IPL 2023: ಸಿಡಿದ ವಿಜಯ್​ ಶಂಕರ್; ಬೃಹತ್​ ಮೊತ್ತ ಪೇರಿಸಿದ ಗುಜರಾತ್​ ಟೈಟನ್ಸ್ - Vistara News

ಕ್ರಿಕೆಟ್

IPL 2023: ಸಿಡಿದ ವಿಜಯ್​ ಶಂಕರ್; ಬೃಹತ್​ ಮೊತ್ತ ಪೇರಿಸಿದ ಗುಜರಾತ್​ ಟೈಟನ್ಸ್

ವಿಜಯ್​ ಶಂಕರ್(​ಅಜೇಯ 63) ಸ್ಫೋಟಕ ಬ್ಯಾಟಿಂಗ್ ಸಾಹಸದಿಂದ ​ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಗುಜರಾತ್​ ಟೈಟನ್ಸ್​ 204 ರನ್​ ಗಳಿಸಿದೆ

VISTARANEWS.COM


on

IPL 2023: Vijay Shankar burst; Gujarat Titans who collected a huge amount
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ಸಾಯಿ ಸುದರ್ಶನ್(53) ಮತ್ತು ವಿಜಯ್​ ಶಂಕರ್(​ಅಜೇಯ 63) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ವಿರುದ್ಧ ಗುಜರಾತ್​ ಟೈಟನ್ಸ್​(Gujarat Titans) 204 ರನ್​ ಗಳಿಸಿದೆ. ಕೆಕೆಆರ್​ ಗೆಲುವಿಗೆ 205 ರನ್​ ಬಾರಿಸಬೇಕಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾನುವಾರದ ಐಪಿಎಲ್​ನ(IPL 2023) ಡಬಲ್​ ಹೆಡರ್​ನ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್​ ಟೈಟನ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 204 ರನ್​ ಗಳಿಸಿ ಸವಾಲೊಡ್ಡಿದೆ.

ಇನಿಂಗ್ಸ್​ ಆರಂಭಿಸಿದ ಗುಜರಾತ್​ ಪರ ಶುಭಮನ್​ ಗಿಲ್​​ ಮತ್ತು ವೃದ್ಧಿಮಾನ್​ ಸಾಹಾ ನಿಧಾನಗತಿಯ ಆಟವಾಡಿದರು. ಕಳೆದ ಪಂದ್ಯಗಳಲ್ಲಿ ತೋರಿದ ಬ್ಯಾಟಿಂಗ್​ ಅಬ್ಬರ ಈ ಪಂದ್ಯದಲ್ಲಿ ಕಂಡು ಬರಲಿಲ್ಲ. ಎಸೆತವೊಂದಕ್ಕೆ ರನ್​ ಗಳಿಸಿಸುತ್ತಾ ಸಾಗಿದರು. ಸಾಹಾ 17 ಎಸೆತಗಳಿಂದ 17 ರನ್​ ಗಳಿಸಿ ಸುನಿಲ್​ ನಾರಾಯಣ್​ಗೆ ವಿಕೆಟ್​ ಒಪ್ಪಿಸಿದರು. ಗಿಲ್​ 31 ಎಸೆತಗಳಿಂದ 5 ಬೌಂಡರಿ ಬಾರಿಸಿ 39 ರನ್​ಗೆ ಆಟ ಮುಗಿಸಿದರು. ಈ ವಿಕೆಟ್​ ಕೂಡ ನಾರಾಯಣ್ ಪಾಲಾಯಿತು. ಸಾಹಾ ಮತ್ತು ಗಿಲ್​ ಮೊದಲ ವಿಕೆಟ್​ಗೆ 33 ರನ್​ ಜತೆಯಾಟ ನಡೆಸಿತು.

ಇದನ್ನೂ ಓದಿ IPL 2023: ನಾಳೆ ಲಕ್ನೋ ಸೂಪರ್​ಜೈಂಟ್ಸ್​ vs ಆರ್‌ಸಿಬಿ ಕ್ರಿಕೆಟ್‌ ಮ್ಯಾಚ್‌; ನಕಲಿ ಟಿಕೆಟ್‌ ದಂಧೆಕೋರರ ಮೇಲೆ ಖಾಕಿ ಅಲರ್ಟ್‌

ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಸಾಯಿ ಸುದರ್ಶನ್​ ಅವರು ಕೆಕೆಆರ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಂಡಕ್ಕೆ ಆಸರೆಯಾದರು. ಇದೇ ವೇಳೆ ಅವರು ಅರ್ಧಶತಕವನ್ನೂ ಪೂರ್ತಿಗೊಳಿಸಿದರು. ಆರಂಭದಲ್ಲಿ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದ ಅವರು ಆ ಬಳಿಕ ಸಿಡಿಯಲಾರಂಭಿಸಿದರು. ಅಭಿನವ್​ ಮನೋಹರ್​ ಅವರು ಸತತ ಬೌಂಡರಿ ಬಾರಿಸಿ ಅಪಾಯಾಕಾರಿಯಾಗುವ ಸೂಚನೆ ನೀಡಿದರೂ ಅವರ ಓಟ ಮೂರೇ ಬೌಂಡರಿಗೆ ಕೊನೆಗೊಂಡಿತು. 8 ಎಸೆತದಲ್ಲಿ 12 ರನ್​ಗಳ ಕೊಡುಗೆ ನೀಡಿದರು. 38 ಎಸೆತ ಎದುರಿಸಿದ ಸಾಯಿ ಸುದರ್ಶನ್ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್​ ನೆರವಿನಿಂದ 53 ರನ್​ ಗಳಿಸಿದರು.

ಅಂತಿಮ ಹಂತದಲ್ಲಿ ವಿಜಯ್​ ಶಂಕರ್​ ಸಿಡಿದು ನಿಂತ ಪರಿಣಾಮ ತಂಡ ಬೃಹತ್​ ಮೊತ್ತ ದಾಖಲಿಸಿತು. ಶಾರ್ದೂಲ್​ ಠಾಕೂರ್ ಅವರ ಅಂತಿಮ ಓವರ್​ನಲ್ಲಿ ಹ್ಯಾಟ್ರಿಕ್​ ಸಿಕ್ಸರ್​ ಬಾರಿಸಿ ಮಿಂಚಿದರು. ಕೊನೆಯ 14 ಎಸೆತದಲ್ಲಿ ಗುಜರಾತ್​ಗೆ 50 ರನ್ ಹರಿದು ಬಂತು. ಕೇವಲ 21 ಎಸೆತಗಳಲ್ಲಿ ವಿಜಯ್​ ಶಂಕರ್​ ಅರ್ಧಶತಕ ಬಾರಿಸಿದರು. ಒಟ್ಟು 24 ಎಸೆತ ಎದುರಿಸಿದ ಅವರು ಬರೋಬ್ಬರಿ 5 ಸಿಕ್ಸರ್​ ಮತ್ತು ನಾಲ್ಕು ಬೌಂಡರಿ ಸಿಡಿಸಿ ಅಜೇಯ 63 ರನ್​ ಬಾರಿಸಿದರು.

2 ಸಾವಿರ್​ ರನ್​ ಪೂರೈಸಿದ ಶುಭಮನ್​ ಗಿಲ್​

ಈ ಪಂದ್ಯದಲ್ಲಿ ಶುಭಮನ್​ ಗಿಲ್​ ಅವರು 23ರನ್​ ಗಳಿಸಿದ ವೇಳೆ ಐಪಿಎಲ್​ನಲ್ಲಿ 2 ಸಾವಿರ ರನ್​ ಪೂರ್ತಿಗೊಳಿಸಿದರು. ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಟೀಮ್​ ಇಂಡಿಯಾದ ಎರಡನೇ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು. ಪಂತ್​ ಅವರು 23 ವರ್ಷ 27 ದಿನಗಳಲ್ಲಿ ಈ ಸಾಧನೆ ಮಾಡಿದ್ದರು. ಗಿಲ್​ ಅವರು 23 ವರ್ಷ 214 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇನ್ನು ಅತಿ ಕಡಿಮೆ ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ ಏಳನೇ ಭಾರತೀಯ ಆಟಗಾರ ಎಂಬ ದಾಖಲೆ ಬರೆದರು. ಗಿಲ್ ಈ ಮೇಲುಗಲ್ಲು ತಲುಪಲು 74 ಇನಿಂಗ್ಸ್​ ತೆಗೆದುಕೊಂಡರು. ಕೆ.ಎಲ್​. ರಾಹುಲ್​​ ಅವರು 60 ಇನಿಂಗ್ಸ್​ನಲ್ಲಿ 2 ಸಾವಿರ ರನ್​ ಪೂರೈಸಿ ಅಗ್ರ ಸ್ಥಾನ ಪಡೆದಿದ್ದಾರೆ. ಸಚಿನ್​ ತೆಂಡೂಲ್ಕರ್​ 63 ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ IPL 2023: ಸೋಲಿಗೆ ಬ್ಯಾಟಿಂಗ್​ ವೈಫಲ್ಯವೇ ಕಾರಣ; ಮುಂಬೈ ಕೋಚ್​ ಹೇಳಿಕೆ

ಖಾಯಂ ನಾಯಕ ಹಾರ್ದಿಕ್​ ಪಾಂಡ್ಯ ಅವರು ಅನಾರೋಗ್ಯದಿಂದ ಬಳಲಿದ ಕಾರಣ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ರಶೀದ್​ ಖಾನ್​ ತಂಡದ ನಾಯಕತ್ವ ವಹಿಸಿಕೊಂಡರು. ಪಾಂಡ್ಯ ಬದಲು ವಿಜಯ್​ ಶಂಕರ್​ ಅವರು ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ ಪಡೆದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral video: ರಿಂಕು ಸಿಂಗ್​ ಜೆರ್ಸಿ ತೊಟ್ಟು ಚೆಂಡು ಕದಿಯಲು ಯತ್ನಿಸಿ ಸಿಕ್ಕಿ ಬಿದ್ದ ಭೂಪ!; ಪೊಲೀಸರಿಂದ ಬಿತ್ತು ಹಿಗ್ಗಾಮುಗ್ಗಾ ಗೂಸಾ

Viral video: ಗುಜರಾತ್​ ಟೈಟಾನ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ ಮುಖಾಮುಖಿ ನೋಡಲು ಬಂದಿದ್ದ ಅಭಿಮಾನಿಯೊಬ್ಬ ಪಂದ್ಯದ ಬಾಲ್ ಕದಿಯಲು ಯತ್ನಿಸಿದ ವೇಳೆ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದು ಸರಿಯಾಗಿ ಗೂಸಾ ತಿಂದ ಘಟನೆ ಸೋಮವಾರ ನಡೆದಿದೆ.

VISTARANEWS.COM


on

Viral video
Koo

ಅಹಮದಾಬಾದ್:​ ಕ್ರಿಕೆಟ್​ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಮತ್ತು ಆಟಗಾರರನ್ನು ನೋಡಲು ಮೈದಾನಕ್ಕೆ ಬರುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಬ್ಬ ಭೂಪ ಕೆಕೆಆರ್​(Kolkata Knight Riders) ಮತ್ತು ಗುಜರಾತ್​ ಟೈಟಾನ್ಸ್​(Gujarat Titans) ನಡುವಣ ಪಂದ್ಯದ ವೇಳೆ ಚೆಂಡನ್ನು ಕದ್ದು ಸಿಕ್ಕಿಬಿದ್ದಿದ್ದಾನೆ. ಬಳಿಕ ಪೊಲೀಸರಿಂದ ಈತನಿಗೆ ಹಿಗ್ಗಾಮುಗ್ಗಾ ಗೂಸಾ ಬಿದ್ದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral video)​ ಆಗಿದೆ.

ಸೋಮವಾರದ ಐಪಿಎಲ್​ ಪಂದ್ಯದಲ್ಲಿ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಗುಜರಾತ್​ ಟೈಟಾನ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಗಳು ಮುಖಾಮುಖಿಯಾಗಬೇಕಿತ್ತು. ಇದೇ ಪಂದ್ಯ ವೀಕ್ಷಣೆಗೆ ಬಂದ ಅಭಿಮಾನಿಯೊಬ್ಬ ರಿಂಕು ಸಿಂಗ್(Rinku Singh)​ ಜೆರ್ಸಿ ತೊಟ್ಟು, ಆಟಗಾರರು ಪಂದ್ಯಕ್ಕೂ ಮುನ್ನ ನಡೆಸುತ್ತಿದ್ದ ಅಭ್ಯಾಸವನ್ನು ನೋಡುತ್ತಿದ್ದ. ಇದೇ ವೇಳೆ ಅಲ್ಲಿದ್ದ ಪಂದ್ಯದ ಬಾಲ್ ಕದಿಯಲು ಪ್ರಯತ್ನಿಸಿದ್ದಾನೆ. ಚೆಂಡು ಕದ್ದು ತನ್ನ ಪ್ಯಾಂಟ್​ನ ಒಳಗಡೆ ಬಚ್ಚಿಟ್ಟಿದ್ದ. ಇದು ಭದ್ರತಾ ಸಿಬ್ಬಂದಿ ಗಮನಕ್ಕೆ ಬಂದಿದೆ. ಕೂಡಲೇ ಆತನನ್ನು ವಿಚಾರಿಸಿದಾಗ ಆತ ಪ್ಯಾಂಟ್​ನ ಒಳಗಡೆ ಬಚ್ಚಿಟ್ಟ ಚೆಂಡನ್ನು ಹಿಂದಿರುಗಿಸಿದ್ದಾನೆ. ಕಳ್ಳತನ ಮಾಡಿದ ತಪ್ಪಿಗಾಗಿ ಭದ್ರತಾ ಸಿಬ್ಬಂದಿ ಆತನಿಗೆ ಸರಿಯಾಗಿ 2 ಗೂಸಾ ಕೊಟ್ಟಿದ್ದಾರೆ.

ಈ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಪರಿಣಾಮ ಗುಜರಾತ್​ ಟೈಟಾನ್ಸ್​ ಟೂರ್ನಿಯಿಂದ ಹೊರ ಬಿದ್ದ ಸಂಕಟಕ್ಕೆ ಸಿಲುಕಿತು. ಸ್ಟೇಡಿಯಮ್​ನಲ್ಲಿ ಸೇರಿದ್ದ 45,000 ಅಭಿಮಾನಿಗಳು ಪಂದ್ಯ ಆರಂಭವಾಗುವ ನಿರೀಕ್ಷೆಯಿಂದ ಸ್ಥಳದಿಂದ ಕದಲಲಿಲ್ಲ. ರಾತ್ರಿ 10:56 ಕ್ಕೆ 5 ಓವರ್​ಗಳ ಪಂದ್ಯದ ಕಟ್ ಆಫ್ ಸಮಯವಾಗಿತ್ತು. ಮೈದಾನದ ಸಿಬ್ಬಂದಿ ಎಲ್ಲ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಆಡಿಲು ಯಾವುದೇ ಅವಕಾಶ ದೊರೆಯಲಿಲ್ಲ. ರಾತ್ರಿ 10:40 ರ ಸುಮಾರಿಗೆ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಿದರು.

ಇದನ್ನೂ ಓದಿ IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

ಗುಜರಾತ್​ ಟೈಟಾನ್ಸ್ ಪ್ಲೇಆಫ್​ನಲ್ಲಿ ಸ್ಥಾನ ಪಡೆಯುವ ರೇಸ್​​ನಿಂದ ಹೊರಗುಳಿದಿದೆ. ಹಾರ್ದಿಕ್ ಪಾಂಡ್ಯ ನಿರ್ಗಮನ ಮತ್ತು ಮೊಹಮ್ಮದ್ ಶಮಿ ಗಾಯಗೊಂಡ ನಂತರ ಜಿಟಿಗೆ ಉತ್ತಮ ಅನುಕೂಲಗಳು ಸಿಗಲಿಲ್ಲ. ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಮುಂದಿನ ಸುತ್ತಿಗೆ ಪ್ರವೇಶಿಸುವ ಅವಕಾಶ ಆ ತಂಡಕ್ಕೆ ಇತ್ತು. ಆದರೆ, ಮಳೆ ಅವರ ಭರವಸೆಗಳನ್ನು ಭಗ್ನಗೊಳಿಸಿತು.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​139319 (+1.428)
ರಾಜಸ್ಥಾನ್​ ರಾಯಲ್ಸ್​​​128416 (+0.349)
ಚೆನ್ನೈ​​137614 (+0.528)
ಹೈದರಾಬಾದ್​127514 (+0.406)
ಆರ್​ಸಿಬಿ136712 (+0.387)
ಡೆಲ್ಲಿ136712 (-0.482)
ಲಕ್ನೋ126612 (-0.769)
ಗುಜರಾತ್​135711 (-1.063)
ಮುಂಬೈ13498 (-0.271)
ಪಂಜಾಬ್​​12488 (-0.423)
Continue Reading

ಕ್ರಿಕೆಟ್

T20 World Cup 2024: ನೆದರ್ಲೆಂಡ್ಸ್‌ ಟಿ20 ವಿಶ್ವಕಪ್ ತಂಡದಲ್ಲಿ ಮೂವರು ಭಾರತೀಯ ಆಟಗಾರರಿಗೆ ಸ್ಥಾನ

T20 World Cup 2024: ನೆದರ್ಲೆಂಡ್ಸ್‌ ಜೂನ್​ 4ರಂದು ನೇಪಾಳ ವಿರುದ್ಧ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ವಿಶ್ವಕಪ್​ ಟೂರ್ನಿ ಜೂನ್​ 1ರಿಂದ 29ರ ತನಕ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ಸಾಗಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ.

VISTARANEWS.COM


on

T20 World Cup 2024
Koo

ಆಮ್‌ಸ್ಟರ್ಡಮ್‌: ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆಯೇ ನೆದರ್ಲೆಂಡ್ಸ್‌(t20 world cup squad netherlands) ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಅನುಭವಿ ಆಟಗಾರ ಸ್ಕಾಟ್‌ ಎಡ್ವರ್ಡ್ಸ್‌(Scott Edwards) ತಂಡದ ನಾಯಕನಾಗಿದ್ದಾರೆ. ಅಚ್ಚರಿ ಎಂದರೆ ಈ ತಂಡದಲ್ಲಿ ಭಾರತೀಯ ಮೂಲದ ಮೂವರು ಆಟಗಾರರೂ ಕೂಡ ಕಾಣಿಸಿಕೊಂಡಿದ್ದಾರೆ.

ತೇಜ ನಿಡಮನೂರು, ವಿಕ್ರಮ್‌ ಸಿಂಗ್‌ ಮತ್ತು ಆರ್ಯನ್‌ ದತ್ತ ತಂಡದಲ್ಲಿರುವ ಭಾರತೀಯ ಮೂಲದ ಆಟಗಾರರಾಗಿದ್ದಾರೆ. ನೆದರ್ಲೆಂಡ್ಸ್‌ ಜೂನ್​ 4ರಂದು ನೇಪಾಳ ವಿರುದ್ಧ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ವಿಶ್ವಕಪ್​ ಟೂರ್ನಿ ಜೂನ್​ 1ರಿಂದ 29ರ ತನಕ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ಸಾಗಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಅಮೆರಿಕದ ಈ ಮೂರು ಕ್ರೀಡಾಂಗಣಗಳಲ್ಲಿ 16 ಪಂದ್ಯಗಳು ನಡೆಯಲಿದೆ. ಉಳಿದ 39 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದೆ. 

ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

ನೆದರ್ಲೆಂಡ್ಸ್‌ ತಂಡ

ಸ್ಕಾಟ್‌ ಎಡ್ವರ್ಡ್ಸ್‌ (ನಾಯಕ), ಆರ್ಯನ್‌ ದತ್ತ, ಬಾಸ್‌ ಡಿ ಲೀಡ್‌, ಡೇನಿಯಲ್‌ ಡೋರಮ್‌, ಫ್ರೆಡ್‌ ಕ್ಲಾಸೆನ್‌, ಕೈಲ್‌ ಕ್ಲೀನ್‌, ಲೋಗನ್‌ ವಾನ್‌ ಬೀಕ್‌, ಮ್ಯಾಕ್ಸ್‌ ಓ’ಡೌಡ್‌, ಮೈಕಲ್‌ ಲೆವಿಟ್‌, ಪಾಲ್‌ ವಾನ್‌ ಮೀಕೆರೆನ್‌, ಸಿಬ್ರಾಂಡ್‌ ಏಂಜೆಲ್‌ಬ್ರೆಟ್‌, ತೇಜ ನಿಡಮನೂರು, ಟಿಮ್‌ ಪ್ರಿಂಗ್ಲ್, ವಿಕ್ರಮ್‌ ಸಿಂಗ್‌, ವೆಸ್ಲಿ ಬರೇಸಿ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಪಪುವಾ ನ್ಯೂಗಿನಿಯಾ, ಐರ್ಲೆಂಡ್

ಕಳೆದ ವಾರವಷ್ಟೇ ಐರ್ಲೆಂಡ್(Ireland T20 World Cup squad) ಮತ್ತು ಪಪುವಾ ನ್ಯೂಗಿನಿಯಾ(Papua New Guinea T20 World Cup squad) 15 ಸದಸ್ಯರ ಸಂಭಾವ್ಯ ತಂಡಗಳನ್ನು ಪ್ರಕಟಿಸಿತ್ತು. ಅನುಭವಿ ಆರಂಭಿಕ ಆಟಗಾರ ಪಾಲ್‌ ಸ್ಟರ್ಲಿಂಗ್ ಐರ್ಲೆಂಡ್ ತಂಡವನ್ನು ಮುನ್ನಡೆಸಿದರೆ, ಪಪುವಾ ನ್ಯೂಗಿನಿಯಾ ತಂಡವನ್ನು ಅಸ್ಸಾದ್ ವಾಲಾ ಮುನ್ನಡೆಸಲಿದ್ದಾರೆ. ಐರ್ಲೆಂಡ್ ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಭಾರತದ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಪ್ರಾರಂಭಿಸಲಿದೆ.

ಐರ್ಲೆಂಡ್ ತಂಡ

ಪಾಲ್ ಸ್ಟರ್ಲಿಂಗ್ (ನಾಯಕ), ಮಾರ್ಕ್ ಅಡೈರ್, ರಾಸ್ ಅಡೈರ್, ಆಂಡ್ರ್ಯೂ ಬಲ್ಬಿರ್ನಿ, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಗ್ರಹಾಂ ಹ್ಯೂಮ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ನೀಲ್ ರಾಕ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಲಾರ್ಕನ್ ಟಕರ್ (ವಿಕೆಟ್ ಕೀಪರ್), ಬೆನ್ ವೈಟ್ ಮತ್ತು ಕ್ರೇಗ್ ಯಂಗ್.

ಪಪುವಾ ನ್ಯೂಗಿನಿಯಾ ತಂಡ


ಅಸ್ಸಾದ್ ವಾಲಾ(ನಾಯಕ),ಸಿಜೆ ಅಮಿನಿ(ಉಪನಾಯಕ),ಅಲೆಯ್ ನಾವೊ, ಚಾಡ್ ಸೋಪರ್, ಹಿಲಾ ವರೇ, ಹಿರಿ ಹಿರಿ, ಜ್ಯಾಕ್ ಗಾರ್ಡ್ನರ್, ಜಾನ್ ಕರಿಕೊ, ಕಬುವಾ ವಾಗಿ ಮೋರಿಯಾ, ಕಿಪ್ಲಿಂಗ್ ಡೊರಿಗಾ, ಲೆಗಾ ಸಿಯಾಕಾ, ನಾರ್ಮನ್ ವನುವಾ, ಸೆಮಾ ಕಾಮಿಯಾ, ಸೆಸೆ ಬೌ, ಟೋನಿ ಉರಾ.

Continue Reading

ಕ್ರೀಡೆ

RCB vs CSK: ಆರ್​ಸಿಬಿ ಪ್ಲೇ ಆಫ್​ ಹಾದಿಗೆ ಕೊಳ್ಳಿ ಇಡಲಿದೆಯೇ ಮಳೆ; ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?

RCB vs CSK: ಒಂದೆಡೆ ಆರ್​ಸಿಬಿ ಅಭಿಮಾನಿಗಳು ಮತ್ತೊಂದೆಡೆ ಚೆನ್ನೈ ಅಭಿಮಾನಿಗಳು ಪಂದ್ಯ ನೋಡುವುದಕ್ಕಾಗಿ ಚಾಕತ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದರೆ ಈ ಪಂದ್ಯ ನಡೆಯುವುದು ಅನುಮಾನ ಎನ್ನುವ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

VISTARANEWS.COM


on

RCB Vs CSK
Koo

ಬೆಂಗಳೂರು: ಆರಂಭಿಕ ಹಂತದಲ್ಲಿ ಸತತ ಸೋಲಿನ ಸುಳಿಗೆ ಸಿಲುಕಿದ್ದ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB vs CSK) ತಂಡ ಇನ್ನೇನು ಟೂರ್ನಿಯಿಂದ(IPL 2024) ಹೊರಬೀಳಬೇಕು ಎನ್ನುವಷ್ಟರಲ್ಲಿ ಉತ್ಕೃಷ್ಟ ಮಟ್ಟದ ಹೋರಾಟ ನೀಡುವ ಮೂಲಕ ಸತತ 5, ಒಟ್ಟು 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್​ ರೇಸ್​ನಲ್ಲಿ ತಾನು ಕೂಡ ಪ್ರತಿಸ್ಪರ್ಧಿ ಎನ್ನುವಂತೆ ಕಾಣಿಸಿಕೊಂಡಿದೆ.

ಸದ್ಯ ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿರುವ ಆರ್​ಸಿಬಿ ತನ್ನ ಕೊನೆಯ ಪಂದ್ಯವನ್ನು ತವರಿನಲ್ಲಿ ಮೇ 18ರಂದು ಬದ್ಧ ಎದುರಾಳಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದೆ. ಉಭಯ ತಂಡಗಳಿಗೂ ಇದು ಕೊನೆಯ ಲೀಗ್​ ಪಂದ್ಯವಾಗಿದೆ. ಜತೆಗೆ ಪ್ಲೇ ಆಪ್​ ಪ್ರವೇಶಿಸಬೇಕಿದ್ದರೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತಂಡಗಳದ್ದು. ಒಂದೆಡೆ ಆರ್​ಸಿಬಿ ಅಭಿಮಾನಿಗಳು ಮತ್ತೊಂದೆಡೆ ಚೆನ್ನೈ ಅಭಿಮಾನಿಗಳು ಪಂದ್ಯ ನೋಡುವುದಕ್ಕಾಗಿ ಚಾಕತ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದರೆ ಈ ಪಂದ್ಯ ನಡೆಯುವುದು ಅನುಮಾನ ಎನ್ನುವ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಇದನ್ನೂ ಓದಿ IPL 2024 Points Table: ಟೂರ್ನಿಯಿಂದ ಹೊರಬಿದ್ದ ಗುಜರಾತ್​ ಟೈಟಾನ್ಸ್​

ಹೌದು, ಪಂದ್ಯ ನಡೆಯುವ ಮೇ 18 ಶನಿವಾರದಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ(Rain likely to interrupt RCB Vs CSK match) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ. ಜತೆಗೆ ಪಕ್ಕದ ರಾಜ್ಯ ಕೇರಳ, ಮಹಾರಾಷ್ಟದಲ್ಲಿಯೂ ಮಳೆಯಾಗುತ್ತಿದೆ. ಸೋಮವಾರ ಅಹಮದಾಬಾದ್​ನಲ್ಲಿ ಸುರಿದ ಭಾರೀ ಮಳೆಯಿಂದ ಗುಜರಾತ್​ ಮತ್ತು ಕೆಕೆಆರ್​ ನಡುವಣ ಪಂದ್ಯ ಟಾಸ್​ ಕೂಡ ಕಾಣದೆ ರದ್ದುಗೊಂಡಿತ್ತು. ಪಂದ್ಯ ರದ್ದುಗೊಂಡ ಕಾರಣ ಗುಜರಾತ್​ ತಂಡ ಪ್ಲೇ ಆಫ್​ ರೇಸ್​ ಅತ್ಯಂ ಕಂಡು ಟೂರ್ನಿಯಿಂದ ಹೊರಬಿದ್ದ ಸಂಕಟಕ್ಕೆ ಸಿಲುಕಿತು. ಇದೀಗ ಆರ್​ಸಿಬಿ ಪಂದ್ಯಕ್ಕೂ ಮಳೆ ಭೀತಿ ಎದುರಾಗಿರುವುದು ತಂಡ ಸೇರಿ ಅಭಿಮಾನಿಗಳಿಗೂ ಆತಂಕಪಡುವಂತೆ ಮಾಡಿದೆ.

ಆರ್​ಸಿಬಿ ಗೆದ್ದರೂ ಪ್ಲೇ ಆಫ್​ ಟಿಕೆಟ್​ ಖಚಿತವಲ್ಲ!


ಒಂದೊಮ್ಮೆ ಆರ್​ಸಿಬಿ ತಂಡ ಚೆನ್ನೈ ವಿರುದ್ಧ ಗೆದ್ದರೂ ಕೂಡ ಪ್ಲೇ ಆಫ್​ ಟಿಕೆಟ್​ ಖಚಿತವಾಗುವುದಿಲ್ಲ. ಉಳಿದ ಕೆಲವು ತಂಡಗಳು ಸೋತರಷ್ಟೇ ಆರ್‌ಸಿಬಿಗೆ ಪ್ಲೇ ಆಫ್ ಸಾಧ್ಯ. ರನ್‌ರೇಟ್‌ ಲೆಕ್ಕಾಚಾರದಲ್ಲಿ ಚೆನ್ನೈಯನ್ನು ಆರ್‌ಸಿಬಿ ಕನಿಷ್ಠ 18 ರನ್ನುಗಳಿಂದ ಗೆಲ್ಲಬೇಕಿದೆ. ಚೇಸಿಂಗ್‌ ಲೆಕ್ಕಾಚಾರ ಬೇರೆಯೇ ಇದೆ. ಕನಿಷ್ಠ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು. ಒಂದೊಮ್ಮೆ ಉಳಿದಿರುವ 2 ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಗೆದ್ದರೆ, ಸನ್​ರೈಸರ್ಸ್ ಹೈದರಾಬಾದ್​ ಒಂದು ಪಂದ್ಯ ಗೆದ್ದರೆ ಆಗ ಆರ್​ಸಿಬಿ ಟೂರ್ನಿಯಿಂದ ಅಧಿಕೃತವಾಗಿ ಹೊರಬೇಳಲಿದೆ. ಏಕೆಂದರೆ ಈ ತಂಡಗಳಿಗೆ 16 ಅಂಕ ಸಿಗಲಿದೆ.

Continue Reading

ಕ್ರಿಕೆಟ್

Team India Coach: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ; ಮೇ 27 ಕೊನೆಯ ದಿನ

Team India Coach: ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ದ್ರಾವಿಡ್ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕವೇ ಕೋಚ್​ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಆದರೆ, ಬಿಸಿಸಿಐ ಟಿ20 ವಿಶ್ವಕಪ್​ ತನಕ ಅವರನ್ನು ಮುಂದುವರಿಯುವಂತೆ ಒತ್ತಾಯ ಮಾಡಿತ್ತು. ಹೀಗಾಗಿ ದ್ರಾವಿಡ್​ ಟಿ20 ವಿಶ್ವಕಪ್ ತನಕ ಈ ಹುದ್ದೆಯಲ್ಲಿ ಮುಂದುವರಿದರು.

VISTARANEWS.COM


on

Team India Coach
Koo

ಮುಂಬಯಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಟೂರ್ನಿಯ ಬಳಿಕ ಭಾರತ ತಂಡ ಕೋಚ್​ ಬದಲಾವಣೆಯಾಗುವುದು ಖಚಿತವಾಗಿದೆ. ಸದ್ಯ ಕೋಚ್​ ಆಗಿರುವ ರಾಹುಲ್​ ದ್ರಾವಿಡ್​ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಹೀಗಾಗಿ, ಮುಂದಿನ ಮೂರೂವರೆ ವರ್ಷಗಳ ಅವಧಿಗೆ ಮುಖ್ಯ ಕೋಚ್ ಹುದ್ದೆಗಾಗಿ(Team India Coach) ಬಿಸಿಸಿಐ(BCCI) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಶುಕ್ರವಾರವಷ್ಟೇ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಾವು 3 ವರ್ಷಗಳ ದೀರ್ಘ ಅವಧಿಗಾಗಿ ಕೋಚ್​ ಹುಡುಕಾಟದಲ್ಲಿದ್ದೇವೆ ಎಂದು ಹೇಳಿದ್ದರು. ಜತೆಗೆ ದ್ರಾವಿಡ್ ಅವರಿಗೂ​ ಮರುಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದರು. ಆದರೆ, ದ್ರಾವಿಡ್​ ಕೋಚ್​ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ ಎಂದು ತಿಳಿದುಬಂದಿದೆ.

ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಆಯ್ಕೆಯಾದ ಹೊಸ ಕೋಚ್‌ ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ದ್ರಾವಿಡ್ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕವೇ ಕೋಚ್​ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಆದರೆ, ಬಿಸಿಸಿಐ ಟಿ20 ವಿಶ್ವಕಪ್​ ತನಕ ಅವರನ್ನು ಮುಂದುವರಿಯುವಂತೆ ಒತ್ತಾಯ ಮಾಡಿತ್ತು. ಹೀಗಾಗಿ ದ್ರಾವಿಡ್​ ಟಿ20 ವಿಶ್ವಕಪ್ ತನಕ ಈ ಹುದ್ದೆಯಲ್ಲಿ ಮುಂದುವರಿದರು.

ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ಹಲವು ಬಾರಿ ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಕೋಚ್ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. 2022ರಲ್ಲಿ ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಸರಣಿಗೆ ಲಕ್ಷ್ಮಣ್ ಕೋಚ್ ಆಗಿ ಕಾರ್ಯನಿರ್ವಹಿಸಿ ಯಶಸ್ಸು ಕಂಡಿದ್ದರು. ಇವರ ಮಾರ್ಗದರ್ಶನದಲ್ಲೇ ಅಂಡರ್ 19 ವಿಶ್ವ ಕಪ್ ಕೂಡ ಟೀಮ್​ ಇಂಡಿಯಾ ಗೆದ್ದಿತ್ತು. ಹೀಗಾಗಿ ದ್ರಾವಿಡ್​ ಬಳಿಕ ಟೀಮ್​ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಸೂಕ್ತ ಎಂದು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.

ಏಕದಿನ ವಿಶ್ವಕಪ್‌ ಸೋಲಿನ ಬಳಿಕ ಮಾಧ್ಯಮದವರ ಜತೆ ಮಾತನಾಡಿದ್ದ ರಾಹುಲ್‌ ದ್ರಾವಿಡ್‌, “ಕೋಚ್‌ ಹುದ್ದೆಯಲ್ಲಿ ಮುಂದುವರಿಯುವ ಅಥವಾ ತೊರೆಯುವ ಕುರಿತು ಇನ್ನೂ ಯೋಚಿಸಿಲ್ಲ” ಎಂದು ಹೇಳಿದ್ದರು.

Continue Reading
Advertisement
Road Accident
ಕ್ರೈಂ26 seconds ago

Road Accident: ಸ್ಕೂಟರ್‌ಗೆ ಟ್ರಕ್‌, ಲಾರಿಗೆ ಬಸ್‌, ಡಿವೈಡರ್‌ಗೆ ಕಾರು ಡಿಕ್ಕಿ; ಅಪಾಯದಿಂದ ಜಸ್ಟ್‌ ಮಿಸ್‌

HD Revanna released from jail Revanna Go straight to HD Deve Gowda house
ಕ್ರೈಂ14 mins ago

HD Revanna Released: ಜೈಲಿಂದ ಬಿಡುಗಡೆಯಾದ ಎಚ್.ಡಿ. ರೇವಣ್ಣ; ನೇರವಾಗಿ ದೇವೇಗೌಡರ ಮನೆಗೆ ದೌಡು

Viral video
ವೈರಲ್ ನ್ಯೂಸ್22 mins ago

Viral video: ರಿಂಕು ಸಿಂಗ್​ ಜೆರ್ಸಿ ತೊಟ್ಟು ಚೆಂಡು ಕದಿಯಲು ಯತ್ನಿಸಿ ಸಿಕ್ಕಿ ಬಿದ್ದ ಭೂಪ!; ಪೊಲೀಸರಿಂದ ಬಿತ್ತು ಹಿಗ್ಗಾಮುಗ್ಗಾ ಗೂಸಾ

Vaishnavi Gowda
ಕಿರುತೆರೆ26 mins ago

Vaishnavi Gowda: ನಟಿ ವೈಷ್ಣವಿ ಗೌಡಗೆ ನೋಟಿಸ್‌ ಕೊಟ್ಟ ಟ್ರಾಫಿಕ್‌ ಪೊಲೀಸರು; ಸೀತಮ್ಮ ಮಾಡಿದ ತಪ್ಪೇನು?

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 202432 mins ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

pm narendra modi nomination
ಪ್ರಮುಖ ಸುದ್ದಿ40 mins ago

PM Narendra Modi: ಪಿಎಂ ಮೋದಿ ನಾಮಪತ್ರ ಅನುಮೋದಿಸಿದ ನಾಲ್ವರ ಹಿನ್ನೆಲೆ ಏನು?

Viral Video
Latest47 mins ago

Viral Video: ಇಲ್ಲಿ ಸಿಗೋದು ಡಿಸೇಲ್ ಪರಾಠಾ!

Love Failure
ಬೆಂಗಳೂರು ಗ್ರಾಮಾಂತರ49 mins ago

Love Failure : ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

HD Revanna Bail I am not happy that Revanna has been released says HD Kumaraswamy
ರಾಜಕೀಯ1 hour ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

Bomb threat
ದೇಶ1 hour ago

Bomb Threat: ದಿಲ್ಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ಮೂಲಕ ಸಂದೇಶ ರವಾನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 202432 mins ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 hour ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ9 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ19 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ19 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ19 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ20 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ20 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

ಟ್ರೆಂಡಿಂಗ್‌