Protect From Lightning In Mansoon Protect From Lightning : ಮಳೆಗಾಲದಲ್ಲಿ ಈ ಎಚ್ಚರಿಕೆ ವಹಿಸಿ, ಸಿಡಿಲಿನ ಹೊಡೆತದಿಂದ ಪಾರಾಗಿ - Vistara News

ಮಳೆ

Protect From Lightning : ಮಳೆಗಾಲದಲ್ಲಿ ಈ ಎಚ್ಚರಿಕೆ ವಹಿಸಿ, ಸಿಡಿಲಿನ ಹೊಡೆತದಿಂದ ಪಾರಾಗಿ

ರಾಜ್ಯದಲ್ಲಿ ಮಳೆಗಾಲ ಶುರುವಾಗಿದೆ. ಗುಡುಗು, ಸಿಡಿಲಿನ ಸದ್ದು ಕೇಳಲಾರಂಭಿಸಿದೆ. ಸಿಡಿಲಿನ (Protect From Lightning) ಅಪಾಯದಿಂದ ಪಾರಾಗಲು ನಾವು ಏನೇನು ಎಚ್ಚರಿಕೆ ವಹಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ.


VISTARANEWS.COM


on

Protect From Lightning In Mansoon
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಭಾರಿ ಮಳೆಯನ್ನು ನಿರೀಕ್ಷಿಸಲಾಗಿದೆ. ಪ್ರತಿ ಬಾರಿಯ ಮಳೆಗಾಲದಲ್ಲೂ ಸಿಡಿಲಿನಿಂದ ಹತ್ತಾರು ಜೀವಗಳು ಬಲಿಯಾಗುತ್ತವೆ. ಸಿಡಿಲಿನ (Protect From Lightning) ಹೊಡೆತದಿಂದ ನಾವು ಹೇಗೆ ರಕ್ಷಿಸಿಕೊಳ್ಳಬೇಕು? ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA Guidelines) ನೀಡಿರುವ ಮಾಹಿತಿ ಇಲ್ಲಿದೆ.ರಾಜ್ಯದಲ್ಲಿ ಮಳೆಗಾಲ ಶುರುವಾಗಿದೆ. ಗುಡುಗು, ಸಿಡಿಲಿನ ಸದ್ದು ಕೇಳಲಾರಂಭಿಸಿದೆ. ಸಿಡಿಲಿನ (Protect From Lightning) ಅಪಾಯದಿಂದ ಪಾರಾಗಲು ನಾವು ಏನೇನು ಎಚ್ಚರಿಕೆ ವಹಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ.

ಏನೇನು ಮುನ್ನೆಚ್ಚರಿಕೆ ವಹಿಸಬೇಕು?

  • ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಸಿಡಿಲು ಬಡಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಗುಡುಗು ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸುವತ್ತ ಗಮನ ಕೊಡಬೇಕು.
  • ಹೊರಗೆ ಹೋಗುವಾಗ ಹವಾಮಾನ ಮುನ್ಸೂಚನೆ ಸಂದೇಶಗಳನ್ನು ತಪ್ಪದೇ ಪರಿಶೀಲಿಸಬೇಕು.
  • ಮಳೆ ಬೀಳುವಾಗ, ಮುಖ್ಯವಾಗಿ ಗುಡುಗು ಜೋರಾಗಿರುವಾಗ ಹೊಲ, ತೋಟದಲ್ಲಿ ಕೆಲಸ ಮಾಡಲು ಮನೆಯಿಂದ ಹೊರಗೆ ಹೋಗಬೇಡಿ.
  • ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ, ಸುರಕ್ಷಿತವಾದ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು.
  • ಬೆಟ್ಟಗಳು, ಪರ್ವತ ಶ್ರೇಣಿಗಳು ಅಥವಾ ಶಿಖರಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಪ್ರವಾಹ ಇಳಿದು ಬರದಂತಹ ತಗ್ಗು ಪ್ರದೇಶದಲ್ಲಿ ಆಶ್ರಯ ಪಡೆಯಿರಿ.‌
  • ನೀರಿನ ಮೂಲಗಳಾದ ಕೆರೆ ಮತ್ತು ನದಿಗಳಿಂದ ದೂರವಿರಿ.
  • ವಿದ್ಯುತ್ ಉಪಕರಣ, ವಿದ್ಯುತ್‌ ಲೈನ್‌ಗಳು, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರುವುದು ಕ್ಷೇಮಕರ.
  • ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯಿರಿ. ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿದ್ದರೆ, ಅಪಾಯವನ್ನು ಕಡಿಮೆ ಮಾಡಲು ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ.
  • ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಬೇಕು.
  • ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು. ಏಕೆಂದರೆ ಇವು ಮಿಂಚನ್ನು ಆಕರ್ಷಿಸುತ್ತವೆ.
  • ಅರಣ್ಯ ಪ್ರದೇಶದಲ್ಲಿದ್ದರೆ ಸಣ್ಣ ಮರಗಳ ಕೆಳಗೆ ಆಶ್ರಯ ಪಡೆಯಿರಿ. ಲೋಹದ ವಸ್ತುಗಳನ್ನು ಬಳಸಬಾರದು. ಬೈಕುಗಳು, ವಿದ್ಯುತ್ ಅಥವಾ ದೂರವಾಣಿ ಕಂಬಗಳು, ತಂತಿ ಬೇಲಿ, ಯಂತ್ರಗಳು ಇತ್ಯಾದಿಗಳಿಂದ ದೂರವಿರಿ.
  • ಸಿಡಿಲಿನ ಸಂದರ್ಭದಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸಲೇಬಾರದು. ಇದರಿಂದ ಅಪಾಯ ಹೆಚ್ಚು.
  • ಕಬ್ಬಿಣದ ಸರಳುಗಳಿಂದ ಮಾಡಿರುವ ಛತ್ರಿಗಳನ್ನು ಬಳಸದಿರುವುದು ಉತ್ತಮ.
  • ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಬೇಕು. ಬೆಂಕಿ ಮತ್ತು ವಿದ್ಯುತ್ ಸಂಪರ್ಕದಿಂದ ದೂರವಿರಬೇಕು.

ಇದನ್ನೂ ಓದಿ: Rain News : ಸಮುದ್ರದಲ್ಲಿ ರಕ್ಕಸ ಅಲೆಗಳು; ಸಿಡಿಲಿಗೆ ಇಬ್ಬರು ಬಲಿ, ಬೆಂಗಳೂರಲ್ಲೂ ಮಳೆ ಅಬ್ಬರ

  • ಸಿಡಿಲಿನ ಸಂದರ್ಭದಲ್ಲಿ ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್‌ ಹರಿಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಆ ಸಂದರ್ಭದಲ್ಲಿ ಸ್ನಾನ ಮಾಡಿದರೆ ಅಥವಾ ಪಾತ್ರೆ ತೊಳೆಯ ಹೋದರೆ ಅಪಾಯವಾಗಬಹುದು.
  • ಗುಡುಗು ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣವನ್ನು ಆದಷ್ಟು ಮುಂದೂಡಿ.
  • ಗುಡುಗು ಸಿಡಿಲಿನ ಸಮಯದಲ್ಲಿ ಮೋಟರ್ ಸೈಕಲ್ ಅಥವಾ ಇನ್ನಿತರೆ ಯಾವುದೇ ತೆರೆದ ವಾಹನದಲ್ಲಿ ಸಂಚಾರ ಬೇಡ.
  • ಆಟದ ಮೈದಾನ, ಉದ್ಯಾನ, ಕಡಲ ತೀರಗಳಿಗೆ ಹೋಗುವುದನ್ನು ತಪ್ಪಿಸಿ. ದೋಣಿ ವಿಹಾರ ಅಥವಾ ಈಜುತ್ತಿದ್ದರೆ, ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಿರಿ.
  • ಮಿಂಚು, ಸಿಡಿಲು ನಿರೋಧಕ ಸಾಧನಗಳನ್ನು ಮನೆ ಅಥವಾ ಕಟ್ಟದಕ್ಕೆ ಅಳವಡಿಸಿ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Karnataka Weather Forecast : ಕರಾವಳಿಯಲ್ಲಿ ಮಳೆಯು (Rain news) ಅಬ್ಬರಿಸುತ್ತಿದ್ದು, ಅವಾಂತರವೇ ಸೃಷ್ಟಿಯಾಗಿದೆ. ಶುಕ್ರವಾರವೂ ಹಲವೆಡೆ ಮಳೆಯಾಗಿದ್ದು, ಸಂರ್ಪಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿವೆ. ಮತ್ತೆ ಕೆಲವೆಡೆ ಗುಡ್ಡ ಕುಸಿತದ ಭೀತಿ ಹೆಚ್ಚಾಗಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ಒಳನಾಡು ಸೇರಿ ಮಲೆನಾಡು, ಕರಾವಳಿಯಲ್ಲಿ ಮಳೆಯು (Karnataka Weather Forecast) ಅಬ್ಬರಿಸುತ್ತಿದೆ. ಶುಕ್ರವಾರವೂ ಹಲವೆಡೆ ಮಳೆಯಾಗಿದೆ. ಧಾರವಾಡದಲ್ಲಿ ಕಳೆದ ಅರ್ಧ ಗಂಟೆಗೂ ಹೆಚ್ಚು ಸಮಯ (Rain News) ಮಳೆಯಾಗಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಧಾರವಾಡ ಗ್ರಾಮೀಣ ಭಾಗದಲ್ಲೂ ಮಳೆಯು ಅಬ್ಬರಿಸಿದೆ. ಇತ್ತ ಕೊಡಗಿನಲ್ಲಿ ಮತ್ತೆ ಮಳೆಯು ವ್ಯಾಪಿಸಿದೆ. ಎರಡು ದಿನಗಳಿಂದ ಕೊಂಚ ಬಿಡುವು ನೀಡಿದ್ದ ಮಳೆಯು, ಶುಕ್ರವಾರ ಮಧ್ಯಾಹ್ನದ ನಂತರ ಜಿಲ್ಲೆಯಾದ್ಯಂತ ಅಬ್ಬರಿಸಿದೆ. ಮಳೆಗೆ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಹಾರಂಗಿ ಜಲಾಶಕ್ಕೆ ಹೆಚ್ಚಾದ ಒಳ ಹರಿವಿನ ಪ್ರಮಾಣ ಹೆಚ್ಚಳಗೊಂಡಿದೆ.

ಜುಲೈ 6ಕ್ಕೂ ಶಾಲಾ-ಕಾಲೇಜುಗಳಿಗೆ ರಜೆ

ಕರಾವಳಿಯಲ್ಲಿ ಭಾರೀ ಮಳೆ ಅಬ್ಬರ ಹಿನ್ನೆಲೆಯಲ್ಲಿ ಜುಲೈ 6 ರಂದು ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ರಿಂದ ಆದೇಶ ಹೊರಡಿಸಲಾಗಿದೆ. ಪದವಿ ಕಾಲೇಜು ಹೊರತುಪಡಿಸಿ ಉಳಿದ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ರಸ್ತೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಧಾರಾಕಾರ ಮಳೆಗೆ ಸೇತುವೆಗಳು ಮುಳುಗಡೆ

ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಎರಡು ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಕೃಷ್ಣಾ ವೇದಗಂಗಾ ಹಾಗೂ ದೂದಗಂಗಾ ನದಿ ಮೈದುಂಬಿ ಹರಿಯುತ್ತಿದ್ದು, ನಿಪ್ಪಾಣಿ ತಾಲೂಕಿನ ಬಾರವಾಡ-ಕುನ್ನೂರ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ.

ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮುಳುಗಡೆಯಾಗಿದೆ. ದೂದಗಂಗಾ ನದಿಯಿಂದ ಕಾರದಗಾ-ಭೋಜ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ. ಕೃಷ್ಣಾ ನದಿಗೆ ಸುಮಾರು 50 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ನದಿಗೆ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತದಿಂದ ನದಿ ಪಾತ್ರದ ಜನರಿಗೆ ಸೂಚನೆ ನೀಡಿದೆ. ಆದರೆ ಜಿಲ್ಲಾಡಳಿತದ ಮನವಿಗೆ ಕ್ಯಾರೇ ಎನ್ನದ ಜನರು ನದಿಯಲ್ಲಿ ಇಳಿದು ಅಪಾಯಮಟ್ಟ ಮೀರಿ ಹರಿಯುತ್ತಿರುವ ನದಿಯಲ್ಲಿ ಮೀನು ಹಿಡಿಯಲು ಮುಂದಾಗಿದ್ದಾರೆ. ಹೀಗಾಗಿ ನದಿ ಬಳಿ ಬಂದೋಬಸ್ತ್ ಸಲುವಾಗಿ ಜಿಲ್ಲಾಡಳಿತದಿಂದ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

karnataka Weather Forecast

ಶಿರೂರು ಸಮೀಪ ಗುಡ್ಡ ಕುಸಿಯುವ ಭೀತಿ

ಉಡುಪಿಯ ಶಿರೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿಯುವ ಭೀತಿ ಹೆಚ್ಚಾಗಿದೆ. ಬೈಂದೂರು ತಾಲೂಕು, ಶಿರೂರು ಸಮೀಪದಲ್ಲಿ ಗುಡ್ಡ ಜರಿಯುವ ಸಾಧ್ಯತೆ ಇದೆ. ಐಆರ್‌ಬಿ ಸಂಸ್ಥೆಯಿಂದ ರಾಷ್ಟ್ರೀಯ ಹೆದ್ದಾರಿ ಶತಶಪಥ ಕಾಮಗಾರಿಯ ವೇಳೆ ಗುಡ್ಡ ಕೊರೆಯಲಾಗಿತ್ತು. ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಗುಡ್ಡ ಜರಿಯುವ ಭೀತಿ ಇದೆ.

ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಒತ್ತಿನಣೆಯಲ್ಲಿ ನಿಧಾನವಾಗಿ ಜರಿದು ಗುಡ್ಡ ಬೀಳುತ್ತಿದೆ. ಮಳೆ ಮುಂದುವರೆದರೆ ಸಂಪೂರ್ಣ ಗುಡ್ಡ, ಹೆದ್ದಾರಿ ಮೇಲೆ ಕುಸಿಯುವ ಭೀತಿ ಇದೆ. ಒಂದು ವೇಳೆ ಗುಡ್ಡ ಜರಿದರೆ ಉತ್ತರ ಕನ್ನಡ, ಉಡುಪಿ ಜಿಲ್ಲೆಗೆ ಸಂಪರ್ಕ ಬಂದ್ ಆಗಲಿದೆ.

ಚಿತ್ರದುರ್ಗದಲ್ಲಿ ಶಾಲೆಗೆ ನುಗ್ಗಿದ ನೀರು

ಚಿತ್ರದುರ್ಗ ಜಿಲ್ಲೆಯಲ್ಲಿ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಕಳ್ಳಿಹಟ್ಟಿ ಗೊಲ್ಲರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದೆ. ಜತೆಗೆ ಶಾಲಾ ಕೊಠಡಿಯಲ್ಲಿ ನೀರು ಸೋರುತ್ತಿದೆ. ಹೀಗಾಗಿ ಶಿಕ್ಷಕರು ಮಕ್ಕಳನ್ನು ಒಂದು ಮೂಲೆಗೆ ಕೂರಿಸಿದ್ದಾರೆ. ನೂತನ ಕಟ್ಟಡ ಅಥವಾ ಬೇರೊಂದು ಕಟ್ಟಡ ಕಟ್ಟಿಸಿಕೊಡುವಂತೆ ಹಲವು ಬಾರಿ ಶಾಲಾ ಸಿಬ್ಬಂದಿ ಮನವಿ ಮಾಡಿದ್ದಾರೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ.

ಒತ್ತಿನೆಣೆ ಬೀಚ್‌ನಲ್ಲಿ ಪ್ರವಾಸಿಗರ ಹುಚ್ಚಾಟ

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಪ್ರವಾಸಿ ತಾಣ ಒತ್ತಿನೆಣೆ ಬೀಚ್‌ನಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಪ್ರವಾಸಿಗರ ಹುಚ್ಚಾಟ ಮಿತಿಮೀರಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಎಲ್ಲಾ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧ ಹೇರಿದೆ. ಅದರಲ್ಲೂ ಎಲ್ಲಾ ಬೀಚ್‌ಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಾಚ್ ಗಾರ್ಡ್ ಸಿಬ್ಬಂದಿ ಕಣ್ಗಾವಲು ಇದೆ. ಆದರೂ ಅಪ್ಪಳಿಸಿ ಬರುವ ಅಲೆಗಳ ಮುಂದೆ ಸೆಲ್ಫಿ ತೆಗೆಯಲು ಪ್ರವಾಸಿಗರು ಯತ್ನಿಸುತ್ತಿದ್ದಾರೆ.

ಅಪಾಯದಲ್ಲಿರುವ ಬಳ್ಕುಂಜೆ -ಪಲಿಮಾರು ಸಂಪರ್ಕ ಸೇತುವೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಮುಲ್ಕಿ ಸಮೀಪದ ಬಳ್ಕುಂಜೆ -ಪಲಿಮಾರು ಸಂಪರ್ಕ ಸೇತುವೆ ಅಪಾಯದಲ್ಲಿದೆ. ಸ್ಥಳೀಯರ ದೂರಿನಂತೆ ಜಿಲ್ಲಾಡಳಿತವು ಘನ ವಾಹನ ಸಂಚಾರ ನಿಷೇಧಿಸಿದೆ. ಸೇತುವೆಯ ಅಡಿ ಭಾಗದಲ್ಲಿ ತುಂಡು ತುಂಡಾಗಿ ಬೀಮ್‌ಗಳ ಸಿಮೆಂಟ್‌ಗಳು ಬೀಳುತ್ತಿವೆ. ನಿರಂತರ ಅಕ್ರಮ ಮರುಳು ಸಾಗಾಟವೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಈ ಭಾಗದಲ್ಲಿ ಪೋಲಿಸ್ ಚೆಕ್ ಪೋಸ್ಟ್ ಇಲ್ಲದಿರುವುದು ಮರಳು ದಂದೆಕೋರರಿಗೆ ವರದಾನವಾಗಿದೆ ಎಂದು ಕಿಡಿಕಾರಿದ್ದಾರೆ. ಬಳ್ಕುಂಜೆ ಭಾಗದಿಂದ ಪಲಿಮಾರು, ಉಡುಪಿ, ನಿಟ್ಟೆ, ಬೆಳ್ಮಣ್, ಕುದುರೆಮುಖ, ಹೆಬ್ರಿ, ಸಾಗರ ಮೊದಲಾದ ಕಡೆಗೆ ಸಂಪರ್ಕಿಸುವ ರಸ್ತೆ ಇದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Karnataka Rain : ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯು (Rain Effect) ಅವಾಂತವರವೇ ಸೃಷ್ಟಿಸಿದೆ. ಕಾರವಾರ ಸಮೀಪ ಮಳೆಗೆ ಮನೆಗಳಿಗೆ ಹಾವುಗಳು (snake) ನುಗ್ಗುತ್ತಿವೆ. ಮತ್ತೊಂದು ಕಡೆ ಹೊನ್ನಾವಾರ-ಬೆಂಗಳೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣಗಳು ಮುಂದುವರಿದಿದೆ.

VISTARANEWS.COM


on

By

karnataka rain
Koo

ಕಾರವಾರ/ಉಡುಪಿ: ಕರ್ನಾಟಕ ಕರಾವಳಿ ಭಾಗದಲ್ಲಿ ಮಳೆಯು (Karnataka Rain) ಅಬ್ಬರಿಸುತ್ತಿದೆ. ಮಳೆಯಿಂದಾಗಿ ಕಾಡಿನಿಂದ ಮನೆಗಳತ್ತ ಹಾವುಗಳು ಬರುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡ ಎಂಬಾಲ್ಲಿ ಮನೆಯ ಮೇಲೆ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿತ್ತು. ಸುಮಾರು 12 ಅಡಿ ಉದ್ದದ ಹೆಬ್ಬಾವು ಕಂಡು ಸ್ಥಳೀಯರು ಆತಂಕಕ್ಕೊಳಗಾಗಿದ್ದರು.

ಅರಣ್ಯ ಪ್ರದೇಶದ ಸಮೀಪದಲ್ಲಿ ಇದ್ದು, ಮಳೆ ನೀರಿನಲ್ಲಿ ಹರಿದು ಬಂದು ಮನೆಯ ಮೇಲೆ ಹೆಬ್ಬಾವು ಸೇರಿಕೊಂಡಿದೆ. ಬಳಿಕ ಸ್ಥಳಕ್ಕಾಗಮಿಸಿದ ಉರಗ ಪ್ರೇಮಿ ಗೋಪಾಲ್ ಸುಮಾರು ಒಂದು ಗಂಟೆ ಕಾಲ‌ ಕಾರ್ಯಾಚರಣೆ ನಡೆಸಿ ಹಾವು ಹಿಡಿದು ರಕ್ಷಣೆ ಮಾಡಿದ್ದಾರೆ.

ಭಾರಿ ಮಳೆ-ಗಾಳಿಗೆ ಕುಸಿದು ಬಿದ್ದ ಮನೆ

ಇತ್ತ ಭಾರೀ ಗಾಳಿ ಮಳೆಗೆ ಮನೆಯೊಂದು ಭಾಗಶಃ ಕುಸಿದು ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ದೊಡ್ನಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಳೆದೊಂದು ವಾರದಿಂದ ಶಿರಸಿ ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಅವಘಡ ಸಂಭವಿಸಿದೆ. ಸಂತೋಷ ಜೋಗಿ ಎಂಬುವವರ ಮನೆಯ ಮಣ್ಣಿನ ಗೋಡೆ ನೆನೆದು ಭಾಗಶಃ ಕುಸಿದು ಬಿದ್ದಿದೆ. ಪರಿಹಾರಕ್ಕಾಗಿ ಸರ್ಕಾರಕ್ಕೆ ಅಂಗಲಾಚಿದ್ದಾರೆ. ಸ್ಥಳಕ್ಕೆ ಪಿಡಿಓ ಪ್ರೀತಿ ಶೆಟ್ಟಿ, ಶಾನುಭೋಗ ಸುಕನ್ಯಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರಾವಳಿಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ ತಾಲೂಕುಗಳಲ್ಲಿ ವರುಣಾರ್ಭಟ ಜೋರಾಗಿದೆ. ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಳೆ ಹೆಚ್ಚಾದರೆ ಕಾರವಾರದ ಕದ್ರಾ ಜಲಾಶಯದಿಂದ ನೀರು ಹೊರ ಬರಲಿದೆ. ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಕದ್ರಾ ಜಲಾಶಯದಲ್ಲಿ ಸುರಕ್ಷಿತ ಮಟ್ಟ ಕಾಯ್ದುಕೊಳ್ಳಲು ಒಳಹರಿವು ಆಧರಿಸಿ ನೀರು ಬಿಡುಗಡೆಗೆ ನಿರ್ಧರಿಸಲಾಗಿದೆ.

ಇದನ್ನೂ ಓದಿ: Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

ಬೆಳಗಾವಿಯ ಸಪ್ತನದಿಗಳಿಗೆ ಜೀವ ಕಳೆ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರದಿಂದಾಗಿ ಬೆಳಗಾವಿಯ ಸಪ್ತನದಿಗಳಿಗೆ ಜೀವ ಕಳೆ ಬಂದಿದೆ. ಘಟಪ್ರಭಾ ನದಿಗೆ ಒಳಹರಿವು ಹೆಚ್ಚಳದಿಂದಾಗಿ ಐತಿಹಾಸಿಕ ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭತ ಸೃಷ್ಟಿಯಾಗಿದೆ. ಭಾರತದ ನಯಾಗಾರ ಫಾಲ್ಸ್ ಎಂದೇ‌ ಖ್ಯಾತವಾಗಿರುವ ಗೋಕಾಕ್ ಜಲಪಾತ, 180 ಅಡಿ ಮೇಲಿಂದ ಧುಮ್ಮಿಕ್ಕುವ ನೀರು, ಜಲಪಾತದ ರಮಣೀಯ ದೃಶ್ಯಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ. ಇನ್ನೂ ಸೆಲ್ಫಿ, ಜಲಪಾತದ ಫೋಟೊ ತೆಗೆಯಲು ಜಲಪಾತದ ತುದಿಗೆ ಹೋಗಿ ಪ್ರವಾಸಿಗರು ಹುಚ್ಚಾಟದ ಕಾರಣಕ್ಕೆ ನಿಗಾ ಇಡಲು ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ‌ನಿಯೋಜನೆ ಮಾಡಲಾಗಿದೆ.

ತುಂಬಿ ಹರಿದ ವಾರಾಹಿ ಮತ್ತು ಕುಬ್ಬಾ ನದಿ

ಪಶ್ಚಿಮಘಟ್ಟದ ತಪ್ಪಲಲ್ಲಿ ಸುರಿದ ಭಾರೀ ಮಳೆ ಎಫೆಕ್ಟ್‌ನಿಂದಾಗಿ ಉಡುಪಿಯ ವಾರಾಹಿ ಮತ್ತು ಕುಬ್ಬಾ ನದಿ ತುಂಬಿ ಹರಿದಿದೆ. ನದಿ ತಟ ಕಂಡ್ಲೂರಿನಲ್ಲಿ ಲಂಗರು ಹಾಕಿದ್ದ ಆರು ನಾಡದೋಣಿಗಳು ನೀರುಪಾಲಾಗಿವೆ. ಹೊಳೆಯ ರಭಸಕ್ಕೆ ಎಲ್ಲಾ ನಾಡದೋಣಿಗಳು ಕೊಚ್ಚಿ ಹೋಗಿವೆ. ಮೀನುಗಾರರು ಕಳೆದ ಎರಡು ದಿನಗಳಿಂದ ಹುಡುಕಾಡುತ್ತಿದ್ದಾರೆ.

ಉಡುಪಿಯ ಈ ಶಾಲಾ-ಕಾಲೇಜುಗಳಿಗೆ ರಜೆ

ಉಡುಪಿ ಜಿಲ್ಲೆಯಲ್ಲಿ ಮೂರನೇ ದಿನಕ್ಕೆ ಮುಂದುವರಿದ ಭಾರಿ ಮಳೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಮೂರು ತಾಲೂಕುಗಳ ಶಾಲಾ- ಕಾಲೇಜು ರಜೆ ನೀಡಲಾಗಿದೆ. ಬೈಂದೂರು ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕು ಶಾಲಾ-ಕಾಲೇಜು ಶುಕ್ರವಾರ ರಜೆ ನೀಡಲಾಗಿತ್ತು.

ಬೈಂದೂರು ತಾಲೂಕು, ಮರವಂತೆ ಬೀಚಿನಲ್ಲಿ ಭಾರಿ ಗಾತ್ರದ ಅಲೆಗಳು ಅಪ್ಪಳಿಸುತ್ತಿದೆ. ಹೀಗಾಗಿ ಮಳೆಗಾಲ ಮುಗಿಯುವವರೆಗೂ ಮುನ್ನೆಚ್ಚರಿಕೆ ಕ್ರಮವಾಗಿ ಬೀಚ್ ಬಂದ್ ಮಾಡಲಾಗಿದೆ. ಸೌಪರ್ಣಿಕ ನದಿ ಅರಬ್ಬಿ ಸಮುದ್ರ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುಮಾರು ಒಂದುವರೆ ಕಿಲೋಮೀಟರ್ ಉದ್ದವಿದ್ದು, ಯಾವುದೇ ತಡೆ ಬೇಲಿ ಇಲ್ಲ. ಈ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ತೆರಳುವ ಬಹುತೇಕರು ಕಡಲಿಗೆ ಇಳಿಯುವ ಸಾಧ್ಯತೆ ಇದೆ. ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಡಳಿತ ಬೀಚ್ ಕಾವಲು ವ್ಯವಸ್ಥೆ ಮಾಡಿದೆ.

ಇದನ್ನೂ ಓದಿ: Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

ಇಳಿಮುಖವಾದ ನೆರೆ

ಉಡುಪಿಯ ಬೈಂದೂರು ತಾಲೂಕು ನಾವುಂದದಲ್ಲಿ ನೆರೆ ಸಂಪೂರ್ಣ ಇಳಿಮುಖವಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಸೌಪರ್ಣಿಕಾ ನದಿ ಉಕ್ಕಿ ಹರಿದಿತ್ತು. ಇದರಿಂದಾಗಿ 150 ಎಕರೆ ಮುಳುಗಡೆಯಾಗಿ ಕೃಷಿ ಭೂಮಿಯಲ್ಲಿ ಬೆಳೆದ ಭತ್ತ ನಾಶವಾಗಿತ್ತು. ಸದ್ಯ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ನೆರೆ ಸಂಪೂರ್ಣ ಇಳಿಮುಖವಾಗಿದೆ. ಒಮ್ಮೆ ಭತ್ತದ ನಾಟಿ ಮುಗಿಸಿದ್ದ ರೈತರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಮಳೆ ನಿಂತಿರುವುದರಿಂದ ಬಡಾಕೆರೆ ಕೃಷಿಕರು ಮತ್ತೆ ಬತ್ತದ ನಾಟಿ ಮಾಡುತ್ತಿದ್ದಾರೆ.

ಗುಡ್ಡ ಕುಸಿತ; ಮಣ್ಣು ತೆರವು ಕಾರ್ಯಾಚರಣೆ ಆರಂಭ

ಉತ್ತರಕನ್ನಡ ಜಿಲ್ಲೆಯ ಕಾರವಾರದ ಹೊನ್ನಾವರ-ಬೆಂಗಳೂರು ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿದಿದೆ. ಹೊನ್ನಾವರದ ವರ್ನಕೇರಿ ಬಳಿ ನಿನ್ನೆ ಗುರುವಾರ ಮರ ಸಹಿತ ಗುಡ್ಡ ಕುಸಿದಿತ್ತು. ಇದರಿಂದಾಗಿ ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ, ಬೆಂಗಳೂರು ಮಾರ್ಗದ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಏಕಮುಖ ಸಂಚಾರಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿತ್ತು.

ಇಂದು ಶುಕ್ರವಾರ ಕಲ್ಲುಬಂಡೆ ಸಹಿತ ಕುಸಿತ ಗುಡ್ಡ ರಸ್ತೆಗೆ ಬಿದ್ದಿದೆ. ಹೀಗಾಗಿ ಹಿಟಾಚಿ ಮೂಲಕ ಗುಡ್ಡದ ಮಣ್ಣು ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ. ಮಣ್ಣು ತೆಗೆದರೂ ಮತ್ತೆ ಗುಡ್ಡ ಕುಸಿಯುತ್ತಿದ್ದು, ಹೊನ್ನಾವರ -ಬೆಂಗಳೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಅವೈಜ್ಞಾನಿಕ ಕಾಮಗಾರಿಯಿಂದ ಮನೆಗಳು ಜಲಾವೃತ

ಉತ್ತರಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿ ಹಲವು ಮನೆಗಳು ಜಲಾವೃತಗೊಂಡಿದೆ. ನೌಕಾನೆಲೆ ಕಾಂಪೌಂಡ್‌, ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ನೀರು ಹರಿದುಹೋಗದೇ ಜಲಾವೃತಗೊಂಡಿದೆ. ಸಮುದ್ರಕ್ಕೆ ನೀರು ಸರಾಗವಾಗಿ ಹರಿದುಹೋಗದ ಪರಿಣಾಮ ಅರಗಾ ಗ್ರಾಮದ ನಿವಾಸಿಗಳು ಆತಂಕಗೊಂಡಿದ್ದಾರೆ. ಮಹಿಳೆಯರು, ಮಕ್ಕಳನ್ನು ಇಟ್ಟುಕೊಂಡು ಆತಂಕದಲ್ಲೇ ಕಾಲಕಳೆಯುವ ಪರಿಸ್ಥಿತಿ ಎದುರಾಗಿದೆ. ಮಳೆ ಹೆಚ್ಚಾದಲ್ಲಿ ಮನೆಗಳಿಗೆ ನೀರು ನುಗ್ಗುವ ಆತಂಕ ಇದೆ. ಪ್ರತಿವರ್ಷ ಮಳೆಗಾಲದಲ್ಲಿ ನೆರೆ ಪರಿಸ್ಥಿತಿಯನ್ನು ಅರಗಾ ಗ್ರಾಮಸ್ಥರು ಎದುರಿಸುತ್ತಿದ್ದಾರೆ. ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲದೇ ಅವ್ಯವಸ್ಥೆ ನಿರ್ಮಾಣವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

Karnataka Weather Forecast : ರಾಜ್ಯಾದ್ಯಂತ ಕಳೆದೊಂದು ವಾರದಿಂದ ಮಳೆಯು (Rain news) ಅಬ್ಬರಿಸುತ್ತಿದ್ದು, ಏಳು ಜಿಲ್ಲೆಗಳಿಗೆ ಆರೆಂಜ್‌ ಹಾಗೂ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಬೆಂಗಳೂರಿನಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ.

VISTARANEWS.COM


on

By

karnataka Weather Forecast Rain
Koo

ಬೆಂಗಳೂರು: ಜು.5ರಂದು ಕರ್ನಾಟಕದ ಕರಾವಳಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದ್ದು, ಮಲೆನಾಡು ಸುತ್ತಮುತ್ತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ (Rain News) ನಿರೀಕ್ಷೆಯಿದೆ. ಇನ್ನೂ ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯೊಂದಿಗೆ ಮಧ್ಯಮ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಕೂಡಿದ ಮಧ್ಯಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ರಾಮನಗರ, ತುಮಕೂರು, ವಿಜಯನಗರದಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

ಇತ್ತ ಉತ್ತರ ಒಳನಾಡಿನದಲ್ಲಿ ಸಾಕಷ್ಟು ವ್ಯಾಪಕವಾಗಿ ಹಗುರದಿಂದ ಕೂಡಿದ ಮಳೆಯಾಗಲಿದೆ. ಆದರೆ ಬೀದರ್, ಕಲಬುರಗಿ, ಬೆಳಗಾವಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಇನ್ನೂ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಯಾದ್ಯಂತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ರಾಜಧಾನಿ ಬೆಂಗಳೂರಿನಲ್ಲಿಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಗುಡುಗು ಸಹಿತ ಗಾಳಿಯೊಂದಿಗೆ ಭಾರಿ ಮಳೆ ಎಚ್ಚರಿಕೆ

ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಾಳಿ ವೇಗವು 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಬೆಳಗಾವಿ, ಧಾರವಾಡ, ಕೊಡಗು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Drowned In Water: ಕಾಲು ಸಂಕ ದಾಟುವಾಗ ನೀರಲ್ಲಿ ಕೊಚ್ಚಿ ಹೋದ ಮಹಿಳೆ!

Drowned In Water: ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಹಿಳೆಯೋರ್ವಳು ಜಮೀನಿನ ಕಾಲು ಸಂಕ ದಾಟಲು ಹೋದಾಗ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ಹೊಸನಗರದಲ್ಲಿ ಗುರುವಾರ ಜರುಗಿದೆ. ಹೊಸನಗರ ತಾಲೂಕಿನ ಬೈಸೆ ಗ್ರಾಮದ ಚೀಕಳಿ ನಿವಾಸಿ ಶಶಿಕಲಾ (43) ಮೃತ ಮಹಿಳೆಯಾಗಿದ್ದಾಳೆ.

VISTARANEWS.COM


on

Drowned In Water A woman died while crossing the kalu sanka
Koo

ಹೊಸನಗರ: ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಹಿಳೆಯೋರ್ವಳು ಜಮೀನಿನ ಕಾಲು ಸಂಕ ದಾಟಲು ಹೋದಾಗ ಕೊಚ್ಚಿಕೊಂಡು (Drowned In Water) ಹೋಗಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

ತಾಲೂಕಿನ ಬೈಸೆ ಗ್ರಾಮದ ಚೀಕಳಿ ನಿವಾಸಿ ಶಶಿಕಲಾ (43) ಮೃತ ಮಹಿಳೆಯಾಗಿದ್ದಾಳೆ.

ಇದನ್ನೂ ಓದಿ: Uttara Kannada News: ಉ.ಕ ಜಿಲ್ಲೆಯಲ್ಲಿ ವ್ಯಾಪಕ ಮಳೆ, ರಕ್ಷಣೆಗೆ ಎನ್.ಡಿ.ಆರ್.ಎಫ್ ತಂಡ

ಮೃತ ಮಹಿಳೆ ಶಶಿಕಲಾ ಬೆಳಗ್ಗೆ ಅಗೆ ಹಾಕಲು ನೋಡಿಕೊಂಡು ಬರಲು ಜಮೀನಿಗೆ ಹೋಗಿದ್ದು ವಾಪಾಸು ಬಂದಿರಲಿಲ್ಲ. ಕೆಲಹೊತ್ತು ಬಿಟ್ಟು ಮನೆಯವರು ಹುಡುಕಲು ಹೋದ ಸಂದರ್ಭದಲ್ಲಿ ಜಮೀನಿನ ಹತ್ತಿರದ ಸಂಕದಿಂದ ಒಂದು ಕಿಮೀ ದೂರದ ದುಮುಕದ ಗದ್ಧೆ ಕಾಲು ಸೇತುವೆ ಹತ್ತಿರ ಹಳ್ಳದಲ್ಲಿ ಮೃತದೇಹವೊಂದು ಮರಕ್ಕೆ ಸಿಕ್ಕಿ ಹಾಕಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ ಮೃತ ಶಶಿಕಲಾರ ಮೃತದೇಹ ಎಂದು ಗೊತ್ತಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

ಉಡುಪಿ: ಕರಾವಳಿಯಲ್ಲಿ ಭಾರಿ ಮಳೆಗೆ (Karnataka Weather) ಮೊದಲ (Rain News) ಬಲಿಯಾಗಿದೆ. ಉಡುಪಿಯ ಕೊಲ್ಲೂರು ಗ್ರಾಮದ ಸೊಸೈಟಿ ಗುಡ್ಡೆ ಎಂಬಲ್ಲಿ ಗುಡ್ಡ ಕುಸಿದು ಮಹಿಳೆ ಮೃತಪಟ್ಟಿದ್ದಾರೆ. ಹಳ್ಳಿ ಬೇರು ನಿವಾಸಿ ಅಂಬಾ (45) ಮೃತಪಟ್ಟವರು.

ಇದನ್ನೂ ಓದಿ: Viral Video: ನೀರು ತುಂಬಿದ್ದ ರಸ್ತೆ ಗುಂಡಿಗೆ ಬಿದ್ದ ಬಾಲಕಿ; ಜೀವ ಉಳಿಸಿದ ಹುಡುಗ

ಏಕಾಏಕಿ ಗುಡ್ಡ ಕುಸಿದು ಬಿದ್ದ ಪರಿಣಾಮ ಅಂಬಾ ಮಣ್ಣಿನ ಅಡಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಸ್ಥಳೀಯರ ಸಹಾಯದಿಂದ ಮಣ್ಣು ಸರಿಸಿ ಮೃತ ದೇಹವನ್ನು ಮೇಲೆ ಎತ್ತಲಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Continue Reading
Advertisement
Hardik Pandya
ಪ್ರಮುಖ ಸುದ್ದಿ19 mins ago

Hardik Pandya : ವಿಶ್ವ ಕಪ್​ ಗೆದ್ದ ಹಾರ್ದಿಕ್​ ಪಾಂಡ್ಯಗೆ ಮುತ್ತು ಕೊಟ್ಟು ಅಭಿನಂದಿಸಿದ ಇಶಾನ್ ಕಿಶನ್​

Weather News
ಉತ್ತರ ಕನ್ನಡ1 hour ago

Weather News: ಭಾರಿ ಮಳೆ; ಕರಾವಳಿಯಾದ್ಯಂತ ಶಾಲೆ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

Mahindra Marazzo
ಪ್ರಮುಖ ಸುದ್ದಿ1 hour ago

Mahindra Marazzo : ಈ 7 ಸೀಟರ್​ ಕಾರಿನ ಉತ್ಪಾದನೆ ನಿಲ್ಲಿಸಿದ ಮಹೀಂದ್ರಾ

BSP President
ದೇಶ2 hours ago

BSP President: ತಮಿಳುನಾಡಿನಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಹತ್ಯೆ; ರಾಜಕೀಯ ವೈಷಮ್ಯ ಕಾರಣ?

Dengue Fever
ಕರ್ನಾಟಕ2 hours ago

Dengue Fever: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 155 ಡೆಂಗ್ಯೂ ಕೇಸ್‌ಗಳು ಪತ್ತೆ!

Rohit Sharma
ಪ್ರಮುಖ ಸುದ್ದಿ2 hours ago

T20 World Cup : ಮಹಾರಾಷ್ಟ್ರದ ಆಟಗಾರರಿಗೆ 11 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಮಹಾ ಸಿಎಂ ಶಿಂಧೆ

RBI Fine
ದೇಶ3 hours ago

RBI Fine: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಆರ್‌ಬಿಐ 1.31 ಕೋಟಿ ರೂ. ದಂಡ; ಕಾರಣ ಹೀಗಿದೆ

Namma Metro
ಕರ್ನಾಟಕ3 hours ago

Namma Metro: ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ನಾಳೆಯಿಂದ ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆ

Viral Video
ವೈರಲ್ ನ್ಯೂಸ್3 hours ago

Viral Video: ಆಧಾರ್ ಕಾರ್ಡ್ ಫೋಟೋಗೆ ಸುಂದರ ಪೋಸ್ ಕೊಟ್ಟು ಮನ ಗೆದ್ದ ಪುಟಾಣಿ! ನಿಮಗೇನು ಅನಿಸಿತು?

Brain Eating Amoeba
ಆರೋಗ್ಯ3 hours ago

Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ5 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ7 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ8 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ10 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ11 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು12 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು13 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ17 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಟ್ರೆಂಡಿಂಗ್‌