Tomato Price Hike: 1000 ರೂ. ಗಡಿ ದಾಡಿದ 1 ಬಾಕ್ಸ್‌ ಟೊಮ್ಯಾಟೊ ದರ! - Vistara News

ಕರ್ನಾಟಕ

Tomato Price Hike: 1000 ರೂ. ಗಡಿ ದಾಡಿದ 1 ಬಾಕ್ಸ್‌ ಟೊಮ್ಯಾಟೊ ದರ!

Tomato Price Hike: ಹೊರ ರಾಜ್ಯಗಳಿಂದ ಭಾರಿ ಬೇಡಿಕೆ ಉಂಟಾಗಿರುವುದರಿಂದ ಕೋಲಾರ ಮಾರುಕಟ್ಟೆಯಲ್ಲಿ 15 ಕೆ.ಜಿ ಟೊಮ್ಯಾಟೊ ಬಾಕ್ಸ್‌ ದರ 1000 ರೂಪಾಯಿ ಗಡಿ ದಾಡಿದೆ.

VISTARANEWS.COM


on

Tomato Price Hike In Various States
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲಾರ: ಟೊಮ್ಯಾಟೊ ದರ ಗಗನಕ್ಕೇರಿದ್ದು, 1 ಕೆ.ಜಿ ಟೊಮ್ಯಾಟೊ 100 ರೂ. ಸಮೀಪಿಸಿದೆ. ಅದೇ ರೀತಿ 15 ಕೆ.ಜಿ ಬಾಕ್ಸ್‌ 1000 ರೂಪಾಯಿ ಗಡಿ ದಾಡಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಕೇರಳ, ತಮಿಳುನಾಡು, ಒಡಿಶಾ, ಕೊಲ್ಕೊತಾ, ಛತ್ತಿಸ್‌ಗಡ ಹಾಗೂ ಬಾಂಗ್ಲಾದೇಶದಿಂದ ಟೊಮ್ಯಾಟೊಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಈ ಭಾಗಗಳಿಗೆ ಹೆಚ್ಚಿನ ರಫ್ತು ಮಾಡುತ್ತಿರುವುದರಿಂದ ಟೊಮ್ಯಾಟೊ ಬೆಲೆಯಲ್ಲಿ ಭಾರಿ ಏರಿಕೆ (Tomato Price Hike) ಕಂಡುಬಂದಿದೆ.

ಜಿಲ್ಲೆಯಲ್ಲಿ 5 ಸಾವಿರ ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯಲಾಗಿದೆ. ಆದರೆ, ರೋಗ ಹರಡಿದ ಕಾರಣ ಕೆಲವೆಡೆ ತೋಟಗಳನ್ನು ನಾಶ ಮಾಡಲಾಗಿದೆ. ಇದರಿಂದ ಬೇಡಿಕೆ ನೀಗಿಸುವಷ್ಟು ಟೊಮ್ಯಾಟೊ ಸಿಗುತ್ತಿಲ್ಲ. ಹೀಗಾಗಿ 15 ಕೆ.ಜಿ ಬಾಕ್ಸ್‌ 1,100 ರೂ. ಮಾರಾಟವಾಗುತ್ತಿದೆ.

ಇದನ್ನೂ ಓದಿ | Free Bus Service: ಹೆಚ್ಚಿದ ನಾರಿ ಶಕ್ತಿ! 166 ಕೋಟಿ ರೂಪಾಯಿ ಮೀರಿ ಮುನ್ನುಗ್ಗುತ್ತಿರುವ ಶಕ್ತಿ ಸ್ಕೀಂ!

ಹೊರ ರಾಜ್ಯಗಳಿಂದ ಭಾರಿ ಬೇಡಿಕೆ ಉಂಟಾಗಿರುವುದರಿಂದ ಎರಡು ಮೂರು ದಿನಗಳಿಂದ ಟೊಮ್ಯಾಟೊ ಧಾರಣೆ ಏರಿಕೆ ಕಡೆ ಮುಖ ಮಾಡಿದೆ. ಪ್ರತಿ ದಿನ 15 ಸಾವಿರ ಟನ್ ಟೊಮ್ಯಾಟೊ ಹೊರ ರಾಜ್ಯಕ್ಕೆ ರಫ್ತಾಗುತ್ತಿದೆ. ಆದರೆ, ಬೇಡಿಕೆಗೆ ತಕ್ಕಷ್ಟು ಟೊಮ್ಯಾಟೊ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಇದೇ ರೀತಿ ಮುಂದುವರಿದರೆ ಇನ್ನು ಒಂದು ವಾರದಲ್ಲಿ ಬಾಕ್ಸ್‌ ದರ 2 ಸಾವಿರ ಗಡಿ ಮುಟ್ಟಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನಿಂದ ಪರಿಸರ ಮಾಸಾಚರಣೆ

Toyota: ವಿಶ್ವ ಪರಿಸರ ದಿನದ ಅಂಗವಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಪರಿಸರ ಪ್ರಜ್ಞೆಯನ್ನು ಮತ್ತಷ್ಟು ಬೆಳೆಸಲು, ಹಸಿರು, ಸುಸ್ಥಿರ ಭವಿಷ್ಯವನ್ನು ಪ್ರತಿಪಾದಿಸಲು ಈ ವರ್ಷದ ಜೂನ್ ತಿಂಗಳನ್ನು ಟೊಯೊಟಾ ಪರಿಸರ ಮಾಸಾಚರಣೆ ಆರಂಭಿಸಿದೆ. ಪರಿಸರ ನಿರ್ವಹಣೆಯ ಕುರಿತು ಜಾಗೃತಿ ಮತ್ತು ಕಾರ್ಯಕ್ರಮಗಳನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.

VISTARANEWS.COM


on

Environment Month celebration by Toyota Kirloskar Motor
Koo

ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ)ನಿಂದ ಪರಿಸರ ಪ್ರಜ್ಞೆಯನ್ನು ಮತ್ತಷ್ಟು ಬೆಳೆಸುವುದು ಮತ್ತು ಹಸಿರು, ಸುಸ್ಥಿರ ಭವಿಷ್ಯವನ್ನು ಪ್ರತಿಪಾದಿಸಲು ಜೂನ್ 2024ಅನ್ನು ಟೊಯೊಟಾ (Toyota Kirloskar Motor) ಪರಿಸರ ಮಾಸಾಚರಣೆ ಪ್ರಾರಂಭಿಸಲಾಗಿದೆ.

ಟೊಯೊಟಾ ಎನ್ವಿರಾನ್‌ಮೆಂಟ್ ಚಾಲೆಂಜ್ 2050 (ಟಿಇಸಿ 2050) ಮತ್ತು ಈ ವರ್ಷದ ಥೀಮ್ “ಜಾಗತಿಕ ನಂ.1 ಆಗಲು ಜವಾಬ್ದಾರಿಯುತ ಸಂಪನ್ಮೂಲ ಬಳಕೆಗಾಗಿ ಒಗ್ಗೂಡಿ” ಎಂಬ ಧ್ಯೇಯ ವಾಕ್ಯದೊಂದಿಗೆ ತನ್ನ ದೀರ್ಘಕಾಲೀನ ದೃಷ್ಟಿಕೋನದ ಕಾರ್ಯಕ್ರಮಗಳ ಮೂಲಕ ಕಂಪನಿಯು ನೀರಿನ ನಿರ್ವಹಣೆ ಮತ್ತು ಅರಣ್ಯೀಕರಣದ ಮೂಲಕ ನೈಸರ್ಗಿಕ ಪರಿಸರ ವ್ಯವಸ್ಥೆಯ ಪುನರುಜ್ಜೀವನದ ಮೇಲೆ ಪ್ರಮುಖ ಗಮನ ಹರಿಸಿದೆ.

ಪರಿಸರ ನಿರ್ವಹಣೆಯ ಕುರಿತು ಜಾಗೃತಿ ಮತ್ತು ಕಾರ್ಯಕ್ರಮಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದು “ನಮ್ಮ ಭೂಮಿ, ನಮ್ಮ ಭವಿಷ್ಯ” ಎಂಬ ಘೋಷಣೆ ಸುತ್ತುವರೆದಿರುವ ಭೂ ಪುನಃಸ್ಥಾಪನೆ, ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವದ ನಿರ್ಣಾಯಕ ಸಮಸ್ಯೆಗಳನ್ನು ಒತ್ತಿ ಹೇಳುತ್ತದೆ.

ಇದನ್ನೂ ಓದಿ: Govt Employees Association: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆಸಲು ಕಾರ್ಯಕಾರಿ ಸಮಿತಿ ತೀರ್ಮಾನ

ಹಲವು ವರ್ಷಗಳಿಂದ ಟಿಕೆಎಂ ಪ್ರಜ್ಞಾಪೂರ್ವಕವಾಗಿ ಸುಸ್ಥಿರ ವ್ಯವಹಾರ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಕಾರು ತಯಾರಕರಿಂದ ಚಲನಶೀಲತೆ ಕಂಪನಿಯಾಗಿ ರೂಪಾಂತರಗೊಂಡಿದೆ. ಭೂ ಗ್ರಹವನ್ನು ಗೌರವಿಸುವ ತತ್ವವನ್ನು ಗಮನದಲ್ಲಿಟ್ಟುಕೊಂಡು, ಟೊಯೊಟಾ ಜಾಗತಿಕವಾಗಿ ಅಕ್ಟೋಬರ್ 2015 ರಲ್ಲಿ ‘ಟೊಯೊಟಾ ಎನ್ವಿರಾನ್‌ಮೆಂಟ್ ಚಾಲೆಂಜ್ 2050’ (ಟಿಇಸಿ 2050) ಅನ್ನು ಘೋಷಿಸಿತು. ಇದು ಆರು ಪರಿಸರ ಸವಾಲುಗಳನ್ನು ಒಳಗೊಂಡಿದೆ. ಮೊದಲ ಮೂರು ಸವಾಲುಗಳು – ನಮ್ಮ ಉತ್ಪನ್ನಗಳಿಂದ ಇಂಗಾಲದ ತಟಸ್ಥತೆಯನ್ನು ಸಾಧಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ಮತ್ತು ಉತ್ಪಾದನಾ ಚಟುವಟಿಕೆಗಳು ಸೇರಿದಂತೆ ಅದರ ಸಂಪೂರ್ಣ ಮೌಲ್ಯ ಸರಪಳಿಯನ್ನು ಒಳಗೊಂಡಿದೆ.

ನಂತರದ 3 ಸವಾಲುಗಳು ನೀರಿನ ಬಳಕೆಯನ್ನು ಕಡಿಮೆ ಮಾಡುವ ಮತ್ತು ಉತ್ತಮಗೊಳಿಸುವ ಮೂಲಕ, ಮರುಬಳಕೆ ಆಧಾರಿತ ಸಮಾಜವನ್ನು ಸಕ್ರಿಯಗೊಳಿಸುವುದು ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯ’ದಲ್ಲಿ ಭವಿಷ್ಯದ ಸಮಾಜವನ್ನು ಸ್ಥಾಪಿಸುವ ಮೂಲಕ ಸಕಾರಾತ್ಮಕ ಪರಿಣಾಮವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ.

ನಮ್ಮ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಗುರಿಯೊಂದಿಗೆ, ಟಿಕೆಎಂ ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದೆ. ಉತ್ಪಾದನೆಗೆ ಅಗತ್ಯವಿರುವ 95% ನೀರನ್ನು ಮರುಬಳಕೆ ಮತ್ತು ಮಳೆನೀರು ಕೊಯ್ಲು ಮೂಲಕ ಪೂರೈಸಲಾಗುತ್ತದೆ. ಇದಲ್ಲದೆ, ಟಿಕೆಎಂ ತ್ಯಾಜ್ಯದ ಮರುಬಳಕೆಯನ್ನು 96% ವರೆಗೆ ಹೆಚ್ಚಿಸುವುದರೊಂದಿಗೆ ಮರುಬಳಕೆ ಆಧಾರಿತ ಸಮಾಜವನ್ನು ಉತ್ತೇಜಿಸುತ್ತಿದೆ.

ಇದನ್ನೂ ಓದಿ: India vs Ireland: ಇಂದು ನಡೆಯುವ ಭಾರತ-ಐರ್ಲೆಂಡ್​ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

ಪರಿಸರದ ಮೇಲ್ವಿಚಾರಕರಾಗಿ ಕಂಪನಿಯು ಪ್ರಕೃತಿ ಸಂರಕ್ಷಣೆಯಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಹಲವು ವರ್ಷಗಳಿಂದ ಟಿಕೆಎಂ ಮಿಯಾವಾಕಿ ಪರಿಕಲ್ಪನೆಯನ್ನು ಬಳಸಿಕೊಂಡು ತನ್ನ ಕಾರ್ಖಾನೆ ಆವರಣದಲ್ಲಿ 112 ಎಕರೆಗಳಲ್ಲಿ 328,000 ಕ್ಕೂ ಹೆಚ್ಚು ಮರಗಳನ್ನು ನೆಟ್ಟಿದೆ. ಇದು “ಸಂಭಾವ್ಯ ನೈಸರ್ಗಿಕ ಸಸ್ಯವರ್ಗ” ಪರಿಕಲ್ಪನೆಯ ಆಧಾರದ ಮೇಲೆ ಕಾಡುಗಳನ್ನು ಪುನಃಸ್ಥಾಪಿಸುವ ಮತ್ತು ಪುನರ್ನಿರ್ಮಿಸುವತ್ತ ಗಮನ ಹರಿಸುತ್ತದೆ.

ಸ್ಥಳೀಯ ಜೀವವೈವಿಧ್ಯತೆಯನ್ನು ಪುನಃಸ್ಥಾಪಿಸುವ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಲು ಟಿಕೆಎಂ ಅತ್ಯಾಧುನಿಕ ‘ಪರಿಸರ ವಲಯ’ ಎಂಬ ಪ್ರಾಯೋಗಿಕ ಕಲಿಕಾ ಕೇಂದ್ರವನ್ನು ಸ್ಥಾಪಿಸಿದೆ. ಇದು ಟಿಕೆಎಂನ ಸ್ಥಾವರದಲ್ಲಿ 17 ಥೀಮ್ ಪಾರ್ಕ್‌ಗಳನ್ನು ಹೊಂದಿದೆ. ಹವಾಮಾನ ಬದಲಾವಣೆ, ಕಸದಿಂದ-ರಸ, ಪರಿಸರ ಸಮತೋಲನ, ಜಲ ಸಂಪನ್ಮೂಲ ನಿರ್ವಹಣೆ ಸೇರಿದಂತೆ ಪ್ರಕೃತಿ ಸಂರಕ್ಷಣೆಯ ವಿವಿಧ ಅಂಶಗಳ ಬಗ್ಗೆ ಜ್ಞಾನ ಹಂಚಿಕೆಯ ಮೂಲಕ ಕೊಡುಗೆ ನೀಡುತ್ತಲೇ ಇದೆ.

ಬಿಡದಿ ಮತ್ತು ರಾಮನಗರ ಪ್ರದೇಶಗಳಲ್ಲಿನ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು, ವ್ಯವಹಾರ ಸಹವರ್ತಿಗಳು, ಟೊಯೋಟಾ ಗ್ರೂಪ್ ಕಂಪನಿಗಳ ಸದಸ್ಯರು, ಶಾಲಾ ಮಕ್ಕಳು ಮತ್ತು ಸಮುದಾಯದ ಸದಸ್ಯರು ಸೇರಿದಂತೆ ಮಧ್ಯಸ್ಥಗಾರರಲ್ಲಿ ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸಲು “ಟೊಯೊಟಾ ಸ್ವಚ್ಛ ಅಭಿಯಾನ, “ರಾರ್” (ಜವಾಬ್ದಾರಿಯಾಗಿ ಮರುಬಳಕೆ / ಉದಾ. ಕಚೇರಿ ಸಮವಸ್ತ್ರ ಮರುಬಳಕೆ), ಟೊಯೊಟಾ ಇಕೋ ಕ್ಲಬ್, ಇಕೋ ಫ್ಯಾಮಿಲಿ ವಾಕ್ (ಪರಿಸರ ವಲಯ) ಮುಂತಾದ ಚಟುವಟಿಕೆಗಳನ್ನು ಇಡೀ ತಿಂಗಳು ಆಯೋಜಿಸಲಾಗಿದೆ.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಉತ್ಪಾದನಾ ನಿರ್ದೇಶಕ ಬಿ.ಪದ್ಮನಾಭ ಟಿಕೆಎಂನ ಪರಿಸರ ಮಾಸಾಚರಣೆ ಕುರಿತು ಮಾತನಾಡಿ, “ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನಲ್ಲಿ ಆರ್ಥಿಕ ಪ್ರಗತಿಯಷ್ಟೇ ಅಲ್ಲದೆ, ಪರಿಸರ ಮತ್ತು ಸಾಮಾಜಿಕ ಸುಸ್ಥಿರತೆಯೂ ನಿರ್ಣಾಯಕವಾಗಿದೆ ಎಂದು ನಾವು ಗುರುತಿಸುತ್ತೇವೆ. ಟೊಯೊಟಾ ಜಾಗತಿಕವಾಗಿ ಪರಿಹರಿಸಲು ಪ್ರಯತ್ನಿಸುತ್ತಿರುವ ಆರು ಪರಿಸರ ಸವಾಲುಗಳಿಗೆ ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Gold Rate Today: ಮತ್ತೆ ಇಳಿದ ಚಿನ್ನದ ದರ; ಇಂದಿನ ಬೆಲೆ ಗಮನಿಸಿ

ಈ ಹಿಂದೆ ಟಿಕೆಎಂ ತನ್ನ ಪರಿಸರ ಬದ್ಧತೆಗಾಗಿ ಆಯಾ ವಿಭಾಗಗಳಲ್ಲಿ ವಿವಿಧ ಪ್ರಶಂಸೆಗಳು / ಮಾನ್ಯತೆಗಳನ್ನು ಪಡೆದಿದೆ. ಟೆರಿ ವಾಟರ್ ಸಸ್ಟೈನಬಿಲಿಟಿ ಪ್ರಶಸ್ತಿ, ಜೀವವೈವಿಧ್ಯತೆಗಾಗಿ ಸಿಐಐ ಸುಸ್ಥಿರತೆ ಪ್ರಶಸ್ತಿ, ನೀರು ಮತ್ತು ಅಪಾಯಕಾರಿ ತ್ಯಾಜ್ಯ ನಿರ್ವಹಣೆಗಾಗಿ ಸಿಐಐ ಪ್ರಶಸ್ತಿ, ನೀರಿನ ನಿರ್ವಹಣೆಯಲ್ಲಿ ಸಿಐಐ-ಎಸ್ಆರ್ ಇಎಚ್ಎಸ್ ಎಕ್ಸಲೆನ್ಸ್ ಪ್ರಶಸ್ತಿ, ಸಿಐಐ ಗ್ರೀನ್ ಕೋ ಪ್ಲಾಟಿನಂ ಕಂಪನಿ ಪರಿಸರ ಶ್ರೇಷ್ಠತೆ ಮತ್ತು ಸುಸ್ಥಿರ ನಾಯಕತ್ವಕ್ಕಾಗಿ ಪ್ರಶಸ್ತಿ, ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದೆ.

Continue Reading

ಕರ್ನಾಟಕ

Rain News: ಸಿಡಿಲು ಬಡಿದು ಇಬ್ಬರು ಮಹಿಳೆಯರ ಸಾವು; ಜೂನ್‌ 13ರವರೆಗೆ ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ!

Rain News: ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಸಿಡಿಲು ಬಡಿದಿದ್ದರಿಂದ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.

VISTARANEWS.COM


on

Rain News
Koo

ಹಾಸನ: ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ನಡೆದಿದೆ. ಹೊಲದಲ್ಲಿ ಜೋಳ ಬಿತ್ತನೆ ಮಾಡುತ್ತಿದ್ದ ವೇಳೆ ಸಿಡಿಲು, ಗುಡುಗು ಸಹಿತ ಮಳೆ (Rain News) ಆರಂಭವಾಗಿದ್ದು, ಈ ವೇಳೆ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದಿದ್ದರಿಂದ ಮೂವರು ಮಹಿಳೆಯರು ಕೊನೆಯುಸಿರೆಳೆದಿದ್ದಾರೆ.

ಮುತ್ತಮ್ಮ (70), ಪುಟ್ಟಮ್ಮ (63) ಮೃತ ದುರ್ದೈವಿಗಳು. ಮೂವರು ಗಾಯಳುಗಳಿಗೆ ಅರಕಲಗೂಡು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಗೆ ಶಾಸಕ ಎ.ಮಂಜು ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಜೂನ್ 13 ರವರೆಗೆ ಭಾರಿ ಮಳೆ ಮುನ್ಸೂಚನೆ

ಜೂನ್ 5 ರಿಂದ ಜೂನ್ 13 ರವರೆಗೆ ಕಾವೇರಿ ಜಲಾನಯನ ಪ್ರದೇಶ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಸುರಿಯಲಿದೆ. ಜೂನ್ 6 ರಿಂದ 11 ರವರೆಗೆ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜೂನ್ 8 ರಿಂದ 11 ರವರೆಗೆ ಕೃಷ್ಣಾ ಜಲಾನಯನ ಪ್ರದೇಶದ ಮೇಲ್ಭಾಗದಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ, ಕೃಷ್ಣಾ ಜಲಾನಯನ ಪ್ರದೇಶದ ಒಳಹರಿವು ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ | Karnataka Weather : ರಾಜ್ಯದ ಹಲವೆಡೆ ಮಳೆ ಅಲರ್ಟ್‌; ಬೆಂಗಳೂರಲ್ಲಿ ಹೇಗೆ?

ಇನ್ನು ಜೂನ್ 6ರಂದು ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಲವೆಡೆ ಹಗುರದಿಂದ ಸಾಧಾರಣ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಹಲವೆಡೆ ಹಗುರದಿಂದ ಸಾಧಾರಣ ಮಳೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Continue Reading

ಕರ್ನಾಟಕ

Self Harming: ಲಿವಿಂಗ್ ಟುಗೆದರ್‌ನಲ್ಲಿದ್ದ ಜೋಡಿ ವಿಷ ಸೇವಿಸಿ ಆತ್ಮಹತ್ಯೆ

Self Harming: ಬೆಂಗಳೂರು ಹೊರವಲಯ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿದೆ. ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

VISTARANEWS.COM


on

self harming
Koo

ಆನೇಕಲ್: ಸಹಜೀವನ ನಡೆಸುತ್ತಿದ್ದ ಜೋಡಿ ವಿಷ ಸೇವಿಸಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಜೋಡಿ, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಪ್ರಭು(38), ಲಕ್ಕಮ್ಮ(30) ಮೃತರು. ಪ್ರಭು ಡ್ರೈವರ್ ಕೆಲಸ ಮಾಡುತ್ತಿದ್ದ. ಲಕ್ಕಮ್ಮ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಒಬ್ಬರಿಗೊಬ್ಬರು ಪರಿಚಿಯವಾಗಿತ್ತು. ಹೀಗಾಗಿ ಇಬ್ಬರು ಒಂದೇ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದರು. ಇವರು ವಿಶ್ವನಾಥ್ ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದರು.

ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಸ್ಥಳೀಯರು ತೆರಳಿ ನೋಡಿದಾಗ, ಜೋಡಿ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ. ಇಬ್ಬರು ಮೃತಪಟ್ಟು ಮೂರ್ನಾಲ್ಕು ದಿನ ಕಳೆದಿದ್ದರಿಂದ ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Uttarkashi Trekking Tragedy: ಉತ್ತರಕಾಶಿಯಲ್ಲಿ ಪ್ರತಿಕೂಲ ಹವಾಮಾನ; ಚಾರಣಕ್ಕೆ ತೆರಳಿದ್ದ ಕರ್ನಾಟಕದ ನಾಲ್ವರ ಸಾವು

ಅಪ್ಪ-ಅಮ್ಮನ ಜಗಳ ಬಿಡಿಸಲು ಹೋದ ಇನ್‌ಫೋಸಿಸ್‌ ಎಂಜಿನಿಯರ್ ತಂದೆಯ ಇರಿತಕ್ಕೆ ಬಲಿ

murder case infosys engineer

ಬೆಂಗಳೂರು: ಗಂಡ- ಹೆಂಡತಿ ಜಗಳ (couple fight) ಆಕಸ್ಮಿಕವಾಗಿ ಮಗನ ಕೊಲೆಯಲ್ಲಿ (Murder Case) ಅಂತ್ಯವಾದ ದಾರುಣ ಘಟನೆ ಜರಗನಹಳ್ಳಿಯಲ್ಲಿ ನಡೆದಿದೆ. ಇನ್‌ಫೋಸಿಸ್‌ (Infosys) ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ (Software engineer) ಮಗ, ತಂದೆ- ತಾಯಿಯ ಜಗಳ ಬಿಡಿಸಲು ಹೋಗಿ ಕೊಲೆಯಾಗಿದ್ದಾನೆ.

ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಜರಗನಹಳ್ಳಿಯಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ. ಯಶವಂತ್ (23) ತಂದೆಯಿಂದಲೇ ಕೊಲೆಯಾದ ಪುತ್ರ. ಸರ್ಜಾಪುರ ಸಮೀಪದ ಮ್ಯಾಟ್ರಿಕ್ಸ್ ಎಂಬ ಕಂಪನಿಯಲ್ಲಿ ಯಶವಂತ್‌ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ.

ಮೃತನ ಅಜ್ಜಿ ಕಾಯಿಲೆ ಬಿದ್ದು ಹಾಸಿಗೆ ಹಿಡಿದಿದ್ದು, ಆಕೆಯನ್ನು ನೋಡಿಕೊಳ್ಳುವ ವಿಚಾರಕ್ಕೆ ಆಗಾಗ ಜಗಳ ಆಗುತ್ತಿತ್ತು. ಬೆಳಗ್ಗೆಯೂ ಇದೇ ವಿಚಾರಕ್ಕಾಗಿ ಅಪ್ಪ ಅಮ್ಮನ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಜಗಳ ಬಿಡಿಸಲು ಹೋದ ಮಗನನ್ನು ಹೆದರಿಸಲು ತಂದೆ ಅಡುಗೆ ಮನೆಯಿಂದ ಚಾಕು ತಂದು ಇರಿಯಲು ಹೋಗಿದ್ದಾನೆ. ಚಾಕು ಯುವಕನ ಎದೆಗೆ ಆಳವಾಗಿ ನಾಟಿ ಪ್ರಾಣ ಹೋಗಿದೆ ಎಂದು ತಿಳಿದುಬಂದಿದೆ.

“ಯಶವಂತ ಉತ್ತಮ ವ್ಯಕ್ತಿತ್ವ ಹೊಂದಿದ್ದ ಹುಡುಗ. ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಎಂಜಿನಿಯರ್ ವೃತ್ತಿ ಮಾಡುತ್ತ, ತಂದೆ ಮಾಡಿದ್ದ ಸಾಲ ಸಹ ತೀರಿಸುತ್ತಿದ್ದ. ನೇತ್ರದಾನ ಸಹ ಮಾಡಿದ್ದ. ಆತನ ಆಸೆಯಂತೆ ಕುಟುಂಬಸ್ಥರು‌ ಯಶವಂತನ ಕಣ್ಣುಗಳನ್ನು ದಾನ ಮಾಡಿದ್ದಾರೆ” ಎಂದು ಸಂಬಂಧಿ ರಾಕೇಶ್ ಮಾಹಿತಿ ನೀಡಿದ್ದಾರೆ.

ಸದ್ಯ ಆರೋಪಿ ತಂದೆ ಬಸವರಾಜುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. “ಪುಟ್ಟೇನಹಹಳ್ಳಿ ಠಾಣಾ ವ್ಯಾಪ್ತಿಯ ಜರಗನಹಳ್ಳಿಯಲ್ಲಿ 23 ವರ್ಷದ ಯುವಕನ ಕೊಲೆಯಾಗಿದೆ. ಗಂಡ ಹೆಂಡತಿ ಹೊಡೆದಾಡುತ್ತಿದ್ದಾಗ ಬಿಡಿಸಲು ಹೋಗಿದ್ದಾನೆ. ಈ ವೇಳೆ ತಂದೆ ಚಾಕು ತಂದು ಹೆದರಿಸಲು ಹೋಗಿದ್ದ. ಯುವಕ ಆಸ್ಪತ್ರೆ ಮಾರ್ಗ‌ಮಧ್ಯೆ ಸಾವನ್ನಪ್ಪಿದ್ದಾನೆ” ಎಂದು ದಕ್ಷಿಣ ವಿಭಾಗ ಡಿಸಿಪಿ ಲೊಕೇಶ್ ಜಗಲಾಸರ್ ಹೇಳಿಕೆ ನೀಡಿದ್ದಾರೆ.

Continue Reading

Lok Sabha Election 2024

J Shantha: ಅಣ್ಣ-ತಂಗಿಗೆ ಕಹಿ; ಕರ್ನಾಟಕದಲ್ಲಿ ಶ್ರೀರಾಮುಲು, ಆಂಧ್ರದಲ್ಲಿ ಜೆ. ಶಾಂತಾಗೆ ಸೋಲು!

J Shantha: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮೊದಲು ಜೆ. ಶಾಂತಾ ಅವರು ಜಗನ್‌ ಮೋಹನ್‌ ರೆಡ್ಡಿ ನೇತೃತ್ವದಲ್ಲಿ ವೈಎಸ್‌ಆರ್‌ಸಿಪಿ ಸೇರಿದ್ದರು. ಹಿಂದುಪುರದಲ್ಲಿ ಜೆ. ಶಾಂತಾ ಅವರು ಸೋಲುಂಡರೂ ಅವರು 5.78 ಲಕ್ಷ ಮತಗಳನ್ನು ಸೆಳೆದಿರುವುದು ಪ್ರಮುಖವಾಗಿದೆ. 2009ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿದ್ದ ಜೆ. ಶಾಂತಾ ಅವರು ಕಾಂಗ್ರೆಸ್‌ನ ಎನ್‌.ವೈ.ಹನುಮಂತಪ್ಪ ಅವರ ವಿರುದ್ಧ ಗೆಲುವು ಸಾಧಿಸಿ, 5 ವರ್ಷ ಸಂಸದೆಯಾಗಿದ್ದರು.

VISTARANEWS.COM


on

J Shantha
Koo

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶವು (Election Results 2024) ಅಣ್ಣ ಹಾಗೂ ತಂಗಿಗೆ ಕಹಿ ತಂದಿದೆ. ಕರ್ನಾಟಕದ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ. ಶ್ರೀರಾಮುಲು (B Sriramulu) ಅವರು ಸೋಲನುಭವಿಸಿದ್ದರೆ, ಆಂಧ್ರಪ್ರದೇಶದ ಹಿಂದುಪುರ (Hindupur) ಲೋಕಸಭೆ ಕ್ಷೇತ್ರದಲ್ಲಿ ವೈಎಸ್‌ಆರ್‌ಸಿಪಿಯಿಂದ ಸ್ಪರ್ಧಿಸಿದ್ದ ಜೆ. ಶಾಂತಾ (J Shantha) ಅವರು ಕೂಡ ಸೋಲನುಭವಿಸಿದ್ದಾರೆ. ಆ ಮೂಲಕ ಅಣ್ಣ-ತಂಗಿಯು ಚುನಾವಣೆಯಲ್ಲಿ ಪರಾಜಯ ಕಂಡಂತಾಗಿದೆ.

ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇ. ತುಕಾರಾಮ್‌ ಅವರ ವಿರುದ್ಧ ಶ್ರೀರಾಮುಲು ಅವರು 98,992 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಇ. ತುಕಾರಾಮ್‌ ಅವರು 7,30,845 ಮತಗಳನ್ನು ಪಡೆದರೆ, ಶ್ರೀರಾಮುಲು ಅವರು 6,31,853 ಮತಗಳನ್ನು ಪಡೆದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಶ್ರೀರಾಮುಲು ಅವರು ಸೋಲುಂಡಿದ್ದರು. ಈಗ ಲೋಕಸಭೆ ಚುನಾವಣೆಯಲ್ಲೂ ಅವರು ಪರಾಜಯಗೊಂಡಿದ್ದಾರೆ.

ಹಿಂದುಪುರದಲ್ಲಿ ಏನಾಯ್ತು?

ಹಿಂದುಪುರ ಲೋಕಸಭೆ ಕ್ಷೇತ್ರದಲ್ಲಿ ಟಿಡಿಪಿಯ ಬಿ.ಕೆ. ಪಾರ್ಥಸಾರಥಿ ಅವರು ಜೆ. ಶಾಂತಾ ಅವರ ವಿರುದ್ಧ 1,32,427 ಮತಗಳ ಅಂತರದಿಂಧ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಜೆ. ಶಾಂತಾ ಅವರು ಹಿಂದುಪುರದಲ್ಲಿ ಸೋಲನುಭವಿಸಿದಂತಾಗಿದೆ. ಕರ್ನಾಟಕದಲ್ಲಿ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಜೆ. ಶಾಂತಾ ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಟಿಕೆಟ್‌ ಸಿಗದ ಕಾರಣ ಆಂಧ್ರಪ್ರದೇಶದತ್ತ ಮುಖ ಮಾಡಿ, ಹಿಂದುಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮೊದಲು ಜೆ. ಶಾಂತಾ ಅವರು ಜಗನ್‌ ಮೋಹನ್‌ ರೆಡ್ಡಿ ನೇತೃತ್ವದಲ್ಲಿ ವೈಎಸ್‌ಆರ್‌ಸಿಪಿ ಸೇರಿದ್ದರು. ಹಿಂದುಪುರದಲ್ಲಿ ಜೆ. ಶಾಂತಾ ಅವರು ಸೋಲುಂಡರೂ ಅವರು 5.78 ಲಕ್ಷ ಮತಗಳನ್ನು ಸೆಳೆದಿರುವುದು ಪ್ರಮುಖವಾಗಿದೆ. 2009ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿದ್ದ ಜೆ. ಶಾಂತಾ ಅವರು ಕಾಂಗ್ರೆಸ್‌ನ ಎನ್‌.ವೈ.ಹನುಮಂತಪ್ಪ ಅವರ ವಿರುದ್ಧ ಗೆಲುವು ಸಾಧಿಸಿ, 5 ವರ್ಷ ಸಂಸದೆಯಾಗಿದ್ದರು.

2014, 2019ರಲ್ಲಿ ಬಳ್ಳಾರಿಯಲ್ಲಿ ಏನಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ದೇವೇಂದ್ರಪ್ಪ ಅವರು ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಇನ್ನು 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್‌.ವೈ. ಹನುಮಂತಪ್ಪ ಅವರ ವಿರುದ್ಧ ಬಿಜೆಪಿಯ ಬಿ. ಶ್ರೀರಾಮುಲು ಅವರು ಭರ್ಜರಿ ಗೆಲುವು ಸಾಧಿಸಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಜೆ. ಶಾಂತಾ ಅವರು ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: Udupi Chikmagalur Election Result 2024 : ಉಡುಪಿಯಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ್​ ಪೂಜಾರಿಗೆ ವಿಜಯ

Continue Reading
Advertisement
Narendra Modi
ದೇಶ43 seconds ago

Narendra Modi: ಜೂನ್‌ 8 ಅಲ್ಲ, ಜೂನ್‌ 7ರಂದು ಸಂಜೆ 5ಕ್ಕೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ!

Vitamin A
ಆರೋಗ್ಯ5 mins ago

Vitamin A: ವಿಟಮಿನ್‌ ಎ ಕೊರತೆಯಾದರೆ ಏನಾಗುತ್ತದೆ?

Pakistan Players
T20 ವಿಶ್ವಕಪ್8 mins ago

Pakistan Players: ನ್ಯೂಯಾರ್ಕ್​ನಲ್ಲಿ ದರೋಡೆಗಿಳಿದ ಪಾಕಿಸ್ತಾನ ಕ್ರಿಕೆಟಿಗರು; ತನಿಖೆಗೆ ಆಗ್ರಹ

Cabinet meeting
ದೇಶ19 mins ago

Cabinet Meeting: “ನಂಬರ್‌ ಬಗ್ಗೆ ಚಿಂತೆ ಬೇಡ…ಉತ್ತಮ ಕೆಲಸ ಮಾಡಿ”- ನಿರ್ಗಮಿತ ಸಚಿವರಿಗೆ ಮೋದಿ ಕಿವಿಮಾತು

Environment Month celebration by Toyota Kirloskar Motor
ಕರ್ನಾಟಕ28 mins ago

Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನಿಂದ ಪರಿಸರ ಮಾಸಾಚರಣೆ

Mutual Funds
ವಾಣಿಜ್ಯ30 mins ago

Mutual Funds: ಪಿಎಸ್‌ಯು ಷೇರುಗಳಲ್ಲಿ 90,000 ಕೋಟಿ ರೂ. ನಷ್ಟ ಅನುಭವಿಸಿದ ಮ್ಯೂಚುವಲ್ ಫಂಡ್‌

Muslim Women
ದೇಶ32 mins ago

Muslim Women: ಟಕಾ ಟಕ್‌ ಅಂದ್ರಲ್ಲ, 1 ಲಕ್ಷ ರೂ. ಕೊಡಿ; ಕಾಂಗ್ರೆಸ್‌ ಕಚೇರಿಗೆ ಲಗ್ಗೆ ಇಟ್ಟ ಮುಸ್ಲಿಂ ಮಹಿಳೆಯರು!

Sri Lanka Tour
ಪ್ರವಾಸ35 mins ago

Sri Lanka Tour: ಕಡಿಮೆ ವೆಚ್ಚದಲ್ಲಿ ಶ್ರೀಲಂಕಾ ಪ್ರವಾಸ; ಐಆರ್‌ಸಿಟಿಸಿ ಸ್ಪೆಷಲ್‌ ಪ್ಯಾಕೇಜ್‌

Kalki 2898 AD
ಸಿನಿಮಾ37 mins ago

Kalki 2898 AD: ಪ್ರಭಾಸ್‌-ದೀಪಿಕಾ ಜೋಡಿಯ ʼಕಲ್ಕಿʼ ಚಿತ್ರದ ಟ್ರೈಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್‌

World Environment Day
ಫ್ಯಾಷನ್45 mins ago

World Environment Day: ಪರಿಸರಕ್ಕೆ ಕೊಡುಗೆ ನೀಡಲು ಫ್ಯಾಷನ್‌ ಪ್ರಿಯರಿಗೆ ಇಲ್ಲಿದೆ ಸಲಹೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ1 day ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌