Viral News Kannadigas are angry with the viral tweetViral News : ನಾನು ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಟ್ವೀಟ್‌; ಕನ್ನಡಿಗರ ಆಕ್ರೋಶಕ್ಕೆ ಡಿಲೀಟ್‌ - Vistara News

ವೈರಲ್ ನ್ಯೂಸ್

Viral News : ನಾನು ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಟ್ವೀಟ್‌; ಕನ್ನಡಿಗರ ಆಕ್ರೋಶಕ್ಕೆ ಡಿಲೀಟ್‌

ʻನಾನು ಕನ್ನಡದಲ್ಲಿ ಮಾತನಾಡುವುದಿಲ್ಲʼ ಎಂದು ಬಿತ್ತಿ ಪತ್ರ ಹಿಡಿದು ಟ್ವೀಟ್‌ ಮಾಡಿದ್ದ ವ್ಯಕ್ತಿಯೋರ್ವನಿಗೆ (Viral News) ಕನ್ನಡಿಗರು ಬಿಸಿ ಮುಟ್ಟಿಸಿದ್ದು, ಆತ ಟ್ವಿಟ್ಟರ್‌ನಲ್ಲಿಯೇ ಕ್ಷಮೆ ಯಾಚಿಸಿದ್ದಾನೆ.

VISTARANEWS.COM


on

Viral News Kannadigas are angry with the viral tweet
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʻʻನಾನು ಕನ್ನಡದಲ್ಲಿ ಮಾತನಾಡುವುದಿಲ್ಲʼʼ ಎಂದು ಬಿತ್ತಿಪತ್ರ ಹಿಡಿದುಕೊಂಡು ಟ್ವೀಟ್‌ ಮಾಡಿ (Viral News) ಕನ್ನಡಿಗರ ಸಿಟ್ಟಿಗೆ ಕಾರಣರಾಗಿದ್ದ ಉದ್ಯೋಗ ಮಾರುಕಟ್ಟೆ ತಜ್ಞ, ವಾಗ್ಮಿ ರಾಹುಲ್‌ ಮಹೇಶ್ವರಿ ಟ್ವಿಟ್ಟರ್‌ನಲ್ಲಿಯೇ ಕ್ಷಮೆ ಯಾಚಿಸಿದ್ದು, ತಮ್ಮ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ.

ʻʻಐಟಿ ಸಿಟಿ ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್‌, ಆಟೋ ಡ್ರೈವರ್‌, ಟ್ರಾಫಿಕ್‌ ಪೊಲೀಸ್‌ ಸೇರಿದಂತೆ ಎಲ್ಲರೂ ʻಕನ್ನಡ ಬರುವುದಿಲ್ಲ ಎಂದರೆ….ʼ ತಾರತಮ್ಯ ತೋರುತ್ತಾರೆ. ಬೆಂಗಳೂರಿನ ಆರ್ಥಿಕತೆ ಹೊರಗಿನಿಂದ ಬಂದವರನ್ನೇ ಅವಲಂಬಿಸಿದ್ದರೂ ಕನ್ನಡ ಕಲಿಯಲೇಬೇಕೆಂದು ಒತ್ತಡ ಹೇರಲಾಗುತ್ತದೆʼʼ ಎಂದೆಲ್ಲಾ ರಾಹುಲ್‌ ಮಹೇಶ್ವರಿ ಟ್ವೀಟ್‌ ಮಾಡಿ ಅಸಮಧಾನ ತೋಡಿಕೊಂಡಿದ್ದರು. ಬೆಂಗಳೂರಿನಲ್ಲಿ ಭಾಷಾ ತಾರತಮ್ಯತೆ ಹೆಚ್ಚುತ್ತಿದೆ ಎಂದು ಸುಳ್ಳು ಮಾಹಿತಿ ಹಂಚಿಕೊಂಡಿದ್ದರು. ಇದು ವೈರಲ್‌ ಕೂಡ ಆಗಿತ್ತು.

ಕೋವಿಡ್‌ ಸಂದರ್ಭದಲ್ಲಿ ಹೊರಗಿನವರು ಬಾರದೇ ಇದ್ದುದ್ದರಿಂದ ಬೆಂಗಳೂರು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಯ ಮಾಲ್‌ಗಳಲ್ಲಿ ಜನರೇ ಇರಲಿಲ್ಲ. ಮೊಬೈಲ್‌ ಕಳ್ಳತನ ಹೆಚ್ಚಿತ್ತು. ಹೊರಗಿನಿಂದ ಬಂದ ನಾವು ತೆರಿಗೆ ಕಟ್ಟುತ್ತಿರುವು ದರಿಂದಲೇ ಬೆಂಗಳೂರು ಈಗ ಅಭಿವೃದ್ಧಿಯಾಗಿದೆ ಎಂಬರ್ಥದಲ್ಲಿ ತಮ್ಮ ವಾದ ಮಂಡಿಸಿದ್ದರು. ಯಾರೂ ನನಗೆ ಕನ್ನಡ ಕಲಿಯಿರಿ ಎಂದು ಒತ್ತಾಯಿಸಬಾರದು. ನನಗೆ ಬಿಡುವಾದಾಗ ಬೇರೆ ಬೇರೆ ಭಾಷೆಗಳಂತೆ ಕನ್ನಡ ಕಲಿಯುತ್ತೇನೆ. ಅಲ್ಲಿಯವರೆಗೂ ʻʻನನಗೆ ಕನ್ನಡ ಗೊತ್ತಿಲ್ಲʼʼ ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದರು.

ಇವರ ಟ್ವೀಟ್‌ಗೆ ಕನ್ನಡಿಗರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಈ ನಡುವೆ ತಮ್ಮ ಟ್ವೀಟ್‌ ಸಮರ್ಥಿಸಿಕೊಂಡು ಟ್ವೀಟ್‌ ಮಾಡಿದ್ದ ಅವರು, ʻʻನಾನು ಕನ್ನಡ ಮಾತನಾಡುವುದಿಲ್ಲʼʼ ಎಂದು ಹೇಳಿದ್ದಕ್ಕೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವಲತ್ತುಕೊಂಡಿದ್ದರು. ಇವರ ವಿರುದ್ಧ ಕಾನೂನು ಹೋರಾಟಕ್ಕೆ ಕನ್ನಡಿಗರು ಮುಂದಾಗುತ್ತಿದ್ದಂತೆಯೇ ಇದರ ಸುಳಿವು ಅರಿತ ರಾಹುಲ್‌ ಮಹೇಶ್ವರಿ ತಮ್ಮ ಟ್ವೀಟ್‌ ಅನ್ನು ಡಿಲಿಟ್‌ ಮಾಡಿದ್ದು, ಕ್ಷಮೆ ಯಾಚಿಸಿದ್ದಾರೆ.

ʻʻದೇಶದ ಬೇರೆ ಬೇರೆ ಭಾಗದಿಂದ ಬಂದಿರುವವರೊಂದಿಗೆ ಕನ್ನಡಿಗರನ್ನು ಬಹಳ ಚೆನ್ನಾಗಿ ನಡೆಸಿಕೊಳ್ಳುವುದೂ ತಮ್ಮ ಗಮನಕ್ಕೆ ಬಂದಿದೆ. ಈ ರೀತಿಯ ನನ್ನ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿರುವುದಕ್ಕೆ ಕ್ಷಮೆ ಯಾಚಿಸುತ್ತಿದ್ದೇನೆʼʼ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಕನ್ನಡದ ಪರವಾದ ಹೋರಾಟಕ್ಕೆ, ಹಿಂದಿ ಹೇರಿಕೆಯ ವಿರುದ್ಧ ನಡೆಸಲಾಗುವ ಆಂದೋಲನಕ್ಕೆ ಪ್ರತಿಯಾಗಿ ಹಿಂದಿಭಾಷಿಗರು ಕೂಡ ಪ್ರತಿ ಹೋರಾಟ ರೂಪಿಸುತ್ತಿದ್ದು, ಬೆಂಗಳೂರಿನಲ್ಲಿ ಹಿಂದಿ ಭಾಷಿಗರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: Zameer Ahmed Khan: ಜಮೀರ್‌ ಇಂಗ್ಲಿಷ್‌ ಪ್ರಮಾಣ; ಕನ್ನಡ ಕಲಿಯದ ಬಗ್ಗೆ ಮುಂದುವರಿದ ಕನ್ನಡಿಗರ ಆಕ್ರೋಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Viral Video: ಬೆಂಗಳೂರಿನಲ್ಲಷ್ಟೇ ಅಲ್ಲ, ಮೌಂಟ್ ಎವರೆಸ್ಟ್ ನಲ್ಲೂ ಈಗ ಟ್ರಾಫಿಕ್ ಜಾಮ್!!

ಮೌಂಟ್ ಎವರೆಸ್ಟ್ ನಲ್ಲಿ ಪರ್ವತಾರೋಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು,ಈ ಬಗ್ಗೆ ಭಾರತದ ಪರ್ವತಾರೋಹಿ ರಾಜನ್ ದ್ವಿವೇದಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video)ಆಗಿದೆ. ಅಲ್ಲೇಕೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ? ಈ ಕುರಿತ ಕುತೂಹಲಕರ ವರದಿ ಇಲ್ಲಿದೆ.

VISTARANEWS.COM


on

By

Viral Video
Koo

ಮೌಂಟ್ ಎವರೆಸ್ಟ್ ನಲ್ಲಿ (Mount Everest) ಪರ್ವತಾರೋಹಿಗಳು (climber) ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಆರೋಹಿಗಳ ಉದ್ದನೆಯ ಸರತಿಯ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ (Instagram) ಭಾರತದ (indian) ಪರ್ವತಾರೋಹಿ ರಾಜನ್ ದ್ವಿವೇದಿ (Rajan Dwivedi) ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದೆ.

ಮೌಂಟ್ ಎವರೆಸ್ಟ್ ನಲ್ಲಿ ಮಂಗಳವಾರ ಪರ್ವತಾರೋಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಬ್ರಿಟಿಷ್ ಪರ್ವತಾರೋಹಿ ಮಾರ್ ಪ್ಯಾಟರ್ಸನ್ (39) ಮತ್ತು ನೇಪಾಳಿ ಶೆರ್ಪಾ ಪಾಸ್ತೆಂಜಿ (23) ಅವರು ಹಿಲರಿ ಹಂತವನ್ನು ಹತ್ತುವಾಗ ಕುಸಿದು ಬಿದ್ದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಮೇ 20ರಂದು ರಾಜನ್ ದ್ವಿವೇದಿ ಅವರು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ವಿಡಿಯೋ ಅವರ ಹಿಂದೆ ಇರುವ ಆರೋಹಿಗಳ ಗುಂಪಿನ ಚಿತ್ರಣವನ್ನು ತೋರಿಸಿದೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ದ್ವಿವೇದಿ ಅವರು ಮೌಂಟ್ ಎವರೆಸ್ಟ್ ಅನ್ನು ಏರುವಾಗ ಎದುರಾಗುವ ಸವಾಲುಗಳ ಬಗ್ಗೆ ಹೇಳಿದ್ದಾರೆ. ಒಂದೇ ಹಗ್ಗವನ್ನು ಹಿಡಿದುಕೊಂಡು ನಾವೆಲ್ಲ ಜೊತೆಯಾಗಿ ಸಾಗುತ್ತಿದ್ದೇವೆ. ಪರ್ವತ ಏರಲು, ಇಳಿಯಲು ಟ್ರಾಫಿಕ್ ತೊಂದರೆ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಹವಾಮಾನ. ಆರೋಹಿಗಳ ದೊಡ್ಡ ಸಾಲು ಬರುತ್ತಿರುವುದನ್ನು ನೋಡುವಾಗ ನನಗೆ ಕೆಳಗೆ ಬರುವುದು ಒಂದು ದುಃಸ್ವಪ್ನದಂತೆ ಕಂಡಿತ್ತು ಮತ್ತು ತೀವ್ರವಾಗಿ ದಣಿದಿದ್ದೆ ಎಂದು ಹೇಳಿದ್ದಾರೆ.


ದ್ವಿವೇದಿ ಆರೋಹಣದ ಮೂರು ನಿರ್ದಿಷ್ಟ ಪ್ರಯಾಸಕರ ವಿಭಾಗಗಳನ್ನು ಏರಿದ್ದಾರೆ. ಖುಂಬು ಐಸ್‌ಫಾಲ್ಸ್, ಕ್ಯಾಂಪ್ 3 ರಿಂದ ಕ್ಯಾಂಪ್ 4 ಕ್ಕೆ ಆರೋಹಣ. ಕ್ಯಾಂಪ್ 4 ರಿಂದ ಶಿಖರದ ಅಂತಿಮ ವಲಯ ಸಾವಿನ ವಲಯ ವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ ರಾತ್ರಿಯ ಸಮಯದಲ್ಲಿ ಹೆಪ್ಪುಗಟ್ಟಿದ ತಾಪಮಾನದ ನಡುವೆ ಪ್ರವಾಸ ಕೈಗೊಳ್ಳಲಾಗುತ್ತದೆ.

ಮೌಂಟ್ ಎವರೆಸ್ಟ್ ಏರುವುದು ಒಂದು ತಮಾಷೆಯ ಸಂಗತಿ ಅಲ್ಲ ಮತ್ತು ವಾಸ್ತವವಾಗಿ ಅದು ಗಂಭೀರ ಆರೋಹಣ ಎಂದು ದ್ವಿವೇದಿ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಶಿಖರದಿಂದ ಇಳಿಯುವುದು ಸವಾಲಿನ ಕಾರ್ಯವಾಗುತ್ತಿದೆ. ವಿಶೇಷವಾಗಿ ಹವಾಮಾನ ವೈಪರೀತ್ಯದ ನಡುವೆಯೂ ಹೆಚ್ಚಿನ ಸಂಖ್ಯೆಯ ಆರೋಹಿಗಳು ಮೇಲೆ ಏರುತ್ತಿದ್ದಾರೆ ಎಂದು ದ್ವಿವೇದಿ ತಿಳಿಸಿದ್ದಾರೆ.

ಪ್ರಪಂಚದಾದ್ಯಂತ ಸುಮಾರು 500 ಆರೋಹಿಗಳು, ಹವ್ಯಾಸಿಗಳು ಮತ್ತು ಅನನುಭವಿಗಳು ಇದನ್ನು ಏರಲು ಪ್ರಯತ್ನಿಸುತ್ತಾರೆ. ಬಹುಶಃ 250- 300 ಮಂದಿ ಮಾತ್ರ ಯಶಸ್ವಿಯಾಗುತ್ತಾರೆ. ಅನೇಕರು ಗಾಯಗೊಂಡು ಪ್ರವಾಸವನ್ನು ಕೊನೆಗೊಳಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ದ್ವಿವೇದಿ ಹಂಚಿಕೊಂಡಿರುವ ವಿಡಿಯೋವು ಒಂದು ಹಗ್ಗದ ಸಾಲಿನಲ್ಲಿ ದೀರ್ಘ ಕಾಯುವಿಕೆ ಮತ್ತು ಟ್ರಾಫಿಕ್ ಅಪ್‌ಸ್ಟ್ರೀಮ್ ಮತ್ತು ಡೌನ್‌ಸ್ಟ್ರೀಮ್‌ನಲ್ಲಿ ಇಂಟರ್‌ಚೇಂಜ್‌ಗಳ ಮಾತುಕತೆಗಳನ್ನು ತೋರಿಸುತ್ತದೆ.

ಇದನ್ನೂ ಓದಿ: Snake Bite : ಮುಳ್ಳು ಚುಚ್ಚಿದೆ ಎಂದು ನಿದ್ರೆಗೆ ಜಾರಿದವನ ಮೈ ಸೇರಿತು ಹಾವಿನ ವಿಷ! ಬೆಳಗಾಗುವಷ್ಟರಲ್ಲಿ ಮೃತ್ಯು


ಉದ್ದನೆಯ ಸರದಿಯ ಮತ್ತೊಂದು ವಿಡಿಯೋ ವನ್ನು ಹಂಚಿಕೊಂಡ ಮಾಸ್ಸಿಮೊ ಎಕ್ಸ್ ನಲ್ಲಿ ಟ್ರಾಫಿಕ್ ಜಾಮ್‌ಗಳ ಕಾರಣಗಳು, ತಾಪಮಾನದಲ್ಲಿ ತೀವ್ರ ಕುಸಿತ, ಹಗ್ಗಗಳನ್ನು ಸರಿಪಡಿಸಿದ ದಿನಾಂಕ ಮತ್ತು ನಿಧಾನ ಪ್ರಯಾಣ, ಅನನುಭವಿ ಆರೋಹಿಗಳ ಕುರಿತು ಹೇಳಿಕೊಂಡಿದ್ದಾರೆ.

ಅನೇಕ ಪರಿಸರವಾದಿಗಳು ಮತ್ತು ಆರೋಹಿಗಳು ಎವರೆಸ್ಟ್‌ನಲ್ಲಿ ಜನಸಂದಣಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪರ್ವತದ ಮೇಲೆ ಅನೇಕ ಅಪಘಾತಗಳು ಮತ್ತು ಸಾವುಗಳ ಹೊರತಾಗಿಯೂ ನೂರಾರು ಜನರು ವಿಶ್ವದ ಅತಿ ಎತ್ತರದ ಶಿಖರವನ್ನು ಏರಲು ತಯಾರಾಗುತ್ತಾರೆ.

Continue Reading

ದೇಶ

Balkar Singh: ಕೆಲಸ ಕೇಳಿಕೊಂಡು ಬಂದ ಯುವತಿ ಎದುರು ಹಸ್ತಮೈಥುನ ಮಾಡಿಕೊಂಡ ಆಪ್‌ ಸಚಿವ; ವಿಡಿಯೊ ವೈರಲ್

Balkar Singh: ಬಲ್ಕಾರ್‌ ಸಿಂಗ್‌ ಅವರು ಕೆಲಸ ಕೇಳಿಕೊಂಡು ಬಂದ 21 ವರ್ಷದ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಕೆಲಸ ಕೊಡಿಸುವ ಆಸೆ ಹುಟ್ಟಿಸಿದ ಅವರು ವಿಡಿಯೊ ಕಾಲ್‌ ಮಾಡಿ ನಿನ್ನ ಬಟ್ಟೆ ಬಿಚ್ಚು ಎಂಬುದಾಗಿ ಒತ್ತಾಯಿಸಿದ್ದಾರೆ. ಅವರೂ ಯುವತಿಗೆ ಕಾಣುವಂತೆ ಹಸ್ತಮೈಥುನ ಮಾಡಿಕೊಂಡಿದ್ದಾರೆ ಎಂಬುದಾಗಿ ಬಿಜೆಪಿಯ ತಜಿಂದರ್‌ ಬಗ್ಗಾ ಆರೋಪಿಸುವ ಜತೆಗೆ ವಿಡಿಯೊವನ್ನು ಕೂಡ ಹಂಚಿಕೊಂಡಿದ್ದಾರೆ.

VISTARANEWS.COM


on

Balkar Singh
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನೂರಾರು ಕೋಟಿ ರೂ. ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಸೇರಿ ಆಮ್‌ ಆದ್ಮಿ ಪಕ್ಷದ ಹಲವು ನಾಯಕರು, ಸಚಿವರು ಜೈಲುಪಾಲಾಗಿದ್ದಾರೆ. ಇದರ ಬೆನ್ನಲ್ಲೇ, ಪಂಜಾಬ್‌ನಲ್ಲಿ ಆಪ್‌ ಸಚಿವ ಬಲ್ಕಾರ್‌ ಸಿಂಗ್‌ (Balkar Singh) ಅವರ ಕಾಮಕೇಳಿಯೊಂದು ಬಯಲಾಗಿದೆ. ಕೆಲಸ ಕೇಳಿಕೊಂಡು ಬಂದಿದ್ದ ಯುವತಿ ಜತೆ ಪಂಜಾಬ್‌ ಸಚಿವ ಬಲ್ಕಾರ್‌ ಸಿಂಗ್‌ ಹಸ್ತಮೈಥುನ ಮಾಡಿಕೊಂಡಿದ್ದಾರೆ” ಎಂಬುದಾಗಿ ಬಿಜೆಪಿ ನಾಯಕ ತಜಿಂದರ್‌ ಬಗ್ಗಾ ಆರೋಪಿಸುವ ಜತೆಗೆ, ವಿಡಿಯೊವನ್ನು ಕೂಡ ಹಂಚಿಕೊಂಡಿದ್ದಾರೆ. ಇದು ಈಗ ಭಾರಿ ವೈರಲ್‌ ಆಗಿದೆ.

ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ತಜಿಂದರ್‌ ಬಗ್ಗಾ ಅವರು ಬಲ್ಕಾರ್‌ ಸಿಂಗ್‌ ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ಆಮ್‌ ಆದ್ಮಿ ಪಕ್ಷದಲ್ಲಿ ಮಹಿಳೆಯರಿಗೆ ರಕ್ಷಣೆ, ಗೌರವ ಇಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಈಗ ಆಪ್‌ ಸಚಿವ ಬಲ್ಕಾರ್‌ ಸಿಂಗ್‌ ಅವರು ಕೆಲಸ ಕೇಳಿಕೊಂಡು ಬಂದ 21 ವರ್ಷದ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಕೆಲಸ ಕೊಡಿಸುವ ಆಸೆ ಹುಟ್ಟಿಸಿದ ಅವರು ವಿಡಿಯೊ ಕಾಲ್‌ ಮಾಡಿ ನಿನ್ನ ಬಟ್ಟೆ ಬಿಚ್ಚು ಎಂಬುದಾಗಿ ಒತ್ತಾಯಿಸಿದ್ದಾರೆ. ಅವರೂ ಯುವತಿಗೆ ಕಾಣುವಂತೆ ಹಸ್ತಮೈಥುನ ಮಾಡಿಕೊಂಡಿದ್ದಾರೆ” ಎಂಬುದಾಗಿ ತಜಿಂದರ್‌ ಬಗ್ಗಾ ಆರೋಪಿಸಿದ್ದಾರೆ.

“ಕರ್ತಾರ್‌ಪುರ ಸಾಹಿಬ್‌ ವಿಧಾನಸಭೆ ಕ್ಷೇತ್ರದ ಶಾಸಕ, ಸ್ಥಳೀಯ ಸಂಸ್ಥೆಗಳ ಸಚಿವ ಬಲ್ಕಾರ್‌ ಸಿಂಗ್‌ ಅವರನ್ನು ಮುಂದಿನ 24 ಗಂಟೆಗಳಲ್ಲಿಯೇ ವಜಾಗೊಳಿಸಬೇಕು. ಇಲ್ಲದಿದ್ದರೆ, ಮುಂಬರುವ ಚುನಾವಣೆಯಲ್ಲಿ ಪಂಜಾಬ್‌ನ ಜನರು ಆಮ್‌ ಆದ್ಮಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಹೇಳಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಬಲ್ಕಾರ್‌ ಸಿಂಗ್‌ ವಿಡಿಯೊ ವೈರಲ್‌ ಆಗುತ್ತಲೇ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಅವರು ಕೂಡ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಕಾಂಗ್ರೆಸ್‌, ಅಕಾಲಿದಳ ಟೀಕೆ

ಬಲ್ಕಾರ್‌ ಸಿಂಗ್‌ ಅವರು ಅನುಚಿತವಾಗಿ ವರ್ತಿಸುವ ವಿಡಿಯೊ ವೈರಲ್‌ ಆಗಿರುವ ಬಗ್ಗೆ ಶಿರೋಮಣಿ ಅಕಾಲಿ ದಳ ಹಾಗೂ ಕಾಂಗ್ರೆಸ್‌ ಟೀಕೆ ವ್ಯಕ್ತಪಡಿಸಿವೆ. “ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಬಲ್ಕಾರ್‌ ಸಿಂಗ್‌, ಲಾಲ್‌ ಚಾಂದ್‌ ಕಟರುಚಾಕ್‌ ಅವರಂತಹ ನಾಚಿಕೆ ಇಲ್ಲದ ಸಚಿವರನ್ನು ರಕ್ಷಣೆ ಮಾಡುತ್ತಿರುವುದು ಖಂಡನೀಯ. ಕೂಡಲೇ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿವೆ. ಆದಾಗ್ಯೂ, ಬಲ್ಕಾರ್‌ ಸಿಂಗ್‌ ವಿರುದ್ಧ ಯಾವುದೇ ಯುವತಿಯು ದೂರು ನೀಡಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Aam Aadmi Party: ಆಪ್‌ಗೆ ಬರ್ತಿದ್ಯಾ ಖಲಿಸ್ತಾನಿ ಫಂಡಿಂಗ್ಸ್?‌ BKI ಉಗ್ರನ ಜೊತೆ ಪಕ್ಷ ಮುಖಂಡ ಫೊಟೋ

Continue Reading

ಕ್ರೈಂ

Snake Bite : ಮುಳ್ಳು ಚುಚ್ಚಿದೆ ಎಂದು ನಿದ್ರೆಗೆ ಜಾರಿದವನ ಮೈ ಸೇರಿತು ಹಾವಿನ ವಿಷ! ಬೆಳಗಾಗುವಷ್ಟರಲ್ಲಿ ಮೃತ್ಯು

Snake Bite: ಕಾಲಿಗೆ ಎರಡು ಬಾರಿ ಹಾವು ಕಚ್ಚಿದ್ದರೂ, ಮುಳ್ಳು ಚುಚ್ಚಿರಬಹುದೆಂದು ನಿರ್ಲಕ್ಷ್ಯ ತೋರಿದ ವ್ಯಕ್ತಿಯೊಬ್ಬ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

VISTARANEWS.COM


on

By

snake bite in chikkamagaluru
Koo

ಚಿಕ್ಕಮಗಳೂರು: ಜಮೀನಿನಲ್ಲಿ ಕೆಲಸ ಮುಗಿಸಿ ಬಂದ ವ್ಯಕ್ತಿಯೊಬ್ಬ ಮುಳ್ಳು ಚುಚ್ಚಿದೆ ಎಂದು ತಿಳಿದು ರಾತ್ರಿ ಊಟ ಮಾಡಿ ಮಲಗಿದವ ಚಿರನಿದ್ರೆಗೆ ಜಾರಿದ್ದ. ಗ್ರಾಮದ ಗಣ್ಯ ನಾಯ್ಕ್ (44) ಮೃತ ದುರ್ದೈವಿ. ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಘಟನೆ (Snake Bite) ನಡೆದಿದೆ.

ಗಣ್ಯ ನಾಯ್ಕ್‌ ಜಮೀನಿನಲ್ಲಿ ಕೆಲಸ ಮಾಡುವಾಗ ಕಾಲಿಗೆ ಎರಡು ಬಾರಿ ಹಾವು ಕಚ್ಚಿತ್ತು. ಆದರೆ ಮುಳ್ಳು ಚುಚ್ಚಿರಬೇಕು ಏನು ಆಗಲ್ಲ ಎಂದು ನಿರ್ಲಕ್ಷಿಸಿದ್ದ. ಹಾವು ಕಚ್ಚಿದ್ದು ಗಮನಕ್ಕೆ ಬಾರದೆ ಮನೆಗೆ ಬಂದು ಊಟ ಮಾಡಿ ಮಲಗಿದ್ದರು. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದ.

ಕುಟುಂಬಸ್ಥರು ಮಲಗಿದ್ದ ಗಣ್ಯನನ್ನು ಎಬ್ಬಿಸಲು ಮುಂದಾಗಿದ್ದಾರೆ. ಆದರೆ ಆತ ಅಲುಗಾಡದೆ ಇದ್ದಾಗ ಅನುಮಾನಗೊಂದು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದಾಗಿ ಹೇಳಿದ್ದಾರೆ. ಒಂದು ಸಣ್ಣ ನಿರ್ಲಕ್ಷ್ಯಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಜಿಂಕೆಗಳ ಅನುಮಾನಾಸ್ಪದ ಸಾವು

ಹತ್ತು ದಿನಗಳ ಅಂತರದಲ್ಲಿ ಎರಡು ಜಿಂಕೆಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಕಿಡಿಕಾರಿದ್ದಾರೆ. ಚಿಕ್ಕಬಳ್ಳಾಪುರದ ಚಿಂತಾಮಣಿ ‌ತಾಲ್ಲೂಕಿನ‌ ಏನಿಗದೆಲೆ ಗ್ರಾಮದಲ್ಲಿ ಘಟನೆ ನಡೆದಿದೆ. ಏನಿಗದೆಲೆ ಗ್ರಾಮದ ಹರೀಶ್ ಎಂಬುವರ ತೋಟದಲ್ಲಿ ಜಿಂಕೆಗಳ ಮೃತಪಟ್ಟಿವೆ. ಚಿಲಕಲನೇರ್ಪು ಗ್ರಾಮಪಂಚಾಯ್ತಿ ವ್ಯಾಪ್ತಿಯ ಏನಿಗದೆಲೆ ಗ್ರಾಮದಲ್ಲಿ ಬೇಟೆಗಾರರ ಹಾವಳಿಗೆ ಜಿಂಕೆಗಳು ಬಲಿಯಾಗುತ್ತಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: Love Propose : I Love You ಮೆಸೇಜ್‌ ಕಳಿಸಿದ ಮುಸ್ಲಿಂ ಯುವಕನಿಗೆ ವಿವಾಹಿತೆಯಿಂದ ಚಪ್ಪಲಿ ಏಟು!

ಬೈಕ್‌-ಕ್ಯಾಂಟರ್‌ ಡಿಕ್ಕಿಗೆ ಯುವತಿ ನಾಲಿಗೆ ಕಟ್! ಸವಾರ ಸ್ಪಾಟ್‌ ಡೆತ್‌

ಚಿಕ್ಕಮಗಳೂರು/ಬೆಳಗಾವಿ: ಬೈಕ್-ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಹಿಂಬದಿ ಇದ್ದ ಯುವತಿಯ ನಾಲಿಗೆ ಕಟ್ ಆಗಿದೆ. ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ (Road Accident) ಘಟನೆ ನಡೆದಿದೆ.

ಶಿವರಾಜ್ (26) ಮೃತ ದುರ್ದೈವಿ. ಲಾವಣ್ಯ (20) ನಾಲಿಗೆ ಕಳೆದುಕೊಂಡವಳು. ಲಾವಣ್ಯ ಹಾಸನದ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಳು. ಶಿವರಾಜ್-ಲಾವಣ್ಯ ಇಬ್ಬರು ಅರಸೀಕೆರೆ ತಾಲೂಕಿನ ಬಂದೂರು ಮೂಲದವರು.

ಇಬ್ಬರು ಬೈಕ್‌ನಲ್ಲಿ ಬರುವಾಗ ಕ್ಯಾಂಟರ್‌ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಶಿವರಾಜ್‌ ಸ್ಥಳದಲ್ಲೆ ಮೃತಪಟ್ಟರೆ, ಇತ್ತ ಹಿಂಬದಿ ಕುಳಿತಿದ್ದ ಲಾವಣ್ಯ ಡಿಕ್ಕಿ ರಭಸಕ್ಕೆ ನಾಲಿಗೆಯೇ ಕಟ್‌ ಆಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಗಾಯಾಳು ಲಾವಣ್ಯಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

ಉಳುಮೆ ಮಾಡುವಾಗ ಕರೆಂಟ್‌ ಶಾಕ್‌ಗೆ ರೈತ ಬಲಿ

ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ರೈತರೊಬ್ಬರು ದುರ್ಮರಣ ಹೊಂದಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನದಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ರೈತ ಮಂಜುನಾಥ್ ದಾಸನಕೊಪ್ಪ ಮೃತ ದುರ್ದೈವಿ.

ಗ್ರಾಮದಲ್ಲ ಭಾರಿ ಮಳೆ ಗಾಳಿಗೆ ಜಮೀನಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಅದನ್ನು ಗಮನಿಸದ ರೈತ ಮಂಜುನಾಥ್ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಕಿತ್ತೂರು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral Video: ರೈಫಲ್‌ ಜೊತೆ ಬಾರ್‌ಗೆ ನುಗ್ಗಿದ ಕಿಡಿಗೇಡಿ..ಡಿಜೆ ಮೇಲೆ ಗುಂಡಿನ ದಾಳಿ-ಶಾಕಿಂಗ್‌ ವಿಡಿಯೋ ನೋಡಿ

Viral Video: ಆರೋಪಿ ಹಾಗೂ ಆತನ ನಾಲ್ವರು ಸ್ನೇಹಿತರು ಮಧ್ಯರಾತ್ರಿ ಸುಮಾರು 1 ಗಂಟೆಗೆ ಬಾರ್‌ಗೆ ಬಂದಿದ್ದರು. ಆ ಸಮಯದಲ್ಲಿ ಬಾರ್‌ ಮುಚ್ಚಲಾಗಿತ್ತು. ಆದರೂ ಅಲ್ಲಿದ್ದ ಸಿಬ್ಬಂದಿಗೆ ಮದ್ಯ ಸರ್ವ್‌ ಮಾಡುವಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಸಿಬ್ಬಂದಿ ನಿರಾಕರಿಸಿದ್ದು, ಆಗ ಜಗಳ ಶುರುವಾಗಿದೆ. ಬಾರ್‌ ಸಿಬ್ಬಂದಿ ಮತ್ತು ಯುವಕರ ನಡುವೆ ಮಾರಾಮಾರಿಯೇ ನಡೆದಿತ್ತು. ಈ ನಡುವೆ ಕೋಪದಲ್ಲಿ ತನ್ನ ಕಾರ್‌ನಲ್ಲಿದ್ದ ರೈಫಲ್‌ ತೆಗೆದುಕೊಂಡ ಬಂದ ಒಬ್ಬ ಡಿಜೆ ಎದೆಗೆ ಗುಂಡಿಕ್ಕಿದ್ದಾನೆ.

VISTARANEWS.COM


on

Viral Video
Koo

ಪಾಟ್ನಾ: ಕುಡಿದ ಮತ್ತಿನಲ್ಲಿ ಕೆಲವೊಮ್ಮೆ ಎಂಥೆಂಥಾ ಅನಾಹುತಗಳು ಸಂಭವಿಸಬಹುದೆಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮದ್ಯ ಸರ್ವ್‌ ಮಾಡಲು ಬಾರ್‌ ಸಿಬ್ಬಂದಿ ನಿರಾಕರಿಸಿದರೆಂಬ ಕೋಪಕ್ಕೆ ವ್ಯಕ್ತಿಯೊಬ್ಬ ಅಲ್ಲೇ ಇದ್ದ ಡಿಜೆ(Disc Jockey)ಯನ್ನು ಗುಂಡಿಕ್ಕಿ ಹತ್ಯೆಮಾಡಿದ್ದಾನೆ. ಜಾರ್ಖಂಡ್‌ನ ರಾಂಚಿಯಲ್ಲಿ ಈ ಘಟನೆ ನಡೆದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ವಿಡಿಯೋ ಎಲ್ಲೆಡೆ ವೈರಲ್‌(Viral Video) ಆಗಿದೆ.

ಘಟನೆ ವಿವರ:

ಆರೋಪಿ ಹಾಗೂ ಆತನ ನಾಲ್ವರು ಸ್ನೇಹಿತರು ಮಧ್ಯರಾತ್ರಿ ಸುಮಾರು 1 ಗಂಟೆಗೆ ಬಾರ್‌ಗೆ ಬಂದಿದ್ದರು. ಆ ಸಮಯದಲ್ಲಿ ಬಾರ್‌ ಮುಚ್ಚಲಾಗಿತ್ತು. ಆದರೂ ಅಲ್ಲಿದ್ದ ಸಿಬ್ಬಂದಿಗೆ ಮದ್ಯ ಸರ್ವ್‌ ಮಾಡುವಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಸಿಬ್ಬಂದಿ ನಿರಾಕರಿಸಿದ್ದು, ಆಗ ಜಗಳ ಶುರುವಾಗಿದೆ. ಬಾರ್‌ ಸಿಬ್ಬಂದಿ ಮತ್ತು ಯುವಕರ ನಡುವೆ ಮಾರಾಮಾರಿಯೇ ನಡೆದಿತ್ತು. ಈ ನಡುವೆ ಕೋಪದಲ್ಲಿ ತನ್ನ ಕಾರ್‌ನಲ್ಲಿದ್ದ ರೈಫಲ್‌ ತೆಗೆದುಕೊಂಡ ಬಂದ ಒಬ್ಬ ಡಿಜೆ ಎದೆಗೆ ಗುಂಡಿಕ್ಕಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಡಿಜೆಯನ್ನು ರಾಜೇಂದ್ರ ಮೆಡಿಕಲ್‌ ಸೈನ್ಸ್‌ ಆಸ್ಪತ್ರೆಗೆ ದಾಖಲಿಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಅಲ್ಲೇ ಕೊನೆಯುಸಿರೆಳೆದಿದ್ದಾನೆ.

ಎಕ್ಸ್‌ಟ್ರೀಂ ಬಾರ್‌ನಲ್ಲಿ ಈ ಘಟನೆ ನಡೆದಿದ್ದು, ಶೂಟರ್‌ ಬಾರ್‌ ಒಳಗೆ ನುಗ್ಗುತ್ತಿರುವುದು ಮತ್ತು ತನ್ನ ಮುಖವನ್ನು ಟೀ ಶರ್ಟ್‌ನಿಂದ ಮುಚ್ಚಿಕೊಂಡಿರುವ ದೃಶ್ಯವನ್ನು ಸಿಸಿಟಿವಿಯಲ್ಲಿ ಕಾಣಬಹುದಾಗಿದೆ. ಇನ್ನು ಸ್ಥಳಕ್ಕೆ ರಾಂಚಿಯ ಪೊಲೀಸ್‌ ವರಿಷ್ಠಾಧಿಕಾರಿ ಭೇಟಿ ಕೊಟ್ಟಿದ್ದು, ಶೂಟರ್‌ ಮತ್ತು ಆತನ ಸಹಚರರಿಗಾಗಿ ಬಲೆ ಬೀಸಿದ್ದಾರೆ. ಎಲ್ಲಾ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗಿದ್ದು, ಬಾರ್‌ ಸಿಬ್ಬಂದಿಯನ್ನೂ ವಿಚಾರಣೆಗೊಳಪಡಿಸಲಾಗಿದೆ.

ಓವೈಸಿ ಪಕ್ಷದ ನಾಯಕನ ಮೇಲೆ ಗುಂಡಿನ ದಾಳಿ

ಅಸಾದುದ್ದೀನ್ ಓವೈಸಿಯವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (All India Majlis-e-Ittehadul Muslimeen – AIMIM – ಎಐಎಂಐಎಂ) ಪಕ್ಷದ ನಾಯಕ, ಮಹಾರಾಷ್ಟ್ರದ ಮಾಲೆಗಾಂವ್‌ನ ಮಾಜಿ ಮೇಯರ್ (Ex Malegaon Mayor) ಅಬ್ದುಲ್ ಮಲಿಕ್ ಮೊಹಮ್ಮದ್ ಯೂನಸ್ ಇಸಾ ಎಂಬಾತನ ಮೇಲೆ ಇಂದು ಬೆಳಗ್ಗೆ ಅಪರಿಚಿತ ದಾಳಿಕೋರರು ಗುಂಡಿನ ದಾಳಿ (Firing) ನಡೆಸಿದ್ದಾರೆ.

ಅಬ್ದುಲ್ ಮಲಿಕ್ ಮೊಹಮ್ಮದ್ ಅವರ ದೇಹಕ್ಕೆ ಮೂರು ಕಡೆ ಗುಂಡುಗಳು ಬಿದ್ದಿವೆ. ಎದೆಯ ಎಡಭಾಗದಲ್ಲಿ, ಎಡ ತೊಡೆ ಮತ್ತು ಬಲಗೈಗೆ ಗಾಯಗಳಾಗಿವೆ. ಗಾಯಗಳು ತೀವ್ರವಾಗಿರುವ ಕಾರಣ, ಎಐಎಂಐಎಂ ನಾಯಕನನ್ನು ನಾಸಿಕ್‌ನ ಆಸ್ಪತ್ರೆಗೆ ವರ್ಗಾಯಿಸಲಾಯಿತು.

ಇದನ್ನೂ ಓದಿ:MLC Election: ಕಾಂಗ್ರೆಸ್ ಎಂಬುದು ದೇಶದಲ್ಲಿ ರಿಜೆಕ್ಟೆಡ್, ಎಕ್ಸ್‌ಪೈರಿ ಗೂಡ್ಸ್: ಪ್ರಲ್ಹಾದ್ ಜೋಶಿ ಲೇವಡಿ

ಮಾಲೆಗಾಂವ್ ನಗರ ಪೊಲೀಸ್ ಅಧಿಕಾರಿಯ ಪ್ರಕಾರ, ಓಲ್ಡ್ ಆಗ್ರಾ ರಸ್ತೆಯಲ್ಲಿರುವ ಅಂಗಡಿಯೊಂದರ ಹೊರಗೆ ಮಲಿಕ್ ಕುಳಿತಿದ್ದಾಗ 1:20ಕ್ಕೆ ಈ ಘಟನೆ ಸಂಭವಿಸಿದೆ. ಸ್ಥಳೀಯ ಪೊಲೀಸರು ವ್ಯಾಪಕ ತನಿಖೆಯನ್ನು ಪ್ರಾರಂಭಿಸಿದ್ದಾರೆ, ಆದರೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಅಬ್ದುಲ್ ಮಲಿಕ್ ಮೊಹಮ್ಮದ್ ಯೂನಸ್ ಇಸಾ, ಅಸಾದುದ್ದೀನ್‌ ಓವೈಸಿಯ ಆಪ್ತನಾಗಿದ್ದು, ಮಾಲೆಗಾಂವ್‌ನ ಮೇಯರ್‌ ಆಗಿದ್ದ.

Continue Reading
Advertisement
Cooking In An Iron Pot
ಆರೋಗ್ಯ14 mins ago

Cooking In An Iron Pot: ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವುದು ಒಳ್ಳೆಯದು! ಯಾಕೆ ಗೊತ್ತೇ?

karnataka weather Forecast
ಮಳೆ14 mins ago

Karnataka Weather : ಕರಾವಳಿ, ಮಲೆನಾಡಲ್ಲಿ ಗುಡುಗು, ಮಿಂಚು; ಒಳನಾಡಿನಲ್ಲಿ ಸಾಧಾರಣ ಮಳೆ

Which Type Of Roti Is Best
ಆಹಾರ/ಅಡುಗೆ1 hour ago

Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಹೊರ ಬರುತ್ತೀರಿ

Vijayapura news
ಪ್ರಮುಖ ಸುದ್ದಿ6 hours ago

Vijayapura News : ಪ್ರೀತಿಸಿದವಳನ್ನೇ ಮದುವೆಯಾಗಲು ಯುವಕನ ಹಠ; ಪರಸ್ಪರ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದರು!

Prajwal Revanna Case
ಪ್ರಮುಖ ಸುದ್ದಿ7 hours ago

Prajwal Revanna Case : ಮಾಜಿ ಶಾಸಕ ಪ್ರೀತಂ ಗೌಡ ಆಪ್ತ ಚೇತನ್​ಗೆ ಎಸ್ಐಟಿ ನೋಟಿಸ್

Yuvraj Singh
ಕ್ರೀಡೆ7 hours ago

Yuvraj Singh : ಅಪಾರ್ಟ್​ಮೆಂಟ್ ವಿತರಣೆಯಲ್ಲಿ ಮೋಸ, ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ನೋಟಿಸ್​ ಕೊಟ್ಟ ಯುವರಾಜ್ ಸಿಂಗ್

Kavya Maran
ಪ್ರಮುಖ ಸುದ್ದಿ8 hours ago

Kavya Maran : ಸೋತಾಗ ಕಣ್ಣೀರು ಹಾಕಿದ ಕಾವ್ಯಾ ಮಾರನ್​, ​ ಡ್ರೆಸಿಂಗ್​ ರೂಮ್​ಗೆ ತೆರಳಿ ಆಟಗಾರರನ್ನೇ ನಗಿಸಿದರು; ಇಲ್ಲಿದೆ ವಿಡಿಯೊ

Viral Video
ದೇಶ8 hours ago

Viral Video: ಬೆಂಗಳೂರಿನಲ್ಲಷ್ಟೇ ಅಲ್ಲ, ಮೌಂಟ್ ಎವರೆಸ್ಟ್ ನಲ್ಲೂ ಈಗ ಟ್ರಾಫಿಕ್ ಜಾಮ್!!

Samsung Galaxy F55 5G Smartphone Released With Exciting Classy Veegan Leather Design
ದೇಶ8 hours ago

Samsung Galaxy: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್ 55 5ಜಿ ಸ್ಮಾರ್ಟ್‌ಫೋನ್ ರಿಲೀಸ್‌; ಏನಿದರ ವಿಶೇಷತೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ13 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು7 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು7 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌