Congress Leader says Siddaramaiah is Shiva, yathindra is Nandi Congress Politics: ಶಿವನಿಗೆ ನಂದಿ ಇದ್ದ ಹಾಗೆ ಸಿದ್ದರಾಮಯ್ಯಗೆ ಯತೀಂದ್ರ! - Vistara News

ಕರ್ನಾಟಕ

Congress Politics: ಶಿವನಿಗೆ ನಂದಿ ಇದ್ದ ಹಾಗೆ ಸಿದ್ದರಾಮಯ್ಯಗೆ ಯತೀಂದ್ರ!

Congress Politics: ಶಿವನನ್ನು ಕಾಯುವ ನಂದಿ ಇದ್ದಂತೆ ಸಿದ್ದರಾಮಯ್ಯ ಅವರಿಗೆ ಯತೀಂದ್ರ ಸಿದ್ದರಾಮಯ್ಯ ಎಂದು ಕಾಂಗ್ರೆಸ್‌ ನಾಯಕರೊಬ್ಬರು ವ್ಯಾಖ್ಯಾನ ಮಾಡಿದ್ದಾರೆ.

VISTARANEWS.COM


on

Siddaramaiah Yathindra siddaramaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ʻಶಿವನಿಗೆ ನಂದಿ ಇದ್ದ ಹಾಗೆ ಸಿದ್ದರಾಮಯ್ಯಗೆ ಯತೀಂದ್ರʼ- ಹೀಗೊಂದು ಸಂಬಂಧ ಕಟ್ಟಿದವರು ಕಾಂಗ್ರೆಸ್‌ನ ಮೈಸೂರು ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯ ಕುಮಾರ್‌ (Dr. BJ Vijayakumar). ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ವರುಣದಲ್ಲಿ ಸಿದ್ದರಾಮಯ್ಯ (Siddaramaiah) ಅವರ ಗೆಲುವಿನ ಹಿನ್ನೆಲೆಯಲ್ಲಿ ಆಯೋಜಿಸಲಾದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ (Dr. Yathindra siddaramaiah) ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ʻʻಶಿವ ದೇಗುಲದಲ್ಲಿ ಈಶ್ವರ ಒಳಗಿದ್ದರೆ ನಂದಿ ಹೊರಗಡೆ ಕುಳಿತು ಕಾಯ್ತಾ ಇರುತ್ತದೆ. ಶಿವನನ್ನು ಕಾಯ್ತಾ ಇರುವುದು ನಂದಿ. ಹಾಗೆಯೇ ಸಿದ್ದರಾಮಯ್ಯ ಅವರನ್ನು ಡಾ.ಯತೀಂದ್ರ ಸಿದ್ದರಾಮಯ್ಯ ಕಾಯ್ತಾ ಇದ್ದಾರೆʼʼ ಎಂದು ಬಿ.ಜೆ. ವಿಜಯಕುಮಾರ್‌ ಹೇಳಿದರು.

ʻʻವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಎರಡು ಮೂರು ದಿನಗಳ ಕಾಲ ಪ್ರಚಾರ ಮಾಡಿದರು. ಮೈಸೂರು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ವರುಣ ಕ್ಷೇತ್ರದಲ್ಲಿ ನಿರಂತರವಾಗಿ ಪ್ರಚಾರ ಮಾಡಿದರು. ಇದರ ಫಲವಾಗಿ‌ ಸಿದ್ದರಾಮಯ್ಯ ರವರು 46,006 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇದರಿಂದಾಗಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಗಳನ್ನು ಈಡೇರಿಸಲು ಮುಖ್ಯಮಂತ್ರಿ ಹಗಲು ರಾತ್ರಿ ಕೆಲಸ ಮಾಡ್ತಾ ಇದ್ದಾರೆ. ರಾಜ್ಯಭಾರ ಮಾಡಲು ಬೇಕಾದ ಎದೆಗಾರಿಕೆ ಸಿದ್ದರಾಮಯ್ಯ ಅವರಲ್ಲಿ ಇದೆʼʼ ಎಂದು ಹೇಳಿದರು.

ಇದರಿಂದಾಗಿ ರಾಜ್ಯದ ಕಾರ್ಯಕರ್ತರು ಸಂಭ್ರಮದ ಜತೆಗೆ ಜವಾಬ್ದಾರಿ ಇರಬೇಕು ಎಂದು ಅಭಿಪ್ರಾಯಪಟ್ಟರು.

ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ತಂದೆ ಸಿದ್ದರಾಮಯ್ಯ ಅವರು ಐತಿಹಾಸಿಕ ಗೆಲುವು ಸಾಧಿಸಲು ನಮ್ಮ ಕಾರ್ಯಕರ್ತರು ಕಾರಣ. ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಚಾರ ಮಾಡಿದರು. ಬಿಜೆಪಿಯವರು ಕ್ಷೇತ್ರದಲ್ಲಿ ಬಹಳಷ್ಟು ಷಡ್ಯಂತ್ರ ಮಾಡಿದ್ರು. ನಮ್ಮ ಕಾರ್ಯಕರ್ತರ ಸಲಹೆ ಮೇರೆಗೆ ನಾವು ಕೂಡ ಸಾಕಷ್ಟು ತಂತ್ರಗಾರಿಗೆ ಮಾಡಿದ ಫಲವಾಗಿ ಸಿದ್ದರಾಮಯ್ಯ ಗೆದ್ದಿದ್ದಾರೆ ಎಂದು ಹೇಳಿದರು.

ʻʻಐದು ಯೋಜನೆ ಗ್ಯಾರಂಟಿಗಳನ್ನು ರಾಜ್ಯದ ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಯೋಜನೆ ಜಾರಿ ಮಾಡಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಕೊಟ್ಟ ಭರವಸೆಗಳನ್ನು 9 ವರ್ಷವಾದರೂ ಈಡೇರಿಸಿಲ್ಲ. ಇದನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲʼʼ ಎಂದು ಹೇಳಿದ ಸಿದ್ದರಾಮಯ್ಯ ಅವರು, ʻʻಕೇಂದ್ರ ಸರ್ಕಾರ ಕಾಂಗ್ರೆಸ್​ಗೆ ಹೆದರಿ ಅಕ್ಕಿ ಕೊಡಲು ಹಿಂದೇಟು ಹಾಕುತ್ತಿದೆ. ಕೇಂದ್ರ ಸರ್ಕಾರದವರು ನೀಚ ಮಟ್ಟಕ್ಕೆ ಇಳಿದಿದ್ದಾರೆ. ಬಿಜೆಪಿ ನಮ್ಮ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡಲು ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ಜನರನ್ನು ಎತ್ತಿ ಕಟ್ಟುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆʼʼ ಎಂದು ಆರೋಪಿಸಿದರು.

ʻʻಲೋಕಸಭಾ ಚುನಾವಣೆಯಲ್ಲೂ ಎಲ್ಲ ಕಡೆ ಹೋಗಿ ಪರಿಶ್ರಮ ಪಡಬೇಕು. ಕಾಂಗ್ರೆಸ್‌ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಇದರಿಂದ ಸಿಎಂ ಹಾಗೂ ಡಿಸಿಎಂಗೆ ಹೆಚ್ಚು ಶಕ್ತಿ ಬರುತ್ತದೆʼʼ ಎಂದು ಹೇಳಿದರು ಯತೀಂದ್ರ.

ಇದನ್ನೂ ಓದಿ: Siddaramaiah: ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದ ಸಚಿವ ವೆಂಕಟೇಶ್;‌ ಮುಗಿಯದ ಕೈ ಕಿತ್ತಾಟ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Karnataka Rain : ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಭಾನುವಾರ ಸುರಿದ ಎರಡು ಗಂಟೆಯ ಮಳೆಗೆ ಹಳೆಯ ದಾಖಲೆಗಳನ್ನು ಮುರಿದು ಮುನ್ನುಗ್ಗಿದೆ. 133 ವರ್ಷದ ದಾಖಲೆಯನ್ನು ಬೆಂಗಳೂರು ಮಳೆ ರೆಕಾರ್ಡ್ ಬ್ರೇಕ್ ಮಾಡಿದೆ. ಜತೆಗೆ ಸೋಮವಾರವು ಹಲವೆಡೆ ಮಳೆಯು ಅಬ್ಬರಿಸಿದೆ.

VISTARANEWS.COM


on

By

Karnataka Rain
Koo

ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru Rain) ಜೂನ್‌ ಮೊದಲ ವಾರವೇ ಮಳೆಯಲ್ಲಿ ರೆಕಾರ್ಡ್‌ ಬ್ರೇಕ್‌ ಮಾಡಿದೆ. ಜೂ.2ರ ಭಾನುವಾರ ಬೆಂಗಳೂರಿನಲ್ಲಿ 111.2 mm ಮಳೆಯಾಗಿದೆ. ಈ ಮೂಲಕ 133 ವರ್ಷಗಳ ದಾಖಲೆಯನ್ನು ಮುರಿದಿದೆ. ಬೆಂಗಳೂರಿನಲ್ಲಿ 1891ರ ಜೂನ್ 16ರಂದು 101.6 mm ಮಳೆ ಆಗಿತ್ತು. ಆದರೆ ನಿನ್ನೆ ಭಾನುವಾರ ಸುರಿದ ಜೂನ್ ತಿಂಗಳ ಮಳೆ 133 ವರ್ಷಗಳ ದಾಖಲೆ (Karnataka Rain) ಮುರಿದಿದೆ ಎಂದು ವಿಸ್ತಾರ ನ್ಯೂಸ್‌ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಾಖಲೆಯ ಮಳೆ ಅಬ್ಬರದ ಡಿಟೈಲ್ಸ್‌

ವರ್ಷ- ಮಳೆ ಪ್ರಮಾಣ
1891ರ ಜೂನ್ 16ರಂದು 101.6 mm
2013ರ ಜೂನ್‌ 1ರಂದು 100mm
2009ರ ಜೂನ್ 11ರಂದು 89.6 mm
2024ರ ಜೂನ್‌ 2ರಂದು 111.2 mm

ಇದನ್ನೂ ಓದಿ: Bangalore Rain News : ಬೆಂಗಳೂರಿನಲ್ಲಿ ಭಾರಿ ಮಳೆ; ಹಲವು ಕಡೆ ಉರುಳಿ ಬಿದ್ದ ಮರಗಳು, ಮೆಟ್ರೋ ಸಂಚಾರಕ್ಕೂ ಅಡಚಣೆ

ಚಿಕ್ಕಮಗಳೂರಲ್ಲಿ ಮಳೆಗೆ 50 ಎಕರೆ ಅಡಿಕೆ ತೋಟ ಜಲಾವೃತ

ಚಿಕ್ಕಮಗಳೂರು ಬಯಲುಸೀಮೆ ಭಾಗದಲ್ಲಿ ಸೋಮವಾರ (ಜೂ. 3) ಭಾರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ 50 ಎಕರೆ ಅಡಿಕೆ ತೋಟ ಜಲಾವೃತಗೊಂಡಿದೆ. ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು, ಸಾದರಹಳ್ಳಿ ಗ್ರಾಮಗಳಲ್ಲಿ ಘಟನೆ ನಡೆದಿದೆ. ಗ್ರಾಮದ ಬಸವರಾಜು, ಲೋಕೇಶ್ ಸೇರಿದಂತೆ ಹಲವು ರೈತರ ತೋಟ ನೀರುಪಾಲಾಗಿದೆ. ಇನ್ನೂ ಚಿಕ್ಕಮಗಳೂರು, ಮುಡಿಗೆರೆ, ಕೊಪ್ಪ, ಶೃಂಗೇರಿ, ಎನ್‌ಆರ್ ಪುರದಲ್ಲಿ ನಿರಂತರ ಮಳೆಯಿಂದಾಗಿ ಜನ-ಜೀವನ ಅಸ್ತವ್ಯಸ್ತವಾಗಿದೆ. ಕೊಟ್ಟಿಗೆಹಾರ, ಚಾರ್ಮಾಡಿ, ಕಿಗ್ಗಾ, ಬಸರಿ ಕಟ್ಟೆ ಭಾಗದಲ್ಲೂ ವ್ಯಾಪಕ ಮಳೆಯಾಗುತ್ತಿದೆ.

ದಾವಣಗೆರೆಯಲ್ಲಿ ಕೊಚ್ಚಿ ಹೋದ ಮಂಡಲೂರು ಸೇತುವೆ

ಭಾನುವಾರ ರಾತ್ರಿ ಸುರಿದ ಮಳೆಯಿಂದ ಮಂಡಲೂರು ಸೇತುವೆ ಕೊಚ್ಚಿ ಹೋಗಿದೆ. ದಾವಣಗೆರೆಯ ಮಂಡಲೂರಿನಿಂದ ಕಾಟಿಹಳ್ಳಿ ತಾಂಡಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಕೊಚ್ಚಿ ಹೋದ ಕಾರಣದಿಂದ ಸಂಚಾರಕ್ಕೆ ಅಡಚಣೆ ಆಗಿತ್ತು. ಮಂಡಲೂರು ಗ್ರಾಮಕ್ಕೆ ಬರಲು ಹೋಗಲು ಆಗದೆ ಕಾಟಿಹಳ್ಳಿ ತಾಂಡದ ಜನರಿಗೆ ತೊಂದರೆ ಅನುಭವಿಸಿದರು. ಸೇತುವೆ ತುರ್ತು ಕಾಮಗಾರಿ ಆರಂಭಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಕೊಡಗಿಗೂ ಎಂಟ್ರಿ ಕೊಟ್ಟ ಮುಂಗಾರು ಮಳೆ

ಸೋಮವಾರ ಕೊಡಗು ಜಿಲ್ಲೆಯ ಹಲವೆಡೆ ತುಂತುರು ಮಳೆ ಆರಂಭವಾಗಿದೆ. ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲ ವಾತವರಣವಿತ್ತು. ಸೋಮವಾರ ಮಧ್ಯಾಹ್ನದ ನಂತರ ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಮನ್ಸೂನ್ ಮಾದರಿಯ ವಾತಾವರಣ ಕಂಡು ಬಂತು. ಮಳೆಯಿಂದಾಗಿ ಕೊಡಗಿನ ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿದೆ. ಇತ್ತ ದಿಢೀರ್‌ ಮಳೆಗೆ ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರು ಪರದಾಡಿದರು.

ಚಿತ್ರದುರ್ಗದಲ್ಲಿ ಮಳೆಗೆ ಬೆಳೆ ನಾಶ

ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಆರ್ಭಟಕ್ಕೆ ಮೊಳಕಾಲ್ಮುರು ತಾಲೂಕಿನಲ್ಲಿ ಅವ್ಯವಸ್ಥೆ ಆಗಿದೆ. ಪಕ್ಕುರ್ತಿ ಗ್ರಾಮದಲ್ಲಿ ಮಳೆಯಿಂದಾಗಿ ಶೇಂಗಾ, ಹತ್ತಿ, ಕಲ್ಲಂಗಡಿ, ಕನಕಾಂಬರ ಬೆಳೆ ನಾಶವಾಗಿದೆ. ಮಳೆ ರಭಸಕ್ಕೆ ನಾಲ್ಕು ಬೋರ್ವೆಲ್,ವಿದ್ಯುತ್ ಪರಿಕರ,ಪೈಪ್ ಲೈನ್ ಕೊಚ್ಚಿ ಹೋಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಶಿವಮೊಗ್ಗ

Shivamogga Lok Sabha Constituency: ತ್ರಿಕೋನ ಕದನದ ಶಿವಮೊಗ್ಗದಲ್ಲಿ ಯಾರಿಗೆ ವಿಜಯದ ಮಾಲೆ?

Shivamogga Lok Sabha Constituency: ಗೀತಾ ಶಿವರಾಜ್‌ ಕುಮಾರ್‌ ಜತೆಗೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.‌ ಈಶ್ವರಪ್ಪ ಅವರು ಸ್ಪರ್ಧಿಸಿರುವುದು ಶಿವಮೊಗ್ಗ ಲೋಕಸಭೆ ಕ್ಷೇತ್ರದ ಚುನಾವಣೆ ಫಲಿತಾಂಶವು ಇನ್ನಿಲ್ಲದಷ್ಟು ಕುತೂಹಲ ಕೆರಳಿಸಿದೆ. ಇನ್ನು ಬಿ.ವೈ.ರಾಘವೇಂದ್ರ ಅವರಿಗೆ ತಂದೆ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಲವಿದೆ.

VISTARANEWS.COM


on

Shivamogga Lok Sabha Constituency
Koo

ಶಿವಮೊಗ್ಗ: ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವೂ (Shivamogga Lok Sabha Constituency) ಒಂದಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ, ಮತ್ತೊಬ್ಬ ಮಾಜಿ ಸಿಎಂ ಎಸ್‌.ಬಂಗಾರಪ್ಪ ಅವರ ಪುತ್ರಿ, ನಟ ಶಿವರಾಜ್‌ ಕುಮಾರ್‌ ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌ (Geetha Shivarajkumar) ಅವರು ಕಣಕ್ಕಿಳಿದಿದ್ದಾರೆ. ಇನ್ನು, ಬಂಡಾಯದ ಬಾವುಟ ಬೀಸಿರುವ ಕೆ.ಎಸ್.ಈಶ್ವರಪ್ಪ (KS Eshwarappa) ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದು, ತ್ರಿಕೋನ ಕದನ ಏರ್ಪಟ್ಟಿದೆ. ಹಾಗಾಗಿ, ಇದು ಎಲ್ಲರಿಗೂ ಪ್ರತಿಷ್ಠೆಯ ಕಣವಾಗಿದೆ.

ರಾಘವೇಂದ್ರ ಬಲವೇನು?

ಹಾಗೆ ನೋಡಿದರೆ, ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಹಲವು ರೀತಿಯ ಅನುಕೂಲಕರ ವಾತಾವರಣವಿದೆ. ಕ್ಷೇತ್ರವು ಬಿಜೆಪಿ ಭದ್ರಕೋಟೆಯಾಗಿದೆ. ಬಿ.ಎಸ್‌.ಯಡಿಯೂರಪ್ಪ ಅವರು ತವರು ಜಿಲ್ಲೆ ಶಿವಮೊಗ್ಗ. ರಾಘವೇಂದ್ರ ಅವರ ಸಹೋದರ ಬಿ.ವೈ.ವಿಜಯೇಂದ್ರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ. ಅದರಲ್ಲೂ, ಸಂಸದರಾಗಿ ಬಿ.ವೈ.ರಾಘವೇಂದ್ರ ಅವರು ರೈಲು ಸಂಪರ್ಕ ಸೇರಿ ಹಲವು ರೀತಿಯ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ನರೇಂದ್ರ ಮೋದಿ ಅವರ ಅಲೆಯೂ ಇಲ್ಲಿ ಕೆಲಸ ಮಾಡುವ ಸಾಧ್ಯತೆ ಇದೆ. ಹಾಗಾಗಿ, ರಾಘವೇಂದ್ರ ಅವರು ಗೆಲುವಿನ ವಿಶ್ವಾಸದಲ್ಲಿದ್ದಾರೆ.

BY Raghavendra

ಗೀತಾ ರಣತಂತ್ರ ಹೀಗಿತ್ತು

ಮತ್ತೊಂದೆಡೆ, ಎಸ್.‌ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ ಕುಮಾರ್‌ ಅವರು ಎರಡನೇ ಬಾರಿ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಈ ಬಾರಿ ರಣತಂತ್ರ ರೂಪಿಸಿದ್ದಾರೆ. ಶಿವರಾಜ್‌ ಕುಮಾರ್‌ ಅವರ ವರ್ಚಸ್ಸು, ಎಸ್‌. ಬಂಗಾರಪ್ಪ ಅವರ ಹೆಸರು, ಸಹೋದರ, ಸಚಿವ ಮಧು ಬಂಗಾರಪ್ಪ ನೆರವಿನ ಬಲದೊಂದಿಗೆ ಅವರು ಅಬ್ಬರದ ಪ್ರಚಾರ ಕೈಗೊಂಡಿರುವ ಕಾರಣ ಬಿ.ವೈ.ರಾಘವೇಂದ್ರ ಅವರಿಗೆ ಗೆಲುವು ಸುಲಭವಲ್ಲ ಎಂದು ಹೇಳಲಾಗುತ್ತಿದೆ.

Congress candidate Geetha Shivarajkumar's roadshow in Shivamogga

ಇವರಿಬ್ಬರ ಮಧ್ಯೆ, ಕೆ.ಎಸ್.ಈಶ್ವರಪ್ಪ ಅವರು ಪುತ್ರ ಕಾಂತೇಶ್‌ಗೆ ಟಿಕೆಟ್‌ ನೀಡಲಿಲ್ಲ ಎಂದು ಬಿಜೆಪಿ ವಿರುದ್ಧ ಬಂಡಾಯವೆದ್ದು, ಪಕ್ಷೇತರರಾಗಿ ಚುನಾವಣೆ ಕಣಕ್ಕಿಳಿದಿದ್ದಾರೆ. ಕಟ್ಟಾ ಆರೆಸ್ಸೆಸ್ಸಿಗರಾಗಿರುವ ಕೆ.ಎಸ್.ಈಶ್ವರಪ್ಪ ಅವರು ಹಿಂದುತ್ವದ ನೆಲೆಗಟ್ಟಿನಲ್ಲಿ ಮತಯಾಚನೆ ಮಾಡಿದ್ದಾರೆ. ಹಾಗಾಗಿ, ಇವರು ಮತಗಳನ್ನು ಒಡೆದಿದ್ದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲ ಕಾರಣಗಳಿಂದಾಗಿ ಶಿವಮೊಗ್ಗ ಲೋಕಸಭೆ ಕ್ಷೇತ್ರವು ಎಲ್ಲರಿಗೂ ಪ್ರತಿಷ್ಠೆಯ ಕಣವಾಗಿದೆ.

KS Eshwarappa

2019, 2014ರ ಫಲಿತಾಂಶ ಏನಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು 2.23 ಲಕ್ಷ ಮತಗಳ ಅಂತರದಲ್ಲಿ ಜೆಡಿಎಸ್‌ನ ಮಧು ಬಂಗಾರಪ್ಪ ಅವರ ವಿರುದ್ಧ ಗೆಲುವು ಸಾಧಿಸಿದ್ದರು. 2014ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸುಮಾರು 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಆಗ ಎಸ್.‌ ಬಂಗಾರಪ್ಪ ಅವರ ಪುತ್ರಿ, ನಟ ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರು ಕೂಡ ಸ್ಪರ್ಧಿಸಿ, ಮೂರನೇ ಸ್ಥಾನ ಪಡೆದಿದ್ದರು. ಈಗ ಮತ್ತೆ ಗೀತಾ ಶಿವರಾಜ್‌ ಕುಮಾರ್‌ ಅವರು ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ: Bidar Lok Sabha Constituency: ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಹಳೇ ಬೇರು Vs ಹೊಸ ಚಿಗುರು; ಖೂಬಾ, ಖಂಡ್ರೆ ಕದನದಲ್ಲಿ ಜಯ ಯಾರಿಗೆ?

Continue Reading

ಪ್ರಮುಖ ಸುದ್ದಿ

MLC Election: ಕಾಂಗ್ರೆಸ್‌ನ 7, ಬಿಜೆಪಿಯ 3, ಜೆಡಿಎಸ್‌ನ ಒಬ್ಬ ಅಭ್ಯರ್ಥಿಯಿಂದ ಮೇಲ್ಮನೆಗೆ ನಾಮಪತ್ರ ಸಲ್ಲಿಕೆ

MLC Election: ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯಲಿರುವ 11 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಸೋಮವಾರ (ಜೂ. 3) ಕೊನೆಯ ದಿನವಾಗಿತ್ತು. ಮೂರೂ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

VISTARANEWS.COM


on

mlc election nomination
Koo

ಬೆಂಗಳೂರು: ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ (MLC Election) ನಾಮಪತ್ರ (nomination) ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಮೂರೂ ಪಕ್ಷಗಳ ಎಲ್ಲ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನ (Congress) 7, ಬಿಜೆಪಿಯ (BJP) 3, ಜೆಡಿಎಸ್‌ನ (JDS) ಒಬ್ಬ ಅಭ್ಯರ್ಥಿಯಿಂದ ಮೇಲ್ಮನೆಗೆ (legislative council) ನಾಮಪತ್ರ ಸಲ್ಲಿಕೆಯಾಯಿತು.

ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯಲಿರುವ 11 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಸೋಮವಾರ (ಜೂ. 3) ಕೊನೆಯ ದಿನವಾಗಿತ್ತು. ಹನ್ನೊಂದು ಸ್ಥಾನಗಳ ಪೈಕಿ ಕಾಂಗ್ರೆಸ್ 7, ಬಿಜೆಪಿ 3 ಮತ್ತು ಜೆಡಿಎಸ್ 1 ಸ್ಥಾನವನ್ನು ಗೆಲ್ಲುವ ಅವಕಾಶವಿದೆ. ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಜೂನ್ 13ಕ್ಕೆ ಮತದಾನ ನಿಗದಿಯಾಗಿದ್ದು, ಅಂದೇ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. ಹೆಚ್ಚುವರಿ ಅಭ್ಯರ್ಥಿಗಳು ಕಣದಲ್ಲಿ ಇಲ್ಲದ ಹಿನ್ನೆಲೆಯಲ್ಲಿ, ಚುನಾವಣೆ ಇಲ್ಲದೆ ಅಭ್ಯರ್ಥಿಗಳ ಅವಿರೋಧ ಆಯ್ಕೆ ಆಗುವ ಸಂಭವ ಇದೆ.

ಇಂದು ಕಾಂಗ್ರೆಸ್‌ 7 ಅಭ್ಯರ್ಥಿಗಳಾದ ಯತೀಂದ್ರ ಸಿದ್ದರಾಮಯ್ಯ, ಎನ್.ಎಸ್ ಬೋಸರಾಜು, ವಸಂತ್ ಕುಮಾರ್, ಗೋವಿಂದ ರಾಜು, ಐವಾನ್ ಡಿಸೋಜಾ, ಬಿಲ್ಕಿಸ್ ಬಾನು ಹಾಗೂ ಜಗದೇವ್ ಗುತ್ತೆದಾರ್ ಅವರು ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಬಿಜೆಒಇ ಅಭ್ಯರ್ಥಿಗಳಾದ ಸಿ.ಟಿ ರವಿ, ಎನ್ ರವಿಕುಮಾರ್ ಹಾಗೂ ಎಂ.ಜಿ ಮುಳೆ ಕೂಡ ವಿಧಾನ ಸಭೆ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.‌ ಅಶೋಕ್, ಮಾಜಿ ಸಿಎಂ ಸದಾನಂದಗೌಡ, ಸುನೀಲ್ ಕುಮಾರ್ ಮುಂತಾದವರು ಸಾಥ್‌ ನೀಡಿದರು.

ಜೆಡಿಎಸ್‌ ಅಭ್ಯರ್ಥಿ ಜವರಾಯಿಗೌಡ ಕೂಡ ಇಂದೇ ನಾಮಪತ್ರ ನೀಡಿದರು. ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರ ಜೊತೆಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, “ಬಿಜೆಪಿಯಿಂದ ನಮ್ಮ ಮೂರು ಜನ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆಗಿದೆ. ವಿಜಯೇಂದ್ರ, ಸದಾನಂದಗೌಡ ಎಲ್ಲರೂ ಇದ್ದಾರೆ. ಪಕ್ಷದಲ್ಲಿ ದುಡಿದ ಕಾರ್ಯಕರ್ತರಿಗೆ ರಾಜ್ಯದಿಂದ, ರಾಷ್ಟ್ರದಿಂದ ಆಯ್ಕೆಯಾಗಿದೆ. ಪಕ್ಷದಿಂದ ಇನ್ನಷ್ಟು ಗಟ್ಟಿಯಾದ ಹೋರಾಟ ಆಗಬೇಕಿದೆ. ಕಾಂಗ್ರೆಸ್ ಭಂಡ ಸರ್ಕಾರ. ಹಗರಣ ಮಾಡಿ ರಾಜಾರೋಷವಾಗಿ ಓಡಾಡ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಹೋರಾಟಕ್ಕೆ ಅಣಿಯಾಗಿದೆ. ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ನಮ್ಮ ಮೂರೂ ಅಭ್ಯರ್ಥಿಗಳನ್ನು ಗೆಲ್ಲಿಸಿ, ಬಿಜೆಪಿ ಪರ ಹೋರಾಟ ಮಾಡ್ತಾರೆ” ಎಂದರು.

ಯತೀಂದ್ರ ಸಿದ್ದರಾಮಯ್ಯ ವಿಸ್ತಾರ ನ್ಯೂಸ್‌ಗೆ ನೀಡಿದ ಹೇಳಿಕೆ: “2023ರಲ್ಲಿ ಹೈಕಮಾಂಡ್ ನನಗೆ ಕ್ಷೇತ್ರ ತ್ಯಾಗ ಮಾಡಲು ಸೂಚಿಸಿತ್ತು. ಹೀಗಾಗಿ ನಾನು ವರುಣ ಕ್ಷೇತ್ರದಲ್ಲಿ ಚುನಾವಣಾ ಕೆಲಸ ಮಾಡಿದೆ. ಹೈಕಮಾಂಡ್ ಅಂದು ಹೇಳಿದಂತೆ ನಡೆದುಕೊಂಡಿದೆ. ನಾನು ಹೈಕಮಾಂಡ್ ಗೆ ಧನ್ಯವಾದ ತಿಳಿಸುತ್ತೇನೆ. ರಾಜ್ಯದ ಜನರ ಸಮಸ್ಯೆಗಳನ್ನ ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಕೆಲಸ ಮಾಡ್ತೀನಿ” ಎಂದರು.

ಬಿ.ವೈ ವಿಜಯೇಂದ್ರ ಹೇಳಿಕೆ: “ಪಕ್ಷವು ಸಿ.ಟಿ ರವಿ, ಎನ್. ರವಿಕುಮಾರ್, ಎಂ.ಜಿ ಮುಳೆ ಅವರನ್ನು ಆಯ್ಕೆ ಮಾಡಿದೆ. ಮೂವರೂ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಇನ್ನಷ್ಟು ಧ್ವನಿ ಎತ್ತುವ ಕೆಲಸ ಮಾಡಲಿದ್ದೇವೆ. ಎಕ್ಸಿಟ್ ಪೋಲ್ ಫಲಿತಾಂಶದಿಂದ ಸಿಎಂ, ಸಚಿವರಿಗೆ ಎದೆಬಡಿತ ಜೋರಾಗಿದೆ. ವಾಲ್ಮೀಕಿ ನಿಗಮ ಹಗರಣದಲ್ಲಿ ಬಿಜೆಪಿಯಿಂದ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದೇವೆ. ಸಿಬಿಐ ತನಿಖೆ ಆಗಬೇಕು. ರಾಜ್ಯ ಸರ್ಕಾರ ಇದನ್ನು ಮುಚ್ಚಿ ಹಾಕೋ ಪ್ರಯತ್ನ ಮಾಡ್ತಿದೆ” ಎಂದರು.

ಇದನ್ನೂ ಓದಿ: MLC Election: ಮೇಲ್ಮನೆ ಚುನಾವಣೆ ಮತದಾನ ಆರಂಭ, 6 ಕ್ಷೇತ್ರಗಳಲ್ಲಿ 78 ಸ್ಪರ್ಧಿಗಳ ಹಣಾಹಣಿ

Continue Reading

ಮಳೆ

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Rain News : ಮಳೆ ಬಂತು ಎಂದರೆ ಸಾಕು ಹಾವುಗಳ ಕಾಟ (Snake Rescue) ಹೆಚ್ಚಾಗುತ್ತದೆ. ಮಳೆ ಆಶ್ರಯ ಪಡೆಯಲು ಮನೆಗಳಿಗೆ ಹಾಗೂ ಸಿಕ್ಕ ಸಿಕ್ಕಲ್ಲಿ ಹಾವುಗಳು ನುಗ್ಗಿತ್ತಿವೆ. ಸದ್ಯ ನಿನ್ನೆ ಭಾನುವಾರದ ಸುರಿದ ಮಳೆಗೆ (Karnataka rain) ನೀರಿನಲ್ಲಿ ಹರಿದು ಬಂದ ಹಾವುವೊಂದು ಬೈಕ್‌ನಲ್ಲಿ ಸೇರಿಕೊಂಡು ಆತಂಕವನ್ನುಂಟು ಮಾಡಿತ್ತು.

VISTARANEWS.COM


on

By

Snake Rescue Snakes spotted in heavy rain
Koo

ಬೆಂಗಳೂರು: ಹಾವು ಎಂದರೆ ಎಂಥ ಗಟ್ಟಿ ಮನುಷ್ಯನಿಗಾದರೂ ಒಮ್ಮೆ ಭಯವಾಗುತ್ತದೆ. ದಾರಿಯಲ್ಲಿ ಹೋಗುತ್ತಿದ್ದಾಗ ಎದುರಿಗೆ ಕಂಡರೂ ಸಾಕು ಮೈ ಪೂರಾ ಬೆವರಿಬಿಡುತ್ತದೆ. ಅದೇ ಪಕ್ಕವೇ ಬಂದರೆ? ಗಂಟಲು ಒಣಗಿಬಿಡುತ್ತದೆ. ಇಲ್ಲಾಗಿದ್ದೂ ಅದೇ ಕಥೆ. ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ (Rain News) ಅಡಗಿದ್ದ ಹಾವುಗಳೆಲ್ಲವೂ ಹೊರ ಬರುತ್ತಿವೆ. ಹೀಗೆ ಮಳೆ (Karnataka rain) ನೀರಿನಲ್ಲಿ ಹರಿದು ಬಂದ ಹಾವೊಂದು (Snake Rescue) ಬೈಕ್‌ನಲ್ಲಿ ಸೇರಿಕೊಂಡು ಅವಾಂತರವನ್ನೇ ಸೃಷ್ಟಿಸಿತ್ತು.

ನಿನ್ನೆ ಭಾನುವಾರ ಮನೆಯಿಂದ ಹೊರಟ ಬೈಕ್‌ ಸವಾರನೊಬ್ಬನಿಗೆ ಮಳೆಯು ಎದುರಾಗಿತ್ತು. ದಿಢೀರ್‌ ಸುರಿದ ಮಳೆಯಿಂದಾಗಿ ಬೈಕ್‌ ಪಾರ್ಕ್‌ ಮಾಡಿ ರಸ್ತೆ ಬದಿಯ ನಿಲ್ದಾಣದಲ್ಲಿ ನಿಂತಿದ್ದ. ಮಳೆ ಕಡಿಮೆ ಆಯ್ತಲ್ಲ, ಇನ್ನೂ ಮನೆಗೆ ಹೋಗೋಣ ಅಂತ ಬೈಕ್‌ ಹತ್ರ ಬಂದರೆ ಬೈಕಿಂದ ಹಾವೊಂದು ಎದ್ದು ಬಂದಿದೆ. ಅಬ್ಬಾ.. ಹಾವು ಕಂಡೊಡನೆ ಹೇಗಾಗಿರಬೇಡ ಆ ಸವಾರನಿಗೆ! ಉಸಿರು ನಿಂತಂತೆ ಆಗಿದೆ. ಅಷ್ಟು ಜೋರು ಮಳೆಯಿಂದ ವಾತಾವರಣ ಕೂಲ್‌ ಆಗಿದ್ದರೂ ಆ ಸವಾರನಿಗೆ ಬೆವರುವಂತಾಗಿತ್ತು.

ಭಾರಿ ಮಳೆಗೆ ಹಾವೊಂದು ನೀರಲ್ಲಿ ಹರಿದು ಬಂದು ಬೈಕ್‌ನಲ್ಲಿ ಬೆಚ್ಚಗೆ ಕುಳಿತಿತ್ತು. ಅದೇ ಭಯದಲ್ಲಿ ಸವಾರ ದಿಕ್ಕು ತೋಚದಂತಾಗಿ ಬೈಕ್‌ನಿಂದ ದೂರ ಉಳಿದಿದ್ದ. ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞ ಹಾವು ಹಿಡಿದರು. ಆ ಬಳಿಕ ಸವಾರ ನಿಟ್ಟುಸಿರು ಬಿಟ್ಟರು.

ಇದನ್ನೂ ಓದಿ: Karnataka Rain : ಸಿಡಿಲಿಗೆ ಆಕಳು ಬಲಿ; ಹಲವೆಡೆ ಮಳೆ ಅವಾಂತರಕ್ಕೆ ಜನರು ತತ್ತರ

ಮಳೆಗಾಲದಲ್ಲಿ ಶುರುವಾದ ಹಾವುಗಳ ಕಾಟ

ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವ ಹಾವುಗಳು ಜನರನ್ನು ಬೆಚ್ಚಿಬೀಳಿಸುತ್ತಿದೆ. ಚಳಿ, ಶೀತಗಾಳಿ ಜಿಟಿ ಜಿಟಿ ಮಳೆ ಶುರುವಾದರೆ ಸಾಕು ಬೆಚ್ಚಗಿರುವ ಜಾಗ ಹುಡುಕಿಕೊಂಡು ಹೊರಬರುತ್ತಿವೆ. ಶೂ ಒಳಗೆ, ಹೆಲ್ಮೆಟ್‌ , ಸ್ಕೂಟರ್‌ನಲ್ಲಿ ಹಾವುಗಳು ಪ್ರತ್ಯಕ್ಷವಾಗುತ್ತಿವೆ. ಸದ್ಯ ಬೆಂಗಳೂರು ಮಂದಿಗೆ ಹಾವುಗಳ ಕಾಟ ಶುರುವಾಗಿವೆ.

Snake Rescue

ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ, ಮಹದೇವಪುರ ಮತ್ತು ರಾಜರಾಜೇಶ್ವರಿನಗರ ವಲಯದಲ್ಲಿ ಹಾವುಗಳು ಹೆಚ್ಚು ಕಂಡು ಬರುತ್ತಿವೆ. ಭಾರಿ ಮಳೆಗೆ ಆಶ್ರಯಕ್ಕಾಗಿ ಮನೆಗಳಿಗೆ ಹಾವುಗಳು ನುಗ್ಗುತ್ತಿವೆ. ಇದು ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Karnataka Rain
ಮಳೆ13 mins ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Rishab Shetty Shivamma Yarehanchinala Official Trailer out
ಸ್ಯಾಂಡಲ್ ವುಡ್16 mins ago

Rishab Shetty: ರಿಷಬ್ ನಿರ್ಮಾಣದ ‘ಶಿವಮ್ಮ’ ಟ್ರೈಲರ್‌ ಔಟ್‌; ಜೂನ್‌ 14ಕ್ಕೆ ತೆರೆಗೆ

Mira Road Tragedy
ಕ್ರೀಡೆ21 mins ago

Mira Road Tragedy: ಸಿಕ್ಸರ್​ ಬಾರಿಸಿ ಮರು ಕ್ಷಣವೇ ಪ್ರಾಣ ಕಳೆದುಕೊಂಡ ಕ್ರಿಕೆಟಿಗ​; ದುರಂತ ವಿಡಿಯೊ ವೈರಲ್​

Shivamogga Lok Sabha Constituency
ಶಿವಮೊಗ್ಗ27 mins ago

Shivamogga Lok Sabha Constituency: ತ್ರಿಕೋನ ಕದನದ ಶಿವಮೊಗ್ಗದಲ್ಲಿ ಯಾರಿಗೆ ವಿಜಯದ ಮಾಲೆ?

Pakistan Army
ವಿದೇಶ28 mins ago

Pakistan Army: ಪಾಕಿಸ್ತಾನ ಸೇನೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೊದಲ ಮಹಿಳಾ ಬ್ರಿಗೇಡಿಯರ್ ಆಗಿ ಇತಿಹಾಸ ಬರೆದ ಡಾ. ಹೆಲೆನ್ ಮೇರಿ

Self Harming
ಕ್ರೈಂ40 mins ago

Self Harming: ಐಎಎಸ್‌ ದಂಪತಿ ಪುತ್ರಿ ಬಹುಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

mlc election nomination
ಪ್ರಮುಖ ಸುದ್ದಿ46 mins ago

MLC Election: ಕಾಂಗ್ರೆಸ್‌ನ 7, ಬಿಜೆಪಿಯ 3, ಜೆಡಿಎಸ್‌ನ ಒಬ್ಬ ಅಭ್ಯರ್ಥಿಯಿಂದ ಮೇಲ್ಮನೆಗೆ ನಾಮಪತ್ರ ಸಲ್ಲಿಕೆ

Snake Rescue Snakes spotted in heavy rain
ಮಳೆ48 mins ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Riyan Parag
ಕ್ರಿಕೆಟ್1 hour ago

Riyan Parag: ಟಿ20 ವಿಶ್ವಕಪ್​ ನೋಡಲಾರೆ ಎಂದ ‘ಹಾಟ್​ ಫೇವರಿಟ್’ ರಿಯಾನ್​ ಪರಾಗ್

Actor Chetan Ahimsa
ಪ್ರಮುಖ ಸುದ್ದಿ1 hour ago

Actor Chetan Ahimsa: ಬಿಜೆಪಿ ಸಂವಿಧಾನ ಬದಲಿಸಲ್ಲ; ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಏನೂ ಕಮ್ಮಿ ಇಲ್ಲ ಎಂದ ನಟ ಚೇತನ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ13 mins ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ48 mins ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌