Video Viral: ಸರ್ಕಾರಿ ಬಸ್ಸಲ್ಲಿ ಮಹಿಳೆಯರ ಪಾರುಪಥ್ಯ; ಸೀಟ್‌ ಹಿಡಿಯೋಕೆ ಡ್ರೈವರ್‌ ಸೀಟ್‌ನಿಂದ ನುಗ್ಗಿದ ಗಂಡಸರು! - Vistara News

ಕರ್ನಾಟಕ

Video Viral: ಸರ್ಕಾರಿ ಬಸ್ಸಲ್ಲಿ ಮಹಿಳೆಯರ ಪಾರುಪಥ್ಯ; ಸೀಟ್‌ ಹಿಡಿಯೋಕೆ ಡ್ರೈವರ್‌ ಸೀಟ್‌ನಿಂದ ನುಗ್ಗಿದ ಗಂಡಸರು!

Shakti Scheme: ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ನಡುವೆ ಬಸ್‌ನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೀಟ್‌ ಹಿಡಿದು ಕೂರುವುದರಿಂದ ಪುರುಷರಿಗೆ ಸೀಟ್‌ ಸಿಗುತ್ತಿಲ್ಲ. ದೂರದ ಊರಿಗೆ ನಿಂತು ಹೋಗುವುದು ಕಷ್ಟ ಎಂಬ ನಿಟ್ಟಿನಲ್ಲಿ ಈಗ ಕೆಲವು ಪುರುಷರು ಡ್ರೈವರ್‌ ಸೀಟಿಂದ ಹತ್ತಿ ಒಳಗೆ ಹೋಗುತ್ತಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

VISTARANEWS.COM


on

Men climb from driver seat door in haver KSRTC Bus Stand
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾವೇರಿ: ಹೆಣ್ಮಕ್ಕಳೇ ಸ್ಟ್ರಾಂಗು ಗುರು! ಎನ್ನುವ ರೀತಿ ಈಗ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ತುಂಬಿ ತುಳುಕುತ್ತಿದ್ದಾರೆ. ಶಕ್ತಿ ಯೋಜನೆಗೆ (Shakti Scheme) ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಉಚಿತ ಪ್ರಯಾಣ (Free Bus Service) ಲಭ್ಯವಾಗಿರುವುದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ ಪ್ರಯಾಣಕ್ಕೆ ಒಲವು ತೋರುತ್ತಿದ್ದಾರೆ. ಈ ಯೋಜನೆಗೆ ಸರ್ಕಾರ ರೂಪಿಸಿರುವ 50:50 ಆಸನದ ಫಾರ್ಮುಲಾ ಇನ್ನೂ ವರ್ಕೌಟ್‌ ಆಗುತ್ತಿಲ್ಲ. ಸೀಟು ಹಿಡಿಯಲು ನುಗ್ಗುವ ಮಹಿಳೆಯರು ಸಿಕ್ಕ ಸಿಕ್ಕ ಆಸನಗಳಲ್ಲಿ ಕೂರುತ್ತಿದ್ದಾರೆ. ಹೀಗಾಗಿ ಪುರುಷರಿಗೆ ಸೀಟ್‌ ಸಿಗದಂತೆ ಆಗುತ್ತಿದೆ. ಈಗ ಹಾವೇರಿಯಲ್ಲಿ ಸೀಟ್‌ ಹಿಡಿಯಲು ಪುರುಷರು ಡ್ರೈವರ್‌ ಸೀಟ್‌ನ ಡೋರ್‌ ಅನ್ನು ಬಳಸಿದ್ದಾರೆ. ಈ ವಿಡಿಯೊ ಈಗ ವೈರಲ್‌ (Video Viral) ಆಗಿದೆ.

ಬಸ್‌ನ ಹಿಂಬದಿ ಇರುವ ಮೇನ್‌ ಡೋರ್‌ನಿಂದ ಹೋಗಿ ಸೀಟ್‌ ಹಿಡಿಯೋಣ ಎಂದರೆ ಅಲ್ಲಿ ಬಹುಪಾಲು ಮಹಿಳೆಯರೇ ತುಂಬಿರುತ್ತಾರೆ. ಅವರ ನೂಕುನುಗ್ಗಲು ನಡುವೆ ಸಿಲುಕಿ ಒಳಗೆ ಹೋಗಿ ಸೀಟು ಹಿಡಿದು ಕೂರುವುದು ಅಸಾಧ್ಯ ಎಂಬ ತರ್ಕಕ್ಕೆ ಕೆಲವು ಗಂಡಸರು ಬಂದಂತೆ ಇದೆ. ಈ ಕಾರಣಕ್ಕೆ ಅವರು ವಾಮಮಾರ್ಗವನ್ನು ಅನುಸರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾವೇರಿ ಬಸ್ ನಿಲ್ದಾಣದಲ್ಲಿ ಸೀಟ್‌ಗಾಗಿ ಪರದಾಡಿದ ಪುರುಷ ಪ್ರಯಾಣಿಕರು ಡ್ರೈವರ್‌ ಸೀಟ್‌ ಬಳಿಯ ಡೋರ್‌ ಅನ್ನು ಹತ್ತಿ ಒಳ ನುಗ್ಗಿದ್ದಾರೆ. ಇದನ್ನು ಸಾರ್ವಜನಿಕರೊಬ್ಬರು ವಿಡಿಯೊ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ: Weather report: ವೀಕೆಂಡ್‌ ಅಂತ ಹೊರಗೆ ಹೋಗುವ ಮುನ್ನ ಎಚ್ಚರ; ಇಂದು ಇರಲಿದೆ ಮಳೆ ಅಬ್ಬರ

ಹಾವೇರಿಯಲ್ಲಿ ಸರ್ಕಾರಿ ಬಸ್ ಸಂಖ್ಯೆ ಕಡಿಮೆ ಇದೆ ಎನ್ನಲಾಗಿದೆ. ಇದೇ ಈಗ ಪ್ರಯಾಣಿಕರ ಪರದಾಟಕ್ಕೆ ಕಾರಣವಾಗಿದೆ. ಇರುವ ಬಸ್‌ಗಳಲ್ಲೇ ಹೋಗಬೇಕು. ಆ ಬಸ್‌ ತಪ್ಪಿಸಿಕೊಂಡರೆ ಮತ್ತೆ ತಕ್ಷಣಕ್ಕೆ ತಾವು ಹೋಗುವ ಮಾರ್ಗಕ್ಕೆ ಬಸ್‌ ಬರುವುದಿಲ್ಲ. ಕೊನೆಗೆ ಬರುವ ಬಸ್‌ಗೂ ಇದೇ ರೀತಿ ರಶ್‌ ಇರುತ್ತದೆ. ಹೀಗಾಗಿ ಸೀಟ್‌ ಹಿಡಿಯಬೇಕೆಂದರೆ ಯಾವುದಾದರೂ “ದುಸ್ಸಾಹಸ” ಮಾಡಲೇಬೇಕು. ಈ ಹಿನ್ನೆಲೆಯಲ್ಲಿ ಡ್ರೈವರ್‌ ಸೀಟಿನಿಂದ ಕೆಲವು ಮಹಾಪುರುಷರು ಹತ್ತಿ ಸೀಟ್‌ ಹಿಡಿದುಕೊಂಡಿದ್ದಾರೆ.

ಹಾವೇರಿಯಿಂದ ಹುಬ್ಬಳ್ಳಿಗೆ ಹೋಗುವ ಬಸ್‌ ಇದಾಗಿದೆ. ಪ್ರವೇಶ ಬಾಗಿಲಿನಿಂದ ಬಸ್ ಹತ್ತಲಾಗದ ಪುರುಷರು ಡ್ರೈವರ್ ಸೀಟ್ ಅನ್ನು ಬಳಸಿ ಬಸ್‌ ಹತ್ತಿದ್ದಾರೆ.

ಡ್ರೈವರ್‌ ಸೀಟ್‌ನಿಂದಲೇ ಹತ್ತಿದ ನಾರಿಯರು!

ಚಿಕ್ಕಬಳ್ಳಾಪು: ಚಿಂತಾಮಣಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜೂನ್‌ 21ರಂದು ಮಹಿಳೆಯರು ಡ್ರೈವರ್‌ ಸೀಟ್‌ನಿಂದ ಹತ್ತಿ ಸುದ್ದಿಯಾಗಿದ್ದರು. ಚಿಂತಾಮಣಿ ಬಸ್ ನಿಲ್ದಾಣಕ್ಕೆ ಬಸ್‌ ಬರುತ್ತಿದ್ದಂತೆ ಜನರು ಓಡೋಡಿ ಬಂದಿದ್ದಾರೆ. ಎಲ್ಲರಿಗೂ ಸೀಟು ಹಿಡಿಯುವ ತವಕ. ಹೀಗಾಗಿ ಕೆಲವರು ಕಿಟಕಿ ಒಳಗಿನಿಂದ ಸೀಟ್‌ ಮೇಲೆ ತಮ್ಮ ಬ್ಯಾಗ್‌, ಕರ್ಚೀಫ್‌ಗಳನ್ನು ಒಗೆದರೆ, ಮತ್ತೆ ಕೆಲವರು ಡೋರ್‌ ಮೂಲಕ ಬೇಗ ಹೋಗಿ ಸೀಟ್‌ ಹಿಡಿಯುವ ದಾವಂತದಲ್ಲಿದ್ದರು. ಆದರೆ, ಈ ವೇಳೆ ಬುದ್ಧಿ ಉಪಯೋಗಿಸಿದ್ದ ಕೆಲವು ಮಹಿಳೆಯರು ಹೆಚ್ಚಿಗೆ ಸ್ಮಾರ್ಟ್‌ ಆಗಲು ಹೋಗಿ ಡ್ರೈವರ್‌ ಸೀಟ್‌ ಮೂಲಕ ಹತ್ತಿದ್ದರು. ಕೊನೆಗೆ ಸಿಬ್ಬಂದಿಯಿಂದ ಬೈಸಿಕೊಂಡಿದ್ದರು.

ಇನ್ನು ಬಸ್‌ನ ಮೇನ್‌ ಡೋರ್‌ನಿಂದ ಹೋದರೆ ಪ್ರಯೋಜನ ಇಲ್ಲ ಎಂದು ಲೆಕ್ಕ ಹಾಕಿದ ಕೆಲವು ಮಹಿಳೆಯರು ಸೀದಾ ಡ್ರೈವರ್‌ ಸೀಟ್‌ ಬಳಿಗೆ ಓಡಿದ್ದಾರೆ. ಅಲ್ಲಿ ಹೋದವರೇ ಡೋರ್‌ ಓಪನ್‌ ಮಾಡಿ ಅದರಿಂದ ಹತ್ತಲಾರಂಭಿಸಿದ್ದರು. ಹಾಗೂಹೀಗೂ ನಾಲ್ಕೈದು ಮಹಿಳೆಯರು ಅದರ ಮೂಲಕ ನುಗ್ಗಿಬಿಟ್ಟಿದ್ದರು. ಈ ವಿಚಾರ ತಿಳಿದ ಬಸ್‌ ನಿರ್ವಾಹಕ ಅಲ್ಲಿಗೆ ಬಂದು ಬೈದಿದ್ದು, ಮತ್ತೆ ಹತ್ತಲು ಮುಂದಾದ ಕೆಲವರನ್ನು ಕೆಳಗೆ ಇಳಿಸಿ ಕಳಿಸಿದ್ದರು.

ಇದನ್ನೂ ಓದಿ: Free Bus Service: ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು; ಪ್ರವಾಸೋದ್ಯಮಕ್ಕೆ ಸಿಕ್ಕಿತು ʼಶಕ್ತಿʼ

ಚಿಂತಾಮಣಿಯಿಂದ ಬೆಂಗಳೂರು ಸೇರಿದಂತೆ ಹಲವು ಸ್ಥಳಗಳಿಗೆ ತೆರಳುವ ಬಸ್‌ಗಳಿಗೆ ಭಾರಿ ಬೇಡಿಕೆ ಬಂದಿದ್ದು, ಸಿಕ್ಕ ಸಿಕ್ಕ ಬಸ್‌ಗಳನ್ನು ಜನರು ಹತ್ತುತ್ತಿದ್ದಾರೆ. ಹೀಗಾಗಿ ಬಹುತೇಕ ಎಲ್ಲ ಬಸ್‌ಗಳು ತುಂಬಿ ತುಳುಕುತ್ತಿವೆ. ಇನ್ನು ಪ್ರಯಾಣಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಮೇಲ್ಮೈ ಸುಳಿಗಾಳಿ ಎಫೆಕ್ಟ್‌; ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ

Rain News : ರಾಜ್ಯಾದ್ಯಂತ ಗುಡುಗು ಸಹಿತ ಮಧ್ಯಮ ಮಳೆಯಾಗಲಿದ್ದು, ಗಾಳಿ ವೇಗವು 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

By

Karnataka weather Forecast
Koo

ಬೆಂಗಳೂರು: ದಕ್ಷಿಣ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ (Rain News) ಸಾಧ್ಯತೆಯಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು 30-40 ಕಿ.ಮೀ ಗಾಳಿ ಬೀಸುವ (Karnataka weather Forecast) ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ವ್ಯಾಪಕ ಲಘುದಿಂದ ಸಾಧಾರಣ ಮಳೆ ಸಾಧ್ಯತೆ ಇದೆ. ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಯಾದಗಿರಿ, ಬೆಳಗಾವಿ, ಧಾರವಾಡ, ಗದಗದಲ್ಲಿ ಸಾಧಾರಣ ಮಳೆಯಾಗಲಿದೆ. ವಿಜಯನಗರ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಮಲೆನಾಡಿನ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: World Milk Day: ಹಾಲಿಗೊಂದು ದಿನವೇ ಬೇಕೆಂದಿಲ್ಲ, ವರ್ಷವಿಡೀ ಆಚರಿಸಬಹುದು!

ಬೇಸಿಗೆಯ ತಾಪಕ್ಕೆ ಮೂಗಿನಲ್ಲಿ ರಕ್ತಸ್ರಾವವೇ? ತಡೆಯಲು ಇಲ್ಲಿವೆ ಸರಳ ಉಪಾಯ

ಚಳಿಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ಮೂಗಿನಲ್ಲಿ ರಕ್ತಸ್ರಾವ ಆಗುವುದು ಸಾಮಾನ್ಯ. ಆದರೆ ಹಾಗೇಕಾಗುತ್ತದೆ? ಹಾಗೆ ಆಗದಂತೆ ತಡೆಯುವುದಕ್ಕೆ ಸಾಧ್ಯವಿಲ್ಲವೇ- ಈ ಎಲ್ಲ ಮಾಹಿತಿಗಳ ಜೊತೆಗೆ ಅದನ್ನು ತಡೆಯುವ ಸರಳ (Nosebleeds In Summer) ಉಪಾಯಗಳು ಇಲ್ಲಿವೆ. ಬೇಸಿಗೆಯಲ್ಲಿ ಕಾಡುವ ಹಲವು ರೀತಿಯ ಆರೋಗ್ಯ ಸಮಸ್ಯೆಗಳ ಪೈಕಿ ಮೂಗಿನಲ್ಲಿ ರಕ್ತ ಸೋರುವುದೂ ಒಂದು. ಅತಿ ಬಿಸಿಯಾದ ಮತ್ತು ಶುಷ್ಕ ವಾತಾವರಣವಿದ್ದಾಗ ಈ ಸಮಸ್ಯೆ ಕಾಡುವುದು ಹೆಚ್ಚು. ಅತಿಯಾದ ಚಳಿಯ ಜೊತೆಗಿನ ಒಣ ಹವೆ ಇದ್ದರೂ ಈ ತೊಂದರೆ ಕಾಡಬಹುದು. ಆದರೆ ಹೆಚ್ಚಿನ ಜನ ಬೇಸಿಗೆಯಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಅಲ್ಪಸ್ವಲ್ಪ ರಕ್ತ ಸೋರುತ್ತಿದ್ದರೆ ಇದನ್ನು ತಡೆಯುವುದಕ್ಕೆ ಕೆಲವು ಮನೆಮದ್ದುಗಳು ಸಹಾಯ ಮಾಡಬಹುದು. ಆದರೆ ಮೂಗಿನಲ್ಲಿ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ ವೈದ್ಯರನ್ನು ಕಾಣಬೇಕಾದೀತು. ಮೂಗಿನಲ್ಲಿ ರಕ್ತ ಸೋರುವುದಕ್ಕೆ ಕಾರಣಗಳನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ಒಣಗಿದ ಬಿಸಿ ಹವೆಯಿಂದಾಗಿ ಮೂಗಿನ ಒಳ ಭಾಗದಲ್ಲಿರುವ ಸೂಕ್ಷ್ಮ ರಕ್ತನಾಳಗಳು ಒಡೆದಾಗ ಉಂಟಾಗುವ ಸಮಸ್ಯೆಯಿದು. ಕೆಲವೊಮ್ಮೆ ಸೋಂಕಿನಿಂದಲೂ ಈ ಸಮಸ್ಯೆ ಕಾಣಬಹುದು. ಅತಿಯಾಗಿ ರಕ್ತಸ್ರಾವ ಆಗುತ್ತಿದ್ದರೆ, ಬೇರೆಯದೇ ಸಮಸ್ಯೆಯನ್ನಿದು ಸೂಚಿಸಬಹುದು. ಆದರೆ ಬೇಸಿಗೆಯ ಕಾರಣದಿಂದಲೇ ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ, ಕೆಲವು ಮನೆಮದ್ದುಗಳು ಇದಕ್ಕೆ ಉಪಶಮನ ನೀಡುತ್ತವೆ.

drink Water night

ನೀರು ಕುಡಿಯಿರಿ

ಇದಕ್ಕಿರುವ ಅತ್ಯಂತ ಸರಳವಾದ ಮದ್ದೆಂದರೆ ನೀರು ಕುಡಿಯುವುದು. ಹೆಚ್ಚಿನ ನೀರು ದೇಹ ಸೇರಿದಂತೆ ಕೋಶಗಳಲ್ಲಿರುವ ಶುಷ್ಕತೆ ಕಡಿಮೆಯಾಗುತ್ತದೆ. ಇದರಿಂದ ಮೂಗಿನಲ್ಲಿರುವ ಮ್ಯೂಕಸ್‌ ಕೋಶಗಳು ಸಹ ತಮ್ಮ ತೇವವನ್ನು ಕಾಪಿಟ್ಟುಕೊಳ್ಳುವುದಕ್ಕೆ ಸಹಾಯವಾಗುತ್ತದೆ. ಅಂದರೆ, ಒಣ ಹವೆಯ ಪ್ರತಿಕೂಲ ಪರಿಣಾಮ ಬೀರದಂತೆ ತಡೆಯುವುದಕ್ಕೆ ಇದು ಸುಲಭದ ಉಪಾಯ.

ಹ್ಯುಮಿಡಿಫಯರ್‌

ಬೇಸಿಗೆಯ ನೆವದಿಂದ ಎಷ್ಟೋ ಬಾರಿ ಅತಿಯಾಗಿ ಫ್ಯಾನ್‌ ಅಥವಾ ಎಸಿ ಬಳಸುತ್ತೇವೆ. ಇದರಿಂದ ಮನೆಯ ಅಥವಾ ಕಚೇರಿಯ ವಾತಾವರಣದಲ್ಲಿ ಶುಷ್ಕತೆ ಹೆಚ್ಚಾಗುತ್ತದೆ. ನೈಸರ್ಗಿಕವಾದ ಬಿಸಿ ಗಾಳಿಯ ಜೊತೆಗೆ ಇದೂ ಸಹ ಸಮಸ್ಯೆಗಳನ್ನು ಹೆಚ್ಚಿಸಬಹುದು. ಹಾಗಾಗಿ ವಾತಾವರಣದ ತೇವಾಂಶವನ್ನು ಹೆಚ್ಚಿಸುವಂಥ ಹ್ಯುಮಿಡಿಫಯರ್‌ ಬಳಸುವುದು ಇನ್ನೊಂದು ಮಾರ್ಗ. ಇದರಿಂದ ಮೂಗಿನ ಅಂಗಾಂಶಗಳು ಹಾನಿಗೊಳ್ಳುವುದನ್ನು ತಡೆಯಬಹುದು.

Moisturizer

ಮಾಯಿಶ್ಚರೈಸರ್‌ ಬಳಕೆ

ಮೂಗಿನ ಒಳ ಭಾಗ ಒಣಗಿ ಬಿರಿಯದಂತೆ ತಡೆಯಲು ಮಾಯಿಶ್ಚರೈಸರ್‌ ಬಳಕೆ ಮಾಡುವುದು ಉಪಯುಕ್ತ. ಇದಕ್ಕಾಗಿ ಇರುವ ಜೆಲ್‌ ಇಲ್ಲವೇ ಸ್ಟ್ರೇ ಬಳಸಬಹುದು. ಸಾಲೈನ್‌ ಸ್ಪ್ರೇ ಬಳಕೆಯೂ ಉಪಯುಕ್ತವಾದೀತು. ಇವನ್ನೆಲ್ಲ ಹೊಸದಾಗಿ ಖರೀದಿಸಿ ತರುವಷ್ಟು ವ್ಯವಧಾನ ಇಲ್ಲದಿದ್ದರೆ, ಸರಳವಾಗಿ ಕೊಬ್ಬರಿ ಎಣ್ಣೆಯನ್ನು ಮೂಗಿನ ಒಳಭಾಗದ ಅಂಗಾಂಶಗಳಿಗೆ ಹೆಚ್ಚಿ. ಇದು ಪರಿಣಾಮಕಾರಿಯಾಗಿ ತೇವವನ್ನು ಹಿಡಿದಿಡುತ್ತದೆ.

ಮುಚ್ಚಿಕೊಳ್ಳಿ

ತೀವ್ರ ತಾಪದ ಹೊತ್ತಿನಲ್ಲಿ ಮನೆಯಿಂದ ಹೊರಗೆ ಹೋಗುವಾಗ ಮುಖಕ್ಕೆ ಮಾಸ್ಕ್‌ ಹಾಕುವುದು ಸಹಾಯಕ. ಇದರಿಂದ ಒಣ ಹವೆಯನ್ನು ಉಸಿರಾಡುವುದು ಸ್ವಲ್ಪ ಮಟ್ಟಿಗಾದರೂ ತಪ್ಪಿಸಬಹುದು. ತಿಳಿ ಬಣ್ಣದ ದೊಡ್ಡ ಹ್ಯಾಟ್‌ ಧರಿಸುವುದರಿಂದ ಮುಖದ ಮೇಲೆ ಬಿಸಿಲು ನೇರವಾಗಿ ಬೀಳದಂತೆ ಮಾಡಬಹುದು. ಈ ಕ್ರಮಗಳೆಲ್ಲ ಸಣ್ಣವೇ ಆದರೂ, ಒಟ್ಟಾರೆಯಾಗಿ ಸಮಸ್ಯೆಯನ್ನು ದೂರ ಮಾಡುವಲ್ಲಿ ನೆರವಾಗುತ್ತವೆ.

ಇದನ್ನೂ ಓದಿ: Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!

ಮಾಡಬೇಡಿ

ಮೂಗನ್ನು ಶುಚಿಗೊಳಿಸುವ ನೆವದಲ್ಲಿ ನಾಸಿಕದ ಮೇಲೆ ಯಾವುದೇ ರೀತಿಯಲ್ಲೂ ತೀರಾ ಒತ್ತಡ ಹಾಕಬೇಡಿ. ಈಗಾಗಲೇ ಮೂಗಿನಲ್ಲಿ ರಕ್ತ ಸೋರುತ್ತಿದ್ದರಂತೂ ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸಿ. ಮೂಗಿನ ಮೇಲೆ ಒತ್ತಡ ಹಾಕಿದರೆ ಬಿರಿದ ಕೋಶಗಳು ದುರಸ್ತಿಯಾಗುವುದು ನಿಧಾನವಾಗುತ್ತದೆ ಅಥವಾ ಇನ್ನಷ್ಟು ಬಿರಿದು ಸಮಸ್ಯೆಯನ್ನೇ ಸೃಷ್ಟಿಸುತ್ತವೆ. ಅಲರ್ಜಿಗಳನ್ನು ಹತ್ತಿಕ್ಕಿ. ದಿನವಿಡೀ ಜೋರಾಗಿ ಸೀನುತ್ತಲೇ ಇದ್ದರೆ, ಮೂಗು ಸೋರುವಾಗ ರಕ್ತಸ್ರಾವ ಆಗುವುದು ಖಚಿತ.

Winter transitions to summer

ಆಹಾರ

ಆರೋಗ್ಯಕರವಾದ ಆಹಾರವನ್ನು ಕಡ್ಡಾಯವಾಗಿ ಪಾಲಿಸಿ. ಸೆಕೆಯ ನೆವವೊಡ್ಡಿ ಅತಿಯಾದ ತಣ್ಣಗಿನ ಪೇಯಗಳನ್ನು ಕುಡಿಯುವುದು, ಐಸ್‌ಕ್ರೀಮ್‌ ಮೆಲ್ಲುವುದು- ಇವೆಲ್ಲ ಮೂಗಿನ ಸಮಸ್ಯೆಗಳನ್ನು ಹೆಚ್ಚಿಸಬಹುದು; ಗಂಟಲಿನ ಸೋಂಕಿಗೆ, ಶೀತ-ನೆಗಡಿಗೆ ಕಾರಣವಾಗಬಹುದು. ವಿಟಮಿನ್‌ ಸಿ ಹೆಚ್ಚಿರುವ ಆಹಾರವನ್ನು ವಿಫುಲವಾಗಿ ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Stray Dogs Attack: ಶಿರಾದಲ್ಲಿ ಬೀದಿ ನಾಯಿಗಳ ದಾಳಿ: 4 ಮಕ್ಕಳು, ಒಬ್ಬ ಮಹಿಳೆಗೆ ಗಂಭೀರ ಗಾಯ

Stray dogs attack: ಬೀದಿನಾಯಿಗಳು ದಾಳಿ ನಡೆಸಿ, ನಾಲ್ಕು ಮಕ್ಕಳು ಹಾಗೂ ಓರ್ವ ಮಹಿಳೆಗೆ ಕಚ್ಚಿ ಗಾಯಗೊಳಿಸಿರುವ ಘಟನೆ ನಗರದ 12 ನೇ ವಾರ್ಡ್ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಜರುಗಿದೆ. ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಮಕ್ಕಳ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿದ್ದು, ಕಚ್ಚಿ ಗಾಯಗೊಳಿಸಿವೆ. ಇದೇ ವೇಳೆ ರಕ್ಷಣೆಗೆಂದು ಹೋದ ಮಹಿಳೆಯ ಮೇಲೂ ದಾಳಿ ನಡೆಸಿ, ಗಾಯಗೊಳಿಸಿವೆ.

VISTARANEWS.COM


on

Stray dogs attack in Shira 4 children one woman injured
Koo

ಶಿರಾ: ಬೀದಿನಾಯಿಗಳು ದಾಳಿ (Stray Dogs Attack) ನಡೆಸಿ, ನಾಲ್ಕು ಮಕ್ಕಳು ಹಾಗೂ ಒಬ್ಬ ಮಹಿಳೆಗೆ ಕಚ್ಚಿ ಗಾಯಗೊಳಿಸಿರುವ ಘಟನೆ ನಗರಸಭೆಯ 12ನೇ ವಾರ್ಡ್ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ.

ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಮಕ್ಕಳ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿದ್ದು, ಕಚ್ಚಿ ಗಾಯಗೊಳಿಸಿವೆ. ಇದೇ ವೇಳೆ ಮಕ್ಕಳ ರಕ್ಷಣೆಗೆಂದು ಹೋದ ಮಹಿಳೆಯ ಮೇಲೂ ದಾಳಿ ನಡೆಸಿ, ಗಾಯಗೊಳಿಸಿವೆ.

ಬೀದಿನಾಯಿಗಳ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಶಿರಾ ನಗರಸಭೆ ವ್ಯಾಪ್ತಿಯ 12ನೇ ವಾರ್ಡ್‌ನ ನಿವಾಸಿಗಳು, ನಗರಸಭೆಯ ಆಯುಕ್ತ ಕೆ. ರುದ್ರೇಶ್‌ ಅವರಿಗೆ ಮನವಿ ಸಲ್ಲಿಸಿದರು.

ರಿಹಾನ್ (7), ತಾಸ್ಮಿಯ (13), ಜಿಯಾ ಉಲ್ಲಾಖಾನ್ (7), ಇಬದುಲ್ಲಾ ಖಾನ್ (1) ಹಾಗೂ ಶಾಹಿನ (45) ಅವರಿಗೆ ಗಾಯಗಳಾಗಿದ್ದು, ಶಿರಾ ನಗರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Bangalore Rain: ರಾಜಧಾನಿಯಲ್ಲಿ ಮಳೆ ಆರ್ಭಟ; ಬೆಂಗಳೂರು-ಹೊಸೂರು ಹೆದ್ದಾರಿ ಜಲಾವೃತ, ಮನೆಗಳಿಗೆ ನುಗ್ಗಿದ ನೀರು

ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡ 4 ಮಕ್ಕಳು ಹಾಗೂ ಮಹಿಳೆಯನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Dinesh Karthik: ಜನ್ಮದಿನದಂದೇ ಕ್ರಿಕೆಟ್‌ ಬದುಕಿಗೆ ದಿನೇಶ್‌ ಕಾರ್ತಿಕ್‌ ಭಾವುಕ ವಿದಾಯ; ಕೊಡುಗೆ ನೆನೆದ ಆರ್‌ಸಿಬಿ ಫ್ಯಾನ್ಸ್

ಬೀದಿನಾಯಿಗಳ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಶಿರಾ ನಗರಸಭೆ ವ್ಯಾಪ್ತಿಯ 12ನೇ ವಾರ್ಡ್‌ನ ನಿವಾಸಿಗಳು, ನಗರಸಭೆಯ ಆಯುಕ್ತ ಕೆ. ರುದ್ರೇಶ್‌ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆಯ ಆಯುಕ್ತ ಕೆ. ರುದ್ರೇಶ್‌, ನಗರಸಭೆ ಸಾಮಾನ್ಯ ಸಭೆಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವ ಎಬಿಸಿ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಸಭೆ ತೀರ್ಮಾನ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ತಡವಾಯಿತು. ಸದ್ಯದಲ್ಲೇ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದ ತಿಳಿಸಿದರು.

Continue Reading

ಪ್ರಮುಖ ಸುದ್ದಿ

Bangalore Rain: ರಾಜಧಾನಿಯಲ್ಲಿ ಮಳೆ ಆರ್ಭಟ; ಬೆಂಗಳೂರು-ಹೊಸೂರು ಹೆದ್ದಾರಿ ಜಲಾವೃತ, ಮನೆಗಳಿಗೆ ನುಗ್ಗಿದ ನೀರು

Bangalore Rain: ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ‌ಯಲ್ಲಿ ರಾಜ್ಯದಲ್ಲಿ‌ ಇಂದಿನಿಂದ ಐದು ದಿನಗಳ‌ ಕಾಲ ಭಾರಿ‌ ಮಳೆ ಸಾಧ್ಯತೆ ಇದೆ.

VISTARANEWS.COM


on

Bangalore rain
Koo

ಬೆಂಗಳೂರು: ರಾಜಧಾನಿಯ ವಿವಿಧೆಡೆ ಶನಿವಾರ ಸಂಜೆ ಭರ್ಜರಿ ಮಳೆ (Bangalore Rain) ಸುರಿದಿದ್ದು, ಹಲವೆಡೆ ಪ್ರಮುಖ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡಿದರು. ನಗರದ ಹೊರವಲಯದ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ವೀರಸಂದ್ರ ಸಿಗ್ನಲ್ ಬಳಿ ಭಾರಿ ಪ್ರಮಾಣದ ನೀರು ನಿಂತಿದ್ದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಇನ್ನು ನಗರದ ಕೆಲವು ಕಡೆ ಮಳೆ ನೀರು ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಪ್ರತಿ ಬಾರಿ ಮಳೆ ಬಂದಾಗ ಹೆದ್ದಾರಿ ಕೆರೆಯಂತಾಗುತ್ತದೆ. ಮಳೆಯ ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ರಸ್ತೆ ಜಲಾವೃತವಾಗುತ್ತದೆ. ಹೆದ್ದಾರಿಯಲ್ಲಿ ನಾಲ್ಕೈದು ಅಡಿಗಳಷ್ಟು ಮಳೆ ನೀರು ನಿಂತಿದ್ದರಿಂದ ಹೆದ್ದಾರಿಯ ಅವ್ಯವಸ್ಥೆಯಿಂದ ಹಲವು ವಾಹನಗಳು ಕೆಟ್ಟುನಿಂತಿವೆ. ಇನ್ನು ಜಲಾವೃತವಾದ ರಸ್ತೆಯಲ್ಲಿ ವಾಹನಗಳು ಸಂಚರಿಸಲಾಗದೆ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇನ್ನು ಸಿಲಿಕಾನ್ ಸಿಟಿಯ ಶೇಷಾದ್ರಿಪುರಂ, ಶಿವಾನಂದ ಸರ್ಕಲ್, ವಿಜಯನಗರ, ಶಿವಾಜಿನಗರ, ಮಲ್ಲೇಶ್ವರಂ, ವಸಂತನಗರ, ಶಾಂತಿನಗರ, ಜಯನಗರ, ಯಶವಂತಪುರ, ರಾಜಾಜಿ ನಗರ, ಕೋರಮಂಗಲ, ಎಂ.ಜಿ. ರಸ್ತೆ, ಕಬ್ಬನ್ ಪಾರ್ಕ್ ಸೇರಿ ನಗರದ ಹಲವೆಡೆ ಭರ್ಜರಿ ಮಳೆಯಾಗಿದೆ. ಪಾದಚಾರಿಗಳು ಮತ್ತು ವಾಹನ ಸವಾರರು ರಸ್ತೆ ದಾಟಲು ಪರದಾಡಿದರು.

ಕೆಲಸ ಕಾರ್ಯ ಮುಗಿಸಿಕೊಂಡು ಮನೆಗಳಿಗೆ ತೆರಳುತ್ತಿದ್ದ ವೇಳೆ ಭಾರಿ ಮಳೆ ಬಿದ್ದಿದ್ದರಿಂದ ವಾಹನ ಸವಾರರು ಬಸ್ ನಿಲ್ದಾಣಗಳು, ಕಟ್ಟಡಗಳ ಬಳಿ ನಿಂತು ಆಶ್ರಯ ಪಡೆದರು. ಮಳೆ ನೀರಿನಿಂದ ಸಹಕಾರ ನಗರದ ಜಿ ಬ್ಲಾಕ್ ರಸ್ತೆಗಳು ಹಳ್ಳದಂತಾಗಿ ಬದಲಾಗಿದ್ದವು. ಇನ್ನು ಕೆಎಸ್ ಗಾರ್ಡನ್‌ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಪರದಾಡಿದರು.

ಸಂಜೆ ಸುರಿದ ಮಳೆಯಿಂದ ಯಲಚೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಪರದಾಡಿದರು. ಮಳೆ ಬಂದರೆ ಇಲ್ಲಿನ ಜನ ಭಯದಲ್ಲೇ ದಿನ ಕಳೆಯುವ ಸ್ಥಿತಿ ಇದೆ. ಇನ್ನು ಮನೆಯ ಮುಂದೆ ಅಧಿಕಾರಿಗಳು ಗುಂಡಿ ತೆಗೆದು ಮುಚ್ಚದ ಹಿನ್ನೆಲೆಯಲ್ಲಿ ವಾಹನ ಸವಾರನೊಬ್ಬ ಬಿದ್ದು ಗಾಯಗೊಂಡಿದ್ದಾರೆ.

ಯಲಹಂಕದಲ್ಲಿ ಧರೆಗುರುಳಿದ ಮರ

ಮಳೆಯಿಂದಾಗಿ ಯಲಹಂಕ ವಲಯದಲ್ಲಿನ ಜಕ್ಕೂರು ಬಳಿ ಮರ ಧರೆಗುರುಳಿದ್ದು, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಸ್ಥಳಕ್ಕೆ ಭೇಟಿ ನೀಡಿ ಕೂಡಲೆ ಮರ ತೆರವುಗೊಳಿಸಲು ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮುಂದಿನ ದಿನಗಳ‌ ಕಾಲ ಭಾರಿ‌ ಮಳೆ ಸಾಧ್ಯತೆ

ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ‌ಯಲ್ಲಿ ರಾಜ್ಯದಲ್ಲಿ‌ ಇಂದಿನಿಂದ ಐದು ದಿನಗಳ‌ ಕಾಲ ಭಾರಿ‌ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸದ್ಯ ಕೇರಳ ಪ್ರವೇಶಿಸಿರುವ ಮುಂಗಾರು, ನಂತರ ಕರ್ನಾಟಕಕ್ಕೆ ಪ್ರವೇಶಿಸಲಿದೆ. ಈ ಬಾರಿ ಅವಧಿಗೂ ಮೊದಲೇ ಮುಂಗಾರು ಪ್ರವೇಶ ಮಾಡುತ್ತಿದೆ. ಕಳೆದ ವರ್ಷ ಜೂನ್ 15 ರಿಂದ ಮುಂಗಾರು ಪ್ರವೇಶವಾಗಿತ್ತು. ಆದರೆ ಈ ವರ್ಷ 15 ದಿನಗಳಿಗೂ ಮೊದಲೇ ಮುಂಗಾರು ಪ್ರವೇಶವಾಗುತ್ತಿದೆ. ಹೀಗಾಗಿ ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಇದನ್ನೂ ಓದಿ | Karnataka Weather : ಭಾರಿ ಮಳೆಗೆ ಕೆರೆಯಂತಾದ ರಸ್ತೆಗಳು; ಮುಳುಗಡೆಯಾದ ವಾಹನಗಳು

ಇನ್ನು ರಾಜ್ಯದಲ್ಲಿ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಭಾಗಕ್ಕೆ ಹವಮಾನ ಇಲಾಖೆ‌ ಅಲರ್ಟ್‌ ನೀಡಿದ್ದುಮ ಬೆಂಗಳೂರಿನಲ್ಲಿ ಇಂದಿನಿಂದ ಐದು ದಿನ ಮಳೆ ಇರಲಿದೆ. ಗುಡುಗು – ಮಿಂಚು ಸಹಿತ ಬೀರುಗಾಳಿ ಮಳೆ ಸುರಿಯಲಿದೆ ಎಂದು ಮಾಹಿತಿ ನೀಡಿದೆ.

Continue Reading

ದೇಶ

Exit Poll 2024 : ಮತಗಟ್ಟೆ ಸಮೀಕ್ಷೆಗಳನ್ನು ನಾವು ನಂಬಲ್ಲ; ಡಿಕೆಶಿ, ಎಂಬಿ ಪಾಟೀಲ್ ಸ್ಪಷ್ಟ ನುಡಿ

Exit Poll 2024: ಚುನಾವಣೋತ್ತರ ಸಮೀಕ್ಷೆ ನಡೆಸುವವರು ಅಲ್ಪಪ್ರಮಾಣದ ಮಾದರಿಗಳನ್ನು ಸಂಗ್ರಹಿಸಿರುತ್ತಾರೆ. ಆಳವಾದ ಸಮೀಕ್ಷೆ ನಡೆಯುವುದಿಲ್ಲ. ಹೀಗಾಗಿ ಈ ಸಮೀಕ್ಷೆಗಳಿಂದ ನಿಖರ ಮಾಹಿತಿ ಬರುವುದಿಲ್ಲ. ಹೀಗಾಗಿ ನನಗೆ ಎಕ್ಸಿಟ್ ಪೋಲ್ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ.

VISTARANEWS.COM


on

Exit Poll 2024
Koo

ಬೆಂಗಳೂರು: ನನಗೆ ಚುನಾವಣೋತ್ತರ ಸಮೀಕ್ಷೆ ಮೇಲೆ ವಿಶ್ವಾಸವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಶನಿವಾರ ರಾತ್ರಿ ಮಾಧ್ಯಮಗಳು, ಎಕ್ಸಿಟ್ ಪೋಲ್ ಸಮೀಕ್ಷೆಗಳ ಬಗ್ಗೆ ಕೇಳಿದಾಗ ಶಿವಕುಮಾರ್ ಅವರು ಈ ರೀತಿ ಉತ್ತರಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಗರಿಷ್ಠ 8 ಸ್ಥಾನಗಳು ಸಿಗಬಹುದು ಎಂದು ಬಹುತೇಕ ಸಮೀಕ್ಷೆಗಳು ಹೇಳಿರುವ ಹಿನ್ನೆಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಚುನಾವಣೋತ್ತರ ಸಮೀಕ್ಷೆ ನಡೆಸುವವರು ಅಲ್ಪಪ್ರಮಾಣದ ಮಾದರಿಗಳನ್ನು ಸಂಗ್ರಹಿಸಿರುತ್ತಾರೆ. ಆಳವಾದ ಸಮೀಕ್ಷೆ ನಡೆಯುವುದಿಲ್ಲ. ಹೀಗಾಗಿ ಈ ಸಮೀಕ್ಷೆಗಳಿಂದ ನಿಖರ ಮಾಹಿತಿ ಬರುವುದಿಲ್ಲ. ಹೀಗಾಗಿ ನನಗೆ ಎಕ್ಸಿಟ್ ಪೋಲ್ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ 3-4 ಸ್ಥಾನ ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ಮಾಹಿತಿ ತೋರಿಸುತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ. ದೇಶದ ಅಧಿಕಾರವನ್ನು ಇಂಡಿಯಾ ಮೈತ್ರಿಕೂಟ ಪಡೆಯಲಿದೆ.

ಇದನ್ನೂ ಓದಿ: Exit Poll 2024 : ತಮಿಳುನಾಡು, ಕೇರಳದಲ್ಲೂ ಅರಳಲಿದೆ ಕಮಲ; ಮೋದಿಗಿದು ಐತಿಹಾಸಿಕ ಸಾಧನೆ

ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿ ನಾವ್ಯಾರು ಎಕ್ಸಿಟ್ ಪೋಲ್ ನಂಬುವುದಿಲ್ಲ ಎಂದು ಹೇಳಿದ್ದಾರೆ. ಇದು ಗ್ರೌಂಡ್ ರಿಯಾಲಿಟಿಯಿಂದ ದೂರ ಇದೆ ಎಂದೇ ನಂಬುತ್ತೇವೆ ಎಂದು ನುಡಿದಿದ್ದಾರೆ. ಸಮೀಕ್ಷೆಗಳಲ್ಲಿ ಕೇವಲ ಐದಾರು ಸೀಟುಗಳನ್ನು ಮಾತ್ರ ಕೊಟ್ಟಿದ್ದಾರೆ. ಆದರೆ, ಜೂ 4ರಂದು ವಾಸ್ತವ ಗೊತ್ತಾಗಲಿದೆ. ಫಲಿತಾಂಶದಲ್ಲಿ ಕಾಂಗ್ರೆಸ್​ ಡಬಲ್​ ಡಿಜಿಟ್ ದಾಟಲಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಸಮೀಕ್ಷೆ ಹೇಗಿದೆ?

ಬೆಂಗಳೂರು: ಲೋಕ ಸಭಾ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ಫಲಿತಾಂಶ ಬಿಜೆಪಿಗೆ 2019ರ ಚುನಾವಣೆಯಷ್ಟು ಪೂರಕವಾಗಿಲ್ಲ (Exit Poll 2024 ) ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿವೆ. ಈ ಬಾರಿ ಕರ್ನಾಟಕದಲ್ಲಿ 18 ಸೀಟುಗಳು ಬಿಜೆಪಿಗೆ ದೊರೆಯಲಿದ್ದು, 8 ಸ್ಥಾನಗಳು ಕಾಂಗ್ರೆಸ್​ಗೆ ದೊರೆಯಲಿವೆ ಎಂದು ಪೋಲ್​​ ಸ್ಟಾಟ್ ಹೇಳಿದೆ. ಜೆಡಿಎಸ್​​ ರೀತಿ ಸ್ಪರ್ಧಿಸಿರುವ ಒಟ್ಟು 3ರಲ್ಲಿ ಎರಡು ಸ್ಥಾನಗಳನ್ನು ಜೆಡಿಎಸ್​ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ದೇಶಾದ್ಯಂತ ಬಿಜಪಿಗೆ ಹಿಂದಿಗಿಂತ ಹೆಚ್ಚು ಸೀಟುಗಳು ಸಿಗಲಿವೆ ಎಂಬ ಟ್ರೆಂಡ್ ಇರುವ ಹೊರತಾಗಿಯೂ ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿಗೆ ಬಿಜೆಪಿಗೆ ಹಿನ್ನಡೆಯಾಗಿದೆ. 2019ರಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿದ್ದರೆ ಕಾಂಗ್ರೆಸ್ ಹಾಗೂ ಜೆಡಿಎಸ್​ ತಲಾ ಒಂದು ಸ್ಥಾನವನ್ನು ಹಂಚಿಕೊಂಡಿತ್ತು. ಪಕ್ಷೇತರರಾದ ಸುಮಲತಾ ಅವರು ಮಂಡ್ಯ ಕ್ಷೇತ್ರದಲ್ಲಿ ಗೆದ್ದಿದ್ದರು.

ವಿಸ್ತಾರ ನ್ಯೂಸ್​- COPS ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿಗೆ 18ರಿಂದ-22 ಸ್ಥಾನಗಳು ದೊರಕಿದೆ, ಕಾಂಗ್ರೆಸ್​ಗೆ 08ರಿಂದ 10 ಸ್ಥಾನಗಳು ಲಭಿಸಲಿವೆ. ಜೆಡಿಎಸ್​ಗೆ 2ರಿಂದ 3 ಸ್ಥಾನ ಸಿಗುವುದು ಎಂದು ಹೇಳಲಾಗಿದೆ. ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 20ರಿಂದ 22, ಕಾಂಗ್ರೆಸ್ 3ರಿಂದ 5 ಮತ್ತು ಜೆಡಿಎಸ್ 3 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ . ಇಂಡಿಯಾ ಟುಡೆ ಪ್ರಕಾರ ಕರ್ನಾಟದಲ್ಲಿ ಬಿಜೆಪಿಗೆ 23ರಿಂದ 25 ಹಾಗೂ ಕಾಂಗ್ರೆಸ್​ಗೆ 04ರಿಂದ 05 ಹಾಗೂ ಜೆಡಿಎಸ್​ಗೆ 1ರಿಂದ 3ಸ್ಥಾನ ಸಿಗಲಿದೆ ಎಂದು ಅಂದಾಜಿಸಿದೆ.

ಜನ್​ಕಿ ಬಾತ್​ ಸಮೀಕ್ಷೆ ಪ್ರಕಾರ ಬಿಜೆಪಿಗೆ 17ರಿಂದ 23 ಹಾಗೂ ಕಾಂಗ್ರೆಸ್​ಗೆ 4ರಿಂದ 8 ಹಾಗೂ ಜೆಡಿಎಸ್​ಗೆ 1ರಿಂದ 2 ಸ್ಥಾನ ಸಿಗಬಹುದು ಅಂದಾಜಿಸಿದೆ. ಜಿ ನ್ಯೂಸ್ ಪ್ರಕಾರ ಬಿಜೆಪಿಗೆ 18ರಿಂದ22, ಕಾಂಗ್ರೆಸ್​ಗೆ 4ರಿಂದ 5 ಹಾಗೂ ಜೆಡಿಎಸ್​​ 01ರಿಂದ 3 ಸೀಟುಗಳು ಸಿಗಲಿವೆ.

ಜನ್​ಕಿ ಬಾತ್​ ಸಮೀಕ್ಷೆ ಪ್ರಕಾರ ಬಿಜೆಪಿಗೆ 17ರಿಂದ 23 ಹಾಗೂ ಕಾಂಗ್ರೆಸ್​ಗೆ 4ರಿಂದ 8 ಹಾಗೂ ಜೆಡಿಎಸ್​ಗೆ 1ರಿಂದ 2 ಸ್ಥಾನ ಸಿಗಬಹುದು ಅಂದಾಜಿಸಿದೆ. ಜಿ ನ್ಯೂಸ್ ಪ್ರಕಾರ ಬಿಜೆಪಿಗೆ 18ರಿಂದ22, ಕಾಂಗ್ರೆಸ್​ಗೆ 4ರಿಂದ 5 ಹಾಗೂ ಜೆಡಿಎಸ್​​ 01ರಿಂದ 3 ಸೀಟುಗಳು ಸಿಗಲಿವೆ.

ಕರ್ನಾಟಕದಲ್ಲಿ ಹೀಗಿದೆ ಚುನಾವಣಾ ಫಲಿತಾಂಶ ಸಮೀಕ್ಷೆ

  • ವಿಸ್ತಾರ-COPS: ಬಿಜೆಪಿ 18-20, ಕಾಂಗ್ರೆಸ್‌ 8-10, ಜೆಡಿಎಸ್‌ 2-3
  • ಜನ್ ಕೀ ಬಾತ್: ಬಿಜೆಪಿ 17-23, ಕಾಂಗ್ರೆಸ್ 4-8, ಜೆಡಿಎಸ್ 1-2
  • ಝೀ ನ್ಯೂಸ್: ಬಿಜೆಪಿ 18-22, ಕಾಂಗ್ರೆಸ್ 4-6, ಜೆಡಿಎಸ್ 1-3
  • CNN ನ್ಯೂಸ್ 18: ಬಿಜೆಪಿ 21-23, ಕಾಂಗ್ರೆಸ್ 3-7, ಜೆಡಿಎಸ್ 2-3
  • ಪೋಲ್‌ಸ್ಟ್ರಾಟ್‌: ಬಿಜೆಪಿ 18, ಕಾಂಗ್ರೆಸ್-08, ಜೆಡಿಎಸ್-02 ಸ್ಥಾನ
  • ಇಂಡಿಯಾ ಟಿವಿ: ಬಿಜೆಪಿ 18-22, ಕಾಂಗ್ರೆಸ್‌ 4-8, ಜೆಡಿಎಸ್‌ 1-3
  • ಸಿ-ವೋಟರ್: ಬಿಜೆಪಿ 21-22, ಕಾಂಗ್ರೆಸ್ 3-5, ಜೆಡಿಎಸ್ 1-3
  • ಇಂಡಿಯಾ ಟುಡೇ: ಬಿಜೆಪಿ 20-22, ಕಾಂಗ್ರೆಸ್ 3-5, ಜೆಡಿಎಸ್ 2-3
  • ಪೋಲ್ ಆಫ್ ಪೋಲ್: ಬಿಜೆಪಿ-20, ಕಾಂಗ್ರೆಸ್-6, ಜೆಡಿಎಸ್-2
  • ಟೈಮ್ಸ್ ನೌ: ಬಿಜೆಪಿ 21-25, ಕಾಂಗ್ರೆಸ್ 3-7, ಜೆಡಿಎಸ್ 1-2
  • ಇಂಡಿಯಾ ನ್ಯೂಝ್: ಬಿಜೆಪಿ-21, ಕಾಂಗ್ರೆಸ್-5, ಜೆಡಿಎಸ್-2
  • ನ್ಯೂಸ್ ನೇಷನ್: ಬಿಜೆಪಿ-16, ಕಾಂಗ್ರೆಸ್-10, ಜೆಡಿಎಸ್-02
  • ನ್ಯೂಸ್ 24-ಟುಡೇಸ್ ಚಾಣಕ್ಯ: ಬಿಜೆಪಿ-ಜೆಡಿಎಸ್ 24, ಕಾಂಗ್ರೆಸ್-4

Continue Reading
Advertisement
cyber attack ನನ್ನ ದೇಶ ನನ್ನ ದನಿ
ಅಂಕಣ10 mins ago

ಸೈಬರ್‌ ಸೇಫ್ಟಿ ಅಂಕಣ: 2024ರ ಸೈಬರ್‌ ಸೆಕ್ಯುರಿಟಿ ಟ್ರೆಂಡ್‌ಗಳು

ನನ್ನ ದೇಶ ನನ್ನ ದನಿ baman das basu
ಅಂಕಣ20 mins ago

ನನ್ನ ದೇಶ ನನ್ನ ದನಿ ಅಂಕಣ: ಬ್ರಿಟಿಷರು ಬರುವ ಮೊದಲು ರಸ್ತೆಗಳೇ ಇರಲಿಲ್ಲವಾದರೆ, ಕೃಷ್ಣದೇವರಾಯನ ಭಾರಿ ಸೈನ್ಯ ಆಕಾಶದಲ್ಲಿ ಹಾರಾಡುತ್ತಿತ್ತೇ?

Karnataka weather Forecast
ಮಳೆ50 mins ago

Karnataka Weather : ಮೇಲ್ಮೈ ಸುಳಿಗಾಳಿ ಎಫೆಕ್ಟ್‌; ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ

Heatwave Effect
ಆರೋಗ್ಯ1 hour ago

Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!

Dina Bhavishya
ಭವಿಷ್ಯ2 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರಿಗೆ ಸಿಗಲಿದೆ ಗುಡ್‌ ನ್ಯೂಸ್‌

Stray dogs attack in Shira 4 children one woman injured
ಪ್ರಮುಖ ಸುದ್ದಿ7 hours ago

Stray Dogs Attack: ಶಿರಾದಲ್ಲಿ ಬೀದಿ ನಾಯಿಗಳ ದಾಳಿ: 4 ಮಕ್ಕಳು, ಒಬ್ಬ ಮಹಿಳೆಗೆ ಗಂಭೀರ ಗಾಯ

Somnath Bharti
ದೇಶ7 hours ago

Somnath Bharti: ಮೋದಿ 3ನೇ ಸಲ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುವೆ ಎಂದ ಆಪ್‌ ನಾಯಕ!

T 20 world cup
ಕ್ರೀಡೆ8 hours ago

T20 World Cup : ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 60 ರನ್​ ಭರ್ಜರಿ ವಿಜಯ ಸಾಧಿಸಿದ ಭಾರತ

Exit Poll
ಪ್ರಮುಖ ಸುದ್ದಿ8 hours ago

Exit Poll 2024 : ಆ್ಯಕ್ಸಿಸ್​ ಮೈ ಇಂಡಿಯಾ ಪ್ರಕಾರ ಎನ್​ಡಿಎಗೆ 401 ಸೀಟು

Poll Of Polls
ದೇಶ8 hours ago

Poll Of Polls: ಎನ್‌ಡಿಎಗೆ 350+ ಸೀಟು, ದಕ್ಷಿಣದಲ್ಲೂ ಬಿಜೆಪಿಗೆ ಸ್ವೀಟು, ಇಂಡಿಯಾ ‌ಕೂಟಕ್ಕೆ ಹಿನ್ನಡೆಯ ಏಟು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು15 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 weeks ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌