Actor Nani dasara Film in OTT Actor Nani: ಒಟಿಟಿಗೆ ಬರಲಿದೆ ನಾನಿ ನಟನೆಯ ʻದಸರಾʼ ಸಿನಿಮಾ - Vistara News

ಒಟಿಟಿ

Actor Nani: ಒಟಿಟಿಗೆ ಬರಲಿದೆ ನಾನಿ ನಟನೆಯ ʻದಸರಾʼ ಸಿನಿಮಾ

ರಾಷ್ಟ್ರಪ್ರಶಸ್ತಿ (Actor Nani) ವಿಜೇತ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ವಿಶ್ವಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿರುವ ದಸರಾ ಚಿತ್ರವನ್ನು ಎಸ್ ಎಸ್ ರಾಜಮೌಳಿ, ಮಹೇಶ್ ಬಾಬು ಹಾಗೂ ಪ್ರಭಾಸ್ ಕೂಡಾ ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ಕನ್ನಡಿಗ ದೀಕ್ಷಿತ್‌ ಶೆಟ್ಟಿ ಕೂಡಾ ನಟಿಸಿದ್ದಾರೆ.

VISTARANEWS.COM


on

Actor Nani dasara Film in OTT
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟ ನಾನಿ (Actor Nani) ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ‘ದಸರಾ’ಗೆ ಯುವ ಪ್ರತಿಭೆ ಶ್ರೀಕಾಂತ್ ಒಡೆಲಾ ಆಕ್ಷನ್ ಕಟ್ ಹೇಳಿದ್ದಾರೆ. ಈಗಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ `ನಾನಿ 30’ ಸಿನಿಮಾ ಬಗ್ಗೆ ಅಪ್‌ಡೇಟ್‌ ಕೂಡ ನೀಡಿದ್ದಾರೆ. ಇದೀಗ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ದಸರಾ ಸಿನಿಮಾ ಇದೇ ಮೇ 30ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಒಟಿಟಿಗೆ ಪದಾರ್ಪಣೆ ಮಾಡಲು ಸಿನಿಮಾ ತಯಾರಾಗಿದೆ. ನೆಟ್​ಫ್ಲಿಕ್ಸ್​ ಜತೆಗೆ ಮತ್ತೊಂದು ದೇಸಿ ಒಟಿಟಿಗೂ ಈ ಸಿನಿಮಾವನ್ನು ಸೇಲ್ ಮಾಡಲಾಗುತ್ತಿದೆ ಎನ್ನುವ ಸುದ್ದಿಗಳೂ ಸಹ ಇವೆ.

ಒಟಿಟಿ ಬಿಡುಗಡೆ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಶೀಘ್ರದಲ್ಲಿಯೇ ಹೇಳಿಕೊಳ್ಳಲಿದೆ. ಶ್ರೀರಾಮ ನವಮಿ ಪ್ರಯುಕ್ತ ವಿಶ್ವಾದ್ಯಂತ ತೆರೆಕಂಡ ‘ದಸರಾ’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ವಿಶ್ವಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿರುವ ದಸರಾ ಚಿತ್ರವನ್ನು ಎಸ್ ಎಸ್ ರಾಜಮೌಳಿ, ಮಹೇಶ್ ಬಾಬು ಹಾಗೂ ಪ್ರಭಾಸ್ ಕೂಡಾ ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ಕನ್ನಡಿಗ ದೀಕ್ಷಿತ್‌ ಶೆಟ್ಟಿ ಕೂಡಾ ನಟಿಸಿದ್ದಾರೆ.

ಮಾರ್ಚ್ 30 ರಂದು ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ದಸರಾ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು.

ಇದನ್ನೂ ಓದಿ: Actor Nani: ಮೃಣಾಲ್ ಠಾಕೂರ್ ಜತೆ ತೆರೆ ಹಂಚಿಕೊಳ್ಳುತ್ತಿರುವ ಸಿನಿಮಾ ಡೇಟ್‌, ಪೋಸ್ಟರ್‌ ರಿವೀಲ್‌ ಮಾಡಿದ ನಾನಿ!

Actor Nani dasara second day collection

ʻನಾನಿ 30ʼ ಮೊದಲ ಪೋಸ್ಟರ್‌

`ನಾನಿ 30′ ಸಿನಿಮಾದಲ್ಲಿ ನಾನಿ ಜತೆ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಶೌರ್ಯುವ್ ನಿರ್ದೇಶಿಸಲಿರುವ ಈ ಚಿತ್ರದ ಬಿಡುಗಡೆ ದಿನಾಂಕ ಮತ್ತು ಮೊದಲ ಪೋಸ್ಟರ್‌ ನಾನಿ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ಭಾವನಾತ್ಮಕ ಕೌಟುಂಬಿಕವಾಗಿ ಮೂಡಿಬರಲಿದೆ ಎನ್ನಲಾಗಿದೆ. ಇದೇ ಡಿಸೆಂಬರ್ 21ರಂದು ಹೆಸರಿಡದ ನಾನಿ 30 ಸಿನಿಮಾ ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Mother Teresa Series: 30 ಕೋಟಿ ವೆಚ್ಚದಲ್ಲಿ ತಯಾರಾಗ್ತಿದೆ ‘ಮದರ್ ಥೆರೆಸಾʼ ಸಿರೀಸ್‌!

Mother Teresa Series: ಮದರ್ ಥೆರೆಸಾ ಅವರ ಬಾಲ್ಯ, ಹರೆಯದ ಜೀವನ ಹೇಗಿತ್ತು. ಹಾಗೂ ಅವರ ಹಿರಿಯ ವಯಸಿನಲ್ಲಿ ನಡೆದ ಘಟನೆಗಳು, ಸಮಾಜಸೇವೆ ಇದನ್ನೆಲ್ಲ ಈ ಪ್ಯಾನ್ ಇಂಡಿಯಾ ವೆಬ್ ಸೀರೀಸ್ ಮೂಲಕ ನಿರ್ದೇಶಕ ಚಂದ್ರಶೇಖರ್ ಹೇಳ ಹೊರಟಿದ್ದಾರೆ. ಮೂರು ಸೀಜನ್‌ನಲ್ಲಿ ಒಟ್ಟು 30 ಎಪಿಸೋಡ್ ಗಳಲ್ಲಿ ಮದರ್ ಥೆರೆಸಾ ಅವರ  ಕಥೆ ಮೂಡಿಬರಲಿದೆ.

VISTARANEWS.COM


on

Mother Teresa Series life in the works
Koo

ಬೆಂಗಳೂರು: ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ  ಹೆಸರು  ಮಾಡಿರುವ  ಪಿ ಚಂದ್ರಕುಮಾರ್ ಅವರು ʻಮದರ್ ಥೆರೆಸಾʼ ಸಿರೀಸ್‌ (Mother Teresa Series) ಮಾಡಲು ಮುಂದಾಗಿದ್ದಾರೆ. ಹಿಂದಿ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ತಯಾರಾಗಲಿರುವ ಈ ಪ್ಯಾನ್ ಇಂಡಿಯಾ ವೆಬ್ ಸೀರೀಸ್ ಸುಮಾರು 30 ಕೋಟಿ ರೂ.ಗಳ‌ ಬಿಗ್ ಬಜೆಟ್‌ನಲ್ಲಿ ಚಿತ್ರತಂಡ ನಿರ್ಮಾಣ ಮಾಡುತ್ತಿದೆ ಎಂದು ವರದಿಯಾಗಿದೆ. ವಿಶೇಷವಾಗಿ ಈ ವೆಬ್ ಸರಣಿಯಲ್ಲಿ ಹಿರಿಯ ನಟ ಮಿಥುನ್ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮದರ್‌ ಥೆರೆಸಾ ಬಗ್ಗೆ ಮೂರು ವರ್ಷಗಳಿಂದ ಪಿ. ಚಂದ್ರಕುಮಾರ್‌ ಮಾಹಿತಿ ಹಲೆ ಹಾಕಿದ್ದರು.

ಮದರ್ ಥೆರೆಸಾ ಅವರ ಬಾಲ್ಯ, ಹರೆಯದ ಜೀವನ ಹೇಗಿತ್ತು. ಹಾಗೂ ಅವರ ಹಿರಿಯ ವಯಸಿನಲ್ಲಿ ನಡೆದ ಘಟನೆಗಳು, ಸಮಾಜಸೇವೆ ಇದನ್ನೆಲ್ಲ ಈ ಪ್ಯಾನ್ ಇಂಡಿಯಾ ವೆಬ್ ಸೀರೀಸ್ ಮೂಲಕ ನಿರ್ದೇಶಕ ಚಂದ್ರಶೇಖರ್ ಹೇಳ ಹೊರಟಿದ್ದಾರೆ. ರೋಮ್‌, ಜೆರುಸಲೆನಿಯಂ, ಟೆಥ್‌ಲೆಹೆಮ್, ಮ್ಯಾಸಿಡೋನಿಯಾ, ಇಟಲಿಯಂತಹ ಸ್ಥಳಗಳ ಜತೆಗೆ ಮದರ್ ಥೆರೆಸಾ ಅವರ ಜೀವನದ ಮೇಲೆ ಪ್ರಭಾವ ಬೀರಿದ ಪಶ್ಚಿಮ ಬಾಂಗಾಳ, ಬಾಂಗ್ಲಾದೇಶ, ಮುಂಬೈ, ಕೇರಳ. ಬಿಹಾರ. ಕರ್ನಾಟಕ ಮುಂತಾದ ಪ್ರಮುಖ ಸ್ಥಳಗಳಲ್ಲೆ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ: Jr NTR: ಜ್ಯೂ. ಎನ್‌ಟಿಆರ್‌-ಪ್ರಶಾಂತ್‌ ನೀಲ್ ಸಿನಿಮಾ ಟೈಟಲ್‌ ಏನು? ಮೇ 20ಕ್ಕೆ ಸಿಗಲಿದ್ಯಾ ಅಪ್‌ಡೇಟ್‌?

ನಿರ್ಮಾಪಕ ಚಂದ್ರಶೇಖರ್ ಈ ಬಗ್ಗೆ ಮಾತನಾಡಿ ʻʻಮಲಯಾಳಂ, ತಮಿಳು, ತೆಲುಗು, ಹಿಂದಿಯಲ್ಲಿ ಹಲವಾರು  ಸಿನಿಮಾ‌ಗಳನ್ನು ನಿರ್ಮಿಸಿದ್ದೆ. ಈ ಸಿರೀಸ್‌ ಕನ್ನಡದಲ್ಲಿಯೂ ಬರುತ್ತಿದೆ. ಯಂಗ್ ಥೆರೆಸಾ ಪಾತ್ರಕ್ಕಾಗಿ ಹುಡಕಾಟ ನಡೆದಿದೆ. ನಾಲ್ಕು ವರ್ಷದ ಹಿಂದೆಯೇ ಇದರ  ಪ್ಲ್ಯಾನ್ ಮಾಡಿದ್ದೆವು. ಮೂರು ಸೀಜನ್‌ನಲ್ಲಿ ಒಟ್ಟು 30 ಎಪಿಸೋಡ್ ಗಳಲ್ಲಿ ಮದರ್ ಥೆರೆಸಾ ಅವರ  ಕಥೆ ಮೂಡಿಬರಲಿದೆ. ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭಿಸುತ್ತಿದ್ದೇವೆ. ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಈ ಸೀರೀಸ್  ರಿಲೀಸಾಗಲಿದ್ದು, ಈ ಬಗ್ಗೆ ಮಾತುಕತೆ ಕೂಡ  ನಡೆಯುತ್ತಿದೆʼʼಎಂದರು.

ಪಿ.ಸುಕುಮಾರ್ ಅವರ  ಛಾಯಾಗ್ರಹಣ, ಜರೀ ಅಮರದೇವ ಅವರ ಸಂಗೀತ ಇದ್ದು, ಅನಿತಾ ಮೆನ್ನನ್, ತನಿಮಾ ಮೆನ್ನನ್,  ಸಾಪಿಕೌರ್, ಜೋಷಿ ಜೋಸೆಫ್ ಪ್ರಮುಖ ತಾರಾಗಣದಲ್ಲಿದ್ದಾರೆ.

Continue Reading

ಒಟಿಟಿ

OTT Release: ಒಟಿಟಿಯಲ್ಲಿ ಈ ವಾರ ಬ್ರಿಡ್ಜರ್‌ಟನ್‌, ಬಾಹುಬಲಿ ಸರಣಿ; ಇನ್ನೂ ಏನೇನಿವೆ?

ಥ್ರಿಲರ್, ರೊಮ್ಯಾಂಟಿಕ್, ಆಕ್ಷನ್ ಅನ್ನು ಒಳಗೊಂಡಿರುವ ವೀಕ್ಷಕರು ಬಹು ನಿರೀಕ್ಷೆಯ ಬ್ರಿಡ್ಜರ್ಟನ್, ಬಾಹುಬಲಿ ಸೇರಿದಂತೆ ಹಲವು ಸರಣಿಗಳು ಈ ವಾರದಲ್ಲಿ ಒಟಿಟಿ ಗೆ (OTT Release) ಬರಲಿದೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

OTT Release
Koo

ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿರುವ ಹಲವು ಸರಣಿ ಚಿತ್ರಗಳು ಈ ವಾರ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ (OTT Release) ತೆರೆ ಕಾಣುತ್ತಿದೆ. ನೆಟ್‌ಫ್ಲಿಕ್ಸ್ (Netflix), ಡಿಸ್ನಿ+ ಹಾಟ್‌ಸ್ಟಾರ್ (Disney+ Hotstar), ಜಿಯೋ ಸಿನಿಮಾ (Jio Cinema) ಮತ್ತು ಇತರ ವೇದಿಕೆಯಲ್ಲಿ ಈ ಬಾರಿ ಪ್ರೇಕ್ಷರನ್ನು ರಂಜಿಸಲು ಹಲವು ಚಲನಚಿತ್ರಗಳು ಬಿಡುಗಡೆಯಾಗಲಿದೆ.

ಬ್ರಿಡ್ಜರ್ಟನ್ ಮತ್ತು ಬಾಹುಬಲಿ ಸರಣಿಯು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಪೆನೆಲೋಪ್ ಫೆದರಿಂಗ್‌ಟನ್ ಮತ್ತು ಕಾಲಿನ್ ಬ್ರಿಡ್ಜರ್‌ಟನ್‌ರ ಪ್ರೇಮಕಥೆಯನ್ನು ಹೇಳುವ ನೆಟ್‌ಫ್ಲಿಕ್ಸ್‌ನ ಬ್ರಿಡ್ಜರ್‌ಟನ್‌ನ ಸೀಸನ್ 3 ಸಾಕಷ್ಟು ಕುತೂಹಲ ಮೂಡಿಸಿದೆ. ಇದರೊಂದಿಗೆ ಎಸ್‌.ಎಸ್. ರಾಜಮೌಳಿ ಅವರ ಪೂರ್ವಭಾವಿ ಸರಣಿಯಾದ ಬಾಹುಬಲಿ: ಕ್ರೌನ್ ಆಫ್ ಬ್ಲಡ್‌ ಕೂಡ ಎಲ್ಲರೂ ಕಾತರದಿಂದ ಕಾಯುವಂತೆ ಮಾಡಿದೆ.

ಬ್ರಿಡ್ಜರ್ಟನ್ ಸೀಸನ್ 3 ಭಾಗ 1

ಬ್ರಿಡ್ಜರ್ಟನ್ ಭಾಗ 2 ಕಳೆದ ಜೂನ್ 13ರಂದು ಬಿಡುಗಡೆಯಾಗಿತ್ತು. ಇದೀಗ ಇದರ ಮುಂದುವರಿದ ಸರಣಿ ಬಿಡುಗಡೆಯಾಗಿದೆ.

ನಿಕೋಲಾ ಕೋಗ್ಲಾನ್, ಲ್ಯೂಕ್ ನ್ಯೂಟನ್, ಕ್ಲೌಡಿಯಾ ಜೆಸ್ಸಿ, ಲ್ಯೂಕ್ ಥಾಂಪ್ಸನ್, ಜೊನಾಥನ್ ಬೈಲಿ, ಸಿಮೋನ್ ಆಶ್ಲೇ ಮುಖ್ಯ ಭೂಮಿಕೆಯಲ್ಲಿರುವ ಈ ಸರಣಿ ಮೇ 16ರಿಂದ ನೆಟ್ ಫ್ಲಿಕ್ಸ್ ನಲ್ಲಿ ತೆರೆ ಕಾಣುತ್ತಿದೆ. ಇದು ಜೂಲಿಯಾ ಕ್ವಿನ್‌ನ ಹೆಚ್ಚು ಮಾರಾಟವಾದ ಕಾದಂಬರಿಗಳನ್ನು ಆಧರಿಸಿದ ಪ್ರೇಮಕಥೆಯಾಗಿದೆ. ಲೇಡಿ ವಿಸ್ಲ್‌ಡೌನ್ ಮೇಲೆ ಚಿತ್ರ ಕೇಂದ್ರೀಕೃತವಾಗಿದೆ. ಕುಟುಂಬದ ಒತ್ತಡದಿಂದ ಪೆನೆಲೋಪ್ ಫೆದರಿಂಗ್‌ಟನ್ (ನಿಕೋಲಾ ಕಾಗ್ಲಾನ್) ತನಗಾಗಿ ಗಂಡನನ್ನು ಹುಡುಕಲು ಪ್ರಾರಂಭಿಸುತ್ತಾಳೆ. ಆಗ ಕಾಲಿನ್ ಬ್ರಿಡ್ಜರ್ಟನ್ (ಲ್ಯೂಕ್ ನ್ಯೂಟನ್) ಅವಳ ಬದುಕಿನಲ್ಲಿ ಆಗಮಿಸುತ್ತಾನೆ. ಅವರಿಬ್ಬರು ಉತ್ತಮ ಸ್ನೇಹಿತರಾಗಿ ಜೀವನವನ್ನು ಕಾಣಲು ಬಯಸುತ್ತಾರೆ.


ಬಾಹುಬಲಿಕೆ ಕ್ರೌನ್ ಆಫ್ ಬ್ಲಡ್

ಶರದ್ ಕೇಳ್ಕರ್, ಸಮಯ್ ಠಕ್ಕರ್, ರಾಜೇಶ್ ಖಟ್ಟರ್ ಅವರು ಧ್ವನಿ ನೀಡಿರುವ ಸರಣಿ ಮೇ 17ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಲಿದೆ. ಇದು ಮಾಹಿಷ್ಮತಿ ರಾಜ್ಯದ ಕಥೆಯನ್ನು ಆಧರಿಸಿದೆ. ಎಸ್.ಎಸ್. ರಾಜಮೌಳಿ ಅವರ ಇತ್ತೀಚಿನ ಚಿತ್ರದ ಅನಿಮೇಟೆಡ್ ಸರಣಿ ಇದಾಗಿದೆ. 2D ಅನಿಮೇಟೆಡ್ ಸರಣಿಯು ಒಂದು ಮಹಾಕಾವ್ಯದ ಕಥೆಯನ್ನು ಹೊಂದಿದೆ. ಭವ್ಯವಾದ ಯುದ್ಧದ ಸರಣಿಗಳು ಮತ್ತು ಕೆಲವು ಸಾಂಪ್ರದಾಯಿಕ ಪಾತ್ರಗಳು ಇದರಲ್ಲಿ ಗಮನ ಸೆಳೆಯಲಿದೆ.


ಜರಾ ಹಟ್ಕೆ ಜರಾ ಬಚ್ಕೆ

ವಿಕ್ಕಿ ಕೌಶಲ್, ಸಾರಾ ಅಲಿ ಖಾನ್, ಇನಾಮುಲ್ಹಾಕ್, ಸುಶ್ಮಿತಾ ಮುಖರ್ಜಿ ಅಭಿನಯದ ಈ ಚಿತ್ರ ಜಿಯೋ ಸಿನಿಮಾದಲ್ಲಿ ಮೇ 17ರಂದು ಬಿಡುಗಡೆಯಾಗಲಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಹಿಂದಿ ಚಿತ್ರ. ಇದರಲ್ಲಿ ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ವಿವಾಹಿತ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಸ್ವಂತ ಮನೆಯನ್ನು ಮಾಡಿಕೊಳ್ಳಲು ಅವರು ಮಾಡುವ ಪರಿಶ್ರಮ ಚಿತ್ರದಲ್ಲಿದೆ. ಚಿತ್ರ ಕಳೆದ ವರ್ಷ ಜೂನ್ 2 ರಂದು ಬಿಡುಗಡೆಯಾಗಿದ್ದು, ಇದೀಗ ಒಟಿಟಿಗೆ ಪಾದಾರ್ಪಣೆ ಮಾಡುತ್ತಿದೆ.

ಇದನ್ನೂ ಓದಿ: Single Screen Theaters: ಹತ್ತು ದಿನ ತೆಲಂಗಾಣದ ಸಿಂಗಲ್-ಸ್ಕ್ರೀನ್ ಥಿಯೇಟರ್‌ಗಳು ಬಂದ್; ಕಾರಣ ವಿಚಿತ್ರ!

ಗ್ರೇಟ್ ಇಂಡಿಯನ್ ಕಪಿಲ್ ಶೋ

ಕಪಿಲ್ ಶರ್ಮಾ, ಅರ್ಚನಾ ಪುರಾಣ್ ಸಿಂಗ್, ಕೃಷ್ಣಾ ಅಭಿಷೇಕ್ ಅವರ ಈ ಸರಣಿ ಮೇ 18ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಕಪಿಲ್ ಶರ್ಮಾ ತನ್ನ ಹೊಸ ನೆಟ್‌ಫ್ಲಿಕ್ಸ್ ಸರಣಿಗೆ ಅಂತಾರಾಷ್ಟ್ರೀಯ ಅತಿಥಿ ಬ್ರಿಟಿಷ್ ಪಾಪ್ ಐಕಾನ್ ಎಡ್ ಶೀರಾನ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ದಾರೆ. ಎಡ್ ಅವರು ಭಾರತಕ್ಕೆ ಭೇಟಿ ನೀಡಿದಾಗ ಹಲವಾರು ಬಾರಿ ಹಾಸ್ಯನಟರನ್ನು ಭೇಟಿ ಮಾಡಿದ್ದಾರೆ ಮತ್ತು ಈ ಬಾರಿ ಅವರು ಶರ್ಮಾ ಅವರ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೂರ್ವಸಿದ್ಧತೆಯಿಲ್ಲದ ಸಂಗೀತ ಕಛೇರಿಯನ್ನು ಅವರು ಇಲ್ಲಿ ನಡೆಸಿಕೊಡಲಿದ್ದಾರೆ.

Continue Reading

ಸಿನಿಮಾ

House of the Dragon: ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2 ಟ್ರೈಲರ್‌ ಔಟ್‌!

ಜಿಯೋ ಸಿನಿಮಾ ಪ್ರೀಮಿಯಂನಲ್ಲಿ ವಿಶೇಷವಾಗಿ ಪ್ರಸಾರವಾಗುವ ʻಹೌಸ್ ಆಫ್ ದಿ ಡ್ರ್ಯಾಗನ್ ಎಸ್2ʼ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ಜೂನ್ 17ರಿಂದ ಲಭ್ಯವಿರುತ್ತಿದೆ. ಪ್ರತಿ ಸೋಮವಾರ ಅಮೆರಿಕ ಸೇರಿದಂತೆ ಎಲ್ಲ ಕಡೆ ಕಂತುಗಳು ಪ್ರಸಾರವಾಗಲಿವೆ.ಮ್ಯಾಟ್ ಸ್ಮಿತ್, ಒಲಿವಿಯಾ ಕೂಕ್, ಎಮ್ಮಾ ಡಿ’ಅರೇ, ಈವ್ ಬೆಸ್ಟ್, ಸ್ಟೀವ್ ಟೌಸ್ಸೇಂಟ್, ಫೇಬಿಯೆನ್ ಫ್ರಾಂಕೆಲ್, ಎವಾನ್ ಮಿಷೆಲ್, ಟಾಮ್ ಗ್ಲಿನ್ನ್-ಕಾರ್ನೀ ಸೊನೊಯಾ ಮಿಝುನೊ ಮತ್ತು ರಿಸ್ ಇಫಾನ್ಸ್ ತಾರಾಗಣ ಹೊಂದಿದೆ.

VISTARANEWS.COM


on

House of the Dragon season 2 new trailer hints at a bloody
Koo

ಬೆಂಗಳೂರು: 2022ರ ಆಗಸ್ಟ್ ತಿಂಗಳಲ್ಲಿ ‘ಗೇಮ್ ಆಫ್ ಥ್ರೋನ್ಸ್’ನ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ (House of the Dragon) ಮೊದಲ ಸೀಸನ್ ಬಿಡುಗಡೆ ಆಯ್ತು. ಮೊದಲ ಸೀಸನ್​ನಲ್ಲಿಯೇ ಗಮನ ಸೆಳೆದಿದ್ದ ‘ಹೌಸ್ ಆಫ್ ದಿ ಡ್ರ್ಯಾಗನ್’ ಎರಡನೇ ಸೀಸನ್​ ಎರಡು ವರ್ಷಗಳ ಬಳಿಕ ಬಿಡುಗಡೆ ಆಗಲಿದೆ. ಇದೀಗ ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2ರ ಟ್ರೈಲರ್ ಬಿಡುಗಡೆ ಆಗಿದ್ದು, ಅದರ ಜೊತೆಗೆ ವೆಬ್ ಸರಣಿಯ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ. ಜಿಯೋ ಸಿನಿಮಾ ಪ್ರೀಮಿಯಂನಲ್ಲಿ ವಿಶೇಷವಾಗಿ ಪ್ರಸಾರವಾಗುವ ʻಹೌಸ್ ಆಫ್ ದಿ ಡ್ರ್ಯಾಗನ್ ಎಸ್2ʼ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ಜೂನ್ 17ರಿಂದ ಲಭ್ಯವಿರುತ್ತಿದೆ. ಪ್ರತಿ ಸೋಮವಾರ ಅಮೆರಿಕ ಸೇರಿದಂತೆ ಎಲ್ಲ ಕಡೆ ಕಂತುಗಳು ಪ್ರಸಾರವಾಗಲಿವೆ.

ಜಾರ್ಜ್ ಆರ್.ಆರ್. ಮಾರ್ಟಿನ್ ಅವರ “ಫೈರ್ ಆ್ಯಂಡ್ ಬ್ಲಡ್” ಆಧರಿಸಿದ ಈ ಸರಣಿಯು ಹೌಸ್ ಟಾರ್ಗೇರಿಯನ್ ಕಥೆಯನ್ನು ಹೇಳುತ್ತಿದೆ. ಈ ರಾಜ ಕುಟುಂಬದಲ್ಲಿ ಅತ್ಯಂತ ಕಠಿಣ ಅಧಿಕಾರದ ಸಂಘರ್ಷಗಳ ನಂತರ ಕುಟುಂಬವು ಹೇಗೆ ರಾಜಕೀಯ ಒಳಸಂಚು, ಕೌಟುಂಬಿಕ ಶತ್ರುತ್ವಗಳನ್ನು ಎದುರಿಸಿ ಮುನ್ನಡೆಯುತ್ತವೆ ಮತ್ತು ಸಿಂಹಾಸನವನ್ನು ಮರಳಿ ಪಡೆಯಲು ಎದುರಾದ ಆಂತರಿಕ ಯುದ್ಧವನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ಹೇಳುತ್ತದೆ.

ಇದನ್ನೂ ಓದಿ: Rishabh Pant: ಬಿಸಿಸಿಐ ನಿಯಮದ ಬಗ್ಗೆ ಅಸಮಾಧಾನ ಹೊರಹಾಕಿದ ರಿಷಭ್​ ಪಂತ್​

ಮ್ಯಾಟ್ ಸ್ಮಿತ್, ಒಲಿವಿಯಾ ಕೂಕ್, ಎಮ್ಮಾ ಡಿ’ಅರೇ, ಈವ್ ಬೆಸ್ಟ್, ಸ್ಟೀವ್ ಟೌಸ್ಸೇಂಟ್, ಫೇಬಿಯೆನ್ ಫ್ರಾಂಕೆಲ್, ಎವಾನ್ ಮಿಷೆಲ್, ಟಾಮ್ ಗ್ಲಿನ್ನ್-ಕಾರ್ನೀ ಸೊನೊಯಾ ಮಿಝುನೊ ಮತ್ತು ರಿಸ್ ಇಫಾನ್ಸ್ ತಾರಾಗಣ ಹೊಂದಿದೆ. ಹೆಚ್ಚುವರಿ ತಾರಾಗಣದಲ್ಲಿ ಹ್ಯಾರಿ ಕೊಲೆಟ್, ಬೆಥನಿ ಅಂಟೋನಿಯ, ಫೋಬ್ ಕ್ಯಾಂಪ್ ಬೆಲ್, ಫಿಯಾ ಸಬನ್, ಜೆಫರ್ಸನ್ ಹಾಲ್ ಮತ್ತು ಮ್ಯಾಥ್ಯೂ ನೀಧಂ ಇದ್ದಾರೆ. ಹೊಸ ಸೀಸನ್ ನಲ್ಲಿ ಅನುಬಕರ್ ಸಲೀಂ, ಗೇಯ್ಲ್ ರಂಕಿನ್, ಫ್ರೆಡ್ಡೀ ಫಾಕ್ಸ್, ಸಿಮನ್ ರಸೆಲ್ ಬೀಲ್, ಕ್ಲಿಂಟನ್ ಲಿಬರ್ಟಿ, ಜೆಮೀ ಕೆನ್ನಾ, ಕಿಯೆರನ್ ಬ್ಯೂ, ಟಾಮ್ ಬೆನೆಟ್, ಟಾಮ್ ಟೇಲರ್ ಮತ್ತು ವಿನ್ಸೆಂಟ್ ರೆಗಾನ್ ಇದ್ದಾರೆ.

ಹೌಸ್ ಆಫ್ ದಿ ಡ್ರ್ಯಾಗನ್‘ ಸೀಸನ್ 2 ಜೂನ್ 17 ರಂದು ಎಚ್​ಬಿಓ ಮ್ಯಾಕ್ಸ್ ನಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ಜಿಯೋ​ನಲ್ಲಿಯೂ ಬಿಡುಗಡೆ. ಜಿಯೋನಲ್ಲಿ ‘ಹೌಸ್ ಆಫ್ ದಿ ಡ್ರಾಗನ್’ ವೆಬ್ ಸರಣಿ ಇಂಗ್ಲೀಷ್ ಸೇರಿದಂತೆ ಒಟ್ಟು ಆರು ಭಾಷೆಯಲ್ಲಿ ಬಿಡುಗಡೆ ಕಾಣಲಿದೆ. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ವೆಬ್ ಸರಣಿಯನ್ನು ವೀಕ್ಷಿಸಬಹುದಾಗಿದೆ.

Continue Reading

ಮಾಲಿವುಡ್

Aavesham Releases On OTT: ಸದ್ದಿಲ್ಲದೆ ಒಟಿಟಿಗೆ ಎಂಟ್ರಿ ಕೊಟ್ಟ ಫಹಾದ್ ಫಾಸಿಲ್ ಅಭಿನಯದ ʻಆವೇಶಂʼ!

Aavesham Releases On OTT: ಆವೇಶಂʼ ಸಿನಿಮಾವು ಭಾರತದಲ್ಲಿ 93.9 ಕೋಟಿ ರೂ. ಗಳಿಕೆ ಮಾಡಿತ್ತು. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 146.9 ಕೋಟಿ ರೂ. ಗಳಿಕೆ ಕಂಡಿತ್ತು. ಈ ಚಿತ್ರದ ಬಜೆಟ್‌ 30 ಕೋಟಿ ರೂ. ಆಗಿತ್ತು. ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ʻಆವೇಶಂʼ (Aavesham Releases On OTT) ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.

VISTARANEWS.COM


on

Aavesham Releases On OTT Fahadh Faasil Hit Malayalam Film
Koo

ಬೆಂಗಳೂರು: ಫಹಾದ್ ಫಾಸಿಲ್ (Fahadh Faasil) ಅಭಿನಯದ ಬ್ಲಾಕ್‌ಬಸ್ಟರ್‌ ಮಲಯಾಳಂ ಸಿನಿಮಾ ʻಆವೇಶಂʼ ಒಟಿಟಿಗೆ ಸದ್ದಿಲ್ಲದೆ ಎಂಟ್ರಿ ಕೊಟ್ಟಿದೆ. ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ʻಆವೇಶಂʼ (Aavesham Releases On OTT) ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.

ʻಆವೇಶಂʼ ಸಿನಿಮಾವು ಭಾರತದಲ್ಲಿ 93.9 ಕೋಟಿ ರೂ. ಗಳಿಕೆ ಮಾಡಿತ್ತು. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 146.9 ಕೋಟಿ ರೂ. ಗಳಿಕೆ ಕಂಡಿತ್ತು. ಈ ಚಿತ್ರದ ಬಜೆಟ್‌ 30 ಕೋಟಿ ರೂ. ಆಗಿತ್ತು. ಇದೀಗ ಅಮೆಜಾನ್‌ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ. ಡಬ್ಬಿಂಗ್ ಆವೃತ್ತಿಗಳ ಕುರಿತು ಇನ್ನೂ ಯಾವುದೇ ಅಪಡೇಟ್‌ ಬಂದಿಲ್ಲ. ಫ್ರಂಟ್ ರೋ ಅವರ ಟ್ವೀಟ್ ಪ್ರಕಾರ, ಆವೇಶಂನ ಡಿಜಿಟಲ್ ಹಕ್ಕುಗಳು 35 ಕೋಟಿ ರೂಪಾಯಿಗಳಿಗೆ ಮಾರಾಟವಾಗಿವೆ. ಈ ಮೂಲಕ ದುಲ್ಕರ್ ಸಲ್ಮಾನ್ ಅವರ ʻಕಿಂಗ್ ಆಫ್ ಕೋಥಾʼದ ದಾಖಲೆಯನ್ನು ಮುರಿದಿದೆ ಎಂದು ವರದಿಯಾಗಿದೆ. ʻಕಿಂಗ್ ಆಫ್ ಕೋಥಾʼ 32 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು.

ಜಿತು ಮಾಧವನ್ ನಿರ್ದೇಶನದ ಈ ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ, ಮನ್ಸೂರ್ ಅಲಿ ಖಾನ್ ಮತ್ತು ಸಜಿನ್ ಗೋಪು ಕೂಡ ನಟಿಸಿದ್ದಾರೆ. ಮಲಯಾಳಂ ಸಿನಿಮಾದ ಪ್ರಮುಖ ಕಥೆ ಬೆಂಗಳೂರಿನಲ್ಲಿ ನಡೆಯುತ್ತದೆ. ಓದಲೆಂದು ಬೆಂಗಳೂರಿಗೆ ಬರುವ ಮೂವರು ಹುಡುಗರು ಅಲ್ಲಿ ಜಗಳದಲ್ಲಿ ಸಿಕ್ಕಿ ಬಿದ್ದು ಸ್ಥಳೀಯ ದರೋಡೆಕೋರನ ನೆರವಿನಿಂದ ಗೆಲುವು ಪಡೆಯಲು ಪ್ರಯತ್ನಿಸುವಂತಹ ಕಥೆ ಹೊಂದಿದೆ. ಆ ಸ್ಥಳೀಯ ದರೋಡೆಕೋರ ಬೇರಾರು ಅಲ್ಲ, ಫಹಾದ್‌ ಫಾಸಿಲ್‌.

ಸಂಪೂರ್ಣ ಬಿಳಿ ಉಡುಗೆಯಲ್ಲಿ, ಚಿನ್ನದ ಸರಗಳೊಂದಿಗೆ, ದಪ್ಪ ಮೀಸೆಯನ್ನು ಹೊಂದಿರುವ ಫಹಾದ್‌ ಪಾತ್ರ ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆದಿದೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಫಹಾದ್ ಅವರು ರಂಗಾ ಪಾತ್ರವನ್ನು ಏಕೆ ಆಯ್ಕೆ ಮಾಡಿಕೊಂಡೆ ಎಂಬುದರ ಕುರಿತು ಈ ಮುಂಚೆ ಹೇಳಿಕೊಂಡಿದ್ದರು. ʻʻನಾನು ಈ ಮೊದಲು ಅಂತಹ ಪಾತ್ರಗಳನ್ನು ಮಾಡಿಲ್ಲ. ಆದ್ದರಿಂದ ಈ ಕಥೆ ನನ್ನ ಬಳಿಗೆ ಬಂದಾಗ, ನಾನು ಹೌದು ಎಂದು ಹೇಳಿದೆ. ಈ ಹಿಂದೆ ನಾನು ಮಾಡಿದ್ದ ಪಾತ್ರಗಳಿಗಿಂತ ಭಿನ್ನವಾಗಿ ಇತ್ತು. ಅಲ್ಲದೆ, ನಾನು ಕನ್ನಡ ಮತ್ತು ಮಲಯಾಳಂ ಮಿಶ್ರಿತ ಭಾಷೆ ಮಾತನಾಡಬೇಕು ಎಂದು ಮನೋರಮಾ ಹೇಳಿದ್ದರುʼʼ ಎಂದರು. ಇವು 2024ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ನಾಲ್ಕನೇ ಮಲಯಾಳ ಸಿನಿಮಾವೆಂಬ ಖ್ಯಾತಿಗೆ ಪಾತ್ರವಾಗಿತ್ತು.

ಇದನ್ನೂ ಓದಿ: Thug Life Movie: ಕಮಲ್‌ ಹಾಸನ್‌ ಸಿನಿಮಾಗೆ ಕಾಲಿವುಡ್‌ ನಟ ಸಿಂಬು ಎಂಟ್ರಿ!

ಇನ್ನು ಫಹಾದ್‌ ಫಾಸಿಲ್‌ ಹಲವು ಬಹು ನಿರೀಕ್ಷಿತ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಪ್ಯಾನ್‌ ಇಂಡಿಯಾ ಚಿತ್ರ ‌ʼಪುಷ್ಪ 2: ದಿ ರೂಲ್‌ʼ ಸಿನಿಮಾದ ಮುಖ್ಯ ಪಾತ್ರದಲ್ಲಿ ಫಹಾದ್‌ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಈ ಚಿತ್ರದ ಮೊದಲ ಭಾಗ ಸೂಪರ್‌ ಹಿಟ್‌ ಆಗಿತ್ತು. ಅಲ್ಲದೆ ಅಲ್ಲು ಅರ್ಜುನ್‌ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂಡು ಕೊಟ್ಟಿತ್ತು. ಕಥೆಗೆ ಟ್ವಿಸ್ಟ್‌ ಕೊಡುವ ಪಾತ್ರದಲ್ಲಿ ಫಹಾದ್‌ ನಟಿಸಿದ್ದರು. ಎರಡನೇ ಭಾಗದಲ್ಲಿನ ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿದೆ.

ಇದರ ಜತೆಗೆ ಹಲವು ವರ್ಷಗಳ ಬಳಿಕ ತೆರೆ ಮೇಲೆ ಒಂದಾಗುತ್ತಿರುವ ಸೂಪರ್‌ ಸ್ಟಾರ್‌ಗಳಾದ ರಜನಿಕಾಂತ್‌- ಅಮಿತಾಭ್‌ ಬಚ್ಚನ್‌ ಅವರ ʼವೆಟ್ಟೈಯನ್‌ʼ ಸಿನಿಮಾದಲ್ಲಿ ಫಹಾದ್‌ ಅಭಿನಯಿಸುತ್ತಿದ್ದಾರೆ. ಇದನ್ನು ಟಿ.ಜೆ.ಜ್ಞಾನವೇಲ್ ನಿರ್ದೇಶಿಸುತ್ತಿದ್ದಾರೆ. ರಾಣಾ ದಗ್ಗುಬಾಟಿ, ಮಂಜು ವಾರಿಯರ್‌, ರಿತಿಕಾ ಸಿಂಗ್‌, ದುಶಾರಾ ವಿಜಯನ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಫಾಹದ್‌ ಮಲಯಾಳಂನ ʼಆವೇಶಮ್‌ʼ, ʼಪಾಟ್ಟುʼ, ʼಹನುಮಾನ್‌ ಗೇರ್‌ʼ ಮತ್ತಿತರ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Continue Reading
Advertisement
R Ashok
ರಾಜಕೀಯ9 mins ago

R Ashok: ರಾಜ್ಯದಲ್ಲಿ ಮಳೆಗಿಂತ ಹೆಚ್ಚಾಗಿ ಕೊಲೆಗಳೇ ನಡೆಯುತ್ತಿವೆ: ಆರ್‌.ಅಶೋಕ್‌ ಕಿಡಿ

Thailand Open 2024
ಬ್ಯಾಡ್ಮಿಂಟನ್29 mins ago

Thailand Open 2024: ಥಾಯ್ಲೆಂಡ್‌ ಓಪನ್‌ ಗೆದ್ದ ಭಾರತದ ಚಿರಾಗ್‌-ಸಾತ್ವಿಕ್‌ ಜೋಡಿ

Prajwal Revanna Case
ಕರ್ನಾಟಕ33 mins ago

Prajwal Revanna Case: ಪೆನ್‌ಡ್ರೈವ್‌ ಕೇಸ್‌ಗೆ ಟ್ವಿಸ್ಟ್;‌ ದೇವರಾಜೇಗೌಡ, ಡಿಕೆಶಿ ಆಡಿಯೊ ಬಯಲು, ಇಲ್ಲಿದೆ ಸ್ಫೋಟಕ ಮಾಹಿತಿ

Money Guide
ಮನಿ-ಗೈಡ್42 mins ago

Money Guide: ಪ್ಯಾನ್‌ ಕಾರ್ಡ್‌ ಇಲ್ಲದೆಯೂ ಸಿಬಿಲ್‌ ಸ್ಕೋರ್‌ ಪರಿಶೀಲಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

Road Accident
ಕ್ರೈಂ46 mins ago

Road Accident: ಬೆಂಗಳೂರು, ಗದಗದಲ್ಲಿ ಸರಣಿ ಅಪಘಾತ; ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಮನೆಗಳೇ ಭಸ್ಮ

Janhvi Kapoor felt sexualised at the age of 12
ಬಾಲಿವುಡ್52 mins ago

Janhvi Kapoor: 12ನೇ ವಯಸ್ಸಿನಲ್ಲಿಯೇ ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೊ ಅಪ್‌ಲೋಡ್‌ ಆಗಿತ್ತು ಎಂದ ಶ್ರೀದೇವಿ ಮಗಳು!

Kundapur News
ಕರ್ನಾಟಕ60 mins ago

Kundapur News: ಅನಾರೋಗ್ಯದಿಂದ ತಾಯಿ ಸಾವು, ಶವದ ಜತೆ 4 ದಿನ ಕಳೆದ ಬುದ್ಧಿಮಾಂದ್ಯ ಪುತ್ರಿಯೂ ಮೃತ್ಯು!

RCB vs CSK
ಕ್ರಿಕೆಟ್1 hour ago

RCB vs CSK: ಧೋನಿ ವರ್ತನೆಗೆ ‘ಇಟ್‌ ಹರ್ಟ್ಸ್‌​’ ಎಂದ ಆರ್​ಸಿಬಿ ಅಭಿಮಾನಿಗಳು; ಧೋನಿ ಮಾಡಿದ ತಪ್ಪೇನು?

Congress Manifesto
ದೇಶ1 hour ago

Congress Manifesto: ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಅಪಪ್ರಚಾರ; ವ್ಯಕ್ತಿ ಅರೆಸ್ಟ್‌-ಬಿಜೆಪಿ ಕಿಡಿ

Prajwal Revanna Case
ಕರ್ನಾಟಕ1 hour ago

Prajwal Revanna Case: ಡಿಕೆಶಿ 100 ಕೋಟಿ ರೂ. ಆಫರ್;‌ ಬೆಂಕಿ ಇಲ್ಲದೆ ಹೊಗೆಯಾಡಲ್ಲ ಎಂದ ಆರ್.‌ ಅಶೋಕ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌