Sagara News : ಸೋಲು ಅನಾಥ, ಗೆಲುವಿಗೆ ಸಾವಿರ ಜನ: ಮಾಜಿ ಶಾಸಕ ಹರತಾಳು ಹಾಲಪ್ಪ - Vistara News

ಶಿವಮೊಗ್ಗ

Sagara News : ಸೋಲು ಅನಾಥ, ಗೆಲುವಿಗೆ ಸಾವಿರ ಜನ: ಮಾಜಿ ಶಾಸಕ ಹರತಾಳು ಹಾಲಪ್ಪ

ಸಾಗರದ ಮಾಜಿ ಶಾಸಕ (Sagara News) ಹರತಾಳು ಹಾಲಪ್ಪ ಅವರು ತಮಗೆ ಮತ ನೀಡಿದ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಮುಂದೆ ಮತ್ತೆ ಗೆದ್ದು ಕ್ಷೇತ್ರದ ಸೇವೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸನಗರ: “ಪ್ರಜಾಪ್ರಭುತ್ವದಲ್ಲಿ ಸೋಲು ಸಾಮಾನ್ಯ. ಸೋಲು ತಾತ್ಕಾಲಿಕ ಮಾತ್ರ ಇರುತ್ತದೆ. ಮುಂದೆ ಒಳ್ಳೆಯ ದಿನಗಳು ನಮಗೆ ದೊರೆಯಲಿದೆ” ಎಂದು ಸಾಗರ (Sagara News) ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹರತಾಳು ಹಾಲಪ್ಪ ಅಭಿಪ್ರಾಯಪಟ್ಟರು.

ಹೊಸನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಇಂದು ಮತದಾರರ ಅಭಿನಂದನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, “ಸೋಲು ಅನಾಥ, ಗೆಲುವಿಗೆ ಸಾವಿರಾರು ಜನ ಇರುತ್ತಾರೆ. ಸೋಲಿನಿಂದ ಧೃತಿಗೆಡುವುದಿಲ್ಲ. ಮುಂದೆ ಮತ್ತೆ ಒಳ್ಳೆಯ ದಿನಗಳು ನಮ್ಮ ಪಾಲಿಗೆ ಬರಲಿದೆ. ಕಾರ್ಯಕರ್ತರು ಧೃತಿಗೆಡಬಾರದು. ಕಾರ್ಯಕರ್ತರ ಕಷ್ಟ ಸುಖದಲ್ಲಿ ಸದಾ ಇರುತ್ತೇನೆ. ಲೋಪದೋಷಗಳನ್ನು ಸರಿಪಡಿಸಿಕೊಂಡು ಸಂಘಟನೆಯನ್ನು ಬಲಗೊಳಿಸುತ್ತ ಹೆಜ್ಜೆ ಹಾಕುತ್ತೇನೆ” ಎಂದರು.

ಇದನ್ನೂ ಓದಿ: Sagar Election Results: ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿದ ಬೇಳೂರು; ಸೋಲು ಕಂಡ ಹಾಲಪ್ಪ
“ಕ್ಷೇತ್ರದ ಅಭಿವೃದ್ಧಿ ಸಾಕಷ್ಟು ಮಾಡಿದ್ದರೂ ಅಭಿವೃದ್ಧಿ ಮತಗಳಾಗಿ ಬದಲಾಗದೇ ಸೋಲು ಅನುಭವಿಸುವಂತಾಯಿತು. ನಮಗೆ ಮತ ನೀಡಿದ ಮತದಾರರು ಮತ್ತು ಹಗಲು ಇರಲು ಚುನಾವಣೆಗಾಗಿ ಶ್ರಮಿಸಿದ ಮುಖಂಡರು, ಕಾರ್ಯಕರ್ತರುಗಳಿಗೆ ಅಭಿನಂದನೆಗಳು” ಎಂದರು.

ಹೊಸನಗರ ಮಂಡಲ ಬಿಜೆಪಿ ಅಧ್ಯಕ್ಷ ಗಣಪತಿ ಬೆಳಗೋಡು, ಕಾರ್ಯದರ್ಶಿ ನಾಗಾರ್ಜುನ ಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಪ್ರಮುಖರಾದ ಉಮೇಶ್ ಕಂಚುಗಾರ್, ದೇವಾನಂದ್, ಶಕ್ತಿಕೇಂದ್ರದ ಅಧ್ಯಕ್ಷರಾದ ಮನೋದರ, ಇತರ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶಿವಮೊಗ್ಗ

Araga jnanendra: ಠಾಣೆಗೇ ನುಗ್ಗಿ ಜನ ಪೊಲೀಸರಿಗೆ ಹೊಡೆಯುವಂತಾಗಿದೆ; ಆರಗ ಜ್ಞಾನೇಂದ್ರ ಟೀಕೆ

Araga jnanendra: ರಾಜ್ಯದಲ್ಲಿ ಅಪರಾಧದ ಸಂಖ್ಯೆ ಹೆಚ್ಚಳದಿಂದ ಜನರ ನೆಮ್ಮದಿ ಹಾಳಾಗುತ್ತಿದೆ. ಆಡಳಿತದಲ್ಲಿ ಇರುವವರು ಬಿಗಿಯಾಗಿ ಇದ್ದಾಗ ಮಾತ್ರ ಶಾಂತ ಪರಿಸ್ಥಿತಿ ಲಭಿಸುತ್ತದೆ. ಈ ಸರ್ಕಾರದಡಿ ವಿಧಾನಸೌಧದ ಒಳಗೇ ದೇಶವಿರೋಧಿ, ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿತ್ತು. ಮೊನ್ನೆ ಕೊಪ್ಪದಲ್ಲೂ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲೂ ಪ್ರಕಟಗೊಂಡಿದೆ ಎಂದು ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

VISTARANEWS.COM


on

Former Minister Araga jnanendra latest statement in Shivamogga
Koo

ಶಿವಮೊಗ್ಗ: ರಾಜ್ಯದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga jnanendra) ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಮಾತನಾಡಿದ ಅವರು, ಪೊಲೀಸರ ಬಗ್ಗೆ ಅಪರಾಧಿಗಳಿಗೆ ಗೌರವ ಇಲ್ಲ ಅಥವಾ ಭಯ ಇಲ್ಲ. ಪೊಲೀಸ್ ವ್ಯವಸ್ಥೆಯನ್ನೇ ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಈ ಸರ್ಕಾರದ ಕಡೆಯಿಂದ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಟೀಕಿಸಿದರು.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

ನಿನ್ನೆ ಚನ್ನಗಿರಿಯಲ್ಲಿ ನಡೆದ ಪ್ರಕರಣದಡಿ ಅಪರಾಧಿಯನ್ನು ಕರೆದುಕೊಂಡು ಬಂದಿದ್ದರು. ಲಾಕಪ್ ಡೆತ್ ಎಂದು ಹೇಳಿದ್ದಾರೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಅಪರಾಧದ ಸಂಖ್ಯೆ ಹೆಚ್ಚಳದಿಂದ ಜನರ ನೆಮ್ಮದಿ ಹಾಳಾಗುತ್ತಿದೆ ಎಂದರು. ಇದೇ ವೇಳೆ ಅಪರಾಧ ಪ್ರಕರಣಗಳ ಹೆಚ್ಚಳ ಕುರಿತ ಅಂಕಿ ಅಂಶಗಳನ್ನು ಅವರು ಮುಂದಿಟ್ಟರು.

ಆಡಳಿತದಲ್ಲಿ ಇರುವವರು ಬಿಗಿಯಾಗಿ ಇದ್ದಾಗ ಮಾತ್ರ ಶಾಂತ ಪರಿಸ್ಥಿತಿ ಲಭಿಸುತ್ತದೆ. ಈ ಸರ್ಕಾರದಡಿ ವಿಧಾನಸೌಧದ ಒಳಗೇ ದೇಶವಿರೋಧಿ, ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿತ್ತು. ಮೊನ್ನೆ ಕೊಪ್ಪದಲ್ಲೂ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲೂ ಪ್ರಕಟಗೊಂಡಿದೆ ಎಂದು ತಿಳಿಸಿದರು.

ಏನಿದು ಪ್ರಕರಣ?

ದಾವಣಗೆರೆ: ಪೊಲೀಸ್ ಕಸ್ಟಡಿಯಲ್ಲಿದ್ದ (police custody) ಆರೋಪಿಯೊಬ್ಬ ಸಾವಿಗೀಡಾಗಿದ್ದು (Lockup death), ಇದರಿಂದ ರೊಚ್ಚಿಗೆದ್ದ ಆರೋಪಿ (culprit) ಕಡೆಯವರು ಠಾಣೆಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ದಾವಣಗೆರೆ (Davanagere news) ಜಿಲ್ಲೆಯ ಚನ್ನಗಿರಿ (Channagiri news) ತಾಲೂಕಿನಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: PGCET 2024: ಪಿಜಿಸಿಇಟಿ 2024ಕ್ಕೆ ಮೇ 27ರಿಂದ ಅರ್ಜಿ ಸಲ್ಲಿಕೆ ಆರಂಭ; ಪರೀಕ್ಷೆ ಯಾವಾಗ, ಇಲ್ಲಿದೆ ವೇಳಾಪಟ್ಟಿ

ಚನ್ನಗಿರಿ ಪಟ್ಟಣದ ಟಿಪ್ಪು ನಗರ ನಿವಾಸಿಯಾಗಿದ್ದ ಅದೀಲ್ (30) ಎನ್ನುವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈತ ಒಸಿ ಆಡಿಸುತ್ತಿದ್ದ ಪ್ರಕರಣದಲ್ಲಿ ಪೊಲೀಸರಿಂದ ತನಿಖೆಗೆ ಒಳಗಾಗಿದ್ದ. ಸಂಜೆ ಪೊಲೀಸರು ಈತನನ್ನು ಠಾಣೆಗೆ ಕರೆತಂದಿದ್ದ‌ರು.

ಇದ್ದಕ್ಕಿದ್ದಂತೆ ಬಿಪಿ ಲೋ ಆಗಿ ಬಿದ್ದ ಅದಿಲ್‌ನನ್ನು ಪೊಲೀಸರು ಅಸ್ಪತ್ರೆಗೆ ಸಾಗಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅದಿಲ್‌ ಸಾವನ್ನಪ್ಪಿದ್ದ. ಅಕ್ರೋಶಗೊಂಡ ಆರೋಪಿ ಸಂಬಂಧಿಕರು, ಆರೋಪಿಯ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ ದೊಂಬಿ ಎಬ್ಬಿಸಿದ್ದಾರೆ. ಪೊಲೀಸರು ನೀಡಿದ ಹಿಂಸೆಯ ಪರಿಣಾಮ ಲಾಕಪ್‌ ಡೆತ್‌ ಆಗಿದೆ, ಅದನ್ನು ಮುಚ್ಚಿಡಲು ಲೋ ಬಿಪಿ ನಾಟಕವಾಡಿದ್ದಾರೆ ಎಂದು ಜನ ಆರೋಪಿಸಿದ್ದಾರೆ.

ಇದನ್ನೂ ಓದಿ: Udupi Gang War: ಉಡುಪಿಯನ್ನು ಬೆಚ್ಚಿ ಬೀಳಿಸಿದ ಗ್ಯಾಂಗ್ ವಾರ್; ಮಾರಾಮಾರಿಯ ವಿಡಿಯೊ ವೈರಲ್‌, ಇಬ್ಬರ ಬಂಧನ

ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಅದಿಲ್‌ ಸಂಬಂಧಿಕರು ಹಾಗೂ ಸ್ನೇಹಿತರು, ಪೊಲೀಸ್ ಠಾಣೆಗೆ ನುಗ್ಗಿ ಠಾಣೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯ ಆವರಣದಲ್ಲಿ ನೂರಾರು ಜನ ಜಮಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Continue Reading

ಮಳೆ

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

Karnataka Rain : ರಾಜ್ಯಾದ್ಯಂತ ಮಳೆಯು ಚುರುಕುಗೊಂಡಿದ್ದು ಸಾಕಷ್ಟು ಅವಾಂತರವನ್ನು ಸೃಷ್ಟಿಸಿದೆ. ಮಂಗಳೂರಲ್ಲಿ ಭಾರಿ ಮಳೆಗೆ ರಾಜಕಾಲುವೆ ತುಂಬಿ ಹರಿದಿದ್ದು, ರಸ್ತೆ ಕಾಣದೆ ಆಟೋ ಚಾಲಕ ಕಾಲುವೆಗೆ ಉರುಳಿ ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಮನೆಯ ಚಾವಣಿ ಕುಸಿದು ಬಿದ್ದರೆ, ನಂಜನಗೂಡಲ್ಲಿ ಮನೆಗಳು ಜಲಾವೃತಗೊಂಡಿದೆ. ತುಮಕೂರಿನಲ್ಲಿ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ.

VISTARANEWS.COM


on

By

Karnataka Rain
Koo

ಮಂಗಳೂರು: ಮಂಗಳೂರು ನಗರದ ಕೊಟ್ಟಾರ ಅಬ್ಬಕ್ಕ ನಗರದಲ್ಲಿ ಭಾರಿ ಮಳೆಗೆ (Karnataka Rain) ರಾಜಕಾಲುವೆಗೆ ಆಟೋ ಉರುಳಿದ್ದು, ಚಾಲಕ ದಾರುಣವಾಗಿ ಮೃತಪಟ್ಟಿದ್ದಾರೆ. ಚಾಲಕ ದೀಪಕ್ (40) ದುರ್ಮರಣ ಹೊಂದಿದವರು. ಶುಕ್ರವಾರ ರಾತ್ರಿ ಸುರಿದ ಮಳೆಗೆ ಕೊಟ್ಟಾರದಲ್ಲಿ ರಾಜಕಾಲುವೆ ತುಂಬಿ ಹರಿಯುತ್ತಿತ್ತು. ಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ನೀರು ರಸ್ತೆಗೆ ಬಂದಿತ್ತು. ರಾತ್ರಿ ವೇಳೆ ಅದೇ ರಸ್ತೆಯಲ್ಲಿ ಬಂದ ಚಾಲಕ ದೀಪಕ್‌ ಆಟೋ ಸಮೇತ ರಾಜಕಾಲುವೆ ಉರುಳಿ ಬಿದ್ದಿದ್ದಾರೆ. ರಸ್ತೆ ಹಾಗೂ ರಾಜಕಾಲುವೆಗೆ ಸಮಾನವಾಗಿ ನೀರು ಹರಿಯುತ್ತಿದ್ದ ಕಾರಣ ಈ ಅವಘಡ ಸಂಭವಿಸಿದೆ. ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಆಟೋ ಚಾಲಕ ದೀಪಕ್‌ ಬಲಿಯಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ರಾಜಕಾಲುವೆಗೆ ತಡೆಗೋಡೆ ನಿರ್ಮಿಸದೇ ಇರುವುದೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಮಳೆಗೆ ನೆಲಕ್ಕೆ ಬಿದ್ದ ಮನೆಯ ಚಾವಣಿ

ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಸಮೀಪದ ನರಗನಹಳ್ಳಿಯಲ್ಲಿ ರಾತ್ರಿ ಸುರಿದ ಮಳೆಗೆ ಏಕಾಏಕಿ ಮನೆ ಚಾವಣಿ ನೆಲಕ್ಕೆ ಬಿದ್ದಿತ್ತು. ಅದೃಷ್ಟವಶಾತ್ ತಾಯಿ-ಮಗು ಪ್ರಾಣಾಪಾಯದಿಂದ ಪಾರಾಗಿದೆ. ಗುಡುಗು ಸಹಿತ ಮಳೆಯ ರಭಸಕ್ಕೆ ಸೀಟು ಪುಡಿ ಪುಡಿಯಾಗಿದೆ. ತಾಯಿ-ಮಗು ಮಲಗಿದ್ದ ಪಕ್ಕದಲ್ಲೇ ಮನೆ ಮೇಲಿನ ಸೀಟು ಬಿದ್ದಿದೆ. ಆನಂದಮ್ಮ ಎಂಬುವವರಿಗೆ ಸೇರಿದ ಮನೆ ಕುಸಿದು ಬಿದ್ದಿದ್ದು, ರಾತ್ರಿಯಿಡೀ ಪಕ್ಕದ ಮನೆಯಲ್ಲಿ ವಾಸ ಮಾಡುವಂತಾಯಿತು. ಮನೆ ಕಳೆದುಕೊಂಡ ಕುಟುಂಬ ಕಂಗಲಾಗಿತ್ತು. ಇತ್ತ ಮನೆ ಕುಸಿದರೂ ಸ್ಥಳಕ್ಕೆ ಬಾರದ ಪಂಚಾಯಿತಿ ಸಿಬ್ಬಂದಿ ತಾಲೂಕು ಆಡಳಿತದ ವಿರುದ್ದ ಸ್ಥಳೀಯರು ಕಿಡಿಕಾರಿದರು.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮಳೆಯ ಅವಾಂತರಕ್ಕೆ 16 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ತೂಬಗೆರೆ ಹೋಬಳಿಯಲ್ಲಿ ಸಾಕಷ್ಟು ಹಾನಿಯಾಗಿದೆ. ಬುಡ ಸಮೇತ ಮರಗಳು ರಸ್ತೆಗೆ ಬಿದ್ದಿವೆ. ಅಮದಾಜು 80ಕ್ಕೂ ಹೆಚ್ಚು ಮರಗಳು ಧರಗೆ ಉರುಳಿವೆ. ತೂಬಗೆರೆ ಹೋಬಳಿಯಲ್ಲಿ ವಿದ್ಯುತ್ ಕಂಬ ಬಿದ್ದ ಕಾರಣ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಬೆಸ್ಕಾಂ ಸಿಬ್ಬಂದಿ ಬೆಳಗ್ಗೆಯಿಂದಲೂ ಕಂಬಗಳನ್ನು ಸರಿಪಡಿಸುತ್ತಿದ್ದಾರೆ. ಮಳೆಯ ಅವಾಂತರಕ್ಕೆ ವಿದ್ಯುತ್ ಇಲ್ಲದೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಇಷ್ಟೆಲ್ಲಾ ಆದರೂ ಕೂಡ ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ. ತಹಸೀಲ್ದಾರ್, ಇಓ ಯಾರೂ ಕೂಡ ಭೇಟಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ವ್ಯಾಪಕ ಮಳೆ

ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದ್ದು, ಕಲ್ಲತ್ತಿಗರಿ ಜಲಪಾತ ಮೈದುಂಬಿ ಹರಿಯುತ್ತಿದೆ. ಮೊನ್ನೆವರೆಗೂ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆ ಇತ್ತು. ರಾತ್ರಿ ಸುರಿದ ಒಂದೇ ಮಳೆಗೆ ಕಲ್ಲತ್ತಿಗರಿ ಜಲಪಾತ ಧುಮ್ಮಿಕ್ಕುತ್ತಿದೆ. ಕೆಮ್ಮಣ್ಣುಗುಂಡಿ ಗುಡ್ಡಗಾಡು ತಪ್ಪಲ್ಲಿನಲ್ಲಿ ಭಾರೀ ಮಳೆ ಹಿನ್ನೆಲೆ ಜಲಪಾತ ನೋಡಲು ಪ್ರವಾಸಿಗರ ದಂಡು ಬರುತ್ತಿದೆ.

ತರೀಕೆರೆ ತಾಲೂಕಿನ ತ್ಯಾಗದಬಾಗಿ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಹಳ್ಳ ಬಂದಿದ್ದರಿಂದ ಇಟಾಚಿ ಮುಳುಗಿದೆ. ತ್ಯಾಗದ ಬಾಗಿ ಗ್ರಾಮದಲ್ಲಿ ಸೇತುವೆ ಇಕ್ಕೆಲಗಳನ್ನು ಕ್ಲೀನ್ ಮಾಡುವಾಗ ಈ ಘಟನೆ ನಡೆದಿದೆ. ಕೆಮ್ಮಣ್ಣುಗುಂಡಿ-ಕಲ್ಲತ್ತಿಗರಿ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆ ಹಳ್ಳದಲ್ಲಿ ನೀರು ಹೆಚ್ಚಾಗಿ ಇಟಾಚಿ ಮುಳುಗಿದೆ. ಕಾರ್ಮಿಕರಿದ್ದರು ಇಟಾಚಿ ಮೇಲೆ ತರಲು ಸಾಧ್ಯವಾಗಿಲ್ಲ. ಇಟಾಚಿ ಬಿಟ್ಡು ಮೇಲೆ ಬಂದು ಕಾರ್ಮಿಕರು ಜೀವ ಉಳಿಸಿಕೊಂಡಿದ್ದಾರೆ. ಮಳೆ ಕಡಿಮೆ ಆಗುವವರೆಗೂ ಹಳ್ಳದಲ್ಲೇ ಇಟಾಚಿ ಲಾಕ್ ಆಗಲಿದೆ.

ಇದನ್ನೂ ಓದಿ: Fake Intelligence Officer : ಜಾಸ್ತಿ `ಇಂಟೆಲಿಜೆಂಟ್‌’ ಆಗ್ಬೇಡಿ! ಊರವರ ಮುಂದೆ ಪೊಲೀಸ್‌ ಎಂದು ಬಿಲ್ಡಪ್‌ ಕೊಟ್ಟವ ಈಗ ಲಾಕಪ್‌ ಒಳಗೆ!

ಮಳೆಗೆ ಸೋರುತಿಹುದು ಕೆಎಸ್‌ಆರ್‌ಟಿಸಿ ಬಸ್ಸಿನ ಮಾಳಿಗೆ

ಕೊಡಗು ಜಿಲ್ಲೆಯಲ್ಲೂ ಮಳೆಯಾಗುತ್ತಿದ್ದು, ಕೆಎಸ್‌ಆರ್‌ಟಿಸಿ ಬಸ್ಸಿನ ಮಾಳಿಗೆ ಸೋರುತ್ತಿದೆ. ಮಳೆಯಿಂದಾಗಿ ಬಸ್‌‌ನೊಳಗೆ ಇರುವ ಪ್ರಯಾಣಿಕರ ಮೇಲೆ ನೀರು ಬೀಳುವ ವಿಡಿಯೊ ವೈರಲ್‌ ಆಗಿದೆ. ಮೈಸೂರಿನಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಬಸ್ ಇದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಯಾವ ಡಿಪೋ ಬಸ್ ಎಂಬ ಬಗ್ಗೆ ಮಾಹಿತಿ‌ ಲಭ್ಯವಿಲ್ಲ.

ಧಾರಾಕಾರ ಮಳೆಗೆ ಜಲಾವೃತಗೊಂಡು ನಂಜನಗೂಡು ಮನೆಗಳು

ಮೈಸೂರು ಭಾಗದಲ್ಲಿ ಮಳೆ ಅಬ್ಬರ ಜೋರಾಗಿದ್ದು, ನಂಜನಗೂಡಿನಲ್ಲಿ ಮನೆಗಳು ಜಲಾವೃತಗೊಂಡಿವೆ. ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ದಿನಸಿ, ಗೃಹೋಪಯೋಗಿ ವಸ್ತುಗಳು ನಾಶವಾಗಿವೆ. ನಂಜನಗೂಡಿನ ಅಶೋಕಪುರಂ ಬಡಾವಣೆಯಲ್ಲಿ ಘಟನೆ ನಡೆದಿದೆ. ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ಮನೆಗಳಿಗೆ ಕಲುಷಿತ ನೀರು ನುಗ್ಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ತುಮಕೂರಿನಲ್ಲಿ ಧರೆಗುರುಳಿದ ಮರಗಳು, ವಿದ್ಯುತ್‌ ಕಂಬಗಳು

ಗಾಳಿ ಮಳೆ ಅಬ್ಬರಕ್ಕೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ನಡೆದಿದೆ. ಮಳೆ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತಗೊಳಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಐದಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಇನ್ನೂ ರಸ್ತೆಗೆ ಮರ ಬಿದ್ದು ಕೆಲ ಕಾಲ ಸಂಚಾರಕ್ಕೆ ತೊಂದರೆಯಾಗಿತ್ತು. ಕೊರಟಗೆರೆ ಮುಖ್ಯರಸ್ತೆಗೆ ಮರ ಬಿದ್ದ ಹಿನ್ನೆಲೆ ಸಂಚಾರಕ್ಕೆ ತೊಂದರೆಯಾಗಿದ್ದು, ಬಳಿಕ ಜೆಸಿಬಿ ಸಹಾಯದಿಂದ ಮರವನ್ನು ತೆರವುಗೊಳಿಸಲಾಯಿತು.

ಯಾದಗಿರಿಯಲ್ಲಿ ಸಿಡಿಲು ಬಡಿದು ಹೊತ್ತಿ ಉರಿದ ಮನೆ

ತಡರಾತ್ರಿ ಬಿರುಗಾಳಿ ಸಹಿತ ಮಳೆ ಆಗಿದ್ದು, ಸಿಡಿಲು ಬಡಿದು ಮನೆಯೊಂದು ಹೊತ್ತಿ ಉರಿದಿದೆ. ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸಿಂಗನಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪತ್ರಾಸ್ ಮನೆಗೆ ಸಿಡಿಲು ಹೊಡೆದು ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದರು. ಅಂದಾಜು ಐದು ಲಕ್ಷ ಮೌಲ್ಯದ ವಸ್ತುಗಳು ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ, ಗೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗಾಳಿ ಮಳೆಗೆ ಎರಡು ದಿನದಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕರೆಂಟ್ ಸಮಸ್ಯೆಯಿಂದ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಯಾದಗಿರಿಯ ಹೊಸಳ್ಳಿ, ಹೊಸಳ್ಳಿ ತಾಂಡಾ ಹಾಗೂ ತಡಿಬಿಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕಳೆದ ಎರಡು ದಿನಗಳಿಂದ ಕರೆಂಟ್ ಸಮಸ್ಯೆಯಿಂದ ಬೋರ್‌ವೆಲ್‌ಗಳಲ್ಲಿ ನೀರು ಬಂದಿಲ್ಲ. ಇದರಿಂದಾಗಿ ಗ್ರಾಮದ ಸಮೀಪದ ಪೆಟ್ರೋಲ್ ಬಂಕ್ ಬಳಿಯ ಬೋರ್‌ವೆಲ್‌ನಿಂದ ನೀರನ್ನು ತಂದು ಬಳಸುತ್ತಿದ್ದಾರೆ. ಸರತಿ ಸಾಲಿನಲ್ಲಿ ಬಿಂದಿಗೆಯಿಟ್ಟು ನೀರಿಗಾಗಿ ಕಾದು ಕೂರುವ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: Murder case : ದನ ಕಟ್ಟುವ ವಿಚಾರಕ್ಕೆ ಕಿರಿಕ್‌; ಕಾಲಿಂದ ಒದ್ದು ಕುಡುಗೋಲಿನಿಂದ ಹೊಡೆದು ದೊಡ್ಡಮ್ಮನನ್ನೇ ಕೊಂದ ದುಷ್ಟ

ಮಂಡ್ಯದಲ್ಲಿ ಧಾರಾಕಾರ ಮಳೆ ಕರೆಂಟ್‌ ಕಟ್‌

ಮಂಡ್ಯ ಜಿಲ್ಲೆ ಕೆಆರ್‌ಪೇಟೆ ತಾಲೂಕಿನ ಹೆಗ್ಗಡಹಳ್ಳಿಯಲ್ಲಿ ಧಾರಾಕಾರ ಮಳೆಯಿಂದ ಅವಾಂತರವೇ ಸೃಷ್ಟಿಯಾಗಿದೆ. ವರುಣನ ಅಬ್ಬರಕ್ಕೆ ವಿದ್ಯುತ್ ತಂತಿ ಹಾಗೂ ಮರಗಳು ಧರೆಗುರುಳಿವೆ. ಹೆಗ್ಗಡಹಳ್ಳಿ ಗ್ರಾಮದಲ್ಲಿ 5ಕ್ಕೂ ಹೆಚ್ಚು ಮನೆಗಳಲ್ಲಿ ಚಾವಣಿ ಹಾರಿಹೋಗಿವೆ. ಬಿರುಗಾಳಿಗೆ ಮನೆಗಳ ಮೇಲೆ ವಿದ್ಯುತ್ ಕಂಬ ಉರುಳಿದ್ದು, ಬೇರು ಸಮೇತ ಮರ ಧರೆಗುರುಳಿದ ಪರಿಣಾಮ ಗ್ರಾಮದ ಸಂಚಾರ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದ ಕಾರಣ ವಿದ್ಯುತ್ ಇಲ್ಲದೆ ಜನರು ಕಂಗಾಲಾಗಿದ್ದಾರೆ. ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರ ಮನವಿ ಮಾಡಿದ್ದಾರೆ.

ಕೋಡಿ ಬಿದ್ದ ಮಲ್ಲಾಪುರ ಕೆರೆ

ಚಿತ್ರದುರ್ಗದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮಲ್ಲಾಪುರ ಕೆರೆ ಕೋಡಿ ಬಿದ್ದಿದೆ. ಕೋಡಿ ಬಿದ್ದ ಪರಿಣಾಮ ಕೆಲ ಮನೆಗಳಿಗೆ ನೀರು ನುಗ್ಗಿದೆ. ನಗರಸಭೆ ಅಧಿಕಾರಿಗಳು ಕೆರೆಯಲ್ಲಿದ್ದ ಕಸ ತೆಗೆಯುತ್ತಿದ್ದಾರೆ. ಕಸದಿಂದ ಸೇತುವೆ ಕೆಳಗೆ ಕೆರೆ ನೀರು ನಿಂತಿದೆ. ಹಂತ ಹಂತವಾಗಿ ಕಸ ತೆರವು ಮಾಡುತ್ತಿದ್ದರೆ ಇತ್ತ ಕೆರೆ ನೀರಿನಲ್ಲಿ ಮೀನು ಹಿಡಿಯಲು ಸ್ಥಳೀಯರು ಮುಂದಾದರು.

ಹಾಸನದಲ್ಲಿ ಮಳೆಗೆ ಬೆಳೆ ಹಾನಿ

ಹಾಸನ ಜಿಲ್ಲೆಯಲ್ಲಿ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಬೇಲೂರು ತಾಲೂಕಿನ ಹಳೆಬೀಡು ಹೋಬಳಿಯಲ್ಲಿ ಗಾಳಿ ಮಳೆಗೆ ಬೆಳೆಯು ನಾಶವಾಗಿದೆ. ಬಾಳೆ, ಅಡಿಕೆ, ತೆಂಗು ಬೆಳೆ ‌ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಕ್ಯಾತಲಾಪುರ ಗ್ರಾಮದಲ್ಲಿ ಬಾಳೆ, ಅಡಿಕೆ, ತೆಂಗು ಬೆಳೆ ಧರೆಗುರುಳಿದೆ. ಫಸಲಿಗೆ ಬಂದಿದ್ದ ತೆಂಗು, ಬಾಳೆ, ಅಡಿಕೆ ಬೆಳೆ ಸಂಪೂರ್ಣ ನಾಶವಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಗ್ರಾಮದ ರೈತ ಶಿವಮೂರ್ತಿ ಒತ್ತಾಯಿಸಿದ್ದಾರೆ.

ಇತ್ತ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಸಮೀಪದ ಸೂಪ್ಪನಹಳ್ಳಿ ಗ್ರಾಮದಲ್ಲಿ ಗಾಳಿ- ಮಳೆಗೆ ವಾಸದ ಮನೆಯ ಚಾವಣಿ ಕುಸಿದಿದೆ. ಸೂಪ್ಪನಹಳ್ಳಿ ಗ್ರಾಮದ ರುದ್ರೇಶ್ ಎಂಬುವವರಿಗೆ ಸೇರಿದ ಮನೆಯು ಭಾರಿ ಗಾಳಿಗೆ ಮನೆಯ ಚಾವಣಿ ಶೀಟ್‌ ಹಾರಿ ಹೋಗಿದೆ. 200 ಮೀಟರ್ ದೂರಕ್ಕೆ ಹಾರಿ ಬಿದ್ದಿದ್ದು, ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳೆಲ್ಲವೂ ನೀರುಪಾಲಾಗಿದೆ. ಸೂಕ್ತ ಪರಿಹಾರಕ್ಕೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ವಾರಾಂತ್ಯಕ್ಕೆ ಗುಡುಗು ಸಹಿತ ಭಾರಿ ಮಳೆ ; 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Karnataka Weather Forecast : ರಾಜ್ಯಾದ್ಯಂತ ಮೇ 25ರಂದು ಗುಡುಗು ಸಹಿತ ಭಾರಿ (Rain News) ಮಳೆಯಾಗಲಿದ್ದು, 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ (Yellow Alert) ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಲಾಗಿದೆ.

VISTARANEWS.COM


on

By

karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆ (Rain News) ಇದೆ. ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚು ಮತ್ತು 30-40 ಕಿ.ಮೀ ವ್ಯಾಪ್ತಿಯಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ರಾಮನಗರ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಹಾವೇರಿ, ವಿಜಯನಗರ, ಬಳ್ಳಾರಿ, ಕೊಪ್ಪಳ, ಗದಗ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಮಲೆನಾಡಿನ ಹಾಸನ ಮತ್ತು ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ವ್ಯಾಪಕ ಮಳೆಯಾಗಲಿದೆ.

ಇದನ್ನೂ ಓದಿ: Excise revenue: ಇದು ಎಣ್ಣೆ ಮಹಿಮೆ! ಟಾರ್ಗೆಟ್‌ ಮೀರಿ ಹೋದ ಅಬಕಾರಿ ಇಲಾಖೆ; 15 ಪರ್ಸೆಂಟ್‌ ಹೆಚ್ಚು ವರಮಾನ

ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ. ಬೆಂಗಳೂರಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಯೆಲ್ಲೋ ಅಲರ್ಟ್‌

ಗುಡುಗು ಸಹಿತ ಭಾರೀ ಮಳೆಯೊಂದಿಗೆ ಗಂಟೆಗೆ 40-50 ಕಿ.ಮೀ ಗಾಳಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Hosanagara News: ಹೊಸನಗರದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ; ಟವರ್‌ ಏರಿ ಪ್ರತಿಭಟನೆಗೆ ಮುಂದಾದ ವಕೀಲ!

Hosanagara News: ಹೊಸನಗರ ತಾಲೂಕಿನ ಬಿಎಸ್ಎನ್ಎಲ್ ಮೊಬೈಲ್ (BSNL Mobile) ಗ್ರಾಹಕರ ಸಂಕಷ್ಟಕ್ಕೆ ಪರಿಹಾರವೆಂಬುದು ದಶಕಗಳಿಂದ ಮರೀಚಿಕೆಯಾಗಿಯೇ ಉಳಿದಿದೆ. ನೆಟ್ವರ್ಕ್ ಸಮಸ್ಯೆ ಪರಿಹಾರಕ್ಕಾಗಿ ಒತ್ತಾಯಿಸಿ, ಮೇ 27ರಂದು ಮತ್ತಿಮನೆ ಗ್ರಾಮದಲ್ಲಿನ ಬಿಎಸ್ಎನ್ಎಲ್ ಟವರ್ ಏರಿ ಪ್ರತಿಭಟನೆ ನಡೆಸಲಾಗುವುದು ಎಂದು ವಕೀಲ ಮೋಹನ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

BSNL network problem in Hosanagara The lawyer decided to climb the tower and protest
Koo

ಹೊಸನಗರ: ತಾಲೂಕಿನ ಬಿಎಸ್ಎನ್ಎಲ್ ಮೊಬೈಲ್ (BSNL Mobile) ಗ್ರಾಹಕರ ಸಂಕಷ್ಟಕ್ಕೆ ಪರಿಹಾರವೆಂಬುದು ದಶಕಗಳಿಂದ ಮರೀಚಿಕೆಯಾಗಿಯೇ ಉಳಿದಿದೆ. ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕಾಗಿ ಒತ್ತಾಯಿಸಿ, ಮೇ 27ರಂದು ಮತ್ತಿಮನೆ ಗ್ರಾಮದಲ್ಲಿನ (Hosanagara News) ಬಿಎಸ್ಎನ್ಎಲ್ ಟವರ್ ಏರಿ ಪ್ರತಿಭಟನೆ ನಡೆಸಲಾಗುವುದು ಎಂದು ವಕೀಲ ಮೋಹನ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸನಗರ ತಾಲೂಕಿನ ಮತ್ತಿಮನೆ, ಸಂಪೆಕಟ್ಟೆ, ನಿಟ್ಟೂರು, ನಗರ, ಮಾಸ್ತಿಕಟ್ಟೆ, ಯಡೂರು ಭಾಗದಲ್ಲಿ ಸಾವಿರಾರು ಗ್ರಾಹಕರು ಬಿಎಸ್ಎನ್ಎಲ್ ಸಿಮ್ ಪಡೆದುಕೊಂಡಿದ್ದಾರೆ. ಪ್ರತಿ ತಿಂಗಳು 250 ರಿಂದ 499 ರೂ. ತನಕ ರೀಚಾರ್ಜ್ ಮಾಡಿಕೊಳ್ಳುತ್ತಾರೆ ಆದರೆ ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್ ಸರಿಯಾಗಿ ಇಲ್ಲದೆ ಗ್ರಾಹಕರು ವಂಚಿತರಾಗುತ್ತಿದ್ದಾರೆ. ಮಲೆನಾಡಿನ ಭಾಗದಲ್ಲಿ ಬಿಎಸ್ಎನ್ಎಲ್ ಸಂಸ್ಥೆ ಸಾರ್ವಜನಿಕ ಸೇವೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: Indian 2: ಜು.12ಕ್ಕೆ ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಚಿತ್ರ ರಿಲೀಸ್‌

ಸರ್ಕಾರಿ ಕಚೇರಿಯಲ್ಲಿ ಸರ್ವರ್ ಇಲ್ಲದೆ ಪ್ರತಿನಿತ್ಯ ಸಾರ್ವಜನಿಕರ ಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಭಟನೆ ನಡೆಸಲು ತೀರ್ಮಾನಿರುವುದಾಗಿ ಅವರು ತಿಳಿಸಿದರು.

ತಾಲೂಕಿನ ಕುಗ್ರಾಮಗಳಾದ ಮತ್ತಿಮನೆ, ಬಸವಾಪುರ, ಬೇಗದಳ್ಳಿ, ಬೇಳೂರು, ಬ್ರಾಹ್ಮಣತರುವೆ, ಬೈದೂರು, ದೊಬ್ಯಾಳು, ಗಿಣಿಕಲ್, ಗುಬ್ಬಿಗ, ಗುಡೋಡಿ, ರಿಪ್ಪನ್ ಪೇಟೆ, ಹೆದ್ದಾರಿಪುರ, ಗರ್ತಿ ಕೆರೆ, ಹುಂಚಹೊಳಗೋಡು, ಹೊರೊಯತಿಗೆ, ಕಳಸೆ, ಕಾನಗೋಡು, ಕರಿಗಲ್ಲು, ಕಟ್ಟೆಕೊಪ್ಪ, ಕಟ್ಟಿನಹೊಳೆ, ಕೆ.ಹೊನ್ನೆಕೊಪ್ಪ, ಕಿಲಂದೂರು ಜಂಗಲ್, ಕೊಳವಾಡಿ, ಕೊರನಕೋಟೆ, ಮಾಗೋಡಿ, ಮಳಲಿ, ಮನಸೆಟ್ಟೆ, ಮಸ್ಕಾನಿ, ನೀಲಕಂಠನ ತೋಟ, ನೆಲಗಳಲೆ, ಪಿ.ಕಲ್ಲುಕೊಪ್ಪ, ರಾವೆ, ತೋಟದ ಕೊಪ್ಪ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬಿಸ್ಎಸ್‌ಎನ್‌ಎಲ್ ನೆಟ್‌ವರ್ಕ್ ಅತ್ಯಂತ ಕಳಪೆಯಾಗಿದೆ.

ಇದನ್ನೂ ಓದಿ: Kannada New Movie: ಸಿನಿಮಾ ಆಗುತ್ತಿದೆ ʼಪೆನ್‌ಡ್ರೈವ್ʼ! ಕುತೂಹಲಭರಿತ ಪೋಸ್ಟರ್

ಈ ಭಾಗದ ಗ್ರಾಹಕರನ್ನು ಹಲವು ದಶಕಗಳಿಂದ ಬಿಎಸ್‌ಎನ್‌ಎಲ್‌ ವಂಚಿಸುತ್ತಾ ಬಂದಿದೆ. ತಾಲೂಕಿನ ಶೇ.60 ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಇಂಟರ್ನೆಟ್ ಸಂಪರ್ಕ ಸಮರ್ಪಕವಾಗಿಲ್ಲ ಇದರಿಂದ ಗ್ರಾಮ ಪಂಚಾಯಿತಿ ಕಾರ್ಯಕ್ಷಮತೆಗೆ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ವಕೀಲ ಮೋಹನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

Continue Reading
Advertisement
Fire Accident
ಸಂಪಾದಕೀಯ4 hours ago

ವಿಸ್ತಾರ ಸಂಪಾದಕೀಯ: ಗುಜರಾತ್ ಬೆಂಕಿ ದುರಂತ ನಮಗೆ ಎಚ್ಚರಿಕೆಯ ಪಾಠವಾಗಲಿ

election commission
ಪ್ರಮುಖ ಸುದ್ದಿ4 hours ago

Election Commission : ಶೀಘ್ರದಲ್ಲೇ ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ; ಚುನಾವಣಾ ಆಯೋಗ

Fire Accident
ಪ್ರಮುಖ ಸುದ್ದಿ4 hours ago

Fire Accident: 9 ಮಕ್ಕಳು ಸೇರಿ 27 ಜನರ ಸಾವಿಗೆ ಕಾರಣವಾದ ಗೇಮಿಂಗ್‌ ಜೋನ್‌ಗೆ NOCಯೇ ಇರ್ಲಿಲ್ಲ!

Virat kohli
ಪ್ರಮುಖ ಸುದ್ದಿ5 hours ago

Virat kohli : ಕೊಹ್ಲಿ ಹೆಸರು ಕೂಗಿ ಪಾಕಿಸ್ತಾನ ಬೌಲರ್​​ನನ್ನು ಲೇವಡಿ ಮಾಡಿದ ಅಭಿಮಾನಿಗಳು; ಇಲ್ಲಿದೆ ವಿಡಿಯೊ

Union Minister Pralhad Joshi latest statement about channagiri case
ಕರ್ನಾಟಕ5 hours ago

Pralhad Joshi: ನೇಹಾ, ಅಂಜಲಿ ಹತ್ಯೆ ಪ್ರಕರಣದಲ್ಲಿ ಕೈಗೊಳ್ಳದ ಕ್ರಮ ಚನ್ನಗಿರಿ ಪ್ರಕರಣದಲ್ಲಿ ಏಕೆ ಎಂದ ಪ್ರಲ್ಹಾದ್‌ ಜೋಶಿ

childrens summer camp closing ceremony at yallapur
ಉತ್ತರ ಕನ್ನಡ6 hours ago

Uttara Kannada News: ಭಾರತದ ಭವಿಷ್ಯ ಸಣ್ಣ ಸಣ್ಣ ಊರುಗಳಲ್ಲಿದೆ: ಹರಿಪ್ರಕಾಶ್‌ ಕೋಣೆಮನೆ

Hardik Pandya
ಪ್ರಮುಖ ಸುದ್ದಿ6 hours ago

Hardik Pandya : ಮೊದಲ ಲವ್​ ಬ್ರೇಕ್​ಅಪ್​ ಮಾಡಿಕೊಂಡಿದ್ದ ಪಾಂಡ್ಯ; ಇಲ್ಲಿದೆ ಆರಂಭದ ಪ್ರೇಮ ಕಹಾನಿ!

Siddaramaiah
ಕರ್ನಾಟಕ6 hours ago

Siddaramaiah: ನೀವು 2 ಸಾವಿರ ಕೊಟ್ಟಿದ್ದಕ್ಕೆ ದೇವರ ದರ್ಶನ; ಧರ್ಮಸ್ಥಳದಲ್ಲಿ ಸಿದ್ದರಾಮಯ್ಯಗೆ ಸ್ತ್ರೀಯರ ಮೆಚ್ಚುಗೆ

Shikhar Dhawan
ಪ್ರಮುಖ ಸುದ್ದಿ6 hours ago

Shikhar Dhawan : ಶಿಖರ್ ಧವನ್ ಮಿಥಾಲಿ ರಾಜ್ ಮದುವೆ? ಬಗ್ಗೆ ಮೌನ ಮುರಿದ ಭಾರತದ ಸ್ಟಾರ್

Union Minister Pralhad Joshi statement about Prajwal revanna case
ಕರ್ನಾಟಕ6 hours ago

Pralhad Joshi: ಸಿಎಂ ಪತ್ರ ಬರೆದು ರಾಜಕಾರಣ ಮಾಡಿದರೆ ಪ್ರಜ್ವಲ್ ಪಾಸ್‌ಪೋರ್ಟ್ ರದ್ದಾಗಲ್ಲ: ಪ್ರಲ್ಹಾದ್‌ ಜೋಶಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ12 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ7 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ7 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ7 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌