Jail Like Room: ಬೆಂಗಳೂರಿನಲ್ಲಿ ಕೊನೆಗೂ ರೂಮ್‌ ಸಿಕ್ತು ಎಂದು ಟೆಕಿ ಪೋಸ್ಟ್‌, ಇದು ಜೈಲು ಎಂದ ನೆಟ್ಟಿಗರು - Vistara News

ಬೆಂಗಳೂರು

Jail Like Room: ಬೆಂಗಳೂರಿನಲ್ಲಿ ಕೊನೆಗೂ ರೂಮ್‌ ಸಿಕ್ತು ಎಂದು ಟೆಕಿ ಪೋಸ್ಟ್‌, ಇದು ಜೈಲು ಎಂದ ನೆಟ್ಟಿಗರು

Jail Like Room:‌ ಬೆಂಗಳೂರಿನಲ್ಲಿ ಚೆಂದದೊಂದು ಮನೆಯನ್ನು ಖರೀದಿಸುವುದು ಬಿಡಿ, ಬಾಡಿಗೆಗೆ ಪಡೆಯುವುದು ಕೂಡ ಕಷ್ಟ. ಅದು ಎಷ್ಟು ಕಷ್ಟ ಎಂಬುದನ್ನು ತಿಳಿಯಲು ಈ ಸುದ್ದಿ ಓದಿ.

VISTARANEWS.COM


on

Man Rents Jail Like Cell In Bengaluru With 24×7 Security After Unsuccessful House Hunt, Post Goes viral
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: “ಹಳ್ಳಿಯಲ್ಲಿ ಜಮೀನು ಇರಬೇಕು, ಸಿಟಿಯಲ್ಲಿ ಸ್ವಂತ ಮನೆ ಇರಬೇಕು” ಎಂಬ ಮಾತಿದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಹಳ್ಳಿಯಲ್ಲಿ ಬೇಕಾದರೂ ಜಮೀನು ಖರೀದಿಸಬಹುದು. ಆದರೆ, ಬೆಂಗಳೂರಿನಂತಹ ಮಹಾ ನಗರದಲ್ಲಿ ಸ್ವಂತ ಮನೆಯ ಕನಸು ಬಿಡಿ, ಸುಲಭವಾಗಿ ನಿಮಗೊಂದು ಬಾಡಿಗೆ ಮನೆ ಸಿಗುವುದೂ ಕಷ್ಟ ಎಂಬಂತಾಗಿದೆ. ಈಸ್ಟ್‌ ಫೇಸಿಂಗ್‌, ಮನೆ ಅಡ್ವಾನ್ಸ್‌, ನೀರು, ವಾಸ್ತು, ಮೆಟ್ರೋ, ಬಸ್‌ ನಿಲ್ದಾಣಕ್ಕೆ ಸಮೀಪ ಇರುವ ಮನೆ ಹುಡುಕುವಷ್ಟರಲ್ಲಿ ಸಾಕು ಸಾಕಾಗುತ್ತದೆ. ಹೀಗೆ, ಬೆಂಗಳೂರಿನಲ್ಲಿ ಟೆಕಿಯೊಬ್ಬ ಮನೆ ಹುಡುಕಿ, ಹುಡುಕಿ ಸಾಕಾಗಿ, ಕೊನೆಗೊಂದು ಪುಟ್ಟ ರೂಮು ಸಿಕ್ಕು, ಅದರ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ನಿಟ್ಟುಸಿರು ಬಿಟ್ಟಿದ್ದಾನೆ. ಆದರೆ, ನೆಟ್ಟಿಗರು ಮಾತ್ರ ಅದನ್ನು ಜೈಲು (Jail Like Room) ಎಂದು ಕರೆದಿದ್ದಾರೆ. ಇನ್ನೂ ಕೆಲವರು “ನೀನೇ ಲಕ್ಕಿ ಗುರು” ಎಂದಿದ್ದಾರೆ.

ಮಂಥನ್‌ ಗುಪ್ತಾ ಅವರು ತಮಗೆ ಕೊನೆಗೂ ಸಿಕ್ಕ ಚಿಕ್ಕ ರೂಮಿನ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ನನಗೆ ಕೊನೆಗೂ ಸಂಪೂರ್ಣವಾಗಿ ಫರ್ನಿಶ್‌ ಆಗಿರುವ ಮನೆಯೊಂದು ಸಿಕ್ಕಿದೆ. ಈ ಮನೆಗೆ ಗೇಟ್‌ ಇದೆ ಹಾಗೂ 24/7 ಸೆಕ್ಯುರಿಟಿ ಇದೆ” ಎಂದು ಒಕ್ಕಣೆ ಬರೆದಿದ್ದಾನೆ. ಮಂಥನ್‌ ಗುಪ್ತಾ ಪೋಸ್ಟ್‌ಗೆ ಹಲವಾರು ಜನ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಂದಷ್ಟು ಜನ ನೀನೇ ಲಕ್ಕಿ ಎಂದರೆ, ಇನ್ನೊಂದಿಷ್ಟು ಜನ ಕಿಟಕಿಯ ಕಂಬಿ ನೋಡಿ, ಇದೊಂದು ರೀತಿ ಜೈಲಿನಂತೆ ಇದೆ ಎಂದಿದ್ದಾರೆ.

ಮಂಥನ್‌ ಗುಪ್ತಾ ಪೋಸ್ಟ್

ಪುಟ್ಟದಾದ ಕೋಣೆಯಲ್ಲಿಯೇ ಮನೆ ಇದೆ. ಸಣ್ಣದೊಂದು ಕಬೋರ್ಡ್‌, ಟೇಬಲ್‌ ಹಾಗೂ ಸಿಂಕ್‌ ಇದೆ. “ಈ ರೂಮಿನಲ್ಲಿ ವಾಸಿಸುವವರು ನಿಜವಾಗಿಯೂ ಅದೃಷ್ಟವಂತರು. ಅಷ್ಟೊಂದು ಸೂರ್ಯನ ಬೆಳಕಿದೆ” ಎಂದು ವ್ಯಕ್ತಿಯೊಬ್ಬ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ, “ಇದು ನನ್ನ ಕೋಣೆಗಿಂತ ಕೇವಲ ಶೇ.20ರಷ್ಟು ಚಿಕ್ಕದಿದೆ. ಆದರೆ, ನನಗೆ ಯಾವುದೇ ಸೆಕ್ಯುರಿಟಿ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬ ವ್ಯಕ್ತಿಯು “ಈ ಕೋಣೆಯು ಜೈಲಿನಂತಿದೆ, ವಾಸಿಸುವುದು ತುಂಬ ಕಷ್ಟ” ಎಂದು ಹೇಳಿದ್ದಾರೆ. “ಈ ಕೋಣೆಯಲ್ಲಿ ವಾಸಿಸುವ ವ್ಯಕ್ತಿಯು ಬೇರೊಂದು ಅನುಭವವನ್ನೇ ಪಡೆಯುತ್ತಾರೆ. ಜನ ಸ್ವಯಂ ಪ್ರೇರಿತರಾಗಿ ಜೈಲನ್ನೇ ಬಾಡಿಗೆ ಪಡೆಯುವ ದಿಸೆಯಲ್ಲಿ ಯಾರಾದರೂ ನೆರವು ನೀಡಬೇಕು” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಹೀಗೆ, ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಕೊನೆಗೂ ರೂಮ್‌ ಸಿಕ್ಕ ಖುಷಿಯಲ್ಲಿ ಮಂಥನ್‌ ಗುಪ್ತಾ ತೇಲಾಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Matrimonial Ad | ವರ ಬೇಕಾಗಿದ್ದಾನೆ, ಆದರೆ ಎಂಜಿನಿಯರ್‌ ಬೇಡ, ಸಾಫ್ಟ್‌ವೇರ್‌ಗಳಿಗೆ ಇದು ಹಾರ್ಡ್‌ ನ್ಯೂಸ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Karnataka Rain: ರಾಜ್ಯಾದ್ಯಂತ ಹಲವೆಡೆ ಮಳೆಯು ಅಬ್ಬರಿಸುತ್ತಿದ್ದು, ಜನ-ಜೀವನ ಅಸ್ತವ್ಯಸ್ತವಾಗಿದೆ. ರಾತ್ರಿ ಸುರಿದ ಒಂದು ಮಳೆಗೆ ಹಲವು ಗ್ರಾಮಗಳು ಮುಳುಗಡೆಯಾಗಿವೆ. ಮಳೆಗೆ ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಬಸ್‌ವೊಂದು ಸಿಲುಕಿಕೊಂಡು ಪ್ರಯಾಣಿಕರು ಕಂಗಲಾದರು.

VISTARANEWS.COM


on

By

Karnataka Rain
Koo

ಬೆಂಗಳೂರು/ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ವ್ಯಾಪಕ (karnataka Rain) ಮಳೆಯಾಗುತ್ತಿದ್ದು, ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ 766Eಯ ಕತಗಾಲ ಬಳಿ ಚಂಡಿಕಾ ಹೊಳೆ ಉಕ್ಕಿ ರಸ್ತೆಗೆ ಹರಿದಿದೆ. ಪರಿಣಾಮ ಬಸ್‌ವೊಂದು ನೀರಿನಲ್ಲಿ ಸಿಲುಕಿತ್ತು. ಗ್ರಾಮ ಪಂಚಾಯತಿ ಅಧಿಕಾರಿಗಳು, ಸ್ಥಳೀಯರಿಂದ ಬೋಟ್ ಮೂಲಕ ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ. ಶಿರಸಿ-ಕುಮಟಾ ಹೆದ್ದಾರಿ ಸಂಚಾರ ಬಂದ್ ಆಗಿದ್ದು, ಮಳೆ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ 766E ನಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಪ್ರತಿವರ್ಷ ಮಳೆಗಾಲದಲ್ಲಿ (karnataka weather forecast) ಚಂಡಿಕಾ ಹೊಳೆ ತುಂಬಿ ಹರಿಯಲಿದೆ.

ಚಾರ್ಮಾಡಿ ಹೆದ್ದಾರಿ ತಡೆಗೋಡೆಗಳಲ್ಲಿ ಬಿರುಕು

ಚಿಕ್ಕಮಗಳೂರಿನಲ್ಲಿ ಮಳೆ ಮುಂದುವರಿದ್ದು, ಚಾರ್ಮಾಡಿ ಹೆದ್ದಾರಿಯ ತಡೆಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಅಲ್ಲಲ್ಲಿ ತಡೆಗೋಡೆಗಳಲ್ಲಿ ಬಿರುಕು ಬಿಟ್ಟಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿದೆ. ಹೊಸ ಕಾಮಗಾರಿ ನಡೆದ ಸ್ಥಳದಲ್ಲೇ ಬಿರುಕು ಕಾಣಿಸಿಕೊಂಡಿದೆ. ಮಳೆ ಹಾಗೂ ಮಂಜಿನ ನಡುವೆ ರಸ್ತೆ ಬಿರುಕು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ರಸ್ತೆಗೆ ಕೋಟ್ಯಂತರ ರೂಪಾಯಿ ವ್ಯಯಿಸಿದರೂ ಪ್ರಯೋಜನವಾಗಿಲ್ಲ. ಕಳಪೆ ಗುಣಮಟ್ಟದ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇತ್ತ ರಾತ್ರಿಯಿಡೀ ಸುರಿದ ಮಳೆಗೆ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಾಳೆ ಗದ್ದೆ ಬಿಳ್ಳೂರು ಗ್ರಾಮದಲ್ಲಿ ಬಿಳ್ಳೂರು- ಮುಲ್ಲರ ಹಳ್ಳಿ ಸೇರಿ ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ನೀರು ನದಿಯಂತೆ ಉಕ್ಕಿ ಹರಿಯುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಗ್ರಾಮಸ್ಥರು ಪರದಾಟ ಅನುಭವಿಸುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ಶೃಂಗೇರಿಯ ಕೆರೆಕಟ್ಟೆ ಘಟ್ಟಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಶೃಂಗೇರಿ ಶಾರದಾಂಭೆ ತಟದಲ್ಲಿ ತುಂಗಾ ನದಿ ದೊಡ್ಡ ಪ್ರಮಾಣದಲ್ಲಿ ಹರಿಯುತ್ತಿದೆ. ತುಂಗಾ ನದಿ ಇಕ್ಕೆಲಗಳ ತೋಟಗಳು ಜಲಾವೃತ‌ವಾಗುವ ಸಾಧ್ಯತೆ ಇದೆ. ಇತ್ತ ಅಪಾಯದ ಮಟ್ಟ ಮೀರಿದ ಭದ್ರಾ ನದಿಯಿಂದಾಗಿ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗುವ ಹಂತ ತಲುಪಿದೆ.

ಹೆಬ್ಬಾಳೆ ಸೇತುವೆಯ ಮೇಲ್ಪದರಕ್ಕೆ ಭದ್ರಾ ನೀರು ಅಪ್ಪಳಿಸುತ್ತಿದೆ. ಸೇತುವೆ ಮುಳುಗಡೆಯಾದರೆ ಹತ್ತಾರು ಹಳ್ಳಿಗಳ ಸಂಪರ್ಕ ಬಂದ್ ಆಗಲಿದೆ. ಕಳಸ-ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಮಾರ್ಗವೂ ಬಂದ್ ಆಗಲಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಪ್ರವಾಸಿಗರು ಹಾಗೂ ಸ್ಥಳೀಯರ ಓಡಾಟಕ್ಕೆ ತಡೆಹಿಡಿಯಲಾಗಿದೆ. ಯಾವುದೇ ಕ್ಷಣದಲ್ಲಾದರೂ ಸೇತುವೆ ಮೇಲೆ ನೀರು ಉಕ್ಕುವ ಸಾಧ್ಯತೆ ಇದೆ. ಹೀಗಾಗಿ ಸ್ಥಳದಲ್ಲಿಯೇ ಕಳಸ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ: Rain News: ಭಾರಿ ಮಳೆ ಹಿನ್ನೆಲೆ, ಜಲಪಾತ ವೀಕ್ಷಣೆ- ಟ್ರೆಕ್ಕಿಂಗ್‌ಗೆ ನಿರ್ಬಂಧ; ಈ ತಾಣಗಳಿಗೆ ಹೋಗಬೇಡಿ!

ಶಿವಮೊಗ್ಗದಲ್ಲಿ ಮಳೆಗೆ ಧರೆಗುರುಳಿದ ವಿದ್ಯುತ್‌ ಕಂಬಗಳು

ಶಿವಮೊಗ್ಗದಲ್ಲೂ ಧಾರಾಕಾರ ಮಳೆಯಿಂದಾಗಿ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ಸಾಗರ ತಾಲೂಕಿನ ಹೊಳೆಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ವಿದ್ಯುತ್ ಕಂಬಗಳು ಬಿದ್ದಿದೆ. ಹೊಳೆಬಾಗಿಲು, ಕಳಸವಳ್ಳಿ, ತುಮರಿ ರಸ್ತೆ ವಿದ್ಯುತ್‌ ಕಂಬಗಳು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಕೊಡಗಿನಲ್ಲಿ ಮತ್ತೆ ಮುಂದುವರಿದ ಮಳೆ

ಕೊಡಗಿನಲ್ಲಿ ತಡರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು, ನದಿ ತುಂಬಿ ಹರಿಯುತ್ತಿದೆ. ಕಾವೇರಿಯ ತವರು ಬ್ರಹ್ಮಗಿರಿ ತಪ್ಪಲಿನಲ್ಲೂ ರಾತ್ರಿಯಿಂದ ಭಾರಿ ಮಳೆಯಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಸೋರುತಿಹುದು ಅರಸೀಕೆರೆ ರೈಲ್ವೆ ಫ್ಲಾಟ್ ಫಾರಂ

ಮಳೆ ಬಂದರೆ ಹಾಸನ ಜಿಲ್ಲೆಯ ಅರಸೀಕೆರೆ ಜಂಕ್ಷನ್‌ನ ರೈಲ್ವೆ ಫ್ಲಾಟ್ ಫಾರಂ ಬಚ್ಚಲು ಮನೆಯಂತೆ ಬಾಸವಾಗುತ್ತದೆ. ರೈಲ್ವೆ ಫ್ಲಾಟ್ ಫಾರಂನ ಛಾವಣಿ ಸೋರುತ್ತಿದ್ದು, ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಯಾಣಿಕರ ಲ್ಯಾಗೇಜ್‌ಗಳ ಮೇಲೆ ನೀರು ಸೋರುತ್ತಿದ್ದು, ಕೂಡಲೇ ಛಾವಣಿ ದುರಸ್ತಿ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Dengue Fever: ಡೆಂಗ್ಯು ಜ್ವರಕ್ಕೆ ಮೈಸೂರು ಜಿಲ್ಲೆಯಲ್ಲಿ ಆರೋಗ್ಯಾಧಿಕಾರಿಯೇ ಮೊದಲ ಬಲಿ!

Dengue Fever: ಮೈಸೂರು ಜಿಲ್ಲೆಯಲ್ಲಿ ಇದುವರೆಗೆ ಡೆಂಗ್ಯುವಿಗೆ ಸಂಬಂಧಿಸಿ 3489 ಪರೀಕ್ಷೆ ನಡೆಸಲಾಗಿದ್ದು, 479 ಡೆಂಗ್ಯು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. 162 ಆ್ಯಕ್ಟೀವ್ ಪ್ರಕರಣಗಳಿವೆ. ಹುಣಸೂರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಂದ್ರ (32) ಮೃತ ಸಮುದಾಯ ಆರೋಗ್ಯ ಅಧಿಕಾರಿಯಾಗಿದ್ದಾರೆ.

VISTARANEWS.COM


on

dengue fever mysore death
Koo

ಮೈಸೂರು: ಮೈಸೂರು ಜಿಲ್ಲೆಯಲ್ಲಿ (Mysore news) ಡೆಂಗ್ಯು ಜ್ವರ (Dengue fever) ವ್ಯಾಪಕವಾಗಿದ್ದು, ಮೊದಲ ಬಲಿ (Dengue Death) ತೆಗೆದುಕೊಂಡಿದೆ. ಸಮುದಾಯ ಆರೋಗ್ಯಾಧಿಕಾರಿಯೇ (Health Officer) ಡೆಂಗ್ಯು ಜ್ವರದಿಂದ ಮೃತಪಟ್ಟಿದ್ದಾರೆ. ಹುಣಸೂರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಂದ್ರ (32) ಮೃತ ಸಮುದಾಯ ಆರೋಗ್ಯ ಅಧಿಕಾರಿಯಾಗಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಇದುವರೆಗೆ ಡೆಂಗ್ಯುವಿಗೆ ಸಂಬಂಧಿಸಿ 3489 ಪರೀಕ್ಷೆ ನಡೆಸಲಾಗಿದ್ದು, 479 ಡೆಂಗ್ಯು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. 162 ಆ್ಯಕ್ಟೀವ್ ಪ್ರಕರಣಗಳಿವೆ.

ಡೆಂಗ್ಯು ಜ್ವರದಿಂದ ಇದುವರೆಗೆ ರಾಜ್ಯದಲ್ಲಿ 6 ಮಂದಿ ಸತ್ತಿದ್ದಾರೆ ಎಂದು ಮಂಗಳವಾರ ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದರು. ನಿನ್ನೆ ಹಾಸನ ಜಿಲ್ಲೆಯಲ್ಲಿ ಒಬ್ಬಳು ಬಾಲಕಿ ಡೆಂಗ್ಯುವಿನಿಂದ ಮೃತಪಟ್ಟಿದ್ದು, ಡೆಂಗ್ಯು ಖಚಿತವಾಗಬೇಕಿದೆ. ಬೆಂಗಳೂರಿನಲ್ಲಿ ಒಬ್ಬರು ಡೆಂಗ್ಯುವಿನಿಂದ ಮೃತಪಟ್ಟಿದ್ದಾರೆ. ಹೀಗಾಗಿ ಇದುವರೆಗೂ 7 ಮಂದಿ ಡೆಂಗ್ಯುವಿಗೆ ಬಲಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಡೆಂಗ್ಯು ಜ್ವರ ಪರೀಕ್ಷೆಗೆ ದರ ನಿಗದಿ

ಬೆಂಗಳೂರು: ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಡೆಂಗ್ಯೂ ಜ್ವರ ಪತ್ತೆಗೆ ಎರಡು ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಪರೀಕ್ಷೆಗಳಿಗೆ ಒಟ್ಟು 600 ರೂ. ನಿಗದಿಪಡಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ.

ಡೆಂಗ್ಯೂ ಜ್ವರ ಪತ್ತೆಗೆ ಎರಡು ಮಾದರಿಯ ಪರೀಕ್ಷೆ ನಡೆಸಲಾಗುತ್ತದೆ. ತಲಾ 300 ರೂ.ನಂತೆ ಒಟ್ಟು 600 ರೂ. ದರವನ್ನು ನಿಗದಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಈ ಸಂದರ್ಭವನ್ನು ಬಳಸಿಕೊಂಡು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ದುಪ್ಪಟ್ಟು ಹಣ ವಸೂಲಿಯಾಗುತ್ತಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪರೀಕ್ಷೆಗೆ ರಾಜ್ಯ ಸರ್ಕಾರ ದರ ನಿಗದಿ ಮಾಡಲು ಮುಂದಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪ್ರಕರಣಗಳು ಡಬಲ್ ಆಗಿವೆ. ಜನವರಿಯಿಂದ ಜುಲೈ 1ರ ತನಕ ಒಟ್ಟು 6187 ಕೇಸ್ ಪಾಸಿಟಿವ್ ಇದೆ. ಕಳೆದ ವರ್ಷ 2903 ಇತ್ತು. ಇಷ್ಟೇ ಅಲ್ಲ ರಾಜ್ಯದಲ್ಲಿ ಮತ್ತಷ್ಟು ಡೆಂಗ್ಯು ಕೇಸ್ ಇರಬಹುದು. 47% ಟೆಸ್ಟಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದರು.

ಡೆಂಗ್ಯು ಜ್ವರ ಇನ್ನಷ್ಟು ಹೆಚ್ಚಾಗಬಹುದು. ಸೆಪ್ಟಂಬರ್‌ನಲ್ಲಿ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳು ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿದ್ದಾರೆ. ಟೆಸ್ಟಿಂಗ್ ಕಿಟ್ ಹೆಚ್ಚುವರಿ ಇರಿಸಲಾಗಿದೆ. ಪ್ಲೇಟ್‌ಲೆಟ್ಸ್‌ ಕೊಡುವುದಕ್ಕೆ ತಿಳಿಸಿದ್ದೇವೆ. ಡೆಂಗ್ಯುವಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಪ್ಲೇಟ್ ಲೆಟ್ಸ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಬ್ಲಡ್ ಯೂನಿಟ್‌ಗಳ ಜತೆ ಮಾತುಕತೆ ಮಾಡಲಾಗಿದೆ. ಐವಿ ಫ್ಲೂವಿಡ್‌ಗಳನ್ನು ಕೊಡಲಾಗುತ್ತದೆ. ಇದು ನಮ್ಮ ಬಳಿ ಸಾಕಷ್ಟು ಇದೆ. ಆರಂಭದಲ್ಲಿ ಪ್ಯಾರಸಿಟಮಲ್ ಕೊಟ್ಟರೆ ಸಾಕಾಗುತ್ತದೆ ಎಂದು ಸಚಿವರು ತಿಳಿಸಿದ್ದರು.

ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

ಖಾಸಗಿ ಆಸ್ಪತ್ರೆಗಳು ಡೆಂಗ್ಯು ಕೇಸ್ ರಿಪೋರ್ಟ್ ಮಾಡುತ್ತಿಲ್ಲ. ಕೆಪಿಎಂ ಆಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯು ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯ. IHIPಯಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಅಪ್ಲೋಡ್ ಮಾಡುತ್ತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯು ತಪಾಸಣೆಗೆ ದರ ನಿಗದಿ ಮಾಡುವ ಬಗ್ಗೆ ಚರ್ಚೆ ಮಾಡಿಲ್ಲ. ಆ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Dengue Fever In Children: ಮಗುವಿನ ಮೈ ಬಿಸಿ ಆಗಿದೆಯೇ? ಡೆಂಗ್ಯು ಜ್ವರದ ಲಕ್ಷಣಗಳನ್ನು ತಿಳಿದುಕೊಳ್ಳಿ

Continue Reading

ಪ್ರಮುಖ ಸುದ್ದಿ

Prajwal Revanna Case: 4 ತಿಂಗಳಿಗೊಮ್ಮೆ ಎಚ್‌ಐವಿ ಟೆಸ್ಟ್ ಮಾಡಿಸಿಕೊಳ್ತಿದ್ದ ಪ್ರಜ್ವಲ್ ರೇವಣ್ಣ!

Prajwal Revanna Case: ಸಾಕಷ್ಟು ಮಹಿಳೆಯರಿಗೆ ಬೆದರಿಕೆ ಹಾಕಿ ಬಲವಂತವಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕ ನಡೆಸುತ್ತಿದ್ದ ದೂರು ಪ್ರಜ್ವಲ್ ಮೇಲಿದೆ. ಇದರಿಂದ ಎಚ್‌ಐವಿ ಬರಬಹುದು ಎಂಬ ಆತಂಕದಿಂದಲೇ ಪ್ರತೀ ನಾಲ್ಕು ತಿಂಗಳಿಗೊಮ್ಮೆ ಎಚ್‌ಐವಿ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಿರಬಹುದು ಎಂದು ಶಂಕಿಸಲಾಗಿದೆ.

VISTARANEWS.COM


on

prajwal revanna case test
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಇದೀಗ ಜೈಲಿನಲ್ಲಿರುವ ಹಾಸನ (Hassan news) ಮಾಜಿ ಸಂಸದ ಪ್ರಜ್ವಲ್ ರೇವಣ್ಣ , (Prajwal Revanna case) ನಾಲ್ಕು ತಿಂಗಳಿಗೊಮ್ಮೆ ಎಚ್‌ಐವಿ ಟೆಸ್ಟ್ (HIV Test) ಮಾಡಿಸಿಕೊಳ್ಳುತ್ತಿದ್ದರು ಎಂಬ ಸಂಗತಿ ಇದೀಗ ಬಯಲಾಗಿದೆ.

ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸುತ್ತಿದೆ. ಸದ್ಯಕ್ಕೆ ಪ್ರಜ್ವಲ್ ಮೇಲೆ ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳು ಬಯಲಾಗಿವೆ. ಅದರಲ್ಲಿ ಈ ಎಚ್‌ಐವಿ ಟೆಸ್ಟ್ ವಿಚಾರವೂ ಒಂದು. ಸಾಕಷ್ಟು ಮಹಿಳೆಯರಿಗೆ ಬೆದರಿಕೆ ಹಾಕಿ ಬಲವಂತವಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕ ನಡೆಸುತ್ತಿದ್ದ ದೂರು ಪ್ರಜ್ವಲ್ ಮೇಲಿದೆ. ಇದರಿಂದ ಎಚ್‌ಐವಿ ಬರಬಹುದು ಎಂಬ ಆತಂಕದಿಂದಲೇ ಪ್ರತೀ ನಾಲ್ಕು ತಿಂಗಳಿಗೊಮ್ಮೆ ಎಚ್‌ಐವಿ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಿರಬಹುದು ಎಂದು ಶಂಕಿಸಲಾಗಿದೆ.

ಹಲವು ಮಹಿಳೆಯರ ಜೊತೆ ಪ್ರಜ್ವಲ್ ಲೈಂಗಿಕ ಸಂಪರ್ಕ ನಡೆಸುತ್ತಿದ್ದ ಎಂಬ ಆರೋಪಕ್ಕೆ ಈ ಸಂಗತಿ ಪುಷ್ಟಿ ನೀಡಿದ್ದು, ಇದನ್ನು ಪ್ರಜ್ವಲ್‌ಗೆ ವಿರೋಧ ಸಾಕ್ಷ್ಯವಾಗಿ ಬಳಸಿಕೊಳ್ಳಲು ಎಸ್‌ಐಟಿ ಮುಂದಾಗಿದೆ. ಇದು ಪ್ರಜ್ವಲ್ ಮಹಿಳೆಯರ ಮೇಲೆ ಬಲಾತ್ಕಾರ ನಡೆಸಿದ್ದಕ್ಕೆ ದಾಖಲೆಗಳಲ್ಲಿ ಒಂದಾಗಲಿದೆ.

ಪ್ರತಿದಿನ ಫೋನ್‌ ಮಾಡಿ ಬೆತ್ತಲಾಗಲು ಹೇಳ್ತಿದ್ದ: ಪ್ರಜ್ವಲ್‌ ವಿರುದ್ಧ ನಾಲ್ಕನೇ ದೂರು

ಪ್ರಜ್ವಲ್ ರೇವಣ್ಣ (Prajwal Revanna Case) ವಿರುದ್ಧ ನಾಲ್ಕನೇ ಪ್ರಕರಣ ದಾಖಲಾಗಿದ್ದು, ಆರೋಪಿಯ ಕುರಿತು ಇನ್ನಷ್ಟು ವಿಕೃತಿಯ ದೂರುಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ (Preetham Gowda) ಹೆಸರು ಕೂಡ ತಳುಕು ಹಾಕಿಕೊಂಡಿದೆ.

ಸಿಐಡಿ ಸೈಬರ್ ಕ್ರೈಂ (CID Cyber Crime) ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನನ್ವಯ ಎಫ್ಐಆರ್ (FIR) ದಾಖಲಾಗಿದೆ. ಎಫ್ಐಆರ್‌ನಲ್ಲಿ ಸಂತ್ರಸ್ತೆಯಿಂದ ಉಲ್ಲೇಖವಾಗಿರುವ ಅಂಶಗಳು ಹೀಗಿವೆ: ಮಗನ ಶಾಲೆ‌ ವಿಚಾರಕ್ಕೆ ಪ್ರಜ್ವಲ್‌ನನ್ನು ಸಂತ್ರಸ್ತ ಮಹಿಳೆ ಭೇಟಿಯಾಗಿದ್ದರು. ಭೇಟಿ ವೇಳೆ ಸಂತ್ರಸ್ತೆಯಿಂದ ಪ್ರಜ್ವಲ್‌ ಫೋನ್‌ ನಂಬರ್ ಪಡೆದಿದ್ದ. ನಂಬರ್‌ ಪಡೆದು ವಿಡಿಯೊ ಕಾಲ್ ಮಾಡಿ ದಿನ ನಿತ್ಯ ಮಾತಾಡುತ್ತಿದ್ದ.

ನಂತರ ಮಹಿಳೆಗೆ ವಿಡಿಯೊ ಕಾಲ್ ಮಾಡಿ ವಿವಸ್ತ್ರವಾಗುವಂತೆ ಒತ್ತಾಯಿಸುತ್ತಿದ್ದ. ವಿವಸ್ತ್ರಗೊಂಡ ಮಹಿಳೆಯನ್ನು ನೋಡುತ್ತ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ವಿವಸ್ತ್ರವಾಗಲು ಒಪ್ಪದಿದ್ದಾಗ ವಿಡಿಯೊ ಸೇವ್ ಮಾಡಿಕೊಂಡಿರುವುದಾಗಿಯೂ, ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

ನಂತರ ಏಕಾಏಕಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊ ವೈರಲ್ ಆಗಿರುವ ವಿಚಾರ ಸಂತ್ರಸ್ತೆ ಗಮನಕ್ಕೆ ಬಂದಿದೆ. ಈ ಕುರಿತು ಪ್ರಜ್ವಲ್‌ನನ್ನು ಸಂತ್ರಸ್ತ ಮಹಿಳೆ ಸಂಪರ್ಕ ಮಾಡಿದ್ದಾರೆ. ಆಗ ʼಸ್ಟೇ ತಂದಿದ್ದೇನೆ, ಏನೂ ಆಗಲ್ಲʼ ಎಂದಿದ್ದರಂತೆ. ಎರಡನೇ ಬಾರಿ ಫೋಟೊ ವೈರಲ್ ಆದಾಗ ಸಂತ್ರಸ್ತೆ ದೂರು ನೀಡಲು ಮುಂದಾಗಿದ್ದರು.

ವೈರಲ್ ಆದ ಕೆಲವು ಫೋಟೊಗಳನ್ನು ಕಿರಣ್, ಶರತ್ ಹಾಗೂ ಪ್ರೀತಂ ಗೌಡ ವೈರಲ್‌ ಮಾಡಿಸಿರುವ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ಜನರ ಮೇಲೆ ದೂರು ನೀಡಲು ಮಹಿಳೆ ಮುಂದಾಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಎಸ್ಐಟಿ ಅಧಿಕಾರಿಗಳಿಂದ ತನಿಖೆ‌ ಚುರುಕುಗತಿ ಪಡೆದುಕೊಂಡಿದೆ.

ಇದನ್ನೂ ಓದಿ: Suraj Revanna Case: ಸೂರಜ್‌ ರೇವಣ್ಣಗೇ ʼಹಿಂದಿನಿಂದ ಇರಿದವರುʼ ಯಾರು?

Continue Reading

ಪ್ರಮುಖ ಸುದ್ದಿ

Dengue Fever: ಹಾಸನ ಜಿಲ್ಲೆಯಲ್ಲಿ ಮೂರು ಮಕ್ಕಳ ಬಲಿ ಪಡೆದ ಜ್ವರ; ಡೆಂಗ್ಯು ಮರಣ ಮೃದಂಗ?

Dengue Fever: ಅರಕಲಗೂಡು ಮೂಲದ ಒಂದು ಹಾಗು ಹೊಳೆನರಸೀಪುರ ಮೂಲದ ಎರಡು ಕಂದಮ್ಮಗಳು ಸಾವಿಗೀಡಾಗಿವೆ. ಮೂರೂ ಮಕ್ಕಳೂ ತೀವ್ರ ಜ್ವರದಿಂದ ಬಳಲಿದ್ದವು. ನಿನ್ನೆ ಕೂಡ ಹೊಳೆನರಸೀಪುರ ತಾಲ್ಲೂಕಿನ ಕಲಾಶ್ರೀ ಜಿ.ಎಲ್ (11) ನಿಧನ ಹೊಂದಿದ್ದಾಳೆ.

VISTARANEWS.COM


on

Dengue fever rises across the state including Bengaluru BBMP Commissioner also get fever
Koo

ಹಾಸನ: ಹಾಸನ ಜಿಲ್ಲೆಯಲ್ಲಿ (Hassan news) ಡೆಂಗ್ಯು ಜ್ವರ (Dengue Fever) ಮರಣ ಮೃದಂಗ ಬಾರಿಸುತ್ತಿದೆ ಎಂದು ಶಂಕೆಗೆ ಕಾರಣವಾಗುವಂತೆ, ಮೂವರು ಮಕ್ಕಳು ಜ್ವರ ಏರಿ (Children death) ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಡೆಂಗ್ಯು ಹಾವಳಿ ವಿಪರೀತವಾಗಿದ್ದು, ಈ ಮಕ್ಕಳನ್ನೂ ಡೆಂಗ್ಯು ಜ್ವರ ಬಲಿ ಪಡೆದಿದೆ ಎಂದು ಶಂಕಿಸಲಾಗಿದೆ.

ಅರಕಲಗೂಡು ಮೂಲದ ಒಂದು ಹಾಗು ಹೊಳೆನರಸೀಪುರ ಮೂಲದ ಎರಡು ಕಂದಮ್ಮಗಳು ಸಾವಿಗೀಡಾಗಿವೆ. ಮೂರೂ ಮಕ್ಕಳೂ ತೀವ್ರ ಜ್ವರದಿಂದ ಬಳಲಿದ್ದವು. ಜುಲೈ 1ರಂದು ಅರಕಲಗೂಡು ಮೂಲದ ಅಣ್ಣಪ್ಪಶೆಟ್ಟಿ ಹಾಗು ಪದ್ಮ ದಂಪತಿ ಪುತ್ರಿ ಅಕ್ಷತಾ (13) ಸಾವಿಗೀಡಾಗಿದ್ದಾಳೆ. ಜೂನ್ 30ರಂದು ಹೊಳೆನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು ಮೂಲದ ವರ್ಷಿಕಾ(8) ತೀವ್ರ ಜ್ವರದಿಂದ ಬಳಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ನಿನ್ನೆ ಕೂಡ ಹೊಳೆನರಸೀಪುರ ತಾಲ್ಲೂಕಿನ ಕಲಾಶ್ರೀ ಜಿ.ಎಲ್ (11) ನಿಧನ ಹೊಂದಿದ್ದಾಳೆ. ಈಕೆ ಹೊಳೆನರಸೀಪುರ ತಾಲ್ಲೂಕಿನ ಗುಡ್ಡೇನಹಳ್ಳಿ ಗ್ರಾಮದ ಲೋಕೇಶ್ ಮತ್ತು ತನುಜ ಎಂಬವರ ಪುತ್ರಿ.

ಪುಟ್ಟ ಮಕ್ಕಳ‌ ಪ್ರಾಣಕ್ಕೆ ಡೆಂಗ್ಯು ಕಂಟಕವಾಗುತ್ತಿದೆ ಎಂಬ ಭೀತಿ ಎದುರಾಗುತ್ತಿದೆ. ಮಕ್ಕಳು ಹಗಲು ಹೊರಗಡೆ ನಿರ್ಬೀತಿಯಿಂದ ಆಟವಾಡುತ್ತಾರೆ. ಡೆಂಗ್ಯು ಹರಡುವ ಸೊಳ್ಳೆಗಳು ಹಗಲಿನಲ್ಲಿ ಸಕ್ರಿಯವಾಗಿದ್ದು, ಬಯಲಿನಲ್ಲಿ ಸುಲಭವಾಗಿ ಸಿಗುವ ಮಕ್ಕಳನ್ನು ಕಚ್ಚುತ್ತಿವೆ. ಹೀಗಾಗಿ ಮಕ್ಕಳಲ್ಲಿ ಡೆಂಗ್ಯು ಪೀಡಿತರು ಜಾಸ್ತಿ ಎಂದು ತರ್ಕಿಸಲಾಗಿದೆ.

ಜ್ವರ ತೀವ್ರಗೊಂಡ ಬಳಿಕ ಮಕ್ಕಳು ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಜ್ವರದಿಂದ ಬಳಲಿದ ಮಕ್ಕಳ ಸರಣಿ ಸಾವಿನಿಂದ ಆತಂಕ ಹೆಚ್ಚಿದೆ. ಜಿಲ್ಲೆಯಲ್ಲಿ 205 ಜನರಿಗೆ ಡೆಂಗ್ಯು ಜ್ವರ ದೃಡಪಟ್ಟಿದೆ. ಸುಮಾರು 6204 ಜನರಿಗೆ ಡೆಂಗ್ಯು ಲಕ್ಷಣಗಳು ಕಾಣಿಸಿಕೊಂಡಿವೆ. ಜ್ವರ, ಮೈ ಕೈ ನೋವು ಸೇರಿ ಡೆಂಗ್ಯು ಲಕ್ಷಣ ಇರುವ ಆರು ಸಾವಿರ ಜನರ ರಕ್ತದ ಮಾದರಿ ಸಂಗ್ರಹಿಸಲಾಗಿದೆ.

ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದಾಗಿ ಡೆಂಗ್ಯು ವ್ಯಾಪಕವಾಗಿ ಹರಡುತ್ತಿದೆ. ನಿಂತ ನೀರಿನಲ್ಲಿ ಡೆಂಗ್ಯು ಸೊಳ್ಳೆಗಳು ಹುಟ್ಟಿಕೊಳ್ಳುತ್ತಿವೆ. ಡೆಂಗ್ಯು ನಿಯಂತ್ರಣ ಮಾಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ಜನ ಆಕ್ರೋಶಿಸಿದ್ದಾರೆ.

ಡೆಂಗ್ಯು ಜ್ವರ ಪರೀಕ್ಷೆಗೆ ದರ ನಿಗದಿ

ಬೆಂಗಳೂರು: ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಡೆಂಗ್ಯೂ ಜ್ವರ ಪತ್ತೆಗೆ ಎರಡು ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಪರೀಕ್ಷೆಗಳಿಗೆ ಒಟ್ಟು 600 ರೂ. ನಿಗದಿಪಡಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ.

ಡೆಂಗ್ಯೂ ಜ್ವರ ಪತ್ತೆಗೆ ಎರಡು ಮಾದರಿಯ ಪರೀಕ್ಷೆ ನಡೆಸಲಾಗುತ್ತದೆ. ತಲಾ 300 ರೂ.ನಂತೆ ಒಟ್ಟು 600 ರೂ. ದರವನ್ನು ನಿಗದಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಈ ಸಂದರ್ಭವನ್ನು ಬಳಸಿಕೊಂಡು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ದುಪ್ಪಟ್ಟು ಹಣ ವಸೂಲಿಯಾಗುತ್ತಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪರೀಕ್ಷೆಗೆ ರಾಜ್ಯ ಸರ್ಕಾರ ದರ ನಿಗದಿ ಮಾಡಲು ಮುಂದಾಗಿದೆ.

ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಕೇಸ್ ರಿಪೋರ್ಟ್ ಮಾಡುತ್ತಿಲ್ಲ. ಕೆಪಿಎಂ ಆಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯ. IHIPಯಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಅಪ್ಲೋಡ್ ಮಾಡುತ್ತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯು ತಪಾಸಣೆಗೆ ದರ ನಿಗದಿ ಮಾಡುವ ಬಗ್ಗೆ ಚರ್ಚೆ ಮಾಡಿಲ್ಲ. ಆ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮಂಗಳವಾರ ತಿಳಿಸಿದ್ದರು.

ನಮ್ಮ ವೆಬ್‌ಸೈಟಿನಲ್ಲಿ ಡೆಂಗ್ಯೂ ಬುಲೆಟಿನ್ ಬಿಡುಗಡೆ ಮಾಡುತ್ತೇವೆ. ಪ್ರತಿ ದಿನ ಎಷ್ಟು ಕೇಸ್ ಬಂದಿದೆ ಎನ್ನುವ ಮಾಹಿತಿ ಹಾಕುತ್ತೇವೆ. ದಿನ ನಿತ್ಯ ಡೆಂಗ್ಯೂ ಬುಲೆಟಿನ್ ಕೊಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ ಎಲ್ಲಾ ಮನೆಗಳ ಸರ್ವೆ ಮಾಡುತ್ತಿದೆ. ಸೂಕ್ಷ್ಮ ಪ್ರದೇಶಗಳು ಮಾತ್ರವಲ್ಲ ಎಲ್ಲಾ ಮನೆಗಳ ಸರ್ವೆ ನಡೆಸಲು ನಾನು ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ. ಮನೆ ಮನೆಗೆ ಭೇಟಿ ಕೊಡಲು ಸೂಚಿಸಿದ್ದೇನೆ. ರಾಜ್ಯಾದ್ಯಂತ ಡೆಂಗ್ಯೂ ಬಗ್ಗೆ ಕಟ್ಟೆಚ್ಚರ ವಹಿಸಲು ಸೂಚನೆ ಕೊಡಲಾಗಿದೆ. ಪ್ರತಿ ಶುಕ್ರವಾರ ಡೆಂಗ್ಯೂ ವಿಚಾರದಲ್ಲಿ ಫೀಲ್ಡ್‌ನಲ್ಲಿ ಇದ್ದು, ಮಾನಿಟರ್ ಮಾಡಲು ಸೂಚಿಸಿದ್ದೇನೆ. ಪ್ರತಿ ಶುಕ್ರವಾರ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ: Dengue Fever In Children: ಮಗುವಿನ ಮೈ ಬಿಸಿ ಆಗಿದೆಯೇ? ಡೆಂಗ್ಯು ಜ್ವರದ ಲಕ್ಷಣಗಳನ್ನು ತಿಳಿದುಕೊಳ್ಳಿ

Continue Reading
Advertisement
Karnataka Rain
ಮಳೆ6 mins ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

dengue fever mysore death
ಪ್ರಮುಖ ಸುದ್ದಿ16 mins ago

Dengue Fever: ಡೆಂಗ್ಯು ಜ್ವರಕ್ಕೆ ಮೈಸೂರು ಜಿಲ್ಲೆಯಲ್ಲಿ ಆರೋಗ್ಯಾಧಿಕಾರಿಯೇ ಮೊದಲ ಬಲಿ!

Hathras Stampede
ದೇಶ20 mins ago

Hathras Stampede: ಹತ್ರಾಸ್‌ ಕಾಲ್ತುಳಿತಕ್ಕೆ ಸಮಾಜಘಾತುಕ ಶಕ್ತಿ ಕಾರಣ ಎಂದ ಭೋಲೇ ಬಾಬಾ

Virat Kohli
ಕ್ರೀಡೆ21 mins ago

Virat Kohli: ಕಟ್ಲೆಟ್‌ ಬಿಸಿ ಮಾಡಲು ಪರದಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Shiva Rajkumar Bhairavana Kone PaaTa Title announce
ಸ್ಯಾಂಡಲ್ ವುಡ್46 mins ago

Shiva Rajkumar: ‘ಭೈರವನ ಕೊನೆ ಪಾಠ’ದಲ್ಲಿ ಶಿವರಾಜ್‌ಕುಮಾರ್‌; ಹ್ಯಾಟ್ರಿಕ್ ಹೀರೊಗೆ ಹೇಮಂತ್‌ ರಾವ್‌ ಆ್ಯಕ್ಷನ್‌ ಕಟ್‌!

rain news no entry falls
ಪ್ರಮುಖ ಸುದ್ದಿ56 mins ago

Rain News: ಭಾರಿ ಮಳೆ ಹಿನ್ನೆಲೆ, ಜಲಪಾತ ವೀಕ್ಷಣೆ- ಟ್ರೆಕ್ಕಿಂಗ್‌ಗೆ ನಿರ್ಬಂಧ; ಈ ತಾಣಗಳಿಗೆ ಹೋಗಬೇಡಿ!

Tornado Effect in Udupi
ಉಡುಪಿ1 hour ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ಧದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

MS Dhoni
ಕ್ರೀಡೆ1 hour ago

MS Dhoni: ಪತ್ನಿಗೆ ಕೇಕ್​ ತಿನ್ನಿಸಿ 15ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿದ ಧೋನಿ; ವಿಡಿಯೊ ವೈರಲ್​

Hathras Stampede
ದೇಶ1 hour ago

Hathras Stampede: ಹತ್ರಾಸ್‌ ಕಾಲ್ತುಳಿತ- FIRನಲ್ಲಿ ಭೋಲೇ ಬಾಬಾನ ಹೆಸರೇ ಇಲ್ಲ!

Stock Market
ವಾಣಿಜ್ಯ1 hour ago

Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 mins ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ1 hour ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ಧದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ5 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ6 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

ಟ್ರೆಂಡಿಂಗ್‌