‌ ಗುಣಗಳಿರುವುದರಿಂದ ಇದು ನಮ್ಮ ದೇಹದಲ್ಲಿ ಅತಿಯಾಗಿ ಬೆವರುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲ ದುರ್ಗಂಧವನ್ನೂ ಕಡಿಮೆ ಮಾಡುತ್ತದೆ. ಇದರ ಆಂಟಿ ಪರ್ಸ್ಪಿರೆಂಟ್‌ ಗುಣಗಳು ಚರ್ಮದ ಮೇಲಿರುವ ಬೆವರಿನ ರಂಧ್ರಗಳನ್ನು ಮುಚ್ಚುವಂತೆ ಮಾಡುವುದರಿಂದ ದೇಹದ ಪಿಎಚ್‌ ಮಟ್ಟ ಸಮತೋಲನ ಕಾಯ್ದುಕೊಳ್ಳುತ್ತದೆ. ಒಂದು ಸಣ್ಣ ಬೌಲ್‌ನಲ್ಲಿ ಆಪಲ್‌ ಸೈಡರ್‌ ವಿನೆಗರ್‌ ಅನ್ನು ಸ್ವಲ್ಪ ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ. ನಂತರ ಒಂದು ಹತ್ತಿಯನ್ನು ಈ ಮಿಶ್ರಣದಲ್ಲಿ ಮುಳುಗಿಸಿ ತೆಗೆದು ಬೆವರು ಹೆಚ್ಚು ಬರುವ ಜಾಗಗಳಲ್ಲಿ ಹಚ್ಚಿಕೊಳ್ಳಿ. ಇದನ್ನು ನಿತ್ಯವೂ ಬಳಸುವುದರಿಂದ ಬೆವರಿನ ಸಮಸ್ಯೆ ಕಡಿಮೆಯಾಗಬಹುದು.

Baking soda for Fungal Infection Home Remedies

ಬೇಕಿಂಗ್‌ ಸೋಡಾ

ಕೇವಲ ಕೇಕ್‌ಗಷ್ಟೇ ಬೇಕಿಂಗ್‌ ಸೋಡಾದ ಪ್ರಯೋಜನ ಎಂದು ನೀವಂದುಕೊಂಡರೆ ತಪ್ಪಾಗುತ್ತದೆ. ಇದಕ್ಕೆ ಕೆಟ್ಟವಾಸನೆಯನ್ನು ಹೀರಿಕೊಳ್ಳುವ ಒಂದು ಅದ್ಭುತ ಗುಣವಿದೆ. ಹಾಗಾಗಿ ಇದು ನೈಸರ್ಗಿಕವಾದ ಡಿಯೋಡರೆಂಟ್.‌ ಇದು ಆಲ್ಕಲೈನ್‌ ಗುಣಗಳನ್ನು ಹೊಂದಿರುವುದರಿಂದ ದೇಹದ ಬೆವರಿನ ಆಮ್ಲೀಯ ಗುಣಗಳನ್ನು ಸಮತೋಲನಗೊಳಿಸಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಸ್ವಲ್ಪ ಬೇಕಿಂಗ್‌ ಸೋಡಾವನ್ನು ತೆಗೆದುಕೊಂಡು ಅದನ್ನು ಹೆಚ್ಚು ಬೆವರಿನ ಸಮಸ್ಯೆಯಿರುವ ದೇಹದ ಭಾಗಗಳಿಗೆ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಸಂದರ್ಭ ಇದನ್ನು ಹಚ್ಚಿಕೊಂಡು ಬೆಳಗ್ಗೆ ತೊಳೆಯಿರಿ. ಹೀಗೆ ಕೆಲದಿನಗಳ ಕಾಲ ಮಾಡುತ್ತಾ ಬಂದರೆ, ನಿಮ್ಮ ಬೆವರಿನ ಸಮಸ್ಯೆ ಕಡಿಮೆಯಾಗುವುದು.

ತೆಂಗಿನೆಣ್ಣೆ ಹಾಗೂ ಕರ್ಪೂರ

ಕರ್ಪೂರ ಹಾಗೂ ತೆಂಗಿನೆಣ್ಣೆ ಇವೆರಡು ನಮ್ಮ ದೇಹದ ಬೆವರಿನ ಸಮಸ್ಯೆಗೆ ಅತ್ಯದ್ಭುತ ಪರಿಹಾರವನ್ನು ನೀಡುತ್ತದೆ. ತೆಂಗಿನೆಣ್ಣೆಯಲ್ಲಿ ಲಾರಿಕ್‌ ಆಸಿಡ್‌ ಇರುವುದರಿಂದ ಇದು ಬ್ಯಾಕ್ಟೀರಿಯಾವನ್ನು ನಾಶಪಡಿಸಲು ಸಹಾಯ ಮಾಡುತ್ತದೆ. ಹೀಗಾಗಿ ಬೆವರಿನ ದುರ್ಗಂಧಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ಒಂದೆರಡು ಕರ್ಪೂರವನ್ನು ಸ್ವಲ್ಪ ತೆಂಗಿನೆಣ್ಣೆಯಲ್ಲಿ ಬೆರೆಸಿ ಅದನ್ನು ಬೆವರಿನ ಸಮಸ್ಯೆಯ ಭಾಗಗಳಿಗೆ ಹಚ್ಚಬಹುದು. ಈ ಎಣ್ಣೆ ದೇಹದ ಚರ್ಮದ ಮೇಲೆ ಒಂದು ಲಘುವಾದ ಘಮದೊಂದಿಗೆ ಇದ್ದು ಬೆವರಿನ ದುರ್ಗಂಧಕ್ಕೆ ಮುಕ್ತಿ ನೀಡುತ್ತದೆ.

Black and green tea

ಬ್ಲ್ಯಾಕ್‌ ಟೀ

ಬ್ಲ್ಯಾಕ್‌ ಟೀಯಲ್ಲಿ ಆಂಟಿ ಪರ್ಸ್ಪಿರೆಂಟ್‌ ಗುಣಗಳಿರುವುದರಿಂದ ಇದೂ ಕೂಡಾ ಆಪಲ್‌ ಸೈಡರ್‌ ವಿನೆಗರ್‌ನಂತೆಯೇ ವರ್ತಿಸುತ್ತದೆ. ದೇಹದ ಬೆವರುಗ್ರಂಥಿಗಳ ಮೇಲೆ ಒಂದು ಪದರದಂತೆ ನಿಂತು ಬೆವರಿನ ಸಮಸ್ಯೆ ಕಡಿಮೆ ಮಾಡುತ್ತದೆ. ಬ್ಯ್ಲಾಕ್‌ ಟೀಯನ್ನು ಹೆಚ್ಚು ಬೆವರಿನ ಜಾಗಗಳಲ್ಲಿ ಹಚ್ಚುವ ಮೂಲಕ ಇದರ ಪ್ರಯೋಜನ ಪಡೆಯಬಹುದು.

Aloe vera leaf and aloevera gel on wood table

ಆಲೊವೆರಾ ಜೆಲ್

ಆಲೋವೆರಾ ಜೆಲ್‌ ತನ್ನ ಕೂಲಿಂಗ್‌ ಗುಣಗಳ ಮೂಲಕ ಚರ್ಮದ ಎಲ್ಲ ಬಗೆಯ ಸಮಸ್ಯೆಗಳಿಗೂ ಉತ್ತರ ನೀಡುತ್ತದೆ. ಬೆವರಿನ ಸಮಸ್ಯೆಯಿರುವ ಮಂದಿಯೂ ಆಲೊವೆರಾ ಜೆಲ್‌ ಅನ್ನು ಅತಿಯಾಗಿ ಬೆವರುವ ಜಾಗಗಳಲ್ಲಿ ಹಚ್ಚುವ ಮೂಲಕ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ: Eye Care Tips: ಕಣ್ಣಿನ ಸುಸ್ತಿಗೆ ನೀವು ಇಷ್ಟಾದರೂ ಮಾಡಿ, ಕಣ್ಣಿಗೆ ಅಗತ್ಯ ವಿಶ್ರಾಂತಿ ನೀಡಿ!

Continue Reading

ಆರೋಗ್ಯ

Eye Care Tips: ಕಣ್ಣಿನ ಸುಸ್ತಿಗೆ ನೀವು ಇಷ್ಟಾದರೂ ಮಾಡಿ, ಕಣ್ಣಿಗೆ ಅಗತ್ಯ ವಿಶ್ರಾಂತಿ ನೀಡಿ!

ಕಣ್ಣು ನಮ್ಮ ದೇಹದ ಅತ್ಯಂತ ಮುಖ್ಯವಾದ ಅಂಗಗಳಲ್ಲಿ ಒಂದು. ಕಣ್ಣಿನ ಸೌಂದರ್ಯ ಹಾಗೂ ಆರೋಗ್ಯವೂ ಕೂಡ ನಮ್ಮ ಕೈಯಲ್ಲೇ ಇದೆ. ಕಣ್ಣನ್ನು ಆರೋಗ್ಯವಾಗಿ ಇಟ್ಟುಕೊಳ್ಳುವಲ್ಲಿ, ಕಣ್ಣಿಗೆ ಸೂಕ್ತ ವಿಶ್ರಾಂತಿ ನೀಡುವಲ್ಲಿ ನಾವು ಅತ್ಯಂತ ನಿರ್ಲಕ್ಷ್ಯ ಮಾಡುತ್ತೇವೆ. ಕಣ್ಣಿಗೆ ಬೇಕಾದ ವಿಶ್ರಾಂತಿ ನೀಡದೆ, ಅದಕ್ಕೆ ನಿರಂತರ ಕೆಲಸ ನೀಡುತ್ತೇವೆ. ದುಡಿದು ಸುಸ್ತಾದ ದೇಹಕ್ಕೆ ಕಣ್ಣಿನಿಂದ ಮಾಡಬಹುದಾದ ಕೆಲಸವನ್ನೇ ಮಾಡು ವಿಶ್ರಾಂತಿ ಎನ್ನುತ್ತೇವೆ. ಆದರೆ ಕಣ್ಣಿಗೆ, ಮಿದುಳಿಗೆ ವಿಶ್ರಾಂತಿ ಸಿಕ್ಕಿರುವುದಿಲ್ಲ. ಅದಕ್ಕಾಗಿಯೇ ಕಣ್ಣಿನ ಕಾಳಜಿಯನ್ನು ನಾವು ಆಗಾಗ ಮಾಡಬೇಕು. ಈ ಕುರಿತು ಇಲ್ಲಿದೆ (Eye Care Tips) ಆರೋಗ್ಯ ಮಾಹಿತಿ.

VISTARANEWS.COM


on

Eye Care Tips
Koo

ಸೌಂದರ್ಯವು ನೋಡುಗರ ಕಣ್ಣಿನಲ್ಲಿದೆ ನಿಜ. ಆದರೆ ಕಣ್ಣುಗಳಿಗೇ ಬಹಳ ಸುಸ್ತಾದರೆ ಯಾವ ಸೌಂದರ್ಯವೂ ಕಣ್ಣಿಗೆ ಕಾಣದು. ಯಾಕೆಂದರೆ ಕಣ್ಣು ನಮ್ಮ ದೇಹದ ಅತ್ಯಂತ ಮುಖ್ಯವಾದ ಅಂಗಗಳಲ್ಲಿ ಒಂದು. ಕಣ್ಣಿನ ಸೌಂದರ್ಯ ಹಾಗೂ ಆರೋಗ್ಯವೂ ಕೂಡಾ ನಮ್ಮ ಕೈಯಲ್ಲೇ ಇದೆ. ಕಣ್ಣನ್ನು ಆರೋಗ್ಯವಾಗಿ ಇಟ್ಟುಕೊಳ್ಳುವಲ್ಲಿ, ಕಣ್ಣಿಗೆ ಸೂಕ್ತ ವಿಶ್ರಾಂತಿ ನೀಡುವಲ್ಲಿ ನಾವು ಅತ್ಯಂತ ನಿರ್ಲಕ್ಷ್ಯ ಮಾಡುತ್ತೇವೆ. ಕಣ್ಣಿಗೆ ಬೇಕಾದ ವಿಶ್ರಾಂತಿ ನೀಡದೆ, ಅದಕ್ಕೆ ನಿರಂತರ ಕೆಲಸ ನೀಡುತ್ತೇವೆ. ದುಡಿದು ಸುಸ್ತಾದ ದೇಹಕ್ಕೆ ಕಣ್ಣಿನಿಂದ ಮಾಡಬಹುದಾದ ಕೆಲಸವನ್ನೇ ಮಾಡು ವಿಶ್ರಾಂತಿ ಎನ್ನುತ್ತೇವೆ. ಆದರೆ, ಕಣ್ಣಿಗೆ, ಮಿದುಳಿಗೆ ವಿಶ್ರಾಂತಿ ಸಿಕ್ಕಿರುವುದಿಲ್ಲ. ಅದಕ್ಕಾಗಿಯೇ ಕಣ್ಣಿನ ಕಾಳಜಿಯನ್ನು ನಾವು ಆಗಾಗ ಮಾಡಬೇಕು. ಅದರಲ್ಲೂ ಬೇಸಿಗೆಯಲ್ಲಿ ಈ ಬಗ್ಗೆ ತುಸು ಹೆಚ್ಚೇ ಗಮನ ನೀಡಬೇಕು. ಬನ್ನಿ, ಕಣ್ಣಿನ ಆರೈಕೆಯನ್ನು ನೀವು ಹೇಗೆಲ್ಲ ಮಾಡಬಹುದು (Eye Care Tips) ಎಂಬ ಸಲಹೆಗಳು ಇಲ್ಲಿವೆ.

Eyes Treatment with Cloth Mask

ತಣ್ಣೀರ ಸಿಂಚನ

ದುಡಿದು ಸುಸ್ತಾಗಿ ಬಂದಾಗ, ಬೆಳಗ್ಗೆ ಎದ್ದ ಕೂಡಲೇ ಅಥವಾ ಕೆಲಸದ ನಡುವೆ ಕಣ್ಣಿಗೆ ಸುಸ್ತೆನಿಸಿದಾಗ ಆಗಾಗ ಕಣ್ಣಿಗೆ ತಣ್ಣೀರ ಸಿಂಚನ ಮಾಡಿ. ನಳ್ಳಿಯ ನೀರು ತಿರುಗಿಸಿ ಕಣ್ಣಿಗೆ ಚಿಮುಕಿಸಿ. ಹಾಯೆನಿಸುತ್ತದೆ. ಅಥವಾ, ಒಂದು ಕೋಲ್ಡ್‌ ಪ್ಯಾಡನ್ನು ಫ್ರಿಜ್‌ನಲ್ಲಿಟ್ಟುಕೊಂಡಿರಿ. ಅದನ್ನು ತೆಗೆದು ಕಣ್ಣಿನ ಮೇಲೆ ಇಟ್ಟುಕೊಳ್ಳಬಹುದು. ಕೊಂಚ ಕ್ಷಣಗಳ ಈ ನಡೆ ಕೂಡಾ ಕಣ್ಣಿಗೆ ಅಗಾಧ ಚೈತನ್ಯ ತಂದುಕೊಡುತ್ತದೆ.

Aloe vera leaf and aloevera gel on wood table

ಆಲೊವೆರಾ ಜೆಲ್

ಇನ್ನೊಂದು ಬಹಳ ಅದ್ಭುತ ಟಿಪ್ಸ್‌ ಎಂದರೆ, ಕಣ್ಣಿಗೆ ಅಲೊವೆರಾ ಜೆಲ್‌ ಹಚ್ಚುವುದು. ಅಂದರೆ ಕಣ್ಣಿನ ಸುತ್ತಮುತ್ತ ಅಲೊವೆರಾ ಜೆಲ್‌ ಅನ್ನು ನಿತ್ಯವೂ ಹಚ್ಚಿಕೊಳ್ಳುವುದು ಅಭ್ಯಾಸ ಮಾಡಿಕೊಳ್ಳಿ. ಆಲೊವೆರಾದಲ್ಲಿ ತಂಪುಕಾರಕ ಗುಣಗಳಿದ್ದು ಇದು ಕಣ್ಣಿನ ಸುತ್ತಲ ಚರ್ಮದ ಮೇಲೆ ಪದರದಂತೆ ಕಾಯ್ದುಕೊಂಡು ಕಣ್ಣಿನ ಮೇಲೆ ಬೀಳುವ ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ಇದರ ಜೊತೆಗೆ ಆಲೊವೆರಾ ರಸವನ್ನು ಫ್ರೀಜರ್‌ನಲ್ಲಿಟ್ಟು ಅದನ್ನು ಕ್ಯೂಬ್‌ನಂತೆ ಮಾಡಿ ಅದನ್ನು ಸುಸ್ತಾದ ಕಣ್ಣಿನ ಮೇಲೆ ಇಟ್ಟುಕೊಂಡು ಕೊಂಚ ಕಾಲ ಇಟ್ಟುಕೊಂಡು ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಕಣ್ಣಿಗೆ ಹಾಯೆನಿಸುತ್ತದೆ. ಬಹಳ ಪ್ರಯೋಜನ ಸಿಗುತ್ತದೆ.

Cucumber

ಸೌತೆಕಾಯಿ

ಎಲ್ಲರಿಗೂ ತಿಳಿದಿರುವ ಅತ್ಯಂತ ಫಲಪ್ರದ ಉಪಾಯವೆಂದರೆ ಸೌತೆಕಾಯಿ. ಸೌತೆಕಾಯಿಯಲ್ಲಿರುವ ತಂಫೂಖಾರಕ ಗುಣಗಳು ಕಣ್ಣಿಗೆ ಬಹಳ ಒಳ್ಳೆಯದು. ಇದರಲ್ಲಿ ಹೆಚ್ಚು ನೀರಿನಂಶವೂ ಇರುವುದರಿಂದ ಕಣ್ಣ ಮೇಲೆ ಇಟ್ಟುಕೊಂಡರೆ ತಂಪೆನಿಸುತ್ತದೆ. ಫ್ರಿಡ್ಜ್‌ನಲ್ಲಿಟ್ಟು ತೆಗದೂ ಇದನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಕಣ್ಣುಗಳ ಮೇಲಿಡಬಹುದು. ಕಣ್ಣಿನ ಮೇಲಿಟ್ಟು ೧೦ರಿಂದ ೧೫ ನಿಮಿಷ ವಿಶ್ರಾಂತಿ ಪಡೆದು ಎದ್ದರೆ, ರಿಲ್ಯಾಕ್ಸ್‌ ಆಗುತ್ತದೆ. ಕಣ್ಣಿನಲ್ಲಿ ಹೊಸ ಚೈತನ್ಯ ಮೂಡುತ್ತದೆ. ದಣಿದ ಕಣ್ಣುಗಳಿಗೆ ಇದು ದಿವ್ಯೌಷಧ.

Green tea

ಚಹಾ

ಮನೆಯಲ್ಲಿ ಗ್ರೀನ್‌ ಟೀ ಕುಡಿಯುವ ಅಭ್ಯಾಸವಿದ್ದರೆ, ಟೀ ಬ್ಯಾಗ್‌ಗಳನ್ನು ಬಳಸುವ ಅಭ್ಯಾಸವಿದ್ದರೆ ಬ್ಯಾಗುಗಳನ್ನು ಎಸೆಯಬೇಡಿ. ಅದನ್ನು ಬಳಸಿದ ಮೇಲೆ ಅದನ್ನು ಫ್ರಿಡ್ಜ್‌ನಲ್ಲಿಟ್ಟಿರಿ. ಸ್ವಲ್ಪ ನೀರಿನಲ್ಲಿ ಅದ್ದಿ ನಂತರ ಅದನ್ನು ಕಣ್ಣ ಮೇಲೆ ಇಟ್ಟುಕೊಂಡು ಹತ್ತು ನಿಮಿಷ ವಿಶ್ರಾಂತಿ ಪಡೆದರೆ ಕಣ್ಣಿನ ಸುಸ್ತೆಲ್ಲ ಮಾಯ.

rose water

ರೋಸ್‌ ವಾಟರ್

ಏನು ಮಾಡಲು ಸಮಯ ಸಿಗದಿದ್ದರೂ ಇದನ್ನು ಮಾಡಲು ಹೆಚ್ಚು ಸಮಯದ ಅವಶ್ಯಕತೆ ಇಲ್ಲ. ರೋಸ್‌ ವಾಟರ್‌ ಅಥವಾ ಗುಲಾಬಿ ಜಲದ ನಾಲ್ಕೈದು ಬಿಂದುಗಳನ್ನು ಹತ್ತಿಯಲ್ಲಿ ಹಾಕಿ ಅದರಿಂದ ಕಣ್ಣ ಸುತ್ತ ಹಚ್ಚಿಕೊಳ್ಳಿ. ಕೆಲಸದ ನಡುವೆ ಬ್ಯಾಗ್‌ನಲ್ಲೊಂದು ರೋಸ್‌ ವಾಟರ್‌ ಬಾಟಲ್‌ ಇಟ್ಟುಕೊಂಡಿದ್ದರೆ ಅಗತ್ಯ ಬಿದ್ದಾಗ ಕಚೇರಿಯಲ್ಲೂ ಲ್ಯಾಪ್‌ಟಾಪ್‌ ಪರದೆಯನ್ನೇ ನೋಡಿ ಸುಸ್ತಾದಾಗ ಹೀಗೆ ಮಾಡಿಕೊಳ್ಳಬಹುದು.

Continue Reading
Advertisement
List of Movies Releasing From may 24
ಟಾಲಿವುಡ್8 mins ago

List of Movies Releasing: ಈ ವಾರ ಬಿಡುಗಡೆಗೆ ಸಜ್ಜಾಗಿವೆ ಈ ಸಾಲು ಸಾಲು ಸಿನಿಮಾಗಳು!

Prashant Kishor
ದೇಶ22 mins ago

Prashant Kishor: 3ನೇ ಅವಧಿಯ ಮೋದಿ ಸರ್ಕಾರದಿಂದ ಈ 4 ಕ್ರಾಂತಿಕಾರಕ ಬದಲಾವಣೆ; ಪ್ರಶಾಂತ್‌ ಕಿಶೋರ್‌ ಭವಿಷ್ಯ

Viral Video
ವೈರಲ್ ನ್ಯೂಸ್33 mins ago

Viral Video: ರಸ್ತೆ ಜಗಳದಿಂದ ತಪ್ಪಿಸಿಕೊಳ್ಳುವುದು ಹೇಗೆ? ಬೆಂಗಳೂರು ಪೊಲೀಸರ ವಿಡಿಯೊ ಪಾಠ ಇಲ್ಲಿದೆ!

Diabetes Management Tips
Latest36 mins ago

Diabetes Management Tips: ಈ ಏಳು ಪಾನೀಯಗಳನ್ನು ಸೇವಿಸಿ, ಮಧುಮೇಹ ನಿಯಂತ್ರಿಸಿ

gold rate today beauty
ಚಿನ್ನದ ದರ37 mins ago

Gold Rate Today: ಬಂಗಾರದ ಬೆಲೆಯಲ್ಲಿ ಯಥಾಸ್ಥಿತಿ; ಇಂದಿನ ದರಗಳನ್ನು ಇಲ್ಲಿಯೇ ನೋಡಿ

Viral News
ವೈರಲ್ ನ್ಯೂಸ್40 mins ago

Viral News: ಸಿಂಹದ ಹಿಂಡನ್ನೇ ಹಿಮ್ಮೆಟ್ಟಿಸಿದ ಕಾಡುಕೋಣಗಳು; ರೋಮಾಂಚನಕಾರಿ ವಿಡಿಯೊ ನೀವೂ ನೋಡಿ

Rishab shetty family visit Hariharpur Narasimhaswamy
ಸ್ಯಾಂಡಲ್ ವುಡ್58 mins ago

Rishab shetty: ಹರಿಹರಪುರ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಕುಟುಂಬದ ಭೇಟಿ: ನರಸಿಂಹಸ್ವಾಮಿಯ ದರ್ಶನ ಪಡೆದ ಡಿವೈನ್‌ ಸ್ಟಾರ್‌!

nisha cp yogeshwara
ವೈರಲ್ ನ್ಯೂಸ್1 hour ago

CP Yogeshwara: “ಹೊಡೀತಾರೆ, ಭಿಕ್ಷೆ ಬೇಡು ಅನ್ತಾರೆ….ʼʼ ಯೋಗೇಶ್ವರ್‌ ವಿರುದ್ಧ ಕಣ್ಣೀರು ಹಾಕುತ್ತಾ ರೆಬೆಲ್‌ ಆದ ಮಗಳು

Nandini Milk No incentives for milk producers Ashok slams govt for sponsoring foreign cricket team
ರಾಜಕೀಯ1 hour ago

Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

Viral video
ವೈರಲ್ ನ್ಯೂಸ್1 hour ago

Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ7 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ20 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌