ಅಪ್ಪು ಕಪ್ ಸೀಸನ್ 2: ಸ್ಯಾಂಡಲ್​ವುಡ್​ ಬ್ಯಾಡ್ಮಿಂಟನ್ ಲೀಗ್ ಲೋಗೋ ಅನಾವರಣ ಮಾಡಿದ ಪಡುಕೋಣೆ - Vistara News

ಕರ್ನಾಟಕ

ಅಪ್ಪು ಕಪ್ ಸೀಸನ್ 2: ಸ್ಯಾಂಡಲ್​ವುಡ್​ ಬ್ಯಾಡ್ಮಿಂಟನ್ ಲೀಗ್ ಲೋಗೋ ಅನಾವರಣ ಮಾಡಿದ ಪಡುಕೋಣೆ

ಪುನೀತ್ ರಾಜ್​ಕುಮಾರ್(Puneeth Rajkumar) ನೆನಪಿನಲ್ಲಿ ಆಯೋಜಿಸಲಾಗಿರುವ ‘ಅಪ್ಪು ಕಪ್ ಸೀಸನ್-2(Appu Cup Season 2) ಸ್ಯಾಂಡಲ್​​ವುಡ್(sandalwood) ಬ್ಯಾಡ್ಮಿಂಟನ್ ಟೂರ್ನಿಯ ಲೋಗೋ ಅನಾವರಣಗೊಂಡಿದೆ.

VISTARANEWS.COM


on

appu cup seson 2
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪವರ್​​ಸ್ಟಾರ್ ಪುನೀತ್ ರಾಜ್​ಕುಮಾರ್(Puneeth Rajkumar) ನೆನಪಿನಲ್ಲಿ ಆಯೋಜಿಸಲಾಗಿರುವ ‘ಅಪ್ಪು ಕಪ್ ಸೀಸನ್-2(Appu Cup Season 2) ಸ್ಯಾಂಡಲ್​​ವುಡ್(sandalwood) ಬ್ಯಾಡ್ಮಿಂಟನ್ ಲೀಗ್’ ಲೋಗೋವನ್ನು ಖ್ಯಾತ ಬ್ಯಾಡ್ಮಿಂಟನ್(badminton) ಆಟಗಾರ ಪ್ರಕಾಶ್ ಪಡುಕೋಣೆ(prakash padukone) ಇಂದು(ಬುಧವಾರ) ಅನಾವರಣಗೊಳಿಸಿದರು. ನಗರದಲ್ಲಿರುವ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಭಾರತೀಯ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಲೋಗೋ ಅನಾವರಣ ಮಾಡಿ ಆಟಗಾರರಿಗೆ ಶುಭಾಶಯ ಕೋರಿದರು.

ಪುನೀತ್ ರಾಜ್​ಕುಮಾರ್ ನನಗೆ ವೈಯಕ್ತಿಕವಾಗಿ ತುಂಬಾ ಫ್ರೆಂಡ್ಲಿ ಆಗಿದ್ದವರು. ಐದಾರು ವರ್ಷಗಳ ಹಿಂದೆ ನಾವೊಂದು ಇವೆಂಟ್ ಮಾಡಿದ್ದೆವು. ಒಂದೇ ಒಂದು ಫೋನ್ ಕಾಲ್​ಗೆ ಬಂದು ನಮ್ಮ ಜತೆ ಮ್ಯಾಚ್ ಆಡಿದ್ದರು. ಚಿತ್ರರಂಗದಲ್ಲಿ ತುಂಬಾ ಜನ ಬ್ಯಾಡ್ಮಿಂಟನ್ ಆಡುತ್ತಾರೆ ಎನ್ನುವುದನ್ನು ಕೇಳಿ ಖುಷಿಯಾಗಿದೆ. ಅಪ್ಪು ಕಪ್ ಸ್ಯಾಂಡಲ್​ವುಡ್​ ಬ್ಯಾಡ್ಮಿಂಟನ್ ಹೀಗೇ ಮುಂದುವರಿಯಲಿ ಎಂದು ಪ್ರಕಾಶ್ ಪಡುಕೋಣೆ ಹಾರೈಸಿದರು.

ಇದನ್ನೂ ಓದಿ Puneeth Rajkumar: ಎತ್ತರದಲ್ಲಿದ್ದೂ ಹತ್ತಿರವಿದ್ದ ಅಭಿಜಾತ ಕಲಾವಿದ ಪುನೀತ್ ರಾಜಕುಮಾರ್

ಕನ್ನಡ ಚಿತ್ರಕಲಾವಿದರು, ತಂತ್ರಜ್ಞರು ಹಾಗೂ ಮಾಧ್ಯಮದವರು ಆಡಲಿರುವ ಈ ಪಂದ್ಯಾವಳಿ ಆಗಸ್ಟ್ ತಿಂಗಳಾಂತ್ಯದಲ್ಲಿ ಶುರುವಾಗಲಿದೆ. ಕಳೆದ ಬಾರಿ ಒಟ್ಟು ಎಂಟು ತಂಡಗಳು ಭಾಗಿಯಾಗಿದ್ದವು. ಪ್ರಿಯಾಂಕಾ ಉಪೇಂದ್ರ, ದಿಗಂತ್, ಸೃಜನ್ ಲೋಕೇಶ್, ವಸಿಷ್ಠ ಸಿಂಹ, ರಾಗಿಣಿ, ಕವಿತಾ ಲಂಕೇಶ್, ಶ್ವೇತಾ ಶ್ರೀವಾಸ್ತವ್, ಮಾಸ್ಟರ್ ಆನಂದ್ ತಂಡದ ಪೈಕಿ ಸೃಜನ್ ಲೋಕೇಶ್ ನೇತೃತ್ವದ ರಾಜಕುಮಾರ್ ಕಿಂಗ್ಸ್ ಕಳೆದ ಬಾರಿ ಗೆಲುವು ಸಾಧಿಸಿತ್ತು. ಈ ಬಾರಿ ಮತ್ತಷ್ಟು ತಾರೆಯರು ಪಾಲ್ಗೊಳ್ಳುವ ಮೂಲಕ ಅಪ್ಪು ಕಪ್ ಸೀಸನ್-2 ಸ್ಯಾಂಡಲ್​ವುಡ್​ ಬ್ಯಾಡ್ಮಿಂಟನ್ ಲೀಗ್​ ಮೆರುಗು ಹೆಚ್ಚಿಸಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Bengaluru News: ಜೈನ್‌ ಶಾಂತಮಣಿ ಕಲಾ ಕೇಂದ್ರದ ಕಲ್ಲಿನ ಕೆತ್ತನೆ ಮತ್ತು ಚಿತ್ರಕಲಾ ಶಿಬಿರ “ಪಾರ್ಶ್ವ ಪಡಾಪ್” ಗೆ ಸಂಭ್ರಮದ ತೆರೆ

Bengaluru News: ಭಾರತೀಯ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಒಂದು ವಾರದ ಸಮಾವೇಶ “ಪಾರ್ಶ್ವ ಪಡಾಪ್” ಶನಿವಾರ ಸಂಭ್ರಮದಿಂದ ತೆರೆ ಕಂಡಿತು. ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ ಉತ್ಸಾಹಿ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಅದ್ಭುತ ಶಿಲ್ಪಕಲೆ ಹಾಗೂ ಚಿತ್ರಕಲೆಗಳು ನೋಡುಗರ ಗಮನ ಸೆಳೆದವು.

VISTARANEWS.COM


on

Jain Shantamani Kala Kendra Stone Carving and Painting Camp in Bengaluru
Koo

ಬೆಂಗಳೂರು: ಭಾರತದಾದ್ಯಂತ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಒಂದು ವಾರದ ಸಮಾವೇಶ “ಪಾರ್ಶ್ವ ಪಡಾಪ್” ಶನಿವಾರ ಸಂಭ್ರಮದಿಂದ ತೆರೆ ಕಂಡಿತು. ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ ಉತ್ಸಾಹಿ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಅದ್ಭುತ ಶಿಲ್ಪಕಲೆ ಹಾಗೂ ಚಿತ್ರಕಲೆಗಳು ನೋಡುಗರ ಗಮನ (Bengaluru News) ಸೆಳೆದವು.

ಜೈನ್ ವಿವಿಯ (ಡೀಮ್ಡ್-ಟು-ಯುನಿವರ್ಸಿಟಿ) ಶಾಂತಮಣಿ ಕಲಾ ಕೇಂದ್ರ ಮತ್ತು ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ (ಜೆಐಆರ್‌ಎಸ್) ಸಹಯೋಗದಲ್ಲಿ ಆಯೋಜಿಸಿದ್ದ ಕಲಾ ಪ್ರತಿಭಾನ್ವೇಷಣೆ ಶಿಬಿರದಲ್ಲಿ ವಿವಿಧ ಕಲಾ ಪ್ರಕಾರಗಳ ಚಟುವಟಿಕೆಗಳು ಆಯೋಜನೆಗೊಂಡಿದ್ದವು. ಇವುಗಳಲ್ಲಿ ಬೆಂಗಳೂರಿನ ಜೈನ್ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆದ ಶಿಲ್ಪಕಲಾ ಸ್ಪರ್ಧೆ ಮತ್ತು ರಾಷ್ಟ್ರೀಯ ಚಿತ್ರಕಲಾ ಶಿಬಿರವೂ ಒಳಗೊಂಡಿದ್ದವು.

ಕಲ್ಲಿನ ಕೆತ್ತನೆ, ಶಿಲ್ಪಕಲೆ ಮತ್ತು ಭಾವನಾತ್ಮಕ ಚಿತ್ರಕಲೆಯ ಮೇಲೆ ಕೇಂದ್ರೀಕರಿಸಿದ ಈ ಕಾರ್ಯಕ್ರಮವು ವಿಶಿಷ್ಟ ವೇದಿಕೆಯೊಂದರ ಮೂಲಕ ಭಾರತೀಯ ಕಲಾವಿದರಲ್ಲಿ ಕಲಾತ್ಮಕ ಬುದ್ದಿಮತ್ತೆ ಮತ್ತು ಸೃಜನಶೀಲತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: VSK Media Awards 2024: ಬೆಂಗಳೂರಿನಲ್ಲಿ ಜೂ.30 ರಂದು “ವಿಎಸ್‌ಕೆ ಮಾಧ್ಯಮ ಪ್ರಶಸ್ತಿ” ಪ್ರದಾನ

ಈ ಶಿಬಿರವು ದೇಶದ ನಾನಾ ರಾಜ್ಯಗಳಿಂದ ಬಂದ ಉತ್ಸಾಹಿ ಶಿಲ್ಪಿಗಳು, ವರ್ಣಚಿತ್ರಕಾರರ ಸಮಗ್ರ, ಸಾಂಸ್ಕೃತಿಕ ಮತ್ತು ಶ್ರೀಮಂತ ಕಲಾತ್ಮಕತೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿತು. ಕಲಾವಿದರು, ಕಲಾ ಉತ್ಸಾಹಿಗಳು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ವಿವಿಧ ವಯೋಮಾನದ ಉತ್ಸಾಹಿಗಳು, ವಿಶೇಷಚೇತನ ಕಲಾವಿದರೊಬ್ಬರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಶಿಬಿರದಲ್ಲಿ ಕಲಾವಿದರು ಪ್ರಕೃತಿ ಮತ್ತು ಮಾನವೀಯತೆಯ ಅಂಶಗಳನ್ನು ಮುಕ್ತವಾಗಿ ಬೆಸೆದರು. ಇಂದಿನ ಜಗತ್ತಿಗೆ ಅಗತ್ಯವಿರುವ ಸಂದೇಶಗಳನ್ನು ಸಾರಿದರು. ಎಲ್ಲರೂ ಒಟ್ಟಾಗಿ ಭಾಗವಹಿಸಿದ ಈ ಪ್ರದರ್ಶನದಲ್ಲಿ ಕಲಾತ್ಮಕತೆಯ ವೈವಿಧ್ಯತೆ ಮತ್ತು ಆಳವನ್ನು ಅನುಭವಿಸಿದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶಿಲ್ಪಿಗಳು, ವರ್ಣಚಿತ್ರಕಾರರನ್ನು ಗೌರವಿಸಿ, ಪ್ರಮಾಣಪತ್ರಗಳು ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು ಅಲ್ಲದೇ ಜೈನ್ ಗ್ರೂಪ್ ವತಿಯಿಂದ ನಗದು ಬಹುಮಾನಗಳನ್ನು ಸಹ ವಿತರಣೆ ಮಾಡಲಾಯಿತು.

ಇದನ್ನೂ ಓದಿ: Kannada New Movie: “ಯೂಟ್ಯೂಬ್ ಟ್ರೆಂಡಿಂಗ್” ಪಟ್ಟಿಯ 3ನೇ ಸ್ಥಾನದಲ್ಲಿ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು!

ಲೋಹದ ಲೇಬಲ್‌ಗಳೊಂದಿಗೆ ಕಲಾವಿದರ ಹೆಸರನ್ನು ಹೊಂದಿರುವ ಕಲ್ಲಿನ ಕೆತ್ತನೆಯ ಶಿಲ್ಪಗಳು ನೋಡುಗರನ್ನು ಆಕರ್ಷಿಸಿದವು. ಅದ್ಭುತ ಶಿಲ್ಪಕಲೆ ಹಾಗೂ ಚಿತ್ರಕಲೆಗಳು ವೀಕ್ಷಕರನ್ನು ಗಮನ ಸೆಳೆದವು.

Continue Reading

ಕ್ರೈಂ

Self Harming: ಕೆರೆಗೆ ಹಾರಿ ಆತ್ಮಹತ್ಯೆ ಯತ್ನ; ಇಬ್ಬರು ಮಕ್ಕಳ ಸಾವು, ತಾಯಿ ಪಾರು

Self Harming: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಪಂ ವ್ಯಾಪ್ತಿಯ ಬೆಳ್ಳಾಲ ಸಮೀಪದ ನಂದ್ರೋಳ್ಳಿ ಎಂಬಲ್ಲಿ ಘಟನೆ ನಡೆದಿದೆ. ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದರೆ, ತಾಯಿಯನ್ನು ರಕ್ಷಣೆ ಮಾಡಲಾಗಿದೆ.

VISTARANEWS.COM


on

Self Harming
Koo

ಉಡುಪಿ: ಇಬ್ಬರು ಮಕ್ಕಳೊಂದಿಗೆ ತಾಯಿ ಕೆರೆಗೆ ಹಾರಿರುವುದು (Self Harming) ಕುಂದಾಪುರ ತಾಲೂಕಿನ ಕೆರಾಡಿ ಗ್ರಾಪಂ ವ್ಯಾಪ್ತಿಯ ಬೆಳ್ಳಾಲ ಸಮೀಪದ ನಂದ್ರೋಳ್ಳಿ ಎಂಬಲ್ಲಿ ನಡೆದಿದ್ದು, ಘಟನೆಯಲ್ಲಿ ಮಕ್ಕಳು ಮೃತಪಟ್ಟಿದ್ದರೆ, ತಾಯಿಯನ್ನು ರಕ್ಷಣೆ ಮಾಡಲಾಗಿದೆ.

ಧನರಾಜ್ (13) ಮತ್ತು ಛಾಯ (7) ಮೃತಪಟ್ಟ ಮಕ್ಕಳು. ತಾಯಿ ಶೀಲಾ ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ | Viral Video: ಮೊಬೈಲ್ ಕದ್ದ ಕಳ್ಳನಿಗೆ ದೇವರು ಕೊಟ್ಟ ಶಿಕ್ಷೆ ಮಾತ್ರ ಘೋರ! ವಿಡಿಯೊ ನೋಡಿ

ಮುಧೋಳ ಬಳಿ ಶಾಲಾ ಬಸ್‌ ಹರಿದು 4 ವರ್ಷದ ಬಾಲಕ ಸಾವು

Road Accident

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಬರಗಿ ಕ್ರಾಸ್ ಬಳಿ ಶಾಲಾ ವಾಹನ ಹರಿದು 4 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಶಾಲೆಗೆ ಹೋಗಬೇಕಿದ್ದ ಪುಟ್ಟ ಕಂದಮ್ಮ, ಶಾಲಾ ಬಸ್‌ ಚಕ್ರಕ್ಕೆ ಸಿಲುಕಿ ದುರಂತ ಸಾವು ಕಂಡಿದೆ. ಸಂಗಪ್ಪ ಹೊಸೂರ್ ಎಂಬುವವರ ಪುತ್ರ ಅಭಿನಂದನ್ ಹೊಸೂರ್ (4) ಮೃತ ಬಾಲಕ.

ಶಾಲಾ ವಾಹನ ಹರಿದು ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದ್ದರಿಂದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸರ್ಕಾರಿ ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್‌ಗೆ ಗುದ್ದಿ ಹಳ್ಳಕ್ಕೆ ಜಿಗಿದ ಕೆಎಸ್‌ಆರ್‌ಟಿಸಿ

Road Accident

ಮಂಡ್ಯ: ಶನಿವಾರ ಒಂದೇ ದಿನ ಹಲವೆಡೆ ರಸ್ತೆ ಅಪಘಾತಗಳು (Road Accident) ಸಂಭವಿಸಿದೆ. ಮಂಡ್ಯದಲ್ಲಿ ಕೆಎಸ್‌ಆರ್‌ಟಿಸಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಡಿವೈಡರ್ ದಾಟಿ ಸರ್ವಿಸ್ ರಸ್ತೆಯ ಹಳ್ಳಕ್ಕೆ ಉರುಳಿದ ಘಟನೆ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ನಡೆದಿದೆ.

ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದ್ದು, 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್‌ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಬಸ್‌ ವೇಗವಾಗಿ ಬಂದು ನೋಡನೋಡುತ್ತಿದ್ದಂತೆ ರಸ್ತೆ ಮಧ್ಯದಲ್ಲಿದ್ದ ಡಿವೈಡರ್ ಮೇಲೆ ಹತ್ತಿದೆ. ಬಳಿಕ ಸರ್ವಿಸ್ ರಸ್ತೆಗೆ ಬಂದು ಹಳ್ಳಕ್ಕೆ ಬಿದ್ದಿದೆ. ಬಿದ್ದ ರಭಸಕ್ಕೆ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ.

ಗಂಭೀರವಾಗಿ ಗಾಯಗೊಂಡವರನ್ನು ಮಂಡ್ಯ ಮೆಡಿಕಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಣ್ಣ-ಪುಟ್ಟ ಗಾಯಗೊಂಡವರು ಬೇರೆ ಬಸ್‌ ಮುಖಾಂತರ ತೆರಳಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಹಂಸ-ಐರಾವತ ಬಸ್ ಡಿಕ್ಕಿ; ಅಪಘಾತ ತಪ್ಪಿಸಲು ಹೋಗಿ ಚರಂಡಿಗೆ ಬಿದ್ದ ಟೆಂಪೋ

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿಘಾಟ್ ಶನಿವಾರ ಸರಣಿ ಅಪಘಾತ ನಡೆದಿದೆ. ರಾಜಹಂಸ, ಐರಾವತ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, ಈ ವೇಳೆ ಅಪಘಾತ ತಪ್ಪಿಸಲು ಹೋಗಿ ಟೆಂಪೋ ಚರಂಡಿಗೆ ಬಿದ್ದಿದೆ. ಹೀಗಾಗಿ ಸಣ್ಣಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರಾಗಿದ್ದಾರೆ. ಅಪಘಾತದಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಬಸ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.

Continue Reading

ಕ್ರೈಂ

Assault Case: ಸಾಲ ವಾಪಸ್‌ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತ

Assault Case: ಹಲ್ಲೆಗೊಳಗಾದ ಮಹಿಳೆ ಧರ್ಮಸ್ಥಳದ ರೂಪಾ ಎಂಬವರು. ಇವರು ಉಜಿರೆಯಲ್ಲಿ ಬಟ್ಟೆ ಅಂಗಡಿ ಹೊಂದಿದ್ದಾರೆ. ಇವರು ನವೀನ್‌ಗೆ 7 ಲಕ್ಷ ರೂಪಾಯಿ ಸಾಲ ನೀಡಿದ್ದರು. ಅದನ್ನು ವಾಪಸ್ ಕೇಳಿದ್ದಕ್ಕೆ ನವೀನ್‌ ಹಲ್ಲೆ ನಡೆಸಿದ್ದಾನೆ. ಕಳೆದ ಎರಡು ದಿನದ ಹಿಂದೆ ಉಜಿರೆಯಲ್ಲಿರುವ ಮಹಿಳೆಯ ಬಟ್ಟೆ ಅಂಗಡಿಯಲ್ಲಿ ಘಟನೆ ನಡೆದಿದೆ.

VISTARANEWS.COM


on

assault case bjp worker
Koo

ಮಂಗಳೂರು: ಬಿಜೆಪಿ ಕಾರ್ಯಕರ್ತನೊಬ್ಬ (BJP Worker) ಬಟ್ಟೆ ಅಂಗಡಿಗೆ ನುಗ್ಗಿ ವಿವಾಹಿತ ಮಹಿಳೆ (Married Woman) ಮೇಲೆ ಮಾರಣಾಂತಿಕ ಹಲ್ಲೆ (Assault Case) ನಡೆಸಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಕೃತ್ಯ ನಡೆದಿದೆ. ಬಿಜೆಪಿ ಕಾರ್ಯಕರ್ತ, ಹೂವಿನ ವ್ಯಾಪಾರಿ ನವೀನ್ ಕನ್ಯಾಡಿ ಎಂಬಾತನಿಂದ ಈ ಕೃತ್ಯ ನಡೆದಿದೆ.

ಹಲ್ಲೆಗೊಳಗಾದ ಮಹಿಳೆ ಧರ್ಮಸ್ಥಳದ ರೂಪಾ ಎಂಬವರು. ಇವರು ಉಜಿರೆಯಲ್ಲಿ ಬಟ್ಟೆ ಅಂಗಡಿ ಹೊಂದಿದ್ದಾರೆ. ಇವರು ನವೀನ್‌ಗೆ 7 ಲಕ್ಷ ರೂಪಾಯಿ ಸಾಲ ನೀಡಿದ್ದರು. ಅದನ್ನು ವಾಪಸ್ ಕೇಳಿದ್ದಕ್ಕೆ ನವೀನ್‌ ಹಲ್ಲೆ ನಡೆಸಿದ್ದಾನೆ. ಕಳೆದ ಎರಡು ದಿನದ ಹಿಂದೆ ಉಜಿರೆಯಲ್ಲಿರುವ ಮಹಿಳೆಯ ಬಟ್ಟೆ ಅಂಗಡಿಯಲ್ಲಿ ಘಟನೆ ನಡೆದಿದೆ.

ಮಹಿಳೆಯ ಕಪಾಳಕ್ಕೆ ಹೊಡೆಯುವುದು ಸೇರಿ ಇತರೆಡೆ ಮಾರಣಾಂತಿಕ ಹಲ್ಲೆಯನ್ನು ನವೀನ್ ಕನ್ಯಾಡಿ ಮಾಡಿದ್ದಾನೆ. ಹಲ್ಲೆಗೊಳಗಾದ ಮಹಿಳೆ ಉಜಿರೆಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡುವ ದೃಶ್ಯ ಅಂಗಡಿಯ ಸಿಸಿಕ್ಯಾಮರದಲ್ಲಿ ಸೆರೆಯಾಗಿದೆ. ಬೆಳ್ತಂಗಡಿ ಪೊಲೀಸರಿಂದ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

ಮೊಬೈಲ್ ಕದ್ದ ಕಳ್ಳನಿಗೆ ದೇವರು ಕೊಟ್ಟ ಶಿಕ್ಷೆ ಮಾತ್ರ ಘೋರ!

ಬೆಂಗಳೂರು: ಇಂದು ಮಾಡಿದ ತಪ್ಪಿನ ಶಿಕ್ಷೆ ಮುಂದಿನ ಜನ್ಮದಲ್ಲಿ ಸಿಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಅದು ಸುಳ್ಳು, ಇಂದು ಮಾಡಿದ ತಪ್ಪಿಗೆ ಶಿಕ್ಷೆ ಇದೇ ಕಾಲದಲ್ಲಿ ಸಿಗುತ್ತದೆ. ಆದರೆ ಕೆಲವರಿಗೆ ತಡವಾಗಿ ಸಿಕ್ಕರೆ, ಕೆಲವರಿಗೆ ಅಂದೇ ಸಿಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕಳ್ಳನೊಬ್ಬ ಮಹಿಳೆಯೊಬ್ಬರ ಮೊಬೈಲ್ ಕದ್ದು ಓಡುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದು ಸಾವನಪ್ಪಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video )ಆಗಿದೆ.

ಈ ವಿಡಿಯೊವನ್ನು @Desam_officialz ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು ‘ಇದು ಭೂಮಿಯ ಮೇಲೆ ದೇವರ ತಕ್ಷಣದ ತೀರ್ಪು. ದೇವರು ಕರುಣೆ ತೋರಲಿ’ ಎಂದು ಬರೆದಿದ್ದಾರೆ. ಈ ವಿಡಿಯೊದಲ್ಲಿ ಕಳ್ಳ ಮಹಿಳೆಯಿಂದ ಕದ್ದ ಮೊಬೈಲ್ ಪೋನ್ ಅನ್ನು ತೆಗೆದುಕೊಂಡು ತಪ್ಪಿಸಿಕೊಳ್ಳಲು ಜೋರಾಗಿ ಓಡುತ್ತಾ ರಸ್ತೆ ದಾಟುತ್ತಿದ್ದಾಗ ಎದುರಿಗೆ ವೇಗವಾಗಿ ಬಂದ ಕಾರೊಂದು ಆತನಿಗೆ ಡಿಕ್ಕಿ ಹೊಡೆದಿದೆ.

ಇದರ ಪರಿಣಾಮ ಆತ ಹಾರಿ ಹೋಗಿ ತುಂಬಾ ದೂರ ರಸ್ತೆಯ ಮೇಲೆ ಬಿದ್ದಿದ್ದಾನೆ. ಆದರೆ ಕಾರು ತನ್ನ ವೇಗವನ್ನು ನಿಯಂತ್ರಿಸಲಾಗದೆ ಕೆಳಗೆ ಬಿದ್ದ ಆತನ ಮೆಲೆ ಹರಿದು ನಂತರ ನಿಂತಿದೆ. ಇದರಿಂದ ಆತ ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಈ ಘಟನೆ ನಡೆದ ಸ್ಥಳ ಮತ್ತು ದಿನಾಂಕ ತಿಳಿದುಬಂದಿಲ್ಲ. ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದು ದೇವರ ತೀರ್ಪು ಎಂದು ಹೇಳಿದರೆ. ಕೆಲವರು ‘ಬಡವರ ವಿಷಯದಲ್ಲಿ ದೇವರು ತಕ್ಷಣ ತೀರ್ಪುಗಳನ್ನು ನೀಡುತ್ತಾನೆ? ಆದರೆ ಶ್ರೀಮಂತರು ಮತ್ತು ಶಕ್ತಿವಂತರಿಗೆ ಏಕೆ ದೇವರು ತಕ್ಷಣದ ತೀರ್ಪುಗಳನ್ನು ನೀಡುತ್ತಿಲ್ಲ? ಪ್ರತಿದಿನ ಇಂತಹ ಲಕ್ಷಾಂತರ ದರೋಡೆಗಳು, ರಸ್ತೆಗಳಲ್ಲಿ ಕೊಲೆಗಳು ನಡೆಯುತ್ತಿವೆ, ಯಾವುದೇ ತಕ್ಷಣದ ತೀರ್ಪುಗಳನ್ನು ನೋಡಿಲ್ಲ, ಏಕೆ? ಎಂದು ಪ್ರಶ್ನಿಸಿದ್ದಾರೆ.

ಸೆಪ್ಟೆಂಬರ್ 2023 ರಲ್ಲಿ ಗುಜರಾತ್‌ ನಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಗುಜರಾತ್‌ನ ಮೊದಸಾದಲ್ಲಿ ಶೋರೂಂನಿಂದ ಕದಿಯಲು ಪ್ರಯತ್ನಿಸುತ್ತಿದ್ದ ಕಳ್ಳನಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಈ ಘಟನೆಯು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ: ನಡುರಸ್ತೆಯಲ್ಲಿ ಬಟ್ಟೆ ಕಳಚಿ ಬೆತ್ತಲೆಯಾಗಿ ನಡೆದ ಮಹಿಳೆ; ಪುರುಷರು ಕಕ್ಕಾಬಿಕ್ಕಿ!

Continue Reading

ಕರ್ನಾಟಕ

Dengue Fever: ರಾಯಚೂರಲ್ಲಿ 6 ವರ್ಷದ ಮಗುವಿಗೆ ಡೆಂಗ್ಯೂ; ದಾವಣಗೆರೆ ಜಿಲ್ಲೆಯಲ್ಲಿ 142 ಪ್ರಕರಣಗಳು ಪತ್ತೆ!

Dengue Fever: ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಕಣ್ಣೂರು ಗ್ರಾಮದ 6 ವರ್ಷದ ಮಗುವಿಗೆ ಡೆಂಗ್ಯೂ ದೃಢಪಟ್ಟಿದೆ. ಸದ್ಯ ಬೆಂಗಳೂರಿನ ಜೆಮ್ಸ್ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.

VISTARANEWS.COM


on

Dengue Fever
Koo

ರಾಯಚೂರು: ಜಿಲ್ಲೆಯಲ್ಲಿ 6 ವರ್ಷದ ಮಗುವಿನಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಸಿಂಧನೂರು ತಾಲೂಕಿನ ಕಣ್ಣೂರು ಗ್ರಾಮದ 6 ವರ್ಷದ ಸಾಕ್ಷಿ ಎಂಬ ಮಗುವಿನಲ್ಲಿ ಡೆಂಗ್ಯೂ ಜ್ವರದ (Dengue Fever) ಲಕ್ಷಣ ಕಂಡುಬಂದಿದ್ದು, ಮಗುವಿನ ರಕ್ತದ ಮಾದರಿ ಸಂಗ್ರಹ ಮಾಡಿದ್ದು, ಸದ್ಯ ಬೆಂಗಳೂರಿನ ಜೆಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಗುವಿಗೆ ಡೆಂಗ್ಯೂ ದೃಢವಾದ ಹಿನ್ನೆಲೆಯಲ್ಲಿ ಕಣ್ಣೂರು ಗ್ರಾಮಕ್ಕೆ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ 36 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಈವರೆಗೂ ಜಿಲ್ಲೆಯಲ್ಲಿ 1060 ಮಂದಿಯ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ 142 ಡೆಂಗ್ಯೂ ಪ್ರಕರಣಗಳು ಪತ್ತೆ

ದಾವಣಗೆರೆ: ಜಿಲ್ಲೆಯಲ್ಲಿ ದಿನೇದಿನೆ ಡೆಂಗ್ಯೂ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ. ಜಿಲ್ಲೆಯಲ್ಲಿ 1904 ಪ್ರಕರಣಗಳು ಗುರುತಿಸಲಾಗಿತ್ತು. ಇದೀಗ 1380 ಮಂದಿಗೆ ಟೆಸ್ಟ್ ಮಾಡಿದಾಗ ಮತ್ತೆ 142 ಮಂದಿಗೆ ಡೆಂಗ್ಯೂ ದೃಢಪಟ್ಟಿದೆ. ರೋಗಿಗಳಿಗೆ ಜಿಲ್ಲೆ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈವರೆಗೆ ಯಾವುದೇ ಸಾವು ದಾಖಲಾಗಿಲ್ಲ.

ಇದನ್ನೂ ಓದಿ | International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

ಇನ್ನು ಕಳೆದ ಬಾರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಅಧಿಕವಾಗಿವೆ. ಡೆಂಗ್ಯೂ ಪ್ರಕರಣ ಪತ್ತೆಗೆ ಪ್ರಾಥಮಿಕ, ತಾಲೂಕು, ಜಿಲ್ಲಾ ಅರೋಗ್ಯ ಕೇಂದ್ರಗಳ ಮಟ್ಟದಲ್ಲಿ ತಂಡ ರಚನೆ ಮಾಡಲಾಗಿದ್ದು, ಮನೆ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಲಾರ್ವಾ ಸಮೀಕ್ಷೆ ಮಾಡಿ ಶುಚಿತ್ವದ ಕುರಿತು ತಿಳುವಳಿಕೆ ನೀಡುತ್ತಿದ್ದಾರೆ.

ಡೆಂಗ್ಯೂ ಮಹಾಮಾರಿಗೆ ಚಿಕ್ಕಮಗಳೂರಿನಲ್ಲಿ ಬಾಲಕಿ ಬಲಿ; ಈವರೆಗೆ ಐವರು ಸಾವು

Dengue Fever

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಡೆಂಗ್ಯೂ ಮಹಾಮಾರಿಗೆ (Dengue Fever) ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಸಾನಿಯಾ (6) ಮೃತ ದುರ್ದೈವಿ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಘಟನೆ ನಡೆದಿದೆ.

ಡೆಂಗ್ಯೂ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾನಿಯಾಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಾಳೆ. ರಾಜ್ಯ ಸರ್ಕಾರದ ವಿರುದ್ಧ ಮೃತ ಬಾಲಕಿ ತಂದೆ ಆಸಿಫ್‌ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಯಾವುದೇ ಸಹಾಯ ಬೇಡ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಡೆಂಗ್ಯೂ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸ ಸಿಗುತ್ತಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಹೆಚ್ಚಿನ ಸೌಲಭ್ಯ ಸಿಗಬೇಕು. ನನ್ನ ಮಗಳಿಗಾದ ಸ್ಥಿತಿ ಯಾರಿಗೂ ಆಗುವುದು ಬೇಡ ಎಂದು ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷಕ್ಕೆ ಹಾಗೂ ಸರ್ಕಾರಕ್ಕೆ ಛೀಮಾರಿ ಹಾಕಿದರು.

4 ಸಾವಿರ ಗಡಿ ದಾಟಿದ ಡೆಂಗ್ಯೂ; ಐವರು ಸಾವು

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2024ರಲ್ಲಿ ಈ ವರೆಗೆ (ಜೂನ್‌) 93,012 ಶಂಕಿತವಾಗಿದ್ದು, ಇದರಲ್ಲಿ 40,918 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 4364 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಫಲಿಸದೇ ಐವರು ಮೃತಪಟ್ಟಿದ್ದಾರೆ. ಶಿವಮೊಗ್ಗ, ಬಾಗಲಕೋಟೆ, ಗದಗದಲ್ಲಿ ತಲಾ ಒಬ್ಬರು ಹಾಗೂ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Dengue Prevention: ರಾಜ್ಯದಲ್ಲಿ 6000ಕ್ಕೂ ಡೆಂಗ್ಯೂ ಪ್ರಕರಣ; ಇದರಿಂದ ಪಾರಾಗಲು ಹೀಗೆ ಮಾಡಿ

ಡೆತ್‌ ಆಡಿಟಿಂಗ್‌ಗೆ ಮುಂದಾದ ಬಿಬಿಎಂಪಿ

ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ವಿಪರೀತ ಏರಿಕೆ ಆಗಿವೆ. ಬೆಂಗಳೂರಲ್ಲಿ ಜನವರಿಯಿಂದ ಈವರೆಗೆ 1,385 ಮಂದಿಗೆ ಡೆಂಗ್ಯೂ ಜ್ವರ ಕಂಡು ಬಂದಿದೆ. ಈವರೆಗೆ ಡೆಂಗ್ಯೂನಿಂದ ಮೃತಪಟ್ಟ ವರದಿ ಆಗಿಲ್ಲ. ಆದರೆ ಇಬ್ಬರು ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ಶಂಕೆ ಇದ್ದು, ಸಾವಿಗೆ ಕಾರಣ ತಿಳಿಯುವ ಸಲುವಾಗಿ ಡೆತ್ ಆಡಿಟ್‌ಗೆ ಬಿಬಿಎಂಪಿ ಮುಂದಾಗಿದೆ.

ಇನ್ನೂ 3,470 ಲಾರ್ವಾ ಉತ್ಪತ್ತಿ ತಾಣ ಪತ್ತೆಯಾಗಿದ್ದು, ಇದರಲ್ಲಿ 2,004 ತಾಣಗಳ ನಾಶ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಮಾಹಿತಿ ನೀಡಿದೆ. ಪಾಲಿಕೆಯ ಆರೋಗ್ಯ ಸಿಬ್ಬಂದಿ ನಿನ್ನೆವರೆಗೂ 17,877 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಆಡಿಟ್ ಬಳಿಕ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನೆ ಮಾಡಲಾಗುತ್ತದೆ.

Continue Reading
Advertisement
Special Status
ದೇಶ4 mins ago

Special Status: ಎನ್‌ಡಿಎಗೆ ಮೈತ್ರಿಗೆ ಮೊದಲ ಅಗ್ನಿ ಪರೀಕ್ಷೆ; ವಿಶೇಷ ಸ್ಥಾನಮಾನಕ್ಕೆ ಜೆಡಿಯು ನಿರ್ಣಯ

Jain Shantamani Kala Kendra Stone Carving and Painting Camp in Bengaluru
ಬೆಂಗಳೂರು19 mins ago

Bengaluru News: ಜೈನ್‌ ಶಾಂತಮಣಿ ಕಲಾ ಕೇಂದ್ರದ ಕಲ್ಲಿನ ಕೆತ್ತನೆ ಮತ್ತು ಚಿತ್ರಕಲಾ ಶಿಬಿರ “ಪಾರ್ಶ್ವ ಪಡಾಪ್” ಗೆ ಸಂಭ್ರಮದ ತೆರೆ

Virat Kohli
ಪ್ರಮುಖ ಸುದ್ದಿ36 mins ago

Virat kohli : ವಿರಾಟ್ ಕೊಹ್ಲಿಗೆ ಫಾರ್ಮ್​ಗೆ ಮರಳಲು ಸಲಹೆಗಳನ್ನು ನೀಡಿದ ಮಾಜಿ ನಾಯಕ ಸುನೀಲ್ ಗವಾಸ್ಕರ್​

WhatsApp color
ತಂತ್ರಜ್ಞಾನ49 mins ago

WhatsApp: ಇನ್ನು ಮುಂದೆ ಈ ಫೋನ್‌ಗಳಲ್ಲಿ ವಾಟ್ಸ್ಯಾಪ್‌ ಸಿಗೋಲ್ಲ! ನಿಮ್ಮ ಫೋನೂ ಇದೆಯಾ ನೋಡಿ

Self Harming
ಕ್ರೈಂ58 mins ago

Self Harming: ಕೆರೆಗೆ ಹಾರಿ ಆತ್ಮಹತ್ಯೆ ಯತ್ನ; ಇಬ್ಬರು ಮಕ್ಕಳ ಸಾವು, ತಾಯಿ ಪಾರು

Rohit Sharma
ಪ್ರಮುಖ ಸುದ್ದಿ1 hour ago

Rohit Sharma : ಒಂದು ಸಿಕ್ಸರ್ ಬಾರಿಸಿದರೆ ಕೊಹ್ಲಿಯ ದಾಖಲೆ ಮುರಿಯುತ್ತಾರೆ ರೋಹಿತ್​ ಶರ್ಮಾ

Shirt Dress Fashion
ಫ್ಯಾಷನ್1 hour ago

Shirt Dress Fashion: ಶರ್ಟ್ ಡ್ರೆಸ್‌ ನ್ಯೂ ಲುಕ್‌ಗೆ 3 ಸಿಂಪಲ್‌ ಐಡಿಯಾ

assault case bjp worker
ಕ್ರೈಂ2 hours ago

Assault Case: ಸಾಲ ವಾಪಸ್‌ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತ

T20 World cup
ಪ್ರಮುಖ ಸುದ್ದಿ2 hours ago

T20 World Cup 2024 : ಭಾರತ ತಂಡವೇ ವಿಶ್ವ ಕಪ್​​ ಗೆಲ್ಲುತ್ತದೆ; ಕುಲ್ದೀಪ್​ ಯಾದವ್ ಬಾಲ್ಯದ ಕೋಚ್​ ವಿಶ್ವಾಸ

Arvind Kejriwal
ಪ್ರಮುಖ ಸುದ್ದಿ2 hours ago

Arvind Kejriwal: ಅರವಿಂದ ಕೇಜ್ರಿವಾಲ್‌ ಬಿಡುಗಡೆ ಕನಸು ಭಗ್ನ; ಮತ್ತೆ 14 ದಿನ ನ್ಯಾಯಾಂಗ ಬಂಧನ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ9 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ1 day ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌