elephant calf which sent to dubare after it refused to go with mother dead dead Elephant calf dead: ಕೆರೆಗೆ ಬಿದ್ದ ಬಳಿಕ ತಾಯಿ ಜತೆ ಹೋಗದೆ ದುಬಾರೆ ಸೇರಿದ್ದ ಆನೆ ಮರಿ ಮೃತ್ಯು - Vistara News

ಕರ್ನಾಟಕ

Elephant calf dead: ಕೆರೆಗೆ ಬಿದ್ದ ಬಳಿಕ ತಾಯಿ ಜತೆ ಹೋಗದೆ ದುಬಾರೆ ಸೇರಿದ್ದ ಆನೆ ಮರಿ ಮೃತ್ಯು

ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ನಾಲ್ಕು ಆನೆ ಮತ್ತು ಮರಿಗಳು ಕೆರೆಗೆ ಬಿದ್ದಿದ್ದವು. ಮೂರು ಆನೆಗಳು ಮೇಲೆ ಬಂದರೆ ಒಂದು ಮರಿ ಅಲ್ಲೇ ಸಿಕ್ಕಿಬಿದ್ದಿತ್ತು. ಅದನ್ನು ಸಾರ್ವಜನಿಕರು ಮೇಲೆತ್ತಿ ಹಿಂಡಿನ ಜತೆ ಸೇರಿಸಲು ಯತ್ನಿಸಿದರೂ ಅದರು ಹೋಗಲೇ ಇಲ್ಲ. ಬಳಿಕ ಅದನ್ನು ದುಬಾರೆ ಆನೆ ಶಿಬಿರಕ್ಕೆ ಸೇರಿಸಲಾಗಿತ್ತು. ಆದರೆ ಅದು ಅಲ್ಲಿ ಮೃತಪಟ್ಟಿದೆ.

VISTARANEWS.COM


on

Elephant calf
ಅಜ್ಜಾವರದಲ್ಲಿ ಕೆರೆಗೆ ಬಿದ್ದು ರಕ್ಷಿಸಲ್ಪಟ್ಟ ವೇಳೆ ಆನೆಮರಿ ಹೀಗಿತ್ತು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸುಳ್ಯ: ಏಪ್ರಿಲ್‌ 13ರಂದು ಸುಳ್ಯದ ಅಜ್ಜಾವರದಲ್ಲಿ ಸನತ್ ರೈ ಎಂಬವರ ತೋಟದ ಕೆರೆಯಲ್ಲಿ ಸಿಲುಕಿ ಬಳಿಕ ರಕ್ಷಿಸಲ್ಪಟ್ಟು, ನಂತರ ಹಿಂಡಿನ ಜತೆ ಹೋಗಲೊಪ್ಪದೆ ದುಬಾರೆ ಆನೆ ಶಿಬಿರ ಸೇರಿದ್ದ ಆನೆ ಮರಿ ಅಲ್ಲಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

Elephant survived
ಕೆರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಆನೆಗಳು

ಆವತ್ತು ಆಹಾರ ಹುಡುಕುತ್ತಾ ಬಂದ ಎರಡು ದೊಡ್ಡ ಕಾಡಾನೆಗಳು ಮತ್ತು ಎರಡು ಮರಿ ಆನೆಗಳು ಆಕಸ್ಮಿಕವಾಗಿ ತೋಟದ ಕೆರೆಗೆ ಬಿದ್ದಿದ್ದವು. ಇದರಲ್ಲಿ ಎರಡು ದೊಡ್ಡ ಕಾಡಾನೆಗಳು ಮತ್ತು ಒಂದು ಮರಿಯಾನೆ ಕಷ್ಟಪಟ್ಟು ಕೆರೆಯಿಂದ ಮೇಲೆ ಬಂದಿದೆ. ಆದರೆ, ಸಂಪೂರ್ಣ ಸುಸ್ತಾಗಿದ್ದ ಸುಮಾರು ಮೂರು ತಿಂಗಳ ಒಂದು ಗಂಡು ಮರಿಯಾನೆಯೊಂದು ಮೇಲೆ ಬರಲಾಗದೆ ಕುಸಿದು ಬೀಳುತ್ತಿತ್ತು. ಈ ಮರಿಯನ್ನು ಅರಣ್ಯ ಇಲಾಖೆಯವರು ಹಾಗೂ ಸ್ಥಳೀಯರು ಸೇರಿ ಕೆರೆಗಿಳಿದು ಮೇಲಕ್ಕೆ ದೂಡಿ ಹತ್ತಿಸಿದ್ದರು.

ಆನೆ ಮರಿಯನ್ನು ದುಬಾರೆಗೆ ಒಯ್ಯುತ್ತಿರುವುದು.

ಆದರೆ, ಈ ಆನೆಯನ್ನು ಹೇಗೆ ಹೇಗೆ ಹಿಂಡು ಸೇರಿಸಲು ಯತ್ನಿಸಿದರೂ ಅದು ಹಿಂದೆಯೇ ಬರುತ್ತಿತ್ತು. ಎರಡು ದಿನ ನೋಡಿದ ಹಿರಿಯಾನೆಗಳು ಕೂಡಾ ಈಗ ಕೇರಳದ ಕಡೆ ತಮ್ಮ ದಾರಿ ಹಿಡಿದಿವೆ. ಕೆಲವು ದಿನಗಳ ಕಾಲ ಆಹಾರ ನೀಡಿ ರಕ್ಷಣೆ ಮಾಡಿ ತಾಯಿ ಆನೆ ಮರಳಿ ಬರುತ್ತದೆಯಾ ಎಂದು ಕಾದು ನೋಡಲಾಯಿತು. ಆದರೆ, ಬಾರದೆ ಇದ್ದಾಗ ಏಪ್ರಿಲ್‌ 16ರಂದು ದುಬಾರೆ ಆನೆ ಶಿಬಿರಕ್ಕೆ ಒಯ್ಯಲಾಗಿತ್ತು.

ಶಿಬಿರದಲ್ಲಿ ಈ ಆನೆ ಮರಿ ಆರಾಮವಾಗಿಯೇ ಇತ್ತು ಎನ್ನಲಾಗಿದೆ. ಇತರ ಆನೆ ಮರಿಗಳ ಜತೆ ಆಟವಾಡುತ್ತಿತ್ತು ಎನ್ನಲಾಗಿದೆ. ಆದರೆ, ವಾರದ ಹಿಂದೆ ಏಕಾಕಿಯಾಗಿ ಮರಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ; ಬೆಂಗಳೂರಿಗೆ ಬರುತ್ತಿದ್ದ ಇಬ್ಬರು ಬಲಿ

ಕೋಲಾರ: ಬೆಳ್ಳಂಬೆಳಿಗ್ಗೆ ಕಾಡಾನೆಗಳು ನಡೆಸಿದ ದಾಳಿಗೆ ಇಬ್ಬರು ಬಲಿಯಾಗಿದ್ದು, (Elephant attack) ನಾಲ್ವರಿಗೆ ಗಾಯಗಳಾಗಿವೆ. ಆಂಧ್ರಪ್ರದೇಶದ ಕುಪ್ಪಂ ಮಂಡಲಂನ ಮಲ್ಲನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಬೆಂಗಳೂರಿಗೆ ಕೆಲಸಕ್ಕೆಂದು ಬರುತ್ತಿದ್ದವರ ಮೇಲೆ ಈ ದಾಳಿ ನಡೆದಿದೆ. ಮೃತರನ್ನು ಉಷಾ (36) ಮತ್ತು ಶಿವಲಿಂಗಂ ಎಂದು ಗುರುತಿಸಲಾಗಿದೆ.

ಕುಪ್ಪಂ ಮಂಡಲಂನ ಮಲ್ಲನೂರು ಗ್ರಾಮದಿಂದ (Mallanur village) ಬೆಂಗಳೂರಿಗೆ ಕೆಲಸಕ್ಕೆ ಬರುತ್ತಿದ್ದ ಆರು ಮಂದಿ ರೈಲು ಹಿಡಿಯಲೆಂದು ಗ್ರಾಮದಿಂದ ಮಲ್ಲನೂರು ರೈಲ್ವೆ ನಿಲ್ದಾಣದ ಕಡೆಗೆ ಸಾಗಿ ಬರುತ್ತಿದ್ದರು. ಇವರು ಬೆಂಗಳೂರಿಗೆ ನಿತ್ಯ ಬಂದು ಹೋಗುವ ಕಾರ್ಮಿಕರಾಗಿದ್ದಾರೆ.

Elephant attack in Mallanuru
ದಾಳಿ ಮಾಡಿದ ಆನೆಗಳು

ಎಂದಿನಂತೆ ಶುಕ್ರವಾರ ಬೆಳಗ್ಗೆ ಗ್ರಾಮದಿಂದ ಕಾಲು ನಡಿಗೆಯಲ್ಲಿ ಸಾಗುತ್ತಿದ್ದಾಗ ಕಾಡಾನೆಗಳು ದಿಢೀರ್‌ ದಾಳಿ ಮಾಡಿವೆ. ಒಮ್ಮಿಂದೊಮ್ಮೆಗೆ ಇವರ ಕಡೆ ಧಾವಿಸಿ ದಾಳಿ ಮಾಡಿದವು. ದಾಳಿಯಿಂದ ಒಬ್ಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರು. ಮೃತ ಮಹಿಳೆ ಉಷಾ ಅವರು ಮಲ್ಲನೂರು ಪರಿಸರದವರೇ ಆಗಿದ್ದು, ಶಿವಲಿಂಗಂ ಕೂಡಾ ಅಲ್ಲೇ ಸಮೀಪದ ಸಪ್ಪನಿಕುಂಟಾದವರು.

ಇನ್ನೂ ಇಬ್ಬರಿಗೆ ಗಂಭೀರವಾದ ಗಾಯವಾಗಿದ್ದು, ಕುಪ್ಪಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಡಾನೆಗಳ ದಾಳಿಯಿಂದ ಮಲ್ಲನೂರು, ಸುತ್ತಮುತ್ತಲಿನ ಜನರಲ್ಲಿ ಭಯ ಭೀತಿ ಆವರಿಸಿದೆ.

ಇದನ್ನೂ ಓದಿ: Elephant attack: ಸಕಲೇಶಪುರದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ಲಗ್ಗೆ; ಕಾಫಿ ತೋಟದ ಗೇಟ್‌ ಮುರಿದು, ಬೆಳೆ ಹಾನಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Justice KS Hegde: ಜಸ್ಟೀಸ್‌ ಕೆ.ಎಸ್.ಹೆಗ್ಡೆ ಜೀವನ, ಕೊಡುಗೆ ಕುರಿತು ಚಂದನ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮ

ಜಸ್ಟೀಸ್‌ ಕೆ.ಎಸ್.ಹೆಗ್ಡೆ (Justice KS Hegde) ಅವರ 115ನೇ ಜನ್ಮದಿನಾಚರಣೆ ಅಂಗವಾಗಿ ಅವರ ಜೀವನ ಹಾಗೂ ಕೊಡುಗೆಗಳ ಕುರಿತು “ಪ್ರಾತಸ್ಮರಣೀಯ ಜಸ್ಟೀಸ್‌ ಕೆ.ಎಸ್‌. ಹೆಗ್ಡೆ” ಶೀರ್ಷಿಕೆಯಡಿಯಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ಜುಲೈ 28 ರಿಂದ ಸೆಪ್ಟೆಂಬರ್‌ 29 ರವರೆಗೆ ಪ್ರತಿ ಭಾನುವಾರ ಸಂಜೆ 5.30ರಿಂದ 6 ಗಂಟೆಯವರೆಗೆ ವಿಶೇಷ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Justice KS Hegde
Koo

ಬೆಂಗಳೂರು: ಜಸ್ಟೀಸ್‌ ಕೆ.ಎಸ್. ಹೆಗ್ಡೆ (Justice KS Hegde) ಅವರ 115ನೇ ಜನ್ಮದಿನಾಚರಣೆ ಅಂಗವಾಗಿ ಅವರ ಜೀವನ ಹಾಗೂ ಕೊಡುಗೆಗಳ ಕುರಿತು “ಪ್ರಾತಸ್ಮರಣೀಯ ಜಸ್ಟೀಸ್‌ ಕೆ.ಎಸ್‌. ಹೆಗ್ಡೆ” ಶೀರ್ಷಿಕೆಯಡಿಯಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ಜುಲೈ 28ರಿಂದ ಸೆಪ್ಟೆಂಬರ್‌ 29ರವರೆಗೆ ಪ್ರತಿ ಭಾನುವಾರ ಸಂಜೆ 5.30ರಿಂದ 6 ಗಂಟೆಯವರೆಗೆ ವಿಶೇಷ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: PM Narendra Modi : ಆಗಸ್ಟ್​ 23ರಂದು ಉಕ್ರೇನ್​ ಪ್ರವಾಸಕ್ಕೆ ತೆರಳಲಿದ್ದಾರೆ ಪ್ರಧಾನಿ ಮೋದಿ

ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರ ತಂದೆಯವರಾದ ನ್ಯಾಯಮೂರ್ತಿ ಕೌಡೂರು ಸದಾನಂದ ಹೆಗ್ಡೆ ಅವರ ಜೀವನ ನಡೆದು ಬಂದ ದಾರಿ ಹಾಗೂ ರಾಷ್ಟ್ರಕ್ಕೆ ನೀಡಿದ ಅಪಾರ ಕೊಡುಗೆ, ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿದ ಕುರಿತು ಹಾಗೂ ನ್ಯಾಯಮೂರ್ತಿಯಾಗಿ, ಲೋಕಸಭಾ ಸ್ಪೀಕರ್‌ ಆಗಿ, ಶಿಕ್ಷಣ ಸಂಸ್ಥೆ ಆರಂಭಿಸಿ, ಗ್ರಾಮೀಣರಿಗೂ ಉನ್ನತ ಶಿಕ್ಷಣ ದೊರಕುವಂತೆ ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿಯೇ ಮುಡುಪಾಗಿಟ್ಟು ಎಲೆಮರೆಯ ಕಾಯಿಯಂತೆ ಆದರ್ಶ ಜೀವನ ನಡೆಸಿದ ಜಸ್ಟೀಸ್‌ ಕೆ.ಎಸ್.ಹೆಗ್ಡೆ ಅವರ 115ನೇ ಜನ್ಮದಿನಾಚರಣೆ ಅಂಗವಾಗಿ ಅವರ ಜೀವನ ಹಾಗೂ ಕೊಡುಗೆಗಳ ಕುರಿತು ಸರಣಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: Uttara Kannada News: ಪಿಎಂ ಸ್ವ-ನಿಧಿ ಯೋಜನೆ; ಕಾರವಾರ ನಗರಸಭೆಗೆ ರಾಜ್ಯ ಮಟ್ಟದ ಪ್ರಶಸ್ತಿಯ ಗರಿ

ಕಾರ್ಯಕ್ರಮದಲ್ಲಿ ಮಾಜಿ ಉಪಪ್ರಧಾನಿ ಎಲ್‌.ಕೆ.ಅಡ್ವಾಣಿ, ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಚಾನ್ಸಲರ್‌ ಎನ್‌.ವಿನಯ್‌ ಹೆಗ್ಡೆ, ಕ್ಯಾಪ್ಟನ್‌ ಪ್ರಸನ್ನ, ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಆಳ್ವಾಸ್‌ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋಹನ್‌ ಆಳ್ವಾ, ಮಾಜಿ ಸಚಿವ ರಾಮಚಂದ್ರೇಗೌಡ ಹಾಗೂ ಹಿರಿಯ ವಕೀಲರು, ಗಣ್ಯರು ಜಸ್ಟೀಸ್‌ ಕೆ.ಎಸ್.ಹೆಗ್ಡೆ ಅವರ ಕುರಿತು ಸಂದೇಶ, ಸದಭಿಪ್ರಾಯಗಳನ್ನು ವ್ಯಕ್ತಪಡಿಸಿರುತ್ತಾರೆ ಎಂದು ಕಾರ್ಯಕ್ರಮದ ನಿರ್ದೇಶಕ ಹಾಗೂ ನಿರ್ಮಾಪಕ ದೀಪಕ್‌ ಆರ್‌. ಸಾಗರ್‌, ಹುಲಿದೇವರಬನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Zika virus : ಮಾರಕ ಜೀಕಾ ವೈರಸ್​ಗೆ ಕರ್ನಾಟಕದಲ್ಲಿ ಮೊದಲ ಬಲಿ; ಶಿವಮೊಗ್ಗದ ವ್ಯಕ್ತಿ ಸಾವು

Zika virus : ರಾಜ್ಯದಲ್ಲಿ ಇದುವರೆಗೂ ಒಟ್ಟು 9 ಜೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಶಿವಮೊಗ್ಗದಲ್ಲಿ 3, ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ 6 ಜನರಿಗೆ ಜೀಕಾ ವೈರಸ್​ ಸೋಂಕು ಕಂಡು ಬಂದಿದೆ. ಬೆಂಗಳೂರಿನಲ್ಲಿ ಜೀಕಾ ವೈರಸ್​ ಪತ್ತೆಯಾದವರಲ್ಲಿ ಒಬ್ಬರು ಗರ್ಭಿಣೀ ಎಂದು ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

VISTARANEWS.COM


on

Zika virus
Koo

ಬೆಂಗಳೂರು : ಅಪಾಯಕಾರಿ ಜೀಕಾ ವೈರಸ್​ಗೆ (Zika virus ) ಕರ್ನಾಟದಲ್ಲಿ ಮೊದಲ ಬಲಿಯಾಗಿದೆ. ಜೀಕಾ ವೈರಸ್​ ಸೋಂಕಿನಿಂದ ಬಳಸುತ್ತಿದ್ದ ವ್ಯಕ್ತಿಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. 73 ವರ್ಷದ ವ್ಯಕ್ತಿ ಮೃತಪಟ್ಟವರು ಎಂದು ಮೂಲಗಳು ತಿಳಿಸಿವೆ. ಅವರಿಗೆ ಕೆಲವು ದಿನಗಳಿಂದ ಜೀಕಾ ವೈರಸ್​ನಿಂದ ಆಗುವ ಸೋಂಕು ಇತ್ತು. ಜತೆಗೆ ಅವರಿಗೆ ಕೋಮಾರ್ಬಿಟಿಸ್ ಕೂಡ ಇತ್ತು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಇದುವರೆಗೂ ಒಟ್ಟು 9 ಜೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಶಿವಮೊಗ್ಗದಲ್ಲಿ 3, ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ 6 ಜನರಿಗೆ ಜೀಕಾ ವೈರಸ್​ ಸೋಂಕು ಕಂಡು ಬಂದಿದೆ. ಬೆಂಗಳೂರಿನಲ್ಲಿ ಜೀಕಾ ವೈರಸ್​ ಪತ್ತೆಯಾದವರಲ್ಲಿ ಒಬ್ಬರು ಗರ್ಭಿಣೀ ಎಂದು ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: RAI New Rules: ನಿಮಗೆ ಗೊತ್ತಿರಲಿ; ಸೆ.1ರಿಂದ ಈ ಸಿಮ್ ಕಾರ್ಡ್‌ಗಳು ಕಪ್ಪು ಪಟ್ಟಿಗೆ!

ವೈರಸ್ ಗೆ ತುತ್ತಾದ ಗರ್ಭಿಣಿಯ ಆರೈಕೆಗೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗರ್ಭಿಣಿಯರ ಸಂಪರ್ಕಕ್ಕೆ ಬಂದವರ ತಪಾಸಣೆ ನಡೆಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ಇದೇ ವೇಳೆ ಆರೋಗ್ಯ ವೈರಸ್ ಕಾಣಿಸಿಕೊಂಡ ರೋಗಿಗಳ ವಿವರವನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಜಿಗಣಿಯಲ್ಲಿ ಝೀಕಾ ವೈರಸ್ ಕಂಡುಬಂದ ಗರ್ಭಿಣಿಗೆ ಹೆರಿಗೆಯಾಗಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ. ಇನ್ನುಳಿದ ನಾಲ್ವರಿಗೆ ಮುಂದುವರೆದ ಚಿಕಿತ್ಸೆ ಮುಂದುವರಿದಿದೆ.

Continue Reading

ಕರ್ನಾಟಕ

Chetan Ahimsa: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಟ ಚೇತನ್ ಆಗ್ರಹ; ಆ.28ಕ್ಕೆ ಕಾಂಗ್ರೆಸ್ ಹಠಾವೋ, ದಲಿತ ಬಚಾವೋ ಹೋರಾಟ

Actor Chetan Ahimsa: ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ದುರ್ಬಳಕೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಆದಿವಾಸಿ ವಿರೋಧಿ, ದಲಿತ ವಿರೋಧಿ ಧೋರಣೆ ಗಟ್ಟಿಗೊಳಿಸುತ್ತಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಟ ಚೇತನ್ ಒತ್ತಾಯಿಸಿದ್ದಾರೆ.

VISTARANEWS.COM


on

Actor Chetan Ahimsa
Koo

ಚಿಕ್ಕಬಳ್ಳಾಪುರ: ದಲಿತರು, ಶೋಷಿತರಿಗೆ ನ್ಯಾಯ ಒದಗಿಸುತ್ತೇವೆ ಎಂದು ಬಣ್ಣದ ಬಣ್ಣದ ಮಾತುಗಳನ್ನಾಡುತ್ತಾರೆ. ನಾನು ಬಸವ ಅನುಯಾಯಿ, ಅಂಬೇಡ್ಕರ್ ವಾದಿ ಎನ್ನುತ್ತಾರೆ. ಸಿದ್ದರಾಮಯ್ಯ ಟೋಕನಿಸಂ ರೀತಿ ಸಾಂಕೇತಿಕವಾಗಿ ಮಾತನಾಡುತ್ತಾರೆ. ಆದರೆ ಅಂಬೇಡ್ಕರ್, ಬಸವಣ್ಣನವರ ತತ್ವದ ವಿರುದ್ಧವಾಗಿದ್ದಾರೆ. ಮಾಡಬೇಕಾದುದನ್ನೆಲ್ಲ ಮಾಡುತ್ತಿಲ್ಲ, ಮಾಡಬಾರದ್ದನ್ನು ಮಾಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ನಟ ಚೇತನ್ ಅಹಿಂಸಾ (Actor Chetan Ahimsa) ಆಗ್ರಹಿಸಿದ್ದಾರೆ.

ಕರ್ನಾಟಕ ಅಹಿಂದ ಸಂಘಟನೆಯ ಒಕ್ಕೂಟದಿಂದ ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಹಾಗೂ ಆದಿವಾಸಿಗಳ 25 ಸಾವಿರ ಕೋಟಿ ಹಣಕ್ಕೆ ತೇಪೆ ಹಚ್ಚುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ದುರ್ಬಳಕೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇನ್ನು ಆದಿವಾಸಿ ವಿರೋಧಿ, ದಲಿತ ವಿರೋಧಿ ಧೋರಣೆ ಗಟ್ಟಿಗೊಳಿಸುತ್ತಿದ್ದಾರೆ. ಹೀಗಾಗಿ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಇದೇ ವಿಚಾರದಲ್ಲಿ ಖಂಡಿಸಿದ್ದೇನೆ, ಜೈಲಿಗೂ ಹೋಗಿಬಂದಿದ್ದೇನೆ. ಬಿಜೆಪಿಯ ಕೋಮುವಾದವನ್ನ ನಾವು ಒಪ್ಪಲ್ಲ. ಅಸಮಾನತೆ ತೋರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಪಕ್ಷಗಳನ್ನು ವಿರೋಧಿಸುತ್ತೇನೆ. ಯಾರು ಉತ್ತಮ ಆಡಳಿತ ಕೊಡುತ್ತಾರೋ ಅವರಿಗೆ ಬೆಂಬಲ ಕೊಡುತ್ತೇನೆ. ನಟ ಚೇತನ್ ಹೇಳಿಕೆ..

ಇದನ್ನೂ ಓದಿ | CLP Meeting: ಆ.22ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ

ಬೇರೆಯವರಿಗೆ ಅವಕಾಶ ನೀಡಲಿ

ಸಿಎಂ ಸಿದ್ದರಾಮಯ್ಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಚೇತನ್‌ ಅಹಿಂಸಾ ಅವರು, ಕಳೆದ ಒಂದು ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಜನರನ್ನು ವಿಫಲಗೊಳಿಸಿದ್ದಾರೆ.
ಬಡವರು, ದಲಿತರು, ಆದಿವಾಸಿಗಳು, ರೈತರು, ಕನ್ನಡ ಹಕ್ಕುಗಳು, ಭ್ರಷ್ಟಾಚಾರ ವಿರೋಧಿ ಮತ್ತು ಇನ್ನೂ ಹೆಚ್ಚಿನವರಿಗೆ ನೋವುಂಟು ಮಾಡುವ ನೀತಿಗಳನ್ನು ಸಕ್ರಿಯವಾಗಿ ತರುವ ಮೂಲಕ ಅವರು ಈಗಾಗಲೇ ಅನ್ಯಾಯದ ವ್ಯವಸ್ಥೆಯನ್ನು ಹೆಚ್ಚು ಅನ್ಯಾಯದಂತೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ 6 + ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದ್ದಾರೆ. ಅವರು ರಾಜೀನಾಮೆ ನೀಡಲಿ ಮತ್ತು ಬೇರೆಯವರಿಗೆ ಅವಕಾಶ ನೀಡಲಿ ಎಂದು ಒತ್ತಾಯಿಸಿದ್ದಾರೆ.

ಆ.28ರಂದು ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಹಠಾವೋ, ದಲಿತ ಬಚಾವೋ ಹೋರಾಟ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆ.28ರಂದು ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಹಠಾವ್ ದಲಿತ್ ಬಚಾವೋ ಬೃಹತ್ ಪ್ರತಿಭಟನೆಯನ್ನು ಕಾರ್ಯಕ್ರಮ ನಡೆಯಲಿದೆ. ಕಾಂಗ್ರೆಸ್ ಅಳಿಸಿ, ದಲಿತರನ್ನು ಉಳಿಸಿ ಎಂಬ ಘೋಷವಾಕ್ಯದಡಿ ಬೃಹತ್ ಪ್ರತಿಭಟನೆ ಮಾಡುತ್ತಿದ್ದು, ದಲಿತ ವಿರೋಧಿಗಳಾದರೆ, ಕಾಂಗ್ರೆಸ್ ಆಗಲಿ ಬಿಜೆಪಿ ಆಗಲಿ, ಜೆಡಿಎಸ್ ಆಗಲಿ ಅವರನ್ನೂ ವಿರೋಧಿಸುತ್ತೇವೆ. ಎಲ್ಲಾ ಸಮಾನತಾವಾದಿಗಳು ನಮ್ಮೊಂದಿಗೆ ಸೇರಬೇಕು ಎಂದು ನಟ ಚೇತನ್‌ ಹೇಳಿದರು.

Continue Reading

ಕರ್ನಾಟಕ

Uttara Kannada News: ಪಿಎಂ ಸ್ವ-ನಿಧಿ ಯೋಜನೆ; ಕಾರವಾರ ನಗರಸಭೆಗೆ ರಾಜ್ಯ ಮಟ್ಟದ ಪ್ರಶಸ್ತಿಯ ಗರಿ

ಪಿಎಂ ಸ್ವ-ನಿಧಿ ಯೋಜನೆಯಡಿ (Uttara Kannada News) ಉತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಾರವಾರ ನಗರಸಭೆಯು “Best Performing ULB-in Loan performance at State Level” ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Uttara Kannada News
Koo

ಕಾರವಾರ: ಪಿಎಂ ಸ್ವ-ನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಉತ್ತರ ಕನ್ನಡ ಜಿಲ್ಲೆಯ (Uttara Kannada News) ಕಾರವಾರ ನಗರಸಭೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಾರವಾರ ನಗರಸಭೆಯು “Best Performing ULB-in Loan performance at State Level” ಪ್ರಶಸ್ತಿಗೆ ಆಯ್ಕೆಯಾಗಿದೆ.

ಕೇಂದ್ರ ಸರ್ಕಾರದ ವತಿಯಿಂದ ಪಿಎಂ ಸ್ವ-ನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ರಾಜ್ಯಗಳಿಗೆ ನವದೆಹಲಿಯಲ್ಲಿ ಸಮಾರಂಭ ಆಯೋಜಿಸಿ ರಾಷ್ಟ್ರಮಟ್ಟದ Utkrishtata Ki ore Badhte Kadam & Celebreating Achivements, Inspiring Excellence ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಇದನ್ನೂ ಓದಿ: PM Narendra Modi : ಆಗಸ್ಟ್​ 23ರಂದು ಉಕ್ರೇನ್​ ಪ್ರವಾಸಕ್ಕೆ ತೆರಳಲಿದ್ದಾರೆ ಪ್ರಧಾನಿ ಮೋದಿ

ಕರ್ನಾಟಕ ರಾಜ್ಯದಲ್ಲಿ ಪಿಎಂ ಸ್ವ-ನಿಧಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಇದೇ ಆಗಸ್ಟ್ 22 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಇದನ್ನೂ ಓದಿ: Kannada New Movie: ಅಡ್ವೆಂಚರಸ್ ಕಾಮಿಡಿ ಕಾನ್ಸೆಪ್ಟ್‌ನ ʼಫಾರೆಸ್ಟ್ʼ ಚಿತ್ರದ ಟ್ರೈಲರ್ ಸದ್ಯದಲ್ಲೇ ರಿಲೀಸ್‌

ಕಾರವಾರ ನಗರಸಭೆಯಲ್ಲಿ ಈ ಯೋಜನೆಯನ್ನು ಯಶಸ್ವಿಗೊಳಿಸಲು ನಗರಸಭೆಯ ಪೌರಾಯುಕ್ತ ಜಗದೀಶ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ರಜತ್ ಕುಮಾರ ಹಬ್ಬು, ಕೌಶಲ್ಯಾಭಿವೃದ್ಧಿ ಇಲಾಖೆಯ ಮಲ್ಟಿಟಾಸ್ಕಿಂಗ್ ಆಫೀಸರ್ ಸುನೀಲ ವಸಂತ ನಾಯ್ಕ, ಸಮುದಾಯ ಸಂಘಟಕರಾದ ಪ್ರಭಾಕರ ನಾಯ್ಕ ಮತ್ತು ಮೇರಿ ಡಿಸೋಜಾ , ಸಿಆರ್‌ಪಿಗಳಾದ ಗೀತಾ, ನಂದಿನಿ ಶ್ರಮಿಸಿದ್ದರು.

Continue Reading
Advertisement
Justice KS Hegde
ಕರ್ನಾಟಕ5 hours ago

Justice KS Hegde: ಜಸ್ಟೀಸ್‌ ಕೆ.ಎಸ್.ಹೆಗ್ಡೆ ಜೀವನ, ಕೊಡುಗೆ ಕುರಿತು ಚಂದನ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮ

Paris Olympics 2024
ಪ್ರಮುಖ ಸುದ್ದಿ5 hours ago

Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಚೀನಾದ ಅಥ್ಲೀಟ್​ ಈಗ ರೆಸ್ಟೋರೆಂಟ್​​ನಲ್ಲಿ ವೇಟರ್​!

Sudha Murthy'
ಪ್ರಮುಖ ಸುದ್ದಿ5 hours ago

Sudha Murthy : ವಿವಾದ ಸೃಷ್ಟಿಸಿದ ಸುಧಾ ಮೂರ್ತಿಯವರ ‘ರಕ್ಷಾ ಬಂಧನ’ದ ಕತೆ; ಸ್ಪಷ್ಟನೆ ನೀಡಿದ ಸಂಸದೆ

Zika virus
ಪ್ರಮುಖ ಸುದ್ದಿ6 hours ago

Zika virus : ಮಾರಕ ಜೀಕಾ ವೈರಸ್​ಗೆ ಕರ್ನಾಟಕದಲ್ಲಿ ಮೊದಲ ಬಲಿ; ಶಿವಮೊಗ್ಗದ ವ್ಯಕ್ತಿ ಸಾವು

Israel Attack
ವಿದೇಶ6 hours ago

Israel Attack: ರಹಸ್ಯ ತಾಣದಲ್ಲಿದ್ದ ಹಿಜ್ಬುಲ್ಲಾ ಕಮಾಂಡರ್‌ನನ್ನು ಒಂದು ಫೋನ್ ಕಾಲ್‌ ಮೂಲಕ ಕೊಂದು ಮುಗಿಸಿದ ಇಸ್ರೇಲ್!

Celebrities Rakhi Celebration
ಫ್ಯಾಷನ್6 hours ago

Celebrities Rakhi Celebration: ಫೆಸ್ಟಿವ್‌ ಸೀಸನ್‌ ವೇರ್ಸ್‌ನಲ್ಲಿ ಸೆಲೆಬ್ರೆಟಿಗಳ ರಾಖಿ ಸಂಭ್ರಮ

TRAI New Rules
ಗ್ಯಾಜೆಟ್ಸ್6 hours ago

TRAI New Rules: ನಿಮಗೆ ಗೊತ್ತಿರಲಿ; ಸೆ.1ರಿಂದ ಈ ಸಿಮ್ ಕಾರ್ಡ್‌ಗಳು ಕಪ್ಪು ಪಟ್ಟಿಗೆ!

Raksha Bandhan
ಪ್ರಮುಖ ಸುದ್ದಿ6 hours ago

Raksha Bandhan : ಪುಟಾಣಿ ಗೆಳೆಯರೊಂದಿಗೆ ರಕ್ಷಾ ಬಂಧನ ಆಚರಿಸಿಕೊಂಡ ನರೇಂದ್ರ ಮೋದಿ; ಇಲ್ಲಿವೆ ಚಿತ್ರಗಳು

Rayara Aradhane 2024
ಧಾರ್ಮಿಕ6 hours ago

Rayara Aradhane 2024: ನಾಳೆಯಿಂದ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ; ಗುರುಗಳ ಜೀವನ ಹೇಗಿತ್ತು, ಸಂದೇಶ ಏನಾಗಿತ್ತು?

Actor Chetan Ahimsa
ಕರ್ನಾಟಕ6 hours ago

Chetan Ahimsa: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಟ ಚೇತನ್ ಆಗ್ರಹ; ಆ.28ಕ್ಕೆ ಕಾಂಗ್ರೆಸ್ ಹಠಾವೋ, ದಲಿತ ಬಚಾವೋ ಹೋರಾಟ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌