ಕಲ್ಯಾಣ ಕರ್ನಾಟಕಕ್ಕೆ ಮೀಸಲಾದ ಹುದ್ದೆಗಳ ನೇಮಕಕ್ಕೆ ಪ್ರತ್ಯೇಕ ಅಧಿಸೂಚನೆ: ಸರ್ಕಾರದ ಆದೇಶ - Vistara News

ಉದ್ಯೋಗ

ಕಲ್ಯಾಣ ಕರ್ನಾಟಕಕ್ಕೆ ಮೀಸಲಾದ ಹುದ್ದೆಗಳ ನೇಮಕಕ್ಕೆ ಪ್ರತ್ಯೇಕ ಅಧಿಸೂಚನೆ: ಸರ್ಕಾರದ ಆದೇಶ

ಹೈದರಾಬಾದ್‌ ಕರ್ನಾಟಕದ ಸ್ಥಳೀಯ ಜನಪ್ರತಿನಿಧಿಗಳ ಒತ್ತಾಯದಂತೆ ಪ್ರತ್ಯೇಕ ನೇಮಕ ಪ್ರಕ್ರಿಯೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.

VISTARANEWS.COM


on

hyderabad karnataka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ಸರ್ಕಾರಿ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಮಹತ್ತರ ಬದಲಾವಣೆ ತರಲಾಗಿದೆ. ಇನ್ನು ಮುಂದೆ ಕಲ್ಯಾಣ ಕರ್ನಾಟಕದ (ಹೈದರಾಬಾದ್‌ ಕರ್ನಾಟಕ) ಹುದ್ದೆಗಳ ನೇಮಕಕ್ಕೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಿ, ಪ್ರತ್ಯೇಕ ನೇಮಕ ಪ್ರಕ್ರಿಯೆ ನಡೆಸಲಾಗುತ್ತದೆ.

ಈ ಸಂಬಂಧ ರಾಜ್ಯ ಸರ್ಕಾರ ಜೂನ್‌ ೧೫ರಂದು ಆದೇಶ ಹೊರಡಿಸಿದ್ದು, ಎಲ್ಲ ನೇಮಕಾತಿ ಪ್ರಾಧಿಕಾರಗಳು ಈ ಆದೇಶವನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ.

ಇದುವರೆಗೆ ೨೦೨೦ರ ಜೂನ್‌ನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಪ್ರಕಾರ ಒಂದೇ ಅಧಿಸೂಚನೆಯಲ್ಲಿ ಮಿಕ್ಕುಳಿದ ವೃಂದ ಮತ್ತು ಸ್ಥಳೀಯ ವೃಂದ ಎಂದು ಹುದ್ದೆಗಳನ್ನು ವಿಭಾಗಿಸಿ, ನೇಮಕ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಒಂದೇ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಿ, ಒಂದೇ ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನದ ಮೂಲಕ ನೇಮಕ ನಡೆಯುತ್ತಿತ್ತು. ಅಭ್ಯರ್ಥಿಗಳು ತಮ್ಮ ಇಚ್ಛೆಯಂತೆ ಸ್ಥಳೀಯ ಅಥವಾ ಮಿಕ್ಕುಳಿದ ವೃಂದವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿತ್ತು.

ಇದರಿಂದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಸ್ಥಳೀಯ ಜನಪ್ರತಿನಿಧಿಗಳು ದೂರಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ತೀರ್ಮಾನಿಸಲು ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಕಳೆದ ಮೇ ೭ರಂದು ನಡೆಸಿದ ಸಭೆಯಲ್ಲಿನ ತೀರ್ಮಾನದಂತೆ ಈಗ ಸರ್ಕಾರ ಈ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಹೀಗಿದೆ;

ಮಿಕ್ಕುಳಿದ ವೃಂದ ಮತ್ತು ಸ್ಥಳೀಯ ವೃಂದದ ಹುದ್ದೆಗಳಿಗೆ ಒಂದೇ ಅಧಿಸೂಚನೆ ಹೊರಡಿಸಬೇಕೆಂದು ೨೦೨೦ರ ಜೂನ್‌ ೬ರಂದು ಹೊರಡಿಸಲಾಗಿದ್ದ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಲಾಗಿದೆ.

ಕೆಎಎಸ್‌ಗೆ ಒಂದೇ ಅಧಿಸೂಚನೆ

ಗೆಜೆಟೆಡ್‌ ಪ್ರೊಭೆಷನರಿ ಹುದ್ದೆಗಳ ನೇಮಕಕ್ಕೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ. ಕೆಎಎಸ್‌ ಹುದ್ದೆಗಳ ನೇಮಕಕ್ಕೆ ಒಂದೇ ಅಧಿಸೂಚನೆ ಹೊರಡಿಸಲಾಗುತ್ತದೆ. ಒಂದೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಅರ್ಜಿ ಸಲ್ಲಿಸುವಾಗಲೇ ಅಭ್ಯರ್ಥಿಯು ಯಾವ ವೃಂದದ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಸ್ಪಷ್ಟ ಮಾಹಿತಿಯನ್ನು ಅಭ್ಯರ್ಥಿಗಳಿಂದ ಪಡೆದುಕೊಳ್ಳುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಈ ಆದೇಶದಲ್ಲಿ ಸೂಚಿಸಲಾಗಿದೆ.

ಈಗಾಗಲೇ ಜಾರಿಯಲ್ಲಿರುವ ನೇಮಕ ಪ್ರಕ್ರಿಯೆಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಅವು ಈ ಹಿಂದಿನ ಅಧಿಸೂಚನೆಯಂತೆಯೇ ನಡೆಯಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ | ಸರ್ಕಾರದ ಹೊರಗುತ್ತಿಗೆ ಹುದ್ದೆಗಳಲ್ಲಿಯೂ ಮಹಿಳೆಯರಿಗೆ ಶೇ.33 ಮೀಸಲು ಜಾರಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉದ್ಯೋಗ

Job Alert: ಬೆಂಗಳೂರಿನಲ್ಲಿದೆ ಉದ್ಯೋಗಾವಕಾಶ; 10, 12ನೇ ತರಗತಿ ಪಾಸಾದವರೂ ಅಪ್ಲೈ ಮಾಡಿ

Job Alert: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಜೂನಿಯರ್‌ ಅಸಿಸ್ಟಂಟ್‌, ಚಾಲಕ ಸೇರಿದಂತೆ ಒಟ್ಟು 39 ಹುದ್ದೆಗಳಿವೆ. ಪದವಿ ಜತೆಗೆ 10, 12ನೇ ತರಗತಿ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಬಹುದು. ಆಸಕ್ತರು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದೆ. ನಿಮ್ಮ ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 26.

VISTARANEWS.COM


on

Job Alert
Koo

ಬೆಂಗಳೂರು: ರಾಜ್ಯದಲ್ಲೇ ಅದರಲ್ಲಿಯೂ ಬೆಂಗಳೂರಿನಲ್ಲಿ ಉದ್ಯೋಗ ನಿರ್ವಹಿಸಬೇಕು ಎನ್ನುವ ಕನಸು ಕಾಣುವವರಿಗೆ ಇಲ್ಲಿದೆ ಸುವರ್ಣಾವಕಾಶ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ (Karnataka State Souharda Federal Cooperative Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಜೂನಿಯರ್‌ ಅಸಿಸ್ಟಂಟ್‌, ಚಾಲಕ ಸೇರಿದಂತೆ ಒಟ್ಟು 39 ಹುದ್ದೆಗಳಿವೆ (KSSFCL Recruitment 2024). ಪದವಿ ಜತೆಗೆ 10, 12ನೇ ತರಗತಿ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಬಹುದು. ಆಸಕ್ತರು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದೆ. ನಿಮ್ಮ ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 26 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಚಾರ್ಟರ್ಡ್ ಅಕೌಂಟೆಂಟ್ 1 ಹುದ್ದೆ, ವಿದ್ಯಾರ್ಹತೆ: ಸಿಎ, ಸಿಎಸ್‌, ಐಸಿಡಬ್ಲ್ಯುಎ
ಕಾನೂನು ಅಧಿಕಾರಿ 2 ಹುದ್ದೆ, ವಿದ್ಯಾರ್ಹತೆ: ಎಲ್‌ಎಲ್‌ಬಿ, ಕಾನೂನು ವಿಷಯದಲ್ಲಿ ಪದವಿ
ಎಚ್‌ಆರ್‌ ಆಫೀಸರ್ 1 ಹುದ್ದೆ, ವಿದ್ಯಾರ್ಹತೆ: ಎಚ್‌ಆರ್‌ ವಿಷಯದಲ್ಲಿ ಎಂಬಿಎ
ತರಬೇತಿ ಅಧಿಕಾರಿ 1 ಹುದ್ದೆ, ವಿದ್ಯಾರ್ಹತೆ: ಎಂಎ, ಎಂಎಸ್‌ಡಬ್ಲ್ಯು
ಫ್ರೆಂಡ್ಲಿ ಡೆವಲಪ್‌ಮೆಂಟ್‌ ಆಫೀಸರ್ (Friendly Development Officer) 11 ಹುದ್ದೆ, ವಿದ್ಯಾರ್ಹತೆ: ಯಾವುದೇ ಪದವಿ
ಸಹಾಯಕರು 8 ಹುದ್ದೆ, ವಿದ್ಯಾರ್ಹತೆ: ಯಾವುದೇ ಪದವಿ
ಟೈಪಿಸ್ಟ್ & ಸ್ಟೆನೊ 2 ಹುದ್ದೆ, ವಿದ್ಯಾರ್ಹತೆ: ಯಾವುದೇ ಪದವಿ
ಜೂನಿಯರ್ ಅಸಿಸ್ಟೆಂಟ್ 11 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ
ಡೆಪ್ಯುಟಿ ಸ್ಟಾಫ್ & ವೆಹಿಕಲ್ ಡ್ರೈವರ್ 2 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ

ವಯೋಮಿತಿ ಮತ್ತು ಅರ್ಜಿ ಶುಲ್ಕ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 25 ವರ್ಷದಿಂದ 35 ವರ್ಷದೊಳಿಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಚಾರ್ಟರ್ಡ್ ಅಕೌಂಟೆಂಟ್, ಲಾ ಆಫೀಸರ್, ಎಚ್ಆರ್ ಆಫೀಸರ್, ಟ್ರೈನಿಂಗ್ ಆಫೀಸರ್, ಫ್ರೆಂಡ್ಲಿ ಡೆವಲಪ್‌ಮೆಂಟ್‌ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. ಇನ್ನು ಸಹಾಯಕರು, ಟೈಪಿಸ್ಟ್ ಮತ್ತು ಸ್ಟೆನೋ, ಜೂನಿಯರ್ ಅಸಿಸ್ಟೆಂಟ್, ಡೆಪ್ಯುಟಿ ಸ್ಟಾಫ್ ಮತ್ತು ವೆಹಿಕಲ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 300 ರೂ. ಪಾವತಿಸಬೇಕು. ಆಫ್‌ಲೈನ್‌ ಮೂಲಕವೇ ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ವಿಧಾನ ಮತ್ತು ಮಾಸಿಕ ಸಂಬಳ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳ ಹುದ್ದೆಗೆ ಅನುಗುಣವಾಗಿ 13,000 ರೂ. 70,000 ಮಾಸಿಕ ವೇತನ ದೊರೆಯಲಿದೆ.

KSSFCL Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

”Souharda Sahakari Soudha”, #68, First Floor, 18th Cross Road,
Margosa Road, Malleswaram, Bengaluru-560055.

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ವಿಳಾಸ: souharda.coop ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: Job Alert: ಇಂಡಿಯನ್‌ ಹೈವೇ ಮ್ಯಾನೇಜ್‌ಮೆಂಟ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಇಂದೇ ಅಪ್ಲೈ ಮಾಡಿ

Continue Reading

ಉದ್ಯೋಗ

Job Alert: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 2,700 ಅಪ್ರೆಂಟಿಸ್ ಶಿಪ್ ಹುದ್ದೆ; ಆಯ್ಕೆಯಾಗಲು ಏನು ಮಾಡಬೇಕು? ವಿಸ್ತೃತ ಮಾಹಿತಿ

Job Alert: ಪಂಜಾಬ್ ನ್ಯಾಷನಲ್ ಬ್ಯಾಂಕ್ 2,700 ಅಪ್ರೆಂಟಿಸ್ ಶಿಪ್ ಹುದ್ದೆಗಳನ್ನು ಕರೆಯಲಾಗಿದ್ದು ಆಸಕ್ತರು ಜುಲೈ 14ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕರ್ನಾಟಕದ ಅಭ್ಯರ್ಥಿಗಳಿಗೆ 32 ಸ್ಥಾನಗಳನ್ನು ಮೀಸಲಿಡಲಾಗಿದೆ. ಅರ್ಜಿ ಸಲ್ಲಿಕೆ ಹೇಗೆ ಮತ್ತು ಪರೀಕ್ಷೆ ಯಾವ ರೀತಿಯಲ್ಲಿ ಇರುತ್ತದೆ ಎಂಬ ಮುಂತಾದ ಪ್ರಶ್ನೆಗೆ ಇಲ್ಲಿದೆ ಬ್ಯಾಂಕಿಂಗ್ ಪರಿಣತರೇ ನೀಡಿರುವ ಸಂಪೂರ್ಣ ಮಾಹಿತಿ.

VISTARANEWS.COM


on

Koo

-ಆರ್ ಕೆ ಬಾಲಚಂದ್ರ, ಬ್ಯಾಂಕಿಂಗ್ ಹಾಗೂ ಸಾಪ್ಟ್ ಸ್ಕಿಲ್ ತರಬೇತುದಾರರು ಮತ್ತು ವೃತ್ತಿ ಮಾರ್ಗದರ್ಶಕರು. ಬೆಂಗಳೂರು
ಅಪ್ರೆಂಟಿಸ್‌ಗಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು (Job Alert) ಆಹ್ವಾನಿಸಲಾಗಿದೆ. ಏಪ್ರಿಲ್ 12, 1895ರಲ್ಲಿ ಸ್ಥಾಪನೆಯಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ 103,144 ಕ್ಕೂ ಹೆಚ್ಚು ಉದ್ಯೋಗಿಗಳ ಬಲವಿದ್ದು. ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿದೆ. ಡಿಸೆಂಬರ್ 2023 ರ ಅಂತ್ಯದ ವೇಳೆಗೆ ದೇಶಾದ್ಯಂತ ಒಟ್ಟು 52,331 ಶಾಖೆಯ ವಿತರಣಾ ಜಾಲ‌ಗಳನ್ನು ಹೊಂದಿದ್ದು. 10,108 ಕ್ಕೂ ಮಿಕ್ಕಿ ದೇಶೀಯ ಶಾಖೆಗಳು, 2 ಅಂತಾರಾಷ್ಟ್ರೀಯ ಶಾಖೆಗಳು, 12,455 ಎಟಿಎಮ್‌ಗಳು ಹಾಗೂ 29,768 ವ್ಯಾಪಾರ ಕರೊಸ್ಪಾಂಡೆಂಟ್ ಗಳನ್ನು ಹೊಂದಿವೆ. ಬ್ಯಾಂಕಿನ ಸುದೀರ್ಘ ಇತಿಹಾಸದಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ನೊಂದಿಗೆ 9 ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದೆ. ₹ 22,90,742 ಕೋಟಿ ರೂ.ಗಿಂತ ಹೆಚ್ಚಿನ ಒಟ್ಟು ವ್ಯವಹಾರದೊಂದಿಗೆ ಅಗ್ರಗಣ್ಯ ಬ್ಯಾಂಕ್ ಎಂದು ಗುರುತಿಸಲ್ಪಟ್ಟಿದೆ. ಭವಿಷ್ಯದ ಬ್ಯಾಂಕ್ ಉದ್ಯೋಗಿಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಹಲವು ಬ್ಯಾಂಕ್‌ಗಳು ಅಪ್ರೆಂಟಿಸ್ ಶಿಪ್ ತರಬೇತಿ ನೀಡುತ್ತಿವೆ. ತರಬೇತಿ ಎನ್ನುವುದು ಕಾಯಂ ಹುದ್ದೆ ಅಲ್ಲದಿದ್ದರೂ, ಕೌಶಲ ಕಲಿಕೆಗೆ ಮತ್ತು ಭವಿಷ್ಯದಲ್ಲಿ ಬ್ಯಾಂಕ್ ಉದ್ಯೋಗಿಯಾಗಲು ಪೂರಕವಾಗುವ ನಿಟ್ಟಿನಲ್ಲಿ ಅಭ್ಯರ್ಥಿಗಳು ಸಿದ್ದರಾಗಲು ಇದು ನೆರವಾಗುತ್ತದೆ. ಇದೇ ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಿಗೆ ಅಪ್ರೆಂಟಿಸ್ ಷಿಪ್ ನೀಡಲು ಪಿ ಎನ್ ಬಿ ಬ್ಯಾಂಕ್ ಮುಂದಾಗಿದ್ದು,ಕರ್ನಾಟಕ ಸೇರಿದಂತೆ ದೇಶಾದ್ಯಂತ ಒಟ್ಟು 2,700 ಅಭ್ಯರ್ಥಿಗಳಿಗೆ ಉದ್ಯೋಗ ತರಬೇತಿ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಉನ್ನತ ಶಿಕ್ಷಣ ಸಚಿವಾಲಯದ ಸಹಭಾಗಿತ್ವದಲ್ಲಿ ಬ್ಯಾಂಕ್ ಈ ಅಪ್ರೆಂಟಿಸ್‌ ಷಿಪ್ ನೀಡುತ್ತಿದೆ. 1961ರ ಅಪ್ರೆಂಟಿಸ್‌ ಷಿಪ್ ಆಕ್ಟ್ ಪ್ರಕಾರವೇ ಈ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 2024-25ನೇ ಸಾಲಿನಲ್ಲಿ ದೇಶಾದ್ಯಂತ ಒಟ್ಟು 2,700 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಕರ್ನಾಟಕದ ಅಭ್ಯರ್ಥಿಗಳಿಗೆ 32 ಸ್ಥಾನಗಳನ್ನು ಮೀಸಲಿಡಲಾಗಿದೆ. ಆಸಕ್ತರು ಜುಲೈ 14 ರೊಳಗೆ ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಬಹುದು. ಆನ್‌ಲೈನ್ ಪರೀಕ್ಷೆ ಮೂಲಕ ಕರ್ನಾಟಕ ಸೇರಿದಂತೆ ದೇಶದಾದ್ಯಂತವಿರುವ ಶಾಖೆಗಳಲ್ಲಿ ಈ ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಮತ್ತು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಅರ್ಹತೆಗಳೇನು?

ಕಲೆ, ವಿಜ್ಞಾನ, ವಾಣಿಜ್ಯ ಸೇರಿದಂತೆ ಯಾವುದೇ ವಿಷಯಗಳಲ್ಲಿ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸುವ ಅವಕಾಶವಿದೆ. ಆದರೆ, ಅಭ್ಯರ್ಥಿಗಳು ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ 2024ರ ಜೂನ್ 30ರೊಳಗೆ ಅಭ್ಯರ್ಥಿಗಳು ನಿಗದಿಪಡಿಸಿದ ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ಹೊಂದಿರಬೇಕು.

job girl

ವಯೋಮಿತಿ ಏಷ್ಟು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 30.06.2024 ಕ್ಕೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷದವರಾಗಿರಬೇಕು. 1996 ರ ಜುಲೈ 1 ಮತ್ತು 2004 ರ ಜೂನ್ 30 ರ ನಡುವೆ ಜನಿಸಿದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ನಿಯಮಾನು ಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕವೆಷ್ಟು?

ಎಲ್ಲಾ ವರ್ಗದ ಅಭ್ಯರ್ಥಿಗಳು ಶುಲ್ಕದ ಮೇಲೆ ಶೇ. 18 ರಷ್ಟು ಜಿಎಸ್‌ಟಿ ಪಾವತಿಸಬೇಕು. ಈ ಉದ್ಯೋಗ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 800 ರೂ.( Rs.800/-+GST@18% = Rs.944/-)ಎಸ್‌ಸಿ/ಎಸ್‌ಟಿ, ಮಹಿಳಾ ಅಭ್ಯರ್ಥಿಗಳು ಹಾಗೂ ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳು 600 ರೂ. ಶುಲ್ಕ(ರೂ. 600/-+GST @18%= ರೂ.708/-) ಹಾಗೂ ವಿಶೇಷ ಚೇತನ ಅಭ್ಯರ್ಥಿಗಳು 400 ರೂ. ಶುಲ್ಕ (ರೂ.400/-+GST@18%= ರೂ.472/-) ಶುಲ್ಕ ಪಾವತಿಸಬೇಕು.

ನೆನಪಿಡಿ

ದೇಶಾದ್ಯಂತ 2700 ಅಭ್ಯರ್ಥಿಗಳಿಗೆ ಅವಕಾಶ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 17.
ಪದವೀಧರರಿಗೆ ಅವಕಾಶ
ಕರ್ನಾಟಕಕ್ಕೆ ಮೀಸಲಿಟ್ಟ ಸ್ಥಾನಗಳು: 32
ಪರೀಕ್ಷಾ ದಿನಾಂಕ ಜುಲೈ 28

ವಿವರಗಳಿಗೆ: www.pnbindia.in
https://www.pnbindia.in/Recruitments.aspx. or http://bfsissc.com

ಆಯ್ಕೆ ಹೇಗೆ?

ಆನ್‌ಲೈನ್ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ.

ಪರೀಕ್ಷೆಯ ವಿಷಯಗಳೇನು?

ಕ್ರ.ಸಂಪರೀಕ್ಷೆಯ ಹೆಸರುಪ್ರಶ್ನೆಗಳ ಸಂಖ್ಯೆಗರಿಷ್ಠ ಅಂಕಒಟ್ಟು ಸಮಯಪರೀಕ್ಷಾ ಮಾಧ್ಯಮ
1ಸಾಮಾನ್ಯ/ಹಣಕಾಸು ಅರಿವು2525      60 ನಿಮಿಷಗಳು        ಇಂಗ್ಲೀಷ್ / ಹಿಂದಿ  
2ಸಾಮಾನ್ಯ ಇಂಗ್ಲೀಷ್2525
3ಕ್ವಾಂಟಿಟೇಟಿವ್ & ರೀಸನಿಂಗ್ ಅಪ್ಟಿಟ್ಯೂಡ್2525
4ಕಂಪ್ಯೂಟರ್ ಜ್ಞಾನ2525
 ಒಟ್ಟು100100 

ನೆನಪಿಡಿ

ಅಭ್ಯರ್ಥಿಗಳು ಬ್ಯಾಂಕ್ ನಿರ್ಧರಿಸಿದಂತೆ ಒಟ್ಟಾರೆಯಾಗಿ ಕನಿಷ್ಠ ಶೇಕಡಾವಾರು ಅಂಕವನ್ನು ಗಳಿಸುವ ಅಗತ್ಯವಿದೆ. ಬ್ಯಾಂಕ್ SC/ST/OBC/PwBD ಅಭ್ಯರ್ಥಿಗಳಿಗೆ ಸಾಮಾನ್ಯ ಅಭ್ಯರ್ಥಿಗಳು ಒಟ್ಟಾರೆ ಗಳಿಸುವ ಅಂಕಗಳಿಗಿಂತ 5% ವಿನಾಯತಿ ನೀಡಿದೆ. ಪ್ರತಿ ವಿಷಯಕ್ಕೆ ಕನಿಷ್ಠ ಅರ್ಹತಾ ಅಂಕಗಳನ್ನು ನಿಗದಿಪಡಿಸಿಲ್ಲ.ಹಾಗೂ ಪರೀಕ್ಷೆ ಒಂದು ಗಂಟೆಯ ಅವಧಿಯದಾಗಿದ್ದು ಗರಿಷ್ಠ 100 ಅಂಕಗಳು ಹಾಗೂ ಪರೀಕ್ಷೆ ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಇರುತ್ತದೆ.

ಒಂದಿಷ್ಟು ಗಮನಿಸಿ

● ಸ್ವಂತ ಖರ್ಚಿನಲ್ಲಿಯೇ ಅಭ್ಯರ್ಥಿಗಳು ನೇಮಕ ಪ್ರಕ್ರಿಯೆಗಳಿಗೆ ಹಾಜರಾಗಬೇಕು.
● ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯ.
● ಅಂತಿಮವಾಗಿ ದಾಖಲಾತಿ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
● ಅಭ್ಯರ್ಥಿಗಳು ಸ್ಥಳೀಯ ಭಾಷೆಗಳಲ್ಲಿ ಹಿಡಿತ ಹೊಂದಿರಬೇಕು.
● 10 ಅಥವಾ ದ್ವಿತೀಯ ಪಿಯುಸಿ ಅಥವಾ ಪದವಿಯಲ್ಲಿ ಅಭ್ಯರ್ಥಿಗಳು ಸ್ಥಳೀಯ ಭಾಷೆಯನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು.
ಅಪ್ರೆಂಟಿಸ್‌ಷಿಪ್ ಒಂದು ಉದ್ಯೋಗ ತರಬೇತಿಯೇ ಹೊರತು ಬ್ಯಾಂಕ್‌ನಿಂದ ನಡೆಯುವ ನೇಮಕಾತಿ ಆಗಿರುವುದಿಲ್ಲ.
● ಅಪ್ರೆಂಟಿಸ್‌ಶಿಪ್ ಆಯ್ಕೆ ಪ್ರಕ್ರಿಯೆ ಮುಗಿಯುವ ತನಕ ಅಭ್ಯರ್ಥಿಗಳು ತಮ್ಮ ಬಾವಚಿತ್ರವನ್ನು ಬದಲಾಯಿಸಿ ಕೊಳ್ಳದಂತೆ ಸೂಚಿಸಲಾಗಿದೆ. ಆನ್‌ಲೈನ್ ಪರೀಕ್ಷೆಯ ಸಮಯದಲ್ಲಿ ಅದೇ ಬಾವಚಿತ್ರವನ್ನು ತೋರಿಸಲು ವಿಫಲವಾದರೆ ಅನರ್ಹತೆಗೆ ಕಾರಣವಾಗಬಹುದು. ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅವನು/ಅವಳು ಮಾಡಿದ ಸಹಿಯನ್ನು ಮುಂದೆಯೂ ಖಚಿತ ಪಡಿಸಿ ಕೊಳ್ಳಬೇಕು.ಅಂದರೆ ಅವನ/ಅವಳ ಕರೆ ಪತ್ರ, ಹಾಜರಾತಿ ಪತ್ರ ಇತ್ಯಾದಿಗಳಲ್ಲಿ ಮತ್ತು ಭವಿಷ್ಯದಲ್ಲಿ ಬ್ಯಾಂಕಿನೊಂದಿಗಿನ ಎಲ್ಲಾ ಪತ್ರ ವ್ಯವಹಾರಗಳಲ್ಲಿ ಸಹಿ ಒಂದೇ ಆಗಿರಬೇಕು ಮತ್ತು ಯಾವುದೇ ರೀತಿಯ ವ್ಯತ್ಯಾಸ ಇರಬಾರದು.

ಅರ್ಜಿ ಸಲ್ಲಿಸುವುದು ಹೇಗೆ?

ಎಲ್ಲಾ ಅರ್ಹ ಅರ್ಜಿದಾರರು ಅಪ್ರೆಂಟಿಸ್‌ಶಿಪ್ ಪ್ರವೇಶಕ್ಕಾಗಿ ನೋಂದಾಯಿಸಿಕೊಳ್ಳಲು ಎರಡು ವೆಬ್ ಸೈಟ್ ನ ವಿಳಾಸ ನೀಡಲಾಗಿದೆ. www.bfsissc.comನ “ವೃತ್ತಿ ಅವಕಾಶಗಳು” ವಿಭಾಗಕ್ಕೆ ಭೇಟಿ ನೀಡುವ ಮೂಲಕ ಪರೀಕ್ಷೆ ಎಂದು ಹೇಳಲಾದ ಲಿಂಕ್ ಮೇಲೆ ಕ್ಲಿಕ್ಕಿಸಿ ಅನ್ವಯವಾಗುವ ಪರೀಕ್ಷಾ ಶುಲ್ಕದ ಪಾವತಿ ಮಾಡಬೇಕು. ಅದರ ನಂತರ ಅರ್ಜಿದಾರನು ನೋಂದಾಯಿಸಿಕೊಳ್ಳಬೇಕು ಮತ್ತು ಅವನ /ಅವಳ ಪ್ರೊಫೈಲ್ ಅನ್ನು ಅಪ್ಲೋಡ್ ಮಾಡಬೇಕು. ಮೊದಲ ಬಾರಿಗೆ ನೊಂದಾಯಿಸುವವರು ಎರಡು ವಿಭಿನ್ನ ಸರ್ಕಾರಿ ಅಪ್ರೆಂಟಿಸ್‌ಶಿಪ್ ಪೋರ್ಟಲ್‌ಗಳಲ್ಲಿ ಪ್ರತ್ಯೇಕವಾಗಿ ನೊಂದಾಯಿಸಿಕೊಳ್ಳಬೇಕು.

  • NAPS ಅಪ್ರೆಂಟಿಸ್‌ಶಿಪ್ ಪೋರ್ಟಲ್ www.apprenticeshipindia.gov.in (ಅಪ್ರೆಂಟಿಸ್‌ಗಳ ಲಾಗಿನ್/ ಮತ್ತು ನೋಂದಣಿ ವಿಭಾಗ) ಮತ್ತು
  • NATS ಪೋರ್ಟಲ್ www.nats.education.gov.in (ವಿದ್ಯಾರ್ಥಿ ನೋಂದಣಿ/ಲಾಗಿನ್ ವಿಭಾಗ – 1ನೇ ಏಪ್ರಿಲ್ 2020 ರಂದು ಅಥವಾ ನಂತರ ಪದವಿಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಅನ್ವಯಿಸುತ್ತದೆ).

ಎಲ್ಲಾ ಅರ್ಜಿದಾರರು, ಆಯಾ ಅಪ್ರೆಂಟಿಸ್‌ಶಿಪ್ ಪೋರ್ಟಲ್‌ಗಳಲ್ಲಿ NAPS ಮತ್ತು/ಅಥವಾ NATS ಯಶಸ್ವಿಯಾಗಿ ನೋಂದಾಯಿಸಿದ ನಂತರ, ನಿಮ್ಮ NAPS ಅಪ್ರೆಂಟಿಸ್‌ ಶಿಪ್ಗಾಗಿ BFSISSC ಯಿಂದ ಕೋಡ್ ಸಂಖ್ಯೆ ಮತ್ತು/ಅಥವಾ NATS ದಾಖಲಾತಿ ಸಂಖ್ಯೆ ಇಮೇಲ್ ಮೂಲಕ ಬರುತ್ತದೆ. ಒಬ್ಬ ಅಭ್ಯರ್ಥಿ ಒಂದು ವಲಯಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ. ಈಗಾಗಲೇ ಅಪ್ರೆಂಟಿಸ್‌ಷಿಪ್ ಪಡೆದಿರುವವರು ಮತ್ತು ಪಡೆಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಮಾತ್ರವಲ್ಲ, ಈಗಾಗಲೇ ಉದ್ಯೋಗಕ್ಕೆ ಸೇರಿ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸೇವಾನುಭವವುಳ್ಳ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: Job Interview: ಉದ್ಯೋಗ ಸಂದರ್ಶನವನ್ನು ಹೇಗೆ ಎದುರಿಸಬೇಕು? ಈ ಟಿಪ್ಸ್‌ ಫಾಲೋ ಮಾಡಿ

ಪೋರ್ಟಲ್‌ನಲ್ಲಿ ನೋಂದಾಯಿಸುವ ಮೊದಲು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

1.ಆಧಾರ್ ಕಾರ್ಡ್
2.ವೈಯಕ್ತಿಕ ಇಮೇಲ್ ಐಡಿ (ಖಾತೆಯನ್ನು ಸಕ್ರಿಯಗೊಳಿಸಲು ಮತ್ತು ಲಾಗಿನ್ ಮಾಡಲು ಅಗತ್ಯವಿದೆ)
3.ಮೊಬೈಲ್ ಸಂಖ್ಯೆ
4.ಪಾಸ್‌ಪೋರ್ಟ್ ಸೈಜಿನ ಬಾವಚಿತ್ರ ಜೆಪಿಇಜಿ ಫಾರ್ಮೆಟ್ ನಲ್ಲಿದ್ದು, ಗಾತ್ರ: 1 MB ಗಿಂತ ಕಡಿಮೆಯಿರಬೇಕು.
5.ಪದವಿ/ತಾತ್ಕಾಲಿಕ ಪ್ರಮಾಣಪತ್ರ, ಪಿಡಿಎಪ್ ಫಾರ್ಮೆಟ್ ನಲ್ಲಿದ್ದು, 1 MB ಕ್ಕಿಂತ ಕಡಿಮೆಯಿರಬೇಕು.

ಪರೀಕ್ಷೆಯ ದಿನಾಂಕ ಯಾವುದು?

ಆನ್ ಲೈನ್ ನಲ್ಲಿ ಪರೀಕ್ಷೆ ಜುಲೈ 28, 2024 ರಂದು. (ಬದಲಾಗಬಹುದು,ವೆಬ್ ಸೈಟ್ ಗಮನಿಸುತ್ತೀರಿ)

  • ಪರೀಕ್ಷಾ ಶುಲ್ಕವನ್ನು ಪಾವತಿಸಿದ ಎಲ್ಲಾ ಅರ್ಜಿದಾರರಿಗೆ ಪರೀಕ್ಷೆಯ ದಿನಾಂಕ ಮತ್ತು ಸಮಯದೊಂದಿಗೆ BFSI SSC ಯಿಂದ ಸೂಚನೆಯನ್ನು ನೀಡಲಾಗುತ್ತದೆ.
  • ಎಲ್ಲಾ ಅರ್ಜಿದಾರರು ತಮ್ಮ ಸ್ವಂತದ ಕ್ಯಾಮರಾ ಸಕ್ರಿಯಗೊಳಿಸಿದ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ ಫೋನ್ ಬಳಸಿಕೊಂಡು ನೀಡಿದ ದಿನಾಂಕ ಮತ್ತು ಸಮಯದಲ್ಲಿ ಆನ್‌ಲೈನ್ ಪರೀಕ್ಷೆಗೆ ಹಾಜರಾಗಬೇಕು.
  • ಎಲ್ಲಾ ಅರ್ಜಿದಾರರು ಅರ್ಜಿ ಸಲ್ಲಿಸುವ ಸಂದರ್ಬದಲ್ಲಿ ಅಪ್‌ಲೋಡ್ ಮಾಡಿದ ಅದೇ ID ಪುರಾವೆಯನ್ನು ನೀಡಬೇಕು.

ವಲಯವಾರು ಹುದ್ದೆಗಳೆಷ್ಟು?

ಕರ್ನಾಟಕದಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿ ವಲಯಗಳಲ್ಲಿ ಹುದ್ದೆಗಳ ಇರುವುದರಿಂದ ಅಭ್ಯರ್ಥಿಗಳು ಅವರಿಗೆ ಅನುಕೂಲವಾಗುವ ವಲಯವನ್ನು ಆಯ್ಕೆ ಮಾಡಿಕೊಳ್ಳಬಹುದು.

State/UTCircleTotal Seats*SCSTOBCEWSUR
KarnatakaBANGALORE2232629
HUBLI1020215
Sub Total32528314

ಭಾಷಾವಾರು ನೇಮಕಾತಿ

ರಾಜ್ಯದ ಪಾಲಿನ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಥಳೀಯ ಭಾಷೆಯಲ್ಲಿ ಓದುವುದು, ಬರೆಯುವದು, ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದರಲ್ಲಿ ಪ್ರವೀಣ ರಾಗಿರಬೇಕು.

ಶಾರೀರಿಕ/ ವೈದ್ಯಕೀಯ ಫಿಟ್ನೆಸ್

ಅಪ್ರೆಂಟಿಸ್‌ಗಳ ಅಂತಿಮ ಆಯ್ಕೆಯು ಅವನು/ಅವಳು ವೈದ್ಯಕೀಯವಾಗಿ ಫಿಟ್‌ ಎಂದು ಘೋಷಿಸಲ್ಪಡುವುದಕ್ಕೆ ಒಳಪಟ್ಟಿರುತ್ತದೆ.

ತರಬೇತಿಯ ಅವಧಿ ಮತ್ತು ಸ್ಟೈಪೆಂಡ್

ತರಬೇತಿಯ ಒಟ್ಟು ಅವಧಿಯು ಒಪ್ಪಂದದ ದಿನಾಂಕದಿಂದ ಒಂದು ವರ್ಷವಾಗಿರುತ್ತದೆ. ಒಂದು ವರ್ಷದ ತರಬೇತಿಯು 2 ವಾರಗಳ ಮೂಲಭೂತ ತರಬೇತಿ ಮತ್ತು 50 ವಾರಗಳ ಉದ್ಯೋಗ ತರಬೇತಿಯನ್ನು ಒಳಗೊಂಡಿರುತ್ತದೆ. ಒಂದು ವರ್ಷ ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ತಿಂಗಳಿಗೆ ಗ್ರಾಮೀಣ/ಅರೆ-ನಗರ (ರೂರಲ್/ಸೆಮಿಅರ್ಬನ್) ಪ್ರದೇಶದ ಅಭ್ಯರ್ಥಿಗಳಿಗೆ ₹10,000 ರೂ, ನಗರ(ಅರ್ಬನ್) ಪ್ರದೇಶದ ಅಭ್ಯರ್ಥಿಗಳಿಗೆ ₹12,000 ರೂ. ಹಾಗೂ ಮೆಟ್ರೊ ನಗರದ ಅಭ್ಯರ್ಥಿಗಳಿಗೆ ₹15,000 ರೂ. ತಿಂಗಳ ಸ್ಟೈಪೆಂಡ್ ನೀಡಲಾಗುತ್ತದೆ. ಇದರ ಹೊರತಾಗಿ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.

ಇದನ್ನೂ ಓದಿ: Job Alert: ಇಂಡಿಯನ್‌ ಹೈವೇ ಮ್ಯಾನೇಜ್‌ಮೆಂಟ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಇಂದೇ ಅಪ್ಲೈ ಮಾಡಿ

ಅಪ್ರೆಂಟಿಸ್‌ಶಿಪ್‌ ಅನುಕೂಲಗಳು

ಅಪ್ರೆಂಟಿಸ್‌ಗಳಾಗಿ ನೇಮಕ ಗೊಂಡರೆ ಅದು ಬ್ಯಾಂಕ್‌ನಲ್ಲಿ ಉದ್ಯೋಗ ನೀಡಿದೆ ಎಂದರ್ಥವಲ್ಲ. ಇದೊಂದು ತರಬೇತಿಯಾಗಿದ್ದು, ಭವಿಷ್ಯದಲ್ಲಿ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಸಹಾಯವಾಗುತ್ತದೆ. ಬ್ಯಾಂಕಿಂಗ್ ನೇಮಕಾತಿಯ ನೀತಿ ನಿಯಮಗಳನ್ನು ಕಾಲಕಾಲಕ್ಕೆ ಮಾಡಿದ ತಿದ್ದುಪಡಿಯಂತೆ, ಜೂನಿಯರ್ ಅಸೋಸಿಯೇಟ್‌ಗಳ ನೇಮಕಾತಿಯಲ್ಲಿ ಅಪ್ರೆಂಟಿಸ್‌ಗಳಿಗೆ ಹೆಚ್ಚಿನ ಮಾನ್ಯತೆ ಅಥವಾ ಆದ್ಯತೆ (weightage) ನೀಡಲಾಗುತ್ತದೆ.
ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಮತ್ತು ತರಬೇತಿ ಅವಧಿಯಲ್ಲಿ ಸಂಪೂರ್ಣವಾಗಿ ತೃಪ್ತಿದಾಯಕ ನಡವಳಿಕೆಗೆ ಒಳಪಟ್ಟಿರುವ ಅಪ್ರೆಂಟಿಸ್‌ಗಳಿಗೆ ಜೂನಿಯರ್ ಅಸೋಸಿಯೇಟ್‌ಗಳ ನೇಮಕಾತಿಯಲ್ಲಿ ಕೆಲವೊಂದು ನಿಯಮ ಸಡಿಲಿಕೆ ಮಾಡಲಾಗಿರುತ್ತದೆ.

Continue Reading

ಉದ್ಯೋಗ

Job Alert: ಇಂಡಿಯನ್‌ ಹೈವೇ ಮ್ಯಾನೇಜ್‌ಮೆಂಟ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಇಂದೇ ಅಪ್ಲೈ ಮಾಡಿ

Job Alert: ಇಂಡಿಯನ್‌ ಹೈವೇ ಮ್ಯಾನೇಜ್‌ಮೆಂಟ್‌ ಕಂಪನಿ ಲಿಮಿಟೆಡ್‌ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.ಒಟ್ಟು 31 ಹುದ್ದೆ ಖಾಲಿ ಇದೆ. ಎಂಜಿನಿಯರ್‌ ಮತ್ತು ಆಫೀಸರ್‌ ಹುದ್ದೆ ಇದಾಗಿದ್ದು, ಪದವಿ, ಸಿಎ ಓದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಆಗಸ್ಟ್ 16. ಅರ್ಜಿ ಸಲ್ಲಿಸುವ ವಿಧಾನದ ಮಾಹಿತಿ ಇಲ್ಲಿದೆ.

VISTARANEWS.COM


on

Job Alert
Koo

ಬೆಂಗಳೂರು: ಪದವಿ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಇಲ್ಲಿದೆ. ಇಂಡಿಯನ್‌ ಹೈವೇ ಮ್ಯಾನೇಜ್‌ಮೆಂಟ್‌ ಕಂಪನಿ ಲಿಮಿಟೆಡ್‌ (Indian Highway Management Company Limited) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (IHMCL Recruitment 2024). ಒಟ್ಟು 31 ಹುದ್ದೆ ಖಾಲಿ ಇದೆ. ಎಂಜಿನಿಯರ್‌ ಮತ್ತು ಆಫೀಸರ್‌ ಹುದ್ದೆ ಇದಾಗಿದ್ದು, ಪದವಿ, ಸಿಎ ಓದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಆಗಸ್ಟ್ 16 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಎಂಜಿನಿಯರ್‌ – 30 ಮತ್ತು ಆಫೀಸರ್‌ – 1 ಹುದ್ದೆ ಖಾಲಿ ಇದೆ. ಎಂಜಿನಿಯರ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಐಟಿ / ಸಿಎಸ್ / ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ಸ್ / ಎಲೆಕ್ಟ್ರಿಕಲ್ / ಇನ್‌ಸ್ಟ್ರುಮೆಂಟೇಶನ್ / ಡಾಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು. ಇನ್ನು ಸಿಎ, ಸಿಎಂಎ ವಿದ್ಯಾರ್ಹತೆ ಹೊಂದಿದವರು ಆಫೀಸರ್‌ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಯೋಮಿತಿ

ಎಂಜಿನಿಯರಿಂಗ್‌ ಹುದ್ದೆಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 21 ವರ್ಷ. ಗರಿಷ್ಠ ವಯಸ್ಸು 30 ವರ್ಷ. ಆಫೀಸರ್‌ ಹುದ್ದೆಗೂ ಗರಿಷ್ಠ ವಯೋಮಿತಿ 30 ವರ್ಷ. ಮೀಸಲಾತಿಗೆ ಅನುಗುಣವಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಡಿ (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯುಡಿ (ಒಬಿಸಿ) ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಪಿಡಬ್ಲ್ಯುಡಿ (ಎಸ್‌ಸಿ / ಎಸ್‌ಟಿ) ಅಭ್ಯರ್ಥಿಗಳಿಗೆ 15 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಗೇಟ್‌ (GATE) ಅಂಕ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಮಾಸಿಕ ವೇತನ

ಆಯ್ಕೆಯಾದವರಿಗೆ 40,000 ರೂ. – 1,40,000 ರೂ. ಮಾಸಿಕ ವೇತನ ದೊರೆಯಲಿದೆ. ಉದ್ಯೋಗದ ಸ್ಥಳ: ಭಾರತಾದ್ಯಂತ.

IHMCL Recruitment 2024ರ ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://recruitment.ihmcl.co.in/panel/login.php)
  • ಅಗತ್ಯ ಮಾಹಿತಿ, ಇಮೇಲ್‌ ವಿಳಾಸ ನಮೂದಿಸಿ ಹೆಸರು ನೋಂದಾಯಿಸಿ.
  • ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಹೆಸರು, ವಿಳಾಸ, ಶೈಕ್ಷಣಿಕ ಮಾಹಿಸಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌, ಫೋಟೊ ಅಪ್‌ಲೋಡ್‌ ಮಾಡಿ.
  • ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌ ತೆಗೆದಿಡಿ.

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ: ihmcl.co.inಕ್ಕೆ ಭೇಟಿ ನೀಡಿ.

ಇದನ್ನೂ ಓದಿ: Job Alert: ಬ್ಯಾಂಕ್‌ ಆಫ್‌ ಬರೋಡಾದ 627 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ಇಲ್ಲಿದೆ ಹೊಸ ಟೈಮ್‌ ಟೇಬಲ್‌

Continue Reading

Latest

Job Interview: ಉದ್ಯೋಗ ಸಂದರ್ಶನವನ್ನು ಹೇಗೆ ಎದುರಿಸಬೇಕು? ಈ ಟಿಪ್ಸ್‌ ಫಾಲೋ ಮಾಡಿ

ಕಾಲೇಜು ಮುಗಿಸಿ ಉದ್ಯೋಗಕ್ಕಾಗಿ ಹೊರಡುವಾಗ ಸಂದರ್ಶನದ (Job Interview) ತಯಾರಿ ನಡೆಸಿಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಸಂದರ್ಶನಕ್ಕೆ ಹೊರಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಅವುಗಳಲ್ಲಿ ಮುಖ್ಯವಾಗಿ ಸಂಶೋಧನೆ, ಉಡುಗೆ, ದಾಖಲೆಗಳು, ದೇಹ ಭಾಷೆ, ಸಂವಹನ ಸೇರಿದಂತೆ ಇನ್ನೂ ಹಲವು ಪ್ರಮುಖ ವಿಷಯಗಳಿವೆ. ಅವುಗಳ ಕುರಿತು ಯುವ ಜನರಿಗೆ ಉಪಯುಕ್ತ ಮಾಹಿತಿ ಮಾಹಿತಿ ಇಲ್ಲಿದೆ.

VISTARANEWS.COM


on

By

Job Interview
Koo

ಯಾವುದೇ ಉದ್ಯೋಗವೂ ಸಂದರ್ಶನವಿಲ್ಲದೆ (Job Interview) ಪೂರ್ಣವಾಗುವುದಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಈಗ ಉದ್ಯೋಗ (job) ಪಡೆಯಲು ಕೇವಲ ಅಂಕಗಳಿದ್ದರೆ ಸಾಲದು ಕೌಶಲ, ನಡವಳಿಕೆಯೂ ಮುಖ್ಯವಾಗಿರುತ್ತದೆ. ಕಾಲೇಜು (college) ಮುಗಿಸಿ ಉದ್ಯೋಗಕ್ಕಾಗಿ ಸಂದರ್ಶನದ ತಯಾರಿ ನಡೆಸಿಕೊಳ್ಳುತ್ತಿರುವ ಫ್ರೆಶರ್‌ಗಳಿಗೆ ಸಹಾಯವಾಗಬಲ್ಲ ಸಲಹೆಗಳು ಇಲ್ಲಿವೆ.

ಸಂದರ್ಶನಕ್ಕೆ ಹೊರಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಅವುಗಳಲ್ಲಿ ಮುಖ್ಯವಾಗಿ ಸಂಶೋಧನೆ, ಉಡುಗೆ, ದಾಖಲೆಗಳು, ದೇಹ ಭಾಷೆ, ಸಂವಹನ ಸೇರಿದಂತೆ ಇನ್ನು ಹಲವು ಪ್ರಮುಖ ವಿಷಯಗಳಿವೆ.

ಕಂಪನಿಯ ಹಿನ್ನೆಲೆ ಸ್ಟಡಿ ಮಾಡಿ

ಸಂದರ್ಶನಕ್ಕೆ ಹೊರಡುವಾಗ ಕಂಪನಿ ಮತ್ತು ಉದ್ಯೋಗ ಪ್ರೊಫೈಲ್ ಬಗ್ಗೆ ತಿಳಿದುಕೊಳ್ಳಿ. ಇದು ಕಂಪನಿಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಒದಗಿಸಿ ಸಂದರ್ಶನವನ್ನು ಸುಲಭಗೊಳಿಸುತ್ತದೆ. ಸಂದರ್ಶನದ ತಯಾರಿಯ ಪ್ರಮುಖ ಆದ್ಯತೆಯಾಗಿ ಸಂಶೋಧನೆಯನ್ನು ಪಟ್ಟಿ ಮಾಡುವುದು ಬಹಳ ಮುಖ್ಯ. ಪ್ರತಿ ಕಂಪೆನಿಯು ತನ್ನ ಪ್ರೊಫೈಲ್‌ಗಳಲ್ಲಿ ವಿಮರ್ಶೆ ವಿಭಾಗವನ್ನು ಹೊಂದಿರುತ್ತದೆ. ಕಂಪನಿಯ ಮಾಜಿ, ಪ್ರಸ್ತುತ ಉದ್ಯೋಗಿಗಳ ಬಗ್ಗೆ ಕೇಳಬಹುದು. ಅವರ ಅನುಭವ, ಕೆಲಸದ ಸಂಸ್ಕೃತಿ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು.


ಕೌಶಲವನ್ನು ಬೆಳೆಸಿಕೊಳ್ಳಿ

ಫ್ರೆಶರ್‌ಗಳಿಗೆ ಮತ್ತೊಂದು ಪ್ರಮುಖ ಸಂದರ್ಶನ ಸಲಹೆಯೆಂದರೆ ಉದ್ಯೋಗ ವಿವರಣೆಯನ್ನು ಸಂಪೂರ್ಣವಾಗಿ ಓದುವುದು. ಯಾಕೆಂದರೆ ಇದು ನೇಮಕಾತಿದಾರರು ಹುಡುಕುತ್ತಿರುವ ಪ್ರಮುಖ ಕೌಶಲಗಳನ್ನು ಗುರುತಿಸಲು ಅದಕ್ಕೆ ತಕ್ಕುದಾಗಿ ಹೊಂದಿಕೊಳ್ಳಲು ನಿಮಗೆ ಸಹಾಯವಾಗುವುದು. ಕೌಶಲದ ಕೊರತೆ ಇದ್ದರೆ ಸಂದರ್ಶನ ಕಷ್ಟವಾಗಬಹುದು.

ಉಡುಗೆ ಬಗ್ಗೆ ಗಮನವಿರಲಿ

ಫ್ರೆಶರ್‌ಗಳಿಗೆ ಸಂದರ್ಶನದ ತಯಾರಿಗಾಗಿ ಮತ್ತೊಂದು ಪ್ರಮುಖ ಅಂಶವೆಂದರೆ ಉಡುಪು. ಉಡುಪು ನಮ್ಮ ಆಲೋಚನೆಗಳನ್ನು ತೋರಿಸುತ್ತದೆ. ಯಾವುದೇ ಕೆಲಸಕ್ಕಾಗಿ ಸಂದರ್ಶನದಲ್ಲಿ ಅನಿಸಿಕೆ ವ್ಯಕ್ತಪಡಿಸಲು ಅವಕಾಶ ನೀಡಲಾಗುತ್ತದೆ. ಇದು ಸಂದರ್ಶಕರ ಮೇಲೆ ನಮ್ಮ ಪ್ರಭಾವವನ್ನು ಬೀರಲು ಕಾರಣವಾಗುತ್ತದೆ.

ಸಂದರ್ಶನಕ್ಕೆ ಹೋಗುವಾಗ ಸ್ವಚ್ಛ ಮತ್ತು ಚೆನ್ನಾಗಿ ಇಸ್ತ್ರಿ ಮಾಡಿರುವ ದಿರಿಸು ಧರಿಸಿ. ಪಾಲಿಶ್ ಮಾಡಿದ ಶೂಗಳು ಮತ್ತು ಕ್ಲೀನ್ ಸಾಕ್ಸ್, ಕೂದಲು, ಉಗುರುಗಳು ಚೆನ್ನಾಗಿದೆ ಎಂದು ಖಚಿತಪಡಿಸಿಕೊಳ್ಳಿ.ಋತುಮಾನಕ್ಕೆ ಸೂಕ್ತವಾದ ಆರಾಮದಾಯಕ ಉಡುಗೆಗಳನ್ನು ಆಯ್ಕೆ ಮಾಡಿ.

ನಿಮ್ಮನ್ನು ನೀವು ತಿಳಿದುಕೊಳ್ಳಿ

ಇನ್ನೊಬ್ಬರಿಗೆ ನಮ್ಮ ಸಾಮರ್ಥ್ಯವನ್ನು ತಿಳಿಸಬೇಕಾದರೆ ನಮ್ಮ ಬಗ್ಗೆ ನಾವು ಮೊದಲು ತಿಳಿದುಕೊಳ್ಳಬೇಕು. ಇದು ಫ್ರೆಶರ್‌ಗಳಿಗೆ ಅತೀ ಪ್ರಮುಖ ಸಲಹೆ. ಕಂಪೆನಿಯಲ್ಲಿ ನಿಮ್ಮನ್ನು ನೀವು ಹೇಗೆ ತೋರ್ಪಡಿಸುತ್ತಿರಿ ಎನ್ನುವುದು ಮುಖ್ಯವಾಗಿರುತ್ತದೆ. ಉದ್ಯೋಗ ಸಂದರ್ಶನದ ಪ್ರಮುಖ ಉದ್ದೇಶವು ನಿಮ್ಮನ್ನು ಪ್ರತಿನಿಧಿಸುವುದು ಮುಖ್ಯವಾಗುತ್ತದೆ.

ದಾಖಲೆಗಳ ಹೆಚ್ಚುವರಿ ಸೆಟ್ ಇರಲಿ

ಸಂದರ್ಶನದ ದಿನ ಸಂದರ್ಶಕರು ಮತ್ತು ಎಚ್‌ಆರ್ ಕ್ರಮವಾಗಿ ರೆಸ್ಯೂಮ್‌ನ ಹಾರ್ಡ್ ಪ್ರತಿಯನ್ನು ಕೇಳಬಹುದು. ಆದ್ದರಿಂದ ಯಾವಾಗಲೂ ರೆಸ್ಯೂಮ್‌ನ 2- 3 ಪ್ರತಿಗಳನ್ನು ಕೈಯಲ್ಲಿರಲಿ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಕಳುಹಿಸಿದ ರೆಸ್ಯೂಮ್‌ನಲ್ಲಿ ಯಾವುದೇ ದೋಷ ಕಂಡುಬಂದರೆ, ಬಳಿಕ ಅಪ್‌ಡೇಟ್ ಮಾಡಿದ್ದರೆ ಅದನ್ನು ಸಂದರ್ಶಕರ ಗಮನಕ್ಕೆ ತನ್ನಿ. ಇದಕ್ಕಾಗಿ ಹೆಚ್ಚುವರಿ ದಾಖಲೆಗಳ ಸೆಟ್‌ ಜೊತೆ ಇರಲಿ. ರೆಸ್ಯೂಮ್‌ನಲ್ಲಿನ ದೋಷ, ಪರಿಷ್ಕರಣೆ ಕುರಿತು ನೇಮಕಾತಿದಾರರಿಗೆ ತಿಳಿಸುವುದು ನಿಮ್ಮ ಸಮಗ್ರತೆಯ ಬಗ್ಗೆ ಮಾತ್ರವಲ್ಲದೆ ಕೆಲಸದ ಪಾತ್ರದ ಬಗ್ಗೆ ನಿಮ್ಮ ಗಂಭೀರತೆಯ ಬಗ್ಗೆಯೂ ಅವರಿಗೆ ತಿಳಿಸಿದಂತಾಗುತ್ತದೆ.

ಇದನ್ನೂ ಓದಿ: UPSC 2024: ಯುಪಿಎಸ್ಸಿ ಸಿಎಸ್ಇ ಪ್ರಿಲಿಮ್ಸ್ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?


ಪ್ರಶ್ನೆ ಕೇಳಿ, ಉತ್ತರಿಸಲು ಸಿದ್ಧರಾಗಿರಿ

ಸಾಮಾನ್ಯವಾಗಿ ಅಭ್ಯರ್ಥಿಯ ದಕ್ಷತೆಯನ್ನು ಪರೀಕ್ಷಿಸಲು ಉದ್ಯೋಗಕ್ಕಾಗಿ ಮೂರು ಸುತ್ತಿನ ಸಂದರ್ಶನಗಳು, ಲಿಖಿತ, ತಾಂತ್ರಿಕ ಮತ್ತು ಮಾನವ ಸಂಪನ್ಮೂಲ ಸಂದರ್ಶನಗಳು ಇರುತ್ತವೆ. ಮೊದಲ ಎರಡು ಸುತ್ತುಗಳು ಕೆಲಸವನ್ನು ಪೂರ್ಣಗೊಳಿಸಲು ಸಹಾಯ ಮಾಡುವ ತಾಂತ್ರಿಕ ಜ್ಞಾನವನ್ನು ಪರೀಕ್ಷಿಸುತ್ತದೆ. ಕೊನೆಯ ಸುತ್ತು ಕೌಶಲಗಳನ್ನು ಪರೀಕ್ಷಿಸುತ್ತದೆ.

ಈ ಸಂದರ್ಭದಲ್ಲಿ ಅನುಮಾನಗಳಿದ್ದಾಗ ಪ್ರಶ್ನೆ ಕೇಳಲು ಹಿಂಜರಿಯಬೇಡಿ. ಇದು ಆಯ್ಕೆಗೆ ನಿಮ್ಮನ್ನು ನೀವು ಹೇಗೆ ಸಿದ್ಧಪಡಿಸಿಕೊಳ್ಳುತ್ತೀರಿ ಎಂಬುದನ್ನು ತಿಳಿಸುತ್ತದೆ. ಅದೇ ರೀತಿ ಅವರು ಕೇಳುವ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ತೋರ್ಪಡಿಸುತ್ತದೆ.

Continue Reading
Advertisement
Mobile Tariffs
ದೇಶ3 mins ago

Mobile Tariffs: ಜಿಯೋ, ಏರ್‌ಟೆಲ್‌, VI ರಿಚಾರ್ಜ್‌ ಶುಲ್ಕ ಕಡಿಮೆ ಮಾಡಲಿದ್ದಾರಾ ಮೋದಿ? ಇಲ್ಲಿದೆ ಕೇಂದ್ರದ ಸ್ಪಷ್ಟನೆ

karnataka weather Forecast
ಮಳೆ5 mins ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Puri Jagannath Yatra
ದೇಶ17 mins ago

Puri Jagannath Yatra: ಪುರಿ ಜಗನ್ನಾಥನ ಅದ್ದೂರಿ ರಥಯಾತ್ರೆ; ರಾಷ್ಟ್ರಪತಿ ಮುರ್ಮು ಉಪಸ್ಥಿತಿ

Rahul Dravid
ಪ್ರಮುಖ ಸುದ್ದಿ22 mins ago

Rahul Dravid : ರಾಹುಲ್ ದ್ರಾವಿಡ್​ಗೆ ಭಾರತ ರತ್ನ ಕೊಡಿ; ಕೇಂದ್ರ ಸರ್ಕಾರಕ್ಕೆ ಗವಾಸ್ಕರ್ ಮನವಿ

Abhishek Sharma
ಪ್ರಮುಖ ಸುದ್ದಿ50 mins ago

Abhishek Sharma : ಜಿಂಬಾಬ್ವೆ ವಿರುದ್ಧ ಶತಕ ಬಾರಿಸಿ ಅಪರೂಪದ ದಾಖಲೆ ಬರೆದ ಅಭಿಷೇಕ್ ಶರ್ಮಾ

Bengaluru's Second Airport
ಕರ್ನಾಟಕ54 mins ago

Bengaluru’s Second Airport: ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ? ಸಚಿವ ಎಂ.ಬಿ. ಪಾಟೀಲ್ ಸುಳಿವು

Mahua Moitra
ದೇಶ1 hour ago

Mahua Moitra: ಹೊಸ ಕಾನೂನಿನಂತೆ ಟಿಎಂಸಿ ಎಂಪಿ ಮಹುವಾ ಮೊಯಿತ್ರಾ ವಿರುದ್ಧ ಎಫ್‌ಐಆರ್;‌ ಕಾರಣ ಇಲ್ಲಿದೆ

Self harming
ವಿಜಯನಗರ1 hour ago

Self Harming : ನಿದ್ದೆ ಇಲ್ಲದೇ ಒದ್ದಾಟ; ಬೇವಿನ ಮರಕ್ಕೆ ನೇಣು ಬಿಗಿದುಕೊಂಡ ಆಟೋ ಚಾಲಕ

Land Dispute
ಕರ್ನಾಟಕ1 hour ago

Land Dispute: ಬೆಂಗಳೂರಿನ 93 ವರ್ಷದ ಹಳೇ ಶಾಲೆಯ ಕಾಂಪೌಂಡ್‌ ಧ್ವಂಸ; ಮೂವರ ವಿರುದ್ಧ ಕೇಸ್‌

Vastu Tips
ಧಾರ್ಮಿಕ2 hours ago

Vastu Tips: ಆರ್ಥಿಕ ಸಂಕಷ್ಟ ದೂರವಾಗಿ ಶ್ರೀಮಂತರಾಗಬೇಕೆ? ಈ ವಾಸ್ತು ನಿಯಮ ಪಾಲಿಸಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ5 mins ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ3 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ3 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ14 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ1 day ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ1 day ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ1 day ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು1 day ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಟ್ರೆಂಡಿಂಗ್‌