Viral News: ಹೆತ್ತ ಮಕ್ಕಳನ್ನೇ ಕೊಂದು ವರ್ಷಗಟ್ಟಲೆ ಫ್ರಿಜ್‌ನಲ್ಲಿ ಇಟ್ಟ ಮಹಾತಾಯಿ! - Vistara News

ವೈರಲ್ ನ್ಯೂಸ್

Viral News: ಹೆತ್ತ ಮಕ್ಕಳನ್ನೇ ಕೊಂದು ವರ್ಷಗಟ್ಟಲೆ ಫ್ರಿಜ್‌ನಲ್ಲಿ ಇಟ್ಟ ಮಹಾತಾಯಿ!

ತಾಯಿಯೊಬ್ಬಳು ಹೆತ್ತ ಮಕ್ಕಳನ್ನೇ ಕೊಲೆ ಮಾಡಿ ಮನೆಯ ಫ್ರಿಜ್‌ನಲ್ಲಿ ಇಟ್ಟ ಘಟನೆ ದಕ್ಷಿಣ ಕೋರಿಯಾದಲ್ಲಿ ನಡೆದಿದೆ. ಇದು ಎಲ್ಲೆಡೆ (Viral News) ಸುದ್ದಿಯಾಗುತ್ತಿದೆ.

VISTARANEWS.COM


on

mother kills children
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಈ ಮಾತೇ ಸುಳ್ಳಾಗಿ, ತಾಯಿಯೇ ಮಕ್ಕಳನ್ನು ಕೊಲ್ಲುವ ಕೊಲೆಗಟುಕಿಯಾಗಿಬಿಟ್ಟರೆ? ದಕ್ಷಿಣ ಕೋರಿಯಾದಲ್ಲಿ ಇಂಥದ್ದೇ ಘಟನೆ ನಡೆದಿದ್ದು, ಅದು ಈಗ ಎಲ್ಲೆಡೆ (Viral News) ಸುದ್ದಿಯಲ್ಲಿದೆ.

ದಕ್ಷಿಣ ಕೋರಿಯಾದ ಸುವೋನ್‌ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಮಹಿಳೆಯೊಬ್ಬಳು 2018 ಮತ್ತು 2019ರಲ್ಲಿ ತಾನು ಹೆತ್ತ ಮಕ್ಕಳನ್ನು ಹೆರಿಗೆಯಾದ ಒಂದೆರೆಡು ದಿನಗಳಲ್ಲೇ ಕೊಲೆ ಮಾಡಿದ್ದಾಳೆ. ಆ ಮಕ್ಕಳ ಶವವನ್ನು ಮನೆಯಲ್ಲಿದ್ದ ಫ್ರಿಜ್‌ನಲ್ಲಿ ವರ್ಷಗಳ ಕಾಲ ಇಟ್ಟಿದ್ದಳಂತೆ. ಇದೀಗ ಈ ಘಟನೆ ಹೊರಬಿದ್ದಿದ್ದು, ಆಕೆಯನ್ನು ಬಂಧಿಸುವುದಕ್ಕೆ ವಾರೆಂಟ್‌ ಕೊಡಲು ಕೋರ್ಟ್‌ನ ಮೊರೆ ಹೋಗಿದ್ದಾರೆ ಪೊಲೀಸರು.

ಇದನ್ನೂ ಓದಿ: Viral News: ಗಂಡನನ್ನು ವೇಶ್ಯೆಯರ ಮನೆಯಲ್ಲಿ ನೋಡಿದ್ದರಂತೆ ಮಾಡೆಲ್‌ ಖ್ಲೋ ಕಾರ್ಡಶಿಯಾನ್‌
ಅಂದ ಹಾಗೆ ಈ ರೀತಿ ಕೊಲೆ ಮಾಡಿರುವ ಮಹಿಳೆಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. ಆಕೆಗ ಹುಟ್ಟಿದ ನಾಲ್ಕು ಮತ್ತು ಐದನೇ ಮಗುವನ್ನು ಕೊಲೆ ಮಾಡಿದ್ದಾಗಿ ಆಕೆಯೇ ಒಪ್ಪಿಕೊಂಡಿದ್ದಾಳೆ. ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಇರುವ ಹಿನ್ನೆಲೆಯಲ್ಲಿ ಈ ರೀತಿ ಕೃತ್ಯ ಮಾಡಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ.

ಈ ಕೊಲೆಗಳ ಬಗ್ಗೆ ಆಕೆಯ ಪತಿ, ಅಂದರೆ ಕೊಲೆಯಾದ ಮಕ್ಕಳ ತಂದೆಗೇ ವಿಷಯ ಗೊತ್ತಿರಲಿಲ್ಲವಂತೆ. ಮಹಿಳೆ ತಾನು ಗರ್ಭ ತೆಗೆಸಿಕೊಂಡಿದ್ದಾಗಿ ಸುಳ್ಳು ಹೇಳಿದ್ದಾಳೆ ಎಂದು ಆತ ಹೇಳಿದ್ದಾನೆ. ಈ ಹಿಂದೆಯೂ ಕೂಡ ದಕ್ಷಿಣ ಕೋರಿಯಾದಲ್ಲಿ ಇಂತದ್ದೇ ಒಂದು ಘಟನೆ ನಡೆದಿತ್ತು. ಗಂಡ ಹೆಂಡತಿ ಇಬ್ಬರೂ ಸೇರಿಕೊಂಡು ತಮ್ಮದೇ ಮಗುವನ್ನು ಕೊಂದು ಮನೆಯ ಬಾಕ್ಸ್‌ ಒಂದರಲ್ಲಿ ಮೂರು ವರ್ಷಗಳ ಕಾಲ ಇಟ್ಟುಕೊಂಡಿದ್ದು ವರದಿಯಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಕಾರು ತಡೆದ ಟ್ರಾಫಿಕ್‌ ಪೊಲೀಸ್‌ ಕ್ಯಾಬ್‌ ಡ್ರೈವರ್‌ ಮಾಡಿದ್ದೇನು ಗೊತ್ತಾ?

Viral Video: ವರದಿ ಪ್ರಕಾರ, ರಾಜಸ್ಥಾನ ರಿಜಿಸ್ಟರ್ಡ್‌ ಕಾರು ಕಾರನ್ನು ತಡೆದ ಟ್ರಾಫಿಕ್‌ ಪೊಲೀಸರು ದಾಖಲೆ ಪರಿಶೀಲನೆಗೆ ಮುಂದಾಗುತ್ತಾರೆ. ದಾಖಲೆ ಪರಿಶೀಲನೆ ವೇಳೆ ಕಾರು ಚಾಲಕ ಮತ್ತು ಪೊಲೀಸ್‌ ಇನ್‌ಸ್ಪೆಕ್ಟರ್‌ ನಡುವೆ ಭಾರೀ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಚಾಲಕ ಕಾರು ಚಲಾಯಿಸಿದ್ದಾನೆ. ಕಾರಿನ ಬಾಗಿಲಿನಲ್ಲಿ ಪೊಲೀಸ್‌ ನೇತಾಡುತ್ತಿದ್ದಂತೆ ಚಾಲಕ ಕಾರನ್ನು ವೇಗವಾಗಿ ಮುಂದಕ್ಕೆ ಚಲಾಯಿಸಿದ್ದಾನೆ. ಸ್ವಲ್ಪ ಮುಂದಕ್ಕೆ ಕಾರು ಚಲಾಯಿಸಿದ ಬಳಿಕ ತಕ್ಷಣ ನಿಲ್ಲಿಸುತ್ತಾನೆ. ಕಾರಿನಿಂದ ಮತ್ತೊರ್ವ ವ್ಯಕ್ತಿ ಹೊರಗೆ ಬರುತ್ತಾನೆ.

VISTARANEWS.COM


on

Viral Video
Koo

ಹರಿಯಾಣ: ದಾಖಲೆ ಪರಿಶೀಲನೆ ವೇಳೆ ಕಿಡಿಗೇಡಿ ಕ್ಯಾಬ್‌ ಡ್ರೈವರ್‌(Cab Driver)ವೊಬ್ಬ ಟ್ರಾಫಿಕ್‌ ಪೊಲೀಸ್‌ ಅನ್ನೇ ಕಾರಿನಲ್ಲಿ ಎಳೆದಾಡಿದ ಘಟನೆ ಹರ್ಯಾಣ(Haryana)ದ ಬಲ್ಲಾಬ್‌ಗರ್‌ನಲ್ಲಿ ನಡೆದಿದೆ. ಟ್ರಾಫಿಕ್‌ ಸಿಗ್ನಲ್‌ ಬಿದ್ದ ತಕ್ಷಣ ಟ್ರಾಫಿಕ್‌ ಪೊಲೀಸ್‌ ಕಾರೊಂದನ್ನು ತಡೆದು ದಾಖಲೆ ಪರಿಶೀಲನೆ ಮುಂದಾದಾಗ ಈ ಘಟನೆ ನಡೆದಿದೆ. ಈ ಶಾಕಿಂಗ್‌ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ

ವರದಿ ಪ್ರಕಾರ, ರಾಜಸ್ಥಾನ ರಿಜಿಸ್ಟರ್ಡ್‌ ಕಾರು ಕಾರನ್ನು ತಡೆದ ಟ್ರಾಫಿಕ್‌ ಪೊಲೀಸರು ದಾಖಲೆ ಪರಿಶೀಲನೆಗೆ ಮುಂದಾಗುತ್ತಾರೆ. ದಾಖಲೆ ಪರಿಶೀಲನೆ ವೇಳೆ ಕಾರು ಚಾಲಕ ಮತ್ತು ಪೊಲೀಸ್‌ ಇನ್‌ಸ್ಪೆಕ್ಟರ್‌ ನಡುವೆ ಭಾರೀ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಚಾಲಕ ಕಾರು ಚಲಾಯಿಸಿದ್ದಾನೆ. ಕಾರಿನ ಬಾಗಿಲಿನಲ್ಲಿ ಪೊಲೀಸ್‌ ನೇತಾಡುತ್ತಿದ್ದಂತೆ ಚಾಲಕ ಕಾರನ್ನು ವೇಗವಾಗಿ ಮುಂದಕ್ಕೆ ಚಲಾಯಿಸಿದ್ದಾನೆ. ಸ್ವಲ್ಪ ಮುಂದಕ್ಕೆ ಕಾರು ಚಲಾಯಿಸಿದ ಬಳಿಕ ತಕ್ಷಣ ನಿಲ್ಲಿಸುತ್ತಾನೆ. ಕಾರಿನಿಂದ ಮತ್ತೊರ್ವ ವ್ಯಕ್ತಿ ಹೊರಗೆ ಬರುತ್ತಾನೆ.

ಘಟನೆಯಲ್ಲಿ ಪೊಲೀಸ್‌ಗೆ ಗಂಭೀರ ಗಾಯಗಳಾಗಿವೆ. ಕಾರು ನಿಲ್ಲುತ್ತಿದ್ದಂತೆ ಚಾಲಕನನ್ನು ಕಾಲರ್‌ನಿಂದ ಹೊರಗೆಳೆದಿದ್ದಾನೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ಕಿಡಿಗೇಡಿ ಚಾಲಕನ ವಿರುದ್ಧ ಕೊಲೆ ಯತ್ನ ಕೇಸ್‌ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Heat wave: ಉಷ್ಣ ಮಾರುತಕ್ಕೆ ತತ್ತರಿಸಿದ ಉತ್ತರ ಭಾರತ; ದೇಶಾದ್ಯಂತ 143 ಜನ ಬಲಿ

ಗುಜರಾತ್‌ನಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿದೆ. ವಾಹನ ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ವಾಹನದ ಬಾಗಿಲು ತೆರೆದುಕೊಂಡು ಇಬ್ಬರು ವಿದ್ಯಾರ್ಥಿನಿಯರು ವಾಹನದಿಂದ ಹೊರಬಿದ್ದು ಗಾಯಗೊಂಡ ಘಟನೆ ಗುಜರಾತ್‌ನ ವಡೋದರದಲ್ಲಿ ನಡೆದಿದೆ. ಮಾರುತಿ ಇಕೋ ವಾಹನದಲ್ಲಿ ಮಕ್ಕಳನ್ನು ತುಂಬಿಸಿಕೊಂಡು ಚಾಲಕ ಶಾಲೆಯತ್ತ ವೇಗವಾಗಿ ವಾಹನವನ್ನು ಚಲಾಯಿಸಿದ್ದಾನೆ. ಆ ವೇಳೆ ಕಾರಿನ ಹಿಂಬದಿಯ ಬಾಗಿಲು ಸರಿಯಾಗಿ ಹಾಕದ ಕಾರಣ ಅದು ತೆರೆದುಕೊಂಡು ಹಿಂದೆ ಕುಳಿತಿದ್ದ ಇಬ್ಬರು ವಿದ್ಯಾರ್ಥಿನಿಯರು ರಸ್ತೆಯ ಮೇಲೆ ಬಿದ್ದಿದ್ದಾರೆ. ಈ ಘಟನೆಯಿಂದ ಆ ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯವಾಗಿದೆ.

ಹಿಂಬದಿಯಿಂದ ಯಾವುದೇ ವಾಹನ ಬಾರದ ಕಾರಣ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರನ್ನು ಸ್ಥಳೀಯರು ಮೇಲಕ್ಕೆತ್ತಿ ಚಿಕಿತ್ಸೆ ಮಾಡಿದ್ದಾರೆ. ಆದರೆ ಚಾಲಕ ಮಾತ್ರ ಮಕ್ಕಳು ಬಿದ್ದಿರುವುದು ತಿಳಿದರೂ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಸ್ಥಳೀಯರು ವಿದ್ಯಾರ್ಥಿನಿಯ ಮನೆಯವರಿಗೆ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

Continue Reading

Latest

Viral Video: ಮತ್ತೊಂದು ರೀಲ್‌ ಕ್ರೇಜ್‌; ಚಲಿಸುವ ರೈಲಿನಲ್ಲಿ ಯುವತಿಯ ಡೇಂಜರಸ್‌ ಡ್ಯಾನ್ಸ್‌!

Viral Video: ಜನ ಮರುಳೋ ಜಾತ್ರೆ ಮರುಳೋ ಎನ್ನುವ ಮಾತಿನಂತೆ ಈಗ ಸೋಷಿಯಲ್ ಮೀಡಿಯಾ ಸರಿಯಿಲ್ವಾ ಅಥವಾ ನಮ್ಮ ಯುವಪೀಳಿಗೆಯೇ ಸರಿ ಇಲ್ವಾ ಅನ್ನುವ ಗೊಂದಲ ಎಲ್ಲರನ್ನು ಕಾಡುತ್ತಿದೆ. ಯಾಕೆಂದರೆ ಪಾಳುಬಿದ್ದ ಕಟ್ಟಡದ ಮೇಲಿಂದ ಸ್ನೇಹಿತನ ಕೈಹಿಡಿದು ಇಳಿದು ಯುವತಿಯೊಬ್ಬಳು ರೀಲ್ ಮಾಡಿ ಅರೆಸ್ಟ್ ಆದ ಘಟನೆ ಇನ್ನೂ ಮಾಸಿಲ್ಲ, ಈಗ ಮತ್ತೊಬ್ಬಳು ಹುಡುಗಿ ಚಲಿಸುತ್ತಿರುವ ರೈಲಿನ ಕಂಪಾರ್ಟ್‌ಮೆಂಟ್ ತುದಿಯಲ್ಲಿ ನಿಂತು ಕುಣಿದಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಆಕೆಯ ಕೃತ್ಯಕ್ಕೆ ಅನೇಕರು ಟೀಕೆಗಳ ಸುರಿಮಳೆ ಸುರಿಸಿದ್ದಾರೆ. ಆಕೆಗೆ ದಂಡ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

VISTARANEWS.COM


on

Viarl Video
Koo

ಮುಂಬೈ: ಸೋಷಿಯಲ್ ಮೀಡಿಯಾಗಳಿಗಾಗಿ ರೀಲ್ಸ್ ಮಾಡುವ ಚಟ ಯುವಕ ಯುವತಿಗೆ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಇನ್ನೊಂದು ಘಟನೆ ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಪಾಳುಬಿದ್ದ ಕಟ್ಟಡದ ಮೇಲಿಂದ ಸ್ನೇಹಿತನ ಕೈಹಿಡಿದು ಇಳಿದು ಯುವತಿಯೊಬ್ಬಳು ರೀಲ್ ಮಾಡಿದ್ದು, ಈಗಾಗಲೇ ಆಕೆ ಹಾಗೂ ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಚಲಿಸುವ ರೈಲಿನ ಕಂಪಾರ್ಟ್‌ಮೆಂಟ್‌ ತುದಿಯಲ್ಲಿ ನಿಂತು ಹುಡುಗಿಯೊಬ್ಬಳು ಉತ್ಸಾಹದಿಂದ ನೃತ್ಯ ಮಾಡುತ್ತಾ ರೀಲ್ಸ್ ಮಾಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಇದನ್ನು ನೋಡಿದವರು ಶಾಕ್ ಆಗಿದ್ದಾರೆ.

ಈ ವಿಡಿಯೊವನ್ನು ಮಿಥಿಲಾ ವಾಲಾ ಎಂಬುವವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೇ ಅದಕ್ಕೆ ‘ರೀಲ್ ಮಾಡುವುದು ಜೀವನಕ್ಕಿಂತ ಮುಖ್ಯ’ ಎಂದು ವ್ಯಂಗ್ಯವಾಗಿ ಶೀರ್ಷಿಕೆ ನೀಡಿದ್ದಾರೆ. ಒಂದು ವೇಳೆ ಆಕೆ ರೈಲಿನಿಂದ ಕೆಳಗೆ ಬಿದ್ದು ಸತ್ತರೆ ಆಕೆಯ ಕುಟುಂಬದವರು ರೈಲ್ವೆ ಸಚಿವರನ್ನು ದೂಷಿಸುತ್ತಾರೆ ಮತ್ತು ಸರ್ಕಾರದಿಂದ ಭಾರೀ ಪರಿಹಾರವನ್ನು ಸಹ ತೆಗೆದುಕೊಳ್ಳುತ್ತಾರೆ. ಅಂತವರನ್ನು ಪತ್ತೆ ಹಚ್ಚಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಬೇಕು ಎಂದು ಅವರು ಬರೆದಿದ್ದಾರೆ. ಈ ವಿಡಿಯೊ ಪೋಸ್ಟ್ ಮಾಡಿದ 24 ಗಂಟೆಗಳಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಈ ವಿಡಿಯೊದಲ್ಲಿ ನೃತ್ಯ ಮಾಡಿದ ಹುಡುಗಿಗೆ ಚಲಿಸುವ ರೈಲಿನಲ್ಲಿ ನೃತ್ಯ ಮಾಡುವಾಗ ಆಕೆಯ ಮುಖದಲ್ಲಿ ಯಾವ ಭಯವೂ ಕಾಣಿಸುತ್ತಿರಲಿಲ್ಲ. ಆಕೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ರೀಲ್ ಮಾಡುವುದರಲ್ಲೇ ತಲ್ಲೀನಳಾಗಿದ್ದಾಳೆ. ಆಕೆ ಈಗ ಸುರಕ್ಷಿತವಾಗಿದ್ದರೂ ಕೂಡ ಸೋಷಿಯಲ್ ಮೀಡಿಯಾಗಳಿಗಾಗಿ ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡುವುದು ತಪ್ಪು. ಈ ವಿಡಿಯೊ ನೋಡಿದ ವೀಕ್ಷಕರು ಶಾಕ್ ಆಗಿದ್ದು, ಆಕೆಯ ಕೃತ್ಯಕ್ಕೆ ಅನೇಕರು ಆಕೆಯ ಮೇಲೆ ಟೀಕೆಗಳ ಸುರಿಮಳೆ ಸುರಿಸಿದ್ದಾರೆ. ಅನೇಕರು ಆಕೆಗೆ ದಂಡ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡುತ್ತಾ ರೀಲ್ಸ್ ಮಾಡಿದ ಯುವತಿ ಅರೆಸ್ಟ್!

ಒಂದು ತಿಂಗಳ ಹಿಂದೆ ರಾಜಸ್ಥಾನದ ಕೋಟಾದಲ್ಲಿ ಇದೇರೀತಿಯ ಸೋಷಿಯಲ್ ಮೀಡಿಯಾದ ರೀಲ್ಸ್ ಅವಾಂತರವೊಂದು ನಡೆದಿದೆ. ಇದರಲ್ಲಿ 22 ವರ್ಷದ ಯುವಕನೊಬ್ಬ ರೀಲ್ಸ್ ಮಾಡಲು ಪಿಸ್ತೂಲನ್ನು ತಲೆಗೆ ಗುರಿಯಾಗಿಟ್ಟುಕೊಂಡು ಆಕಸ್ಮಿಕವಾಗಿ ಗುಂಡು ಹಾರಿ ಸಾವನಪ್ಪಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ.

Continue Reading

Latest

Viral Video: ಮಕ್ಕಳನ್ನು ಖಾಸಗಿ ವಾಹನದಲ್ಲಿ ಶಾಲೆಗೆ ಕಳುಹಿಸುವ ಪೋಷಕರಲ್ಲಿ ಆತಂಕ ಮೂಡಿಸುವ ವಿಡಿಯೊ ಇದು!

Viral Video: ಮೊದಲೆಲ್ಲಾ ಮಳೆ ಇರಲಿ, ಬಿಸಿ ಇರಲಿ ಕಾಲಿಗೊಂದು ಚಪ್ಪಲಿ ಇಲ್ಲದೇ ಶಾಲೆಗೆ ಹೋಗುತ್ತಿದ್ದರು. ಆದರೆ ಈಗ ಹಾಗಲ್ಲ, ನಮ್ಮ ಮಗು ನಡೆದರೆ ಎಲ್ಲಿ ಕಾಲು ಸವೆಯುತ್ತೋ ಎಂದು ಎರಡು ಹೆಜ್ಜೆ ನಡೆಯುವುದಕ್ಕೆ ಬಿಡುವುದಿಲ್ಲ ಪೋಷಕರು. ಇನ್ನು ಬೆಳಗ್ಗೆ ಬಂದು ಮನೆ ಬಾಗಿಲ ಬಳಿ ಮಕ್ಕಳನ್ನು ಕರೆದುಕೊಂಡು ಹೋಗಲು ವಾಹನಗಳ ಚಾಲಕರ ಬೇಜವಾಬ್ದಾರಿಯಿಂದ ಹಲವು ಅಹಿತಕರ ಘಟನೆಗಳು ನಡೆಯುತ್ತವೆ. ಗುಜರಾತ್‌ನ ವಡೋಡರದಲ್ಲಿ ಇಂಥದ್ದೇ ಮತ್ತೊಂದು ದುರ್ಘಟನೆ ನಡೆದಿದೆ.

VISTARANEWS.COM


on

Viral Video
Koo

ಆಗಿನ ಕಾಲದಲ್ಲಿ ಮಕ್ಕಳು ನಡೆದುಕೊಂಡೇ ಶಾಲೆಗೆ ತೆರಳುತ್ತಿದ್ದರು. ಆದರೆ ಇಂದಿನ ಆಧುನಿಕ ಕಾಲದಲ್ಲಿ ಪೋಷಕರು ಮಕ್ಕಳನ್ನು ವಾಹನಗಳ ಮೂಲಕ ಶಾಲೆಗೆ ಕಳುಹಿಸುವುದು ಸಹಜ. ಕೆಲವರು ಶಾಲೆಯ ಅಧಿಕೃತ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸಿದರೆ, ಕೆಲವು ಪೋಷಕರು ಕಡಿಮೆ ಹಣ ನೀಡುವ ಉದ್ದೇಶದಿಂದ ಖಾಸಗಿ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ಕೆಲವು ವಾಹನ ಚಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವರು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಅನೇಕ ಮಕ್ಕಳು ಅಪಾಯಕ್ಕೊಳಗಾಗಿದ್ದಾರೆ. ಮಕ್ಕಳು ಪ್ರಾಣ ಕಳೆದುಕೊಂಡ ಇಂತಹ ಘಟನೆಗಳು ಹಲವಾರು ನಡೆದಿವೆ. ಇದೀಗ ಗುಜರಾತ್‌ನಲ್ಲಿಯೂ ಕೂಡ ಇಂತಹದೊಂದು ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್(Viral Video) ಪೋಷಕರಲ್ಲಿ ಆತಂಕ ಹುಟ್ಟಿಸಿದೆ.

ವಾಹನ ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ವಾಹನದ ಬಾಗಿಲು ತೆರೆದುಕೊಂಡು ಇಬ್ಬರು ವಿದ್ಯಾರ್ಥಿನಿಯರು ವಾಹನದಿಂದ ಹೊರಬಿದ್ದು ಗಾಯಗೊಂಡ ಘಟನೆ ಗುಜರಾತ್‌ನ ವಡೋದರದಲ್ಲಿ ನಡೆದಿದೆ. ಮಾರುತಿ ಇಕೋ ವಾಹನದಲ್ಲಿ ಮಕ್ಕಳನ್ನು ತುಂಬಿಸಿಕೊಂಡು ಚಾಲಕ ಶಾಲೆಯತ್ತ ವೇಗವಾಗಿ ವಾಹನವನ್ನು ಚಲಾಯಿಸಿದ್ದಾನೆ. ಆ ವೇಳೆ ಕಾರಿನ ಹಿಂಬದಿಯ ಬಾಗಿಲು ಸರಿಯಾಗಿ ಹಾಕದ ಕಾರಣ ಅದು ತೆರೆದುಕೊಂಡು ಹಿಂದೆ ಕುಳಿತಿದ್ದ ಇಬ್ಬರು ವಿದ್ಯಾರ್ಥಿನಿಯರು ರಸ್ತೆಯ ಮೇಲೆ ಬಿದ್ದಿದ್ದಾರೆ. ಈ ಘಟನೆಯಿಂದ ಆ ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯವಾಗಿದೆ.

ಹಿಂಬದಿಯಿಂದ ಯಾವುದೇ ವಾಹನ ಬಾರದ ಕಾರಣ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರನ್ನು ಸ್ಥಳೀಯರು ಮೇಲಕ್ಕೆತ್ತಿ ಚಿಕಿತ್ಸೆ ಮಾಡಿದ್ದಾರೆ. ಆದರೆ ಚಾಲಕ ಮಾತ್ರ ಮಕ್ಕಳು ಬಿದ್ದಿರುವುದು ತಿಳಿದರೂ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಸ್ಥಳೀಯರು ವಿದ್ಯಾರ್ಥಿನಿಯ ಮನೆಯವರಿಗೆ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: Viral video: ವಧುವಿಗೆ ಸಿಹಿ ತಿನ್ನಿಸಲು ಹೋಗಿ ಕಪಾಳಮೋಕ್ಷ ಮಾಡಿಸಿಕೊಂಡ ವರ! ಅಯ್ಯೋ ಪಾಪ!!

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಚಾಲಕನನ್ನು ಬಂಧಿಸಿದ್ದಾರೆ. ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಘಟನೆ ಅನೇಕ ಪೋಷಕರ ಆತಂಕಕ್ಕೆ ಕಾರಣವಾಗಿರುವುದಂತು ನಿಜ. ಹಾಗಾಗಿ ತಮ್ಮ ಮಕ್ಕಳನ್ನು ಶಾಲೆಯ ಅಧಿಕೃತ ಹಾಗೂ ನೊಂದಾಯಿತ ವಾಹನಗಳಲ್ಲೇ ಶಾಲೆಗೆ ಕಳುಹಿಸಿ. ಕಡಿಮೆ ಹಣದ ಆಸೆಗೆ ಇಂತಹ ವಾಹನದಲ್ಲಿ ಮಕ್ಕಳನ್ನು ಕಳುಹಿಸಿ ಅವರ ಜೀವಕ್ಕೆ ಕುತ್ತು ತರಬೇಡಿ. ಯಾಕೆಂದರೆ ಇಂತಹ ವಾಹನ ಚಾಲಕರಿಗೆ ಮಕ್ಕಳ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ.

Continue Reading

ಬೆಂಗಳೂರು

Bengaluru news : ಸೋಪಿನ ಮೇಲೆ ಕಾಲಿಟ್ಟು ಆಯತಪ್ಪಿ ಕಟ್ಟಡದ ಮೇಲಿಂದ ಹಾರಿ ಬಿದ್ದಳು; ಎದೆ ಝಲ್​ ಎನಿಸುವ ದೃಶ್ಯ ಸೆರೆ

Bengaluru News : ಸೋಪಿನ ಮೇಲೆ ಕಾಲಿಟ್ಟು ಪರಿಣಾಮ ಆಯತಪ್ಪಿ ಕಟ್ಟಡದ ಮೇಲಿಂದ ಮಹಿಳೆಯೊಬ್ಬರು ಕೆಳಗೆ ಬಿದ್ದಿದ್ದು, ಕೋಮಾ ತಲುಪಿದ್ದಾರೆ. ಈ ಭಯಾನಕ ದೃಶ್ಯವು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌ ಆಗಿದೆ.

VISTARANEWS.COM


on

By

Bengaluru News Accident Case Dj Halli
Koo

ಬೆಂಗಳೂರು: ಕೆಲಸ ಮಾಡುವಾಗ ಸ್ವಲ್ಪ ಮೈಮರೆತರೂ ಏನೆಲ್ಲ ಅಚಾತುರ್ಯ ನಡೆಯಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಮಹಿಳೆಯೊಬ್ಬಳು ಟೆರೇಸ್‌ ಮೇಲೆ ಕೆಲಸ ಮಾಡುವಾಗ ಸೋಪಿನ ಮೇಲೆ ಕಾಲಿಟ್ಟು ಆಯತಪ್ಪಿ ಕಟ್ಟಡದಿಂದ ಹೊರಗೆ ಹಾರಿದ ಘಟನೆ ಬೆಂಗಳೂರಿನ (Bengaluru News) ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರುಬಾಯ್ ಎಂಬಾಕೆ ತನ್ನ ಪತಿಯೊಂದಿಗೆ ಡಿಜೆ ಹಳ್ಳಿಯಲ್ಲಿರುವ ಆರ್‌ಕೆ ಪ್ಯಾಲೇಸ್ ಮೇಲ್ಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಅಚಾನಕ್ ಆಗಿ ಸೋಪಿನ ಮೇಲೆ‌ ಕಾಲಿಟ್ಟ ರುಬಾಯ್‌ಳ ಕಾಲು ಜಾರಿತ್ತು. ನೋಡನೋಡುತ್ತಿದ್ದಂತೆ ಕಟ್ಟಡದಿಂದ ಹಾರಿ ಟೆರಸ್‌ ಭಾಗದಲ್ಲಿ ನೇತಾಡುತ್ತಿದ್ದಳು.

ಆಕೆಯ ಕೂಗಾಟ ಕೇಳಿ ನೋಡಿದಾಗ ಪತ್ನಿ ಕಟ್ಟಡದ ಮೇಲಿಂದ ನೇತಾಡುತ್ತಿರುವುದು ಕಂಡಿದೆ. ಕೂಡಲೇ ಓಡಿ ಬಂದ ಪತಿ ಆಕೆಯ ಕೈಹಿಡಿದು ಎಳೆದುಕೊಳ್ಳಲು ಮುಂದಾಗಿದ್ದರು. ಆಕೆ ಕೆಳಗೆ ಬೀಳದಂತೆ ಅದೆಷ್ಟೇ ಹರಸಾಹಸ ಪಟ್ಟರು ಆಗಿಲ್ಲ. ಇತ್ತ ಪತಿ-ಪತ್ನಿಯ ಚಿರಾಟ ಕೇಳಿ ಸುತ್ತಮುತ್ತಲಿನ ಜನರು ಓಡಿ ಬಂದಿದ್ದರು. ಆದರೆ ಕೆಲ ಸಮಯದ ನಂತರ ಕೈ ಜಾರಿದ್ದು, 3ನೇ ಅಂತಸ್ತಿನ ಕಟ್ಟಡದ ಮೇಲಿಂದ ರುಬಾಯ್‌ ಕೆಳಗೆ ಬಿದ್ದಿದ್ದರು.

ಇದನ್ನೂ ಓದಿ: Accident Case : ವೃದ್ಧೆಯರಿಬ್ಬರ ದುರಂತ ಅಂತ್ಯ; ಕೆಎಸ್‌ಆರ್‌ಟಿಸಿ ಬಸ್‌, ರೈಲು ಬಡಿದು ಸಾವು

ಕಟ್ಟಡದ ಕೆಳಗೆ ಬೈಕ್‌ಗಳನ್ನು ಪಾರ್ಕಿಂಗ್‌ ಮಾಡಿದ್ದರಿಂದ, ಸ್ಥಳೀಯರು ರುಬಾಯ್‌ಳನ್ನು ಕಾಪಾಡಲು ಆಗಲಿಲ್ಲ. ರುಬಾಯ್‌ ಮೇಲಿಂದ ಬೈಕ್‌ಗಳ ಮೇಲೆ ಬಿದ್ದ ರಭಸಕ್ಕೆ ಗಂಭೀರ ಗಾಯಗೊಂಡಿದ್ದರು. ಕೂಡಲೇ ಆಟೋವೊಂದನ್ನು ಅಡ್ಡಗಟ್ಟಿ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಡಿ.ಜೆ‌ ಹಳ್ಳಿಯ ಆರ್.ಕೆ ಪ್ಯಾಲೇಸ್ ಬಳಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಷ್ಟು ಎತ್ತರದಿಂದ ಬಿದ್ದಂತಹ ರುಬಾಯ್‌ಗೆ ಕೋಮಾದಲ್ಲಿದ್ದು, ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಡಿಜೆ ಹಳ್ಳಿ ಪೊಲೀಸರು ಇದೀಗ ಸಿಕ್ಕಿರುವ‌ ವಿಡಿಯೊವನ್ನು ಆಧರಿಸಿ ತನಿಖೆಗೆ ಮುಂದಾಗಿದ್ದಾರೆ. ತನಿಖೆಯ ನಂತರವೇ ಈ ಘಟನೆಯ ಸಂಪೂರ್ಣ ಮಾಹಿತಿ ಹೊರಬರಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
ಕ್ರೀಡೆ14 mins ago

T20 World Cup 2024: ವಿಂಡೀಸ್​ಗೆ ಆಘಾತ; ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಕಿಂಗ್

PGCET 2024
ಶಿಕ್ಷಣ15 mins ago

PGCET 2024 : ಪಿಜಿಸಿಇಟಿ ಅಪ್‌ಡೇಟ್ಸ್‌ ; ಶುಲ್ಕ ಪಾವತಿ, ತಿದ್ದುಪಡಿ, ಪರೀಕ್ಷಾ ಕೇಂದ್ರ ಆಯ್ಕೆಗೆ ಜೂ.24 ಕೊನೆ ದಿನ

The Lion King 30 years influence on fans and actors
ಬಾಲಿವುಡ್15 mins ago

The Lion King: ಆಲ್‌ ಟೈಮ್‌ ಫೇವರೇಟ್‌ ಕಾರ್ಟೂನ್‌ `ದಿ ಲಯನ್ ಕಿಂಗ್’ 30ನೇ ವಾರ್ಷಿಕೋತ್ಸವ

Viral Video
ವೈರಲ್ ನ್ಯೂಸ್20 mins ago

Viral Video: ಕಾರು ತಡೆದ ಟ್ರಾಫಿಕ್‌ ಪೊಲೀಸ್‌ ಕ್ಯಾಬ್‌ ಡ್ರೈವರ್‌ ಮಾಡಿದ್ದೇನು ಗೊತ್ತಾ?

Floods In Assam
ದೇಶ23 mins ago

Floods In Assam: ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸಾಂ; 37ಕ್ಕೆ ಏರಿದ ಸಾವಿನ ಸಂಖ್ಯೆ

Actor Darshan
ಕರ್ನಾಟಕ24 mins ago

Actor Darshan: ದರ್ಶನ್ ಸೇರಿ ನಾಲ್ವರು ಸ್ಟೇಷನ್‌ನಿಂದ ಪರಪ್ಪನ ಅಗ್ರಹಾರ ಜೈಲಿಗೆ

Swamji Murder
ಪ್ರಮುಖ ಸುದ್ದಿ40 mins ago

Swamji Murder : ಆಸ್ತಿ, ಅಧಿಕಾರಕ್ಕಾಗಿ ಗಲಾಟೆ; ಸ್ವಾಮೀಜಿಯೊಬ್ಬರನ್ನು ಕೊಲೆ ಮಾಡಿದ ಸ್ವಾಮೀಜಿಗಳ ಗುಂಪು

Child Death
ಬೆಳಗಾವಿ46 mins ago

Child Death : ಮಕ್ಕಳ ಮಾರಾಟ ಜಾಲದಲ್ಲಿ ರಕ್ಷಣೆಯಾಗಿದ್ದ ಮಗು ಮೃತ್ಯು; ಅಂತ್ಯ ಸಂಸ್ಕಾರ ನೆರವೇರಿಸಿದ ಪೊಲೀಸರು

Shobha Shetty car gift to yashwanth birthday
ಟಾಲಿವುಡ್1 hour ago

Shobha Shetty: ಭಾವಿ ಪತಿಗೆ ಕಾರ್ ಗಿಫ್ಟ್ ನೀಡಿದ ‘ಅಗ್ನಿಸಾಕ್ಷಿ’ ಖ್ಯಾತಿಯ ನಟಿ!

IND vs BAN
ಕ್ರೀಡೆ1 hour ago

IND vs BAN: ಕೊಹ್ಲಿ ಬ್ಯಾಟಿಂಗ್​ ಬಗ್ಗೆ ಸ್ವತಃ ಬೇಸರ ವ್ಯಕ್ತಪಡಿಸಿದ ಬ್ಯಾಟಿಂಗ್​ ಕೋಚ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ22 hours ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 day ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ2 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು5 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ6 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ6 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌