Odisha Train Accident : ಅಯ್ಯೊ ದುರ್ವಿಧಿ, ಟ್ರೈನ್ ಕೆಳಗೆ ಮಲಗಿದ್ದವರು ಅಲ್ಲೇ ಅಪ್ಪಚ್ಚಿ! - Vistara News

ದೇಶ

Odisha Train Accident : ಅಯ್ಯೊ ದುರ್ವಿಧಿ, ಟ್ರೈನ್ ಕೆಳಗೆ ಮಲಗಿದ್ದವರು ಅಲ್ಲೇ ಅಪ್ಪಚ್ಚಿ!

ಒಡಿಶಾದ ಜಜ್ಪುರ್ ರೋಡ್ ರೈಲ್ವೆ ನಿಲ್ದಾಣದಲ್ಲಿ ಗೂಡ್ಸ್ ರೈಲಿಗೆ ಸಿಲುಕಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದರೆ ನಾಲ್ವರು ಗಾಯಗೊಂಡಿದ್ದಾರೆ.

VISTARANEWS.COM


on

Good Train Accident
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಒಡಿಶಾದ ಜಜ್ಪುರ್ ರೋಡ್ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಗೂಡ್ಸ್ ರೈಲಿನಡಿಗೆ ಸಿಲುಕಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ದುರದೃಷ್ಟವೆಂದರೆ ಇವರೆಲ್ಲರೂ ಕೆಲಸ ಮಾಡಿ ಸುಸ್ತಾಯಿತು ಎಂದು ನಿಂತಿದ್ದ ಗೂಡ್ಸ್​ ರೈಲಿನಡಿ ಮಲಗಿದ್ದರು. ಏಕಾಏಕಿ ಟ್ರೈನ್​ ಹೊರಟ ಕಾರಣ ಗಾಡ ನಿದ್ದೆಯಲ್ಲಿದ್ದ ನಾಲ್ವರು ಸ್ಥಳದಲ್ಲೇ ಅಪ್ಪಚ್ಚಿಯಾದರೆ, ಇನ್ನೂ ನಾಲ್ವರು ಗಾಯಗೊಂಡಿದ್ದಾರೆ. ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ (Odisha Train Accident) 288 ಜನರು ಮೃತಪಟ್ಟ ಘಟನೆ ನಡೆದು ನಾಲ್ಕು ದಿನಗಳ ಒಳಗೆ ಅದೇ ರಾಜ್ಯದಲ್ಲಿ ಘಟನೆ ನಡೆಸಿದೆ.

ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲು ಬೇಗ ಹೊರಡದು ಎಂದು ಅಂದುಕೊಂಡ ಕಾರ್ಮಿಕರು ಅದರಡಿಯಲ್ಲಿ ಮಲಗಿದ್ದರು. ಇದರ ಬಗ್ಗೆ ಅರಿವೇ ಇಲ್ಲದ ಲೋಕೋಪೈಲೆಟ್​ ಸಿಗ್ನಲ್​ ದೊರೆತ ತಕ್ಷಣ ರೈಲನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಘಟನೆ ವಿಚಾರ ತಿಳಿದ ತಕ್ಷಣ ಸಾವಿರಾರು ಮಂದಿ ರೈಲ್ವೇ ಸ್ಟೇಷನ್​ ಬಳಿ ಜಮಾಯಿಸಿದ್ದಾರೆ. ಹೀಗಾಗಿ ರೈಲ್ವೇ ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಕೋರಮಂಡಲ ಎಕ್ಸ್​ಪ್ರೆಸ್​​ ಪ್ರಯಾಣ ಶುರು

ಕಳೆದ ಶುಕ್ರವಾರ ಅಪಘಾತಕ್ಕೆ ಈಡಾಗಿ ನೂರಾರು ಜನರ ಸಾವಿಗೆ ಕಾರಣವಾದ ಕೋರಮಂಡಲ ಎಕ್ಸ್​ಪ್ರೆಸ್​ ಟ್ರೈನ್​ ಮತ್ತೆ ತನ್ನ ಸಂಚಾರ ಆರಂಭಿಸಿದೆ. ಬುಧವಾರ ಮಧ್ಯಾಹ್ನ ಚೆನ್ನೈನ ಶಾಲಿಮರ್​ ಸ್ಟೇಷನ್​ನಿಂದ ಸಂಚಾರ ಶುರುಮಾಡಿತು.

ಇದನ್ನೂ ಓದಿ : Goods Train Derails: ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಎಲ್‌ಪಿಜಿ ಸಾಗಿಸುತ್ತಿದ್ದ ರೈಲು; ಯಾರನ್ನು ‘ಹಳಿ’ಯಬೇಕು?

ಕೋರಮಂಡಲ್ ಎಕ್ಸ್​ಪ್ರೆಸ್​​ ಶುಕ್ರವಾರ ಸಂಜೆ ವೇಳೆಗೆ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಗೂಡ್ಸ್ ರೈಲು ನಿಂತಿದ್ದ ಲೂಪ್​ಲೈನ್​ಗೆ ತಪ್ಪು ಸಿಗ್ನಲ್​ ಸಿಕ್ಕಿದ್ದರಿಂದ ಪ್ರವೇಶಿಸಿ ಗೂಡ್ಸ್​​ ರೈಲಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿತ್ತು. ರೈಲಿನ ಬೋಗಿಗಳು ಎದುರಿನಿಂದ ಬರುತ್ತಿದ್ದ ಹೌರಾದಿಂದ ಬೆಂಗಳೂರಿಗೆ ಹೊರಟಿದ್ದ ರೈಲು ಸಂಚರಿಸುತ್ತಿದ್ದದ ಹಳಿಗೆ ಬಿದ್ದ ಕಾರಣ ಆ ರೈಲು ಕೂಡ ಅಪಘಾತಕ್ಕೆ ಈಡಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Porsche Crash: ಇಬ್ಬರ ಸಾವಿಗೆ ಕಾರಣವಾದ 17 ವರ್ಷದ ಬಾಲಕನಿಗೆ ಪೋರ್ಶೆ ಕಾರು ಸಿಕ್ಕಿದ್ದು ʼಬರ್ತ್‌ಡೇ ಗಿಫ್ಟ್‌ʼ!

Porsche Crash: ಮೇ 19ರಂದು ಪುಣೆಯಲ್ಲಿ ಅಪಘಾತ ಸಂಭವಿಸಿದೆ. ಕಲ್ಯಾಣಿ ನಗರದಲ್ಲಿ ಕುಡಿದು ವೇಗವಾಗಿ ಕಾರು ಚಲಾಯಿಸಿದ ಕಾರಣ ಮಧ್ಯಪ್ರದೇಶದ ಅಶ್ವಿನಿ ಕೋಷ್ಟ ಹಾಗೂ ಅನೀಶ್‌ ಅವಾಧಿಯಾ ಎಂಬ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದಾರೆ. ವಿಶಾಲ್‌ ಅಗರ್ವಾಲ್‌ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದು, ಅವರು ಪ್ರಭಾವ ಬೀರಲು ಯತ್ನಿಸಿದ್ದರು. ಈಗ ಬಾಲಕನ ತಂದೆ ಹಾಗೂ ತಾತನನ್ನು ಬಂಧಿಸಲಾಗಿದೆ.

VISTARANEWS.COM


on

Porsche Car Crash
Koo

ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ 17 ವರ್ಷದ ಬಾಲಕನು ಮದ್ಯಪಾನ ಮಾಡಿ ಪೋರ್ಶೆ ಕಾರು ಚಲಾಯಿಸಿ, ಅಪಘಾತದಲ್ಲಿ (Porsche Crash) ಇಬ್ಬರ ಸಾವಿಗೆ ಕಾರಣವಾದ ಪ್ರಕರಣವು (Pune Car Accident) ದೇಶಾದ್ಯಂತ ಸುದ್ದಿಯಾಗಿದೆ. ಅಪ್ರಾಪ್ತನ ಕೈಗೆ ಕಾರು ಕೊಟ್ಟ ಹಿನ್ನೆಲೆಯಲ್ಲಿ 17 ವರ್ಷದ ಬಾಲಕನ ತಂದೆ ವಿಶಾಲ್‌ ಅಗರ್ವಾಲ್‌ ಹಾಗೂ ಅವರ ತಾತ ಸುರೇಂದ್ರ ಅಗರ್ವಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ, ಬಾಲಕನು ಚಲಾಯಿಸಿದ ಪೋರ್ಶೆ ಕಾರನ್ನು (Porsche) ಆತನ ತಾತನು ಬರ್ತ್‌ಡೇ ಗಿಫ್ಟ್‌ ಆಗಿ ಕೊಟ್ಟಿದ್ದರು ಎಂದು ತಿಳಿದುಬಂದಿದೆ.

ಮೇ 19ರಂದು ಪುಣೆಯಲ್ಲಿ ಅಪಘಾತ ಸಂಭವಿಸಿದೆ. ಕಲ್ಯಾಣಿ ನಗರದಲ್ಲಿ ಕುಡಿದು ವೇಗವಾಗಿ ಕಾರು ಚಲಾಯಿಸಿದ ಕಾರಣ ಮಧ್ಯಪ್ರದೇಶದ ಅಶ್ವಿನಿ ಕೋಷ್ಟ ಹಾಗೂ ಅನೀಶ್‌ ಅವಾಧಿಯಾ ಎಂಬ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದಾರೆ. ವಿಶಾಲ್‌ ಅಗರ್ವಾಲ್‌ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದು, ಅವರು ಪ್ರಭಾವ ಬೀರಲು ಯತ್ನಿಸಿದ್ದರು. ಅಪಘಾತಕ್ಕೆ ಕಾರಣವಾದ 17 ವರ್ಷದ ಬಾಲಕನಿಗೆ ಪೊಲೀಸ್‌ ಠಾಣೆಯಲ್ಲಿ ಪಿಜ್ಜಾ ಕೂಡ ಪೂರೈಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಶ್ರೀಮಂತ ಕುಟುಂಬದ 17 ವರ್ಷದ ಬಾಲಕನಿಗೆ ಆತನ ತಾತನು ಹುಟ್ಟುಹಬ್ಬದ ಉಡುಗೊರೆಯಾಗಿ ಪೋರ್ಶೆ ಟೇಕ್ಯಾನ್‌ (ಸುಮಾರು 2 ಕೋಟಿ ರೂ.) ಕಾರು ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ.

“ಬಾಲಕನ ಜನ್ಮದಿನದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಆತನ ತಾತನು ಐಷಾರಾಮಿ ಕಾರಿನ ಫೊಟೊವನ್ನು ವಾಟ್ಸ್ಆ್ಯಪ್‌ನಲ್ಲಿ ಶೇರ್‌ ಮಾಡಿದ್ದರು” ಎಂಬುದಾಗಿ ಬಾಲಕನ ಸ್ನೇಹಿತನು ಹೇಳಿದ್ದಾನೆ ಎಂಬುದಾಗಿ ವರದಿಗಳು ತಿಳಿಸಿವೆ. ರೆಸ್ಟೋರೆಂಟ್‌ನಲ್ಲಿ ಮದ್ಯಪಾನ ಮಾಡಿ, ಅದಕ್ಕಾಗಿ 45 ಸಾವಿರ ರೂ. ಬಿಲ್‌ ಪಾವತಿಸಿ, ಅತಿಯಾದ ವೇಗದಲ್ಲಿ ಕಾರು ಚಲಾಯಿಸಿದ ಕಾರಣ ಅಪಘಾತ ಸಂಭವಿಸಿದೆ. ಕಾರು ಓಡಿಸಿದ ವೇಗ ನೋಡಿದರೆ ಭಯ ಹುಟ್ಟಿಸುವಂತಿದೆ. ಇದಾದ ಬಳಿಕ ಅಪಘಾತದ ಹೊಣೆಯನ್ನು ನೀನೇ ಹೊತ್ತುಕೊ ಎಂಬುದಾಗಿ ವಾಹನ ಚಾಲಕನಿಗೆ ಬಾಲಕನ ತಂದೆ ಒತ್ತಡ ಹೇರಿದ್ದರು ಎಂದು ತಿಳಿದುಬಂದಿದೆ.

ಪುಣೆಯಲ್ಲಿ ಮಗನು ಬೈಕ್‌ಗೆ ಕಾರು ಗುದ್ದಿಸಿ, ಇಬ್ಬರ ಸಾವಿಗೆ ಕಾರಣವಾದ ಪ್ರಕರಣ ಸುದ್ದಿಯಾಗುತ್ತಲೇ ಉದ್ಯಮಿ ವಿಶಾಲ್‌ ಅಗರ್ವಾಲ್‌ ತಲೆಮರೆಸಿಕೊಂಡಿದ್ದರು. ಮೊದಲು ಪುಣೆಯ ತಮ್ಮ ನಿವಾಸಕ್ಕೆ ತೆರಳಿದ್ದ ಅವರು, ಅಲ್ಲಿಂದ ಡೌಂಡ್‌ನಲ್ಲಿರುವ ಫಾರ್ಮ್‌ಹೌಸ್‌ಗೆ ಹೋದರು. ಅಲ್ಲಿಂದ, ಕೊಲ್ಹಾಪುರಕ್ಕೆ ಪರಾರಿಯಾದ ಅವರು ಅಲ್ಲಿ ಗೆಳೆಯನನ್ನು ಭೇಟಿಯಾದರು. ಅಲ್ಲಿ, ಪೊಲೀಸರಿಂದ ಪರಾರಿಯಾಗಲು ಮತ್ತೊಂದು ಯೋಜನೆ ರೂಪಿಸಿದರು ಎಂದು ತಿಳಿದುಬಂದಿದೆ.

ವಿಶಾಲ್‌ ಅಗರ್ವಾಲ್‌ ಇಷ್ಟೆಲ್ಲ ಯೋಜನೆ ರೂಪಿಸಿದರೂ ಪುಣೆ ಕ್ರೈಂ ಬ್ರ್ಯಾಂಚ್‌ ಪೊಲೀಸರು ಸಂಭಾಜಿನಗರದಲ್ಲಿ ವಿಶಾಲ್‌ ಅಗರ್ವಾಲ್‌ ಅವರನ್ನು ಬಂಧಿಸಿದರು. ಸಿಸಿಟಿವಿ ಕ್ಯಾಮೆರಾ ಹಾಗೂ ವಿಶಾಲ್‌ ಅಗರ್ವಾಲ್‌ ಗೆಳೆಯನ ಕಾರಿನ ಜಿಪಿಎಸ್‌ ಟ್ರ್ಯಾಕ್‌ ಮಾಡಿ, ಕೊನೆಗೂ ಅವರನ್ನು ಬಂಧಿಸಿದ್ದಾರೆ. ಸಂಭಾಜಿ ನಗರದ ಲಾಡ್ಜ್‌ನಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು. ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ವಿಶಾಲ್‌ ಅಗರ್ವಾಲ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ.

ಇದನ್ನೂ ಓದಿ: Porsche Crash: 2 ಕಾರು, 4 ನಗರ, 1 ಸಿಮ್‌ ಕಾರ್ಡ್;‌ ಮಗ ಕಾರು ಗುದ್ದಿದ ಬಳಿಕ ಅಪ್ಪನ ಪ್ಲಾನ್‌ ಏನು? ಇಲ್ಲಿದೆ ಭೀಕರ ಮಾಹಿತಿ

Continue Reading

ದೇಶ

Swati Maliwal case: “ರೇಪ್‌, ಕೊಲೆ ಮಾಡೋದಾಗಿ ಬೆದರಿಕೆ ಬರ್ತಿದೆ”- ಸ್ವಾತಿ ಮಲಿವಾಲ್‌ ಮತ್ತೊಂದು ಆರೋಪ

Swati Maliwal case:ಭಿಭವ್‌ ಕುಮಾರ್‌ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್‌ ಧ್ರುವ್‌ ರತೀ ತಮ್ಮ ವಿರುದ್ಧ ಏಕಪಕ್ಷೀಯವಾದ ವಿಡಿಯೋ ಹರಿಬಿಟ್ಟ ನಂತರ ನನ್ನ ವಿರುದ್ಧ ಆಪ್‌ ಮುಖಂಡರು ಮತ್ತು ಕಾರ್ಯಕರ್ತರು ಮುಗಿ ಬೀಳುತ್ತಿದ್ದಾರೆ. ನನ್ನ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಜೀವ ಬೆದರಿಕೆಯನ್ನೂ ಒಡ್ಡುತ್ತಿದ್ದಾರೆ ಎಂದು ಸ್ವಾತಿ ಮಲಿವಾಲ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ ತಮಗೆ ಬಂದಿರುವ ಬೆದರಿಕೆ ಸಂದೇಶಗಳ ಸ್ಕ್ರೀನ್‌ ಶಾಟ್‌ಗಳನ್ನೂ ಶೇರ್‌ ಮಾಡಿದ್ದಾರೆ.

VISTARANEWS.COM


on

Swati Maliwal
Koo

ನವದೆಹಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಆಪ್ತ ಕಾರ್ಯದರ್ಶಿ ಬಿಭವ್‌ ಕುಮಾರ್‌ (Bibhav Kumar)ಯಿಂದ ಹಲ್ಲೆ ಆರೋಪದ ಬೆನ್ನಲ್ಲೇ ಆಮ್‌ ಆದ್ಮಿ ಪಕ್ಷದ (Aam Admi Party) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ (Swati Maliwal case) ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಬಿಭವ್‌ ಕುಮಾರ್‌ ಅರೆಸ್ಟ್‌ ಬಳಿಕ ಆಪ್‌ ಕಾರ್ಯಕರ್ತರು ಮತ್ತು ನಾಯಕರಿಂದ ತಮಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಬರುತ್ತಿದೆ ಎಂದು ಹೇಳಿದ್ದಾರೆ.

ಭಿಭವ್‌ ಕುಮಾರ್‌ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್‌ ಧ್ರುವ್‌ ರತೀ ತಮ್ಮ ವಿರುದ್ಧ ಏಕಪಕ್ಷೀಯವಾದ ವಿಡಿಯೋ ಹರಿಬಿಟ್ಟ ನಂತರ ನನ್ನ ವಿರುದ್ಧ ಆಪ್‌ ಮುಖಂಡರು ಮತ್ತು ಕಾರ್ಯಕರ್ತರು ಮುಗಿ ಬೀಳುತ್ತಿದ್ದಾರೆ. ನನ್ನ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಜೀವ ಬೆದರಿಕೆಯನ್ನೂ ಒಡ್ಡುತ್ತಿದ್ದಾರೆ ಎಂದು ಸ್ವಾತಿ ಮಲಿವಾಲ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ ತಮಗೆ ಬಂದಿರುವ ಬೆದರಿಕೆ ಸಂದೇಶಗಳ ಸ್ಕ್ರೀನ್‌ ಶಾಟ್‌ಗಳನ್ನೂ ಶೇರ್‌ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಸ್ವಾತಿ ಮಲಿವಾಲ್‌ ಮೇಲೆ ಸಿಎಂ ಕೇಜ್ರಿವಾಲ್‌ ನಿವಾಸದಲ್ಲೇ ಬಿಭವ್‌ ಕುಮಾರ್‌ ಹಲ್ಲೆ ನಡೆಸಿದ್ದ. ಇದಾದ ನಾಲ್ಕು ದಿನಗಳ ಬಳಿಕ ಸ್ವಾತಿ ಪೊಲೀಸರಿಗೆ ದೂರು ನೀಡಿದ್ದರು., ಸ್ವಾತಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ‘ನಾನು ಮುಖ್ಯಮಂತ್ರಿ ಅವರ ಭೇಟಿಗೆ ಹೋಗಿದ್ದಾಗ ಬಿಭವ್‌ ಅಡ್ಡಿಪಡಿಸಿದ್ದರು. ನನ್ನ ಜೊತೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದರು. ಪ್ರತಿರೋಧವೊಡ್ಡಿದಾಗ ಮುಖ, ಹೊಟ್ಟೆ, ಎದೆ ಮತ್ತು ದೇಹದ ಸೂಕ್ಷ್ಮ ಭಾಗಗಳ ಮೇಲೆ ಹಲವು ಬಾರಿ ತೀವ್ರ ಹಲ್ಲೆ ನಡೆಸಿದರು. ಈ ವೇಳೆ ಅವರ ಬಳಿ ನಾನು ಗೋಗರೆದು ತಪ್ಪಿಸಿಕೊಂಡು ಬಂದು ಪೊಲೀಸ್‌ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದೆ’ ಎಂದು ಸ್ವಾತಿ ಹೇಳಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ಬಿಭವ್‌ ಮೇಲೆ ಮಹಿಳೆಯ ಅತ್ಯಾಚಾರಕ್ಕೆ ಯತ್ನ, ಕ್ರಿಮಿನಲ್‌ ಉದ್ದೇಶ, ಉದ್ದೇಶಪೂರ್ವಕ ಹಲ್ಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Dhruva Sarja: ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ಸ್ಟಾರ್ ಅಂತ ಯಾರೂ ಇಲ್ಲ ಎಂದಿದ್ದೇಕೆ ಧ್ರುವ ಸರ್ಜಾ?

ಸ್ವಾತಿ ತಮ್ಮ ದೂರಿನಲ್ಲಿ ತಾವು ಆ ದಿನ ಅನುಭವಿಸಿದ ನೋವಿನ ಬಗ್ಗೆ ದಾಖಲಿಸಿದ್ದಾರೆ. ಬಿಭವ್‌ ಕುಮಾರ್‌ 7-8ರಿಂದ ಎಂಟು ಬಾರಿ ಕಪಾಳಕ್ಕೆ ಬಾರಿಸಿದ್ದಾನೆ. ನಾನು ನೆಲಕ್ಕೆ ಬಿದ್ದಾಗ ನಿರಂತರವಾಗಿ ನನ್ನ ಹೊಟ್ಟೆ, ಎದೆ, ಬೆನ್ನಿಗೆ ಒದ್ದಿದ್ದಾನೆ. ಅಲ್ಲದೇ ನನ್ನನ್ನು ಕಾಲುಗಳನ್ನು ಹಿಡಿದು ನೆಲದಲ್ಲಿ ಎಳೆದಾಡಿದ್ದು, ಬಟ್ಟೆಯನ್ನ ಎಳೆದಾಡಿದ್ದಾನೆ. ನಾನು ಅವತ್ತು ಋತುಮತಿಯಾಗಿದ್ದೆ. ಹೊಟ್ಟೆ ಬಹಳ ನೋಯುತ್ತಿದೆ ದಯವಿಟ್ಟು ಬಿಟ್ಟು ಬಿಡು ಎಂದರೂ ಕೇಳದೇ ನನ್ನ ಹೊಟ್ಟೆ ಕಾಲುಗಳಿಂದ ಒದ್ದಿದ್ದಾನೆ ಎಂದು ಸ್ವಾತಿ ಹೇಳಿದ್ದರು. ಇದಾದ ಬಳಿಕ ಕಳೆದ ವಾರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಭವ್‌ ಕುಮಾರ್‌ನನ್ನು ಅರೆಸ್ಟ್‌ ಮಾಡಲಾಗಿದ್ದು, ಸದ್ಯ ಆತನನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿತ್ತು.

Continue Reading

ದೇಶ

Flight Emergency Landing: ತಪ್ಪಿದ ಮತ್ತೊಂದು ಭಾರೀ ಅವಘಡ; ಸ್ಪೈಸ್‌ ಜೆಟ್‌ ವಿಮಾನ ತುರ್ತು ಭೂಸ್ಪರ್ಶ

Flight Emergency Landing: ದೆಹಲಿಯಿಂದ ಲೇಹ್‌ಗೆ ಹೊರಟಿದ್ದ SG123 ಸ್ಪೈಸ್‌ ಜೆಟ್‌ ವಿಮಾನ ಟೇಕ್‌ ಆಫ್‌ ಆಗುತ್ತಿದ್ದಂತೆ ಹಕ್ಕಿಯೊಂದು ಬಂದು ಎಂಜಿನ್‌ಗೆ ಡಿಕ್ಕಿ ಹೊಡೆದಿದೆ. ತಕ್ಷಣ ಸಮಯಪ್ರಜ್ಞೆ ಮೆರೆದ ಪೈಲಟ್‌ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ. ಬೆಳಗ್ಗೆ 10.29 ಕ್ಕೆ ಟೇಕ್‌ ಆಫ್‌ ಆಗಿದ್ದ ವಿಮಾನ 11ಗಂಟೆ ಹೊತ್ತಿಗೆ ಲ್ಯಾಂಡ್‌ ಆಗಿದೆ. ಇನ್ನು ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

VISTARANEWS.COM


on

Flight Emergency Landing
Koo

ನವದೆಹಲಿ: ಪಕ್ಷಿ ಡಿಕ್ಕಿ ಹೊಡೆದ ಕಾರಣ ಟೇಕ್‌ ಆಫ್‌ ಆಗಿದ್ದ ವಿಮಾನವೊಂದು ತುರ್ತು ಭೂಸ್ಪರ್ಶ(Flight Emergency Landing) ಮಾಡಿರುವ ಘಟನೆ ದೆಹಲಿ(New Delhi)ಯಲ್ಲಿ ನಡೆದಿದೆ. ದೆಹಲಿಯಿಂದ ಲೇಹ್‌ಗೆ ಹೊರಟಿದ್ದ SG123 ಸ್ಪೈಸ್‌ ಜೆಟ್‌(Spice jet) ವಿಮಾನ ಟೇಕ್‌ ಆಫ್‌(Take off) ಆಗುತ್ತಿದ್ದಂತೆ ಹಕ್ಕಿಯೊಂದು ಬಂದು ಎಂಜಿನ್‌ಗೆ ಡಿಕ್ಕಿ ಹೊಡೆದಿದೆ. ತಕ್ಷಣ ಸಮಯಪ್ರಜ್ಞೆ ಮೆರೆದ ಪೈಲಟ್‌ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಬೆಳಗ್ಗೆ 10.29 ಕ್ಕೆ ಟೇಕ್‌ ಆಫ್‌ ಆಗಿದ್ದ ವಿಮಾನ 11ಗಂಟೆ ಹೊತ್ತಿಗೆ ಲ್ಯಾಂಡ್‌ ಆಗಿದೆ. ಇನ್ನು ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಂತಹದ್ದೇ ಒಂದು ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ದುಬೈಯಿಂದ ಮುಂಬೈ ಆಗಮಿಸಿದ ಎಮಿರೇಟ್ಸ್‌ ವಿಮಾನ (Emirates Flight)ಕ್ಕೆ ಸಿಲುಕಿ ಸುಮಾರು 36 ಫ್ಲೆಮಿಂಗೊ(Flamingos) ಪಕ್ಷಿಗಳು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿತ್ತು.

ಮುಂಬೈಯ ಘಾಟ್‌ಕೋಪರ್‌ನ ಪಂತ್‌ನಗರದ ಲಕ್ಷ್ಮೀ ನಗರ ಪ್ರದೇಶದಲ್ಲಿ ಕಳೆದ ಸೋಮವಾರ ರಾತ್ರಿ ಈ ಅವಘಡ ನಡೆದಿದೆ. ಸುಮಾರು 310 ಪ್ರಯಾಣಿಕರನ್ನು ಹೊತ್ತ ಇಕೆ 508 (EK 508) ಎಮಿರೇಟ್ಸ್‌ ವಿಮಾನ ರಾತ್ರಿ 9.18ರ ಸುಮಾರಿಗೆ ಮುಂಬೈಗೆ ಆಗಮಿಸಿತ್ತು. ಈ ವೇಳೆ ಕೊಕ್ಕರೆಯಂತಹ ಫ್ಲೆಮಿಂಗೊಗಳು ವಿಮಾನಕ್ಕೆ ಸಿಲುಕಿ ಸಾವನ್ನಪ್ಪಿವೆ ಎಂದು ಮೂಲಗಳು ತಿಳಿಸಿವೆ. ವಿಮಾನಕ್ಕೂ ಅಲ್ಪ ಸ್ವಲ್ಪ ಹಾನಿಯಾಗಿದ್ದು, ಯಾವುದೇ ಅಪಾಯವಿಲ್ಲದೆ ಲ್ಯಾಂಡ್‌ ಆಗಿತ್ತು.

ಇದಕ್ಕೂ ಮುನ್ನ, ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ(Emergency Landing) ಮಾಡಿತ್ತು. ಬೆಂಗಳೂರಿನಿಂದ ಕೇರಳದ ಕೊಚ್ಚಿಗೆ ಹೊರಟಿದ್ದ ವಿಮಾನದ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ತುರ್ತು ಭೂ ಸ್ಪರ್ಶ ಮಾಡಲಾಗಿದ್ದು, ಭಾರೀ ಅವಘಡವೊಂದು ತಪ್ಪಿತ್ತು.

AI 1132 ಏರ್​ ಇಂಡಿಯಾ ವಿಮಾನ ರಾತ್ರಿ 11.20ಕ್ಕೆ ಬೆಂಗಳೂರಿನಿಂದ ಕೊಚ್ಚಿಗೆ ತೆರಳಲು ಟೇಕ್​​ ಆಫ್ ಆಗಿತ್ತು. ಆದರೆ ವಿಮಾನದಲ್ಲಿ ಏಕಾಏಕಿ ಬೆಂಕಿ ಹೊಗೆ ಕಾಣಿಸಿಕೊಂಡಿದೆ. ಕೂಡಲೆ ಪೈಲಟ್​​ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಎಮರ್ಜೆನ್ಸಿ ಲ್ಯಾಂಡ್​ ಮಾಡಿದರು. ಇದರಿಂದ ಭಾರಿ ಅನಾಹುತ ತಪ್ಪಿದೆ. ವಿಮಾನ ಭೂ ಸ್ಪರ್ಶವಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಕೂಡಲೆ ಬೆಂಕಿಯನ್ನು ನಂದಿಸಿದ್ದಾರೆ. ವಿಮಾನದಲ್ಲಿದ್ದ ಸಿಬ್ಬಂದಿ ಸೇರಿ 170 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಅದೃಷ್ಟವಶಾತ್‌ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ:Accident: ಭೀಕರ ಅಪಘಾತ; ದೇವಸ್ಥಾನಕ್ಕೆ ತೆರಳುತ್ತಿದ್ದ 11 ಜನ ಸ್ಥಳದಲ್ಲೇ ದುರ್ಮರಣ

ಮೇ 16ರಂದು ಕೂಡ ಇಂತಹದ್ದೇ ಒಂದು ಘಟನೆ ಪುಣೆಯಲ್ಲಿ ನಡೆದಿತ್ತು,. 180 ಪ್ರಯಾಣಿಕರೊಂದಿಗೆ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ (Air India) ವಿಮಾನವು ಪುಣೆ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಗುರುವಾರ (ಮೇ 16) ಟಗ್‌ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯಿಂದಾಗಿ ವಿಮಾನಕ್ಕೆ ಹಾನಿಯಾಗಿದ್ದರೂ ಅದೃಷ್ಟವಶಾತ್‌ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಅಪಘಾತದ ನಂತರ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು.

Continue Reading

ದೇಶ

IT Raid: ಚಿನ್ನದ ವ್ಯಾಪಾರಿಗಳಿಗೆ ಐಟಿ ಶಾಕ್‌; ಬೆಳ್ಳಂಬೆಳಗ್ಗೆ ರೇಡ್‌, ಕೋಟಿ ಕೋಟಿ ಹಣ ಜಪ್ತಿ!

IT Raid: ಐಟಿ ಅಧಿಕಾರಿಗಳು ಚಿನ್ನದ ಮಳಿಗೆಯಲ್ಲಿ ಶೋಧ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಶೋಧ ಕಾರ್ಯದ ವೇಳೆ ಬರೋಬ್ಬರಿ 26 ಕೋಟಿ ರೂ. ನಗದು ಮತ್ತು 90 ಕೋಟಿ ರೂ. ಮೊತ್ತದ ವಸ್ತುಗಳು ಪತ್ತೆ ಆಗಿವೆ. ಇನ್ನು ಈ ನಗದು ಮತ್ತು ಸ್ವತ್ತುಗಳನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದು, ಕೇಸ್‌ ದಾಖಲಿಸಿಕೊಂಡಿದ್ದಾರೆ.

VISTARANEWS.COM


on

IT Raid
Koo

ಮಹಾರಾಷ್ಟ್ರ: ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ(IT Raid) ಅಧಿಕಾರಿಗಳು ನಾಸಿಕ್ ಮೂಲದ ಚಿನ್ನದ ವ್ಯಾಪಾರಿ(Jewellers)ಗಳಿಗೆ ಬಿಸಿ ಮುಟ್ಟಿದ್ದಾರೆ. ಅಕ್ರಮ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರದ ನಾಸಿಕ್‌ನ ಸುರಾನಾ ಜ್ಯುವೆಲ್ಲರ್ಸ್‌ ಮೇಲೆ ರೇಡ್‌ ಮಾಡಿದ ಅಧಿಕಾರಿಗಳು ಭಾರೀ ಮೊತ್ತದ ಅಕ್ರಮ ಹಣ ಮತ್ತು ಸಂಪತ್ತನ್ನು ವಶಕ್ಕೆ ಪಡೆದಿದ್ದಾರೆ.

ಅಧಿಕೃತ ಮಾಹಿತಿ ಮೇರೆಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಚಿನ್ನದ ಮಳಿಗೆಯಲ್ಲಿ ಶೋಧ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಶೋಧ ಕಾರ್ಯದ ವೇಳೆ ಬರೋಬ್ಬರಿ 26 ಕೋಟಿ ರೂ. ನಗದು ಮತ್ತು 90 ಕೋಟಿ ರೂ. ಮೊತ್ತದ ವಸ್ತುಗಳು ಪತ್ತೆ ಆಗಿವೆ. ಇನ್ನು ಈ ನಗದು ಮತ್ತು ಸ್ವತ್ತುಗಳನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದು, ಕೇಸ್‌ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:Fire Accident: ಗುಜರಾತ್‌ ಅಗ್ನಿ ದುರಂತ; ಸಾವಿನ ಸಂಖ್ಯೆ 32ಕ್ಕೆ ಏರಿಕೆ; SIT ತನಿಖೆಗೆ ಆದೇಶ

ಇನ್ನು ಕೆಲವು ವಾರಗಳ ಹಿಂದೆ ಜಾರ್ಖಂಡ್‌ನಲ್ಲೂ ಇಂತಹದ್ದೇ ಒಂದು ರೇಡ್‌ ನಡೆದಿತ್ತು. ಜಾರಿ ನಿರ್ದೇಶನಾಲಯ (Enforcement Directorate)ದ ಅಧಿಕಾರಿಗಳು ಜಾರ್ಖಂಡ್‌ನ ರಾಜಧಾನಿ ರಾಂಚಿಯ ಅನೇಕ ಸ್ಥಳಗಳಲ್ಲಿ ಸರಣಿ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದ್ದರು. (ED Raid). ಈ ವೇಳೆ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ, ಕಾಂಗ್ರೆಸ್‌ ಮುಖಂಡ ಅಲಂಗೀರ್ ಆಲಂ (Alamgir Alam) ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ (Sanjiv Lal) ಮನೆಯಲ್ಲಿ ಲೆಕ್ಕವಿಲ್ಲದ 25 ಕೋಟಿ ರೂ.ಗಿಂತ ಅಧಿಕ ಹಣವನ್ನು ವಶಕ್ಕೆ ಪಡೆಯಲಾಗಿತ್ತು.

Continue Reading
Advertisement
Karnataka Rain
ಮಳೆ2 mins ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

MS Dhoni
ಕ್ರೀಡೆ7 mins ago

M S Dhoni: ಫ್ರಾನ್ಸ್ ಮೂಲದ ಕಾರು ಕಂಪನಿಯ ಬ್ರಾಂಡ್​ ಅಂಬಾಸಿಡರ್ ಆಗಿ ನೇಮಕಗೊಂಡ ಲೆಜೆಂಡ್​ ಧೋನಿ

Karnataka Council Election
ಕರ್ನಾಟಕ20 mins ago

ವಿಧಾನ ಪರಿಷತ್‌ ಚುನಾವಣೆ: ಖರ್ಗೆ, ಸಿದ್ದು, ಡಿಕೆಶಿ ಆಪ್ತರಿಗೆ ಸ್ಥಾನ ಕೊಡಿಸಲು 2+2+2+1=7 ಫಾರ್ಮುಲಾ; ಏನಿದು?

Krishna Water Dispute
ಕರ್ನಾಟಕ28 mins ago

Krishna Water Dispute: ಕೃಷ್ಣಾ ನೀರಿನ ವಿಚಾರ ಮತ್ತೆ ಮಹಾ ಕ್ಯಾತೆ; ರಾಜ್ಯಕ್ಕೆ ಹರಿದು ಬರ್ತಿದ್ದ ನೀರು ತಡೆ ಹಿಡಿದ ಮಹಾರಾಷ್ಟ್ರ!

Latest40 mins ago

Shilpa Shetty : 3.5 ಕೋಟಿ ರೂಪಾಯಿ ಬೆಲೆಯ ರೇಂಜ್​ ರೋವರ್​​ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ; ವಿಡಿಯೊ ನೋಡಿ

Actor Darshan fans against forest officials Construction of Arjuna tomb
ಸ್ಯಾಂಡಲ್ ವುಡ್41 mins ago

Actor Darshan: ಅರ್ಜುನನ ಸಮಾಧಿ ನಿರ್ಮಾಣ: ಅರಣ್ಯಾಧಿಕಾರಿಗಳ ವಿರುದ್ಧ ದರ್ಶನ್ ಅಭಿಮಾನಿಗಳಿಂದ ಆಕ್ರೋಶ!

Mango Nail Art
ಫ್ಯಾಷನ್43 mins ago

Mango Nail Art: ಸಮ್ಮರ್‌ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್‌ ಆರ್ಟ್!

Viral News
ವೈರಲ್ ನ್ಯೂಸ್44 mins ago

Viral News: ಕಂಪನಿಯಲ್ಲಿ 1 ವರ್ಷ ವೇತನ ಸಹಿತ ರಜೆ ಪಡೆದ ಉದ್ಯೋಗಿ; ಈ ಲಕ್‌ ನಿಮ್ಮದಾಗಬೇಕೆ? ಹೀಗೆ ಮಾಡಿ

Basavanagudi News
ಬೆಂಗಳೂರು57 mins ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Road Accident
ಕರ್ನಾಟಕ1 hour ago

Road Accident: ಕೆಎಸ್ಆರ್‌ಟಿಸಿ ಬಸ್-ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 mins ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು57 mins ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌