save nandini bjp attacking nandini because it uses kannada says gaurav vallabh of congressSave Nandini:‌ ಕನ್ನಡ ಬಳಸುತ್ತಿರುವುದಕ್ಕೇ ನಂದಿನಿಯನ್ನು ನಾಶಪಡಿಸಲು ಬಿಜೆಪಿ ಮುಂದಾಗಿದೆ: ಎಐಸಿಸಿ ವಕ್ತಾರ ಗೌರವ್‌ ವಲ್ಲಭ್‌ - Vistara News

ಕರ್ನಾಟಕ

Save Nandini:‌ ಕನ್ನಡ ಬಳಸುತ್ತಿರುವುದಕ್ಕೇ ನಂದಿನಿಯನ್ನು ನಾಶಪಡಿಸಲು ಬಿಜೆಪಿ ಮುಂದಾಗಿದೆ: ಎಐಸಿಸಿ ವಕ್ತಾರ ಗೌರವ್‌ ವಲ್ಲಭ್‌

ಮೋದಿ ಅವರೇ ಇನ್ನು ಒಂದು ತಿಂಗಳು ಮೂರು ದಿನಗಳು ಮಾತ್ರ ಬಾಕಿ ಇವೆ. ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನಂತರ ಕರ್ನಾಟಕದ ಹೆಮ್ಮೆಯ ಸಂಸ್ಥೆಗಳನ್ನು ಯಾರೂ ಕೂಡ ಮುಟ್ಟಲು ಸಾಧ್ಯವಿಲ್ಲ ಎಂದು ಗೌರವ್‌ ವಲ್ಲಭ್ ಹೇಳಿದರು.

VISTARANEWS.COM


on

save nandini bjp attacking nandini because it uses kannada says gaurav vallabh of congress
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಂದಿನಿ ಉತ್ಪನ್ನದಲ್ಲಾಗಲಿ, ಸರಬರಾಜಿನಲ್ಲಾಗಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಬರೆಯಲಾಗಿದೆ ಎನ್ನುವುದೇ ಅಮಿತ್‌ ಶಾ ಹಾಗೂ ನರೇಂದ್ರ ಮೋದಿ ಇದನ್ನು ನಾಶಪಡಿಸಲು ಮುಂದಾಗಿರುವುದಕ್ಕೆ ಪ್ರಮುಖ ಕಾರಣ ಎಂದು ಎಐಸಿಸಿ ವಲ್ತಾರ ಗೌರವ್‌ ವಲ್ಲಭ್‌ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌರವ್‌ ವಲ್ಲಭ್‌, ಮೋದಿ ಸರ್ಕಾರ ಪ್ರತಿ ರಾಜ್ಯಗಳಲ್ಲಿ ಅದರದೇ ಆದ ಹೆಮ್ಮೆಯ ಸಂಸ್ಥೆಗಳನ್ನು ನಾಶ ಮಾಡಲು ಮುಂದಾಗುತ್ತಿದೆ. ಇದಕ್ಕೆ ಸೂಕ್ತ ಉದಾಹರಣೆ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ವಿರುದ್ಧದ ದಾಳಿ. ನಂದಿನಿ ಬ್ರ್ಯಾಂಡ್‌ನಲ್ಲಿ ಯಾವ ಲೋಪದೋಷವಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ನಂದಿನಿ ವಿರುದ್ಧ ನಿಂತಿದ್ದಾರೆ? ನಂದಿನಿ ಉತ್ಪನ್ನಗಳಲ್ಲಿ ಯಾವ ದೋಷವಿದೆ? ಈ ಉತ್ಪನ್ನಗಳ ಮೇಲೆ ಕನ್ನಡ ಭಾಷೆ ಬಳಸಲಾಗಿದೆ ಎಂಬುದು ನಿಮ್ಮ ಸಮಸ್ಯೆಯೇ? ಎಂದರು.

ಮೋದಿ ಹಾಗೂ ಅಮಿತ್ ಶಾ ಅವರು ನಂದಿನಿ ಉತ್ಪನ್ನಗಳ ರುಚಿ ನೋಡಬೇಕು. ಇದು ಕರ್ನಾಟಕದ ಹೆಮ್ಮೆ. ಆರೂವರೆ ಕೋಟಿ ಜನರ ಈ ಹೆಮ್ಮೆಯನ್ನು ಯಾಕೆ ತುಳಿಯಲು ಹೊರಟಿದ್ದೀರಿ? ಇದರಿಂದ ಏನು ಸಾಧಿಸಲು ಹೊರಟಿದ್ದೀರಿ? ಅಮಿತ್ ಶಾ ಅವರೇ ಸಹಕಾರಿ ಸಚಿವಾಲಯದ ಮೂಲ ಉದ್ದೇಶವೇನು? ನೀವು ಸಹಕಾರ ಕ್ಷೇತ್ರದಲ್ಲೂ ಸ್ಪರ್ಧೆ ತರಲು ಹೊರಟಿದ್ದೀರಿ. ಉದ್ದೇಶಪೂರ್ವಕವಾಗಿ ಇದನ್ನು ಯಾಕೆ ಮಾಡುತ್ತಿದ್ದೀರಿ? ನಂದಿನಿ ಆಶ್ರಯದಲ್ಲಿ ಸುಮಾರು 2 ಕೋಟಿ ಜನರು ಆಶ್ರಯ ಪಡೆದಿದ್ದಾರೆ.

ಮೋದಿ ಅವರೇ ಇನ್ನು ಒಂದು ತಿಂಗಳು ಮೂರು ದಿನಗಳು ಮಾತ್ರ ಬಾಕಿ ಇವೆ. ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನಂತರ ಕರ್ನಾಟಕದ ಹೆಮ್ಮೆಯ ಸಂಸ್ಥೆಗಳನ್ನು ಯಾರೂ ಕೂಡ ಮುಟ್ಟಲು ಸಾಧ್ಯವಿಲ್ಲ. ದೆಹಲಿಯಲ್ಲಿ ಕೂತು ಕರ್ನಾಟಕದ ಹೆಮ್ಮೆಯ ಸಂಸ್ಥೆಗಳ ಭವಿಷ್ಯ ನಿರ್ಧರಿಸಲು ಬಿಡುವುದಿಲ್ಲ. ನಂದಿನಿ ಬ್ರ್ಯಾಂಡ್ ರೈತರು, ಕಾರ್ಮಿಕರ ಪರಿಶ್ರಮದ ಫಲವಾಗಿದೆ. ಪ್ರತಿಯೊಬ್ಬ ಕನ್ನಡಿಗನೂ ಈ ಬ್ರ್ಯಾಂಡ್ ಬಗ್ಗೆ ಹೆಮ್ಮೆ ಹೊಂದಿದ್ದಾನೆ. ಮೋದಿ ಅವರು ಒಮ್ಮೆ ಇದರ ರುಚಿ ನೋಡಲಿ, ಅವರು ತಮ್ಮ ನಿಲುವು ಬದಲಿಸಬಹುದು. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರೂ ಇದಕ್ಕೆ ಉತ್ತೇಜನ ನೀಡುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದರು.

ನಂದಿನಿ ವಿನಾಶಕ್ಕೆ ಬಿಜೆಪಿ ಯಾಕೆ ಮುಂದಾಗಿದೆ ಎಂದು ಕೇಳಿದಾಗ, ನಾವು ಯಾವುದೇ ಇತರೆ ಸಂಸ್ಥೆಗಳ ವಿರುದ್ಧವಿಲ್ಲ. ಬಿಜೆಪಿಯವರಿಗೆ ಇರುವ ಸಮಸ್ಯೆ ಎಂದರೆ ಈ ಉತ್ಪನ್ನಗಳ ಮೇಲೆ ಕನ್ನಡವನ್ನು ಬಳಸಲಾಗಿದೆ. ಅದರ ಹೊರತಾಗಿ ಬಿಜೆಪಿಗರು ಆಕ್ಷೇಪಿಸುವಂತಹ ಯಾವುದೇ ಅಂಶಗಳು ಇದರಲ್ಲಿಲ್ಲ. ಮೋದಿ ಹಾಗೂ ಅಮಿತ್ ಶಾ ಅವರಿಗೆ ಅಜೆಂಡಾ ಇರಬಹುದು. ಆದರೆ ರಾಜ್ಯದ ಸಂಸದರಿಗೆ ಏನಾಗಿದೆ? ರಾಜ್ಯದ ಜನರ ಪಾಲಿಗೆ ನಂದಿನಿ ಯಾವ ಸ್ಥಾನದಲ್ಲಿದ್ದಾಳೆ ಎಂಬುದನ್ನು ಪ್ರತಿಯೊಬ್ಬ ಕನ್ನಡಿಗರು 2024ರಲ್ಲಿ ಬಿಜೆಪಿಯವರಿಗೆ ಉತ್ತರ ನೀಡುತ್ತಾರೆ. ಮುಂದಿನ ತಿಂಗಳು ಕರ್ನಾಟಕದ ಹೆಮ್ಮೆಯನ್ನು ಸಂರಕ್ಷಣೆ ಮಾಡಲಾಗುವುದು’ ಎಂದು ತಿಳಿಸಿದರು.

ಇದನ್ನೂ ಓದಿ” Save Nandini: ಗೋಹತ್ಯೆ ಬೆಂಬಲಿಸಿದವರು ನಂದಿನಿ ಉಳಿಸಲು ಮುಂದಾಗಿದ್ದಾರೆ: ಕಾಂಗ್ರೆಸ್‌ ವಿರುದ್ಧ ಎನ್‌. ರವಿಕುಮಾರ್‌ ಟೀಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜಯಪುರ

Love Case : ಪ್ರೇಮಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಕೇಸ್‌; ಯುವತಿ ತಂದೆ ಅರೆಸ್ಟ್‌

Love Case : ಪ್ರೀತಿಸಿದವಳೇ ಬೇಕೆಂದು ಮನೆಗೆ ಹೋದ ಪ್ರೇಮಿಗೆ ಯುವತಿ ಕುಟುಂಬಸ್ಥರು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಪ್ರಕರಣ ಸಂಬಂಧ ಯುವತಿ ತಂದೆಯನ್ನು ಬಂಧಿಸಿದ್ದಾರೆ.

VISTARANEWS.COM


on

By

Love Case in vijayapura
Koo

ವಿಜಯಪುರ: ಕಳೆದ ಮೇ 27ರ ಸೋಮವಾರ ಯುವತಿಯ ಮನೆಯವರು ಯುವಕನ ತಲೆಗೆ ರಾಡ್‌ನಿಂದ ಹೊಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ (Love Case) ಎಂಬ ಆರೋಪ ಕೇಳಿ ಬಂದಿತ್ತು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದ್ದ ಘಟನೆ ಸಂಬಂಧ ಎರಡು ಕುಟುಂಬಗಳು ಠಾಣೆ ಮಟ್ಟಿಲೇರಿದ್ದವು. ಇದೀಗ ಯುವತಿ ತಂದೆಯನ್ನು ಮುದೇಬಿಹಾಳ ಪೊಲೀಸರು ಬಂಧಿಸಿದ್ದಾರೆ.

ರಾಹುಲ್ ತಂದೆ ರಾಮನಗೌಡ ನೀಡಿದ ದೂರಿನನ್ವಯ ಐಶ್ವರ್ಯ ತಂದೆ ಪರಶುರಾಮ ಎಂಬುವವರ ಬಂಧನ ಆಗಿದೆ. ನಮ್ಮ ಮಗನಿಗೆ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದಾರೆ ಎಂದು ರಾಹುಲ್‌ ತಂದೆ ರಾಮನಗೌಡ ಆರೋಪಿಸಿದ್ದರು.

ಏನಿದು ಲವ್‌ ಕೇಸ್‌?

ರಾಹುಲ್ ರಾಮನಗೌಡ ಬಿರಾದಾರ ಹಾಗೂ ಐಶ್ವರ್ಯ ಇಬ್ಬರು ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿ ವಿಚಾರ ತಿಳಿದಾಗ ರಾಹುಲ್‌ಗೆ ಮನೆಗೆ ಬರಲು ಐಶ್ವರ್ಯ ತಂದೆ ಹೇಳಿದ್ದರು. ಆದರೆ ಹುಡುಗನ ಮನೆಯವರು ಬಂದಾಗ ಅವನ ಗುಣ ಸರಿ ಇಲ್ಲ, ನಾನು ಮದುವೆ ಆಗಲ್ಲ ಎಂದು ಐಶ್ವರ್ಯ ನಿರಾಕರಿಸಿದ್ದಳು.

ಹುಡುಗಿ ಮದುವೆಗೆ ನಿರಾಕರಣೆ ಮಾಡಿದ್ದಳು ಎಂದು ರಾಹುಲ್‌ ಕುಟುಂಬದವರು ವಾಪಸ್ ಆಗಿದ್ದರು. ಇತ್ತ ಪ್ರೀತಿಸಿದ ಹುಡುಗಿಯೇ ಬೇಕು ಎಂದು ಹಠ ಹಿಡಿದ ರಾಹುಲ್‌ ಮತ್ತೆ ಹುಡುಗಿ ಮನೆಗೆ ಹೋಗಿದ್ದ. ಮದುವೆ ಆಗದಿದ್ದರೆ ನನ್ನೊಟ್ಟಿಗೆ ಇದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದನಂತೆ. ಇತ್ತ ಐಶ್ವರ್ಯ ತಂದೆ ಮಗಳು ಒಪ್ಪಿದರೆ ಮದುವೆ ಮಾಡಿ ಕೊಡುವುದಾಗಿ ಹೇಳಿ ರಾಜಿ ಪಂಚಾಯ್ತಿ ಮಾಡಿ ವಾಪಸ್ ಕಳುಹಿಸಿದ್ದರು.

ಇದನ್ನೂ ಓದಿ: Assault Case : ಆಸ್ತಿ ವಿಚಾರಕ್ಕೆ ಕಿರಿಕ್‌; ನಡುರಸ್ತೆಯಲ್ಲಿ ಯುವತಿಯನ್ನು ಮನಸೋ ಇಚ್ಛೆ ಥಳಿಸಿದ ಗ್ರಾಪಂ ಸದಸ್ಯ

ಹಲವು ಬಾರಿ ರಾಜಿ ಪಂಚಾಯತಿ ಮಾಡಿದರೂ ಮತ್ತೆ ಮೇ 27ರ ಸೋಮವಾರ ಐಶ್ಚರ್ಯ ಮನೆಗೆ ಹೋಗಿ ಫೋಟೋ ಹಾಕುವುದಾಗಿ ರಾಹುಲ್‌ ಬೆದರಿಕೆ ಹಾಕಿದ್ದಾನೆ. ಐಶ್ವರ್ಯ ಮನೆಗೆ ಹೋಗುವಾಗಲೇ ಪೆಟ್ರೋಲ್ ತೆಗೆದುಕೊಂಡು ಹೋಗಿದ್ದನಂತೆ. ನಮ್ಮ ಕುಟುಂಬದವರನ್ನು ಸುಡಲೆಂದೇ ಪೆಟ್ರೋಲ್ ತಂದಿದ್ದ ಎಂದು ಐಶ್ಚರ್ಯ ತಂದೆ ಪರಶುರಾಮ ಆರೋಪಿಸಿದ್ದರು. ಆತನೇ ನಮಗೆ ಫೋನ್‌ ಮಾಡಿ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿದ್ದ. ಆದರೆ ಮನೆಗೆ ಬಂದಾಗ ಪೆಟ್ರೋಲ್‌‌ ತಂದು ನಮಗೆ ಬೆಂಕಿ ಹಚ್ಚಲು ಯತ್ನಿಸಿದ್ದ. ಪೆಟ್ರೋಲ್‌ ಎರಚಿ ಸುಡಲು ಬಂದಾಗ ನಮ್ಮ ಸಹೋದರ ಮುತ್ತಣ್ಣ, ಆತನ ಪತ್ನಿ ಸೀಮಾ ಹಾಗೂ ಮನೆಯ ಕಾರು ಚಾಲಕ ನೀಲಕಂಠ ಎಂಬುವವರಿಗೆ ಗಾಯವಾಗಿತ್ತು ಎಂದಿದ್ದರು.

ಇದೀಗ ಆರೋಪ ಮಾಡಿದ್ದ ಯುವತಿ ತಂದೆ ಪರಶುರಾಮ‌ ಮದರಿಯನ್ನೇ ಪೊಲೀಸರು ಬಂಧಿಸಿದ್ದಾರೆ. ಪರಶುರಾಮ ಪತ್ನಿ ರೇಖಾ ಮದರಿ ಕೂಡಾ ಪ್ರತಿ ದೂರು ನೀಡಿದ್ದರು. ಆದರೆ ರಾಹುಲ್ ಕುಟುಂಬಸ್ಥರನ್ನು ಬಂಧಿಸಿಲ್ಲ.

ರಾಹುಲ್‌ ಕುಟುಂಬಸ್ಥರು ಹೇಳೋದು ಏನು?

ರಾಹುಲ್‌ ತಂದೆಯ ಆರೋಪವೇ ಬೇರೆಯಾಗಿದೆ. ನಮ್ಮ ಮಗನನ್ನು ಮನೆಗೆ ಕರೆದು ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು. ನಮ್ಮ ಮಗನಿಗೆ ಮೊದಲು ಮೊಬೈಲ್ ಕೊಡು ಎಂದು ಕೇಳಿದ್ದರು. ಮೊಬೈಲ್ ಕೊಡದೇ ಇದ್ದಾಗ ರಾಡ್‌ನಿಂದ ತಲೆಗೆ ಹೊಡೆದು ಪೆಟ್ರೋಲ್ ಸುರಿದಿದ್ದಾರೆ ಎಂದಿದ್ದರು. ಸುಟ್ಟು ಗಾಯದಿಂದ ಬಳಲುತ್ತಿರುವ ರಾಹುಲ್‌ಗೆ ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ರಾಹುಲ್‌ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಶೇ 70ರಷ್ಟು ದೇಹ ಸುಟ್ಟು ಹೋಗಿದೆ ಎಂದು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Prajwal Revanna Case: ಪ್ರಜ್ವಲ್‌ ರೇವಣ್ಣ ಬಂಧಿಸಲು ಆಗ್ರಹಿಸಿ ಹಾಸನದಲ್ಲಿ ಬೃಹತ್‌ ಪ್ರತಿಭಟನೆ

Prajwal Revanna Case: ಹಾಸನದಲ್ಲಿ ನಡೆದ ಬೃಹತ್‌ ʼಹಾಸನ ಚಲೋʼ ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯದ ಹಲವೆಡೆಗಳಿಂದ ಬಂದ 113 ಸಂಘಟನೆಗಳ ಸುಮಾರು 10 ಸಾವಿರ ಪ್ರತಿನಿಧಿಗಳು ಭಾಗವಹಿಸಿದರು.

VISTARANEWS.COM


on

prajwalrevanna case hassan protest
Koo

ಹಾಸನ: ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣರನ್ನು (Hassn MP Prajwal Revanna Case) ವಿಮಾನ ನಿಲ್ದಾಣದಲ್ಲೇ ಬಂಧಿಸಬೇಕು ಹಾಗೂ ವಿಡಿಯೋ ಹಂಚಿದವರನ್ನೂ ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಜನಪರ ಚಳವಳಿಗಳ ಒಕ್ಕೂಟದ ಕಾರ್ಯಕರ್ತರು ಇಂದು ಹಾಸನದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದ ಹೋರಾಟಗಾರ ಎಸ್.ಆರ್ ಹಿರೇಮಠ. “ಹಾಸನದ ಈ ಹೋರಾಟ ನಮ್ಮ ದೇಶ ಮಾತ್ರವಲ್ಲ ಜಗತ್ತಿನ ಮಹಿಳೆಯರ ಘನತೆ ಕಡೆಗೆ ಗೌರವದ ಕಡೆಗಿನ ನಡಿಗೆಯಾಗಿದೆ” ಎಂದರು. “ದೇವೇಗೌಡರ ಕುಟುಂಬದ ಪಾಳೆಗಾರಿ ಮನಸ್ಥಿತಿಯ ವಿರುದ್ಧದ ಹೋರಾಟ ಇದು. ಅವರ ದರ್ಪದಿಂದ ಆಗುವ ಇಂತಹ ಕೃತ್ಯ ಕೊನೆಗಾಣಿಸೊ ಹೋರಾಟ ಇದಾಗಲಿ. ಇದಕ್ಕೆ ನ್ಯಾಯ ಪಡೆಯಲು ನಿರಂತರ ಹೋರಾಟ ಬೇಕಿದೆ. ಈ ಹೋರಾಟದಲ್ಲಿ ನಾವು ನಿಮ್ಮೊಟ್ಟಿಗೆ ಇದ್ದೇವೆ. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಪಾಳೆಗಾರಿಕೆ ವಿರುದ್ಧ ಹೋರಾಟ ನಡೆಯಿತು. ಈಗ ಹಾಸನದಲ್ಲಿ ಈ ದಬ್ಬಾಳಿಕೆ ಕೊನೆಗಾಣಿಸಲು ಹೋರಾಟ ಆರಂಭ ಆಗಿದೆ. ನೊಂದವರು ಧೈರ್ಯದಿಂದ ಹೊರ ಬಂದು ಮಾತನಾಡುವಂತೆ ಆಗಲಿ. ಸಿಎಂ, ಡಿಸಿಎಂ, ಗೃಹ ಸಚಿವರೇ ಈಗಲಾದರೂ ಹಾಸನಕ್ಕೆ ಬನ್ನಿ” ಎಂದು ಆಗ್ರಹಿಸಿದರು.

prajwalrevanna case hassan protest

“ನಾವೆಲ್ಲಾ ಇಂದು‌ ಇಲ್ಲಿ ಸೇರಿರುವದು ಲೈಂಗಿಕ ದಬ್ಬಾಳಿಕೆಯನ್ನು ಖಂಡಿಸಿ, ನೊಂದ ಮಹಿಳೆಯರಿಗೆ ಧೈರ್ಯ ಕೊಡುವುದಕ್ಕೆ ಅಂತ ಬಂದಿದ್ದೇವೆ. ಹಣಬಲ, ಅಧಿಕಾರ ಮದದಿಂದ ನಡೆಸಿರುವ ದೌರ್ಜನ್ಯ ಇನ್ಮುಂದೆ ನಡೆಯೋದಿಲ್ಲ. ನಾನು ದೂರದ ಉತ್ತರಪ್ರದೇಶದಿಂದ ಬಂದಿದ್ದೇನೆ. ಈ ದೌರ್ಜನ್ಯದ ವಿರುದ್ಧ ದೇಶದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇಂತಹ ಪ್ರಕರಣಗಳ ಆರೋಪಿಗಳಿಗೆ ರಕ್ಷಣೆ ನೀಡುತ್ತಿರೋ ಕೇಂದ್ರದ ಸರ್ಕಾರವನ್ನು ಕಿತ್ತೊಗೆಯುತ್ತೇವೆ” ಎಂದು ಹೋರಾಟಗಾರ್ತಿ ಸುಭಾಷಿಣಿ ಅಲಿ ಕಿಡಿ ಕಾರಿದರು.

“ಸ್ವಾತಂತ್ರ್ಯ ಸಿಕ್ಕಿ ಹಲವು ವರ್ಷಗಳಾದರೂ ಮಹಿಳೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಲೇ ಬಂದಿದೆ. ಪ್ರಜ್ವಲ್ ರೇವಣ್ಣ, ರೇವಣ್ಣ ಸೇರಿ ಯಾರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೋ ಅವರೆಲ್ಲರನ್ನೂ ಬಂಧಿಸಬೇಕು. ಅವರಿಗೆ ಯಾವುದೇ ಕಾರಣಕ್ಕೂ ಬೇಲ್ ಕೊಡಬಾರದು. ಉಳ್ಳವರು ಅಂತ ಅವರನ್ನು ಸರ್ಕಾರ ಯಾವುದೇ ಕಾರಣಕ್ಕೂ ರಕ್ಷಣೆ ಮಾಡೋದಕ್ಕೆ ಮುಂದಾಗಬಾರದು. ಅಸಹಾಯಕ ಮಹಿಳೆಯರ ಪರ‌ವಾಗಿ ನಿಲ್ಲಲು ನಾವು ಇಲ್ಲಿಗೆ ಬಂದಿದ್ದೇವೆ. ಚುನಾವಣೆಯಲ್ಲಿ ಮತ ಕೊಟ್ಟು ಜನಸೇವೆಯನ್ನು ಮಾಡೋದಕ್ಕೆ ಕಳುಹಿಸಿದ್ದೇವೆ. ಆದ್ರೆ ನೀವು ಮಾಡಿದ್ದು ಏನು? ಅಧಿಕಾರಿಗಳನ್ನೂ ಬಿಡಲಿಲ್ಲ, ಕಾರ್ಯಕರ್ತರನ್ನೂ ಬಿಡಲಿಲ್ಲ, ಸಹಾಯ ಕೇಳಿ ಬಂದವರನ್ನೂ ಬಿಡಲಿಲ್ಲ. ಕೊನೆಗೆ ನಿಮ್ಮ ತಾಯಿಯಷ್ಟು ವಯಸ್ಸಾದವರನ್ನೂ ಬಿಡಲಿಲ್ಲ” ಎಂದು ಅವರು ಸುಭಾಷಿಣಿ ಗುಡುಗಿದರು.

prajwalrevanna case hassan protest

ಹಾಸನದಲ್ಲಿ ನಡೆದ ಬೃಹತ್‌ ʼಹಾಸನ ಚಲೋʼ ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯದ ಹಲವೆಡೆಗಳಿಂದ ಬಂದ 113 ಸಂಘಟನೆಗಳ ಸುಮಾರು 10 ಸಾವಿರ ಪ್ರತಿನಿಧಿಗಳು ಭಾಗವಹಿದರು. ಹಾಸನದ ಹೇಮಾವತಿ ಪ್ರತಿಮೆಯ ಬಳಿಯಿಂದ ಮೆರವಣಿಗೆ ಆರಂಭವಾಯಿತು. ಜಿಲ್ಲಾಧಿಕಾರಿ ಕಚೇರಿ ಬಳಿಯ ಹೊಸ ಬಸ್‌ನಿಲ್ದಾಣ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಿದ್ದಾರೆ. ಸಿಪಿಎಂ ನಾಯಕಿ ಸುಭಾಷಿಣಿ ಅಲಿ, ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಲೇಖಕಿಯರಾದ ಬಾನು ಮುಷ್ತಾಕ್‌, ರೂಪ ಹಾಸನ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಮಹಿಳೆಯರು, ವಿದ್ಯಾರ್ಥಿಗಳು, ಸಾಹಿತಿಗಳು, ಬುದ್ಧಿಜೀವಿಗಳು, ಕಲಾವಿದರನ್ನು ಒಳಗೊಂಡ ಹಲವಾರು ಸಂಘಟನೆಗಳು ಪ್ರಜ್ವಲ್ ರೇವಣ್ಣ ವಿರುದ್ಧ ಪ್ರತಿಭಟನೆಗೆ ಆಗಮಿಸಿದ್ದಾರೆ. ಬೆಂಗಳೂರು, ಮೈಸೂರು, ಹಾಸನ, ಮಂಗಳೂರು, ಮಂಡ್ಯ ಮತ್ತು ಚಿಕ್ಕಮಗಳೂರುಗಳಿಂದ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆಯನ್ನು ವಿರೋಧಿಸಿ ಹಾಸನ ​​ಚಲೋ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ: Prajwal Revanna Case: ಹೇಗಿರುತ್ತೆ ಇಂದು ಪ್ರಜ್ವಲ್‌ ರೇವಣ್ಣಗೆ ಎಸ್‌ಐಟಿ ʼಸ್ವಾಗತʼ?

Continue Reading

ಧಾರವಾಡ

Assault Case : ಆಸ್ತಿ ವಿಚಾರಕ್ಕೆ ಕಿರಿಕ್‌; ನಡುರಸ್ತೆಯಲ್ಲಿ ಯುವತಿಯನ್ನು ಮನಸೋ ಇಚ್ಛೆ ಥಳಿಸಿದ ಗ್ರಾಪಂ ಸದಸ್ಯ

Assault Case : ಆಸ್ತಿ ವಿಚಾರಕ್ಕೆ ಕಿರಿಕ್‌ ನಡೆದಿದ್ದು, ಗ್ರಾಪಂ ಸದಸ್ಯನೊಬ್ಬ ನಡುರಸ್ತೆಯಲ್ಲಿ ಯುವತಿಯನ್ನು ಮನಸೋ ಇಚ್ಛೆ ಥಳಿಸಿದ್ದಾನೆ.

VISTARANEWS.COM


on

By

Assault Case
Koo

ಧಾರವಾಡ: ಆಸ್ತಿ ವಿಚಾರವಾಗಿ ಗ್ರಾಮ ಪಂಚಾಯತಿ ಸದಸ್ಯನೊಬ್ಬ ನಡುರಸ್ತೆಯಲ್ಲೇ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ. ಧಾರವಾಡ ತಾಲೂಕಿನ ಕನಕೂರ ಗ್ರಾಮದಲ್ಲಿ ಘಟನೆ ನಡೆದಿದೆ. ಮಾರುತಿ ಪವಾರ್ ಎಂಬ ಗ್ರಾಮ ಪಂಚಾಯತಿ ಸದಸ್ಯನೇ ಯುವತಿ ಮೇಲೆ ಹಲ್ಲೆ (Assault Case) ಮಾಡಿದವನು.

ಹಲ್ಲೆ ಮಾಡುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾರುತಿ ತನ್ನ ಅಕ್ಕನ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಮಾರುತಿ ಜತೆಗೆ ಮತ್ತೊಬ್ಬ ಸಂಬಂಧಿ ಸಹೋದರ ರಾಮಚಂದ್ರ ಕೂಡ ಸಾಥ್‌ ನೀಡಿದ್ದಾನೆ. ಆಸ್ತಿ ವಿಚಾರವಾಗಿ ಯುವತಿ ಪ್ರಶ್ನೆ ಮಾಡಿದ್ದಕ್ಕೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧದಿಂದ ನಿಂದಿಸಿದ ಹಲ್ಲೆ ಮಾಡಿದ್ದಾರೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Lokayukta Raid : ಲಂಚಕ್ಕೆ ಕೈವೊಡ್ಡಿದ ಕೆಆರ್‌ ಆಸ್ಪತ್ರೆ ವೈದ್ಯನಿಗೆ 4 ವರ್ಷ ಶಿಕ್ಷೆ, 50 ಸಾವಿರ ರೂ. ದಂಡ

ಕೋಲಾರದಲ್ಲಿ ಬಿಯರ್‌ ಬಾಟೆಲ್‌ಗಳಲ್ಲಿ ಬಡಿದಾಟ

ಕ್ಷುಲ್ಲಕ ಕಾರಣಕ್ಕೆ ಯುವಕರು ಬಿಯರ್ ಬಾಟೆಲ್‌ಗಳಿಂದ ಬಡಿದಾಡಿಕೊಂಡಿದ್ದಾರೆ. ಕೋಲಾರದ ಗಾಂಧಿನಗರ ಮತ್ತು ಶ್ರೀನಿವಾಸಪುರ ತಾಲೂಕಿನ ಮೊಗಿಲಹಳ್ಳಿ ಗ್ರಾಮಕ್ಕೆ ಸೇರಿದ ಯುವಕರು ಗಲಾಟೆ ಮಾಡಿಕೊಂಡಿದ್ದಾರೆ. ಶ್ರೀನಿವಾಸಪುರ ಪಟ್ಟಣದ ತಾಲೂಕು ಕಚೇರಿ ಎದುರು ಬಿಯರ್ ಬಾಟೆಲ್‌ನಿಂದ ಕಿತ್ತಾಡಿಕೊಂಡಿದ್ದಾರೆ.

ಇವರ ಬಡಿದಾಟಕ್ಕೆ ಸ್ಥಳೀಯರು ಮೂಕ ಪ್ರೇಕ್ಷಕರಾಗಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಭಂಗ ಪ್ರಕರಣ ದಾಖಲಿಸಿ, ಇಬ್ಬರ ಮೇಲೆ ಎಫ್‌ಐಆರ್ ದಾಖಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಮಂಜುನಾಥ್ ಹಾಗೂ ಹರೀಶ್ ಬಂಧಿತ ಆರೋಪಿಗಳಾಗಿದ್ದಾರೆ.

ಬಾಯ್‌ಫ್ರೆಂಡನ್ನು ಹೆದರಿಸಲು ರೈಲ್ವೇ ಟ್ರ್ಯಾಕ್‌ಗೆ ಇಳಿದಳು.. ಆಮೇಲೆ ಆಗಿದ್ದೇ ಬೇರೆ! ಶಾಕಿಂಗ್‌ ವಿಡಿಯೋ ನೋಡಿ

ಆಗ್ರಾ: ಸಣ್ಣ ಪುಟ್ಟ ಕೋಪ, ಜಗಳದಿಂದ ಮಾಡು ತಪ್ಪು ಎಂಥಾ ದೊಡ್ಡ ಅನಾಹುತವನ್ನು ತಂದೊಡ್ಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬಾಯ್‌ಫ್ರೆಂಡ್‌ ಜೊತೆ ಜಗಳ ಮಾಡಿಕೊಂಡು ಸಾಯುತ್ತೇನೆ ಎಂದು ಹೆಸರಿಸಲು ರೈಲ್ವೇ ಹಳಿ(Railway Track)ಗಿಳಿದ್ದಿದ್ದ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾಳೆ. ಈ ಭೀಕರ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ಸೋಶಿಯಲ್‌ ಮೀಡಿಯಾ(Social Media)ದಲ್ಲಿ ವೈರಲ್‌(Viral Video) ಆಗುತ್ತಿದೆ.

ಆಗ್ರಾದ ರಾಜಾ ಕಿ ಮಂಡಿ ಸ್ಟೇಷನ್‌ನಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು38 ವರ್ಷದ ರಾಣಿ ಎಂದು ಗುರುತಿಸಲಾಗಿದೆ. ಸ್ಟೇಷನ್‌ನಲ್ಲಿ ಕುಳಿತಿದ್ದ ರಾಣಿ ಮತ್ತು ಆಕೆಯ ಲಿವಿಂಗ್‌ ಪಾರ್ಟನರ್‌ ಕಿಶೋರ್‌ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆಯುತ್ತದೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರುತ್ತದೆ. ಕೊನೆಗೆ ಕೋಪದ ಭರದಲ್ಲಿ ರೈಲ್ವೇ ಹಳಿಗೆ ಹಾರಿದ ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಿಶೋರ್‌ಗೆ ಬೆದರಿಕೆಯೊಡ್ಡಿದ್ದಾಳೆ. ರಾಣಿ ಸುಮ್ಮನೆ ಹೆದರಿಸಲು ಈ ರೀತಿ ಮಾಡುತ್ತಿರುವುದು ಎಂದು ಆತನೂ ಕುಳಿತ ಜಾಗದಿಂದ ಕದಡಲಿಲ್ಲ.

ಹಳಿಯಲ್ಲಿ ನಿಂತು ರಾಣಿ ಕಿಶೋರ್‌ ಜೊತೆ ವಾಗ್ವಾದ ನಡೆಸುತ್ತಾಳೆ. ಆಗ ಅದೇ ಹಳಿಯಲ್ಲಿ ರೈಲು ಬಂದಿದ್ದು, ರೈಲನ್ನು ನೋಡುತ್ತಿದ್ದಂತೆ ರಾಣಿ ಫ್ಲ್ಯಾಟ್‌ಫಾರ್ಮ್‌ಗೆ ಹತ್ತಲ್ಲು ಓಡಿ ಬಂದಿದ್ದಾಳೆ. ಆಗ ರೈಲಿನಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಕೊನೆಯುಸಿರೆಳೆದಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌ ಆಗಿದೆ. ಇನ್ನು ರಾಣಿ ಮತ್ತು ಕಿಶೋರ್‌ ಲಿವಿಂಗ್‌ ರಿಲೇಶನ್‌ಶಿಪ್‌ನಲ್ಲಿದ್ದು, ಲೋಹಾಮಂಡಿ ಪ್ರದೇಶದಲ್ಲಿ ವಾಸವಾಗಿದ್ದರು. ಕಿಶೋರ್‌ಗೆ ಕುಡಿಯುವ ಚಟ ಇರುವ ಕಾರಣ ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ಆಗುತ್ತಿರುತ್ತಿತ್ತು. ಸೋಮವಾರವೂ ಇದೇ ರೀತಿ ಜಗಳ ಆಗಿತ್ತು ಎನ್ನಲಾಗಿದೆ.

ಇನ್ನು ಕಿಶೋರ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಆಕೆಯ ಮಾಜಿ ಪತಿ ಸಾವಿನ ಬಳಿಕ ರಾಣಿ ಬಹಳ ನೊಂದಿದ್ದಳು. ಅದೂ ಅಲ್ಲದೇ ಆಕೆ ಮಾನಸಿಕ ಖಿನ್ನತೆಗೊಳಗಾಗಿದ್ದಳು ಎಂಬುದು ವಿಚಾರಣೆ ವೇಳೆ ಬಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Shivamogga News : ಶಿವಮೊಗ್ಗದಲ್ಲಿ ಪುಂಡರು ಮತ್ತೆ ಬಾಲ ಬಿಚ್ಚಿದ್ದು, ಮನಸ್ಸಿಗೆ ಬಂದಂತೆ ರಸ್ತೆಯಲ್ಲಿದ್ದ ವಾಹನಗಳನ್ನು ಜಖಂ (Assault Case) ಮಾಡಿದ್ದಾರೆ. ದುಷ್ಕರ್ಮಿಗಳು ಗಾಂಜಾ ನಶೆಯಲ್ಲಿ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.

VISTARANEWS.COM


on

By

Assault Case in Shivamogga
Koo

ಶಿವಮೊಗ್ಗ: ಶಿವಮೊಗ್ಗದ (Shivamogga News) ಹೊಸಮನೆ ಬಡಾವಣೆಯಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದೆ. ಮುನೆ ಮುಂದೆ ನಿಲ್ಲಿಸಿದ್ದ ಕಾರು, ಆಟೋ ಹಾಗೂ ಬೈಕ್‌ಗಳನ್ನು ಕಿಡಿಗೇಡಿಗಳು (Assault Case) ಧ್ವಂಸಗೊಳಿಸಿದ್ದಾರೆ. ಗಾಂಜಾ ನಶೆಯಲ್ಲಿ ವಾಹನಗಳನ್ನು ಜಖಂ ಮಾಡಿದ್ದಾರೆ ಎನ್ನಲಾಗಿದೆ.

ಮನೆಯ ಮುಂದೆ ನಿಲ್ಲಿಸಿದ್ದ ನಾಲ್ಕು ಕಾರು, ನಾಲ್ಕು ದ್ವಿಚಕ್ರ ವಾಹನ ಹಾಗೂ ಎರಡು ಆಟೋಗಳನ್ನು ರಾತ್ರೋ ರಾತ್ರಿ‌ ಹಾನಿ ಮಾಡಿದ್ದಾರೆ. ಕಾರಗಳ ಗಾಜು ಚೂರು ಚೂರು ಮಾಡಿದ್ದು, ಜಗದೀಶ್ ಎಂಬವರಿಗೆ ಸೇರಿದ ಅಂಗಡಿಯ ಬೀಗವನ್ನು ಮಚ್ಚಿನಿಂದ ಹೊಡೆದು ಹಾನಿ ಮಾಡಿದ್ದಾರೆ.

ದೊಡ್ಡಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಶಾಸಕ ಎಸ್ಎ‌ನ್ ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಗಾಂಜಾ ಪ್ಯಾಕೇಟ್ ಹಾಗೂ ಮದ್ಯದ ಬಾಟಲ್‌ಗಳು ಪತ್ತೆಯಾಗಿವೆ. ಬಡಾವಣೆಯ ಪರಿಸ್ಥಿತಿ ಕಂಡು ಶಾಸಕ ಚನ್ನಬಸಪ್ಪ ಅಚ್ಚರಿಗೊಳಗಾದರು. ಇದೇ ವೇಳೆ ಸ್ಥಳೀಯರು ಕಿಡಿಗೇಡಿಗಳ ಹಾವಳಿಯನ್ನು ವಿವರಿಸಿದರು. ಕಿಡಿಗೇಡಿಗಳ ನಿರಂತರ ಹಾವಳಿಯಿಂದ ಬೇಸತ್ತಿರುವುದಾಗಿ ತಿಳಿಸಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಚನ್ನಬಸಪ್ಪ ನಿನ್ನೆ ಬುಧವಾರ ರಾತ್ರಿ ದೊಡ್ಡ ಗುಂಪುವೊಂದು ಸಿಕ್ಕ ಸಿಕ್ಕ ವಾಹನಗಳನ್ನು ಜಖಂ ಮಾಡಿದೆ. ಮಚ್ಚು ಲಾಂಗ್‌ನಿಂದ ಹೊಡೆದು ಭಯದ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ.
ಬರ್ತ್‌ ಡೇ ಆಚರಣೆ ಗಾಂಜಾ ಸೇವನೆ ಮಾಡಿ ಈ ರೀತಿ ಮಾಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಈ ರೀತಿ ನಡೆಯುತ್ತಿದೆ ಆದರೆ ರಕ್ಷಣಾ ಇಲಾಖೆ ಗಮನ ಕೊಟ್ಟಿಲ್ಲ. ಆನಂದಪುರದಲ್ಲಿ ತಲ್ವಾರು ಇಟ್ಟುಕೊಂಡು ಓಡಾಡುತ್ತಾರೆ. ಗೃಹ ಸಚಿವರು ಲಾ ಆ್ಯಂಡ್‌ ಆರ್ಡರ್ ನಿಯಂತ್ರಣದಲ್ಲಿದೆ ಅಂತಾರೆ ಆದರೆ ಗಾಂಜಾ ಸೇವನೆಯಿಂದ ‌ಈ ರೀತಿ ಆಗುತ್ತಿದೆ ಅಂದರೆ ಹೊಣೆ ಯಾರು? ಗೃಹ ಇಲಾಖೆ ಜವಾಬ್ದಾರಿ ಹೊಣೆ ಹೊರಬೇಕು. ಈ ರೀತಿ ‌ಗೂಂಡಾ ವರ್ತನೆಗೆ ಕಡಿವಾಣ ಹಾಕದಿದ್ದರೆ ನಾಗರೀಕರೇ ಗೂಂಡಾ ವರ್ತನೆ ತೋರುವವರಿಂದ ಆತ್ಮ ರಕ್ಷಣೆಗೆ ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಶಿವಮೊಗ್ಗ ‌ಜಿಲ್ಲೆಯ ರಕ್ಷಣಾ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Fire Accident : ಗಾಢ ನಿದ್ರೆಯಲ್ಲಿರುವಾಗಲೇ ಸಿಲಿಂಡರ್‌ ಸ್ಫೋಟ; ಬೆಂಕಿಯ ಕೆನ್ನಾಲಿಗೆಗೆ ಐವರು ಗಂಭೀರ

ಕೋಲಾರದಲ್ಲಿ ಬಿಯರ್‌ ಬಾಟೆಲ್‌ಗಳಲ್ಲಿ ಬಡಿದಾಟ

ಕ್ಷುಲ್ಲಕ ಕಾರಣಕ್ಕೆ ಯುವಕರು ಬಿಯರ್ ಬಾಟೆಲ್‌ಗಳಿಂದ ಬಡಿದಾಡಿಕೊಂಡಿದ್ದಾರೆ. ಕೋಲಾರದ ಗಾಂಧಿನಗರ ಮತ್ತು ಶ್ರೀನಿವಾಸಪುರ ತಾಲೂಕಿನ ಮೊಗಿಲಹಳ್ಳಿ ಗ್ರಾಮಕ್ಕೆ ಸೇರಿದ ಯುವಕರು ಗಲಾಟೆ ಮಾಡಿಕೊಂಡಿದ್ದಾರೆ. ಶ್ರೀನಿವಾಸಪುರ ಪಟ್ಟಣದ ತಾಲೂಕು ಕಚೇರಿ ಎದುರು ಬಿಯರ್ ಬಾಟೆಲ್‌ನಿಂದ ಕಿತ್ತಾಡಿಕೊಂಡಿದ್ದಾರೆ.

ಇವರ ಬಡಿದಾಟಕ್ಕೆ ಸ್ಥಳೀಯರು ಮೂಕ ಪ್ರೇಕ್ಷಕರಾಗಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಭಂಗ ಪ್ರಕರಣ ದಾಖಲಿಸಿ, ಇಬ್ಬರ ಮೇಲೆ ಎಫ್‌ಐಆರ್ ದಾಖಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಮಂಜುನಾಥ್ ಹಾಗೂ ಹರೀಶ್ ಬಂಧಿತ ಆರೋಪಿಗಳಾಗಿದ್ದಾರೆ.

ಧಾರವಾಡದಲ್ಲಿ ಆಸ್ತಿ ವಿಚಾರಕ್ಕೆ ಕಿರಿಕ್‌; ಯುವತಿಯನ್ನು ಥಳಿಸಿದ ಗ್ರಾ.ಪಂ ಸದಸ್ಯ

ಆಸ್ತಿ ವಿಚಾರವಾಗಿ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ. ಧಾರವಾಡ ತಾಲೂಕಿನ ಕನಕೂರ ಗ್ರಾಮದಲ್ಲಿ ಘಟನೆ ನಡೆದಿದೆ. ಮಾರುತಿ ಪವಾರ್ ಎಂಬ ಗ್ರಾಮ ಪಂಚಾಯತಿ ಸದಸ್ಯನೇ ಯುವತಿ ಮೇಲೆ ಹಲ್ಲೆ ಮಾಡಿದವನು.

ಹಲ್ಲೆ ಮಾಡುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾರುತಿ ತನ್ನ ಅಕ್ಕನ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಮಾರುತಿ ಜತೆಗೆ ಮತ್ತೊಬ್ಬ ಸಂಬಂಧಿ ಸಹೋದರ ರಾಮಚಂದ್ರ ಕೂಡ ಸಾಥ್‌ ನೀಡಿದ್ದಾನೆ. ಆಸ್ತಿ ವಿಚಾರವಾಗಿ ಯುವತಿ ಪ್ರಶ್ನೆ ಮಾಡಿದ್ದಕ್ಕೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧದಿಂದ ನಿಂದಿಸಿದ ಹಲ್ಲೆ ಮಾಡಿದ್ದಾರೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Agnikul Cosmos
ತಂತ್ರಜ್ಞಾನ8 mins ago

Agnikul Cosmos: ಯಶಸ್ವಿಯಾಗಿ ರಾಕೆಟ್ ಉಡಾವಣೆ ಮಾಡಿದ ಸ್ಟಾರ್ಟ್ ಅಪ್ ಕಂಪನಿ ಅಗ್ನಿಕುಲ್ ಕಾಸ್ಮೋಸ್; ಮೋದಿ ಅಭಿನಂದನೆ

PM Modi
Lok Sabha Election 202412 mins ago

PM Modi: ಕನ್ಯಾಕುಮಾರಿಯಲ್ಲಿ ಪ್ರಧಾನಿ ಧ್ಯಾನ; ಪ್ರಧಾನಿ ಈ ಸ್ಥಳವನ್ನೇ ಆಯ್ಕೆ ಮಾಡಲು ಏನು ಕಾರಣ?

Love Case in vijayapura
ವಿಜಯಪುರ21 mins ago

Love Case : ಪ್ರೇಮಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಕೇಸ್‌; ಯುವತಿ ತಂದೆ ಅರೆಸ್ಟ್‌

Kantara Movie Mollywood actor enters
ಸಿನಿಮಾ25 mins ago

Kantara Movie: `ಕಾಂತಾರ ಚಾಪ್ಟರ್‌ 1‌’ ಸಿನಿಮಾಗೆ ಖ್ಯಾತ ಮಾಲಿವುಡ್‌ ನಟ ಎಂಟ್ರಿ!

Singapore Open
ಕ್ರೀಡೆ26 mins ago

Singapore Open: ದ್ವಿತೀಯ ಸುತ್ತಿಗೆ ಆಟ ಮುಗಿಸಿದ ಭಾರತದ ಪಿ.ವಿ.ಸಿಂಧು

prajwalrevanna case hassan protest
ಕ್ರೈಂ41 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಬಂಧಿಸಲು ಆಗ್ರಹಿಸಿ ಹಾಸನದಲ್ಲಿ ಬೃಹತ್‌ ಪ್ರತಿಭಟನೆ

PM Narendra Modi
ದೇಶ45 mins ago

PM Narendra Modi: ಪ್ರಧಾನಿ ಮೋದಿ ಸ್ಪರ್ಧೆ ಅನರ್ಹತೆಗೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

Assault Case
ಧಾರವಾಡ2 hours ago

Assault Case : ಆಸ್ತಿ ವಿಚಾರಕ್ಕೆ ಕಿರಿಕ್‌; ನಡುರಸ್ತೆಯಲ್ಲಿ ಯುವತಿಯನ್ನು ಮನಸೋ ಇಚ್ಛೆ ಥಳಿಸಿದ ಗ್ರಾಪಂ ಸದಸ್ಯ

Assault Case in Shivamogga
ಕ್ರೈಂ2 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Team India Dream 11
ಕ್ರಿಕೆಟ್2 hours ago

Team India T20 World Cup: ಚಿಂಟುವಿನ ಆಸೆ ನೆರವೇರಿಸಲು ಟೀಮ್​ ಇಂಡಿಯಾ ಜತೆ ನ್ಯೂಯಾರ್ಕ್​ಗೆ ತೆರಳಿದ ತಾಯಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌