HD Kumaraswamy to contest from Mandya not predictabale till the last moment Karnataka Election 2023 updates Karnataka Election 2023: ಮಂಡ್ಯದಲ್ಲೂ ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧೆ?; ಕೊನೇ ಕ್ಷಣದವರೆಗೂ ಇದೆ ಕೌತುಕ! - Vistara News

ಕರ್ನಾಟಕ

Karnataka Election 2023: ಮಂಡ್ಯದಲ್ಲೂ ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧೆ?; ಕೊನೇ ಕ್ಷಣದವರೆಗೂ ಇದೆ ಕೌತುಕ!

Assembly Election 2023: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಚೆನ್ನಪಟ್ಟಣದಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಈಗ ಮಂಡ್ಯ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೊನೇ ಕ್ಷಣದವರೆಗೂ ಕುತೂಹಲ ಮುಂದುವರಿಯಲಿದೆ.

VISTARANEWS.COM


on

HD Kumaraswamy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂಡ್ಯ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ರಾಜಕೀಯ ನಾಯಕರ ಅಬ್ಬರ ಪ್ರಾರಂಭವಾಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಪಕ್ಷಗಳು ಕಸರತ್ತು ನಡೆಸುತ್ತಿವೆ. ಈ ಮಧ್ಯೆ ನಾಮಪತ್ರ ಸಲ್ಲಿಸಲು ಇಂದೇ (ಗುರುವಾರ – ಏಪ್ರಿಲ್‌ 20) ಕೊನೇ ದಿನವಾಗಿದೆ. ಇನ್ನು ರಾಜಕೀಯ ಜಿದ್ದಾಜಿದ್ದಿ ಕಣ ಎಂದೇ ಖ್ಯಾತಿ ಹೊಂದಿರುವ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಇನ್ನೂ ಫೈನಲ್‌ ಆಗಿಲ್ಲ. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರೇ ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆ ಗಟ್ಟಿಯಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ಮಧ್ಯಾಹ್ನ 3 ಗಂಟೆ ಕೊನೆಯಾಗಿರುವುದರಿಂದ ಅಂತಿಮ ಕ್ಷಣದವರೆಗೂ ಈ ಕುತೂಹಲ ಮುಂದುವರಿಯಲಿದೆ ಎಂದೇ ಹೇಳಲಾಗುತ್ತಿದೆ. ಸದ್ಯ ಎಚ್‌ಡಿಕೆ ಸಹ ಮಂಡ್ಯ ಜಿಲ್ಲೆಯಲ್ಲಿಯೇ ಇರುವ ಕಾರಣ ಅವರೇ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದ್ದರೂ, ಅವರ ಸಹಿತ ಕುಟುಂಬ ಸದಸ್ಯರು ಇದನ್ನು ಅಲ್ಲಗಳೆಯುತ್ತಿದ್ದಾರೆ.

ಇನ್ನು ಮಂಡ್ಯದಲ್ಲಿ ಜೆಡಿಎಸ್‌ ಹಾಲಿ ಶಾಸಕ ಎಂ.ಶ್ರೀನಿವಾಸ್‌ ಅವರಿಗೆ ಈ ಬಾರಿ ಟಿಕೆಟ್‌ ನಿರಾಕರಿಸಿ ಮನ್‌ಮೂಲ್ ಅಧ್ಯಕ್ಷ ಬಿ.ಆರ್‌. ರಾಮಚಂದ್ರು ಅವರಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಬಿ ಫಾರಂ ನೀಡಿದ್ದಾರೆ. ಅಧಿಕೃತವಾಗಿ ಟಿಕೆಟ್‌ ಘೋಷಣೆ ಮಾಡದಿದ್ದರೂ ದೇವೇಗೌಡರು ಬಿ ಫಾರಂ ನೀಡಿರುವುದು ಮಂಡ್ಯದಲ್ಲಿ ಜೆಡಿಎಸ್‌ ಬಿಕ್ಕಟ್ಟಿಗೆ ಕಾರಣವಾಗಿದೆ. ಇದು ಶ್ರೀನಿವಾಸ್‌ ಅವರ ಆಕ್ರೋಶಕ್ಕೂ ಕಾರಣವಾಗಿದ್ದು, ಬಂಡಾಯವೆದ್ದಿದ್ದಾರೆ.

ಇದನ್ನೂ ಓದಿ: Karnataka Elections : ಕಾಂಗ್ರೆಸ್‌ ವಿರುದ್ಧ ಅಖಂಡ ದಲಿತಾಸ್ತ್ರ ಬಳಸಲು ಮುಂದಾದ ಬಿಜೆಪಿ

ಸ್ವಾಭಿಮಾನಿ ಪಡೆ ಹೆಸರಿನಲ್ಲಿ ಬಂಡಾಯವಾಗಿ ನಾಮಪತ್ರ ಸಲ್ಲಿಸಲು ಶ್ರೀನಿವಾಸ್‌ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರ ಜತೆಗೆ ಇನ್ನೂ ಮೂವರಿಂದ ನಾಮಪತ್ರ ಸಲ್ಲಿಕೆಗೆ ನಿರ್ಧಾರ ಮಾಡಲಾಗಿದೆ. ಹೀಗಾಗಿ ಬಂಡಾಯ ಶಮನ ಮಾಡುವ ತಲೆನೋವು ಸಹ ಕುಮಾರಸ್ವಾಮಿ ಅವರಿಗೆ ಈಗ ಎದುರಾಗಿದೆ. ಮತ್ತೊಂದೆಡೆ ಟಿಕೆಟ್ ಪಡೆದುಕೊಂಡಿರುವ ರಾಮಚಂದ್ರು ಅವರೂ ಸಹ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗ ಎದ್ದಿರುವ ಗೊಂದಲ ನಿವಾರಣೆ ಹಾಗೂ ಬಂಡಾಯ ಶಮನಕ್ಕೆ ತಾವೇ ಸ್ಪರ್ಧೆ ಮಾಡುವುದಾಗಿ ಎಚ್‌.ಡಿ. ಕುಮಾರಸ್ವಾಮಿ ಘೋಷಣೆ ಮಾಡುವ ಸಾಧ್ಯತೆ ಸಹ ಇದೆ ಎಂದು ಹೇಳಲಾಗಿದೆ. ಹೀಗಾಗಿ ಮಂಡ್ಯ ಅನಿರೀಕ್ಷಿತ ಬೆಳವಣಿಗೆಗೆ ಸಾಕ್ಷಿಯಾಗಲಿದೆ ಎನ್ನಲಾಗಿದೆ.

ಭಿನ್ನಮತ ಸರಿಪಡಿಸುವೆ- ಎಚ್‌ಡಿಕೆ

ಮಂಡ್ಯದಲ್ಲಿ ಎದ್ದಿರುವ ಭಿನ್ನಮತವನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತೇನೆ. ಶ್ರೀನಿವಾಸ್ ಜತೆ ಮಾತನಾಡಿದ್ದೇನೆ. ಪಕ್ಷದಿಂದ ಕಾರ್ಯಕರ್ತರನ್ನು ಅಭ್ಯರ್ಥಿ ಮಾಡಲು ಸೂಚಿಸಿದ್ದೇನೆ. ಪಕ್ಷದ ಮೇಲೆ ಗೌರವ ಇದ್ದರೆ ಸರಿಯಾದ ನಿರ್ಧಾರ ಮಾಡಲಿ. ಈಗಲೂ ಶ್ರೀನಿವಾಸ್‌ ಅವರಲ್ಲಿ ಮನವಿ ಮಾಡುತ್ತೇನೆ. ನಾನು ದುಡುಕಿ ನಿರ್ಧಾರ ಕೈಗೊಂಡಿಲ್ಲ.
ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದೇನಾ? ನನ್ನ ಹೆಸರು ಏಕೆ ಹೊರಗೆ ತರಲಾಗಿದೆಯೋ ಗೊತ್ತಿಲ್ಲ? ರೈತರ ಪರ ಕೆಲಸ ಮಾಡಲು ಸರ್ಕಾರ ತರಲು ಹೊರಟಿದ್ದೇನೆ. ಎಲ್ಲರನ್ನೂ ಕರೆದು ಮಾತನಾಡಿದ್ದೇನೆ. ನಾನು ಯಾವ ತಪ್ಪನ್ನೂ ಮಾಡಿಲ್ಲ ಎಂದು ಹೇಳಿದರು.

ಗುರುಚರಣ್ ಜೆಡಿಎಸ್‌ ಸೇರ್ಪಡೆ

ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಸಹೋದರನ ಪುತ್ರ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯ ಎಸ್.‌ ಗುರುಚರಣ್‌ ಅವರಿಗೆ ಮದ್ದೂರಿನಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಬಂಡಾಯವೆದ್ದಿದ್ದು, ಗುರುವಾರ ಅಧಿಕೃತವಾಗಿ ಜೆಡಿಎಸ್‌ ಸೇರ್ಪಡೆಯಾಗಿದ್ದಾರೆ. ಅವರಿಗೆ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಶಾಸಕ ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ಪಕ್ಷ ಸೇರ್ಪಡೆಗೊಂಡರು.

ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧೆ ಇಲ್ಲ- ಅನಿತಾ ಕುಮಾರಸ್ವಾಮಿ ಸ್ಪಷ್ಟನೆ

ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಮಾಡುವುದಿಲ್ಲ. ಮಂಡ್ಯದಲ್ಲಿ ನಿಲ್ಲುವಂತೆ ಒತ್ತಡ ಇರುವುದು ನಿಜ. ಆದರೆ, ಅವರು 2 ಕಡೆ ಸ್ಪರ್ಧೆ ಮಾಡುವುದಿಲ್ಲ. ಚನ್ನಪಟ್ಟಣದ ಒಂದೇ ಕಡೆ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ನಾಗಮಂಗಲದ ಆದಿಚುಂಚನಗಿರಿ ಮಠದಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಮಾಧ್ಯಮದವರಿಗೆ ಹೇಳಿದ್ದಾರೆ.

ಇದನ್ನೂ ಓದಿ: Karnataka Elections 2023 : ಚುನಾವಣಾ ಅಫಿಡವಿಟ್‌ನಲ್ಲಿ ಇಬ್ಬರು ಪತ್ನಿಯರು ಇರುವುದನ್ನು ದೃಢಪಡಿಸಿದ ಆಮ್‌ ಆದ್ಮಿ!

ಅಮಾವಾಸ್ಯೆ ಪೂಜೆಗೆ ಬಂದಿದ್ದೇನೆ. ನಾವು ಸಾಮಾನ್ಯವಾಗಿ ಪೂಜೆಗೆ ಬರುತ್ತಾ ಇರುತ್ತೇವೆ. ಜೆಡಿಎಸ್ ಅಧಿಕಾರಕ್ಕೆ ಬರಲಿ‌ ಅಥವಾ ಕುಮಾರಸ್ವಾಮಿ ಸಿಎಂ ಆಗಲಿ ಎಂದು ಪೂಜೆ ಸಲ್ಲಿಸುತ್ತಿಲ್ಲ. ಸಮಾಜದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ ಎಂದ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Prajwal Revanna Case: ಎಸ್‌ಐಟಿ ಮೇಲೆ ಕೇಸ್‌ ಹಾಕ್ತೇನೆ, ಶೀಘ್ರವೇ ಪೆನ್‌ಡ್ರೈವ್‌ ಪ್ರೊಡ್ಯುಸರ್‌ ಹೆಸರು ಹೇಳ್ತೇನೆ ಎಂದ ದೇವರಾಜೇಗೌಡ

Prajwal Revanna Case: ರಾಜ್ಯಾದ್ಯಂತ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಬಹಳ ಚರ್ಚೆ ನಡೆಯುತ್ತಿದೆ. ಅಶ್ಲೀಲ ವಿಡಿಯೊ ಸೋರಿಕೆ ಮಾಡಿದವರ ರಕ್ಷಣೆಗೆ ನಾಲ್ವರು ಸಚಿವರು ಇದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂದು ಶೀಘ್ರದಲ್ಲೇ ಬಹಿರಂಗಪಡಿಸುವೆ ಎಂದು ವಕೀಲ ದೇವರಾಜೇಗೌಡ ಹೇಳಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ (Prajwal Revanna Case) ಎಚ್‌.ಡಿ.ರೇವಣ್ಣ ಅವರನ್ನು ಮಾತ್ರ ಬಂಧಿಸಿದ್ದಾರೆ. ಆದರೆ. ಪೆನ್‌ಡ್ರೈವ್‌ ಕೊಟ್ಟಿರುವ ಕಾರ್ತಿಕ್‌ ಗೌಡ ವಿರುದ್ಧ ಯಾವುದೇ ಕ್ರಮ ವಹಿಸಿಲ್ಲ. ಒಬ್ಬ ಆರೋಪಿ ತಮ್ಮ‌ ಮುಂದೆ ಇದ್ದಾಗಲೇ ಬಂಧಿಸದ ಎಸ್‌ಐಟಿ ವಿರುದ್ಧ ನಾಳೆ ಕೋರ್ಟ್‌ನಲ್ಲಿ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ. ಎಸ್‌ಐಟಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಖಾಸಗಿ ದೂರು ನೀಡುತ್ತೇವೆ ಎಂದು ವಕೀಲ ದೇವರಾಜೇಗೌಡ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಾಜ್ಯಾದ್ಯಂತ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಬಹಳ ಚರ್ಚೆ ನಡೆಯುತ್ತಿದೆ. ಯಾವಾಗ ಹೆಸರುಗಳು ಹೊರಗೆ ಬಂತೋ ರಕ್ಷಣೆ ಮಾಡಿಕೊಳ್ಳುವ ಕೆಲಸ ಆಗುತ್ತಿದೆ. ನನ್ನ ವಿರುದ್ಧವೂ ದೂರು ನೀಡಲು ಆರಂಭಿಸದ್ದಾರೆ‌. ನಾನು ಸರ್ಕಾರಕ್ಕೆ ಸವಾಲು ಹಾಕುತ್ತೇನೆ, ನನ್ನ ಹಿಂದೆ ಸತ್ಯ, ನ್ಯಾಯ, ಧರ್ಮ ಇದೆ. ನಾನು ಯಾರಿಗೂ ಹೆದರಲ್ಲ ಎಂದು ತಿಳಿಸಿದರು.

ಪೆನ್‌ ಡ್ರೈವ್‌ ವಿಡಿಯೊ ಸೋರಿಕೆ ಮಾಡಿದವರ ರಕ್ಷಣೆಗೆ ನಾಲ್ವರು ಸಚಿವರು ಇದ್ದಾರೆ. ಪೆನ್ ಡ್ರೈವ್ ಪ್ರೊಡ್ಯುಸರ್ ಯಾರು? ಹಂಚಿಕೆದಾರರು ಯಾರು? ಎಂಬ ಮಾಹಿತಿ ಇದೆ. ಎಲ್ಲವನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ | Prajwal Revanna Case: ಎಚ್‌ಡಿಕೆ ಕಿಂಗ್‌ ಆಫ್‌ ಬ್ಲ್ಯಾಕ್‌ಮೇಲ್‌; ತಿರುಗಿಬಿದ್ದ ಡಿ.ಕೆ. ಶಿವಕುಮಾರ್!

ಮಹಿಳಾ ಆಯೋಗದ ಅಧ್ಯಕ್ಷರು ಸಿಎಂಗೆ ದೂರು ನೀಡಿದ್ದರು. 2,867 ವೀಡಿಯೊ ಇದ್ದು, ಇದು ಪ್ರಪಂಚದಲ್ಲಿ ಅತಿ ದೊಡ್ಡ ಲೈಂಗಿಕ ಹಗರಣ ಆಗಿದೆ. ವಿಡಿಯೊ ಮಾಡಿದವರನ್ನು ಬಂಧಿಸಿ ಎಂದು ಸರ್ಕಾರಕ್ಕೆ‌ ಮನವಿ ಮಾಡಿದ್ದಾರೆ. ವಿಡಿಯೊ ಮಾಡಿದವರು ಮತ್ತು ಹಂಚಿದವರ ವಿರುದ್ಧ ಕ್ರಮ‌ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದರು. ಆದರೆ, ಪ್ರಕರಣದಲ್ಲಿ ಪೆನ್ ಡ್ರೈವ್ ಹರಿಬಿಟ್ಟವರ ವಿರುದ್ಧ ಕ್ರಮವಾಗಿಲ್ಲ. ನಾನು ಕೂಡ ಸಂತ್ರಸ್ತ, ನನಗೆ ವಿಡಿಯೊಕಾಲ್‌ ಮಾಡಿ ಹನಿ ಟ್ರ್ಯಾಪ್‌ ಮಾಡಲು ಯತ್ನಿಸಿ, ನನ್ನ ವಿರುದ್ಧ ಸುಳ್ಳು ದಾಖಲೆ ಸೃಷ್ಟಿ ಮಾಡಲು ಮುಂದಾದರು. ಈ ರೀತಿ ನನ್ನ ಕಟ್ಟಿಹಾಕಬಹುದು ಎಂದು ನೋಡಿದರೆ, ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧ ಎಂದರು.

ನಾನು ವಕೀಲನಾಗಿ ಹೋರಾಟ‌ ಮಾಡುತ್ತಿದ್ದೇನೆ. ನವೀನ್ ಗೌಡ, ಕಾರ್ತಿಕ್ ವಿರುದ್ಧ ಎಫ್‌ಐಆರ್‌ ಆಗಿದೆ. ಪೆನ್ ಡ್ರೈವ್ ಹಂಚಿಕೆ‌ ವಿಚಾರವಾಗಿ ಎಸ್‌ಐಟಿ ರಚನೆ ಮಾಡಿದ್ದಾರೆ. ಆದರೆ, ಹೊಳೆನರಸೀಪುರ ಪ್ರಕರಣ ಮಾತ್ರ ಎಸ್‌ಐಟಿಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಪೆನ್ ಡ್ರೈವ್ ಪ್ರಕರಣ ಮಾತ್ರ ವರ್ಗಾವಣೆ ಆಗಿಲ್ಲ. ಪೆನ್ ಡ್ರೈವ್ ವಿಚಾರವಾಗಿ ನನ್ನ ಸಾಕ್ಷಿಯಾಗಿ ಕರೆದಿದ್ದರು. ಆ ಕೇಸ್ ಪಡೆದಿಲ್ಲ ಅಂದ ಮೇಲೆ ನನ್ನನ್ನು ವಿಚಾರಣೆ ಮಾಡುವ ಅಗತ್ಯವಿರಲಿಲ್ಲ ಎಂದು ಹೇಳಿದರು.

ಈ ಹಿಂದೆ ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದೆ, ಬೇರೆ ಇನ್ಯಾರಿಗೂ ಕೊಟ್ಟಿರಲಿಲ್ಲ. ಅವರೇ ಹಂಚಿದ್ದಾರೆ ಅಂತ ಕಾರ್ತಿಕ್‌ ಹೇಳಿದ್ದಾನೆ. ಮತ್ತೊಂದೆಡೆ ನಾನು ಕೊಟ್ಟಿರುವುದು ಪೆನ್ ಡ್ರೈವ್ ಅಲ್ಲ. ಮೆಮೊರಿ ಕಾರ್ಡ್ ಅಂತ ಹೇಳಿದ್ದಾನೆ. ಮತ್ತೊಂದೆಡೆ ನನ್ನ ವಿರುದ್ಧ ಬಾರ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ದೂರು ನಿಡೀದ್ದಾರೆ. ಕಕ್ಷಿದಾರರು ಕೊಟ್ಟಿರುವ ಮಾಹಿತಿ ಗೌಪ್ಯವಾಗಿದೆ. ಅವರಿಂದಲೇ ಸಹಿ ಮಾಡಿಸಿ ಮುಚ್ಚಿಡಲಾಗಿದೆ. ಅದನ್ನು ನ್ಯಾಯಾಧೀಶರ ಮುಂದೆಯೇ ಓಪನ್ ಮಾಡಲಾಗುವುದು ಎಂದು ತಿಳಿಸಿದರು.

ಎಸ್‌ಐಟಿ ತನಿಖೆಗೆ ಹಾಜರಾಗಿದ್ದೆ ಅಂತ‌ ಕಾರ್ತಿಕ್ ಹೇಳಿಕೆ ನೀಡಿದ್ದಾನೆ. ಸರ್ಕಾರ ಒನ್ ಸೈಡ್ ತನಿಖೆ ಮಾಡುತ್ತಿದೆ. ನಾನೂ ಕಾಂಗ್ರೆಸ್‌ನಲ್ಲಿ ಇದ್ದವನು. ಅಲ್ಲಿ ಅವರ ಆಟ ನೋಡಿದ್ದೇನೆ. ಅಶ್ಲೀಲ ವಿಡಿಯೊ ಮಾಡಿದವರು ಮತ್ತು ವಿಡಿಯೊ ಹಂಚಿಕೆ ಮಾಡಿದವರ ವಿರುದ್ಧವೂ ಬಗ್ಗೆ ತನಿಖೆ ಮಾಡಬೇಕು. ಇಂದು ಕಾರ್ತಿಕ್ ಗೌಡನ ನಿರೀಕ್ಷಣಾ ಜಾಮೀನು ರಿಜೆಕ್ಟ್ ಆಗಿದೆ. ಈ ಪೆನ್ ಡ್ರೈವ್ ಹೊರಬರುತ್ತಿದ್ದಂತೆ ಸರ್ಕಾರ ತಲ್ಲಣ‌ ಆಗಿದೆ ಎಂದು ಹೇಳಿದರು.

ಅವನ ಬಳಿ ಹಣ ಇಲ್ಲ, ಅದಕ್ಕೆ ನಮ್ಮ‌ ಬಳಿ ಬಂದ ಅಂತ ಆ ಮಹಾನುಭಾವ ಕಾರ್ತಿಕ್ ಹೇಳಿಕೆ ನೀಡಿದ್ದಾನೆ. ನಾನು ಅವನಿಗೆ ಕರೆ ಮಾಡಿದ್ನಾ? ಅಥವಾ ಅವರು ಮಾಡಿದ್ರಾ ನೋಡಿ? ನನಗೆ ಶಿವರಾಮೇಗೌಡ ಯಾರು ಅಂತಲೇ ಗೊತ್ತಿರಲಿಲ್ಲ. ಅವರನ್ನ ಟಿವಿಯಲ್ಲಿ ನೋಡಿದ್ದೆ‌. ನನ್ನನ್ನ ಅವರೇ ಕರೆಸಿಕೊಂಡು ರೇವಣ್ಣ ಕುಟುಂಬದ ಬಗ್ಗೆ ಚರ್ಚೆ ಮಾಡಿದರು. ಒಂದು ಕುಟುಂಬ ಅವನತಿಗೆ ತರುವ ವಿಚಾರ ಗೊತ್ತಾದಾಗ ನಾನು ಕಾಲ್ ರೆಕಾರ್ಡ್ ಮಾಡಬೇಕಾಯಿತು ಎಂದು ತಿಳಿಸಿದರು.

ಇನ್ನೂ ಯಾವ ವಿಡಿಯೋ ಇದೆ ಗೊತ್ತಿಲ್ಲ. ಆದರೆ ಅವರ ಮರ್ಯಾದೆ ಹಾಳಾಗಬಾರದು. ವಕೀಲರ ಸಂಘ, ಬಿಜೆಪಿಯು ಸಂತ್ರಸ್ತ ಮಹಿಳೆಯರ ಪರ ಇರಲಿದೆ. ವಾದ ಮಂಡಿಸಲು ನಾವು ಇದ್ದೇವೆ. ಯಾರೂ ಪ್ರಾಣ ಕಳೆದುಕೊಳ್ಳುವುದು ಬೇಡ. ಪೆನ್ ಡ್ರೈವ್ ಹಂಚಿಕೆ ಮಾಡಿರುವುದು ಕಾರ್ತಿಕ್. ಪೆನ್ ಡ್ರೈವ್ ಸಿಕ್ಕವರು, ವಿಡಿಯೊ ನೋಡಿ, ಸಂತ್ರಸ್ತ ಮಹಿಳೆಯರಿಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮಕ್ಕೆ ಎಸ್ಪಿಗೆ ದೂರು ನೀಡಿದ್ದಾರೆ ಎಂದು ಹೇಳಿದರು.

ಕಾರ್ತಿಕ್ ಗೌಡ ಯಾವ ರೆಸಾರ್ಟ್‌ನಲ್ಲಿ ಇದ್ದಾನೆ ಎಂಬ ಮಾಹಿತಿ ಇದೆ. ಶೀಘ್ರದಲ್ಲೇ ಎಲ್ಲಾ ದಾಖಲೆ‌ ಬಿಡುಗಡೆ ಮಾಡುವೆ. ಇನ್ನು ಹಾಸನ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್ ಪಟೇಲ್, ನನಗೂ ಕಾರ್ತಿಕ್ ಗೌಡಗೂ ಸಂಬಂಧ ಇಲ್ಲ ಎನ್ನುತ್ತಾನೆ. ಆದರೆ ಒಂದು ಕಡೆ ಕಾರ್ತಿಕ್, ಮಧ್ಯದಲ್ಲಿ ಶ್ರೇಯಸ್ ಪಟೇಲ್, ಮತ್ತೊಂದು ಕಡೆ ಪುಟ್ಟರಾಜು ಇದ್ದಾರೆ ಎಂದು ಫೋಟೊ ತೋರಿಸಿದರು.

ಇದನ್ನೂ ಓದಿ | Prajwal Revanna Case: ಪೆನ್‌ಡ್ರೈವ್ ಹಂಚಿಕೆದಾರರ ಬಂಧಿಸಿ; ಸಿಎಂ, ಡಿಸಿಎಂ ವಿರುದ್ಧ ಮಹಿಳಾ ಜೆಡಿಎಸ್‌ ಗರಂ!

ರಾಜಕೀಯದಲ್ಲಿ ನಾನಿಲ್ಲ ಎಂದು ಕಾರ್ತಿಕ್‌ ಹೇಳುತ್ತಾನೆ. ಆದರೆ, ಕಾರ್ತಿಕ್ ಮತ್ತು ಶ್ರೇಯಸ್ ಪಟೇಲ್ ರಾಜಕೀಯ ಸಭೆಯಲ್ಲಿ ವೇದಿಕೆ ಮೇಲೆ ಕುಳಿತಿದ್ದಾರೆ. ಊಟಕ್ಕೆ ಕುಳಿತಿರುವ ಫೋಟೊ ಇದೆ. ನಿಮ್ಮ ತಾತ ನಮ್ಮ ಗುರುಗಳು, ಅವರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಡ, ಒಳ್ಳೆಯ ದಾರಿಯಲ್ಲಿ ಹೋಗು ಎಂದು ಶ್ರೇಯಸ್ ಪಟೇಲ್‌ಗೆ ಹೇಳಿದರು.

Continue Reading

ಹುಬ್ಬಳ್ಳಿ

Lok Sabha Election 2024: ಅಬ್ಬಾ! ಅಂತೂ ಮುಗೀತು ಪುಟ್ಟಾ ಮಹಾಯುದ್ಧ ಎಂದ ಪ್ರಲ್ಹಾದ್‌ ಜೋಶಿ!

Lok Sabha Election 2024: ಕಳೆದ ಮೂರ್ನಾಲ್ಕು ತಿಂಗಳಿಂದ ಬಿಡುವಿಲ್ಲದ ಚುನಾವಣೆ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಬುಧವಾರವಿಡೀ ಕುಟುಂಬದೊಂದಿಗೆ ಸಮಯ ಕಳೆದರು. ಹುಬ್ಬಳ್ಳಿಯ ಮನೆಯಲ್ಲಿ ಜೋಶಿ ದಂಪತಿ ಮಕ್ಕಳ ಜತೆ ಸೇರಿ ಮೊಮ್ಮಕ್ಕಳನ್ನು ಆಡಿಸುತ್ತ ಸಂತಸಪಟ್ಟರು.

VISTARANEWS.COM


on

Lok Sabha Election 2024 Pralhada Joshi who came out of the election frenzy
Koo

ಹುಬ್ಬಳ್ಳಿ: ಅಬ್ಬಾ ಅಂತೂ ಮುಗೀತಪ್ಪ ಮೋದಿ ಅವರ ಮೂರನೇ ಯುದ್ಧ! ನನ್ನ ಐದನೇ ಮಹಾಯುದ್ಧ!! ಎಂಬಂತೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಈಗ ರಿಲ್ಯಾಕ್ಸ್ ಮೂಡಿಗೆ (Lok Sabha Election 2024) ಜಾರಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ನಿನ್ನೆವರೆಗೂ ಬಿಡುವಿಲ್ಲದ ಚುನಾವಣೆ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಪ್ರಲ್ಹಾದ್‌ ಜೋಶಿ ಅವರು ಬುಧವಾರವಿಡೀ ಕುಟುಂಬದೊಂದಿಗೆ ಸಮಯ ಕಳೆದರು. ಹುಬ್ಬಳ್ಳಿಯ ಮನೆಯಲ್ಲಿ ಜೋಶಿ ದಂಪತಿ ಮಕ್ಕಳ ಜತೆ ಸೇರಿ ಮೊಮ್ಮಕ್ಕಳನ್ನು ಆಡಿಸುತ್ತ ಖುಷಿ ವ್ಯಕ್ತಪಡಿಸಿದರು.

ಇದನ್ನೂ ಓದಿ: T20 World Cup 2024: ಕ್ರಿಕೆಟ್​ ಪ್ರಿಯರಿಗೆ ಗುಡ್​ ನ್ಯೂಸ್​​; ಈ ಮೊಬೈಲ್‌ ಆ್ಯಪ್​ನಲ್ಲಿ ಟಿ20 ವಿಶ್ವಕಪ್ ಉಚಿತ ಪ್ರಸಾರ

ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಸಚಿವ ಪ್ರಲ್ಹಾದ್‌ ಜೋಶಿ ಅವರು ಕಳೆದ ಮೂರ್ನಾಲ್ಕು ತಿಂಗಳಿಂದಲೂ ಅತ್ತ ಕೇಂದ್ರದಲ್ಲಿ ಇಲಾಖೆ ಕೆಲಸ ಇತ್ತ ಸ್ವಕ್ಷೇತ್ರದಲ್ಲಿ ಚುನಾವಣಾ ಸಿದ್ಧತೆ ಎನ್ನುತ್ತ ಹಗಲಿರುಳು ಶ್ರಮಿಸಿದ್ದರು. ಕಳೆದೊಂದು ತಿಂಗಳಿಂದ ಧಾರವಾಡ ಲೋಕಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಪ್ರಚಾರ ನಡೆಸಿದ್ದರು. ಚುನಾವಣೆ ಸಮೀಪಿಸಿದಂತೆ ವಿವಿಧ ಸಮುದಾಯಗಳ ಸಮಾವೇಶ, ಬಿಜೆಪಿ ಕಾರ್ಯಕರ್ತರ ಸಭೆ, ಪ್ರಚಾರ ಸಭೆ ಹೀಗೆ ಸದಾ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿದ್ದ ಸಚಿವ ಜೋಶಿ ಅವರಿಗೆ ಜಂಜಾಟದಿಂದ ಈಗ ತುಸು ರಿಲೀಫ್ ಸಿಕ್ಕಿದೆ.

ಇದನ್ನೂ ಓದಿ: Heavy Rain: ಕಳುವರಹಳ್ಳಿಯಲ್ಲಿ ಭಾರೀ ಗಾಳಿ ಮಳೆಗೆ ಶಾಲಾ ಚಾವಣಿ ಕುಸಿತ

ಪತಿ ಪ್ರಲ್ಹಾದ್‌ ಜೋಶಿ ಅವರ ಗೆಲುವಿಗಾಗಿ ಜ್ಯೋತಿ ಜೋಶಿ ಅವರೂ ಕ್ಷೇತ್ರದ ವಿವಿಧೆಡೆ ಮಹಿಳಾ ಕಾರ್ಯಕರ್ತರ ಜತೆ ಸೇರಿ ಪ್ರಚಾರ ನಡೆಸಿದ್ದರು. ಇದೀಗ ಚುನಾವಣೆ, ಪ್ರಚಾರ ಎಲ್ಲದರಿಂದ ಹೊರಬಂದು ಮೊಮ್ಮಕ್ಕಳನ್ನು ಎತ್ತಾಡಿಸಿ ಸಂತಸಪಟ್ಟರು.

Continue Reading

ಕ್ರೈಂ

Prajwal Revanna Case: ಪೆನ್‌ಡ್ರೈವ್ ಹಂಚಿಕೆದಾರರ ಬಂಧಿಸಿ; ಸಿಎಂ, ಡಿಸಿಎಂ ವಿರುದ್ಧ ಮಹಿಳಾ ಜೆಡಿಎಸ್‌ ಗರಂ!

Prajwal Revanna Case: ಅಶ್ಲೀಲಗಳನ್ನು ಒಳಗೊಂಡ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಸಂಖ್ಯಾತ ಪೆನ್‌ಡ್ರೈವ್‌ಗಳ ಮುಖೇನ ರಾಜ್ಯದಾದ್ಯಂತ ಹಂಚಿರುವ ಷಡ್ಯಂತ್ರದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಹೆಸರುಗಳನ್ನು ಹೊಳೆನರಸಿಪುರದ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡರು ಸುದ್ದಿಗೋಷ್ಠಿಯಲ್ಲಿ ಸಾಕ್ಷಿ ಸಮೇತ ಬಹಿರಂಗ ಮಾಡಿದ್ದರು. ಇದನ್ನು ಎಸ್‌ಐಟಿ ಗಣನೆಗೆ ತೆಗೆದುಕೊಂಡಿಲ್ಲವೇ ಎಂದು ರಶ್ಮಿ ರಾಮೇಗೌಡ ಪ್ರಶ್ನಿಸಿದ್ದಾರೆ.

VISTARANEWS.COM


on

Prajwal Revanna Case JDS delegation moves Womens Commission to arrest pen drive allottees
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊಗಳುಳ್ಳ ಪೆನ್‌ಡ್ರೈವ್‌ಗಳನ್ನು ಅಪಾರ ಪ್ರಮಾಣದಲ್ಲಿ ಹಂಚುವ ಮೂಲಕ ಮಹಿಳೆಯರ ಮಾನಹಾನಿಗೆ ಕಾರಣವಾಗಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಈ ಕುರಿತು ಎಲ್ಲ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಒತ್ತಾಯಿಸಿದರು.

ಈ ಬಗ್ಗೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಶ್ಮಿ ರಾಮೇಗೌಡ, ಅಶ್ಲೀಲ ವಿಡಿಯೊಗಳನ್ನು ಸೋರಿಕೆ ಮಾಡುವ ಮೂಲಕ ಸ್ತ್ರೀ ಕುಲಕ್ಕೆ ಅಪಚಾರ ಎಸಗಿರುವ ಕಿರಾತಕರನ್ನು ತಕ್ಷಣವೇ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು.

ಸಚಿವರೇ ಈ ವಿಡಿಯೊಗಳ ವಿತರಣೆಯ ರೂವಾರಿ

ಸಚಿವ ಸಂಪುಟದ ಪ್ರಭಾವಿ ಸಚಿವರೇ ಈ ವಿಡಿಯೊಗಳ ವಿತರಣೆಯ ರೂವಾರಿ. ಹೀಗಾಗಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸುವುದು ಅಸಾಧ್ಯ. ಹರಿಬಿಟ್ಟಿರುವ ವಿಡಿಯೊಗಳಿಂದ ಸಂತ್ರಸ್ತೆಯರು ಅಪಾರ ನೋವು, ಅವಮಾನ ಮತ್ತು ಯಾತನೆಯನ್ನು ಅನುಭವಿಸುತ್ತಿದ್ದಾರೆ. ಇವರೊಂದಿಗೆ ಸಂತ್ರಸ್ತೆ ಕುಟುಂಬದವರ ಮೇಲೆ ಉಂಟಾಗಿರುವ ಹಾನಿ ಮತ್ತು ಅಪಮಾನ ವಿವರಿಸಲು ಅಸಾಧ್ಯ. ವಿಡಿಯೊದಲ್ಲಿರುವ ಮಹಿಳೆಯರ ಗುರುತು ಬಹಿರಂಗ ಆಗುವಂತೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ರಶ್ಮಿ ರಾಮೇಗೌಡ ಆಕ್ರೋಶ ಹೊರಹಾಕಿದರು.

ಎಸ್‌ಐಟಿಯಿಂದ ನೊಂದವರಿಗೆ ನ್ಯಾಯ ಸಿಗಲ್ಲ

ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾದಳ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಸಂತ್ರಸ್ಥ ಮಹಿಳೆಯರಿಗೆ ಹಾಗೂ ಅವರ ಕುಟುಂಬದವರಿಗೆ ನ್ಯಾಯ ಒದಗಿಸುವಲ್ಲಿ ಎಸ್‌ಐಟಿ ವಿಫಲವಾಗಿದೆ. ಸಿಬಿಐ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲಿದೆ ಎಂದು ರಶ್ಮಿ ರಾಮೇಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿಎಂ, ಡಿಸಿಎಂ ಹೆಸರು ಬಂದಿದೆ

ಅಶ್ಲೀಲಗಳನ್ನು ಒಳಗೊಂಡ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಸಂಖ್ಯಾತ ಪೆನ್‌ಡ್ರೈವ್‌ಗಳ ಮುಖೇನ ರಾಜ್ಯದಾದ್ಯಂತ ಹಂಚಿರುವ ಷಡ್ಯಂತ್ರದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಹೆಸರುಗಳನ್ನು ಹೊಳೆನರಸಿಪುರದ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡರು ಸುದ್ದಿಗೋಷ್ಠಿಯಲ್ಲಿ ಸಾಕ್ಷಿ ಸಮೇತ ಬಹಿರಂಗ ಮಾಡಿದ್ದರು. ಇದನ್ನು ಎಸ್‌ಐಟಿ ಗಣನೆಗೆ ತೆಗೆದುಕೊಂಡಿಲ್ಲವೇ ಎಂದು ರಶ್ಮಿ ರಾಮೇಗೌಡ ಪ್ರಶ್ನಿಸಿದರು.

ವಿಡಿಐೊ ಹಂಚಿಕೆ ಶಿಕ್ಷಾರ್ಹ ಅಪರಾಧ

ಮಾಹಿತಿ ತಂತ್ರಜ್ಞಾನ ಕಾಯಿದೆ-2020ರ ಸೆಕ್ಷನ್ 66-ಇ, 67 ಮತ್ತು 67-ಎ ಮತ್ತು ಕಾಯ್ದೆ 228 (ಎ) ಐಪಿಸಿ ಪ್ರಕಾರ ಯಾವುದೇ ವ್ಯಕ್ತಿ ಎಲೆಕ್ಟ್ರಾನಿಕ್ ಸಂದೇಶಗಳನ್ನಾಗಲಿ ಅಥವಾ ಚಿತ್ರಿಕರಣವನ್ನಾಗಲಿ ತಯಾರಿಸುವುದು, ಸಂಗ್ರಹಿಸಿ ಇಡುವುದು ಹಾಗೂ ಬಿತ್ತರಿಸುವುದು, ಚಿತ್ರಿಸುವುದು ಸಂತ್ರಸ್ತೆಯರ ಹೆಸರನ್ನು ಕೋರ್ಟ್ ಅನುಮತಿಯಿಲ್ಲದೆ, ಸಂತ್ರಸ್ತೆಯರ ಅನುಮತಿಯಿಲ್ಲದೆ ಬಹಿರಂಗ ಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ವಿಡಿಯೊಗಳನ್ನು ಲೀಕ್ ಮಾಡಿರುವ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ರಶ್ಮಿ ರಾಮೇಗೌಡ ಆಗ್ರಹಿಸಿದರು.

ಇದನ್ನೂ ಓದಿ: Prajwal Revanna Case: ಎಸ್‌ಐಟಿ ಕೇಸ್‌ಗಳಿಗಾಗಿ ಇಬ್ಬರು ಹೆಚ್ಚುವರಿ ಎಸ್‌ಪಿಪಿ ನೇಮಕ; ರಾಜ್ಯ ಸರ್ಕಾರದ ಮಹತ್ವದ ಆದೇಶ

ಪೆನ್‌ಡ್ರೈವ್‌ಗಳನ್ನು ಹಾಸನದಲ್ಲಿ ವ್ಯಾಪಕವಾಗಿ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ಜರುಗಿಸಿರುವುದಿಲ್ಲ ಎಂದು ರಶ್ಮಿ ರಾಮೇಗೌಡ ಆರೋಪಿಸಿದರು.

ಇದೇ ವೇಳೆ ಅವರು ಮಹಿಳಾ ಆಯೋಗಕ್ಕೆ ಸಲ್ಲಿಸಿದ ದೂರಿನ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಬೆಂಗಳೂರು ಮಹಾನಗರ ಜನತಾದಳ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಎಸ್ ರಾವ್, ವಕ್ತಾರರಾದ ಪ್ರಶಾಂತಿ, ರಾಜಾಜಿನಗರ ಕ್ಷೇತ್ರದ ಮಹಿಳಾ ಅಧ್ಯಕ್ಷೆ ಕವಿತಾ, ರಾಜ್ಯ ಕಾರ್ಯದರ್ಶಿ ಮಂಗಳಮ್ಮ, ನಗರದ ಮಹಿಳಾ ವಿಭಾಗದ ಪದಾಧಿಕಾರಿಗಳು, ಮುಖಂಡರು ನಿಯೋಗದಲ್ಲಿ ಇದ್ದರು.

Continue Reading

ಪ್ರಮುಖ ಸುದ್ದಿ

Rain News: ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ; ಬೆಂಗಳೂರಿನಲ್ಲಿ ಹೊಳೆಯಂತಾದ ರಸ್ತೆಗಳು!

Rain News: ಮುಂದಿನ ಮೂರು ದಿನಗಳ ಕಾಲ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

VISTARANEWS.COM


on

Rain News
Koo

ಬೆಂಗಳೂರು: ರಾಜಧಾನಿ ಬೆಂಗಳೂರು, ಕೊಡಗು, ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧೆಡೆ ಬುಧವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಲ್ಲದೆ ಕಂಗೆಟ್ಟಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಬೆಂಗಳೂರಿನ ಹಲವೆಡೆ ದಿಢೀರನೆ ಸುರಿದ ಮಳೆಯಿಂದ (Rain News) ರಸ್ತೆಗಳು ಜಲಾವೃತವಾಗಿ ಹೊಳೆಯಂತಾಗಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.

ಬೆಂಗಳೂರಲ್ಲಿ ಮಳೆ ಆರ್ಭಟ; ಸಿಟಿಯಲ್ಲಿ ಕೂಲ್ ವೆದರ್

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಭಾರಿ ಸುರಿಯುತ್ತಿದೆ. ಇನ್ನು ನಗರದಲ್ಲಿ ಬುಧವಾರ ಸಂಜೆಯಿಂದ ಹಲವೆಡೆ ಮಳೆ ಅರ್ಭಟ ಶುರು ಆಗಿದ್ದು, ಶಿವಾಜಿನಗರ, ವಸಂತನಗರ, ಶಾಂತಿನಗರ, ಜಯ ನಗರ, ವಿಜಯ ನಗರ, ಮಲ್ಲೇಶ್ವರಂ, ಶಿವಾನಂದ ಸರ್ಕಲ್, ಯಶವಂತಪುರ, ರಾಜಾಜಿ ನಗರ, ಶೇಷಾದ್ರಿಪುರಂ, ಎಂ.ಜಿ ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವೆಡೆ ಭರ್ಜರಿ ಮಳೆಯ ಜೊತೆಗೆ ಗುಡುಗು-ಮಿಂಚು ಸಹ ಕಂಡು ಬಂದಿದೆ. ಬೇಸಿಗೆಯಲ್ಲಿ ಭಾರಿ ಮಳೆಯಿಂದ ರಾಜಧಾನಿಯ ವಾತಾವರಣ ತಂಪಾಗಿದ್ದರಿಂದ ಜನರು ಸಂತಸಪಡುತ್ತಿದ್ದಾರೆ.

ಮರ ಬಿದ್ದು 2 ಕಾರು ಜಖಂ

ಕೂಡ್ಲು ಗೇಟ್, ರೂಪೇನ ಅಗ್ರಹಾರದ ಬಳಿ ಮಳೆಯಿಂದ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದದ್ದು ಕಂಡುಬಂತು. ಇನ್ನು ಮಡಿವಾಳ ಸುತ್ತ ಮುತ್ತಲೂ ಭಾರಿ ಮಳೆಗಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಉಲ್ಲಾಳ ಹತ್ತಿರದ ಜ್ಞಾನಜ್ಯೋತಿ ನಗರದಲ್ಲಿ ಮರ ಬಿದ್ದಿದ್ದರಿಂದ ಮನೆ ಮುಂದೆ ನಿಲ್ಲಿಸಿದ್ದ 2 ಕಾರು ಜಖಂಗೊಂಡಿದೆ.

ಎಲೆಕ್ಟ್ರಾನಿಕ್ ಸಿಟಿ ಸಮೀಪ ಹೆದ್ದಾರಿ ಜಲಾವೃತ

ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರ ಸಿಗ್ನಲ್ ಬಳಿ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದ್ದರಿಂದ ಸವಾರರು ಪರದಾಡಿದರು. ಪ್ರತಿ ಬಾರಿ ಮಳೆ ಬಂದಾಗ ರಾಷ್ಟ್ರೀಯ ಹೆದ್ದಾರಿ ಹೊಳೆಯಂತಾಗುತ್ತದೆ. ಮಳೆ ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಮಾಡದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ | Karnataka Weather : ಬಿರುಗಾಳಿಯೊಂದಿಗೆ ಗುಡುಗು, ಮಿಂಚು ಸಹಿತ ಭಾರಿ ಮಳೆ ಎಚ್ಚರಿಕೆ

ಕೊಡಗು, ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ

ಕೊಡಗು ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ ಸುರಿದಿದ್ದು, ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮೂಡಿಗೆರೆ ಪಟ್ಟಣದಲ್ಲಿ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮೂಡಿಗೆರೆ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು.

ಇನ್ನು ಚಿಕ್ಕಬಳ್ಳಾಪುರದಲ್ಲಿ ಬಿಸಿಲಿಗೆ ನೀರಿಲ್ಲದೆ ಒಣಗುತಿದ್ದ ಬೆಳೆಗಳಿಗೆ ವರುಣ ತಂಪೆರೆದಿದ್ದಾನೆ. ರಣಬಿಸಿಲಿಗೆ ಕೃಷಿ ಚಟುವಟಿಕೆಗಳಿಂದ ಕಂಗೆಟ್ಟಿದ್ದ ಅನ್ನದಾತ, ಕೊನೆಗೂ ಒಂದಷ್ಟು ಮಳೆ ಬಂತಲ್ಲಾ ಎಂದು ನಿಟ್ಟುಸಿರು ಬಿಟ್ಟಿದ್ದಾನೆ.

ಕೆಜಿಎಫ್‌ನಲ್ಲಿ ಮನೆಗಳಿಗೆ ನುಗ್ಗಿದ ನೀರು

ಕೋಲಾರ: ಜಿಲ್ಲೆಯ ವಿವಿಧೆಡೆ ಬೆಳ್ಳಂ ಬೆಳಗ್ಗೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದ್ದರಿಂದ ಮಾವು ಹಾಗೂ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಇನ್ನು ಕೆಜಿಎಫ್ ನಗರದ ಹಲವು ಬಡಾವಣೆಗಳ ತಗ್ಗು ಪ್ರದೇಶ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುತ್ತಿದ್ದಾರೆ. ಕೆಜಿಎಫ್‌ನ ರಾಬರ್ಟ್‌ಸನ್ ಪೇಟೆ, ಮಾರಿಕುಪ್ಪಮ್, ಫಿಶ್ ಲೈನ್ ಬಡಾವಣೆಗಳಲ್ಲಿ ಮನೆಗಳಿಗೆ ಮಳೆನೀರು ನುಗ್ಗಿದ್ದ ಮನೆಯಲ್ಲಿನ ವಸ್ತುಗಳು ನೀರುಪಾಲಾಗಿವೆ. ಇದರಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಮರ ಬಿದ್ದು ವ್ಯಕ್ತಿ ಸಾವು

ರಾತ್ರಿ ಸುರಿದ ಭಾರಿ ಮಳೆಗೆ ಮರ ಉರುಳಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ಸಮೀಪದ ಅಂತೇವನಪಲ್ಲಿಯಲ್ಲಿ ನಡೆದಿದೆ. ಬೆಳಗ್ಗೆ 8 ಗಂಟೆ ವೇಳೆಗೆ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರ ಮೇಲೆ ಮರದ ಬೇರು ಬಿದ್ದು ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಚಿಕಿತ್ಸೆಗಾಗಿ ಡೆಂಕಣಿಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | Heavy Rain: ಕಳುವರಹಳ್ಳಿಯಲ್ಲಿ ಭಾರೀ ಗಾಳಿ ಮಳೆಗೆ ಶಾಲಾ ಚಾವಣಿ ಕುಸಿತ

ಇನ್ನು ಮುಂದಿನ ಮೂರು ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ, ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಮೇ 10ರಂದು ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಸಹ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದ್ದು, ನಗರದಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗುವ ಮುನ್ಸೂಚನೆ ಇದೆ.

Continue Reading
Advertisement
Virat Kohli
ಕ್ರೀಡೆ3 mins ago

Virat Kohli: ಪಂಜಾಬಿ ಮಾತನಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Poonch Terrorists
ದೇಶ6 mins ago

Poonch Terrorists: ಪೂಂಚ್‌ನಲ್ಲಿ ಸೇನೆ ಮೇಲೆ ದಾಳಿ ಮಾಡಿದ 3 ಉಗ್ರರ ಫೋಟೊ ರಿಲೀಸ್; ಹತ್ಯೆಗೆ ಪ್ಲಾನ್!

Prajwal Revanna Case
ಕರ್ನಾಟಕ11 mins ago

Prajwal Revanna Case: ಎಸ್‌ಐಟಿ ಮೇಲೆ ಕೇಸ್‌ ಹಾಕ್ತೇನೆ, ಶೀಘ್ರವೇ ಪೆನ್‌ಡ್ರೈವ್‌ ಪ್ರೊಡ್ಯುಸರ್‌ ಹೆಸರು ಹೇಳ್ತೇನೆ ಎಂದ ದೇವರಾಜೇಗೌಡ

Lok Sabha Election 2024 Pralhada Joshi who came out of the election frenzy
ಹುಬ್ಬಳ್ಳಿ26 mins ago

Lok Sabha Election 2024: ಅಬ್ಬಾ! ಅಂತೂ ಮುಗೀತು ಪುಟ್ಟಾ ಮಹಾಯುದ್ಧ ಎಂದ ಪ್ರಲ್ಹಾದ್‌ ಜೋಶಿ!

Dogs Attack
ದೇಶ37 mins ago

Dogs Attack: ನಾಯಿಗಳು ದಾಳಿ ಮಾಡಲು ಬಂದರೆ ಏನು ಮಾಡಬೇಕು? ಹೇಗೆ ರಕ್ಷಿಸಿಕೊಳ್ಳಬೇಕು?

Covishield
ದೇಶ47 mins ago

Covishield: ಭಾರತದಲ್ಲಿ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ನ ಎಲ್ಲ ಮಾಹಿತಿ ಬಹಿರಂಗ ಎಂದ ಕಂಪನಿ, ಉತ್ಪಾದನೆಯೂ ಸ್ಥಗಿತ!

RCB vs PBKS
ಕ್ರೀಡೆ1 hour ago

RCB vs PBKS: ಪಂಜಾಬ್​-ಆರ್​ಸಿಬಿ ಸೆಣಸಾಟ; ಸೋತವರು ಟೂರ್ನಿಯಿಂದ ಔಟ್​

Prajwal Revanna Case JDS delegation moves Womens Commission to arrest pen drive allottees
ಕ್ರೈಂ1 hour ago

Prajwal Revanna Case: ಪೆನ್‌ಡ್ರೈವ್ ಹಂಚಿಕೆದಾರರ ಬಂಧಿಸಿ; ಸಿಎಂ, ಡಿಸಿಎಂ ವಿರುದ್ಧ ಮಹಿಳಾ ಜೆಡಿಎಸ್‌ ಗರಂ!

Zomato
ದೇಶ1 hour ago

Zomato: ಜೊಮ್ಯಾಟೊ ಹೊಸ ತಂತ್ರಜ್ಞಾನ; ಮನೆ ಹೊರಗೆ ಕಾಲಿಡುವ ಮುನ್ನ ಇದನ್ನು ನೋಡಲೇಬೇಕು!

Hindu population
ದೇಶ1 hour ago

Hindu Population: ಹಿಂದೂಗಳ ಜನಸಂಖ್ಯೆ ಶೇ.7.8 ಕುಸಿತ; ಮುಸ್ಲಿಮರ ಸಂಖ್ಯೆ ಶೇ.43.15 ಏರಿಕೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ16 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ1 day ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ1 day ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 day ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌