Young man kills innocent business man in order to become don!‌ Murder case: ಡಾನ್‌ ಆಗೋ ಗೀಳಿನಿಂದ ಅಮಾಯಕನನ್ನು ಇರಿದು ಕೊಂದ ಮಾಜಿ ಶಾಸಕನ ಪುತ್ರ! - Vistara News

ಕರ್ನಾಟಕ

Murder case: ಡಾನ್‌ ಆಗೋ ಗೀಳಿನಿಂದ ಅಮಾಯಕನನ್ನು ಇರಿದು ಕೊಂದ ಮಾಜಿ ಶಾಸಕನ ಪುತ್ರ!

Businessman murder: ಅವನು ಸಣ್ಣ ವಯಸ್ಸಿನಲ್ಲೇ ಉದ್ಯಮಿಯಾಗಿದ್ದ. ಇವನಿಗೂ ಹೆಚ್ಚು ಕಡಿಮೆ ಅವನದೇ ವಯಸ್ಸು. ಆದರೆ, ಅವನು ಡಾನ್‌ ಆಗಬೇಕು ಎಂಬ ದುಷ್ಟ ಯೋಜನೆ ಹೊಂದಿದ್ದವನು. ಈ ಗೀಳಿನಿಂದ ಸಣ್ಣ ಕಾರಣ ಇಟ್ಟುಕೊಂಡು ಉದ್ಯಮಿಯೊಬ್ಬನನ್ನು ಕೊಂದೇ ಬಿಟ್ಟ. ಏನಿದು ದೊಡ್ಡವರ ಶೋಕಿಯ ಕೊಲೆ ಕಥೆ?

VISTARANEWS.COM


on

Young man kills innocent business man in order to become don!
ಕೊಲೆಗಾರ ಸ್ವರಾಜ್‌ ಅಲಿಯಾಸ್‌ ಸಾಹಿಲ್‌ ಮತ್ತು ನಾಗರಾಜ ಹೊಡೆಲ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಲಬುರಗಿ: ದೊಡ್ಡವರ ಮಕ್ಕಳ ದುರಾಸೆಗಳು, ಗೀಳುಗಳು, ಧಿಮಾಕುಗಳು ಎಂಥಾ ಪಾತಕ ಕೃತ್ಯಕ್ಕೂ ಪ್ರೇರೇಪಿಸುತ್ತವೆ. ಅದರಲ್ಲೂ ಯಾರೋ ಮಾಡಿಟ್ಟ ಆಸ್ತಿ, ದೊಡ್ಡ ದೊಡ್ಡ ಕಾರು, ಗೆಳೆಯರ ಬಳಗ ಇದ್ದರಂತೂ ಶೋ ಮಾಡುವುದಕ್ಕೇನೂ ಕೊರತೆ ಇರುವುದಿಲ್ಲ. ಕಲಬುರಗಿಯಲ್ಲಿ ನಡೆದಿದ್ದೇ ಇದು. ಡಾನ್‌ ಆಗಬೇಕು ಎಂಬ ಗೀಳು ಹೊಂದಿದ್ದ ಯುವಕನೊಬ್ಬ ಅಮಾಯಕ ಉದ್ಯಮಿಯೊಬ್ಬನನ್ನು ಕೊಂದೇ ಬಿಟ್ಟಿದ್ದಾನೆ. ಈ ಕೊಲೆಗಾರ ಮಾಜಿ ಶಾಸಕನ ಪುತ್ರ. ಮಾಜಿ ಶಾಸಕ ನಾಗರಾಜ ಹೊಡೆಲ್‌ ಪುತ್ರ ಸ್ವರಾಜ್ ಅಲಿಯಾಸ್ ಸಾಹಿಲ್ (Swaraj alias sahil) ಎಂಬಾತನೇ ಈ ದುಷ್ಟ.

ಕಲಬುರಗಿ ನಗರದ ಪೂಜಾ ಕಾಲೊನಿಯಲ್ಲಿ ಭಾನುವಾರ ರಾತ್ರಿ ಪ್ರಮೋದ್‌ ಎಂಬ 24 ವರ್ಷದ ಉದ್ಯಮಿಯನ್ನು ಕೊಲೆ ಮಾಡಲಾಗಿತ್ತು. ತಂಡವೊಂದು ಮಹೀಂದ್ರಾ ಥಾರ್‌ ಕಾರಿನಲ್ಲಿ ಅಡ್ಡಾದಿಡ್ಡಿ ಇಂಡಿಕೇಟರ್‌ ಹಾಕಿಕೊಂಡು ಹೋಗುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕಾಗಿ ಪ್ರಮೋದ್‌ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.

ಕೊಲೆಗಾರ ಸೂರಜ್‌ ಮತ್ತು ನಾಗರಾಜ ಹೊಡೆಲ್‌

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದ ನಿವಾಸಿ ಪ್ರಮೋದ್ (24) ಟ್ರಾನ್ಸ್‌ಪೋರ್ಟ್ ಉದ್ಯಮ ಮಾಡಿಕೊಂಡಿದ್ದರು. ಪ್ರಮೋದ್ ಕಲಬುರಗಿ ನಗರದ ಪೂಜಾ ಕಾಲೋನಿಯಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ. ಭಾನುವಾರ ರಾತ್ರಿ ಪ್ರಮೋದ್ ಕೆಲಸ ಮುಗಿಸಿ ತನ್ನ ಮಾವ ಅವಿನಾಶ್‌ ಅವರ ಜತೆ ಬೈಕ್‌ನಲ್ಲಿ ಮಾವ ಅವಿನಾಶ್‌ ಅವರನ್ನು ಕೂರಿಸಿಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಅವರ ಎದುರು ಭಾಗದಲ್ಲಿ ಬಾರ ಹಿಲ್ಸ್ ಬಳಿ ಮಹೀಂದ್ರಾ ಥಾರ್ ಜೀಪೊಂದು ಸಾಗುತ್ತಿತ್ತು. ಅದರಲ್ಲಿದ್ದ ಯುವಕರು ಲೆಫ್ಟ್ ರೈಟ್ ಎರಡೂ ಇಂಡಿಕೇಟರ್ ಹಾಕಿಕೊಂಡು ಹೋಗುತ್ತಿದ್ದರು. ಹಿಂಬದಿ ಬರುತ್ತಿದ್ದ ಬೈಕ್‌ಗೂ ಸೈಡ್ ಕೊಡದೆ ಸಾಗುತ್ತಿದ್ದರು. ಸುಮಾರು ಒಂದು ಕಿಲೋಮೀಟರ್‌ ವರೆಗೂ ಬೈಕ್‌ಗೆ ಸೈಡ್ ಕೊಡದೆ ಇಂಡಿಕೇಟರ್ ಹಾಕಿಕೊಂಡು ಹೋಗುತ್ತಿದ್ದರು. ಕೊನೆಗೆ ಒಂದು ಹಂತದಲ್ಲಿ ಕಾರಿಗಿಂತ ಮುಂದೆ ಹೋದ ಪ್ರಮೋದ್ ಮತ್ತು ಆತನ ಮಾವ ಅವಿನಾಶ್ ʻʻಇಂಡಿಕೇಟರ್ ಸರಿಯಾಗಿ ಹಾಕಿ…ನಮಗೆ ಗೊಂದಲ ಆಗ್ತಿದೆʼʼ ಎಂದು ಹೇಳಿದರು.

ಆಗ ಜೀಪಿನಿಂದ ಇಳಿದ ಯುವಕರ ಗುಂಪು ಜಗಳಕ್ಕೆ ನಿಂತಿದ್ದಲ್ಲದೆ ಪ್ರಮೋದ್‌ ಅವರಿಗೆ ಮನಬಂದಂತೆ ಚಾಕು ಇರಿದು ಎಸ್ಕೇಪ್ ಆಗಿತ್ತು!

ಮಾಜಿ ಶಾಸಕನ ಪುತ್ರನೇ ಕೊಲೆಗಾರ

ಈ ನಡುವೆ ಕೊಲೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಯಾಕೆಂದರೆ ಕೊಲೆ ಮಾಡಿದ್ದು ಮಾಜಿ ಶಾಸಕ ನಾಗರಾಜ್‌ ಹೊಡೆಲ್‌ ಅವರ ಪುತ್ರ ಸ್ವರಾಜ್‌ ಅಲಿಯಾಸ್‌ ಸಾಹಿಲ್‌. ಮಹೀಂದ್ರಾ ಥಾರ್‌ ಓಡಿಸುತ್ತಿದ್ದ ತನ್ನನ್ನು ಒಬ್ಬ ಬೈಕ್‌ನವನು ಪ್ರಶ್ನಿಸಿದ್ದರಿಂದ ಸಿಟ್ಟಿಗೆದ್ದ ಆತ ಚಾಕುವಿನಿಂದ ಇರಿದು ಕೊಲೆಯನ್ನೇ ಮಾಡಿದ್ದಾನೆ.

ಡಾನ್‌ ಆಗಬೇಕು ಎಂಬ ಗೀಳು

ಸ್ವರಾಜ್‌ ಅಲಿಯಾಸ್‌ ಸಾಹಿಲ್‌ಗೆ ಬೇಕಾದಷ್ಟು ದುಡ್ಡು ಮತ್ತು ಐಷಾರಾಮಿ ಕಾರುಗಳಿದ್ದವು. ಹೀಗಾಗಿ ಅಹಂಕಾರವೂ ತಲೆಗೇರಿತ್ತು. ಅದರ ಜತೆಗೆ ತನ್ನನ್ನು ಎಲ್ಲರೂ ಡಾನ್‌ ರೀತಿಯಲ್ಲಿ ಟ್ರೀಟ್‌ ಮಾಡಬೇಕು. ಭಾಯ್‌ ಎಂದು ಕರೆಯಬೇಕು ಎಂಬ ಗೀಳು ಹೊಂದಿದ್ದ! ಹೀಗಾಗಿ ಪ್ರಮೋದ್‌ ಕೈಗೆ ಸಿಕ್ಕಿದ್ದೇ ಅವನನ್ನು ಚೆನ್ನಾಗಿ ದಬಾಯಿಸಿದ್ದಲ್ಲದೆ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆತ ಆಗಲೇ ಹಲವು ರೌಡಿಸಂ ಕೃತ್ಯಗಳನ್ನು ನಡೆಸಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದ.

ಕಳೆದ ಭಾನುವಾರ ಘಟನೆ ನಡೆದಾಗ ಕಾರಿನಲ್ಲಿ ಸ್ವರಾಜ್‌ ಅಲಿಯಾಸ್‌ ಸಾಹಿಲ್‌ ಮತ್ತು ಇನ್ನೊಬ್ಬ ಸಣ್ಣ ವಯಸ್ಸಿನ ಹುಡುಗನಿದ್ದ. ಅವರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Murder Attempt: ಕುಟುಂಬಗಳ ನಡುವೆ ಆಸ್ತಿ ಜಗಳ; ಮಚ್ಚಿನಿಂದ ಅಟ್ಟಾಡಿಸಿ ಹೊಡೆದು ನಾಲ್ವರ ಮೇಲೆ ಹಲ್ಲೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Prajwal Revanna Case: ಪೆನ್ ಡ್ರೈವ್ ಕಥಾನಾಯಕರೇ ಡಿಸಿಎಂ ಡಿ.ಕೆ. ಶಿವಕುಮಾರ್‌ ಆಗಿದ್ದಾರೆ. ನನಗೆ ಬಹಳ ದೊಡ್ಡ ಮಟ್ಟದ ಆಫರ್ ಬಂತು. ಕ್ಯಾಬಿನೆಟ್ ರ‍್ಯಾಂಕ್‌ ಹುದ್ದೆ ಕೊಡುವುದಾಗಿ ಆಫರ್ ಕೊಟ್ಟರು. ಪೆನ್‌ಡ್ರೈವ್‌ ಹೇಗೆ ರೆಡಿ ಆಯಿತು ಹೊಳೆನರಸೀಪುರಕ್ಕೆ ಹೇಗೆ‌‌ ಹೋಯಿತು? ಶ್ರೇಯಸ್‌ಗೆ‌ ಏನೆಲ್ಲಾ ಡೈರೆಕ್ಷನ್ ಇತ್ತು? ಎಲ್ಲವೂ ನನಗೆ ಗೊತ್ತು ಎಂದು ದೇವರಾಜೇಗೌಡ ಆರೋಪ ಮಾಡಿದ್ದಾರೆ.

VISTARANEWS.COM


on

Prajwal Revanna Case DK Shivakumar behind Prajwal video leak Devaraje Gowda demands CBI probe
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಿಸಿ ವಿಡಿಯೊ ಲೀಕ್‌ ಮಾಡಿದ್ದು ಯಾರು ಎಂಬ ಬಗ್ಗೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಮಹತ್ವದ ವಿಚಾರವನ್ನು ಹೊರಹಾಕಿದ್ದಾರೆ. ಅಲ್ಲದೆ, ಈ ಎಲ್ಲ ಪ್ರಕರಣದ ಹಿಂದೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಪಾತ್ರ ಇದೆ ಎಂಬ ಗಂಭೀರ ಆರೋಪ ಮಾಡಿರುವ ಅವರು, ಡಿಕೆಶಿಯದ್ದು ಎನ್ನಲಾದ ಆಡಿಯೊವನ್ನು ಪ್ಲೇ ಮಾಡಿದ್ದಾರೆ. ಜತೆಗೆ ತಮಗೆ ಎಸ್‌ಐಟಿ ಮೇಲೆ ಯಾವುದೇ ನಂಬಿಕೆ ಇಲ್ಲ. ಹೀಗಾಗಿ ಈ ಎಲ್ಲ ಸಾಕ್ಷಿಗಳನ್ನು ನೇರವಾಗಿ ಸಿಬಿಐಗೆ ನೀಡುವುದಾಗಿ ಹೇಳಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇವರಾಜೇಗೌಡ, ಮೊದಲು ನನಗೆ ಎಲ್.ಆರ್ ಶಿವರಾಮ್ ಗೌಡ ಕರೆ ಮಾಡಿದರು. ಬಳಿಕ ಅವರು ಪಕ್ಕದಲ್ಲಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಕೈಗೆ ಕೊಡುತ್ತಾರೆ ಎಂದು ಹೇಳುತ್ತಾ ಅದರ ಆಡಿಯೊವನ್ನು ಅರ್ಧ ಪ್ಲೇ ಮಾಡಿದರು. ಡಿಕೆಶಿ ಅವರ ಧ್ವನಿಯುಳ್ಳ ಮಾತು ಆರಂಭವಾಗುತ್ತಿದ್ದಂತೆ ಅದನ್ನು ಆಫ್‌ ಮಾಡಿದರು. ಹೀಗಾಗಿ ಪೂರ್ಣ ಆಡಿಯೊವನ್ನು ಬಿಡುಗಡೆ ಮಾಡಿ ಎಂದು ಮಾಧ್ಯಮದವರು ಆಗ್ರಹಿಸಿದರು. ಆದರೆ, ಅದಕ್ಕೆ ದೇವರಾಜೇಗೌಡರು ಒಪ್ಪಲಿಲ್ಲ. ನಾನಿದನ್ನು ಸಿಬಿಐಗೆ ಸಾಕ್ಷಿಯಾಗಿ ಕೊಡುತ್ತೇನೆ ಎಂದು ಹೇಳಿದರು.

ಪೆನ್ ಡ್ರೈವ್ ಕಥಾನಾಯಕರೇ ಡಿಸಿಎಂ ಡಿ.ಕೆ. ಶಿವಕುಮಾರ್‌ ಆಗಿದ್ದಾರೆ. ನನಗೆ ಬಹಳ ದೊಡ್ಡ ಮಟ್ಟದ ಆಫರ್ ಬಂತು. ಕ್ಯಾಬಿನೆಟ್ ರ‍್ಯಾಂಕ್‌ ಹುದ್ದೆ ಕೊಡುವುದಾಗಿ ಆಫರ್ ಕೊಟ್ಟರು. ಪೆನ್‌ಡ್ರೈವ್‌ ಹೇಗೆ ರೆಡಿ ಆಯಿತು ಹೊಳೆನರಸೀಪುರಕ್ಕೆ ಹೇಗೆ‌‌ ಹೋಯಿತು? ಶ್ರೇಯಸ್‌ಗೆ‌ ಏನೆಲ್ಲಾ ಡೈರೆಕ್ಷನ್ ಇತ್ತು? ಎಲ್ಲವೂ ನನಗೆ ಗೊತ್ತು ಎಂದು ದೇವರಾಜೇಗೌಡ ಹೇಳಿದರು.

Prajwal Revanna Case DK Shivakumar behind Prajwal video leak Devaraje Gowda demands CBI probe
ದೇವರಾಜೇಗೌಡ ಅವರ ಕಚೇರಿಗೆ ಭೇಟಿ ನೀಡಿದ್ದ ಪ್ರಜ್ವಲ್‌ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌. ವಿಡಿಯೊ ಹೊರಬಿಟ್ಟ ದೇವರಾಜೇಗೌಡ.

ಸರ್ಕಾರದ ಪರ ಎಸ್‌ಐಟಿ ಕೆಲಸ

ಎಸ್‌ಐಟಿ ಟೀಂ ರಾಜ್ಯ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧವಾಗಿ ನಾನು ಎಸ್‌ಐಟಿಗೆ ನೀಡಿರುವ ಹೇಳಿಕೆಯನ್ನು ಹಿಂಪಡೆಯಿರಿ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ ಎಂದು ಎಸ್‌ಐಟಿ ತನಿಖಾ ತಂಡದಲ್ಲಿರುವ ಮಹಿಳಾ ಎಸ್‌ಪಿ ನನಗೆ ತಾಕೀತು ಮಾಡಿದ್ದರು. ಹೀಗಾಗಿ ಎಸ್‌ಐಟಿ ಬಗ್ಗೆ ನನಗೆ ನಂಬಿಕೆಯೇ ಇಲ್ಲ ಎಂದು ದೇವರಾಜೇಗೌಡ ಕಿಡಿಕಾರಿದರು.

ಇನ್ನು ಮಾಜಿ ಸಚಿವ ಎಲ್‌.ಆರ್.‌ ಶಿವರಾಮೇಗೌಡ ಕರೆ ಮಾಡಿ ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಹೆಸರನ್ನು ಹೇಳಬೇಡಿ ಎಂದು ಸೂಚನೆ ನೀಡಿದ್ದಾರೆ ಎಂದು ಆರೋಪ ಮಾಡಿದ ದೇವರಾಜೇಗೌಡ ಅವರು, ಅದಕ್ಕೆ ಸಂಬಂಧಪಟ್ಟ ಆಡಿಯೊವನ್ನು ಬಿಡುಗಡೆ ಮಾಡಿದರು. ಈ ಪ್ರಕರಣದಲ್ಲಿ ಎಲ್‌.ಆರ್.‌ ಶಿವರಾಮೇಗೌಡ ಮಧ್ಯವರ್ತಿಯಾಗಿದ್ದಾರೆ. ಡಿ.ಕೆ. ಶಿವಕುಮಾರ್‌ ಪರವಾಗಿ ಕೆಲಸ ಮಾಡಿದ್ದಾರೆ ಎಂದು ದೇವರಾಜೇಗೌಡ ಆರೋಪ ಮಾಡಿದರು.

ಎಲ್ಲ ಮಾಹಿತಿ ಕೊಟ್ಟರೂ ಪೆನ್‌ಡ್ರೈವ್‌ ಹಂಚಿದ ಆರೋಪಿಯನ್ನು ಹಿಡಿಯಲಿಲ್ಲ

ಪೆನ್ ಡ್ರೈವ್ ಹಂಚಿರುವವರ ಹೆಸರು, ಲೋಕೇಶನ್ ಹಾಗೂ ಫೋನ್ ನಂಬರ್‌ಗಳನ್ನು ಕೊಟ್ಟರೂ ಆರೋಪಿಗಳನ್ನು ಹಿಡಿಯಲಿಲ್ಲ. ಈಗ ದೇವರಾಜೇ ಗೌಡನನ್ನು ನನ್ನ ಫಿಟ್ ಮಾಡಬೇಕು ಅಂತ ಈ ತಂತ್ರ ಮಾಡಿದ್ದಾರೆ. ನಿನ್ನೆಯವರೆಗೂ ನನ್ನ ಜತೆ ಸಂಧಾನ ಆಯ್ತು. ಶಿವರಾಮೇಗೌಡರು ಸಂಧಾನ ಮಾಡಲು‌ ಮುಂದಾದರು. ನನಗೆ ಸರ್ಕಾರದ, ಸಿಎಂ, ಡಿಸಿಎಂ ಹೆಸರು ತರಬೇಡ ಎಂದು ನನಗೆ ತಾಕೀತು ಮಾಡಿದರು. ಆದರೆ, ನಾನು ಅದನ್ನು ನಿರಾಕರಣೆ ಮಾಡಿದೆ ಎಂದು ದೇವರಾಜೇಗೌಡ ವಿವರಣೆ ನೀಡಿದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿ ಸಭೆ ನಡೆದಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಯಾರನ್ನೆಲ್ಲ ಬಂಧಿಸಬೇಕು? ತನಿಖೆ ಯಾವ ನಿಟ್ಟಿನಲ್ಲಿ ಸಾಗಬೇಕು? ಎಂಬಿತ್ಯಾದಿಗಳ ಬಗ್ಗೆ ಚರ್ಚೆ ನಡೆದಿದೆ. ನನ್ನ ಜೀವನದ ದೊಡ್ಡ ಹೋರಾಟ ಇದ್ದಿದ್ದೇ ಹಾಸನದ ನಾಯಕರ ವಿರುದ್ಧವಾಗಿ ಆಗಿದೆ. ನನ್ನ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ನನ್ನ ಹೋರಾಟವನ್ನು ಕೆಲವು‌ ಕಿಡಿಗೇಡಿ ರಾಜಕಾರಣಿಗಳು ವಾಮಮಾರ್ಗದಲ್ಲಿ ಬಳಸಿದ್ದಾರೆ ಎಂದು ದೇವರಾಜೇಗೌಡ ಆರೋಪಿಸಿದರು.

ಕಾರ್ತಿಕ್‌ ನನ್ನ ಕಚೇರಿಗೆ ಬಂದಿದ್ದ

ನನ್ನ ಸಾಕ್ಷಿಯನ್ನು ಪರಿಗಣಿಸಲಾಗಿದೆ. ಹೀಗಾಗಿ ಎಸ್‌ಐಟಿಯವರ ಮುಂದೆ ನಾನು ಕಹಿ ಸತ್ಯಗಳನ್ನು ಬಯಲು ಮಾಡಿದ್ದೇನೆ. ಅಶ್ಲೀಲ ವಿಡಿಯೊ ವಿಚಾರದಲ್ಲಿ ಕೆಲ ಬಂಧನ ಆಗಿದೆ. ಆದರೆ, ಯಾವ ವಿಡಿಯೊದಲ್ಲೂ ಮುಖ‌ಗಳನ್ನು ಬ್ಲರ್‌ ಮಾಡಲಾಗಿಲ್ಲ. ದೇವರಾಜೇಗೌಡನ ಪಾತ್ರ ಏನು ಅಂತ ತಿಳಿಸುತ್ತೇನೆ. ಕೊಲೆಗಾರ ಕೂಡ ಬಂದಾಗ ವಕೀಲರಾಗಿ ರಕ್ಷಣೆ ಮಾಡುವುದು ನನ್ನ ಕರ್ತವ್ಯವಾಗಿತ್ತು. ವಕೀಲ ವೃತ್ತಿಯ ಮೂಲ ಜವಾಬ್ದಾರಿ ಇದು. ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ನನ್ನ ಗೃಹ ಕಚೇರಿಗೆ ಬಂದಿದ್ದ. ಈ ಫೈಲ್ ಹಾಸನದಲ್ಲಿರುವ ನನ್ನ ಮನೆಯಲ್ಲಿರುವ ಕಚೇರಿಯಲ್ಲಿ ಕೊಟ್ಟಿದ್ದಾನೆ. ಇದರ ಜತೆ ಪೆನ್ ಡ್ರೈವ್‌ ಕೂಡ ಇತ್ತು ಎಂದು ದೇವರಾಜೇಗೌಡ ಹೇಳಿದರು.

ಎಲ್ಲ ದಾಖಲೆಗಳೂ ನನ್ನಲ್ಲಿದೆ

ಕಾರ್ತಿಕ್‌ ನನಗೆ ಪೆನ್‌ಡ್ರೈವ್ ಕೊಟ್ಟ ನಂತರ ಅದನ್ನು ನಾನು ಲಕೋಟೆಯಲ್ಲಿ ಇಟ್ಟಿದ್ದೆ. ನಾನು ಹೆಣ್ಣುಮಕ್ಕಳನ್ನು ಕಾಪಾಡಬೇಕು ಅಂತ ಬಹಿರಂಗ ಮಾಡಿಲ್ಲ. ಆತ ಮುಂದೆಯೇ ಸೀಲ್ಡ್ ಕವರ್‌ಗೆ ಹಾಕಿದೆ. ಪೆನ್ ಡ್ರೈವ್ ಹೊಳೆನರಸೀಪುರದಿಂದ ಪರಾಜಿತ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ತಲುಪಿತ್ತು. ಆತನ ಗುರು ಪುಟ್ಟಿ @ ಪುಟ್ಟರಾಜು ಅವರು ಬೆಂಗಳೂರಿಗೆ ಬಂದರು. ಅವರು ಯಾರನ್ನು ಭೇಟಿಯಾದರು? ಇದರ ದಾಖಲೆ ನನ್ನ ಬಳಿ‌ ಇದೆ ಎಂದು ದೇವರಾಜೇಗೌಡ ಹೇಳಿದರು.

ಇದನ್ನೂ ಓದಿ: Prajwal Revanna Case: ಅಪಹರಣ ಕೇಸ್‌ನಲ್ಲಿ ಸ್ವ-ಇಚ್ಚಾ ಹೇಳಿಕೆಗೆ ಸಹಿ ಹಾಕಲು NO ಎಂದ ಎಚ್‌.ಡಿ. ರೇವಣ್ಣ!

ಕಾರ್ತಿಕ್‌ ಬಂದಿದ್ದ ವಿಡಿಯೊ ಪ್ರದರ್ಶನ

ಎಸ್‌ಐಟಿ ನನ್ನ ಬಳಿ ಇರುವ ದಾಖಲೆ ಏನು ಅಂತ ಕೇಳಿದರು? ಎಲ್ಲವನ್ನೂ ಅವರಿಗೆ ಕೊಟ್ಟಿದ್ದೇನೆ. ತನಿಖಾಧಿಕಾರಿ ಎಸ್‌ಪಿ ಮುಂದೆ ಪ್ರಮುಖ ಅಂಶಗಳನ್ನು ಉಲ್ಲೇಖ ಮಾಡಿದ್ದೇನೆ. ಕಾರ್ತಿಕ್ ನನ್ನ ಮನೆಗೆ ಯಾವಾಗ ಬಂದಿದ್ದು? ಎಂಬ ವಿಡಿಯೊ ನನ್ನ ಬಳಿ ಇದೆ. ಈಗ ಅದನ್ನು ಸಹ ಸಿಬಿಐಗೆ ನೀಡುತ್ತೇನೆ ಎಂದು ದೇವರಾಜೇಗೌಡ ಅವರು ಮಾಧ್ಯಮದೆದುರು ಆ ವಿಡಿಯೊವನ್ನು ಪ್ರದರ್ಶನ ಮಾಡಿದರು. ಕಾರ್ತಿಕ್‌ ಪೆನ್ ಡ್ರೈವ್ ಅನ್ನು ಯಾರಿಗೆ ಕೊಟ್ಟಿದ್ದೇನೆ ಎಂದು ಆತ ಹೇಳಿದ್ದು ಕೂಡಾ ರೆಕಾರ್ಡ್ ಆಗಿದೆ ಎಂದು ದೇವರಾಜೇಗೌಡ ಹೇಳಿದರು.

Continue Reading

ಕರ್ನಾಟಕ

Lok Sabha Election 2024: ಮತದಾನ ಮಾಡಲು ದುಬೈನಿಂದ ಗಂಗಾವತಿಗೆ ಆಗಮಿಸಿದ ದಂಪತಿ

Lok Sabha Election 2024: ಲೋಕಸಭಾ ಚುನಾವಣೆ-2024 ಹಿನ್ನೆಲೆಯಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಮತದಾನದ ಮಹತ್ವ ಅರಿತಿರುವ ದಂಪತಿ, ದುಬೈನಿಂದ ಗಂಗಾವತಿಗೆ ಮತದಾನ ಮಾಡಲು ಆಗಮಿಸಿದ್ದಾರೆ. ದುಬೈನಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಐಶ್ವರ್ಯ ಗೌಡರ್ ಮತ್ತು ಕಿರಣ್ ಪಾಟೀಲ್ ದಂಪತಿ ಭಾರತದ ಪೌರರಾಗಿ ಮತದಾನ ಮಾಡಲು ಬಂದಿದ್ದಾಗಿ ತಿಳಿಸಿದ್ದಾರೆ.

VISTARANEWS.COM


on

couple came to Gangavathi from Dubai to vote
Koo

ಗಂಗಾವತಿ: ಲೋಕಸಭಾ ಚುನಾವಣೆ 2024 (Lok Sabha Election 2024) ಹಿನ್ನೆಲೆಯಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಮತದಾನದ ಮಹತ್ವ ಅರಿತಿರುವ ದಂಪತಿ, ದುಬೈನಿಂದ (Dubai) ಗಂಗಾವತಿಗೆ ಮತದಾನಕ್ಕಾಗಿ ಆಗಮಿಸಿದ್ದಾರೆ.

ನಗರದ ಎಪಿಎಂಸಿ ಸಮೀಪದ ನಿವಾಸಿಯಾಗಿರುವ ಉದ್ಯಮಿ ಆರ್ಹಾಳ ಶರಣಪ್ಪ ಅವರ ಪುತ್ರಿ ಐಶ್ವರ್ಯ ಗೌಡರ್ ಮತ್ತು ಅಳಿಯ ಕಿರಣ್ ಪಾಟೀಲ್ ದಂಪತಿ ದುಬೈನಲ್ಲಿ ನೆಲೆಸಿದ್ದಾರೆ. ಲೋಕಸಭಾ ಚುನಾವಣೆಗೆ ಮತದಾನ ಮಾಡುವ ಉದ್ದೇಶಕ್ಕಾಗಿಯೇ ದುಬೈನಿಂದ ಗಂಗಾವತಿಗೆ ಆಗಮಿಸಿದ್ದಾರೆ.

ಇದನ್ನೂ ಓದಿ: CISCE Results 2024: ಸಿಐಎಸ್‌ಸಿಇಯ 10 & 12ನೇ ತರಗತಿಯ ಫಲಿತಾಂಶ ಪ್ರಕಟ; ಹೀಗೆ ಪರಿಶೀಲಿಸಿ

ಕಿರಣ್ ಪಾಟೀಲ್ ಕೂಡ ಗಂಗಾವತಿಯ ಕುವೆಂಪು ಬಡಾವಣೆಯ ನಿವಾಸಿಯಾಗಿದ್ದು, ಕಳೆದ ಒಂದೂವರೆ ವರ್ಷದಿಂದ ದುಬೈನಲ್ಲಿ ನೆಲೆಸಿದ್ದಾರೆ. ಕಳೆದ ಡಿಸಂಬರ್‌ನಲ್ಲಿ ಐಶ್ವರ್ಯ ಮತ್ತು ಕಿರಣ್ ಪಾಟೀಲ್‌ಗೆ ವಿವಾಹವಾಗಿದ್ದು, ಇಬ್ಬರೂ ದುಬೈನಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಇಲ್ಲಿನ ಎಪಿಎಂಸಿ ಮುಂಭಾಗದ ಟಿಎಪಿಸಿಎಂಎಸ್‌ನ ಮತಗಟ್ಟೆಯಲ್ಲಿ ಐಶ್ವರ್ಯ ಮತದಾನ ಮಾಡಲಿದ್ದು, ಬೆಂಡರವಾಡಿಯ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಕಿರಣ್ ಪಾಟೀಲ್ ಮತದಾನ ಮಾಡಲಿದ್ದಾರೆ. ಮತದಾನದ ಬಳಿಕ ಈ ದಂಪತಿ ಮತ್ತೆ ದುಬೈಗೆ ತೆರಳಲಿದ್ದಾರೆ.

ಇದನ್ನೂ ಓದಿ: No Diet Day 2024: ಇಂದು ಡಯೆಟ್‌ ರಹಿತ ದಿನ ಆಚರಿಸುವುದೇಕೆ?

`ಭಾರತ ಬದಲಾಗುತ್ತಿದ್ದು, ಅಭಿವೃದ್ಧಿಗೆ ವೇಗ ಸಿಕ್ಕಿದೆ. ವಿದೇಶಗಳಲ್ಲೂ ಭಾರತದ ಬಗ್ಗೆ ಗೌರವ ಭಾವ ಮೂಡಿದೆ. ಹೀಗಾಗಿ ಭಾರತದ ಪ್ರಜೆಗಳೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತಿದೆ. ಭಾರತದ ಪೌರರಾಗಿ ಮತದಾನ ಮಾಡಲು ಬಂದಿದ್ದಾಗಿ ಐಶ್ವರ್ಯ ಮತ್ತು ಕಿರಣ್ ದಂಪತಿ ತಿಳಿಸಿದ್ದಾರೆ.

Continue Reading

ಕೊಡಗು

Marriage Cancel : ಸಿಹಿ ತಿಂಡಿ ಕಿರಿಕ್‌ಗೆ ಮದುವೆ ಮುರಿದ ವರ; ಹೋಗೊಲೋ ಎಂದಳು ವಧು!

Marriage Cancel : ಯಾವ್ಯಾವುದೋ ಕಾರಣಕ್ಕೆ ಮದುವೆಯ ದಿನ ಮುರಿದು ಬಿದ್ದಿರುವುದು ನೋಡಿದ್ದೇವೆ. ಆದರೆ ಕೊಡಗಿನಲ್ಲಿ ವರನ ಕಡೆಯವರಿಗೆ ಸಿಹಿ ತಿಂಡಿ‌ ನೀಡಿಲ್ಲ ಎಂಬ ಕಾರಣಕ್ಕೆ ಮದುವೆಯೊಂದು ಮುರಿದಿದೆ.

VISTARANEWS.COM


on

By

marriage cancel in kodagu
Koo

ಕೊಡಗು: ವರದಕ್ಷಿಣೆ ಕೊಡಲಿಲ್ಲ ಎಂದು ಮದುವೆ ದಿನವೇ ವರನೊಬ್ಬ ಮದುವೆ ಬೇಡ (Marriage Cancel) ಎಂದಿದ್ದಾನೆ. ಮದುವೆ ಬೇಡ ಎನ್ನಲು ಮೊದಲು ಕಾರಣ ಕೊಟ್ಟಿದ್ದು, ವರನ ಕಡೆಯವರಿಗೆ ಸಿಹಿತಿಂಡಿ ನೀಡಿಲ್ಲದ ಕಾರಣ ಹೇಳಿ ನನಗೆ ಈ ಮದುವೆ ಬೇಡ ಎಂದು ಗಲಾಟೆ ಮಾಡಿದ್ದಾನೆ.

ಕೊಡಗು ಜಿಲ್ಲೆಯಲ್ಲಿ ಸೋಮವಾರ ಪೇಟೆಯ ಜಾನಕಿ ಕನ್ವೆನ್ಶನ್‌ ಹಾಲ್‌ನಲ್ಲಿ ಘಟನೆ ನಡೆದಿದೆ. ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯ ಯುವತಿ ಮತ್ತು ತುಮಕೂರು ಜಿಲ್ಲೆಯ ಯುವಕ ನೊಂದಿಗೆ ಮೇ 5ರಂದು ಮದುವೆ ನಿಶ್ಚಯಾಗಿವಾಗಿತ್ತು. ಆದರೆ ರಾತ್ರೋ ರಾತ್ರಿ ವರ ಉಂಗುರ ಕಳಚಿಕೊಟ್ಟು ಹೋಗಿದ್ದಾನೆ.

ವಿವಾಹಕ್ಕೂ ಮೊದಲು ವರನ ಕಡೆಯವರಿಂದ ವರದಕ್ಷಿಣೆ ಕೊಡುವಂತೆ ಒತ್ತಾಯವು ಕೇಳಿ ಬಂದಿತ್ತು ಎನ್ನಲಾಗಿದೆ. ಚಿನ್ನಾಭರಣ ಮತ್ತು ಬೆಂಗಳೂರಿನಲ್ಲಿ ಸೈಟ್ ಕೊಡುವಂತೆ ವರನ ಪೋಷಕರು ಒತ್ತಾಯಿಸಿದ್ದರು. ಮದುವೆ ದಿನ ಚಿನ್ನ ಕೊಟ್ಟಿಲ್ಲ ಎಂದು ಊಟದ ನೆಪ ಹೇಳಿ ಗಲಾಟೆ ತೆಗೆದು ಮದುವೆ ಬೇಡ ಎಂದು ಬಿಟ್ಟು ಹೋಗಿದ್ದಾರೆ ಎಂದು ವಧುವಿನ ಪೋಷಕರು ಆರೋಪಿಸಿದ್ದಾರೆ.

ವರನ ಕಡೆಯವರು ಶನಿವಾರ ಸಂಜೆಯೇ ತುಮಕೂರಿನಿಂದ ಮಂಟಪಕ್ಕೆ ಆಗಮಿಸಿದ್ದರು. ಮದುವೆಯ ಹಿಂದಿನ ದಿನ ಚಪ್ಪರ ಶಾಸ್ತ್ರದಲ್ಲಿ ವರ ಕಡೆಯವರಿಗೆ ಊಟದಲ್ಲಿ ಸಿಹಿತಿಂಡಿ ನೀಡಿಲ್ಲ, ಎಂದು ಸಣ್ಣ ಗಲಾಟೆ ತೆಗೆದಿದ್ದಾರೆ. ನಂತರ ಈ ಮದುವೆ ಗಲಾಟೆಯು ಪೊಲೀಸ್‌ ಠಾಣೆಯ ಮೆಟ್ಟಿಲೇರಿದಾಗ, ರಾತ್ರಿ ಮದುವೆಯೇ ಬೇಡ ಎಂದು ಉಂಗುರ ಕಳಚಿಕೊಟ್ಟಿದ್ದಾನೆ.

ಇದೆಲ್ಲ ಘಟನೆಯಿಂದ ಬೇಸತ್ತ ವಧು ಕೂಡ ಈ ಮದುವೆಯೇ ಬೇಡ, ಈಗಲೇ ಈ ರೀತಿ ವರ್ತಿಸುವ ಗಂಡು ನನಗೂ ಬೇಡಪ್ಪಾ ಎಂದು ಪೊಲೀಸರೆದುರು ಹೇಳಿಕೆ ನೀಡಿದ್ದಾಳೆ. ಹೀಗಾಗಿ ಗುರು ಹಿರಿಯರೆಲ್ಲರೂ ಸೇರಿ ನಿಶ್ಚಯಿಸಿದ ವಿವಾಹ ಕಾರ್ಯವು ಸಿಹಿ ತಿಂಡಿ ವಿಚಾರವಾಗಿ ಮುರಿದು ಬಿದ್ದಿದೆ.

ಇದನ್ನೂ ಓದಿ: 12 ತಾಸು, 6 ಮಷೀನ್‌ಗಳಿಂದ 30 ಕೋಟಿ ರೂ. ಎಣಿಕೆ; ಕಾಂಗ್ರೆಸ್‌ ಮುಖಂಡನ ಪಿಎ ಮನೆಯಲ್ಲಿ ಹಣದ ರಾಶಿ!

Namma Metro : ದೆಹಲಿ ನಂತರ ನಮ್ಮ ಮೆಟ್ರೋದಲ್ಲೂ ಯುವಕ-ಯುವತಿಯ ಡಿಂಗ್‌ ಡಾಂಗ್‌!

ಬೆಂಗಳೂರು: ನಮ್ಮ ಮೆಟ್ರೋ ರೈಲಿನ ಬಾಗಿಲ ಬಳಿ ಬಿಗಿದಪ್ಪಿ ನಿಂತಿದ್ದ ಯುವಕ- ಯುವತಿಯ ವರ್ತನೆಗೆ ಸಹ ಪ್ರಯಾಣಿಕರು ಕಿಡಿಕಾರಿದ್ದಾರೆ. ದೆಹಲಿ ಮೆಟ್ರೋದಂತೆ ಬೆಂಗಳೂರಲ್ಲಿ ನಮ್ಮ ಮೆಟ್ರೋ ಪರಿವರ್ತನೆ ಆಗುತ್ತಿದೆ ಎಂದು ಅಸಮಾಧಾನ (Namma Metro) ತೋರಿದ್ದಾರೆ.

ಸಾರ್ವಜನಿಕರ ಎದುರಿನಲ್ಲಿ ಈ ರೀತಿ ಅಸಭ್ಯವಾಗಿ ವರ್ತನೆ ಮಾಡುತ್ತಿರುವುದಕ್ಕೆ ಆಕ್ರೋಶಗಳು ಕೇಳಿ ಬಂದಿವೆ. ಸಹ ಪ್ರಯಾಣಿಕರೊಬ್ಬರು ಯುವಕ-ಯುವತಿಯ ವಿಡಿಯೊ ಸೆರೆಹಿಡಿದು ಎಕ್ಸ್‌ನ ಸ್ಯಾಮ್‌ (Sam459om) ಎಂಬುವವರ ಖಾತೆಯಿಂದ ಪೋಸ್ಟ್‌ ಆಗಿದೆ. ಯುವಕನನ್ನು ಒಪ್ಪಿಕೊಂಡಿದ್ದ ಯುವತಿ ಅಕ್ಷರಶಃ ಚುಂಬಿಸುತ್ತಿದ್ದಳು ಎಂದು ಬಿಎಂಆರ್‌ಸಿಎಲ್, ನಮ್ಮ ಮೆಟ್ರೋ ಹಾಗೂ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಇತ್ತ ಬೆಂಗಳೂರು ನಗರ ಪೊಲೀಸರು ಈ ಬಗ್ಗೆ ಕ್ರಮವಹಿಸಲಾಗುವುದು, ಘಟನೆ ಸಂಬಂಧ ಮಾಹಿತಿ ನೀಡಿ ಎಂದು ರೀ ಟ್ವೀಟ್‌ ಮಾಡಿದ್ದಾರೆ.

ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ನಮ್ಮ ಮೆಟ್ರೋದಲ್ಲಿ ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲ ವಯೋಮಾನದವರು ಪ್ರಯಾಣಿಸುತ್ತಾರೆ.‌ ಈ ರೀತಿಯ ನಡವಳಿಕೆಯು ಸರಿಯಲ್ಲ ಎಂದಿದ್ದಾರೆ.

ಕೆಲವರು ಪ್ರೀತಿ-ಪ್ರೇಮ, ಪ್ರಣಯವೆಲ್ಲ ಮನೆಯಲ್ಲಿದ್ದರೆ ಚೆನ್ನ ಎಂದಿದ್ದಾರೆ. ಹಾಗೇ, ಸಾರ್ವಜನಿಕ ಪ್ರದೇಶದಲ್ಲಿ ಹೀಗೆ ಮಾಡುವುದರಿಂದ ಉಳಿದವರಿಗೆ ಮುಜುಗರ ಆಗುತ್ತದೆ ಎಂದೂ ಹೇಳಿದ್ದಾರೆ. ಆದರೆ ಇನ್ನೂ ಕೆಲವರು. ಇದರಲ್ಲಿ ಅಸಭ್ಯ ವರ್ತನೆ ಏನಿದೆ. ಪರಸ್ಪರ ಅಪ್ಪಿಕೊಂಡು ನಿಂತಿದ್ದರಷ್ಟೇ. ಬೇರೆ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕೊಡಗು

Kodagu News: ಸೋಮವಾರಪೇಟೆಯಲ್ಲಿ ಮರ ಬಿದ್ದು ಕಾರ್ಮಿಕ ಸಾವು

Kodagu News: ಟಿಂಬರ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಮರ ಬಿದ್ದು, ಕಾರ್ಮಿಕನೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಜರುಗಿದೆ.ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಕಂಬ್ತಳ್ಳಿ ನಿವಾಸಿ ಮಿತ್ರೇಶ್ (42) ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

VISTARANEWS.COM


on

Laborer died by falling tree in Somawarpet
Koo

ಸೋಮವಾರಪೇಟೆ: ಟಿಂಬರ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮರ ಬಿದ್ದು, ಕಾರ್ಮಿಕನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ (Kodagu News) ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಇದನ್ನೂ ಓದಿ: Viral News: ಅವಳಿ-ತ್ರಿವಳಿ ಅಲ್ಲ.. ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮಕೊಟ್ಟ ಮಹಾತಾಯಿ

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಕಂಬ್ತಳ್ಳಿ ನಿವಾಸಿ ಮಿತ್ರೇಶ್ (42) ಮೃತಪಟ್ಟ ವ್ಯಕ್ತಿ. ಹಾನಗಲ್ಲು ಗ್ರಾಮದಲ್ಲಿರುವ ಚಂಗಪ್ಪ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿದ್ದ ಸಿಲ್ವರ್ ಮರಗಳನ್ನು ಜಮಾಲ್ ಮತ್ತು ಕವನ್ ಅವರಿಗೆ ಮಾರಾಟ ಮಾಡಿದ್ದು, ಟಿಂಬರ್ ಕೆಲಸಕ್ಕೆ ಮಿತ್ರೇಶ್ ತೆರಳಿದ್ದರು. ಮರ ಕಡಿಯುತ್ತಿರುವ ಸಂದರ್ಭದಲ್ಲಿ ಬುಡ ಕಟಾವು ಮಾಡಿದ ಮರ ಆಕಸ್ಮಿಕವಾಗಿ ಪಕ್ಕದ ಮರದ ಮೇಲೆ ಬಿದ್ದಿದೆ. ಪರಿಣಾಮ ಬುಡ ಸಹಿತ ಮತ್ತೊಂದು ಮರ ಕೆಳಭಾಗದಲ್ಲಿದ್ದ ಮಿತ್ರೇಶ್ ಅವರ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡ ಮಿತ್ರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Road Accident: ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಮೃತ್ಯು; 30ಕ್ಕೂ ಹೆಚ್ಚು ಮಂದಿಗೆ ಗಾಯ

ಚಿತ್ರದುರ್ಗ/ಚಿಕ್ಕಮಗಳೂರು/ಮೈಸೂರು: ಪ್ರತ್ಯೇಕ ಕಡೆಗಳಲ್ಲಿ ನಡೆದ ಅಪಘಾತಗಳಲ್ಲಿ (Road Accident) ಸಾವು-ನೋವು ಸಂಭವಿಸಿದೆ. ಅತಿ ವೇಗ ಚಾಲನೆಗೆ ನಾಲ್ವರು ಪ್ರಾಣವನ್ನೇ ತೆತ್ತಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಇಂಡಿಕಾ ಕಾರು ಚರಂಡಿಗೆ ಪಲ್ಟಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರು ಛಿದ್ರವಾಗಿದ್ದು, ಕಾರಿನಲ್ಲಿದ್ದ ಇಬ್ಬರು ವೃದ್ಧರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ದಾವಣಗೆರೆ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಪಕ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ ನಡೆದಿದೆ. ಹರಿಹರದ ಸಾರಥಿ ಗ್ರಾಮದ ಕೊಟ್ರೇಶಪ್ಪ (65), ಹುಬ್ಬಳ್ಳಿಯ ಪುಷ್ಟ (55) ಮೃತ ದುರ್ದೈವಿಗಳು.

ಇದನ್ನೂ ಓದಿ: ICC Women’s T20 World Cup 2024: ಮಹಿಳಾ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ಶ್ರೀಲಂಕಾ

ಚಿತ್ರದುರ್ಗದಲ್ಲಿ ಮದುವೆ ಮುಗಿಸಿಕೊಂಡು ವಾಪಸ್‌ ಬರುವಾಗ ಈ ದುರ್ಘಟನೆ ನಡೆದಿದೆ. ಅತಿ ವೇಗದ ಚಾಲನೆಯಿಂದ‌ಲೇ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ. ಗಾಯಗೊಂಡವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು

ಚಿಕ್ಕಮಗಳೂರಿನ ಎನ್‌ಆರ್ ಪುರ ತಾಲೂಕಿನ ಕರಗುಂದ ಗ್ರಾಮದ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ ಸವಾರರು ವೇಗವಾಗಿ ಬಂದು ವಿದ್ಯುತ್ ಕಂಬಕ್ಕೆ ಗುದ್ದಿದ್ದಾರೆ. ಪರಿಣಾಮ ಬೈಕ್‌ನಿಂದ ಹಾರಿ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರ ಪೆಟ್ಟಾಗಿತ್ತು. ಹೊರನಾಡು ಗ್ರಾಮದ ಉಮೇಶ್, ಮುಂಡಗದ ಮನೆ ಗ್ರಾಮದ ಸುನಿಲ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ಮುಂಡಗದ ಮನೆ ಗ್ರಾಮದ ಉಮೇಶ್, ಸುನೀಲನನ್ನು ಶಿವಮೊಗ್ಗಕ್ಕೆ ಬಿಡಲು ಹೋಗುತ್ತಿದ್ದರು. ತಿರುವಿನಲ್ಲಿ ನಿಯಂತ್ರಣಕ್ಕೆ ಬೈಕ್ ನೇರ ವಿದ್ಯುತ್‌ ಕಂಬಕ್ಕೆ ಗುದ್ದಿದೆ.

ಸ್ಥಳಕ್ಕೆ ಎನ್‌.ಆರ್ ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನಲ್ಲಿ ಘಟನೆ ನಡೆದಿದೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಟೇರಿಂಗ್‌ ಕಟ್‌ ಆಗಿ ಗದ್ದೆಗೆ ನುಗ್ಗಿದ ಕೆಎಸ್ಆರ್‌ಟಿಸಿ ಬಸ್

30ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಸ್ಟೇರಿಂಗ್‌ ಕಟ್ಟಿಂಗ್‌ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದೆ. ಘಟನೆಯಲ್ಲಿ 30 ಪ್ರಯಾಣಿಕರು ಗಾಯಗೊಂಡಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕೆಸ್ತೂರು ಗೇಟ್ ಬಳಿ ನಡೆದಿದೆ.

ಇದನ್ನೂ ಓದಿ: Bomb Threat: ದೆಹಲಿ ಬಳಿಕ ಇದೀಗ ಅಹಮದಾಬಾದ್​ನ ಶಾಲೆಗಳಿಗೂ ಬಾಂಬ್​ ಬೆದರಿಕೆ

ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕೆ.ಆರ್.ನಗರ ಮತ್ತು ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಕೆಆರ್‌ನಗರ ಡಿಪೋಗೆ ಸೇರಿದ ಬಸ್ ಕೇರಳಾಪುರದಿಂದ ಸಾಲಿಗ್ರಾಮ, ಚುಂಚನಕಟ್ಟೆ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದರು. ಕೆಆರ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

Continue Reading
Advertisement
Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 min ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Summer Holiday Fashion
ಫ್ಯಾಷನ್2 mins ago

Summer Holiday Fashion: ಸೀಸನ್‌ ಟ್ರೆಂಡ್‌ನ ಟಾಪ್‌ ಲಿಸ್ಟ್‌ನಲ್ಲಿ ಸಮ್ಮರ್‌ ಹಾಲಿಡೇ ಫ್ಯಾಷನ್‌

Woman
ಪ್ರಮುಖ ಸುದ್ದಿ6 mins ago

ಕೈಗಳನ್ನು ಕಟ್ಟಿಹಾಕಿ ಸಿಗರೇಟ್‌ನಿಂದ ಗಂಡನ ಗುಪ್ತಾಂಗ ಸುಟ್ಟ ಹೆಂಡತಿ! ಭೀಕರ ವಿಡಿಯೊ ಇಲ್ಲಿದೆ!

IPL 2024
ಪ್ರಮುಖ ಸುದ್ದಿ7 mins ago

IPL 2024 : ಧೋನಿ ಡಕ್​ಔಟ್ ಆಗುವಾಗ ಜೋರಾಗಿ ನಕ್ಕ ಪ್ರೀತಿ ಜಿಂಟಾ; ಇಲ್ಲಿದೆ ವಿಡಿಯೊ

couple came to Gangavathi from Dubai to vote
ಕರ್ನಾಟಕ10 mins ago

Lok Sabha Election 2024: ಮತದಾನ ಮಾಡಲು ದುಬೈನಿಂದ ಗಂಗಾವತಿಗೆ ಆಗಮಿಸಿದ ದಂಪತಿ

Lok Sabha Election-2024
ದೇಶ14 mins ago

Lok Sabha Election 2024: ಗುಜರಾತ್‌ನಲ್ಲಿ ಶೇ.10ಕ್ಕಿಂತ ಹೆಚ್ಚು ಮುಸ್ಲಿಮರಿದ್ದರೂ ಕಾಂಗ್ರೆಸ್ ಒಬ್ಬ ಮುಸ್ಲಿಮನಿಗೂ ಟಿಕೆಟ್‌ ಕೊಟ್ಟಿಲ್ಲ!

marriage cancel in kodagu
ಕೊಡಗು31 mins ago

Marriage Cancel : ಸಿಹಿ ತಿಂಡಿ ಕಿರಿಕ್‌ಗೆ ಮದುವೆ ಮುರಿದ ವರ; ಹೋಗೊಲೋ ಎಂದಳು ವಧು!

Jasprit Bumrah
ಪ್ರಮುಖ ಸುದ್ದಿ32 mins ago

Jasprit Bumrah : ಪತ್ನಿ ಸಂಜನಾಗೆ ರೊಮ್ಯಾಂಟಿಕ್​​ ಬರ್ತ್​ಡೇ ವಿಶಸ್​ ಹೇಳಿದ ಜಸ್​ಪ್ರಿತ್​ ಬುಮ್ರಾ

Chinese Scientists
ವಿಜ್ಞಾನ39 mins ago

Chinese Scientists: ಇನ್ನು ಮನುಷ್ಯರು 130 ವರ್ಷ ಬದುಕಬಹುದು! ಚೀನಾ ವಿಜ್ಞಾನಿಗಳ ಸಂಶೋಧನೆ

Ranchi Cash
ದೇಶ41 mins ago

12 ತಾಸು, 6 ಮಷೀನ್‌ಗಳಿಂದ 30 ಕೋಟಿ ರೂ. ಎಣಿಕೆ; ಕಾಂಗ್ರೆಸ್‌ ಮುಖಂಡನ ಪಿಎ ಮನೆಯಲ್ಲಿ ಹಣದ ರಾಶಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 min ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ13 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ22 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ24 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 day ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ4 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

ಟ್ರೆಂಡಿಂಗ್‌