Do you know how much marks Virat Kohli got in iron pea maths?Virat Kohli : ಕಬ್ಬಿಣದ ಕಡಲೆ ಗಣಿತದಲ್ಲಿ ವಿರಾಟ್​ ಕೊಹ್ಲಿ ಪಡೆದ ಮಾರ್ಕ್​ ಎಷ್ಟು ಗೊತ್ತಾ? - Vistara News

ಕ್ರಿಕೆಟ್

Virat Kohli : ಕಬ್ಬಿಣದ ಕಡಲೆ ಗಣಿತದಲ್ಲಿ ವಿರಾಟ್​ ಕೊಹ್ಲಿ ಪಡೆದ ಮಾರ್ಕ್​ ಎಷ್ಟು ಗೊತ್ತಾ?

ಕೂ ಸಾಮಾಜಿಕ ಜಾಲತಾಣದ ಮೂಲಕ ವಿರಾಟ್​ ಕೊಹ್ಲಿ ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಶೇರ್​ ಮಾಡಿಕೊಂಡಿದ್ದಾರೆ.

VISTARANEWS.COM


on

Do you know how much marks Virat Kohli got in iron pea maths?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಟೀಮ್​ ಇಂಡಿಯಾದ ಆಲ್​ಟೈಮ್​ ಸ್ಟಾರ್​ ಬ್ಯಾಟರ್ ವಿರಾಟ್​ ಕೊಹ್ಲಿ ಕ್ರಿಕೆಟ್​ಗಾಗಿ ಶಿಕ್ಷಣವನ್ನು ಮೊಟಕುಗೊಳಿಸಿದವರು. 12ನೇ ತರಗತಿ ಮುಕ್ತಾಯಗೊಂಡ ಬಳಿಕ ಅವರು ವಿದ್ಯಾಭ್ಯಾಸ ಮುಂದುವರಿಸದೇ ಕ್ರಿಕೆಟ್​ಗಾಗಿ ಬದುಕು ಮುಡಿಪಾಗಿಟ್ಟಿದ್ದರು. ಹೀಗಾಗಿ ಶೈಕ್ಷಣಿಕ ವಿಚಾರಕ್ಕೆ ಹೆಚ್ಚು ಡಿಗ್ರಿಗಳನ್ನೇನೂ ಪಡೆದುಕೊಂಡಿಲ್ಲ. ಇವೆಲ್ಲದರ ನಡುವೆಯೂ ಶಾಲಾ ದಿನಗಳಲ್ಲಿ ವಿರಾಟ್​ ಕೊಹ್ಲಿಯ ಕಲಿಕೆ ಮಟ್ಟ ಹೇಗಿದ್ದರಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇದುವರೆಗೆ ಇರಲಿಲ್ಲ. ಇದೀಗ ಸ್ವಯಂ ವಿರಾಟ್​ ಕೊಹ್ಲಿಯೇ ತಮ್ಮ 10ನೇ ತರಗತಿಯ ಮಾರ್ಕ್​ ಕಾರ್ಡ್​ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ವಿರಾಟ್​ ಕೊಹ್ಲಿ ಯಾವುದೆಲ್ಲ ವಿಷಯದಲ್ಲಿ ಎಷ್ಟೆಷ್ಟು ಮಾರ್ಕ್ ತೆಗೆದಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.

ವಿರಾಟ್​ ಕೊಹ್ಲಿ ಹಿಂದೊಮ್ಮೆ ಸಂದರ್ಶನದಲ್ಲಿ ತಮಗೆ ಗಣಿತದ ಅಲರ್ಜಿ ಇರುವುದಾಗಿ ಹೇಳಿಕೊಂಡಿದ್ದರು. ಗಣಿತದಲ್ಲಿ ಪಾಸ್​ ಆಗುವುದಕ್ಕೆ ತಾವು ಪಟ್ಟ ಕಷ್ಟವನ್ನು ಹೇಳಿಕೊಂಡಿದ್ದಾರೆ. ಇದೇ ವೇಳೆ ಅವರು ಗಣಿತದ ಅಗತ್ಯವೇನು ಎಂಬುದನ್ನೂ ಪ್ರಶ್ನಿಸಿದ್ದರು. ಇದೀಗ ಅವರು ಯಾಕೆ ಗಣಿತವನ್ನು ದ್ವೇಷ ಮಾಡಿದ್ದರು ಎಂಬುದು ಗೊತ್ತಾಗಿದೆ. ಯಾಕೆಂದರೆ 10ನೇ ತರಗತಿಯಲ್ಲಿ ಕೊಹ್ಲಿ ಗಣಿತದಲ್ಲಿ ಪಡೆದ ಮಾರ್ಕ್​​ 51. ಹೇಗಾದರೂ ಮಾಡಿ ಪಾಸ್​ ಮಾಡಬೇಕು ಎಂಬು ಹಠದಲ್ಲಿ ಅವರು ಅಷ್ಟು ಮಾರ್ಕ್​​ ಪಡೆದುಕೊಂಡಿದ್ದರು.

ಇಂಗ್ಲಿಷ್‌ನಲ್ಲಿ 83, ಹಿಂದಿಯಲ್ಲಿ 75, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 55, ಸಮಾಜ ವಿಜ್ಞಾನದಲ್ಲಿ 81, ಇಂಟ್ರಡಕ್ಟರಿ ಐಟಿಯಲ್ಲಿ 74 ಅಂಕಗಳನ್ನು ಪಡೆದಿದ್ದಾರೆ. ಈ ಎಲ್ಲ ವಿಷಯಗಳಲ್ಲಿ ವಿರಾಟ್​ಕೊಹ್ಲಿಗೆ ಆಸಕ್ತಿ ಇತ್ತ ಎಂಬುದು ಮಾರ್ಕ್​ ಕಾರ್ಡ್​ ಮೂಲಕ ಗೊತ್ತಾಗಿದೆ.

ಮೂರು ಪೆಗ್ಗಿನ ಕತೆ ಹೇಳಿದ ವಿರಾಟ್​ ಕೊಹ್ಲಿ

ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ವಿರಾಟ್‌ ಕೊಹ್ಲಿ (Virat Kohli) ಮತ್ತು ಅವರ ಪತ್ನಿ, ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ(anushka sharma) ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನುಷ್ಕಾ ಶರ್ಮಾ ಅವರು ವಿರಾಟ್​ ಕೊಹ್ಲಿಯ ಕುಡಿತದ ಚಟದ ಬಗ್ಗೆ ರೋಚಕ ಸಂಗತಿಯೊಂದನ್ನು ತಿಳಿಸಿದ್ದಾರೆ.

ಸಾಮಾನ್ಯವಾಗಿ ನೀವಿಬ್ಬರು ಪಾರ್ಟಿಗಳಿಗೆ ಹೋದಾಗ ಯಾರನ್ನು ಹೆಚ್ಚಾಗಿ ಜನ ಗುರುತಿಸುತ್ತಾರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅನುಷ್ಕಾ ಶರ್ಮಾ, ಅದು ವಿರಾಟ್ ಕೊಹ್ಲಿ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವನ್ನು ಅವರು ತಿಳಿಸಿದ್ದಾರೆ. ಕೊಹ್ಲಿ ಮೂರು ಪೆಗ್​ ಹಾಕಿದ ಬಳಿಕ ಡ್ಯಾನ್ಸ್ ಮಾಡಲು ಆರಂಭಿಸುತ್ತಾರೆ. ಹೀಗಾಗಿ ಅಲ್ಲಿದ್ದವರು ಕೊಹ್ಲಿಯ ಕಡೆ ಹೆಚ್ಚು ಗಮನ ಕೊಡುತ್ತಾರೆ. ಒಮ್ಮೆ ಅವರು ನೃತ್ಯ ಆರಂಭಿಸಿದರೆ ಇದನ್ನು ಯಾರಿಂದಲೂ ತಡೆಯಲು ಅಸಾಧ್ಯ ಎಂದು ಹೇಳಿದರು.

ಪತ್ನಿಯ ಈ ಮಾತನ್ನು ನಗುತ್ತಲೇ ಒಪ್ಪಿಕೊಂಡ ವಿರಾಟ್​, ಇದು ನಿಜ. ನಾನು ಎರಡು ಪೆಗ್​ಗಳಿಗಿಂತಲೂ ಹೆಚ್ಚು ಕುಡಿದೆನೆಂದರೆ ಡ್ಯಾನ್ಸ್ ಮಾಡಲು ಆರಂಭಿಸುತ್ತೇನೆ. ಆ ಬಳಿಕ ನಾನು ಏನು ಮಾಡುತ್ತೇನೆ ಎಂಬ ಅರಿವೇ ನನಗಿರುವುದಿಲ್ಲ. ಆದರೆ ಈ ವರ್ತನೆಯನ್ನು ಈಗ ನೆನಪಿಸಿಕೊಂಡರೆ ನನಗೆ ನಾಚಿಕೆಯಾಗುತ್ತದೆ. ಈಗ ನಾನು ಕುಡಿತದಿಂದ ಮುಕ್ತವಾಗಿದ್ದೇನೆ. ಇದಕ್ಕೆ ಒಂದು ರೀತಿಯಲ್ಲಿ ಪತ್ನಿ ಅನುಷ್ಕಾ ಕೂಡ ಕಾರಣ. ಅವಳು ನನ್ನ ಬದುಕಿನಲ್ಲಿ ಬಂದ ಬಳಿಕ ಹಲವು ವಿಚಾರದಲ್ಲಿ ನಾನು ಸುಧಾರಿಸಿಕೊಂಡಿದ್ದೇನೆ ಎಂದು ಕೊಹ್ಲಿ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

IPL 2024 : ಚೆನ್ನೈ ತಂಡದ ಮಾರಕ ಬೌಲರ್ ಮಹೀಶ್​ ಪತಿರಾನಾ​ ಐಪಿಎಲ್​ನಿಂದ ಹೊರಕ್ಕೆ

IPL 2024: ಬಲಗೈ ವೇಗಿ ಈವರೆಗೆ 6 ಇನಿಂಗ್ಸ್​​ಗಳಲ್ಲಿ 13 ವಿಕೆಟ್​​ಗಳನ್ನು ಪಡೆದಿದ್ದಾರೆ. ಅವರ ಡೆತ್ ಬೌಲಿಂಗ್ ಕೌಶಲ್ಯದಿಂದ ಸಿಎಸ್​​ಕೆಗೆ ನಿರ್ಣಾಯಕ ಆಸ್ತಿಯಾಗಿದ್ದರು. ಆದಾಗ್ಯೂ, ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಪದೇ ಪದೇ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಟಿ20 ವಿಶ್ವಕಪ್​​ನಲ್ಲಿ ಪ್ರಮುಖ ಪಂದ್ಯಾವಳಿಗೆ ಮುಂಚಿತವಾಗಿ ಶ್ರೀಲಂಕಾ ಕ್ರಿಕೆಟ್ ತಮ್ಮ ವೇಗಿಯನ್ನು ಅಪಾಯಕ್ಕೆ ತಳ್ಳಲು ಬಯಸುವುದಿಲ್ಲ.

VISTARANEWS.COM


on

IPL 2024
Koo

ಬೆಂಗಳೂರು: ಎಸ್ಆರ್​ಎಚ್​​ ವಿರುದ್ಧದ ಪಂದ್ಯದ ನಂತರ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್​ ಮಹೀಶ್ ಪತಿರಾನಾ ಐಪಿಎಲ್​ನ (IPL 2024) ಉಳಿದ ಭಾಗದಿಂದ ಹೊರಗುಳಿಯುವಂತಾಗಿದೆ. ಅವರು ತಮ್ಮ ತಾಯ್ನಾಡಾದ ಶ್ರೀಲಂಕಾಕ್ಕೆ ಮರಳಿದ್ದಾರೆ. ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಅವರು ಫಿಟ್ ಆಗಿರುತ್ತಾರೆ ಎಂದು ವರದಿಯಾಗಿತ್ತು. ಆದರೆ ಸಿಎಸ್​​ಕೆ ಸ್ಟಾರ್​ ಇನ್ನೂ ಗುಣಮುಖರಾಗದ ಕಾರಣ ತಾಯ್ನಾಡಿಗೆ ಮರಳಿದ್ದಾರೆ ಎಂದು ಸಿಎಸ್​ಕೆ ಮೂಲಗಳೂ ಬಹಿರಂಗಪಡಿಸಿವೆ. ಇದರರ್ಥ ಅವರು ಟಿ20 ವಿಶ್ವಕಪ್​​ನಲ್ಲಿ ಲಂಕಾ ತಂಡದ ಭಾಗವಾಗಲಿದ್ದಾರೆ.

ಬಲಗೈ ವೇಗಿ ಈವರೆಗೆ 6 ಇನಿಂಗ್ಸ್​​ಗಳಲ್ಲಿ 13 ವಿಕೆಟ್​​ಗಳನ್ನು ಪಡೆದಿದ್ದಾರೆ. ಅವರ ಡೆತ್ ಬೌಲಿಂಗ್ ಕೌಶಲ್ಯದಿಂದ ಸಿಎಸ್​​ಕೆಗೆ ನಿರ್ಣಾಯಕ ಆಸ್ತಿಯಾಗಿದ್ದರು. ಆದಾಗ್ಯೂ, ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಪದೇ ಪದೇ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಟಿ20 ವಿಶ್ವಕಪ್​​ನಲ್ಲಿ ಪ್ರಮುಖ ಪಂದ್ಯಾವಳಿಗೆ ಮುಂಚಿತವಾಗಿ ಶ್ರೀಲಂಕಾ ಕ್ರಿಕೆಟ್ ತಮ್ಮ ವೇಗಿಯನ್ನು ಅಪಾಯಕ್ಕೆ ತಳ್ಳಲು ಬಯಸುವುದಿಲ್ಲ.

ಇದನ್ನೂ ಓದಿ : IPL 2024 : ಮ್ಯಾಕ್ಸಿ ಐಪಿಎಲ್​ನಲ್ಲಿ ಬರೀ ಬೂಸಿ; ಮ್ಯಾಕ್ಸ್​ವೆಲ್​ ಆಟಕ್ಕೆ ಅಭಿಮಾನಿಗಳ ಆಕ್ರೋಶ

ಸ್ನಾಯುಸೆಳೆತದ ಗಾಯಗಳು ಚೇತರಿಸಿಕೊಳ್ಳಲು ಸಾಮಾನ್ಯವಾಗಿ ಐದರಿಂದ ಆರು ವಾರಗಳನ್ನು ತೆಗೆದುಕೊಳ್ಳುತ್ತವೆ. ಆದ್ದರಿಂದ ಪಥಿರಾನಾ ಈ ಹೊಡೆತದಿಂದ ಹೇಗೆ ಚೇತರಿಸಿಕೊಳ್ಳುತ್ತಾರೆ ಎಂಬುದನ್ನು ನೋಡುವುದು ಕುತೂಹಲಕರವಾಗಿದೆ. ಅವರು ಶ್ರೀಲಂಕಾದ ವಿಶ್ವಕಪ್ 2023 ತಂಡದ ಭಾಗವಾಗಿದ್ದರು. ಆದರೆ ಮಧ್ಯದಲ್ಲಿ ಗಾಯಗೊಂಡಿದ್ದರು. ವಿಶ್ವ ದರ್ಜೆಯ ಕೌಶಲ್ಯಗಳನ್ನು ಹೊಂದಿರುವ ಪಥಿರಾನಾ ಆ ಪಂದ್ಯಾವಳಿಗೆ ಸಂಪೂರ್ಣ ಫಿಟ್ ಆಗುವುದು ಕಡ್ಡಾಯ ಎಂದು ಹೇಳಿದರು.

ಇದು ಖಂಡಿತವಾಗಿಯೂ ಸಿಎಸ್​ಕೆಗೆ ದೊಡ್ಡ ಹೊಡೆತವಾಗಿದೆ. ಪಥಿರಾನಾ ನಿಜವಾಗಿಯೂ ಇಡೀ ಐಪಿಎಲ್ 2024 ರಿಂದ ಹೊರಗುಳಿದರೆ ಋತುರಾಜ್ ಗಾಯಕ್ವಾಡ್ ಮತ್ತು ತಂಡವು ತಮ್ಮ ವ್ಯವಹಾರವನ್ನು ಹೇಗೆ ನಡೆಸುತ್ತದೆ ಎಂಬುದನ್ನು ನೋಡಬೇಕಾಗಿದೆ ಎಂದು ಕ್ರಿಕೆಟ್ ಪಂಡಿತರು ಹೇಳಿದ್ದಾರೆ.

Continue Reading

ಕ್ರೀಡೆ

MI vs SRH: ಸನ್ ಸ್ಟ್ರೋಕ್​ನಿಂದ ತಪ್ಪಿಸಿಕೊಂಡೀತೇ ಮುಂಬೈ ಇಂಡಿಯನ್ಸ್​​?

MI vs SRH: ಹೆಡ್​ ಮತ್ತು ಅಭಿಷೇಕ್​ ಶರ್ಮಾ ಪವರ್​ ಪ್ಲೇ ತನಕ ಆಡಿದರೆ ದೊಡ್ಡ ಮೊತ್ತ ಹರಿದು ಬರಲಿದೆ. ಮಧ್ಯಮ ಕ್ರಮಾಂಕದಲ್ಲಿಯೂ ಬ್ಯಾಟಿಂಗ್​ ಲೈನ್​ ಅಪ್​ ಬಲಿಷ್ಠವಾಗಿದೆ. ಮಾರ್ಕ್ರಮ್​, ಕ್ಲಾಸೆನ್​ ನಿತೇಶ್​ ರೆಡ್ಡಿ, ಅಬ್ದುಲ್​ ಸಮದ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.

VISTARANEWS.COM


on

MI vs SRH
Koo

ಮುಂಬಯಿ: ಪ್ಲೇ ಆಫ್​​ನಿಂದ ಬಹುತೇಕ ಹೊರಬಿದ್ದಿರುವ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್​(MI vs SRH) ಸೋಮವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​(sunrisers hyderabad) ವಿರುದ್ಧ ಆಡಲಿದೆ. ಮುಂಬೈಗೆ ತವರಿನ ಪಂದ್ಯವಾಗಿದ್ದರೂ ಕೂಡ ತಂಡದ ಪ್ರದರ್ಶನ ನೋಡುವಾಗ ಗೆಲುವು ಕಷ್ಟ ಎನ್ನಲಡ್ಡಿಯಿಲ್ಲ.

ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಇತ್ತಂಡಗಳ ನಡುವಣ ಮೊದಲ ಮುಖಾಮುಖಿಯಲ್ಲಿ ಉಭಯ ತಂಡಗಳು ಸೇರಿ 523 ರನ್ ಬಾರಿಸಿತ್ತು. ಹೈದರಾಬಾದ್​ 3 ವಿಕೆಟ್​ಗೆ 277 ರನ್ ಬಾರಿಸಿದ್ದರೆ, ಮುಂಬೈ  5 ವಿಕೆಟ್​ಗೆ 246 ರನ್ ಗಳಿಸಿ 31 ರನ್​ ಅಂತರದಿಂದ ಸೋಲು ಕಂಡಿತ್ತು. ಹೆಡ್​ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ಇವರ ಜತೆಗಾರ ಅಭಿಷೇಕ್​ ಶರ್ಮ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಇದೀಗ ಈ ಸೋಲಿಗೆ ಮುಂಬೈ ತವರಿನಲ್ಲಿ ಸೇಡು ತೀರಿಸಿಕೊಂಡೀತೇ ಎಂದು ಕಾದು ನೋಡಬೇಕಿದೆ.

ಉತ್ಸಾಹ ಕಳೆದುಕೊಂಡ ಮುಂಬೈ


ಐದು ಬಾರಿಯ ಚಾಂಪಿಯನ್​ ಮುಂಬೈ ತಂಡ ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ ತೋರಿದೆ. ಯಾರೂ ಕೂಡ ತಂಡಕ್ಕಾಗಿ ಹಾಗೂ ಉತ್ಸಾಹ ಭರಿತವಾಗಿ ಆಡುತ್ತಿಲ್ಲ. 11 ಪಂದ್ಯಗಳಿಂದ ಕೇವಲ 3 ಗೆಲುವು ಸಾಧಿಸಿ 6 ಅಂಕದೊಂದಿಗೆ ಕೊನೆಯ ಸ್ಥಾನಿಯಾಗಿದೆ. ಕಳೆದ 16 ಆವೃತ್ತಿಯ ಐಪಿಎಲ್​ ಟೂರ್ನಿಯನ್ನು ನೋಡುವುದಾದರೆ ಮುಂಬೈ ಈ ಸ್ಥಿತಿ ತಲುಪಿದ್ದು ಇದೇ ಮೊದಲು.

ಇದನ್ನೂ ಓದಿ IPL 2024 : ಮ್ಯಾಕ್ಸಿ ಐಪಿಎಲ್​ನಲ್ಲಿ ಬರೀ ಬೂಸಿ; ಮ್ಯಾಕ್ಸ್​ವೆಲ್​ ಆಟಕ್ಕೆ ಅಭಿಮಾನಿಗಳ ಆಕ್ರೋಶ

ನೂತನ ನಾಯಕ ಹಾರ್ದಿಕ್​ ಪಾಂಡ್ಯ, ಸೂರ್ಯಕುಮಾರ್​ ಯಾದವ್​, ಇಶಾನ್​ ಕಿಶನ್​, ಟಿಮ್​ ಡೇವಿಡ್​ ಹೀಗೆ ಸಾಗಿ ಎಲ್ಲ ಬ್ಯಾಟರ್​ಗಳು ಘೋರ ವೈಫಲ್ಯ. ಬೌಲಿಂಗ್​ನಲ್ಲಿ ಜಸ್​ಪ್ರೀತ್​ ಬುಮ್ರಾ ಹೊರತುಪಡಿಸಿದ ಉಳಿದೆಲ್ಲರು ಲೆಕ್ಕಭರ್ತಿಗೆ ಆಡಿದಂತೆ ಆಡುತ್ತಿದ್ದಾರೆ. ಸಂಘಟಿತ ಪ್ರದರ್ಶನ ತೋರದೇ ಹೋದಲ್ಲಿ ಈ ಪಂದ್ಯದಲ್ಲಿಯೂ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ಬೆನ್ನು ನೋವಿನಿಂದ ಬಳಲುತ್ತಿರುವ ರೋಹಿತ್​ ಈ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಅಧಿಕ. ಕಳೆದ ಪಂದ್ಯದಲ್ಲಿ ರೋಹಿತ್​ ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿದಿದ್ದರು. ಮುಂದಿನ ತಿಂಗಳು ಟಿ20 ವಿಶ್ವಕಪ್​ ಕೂಡ ಆರಂಭಗೊಳ್ಳುವ ಕಾರಣ ಬಿಸಿಸಿಐ ಕೂಡ ವಿಶ್ರಾಂತಿ ಪಡೆಯಲು ಸೂಚನೆ ನೀಡಿರಬಹುದು.

ಹೈದರಾಬಾದ್​ಗೆ ಮಹತ್ವದ ಪಂದ್ಯ


ಪ್ಲೇ ಆಫ್​ ಪ್ರವೇಶಿಸಬೇಕಿದ್ದರೆ ಸನ್​ರೈಸರ್ಸ್​ ಹೈದರಾಬಾದ್​ಗೆ ಇದು ಮಹತ್ವದ ಪಂದ್ಯ. ಸದ್ಯ 12 ಅಂಕ ಗಳಿಸಿ ನಾಲ್ಕನೇ(ಚೆನ್ನೈ-ಪಂಜಾಬ್​ ಪಂದ್ಯಕ್ಕೂ ಮುನ್ನ) ಸ್ಥಾನದಲ್ಲಿದೆ. ಕಮಿನ್ಸ್​ ಪಡೆ ಕಳೆದ ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್​ ಅಂತರದಿಂದ ಗೆದ್ದು ಬೀಗಿತ್ತು. ಹೀಗಾಗಿ ತಂಡಕ್ಕೆ ಲಕ್​ ಕೂಡ ಇದೆ. ಹೆಡ್​ ಮತ್ತು ಅಭಿಷೇಕ್​ ಶರ್ಮಾ ಪವರ್​ ಪ್ಲೇ ತನಕ ಆಡಿದರೆ ದೊಡ್ಡ ಮೊತ್ತ ಹರಿದು ಬರಲಿದೆ. ಮಧ್ಯಮ ಕ್ರಮಾಂಕದಲ್ಲಿಯೂ ಬ್ಯಾಟಿಂಗ್​ ಲೈನ್​ ಅಪ್​ ಬಲಿಷ್ಠವಾಗಿದೆ. ಮಾರ್ಕ್ರಮ್​, ಕ್ಲಾಸೆನ್​ ನಿತೇಶ್​ ರೆಡ್ಡಿ, ಅಬ್ದುಲ್​ ಸಮದ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.

Continue Reading

ಕ್ರೀಡೆ

IPL 2024 : ಮ್ಯಾಕ್ಸಿ ಐಪಿಎಲ್​ನಲ್ಲಿ ಬರೀ ಬೂಸಿ; ಮ್ಯಾಕ್ಸ್​ವೆಲ್​ ಆಟಕ್ಕೆ ಅಭಿಮಾನಿಗಳ ಆಕ್ರೋಶ

IPL 2024: ಮ್ಯಾಕ್ಸ್ವೆಲ್ ಚೆಂಡಿನೊಂದಿಗೆ ಪರಿಣಾಮಕಾರಿಯಾಗಿದ್ದರೂ, ಅವರ ಬ್ಯಾಟಿಂಗ್ ಫಾರ್ಮ್ ಅಸಮಂಜಸವಾಗಿದೆ. ಜಿಟಿ ವಿರುದ್ಧದ ಆರ್ಸಿಬಿ 148 ರನ್​ಗಳ ಗುರಿ ಬೆನ್ನಟ್ಟಿದಾಗ ಮ್ಯಾಕ್ಸ್ವೆಲ್ ಮೂರು ಎಸೆತಗಳಲ್ಲಿ ಕೇವಲ 4 ರನ್ ಗಳಿಸಲಷ್ಟೇ ಶಕ್ತರಾದರು. ಆರಂಭಿಕ ಜೋಡಿ ವಿರಾಟ್ ಕೊಹ್ಲಿ (42) ಮತ್ತು ಫಾಫ್ ಡು ಪ್ಲೆಸಿಸ್ (64) ಕೇವಲ 5.5 ಓವರ್ಗಳಲ್ಲಿ 92 ರನ್​​ಗಳನ್ನು ಸೇರಿಸಿದ್ದರು. ಇದು ಆರ್​ಸಿಬಿಯ ಸಾರ್ವಕಾಲಿಕ ಗರಿಷ್ಠ ಪವರ್ಪ್ಲೇ ಸ್ಕೋರ್ ಕೂಡ ಹೌದು.

VISTARANEWS.COM


on

IPL2024
Koo

ಬೆಂಗಳೂರು: ಐಪಿಎಲ್ 2024 ರಲ್ಲಿ (IPL 2024) ಆರಂಭಿಕ ಕಳಪೆ ಪ್ರದರ್ಶನದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಮತ್ತೆ ಪುಟಿದೆದ್ದಿದೆ. ಸತತ 3 ಗೆಲುವುಗಳನ್ನು ಗಳಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿದೆ ಮತ್ತು ಪ್ಲೇಆಫ್ ಅವಕಾಶಗಳನ್ನು ಜೀವಂತವಾಗಿರಿಸಿದೆ. ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿತು.

ಗೆಲುವಿನ ಸರಣಿಯ ಹೊರತಾಗಿಯೂ, ಆರ್​​ಸಿಬಿ ಮ್ಯಾನೇಜ್ಮೆಂಟ್ ಮತ್ತು ಅಭಿಮಾನಿಗಳು ಗ್ಲೆನ್ ಮ್ಯಾಕ್ಸ್ವೆಲ್ ಅವರ ಫಾರ್ಮ್ ಬಗ್ಗೆ ಚಿಂತಿತರಾಗಿದ್ದಾರೆ. ಅವರ ಆಟಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಮ್ಯಾಕ್ಸ್ವೆಲ್ ಚೆಂಡಿನೊಂದಿಗೆ ಪರಿಣಾಮಕಾರಿಯಾಗಿದ್ದರೂ, ಅವರ ಬ್ಯಾಟಿಂಗ್ ಫಾರ್ಮ್ ಅಸಮಂಜಸವಾಗಿದೆ. ಜಿಟಿ ವಿರುದ್ಧದ ಆರ್ಸಿಬಿ 148 ರನ್​ಗಳ ಗುರಿ ಬೆನ್ನಟ್ಟಿದಾಗ ಮ್ಯಾಕ್ಸ್ವೆಲ್ ಮೂರು ಎಸೆತಗಳಲ್ಲಿ ಕೇವಲ 4 ರನ್ ಗಳಿಸಲಷ್ಟೇ ಶಕ್ತರಾದರು. ಆರಂಭಿಕ ಜೋಡಿ ವಿರಾಟ್ ಕೊಹ್ಲಿ (42) ಮತ್ತು ಫಾಫ್ ಡು ಪ್ಲೆಸಿಸ್ (64) ಕೇವಲ 5.5 ಓವರ್ಗಳಲ್ಲಿ 92 ರನ್​​ಗಳನ್ನು ಸೇರಿಸಿದ್ದರು. ಇದು ಆರ್​ಸಿಬಿಯ ಸಾರ್ವಕಾಲಿಕ ಗರಿಷ್ಠ ಪವರ್ಪ್ಲೇ ಸ್ಕೋರ್ ಕೂಡ ಹೌದು.

ದಿನೇಶ್ ಕಾರ್ತಿಕ್ ಮತ್ತು ಸ್ವಪ್ನಿಲ್ ಸಿಂಗ್ ಕೊನೆಯಲ್ಲಿ ನಿರ್ಣಾಯಕ ಅಂತ್ಯವನ್ನು ಒದಗಿಸಿ ಆರ್​ಸಿಬಿಗೆ ಗೆಲುವು ತಂದುಕೊಟ್ಟರು. ಇದಕ್ಕೆ ಮೊದಲು ಮ್ಯಾಕ್ಸ್​ವೆಲ್ ಸೇರಿದಂತೆ ಆರ್​ಸಿಬಿಯ ಆಟಗಾರರು ಕೆಟ್ಟ ಪ್ರದರ್ಶನ ನೀಡಿದ್ದರು. ಇದನ್ನು ಆರ್​ಸಿಬಿಯ ಮಾಜಿ ಆಟಗಾರ ಪಾರ್ಥಿವ್ ಪಟೇಲ್ ಪ್ರಶ್ನಿಸಿದ್ದಾರೆ. ಮ್ಯಾಕ್ಸ್​​ವೆಲ್​ ಅವರ ಕಳಪೆ ಪ್ರದರ್ಶನವನ್ನು ಟೀಕಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, ಪಾರ್ಥಿವ್ ಮ್ಯಾಕ್ಸ್ವೆಲ್ ಅವರನ್ನು ಲೀಗ್​ನಲ್ಲಿ “ಅತಿ ಹೆಚ್ಚು ರೇಟಿಂಗ್ ಪಡೆದ ಕ್ರಿಕೆಟಿಗ” ಎಂದು ಕರೆದಿದ್ದಾರೆ. “ಗ್ಲೆನ್ ಮ್ಯಾಕ್ಸ್ವೆಲ್… ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಆಟಗಾರ…” ಎಂದು ಅವರು ತಮ್ಮ ಖಾತೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: IPL 2024 : ಟೀಕೆಗಳಿಗೆ ಪ್ರತಿಕ್ರಿಯಿಸುವುದು ಯಾಕೆ? ಕೊಹ್ಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗವಾಸ್ಕರ್​

ಈ ಟ್ವೀಟ್ ಬಿಸಿ ಚರ್ಚೆ ಹುಟ್ಟುಹಾಕಿದೆ. ಮ್ಯಾಕ್ಸ್ವೆಲ್ ಅಭಿಮಾನಿಗಳು ಪಾರ್ಥಿವ್ ಪಟೇಲ್ ಅವರ ಕಾಮೆಂಟ್​ ವಿಭಾಗದಲ್ಲಿ ಪರ ವಿರೋಧ ಚರ್ಚೆ ನಡೆಸಿದ್ದಾರೆ.

ದಾಳಿಯನ್ನು ನೋಡಿದ ನಂತರ ಐಪಿಎಲ್​ನಲ್ಲಿ ಮ್ಯಾಕ್ಸ್ವೆಲ್ ಅವರ ಪ್ರದರ್ಶನವನ್ನು ಆಸ್ಟ್ರೇಲಿಯಾದ ಪ್ರದರ್ಶನಕ್ಕೆ ಹೋಲಿಸುವಂತೆ ಅವರು ಅಭಿಮಾನಿಗಳಿಗೆ ಮನವಿ ಮಾಡಿದರು. ಆಸ್ಟ್ರೇಲಿಯಾ ಪರ ಮ್ಯಾಕ್ಸ್​ವೆಲ್​ ಅವರ ಪ್ರದರ್ಶನಕ್ಕೆ ಭಾರಿ ಬಹುಮತ ಒಲವು ತೋರಿದೆ. ಮ್ಯಾಕ್ಸ್ವೆಲ್ ಆರ್​ಸಿಬಿಯ ಪ್ರಮುಖ ಆಟಗಾರ. ಬೆಂಗಳೂರು ಮೂಲದ ಫ್ರಾಂಚೈಸಿಗೆ ಸೇರಿದಾಗಿನಿಂದ ಮ್ಯಾಕ್ಸ್​ವೆಲ್​ ತಂಡಕ್ಕೆ ನಿರ್ಣಾಯಕರಾಗಿದ್ದಾರೆ. ಹಿಂದಿನ ಋತುವಿನಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2021 ರ ಋತುವಿನಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ 500 ರನ್​​ಗಳ ಗಡಿಯನ್ನು ದಾಟಿದ್ದಾರೆ (15 ಪಂದ್ಯಗಳಲ್ಲಿ 513 ರನ್). ಪಂದ್ಯಾವಳಿಯಲ್ಲಿ ಮುಂದುವರಿಯುತ್ತಿದ್ದು, ಮ್ಯಾಕ್ಸ್​ವೆಲ್​ ತನ್ನ ಅತ್ಯುತ್ತಮ ಫಾರ್ಮ್​​ಗೆ ಮರಳುವುದು ಆರ್​ಸಿಬಿಗೆ ಅಗತ್ಯವಾಗಿತ್ತು.

Continue Reading

ಕ್ರೀಡೆ

ICC Women’s T20 World Cup: ಮಹಿಳಾ ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ; ಒಂದೇ ಗುಂಪಿನಲ್ಲಿ ಭಾರತ-ಪಾಕ್​

ICC Women’s T20 World Cup: ಐಸಿಸಿ ಮಹಿಳಾ ಟಿ20 ವಿಶ್ವಕಪ್​ ಟೂರ್ನಿಯ(ICC Women’s T20 World Cup) ವೇಳಾಪಟ್ಟಿ ಪ್ರಕಟಗೊಂಡಿದ್ದು, ಭಾರತ ತಂಡ ಅಕ್ಟೋಬರ್ 4 ರಂದು ನ್ಯೂಜಿಲ್ಯಾಂಡ್​ ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದೆ.

VISTARANEWS.COM


on

ICC Women's T20 World Cup
Koo

ದುಬೈ: ಒಂಬತ್ತನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್​ ಟೂರ್ನಿಯ(ICC Women’s T20 World Cup) ವೇಳಾಪಟ್ಟಿ ಪ್ರಕಟಗೊಂಡಿದ್ದು, ಭಾರತ ತಂಡ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ ಮತ್ತು ಪಾಕಿಸ್ತಾನ ಜತೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ವರ್ಷದ ಅಕ್ಟೋಬರ್ 3 ರಿಂದ 20 ರವರೆಗೆ ಬಾಂಗ್ಲಾದೇಶದಲ್ಲಿ ಟೂರ್ನಿ ನಡೆಯಲಿದೆ. ಸಿಲ್ಹೆಟ್‌ನಲ್ಲಿ ತಮ್ಮ ಎಲ್ಲಾ ಗುಂಪು ಪಂದ್ಯಗಳು ನಡೆಯಲಿದ್ದು, ಭಾರತವು ಅಕ್ಟೋಬರ್ 4 ರಂದು ನ್ಯೂಜಿಲ್ಯಾಂಡ್​ ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದೆ.

ಸಾಂಪ್ರದಾಯಿ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತದ ವನಿತೆಯರು ಅಕ್ಟೋಬರ್ 6 ರಂದು ಪಂದ್ಯವನ್ನಾಡಲಿದ್ದಾರೆ. ಅಕ್ಟೋಬರ್ 13 ರಂದು ಆರು ಬಾರಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾದ ವಿರುದ್ಧ ಆಡಲಿದೆ. ಒಂದು ಪಂದ್ಯ ಕ್ವಾಲಿಫೈಯರ್​ನಲ್ಲಿ ಗೆದ್ದು ಬಂದ ತಂಡದ ವಿರುದ್ಧ ಆಡಲಿದೆ. ಆತಿಥೇಯ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಇದನ್ನೂ ಓದಿ T20 World Cup : ಉನ್ಮುಕ್ತ್​ ಚಾಂದ್​ಗೆ ತೆರೆಯದ ಭಾಗ್ಯದ ಬಾಗಿಲು; ಯುಎಸ್​ ತಂಡದಲ್ಲಿ ಇಲ್ಲ ಚಾನ್ಸ್​!

ಟೂರ್ನಮೆಂಟ್‌ನಲ್ಲಿ ಪ್ರತಿ ತಂಡವು ನಾಲ್ಕು ಗುಂಪು ಪಂದ್ಯಗಳನ್ನು ಆಡುತ್ತದೆ, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿದೆ. ಸೆಮಿಫೈನಲ್​ ಪಂದ್ಯಗಳು ಅಕ್ಟೋಬರ್ 17 ಮತ್ತು 18 ರಂದು ನಡೆಯಲಿದೆ. ಫೈನಲ್​ ಪಂದ್ಯ ಅಕ್ಟೋಬರ್​ 20 ರಂದು ಢಾಕಾದಲ್ಲಿ ನಡೆಯಲಿದೆ ಎಂದು ಐಸಿಸಿ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. ಅರ್ಹತಾ ಸುತ್ತಿನಲ್ಲಿ ಫೈನಲ್​ ಪ್ರವೇಶಿಸಿದ 2 ತಂಡಗಳು ಪ್ರಧಾನ ಸುತ್ತಿನಲ್ಲಿ ಆಡಲಿದೆ.

ಟೂರ್ನಿಯಲ್ಲಿ ಒಟ್ಟು 23 ಪಂದ್ಯಗಳನ್ನು ಆಡಲಾಗುತ್ತದೆ. 19 ದಿನ ಪಂದ್ಯಾವಳಿ ಸಾಗಲಿದೆ. ಢಾಕಾ ಮತ್ತು ಸಿಲ್ಹೆಟ್‌ನಲ್ಲಿ ಪಂದ್ಯಗಳು ನಡೆಯಲಿವೆ. ಲೀಗ್​ ಹಂತದ ಯಾವುದೇ ಪಂದ್ಯಗಳಿಗೆ ಮೀಸಲು ದಿನವಿಲ್ಲ. ಕೇಲವ ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮಾತ್ರ ಮೀಸಲು ದಿನ ನಿಗದಿಯಾಗಿದೆ.

Continue Reading
Advertisement
Narendra Modi
ದೇಶ8 mins ago

Narendra Modi: ಅಯೋಧ್ಯೆಯಲ್ಲಿ ಮೋದಿ ಬೃಹತ್‌ ರೋಡ್ ಶೋ;‌ ಎಲ್ಲೆಡೆ ಜೈ ಶ್ರೀರಾಮ್‌ ಘೋಷಣೆ

Prajwal Revanna Case
ಪ್ರಮುಖ ಸುದ್ದಿ15 mins ago

Prajwal Revanna Case: ಪ್ರಜ್ವಲ್‌ ಕೇಸ್‌ನಲ್ಲಿ ಸಂತ್ರಸ್ತೆಯರಿಗಾಗಿ ಹೆಲ್ಪ್‌ಲೈನ್‌ ಆರಂಭಿಸಿದ ಎಸ್‌ಐಟಿ

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ24 mins ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Gadag News
ಕರ್ನಾಟಕ1 hour ago

Gadag News: ಮುಂಡರಗಿ ಬಳಿ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರ ಸಾವು

Drought Relief
ಕರ್ನಾಟಕ2 hours ago

Drought Relief: ಚುನಾವಣೆ ಖರ್ಚಿಗಾಗಿ ಬರ ಪರಿಹಾರ ತಡೆಹಿಡಿದ ಕಾಂಗ್ರೆಸ್‌ ಸರ್ಕಾರ: ಆರ್‌.ಅಶೋಕ್‌

Prajwal Revanna Case No evidence against me its a conspiracy says HD Revanna
ಕರ್ನಾಟಕ2 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Beef smuggling suspected Hindu activists pelt stones at vehicle
ಯಾದಗಿರಿ2 hours ago

Beef Smuggling: ಗೋಮಾಂಸ ಸಾಗಾಟ ಶಂಕೆ; ಹಿಂದುಪರ ಕಾರ್ಯಕರ್ತರಿಂದ ವಾಹನಕ್ಕೆ ಕಲ್ಲು ತೂರಾಟ

Narendra Modi
ದೇಶ2 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Vijay Namdevrao Wadettiwar
ದೇಶ3 hours ago

ಮುಂಬೈ ದಾಳಿ ಉಗ್ರ ಅಜ್ಮಲ್‌ ಕಸಬ್‌ ನಿರಪರಾಧಿ ಎಂದ ಕಾಂಗ್ರೆಸ್‌ ನಾಯಕ; ಭುಗಿಲೆದ್ದ ವಿವಾದ!

Beer Shortage
ಕರ್ನಾಟಕ3 hours ago

Beer Shortage: ಬೇಸಿಗೆಯಲ್ಲಿ ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್; ಇನ್ನೆರಡು ತಿಂಗಳು ಬಿಯರ್‌ ಸಿಗೋದು ಕಷ್ಟ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ24 mins ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ15 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

ಟ್ರೆಂಡಿಂಗ್‌