30 ಕೋಟಿ ರೂ. ಆಸ್ತಿ ಇದ್ದರೂ 3 ಹೊತ್ತು ಊಟ ಹಾಕದ ಮಗ, ಮಾತ್ರೆ ಸೇವಿಸಿ ತಂದೆ-ತಾಯಿ ಆತ್ಮಹತ್ಯೆ - Vistara News

ಕ್ರೈಂ

30 ಕೋಟಿ ರೂ. ಆಸ್ತಿ ಇದ್ದರೂ 3 ಹೊತ್ತು ಊಟ ಹಾಕದ ಮಗ, ಮಾತ್ರೆ ಸೇವಿಸಿ ತಂದೆ-ತಾಯಿ ಆತ್ಮಹತ್ಯೆ

ನನ್ನ ಮಗ ಹಾಗೂ ಸೊಸೆಯು ಕೋಟ್ಯಧೀಶರಾದರೂ ನನಗೆ ಮೂರು ಹೊತ್ತು ಊಟ ಹಾಕುತ್ತಿರಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದರೂ ಚಿಕಿತ್ಸೆ ಕೊಡಿಸುತ್ತಿರಲಿಲ್ಲ. ಹಾಗಾಗಿ ನಾವು ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

VISTARANEWS.COM

on

Son has property worth Rs 30 crore, but didn't give parents food, Elderly couple suicide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂಡೀಗಢ: ಏನೇ ಕಷ್ಟ ಬಂದರೂ ಮಕ್ಕಳ ಗಮನಕ್ಕೆ ತರದೆ, ಜೇಬಿನಲ್ಲಿ ಕಡಿಮೆ ಹಣವಿದ್ದರೂ ಯಾವುದೇ ಕೊರತೆ ಬಾರದಂತೆ ನೋಡಿಕೊಂಡು, ಹೊಟ್ಟೆ-ಬಟ್ಟೆ ಕಟ್ಟಿ ಮಕ್ಕಳನ್ನು ತಂದೆ-ತಾಯಿ ದೊಡ್ಡವರನ್ನಾಗಿ ಮಾಡುತ್ತಾರೆ. ನೂರು ಕಷ್ಟ ಬಂದರೂ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಸಮಾಜದಲ್ಲಿ ನಮ್ಮ ಮಗನೂ ಒಳ್ಳೆಯ ವ್ಯಕ್ತಿಯ, ಉನ್ನತ ಹುದ್ದೆಯಲ್ಲಿ ಇರಲಿ ಎಂದು ಮನದುಂಬಿ ಆಶೀರ್ವಾದ ಮಾಡುತ್ತಾರೆ. ಆದರೆ, ಪಾಲಕರ ತ್ಯಾಗದಿಂದಲೇ ಜೀವನ ರೂಪಿಸಿಕೊಳ್ಳುವ ಮಕ್ಕಳು ಅವರನ್ನು ಕೊನೆಯ ದಿನಗಳಲ್ಲಿ ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಮೂರು ಹೊತ್ತು ಊಟ ಹಾಕಿ, ಅವರನ್ನು ಸಾಕಿ ಸಲಹುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ತನ್ನ ಬಳಿ 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿದ್ದರೂ ತಂದೆ-ತಾಯಿಗೆ ಮೂರು ಹೊತ್ತು ಊಟ ಹಾಕದ ಮಗನ ವರ್ತನೆಯಿಂದ ಬೇಸತ್ತು ದಂಪತಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹರಿಯಾಣದ ಚರ್ಕಿ ದಾದ್ರಿಯಲ್ಲಿರುವ ಶಿವ ಕಾಲೋನಿಯ ನಿವಾಸದಲ್ಲಿ ಜಗದೀಶ್‌ ಚಂದ್ರ ಆರ್ಯ (78) ಹಾಗೂ ಭಾಗ್ಲಿ ದೇವಿ (77) ಅವರು ಸಲ್ಫಾಸ್‌ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾರ್ಚ್‌ 29ರ ರಾತ್ರಿ ಇಬ್ಬರೂ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮಗನ ವರ್ತನೆಯಿಂದ ಬೇಸತ್ತ ಅವರು, ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿ, ತಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಡೆತ್‌ ನೋಟ್‌ನಲ್ಲಿ ಭಯಾನಕ ಮಾಹಿತಿ ಬಹಿರಂಗ

ಸಲ್ಫಾಸ್‌ ಮಾತ್ರೆಗಳನ್ನು ಸೇವಿಸುವ ಮೊದಲು ಜಗದೀಶ್‌ ಚಂದ್ರ ಆರ್ಯ ಅವರು ಡೆತ್‌ನೋಟ್‌ ಬರೆದಿದ್ದು, ಹಲವು ಭಯಾನಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. “ನನ್ನ ಮಗ ವೀರೇಂದರ್‌ 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರೂ ನಮಗೆ ಮೂರು ಹೊತ್ತು ಊಟ ಹಾಕುತ್ತಿಲ್ಲ. ನನ್ನ ಹೆಂಡತಿಗೆ ಪಾರ್ಶ್ವವಾಯು ಆಗಿದ್ದು, ಕಷ್ಟ ಅನುಭವಿಸುತ್ತಿದ್ದಳು. ಹೀಗಿದ್ದರೂ, ನನ್ನ ಮಗ ನಮ್ಮನ್ನು ನೋಡಿಕೊಳ್ಳದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ” ಎಂಬುದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

“ನಾವು ಕೆಲವು ವರ್ಷಗಳ ಹಿಂದೆ ನಮ್ಮ ಇನ್ನೊಬ್ಬ ಮಗನ ಮನೆಯಲ್ಲಿ ವಾಸಿಸುತ್ತಿದ್ದೆವು. ಕೆಲ ವರ್ಷದ ಹಿಂದೆ ಆ ಮಗ ತೀರಿಕೊಂಡ. ಇದಾದ ಬಳಿಕ ನಾವು ಸೊಸೆಯ ಮನೆಯಲ್ಲಿ ಇದ್ದೆವು. ಆದರೆ, ಪತಿಯನ್ನು ಕಳೆದುಕೊಂಡಿದ್ದ ಸೊಸೆಯೂ ನಮ್ಮನ್ನು ಮನೆಯಿಂದ ಹೊರಗೆ ಹಾಕಿದಳು. ಹಾಗಾಗಿ ನಾವು ವೀರೇಂದರ್‌ನ ಮನೆಗೆ ಬಂದು ವಾಸಿಸಲು ಆರಂಭಿಸಿದೆವು. ಆದರೆ, ಕೋಟ್ಯಧೀಶನಾದರೂ ವೀರೇಂದರ್‌ ನಮಗೆ ಊಟ ಹಾಕುತ್ತಿರಲಿಲ್ಲ. ನನ್ನ ಹೆಂಡತಿಗೆ ಪಾರ್ಶ್ವವಾಯು ಆದರೂ ಚಿಕಿತ್ಸೆ ಕೊಡಲಿಲ್ಲ. ಇದೆಲ್ಲ ಕಾರಣದಿಂದ ಬೇಸತ್ತು ನಾವು ಇಂತಹ ತೀರ್ಮಾನ ತೆಗೆದುಕೊಂಡಿದ್ದೇವೆ. ನಮ್ಮ ಸಾವಿಗೆ ನನ್ನ ಮಗ ಹಾಗೂ ಇಬ್ಬರು ಸೊಸೆಯಂದಿರೇ ಕಾರಣ” ಎಂಬುದಾಗಿ ಜಗದೀಶ್‌ ಚಂದ್ರ ಆರ್ಯ ಅವರು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Suicide Case: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 21ರ ಮಹಿಳೆ; ಕೌಟುಂಬಿಕ ಕಲಹ ಶಂಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Assault Case : ವಿಕೋಪಕ್ಕೆ ತಿರುಗಿದ ಜಗಳ; ಕಪಾಳಮೋಕ್ಷಕ್ಕೆ ವ್ಯಕ್ತಿ ಬಲಿ

Assault Case : ರಸ್ತೆಯಲ್ಲಿ ಶುರುವಾದ ಒಂದು ಸಣ್ಣ ಗಲಾಟೆಯು ವಿಕೋಪಕ್ಕೆ ತಿರುಗಿ ವ್ಯಕ್ತಿಯ ಉಸಿರೇ ನಿಂತು ಹೋಗಿದೆ. ಎದುರು ಮನೆಯವನು ಕಪಾಳಕ್ಕೆ ಹೊಡೆದಿದ್ದಕ್ಕೆ ದುರಂತ ಅಂತ್ಯ ಕಂಡಿದ್ದಾರೆ.

VISTARANEWS.COM

on

By

assault case in bengaluru
Koo

ಬೆಂಗಳೂರು: ವಿಕೋಪಕ್ಕೆ ತಿರುಗಿದ ಜಗಳವು (Assault Case) ವ್ಯಕ್ತಿಯೊಬ್ಬನ ಸಾವಿನಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಕಾಡುಗೋಡಿ ಠಾಣಾ ವ್ಯಾಪ್ತಿಯ ಬೆಳ್ತೂರು ಕಾಲೋನಿಯಲ್ಲಿ ಘಟನೆ ನಡೆದಿದೆ.ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಸಿಟ್ಟಾಗಿ ಕಪಾಳಕ್ಕೆ ಹೊಡೆದಿದ್ದರಿಂದ ಪ್ರಾಣಪಕ್ಷಿಯೇ ಹಾರಿಹೋಗಿದೆ. ಪ್ರಭುರಾಮ್ ಪ್ರಸಾದ್ (33) ಮೃತ ದುರ್ದೈವಿ.

ನಿನ್ನೆ ಭಾನುವಾರ ರಾತ್ರಿ ಪ್ರಭುರಾಮ್‌ ಹಬ್ಬಕ್ಕೆಂದು ಮಗನ ಜತೆ ಬೈಕ್‌ನಲ್ಲಿ ದೇಗುಲದ ಬಳಿ ಹೋಗಿದ್ದರು. ದಾರಿ ಮಧ್ಯೆ ಬರುವಾಗ ಸ್ಕೂಟರ್‌ನಲ್ಲಿ ಏನೋ ಸೌಂಡ್ ಬರುತ್ತಿದೆ ಎಂದು ಸೈಡ್‌ಗೆ ನಿಲ್ಲಿಸಿ, ಪರಿಶೀಲಿಸುತ್ತಿದ್ದರು. ಇದೇ ವೇಳೆ ಅದೇ ದಾರಿಯಲ್ಲಿ ಕಾರಿನಲ್ಲಿ ಬಂದ ಪರಿಚಯಸ್ಥ ಮಹಿಳೆ ಬೈಕ್‌ಗೆ ಟಚ್ ಮಾಡಿದ್ದಾಳೆ.

ಈ ಬಗ್ಗೆ ಪ್ರಭುರಾಮ್‌ ಪ್ರಶ್ನೆ ಮಾಡಿದ್ದಕ್ಕೆ ಮನೆ ಹತ್ರ ಬಾ ಎಂದು ಹೊರಟು ಹೋಗಿದ್ದಾಳೆ. ಬಳಿಕ ಮನೆ ಬಳಿ ಹೋದಾಗ ಮಹಿಳೆಯ ಪತಿ ಅನಿಲ್ ಎಂಬಾತ ಪ್ರಭುರಾಮ್‌ ಜತೆಗೆ ಜಗಳ ತೆಗೆದಿದ್ದಾನೆ. ಈ ವೇಳೆ ಪ್ರಭುರಾಮ್ ಕೆನ್ನೆಗೆ ಅನಿಲ್‌ 4-5 ಬಾರಿ ಬಲವಾಗಿ ಹೊಡೆದಿದ್ದಾನೆ. ಜಗಳದ ಬಳಿಕ ಮನೆಗೆ ಹೋದ ಪ್ರಭು ನೋವಿನಲ್ಲೇ ಮಲಗಿದ್ದಾನೆ. ಆದರೆ ರಾತ್ರಿ 1 ಗಂಟೆ ಸುಮಾರಿಗೆ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ.

ಪ್ರಭುರಾಮ್ ತಾಯಿ ಪ್ರಕರಣ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ‌ ಅನ್ವಯ IPC ಸೆಕ್ಷನ್ 304 ಅಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಅತ್ಯಾಚಾರ ಕೇಸ್‌; ಎಚ್‌.ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು: ವಕೀಲರ ಅಸಮಾಧಾನ

Namma Metro : ದೆಹಲಿ ನಂತರ ನಮ್ಮ ಮೆಟ್ರೋದಲ್ಲೂ ಯುವಕ-ಯುವತಿಯ ಡಿಂಗ್‌ ಡಾಂಗ್‌!

ಬೆಂಗಳೂರು: ನಮ್ಮ ಮೆಟ್ರೋ ರೈಲಿನ ಬಾಗಿಲ ಬಳಿ ಬಿಗಿದಪ್ಪಿ ನಿಂತಿದ್ದ ಯುವಕ- ಯುವತಿಯ ವರ್ತನೆಗೆ ಸಹ ಪ್ರಯಾಣಿಕರು ಕಿಡಿಕಾರಿದ್ದಾರೆ. ದೆಹಲಿ ಮೆಟ್ರೋದಂತೆ ಬೆಂಗಳೂರಲ್ಲಿ ನಮ್ಮ ಮೆಟ್ರೋ ಪರಿವರ್ತನೆ ಆಗುತ್ತಿದೆ ಎಂದು ಅಸಮಾಧಾನ (Namma Metro) ತೋರಿದ್ದಾರೆ.

ಸಾರ್ವಜನಿಕರ ಎದುರಿನಲ್ಲಿ ಈ ರೀತಿ ಅಸಭ್ಯವಾಗಿ ವರ್ತನೆ ಮಾಡುತ್ತಿರುವುದಕ್ಕೆ ಆಕ್ರೋಶಗಳು ಕೇಳಿ ಬಂದಿವೆ. ಸಹ ಪ್ರಯಾಣಿಕರೊಬ್ಬರು ಯುವಕ-ಯುವತಿಯ ವಿಡಿಯೊ ಸೆರೆಹಿಡಿದು ಎಕ್ಸ್‌ನ ಸ್ಯಾಮ್‌ (Sam459om) ಎಂಬುವವರ ಖಾತೆಯಿಂದ ಪೋಸ್ಟ್‌ ಆಗಿದೆ. ಯುವಕನನ್ನು ಒಪ್ಪಿಕೊಂಡಿದ್ದ ಯುವತಿ ಅಕ್ಷರಶಃ ಚುಂಬಿಸುತ್ತಿದ್ದಳು ಎಂದು ಬಿಎಂಆರ್‌ಸಿಎಲ್, ನಮ್ಮ ಮೆಟ್ರೋ ಹಾಗೂ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಇತ್ತ ಬೆಂಗಳೂರು ನಗರ ಪೊಲೀಸರು ಈ ಬಗ್ಗೆ ಕ್ರಮವಹಿಸಲಾಗುವುದು, ಘಟನೆ ಸಂಬಂಧ ಮಾಹಿತಿ ನೀಡಿ ಎಂದು ರೀ ಟ್ವೀಟ್‌ ಮಾಡಿದ್ದಾರೆ.

ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ನಮ್ಮ ಮೆಟ್ರೋದಲ್ಲಿ ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲ ವಯೋಮಾನದವರು ಪ್ರಯಾಣಿಸುತ್ತಾರೆ.‌ ಈ ರೀತಿಯ ನಡವಳಿಕೆಯು ಸರಿಯಲ್ಲ ಎಂದಿದ್ದಾರೆ.

ಕೆಲವರು ಪ್ರೀತಿ-ಪ್ರೇಮ, ಪ್ರಣಯವೆಲ್ಲ ಮನೆಯಲ್ಲಿದ್ದರೆ ಚೆನ್ನ ಎಂದಿದ್ದಾರೆ. ಹಾಗೇ, ಸಾರ್ವಜನಿಕ ಪ್ರದೇಶದಲ್ಲಿ ಹೀಗೆ ಮಾಡುವುದರಿಂದ ಉಳಿದವರಿಗೆ ಮುಜುಗರ ಆಗುತ್ತದೆ ಎಂದೂ ಹೇಳಿದ್ದಾರೆ. ಆದರೆ ಇನ್ನೂ ಕೆಲವರು. ಇದರಲ್ಲಿ ಅಸಭ್ಯ ವರ್ತನೆ ಏನಿದೆ. ಪರಸ್ಪರ ಅಪ್ಪಿಕೊಂಡು ನಿಂತಿದ್ದರಷ್ಟೇ. ಬೇರೆ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Prajwal Revanna Case: ಪ್ರಜ್ವಲ್‌ ಅತ್ಯಾಚಾರ ಕೇಸ್‌; ಎಚ್‌.ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು: ವಕೀಲರ ಅಸಮಾಧಾನ

Prajwal Revanna Case: ಸಿಐಡಿ ಸೈಬರ್‌ಸೆಲ್‌ನಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ಸ್ಥಳವನ್ನು ಎಸ್‌ಐಟಿ ಅಧಿಕಾರಿಗಳು ಮಹಜರು ಮಾಡಿದ್ದಾರೆ. ಈಗಾಗಲೇ ನ್ಯಾಯಾಧೀಶರ ಎದುರು ಕಳೆದ ಶುಕ್ರವಾರ (ಮೇ 3) ಸಿಎಆರ್‌ಪಿಸಿ 164 ಅಡಿಯಲ್ಲಿ ಸಂತ್ರಸ್ತ ಮಹಿಳೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ವಿಚಾರಣೆ ವೇಳೆ ತನ್ನನ್ನು ಹಾಸನದ ಎಂಪಿ ಕ್ವಾಟ್ರರ್ಸ್‌ ಮಾತ್ರವಲ್ಲದೆ ಬೆಂಗಳೂರಿನ ನಿವಾಸದಲ್ಲಿ ಸಹ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ಅತ್ಯಾಚಾರ ಪ್ರಕರಣದ ಬಗ್ಗೆ ಮಹಜರು ಮಾಡಲಾಗುತ್ತಿದೆ.

VISTARANEWS.COM

on

Prajwal Revanna Case site inspection by SIT team in HD Revanna Basavanagudi residence
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣ (Hassan Pen Drive Case) ಹಾಗೂ ಎಚ್.ಡಿ. ರೇವಣ್ಣ ವಿರುದ್ಧದ ಅಪಹರಣ ಕೇಸ್‌ಗೆ ಸಂಬಂಧಪಟ್ಟಂತೆ ಎಸ್‌ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಇನ್ನು ಎಚ್.ಡಿ. ರೇವಣ್ಣ ನಿವಾಸದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಸವನಗುಡಿಯ ನಿವಾಸದಲ್ಲಿ ಮಹಜರು ಮಾಡಲಾಗಿದೆ.

ಸಿಐಡಿ ಸೈಬರ್‌ಸೆಲ್‌ನಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ಸ್ಥಳವನ್ನು ಎಸ್‌ಐಟಿ ಅಧಿಕಾರಿಗಳು ಮಹಜರು ಮಾಡಿದ್ದಾರೆ. ಈಗಾಗಲೇ ನ್ಯಾಯಾಧೀಶರ ಎದುರು ಕಳೆದ ಶುಕ್ರವಾರ (ಮೇ 3) ಸಿಎಆರ್‌ಪಿಸಿ 164 ಅಡಿಯಲ್ಲಿ ಸಂತ್ರಸ್ತ ಮಹಿಳೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ವಿಚಾರಣೆ ವೇಳೆ ತನ್ನನ್ನು ಹಾಸನದ ಎಂಪಿ ಕ್ವಾಟ್ರರ್ಸ್‌ ಮಾತ್ರವಲ್ಲದೆ ಬೆಂಗಳೂರಿನ ನಿವಾಸದಲ್ಲಿ ಸಹ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ಅತ್ಯಾಚಾರ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿರುವ ಎಚ್.ಡಿ. ರೇವಣ್ಣ ಅವರ ಬಸವನಗುಡಿ ನಿವಾಸದೆದುರು ಮಹಜರು ಮಾಡಲಾಗುತ್ತಿದೆ.

ಪ್ರಜ್ವಲ್ ರೇವಣ್ಣ ಬೆಡ್‌ರೂಮ್‌ನಲ್ಲಿ ಅಧಿಕಾರಿಗಳಿಗೆ ದೂರುದಾರೆ ಮಾಹಿತಿ ನೀಡಿದ್ದಾರೆ. ಎಲ್ಲೆಲ್ಲಿ? ಏನೇನು ನಡೆದಿತ್ತು ಎಂಬ ಬಗ್ಗೆ ಸಂತ್ರಸ್ತೆಯಿಂದ ನೇರವಾಗಿ ಮಾಹಿತಿ ಪಡೆದು ಹೇಳಿಕೆಯಂತೆ ಮಹಜರು ಪ್ರಕ್ರಿಯೆಯನ್ನು ನಡೆಸಲಾಗಿದೆ.

ನೋಟಿಸ್ ಕೊಟ್ಟು ನಮ್ಮನ್ನು ಮನೆಯ ಒಳಗೆ ಬಿಟ್ಟಿಲ್ಲ: ವಕೀಲ ಗೋಪಾಲ್

ಎಚ್‌.ಡಿ. ರೇವಣ್ಣ ಪರ ವಕೀಲ ಗೋಪಾಲ್ ಪ್ರತಿಕ್ರಿಯೆ ನೀಡಿ, ಈಗಾಗಲೇ ಹಲವಾರು ವಿಚಾರಗಳು ಎಲ್ಲರಿಗೂ ತಿಳಿದಿದೆ. ನಮ್ಮ‌ ಕಕ್ಷಿದಾರ ಎಚ್.ಡಿ. ರೇವಣ್ಣ ಅವರ ಹೊಳೆನರಸೀಪುರ ಮನೆಯಲ್ಲಿ ಮಹಜರು ನಡೆದಿದೆ. ಎರಡು ಪ್ರಕರಣಗಳಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಮಹಜರು ಮಾಡುವ ಸಂದರ್ಭದಲ್ಲಿ ನೋಟಿಸ್ ಕೊಡಬೇಕು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ‌ ಮಹಜರು ಪ್ರಕ್ರಿಯೆ ಮಾಡಲಾಗಿದೆ. ಭವಾನಿ ರೇವಣ್ಣ ಅವರು ಮಹಜರು ಪ್ರಕ್ರಿಯೆಗೆ ಅನುಮತಿ ನೀಡಿದ್ದಾರೆ. ಹೊಳೆನರಸೀಪುರದಲ್ಲಿ ಮಹಜರು ನಡೆದಾಗ ನೋಟಿಸ್ ನೀಡಿದರು. ನನ್ನ ಕಡೆಯಿಂದ ಅವರಿಗೆ ಸಹಕಾರ ನೀಡಿದ್ದೇನೆ. ಹೊಳೆನರಸೀಪುರ ಮಹಜರು ಸಂದರ್ಭದಲ್ಲಿ 4-5-2024ರಲ್ಲಿ ಬಸವನಗುಡಿ ಮನೆಯಲ್ಲಿ ಮಹಜರು ಮಾಡಲು‌ ಸಹಕಾರ ಕೇಳಿದರು. ಈ ಬಗ್ಗೆ ಎಸ್‌ಐಟಿಯಿಂದ ನೋಟಿಸ್ ನೀಡಲಾಗಿದೆ. ನೋಟಿಸ್ ಕೊಟ್ಟು, ನಮ್ಮನ್ನು ಮನೆಯ ಒಳಗೆ ಬಿಟ್ಟಿಲ್ಲ. ಬಸವನಗುಡಿಯ ಮನೆಯ‌‌ ಮಹಜರು ಸಂದರ್ಭದಲ್ಲಿ ನನಗೆ‌ ಮನೆಯೊಳಗೆ ಅನುಮತಿ ನೀಡಿಲ್ಲ ಎಂದು ಹೇಳಿದರು.

ಪ್ರಜ್ವಲ್‌ ರೇವಣ್ಣ ಕೇಸಲ್ಲಿ ಎಚ್‌ಡಿಡಿ, ಎಚ್‌ಡಿಕೆ ಹೆಸರು ಬಳಸಂಗಿಲ್ಲ; ಕೋರ್ಟ್‌ ತಡೆಯಾಜ್ಞೆ

ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣ ಹಾಗೂ ಎಚ್.ಡಿ. ರೇವಣ್ಣ ವಿರುದ್ಧದ ಅಪಹರಣ ಕೇಸ್‌ಗೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಬಳಸದಂತೆ ತಡೆಯಾಜ್ಞೆ ನೀಡಲಾಗಿದೆ.

ಉಭಯ ನಾಯಕರು ಸೆಷನ್ಸ್ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಪ್ರಕರಣಗಳ ಬಗ್ಗೆ ಸುದ್ದಿ ಪ್ರಸಾರ‌ ಮಾಡುವಾಗ ತಮ್ಮ ಹೆಸರುಗಳನ್ನು ಬಳಸದಂತೆ ತಡೆಯಾಜ್ಞೆಯನ್ನು ತಂದಿದ್ದಾರೆ. ಇಷ್ಟು ದಿನ ಪ್ರಕರಣದ ಸಂದರ್ಭದಲ್ಲಿ ದೇವೇಗೌಡರ ಕುಟುಂಬದ ಹೆಸರುಗಳನ್ನು ಕೆಲವರು ಪ್ರಸ್ತಾಪ ಮಾಡುತ್ತಿದ್ದರು. ಇದರಿಂದ ಅವರ ಕುಟುಂಬಕ್ಕೆ ತೀವ್ರ ಮುಜುಗರವಾಗಿತ್ತು. ಅಲ್ಲದೆ, ಎಚ್‌.ಡಿ. ಕುಮಾರಸ್ವಾಮಿ ಅವರು ನೇರವಾಗಿಯೇ ಇದರ ಬಗ್ಗೆ ಕಿಡಿಕಾರಿದ್ದರು.

ಅಪಹರಣ ಕೇಸ್‌ನಲ್ಲಿ ಸ್ವ-ಇಚ್ಚಾ ಹೇಳಿಕೆಗೆ ಸಹಿ ಹಾಕಲು NO ಎಂದ ಎಚ್‌.ಡಿ. ರೇವಣ್ಣ!

ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಸ್ವ-ಇಚ್ಛಾ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಈ ಸ್ವ-ಇಚ್ಛಾ ಹೇಳಿಕೆಗೆ ಸಹಿ ಹಾಕಲು ಎಚ್.ಡಿ. ರೇವಣ್ಣ (HD Revanna) ನಿರಾಕರಿಸಿದ್ದಾರೆ. ನಿಮಗೆ ಬೇಕಾದಂತೆ ಬರೆದುಕೊಂಡಿದ್ದೀರಾ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ಎಚ್.ಡಿ. ರೇವಣ್ಣ ಅವರನ್ನು ಐದು ದಿನಗಳ ಕಸ್ಟಡಿಗೆ ನೀಡಿ ಭಾನುವಾರ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಅಪಹರಣ ಕೇಸ್‌ನಲ್ಲಿ ರೇವಣ್ಣ ಅವರಿಂದ ಸ್ವ-ಇಚ್ಛಾ ಹೇಳಿಕೆ ದಾಖಲು ಮಾಡಿಕೊಳ್ಳಲು ಮುಂದಾಗಲಾಗಿದೆ. ಈ ಸಂಬಂಧ ರೇವಣ್ಣ ಅವರಿಗೆ ಭಾನುವಾರವೇ ಒಂದಷ್ಟು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಪ್ರಯತ್ನವನ್ನು ಅಧಿಕಾರಿಗಳೂ ಮಾಡಿದ್ದರು.

ಅಪಹರಣ ಕೇಸ್‌ ಬಗ್ಗೆ ಎಚ್.ಡಿ. ರೇವಣ್ಣ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಸತೀಶ್ ಬಾಬು ಪರಿಚಯವಿದ್ದಾರಾ? ಅವರ ಮೂಲಕ ಕಿಡ್ನ್ಯಾಪ್ ಮಾಡಿಸಲು ನೀವೇ ತಿಳಿಸಿದ್ದಿರಾ? ಅಪಹರಣ ಮಾಡಿದ್ದರ ಹಿಂದಿನ ಉದ್ದೇಶ ಏನು ಎಂಬಿತ್ಯಾದಿ ವಿಷಯಗಳ ಬಗ್ಗೆ ಪ್ರಶ್ನೆ ಮಾಡಿ ಉತ್ತರವನ್ನು ಪಡೆದುಕೊಂಡಿದ್ದರು. ಕೇಸ್‌ಗೆ ಸಂಬಂಧಿಸಿ ಕೆಲವು ಸಾಂದರ್ಭಿಕ ಪ್ರಶ್ನೆಗಳಿಗೆ ಹೇಳಿಕೆ ಪಡೆದು ಅದನ್ನು ಪೇಪರ್‌ನಲ್ಲಿ ನಮೂದಿಸಿ ಸ್ವ ಇಚ್ಛಾ ಹೇಳಿಕೆಗೆ ಸಹಿ ಮಾಡುವಂತೆ ಹೇಳಿದ್ದಾರೆ. ಆದರೆ, ಅದಕ್ಕೆ ಸಹಿ ಹಾಕುವುದಿಲ್ಲ ಎಂದ ಎಚ್‌.ಡಿ. ರೇವಣ್ಣ ಹೇಳಿದ್ದಾರೆ.

ಅಪರಹಣಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ಆದರೂ ನೀವುಗಳು ಬರೆದುಕೊಂಡಿದ್ದೀರಿ. ನಾನೇ ಮಾಡಿಸಿರುವ ಹಾಗೆ ಬರೆದುಕೊಂಡಿದ್ದೀರಿ. ನಾನು ಯಾವ ಹೇಳಿಕೆಗೂ ಸಹಿ ಹಾಕಲ್ಲ ಎಂದು ರೇವಣ್ಣ ನಿರಾಕರಣೆ ಮಾಡಿದ್ದಾರೆ.

ಎಚ್‌.ಡಿ.ರೇವಣ್ಣರಿಗೆ ಇಂದು ಜಾಮೀನು ಸಿಗುತ್ತಾ?

ಈ ಮಧ್ಯೆ ಇಂದು (ಮೇ 6) ರೇವಣ್ಣ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಈ ಹಿಂದೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದ್ದರಿಂದ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಆದರೆ ಇಂದು ಕೂಡ ಜಾಮೀನು ದೊರೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಾಗಿ ಇನ್ನೂ ನಾಲ್ಕು ದಿನ ರೇವಣ್ಣ ಅವರು ಎಸ್‌ಐಟಿ ವಶದಲ್ಲಿರುವುದು ಅನಿವಾರ್ಯವಾಗಲಿದೆ.

ಭಾನುವಾರ ರೇವಣ್ಣ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಆ ವೇಳೆ ರೇವಣ್ಣ ಅವರನ್ನು ನ್ಯಾಯಾಧೀಶರು ನಾಲ್ಕು ದಿನ ಎಸ್ಐಟಿ ಕಸ್ಟಡಿಗೆ ನೀಡಿದ್ದರು. ಹೀಗಾಗಿ ತನಿಖಾ ಭಾಗವಾಗಿ ನಾಲ್ಕು ದಿನಗಳ ಕಾಲ ರೇವಣ್ಣ ಎಸ್‌ಐಟಿ ವಶದಲ್ಲಿ ಇರಲಿದ್ದಾರೆ.

ಇಂದು ರೇವಣ್ಣ ಪರ ವಕೀಲರು ಬೇಲ್ ಅರ್ಜಿ ಸಲ್ಲಿಸಿದರೆ ಎಸ್ಐಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ. ಕಸ್ಟಡಿಯಲ್ಲಿರುವ ಅವರಿಗೆ ಹಿನ್ನೆಲೆ ಜಾಮೀನು ಕೊಟ್ಟರೆ ತನಿಖೆಗೆ ಹಿನ್ನಡೆಯಾಗಬಹುದು ಎಂದು ಎಸ್‌ಐಟಿ ವಾದ ಮಂಡಿಸಲಿದೆ. ಇದೇ ಕಾರಣಕ್ಕೆ ರೇವಣ್ಣ ಅವರಿಗೆ ಇಂದು ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕಸ್ಟಡಿ ಅವಧಿ ನಂತರವೇ ಜಾಮೀನು ಭಾಗ್ಯ ಲಭಿಸಲಿದೆ ಎಂದು ಮೂಲಗಳು ತಿಳಿಸಿವೆ.

ಒತ್ತಡದಲ್ಲಿರುವ ರೇವಣ್ಣ

ಇನ್ನು ಎಸ್‌ಐಟಿ ವಶದಲ್ಲಿರುವ ರೇವಣ್ಣ ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಸುಸ್ತಾಗಿರುವಂತೆ ಅವರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಎಸ್ಐಟಿ ಅಧಿಕಾರಿಗಳು ಯಾವುದೇ ವಿಚಾರಣೆ ನಡೆಸಲಿಲ್ಲ. ಇಂದು ಬೆಳಗ್ಗೆ ಮತ್ತೆ ಪ್ರಕರಣದ ಬಗ್ಗೆ ಪ್ರಶ್ನಿಸಲಿದ್ದಾರೆ.

ರೇವಣ್ಣ ಬಂಧನವಾಗಿ 24 ಗಂಟೆ ಕಳೆದರೂ ಅವರನ್ನು ಭೇಟಿಯಾಗಲು ಅವರ ಕುಟುಂಬಸ್ಥರು ಆಗಮಿಸಿಲ್ಲ. ಯಾವಾಗಲೂ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ರೇವಣ್ಣ ಸದ್ಯ ಒಬ್ಬಂಟಿಯಾಗಿದ್ದಾರೆ. ಶನಿವಾರ ಬಂಧನವಾದಾಗಿನಿಂದ ಸರಿಯಾಗಿ ನಿದ್ದೆ ಮಾಡದೇ ತಲೆ ಕೆಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳ ಮಹಜರು

ಇಂದು (ಮೇ 6) ಸ್ಥಳ ಮಹಜರಿಗೆ ರೇವಣ್ಣ ಅವರನ್ನು ಅಧಿಕಾರಿಗಳು ಕರೆದೊಯ್ಯುವ ಸಾಧ್ಯತೆ ಇದೆ. ಇದೇ ವೇಳೆ ಸಂತ್ರಸ್ತೆಯನ್ನು ಅಕ್ರಮವಾಗಿ ಕೂಡಿಟ್ಟಿ ಸ್ಥಳ ತೋಟದ ಮನೆಯಲ್ಲಿಯೂ ಮಹಜರು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಸಂತ್ರಸ್ತೆಯರಿಗಾಗಿ ಹೆಲ್ಪ್‌ಲೈನ್‌ ಆರಂಭಿಸಿರುವ ಎಸ್‌ಐಟಿ ಹೇಳಿಕೆ ದಾಖಲಿಸಿಕೊಳ್ಳುತ್ತಿದೆ. ಈ ಮಧ್ಯೆ ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೊಗಳನ್ನು ಯಾರೇ ಆಗಲಿ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸೇರಿ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಕೇಸ್‌ನ ಸಂತ್ರಸ್ತೆಯರಿಗಾಗಿ ಆರಂಭಿಸಿದ ಹೆಲ್ಪ್‌ಲೈನ್‌ಗೆ ಬರ್ತಿವೆ ಹಲವು ಕರೆಗಳು

ರೇವಣ್ಣ ಜತೆ ಚರ್ಚೆ ನಡೆಸಿದ ವಕೀಲರು

ಎಚ್‌.ಡಿ. ರೇವಣ್ಣ ಅವರು ಎಸ್‌ಐಟಿ ವಶದಲ್ಲಿರುವ ಕಾರಣ ಅವರನ್ನು ವಕೀಲ ಮೂರ್ತಿ ಡಿ ನಾಯಕ್ ಭೇಟಿ ಮಾಡಿ ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಪ್ರಕರಣ ಸಂಬಂಧ ವಕೀಲರ ಜತೆ ರೇವಣ್ಣ ಚರ್ಚೆ ನಡೆಸಿದ್ದಾರೆ. ಜಾಮೀನು ಸಲ್ಲಿಕೆ ಮಾಡುವ ಬಗ್ಗೆ ಮಾತುಕತೆ ನಡೆದಿದೆ.

Continue Reading

ಕ್ರೈಂ

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸಲ್ಲಿ ಎಚ್‌ಡಿಡಿ, ಎಚ್‌ಡಿಕೆ ಹೆಸರು ಬಳಸಂಗಿಲ್ಲ; ಕೋರ್ಟ್‌ ತಡೆಯಾಜ್ಞೆ

Prajwal Revanna Case: ಪ್ರಜ್ವಲ್‌ ರೇವಣ್ಣ ಪ್ರಕರಣಗಳ ಬಗ್ಗೆ ಸುದ್ದಿ ಪ್ರಸಾರ‌ ಮಾಡುವಾಗ ತಮ್ಮ ಹೆಸರುಗಳನ್ನು ಬಳಸದಂತೆ ತಡೆಯಾಜ್ಞೆಯನ್ನು ತಂದಿದ್ದಾರೆ. ಇಷ್ಟು ದಿನ ಪ್ರಕರಣದ ಸಂದರ್ಭದಲ್ಲಿ ದೇವೇಗೌಡರ ಕುಟುಂಬದ ಹೆಸರುಗಳನ್ನು ಕೆಲವರು ಪ್ರಸ್ತಾಪ ಮಾಡುತ್ತಿದ್ದರು. ಇದರಿಂದ ಅವರ ಕುಟುಂಬಕ್ಕೆ ತೀವ್ರ ಮುಜುಗರವಾಗಿತ್ತು. ಅಲ್ಲದೆ, ಎಚ್‌.ಡಿ. ಕುಮಾರಸ್ವಾಮಿ ಅವರು ನೇರವಾಗಿಯೇ ಇದರ ಬಗ್ಗೆ ಕಿಡಿಕಾರಿದ್ದರು. ಈಗ ತಮ್ಮ ಹೆಸರನ್ನು ಬಳಕೆ ಮಾಡದಂತೆ ಉಭಯ ನಾಯಕರು ಸೆಷನ್ಸ್ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.

VISTARANEWS.COM

on

Prajwal Revanna Case Who leaked the pen drive Devaraje Gowda gives evidence to SIT
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣ (Hassan Pen Drive Case) ಹಾಗೂ ಎಚ್.ಡಿ. ರೇವಣ್ಣ ವಿರುದ್ಧದ ಅಪಹರಣ ಕೇಸ್‌ಗೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಬಳಸದಂತೆ ತಡೆಯಾಜ್ಞೆ ನೀಡಲಾಗಿದೆ.

ಉಭಯ ನಾಯಕರು ಸೆಷನ್ಸ್ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಪ್ರಕರಣಗಳ ಬಗ್ಗೆ ಸುದ್ದಿ ಪ್ರಸಾರ‌ ಮಾಡುವಾಗ ತಮ್ಮ ಹೆಸರುಗಳನ್ನು ಬಳಸದಂತೆ ತಡೆಯಾಜ್ಞೆಯನ್ನು ತಂದಿದ್ದಾರೆ. ಇಷ್ಟು ದಿನ ಪ್ರಕರಣದ ಸಂದರ್ಭದಲ್ಲಿ ದೇವೇಗೌಡರ ಕುಟುಂಬದ ಹೆಸರುಗಳನ್ನು ಕೆಲವರು ಪ್ರಸ್ತಾಪ ಮಾಡುತ್ತಿದ್ದರು. ಇದರಿಂದ ಅವರ ಕುಟುಂಬಕ್ಕೆ ತೀವ್ರ ಮುಜುಗರವಾಗಿತ್ತು. ಅಲ್ಲದೆ, ಎಚ್‌.ಡಿ. ಕುಮಾರಸ್ವಾಮಿ ಅವರು ನೇರವಾಗಿಯೇ ಇದರ ಬಗ್ಗೆ ಕಿಡಿಕಾರಿದ್ದರು.

ಅಪಹರಣ ಕೇಸ್‌ನಲ್ಲಿ ಸ್ವ-ಇಚ್ಚಾ ಹೇಳಿಕೆಗೆ ಸಹಿ ಹಾಕಲು NO ಎಂದ ಎಚ್‌.ಡಿ. ರೇವಣ್ಣ!

ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಸ್ವ-ಇಚ್ಛಾ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಈ ಸ್ವ-ಇಚ್ಛಾ ಹೇಳಿಕೆಗೆ ಸಹಿ ಹಾಕಲು ಎಚ್.ಡಿ. ರೇವಣ್ಣ (HD Revanna) ನಿರಾಕರಿಸಿದ್ದಾರೆ. ನಿಮಗೆ ಬೇಕಾದಂತೆ ಬರೆದುಕೊಂಡಿದ್ದೀರಾ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ಎಚ್.ಡಿ. ರೇವಣ್ಣ ಅವರನ್ನು ಐದು ದಿನಗಳ ಕಸ್ಟಡಿಗೆ ನೀಡಿ ಭಾನುವಾರ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಅಪಹರಣ ಕೇಸ್‌ನಲ್ಲಿ ರೇವಣ್ಣ ಅವರಿಂದ ಸ್ವ-ಇಚ್ಛಾ ಹೇಳಿಕೆ ದಾಖಲು ಮಾಡಿಕೊಳ್ಳಲು ಮುಂದಾಗಲಾಗಿದೆ. ಈ ಸಂಬಂಧ ರೇವಣ್ಣ ಅವರಿಗೆ ಭಾನುವಾರವೇ ಒಂದಷ್ಟು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಪ್ರಯತ್ನವನ್ನು ಅಧಿಕಾರಿಗಳೂ ಮಾಡಿದ್ದರು.

ಅಪಹರಣ ಕೇಸ್‌ ಬಗ್ಗೆ ಎಚ್.ಡಿ. ರೇವಣ್ಣ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಸತೀಶ್ ಬಾಬು ಪರಿಚಯವಿದ್ದಾರಾ? ಅವರ ಮೂಲಕ ಕಿಡ್ನ್ಯಾಪ್ ಮಾಡಿಸಲು ನೀವೇ ತಿಳಿಸಿದ್ದಿರಾ? ಅಪಹರಣ ಮಾಡಿದ್ದರ ಹಿಂದಿನ ಉದ್ದೇಶ ಏನು ಎಂಬಿತ್ಯಾದಿ ವಿಷಯಗಳ ಬಗ್ಗೆ ಪ್ರಶ್ನೆ ಮಾಡಿ ಉತ್ತರವನ್ನು ಪಡೆದುಕೊಂಡಿದ್ದರು. ಕೇಸ್‌ಗೆ ಸಂಬಂಧಿಸಿ ಕೆಲವು ಸಾಂದರ್ಭಿಕ ಪ್ರಶ್ನೆಗಳಿಗೆ ಹೇಳಿಕೆ ಪಡೆದು ಅದನ್ನು ಪೇಪರ್‌ನಲ್ಲಿ ನಮೂದಿಸಿ ಸ್ವ ಇಚ್ಛಾ ಹೇಳಿಕೆಗೆ ಸಹಿ ಮಾಡುವಂತೆ ಹೇಳಿದ್ದಾರೆ. ಆದರೆ, ಅದಕ್ಕೆ ಸಹಿ ಹಾಕುವುದಿಲ್ಲ ಎಂದ ಎಚ್‌.ಡಿ. ರೇವಣ್ಣ ಹೇಳಿದ್ದಾರೆ.

ಅಪರಹಣಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ಆದರೂ ನೀವುಗಳು ಬರೆದುಕೊಂಡಿದ್ದೀರಿ. ನಾನೇ ಮಾಡಿಸಿರುವ ಹಾಗೆ ಬರೆದುಕೊಂಡಿದ್ದೀರಿ. ನಾನು ಯಾವ ಹೇಳಿಕೆಗೂ ಸಹಿ ಹಾಕಲ್ಲ ಎಂದು ರೇವಣ್ಣ ನಿರಾಕರಣೆ ಮಾಡಿದ್ದಾರೆ.

ಎಚ್‌.ಡಿ.ರೇವಣ್ಣರಿಗೆ ಇಂದು ಜಾಮೀನು ಸಿಗುತ್ತಾ?

ಈ ಮಧ್ಯೆ ಇಂದು (ಮೇ 6) ರೇವಣ್ಣ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಈ ಹಿಂದೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದ್ದರಿಂದ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಆದರೆ ಇಂದು ಕೂಡ ಜಾಮೀನು ದೊರೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಾಗಿ ಇನ್ನೂ ನಾಲ್ಕು ದಿನ ರೇವಣ್ಣ ಅವರು ಎಸ್‌ಐಟಿ ವಶದಲ್ಲಿರುವುದು ಅನಿವಾರ್ಯವಾಗಲಿದೆ.

ಭಾನುವಾರ ರೇವಣ್ಣ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಆ ವೇಳೆ ರೇವಣ್ಣ ಅವರನ್ನು ನ್ಯಾಯಾಧೀಶರು ನಾಲ್ಕು ದಿನ ಎಸ್ಐಟಿ ಕಸ್ಟಡಿಗೆ ನೀಡಿದ್ದರು. ಹೀಗಾಗಿ ತನಿಖಾ ಭಾಗವಾಗಿ ನಾಲ್ಕು ದಿನಗಳ ಕಾಲ ರೇವಣ್ಣ ಎಸ್‌ಐಟಿ ವಶದಲ್ಲಿ ಇರಲಿದ್ದಾರೆ.

ಇಂದು ರೇವಣ್ಣ ಪರ ವಕೀಲರು ಬೇಲ್ ಅರ್ಜಿ ಸಲ್ಲಿಸಿದರೆ ಎಸ್ಐಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ. ಕಸ್ಟಡಿಯಲ್ಲಿರುವ ಅವರಿಗೆ ಹಿನ್ನೆಲೆ ಜಾಮೀನು ಕೊಟ್ಟರೆ ತನಿಖೆಗೆ ಹಿನ್ನಡೆಯಾಗಬಹುದು ಎಂದು ಎಸ್‌ಐಟಿ ವಾದ ಮಂಡಿಸಲಿದೆ. ಇದೇ ಕಾರಣಕ್ಕೆ ರೇವಣ್ಣ ಅವರಿಗೆ ಇಂದು ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕಸ್ಟಡಿ ಅವಧಿ ನಂತರವೇ ಜಾಮೀನು ಭಾಗ್ಯ ಲಭಿಸಲಿದೆ ಎಂದು ಮೂಲಗಳು ತಿಳಿಸಿವೆ.

ಒತ್ತಡದಲ್ಲಿರುವ ರೇವಣ್ಣ

ಇನ್ನು ಎಸ್‌ಐಟಿ ವಶದಲ್ಲಿರುವ ರೇವಣ್ಣ ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಸುಸ್ತಾಗಿರುವಂತೆ ಅವರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಎಸ್ಐಟಿ ಅಧಿಕಾರಿಗಳು ಯಾವುದೇ ವಿಚಾರಣೆ ನಡೆಸಲಿಲ್ಲ. ಇಂದು ಬೆಳಗ್ಗೆ ಮತ್ತೆ ಪ್ರಕರಣದ ಬಗ್ಗೆ ಪ್ರಶ್ನಿಸಲಿದ್ದಾರೆ.

ರೇವಣ್ಣ ಬಂಧನವಾಗಿ 24 ಗಂಟೆ ಕಳೆದರೂ ಅವರನ್ನು ಭೇಟಿಯಾಗಲು ಅವರ ಕುಟುಂಬಸ್ಥರು ಆಗಮಿಸಿಲ್ಲ. ಯಾವಾಗಲೂ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ರೇವಣ್ಣ ಸದ್ಯ ಒಬ್ಬಂಟಿಯಾಗಿದ್ದಾರೆ. ಶನಿವಾರ ಬಂಧನವಾದಾಗಿನಿಂದ ಸರಿಯಾಗಿ ನಿದ್ದೆ ಮಾಡದೇ ತಲೆ ಕೆಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳ ಮಹಜರು

ಇಂದು (ಮೇ 6) ಸ್ಥಳ ಮಹಜರಿಗೆ ರೇವಣ್ಣ ಅವರನ್ನು ಅಧಿಕಾರಿಗಳು ಕರೆದೊಯ್ಯುವ ಸಾಧ್ಯತೆ ಇದೆ. ಇದೇ ವೇಳೆ ಸಂತ್ರಸ್ತೆಯನ್ನು ಅಕ್ರಮವಾಗಿ ಕೂಡಿಟ್ಟಿ ಸ್ಥಳ ತೋಟದ ಮನೆಯಲ್ಲಿಯೂ ಮಹಜರು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಸಂತ್ರಸ್ತೆಯರಿಗಾಗಿ ಹೆಲ್ಪ್‌ಲೈನ್‌ ಆರಂಭಿಸಿರುವ ಎಸ್‌ಐಟಿ ಹೇಳಿಕೆ ದಾಖಲಿಸಿಕೊಳ್ಳುತ್ತಿದೆ. ಈ ಮಧ್ಯೆ ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೊಗಳನ್ನು ಯಾರೇ ಆಗಲಿ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸೇರಿ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಕೇಸ್‌ನ ಸಂತ್ರಸ್ತೆಯರಿಗಾಗಿ ಆರಂಭಿಸಿದ ಹೆಲ್ಪ್‌ಲೈನ್‌ಗೆ ಬರ್ತಿವೆ ಹಲವು ಕರೆಗಳು

ರೇವಣ್ಣ ಜತೆ ಚರ್ಚೆ ನಡೆಸಿದ ವಕೀಲರು

ಎಚ್‌.ಡಿ. ರೇವಣ್ಣ ಅವರು ಎಸ್‌ಐಟಿ ವಶದಲ್ಲಿರುವ ಕಾರಣ ಅವರನ್ನು ವಕೀಲ ಮೂರ್ತಿ ಡಿ ನಾಯಕ್ ಭೇಟಿ ಮಾಡಿ ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಪ್ರಕರಣ ಸಂಬಂಧ ವಕೀಲರ ಜತೆ ರೇವಣ್ಣ ಚರ್ಚೆ ನಡೆಸಿದ್ದಾರೆ. ಜಾಮೀನು ಸಲ್ಲಿಕೆ ಮಾಡುವ ಬಗ್ಗೆ ಮಾತುಕತೆ ನಡೆದಿದೆ.

Continue Reading

ದೇಶ

Bomb Threat: ದೆಹಲಿ ಬಳಿಕ ಇದೀಗ ಅಹಮದಾಬಾದ್​ನ ಶಾಲೆಗಳಿಗೂ ಬಾಂಬ್​ ಬೆದರಿಕೆ

Bomb Threat: ಗುಜರಾತ್‌ನ ಅಹಮದಾಬಾದ್‌ನ ಹಲವು ಶಾಲೆಗಳಿಗೆ ಸೋಮವಾರ (ಮೇ 6) ಬೆದರಿಕೆ ಇ ಮೇಲ್‌ ಬೆದರಿಕೆ ಬಂದಿದೆ. ಹೀಗಾಗಿ ಪೊಲೀಸರು ತ್ವರಿತ ತಪಾಸಣೆಗೆ ಮುಂದಾಗಿದ್ದಾರೆ. ಶಾಲೆಗಳ ಆವರಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎನ್ನಲಾಗಿದೆ. ಅದಾಗ್ಯೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕೆಲವು ದಿನಗಳ ಹಿಂದೆ ದೆಹಲಿ- ಎನ್‌ಸಿಆರ್ (Delhi NCR) ಪ್ರದೇಶದ ಕನಿಷ್ಠ 12 ಪ್ರತಿಷ್ಠಿತ ಶಾಲೆಗಳಿಗೆ (Schools) ಇಮೇಲ್‌ ಮೂಲಕ ಬಾಂಬ್ ಬೆದರಿಕೆ ಕರೆ (Bomb Threat) ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಗುಜರಾತ್‌ನಲ್ಲಿ ಈ ಘಟನೆ ನಡೆದಿರುವುದು ಆತಂಕ ಹೆಚ್ಚಿಸಿದೆ.

VISTARANEWS.COM

on

Bomb Threat
Koo

ಗಾಂಧಿನಗರ: ಕೆಲವು ದಿನಗಳ ಹಿಂದೆ ದೆಹಲಿ- ಎನ್‌ಸಿಆರ್ (Delhi NCR) ಪ್ರದೇಶದ ಕನಿಷ್ಠ 12 ಪ್ರತಿಷ್ಠಿತ ಶಾಲೆಗಳಿಗೆ (Schools) ಇಮೇಲ್‌ ಮೂಲಕ ಬಾಂಬ್ ಬೆದರಿಕೆ ಕರೆ (Bomb Threat) ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಗುಜರಾತ್‌ನ ಅಹಮದಾಬಾದ್‌ನ ಹಲವು ಶಾಲೆಗಳಿಗೆ ಸೋಮವಾರ (ಮೇ 6) ಬೆದರಿಕೆ ಇ ಮೇಲ್‌ ಬೆದರಿಕೆ ಬಂದಿದೆ. ಹೀಗಾಗಿ ಪೊಲೀಸರು ತ್ವರಿತ ತಪಾಸಣೆಗೆ ಮುಂದಾಗಿದ್ದಾರೆ. ಶಾಲೆಗಳ ಆವರಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎನ್ನಲಾಗಿದೆ. ಅದಾಗ್ಯೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಕಳೆದ ವಾರ ದೆಹಲಿ-ಎನ್‌ಸಿಆರ್‌ನ ಶಾಲೆಗೆ ಬಂದ ಬಾಂಬ್ ಬೆದರಿಕೆಯ ಇ ಮೇಲ್‌ನ ಮೂಲವಾದ ರಷ್ಯಾದ ಡೊಮೇನ್ mail.ruನಿಂದಲೇ ಈ ಬೆದರಿಕೆಯನ್ನೂ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಪೊಲೀಸ್ ಮತ್ತು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (Bomb Detection and Disposal Squad) ತಂಡಗಳು ಶಾಲೆಗಳಲ್ಲಿ ವ್ಯಾಪಕ ಶೋಧ ನಡೆಸಿವೆ. ಸದ್ಯ ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ.

ದೆಹಲಿ ಶಾಲೆಗಳಿಗೆ ಬೆದರಿಕೆ

ಮೇ 1ರಂದು ದೆಹಲಿ- ಎನ್‌ಸಿಆರ್ ಪ್ರದೇಶದ ಕನಿಷ್ಠ 12 ಪ್ರತಿಷ್ಠಿತ ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿತ್ತು. ಕೂಡಲೇ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿತ್ತು. ಬಾಂಬ್ ಬೆದರಿಕೆ ಇ ಮೇಲ್ ಸ್ವೀಕರಿಸಿದ ಶಾಲೆಗಳೆಂದರೆ – ಚಾಣಕ್ಯಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಸ್ಕೃತಿ ಶಾಲೆ, ಪೂರ್ವ ದೆಹಲಿಯ ಮಯೂರ್ ವಿಹಾರ್, ದ್ವಾರಕಾ ಜಿಲ್ಲೆಯ ಡಿಪಿಎಸ್ ಶಾಲೆ, ದಕ್ಷಿಣದ ಬಸಂತ್ ಕುಂಜ್ ಪ್ರದೇಶದಲ್ಲಿರುವ ಡಿಎವಿ ಶಾಲೆ, ಅಮಿಟಿ ಸ್ಕೂಲ್, ಸಾಕೇತ್, ನವದೆಹಲಿಯ ಸಂಸ್ಕೃತಿ ಶಾಲೆ ಮುಂತಾದವು. ಸಂಸ್ಕೃತಿಯು ದೆಹಲಿಯ ಅತ್ಯಂತ ಉನ್ನತ ಮಟ್ಟದ ಶಾಲೆಗಳಲ್ಲಿ ಒಂದು.

ಇದನ್ನೂ ಓದಿ: Bomb Threat: ದೆಹಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ಮಾಡಿದವ 16 ವರ್ಷದ ಪೋರ?

ಬಾಂಬ್‌ ದಾಳಿ ಕುರಿತ ಬೆದರಿಕೆ ಇ ಮೇಲ್‌ಗಳು ರವಾನೆಯಾಗುತ್ತಲೇ ಪೊಲೀಸರು ಎಚ್ಚೆತ್ತುಕೊಂಡರು. ಕೂಲಂಕಷ ತನಿಖೆ, ಪರಿಶೀಲನೆ ನಡೆಸಿದ ಪೊಲೀಸರು, ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ಪೋಷಕರು, ಶಾಲೆಗಳ ಆಡಳಿತ ಮಂಡಳಿಯು ನಿಟ್ಟುಸಿರು ಬಿಡುವಂತೆ ಮಾಡಿದ್ದರು.

ಚೆಂಡೆಂದು ಭಾವಿಸಿ ಬಾಂಬ್‌ ಜತೆ ಮಕ್ಕಳ ಆಟ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಒಂದು ದಿನ ಇರುವಾಗಲೇ ಪಶ್ಚಿಮ ಬಂಗಾಳದಲ್ಲಿ ಬಾಂಬ್‌ ಸ್ಫೋಟಗೊಂಡಿದೆ. ಹೂಗ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಗುವೊಂದು ಮೃತಪಟ್ಟಿದ್ದು, ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಪಾಂಡುವಾ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಚ್ಚಾ ಬಾಂಬ್‌ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎನ್ನಲಾಗಿದೆ. ಇನ್ನು ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ಕಚ್ಚಾ ಬಾಂಬ್‌ ಅನ್ನು ಚೆಂಡು ಎಂದು ಭಾವಿಸಿ ಎತ್ತಿಕೊಂಡಿದ್ದಾರೆ. ಆಗ ಅದು ಸ್ಫೋಟಗೊಂಡಿದೆ. ಘಟನೆಯಲ್ಲಿ ಪುಟ್ಟ ಕಂದಮ್ಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಗಾಯಗೊಂಡ ಇಬ್ಬರಲ್ಲಿ ಒಬ್ಬ ತನ್ನ ಬಲಗೈಯನ್ನೇ ಕಳೆದುಕೊಂಡಿದ್ದಾನೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಇನ್ನು ಈ ಕಚ್ಚಾ ಬಾಂಬ್‌ ಎಲ್ಲಿಂದ ಬಂತು? ಯಾರು ಎಸೆದರು ಎಂಬುದು ತನಿಖೆಯಲ್ಲಿ ತಿಳಿಯಬೇಕಾಗಿದೆ.

Continue Reading
Advertisement
assault case in bengaluru
ಬೆಂಗಳೂರು1 hour ago

Assault Case : ವಿಕೋಪಕ್ಕೆ ತಿರುಗಿದ ಜಗಳ; ಕಪಾಳಮೋಕ್ಷಕ್ಕೆ ವ್ಯಕ್ತಿ ಬಲಿ

Prajwal Revanna Case site inspection by SIT team in HD Revanna Basavanagudi residence
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ಅತ್ಯಾಚಾರ ಕೇಸ್‌; ಎಚ್‌.ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು: ವಕೀಲರ ಅಸಮಾಧಾನ

No Diet Day 2024
ಆರೋಗ್ಯ2 hours ago

No Diet Day 2024: ಇಂದು ಡಯೆಟ್‌ ರಹಿತ ದಿನ ಆಚರಿಸುವುದೇಕೆ?

pakistan team
ಕ್ರೀಡೆ2 hours ago

Pakistan Cricket: ಟಿ20 ವಿಶ್ವಕಪ್​ ಗೆದ್ದರೆ ಪಾಕ್​ ಆಟಗಾರರಿಗೆ ಸಿಗಲಿದೆ ಭಾರೀ ಬಹುಮಾನ ಮೊತ್ತ

Gold Rate Today
ಕರ್ನಾಟಕ2 hours ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಚಿನ್ನದ ಬೆಲೆ ಇಂದು ಹೀಗಿವೆ; ತುಸುವೇ ಏರಿಕೆ

Puttakkana makkalu sahana dead
ಕಿರುತೆರೆ2 hours ago

Puttakkana Makkalu: ಸಹನಾಳ ಸಾವಿನ ಸುದ್ದಿ ಕೇಳಿ ಮುಗಿಲುಮುಟ್ಟಿತು ಪುಟ್ಟಕ್ಕನ ಆಕ್ರಂದನ

Rekha Jhunjhunwala
ವಾಣಿಜ್ಯ2 hours ago

Rekha Jhunjhunwala: ಷೇರು ಮಾರುಕಟ್ಟೆಯಲ್ಲಿ ರೇಖಾ ಜುಂಜುನ್‌ವಾಲಾಗೆ 805 ಕೋಟಿ ರೂ. ನಷ್ಟ; ಕಾರಣವೇನು?

viral news
ಕ್ರಿಕೆಟ್2 hours ago

Viral News: ಕ್ರಿಕೆಟ್‌ ಆಡುವಾಗ ಖಾಸಗಿ ಭಾಗಕ್ಕೆ ಚೆಂಡು ಬಡಿದು ಬಾಲಕ ದಾರುಣ ಸಾವು; ವಿಡಿಯೊ ಇದೆ

Sunita Williams
ವಿದೇಶ3 hours ago

Sunita Williams: 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸುನೀತಾ ವಿಲಿಯಮ್ಸ್‌ ಸಜ್ಜು

Namma Metro
ಬೆಂಗಳೂರು3 hours ago

Namma Metro : ದೆಹಲಿ ನಂತರ ನಮ್ಮ ಮೆಟ್ರೋದಲ್ಲೂ ಯುವಕ-ಯುವತಿಯ ಡಿಂಗ್‌ ಡಾಂಗ್‌!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ12 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ21 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ22 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ23 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌