Yoga Day 2023: ಸೂರ್ಯ ನಮಸ್ಕಾರ... ಎಷ್ಟೊಂದು ಸಮಸ್ಯೆಗಳಿಗೆ ಪರಿಹಾರ! - Vistara News

ಆರೋಗ್ಯ

Yoga Day 2023: ಸೂರ್ಯ ನಮಸ್ಕಾರ… ಎಷ್ಟೊಂದು ಸಮಸ್ಯೆಗಳಿಗೆ ಪರಿಹಾರ!

ಸೂರ್ಯ ನಮಸ್ಕಾರ ದೇಹದ ಅನೇಕ ಸಮಸ್ಯೆಗಳಿಗೆ ಪರಿಹಾರವಿದ್ದಂತೆ. ಅದರಿಂದಾಗಿ ಪ್ರಯೋಜನಗಳ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

surya namaskara uses
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Yoga Day 2023

ಆರೋಗ್ಯ ಹದಗೆಟ್ಟಿದೆ ಎಂದಾಕ್ಷಣ ಆಸ್ಪತ್ರೆಗಳಿಗೆ ಓಡುತ್ತೇವೆ. ವೈದ್ಯರು ಕೊಡುವ ಹತ್ತಾರು ಔಷಧಗಳನ್ನು ತೆಗೆದುಕೊಂಡು ವಾರವೋ, ತಿಂಗಳೋ ವಿಶ್ರಾಂತಿ ಪಡೆದುಕೊಂಡು ಹುಷಾರಾಗುತ್ತೇವೆ. ಆದರೆ ಅದೇ ಅನಾರೋಗ್ಯ ನಮ್ಮ ಕಡೆ ಬಾರದಿರುವಂತೆ ಮಾಡಿಕೊಳ್ಳುವ ಸಾಮರ್ಥ್ಯ ನಮ್ಮ ಬಳಿಯೇ ಇದೆ ಎನ್ನುವುದನ್ನು ಮರೆತುಬಿಡುತ್ತೇವೆ. ನಮ್ಮ ಭಾರತದ ಪಾರಂಪರಿಕ ಯೋಗವೇ (Yoga Day 2023) ನಮ್ಮನ್ನು ಅನಾರೋಗ್ಯದಿಂದ ದೂರ ಇಡಬಲ್ಲದು. ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ನಮ್ಮ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಒಂದೇ ಒಂದು ಸೂರ್ಯ ನಮಸ್ಕಾರ ನಮ್ಮ ದೇಹಕ್ಕೆ ಎಷ್ಟೆಲ್ಲ ರೀತಿಯಲ್ಲಿ ಪ್ರಯೋಜನಕಾರಿ ಎನ್ನುವುದನ್ನು ತಿಳಿದುಕೊಳ್ಳೋಣ…

ತೂಕ ಇಳಿಸಬಹುದು

ತೂಕ ಇಳಿಸುವುದಕ್ಕೆ ನಾವು ಎಷ್ಟೆಲ್ಲ ಸರ್ಕಸ್‌ ಮಾಡುತ್ತೇವೆ. ಆದರೆ ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು ಎನ್ನುವುದನ್ನು ಮರೆತುಬಿಡುತ್ತೇವೆ. ಸೂರ್ಯ ನಮಸ್ಕಾರ ಮಾಡುವುದರಿಂದ ಪೂರ್ತಿ ದೇಹಕ್ಕೆ ವ್ಯಾಯಾಮ ಸಿಗುತ್ತದೆ. ಕ್ರಮೇಣವಾಗಿ ಹೆಚ್ಚು ಹೆಚ್ಚು ಸೂರ್ಯ ನಮಸ್ಕಾರ ಮಾಡುತ್ತ ಹೋಗುವುದರಿಂದ ನಿಮ್ಮ ದೇಹಕ್ಕೆ ವ್ಯಾಯಾಮ ಸಿಕ್ಕಂತಾಗಿ ಪೂರ್ತಿ ದೇಹದ ತೂಕ ಇಳಿಕೆಯಾಗುತ್ತದೆ.

ಮಾನಸಿಕ ಆರೋಗ್ಯ

ಬೆಳಗಿನ ಹೊತ್ತು ಕೆಲವರು ಎದ್ದವರೇ ಮೊಬೈಲ್‌ ಹಿಡಿದು ಕುಳಿತುಬಿಡುತ್ತಾರೆ. ಮೊಬೈಲ್‌ನಲ್ಲಿ ಯಾವ್ಯಾವುದೋ ವಿಡಿಯೊಗಳನ್ನು ನೋಡಿ ಮನಸ್ಸನ್ನು ಬೇರೇನೇನೋ ಚಿಂತನೆ ಮಾಡುವಂತೆ ಮಾಡಿಕೊಳ್ಳುತ್ತಾರೆ. ಹಾಗೆ ಮಾಡುವ ಬದಲು ಎದ್ದ ತಕ್ಷಣ ಸೂರ್ಯನತ್ತ ನೋಡುತ್ತ ಸೂರ್ಯ ನಮಸ್ಕಾರ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಕ್ಕಂತಾಗುತ್ತದೆ. ದಿನನಿತ್ಯದ ಜಂಜಾಟಕ್ಕೆ ಸಿಲುಕುವುದಕ್ಕೆ ಮೊದಲು ಮಾನಸಿಕವಾಗಿ ನೀವು ಸಿದ್ಧವಾಗುವಂತೆ ಮಾಡುತ್ತದೆ.

ಕೂದಲು ಉದುರುವಿಕೆಗೆ ತಡೆ

ಈಗೀಗ ಕೂದಲು ಉದುರುವುದು ಪ್ರತಿಯೊಬ್ಬರ ಸಮಸ್ಯೆ. ಸೂರ್ಯ ನಮಸ್ಕಾರ ಮಾಡುವುದರಿಂದ ನೆತ್ತಿಯ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದಾಗಿ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ತಲೆಯಲ್ಲಿ ರಕ್ತ ಪರಿಚಲನೆ ಹೆಚ್ಚಾದಾಗ ತಲೆಗೆ ಪೋಷಣೆ ಸಿಕ್ಕಂತಾಗುತ್ತದೆ. ಹಾಗಾಗಿ ಆರೋಗ್ಯಕರ ಕೂದಲು ಬೆಳೆಯುವುದಕ್ಕೂ ಸಹಕಾರಿಯಾಗುತ್ತದೆ. ಇದರಿಂದ ಕೂದಲು ಬಿಳಿಯಾಗುವುದೂ ಕಡಿಮೆಯಾಗುತ್ತದೆ ಎನ್ನುವುದು ಗಮನಾರ್ಹ.

ಸೂರ್ಯ ನಮಸ್ಕಾರದ ಭಂಗಿ

ಚರ್ಮದ ಆರೋಗ್ಯಕ್ಕೂ ಒಳಿತು

ದೇಹದ ಚರ್ಮ ಬೇಗ ಸುಕ್ಕಾಗಬಾರದು ಎಂದುಕೊಳ್ಳುವವರಿಗೂ ಈ ಸೂರ್ಯ ನಮಸ್ಕಾರವೇ ರಾಮಬಾಣ. ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಎಲ್ಲ ಭಾಗಗಳಿಗೂ ರಕ್ತ ಸಂಚಲನ ಸಲೀಸಾಗುತ್ತದೆ. ಇದರಿಂದ ಚರ್ಮ ಬೇಗ ಸುಕ್ಕುಗಟ್ಟುವುದು ತಪ್ಪುತ್ತದೆ. ಅಷ್ಟೇ ಅಲ್ಲದೆ ಚರ್ಮದ ಕಾಂತಿಯೂ ಹೆಚ್ಚಾಗಿ ಹೊಳಪು ಬರುತ್ತದೆ.

ಸ್ನಾಯು ನೋವಿಗೂ ಪರಿಹಾರ

ಈಗ ಸೊಂಟ ನೋವು, ಕಾಲು ನೋವುಗಳಿಂದ ಬಳಲುವವರ ಸಂಖ್ಯೆ ಹೆಚ್ಚು. ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ವಿವಿಧ ಸ್ನಾಯುಗಳನ್ನು ಹಿಗ್ಗುತ್ತವೆ. ಅದರಿಂದಾಗಿ ಸ್ನಾಯುಗಳ ನೋವನ್ನು ಸಹ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಸಣ್ಣ ಪುಟ್ಟ ನೋವುಗಳಿಗೆ ಈ ಸೂರ್ಯ ನಮಸ್ಕಾರ ಪರಿಹಾರ. ಅಲ್ಲದೆ ನರಗಳ ದೌರ್ಬಲ್ಯ ಇದ್ದವರು ಸೂರ್ಯ ನಮಸ್ಕಾರ ಮಾಡುವುದರಿಂದ ನರಗಳಿಗೆ ಶಕ್ತಿ ತುಂಬಿದಂತಾಗುತ್ತದೆ. ದೇಹದ ಶುದ್ಧೀಕರಣ ಈ ಸೂರ್ಯ ನಮಸ್ಕಾರದಿಂದ ಸಾಧ್ಯ.


ಮುಟ್ಟಿನ ನೋವಿಗೆ ಪರಿಹಾರ

ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮುಟ್ಟಾದಾಗ ಹೊಟ್ಟೆ ನೋವಿನಿಂದ ಬಳಲುತ್ತಾರೆ. ಆ ರೀತಿ ಸಮಸ್ಯೆ ಇರುವವರು ತಿದಿನ ಸೂರ್ಯ ನಮಸ್ಕಾರ ಮಾಡುವುದು ಒಳ್ಳೆಯದು. ಅದರಿಂದ ಹೊಟ್ಟೆ ನೋವು ಕ್ರಮೇಣ ಕಡಿಮೆಯಾಗುತ್ತದೆ. ಸೂರ್ಯ ನಮಸ್ಕಾರವು ಮನುಷ್ಯನ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಕೂಡ. ಹಾಗೆಯೇ ಮುಟ್ಟು ಸರಿಯಾದ ಸಮಯದಲ್ಲಿ ಆಗುವುದಿಲ್ಲ ಎನ್ನುವಂತಹ ಹೆಣ್ಣು ಮಕ್ಕಳಿಗೂ ಇದೊಂದು ರೀತಿಯ ಔಷಧ. ಹೆರಿಗೆ ಸಮಯದಲ್ಲಿಯೂ ಇದು ಸಹಕಾರಿಯಾಗುತ್ತದೆ.

ಸೂರ್ಯ ನಮಸ್ಕಾರದ ಭಂಗಿ


ಏಕಾಗ್ರತೆ ಹೆಚ್ಚಿಸುತ್ತದೆ

ಮಕ್ಕಳೆಂದ ಮೇಲೆ ಓದು ಬರಹವಿರಬೇಕು. ಆದರೆ ಅನೇಕ ಮಕ್ಕಳು ಓದಿನ ಕಡೆ ಏಕಾಗ್ರತೆ ಕೊಡಲಾಗದೆ ಒದ್ದಾಡುತ್ತಾರೆ. ಅದಕ್ಕೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪೋಷಕರೂ ಇದ್ದಾರೆ. ಆದರೆ ಅದರ ಬದಲಾಗಿ ಅವರಿಗೆ ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡಿಸುವ ಅಭ್ಯಾಸ ಮಾಡಿಸಬೇಕು. ಇದರಿಂದಾಗಿ ಅವರಿಗೆ ಏಕಾಗ್ರತೆ ಹೆಚ್ಚಾಗುತ್ತದೆ. ಪರೀಕ್ಷೆ ಸಮಯದಲ್ಲಿ ಎದುರಾಗುವ ಒತ್ತಡ ನಿಯಂತ್ರಿಸುವುದಕ್ಕೂ ಇದು ಸಹಾಯಕಾರಿ. ಮಕ್ಕಳು ಗೊಂದಲಗಳಿಂದ ತೊಂದರೆಗೊಳಗಾಗುತ್ತಿದ್ದರೆ ಆ ಗೊಂದಲಗಳಿಂದಲೂ ದೂರ ಮಾಡುವುದಕ್ಕೆ ಈ ಸೂರ್ಯ ನಮಸ್ಕಾರ ಸೂಕ್ತ.


ನಿದ್ರಾಹೀನತೆ ನಿವಾರಿಸುತ್ತದೆ

ಈಗಿನ ಯುವ ಸಮುದಾಯದ ಬಹುದೊಡ್ಡ ಸಮಸ್ಯೆ ನಿದ್ರಾಹೀನತೆ. ರಾತ್ರಿ ಒಂದು, ಎರಡು ಗಂಟೆಯಾದರೂ ಮೊಬೈಲ್‌ ಹಿಡಿದುಕೊಂಡೇ ಇದ್ದುಬಿಡುತ್ತಾರೆ. ಕೇಳಿದರೆ ನಿದ್ರೆ ಬರುತ್ತಿಲ್ಲವೆನ್ನುವ ಸಬೂಬು. ಸೂರ್ಯ ನಮಸ್ಕಾರ ಮಾಡುವುದರಿಂದ ನಿದ್ರಾ ಹೀನತೆ ಕೂಡ ಕಡಿಮೆಯಾಗುತ್ತದೆ. ನಿಯಮಿತವಾಗಿ ನಿದ್ದೆ ಮಾಡಿ ಏಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿರವಾಗಿರುತ್ತದೆ.


ಬಿಪಿ, ಶುಗರ್‌ ನಿಯಂತ್ರಣ ಸಾಧ್ಯ

ಸೂರ್ಯ ನಮಸ್ಕಾರವು ರಕ್ತದೊತ್ತಡಕ್ಕೆ ನೈಸರ್ಗಿಕ ಚಿಕಿತ್ಸೆಯಾಗಿದೆ. ಇದು ಹೃದಯದ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಅನಿಯಮಿತ ಹೃದಯ ಬಡಿತಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಈ ಅಭ್ಯಾಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಹಾಗೆಯೇ ಹೃದಯ ಸಮಸ್ಯೆಗಳನ್ನು ತಡೆಯಲು ನೆರವಾಗುತ್ತದೆ.

ಸೂರ್ಯ ನಮಸ್ಕಾರ ಮಾಡುವ ಮುನ್ನ

ಸೂರ್ಯ ನಮಸ್ಕಾರದಿಂದ ಸಾಕಷ್ಟು ಉಪಯೋಗವಿದೆ ಎಂದಾಕ್ಷಣ ಕೆಲವರು ಹೊತ್ತಲ್ಲದ ಹೊತ್ತಿಗೆ ಸೂರ್ಯ ನಮಸ್ಕಾರ ಮಾಡಲು ಮುಂದಾಗುತ್ತಾರೆ. ಆದರೆ ಹಾಗೆ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ. ಮುಂಜಾನೆ ಎದ್ದಾಗ ಖಾಲಿ ಹೊಟ್ಟೆಯಲ್ಲೇ ಸೂರ್ಯ ನಮಸ್ಕಾರ ಮಾಡಬೇಕು. ಸೂರ್ಯನಿಗೆ ಅಭಿಮುಖವಾಗಿ ಕ್ರಮಬದ್ಧವಾಗಿ ಸೂರ್ಯ ನಮಸ್ಕಾರ ಮಾಡಬೇಕು. ಮೊದ ಮೊದಲು ಒಂದು ಅಥವಾ ಎರಡು ಬಾರಿ ಸೂರ್ಯ ನಮಸ್ಕಾರ ಮಾಡಿದಾಕ್ಷಣ ಸುಸ್ತಾಗಬಹುದು. ಕ್ರಮೇಣ ನಿಮ್ಮ ಸಾಮರ್ಥ್ಯ ಹೆಚ್ಚುತ್ತದೆ. 10-20 ಹೀಗೆ ಎಷ್ಟು ಬಾರಿಯಾದರೂ ಸೂರ್ಯ ನಮಸ್ಕಾರ ಮಾಡಬಲ್ಲ ಸಾಮರ್ಥ್ಯ ನಿಮ್ಮದಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ಕನ್ನಡಕ ಧರಿಸುವುದೋ ಅಥವಾ ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವುದೋ? ಈ ಪ್ರಶ್ನೆ ದೃಷ್ಟಿದೋಷ ಇರುವಂಥ ಹಲವರನ್ನು ಕಾಡಿರಬಹುದು. ಇವೆರಡಕ್ಕೂ ಅದರದ್ದೇ ಆದ ಇತಿ-ಮಿತಿಗಳಿವೆ. ನಿಮ್ಮ ಆದ್ಯತೆ ಯಾವುದು ಎನ್ನುವುದನ್ನು ನಿರ್ಧರಿಸುವುದಕ್ಕೆ ಬೇಕಾದ ಮಾಹಿತಿಗಳು (Glasses or Lenses) ಇಲ್ಲಿವೆ.

VISTARANEWS.COM


on

Glasses or Lenses
Koo

ಕಣ್ಣಿಗೆ ಪವರ್‌ ಇದ್ದರೆ ಆಗಾಗ ಕಾಡುವ ಪ್ರಶ್ನೆ- ಕನ್ನಡಕ ಹಾಕಬೇಕೆ ಅಥವಾ ಕಾಂಟ್ಯಾಕ್ಟ್‌ ಲೆನ್ಸ್‌ ಹಾಕಬೇಕೆ? ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೂ ದೃಷ್ಟಿದೋಪ ಸರಿಪಡಿಸುವುದು ಇದರ ಪ್ರಧಾನ ಉದ್ದೇಶವೆಂಬುದು ನಿಜ. ಆದರೆ ಜೊತೆಗೊಂದಿಷ್ಟು ಇದೆಯಲ್ಲ… ಕೊಸರು! ಇವೆರಡಕ್ಕೂ ಅವುಗಳದ್ದೇ ಆದ ಇತಿ-ಮಿತಿಗಳಿವೆ. ಅದರಲ್ಲೂ ಜೇಬಿಗೆಷ್ಟು ಭಾರ, ಯಾವುದು ಆರಾಮದಾಯಕ, ಧರಿಸುವವರ ಆದ್ಯತೆಗಳೇನು, ಜೀವನಶೈಲಿಗೆ ಹೊಂದುತ್ತದೆಯೇ ಎಂಬ ಹಲವು ವಿಷಯಗಳನ್ನು ಆಧರಿಸಿಯೇ ಆಯ್ಕೆ ಮಾಡುವುದಲ್ಲವೇ? ಇವೆಲ್ಲವುಗಳ ಜೊತೆಗೆ, ಕಣ್ಣಿನ ಆರೋಗ್ಯಕ್ಕೆ ಯಾವುದು ಹಿತ ಎನ್ನುವ ಪ್ರಶ್ನೆ ಮಹತ್ವದ್ದಾಗುತ್ತದೆ. ಯಾವುದು ಹಿತ ಈ (Glasses or Lenses) ಎರಡರೊಳಗೆ?

Glasses

ಕನ್ನಡಕ

ಶತಮಾನಗಳಿಂದ ಎಲ್ಲರ ದೃಷ್ಟಿದೋಷವನ್ನು ಸರಿಪಡಿಸುತ್ತ ಬಂದಿರುವ ಕನ್ನಡಕಗಳು ಯಾವುದೇ ತಲೆಬಿಸಿ ನೀಡದಂಥವು. ನಿಯಮಿತವಾಗಿ ನೇತ್ರವೈದ್ಯರಲ್ಲಿ ಹೋಗಿ ತಪಾಸಣೆ ಮಾಡಿಸಿಕೊಂಡು, ಕಣ್ಣಿನ ಪವರ್‌ ಎಷ್ಟಿದೆ ಎಂಬುದನ್ನು ನೋಡಿಕೊಂಡರಾಯಿತು. ಇರುವ ಕನ್ನಡಕವನ್ನು ಬದಲಾಯಿಸಬೇಕು ಎಂದಿದ್ದರೆ ವೈದ್ಯರೇ ಅದನ್ನು ಸೂಚಿಸುತ್ತಾರೆ. ಅದರಂತೆ ಕನ್ನಡದ ಬದಲಾಯಿಸಿದರೆ, ಮತ್ತಿನ್ನೇನೂ ಮಾಡಬೇಕಿಲ್ಲ. ಕನ್ನಡದ ಗಾಜನ್ನು ಒರೆಸಿ ಸ್ವಚ್ಛ ಮಾಡುವುದಕ್ಕಿಂತ ಹೆಚ್ಚಿನ ನಿರ್ವಹಣೆಯನ್ನು ಅದು ಬೇಡುವುದಿಲ್ಲ. ಇದು ದೃಷ್ಟಿ ದೋಷಕ್ಕೆ ಮದ್ದಷ್ಟೇ ಅಲ್ಲ, ಧೂಳು, ಬಿಸಿಲು, ಹಾನಿಕಾರಕ ಕಿರಣಗಳಿಂದಲೂ ರಕ್ಷಣೆಯನ್ನು ನೀಡಬಲ್ಲದು. ಅದರಲ್ಲೂ ಕೆಲವು ಸುಧಾರಿತ ಫೋಟೋಕ್ರೋಮಿಕ್‌ ಕನ್ನಡಕಗಳು ನೂರು ಪ್ರತಿಶತ ಅತಿನೇರಳೆ ಕಿರಣಗಳನ್ನು ತಡೆಗಟ್ಟಬಲ್ಲವು. ಈ ಕೆಲಸವನ್ನು ಯಾವುದೇ ಲೆನ್ಸ್‌ಗಳೂ ಮಾಡಲಾರವು. ಅವರವರ ಮುಖಮಂಡಲಕ್ಕೆ ಕಳೆಗಟ್ಟಿಸುವಂಥ ಸುಂದರ ಫ್ರೇಮ್‌ಗಳನ್ನು ಆಯ್ದುಕೊಂಡರೆ, ಕನ್ನಡಕವೂ ಫ್ಯಾಷನ್‌ ಘೋಷಣೆಯನ್ನು ಹೊರಡಿಸಬಲ್ಲದು. ಆದರೊಂದು, ಕನ್ನಡಕವನ್ನು ಹಾಕುವುದು ಅನಿವಾರ್ಯ ಎಂದಾಗ, ಕೆಲವೊಮ್ಮೆ ಅದು ಸಮಸ್ಯೆಯನ್ನೂ ಸೃಷ್ಟಿಸಬಲ್ಲದು. ಉದಾ, ಆಡುವುದು, ಓಡುವುದು ಮುಂತಾದ ದೈಹಿಕ ಚಟುವಟಿಕೆಗಳು ಮುಖ್ಯವಾಗಿದ್ದಾಗ ಕನ್ನಡಕ ತೊಡಕೆನಿಸುತ್ತದೆ. ನೃತ್ಯ, ನಟನೆಯಂಥ ಕಲೆಗಳಲ್ಲಿ ಕನ್ನಡಕ ಅಡಚಣೆ ಕೊಡುತ್ತದೆ. ಹೀಗೆ ಬಳಕೆದಾರರ ಮಿತ್ರ ಎನಿಸುವ ಕನ್ನಡಕವೂ ಕೆಲವೊಮ್ಮೆ ಕಣ್‌ ಕಣ್‌ ಬಿಡಿಸುತ್ತದೆ.

 Lenses

ಕಾಂಟ್ಯಾಕ್ಟ್‌ ಲೆನ್ಸ್‌

ಶತಮಾನಗಳ ಇತಿಹಾಸವಿಲ್ಲದ ಇದು, ಆಧುನಿಕ ಕಾಲದ್ದು. ಇಂದಿನ ಹಲವು ರೀತಿಯ ಅಗತ್ಯಗಳು ಮತ್ತು ಬದಲಾವಣೆಗಳಿಗೆ ಹೇಳಿ ಮಾಡಿಸಿದಂತದ್ದು. ಕನ್ನಡಕದ ಭಾರದಿಂದ ಮುಕ್ತಿ ನೀಡುವ ಇದು, ಮುಖದ ಸೌಂದರ್ಯವನ್ನು ಇದ್ದಂತೆಯೇ ಉಳಿಸುತ್ತದೆ. ಮದುವೆ, ನಾಮಕರಣದಂಥ ಸಾಮಾಜಿಕ ಕಾರ್ಯಕ್ರಮಗಳಿರಲಿ, ಆಟ, ಓಟದಂಥ ದೈಹಿಕ ಚಟುವಟಿಕೆಗಳಿರಲಿ, ನೃತ್ಯ-ನಟನೆಯಂಥ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿ- ಸಂದರ್ಭ ಯಾವುದೇ ಆದರೂ ಕಾಂಟ್ಯಾಕ್ಟ್‌ ಲೆನ್ಸ್‌ ಬಳಕೆ ಸೂಕ್ತವಾದದ್ದು. ವಾತಾವರಣದಲ್ಲಿ ತೇವ ಹೆಚ್ಚಿದ್ದಾಗ ಅಥವಾ ಮಾಸ್ಕ್‌ ಧರಿಸಿದಾಗ ಕನ್ನಡಕದ ಗಾಜಿನಂತೆ ಲೆನ್ಸ್‌ ಮಸುಕಾಗುವುದಿಲ್ಲ. ಹಾಗಾಗಿ ಕ್ರಿಯಾತ್ಮಕ ದೃಷ್ಟಿಯಿಂದಲೂ ಇದು ಕನ್ನಡಕಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುತ್ತದೆ. ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವುದರಲ್ಲಿ ಇನ್ನೂ ಕೆಲವು ಲಾಭಗಳಿವೆ. ದೃಷ್ಟಿಯ ವ್ಯಾಪ್ತಿ ಕನ್ನಡಕ ಹಾಕಿದ ಸಂದರ್ಭಕ್ಕಿಂತ ಹೆಚ್ಚು ವಿಶಾಲವಾಗಿರುತ್ತದೆ ಲೆನ್ಸ್‌ನಲ್ಲಿ. ಜೊತೆಗೆ ನಿಖರತೆ ಮತ್ತು ಸ್ಪಷ್ಟತೆಯೂ ಅಧಿಕ. ಅದರಲ್ಲೂ ತೀವ್ರ ಅಸ್ಟಿಗ್ಮ್ಯಾಟಿಸಂ ಇರುವವರಲ್ಲಿ ದೃಷ್ಟಿಯ ನಿಖರತೆಯನ್ನು ಕನ್ನಡಕಕ್ಕಿಂತ ಸಾಕಷ್ಟು ಹೆಚ್ಚಿಸಬಲ್ಲದು ಕಾಂಟ್ಯಾಕ್ಟ್‌ ಲೆನ್ಸ್‌. ಎಲ್ಲಕ್ಕಿಂತ ಮುಖ್ಯವಾಗಿ ದೃಷ್ಟಿ ದೋಷ ಇರುವುದನ್ನು ಜಗಜ್ಜಾಹೀರು ಮಾಡದೆಯೇ, ಇದನ್ನು ಬಳಸಬಹುದು.

ಇದನ್ನೂ ಓದಿ: Rock Salt Or Powder Salt: ಬೆಳ್ಳನೆಯ ಪುಡಿ ಉಪ್ಪು ಆರೋಗ್ಯಕರವೇ ಅಥವಾ ಕಲ್ಲುಪ್ಪೇ?

ಜಾಗ್ರತೆ ಅಗತ್ಯ

ಕಾಂಟ್ಯಾಕ್ಟ್‌ ಲೆನ್ಸ್‌ಗಳು ತುಟ್ಟಿ. ಕನ್ನಡಕಗಳಂತೆ ಕಿಸೆಗೆ ಹಗುರವಲ್ಲ ಇವು. ಜೊತೆಗೆ ಇವುಗಳನ್ನು ಸದಾ ಬಳಸುತಿದ್ದರೆ ಕಣ್ಣುಗಳು ತೇವ ಕಳೆದುಕೊಂಡು ಶುಷ್ಕವಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇವುಗಳನ್ನು ಬಳಸುವಾಗ ಕೈಗಳ ಸ್ವಚ್ಛತೆಯ ಬಗ್ಗೆ ಜಾಗ್ರತೆ ಅಗತ್ಯ. ಹಾಗಿಲ್ಲದಿದ್ದರೆ ಕಣ್ಣಿಗೆ ಸೋಂಕು ಉಂಟಾಗಬಹುದು. ಈ ಕಾರಣದಿಂದಲೇ ಕನ್ನಡಕಗಳಿಗೆ ಹೋಲಿಸಿದರೆ, ಲೆನ್ಸ್‌ ಬಳಕೆದಾರರಲ್ಲಿ ಸೋಂಕಿನ ಪ್ರಮಾಣ ಹೆಚ್ಚು. ಲೆನ್ಸ್‌ಗಳು ಮತ್ತು ಅವುಗಳ ಡ್ರಾಪ್ಸ್‌ ವ್ಯಾಲಿಡಿಟಿಯನ್ನು ಆಗಾಗ ಪರಿಶೀಲಿಸುವುದು ಬಹುಮುಖ್ಯ. ಲೆನ್ಸ್‌ ಧರಿಸಿ ಈಜುವುದು, ರಾತ್ರಿ ನಿದ್ದೆ ಮಾಡುವುದು ಮುಂತಾದವು ಸಲ್ಲದು.

Continue Reading

ಆರೋಗ್ಯ

Health Tips Kannada: ನಮ್ಮ ದೇಹದಲ್ಲಿ ಉಪ್ಪಿನ ಅಂಶ ಕಡಿಮೆಯಾಗಿದೆ ಎಂದು ತಿಳಿಯುವುದು ಹೇಗೆ?

ದೇಹವೆಂಬ ದೇಗುಲವನ್ನು ಚೆನ್ನಾಗಿ ನೋಡಿಕೊಂಡರಷ್ಟೇ ಮಾನಸಿಕ ದೈಹಿಕವಾದ ಆರೋಗ್ಯ ಚೆನ್ನಾಗಿದ್ದೀತು. ದೇಹಕ್ಕೆ ಅಗತ್ಯವಾಗಿ ಬೇಕೇಬೇಕಾದ ಪೋಷಕಾಂಶಗಳನ್ನು ಸರಿಯಾಗಿ ಪೂರೈಸದಿದ್ದಲ್ಲಿ ಅದರ ಪರಿಣಾಮಗಳೂ ತಿಳಿದು ಬಂದಾವು. ಹಾಗಂತ ಪೋಷಕಾಂಶಗಳು ಅಗತ್ಯಕ್ಕಿಂತ ಹೆಚ್ಚಾದರೂ ಕೂಡಾ ಅದು ನಮಗೆ ಯಾವುದಾದರೊಂದು ಬಗೆಯಲ್ಲಿ ತಿಳಿದೇ ತಿಳಿಯುತ್ತದೆ. ಉದಾಹರಣೆಗೆ ಉಪ್ಪಿನ ಮೂಲಕ ದೇಹಕ್ಕೆ ಸಿಗುವ ಸೋಡಿಯಂ ಅತಿಯಾಗಲೂ ಬಾರದು. ಅಷ್ಟೇ ಅಲ್ಲ, ಕಡಿಮೆಯಾಗಲೂ ಬಾರದು. ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ ಇತ್ಯಾದಿ ಇರುವ ಮಂದಿಗೆ ಸೋಡಿಯಂ ಅತಿಯಾದರೂ (Health Tips Kannada) ಸಮಸ್ಯೆಯೇ.

VISTARANEWS.COM


on

Health Tips Kannada
Koo

ನಮ್ಮ ದೇಹ ಒಂದು ಸಂಕೀರ್ಣವಾದ ವ್ಯವಸ್ಥೆ. ಇದು ಆರೋಗ್ಯಕರವಾಗಿ ಇರಬೇಕೆಂದರೆ ನಾವು ಅದನ್ನು ಸರಿಯಾದ ಪೋಷಕಾಂಶಗಳನ್ನು ಕಾಲಕಾಲಕ್ಕೆ ಒದಗಿಸಿ ಚೆನ್ನಾಗಿ ನೋಡಿಕೊಳ್ಳಬೇಕು. ದೇಹವೆಂಬ ದೇಗುಲವನ್ನು ಚೆನ್ನಾಗಿ ನೋಡಿಕೊಂಡರಷ್ಟೇ ಮಾನಸಿಕ ದೈಹಿಕವಾದ ಆರೋಗ್ಯ ಚೆನ್ನಾಗಿದ್ದೀತು. ದೇಹಕ್ಕೆ ಅಗತ್ಯವಾಗಿ ಬೇಕೇಬೇಕಾದ ಪೋಷಕಾಂಶಗಳನ್ನು ಸರಿಯಾಗಿ ಪೂರೈಸದಿದ್ದಲ್ಲಿ ಅದರ ಪರಿಣಾಮಗಳೂ ತಿಳಿದು ಬಂದಾವು. ಹಾಗಂತ ಪೋಷಕಾಂಶಗಳು ಅಗತ್ಯಕ್ಕಿಂತ ಹೆಚ್ಚಾದರೂ ಕೂಡಾ ಅದು ನಮಗೆ ಯಾವುದಾದರೊಂದು ಬಗೆಯಲ್ಲಿ ತಿಳಿದೇ ತಿಳಿಯುತ್ತದೆ. ಉದಾಹರಣೆಗೆ ಉಪ್ಪಿನ ಮೂಲಕ ದೇಹಕ್ಕೆ ಸಿಗುವ ಸೋಡಿಯಂ ಅತಿಯಾಗಲೂ ಬಾರದು. ಅಷ್ಟೇ ಅಲ್ಲ, ಕಡಿಮೆಯಾಗಲೂ ಬಾರದು. ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ ಇತ್ಯಾದಿ ಇರುವ ಮಂದಿಗೆ ಸೋಡಿಯಂ ಅತಿಯಾದರೂ (Health Tips Kannada) ಸಮಸ್ಯೆಯೇ.
ಸೋಡಿಯಂ ಕ್ಲೋರೈಡ್‌ ಎಂಬ ಉಪ್ಪಿನಲ್ಲಿ ಶೇ 40ರಷ್ಟು ಸೋಡಿಯಂ ಇದ್ದರೆ ಶೇ 60ರಷ್ಟು ಕ್ಲೋರೈಡ್‌ ಇದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ ಒಬ್ಬ ಆರೋಗ್ಯವಂತ ದಿನಕ್ಕೆ ೫ ಗ್ರಾಂಗಿಂತ ಹೆಚ್ಚು ಸೋಡಿಯಂ ಸೇವಿಸಬಾರದು. ಐಸಿಎಂಆರ್‌ ಹೇಳುವಂತೆ ಒಬ್ಬನಿಗೆ ಪ್ರತಿನಿತ್ಯ 1.1ರಿಂದ 3.3 ಗ್ರಾಂ ಸೋಡಿಯಂ ಅಥವಾ 2.8ರಿಂದ 8.3 ಗ್ರಾಂ ಸೋಡಿಯಂ ಕ್ಲೋರೈಡ್‌ ಅಗತ್ಯವಿದೆ. ಅಂದರೆ, 2,300 ಎಂ.ಜಿಯಷ್ಟು ಉಪ್ಪು ನಾವು ಒಂದು ದಿನಕ್ಕೆ ಸೇವಿಸಬಹುದು. ಸಾಮಾನ್ಯವಾಗಿ ಅರ್ಥವಾಗುವ ಭಾಷೆಯಲ್ಲಿ ಹೇಳುವುದಾದರೆ, ಒಂದು ಚಮಚ ಉಪ್ಪು ಒಂದು ದಿನಕ್ಕೆ ನಮ್ಮ ದೇಹಕ್ಕೆ ಸಾಕು. ಆದರೆ, ಸದ್ಯ ನಾವೆಲ್ಲರೂ ನಮ್ಮ ದೇಹಕ್ಕೆ ನೀಡುತ್ತಿರುವ ಸೋಡಿಯಂ ಇದರ ದುಪ್ಪಟ್ಟಿದೆ. ಆದರೂ, ಬಹಳಷ್ಟು ಸಾರಿ ನಾವು ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸೋಡಿಯಂ ನೀಡುತ್ತಿದ್ದೇವಾ ಇಲ್ಲವಾ ಎಂಬುದು ತಿಳಿಯುವುದೇ ಇಲ್ಲ. ಆದರೆ, ದೇಹವು ತನಗೆ ಯಾವುದೇ ಪೋಷಕಾಂಶ ಕಡಿಮೆಯಾಗಲಿ, ಹೆಚ್ಚಾಗಲಿ ಹೇಳಿಯೇ ತೀರುತ್ತದೆ. ಆದರೆ, ಅದು ಹೇಳುವುದು ನಮಗೆ ಅರ್ಥವಾಗುತ್ತದೆಯೋ ಎಂಬುದು ಮುಖ್ಯ ವಿಚಾರ.
ಸೋಡಿಯಂ ನಮ್ಮ ದೇಹಕ್ಕೆ ಕಡಿಮೆಯಾದಾಗಲೂ ದೇಹ ಅದರದ್ದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಹೇಗೆ ಸೋಡಿಯಂ ಹೆಚ್ಚಾದರೆ ಸಮಸ್ಯೆಯೋ ಹಾಗೆಯೇ ಸೋಡಿಯಂ ಕಡಿಮೆಯಾದರೂ ಸಮಸ್ಯೆಯೇ. ಸೋಡಿಯಂ ಕಡಿಮೆಯಾದರೆ, ಖಿನ್ನತೆ, ಸುಸ್ತು, ತಲೆಸುತ್ತು, ವಾಂತಿ, ತಲೆನೋವು, ಕಿರಿಕಿರಿಯಾಗುವುದು, ಗೊಂದಲ ಇತ್ಯಾದಿ ಸಮಸ್ಯೆಗಳೂ ಬರಬಹುದು.

Unexplained frequent headaches Excessive Use Of Electronic Gadgets

ತಲೆನೋವು

ನಮ್ಮ ನರಮಂಡಲಕ್ಕೆ ಸೋಡಿಯಂ ಬೇಕೇಬೇಕು. ಸೋಡಿಯಂ ಕಡಿಮೆಯಾದಾಗ ಅದರ ಪರಿಣಾಮವಾಗಿ ತಲೆನೋವು ಆರಂಭವಾಗುತ್ತದೆ. ಹಾಗಂತ ಎಲ್ಲ ತಲೆನೋವುಗಳು ಸೋಡಿಯಂ ಕೊರತೆಯಿಂದಲ್ಲ. ಆದರೆ, ಸೋಡಿಯಂ ಕೊರತೆಯೂ ಕೂಡ ತಲೆನೋವಿಗೆ ಕಾರಣವಾಗಿರಬಹುದು.

Have a headache Ashwagandha Herb Benefits

ತಲೆಸುತ್ತು ಹಾಗೂ ವಾಂತಿ

ಸೋಡಿಯಂನ ಮಟ್ಟ ಏರುಪೇರಾದಾಗ ದೇಹದಲ್ಲಿರುವ ನೀರೂ ಕೂಡಾ ಹೀಗೆ ಹೊರಹೋಗಬಹುದು.

ಗೊಂದಲ

ಸೋಡಿಯಂ ನರಮಂಡಲದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಮಿದುಳಿಗೆ ಈ ಸಮಸ್ಯೆ ಬರುತ್ತದೆ. ಇಲ್ಲಿ ಮಿದುಳು ಸಂದೇಶಗಳನ್ನು ಸರಿಯಾಗಿ ಕಳುಹಿಸಲು ಸಾಧ್ಯವಾಗದೆ, ಗೊಂದಲದಂತಹ ಮನಸ್ಥಿತಿ ನಿರ್ಮಾಣವಾಗುತ್ತದೆ.

ಇದನ್ನೂ ಓದಿ: Benefits Of Eating Guava: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

ಮಾಂಸಖಂಡಗಳಲ್ಲಿ ಸೆಳೆತ

ಸೋಡಿಯಂ ಕೊರತೆಯಾದಾಗ, ದೇಹದಲ್ಲಿ ಬೇಡದ ವಸ್ತುಗಳು ಸರಿಯಾಗಿ ಹೊರಗೆ ಹೋಗಲು ಸಾಧ್ಯವಾಗದೆ, ಅವು ಹೀಗೆ ಮಾಂಸಖಂಡಗಳ ಮೇಲೆ ಅಡ್ಡ ಪರಿಣಾಮ ಬೀರುತ್ತವೆ. ಉದಾಹರಣೆಗೆ ಲ್ಯಾಕ್ಟಿಕ್‌ ಆಸಿಡ್‌ನಂತ ಬೇಡವಾದ ವಸ್ತು ದೇಹದಿಂದ ಕಾಲಕಾಲಕ್ಕೆ ಹೊರಹೋಗಲು ಸಾಧ್ಯವಾಗದೆ, ಹೀಗಾಗುತ್ತದೆ.
ಹೀಗಾಗಿ ದೇಹದಲ್ಲಿ ಸಮತೋಲನ ಕಾಯ್ದುಕೊಳ್ಳಲು, ಎಲ್ಲ ಅಂಗಾಗಗಳೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸೋಡಿಯಂ ಬೇಕೇ ಬೇಕು. ಕೇವಲ ಸೋಡಿಯಂ ಮಾತ್ರವಲ್ಲ, ಎಲ್ಲ ಬಗೆಯ ಪೋಷಣೆಯೂ ಲಭ್ಯವಾಗಬೇಕು. ಹಾಗಾಗಿ, ಉಪ್ಪಿನ ಸೇವನೆಯ ಬಗ್ಗೆ ವಿಶೇಷ ಕಾಳಜಿ ಅತ್ಯಂತ ಅಗತ್ಯ. ಇದು ದೇಹಕ್ಕೆ ಕಡಿಮೆಯೂ ಆಗದಂತೆ, ಹೆಚ್ಚೂ ಆಗದಂತೆ ಕಾಳಜಿ ವಹಿಸಬೇಕು.

Continue Reading

ಆರೋಗ್ಯ

Tips For Rainy Season: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

ಹೊರಗೆ ಮೋಡ ಕಟ್ಟಿದಂತೆಯೇ ಒಳಗೆ ಮೂಗು ಕಟ್ಟಿ, ಹೊರಗಿನಂತೆ ಒಳಗೂ ಧಾರಾಕಾರ ಹರಿದು, ಗುಡುಗು-ಸಿಡಿಲಿನಂತೆ ಕೆಮ್ಮು ಪ್ರಾರಂಭವಾದರೆ- ಮಳೆಯನ್ನು ಪ್ರೀತಿಸಲು ಹೇಗೆ ಸಾಧ್ಯ? ಮಳೆಗಾಲದ ಸೋಂಕುಗಳನ್ನು ದೂರ ಇರಿಸುವುದಕ್ಕೆ ಎಂಥ ಆಹಾರ ಒಳ್ಳೆಯದು? ಈ ಲೇಖನ (Tips For Rainy Season) ಓದಿ.

VISTARANEWS.COM


on

Tips For Rainy Season
Koo

ಮುಂಗಾರು ಚುರುಕಾಗುತ್ತಿದೆ. ಮಳೆಗಾಲವನ್ನು ಸಿಕ್ಕಾಪಟ್ಟೆ ಪ್ರೀತಿಸುವವರು ಇದ್ದಷ್ಟೇ ಮುಖ ಹಿಂಡುವವರೂ ಇದ್ದಾರೆ. ಇದಕ್ಕೆ ಕಾರಣಗಳು ಬಹಳಷ್ಟಿದ್ದರೂ, ಈ ಒದ್ದೆ-ಥಂಡಿ-ಶೀತದ ದಿನಗಳಲ್ಲಿ ಕಾಡುವ ಸೋಂಕುಗಳು ಅವುಗಳಲ್ಲಿ ಒಂದು ಪ್ರಮುಖ ಕಾರಣ. ಹೊರಗೆ ಮೋಡ ಕಟ್ಟಿದಂತೆಯೇ ಒಳಗೆ ಮೂಗು ಕಟ್ಟಿ, ಹೊರಗಿನಂತೆ ಒಳಗೂ ಧಾರಾಕಾರ ಹರಿದು, ಗುಡುಗು-ಸಿಡಿಲಿನಂತೆ ಕೆಮ್ಮು ಪ್ರಾರಂಭವಾದರೆ- ಮಳೆಯನ್ನು ಪ್ರೀತಿಸಲು ಹೇಗೆ ಸಾಧ್ಯ? ರೋಗಾಣುಗಳನ್ನು ತಡೆಯಲು ಸಾಧ್ಯವಿಲ್ಲದಿದ್ದರೂ, ನಮ್ಮ ದೇಹವನ್ನು ಸದೃಢವಾಗಿ ಇರಿಸಿಕೊಳ್ಳಬಹುದಲ್ಲ. ರೋಗ ನಿರೋಧಕ ಶಕ್ತಿಗೆ ಬಲ ಬರುವುದೇ ನಮ್ಮ ಆಹಾರದಿಂದ. ಸೋಂಕು ದೂರ ಇರಿಸುವುದಕ್ಕೆ (Tips For Rainy Season) ಎಂಥ ಆಹಾರ ಒಳ್ಳೆಯದು?

Vitamin C foods

ವಿಟಮಿನ್‌ ಸಿ ಆಹಾರಗಳು

ದೇಹದ ರೋಗ ನಿರೋಧಕ ಶಕ್ತಿಯನ್ನು ಉದ್ದೀಪಿಸುವಲ್ಲಿ ಸಿ ಜೀವಸತ್ವ ಪ್ರಧಾನವಾಗಿ ಬೇಕು. ಅದರಲ್ಲೂ ನೆಗಡಿ, ಕೆಮ್ಮು, ಜ್ವರದಂಥ ಮಳೆಗಾಲದ ಸೋಂಕು ರೋಗಗಳನ್ನು ದೂರ ಇಡುವುದಕ್ಕೆ ವಿಟಮಿನ್‌ ಸಿ ಅಗತ್ಯವಾಗಿ ಬೇಕು. ಹಾಗಾಗಿ ಕಿತ್ತಳೆ, ನಿಂಬೆ, ದಾಳಿಂಬೆ, ಪಪ್ಪಾಯ, ಪೇರಳೆ, ಬ್ರೊಕೊಲಿ, ದಪ್ಪಮೆಣಸು, ಮೊಳಕೆ ಕಟ್ಟಿದ ಕಾಳುಗಳನ್ನು ತಪ್ಪದೆ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ginger

ಶುಂಠಿ

ಇದಕ್ಕೆ ಹಲವಾರು ಔಷಧೀಯ ಗುಣಗಳಿವೆ. ಅದರಲ್ಲೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಬ್ಯಾಕ್ಟೀರಿಯ ನಿರೋಧಕ ಮತ್ತು ಉರಿಯೂತ ಶಾಮಕ ಗುಣಗಳು ಇದರಲ್ಲಿ ಧಾರಾಳವಾಗಿವೆ. ಕೆಮ್ಮು, ನೆಗಡಿ, ಕಫದಂಥ ಸಮಸ್ಯೆಗಳಿಗೆ ಶುಂಠಿ ಚಹಾ, ಶುಂಠಿ ಕಷಾಯಗಳು ಉಪಶಮನ ನೀಡಬಲ್ಲವು. ಗಂಟಲು ಕಟ್ಟಿದ್ದರೆ, ಗಂಟಲಲ್ಲಿ ನೋವಿದ್ದರೆ ಬೆಚ್ಚಗಿನ ಶುಂಠಿಯ ಕಷಾಯಕ್ಕೆ ಕೊಂಚ ಜೇನುತುಪ್ಪ ಸೇರಿಸಿ ಕುಡಿದರೆ ಆರಾಮ ದೊರೆತೀತು.

iamge of Zinc Foods

ಜಿಂಕ್‌ ಆಹಾರಗಳು

ನಮ್ಮ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸತುವಿನಂಶ ಇರುವ ಆಹಾರಗಳು ಸಹ ಅಗತ್ಯ. ಇದನ್ನು ಸಿ ಜೀವಸತ್ವದಂತೆ ಹೇರಳವಾಗಿ ಪಡೆಯಲಾಗದು. ಬದಲಿಗೆ, ಹಲವಾರು ಆಹಾರಗಳಿಂದ ಮಿಲಿ ಗ್ರಾಂ ಗಳ ಲೆಕ್ಕದಲ್ಲಿಯೇ ಪಡೆಯಬೇಕು ನಾವು. ಇದಕ್ಕಾಗಿ ಅಣಬೆಗಳು, ಪಾಲಕ್‌ ಸೊಪ್ಪು, ದ್ವಿದಳ ಧಾನ್ಯಗಳು, ಮೊಸರು, ಹಾಲು, ಗೋಡಂಬಿ, ಕುಂಬಳಕಾಯಿ ಬೀಜ, ಶೇಂಗಾ, ಬಾದಾಮಿಯಂಥ ಆಹಾರಗಳ ಮೂಲಕ ಈ ಸತ್ವವನ್ನು ಪಡೆಯಬಹುದು.

ಒಮೇಗಾ 3 ಕೊಬ್ಬಿನಾಮ್ಲ

ಇದು ನಮ್ಮ ಮೆದುಳು ಮತ್ತು ಹೃದಯದ ಯೋಗಕ್ಷೇಮ ನೋಡಿಕೊಳ್ಳುವುದಷ್ಟೇ ಅಲ್ಲ, ಸೋಂಕುಗಳನ್ನು ದೂರ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ. ಇದಕ್ಕಾಗಿ ಮಳೆಗಾಲದ ಆರಂಭದಲ್ಲಿ ದೊರೆಯುವ ಬೆಣ್ಣೆ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ. ಜೊತೆಗೆ ವಾಲ್‌ನಟ್‌, ಬಾದಾಮಿ, ಅಗಸೆಬೀಜ, ಕೊಬ್ಬಿರುವ ಮೀನುಗಳನ್ನು ಸೇವಿಸುವುದರಿಂದ ಒಮೇಗಾ ೩ ಕೊಬ್ಬಿನಾಮ್ಲ ವಿಫುಲವಾಗಿ ಲಭಿಸುತ್ತದೆ.

Probiotic foods

ಪ್ರೊಬಯಾಟಿಕ್‌ ಆಹಾರಗಳು

ನಮ್ಮ ಜೀರ್ಣಾಂಗಗಳ ಆರೋಗ್ಯ ಚೆನ್ನಾಗಿದ್ದರೆ ಮಾತ್ರವೇ ದೇಹದ ಪ್ರತಿರೋಧಕ ಶಕ್ತಿ ಬಲವಾಗಿರುತ್ತದೆ. ಜೀರ್ಣಾಂಗಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಭರಪೂರ ಇದ್ದಷ್ಟೂ ದೇಹ ರೋಗಮುಕ್ತವಾಗಿರುತ್ತದೆ ಎನ್ನುತ್ತವೆ ಅ‍ಧ್ಯಯನಗಳು. ಹಾಗಾಗಿ ಪ್ರೊಬಯಾಟಿಕ್‌ ಆಹಾರಗಳು ನಮ್ಮ ದೇಹಕ್ಕೆ ಬೇಕೇಬೇಕು. ಇದಕ್ಕಾಗಿ ಮೊಸರು, ಮಜ್ಜಿಗೆಯಂಥ ಹುದುಗು ಬರಿಸಿದ ಆಹಾರಗಳನ್ನು ಪ್ರತಿದಿನ ಸೇವಿಸಿ.

infusions

ಕಷಾಯಗಳು

ಶೀತದ ದಿನಗಳಲ್ಲಿ ದೇಹವನ್ನು ಬೆಚ್ಚಗೆ ಇರಿಸಿಕೊಳ್ಳುವುದಕ್ಕೆ ತರಹೇವಾರಿ ಕಷಾಯಗಳನ್ನು ಮಾಡಿಕೊಳ್ಳಬಹುದು. ಇದರಿಂದಲೂ ನಮ್ಮ ದೇಹದ ಸೋಂಕು ನಿರೋಧಕ ಶಕ್ತಿ ಪ್ರಬಲವಾಗುತ್ತದೆ. ಇದಕ್ಕಾಗಿ ಯಾವೆಲ್ಲ ವಸ್ತುಗಳನ್ನು ಉಪಯೋಗಿಸಬಹುದು ಎನ್ನುವುದಕ್ಕೆ ಉಪಯುಕ್ತ ವಿವರಗಳು ಇಲ್ಲಿವೆ. ಈ ಯಾವುದೇ ವಸ್ತುಗಳನ್ನು ಬಳಸಿ ಕಷಾಯ ಮಾಡಿಕೊಳ್ಳಬಹುದು.

Raw Turmeric with Powder Cutout

ಅರಿಶಿನ

ಇದರಲ್ಲಿರುವ ಕರ್ಕುಮಿನ್‌ ಎಂಬ ಪ್ರಬಲ ಉತ್ಕರ್ಷಣ ನಿರೋಧಕವು ಸೋಂಕುಗಳನ್ನು ಹೊಡೆದೋಡಿಸುತ್ತದೆ

Benefits Of Ginger

ಶುಂಠಿ

ಇದರ ಜಿಂಜರಾಲ್‌ ಅಂಶದಲ್ಲಿ ಉರಿಯೂತ ಶಮನ ಮಾಡಿ, ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ

Garlic

ಬೆಳ್ಳುಳ್ಳಿ

ಇದರ ಅಲ್ಲಿಸಿನ್‌ ಅಂಶದಲ್ಲಿ ವೈರಸ್‌ ಮತ್ತು ಬ್ಯಾಕ್ಟೀರಿಯ ನಿರೋಧಕ ಗುಣವಿದೆ

Cinnamon sticks Anti Infective Foods

ದಾಲ್ಚಿನ್ನಿ ಚಕ್ಕೆ

ಇದರಲ್ಲಿರುವ ಉರಿಯೂತ ಶಾಮಕ ಸತ್ವಗಳು ರೋಗನಿರೋಧಕವೂ ಹೌದು

black pepper

ಕಾಳು ಮೆಣಸು

ಇದರ ಕ್ಯಾಪ್ಸೈಸಿನ್‌ನಲ್ಲಿ ದೇಹದ ಪ್ರತಿರೋಧಕತೆಯನ್ನು ವೃದ್ಧಿಸುವ ಸಾಮರ್ಥ್ಯವಿದೆ

cumin

ಜೀರಿಗೆ

ಇದರ ಉತ್ಕರ್ಷಣ ನಿರೋಧಕಗಳು ಸೋಂಕಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ

coriander Coriander Benefits

ಧನಿಯ

ಇದರ ಉತ್ಕರ್ಷಣ ನಿರೋಧಕ ಸತ್ವಗಳು ಸೋಂಕುಗಳನ್ನು ನಿವಾರಿಸುತ್ತವೆ.

Continue Reading

ಕರ್ನಾಟಕ

Bengaluru News: ನಕಲಿ ವೈದ್ಯರ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ: ಶರಣಪ್ರಕಾಶ್‌ ಪಾಟೀಲ್‌

Bengaluru News: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಬಿಗಿಯಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

Minister Dr.Sharanaprakash patil spoke in World Homeopathy Day Celebration and Seminar Programme in Bengaluru
Koo

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಬಿಗಿಯಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಎಚ್ಚರಿಕೆ (Bengaluru News) ನೀಡಿದ್ದಾರೆ.

ಕರ್ನಾಟಕ ಖಾಸಗಿ ಹೋಮಿಯೋಪಥಿಕ್‌ ವೈದ್ಯಕೀಯ ಮಹಾವಿದ್ಯಾಲಯಗಳ ಆಡಳಿತ ಸಂಘದ ವತಿಯಿಂದ ಡಾ.ಬಿಆರ್‌.ಅಂಬೇಡ್ಕರ್‌ ಭವನದಲ್ಲಿ ಬುಧವಾರ ಹಮಿಕೊಂಡಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ನಕಲಿ ವೈದ್ಯರ ಹಾವಳಿ ವ್ಯಾಪಕವಾಗಿ ಕೇಳಿಬರುತ್ತಿದೆ. ಯಾವುದೇ ವೈದ್ಯಕೀಯ ಕೋರ್ಸ್‌ ಮುಗಿಸದೆ ಇರುವವರು ಎಲ್ಲೆಂದರಲ್ಲಿ ಕ್ಲಿನಿಕ್‌ಗಳನ್ನು ತೆರೆದು ಚಿಕಿತ್ಸೆ ನೀಡುತ್ತಾರೆ. ಇದರ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ದೂರುಗಳು ಬಂದಿವೆ ಎಂದು ಹೇಳಿದರು.

ಇದನ್ನೂ ಓದಿ: Money Guide: ಪಿಎಫ್‌ ಅಕೌಂಟ್‌ಗೆ ಹೊಸ ಮೊಬೈಲ್‌ ನಂಬರ್‌ ಸೇರಿಸಿಬೇಕೆ? ಜಸ್ಟ್‌ ಹೀಗೆ ಮಾಡಿ ಸಾಕು

ಗ್ರಾಮೀಣ ಭಾಗದ ಜನರ ಅಮಾಯಕತೆಯನ್ನು ಕೆಲವರು ದುರುಪಯೋಗಪಡಿಸಿಕೊಂಡು ನಕಲಿ ಚಿಕಿತ್ಸೆ ನೀಡುತ್ತಾರೆ. ಇದು ಕಾನೂನು ಬಾಹಿರ ಎಂದು ಗೊತ್ತಿದ್ದರೂ ಕೆಲವರು ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಮುಂದೆ ಇದಕ್ಕೆ ಶಾಶ್ವತವಾದ ಕಡಿವಾಣ ಬೀಳಲಿದೆ ಎಂದರು.

ಇದನ್ನೂ ಓದಿ: Benefits Of Eating Guava: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

ಕೇವಲ ಸರ್ಕಾರದಿಂದ ಮಾತ್ರ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಸಾಧ್ಯವಿಲ್ಲ. ಇದಕ್ಕೆ ಹೋಮಿಯೋಪಥಿಕ್‌ ವೈದ್ಯಕೀಯ ಮಹಾವಿದ್ಯಾಲಯಗಳ ಸಂಘದ ಸಹಭಾಗಿತ್ವವೂ ಅಷ್ಟೇ ಮುಖ್ಯ ಎಂದು ತಿಳಿಸಿದ ಸಚಿವರು, ಹೋಮಿಯೋಪತಿ ವೈದ್ಯರು ನಮ್ಮ ಜತೆ ಕೈ ಜೋಡಿಸಿದರೆ ಇಂಥ ದಂಧೆಯನ್ನು ತಡೆಗಟ್ಟಬಹುದು. ಕೆಲವು ಸಂದರ್ಭಗಳಲ್ಲಿ ನಕಲಿ ವೈದ್ಯರುಗಳಿಂದ ಅಮಾಯಕರ ಪ್ರಾಣಕ್ಕೂ ಕುತ್ತು ಬಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.‌

ಹೋಮಿಯೋಪತಿ ಹಾಗೂ ಅಲೋಪತಿ ಬ್ರಿಜ್ ಕೋರ್ಸ್ (bridge course) ಮಾಡಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಇದೇ ಸಂದರ್ಭದಲ್ಲಿ ಸಚಿವರಿಗೆ ಸಂಘದ ವತಿಯಿಂದ ಮನವಿ ಮಾಡಲಾಯಿತು. ಇದಕ್ಕೆ ಸಚಿವರು, ಈ ಸಮಸ್ಯೆ ಇತ್ಯರ್ಥವಾಗಬೇಕಾದರೆ ಹೋಮಿಯೋಪತಿ ವೈದ್ಯರ ಸಂಘದವರು ರಾಷ್ಟ್ರೀಯ ವೈದ್ಯಕೀಯ ಆಯೋಗ ಹಾಗು ಕೇಂದ್ರ ಸರ್ಕಾರಕ್ಕೆ ಮನವಿ ಕೊಡಬೇಕು ಎಂದು ಸಲಹೆ ಮಾಡಿದರು. ಅಂತಿಮವಾಗಿ ಇದನ್ನು ಕೇಂದ್ರವೇ ನಿರ್ಧರಿಸಬೇಕಾಗಿರುವುದರಿಂದ ರಾಜ್ಯ ಸರ್ಕಾರದ ಪಾತ್ರ ಇದರಲ್ಲಿ ಏನೂ ಇಲ್ಲ ಎಂದರು.

ರಾಜೀವ್‌ ಗಾಂಧಿ ಆರೋಗ್ಯ ವಿವಿಗೆ ಹೋಮಿಯೋಪತಿಯ ಪ್ರತಿನಿಧಿಯೊಬ್ಬರನ್ನು ಸಿಂಡಿಕೇಟ್ ಸದಸ್ಯನಾಗಿ ನೇಮಿಸಬೇಕೆಂದು ಸಂಘದ ಪ್ರತಿನಿಧಿಗಳು ಮನವಿ ಮಾಡಿದರು. ಇದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಶರಣಪ್ರಕಾಶ್‌ ಪಾಟೀಲ್‌, ಈ ಕುರಿತು ವಿಶ್ವವಿದ್ಯಾನಿಲಯದ ಕುಲಪತಿಗಳ ಜತೆ ಮಾತುಕತೆ ನಡೆಸುವ ಆಶ್ವಾಸನೆಯನ್ನು ನೀಡಿದರು.

ಇದನ್ನೂ ಓದಿ: Kalaburagi News: ಜೂ.14ರಂದು ಸಿಎಂ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ

ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌, ಹೋಮಿಯೋಪಥಿಕ್‌ ವೈದ್ಯಕೀಯ ಮಹಾವಿದ್ಯಾಲಯಗಳ ಆಡಳಿತ ಸಂಘದ ಪ್ರಮುಖರಾದ ವಿನೋದ್‌ ದೊಡ್ಡಣ್ಣನವರ್‌, ಕೆ.ಚಂದ್ರಶೇಖರ್‌ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Continue Reading
Advertisement
Viral Video
ವೈರಲ್ ನ್ಯೂಸ್25 mins ago

Viral Video: ಮಗನಿಗೆ ಮುಸಲ್ಮಾನರ ಕ್ಯಾಪ್‌ ಹಾಕಿದ ನಟಿ; ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ!

Donkey Population In Pak
ವಿದೇಶ35 mins ago

Donkey Population In Pak: ಹೆಚ್ಚುಹೆಚ್ಚು ಕತ್ತೆಗಳನ್ನು ಸಾಕಿ, ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಿ; ಪಾಕ್‌ಗೆ ಚೀನಾ ಸಲಹೆ!

Celebrity Fashion
ಫ್ಯಾಷನ್42 mins ago

Celebrity Fashion: ಬ್ಲೇಜರ್‌ನಲ್ಲಿ ನಟ ಸುದೀಪ್‌ ಪುತ್ರಿ ಸಾನ್ವಿ ಕ್ಲಾಸಿ ಲುಕ್‌!

There is a Taliban government in the state Opposition party leader R Ashok alleges
ಬೆಂಗಳೂರು45 mins ago

R Ashok: ರಾಜ್ಯದಲ್ಲಿರುವುದು ತಾಲಿಬಾನ್‌ ಸರ್ಕಾರ; ಆರ್. ಅಶೋಕ್‌ ಆರೋಪ

Hindu Girl Kidnaping
Latest55 mins ago

Hindu Girl Kidnaping: ಪಾಕ್‌ನಲ್ಲಿ ಹಿಂದೂ ಬಾಲಕಿಯ ಅಪಹರಿಸಿ ಇಸ್ಲಾಂಗೆ ಮತಾಂತರ, ಬಲವಂತದ ಮದುವೆ

Glasses or Lenses
ಆರೋಗ್ಯ58 mins ago

Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

SSLC examination-2 to begin from tomorrow at over 700 centres
ಬೆಂಗಳೂರು59 mins ago

SSLC Examination 2 : 700ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಶುರು

weight lifting
ಪ್ರಮುಖ ಸುದ್ದಿ1 hour ago

Weight Lifting: ಮೊಣಕಾಲಿನ ಸಂಧಿವಾತವಿದ್ದರೂ 68ನೇ ವಯಸ್ಸಿನಲ್ಲಿ 60 ಕೆಜಿ ಭಾರ ಎತ್ತುವ ಅಜ್ಜಿ!

Online Order Tragedy
ಪ್ರಮುಖ ಸುದ್ದಿ1 hour ago

Online Order Tragedy: ಆನ್‌ಲೈನ್‌ನಿಂದ ತರಿಸಿದ ಐಸ್‌ಕ್ರೀಂನಲ್ಲಿತ್ತು ಮನುಷ್ಯರ ಬೆರಳು!

Ajit Doval
ದೇಶ1 hour ago

Ajit Doval: ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್‌ ದೋವಲ್‌ 3ನೇ ಅವಧಿಗೆ ನೇಮಕ; ಉಗ್ರರಿಗೆ ನಡುಕ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌