Viral News: ಮೊಬೈಲ್‌ ಗೇಮ್ಸ್‌ ಆಡಿ 52 ಲಕ್ಷ ರೂ. ಕಳೆದ ಮಗಳು; ಅಕೌಂಟಲ್ಲಿ ಉಳಿದ ಬಿಡಿಗಾಸು ನೋಡಿ ತಾಯಿಗೆ ಶಾಕ್‌ - Vistara News

ವಿದೇಶ

Viral News: ಮೊಬೈಲ್‌ ಗೇಮ್ಸ್‌ ಆಡಿ 52 ಲಕ್ಷ ರೂ. ಕಳೆದ ಮಗಳು; ಅಕೌಂಟಲ್ಲಿ ಉಳಿದ ಬಿಡಿಗಾಸು ನೋಡಿ ತಾಯಿಗೆ ಶಾಕ್‌

Viral News: ಕಳೆದ ನಾಲ್ಕು ತಿಂಗಳಿಂದಲೂ 13 ವರ್ಷದ ಬಾಲಕಿ ಮೊಬೈಲ್‌ ಗೇಮ್ಸ್‌ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಲೇ ಇದ್ದಾಳೆ. ಆದರೆ, ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗಿದ್ದು ಬಾಲಕಿಯ ತಾಯಿಗೆ ಗೊತ್ತೇ ಆಗಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.

VISTARANEWS.COM


on

girl spends 52 lakh rupees on mobile games
ಸಾಂದರ್ಭಿಕ ಚಿತ್ರ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೀಜಿಂಗ್‌: ಇದೇನಿದ್ದರೂ ಇಂಟರ್‌ನೆಟ್‌ ಹಾಗೂ ಸ್ಮಾರ್ಟ್‌ಫೋನ್‌ಗಳ ಕಾಲ. ಪುಟ್ಟ ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್‌ಗಳು ರಾರಾಜಿಸುತ್ತಿವೆ. ನಮಗೆ ಅನ್ನ, ಗಾಳಿ, ನೀರು ಹೇಗೆ ಮೂಲಭೂತ ಅವಶ್ಯಕತೆಯಾಗಿದೆಯೋ, ಮೊಬೈಲ್‌ ಕೂಡ ಮೂಲಭೂತ ಅವಶ್ಯಕತೆಯಾಗಿದೆ. ಅದರಲ್ಲೂ, ಮಕ್ಕಳಿಗಂತೂ ಸ್ಮಾರ್ಟ್‌ಫೋನ್‌ ಇಲ್ಲದೆ, ಮೊಬೈಲ್‌ ಗೇಮ್ಸ್‌ ಇಲ್ಲದೆ ಒಂದು ತುತ್ತು ಅನ್ನವೂ ಸೇರುವುದಿಲ್ಲ. ಹೀಗೆ, ಚೀನಾದಲ್ಲಿ 13 ವರ್ಷದ ಬಾಲಕಿಯೊಬ್ಬಳು ಮೊಬೈಲ್‌ ಗೇಮ್ಸ್‌ಗಾಗಿ 52 ಲಕ್ಷ ರೂಪಾಯಿ (4,49,500 Yuan) ವ್ಯಯಿಸಿದ್ದು, (Viral News) ಆಕೆಯ ತಾಯಿ ಬ್ಯಾಂಕ್‌ ಖಾತೆಯಲ್ಲಿ ಕೇವಲ 5 ರೂಪಾಯಿ ಉಳಿದಾಗಲೇ ಮಗಳು ಮಾಡಿದ ಉಪಟಳ ಗೊತ್ತಾಗಿದೆ.

ಕಳೆದ ನಾಲ್ಕು ತಿಂಗಳಿಂದ ಬಾಲಕಿಯು ಮೊಬೈಲ್‌ಗೆ ಅಡಿಕ್ಟ್‌ ಆಗಿದ್ದಾಳೆ. ಆಕೆಯ ತಾಯಿ ನೋಡಿದರೂ ಗದರಿ ಸುಮ್ಮನಾಗಿದ್ದಾರೆ. ಆದರೆ, ಶಾಲೆಯಲ್ಲಿ ಕೂತಾಗಲೂ ಬಾಲಕಿಯು ಮೊಬೈಲ್‌ನಲ್ಲೇ ಮಗ್ನಳಾಗಿರುವುದನ್ನು ಕಂಡ ಆಕೆಯ ಟೀಚರ್‌ ಪರಿಶೀಲನೆ ನಡೆಸಿದ್ದಾರೆ. ಆಗ, ಬಾಲಕಿಯು ಮೊಬೈಲ್‌ ಗೇಮ್ಸ್‌ಗೆ ಅಡಿಕ್ಟ್‌ ಆಗಿರುವುದು ಗೊತ್ತಾಗಿದೆ. ಕೂಡಲೇ ಟೀಚರ್‌ ಬಾಲಕಿಯ ತಾಯಿಗೆ ಮಾಹಿತಿ ನೀಡಿದ್ದು, ಆಕೆಯ ತಾಯಿಯು ಬ್ಯಾಂಕ್‌ ಖಾತೆ ಪರಿಶೀಲಿಸಿದಾಗ ಆಘಾತ ಕಾದಿದೆ. ಅಕೌಂಟ್‌ನಲ್ಲಿ ಕೇವಲ ಐದು ರೂಪಾಯಿ ಉಳಿದಿದ್ದನ್ನು ನೋಡಿ ಆಘಾತವಾಗಿದೆ. ಕೊನೆಗೆ, ಬಾಲಕಿಯನ್ನು ಕೇಳಿದಾಗ ಹಣ ಖರ್ಚು ಮಾಡಿರುವ ಕುರಿತು ವಿವರಿಸಿದ್ದಾಳೆ.

52 ಲಕ್ಷ ರೂ. ಹೇಗೆ ಖರ್ಚಾಯಿತು?

ಕಳೆದ ನಾಲ್ಕು ತಿಂಗಳಿಂದಲೂ ಬಾಲಕಿಯು ಮೊಬೈಲ್‌ ಗೇಮ್ಸ್‌ಗಳಲ್ಲಿಯೇ ಮಗ್ನಳಾಗಿದ್ದಾಳೆ. ಅಲ್ಲದೆ, ತನ್ನ 10 ಕ್ಲಾಸ್‌ಮೇಟ್‌ಗಳಿಗಾಗಿಯೂ ಮೊಬೈಲ್‌ ಗೇಮ್ಸ್‌ ಖರೀದಿಸಿದ್ದಾಳೆ. 13 ಲಕ್ಷ ರೂಪಾಯಿಯನ್ನು ಮೊಬೈಲ್‌ ಗೇಮ್ಸ್‌ ಖರೀದಿಸಲು ವ್ಯಯಿಸಿದರೆ, 24 ಲಕ್ಷ ರೂಪಾಯಿಯನ್ನು ಇನ್‌-ಗೇಮ್‌ ಖರೀದಿಗೆ ಖರ್ಚು ಮಾಡಿದ್ದಾಳೆ. ತನ್ನ ಮೊಬೈಲ್‌ ಅಲ್ಲದೆ, ತನ್ನ 10 ಗೆಳತಿಯರಿಗೂ ಮೊಬೈಲ್‌ ಗೇಮ್ಸ್‌ ಖರೀದಿಸಲು 11 ಲಕ್ಷ ರೂಪಾಯಿ ವ್ಯಯಿಸಿದ್ದಾಳೆ. ಹೀಗೆ, ನಾಲ್ಕು ತಿಂಗಳಲ್ಲಿ ಬರೋಬ್ಬರಿ 52 ಲಕ್ಷ ರೂಪಾಯಿಯನ್ನು ಮೊಬೈಲ್‌ ಗೇಮ್ಸ್‌ಗಾಗಿಯೇ ವ್ಯಯಿಸಿದ್ದಾಳೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Adipurush Movie: ತಿರುಪತಿ ದೇವಸ್ಥಾನದಲ್ಲೇ ಕೃತಿ ಸನೂನ್‌ಗೆ ಕಿಸ್‌ ಮಾಡಿದ ನಿರ್ದೇಶಕ; ವಿಡಿಯೊ ವೈರಲ್‌!

ತನ್ನ ತಾಯಿಯು ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ ಬಳಸಿ ಹೇಗೆ ಮೊಬೈಲ್‌ನಲ್ಲಿ ಬಿಲ್‌ ಪಾವತಿಸುತ್ತಾರೆ ಎಂಬುದನ್ನು ಬಾಲಕಿಯು ನೋಡಿದ್ದಾಳೆ. ಹಾಗೆಯೇ, ಪಾಸ್‌ವರ್ಡ್‌ ಕೂಡ ತಿಳಿದುಕೊಂಡಿದ್ದಾಳೆ. ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ ಬಳಸಿ ಮೊಬೈಲ್‌ ಗೇಮ್ಸ್‌ ಖರೀದಿಸುವುದನ್ನೇ ರೂಢಿ ಮಾಡಿಕೊಂಡಿದ್ದಾಳೆ. ಕೊನೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾಳೆ. ಇದರಿಂದಾಗಿ ಆಘಾತಕ್ಕೀಡಾಗಿರುವ ಬಾಲಕಿಯ ತಾಯಿಯು ಯಾವುದೇ ಕಾರಣಕ್ಕೂ ಮಗಳಿಗೆ ಮೊಬೈಲ್‌ ಕೊಡದಿರಲು ತೀರ್ಮಾನಿಸಿದ್ದಾರಂತೆ. ನೀವು ಕೂಡ ನಿಮ್ಮ ಮಕ್ಕಳು ಮೊಬೈಲ್‌ಅನ್ನು ಅತಿಯಾಗಿ ಬಳಸುತ್ತಿದ್ದರೆ ಹುಷಾರಾಗಿರಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Donkey Population In Pak: ಹೆಚ್ಚುಹೆಚ್ಚು ಕತ್ತೆಗಳನ್ನು ಸಾಕಿ, ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಿ; ಪಾಕ್‌ಗೆ ಚೀನಾ ಸಲಹೆ!

ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಕೃಷಿ ಕ್ಷೇತ್ರದಲ್ಲಿ ಆಶಾದಾಯಕ ಬೆಳವಣಿಗೆ ಕಂಡು ಬಂದಿದೆ. ಮುಖ್ಯವಾಗಿ ಕತ್ತೆಗಳ ಸಂಖ್ಯೆಯಲ್ಲಿ ಕಳೆದ ಒಂದು ವರ್ಷದಲ್ಲಿ ಗಣನೀಯ ಏರಿಕೆಯಾಗಿದೆ. 2022- 23ರ ಆರ್ಥಿಕ ವರ್ಷದಲ್ಲಿ ಕತ್ತೆಗಳ ಸಂಖ್ಯೆಯು (Donkey Population In Pak) 5.9 ಮಿಲಿಯನ್‌ಗೆ ತಲುಪಿದ್ದು, ಇದು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 1.72 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ.

VISTARANEWS.COM


on

By

Donkey Population In Pak
Koo

ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ (pakistan) ಕಳೆದ ಒಂದು ವರ್ಷದಲ್ಲಿ ಕತ್ತೆಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು (Donkey Population In Pak), ಇದು ದೇಶದ ಕೃಷಿ (agricultural) ಚಟುವಟಿಕೆಗಳಲ್ಲಿ ಆಶಾದಾಯಕ ಬೆಳವಣಿಗೆಯನ್ನು ತೋರಿಸಿದೆ. ಕತ್ತೆಗಳ (donkey) ಸಂಖ್ಯೆಯು 2022-23ರ ಆರ್ಥಿಕ ವರ್ಷದಲ್ಲಿ 5.9 ಮಿಲಿಯನ್‌ ತಲುಪಿದ್ದು ಹಿಂದಿನ ಅವಧಿಯಲ್ಲಿ 5.7 ಮಿಲಿಯನ್‌ ನಷ್ಟಿತ್ತು. ಒಂದು ವರ್ಷದಲ್ಲಿ ಕತ್ತೆಗಳ ಸಂಖ್ಯೆ ಸರಿಸುಮಾರು ಎರಡು ಲಕ್ಷ ಹೆಚ್ಚಳವಾಗಿದೆ.

ಆರ್ಥಿಕ ಬಿಕ್ಕಟ್ಟು ದೇಶದ ಬಹುತೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿರುವುದನ್ನು 2023- 24ರ ಆರ್ಥಿಕ ಸಮೀಕ್ಷೆಯಲ್ಲಿ (Economic Survey) ತಿಳಿದು ಬಂದಿದೆ. ಈ ಕುರಿತ ಆರ್ಥಿಕ ವರ್ಷದ ಪ್ರಮುಖ ಸಾಮಾಜಿಕ ಆರ್ಥಿಕ ಸಾಧನೆಗಳನ್ನು ವಿವರಿಸುವ ಪೂರ್ವ ಬಜೆಟ್ ದಾಖಲೆ ತಿಳಿಸಿದೆ.

ಜಾನುವಾರು ವಲಯದಲ್ಲಿ ಆಶಾದಾಯಕ ಬೆಳವಣಿಗೆ

ಪಾಕಿಸ್ತಾನದಲ್ಲಿ ಕೃಷಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯಾಗಿ ಜಾನುವಾರು ವಲಯವು ಹೊರಹೊಮ್ಮುತ್ತಿದೆ. ಒಟ್ಟು ಜಾನುವಾರು ಸಂಖ್ಯೆಯಲ್ಲಿ ಎಮ್ಮೆಗಳ ಸಂಖ್ಯೆಯು 43.7 ಮಿಲಿಯನ್‌ನಿಂದ 45 ಮಿಲಿಯನ್‌ಗೆ ಏರಿಕೆಯಾಗಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಕುರಿ ಮತ್ತು ಮೇಕೆಗಳ ಸಂಖ್ಯೆಯು ಕ್ರಮವಾಗಿ 32.3 ಮತ್ತು 84.7 ಮಿಲಿಯನ್‌ಗೆ ಏರಿಕೆಯಾಗಿದೆ. ಸಮೀಕ್ಷೆಯ ಒಂದು ಕುತೂಹಲಕಾರಿ ಸಂಶೋಧನೆಯೆಂದರೆ ಕತ್ತೆಗಳ ಸಂಖ್ಯೆಯು 2022-23 ರ ಆರ್ಥಿಕ ವರ್ಷದಲ್ಲಿ 5.9 ಮಿಲಿಯನ್‌ಗೆ ತಲುಪಿದ್ದು, ಒಂದು ವರ್ಷದಲ್ಲಿ ಸುಮಾರು ಒಂದು ಲಕ್ಷ ಹೆಚ್ಚಳವಾಗಿದೆ. ಇದು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 1.72 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ.

ಕತ್ತೆಗಳ ಸಂಖ್ಯೆ ಹೆಚ್ಚಿದ್ದರೂ ಪಾಕಿಸ್ತಾನದ ಒಟ್ಟಾರೆ ಆರ್ಥಿಕ ಸಾಧನೆ ನಿರೀಕ್ಷೆಗೂ ಮೀರಿ ಕುಸಿದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಕೇವಲ ಶೇ. 2.4ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಇತ್ತೀಚಿನ ಆರ್ಥಿಕ ಸಮೀಕ್ಷೆಯಲ್ಲಿ ವಿವರಿಸಿದಂತೆ ಸರ್ಕಾರದ ಗುರಿಯಾದ ಶೇ. 3.5ಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.

ಸಮೀಕ್ಷೆಯ ಸಂಶೋಧನೆಗಳು ಕೃಷಿ ಮತ್ತು ಆರ್ಥಿಕ ಅಂಶಗಳ ನಡುವಿನ ಅಸಮಾನತೆಯನ್ನು ಎತ್ತಿ ತೋರಿಸುತ್ತವೆ. ಕತ್ತೆಗಳ ಸಂಖ್ಯೆಯ ಹೆಚ್ಚಳವು ಗ್ರಾಮೀಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ಕೆಲವು ಸಕಾರಾತ್ಮಕ ಪ್ರವೃತ್ತಿಗಳನ್ನು ಪ್ರತಿಬಿಂಬಿಸಬಹುದಾದರೂ ಇದು ವಿಶಾಲವಾದ ಆರ್ಥಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆರ್ಥಿಕತೆಯಲ್ಲಿ ಕಳಪೆ ಕಾರ್ಯಕ್ಷಮತೆಯು ಪಾಕಿಸ್ತಾನವು ತನ್ನ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ.

ಪಾಕಿಸ್ತಾನಿಗಳಿಗೆ ಕತ್ತೆಗಳು ಏಕೆ ನಿರ್ಣಾಯಕ?

ಕತ್ತೆಗಳು ಪಾಕಿಸ್ತಾನದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ. ಈ ಪ್ರಾಣಿಗಳು ಸರಕು ಮತ್ತು ಜನರ ಸಾಗಣೆ, ಕೃಷಿ ಕೆಲಸ, ಮತ್ತು ಅನೇಕ ಕುಟುಂಬಗಳಿಗೆ ಜೀವನಾಧಾರದ ನಿರ್ಣಾಯಕ ಮೂಲವಾಗಿ ಸೇವೆ ಸಲ್ಲಿಸುವುದು ಸೇರಿದಂತೆ ವಿವಿಧ ಕಾರ್ಯಗಳಿಗೆ ಅನಿವಾರ್ಯವಾಗಿವೆ.

ಶಕ್ತಿ, ವಿಶ್ವಾಸಾರ್ಹತೆ ಮತ್ತು ಒರಟಾದ ಭೂಪ್ರದೇಶಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಕತ್ತೆಗಳು ಕೆಲವು ಕೈಗಾರಿಕೆಗಳು ಮತ್ತು ಸಮುದಾಯಗಳಿಗೆ ಅತ್ಯಗತ್ಯ. ಆಧುನಿಕ ಸಾರಿಗೆ ಮೂಲಸೌಕರ್ಯವು ಅಸಮರ್ಪಕ ಅಥವಾ ಅಸ್ತಿತ್ವದಲ್ಲಿಲ್ಲದ ಪ್ರದೇಶಗಳಲ್ಲಿ ಅವುಗಳ ಉಪಯುಕ್ತತೆಯು ವಿಶೇಷವಾಗಿ ಗಮನಾರ್ಹವಾಗಿದೆ. ಇದು ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಕತ್ತೆಗಳನ್ನು ಆರ್ಥಿಕ ರಚನೆಯ ಅವಿಭಾಜ್ಯ ಅಂಗವನ್ನಾಗಿ ಮಾಡುತ್ತದೆ. ಇದು ಸ್ಥಳೀಯ ಆರ್ಥಿಕತೆಗಳಿಗೆ ಮತ್ತು ಪಾಕಿಸ್ತಾನದ ಹಲವಾರು ಜನರ ದೈನಂದಿನ ಜೀವನಕ್ಕೆ ಗಣನೀಯವಾಗಿ ಕೊಡುಗೆ ನೀಡುತ್ತದೆ.

ಒಂದು ವರದಿಯ ಪ್ರಕಾರ ಪಾಕಿಸ್ತಾನವು ಚೀನಾಕ್ಕೆ ಕತ್ತೆಗಳನ್ನು ರಫ್ತು ಮಾಡುವ ಮೂಲಕ ವಾರ್ಷಿಕವಾಗಿ ಲಕ್ಷಾಂತರ ಡಾಲರ್‌ಗಳನ್ನು ವಿದೇಶಿ ವಿನಿಮಯದಲ್ಲಿ ಗಳಿಸಲು ಯೋಜನೆ ರೂಪಿಸಿದೆ. ಪಾಕಿಸ್ತಾನವು ವಿಶ್ವದಲ್ಲೇ ಅತೀ ಹೆಚ್ಚು ಕತ್ತೆಗಳನ್ನು ಹೊಂದಿರುವ ಮೂರನೇ ರಾಷ್ಟ್ರವಾಗಿದೆ. ಇದರಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ.


ಚೀನಾಕ್ಕೆ ಹೆಚ್ಚು ಕತ್ತೆಗಳು ಏಕೆ ಬೇಕು?

ಇ-ಜಿಯಾವೋ ಎಂದು ಕರೆಯಲ್ಪಡುವ ಚೀನಾದ ಸಾಂಪ್ರದಾಯಿಕ ಔಷಧಕ್ಕೆ ಪ್ರತಿ ವರ್ಷ ಲಕ್ಷಾಂತರ ಕತ್ತೆಗಳು ಚೀನಾದಲ್ಲಿ ಬಲಿಯಾಗುತ್ತಿದೆ. ಕತ್ತೆ ಚರ್ಮದಿಂದ ಹೊರತೆಗೆಯಲಾಗುವ ಕಾಲಜನ್ ಬಳಸಿ ತಯಾರಿಸಲಾದ ಇ-ಜಿಯಾವೊ ಆಹಾರ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸುವ ಪ್ರಮುಖ ಅಂಶವಾಗಿದೆ. ಈ ಔಷಧವು ರಕ್ತವನ್ನು ಸಮೃದ್ಧಗೊಳಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ರೋಗಗಳನ್ನು ತಡೆಯುತ್ತದೆ ಎನ್ನಲಾಗುತ್ತದೆ.

ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಚೀನಾ ಇತರ ದೇಶಗಳಿಂದ ಕತ್ತೆಗಳನ್ನು ಆಮದು ಮಾಡಿಕೊಳ್ಳುತ್ತಿದೆ ಮತ್ತು ಪಾಕಿಸ್ತಾನವು ತನ್ನ ಸ್ನೇಹಿತ ರಾಷ್ಟ್ರವಾದ ಚೀನಾದಿಂದ ಈ ಮೂಲಕ ಸ್ವಲ್ಪ ಲಾಭ ಪಡೆಯಲು ಪ್ರಯತ್ನಿಸುತ್ತಿದೆ.

ಚೀನಾದಲ್ಲಿ ಕತ್ತೆಗಳ ಸಂಖ್ಯೆ ಇಳಿಕೆ

ಚೀನಾದ ಕತ್ತೆಗಳ ಸಂಖ್ಯೆಯು 1992ರಲ್ಲಿ 11 ಮಿಲಿಯನ್‌ನಿಂದ 2024ರಲ್ಲಿ 2 ಮಿಲಿಯನ್‌ ಗೆ ಇಳಿದಿದೆ. ಹೀಗಾಗಿ ಅದು ತನ್ನ ಇ-ಜಿಯಾವೋ ಉದ್ಯಮಕ್ಕಾಗಿ ಸಾಗರೋತ್ತರದಿಂದ ಕತ್ತೆ ಚರ್ಮವನ್ನು ಆಮದು ಮಾಡಿಕೊಳ್ಳುತ್ತಿದೆ.

ಕತ್ತೆಗಳು ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಿಗಳಿಗೆ ಭರವಸೆಯೇ?

ಕತ್ತೆಗಳು ಅನೇಕ ಪಾಕಿಸ್ತಾನಿಗಳಿಗೆ ಕೊನೆಯ ಭರವಸೆಯಾಗಿರಬಹುದು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರಿಗೆ. ಸ್ಥಳೀಯ ಆರ್ಥಿಕತೆಯು ಈ ಪ್ರಾಣಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

ವಿತ್ತ ಸಚಿವ ಮುಹಮ್ಮದ್ ಔರಂಗಜೇಬ್ ಅನಾವರಣಗೊಳಿಸಿದ ಸಮೀಕ್ಷೆಯ ಪ್ರಕಾರ, ಕೃಷಿ ವಲಯದ ಶೇ. 60.84 ಮತ್ತು ಜಿಡಿಪಿಯ ಶೇ. 14.63 ಪಾಲನ್ನು ಹೊಂದಿರುವ ಜಾನುವಾರುಗಳು 2023- 24ರಲ್ಲಿ ಶೇ.3.89 ರಷ್ಟು ಪ್ರಗತಿ ಸಾಧಿಸಿದ್ದು, ಕಳೆದ ವರ್ಷ ಶೇ.3. 70ರಷ್ಟಿತ್ತು.

ಜಾನುವಾರು ವಲಯದ ಒಟ್ಟು ಮೌಲ್ಯವರ್ಧನೆಯು 2022- 23 ರಲ್ಲಿ 5,587 ಶತಕೋಟಿ ರೂಪಾಯಿಗಳಿಂದ 2023- 24 ರಲ್ಲಿ 5,804 ಶತಕೋಟಿಗಳಿಗೆ ಏರಿಕೆಯನ್ನು ತೋರಿಸಿದೆ. ಇದು ಶೇಕಡಾ 3.9 ರ ಬೆಳವಣಿಗೆಯ ದರವನ್ನು ತೋರಿಸಿದೆ. ಜಾನುವಾರು ವಲಯವು ಕೃಷಿ ಬೆಳವಣಿಗೆಯಲ್ಲಿ ತನ್ನ ಪಾಲು ಪ್ರಮುಖವಾಗಿರುವುದನ್ನು ಭದ್ರಗೊಳಿಸಿದೆ. ಇದು 2024ರ ಆರ್ಥಿಕ ಅವಧಿಯಲ್ಲಿ ಕೃಷಿ ಮೌಲ್ಯದ ಸುಮಾರು ಶೇ. 60.84 ಮತ್ತು ರಾಷ್ಟ್ರೀಯ ಜಿಡಿಪಿಯ ಶೇ.14.63ರಷ್ಟು ಪಾಲನ್ನು ಹೊಂದಿದೆ.

ಇದನ್ನೂ ಓದಿ: Wild Elephant Attack : ನಾಡಿಗೆ ಬಂದ ಕಾಡಾನೆಯಿಂದ ರೈತನ ಮೇಲೆ ದಾಳಿ, ಕಾಲು ಮುರಿತ


ಪಾಕಿಸ್ತಾನಕ್ಕೆ ಹೆಚ್ಚಾಗುತ್ತಿವೆ ಸವಾಲುಗಳು

ಪಾಕಿಸ್ತಾನದ ಆರ್ಥಿಕ ಸಮೀಕ್ಷೆಯಲ್ಲಿ ಕತ್ತೆಗಳ ಸಂಖ್ಯೆಯ ಹೆಚ್ಚಳವು ದೇಶದ ಆರ್ಥಿಕತೆಗೆ ಅದರ ಪ್ರಾಮುಖ್ಯತೆ ಮತ್ತು ಪ್ರಸ್ತುತತೆಯನ್ನು ಸೂಚಿಸುತ್ತದೆ. ಈಗಾಗಲೇ ಪಾಕಿಸ್ತಾನವು ತನ್ನ ಆರ್ಥಿಕ ಬೆಳವಣಿಗೆಯ ಗುರಿಗಳನ್ನು ಸಾಧಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಹೆಚ್ಚಿನ ಹಣದುಬ್ಬರ ದರಗಳು ಮತ್ತು ಸಮರ್ಥನೀಯ ವಿತ್ತೀಯ ಕೊರತೆಗಳು ಹೂಡಿಕೆದಾರರ ವಿಶ್ವಾಸವನ್ನು ದುರ್ಬಲಗೊಳಿಸಿದೆ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಅಡ್ಡಿಪಡಿಸಿದೆ.

ಅಲ್ಲದೇ ಭಯೋತ್ಪಾದನೆ ಮತ್ತು ದಂಗೆಯಂತಹ ಭದ್ರತಾ ಸವಾಲುಗಳು ಭದ್ರತೆಗೆ ಸಂಬಂಧಿಸಿದ ವೆಚ್ಚಗಳನ್ನು ಹೆಚ್ಚಿಸಿವೆ. ಅಭಿವೃದ್ಧಿಗೆ ಮತ್ತಷ್ಟು ಅಡ್ಡಿಯುಂಟುಮಾಡಿದೆ. ಅಸಮರ್ಪಕ ಮೂಲಸೌಕರ್ಯ ಮತ್ತು ಅಸಮರ್ಥ ಅಧಿಕಾರಶಾಹಿಯಂತಹ ರಚನಾತ್ಮಕ ದೌರ್ಬಲ್ಯಗಳು ಉತ್ಪಾದಕತೆಯನ್ನು ನಿರ್ಬಂಧಿಸುತ್ತವೆ ಮತ್ತು ಆರ್ಥಿಕ ವಿಸ್ತರಣೆಗೆ ಅಡ್ಡಿಯಾಗುತ್ತವೆ.

Continue Reading

Latest

Hindu Girl Kidnaping: ಪಾಕ್‌ನಲ್ಲಿ ಹಿಂದೂ ಬಾಲಕಿಯ ಅಪಹರಿಸಿ ಇಸ್ಲಾಂಗೆ ಮತಾಂತರ, ಬಲವಂತದ ಮದುವೆ

Hindu Girl Kidnaping: ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಪಾಕಿಸ್ತಾನದ ಶಹದಾಬ್ಕೋಟ್ ಪಟ್ಟಣದ ನಿವಾಸಿ ಗುಲ್ ಹಸನ್ ಅವರ ಪುತ್ರ ಸಮೀರ್ ಅಲಿ ಎಂಬಾತ ಅಪಹರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಿಸಿ ನಂತರ ಬಲವಂತವಾಗಿ ಮದುವೆಯಾದ ಘಟನೆ ನಡೆದಿದೆ.

VISTARANEWS.COM


on

Hindu Girl Kidnaping
Koo

ಪಾಕಿಸ್ತಾನ : ಪಾಕಿಸ್ತಾನದ ಕರಾಚಿ ಪ್ರದೇಶದಿಂದ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಅಪಹರಿಸಿ ((Hindu Girl Kidnaping) ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ನಂತರ ಆಕೆಯನ್ನು ಬಲವಂತವಾಗಿ ಮದುವೆಯಾದ ಆಘಾತಕಾರಿ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. 16 ವರ್ಷದ ಹುಡುಗಿಯನ್ನು ಪಾಕಿಸ್ತಾನದ ಶಹದಾಬ್ಕೋಟ್ ಪಟ್ಟಣದ ನಿವಾಸಿ ಗುಲ್ ಹಸನ್ ಅವರ ಪುತ್ರ ಸಮೀರ್ ಅಲಿ ಎಂಬಾತ ಅಪಹರಿಸಿ ಮುಸ್ಲಿಂಧರ್ಮಕ್ಕೆ ಮತಾಂತರಿಸಿ ನಂತರ ಬಲವಂತವಾಗಿ ಮದುವೆಯಾದ ಎಂದು ಆರೋಪಿಸಲಾಗಿದೆ.

ಪಾಕಿಸ್ತಾನಿ ಕ್ರಿಶ್ಚಿಯನ್ ಕಾರ್ಯಕರ್ತ ಫರಾಜ್ ಪರ್ವೈಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿದ್ದಾರೆ. ಅದರ ಪ್ರಕಾರ ಸಂಗೀತಾ ಎಂಬ ಬಾಲಕಿಯನ್ನು ಸಮೀರ್ ಅಲಿ ಅಪಹರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ನಂತರ ಆಕೆಯನ್ನು ಬಲವಂತವಾಗಿ ಮದುವೆಯಾಗಿದ್ದಾನೆ. ಅಷ್ಟೇ ಅಲ್ಲದೇ ಮತಾಂತರದ ನಂತರ ಆಕೆಗೆ ಹಮೀದಾ ಎಂಬ ಹೊಸ ಹೆಸರನ್ನು ನೀಡಿದ್ದಾರೆ. ಆಕೆಗೆ 15 ವರ್ಷ ವಯಸ್ಸಾಗಿದ್ದರೂ ಕೂಡ ಆರೋಪಿ ಆಕೆಯ ದಾಖಲೆಗಳನ್ನು ಪೋರ್ಜರಿ ಮಾಡಿ ಆಕೆ 19 ವರ್ಷದ ವಯಸ್ಕಳು ಎಂದು ಬಿಂಬಿಸಿ ಆಕೆ ತನ್ನನ್ನು ಮದುವೆಯಾಗಲು ಸಿದ್ಧಳಿದ್ದಾಳೆ ಎಂಬುದಾಗಿ ನಿರೂಪಿಸಿದ್ದಾನೆ.

ಅದಕ್ಕಾಗಿ ಆರೋಪಿಯು ಹುಡುಗಿಗೆ ತಾನು ವಯಸ್ಕಳು ಹಾಗೂ ತನ್ನ ಇಚ್ಛೆಯಂತೆ ಪ್ರೀತಿಯಿಂದ ಆರೋಪಿಯನ್ನು ಮದುವೆಯಾಗುತ್ತಿರುವೆ ಎಂದು ಅಫಿಡವಿಟ್‌ಗೆ ಸಹಿ ಹಾಕುವಂತೆ ಒತ್ತಾಯಿಸಿದ್ದಾನೆ. ಮತ್ತು ಆರೋಪಿಯ ವಿರುದ್ಧ ಯಾರಾದರೂ ಪೊಲೀಸರಿಗೆ ದೂರು ನೀಡಿದರೆ ಸಂತ್ರಸ್ತೆ ಇಚ್ಛೆಯಂತೆ ಮದುವೆಯಾಗುತ್ತಿರುವುದು ಎಂದು ತೋರಿಸಲು ಈ ತಯಾರಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯನ್ನು ಅಪಹರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ್ದು ಇದೇ ಮೊದಲಲ್ಲ. ಇತ್ತೀಚೆಗೆ ಜೂನ್ 2ರಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 14 ವರ್ಷದ ಹಿಂದೂ ಹುಡುಗಿಯನ್ನು ಗನ್ ತೋರಿಸಿ ಹೆದರಿಸಿ ಅಪಹರಣ ಮಾಡಿ ಬಲವಂತವಾಗಿ ಮತಾಂತರಿಸಿ ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸಿದ್ದರು. ಈ ಬಗ್ಗೆ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಆಕ್ರೋಶ ವ್ಯಕ್ತವಾದ ಕಾರಣ ಪೊಲೀಸರು ಆಕೆಯನ್ನು ಪೋಷಕರ ಬಳಿ ಮರಳಿಸಿದ್ದಾರೆ. ಹಾಗೇ ತನಗಾದ ಅನ್ಯಾಯದ ಬಗ್ಗೆ ಸಂತ್ರಸ್ತೆ ಕೋರ್ಟ್‌ನಲ್ಲಿ ತಿಳಿಸಿದರೂ ನ್ಯಾಯಾಧೀಶರು ಆಕೆಗೆ ಹೆತ್ತವರೊಡನೆ ಕಳುಹಿಸಲು ನಿರಾಕರಿಸಿದರು ಎನ್ನಲಾಗಿದೆ.

ಇದನ್ನೂ ಓದಿ: Terror attack : ಉಗ್ರರ ದಾಳಿ; ತನ್ನ ಪ್ರಾಣ ತ್ಯಾಗ ಮಾಡಿ ಪ್ರಯಾಣಿಕರ ಜೀವ ಉಳಿಸಿದ ಬಸ್‌ ಚಾಲಕ

ಇಷ್ಟೆಲ್ಲಾ ದೌರ್ಜನ್ಯಗಳು ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರ ಮೇಲೆ ಆಗುವುದನ್ನು ಕಂಡು ವಿಶ್ವಸಂಸ್ಥೆಯು ಖಂಡಿಸಿದೆ. ಮುಸ್ಲಿಂರು ಹಿಂದೂಗಳ ಮೇಲೆ ದೌರ್ಜನ್ಯ ಎಸಗುವುದನ್ನು ಕಂಡು ನಿರಾಶೆ ವ್ಯಕ್ತಪಡಿಸಿದೆ. ಬಲವಂತದ ವಿವಾಹ ಮತ್ತು ಧಾರ್ಮಿಕ ಮತಾಂತರಗಳಿಂದಾಗಿ ಪಾಕಿಸ್ತಾನವನ್ನು ಟೀಕಿಸಿದೆ. ಹಾಗೇ ಇಂತಹ ಪ್ರಕ್ರಿಯೆಗಳು ಇನ್ನು ಮುಂದೆ ನಡೆಯಬಾರದೆಂದು ವಿಶ್ವಸಂಸ್ಥೆ ಪಾಕಿಸ್ತಾನಕ್ಕೆ ಕರೆ ನೀಡಿದೆ. ಹಾಗೇ ಬಲವಂತದ ಮದುವೆ ಮತ್ತು ಅಪಹರಣದಿಂದ ರಕ್ಷಿಸುವ ಕಾನೂನುಗಳ ಜಾರಿಯನ್ನು ಬಲಪಡಿಸಲು ಮತ್ತು ದೇಶದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಬದ್ಧತೆಗಳನ್ನು ಪೂರೈಸಲು ವಿಶ್ವಸಂಸ್ಥೆ ತಿಳಿಸಿದೆ.

Continue Reading

ದೇಶ

G7 Summit: ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೋದಿ ಮೊದಲ ವಿದೇಶ ಪ್ರವಾಸ ಇಂದು; ಇಟಲಿಯ ಜಿ7 ಶೃಂಗಸಭೆಯಲ್ಲಿ ಭಾಗಿ

G7 Summit: ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರು ತಮ್ಮ ಮೊದಲ ವಿದೇಶ ಪ್ರವಾಸವನ್ನು ಗುರುವಾರ (ಜೂನ್‌ 13) ಕೈಗೊಂಡಿದ್ದಾರೆ. ಇಟಲಿಯಲ್ಲಿ ಆಯೋಜಿಸಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಅವರು ತೆರಳುತ್ತಿದ್ದಾರೆ. ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ರೆಸಾರ್ಟ್ ಬೊರ್ಗೊ ಎಗ್ನಾಜಿಯಾದಲ್ಲಿ ಜೂನ್‌ 13ರಿಂದ 15ರವರೆಗೆ ಈ ಬಾರಿಯ, 50ನೇ ಜಿ7 ಶೃಂಗಸಭೆಯನ್ನು ಆಯೋಜಿಸಲಾಗಿದೆ.

VISTARANEWS.COM


on

G7 Summit
Koo

ನವದೆಹಲಿ: ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ (Narendra Modi) ಅವರು ತಮ್ಮ ಮೊದಲ ವಿದೇಶ ಪ್ರವಾಸವನ್ನು ಗುರುವಾರ (ಜೂನ್‌ 13) ಕೈಗೊಂಡಿದ್ದಾರೆ. ಇಟಲಿಯಲ್ಲಿ ಆಯೋಜಿಸಿರುವ ಜಿ7 ಶೃಂಗಸಭೆ (G7 Summit)ಯಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಅವರು ತೆರಳುತ್ತಿದ್ದಾರೆ.

ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ರೆಸಾರ್ಟ್ ಬೊರ್ಗೊ ಎಗ್ನಾಜಿಯಾದಲ್ಲಿ ಜೂನ್‌ 13ರಿಂದ 15ರವರೆಗೆ ಈ ಬಾರಿಯ, 50ನೇ ಜಿ7 ಶೃಂಗಸಭೆಯನ್ನು ಆಯೋಜಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಅವರನ್ನು ಒಳಗೊಂಡಿರುವ ಉನ್ನತ ಮಟ್ಟದ ನಿಯೋಗವು ಪ್ರಧಾನಿ ಅವರೊಂದಿಗೆ ಇರಲಿದೆ. ಜೂನ್‌ 14ರಂದು ಸಭೆಯಲ್ಲಿ ಮೋದಿ ಅವರು ಪಾಲ್ಗೊಂಡು ಅಂದೇ ಭಾರತಕ್ಕೆ ಹಿಂದಿರುಗಲಿದ್ದಾರೆ.

ಚರ್ಚಾ ವಿಷಯ

ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ ಮತ್ತು ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದ ವಿಚಾರವು ಜಿ7 ಶೃಂಗಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾದ ಆಕ್ರಮಣದ ಕುರಿತು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ. ಜತೆಗೆ ಭಾರತ ರಕ್ಷಣಾ ಮತ್ತು ಸಮುದ್ರ ಮಾರ್ಗದಲ್ಲಿನ ಸಹಕಾರದ ಬಗ್ಗೆ ಪ್ರಸ್ತಾವಿಸಲಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕ, ಇಂಗ್ಲೆಂಡ್‌, ಕೆನಡಾ, ಜರ್ಮನಿ, ಇಟಲಿ, ಜಪಾನ್, ಫ್ರಾನ್ಸ್ ಮತ್ತು ಯುರೋಪಿಯನ್ ಒಕ್ಕೂಟದ ಏಳು ಸದಸ್ಯ ರಾಷ್ಟ್ರಗಳ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ʼʼವಿಶೇಷ ಆಹ್ವಾನಿತರಾಗಿರುವ ಪ್ರಧಾನಿ ಮೋದಿ ಗುರುವಾರ ಉನ್ನತ ಮಟ್ಟದ ನಿಯೋಗದೊಂದಿಗೆ ಇಟಲಿಗೆ ತೆರಳಲಿದ್ದು, ಮೂರನೇ ಬಾರಿಗೆ ಪ್ರಧಾನಿಯಾಗಿ ಮರಳಿದ ನಂತರ ಇದು ಅವರ ಮೊದಲ ವಿದೇಶ ಪ್ರವಾಸʼʼ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ತಿಳಿಸಿದ್ದಾರೆ. ʼʼಭಾರತದ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಚರ್ಚಿಸಲಾದ ಕೆಲವು ಪ್ರಮುಖ ವಿಷಯಗಳ ಬಗ್ಗೆ ಅವರು ಪ್ರಸ್ತಾವಿಸಲಿದ್ದಾರೆʼʼ ಎಂದೂ ಹೇಳಿದ್ದಾರೆ.

ಶೃಂಗಸಭೆಯಲ್ಲಿ ರಷ್ಯಾ-ಉಕ್ರೇನ್ ಸಂಘರ್ಷ ಚರ್ಚೆಯ ವಿಷಯಗಳಲ್ಲಿ ಒಂದಾಗುವ ನಿರೀಕ್ಷೆಯಿದೆ. ಸಂಘರ್ಷವನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆ ಉತ್ತಮ ಆಯ್ಕೆಯಾಗಿದೆ ಎಂದು ಭಾರತ ಪುನರುಚ್ಚರಿಸಿದೆ. “ಸಂಘರ್ಷ, ಸಂವಾದ ಮತ್ತು ರಾಜತಾಂತ್ರಿಕತೆಯ ಅಗತ್ಯತೆಯ ಬಗ್ಗೆ ಮಾತ್ರವಲ್ಲ, ಸಂಘರ್ಷವು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಬೀರುವ ಪರಿಣಾಮ ಬೀರುವ ಬಗ್ಗೆಯೂ ಮಾತನಾಡಲಿದ್ದೇವೆ” ಎಂದು ಕ್ವಾತ್ರಾ ತಿಳಿಸಿದ್ದಾರೆ.

ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರೂ ಪಾಲ್ಗೊಳ್ಳುತ್ತಿದ್ದು, ಮೋದಿ ಅವರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆ ಇದೆ. ಜತೆಗೆ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಒಪ್ಪಂಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: Narendra Modi: ಪ್ರಧಾನಿ ಮೋದಿಗೆ ಜಿ 7 ಶೃಂಗಸಭೆಯ ಆಹ್ವಾನ ನೀಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

ಗ್ರೂಪ್ ಆಫ್ ಸೆವೆನ್ (ಜಿ 7) ಏಳು ಪ್ರಮುಖ ದೇಶಗಳನ್ನು ಒಳಗೊಂಡಿರುವ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ. ಆರ್ಥಿಕ ನೀತಿ, ಜಾಗತಿಕ ಭದ್ರತೆ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ಸಮನ್ವಯಗೊಳಿಸಲು ಈ ದೇಶಗಳು ವಾರ್ಷಿಕವಾಗಿ ಸಭೆ ಸೇರುತ್ತವೆ. 

Continue Reading

ವಿದೇಶ

Khalistan Terror: ಇಟಲಿಯಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ವಿರೂಪಗೊಳಿಸಿದ ಖಲಿಸ್ತಾನಿಗಳು

Khalistan Terror: ಇಟಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲು ನಿರ್ಧರಿಸಿದ್ದ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಖಲಿಸ್ತಾನಿ ಪರ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಿ-5 ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಗೆ ಭೇಟಿ ನೀಡಬೇಕಿರುವ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ಆತಂಕ ಮೂಡಿಸಿದೆ.

VISTARANEWS.COM


on

Khalistan Terror
Koo

ನವದೆಹಲಿ: ಖಲಿಸ್ತಾನ್ ಪರ​ ಉಗ್ರರ (Khalistan Terror) ಅಟ್ಟಹಾಸ ಎಲ್ಲೆ ಮೀರಿದೆ. ಇಟಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲು ನಿರ್ಧರಿಸಿದ್ದ ಮಹಾತ್ಮ ಗಾಂಧೀಜಿ (Mahatma Gandhi) ಅವರ ಪ್ರತಿಮೆಯನ್ನು ಖಲಿಸ್ತಾನಿ ಪರ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಿ-5 ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಗೆ ಭೇಟಿ ನೀಡಬೇಕಿರುವ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ಆತಂಕ ಮೂಡಿಸಿದೆ.

ಜತೆಗೆ ಖಲಿಸ್ತಾನಿ ಭಯೋತ್ಪಾದಕರು ಪ್ರತಿಮೆಯ ತಳಭಾಗದಲ್ಲಿ ಗೀಚಿ ವಿರೂಪಗೊಳಿಸಿದ್ದಾರೆ. ಇದರಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ನ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಘಟನೆಯನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸಿದ್ದು, ಇಟಲಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೊನಿ ಅವರಿಗೆ ತನ್ನ ಅಸಮಾಧಾನವನ್ನು ತಿಳಿಸಿದೆ. ಇದರಿಂದ ಎಚ್ಚೆತ್ತಿರುವ ಅಲ್ಲಿನ ಸರ್ಕಾರ, ಗಾಂಧೀಜಿ ಪ್ರತಿಮೆಯನ್ನು ಸರಿಪಡಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಈ ಬಗ್ಗೆ ಮಾತನಾಡಿ, “ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ದುರದೃಷ್ಟಕರ. ಈ ವಿಷಯದ ಬಗ್ಗೆ ನಾವು ಇಟಲಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆʼʼ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಇಟಲಿಯ ಭಾರತದ ರಾಯಭಾರಿ ವಾಣಿ ರಾವ್, “ದಕ್ಷಿಣ ಇಟಲಿಯ ಬ್ರಿಂಡಿಸಿ ಎಂಬ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಪ್ರತಿಮೆಯ ಪೀಠವನ್ನು ಸ್ವಚ್ಛಗೊಳಿಸಲು ಇಟಲಿಯ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನಾವು ನಮ್ಮ ಕಳವಳಗಳನ್ನು ತಕ್ಷಣವೇ ಅವರೊಂದಿಗೆ ಹಂಚಿಕೊಂಡಿದ್ದೇವೆ. ಇದಕ್ಕೆ ಕಾರಣರಾದವರನ್ನು ಪತ್ತೆಹಚ್ಚಲು ಮತ್ತು ಸ್ಥಳೀಯ ಕಾನೂನಿನ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ವಿನಂತಿಸಿದ್ದೇವೆ” ಎಂದು ಅವರು ವಿವರಿಸಿದ್ದಾರೆ.

ಜಿ 7 ವಾರ್ಷಿಕ ಶೃಂಗಸಭೆಯಲ್ಲಿ (Summit of G7 advanced economies) ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು (ಜೂನ್‌ 13) ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಅವರನ್ನು ಒಳಗೊಂಡಿರುವ ಉನ್ನತ ಮಟ್ಟದ ನಿಯೋಗವು ಪ್ರಧಾನಿ ಅವರೊಂದಿಗೆ ಇರಲಿದೆ. ಸಭೆ ಮುಗಿಸಿ ಜೂನ್ 14ರಂದು ಸಂಜೆಯ ವೇಳೆಗೆ ಮೋದಿ ಅವರು ಹಿಂತಿರುಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: khalistan Movement : ಲಂಡನ್​ ಭಾರತ ಹೈಕಮಿಷನ್​ ಮೇಲೆ ದಾಳಿ ಮಾಡಿದ್ದ ಖಲಿಸ್ತಾನಿ ಉಗ್ರ ಎನ್​ಐಎ ವಶಕ್ಕೆ

ಜೂನ್ 13ರಿಂದ 15ರವರೆಗೆ ಇಟಲಿಯ ಅಪುಲಿಯಾದ ಐಷಾರಾಮಿ ರೆಸಾರ್ಟ್ ಬೊರ್ಗೊ ಎಗ್ನಾಜಿಯಾದಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯು ಉಕ್ರೇನ್‌ನಲ್ಲಿ ಉಲ್ಬಣಗೊಳ್ಳುತ್ತಿರುವ ಯುದ್ಧ ಮತ್ತು ಗಾಜಾದಲ್ಲಿನ ಸಂಘರ್ಷದ ಬಗ್ಗೆ ತೀವ್ರ ಚರ್ಚೆ ನಡೆಯುವ ಸಾಧ್ಯತೆ ಇದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾದ ಆಕ್ರಮಣದ ಕುರಿತು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Continue Reading
Advertisement
Jammu Kashmir
ದೇಶ3 mins ago

Jammu Kashmir: ಕಾಶ್ಮೀರದಲ್ಲಿ ಮತ್ತೊಂದು ದುರಂತ; ಸೇನಾ ವಾಹನ ಕಣಿವೆಗೆ ಬಿದ್ದು ಯೋಧ ಸಾವು, ನಾಲ್ವರಿಗೆ ಗಾಯ

Forest department agrees to give 500 acres for yEttina hole project work says DCM DK Shivakumar
ಕರ್ನಾಟಕ10 mins ago

DK Shivakumar: ಎತ್ತಿನಹೊಳೆ ಕಾಮಗಾರಿಗೆ 500 ಎಕರೆ ನೀಡಲು ಅರಣ್ಯ ಇಲಾಖೆ ಒಪ್ಪಿಗೆ

Maharaj
ಸಿನಿಮಾ41 mins ago

Maharaj: ಹಿಂದುಗಳಿಗೆ ಅವಮಾನ; ಆಮೀರ್‌ ಖಾನ್‌ ಪುತ್ರನ ‘ಮಹಾರಾಜ್’‌ ಸಿನಿಮಾ ಬಿಡುಗಡೆಗೆ ಕೋರ್ಟ್‌ ತಡೆ

ISIS Terrorists
ಕರ್ನಾಟಕ2 hours ago

ದೇಶದ ಪ್ರತಿ ಜಿಲ್ಲೆಗೂ ಉಗ್ರರ ನೇಮಿಸಲು ಬಳ್ಳಾರಿಯಲ್ಲಿ ಸಂಚು; ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ!

Actress Ramya
ಕರ್ನಾಟಕ3 hours ago

Actress Ramya: ಕಾನೂನಿಗಿಂತ ಯಾರೂ ದೊಡ್ಡೋರಲ್ಲ; ದರ್ಶನ್‌ಗೆ ಮತ್ತೆ ನಟಿ ರಮ್ಯಾ ಕ್ಲಾಸ್!

Namma Clinic
ಕರ್ನಾಟಕ3 hours ago

Namma Clinic: ಬಸ್‌ ನಿಲ್ದಾಣ ಸೇರಿದಂತೆ 254 ಕಡೆ ʼನಮ್ಮ ಕ್ಲಿನಿಕ್‌ʼ ಸ್ಥಾಪನೆ

Maruti Suzuki
ಆಟೋಮೊಬೈಲ್3 hours ago

Maruti Suzuki: ಮಾರುತಿ ಸುಜುಕಿ ಸಿಎನ್‌ಜಿ ವಾಹನದ ಟೀಸರ್ ಔಟ್‌; ಹಲವು ವೈಶಿಷ್ಟ್ಯಗಳ ನಿರೀಕ್ಷೆ

Reliance Retail Tira unveils skin care brand Akind
ದೇಶ4 hours ago

Reliance Retail: ಚರ್ಮ ರಕ್ಷಣೆಯ ʼಅಕೈಂಡ್ʼ ಬ್ರಾಂಡ್‌ನ ಕ್ರೀಮ್‌ ಬಿಡುಗಡೆ

Union Budget 2024
ದೇಶ4 hours ago

Union Budget 2024: ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಯಾವಾಗ? ಇಲ್ಲಿದೆ ಬಿಗ್‌ ಅಪ್‌ಡೇಟ್‌

AIDSO protest demanding investigation into corruption in NEET entrance exam
ರಾಯಚೂರು4 hours ago

Raichur News: ನೀಟ್ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಮಾನ್ವಿಯಲ್ಲಿ ಎಐಡಿಎಸ್ಒ ಪ್ರತಿಭಟನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌