Karnataka Election Results Congress buzz in five constituencies of Ballari Unexpected margin of victory is a surprise for the BJP a surprise for the CongressKarnataka Election Results : ಬಳ್ಳಾರಿಯ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಝೇಂಕಾರ - Vistara News

ಕರ್ನಾಟಕ

Karnataka Election Results : ಬಳ್ಳಾರಿಯ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಝೇಂಕಾರ

Karnataka Election Results: ಬಳ್ಳಾರಿ ಮಟ್ಟಿಗೆ ಕಾಂಗ್ರೆಸ್ ಗೆಲುವು ನಿರೀಕ್ಷಿತವಾಗಿದ್ದರೂ ದೊಡ್ಡ ಅಂತರದ ಗೆಲುವು ಅನಿರೀಕ್ಷಿತ ಎನ್ನುವ ಮಾತಿದೆ. ಐದು ಕ್ಷೇತ್ರದಲ್ಲೂ ಒಂದೇ ಒಂದು ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳದಂತೆ ಕಾಂಗ್ರೆಸ್ ನೋಡಿಕೊಂಡಿರುವುದು ಬಳ್ಳಾರಿ ಕಾಂಗ್ರೆಸ್ ನ ಭದ್ರಕೋಟೆ ಎಂಬುದನ್ನು ಸಾಬೀತು‌ ಪಡಿಸಿಕೊಂಡಿದೆ. ಫಲಿತಾಂಶ ರೆಡ್ಡಿ‌ ಸಹೋದರರು ಮತ್ತು ಶ್ರೀರಾಮುಲು ಪಾಳಯಕ್ಕೆ ದೊಡ್ಡ ಆತಂಕ ಸೃಷ್ಡಿಸಿದೆ.

VISTARANEWS.COM


on

Ballari district Assembly election winning candidates
ಬಳ್ಳಾರಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ವಿಜೇತರಾದ ಅಭ್ಯರ್ಥಿಗಳು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಶಿಧರ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ

ಬಳ್ಳಾರಿ: ಬಳ್ಳಾರಿ ಮಟ್ಟಿಗೆ ಕಾಂಗ್ರೆಸ್ ಗೆಲುವು ನಿರೀಕ್ಷಿತವಾಗಿದ್ದರೂ ದೊಡ್ಡ ಅಂತರದ ಗೆಲುವು ಅನಿರೀಕ್ಷಿತ ಎನ್ನುವ ಮಾತಿದೆ. ಐದು ಕ್ಷೇತ್ರದಲ್ಲೂ ಒಂದೇ ಒಂದು ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳದಂತೆ ಕಾಂಗ್ರೆಸ್ ನೋಡಿಕೊಂಡಿರುವುದು ಬಳ್ಳಾರಿ ಕಾಂಗ್ರೆಸ್ ನ ಭದ್ರಕೋಟೆ ಎಂಬುದನ್ನು ಸಾಬೀತು‌ಪಡಿಸಿಕೊಂಡಿದೆ. ಫಲಿತಾಂಶವು (Karnataka Election Results) ರೆಡ್ಡಿ‌ ಸಹೋದರರು ಮತ್ತು ಶ್ರೀರಾಮುಲು ಪಾಳಯಕ್ಕೆ ದೊಡ್ಡ ಆತಂಕ ಸೃಷ್ಡಿಸಿದೆ.

ಬಳ್ಳಾರಿ ಜಿಲ್ಲೆಯ ಮತದಾರರು ಯಾವುದೇ ಪ್ರಭಾವಕ್ಕೂ ಸೊಪ್ಪುಹಾಕಿಲ್ಲ‌ ಎಂಬುದು ಸಾಬೀತಾಗಿದೆ. ಬಿಜೆಪಿ‌ ಆಡಳಿತ ವಿರೋಧಿ, ಅಭ್ಯರ್ಥಿ ಆಯ್ಕೆಯ ವಿಚಾರ ಮತ್ತು ಕ್ಷೇತ್ರದ ಅಭ್ಯರ್ಥಿಗಳ ವೈಯಕ್ತಿಕ ನಡೆಯು ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ. ಇಂದಿನ ಚುನಾವಣೆಯ ಫಲಿತಾಂಶ ಹಲವು ಕೌತುಕಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: Mudigere Election Results: ನಯನ ಮೋಟಮ್ಮ ಈಗ ಮಿಸ್‌ ಮೂಡಿಗೆರೆ; ದೀಪಕ್‌ಗೆ ಸ್ವಲ್ಪದರಲ್ಲೇ ಮಿಸ್‌

ಮಾವ – ಅಳಿಯ: ಮಾವ – ಸೊಸೆ ಸೋಲು

ಬಳ್ಳಾರಿ ಚುನಾವಣೆಯು ಅಕ್ಷರಶಃ ಒಂದೇ ಕುಟುಂಬದ ಹಲವರ ಸೋಲಿಗೆ ಕಾರಣವಾಗಿದೆ. ಬಳ್ಳಾರಿ ಗ್ರಾಮೀಣದಿಂದ ಮಾವ ಬಿ.ಶ್ರೀರಾಮುಲು ಸೋತರೆ, ಕಂಪ್ಲಿ ಕ್ಷೇತ್ರದಲ್ಲಿ ರಾಮುಲು ಅಳಿಯ ಟಿ.ಎಚ್. ಸುರೇಶ್ ಬಾಬು ಸೋತ್ತಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಯಿಂದ ಮಾವ ಸೋಮಶೇಖರ ರೆಡ್ಡಿ‌ ಸೋತರೆ, ಅದೇ ಕ್ಷೇತ್ರದಲ್ಲಿ ಕೆಆರ್ ಪಿಪಿಯಿಂದ ಸೊಸೆ ಲಕ್ಷ್ಮಿ‌ ಅರುಣಾ ಸೋತ್ತಿದ್ದಾರೆ.

ರೆಡ್ಡಿ ಪಾಳಯಕ್ಕೆ ದೊಡ್ಡ ಅಘಾತ

ಅಕ್ಷರಶಃ ಚುನಾವಣೆ ಫಲಿತಾಂಶ ರೆಡ್ಡಿ‌ ಸಹೋದರರು ಮತ್ತು ಶ್ರೀರಾಮುಲು ಪಾಳೆಯಕ್ಕೆ ದೊಡ್ಡ ಅಘಾತವಾಗಿದೆ. ಒಂದು ಕಾಲಕ್ಕೆ ರೆಡ್ಡಿ ಸಹೋದರರು ಮತ್ತು‌ ಶ್ರೀರಾಮುಲು ಸಚಿವ ಸ್ಥಾನ ಪಡೆದು ರಾಜಕೀಯ ಉತ್ತುಂಗ ಸ್ಥಾನದಲ್ಲಿದ್ದರು. ಆದರೆ ಈ ಚುನಾವಣೆಯಲ್ಲಿ ಮೂವರು ರೆಡ್ಡಿ ಸಹೋದರರಲ್ಲಿ ಇಬ್ಬರು ಸೋತ್ತಿದ್ದಾರೆ. ಹಿರಿಯ ಸಹೋದರ ಕರುಣಾಕರ ರೆಡ್ಡಿ ಹರಪನಹಳ್ಳಿ ಕ್ಷೇತ್ರದಿಂದ ಸೋತ್ತಿದ್ದರೆ, ಎರಡನೇ ಸಹೋದರ ಸೋಮಶೇಖರ ರೆಡ್ಡಿ ಬಳ್ಳಾರಿ ನಗರ ಕ್ಷೇತ್ರದಿಂದ ಸೋತ್ತಿದ್ದಾರೆ. ಕಿರಿಯ ಸಹೋದರ ಜಿ.ಜನಾರ್ದನ ರೆಡ್ಡಿ ಮಾತ್ರ ಗಂಗಾವತಿ ಕ್ಷೇತ್ರದಿಂದ ಕೆಆರ್ ಪಿಪಿಯಿಂದ ಜಯಗಳಿಸಿದ್ದಾರೆ. ಇವರ ಮಧ್ಯದ ಬಿರುಕು ರಾಜಕೀಯ ಅಘಾತಕ್ಕೆ ಕಾರಣವಾದಂತಾಗಿದೆ.

ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಡಬಲ್​ ಎಂಜಿನ್​​ನ ಕೊಂಡಿ ಕಳಚಿದ ‘ಕೈ’

ಫಲಿತಾಂಶದ ಅಘಾತದಿಂದ ಒಂದಾಗ್ತಾರಾ?

ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ಚುನಾವಣೆ ಫಲಿತಾಂಶದ ಅಘಾತದಿಂದ ರೆಡ್ಡಿ ಸಹೋದರರು ಮತ್ತು‌ ಶ್ರೀರಾಮುಲು ಒಂದಾಗ್ತಾರಾ ಎಂಬ ಚರ್ಚೆಯು‌ ಸಾರ್ವಜನಿಕ ವಲಯದಲ್ಲಿ ಮುನ್ನಲೆಗೆ ಬಂದಿದೆ. ಇವೆರಲ್ಲರೂ ಒಟ್ಟಾಗಿಯೇ ಹಲವು ಚುನಾವಣೆ ಎದುರಿಸಿರುವುದು ವಿಜಯಕ್ಕೆ ಕಾರಣವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ತಮ್ಮ ತಮ್ಮ ಪ್ರತಿಷ್ಟೆಗೆ ಮುಂದಾಗಿ ಮುಗ್ಗರಿಸಿದರು ಎಂದು ವಿಶ್ಲೇಷಿಸಲಾಗುತ್ತಿದೆ.

1999ರ ಬಳಿಕ 2023 ರಲ್ಲಿ ಕೈವಶವಾದ ಜಿಲ್ಲೆ

ಜಿಲ್ಲೆಯಲ್ಲಿ ಕಳೆದ 1999ರಲ್ಲಿ ಕುರುಗೋಡು, ಬಳ್ಳಾರಿ, ಸಿರುಗುಪ್ಪ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲುವ ಮೂಲಕ ಗಮನ ಸೆಳೆದಿದ್ದರು. ಇದಾದ ನಂತರ 2004ರಲ್ಲಿ ಜೆಡಿಎಸ್‌ 2, ಬಿಜೆಪಿ 2 ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್‌ ಶೂನ್ಯದತ್ತ ತೆರಳುವಂತಾಗಿತ್ತು. 2008ರ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ 4 ಸ್ಥಾನ ಪಡೆದರೆ, ಕಾಂಗ್ರೆಸ್‌ ಕೇವಲ 1 ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತ್ತು. 2013ರಲ್ಲಿಕಾಂಗ್ರೆಸ್‌ 3 ಸ್ಥಾನಗಳಿಸಿದರೇ, ಬಿಎಸ್‌ಆರ್‌ ಕಾಂಗ್ರೆಸ್‌ 2 ಸ್ಥಾನಗಳಿಸಿತ್ತು. 2014ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸುವ ಮೂಲಕ ಒಟ್ಟಾರೆಯಾಗಿ ಕಾಂಗ್ರೆಸ್‌ 4 ಸ್ಥಾನ, ಬಿಎಸ್‌ಆರ್‌ 1 ಸ್ಥಾನ ಪಡೆದಿತ್ತು. 2018 ರ ಚುನಾವಣೆಯಲ್ಲಿ ಕಾಂಗ್ರೆಸ್‌ 3, ಬಿಜೆಪಿ 2 ಸ್ಥಾನಗಳಿಸಿತ್ತು. ಈಗ 2023ರಲ್ಲಿ1999 ರ ಚುನಾವಣೆಯ ಫಲಿತಾಂಶ ಪುನಃ ಮರುಕಳಿಸಿದೆ.

ಇದನ್ನೂ ಓದಿ: IPL 2023: ಸೂರ್ಯ ಪ್ರತಾಪಕ್ಕೆ ಬಸವಳಿದ ಗುಜರಾತ್​

4ನೇ ಅವಧಿಗೂ ಕೈ ಹಿಡಿದ ಮತದಾರ

ಜಿಲ್ಲೆಯ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಈ ಬಾರಿ ಸತತವಾಗಿ ನಾಲ್ಕನೇ ಅವಧಿಗೂ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸಂಡೂರಿನ ಈ.ತುಕಾರಾಂ, ಬಳ್ಳಾರಿ ಗ್ರಾಮೀಣ ಬಿ.ನಾಗೇಂದ್ರ ಗಮನ ಸೆಳೆದಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಕಳೆದ 2008 ರಿಂದಲೂ ಸತತವಾಗಿ ಶಾಸಕರಾಗಿದ್ದ ಈ.ತುಕಾರಾಂ ಅವರು ಈ ಬಾರಿಯೂ ಗೆಲುವು ಸಾಧಿಸಿದ್ದಾರೆ. ಇನ್ನೂ ನಾಗೇಂದ್ರ ಅವರು ಕೂಡ್ಲಿಗಿ ಕ್ಷೇತ್ರದಲ್ಲಿ 2008 ರಲ್ಲಿ ಬಿಜೆಪಿ, 2013 ರಲ್ಲಿ ಪಕ್ಷೇತರರಾಗಿ ಗೆದ್ದು, 2018 ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬಿ.ನಾಗೇಂದ್ರ ಅವರು 2023 ರ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಸತತ ನಾಲ್ಕನೇ ಬಾರಿ ವಿಧಾನಸೌಧಕ್ಕೆ ಪ್ರವೇಶಿಸಿ ಗಮನಸೆಳೆದಿದ್ದಾರೆ.

ಜೆಡಿಎಸ್ ಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಸ್ಥಿತಿ

ಜಿಲ್ಲೆಯಲ್ಲಿ ಈ ಬಾರಿ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಐದು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಆದರೆ, ಚುನಾವಣೆಯಲ್ಲಿ ಬಳ್ಳಾರಿ ನಗರದಿಂದ ಸ್ಪರ್ಧಿಸಿದ ಅನಿಲ್‌ ಲಾಡ್‌ 610, ಸಿರುಗುಪ್ಪದಲ್ಲಿ ಪರಮೇಶ್ವರ ನಾಯಕ 992, ಸಂಡೂರಿನಿಂದ ಎನ್‌.ಸೋಮಪ್ಪ 2617, ಕಂಪ್ಲಿಯಲ್ಲಿ ರಾಜು ನಾಯಕ 1374 ಮತಗಳನ್ನು ಮಾತ್ರ ಪಡೆಯುವಲ್ಲಿ ಶಕ್ತವಾಗಿ‌ ಜಿಲ್ಲೆಯಲ್ಲಿ ಜೆಡಿಎಸ್ ನಗಣ್ಯವಾಗಿದೆ.

ಕಿರಿಯ ಶಾಸಕ ಎಂಬ ಹೆಗ್ಗಳಿಕೆ

ಟಿಕೆಟ್ ಹಗ್ಗಜಗ್ಗಾಟ ನಡೆದು ಕೊನೆಯ ಹಂತದಲ್ಲಿ ಬಳ್ಳಾರಿ ನಗರ ಟಿಕೆಟ್ ಘೋಷಣೆಯಾಯಿತು.
ಬಳ್ಳಾರಿ ನಗರ ಕ್ಷೇತ್ರದಲ್ಲಿ ಅಂತಿಮವಾಗಿ ಕಾಂಗ್ರೆಸ್‌ ಟಿಕೆಟ್‌ ಪಡೆದು ಸ್ಪರ್ಧಿಸಿದ 33 ವರ್ಷದ ಯುವಕ ನಾರಾ ಭರತ್‌ ರೆಡ್ಡಿ ಅವರು ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅತ್ಯಂತ ಕಿರಿಯ ಶಾಸಕರೆಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: Karnataka Election: ಕರ್ನಾಟಕ ಚುನಾವಣೆ ಫಲಿತಾಂಶ ಪ್ರಕಟ; ಯಾರಾಗಲಿದ್ದಾರೆ ಮುಂದಿನ ಸಿಎಂ?

ಈ ಬಾರಿ ಚುನಾಚಣೆ ಫಲಿತಾಂಶದ ಇಣುಕು ನೋಟ

  • ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ
    ಗೆಲುವಿನ ಪಕ್ಷ ಕಾಂಗ್ರೆಸ್ ಬಿ ನಾಗೇಂದ್ರ
    ಪಡೆದ ಮತಗಳು 1,04,836
    ಗೆಲುವಿನ ಅಂತರ – 29,300
    ಪ್ರತಿಸ್ಪರ್ಧಿ ಬಿಜೆಪಿ ಬಿ.ಶ್ರೀರಾಮುಲು – 74536
  • ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ
    ಗೆಲುವಿನ ಪಕ್ಷ ಕಾಂಗ್ರೆಸ್ ನಾರಾ ಭರತ್ ರೆಡ್ಡಿ
    ಪಡೆದ ಮತಗಳು – 86,440
    ಗೆಲುವಿನ‌ ಅಂತರ – 37,983.
    ಪ್ರತಿಸ್ಪರ್ಧಿ ಕೆ ಆರ್ ಪಿಪಿ ಅಭ್ಯರ್ಥಿ ಲಕ್ಷ್ಮಿ ಅರುಣಾ – 48, 557
  • ಕಂಪ್ಲಿ ವಿಧಾನಸಭಾ ಕ್ಷೇತ್ರ
    ಗೆಲುವಿನ ಪಕ್ಷ – ಕಾಂಗ್ರೆಸ್ ಜೆ.ಎನ್.ಗಣೇಶ್
    ಪಡೆದ ಮತಗಳು – 1,00,424
    ಗೆಲುವಿನ ಅಂತರ – 24,091
    ಪ್ರತಿಸ್ಪರ್ಧಿ ಬಿಜೆಪಿ ಟಿ.ಎಚ್.ಸುರೇಶ್ ಬಾಬು
    ಪಡೆದ ಮತಗಳು – 76,333
  • ಸಿರುಗುಪ್ಪ ವಿಧಾನಸಭಾ ಕ್ಷೇತ್ರ
    ಗೆಲುವಿನ ಪಕ್ಷ ಕಾಂಗ್ರೆಸ್ -ಬಿ.ಎಂ.ನಾಗರಾಜ್
    ಪಡೆದ ಮತಗಳು – 90,862
    ಗೆಲುವಿನ‌ ಅಂತರ – 37,032
    ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎಂ.ಎಸ್. ಸೋಮಲಿಂಗಪ್ಪ ಪಡೆದ ಮತಗಳು – 53,830
  • ಸಂಡೂರು ವಿಧಾನಸಭಾ ಕ್ಷೇತ್ರ
    ಗೆಲುವಿನ‌ ಪಕ್ಷ ಕಾಂಗ್ರೆಸ್ ಈ ತುಕಾರಾಂ
    ಪಡೆದ ಮತಗಳು – 85,233
    ಗೆಲುವಿನ ಅಂತರ – 35522
    ಪ್ರತಿಸ್ಪರ್ಧಿ ಬಿಜೆಪಿ ಪಡೆದ ಮತಗಳು 49701.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Prajwal Revanna Case: ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ; ತೀರ್ಪು ಕಾಯ್ದಿರಿಸಿದ ಕೋರ್ಟ್, ಕೆಲವೇ ಕ್ಷಣಗಳಲ್ಲಿ ಆದೇಶ

Prajwal Revanna Case: ಮಹಿಳೆಯೊಬ್ಬರನ್ನು ಅಪಹರಣ ಮಾಡಿ ಅಕ್ರಮ ಬಂಧನದಲ್ಲಿಟ್ಟಿದ್ದ ಆರೋಪದ ಮೇಲೆ ಮೈಸೂರಿನ ಕೆ.ಆರ್.‌ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಡೆಸಿದ್ದು, ತೀರ್ಪು ಕಾಯ್ದಿರಿಸಿದೆ. ಹಾಗಾಗಿ, ಎಲ್ಲರ ಚಿತ್ತ ಈಗ ಕೋರ್ಟ್‌ನತ್ತ ಇದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್‌ ರೇವಣ್ಣ (Prajwal Revanna Case) ಲೈಂಗಿಕ ಹಗರಣದಲ್ಲಿ (Physical Abuse) ಮೊದಲನೇ ಆರೋಪಿಯಾಗಿರುವ (A 1) ಜೆಡಿಎಸ್‌ ನಾಯಕ ಎಚ್‌.ಡಿ ರೇವಣ್ಣ (HD Revanna) ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಕೆಲ ಕಾಲ ಮುಂದೂಡಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ತೀರ್ಪು ಹೊರಬೀಳಲಿದೆ.

ಮಹಿಳೆಯೊಬ್ಬರನ್ನು ಅಪಹರಣ ಮಾಡಿ ಅಕ್ರಮ ಬಂಧನದಲ್ಲಿಟ್ಟಿದ್ದ ಆರೋಪದ ಮೇಲೆ ಮೈಸೂರಿನ ಕೆ.ಆರ್.‌ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಚಾರಣೆ ನಡೆಸಿತು, ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ತೀರ್ಪು ಕಾಯ್ದಿರಿಸಿತು.

ಎಚ್.ಡಿ.ರೇವಣ್ಣ ಪರವಾಗಿ ವಾದ ಮಂಡಿಸಿದ ವಕೀಲ ಮೂರ್ತಿ ಡಿ. ನಾಯಕ್, “ಪ್ರಕರಣವನ್ನು ಎಸ್‌ಐಟಿ ಅನಗತ್ಯವಾಗಿ ವಿಜೃಂಭಿಸುತ್ತಿದೆ. ಸಿಆರ್‌ಪಿಸಿ 41 ಎ ಅಡಿಯಲ್ಲಿ ನೋಟಿಸ್‌ ನೀಡಿದ್ದು, ಶನಿವಾರ (ಏಪ್ರಿಲ್‌ 4) ಸಂಜೆಯೇ ಎಚ್‌.ಡಿ.ರೇವಣ್ಣ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ. ಹಾಗಾಗಿ, ಎಚ್‌.ಡಿ.ರೇವಣ್ಣ ಅವರಿಗೆ ಜಾಮೀನು ನೀಡಬೇಕು” ಎಂದು ಕೋರ್ಟ್‌ಗೆ ಮನವಿ ಮಾಡಿದರು. ‌

ಎಸ್‌ಐಟಿ ಪರ ಎಸ್‌ಪಿಪಿ ಬಿ.ಎನ್‌. ಜಗದೀಶ್‌ ವಾದ ಮಂಡಿಸಿದರು. “ಎಚ್‌.ಡಿ.ರೇವಣ್ಣ ಅವರು ಪ್ರಭಾವಿಯಾಗಿದ್ದು, ಅವರಿಗೆ ಜಾಮೀನು ಸಿಕ್ಕರೆ, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ, ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ಅವರಿಗೆ ಜಾಮೀನು ನೀಡಬಾರದು” ಎಂದರು. ಇನ್ನು. ವಿಶೇಷ ತನಿಖಾ ತಂಡ ಹಾಗೂ ಪೊಲೀಸರ ಯಾವ ನೋಟಕ್ಕೂ ಸಿಗದೇ ಗುಪ್ತ ಸ್ಥಳಕ್ಕೆ ತೆರಳಿದ್ದು, ಎರಡು ದಿನಗಳಿಂದ ಎಲ್ಲೂ ಕಾಣಿಸಿಕೊಂಡಿಲ್ಲ. ‌

“ಸಂತ್ರಸ್ತೆಯ ರಕ್ಷಣೆಯು ನಮ್ಮ ಮೊದಲ ಆದ್ಯತೆಯಾಗಿದೆ. ಅವರು ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ. ಇದೇ ಕಾರಣದಿಂದಾಗಿ ಕ್ಯಾಮೆರಾ ಎದುರಿನಲ್ಲಿಯೇ ವಿಚಾರಣೆ ನಡಸಬೇಕು ಎಂದು ಮನವಿ ಮಾಡಿದ್ದೇವೆ. ಸಂತ್ರಸ್ತೆಯ ವಿಡಿಯೊಗಳು ಹರಿದಾಡಿವೆ. ಸಂತ್ರಸ್ತೆಗೆ ಏನಾಗಿದೆ ಎಂಬುದರ ಕುರಿತು ಆತಂಕ ಎದುರಾಗಿದೆ. ಸುಮಾರು 2 ಸಾವಿರಕ್ಕೂ ಅಧಿಕ ವಿಡಿಯೊ ಇವೆ ಎನ್ನಲಾಗುತ್ತಿದೆ. ಒಬ್ಬ ಮಹಿಳೆಯ ಕಿಡ್ನ್ಯಾಪ್‌ ಆಗಿದೆ. ಆಕೆಯ ಸುರಕ್ಷತೆಯು ಪ್ರಮುಖವಾಗಿದೆ. ಸಂತ್ರಸ್ತ ಮಹಿಳೆಯು ದೂರು ನೀಡದಂತೆ ತಡೆಯಲು ಅಪಹರಣ ಮಾಡಿರುವ ಸಾಧ್ಯತೆ ಇದೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ” ಎಂದು ತಿಳಿಸಿದರು.

ಅಜ್ಞಾತ ಸ್ಥಳದಲ್ಲಿ ರೇವಣ್ಣ

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ರೇವಣ್ಣಗೆ ಎಸ್ಐಟಿ ಮೂರು ನೋಟಿಸ್ ಹಾಗೂ ಕೊನೆಗೆ ಲುಕೌಟ್ ನೋಟಿಸ್ ಜಾರಿ ಮಾಡಿದ್ದು, ರೇವಣ್ಣ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ರೇವಣ್ಣ ಅವರು ವಿದೇಶಕ್ಕೆ ಹಾರಬಹುದು ಎಂಬ ಮುಂದಾಲೋಚನೆಯಿಂದ ಲುಕೌಟ್‌ ನೋಟೀಸ್‌ ಜಾರಿ ಮಾಡಲಾಗಿದ್ದು, ಈಗ ಅವರು ಯಾವುದೇ ಏರ್‌ಪೋರ್ಟ್‌ ಮೂಲಕ ಹಾದು ಹೋಗಲು ಸಾಧ್ಯವಿಲ್ಲದಾಗಿದೆ.

ವಿದೇಶದಲ್ಲಿದ್ದುಕೊಂಡು ಲೈಂಗಿಕ ಹಗರಣ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಎಸ್‌ಐಟಿ (SIT) ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಇನ್ನೊಂದೆಡೆ ಭವಾನಿ ರೇವಣ್ಣ ಅವರಿಗೂ ವಿಚಾರಣೆಗೆ ಎಸ್‌ಐಟಿ ಬುಲಾವ್‌ ನೀಡಿದೆ. ಸದ್ಯ ರೇವಣ್ಣ ವಿರುದ್ಧ ತನಿಖೆಗೆ ಒಳಗಾಗಬೇಕಾದ ಗಂಭೀರ ಆರೋಪವಿದೆ. ಮೈಸೂರಿನಲ್ಲಿ ಸಂತ್ರಸ್ತೆಯ ಪುತ್ರ ರೇವಣ್ಣ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲು ಮಾಡಿದ್ದಾರೆ. ಹೀಗಾಗಿ ರೇವಣ್ಣಗೆ ಎಸ್ಐಟಿ ಮುಂದೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಆದರೆ ಕಳೆದ ಎರಡು ದಿನಗಳಿಂದ ರೇವಣ್ಣ ನಾಪತ್ತೆಯಾಗಿದ್ದಾರೆ. ಅವರು ಅತ್ತ ಎಚ್.ಡಿ ದೇವೇಗೌಡರ ನಿವಾಸದಲ್ಲಿಯಾಗಲೀ, ಈತ್ತ ಬಸವನಗುಡಿಯ ತಮ್ಮ ನಿವಾಸದಲ್ಲಿಯಾಗಲೀ, ಹಾಸನದ ಎರಡು ನಿವಾಸಗಳಲ್ಲಾಗಲೀ ಇಲ್ಲ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್‌ ನೋಟೀಸ್!‌ ಏನಿದರ ಅಗತ್ಯ?

Continue Reading

ಬೆಂಗಳೂರು

Rowdy Sheeter: ಸಿಸಿಬಿ ಅಧಿಕಾರಿಗಳ ಕಂಡು ಡಿಸಿಪಿ ಕಚೇರಿಯಿಂದ ರೌಡಿಶೀಟರ್‌ ಒಂಟೆ ರೋಹಿತ್‌ ಎಸ್ಕೇಪ್‌

Rowdy Sheeter : ಸಿಸಿಬಿ ಅಧಿಕಾರಿಗಳ ಕಂಡೊಡನೆ ಡಿಸಿಪಿ ಕಚೇರಿಯಿಂದಲೇ ರೌಡಿಶೀಟರ್‌ ಒಂಟೆ ರೋಹಿತ್‌ ಎಸ್ಕೇಪ್‌ ಆಗಿದ್ದಾನೆ. ಸದ್ಯ ಸಿಸಿಬಿ ಹಾಗೂ ಸುಬ್ರಹ್ಮಣ್ಯ ಪೊಲೀಸರು ರೌಡಿಶೀಟರ್‌ಗಾಗಿ ಹುಡುಕಾಟ ನಡೆಸಿದ್ದಾರೆ.

VISTARANEWS.COM


on

By

Rowdy sheeter camel Rohit escapes from DCPs office after ccb officials spotted him
Koo

ಬೆಂಗಳೂರು: ಉತ್ತರ ವಿಭಾಗ ಡಿಸಿಪಿ ಕಚೇರಿಯಿಂದ ರೌಡಿಶೀಟರ್‌ವೊಬ್ಬ (Rowdy Sheeter) ಪೊಲೀಸ್‌ರಿಂದ ತಪ್ಪಿಸಿಕೊಂಡಿದ್ದಾನೆ. ರೋಹಿತ್‌ ಅಲಿಯಾಸ್‌ ಒಂಟೆ ರೋಹಿತ್‌ ಎಸ್ಕೇಪ್ ಆದವನು. 110 ಸೆಕ್ಷನ್ ಬಾಂಡ್ ಹಾಕಲು ಸುಬ್ರಹ್ಮಣ್ಯ ನಗರ ಠಾಣೆ ರೌಡಿಶೀಟರ್ ಆಗಿರುವ ಒಂಟೆ ರೋಹಿತ್‌ನನ್ನು ಕರೆಸಿಕೊಂಡಿದ್ದರು. ಒಂದು ವಾರದ ಹಿಂದೆ ಠಾಣೆಗೆ ಕರೆಸಿಕೊಂಡಿದ್ದ ಪೊಲೀಸರು ಇಂದು ಠಾಣೆಯಿಂದ ಡಿಸಿಪಿ ಮುಂದೆ ಕರೆದೊಯ್ದಿದ್ದರು.

ಇತ್ತ ಒಂಟೆ ರೋಹಿತ್‌ಗಾಗಿ ಹುಡುಕಾಟ ನಡೆಸುತ್ತಿದ್ದ ಸಿಸಿಬಿ ಪೊಲೀಸರು, ಮುಂಚೆಯೇ ಡಿಸಿಪಿ ಕಚೇರಿ ಬಳಿ ಕಾಯುತ್ತಿದ್ದರು. ಸಿಸಿಬಿ ಪೊಲೀಸರನ್ನು ನೋಡಿದ ಕೂಡಲೇ ಒಂಟೆ ರೋಹಿತ್‌ ಸುಬ್ರಹ್ಮಣ್ಯ ನಗರ ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್‌ ಆಗಿದ್ದಾನೆ.

ಈ ಒಂಟೆ ರೋಹಿತ್‌, ಸೈಲೆಂಟ್ ಸುನಿಲ್ ಅಸೋಸಿಯೇಟ್ ಆಗಿದ್ದ. ಕೊಲೆ, ಕೊಲೆ ಯತ್ನ ಸೇರಿ ಹಲವು ಕೇಸಿನಲ್ಲಿ ಫಿಟ್ ಆಗಿದ್ದ. ಸದ್ಯ‌ ಪೊಲೀಸರ ಕೈಯಿಂದ ಎಸ್ಕೇಪ್ ಆಗಿರುವ ಒಂಟೆ ರೋಹಿತ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: Road Accident : ಟಿಪ್ಪರ್‌ ಲಾರಿ ಡಿಕ್ಕಿಗೆ ಕಾರು ಪುಡಿ ಪುಡಿ; ಸಿದ್ದನಕೊಳ್ಳ ಶ್ರೀಗಳು ಗಂಭೀರ ಗಾಯ

ಏನಿದು 110 ಸೆಕ್ಷನ್‌

ಬೆಂಗಳೂರಿನಲ್ಲಿ ಕ್ರೈಂ ರೇಟ್‌ ಹೆಚ್ಚಾಗುತ್ತಲೇ ಇದೆ. ಅಪರಾಧ ಕೃತ್ಯಗಳನ್ನು ತಡೆಯಲು ಆಗದಷ್ಟು ಪೊಲೀಸರು ಕೈ ಚೆಲ್ಲಿ ಕುಳಿತಂತೆ ಇದೆ. ಸದ್ಯ ರೌಡಿಗಳ ಪಾಲಿಗೆ ದುಸ್ವಪ್ನವಾಗಿರುವ ಸೆಕ್ಷನ್‌ 110 ಪ್ರಕಾರ ಪೊಲೀಸರು ರೌಡಿಗಳಿಂದ ತಾವು ಯಾವುದೇ ಅಪರಾಧಿ ಚಟುವಟಿಕೆಗಳಲ್ಲಿ ಭಾಗವಹಿಸೋದಿಲ್ಲ ಎಂದು ಬಾಂಡ್ ಬರೆಸಿಕೊಳ್ಳುತ್ತಾರೆ.

ಈ ಮೊದಲು ಕೂಡ ಬಾಂಡ್ ಬರೆಸಿಕೊಂಡು ಸುಮ್ಮನೆ ಇರುತ್ತಿದ್ದರು. ಅದರ ಕಾರ್ಯ ರೂಪ‌ ಮಾತ್ರ ಆಗುತ್ತಿರಲಿಲ್ಲ. ಪೊಲೀಸರು ಕೂಡಾ ಇಷ್ಟು ದಿನ ಸುಮ್ಮನೆ ಇದ್ದರು. ಆದರೆ ನಗರದಲ್ಲಿ ಕ್ರೈಂ ರೇಟ್ ಹೆಚ್ಚಾಗುತ್ತಿರುವುದರಿಂದ ಈ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ.

ಈ ಬಾಂಡಿನಲ್ಲಿ ರೌಡಿಗಳಿಂದ 3-5ಲಕ್ಷದವರೆಗೆ ಕುಟುಂಬ ಸಮೇತವಾಗಿ ಬಾಂಡ್ ಬರೆಸಿಕೊಳ್ಳಲಾಗುತ್ತದೆ. ರೌಡಿಶೀಟರ್‌ ಬಾಂಡ್​ಗೆ ಸಹಿ ಹಾಕಿದ ಮೇಲೆ ಕೊಲೆ, ಕಳ್ಳತನ, ದರೋಡೆಯಂತಹ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ಬಾಂಡ್ ಮೀರಿ ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಅಂಥ ಆರೋಪಿಗಳನ್ನು ನ್ಯಾಯಾಧೀಶರ ‌ಮುಂದೆ ಹಾಜರು ಪಡಿಸುವ ಅಗತ್ಯ ಇಲ್ಲ. ಬದಲಿಗೆ ಯಾವುದೇ ರೀತಿಯ ಕೇಸ್ ದಾಖಲಿಸದಯೇ ಡಿಸಿಪಿ ಅಧಿಕಾರಿ ಉಪಯೋಗಿಸಿ ನೇರವಾಗಿ 3ರಿಂದ 10 ತಿಂಗಳವರೆಗೆ ಜೈಲಿಗೆ ಅಟ್ಟಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉದ್ಯೋಗ

Job Alert: ಕೋರ್ಟ್‌ನಲ್ಲಿದೆ 41 ಹುದ್ದೆ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ

Job Alert: ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ? ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ? ರಾಜ್ಯದಲ್ಲೇ ಕೆಲಸ ನಿರ್ವಹಿಸಬೇಕು ಎನ್ನುವ ಆಕಾಂಕ್ಷೆ ಹೊಂದಿದ್ದೀರಾ? ಹಾಗಾದರೆ ನಿಮಗಾಗಿ ಕಾದಿದೆ ಗುಡ್‌ನ್ಯೂಸ್‌. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಂಡ್ಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 41 ಜವಾನ (Peon) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮೇ 3ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಕೊನೆಯ ದಿನ ಜೂನ್‌ 3. ಎಸ್ಸೆಸ್ಸೆಲ್ಸಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು.

VISTARANEWS.COM


on

Job Alert
Koo

ಬೆಂಗಳೂರು: ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ? ರಾಜ್ಯದಲ್ಲೇ ಕೆಲಸ ನಿರ್ವಹಿಸಬೇಕು ಎನ್ನುವ ಆಕಾಂಕ್ಷೆ ಹೊಂದಿದ್ದೀರಾ? ಹಾಗಾದರೆ ನಿಮಗಾಗಿ ಕಾದಿದೆ ಗುಡ್‌ನ್ಯೂಸ್‌. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಂಡ್ಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 41 ಜವಾನ (Peon) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮೇ 3ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಕೊನೆಯ ದಿನ ಜೂನ್‌ 3 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಸಾಮಾನ್ಯ ಅಭ್ಯರ್ಥಿ – 18, ಪರಿಶಿಷ್ಟ ಜಾತಿ – 7, ಪರಿಶಿಷ್ಟ ಪಂಗಡ – 4, ಪ್ರವರ್ಗ – 1- 2, ಪ್ರವರ್ಗ-2 (ಎ) -6, ಪ್ರವರ್ಗ-2 (ಬಿ)-2, ಪ್ರವರ್ಗ-3 (ಎ)-1, ಪ್ರವರ್ಗ-3 (ಬಿ)-1 ಹುದ್ದೆಗಳಿವೆ. ಅರ್ಜಿ ಸಲ್ಲಿಸುವವರು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಜತೆಗೆ ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು. ತತ್ಸಮಾನ ವಿದ್ಯಾರ್ಹತೆ: ಸಿಬಿಎಸ್‌ಸಿ ಮತ್ತು ಐಸಿಎಸ್‌ಇ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆ ಮತ್ತು ಇತರ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆ. ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್‌ ಸ್ಕೂಲಿಂಗ್‌ (ಎನ್‌.ಐ.ಒ.ಎಸ್‌.) ವತಿಯಿಂದ ನಡೆಸುವ ಪ್ರೌಢ ಶಿಕ್ಷಣ ಕೋರ್ಸ್‌. ಕರ್ನಾಟಕ ಪ್ರೌಢ ಶಿಕ್ಷಣ ಪ್ರೀಕ್ಷಾ ಮಂಡಳಿ ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್‌ (ಕೆ.ಒ.ಎಸ್‌.).

ವಯೋಮಿತಿ

ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ. ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. 2 ಎ, 2 ಬಿ, 3 ಎ, 3 ಬಿ ವಿಭಾಗದವರಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಸಾಮಾನ್ಯ ವರ್ಗದವರು ಅರ್ಜಿ ಶುಲ್ಕವಾಗಿ 300 ರೂ., ಪ್ರವರ್ಗ 2 ಎ, 2 ಬಿ, 3 ಎ, 3 ಬಿ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 150 ರೂ. ಪಾವತಿಸಬೇಕು. ಇದನ್ನು ಆನ್‌ಲೈನ್‌ ಮೂಲಕ ಪಾವತಿಸಬಹುದು. ಇದಕ್ಕಾಗಿ ಕ್ರೆಡಿಟ್‌ / ಡೆಬಿಟ್‌ ಕಾರ್ಡ್‌, ನೆಟ್‌ ಬ್ಯಾಂಕಿಂಗ್‌ ಸೌಲಭ್ಯ ಬಳಸಬಹುದು.

ಆಯ್ಕೆ ವಿಧಾನ

ಕರ್ನಾಟಕ ಅಧೀನ ನ್ಯಾಯಾಲಯಗಳ ನಿಯಮಗಳ ಅನ್ವಯ ನೇಮಕಾತಿ ನಡೆಯಲಿದೆ. ಅದರಂತೆ 10ನೇ ತರಗತಿಯ ಗರಿಷ್ಠ ಅಂಕಗಳನ್ನು ಆಧರಿಸಿ ಒಂದು ಹುದ್ದೆಗೆ 10 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಆ ಪೈಕಿ ಅರ್ಹರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಇಂದೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Continue Reading

ಕರ್ನಾಟಕ

Prajwal Revanna Case: ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ ಎಂದ ನಿಖಿಲ್‌ ಕುಮಾರಸ್ವಾಮಿ!

Prajwal Revanna Case: ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ದೇಶದ ಪ್ರಧಾನಿಗಳನ್ನು ಈ ವಿಚಾರದಲ್ಲಿ ಕರೆತರುವುದು ಒಳ್ಳೆಯದಲ್ಲ, ಅದು ಸೂಕ್ತವೂ ಅಲ್ಲ. ಅಲ್ಲದೇ ಹಾಸನ ಪ್ರಕರಣ ವಿಚಾರಕ್ಕೆ ನನಗೂ ಸಂಬಂಧ ಇಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

VISTARANEWS.COM


on

Nikhil Kumaraswamy
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಪ್ರಕರಣ (Prajwal Revanna Case) ದೇಶಾದ್ಯಂತ ಸಂಚಲನ ಮೂಡಿಸಿದೆ. ಪ್ರಕರಣವನ್ನು ಎಸ್‌ಐಟಿ ತನಿಖೆ ಮಾಡುತ್ತಿರುವ ನಡುವೆ ಮೊದಲ ಬಾರಿ ಮಾಧ್ಯಮಗಳಿಗೆ ನಿಖಿಲ್‌ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ದೇವೇಗೌಡರನ್ನು ಹಾಗೂ ಕುಮಾರಸ್ವಾಮಿ ಅವರನ್ನು ಮುಂದೆ ತರುವುದು ಸರಿಯಲ್ಲ. ನಾನು ಈಗಾಗಲೇ ಹೇಳಿದ್ದೇನೆ, ಯಾರು ತಪ್ಪು ಮಾಡಿದ್ದಾರೆ, ಅವರಿಗೆ ಖಂಡಿತಾ ಶಿಕ್ಷೆ ಆಗಬೇಕು. ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದರು.

ನಗರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ಭೇಟಿಯಾದ ಬಳಿಕ ಅವರು ಮಾತನಾಡಿದ್ದು, ನನಗೆ ನಾಲ್ಕು ದಿನಗಳಿಂದ ವೈರಲ್ ಫೀವರ್ ಇತ್ತು. ಹಾಗಾಗಿ ದೇವೇಗೌಡರನ್ನು ಪೋನ್‌ನಲ್ಲಿ ಮಾತನಾಡಿದ್ದೆ. ಈಗ ಬಂದು ಅವರ ಆರೋಗ್ಯ ವಿಚಾರಿಸಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ | Prajwal Revanna Case: ಪ್ರಜ್ವಲ್‌ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್‌ ನೋಟೀಸ್!‌ ಏನಿದರ ಅಗತ್ಯ?

ಇನ್ನು ಪ್ರಕರಣದಲ್ಲಿ ದೇಶದ ಪ್ರಧಾನಿಗಳನ್ನು ಈ ವಿಚಾರದಲ್ಲಿ ಕರೆತರುವುದು ಒಳ್ಳೆಯದಲ್ಲ, ಅದು ಸೂಕ್ತವೂ ಅಲ್ಲ. ಅಲ್ಲದೇ ಹಾಸನ ಪ್ರಕರಣ ವಿಚಾರಕ್ಕೆ ನನಗೂ ಸಂಬಂಧ ಇಲ್ಲ. ನಾನು ಹೆಚ್ಚಾಗಿ ಹಾಸನಕ್ಕೆ ಕಾಲೇ ಇಟ್ಟಿಲ್ಲ. ವರ್ಷದಲ್ಲಿ ಹಾಸನಾಂಬೆ ದರ್ಶನಕ್ಕೆ ಮಾತ್ರ ಹೋಗುತ್ತೇನೆ. ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ. ಕರ್ನಾಟಕ ಸರ್ಕಾರ ಈಗಾಗಲೇ ಎಸ್ಐಟಿ ರಚನೆ ಮಾಡಿದೆ, ತನಿಖೆ ನಡೆಯುತ್ತಿದ್ದು, ಕಾನೂನಿಗಿಂತ ಯಾರು ದೊಡ್ಡವರಲ್ಲ. ಅದು ಒಂದು ಪ್ರಕ್ರಿಯೆ, ಅದರ ಬಗ್ಗೆ ನಾನು ಮಾತನಾಡಲು ಹೋಗಲ್ಲ ಎಂದು ಹೇಳಿದರು.

ಡಿ.ಕೆ. ಬ್ರದರ್ಸ್ ಅವರಿಂದ ದೇವೇಗೌಡ ಹಾಗೂ ಕುಮಾರಸ್ವಾಮಿ ಟಾರ್ಗೆಟ್ ಅಗುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಒಂದು ಪ್ರಕರಣ ರಾಜ್ಯದ ಜನತೆಗೆ ತಪ್ಪು ಸಂದೇಶ ಕೊಡುತ್ತಿದೆ. ವಿಶೇಷವಾಗಿ ದೇವೇಗೌಡ ಅವರ ಜೀವನ ತೆರೆದ ಪುಸ್ತಕ, ಅಜ್ಜಿ ಚೆನ್ನಮ್ಮ ಯಾವ ರೀತಿ ಬದುಕಿದ್ದಾರೆ ಅಂತ ಅದು ನಮಗೆ ಗೊತ್ತು. ಹಾಗಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ, ಅವರಿಗೆ 92 ವರ್ಷ ಆಗಿದೆ. ಅವರಿಗೆ ಸಹಜವಾಗಿ ಮನಸ್ಸಿನ ಮೇಲೆ ಪ್ರಭಾವ ಬೀರುತ್ತೆ. ಒಬ್ಬರೇ ವಿಶ್ರಾಂತಿ ತೆಗೆದುಕೊಳ್ತಾ ಇದ್ದರು, ದೇವಸ್ಥಾನಕ್ಕೆ ಹೋಗಿಬಂದೆ ಅಂದರು. ಅವರು ಸಾಕಷ್ಟು ನೊಂದಿದ್ದಾರೆ, ನಮ್ಮ ಅಜ್ಜಿ ಸಹ ಬಹಳ ನೋವಿನಲ್ಲಿದ್ದಾರೆ ಎಂದು ತಿಳಿಸಿದರು.

ನನಗೆ ಒಂದೇ ಒಂದು ದುಃಖ ಏನೆಂದರೆ, ಆ ದೃಶ್ಯ ಏನಿದೆ ಅದನ್ನು ನಾನು ನೋಡಕ್ಕೆ ಹೋಗಿಲ್ಲ. ನನ್ನ ಆಪ್ತ ವರ್ಗದವರು ಹೇಳಿದ ಪ್ರಕಾರ, ಕನಿಷ್ಠ ಆ ವೀಡಿಯೊ ಬ್ಲರ್ ಕೂಡ ಆಗಿಲ್ಲ. ಆದರೆ, ಪಾಪ ಆ ಹೆಣ್ಣು ಮಕ್ಕಳನ್ನ ಓಪನ್ ಆಗಿ ತೋರಿಸಿದ್ದಾರ. ಇದು ನಿಜಕ್ಕೂ ಕೂಡ ಬೇಜಾರು ಆಗುತ್ತೆ. ಇದರ ಬಗ್ಗೆಯೂ ಸಹ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಹಾಸನ ಟಿಕೆಟ್ ವಿಚಾರದಲ್ಲಿ ಬಿಜೆಪಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದ ಕಾರ್ಯಕರ್ತರು ರಾಷ್ಟ್ರೀಯ ಅಧ್ಯಕ್ಷರು ಅಂತಿಮ ನಿರ್ಧಾರ ಮಾಡುತ್ತಾರೆ, ಅವರ ನಿರ್ಧಾರಕ್ಕೆ ತಲೆಬಾಗಿ ಕೆಲಸ ಮಾಡಿದ್ದೇವೆ ಎಂದರು. ಇನ್ನು ಪ್ರಕರಣದಿಂದ ನೊಂದ ಪಕ್ಷದ ಹಾಸನ ಕಾರ್ಯಕರ್ತರರಿಗೆ ಧೈರ್ಯ ಹೇಳುವ ಬಗ್ಗೆ ಸ್ಪಂದಿಸಿ, ನೂರಕ್ಕೆ ನೂರು ಆ ವಿಚಾರದಲ್ಲಿ ಹಾಸನಕ್ಕೆ ಹೋಗೊದು ಇದೆ. ಪಕ್ಷದ ನಾಯಕರು ಕಾರ್ಯಕರ್ತರ ಬಳಿ ಕುಮಾರಣ್ಣ ಹೋಗುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ | Prajwal Revanna Case: ಜರ್ಮನಿ ಆಯ್ತು, ದುಬೈ ಬಿಟ್ಟಾಯ್ತು; ಮತ್ತೊಂದು ದೇಶಕ್ಕೆ ಹಾರಿದ ಪ್ರಜ್ವಲ್‌ ರೇವಣ್ಣ!

ಶಿವರಾಮೇಗೌಡರ ಆರೋಪದ ವಿಚಾರ ಪ್ರತಿಕ್ರಿಯಿಸಿ, ಶಿವರಾಮೇಗೌಡರು ಬಹಳ ದೊಡ್ಡವರಿದ್ದಾರೆ. ಪಾಪ ಏನೋ ಮಾತನಾಡುತ್ತಾರೆ, ಎಸ್ಐಟಿ ರಚನೆ ಆಗಿದೆ. ತನಿಖೆ ನಡೆಯುತ್ತಿದೆ ಎಂದು ಹೇಳಿದರು.

Continue Reading
Advertisement
Suchitra Krishnamoorthi Reveals Her Face Swelled Like A Balloon
ಬಾಲಿವುಡ್7 seconds ago

Suchitra Krishnamoorthi: ಶಾರುಖ್ ಖಾನ್ ಜತೆ ನಟಿಸಿರುವ ನಟಿಯ ಮುಖ ಬಲೂನ್‌ನಂತೆ ಊದಿಕೊಂಡಿದ್ದು ಏಕೆ?

Virat Kohli
ಕ್ರೀಡೆ13 mins ago

Virat Kohli: ಗುಜರಾತ್​ ವಿರುದ್ಧ 6 ರನ್ ಬಾರಿಸಿದರೆ ವಿಶೇಷ ದಾಖಲೆ ಬರೆಯಲಿದ್ದಾರೆ ಕಿಂಗ್​ ಕೊಹ್ಲಿ

Rohit Sharma
ಕ್ರೀಡೆ14 mins ago

Rohit Sharma : ರೋಹಿತ್​​ ಶರ್ಮಾಗೆ ಗಾಯ; ವಿಶ್ವ ಕಪ್​ ಮೊದಲೇ ಭಾರತ ತಂಡಕ್ಕೆ ಸಮಸ್ಯೆ?

Prajwal Revanna Case
ಕರ್ನಾಟಕ18 mins ago

Prajwal Revanna Case: ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ; ತೀರ್ಪು ಕಾಯ್ದಿರಿಸಿದ ಕೋರ್ಟ್, ಕೆಲವೇ ಕ್ಷಣಗಳಲ್ಲಿ ಆದೇಶ

Rowdy sheeter camel Rohit escapes from DCPs office after ccb officials spotted him
ಬೆಂಗಳೂರು25 mins ago

Rowdy Sheeter: ಸಿಸಿಬಿ ಅಧಿಕಾರಿಗಳ ಕಂಡು ಡಿಸಿಪಿ ಕಚೇರಿಯಿಂದ ರೌಡಿಶೀಟರ್‌ ಒಂಟೆ ರೋಹಿತ್‌ ಎಸ್ಕೇಪ್‌

Job Alert
ಉದ್ಯೋಗ28 mins ago

Job Alert: ಕೋರ್ಟ್‌ನಲ್ಲಿದೆ 41 ಹುದ್ದೆ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ

IPL 2024
ಕ್ರೀಡೆ32 mins ago

IPL 2024 : ಮುಂಬೈ ಬ್ಯಾಟರ್​​ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಮಾಲೀಕರಿಗೆ ಸಲಹೆ ನೀಡಿದ ಮಾಜಿ ಕ್ರಿಕೆಟಿಗ

Nikhil Kumaraswamy
ಕರ್ನಾಟಕ49 mins ago

Prajwal Revanna Case: ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ ಎಂದ ನಿಖಿಲ್‌ ಕುಮಾರಸ್ವಾಮಿ!

PBKS vs CSK
ಕ್ರೀಡೆ1 hour ago

PBKS vs CSK: ಬ್ಯಾಟಲ್​ ಆಫ್​ ದಿ ಕಿಂಗ್ಸ್​ಗೆ ಚೆನ್ನೈ-ಪಂಜಾಬ್​ ರೆಡಿ; ಗಾಯಕ್ವಾಡ್​ಗೆ ಸೇಡಿನ ಪಂದ್ಯ

Road Accident in bagalakote
ಬಾಗಲಕೋಟೆ1 hour ago

Road Accident : ಟಿಪ್ಪರ್‌ ಲಾರಿ ಡಿಕ್ಕಿಗೆ ಕಾರು ಪುಡಿ ಪುಡಿ; ಸಿದ್ದನಕೊಳ್ಳ ಶ್ರೀಗಳು ಗಂಭೀರ ಗಾಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ1 day ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌