ಹಲೋ ಸಚಿವರೇ: 1978ಕ್ಕಿಂತ ಹಿಂದಿನ ಅರಣ್ಯ ಒತ್ತುವರಿದಾರರಿಗೆ ಈಶ್ವರ ಖಂಡ್ರೆ ಅಭಯ, ಕಸ್ತೂರಿ ರಂಗನ್‌ ವರದಿ ಆತಂಕ ಬೇಡ - Vistara News

ಕರ್ನಾಟಕ

ಹಲೋ ಸಚಿವರೇ: 1978ಕ್ಕಿಂತ ಹಿಂದಿನ ಅರಣ್ಯ ಒತ್ತುವರಿದಾರರಿಗೆ ಈಶ್ವರ ಖಂಡ್ರೆ ಅಭಯ, ಕಸ್ತೂರಿ ರಂಗನ್‌ ವರದಿ ಆತಂಕ ಬೇಡ

Eshwar Khandre: ವಿಸ್ತಾರ ನ್ಯೂಸ್‌ ಮಂಗಳವಾರ ಆಯೋಜಿಸಿದ್ದ “ಹಲೋ ಸಚಿವರೇ” ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಭಾಗಿಯಾಗಿದ್ದರು. ಈ ವೇಳೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಸೂಕ್ತ ಪರಿಹಾರವನ್ನು ಒದಗಿಸಿ ಕೊಡುವ ಭರವಸೆಯನ್ನೂ ನೀಡಿದ್ದಾರೆ.

VISTARANEWS.COM


on

Hello minister Eshwara Khandre
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅರಣ್ಯ ಭೂಮಿ ಹಾಗೂ ಕಂದಾಯ ಭೂಮಿ ವ್ಯಾಪ್ತಿಯ ಜಂಟಿ ಸಮೀಕ್ಷೆ, 1978ಕ್ಕಿಂತ ಮೊದಲು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ಹಕ್ಕುಪತ್ರಕ್ಕೆ ಕ್ರಮ, ಕಸ್ತೂರಿ ರಂಗನ್‌ ವರದಿ ಬಗ್ಗೆ ವಿರೋಧ, ಡಿ ಗ್ರೂಪ್‌ ನೌಕರರಿಗೆ ನಿಗದಿತ ಸಮಯಕ್ಕೆ ವೇತನ ನೀಡುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರೋಪಾಯಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ. ವಿಸ್ತಾರ ನ್ಯೂಸ್‌ ಆಯೋಜಿಸಿದ್ದ “ಹಲೋ ಸಚಿವರೇ” ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅವರು ಜನರಿಗೆ ದನಿಯಾಗಿದ್ದಾರೆ.

ಅರಣ್ಯ ಭೂಮಿ ಒತ್ತುವರಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆಯನ್ನು ನಡೆಸಲಿದೆ. ಇಲ್ಲಿ ಆಯಾ ಇಲಾಖೆ ವ್ಯಾಪ್ತಿಗೆ ಬರುವ ಭೂಮಿಯನ್ನು ಪ್ರತ್ಯೇಕಿಸಿ ಸುಪ್ರೀಂ ಕೋರ್ಟ್‌ ಹಾಗೂ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಆದರೆ, 1978ಕ್ಕಿಂತ ಮುಂಚಿತವಾಗಿ ಒತ್ತುವರಿ ಮಾಡಿಕೊಂಡವರಲ್ಲಿ ಮೂರು ಎಕರೆ ಜಮೀನು ಹೊಂದಿದವರಿಗೆ ಹಕ್ಕುಪತ್ರ ನೀಡಲು ಕಾನೂನು ರೀತ್ಯಾ ಅವಕಾಶಗಳನ್ನು ನೋಡಿಕೊಂಡು ಕ್ರಮ ವಹಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ವಿಸ್ತಾರ ನ್ಯೂಸ್‌ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಚಿವ ಈಶ್ವರ ಖಂಡ್ರೆ.

1978ರಿಂದ ಮುಂಚಿತವಾಗಿ‌ ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಿಕೊಂಡು ಇರುವವರಿಗೆ ಡಿ ರಿಸರ್ವೇಶನ್‌ ಮಾಡಲು ಕಾಯ್ದೆಯಲ್ಲಿ ಅವಕಾಶ ಇದೆ. ನಾನು ಈ ಸಂಬಂಧ ಸೂಚನೆ ನೀಡಿದ್ದೇನೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಸುಪ್ರೀಂ ಕೋರ್ಟ್‌ ಹಾಗೂ ಕೇಂದ್ರ ಸರ್ಕಾರದ ಅನುಮತಿ ಸಹ ಬೇಕಿದೆ. ನಾವು ಯಾವುದೇ ರೀತಿಯ ದೌರ್ಜನ್ಯ ಆಗದಂತೆ ಕ್ರಮ ವಹಿಸುತ್ತೇವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ಒತ್ತುವರಿ ತೆರವು ಸಂಬಂಧ ಅರಣ್ಯ ಇಲಾಖೆ ಮಾತ್ರ ಏಕಮುಖ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ ಆ ಇಲಾಖೆಯ ಸಚಿವರು, ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಸಾಧಕ-ಬಾಧಕಗಳನ್ನು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಮೂರು ಎಕರೆ ಇದ್ದವರಿಗೆ ರಿಲೀಫ್!

1978ರಿಂದ ಮುಂಚಿತವಾಗಿ‌ ಕೆಲವರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಇವರಿಗೆ ಕಾನೂನಿನಲ್ಲಿ ಸಡಿಲಿಕೆ ಮಾಡಲಾಗಿದ್ದರೂ ಷರತ್ತುಗಳು ಅನ್ವಯವಾಗುತ್ತವೆ. ಅಂದರೆ, ಮೂರು ಎಕರೆಗಿಂತ ಕಡಿಮೆ ಇರುವವರಿಗೆ ಮಾತ್ರ ಹಕ್ಕು ಪತ್ರ ನೀಡಲಾಗುವುದು. ಇದಕ್ಕೆ ಅನುಮತಿ ನೀಡಬೇಕೆಂದರೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ ಅನುಮತಿ ಬೇಕಾಗಿದೆ. ಆ ನಿಟ್ಟಿನಲ್ಲಿ ನಾವು ಕ್ರಮ ವಹಿಸುತ್ತೇವೆ ಎಂದು ಈಶ್ವರ ಖಂಡ್ರೆ ಹೇಳಿದರು.

ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದ ಹಲವು ಕಡೆ ಈ ಸಮಸ್ಯೆಗಳು ಇವೆ. ಇವುಗಳನ್ನು ಬಗೆಹರಿಸಲು ನಾವು ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಾಲಮಿತಿಯಲ್ಲಿ ಯಾವ ರೀತಿ ಮಾಡಬಹುದು ಎಂಬುದನ್ನು ನೋಡಿಕೊಂಡು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಒತ್ತುವರಿದಾರರ ಮೇಲೆ ದಬ್ಬಾಳಿಕೆ ಮಾಡುವಂತಿಲ್ಲ; ಖಂಡ್ರೆ ಖಡಕ್‌ ಸೂಚನೆ

ಮಲೆನಾಡಿನಲ್ಲಿ ಸಾವಿರಾರು ಕುಟುಂಬಗಳು ಕಳೆದ 40 ವರ್ಷಗಳಿಂದ ಕಾಡಂಚಿನಲ್ಲಿ ಜೀವನೋಪಾಯಕ್ಕಾಗಿ ಕೃಷಿ ಮಾಡಿಕೊಂಡು, ಮನೆ ಕಟ್ಟಿಕೊಂಡು ಜೀವಿಸುತ್ತಿವೆ. ಆ ನಿವಾಸಿಗಳಿಗೂ ಅರಣ್ಯ ಇಲಾಖೆ ಸಿಬ್ಬಂದಿಗೂ ಆಗಾಗ ಸಂಘರ್ಷ ನಡೆಯುತ್ತಲೇ ಇರುವುದು ನನ್ನ ಗಮನಕ್ಕೆ ಬಂದಿದೆ. ಶಿವಮೊಗ್ಗದಲ್ಲಿ ಕೆಲವು ವಿಶೇಷ ಪ್ರಕರಣಗಳು ಇವೆ ಎಂಬುದನ್ನು ತಿಳಿದುಕೊಂಡಿದ್ದೇನೆ. ಕೆಲವು ಪ್ರಕರಣಗಳಲ್ಲಿ ಒಕ್ಕಲೆಬ್ಬಿಸಿದವರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಕೆಲವು ಜನರಿಗೆ ಸಮಸ್ಯೆಯಾಗಿದ್ದು, ಅಂಥವರಿಗೆ ರಾಜ್ಯ ಸರ್ಕಾರವು ಕೂಲಂಕಷವಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಅರಣ್ಯ ಒತ್ತುವರಿದಾರರ ಮೇಲೆ ಅರಣ್ಯ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ. ಹೊಡೆಯುವುದು, ದೌರ್ಜನ್ಯ ಎಸಗುವುದನ್ನು ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿದ್ದು, ನಾನು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಹೀಗಾಗಿ ಒತ್ತುವರಿದಾರರಿಗೆ ಕಾನೂನು ಅರಿವನ್ನು ಮೂಡಿಸಲು ಸೂಚಿಸಲಾಗಿದೆ. ಜತೆಗೆ ಯಾವುದೇ ರೀತಿಯ ಅಸಭ್ಯ ವರ್ತನೆ ಮಾಡದಂತೆ ಅರಣ್ಯ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ವಿಸ್ತಾರ ನ್ಯೂಸ್‌ ಮುಖಾಂತರ ರಾಜ್ಯದ ಜನತೆಗೆ ತಿಳಿಸುತ್ತಿದ್ದೇನೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಸರ್ಕಾರದಿಂದ ಅಕೇಶಿಯಾಕ್ಕೆ ನಿಷೇಧ

ನೆಡುತೋಪುಗಳಾದ ಅಕೇಶಿಯಾ, ನೀಲಗಿರಿ ಬೆಳೆಯಲು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಿಂದ ಬೆಳೆಯಲು ಅವಕಾಶ ಇಲ್ಲ. ಆದರೆ, ಖಾಸಗಿಯಾಗಿ ಬೆಳಯಬಹುದು ಎಂದು ಸಚಿವ ಈಶ್ವರ ಖಂಡ್ರೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2017ರಲ್ಲೇ ನೀಲಗಿರಿ ಬೆಳೆಯಲು ಬ್ಯಾನ್‌ ಮಾಡಲಾಗಿದೆ. ಸಸಿಗಳನ್ನು ಬೆಳೆಯುತ್ತಿಲ್ಲ, ವಿತರಣೆಯನ್ನೂ ಮಾಡುತ್ತಿಲ್ಲ. ಒತ್ತುವರಿ ಪ್ರದೇಶಗಳಲ್ಲಿ ಮಾತ್ರ ಅಕೇಶಿಯಾವನ್ನು ನಾವು ಹಾಕುತ್ತಿದ್ದೇವೆ. ಅದು ಸಹ 8 ವರ್ಷಗಳು ಮಾತ್ರ. ಬಳಿಕ ಅಲ್ಲಿ ಬೇರೆ ಸಸಿಗಳನ್ನು ನೆಡಲಾಗುವುದು ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಬ್ಬರು ಉತ್ತರಿಸಿದರು.

ಮಲೆನಾಡಿಗರಿಗೆ ಕಸ್ತೂರಿ ರಂಗನ್‌ ವರದಿಯ ಆತಂಕ ಬೇಡ

ಕಸ್ತೂರಿ ರಂಗನ್‌ ವರದಿಯ ಶಿಫಾರಸುಗಳು ಪಶ್ಚಿಮ ಘಟ್ಟದ 1553 ಹಳ್ಳಿಗಳ ನಿವಾಸಿಗಳನ್ನು ಭೀತಿಗೊಳಿಸಿದೆ. ಆದರೆ, ಜನರು ಯಾವುದೇ ಕಾರಣಕ್ಕೂ ಭಯಗೊಳ್ಳುವುದು ಬೇಡ. ನಿಮ್ಮೆಲ್ಲರ ಪರವಾಗಿ ನಮ್ಮ ಸರ್ಕಾರ ಇರುತ್ತದೆ. ಅದರ ಜತೆಗೆ ಗ್ರಾಮೀಣ ಭಾಗದಲ್ಲಿರುವ ಜನರ ಸಂರಕ್ಷಣೆಯೂ ಆಗಬೇಕು. ಈ ನಿಟ್ಟಿನಲ್ಲಿ ಸಾಧಕ-ಬಾಧಕ ತಿಳಿಯಲು ಕೇಂದ್ರ ಸರ್ಕಾರ ಒಂದು ಸಮಿತಿಯನ್ನು ರಚನೆ ಮಾಡಿದೆ. ಅದು ನೀಡುವ ವರದಿ ಮೇಲೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನತೆ ಮಾತ್ರ ಯಾವುದೇ ಗೊಂದಲಕ್ಕೊಳಗಾಗುವುದು, ಭಯ ಪಡುವುದು ಬೇಡ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಕಸ್ತೂರಿ ರಂಗನ್‌ ವರದಿಯನ್ನು ತಿರಸ್ಕಾರ ಮಾಡುವ ನಿರ್ಧಾರಕ್ಕೆ ಈ ಹಿಂದೆಯೇ ಎಲ್ಲ ರಾಜಕೀಯ ಪಕ್ಷಗಳೂ ಬಂದಿವೆ. ಇದರ ಜತೆ ಜತೆಗೆ ಪಶ್ಚಿಮ ಘಟ್ಟಗಳ ರಕ್ಷಣೆಯನ್ನು ಮಾಡುವುದು ನಮ್ಮ ಕರ್ತವ್ಯವೂ ಆಗಿದೆ. ನಾನು ಕಸ್ತೂರಿ ರಂಗನ್‌ ವರದಿ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿಲ್ಲ. ಜುಲೈ 11ರಂದು ನಾವು ಈ ಸಂಬಂಧ ಕಸ್ತೂರಿ ರಂಗನ್‌ ವರದಿಗೆ ಸಂಬಂಧಪಟ್ಟಂತೆ ಸಭೆಯನ್ನು ಕರೆದಿದ್ದೇವೆ. ಒಟ್ಟಾರೆಯಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ನಾವು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ

ಅಕ್ರಮ ಮರಳು ಗಣಿಗಾರಿಕೆಯನ್ನು ರಾಜ್ಯ ಸರ್ಕಾರ ಪ್ರೋತ್ಸಾಹಿಸುವುದಿಲ್ಲ. ಈ ಸಂಬಂಧ ರಾಜ್ಯ ಸರ್ಕಾರ ಚರ್ಚೆ ನಡೆಸಿ ತೀರ್ಮಾನವನ್ನು ಕೈಗೊಳ್ಳುತ್ತದೆ. ಜತೆಗೆ ಜನರಿಗೆ ಸುಲಭವಾಗಿ ಮರಳು ಪೂರೈಕೆ ಮಾಡುವಂತೆಯೂ ಕ್ರಮ ಕೈಗೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲು ಚರ್ಚೆ ನಡೆಸಲಾಗುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಹುದ್ದೆಗಳ ಭರ್ತಿಗೆ ಕ್ರಮ

ಅರಣ್ಯ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಕರೆಯಲಾಗಿದ್ದ 338 ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು. ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಎಂಬುದರ ಬಗ್ಗೆ ನಾನು ವರದಿ ಕೇಳಿದ್ದೇನೆ. ಅಲ್ಲಿಂದ ವರದಿ ಬಂದ ಬಳಿಕ ತುರ್ತು ಕ್ರಮ ವಹಿಸುತ್ತೇನೆ. ಅಲ್ಲಿ ನೇಮಕಾತಿಗೆ ಯಾವುದೇ ತೊಡಕು ಸಹ ಇರುವುದಿಲ್ಲ. ಹೀಗಾಗಿ ತುರ್ತಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಹಲೋ ಸಚಿವರೇ ನೇರ ಫೋನ್‌ ಇನ್‌ ಕಾರ್ಯಕ್ರಮದ ಸಂಪೂರ್ಣ ವಿಡಿಯೊ ಇಲ್ಲಿದೆ

ಹೊರಗುತ್ತಿಗೆ ನೌಕರರ ಕಾಯಂಗೆ ಹಂತ ಹಂತವಾಗಿ ಕ್ರಮ

ಬಹಳ ವರ್ಷಗಳಿಂದ ಹೊರಗುತ್ತಿಗೆ ನೌಕರಿ ಮಾಡುತ್ತಿರುವವರನ್ನು ಕಾಯಂ ಮಾಡುವ ಬಗ್ಗೆ ಸರ್ಕಾರಕ್ಕೆ ಅದರದ್ದೇ ಆದ ನೀತಿಗಳಿವೆ. ಇದನ್ನು ಹಂತ ಹಂತವಾಗಿ ಮಾಡಬೇಕಿದೆ. ಮುಖ್ಯಮಂತ್ರಿಗಳ ಜತೆಗೆ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಇನ್ನು ಹೊರಗುತ್ತಿಗೆ ಕೆಲಸ ಮಾಡುವವರಿಗೆ ವೇತನ ಸರಿಯಾಗಿ ತಲುಪುತ್ತಿಲ್ಲ ಎಂಬ ದೂರುಗಳು ಬಂದಿವೆ. ವೇತನ ಸರಿಯಾದ ಸಮಯಕ್ಕೆ ತಲುಪುವಂತೆ ಕ್ರಮ ವಹಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಸರ್ಕಾರ-ಜನರ ಮಧ್ಯೆ ವಿಸ್ತಾರ ನ್ಯೂಸ್‌ ಕೊಂಡಿ: ಹರಿಪ್ರಕಾಶ್‌ ಕೋಣೆಮನೆ

ಜನಪರ ನಿಲುವಿನ ಭಾಗವಾಗಿ ಸರ್ಕಾರವನ್ನು ನಾವು ಜನರ ಬಳಿಗೆ ಕೊಂಡೊಯ್ಯುವ ಕೆಲಸವನ್ನು ಮಾಡುತ್ತಿದ್ದೇವೆ. ಈ ಮೂಲಕ ಸರ್ಕಾರ ಹಾಗೂ ಜನರನ್ನು ಬೆಸೆಯುವ ಕೊಂಡಿಯಾಗಿ ವಿಸ್ತಾರ ನ್ಯೂಸ್‌ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಮಂಗಳವಾರ ಒಂದೊಂದು ಇಲಾಖೆಯ ಸಚಿವರ ಫೋನ್‌ ಇನ್‌ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದ್ದೇವೆ ಎಂದು ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಂಡ್ಯ

Actor Darshan : ನಟ ದರ್ಶನ್‌ ವಿರುದ್ಧ ಸಿಡಿದೆದ್ದ ಮಂಡ್ಯ ರೈತರು; ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ ಖಂಡಿಸಿ ಚಿತ್ರದುರ್ಗ ಮಾತ್ರವಲ್ಲದೆ ಮಂಡ್ಯ, ರಾಮನಗರದಲ್ಲೂ ಪ್ರತಿಭಟಿಸಲಾಯಿತು. ಮಂಡ್ಯದಲ್ಲಿ ರೈತ ಸಂಘ ಪ್ರತಿಭಟಿಸಿ, ಆರೋಪಿಗಳನ್ನು ಗಲ್ಲಿಗೇರಿಸಿ ಎಂದು ಆಕ್ರೋಶ ಹೊರಹಾಕಿದರು.

VISTARANEWS.COM


on

By

Actor Darshan
Koo

ಮಂಡ್ಯ/ರಾಮನಗರ : ರೇಣುಕಾಸ್ವಾಮಿ ಎಂಬಾತನ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಗೆಳತಿ ಪವಿತ್ರಗೌಡ ಸೇರಿ 13 ಮಂದಿ ಹಲವರು ಲಾಕ್‌ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಯಿತು. ನಟ ದರ್ಶನ್ ವಿರುದ್ಧ ಮಂಡ್ಯ ಅನ್ನದಾತರು ಸಿಡಿದೆದ್ದಿದ್ದರು.

ಮಂಡ್ಯದ ಸಂಜಯ್ ವೃತ್ತದಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಕರ್ನಾಟಕ ರಾಜ್ಯ ರೈತ ಸಂಘ ರ‍್ಯಾಲಿ ನಡೆಸಿ ಆಕ್ರೋಶ ಹೊರಹಾಕಿತು. ದರ್ಶನ್ ಸೇರಿ ಎಲ್ಲ ಆರೋಪಿಗಳಿಗೂ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿದರು.

Actor darshan

ಡಾ.ರಾಜಕುಮಾರ್ ಆದರ್ಶ ಪಾಲಿಸಲಿ

ನಟ ದರ್ಶನ್ ಆ್ಯಂಡ್ ಗ್ಯಾಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳು ಆಕ್ರೋಶ ಹೊರಹಾಕಿದರು. ದರ್ಶನ್ ಹಾಗೂ ಇತರೆ ಕನ್ನಡ ನಟರು ಡಾ.ರಾಜಕುಮಾರ್ ಆದರ್ಶ ಪಾಲಿಸಲಿ. ಕೇವಲ ಹಣಕ್ಕಾಗಿ ಕಲಾವಿದರಾಗುವುದು ಬೇಡ ಎಂದರು. ಈಗೀನ‌ ನಟರು ಪೇಯ್ಡ್ ಆಕ್ಟರ್ಸ್ ಆಗಿದ್ದಾರೆ. ಇವರಿಗೆ ಯಾವುದೇ ಮೌಲ್ಯಗಳಿಲ್ಲ.

ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕು. ತಪ್ಪಿತಸ್ಥರಿಗೆ ಕಾನೂನು ಕ್ರಮವಾಗಬೇಕು ಎಂದು ಚನ್ನಪಟ್ಟಣದಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳು ಆಗ್ರಹಿಸಿದರು. ನಗರದ ಅಂಚೆಕಚೇರಿ ರಸ್ತೆಯಲ್ಲಿ ಡಾ.ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಇದನ್ನೂ ಓದಿ: Actor Darshan: ಪವಿತ್ರಾ ಗೌಡ ಜೈಲು ಸೇರುತ್ತಿದ್ದಂತೆ ಮಾಜಿ ಪತಿ ಪ್ರತ್ಯಕ್ಷ; ಅವರು ಹೇಳಿದ್ದೇನು?

ಪದೇ ಪದೆ ಕ್ರಿಮಿನಲ್ ಚಟುವಟಿಕೆ; ನಟ ದರ್ಶನ್​ ರೌಡಿ ಪಟ್ಟಿಗೆ ಸೇರ್ಪಡೆ?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬುವರನ್ನು ಹೊಡೆದು ಕೊಂದ ಆರೋಪದ ಮೇಲೆ ಪೊಲೀಸ್​ ವಶದಲ್ಲಿರುವ ನಟ ದರ್ಶನ್ ವಿರುದ್ಧ (Actor Darshan Arrested) ರೌಡಿ ಪಟ್ಟಿ ತೆರೆಯಲು ಬೆಂಗಳೂರು ನಗರ ಪೊಲೀಸರು ಸಿದ್ಧರಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ಪದೇ ಪದೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಅವರ ಮೇಲೆ ಕಾನೂನಿನ ಹಿಡಿತ ಸ್ಥಾಪಿಸಲು ರೌಡಿ ಪಟ್ಟಿ ಅನಿವಾರ್ಯ ಎಂಬ ಅಭಿಪ್ರಾಯ ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾದ ಆರೋಪಿ ಮೇಲೆ ರೌಡಿ ಪಟ್ಟಿಯನ್ನು ತೆರೆಯಲಾಗುತ್ತದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲೂ ದರ್ಶನ್​ ಪ್ರಮುಖ ಆರೋಪಿ. ಹೀಗಾಗಿ ಅವರ ಮೇಲೆಯೂ ರೌಡಿಶೀಟರ್​ ಓಪನ್ ಮಾಡಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ.

ದರ್ಶನ್​ ಈ ಹಿಂದೆಯೂ ಹಲವಾರು ಬಾರಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಬೆದರಿಕೆ, ನಿಂದನೆ ಸೇರಿದಂತೆ ನಾನಾ ರೀತಿಯಲ್ಲಿ ಅವರು ಕಾನೂನು ಕ್ರಮವನ್ನು ಎದುರಿಸಿದ್ದರು. ಹೀಗಾಗಿ ಅವರನ್ನು ರೌಡಿ ಪಟ್ಟಿಯೊಳಗೆ ಸೇರಿಸಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಪೊಲೀಸ್​ ಇಲಾಖೆಯ ಆಲೋಚನೆಯಾಗಿದೆ.

ಇದನ್ನೂ ಓದಿ: Actor Darshan Arrested: ರೇಣುಕಾಸ್ವಾಮಿಗೆ ದರ್ಶನ್‌ ಗ್ಯಾಂಗ್‌ನಿಂದ ಕ್ರೂರ ಹಿಂಸೆ; ಪೋಸ್ಟ್‌ಮಾರ್ಟಂ ವರದಿಯಲ್ಲಿದೆ ಭಯಾನಕ ಡಿಟೇಲ್ಸ್‌

ರೇಣುಕಾ ಸ್ವಾಮಿ ಅವರನ್ನು ಕೊಲೆ ಮಾಡುವ ಉದ್ದೇಶವಿಲ್ಲದೆ ಅಪಹರಣ ಮಾಡಿದ್ದರು. ಗಂಭೀರ ರೂಪದಲ್ಲಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೊಲೆ ಮಾಡಿ ಶವ ಮುಚ್ಚಿಡುವ ಹಾಗೂ ಸಾಕ್ಷಿನಾಶ ಪಡಿಸುವ ಯತ್ನ ಮಾಡಿದ್ದಾರೆ. ಇವೆಲ್ಲವೂ ಅಪಾಯಕಾರಿ ಕ್ರಿಮಿನಲ್ ಚಟುವಟಿಕೆಗಳಾಗಿವೆ.

ರೌಡಿಶೀಟ್ ಓಪನ್ ಆದ್ರೆ ಏನಾಗುತ್ತೆ.?

ಇಷ್ಟು ವರ್ಷಗಳ ಕಾಲ ಸೆಲೆಬ್ರಿಟಿಯಾಗಿ ಕಾಣಿಸಿಕೊಂಡಿದ್ದ ಹಾಗೂ ಅಪಾರ ಗೌರವ ಗಳಿಸಿಕೊಂಡಿದ್ದ ನಟ ದರ್ಶನ್ ರೌಡಿಶೀಟರ್ ಅನ್ನೋ ಕಳಂಕ ಹೊತ್ತುಕೊಳ್ಳಬೇಕಾಗುತ್ತದೆ. ಶಾಂತಿಸುವ್ಯವಸ್ಥೆಗೆ ಭಂಗ ತರುವ ಆರೋಪದ ಮೇಲೆ ಆಗಾಗ ಸಿಆರ್ಪಿಸಿ 110 ಅಡಿಯಲ್ಲಿ ಕೇಸ್ ದಾಖಲಾಗುತ್ತದೆ. ಪದೇ ಪದೆ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಬೇಕಾಗುತ್ತದೆ.

ಚುನಾವಣೆ ಹಾಗೂ ಇನ್ಯಾವುದಾದರೂ ತುರ್ತು ಸಂಧರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅವರ ಮನೆಯ ಮೇಲೆ ಪೊಲೀಸರು ದಾಳಿ ಮಾಡುತ್ತಾರೆ. ಯಾವುದೇ ಅನುಮತಿ ಇಲ್ಲದೆ ಪರಿಶೀಲನೆ ನಡೆಸುತ್ತಾರೆ. ರೌಡಿಚಟುವಟಿಕೆ ಸಕ್ರಿಯರಾಗಿದ್ದಾರೆ ಎಂಬ ಕಾರಣದಲ್ಲಿ ಅವರ ಮೇಲೆ ನಿಗಾ ಇಡುತ್ತಾರೆ. ಖಾಸಗಿತನ ನಷ್ಟವಾಗುತ್ತದೆ.

ತುರ್ತು ಸಂದರ್ಭದಲ್ಲಿ ತಹಸೀಲ್ದಾರರ ಮುಂದೆ ಹಾಜರಾಗಿ ಬಾಂಡ್ ಸಲ್ಲಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಪೊ ಲೀಸರು ನಡೆಸುವ ರೌಡಿ ಪೆರೇಡ್ ನಲ್ಲಿ ಇತರೆ ರೌಡಿಗಳಂತೆ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಲಿದೆ. ಅವರ ಟೀಕೆಗಳನ್ನು ಕೇಳಬೇಕಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Namma Metro : ತಾಂತ್ರಿಕ ಸಮಸ್ಯೆಯಿಂದಾಗಿ ಮೆಟ್ರೋ ರೈಲು ಓಡಾಟದಲ್ಲಿ ವ್ಯತ್ಯಯ; ಕಾದು ಸುಸ್ತಾದ ಪ್ರಯಾಣಿಕರು

ನಮ್ಮ ಮೆಟ್ರೋ ರೈಲಿನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ರೈಲು ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ. 15 ನಿಮಿಷಕ್ಕೂ ಹೆಚ್ಚು ಸಮಯದಿಂದ ರೈಲು ಬಾರದೆ ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ.

VISTARANEWS.COM


on

By

Namma Metro
Koo

ಬೆಂಗಳೂರು: ಬೆಂಗಳೂರಿಗರ ನೆಚ್ಚಿನ ಟ್ರಾನ್‌ಪೋರ್ಟ್‌ ಸಿಸ್ಟಂನಲ್ಲಿ ನಮ್ಮ ಮೆಟ್ರೋ (Namma Metro) ಮೊದಲ ಸ್ಥಾನವನ್ನು ಗಳಿಸಿದೆ. ಆದರೆ ತಿಂಗಳಲ್ಲಿ ನಾಲ್ಕೈದು ಬಾರಿ ತಾಂತ್ರಿಕ ಸಮಸ್ಯೆಯಿಂದಾಗಿ ನಮ್ಮ ಮೆಟ್ರೋ ಓಡಾಟದಲ್ಲಿ ವ್ಯತ್ಯಯ ಉಂಟಾಗುತ್ತಿದೆ.

ಜೂ.13ರಂದು ಬೆಳಗ್ಗೆ ಹಲವೆಡೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಎಂ.ಜಿ ರಸ್ತೆ ಸೇರಿದಂತೆ ಹಲವೆಡೆ ರೈಲು ಬರುವುದು ತಡವಾಗಿದೆ. ಎಂಜಿ ರಸ್ತೆ, ಟ್ರಿನಿಟಿ, ಹಲಸೂರು ಸೇರಿದಂತೆ ಹಲವೆಡೆ ಪ್ರಯಾಣಿಕರು ನಿಲ್ದಾಣಗಳಲ್ಲಿ ಕಾದು ನಿಂತಿದ್ದಾರೆ. ಸುಮಾರು 15 ನಿಮಿಷಕ್ಕೂ ಹೆಚ್ಚು ಸಮಯದಿಂದ ರೈಲು ಬಾರದೇ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಹೀಗಾಗಿ ಎಕ್ಸ್‌ ಮೂಲಕ ಬಿಎಂಆರ್‌ಸಿಎಲ್‌ಗೆ ಟ್ಯಾಗ್‌ ಮಾಡಿ ಮೆಟ್ರೋ ರೈಲು ವಿಳಂಬಕ್ಕೆ ಕಾರಣವೇನು? ಎಂದು ಪ್ರಶ್ನಿಸುತ್ತಿದ್ದಾರೆ. ಸದ್ಯ ತಾಂತ್ರಿಕ ಸಮಸ್ಯೆಯಿಂದಾಗಿ ಮೆಟ್ರೋ ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Murder Case : ಬೆಂಗಳೂರಿನಲ್ಲಿ ಬರ್ಬರ ಹತ್ಯೆ; ನಡು ರಸ್ತೆಯಲ್ಲೇ ರಕ್ತಕಾರಿದ ರೌಡಿಶೀಟರ್‌

ಮೆಟ್ರೋ ಸೇವೆಯಲ್ಲಿ ವ್ಯತ್ಯಯ ವಿಚಾರ ಕುರಿತು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ. ಗುರುವಾರ ಬೆಳಗ್ಗೆ 9.58 ಕ್ಕೆ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದಾಗಿ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಮೆಜೆಸ್ಟಿಕ್‌ನಲ್ಲಿ ದೋಷಯುಕ್ತ ರೈಲನ್ನು ಪಾಕೆಟ್ ಟ್ರ್ಯಾಕ್ಗೆ ಸ್ಥಳಾಂತರಿಸಲಾಗಿದೆ. ರೈಲು ಸೇವೆಗಳನ್ನು ಪುನಃಸ್ಥಾಪಿಸಲಾಗಿದ್ದು, ಸಾಮಾನ್ಯ ಸ್ಥಿತಿಗೆ ಮರಳಲು ಕನಿಷ್ಠ ಒಂದು ಗಂಟೆ ತೆಗೆದುಕೊಳ್ಳಬಹುದು. ಆದ ಅನಾನುಕೂಲತೆಗೆ ವಿಷಾದಿಸುತ್ತೇವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Dengue Fever : ಡೆಂಗ್ಯೂ ಜ್ವರಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಬಲಿ

dengue fever: ನಾಗರಾಜ್​ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ನಾಗರಾಜ್ ಅವರು ಸಕ್ಕರೆ ಕಾಯಿಲೆ ಸಮಸ್ಯೆಯೂ ಇತ್ತು. ಜತೆಗೆ ಅವರ ರಕ್ತದಲ್ಲಿನ ಪ್ಲೇಟ್​ಲೆಟ್​ ಸಂಖ್ಯೆ 26,000ಕ್ಕೂ ಕಡಿಮೆಯಾಗಿತ್ತು. ನಾಗರಾಜ್​ ಅವರು ಮೃತಪಟ್ಟ ಸುದ್ದಿಯನ್ನು ಸಾಗರ ತಾಲ್ಲೂಕು ವೈದ್ಯಾಧಿಕಾರಿ ಡಾ.ಪರಪ್ಪ ಅವರು ದೃಢಪಡಿಸಿದ್ದಾರೆ.

VISTARANEWS.COM


on

Dengue Fever
Koo

ಶಿವಮೊಗ್ಗ : ಡೆಂಗ್ಯೂ ಜ್ವರದಿಂದ (Dengue Fever) ಬಳಲುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸಾಗರ ತಾಲ್ಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಿಬ್ಬಂದಿ ನಾಗರಾಜ್ (35) ಮೃತಪಟ್ಟವರು. ಈ ಮೂಲಕ ತಾಲೂಕಿನಲ್ಲಿ ಹೊಸ ಡೆಂಗ್ಯೂ ಜ್ವರಗಳ ಪ್ರಕರಣಕ್ಕೆ ಒಂದು ಬಲಿಯಾಗಿದೆ.

ನಾಗರಾಜ್ ಅವರು ಕೆಲವು ದಿನಗಳಿಂದ ಡೆಂಗ್ಯೂನಿಂದ ಬಳಲುತ್ತಿದ್ದರು. ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ನಾಗರಾಜ್ ಅವರು ಸಕ್ಕರೆ ಕಾಯಿಲೆ ಸಮಸ್ಯೆಯೂ ಇತ್ತು. ಜತೆಗೆ ಅವರ ರಕ್ತದಲ್ಲಿನ ಪ್ಲೇಟ್​ಲೆಟ್​ ಸಂಖ್ಯೆ 26,000ಕ್ಕೂ ಕಡಿಮೆಯಾಗಿತ್ತು. ನಾಗರಾಜ್​ ಅವರು ಮೃತಪಟ್ಟ ಸುದ್ದಿಯನ್ನು ಸಾಗರ ತಾಲ್ಲೂಕು ವೈದ್ಯಾಧಿಕಾರಿ ಡಾ.ಪರಪ್ಪ ಅವರು ದೃಢಪಡಿಸಿದ್ದಾರೆ.

ಕಲುಷಿತ ನೀರು ಕುಡಿದು ಒಂದೇ ಗ್ರಾಮದ ನಾಲ್ವರ ಸಾವು, ಇಬ್ಬರ ಸ್ಥಿತಿ ಗಂಭೀರ

ಚಿಕ್ಕಬಳ್ಳಾಪುರ : ಕಲುಷಿತ ನೀರು (Polluted Water ) ಸೇವಿಸಿದ್ದರಿಂದ ಉಂಟಾದ ಅಸ್ವಸ್ಥೆಯಿಂದ ಒಂದೇ ಗ್ರಾಮದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇಲ್ಲಿನ ವೀರಪ್ಪಲ್ಲಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಪ್ರಕರಣದಿಂದ ಈ ನಾಲ್ವರು ಮೃತಪಟ್ಟಿದ್ದಾರೆ. ಅದೇ ರೀತಿ ವೀರಾಪುರ ಗ್ರಾಮದಲ್ಲಿಯೂ ‌ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಗ್ರಾಮದಲ್ಲಿ ಗಂಗಮ್ಮ (70) ಮುನಿನಾರಾಯಣಮ್ಮ (74), ಲಕ್ಷ್ಮಮ್ಮ (70). ನರಸಿಂಹಪ್ಪ (75) ಎಂಬುವರು ಮೃತಪಟ್ಟಿದ್ದರು.

ಇದನ್ನೂ ಓದಿ: Prajwal Revanna Case : ಭವಾನಿ ರೇವಣ್ಣ ಕಾರಿನ ಚಾಲಕ ಅಜಿತ್ ಸಂಬಂಧಿಕನಿಗೆ ಮನೆಗೆ ನುಗ್ಗಿ ಹಲ್ಲೆ

ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡಿರುವ ವರಲಕ್ಷ್ಮೀ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ರಿತಿ ವಾಂತಿ, ಭೇದಿಯಿಂದ ಇಬ್ಬರು ಗ್ರಾಮಸ್ಥರು. ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವರಲಕ್ಷ್ಮಿ ಲಕ್ಷ್ಮೀದೇವಮ್ಮ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮ ಪಂಚಾಯ್ತಿ ವತಿಯಿಂದ ಪೂರೈಸಿದ್ದ ನೀರು ಕಲುಷಿತ ಗೊಂಡಿದ್ದ ಕಾರಣ ಆರೋಗ್ಯ ಸಮಸ್ಯೆ ಉಂಟಾಗಿದೆ. ನೀರು ಸರಬರಾಜು ಮಾಡಿರುವ ಕೋಟಗಲ್ ಗ್ರಾಮಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೇ ವಾರದಲ್ಲಿ ಗ್ರಾಮದಲ್ಲಿ ನಾಲ್ಕು ಸರಣಿ ಸಾವಾದರೂ ಎಚ್ಚೆತ್ತುಕೊಳ್ಳದ ಪಿಡಿಒ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದಲ್ಲಿ ಚರಂಡಿಗಳು ಕಟ್ಟಿಕೊಂಡು ವಾಸನೆ ಬರುತ್ತಿವೆ. ಅದನ್ನೆಲ್ಲ ರಿಪೇರಿ ಮಾಡದ ಕಾರಣ ಕುಡಿಯುವ ನೀರಿನೊಂದಿಗೆ ಮಿಶ್ರಣಗೊಳ್ಳುತ್ತಿದೆ. ಅದರಿಂದಾಗಿಯೇ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ

Continue Reading

ಬೆಂಗಳೂರು

Murder Case : ಬೆಂಗಳೂರಿನಲ್ಲಿ ಬರ್ಬರ ಹತ್ಯೆ; ನಡು ರಸ್ತೆಯಲ್ಲೇ ರಕ್ತಕಾರಿದ ರೌಡಿಶೀಟರ್‌

Bengaluru News : ಬೆಂಗಳೂರಲ್ಲಿ ರೌಡಿಶೀಟರ್‌ (Rowdy Sheeter) ಮೇಲೆ ಎದುರಾಳಿ ಗ್ಯಾಂಗ್‌ ಅಟ್ಯಾಕ್‌ ಮಾಡಿ ಕೊಂದು (Murder case) ಹಾಕಿದೆ. ನಡು ರಸ್ತೆಯಲ್ಲೇ ರೌಡಿಶೀಟರ್‌ ಸತ್ತು ಬಿದ್ದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

VISTARANEWS.COM


on

By

murder case
Koo

ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಶೀಟರ್ (Murder case) ಬರ್ಬರ ಹತ್ಯೆಯಾಗಿದೆ. ಅಂಚೇಪಾಳ್ಯ ನಾಗ ಕೊಲೆಯಾದ ರೌಡಿಶೀಟರ್ ಆಗಿದ್ದಾನೆ. ರಾತ್ರೋರಾತ್ರಿ ಮುತ್ತುರಾಯನಗರ ಸಮೀಪದ ರೈಲ್ವೇ ಟ್ರಾಕ್ ಸಮೀಪ ಎದುರಾಳಿ ಗ್ಯಾಂಗ್‌ವೊಂದು ಅಟ್ಯಾಕ್‌ ಮಾಡಿ ಕೊಂದು ಹಾಕಿದೆ.

ಮುಖಮೂತಿ ನೋಡದೆ ಮಾರಕಾಸ್ತ್ರಗಳಿಂದ ರೌಡಿ ನಾಗನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಮಾರಣಾಂತಿಕ ಹಲ್ಲೆಯಿಂದಾಗಿ ತೀವ್ರ ರಕ್ತಸ್ರಾವವಾಗಿ ನಾಗ ಬೀದಿ ಹೆಣವಾಗಿದ್ದಾನೆ. ಸ್ಥಳೀಯರ ಮಾಹಿತಿ ಮೇರೆಗೆ ಜ್ಞಾನಭಾರತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕೊಲೆಗಾರರಿಗಾಗಿ ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Actor Darshan: ದರ್ಶನ್‌ಗೆ ನೆರವು ಕೊಟ್ಟ ಮತ್ತೊಬ್ಬ ಸ್ಯಾಂಡಲ್‌ವುಡ್‌ ನಟ ಅರೆಸ್ಟ್‌!

ದರ್ಶನ್​ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ; ಚಿಕ್ಕಪೇಟೆ ಬಿರಿಯಾನಿ, ಡೋಲೊ 650 ಮಾತ್ರೆ!

ಬೆಂಗಳೂರು : ತನ್ನ ಅಭಿಮಾನಿ ರೇಣುಕಾ ಸ್ವಾಮಿ ಎಂಬುವರನ್ನು ಅಮಾನುಷವಾಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಪೊಲೀಸ್​​ ಕಸ್ಟಡಿಯಲ್ಲಿರುವ ನಟ ದರ್ಶನ್ (Actor Darshan Arrested) ಹಾಗೂ ಆತನ ಸಹಚರರಿಗೆ ಕಾಮಾಕ್ಷಿ ಪಾಳ್ಯ ಪೊಲೀಸರು ಮಂಗಳವಾರ ರಾತ್ರಿಯ ಊಟಕ್ಕೆ ಚಿಕ್ಕಪೇಟೆ ಬಿರಿಯಾನಿ ತಂದುಕೊಟ್ಟಿದ್ದಾರೆ. ಪ್ರಕರಣದಲ್ಲಿ ದರ್ಶನ್​ ಮತ್ತು ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳಿದ್ದಾರೆ. ಅವರೆಲ್ಲರನ್ನೂ ನ್ಯಾಯಾಲಯ ಪೊಲೀಸರ ಕಸ್ಟಡಿಗೆ ನೀಡಿದೆ. ಪವಿತ್ರಾ ಸಾಂತ್ವನ ಕೇಂದ್ರದಲ್ಲಿ ಇದ್ದರೆ ಉಳಿದವರು ಕಾಮಾಕ್ಷಿಪಾಳ್ಯ ಪೊಲೀಸರ ವಶದಲ್ಲಿದ್ದಾರೆ. ರಾತ್ರಿಯ ಊಟಕ್ಕೆ ಪೊಲೀಸರು ಅವರೆಲ್ಲರಿಗೂ ಚಿಕ್ಕಪೇಟೆ ಬಿರಿಯಾನಿ ಪ್ಯಾಕೇಟ್​ಗಳನ್ನು ತೆಗೆದುಕೊಂಡು ಹೋಗಿರುವ ದೃಶ್ಯಗಳು ಸೆರೆಯಾಗಿವೆ.

ದೊಡ್ಡ ಪ್ರಮಾಣದಲ್ಲಿ ಬಿರಿಯಾನಿ ಪ್ಯಾಕೆಟ್​ಗಳನ್ನು ಕ್ಯಾರಿ ಬ್ಯಾಗ್​ನಲ್ಲಿ ತುಂಬಿಸಿಕೊಂಡು ಹೋಗಿದ್ದು, ಜತೆಗೆ ಎಲ್ಲರಿಗೂ ಮಿನರಲ್ ವಾಟರ್​ ನೀಡಲಾಗಿದೆ. ಆರೋಪಿಗಳು ಕೆಲವರು ಬೆಳಗ್ಗಿನಿಂದ ಬಂಧನ ಹಾಗೂ ಇನ್ನಿತರ ಕಾನೂನು ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಮೈಕೈ ನೋವು, ತಲೆ ನೋವು ಎಂದಿದ್ದು ಅವರೆಲ್ಲರಿಗೂ ಡೋಲೋ 650 ಮಾತ್ರೆಯನ್ನೂ ತಂದಕೊಟ್ಟಿದ್ದಾರೆ.

ಆರೋಪಿ ಚಿತ್ರನಟ ಹಾಗೂ ಇದು ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಪ್ರಕರಣವಾಗಿರುವ ಕಾರಣ ತಮ್ಮ ವಶದಲ್ಲಿರುವ ಆರೋಪಿಗಳನ್ನು ಸರಿಯಾಗಿ ನೋಡಿಕೊಳ್ಳುವುದು ಪೊಲೀಸರಿಗೆ ಅನಿವಾರ್ಯ. ಹೀಗಾಗಿ ಅವರ ಊಟ, ತಿಂಡಿ ಹಾಗೂ ಇನ್ನಿತರ ಉಪಚಾರಗಳನ್ನು ಮಾಡಲು ಪೊಲೀಸರ ತಂಡ ನಾನಾ ರೀತಿಯ ಶ್ರಮಗಳನ್ನು ಹಾಕುತ್ತಿದೆ.

ಹಾಸಿಗೆ, ತಲೆದಿಂಬು

ಆರೋಪಿ ನಂಬರ್ 1 ದರ್ಶನ್ ಹಾಗೂ ಉಳಿದ ಆರೋಪಿಗಳಿಗೆ ಪೊಲೀಸರು ರಾತ್ರಿ ವೇಳೆ ಮಲಗಲು ಹಾಸಿಗೆ ಹಾಗೂ ತಲೆ ದಿಂಬು ವ್ಯವಸ್ಥೆಯನ್ನೂ ಮಾಡಿದ್ದಾರೆ. 9 ಗಂಟೆ ವೇಳೆಗೆ ಪೊಲೀಸರು ನಾನಾ ಕಡೆಯಿಂದ ಆರೋಪಿಗಳೆಲ್ಲರಿಗೂ ಮಲಗಲು ಕಾರ್ಪೆಟ್​, ಬೆಡ್​ಶೀಟ್​ ಹಾಗೂ ತಲೆ ದಿಂಬಿನ ವ್ಯವಸ್ಥೆ ಮಾಡಿದ್ದಾರೆ. ಆರು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿರುವ ಪೊಲೀಸರಿಗೆ ಮುಂದಿನ ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡುವೆ ಇಷ್ಟೊಂದು ವ್ಯವಸ್ಥೆಗಳನ್ನು ಮಾಡಲೇಬೇಕಾಗುತ್ತದೆ.

ಇದನ್ನೂ ಓದಿ: Pavithra Gowda: ಬಂಧನದ ಭಯವಿಲ್ಲದೇ ನಗುತ್ತಾ ಸಾಂತ್ವನ ಕೇಂದ್ರಕ್ಕೆ ಹೋದ ಪವಿತ್ರಾ ಗೌಡ!

ಏತನ್ಮಧ್ಯೆ, ಆರೋಪಿ ನಂಬರ್​ 2 ಪವಿತ್ರಾಗೌಡ ಸಾಂತ್ವನ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ. ಪೊಲೀಸರು ಅವರನ್ನು ಅಲ್ಲಿಗೆ ಜೀಪ್​ನಲ್ಲಿ ಕರೆದುಕೊಂಡು ಹೋಗಿ ಬಿಡುತ್ತಿದ್ದಂತೆ ನಗುನಗುತ್ತಾ ಅವರು ಸಾಂತ್ವನ ಕೇಂದ್ರ ಸೇರಿಕೊಂಡಿದ್ದಾರೆ. ನಡೆದ ಘಟನೆಗೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಅವರು ಕೇಂದ್ರ ಸೇರಿಕೊಂಡಿದ್ದಾರೆ.

ಕೊಲೆಗೆ ಕಾರಣ

ರೇಣುಕಾಸ್ವಾಮಿ ಪವಿತ್ರಗೌಡಗೆ ಮೆಸೇಜ್ ಮಾಡುತ್ತಿದ್ದ. ಈ ವಿಷಯ ತಿಳಿದು ದರ್ಶನ್ ಆಪ್ತರು ನಕಲಿ ಅಕೌಂಟ್ ತೆರೆದಿದ್ದರು. ಬಳಿಕ ರೇಣುಕಾಸ್ವಾಮಿ ಜತೆ ಚಾಟಿಂಗ್ ನಡೆಸಲಾಗಿತ್ತು. ಬಳಿಕ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ಬಂದು ಹಲ್ಲೆ ನಡೆಸಲಾಗಿತ್ತು. ಈ ವೇಳೆ ಆತ ಸಾವನ್ನಪ್ಪಿದ್ದ. ಆತ ಮೃತಪಟ್ಟಿರುವುದು ಗೊತ್ತಾಗುತ್ತಿದ್ದಂತೆ ದರ್ಶನ್‌ ಆಪ್ತರು ಸ್ಕಾರ್ಪಿಯೋ ಕಾರಿನಲ್ಲಿ ಶವವನ್ನು ತಂದು ಬಿಸಾಡಿ ಹೋಗಿದ್ದರು. ಬಳಿಕ ಪೊಲೀಸರಿಗೆ ಕಾಲ್‌ ಮಾಡಿ ತಪ್ಪಾಗಿದೆ ಸರ್ ಅಂದಿದ್ದರು. ಬಳಿಕ ಬಂದು ಮೂವರು ಪೊಲೀಸರ ಮುಂದೆ ಶರಣಾಗಿದ್ದರು ಎನ್ನಲಾಗಿದೆ.

ದರ್ಶನ್‌ ಅವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ನಟ ದರ್ಶನ್‌ ಅವರ ಗೆಳತಿಯೂ ಆದ ನಟಿ (Pavithra Gowda) ಅವರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ಹಿಂದೆ ಒಳಸಂಚು ರೂಪಿಸಿದ ಆರೋಪದಲ್ಲಿ ಬೆಂಗಳೂರಿನ ಅನ್ನಪೂರ್ಣೇಶ್ವರ ನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರೇಣುಕಾಸ್ವಾಮಿ ಯಾರು?

ಚಿತ್ರದುರ್ಗ ಮೂಲದವನಾದ ರೇಣುಕಾಸ್ವಾಮಿ ಎಂಬ 28 ವರ್ಷದ ಯುವಕನು ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈತನು ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಕಳುಹಿಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದರ್ಶನ್‌ ಹಾಗೂ ಅವರ ಆಪ್ತರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದರ್ಶನ್‌ ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿಗೆ ಕಳೆದ ವರ್ಷವೇ ಸಹನಾ ಎಂಬ ಯುವತಿ ಜತೆ ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ. ರೇಣುಕಾಸ್ವಾಮಿ ಕೂಡ ದರ್ಶನ್‌ ಅಭಿಮಾನಿಯಾಗಿದ್ದ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Priyanka Chopra’s Brother-In-Law Kevin Jonas Diagnosed With Skin Cancer
ಸಿನಿಮಾ13 mins ago

Priyanka Chopra: ಪ್ರಿಯಾಂಕಾ ಚೋಪ್ರಾ ಮೈದುನ, ಗಾಯಕ ಕೆವಿನ್​ ಜೋನಸ್‌ಗೆ ಕ್ಯಾನ್ಸರ್!

Actor Darshan
ಮಂಡ್ಯ14 mins ago

Actor Darshan : ನಟ ದರ್ಶನ್‌ ವಿರುದ್ಧ ಸಿಡಿದೆದ್ದ ಮಂಡ್ಯ ರೈತರು; ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ

Sonakshi Sinha Zaheer Iqbal confirm their wedding in leaked audio
ಬಾಲಿವುಡ್16 mins ago

Sonakshi Sinha: ಸೋನಾಕ್ಷಿ ಸಿನ್ಹಾ – ಜಹೀರ್ ಇಕ್ಬಾಲ್ ಮದುವೆಯ ಆಮಂತ್ರಣದ ಆಡಿಯೊ ಕ್ಲಿಪ್‌ ಲೀಕ್‌!

Shardul Thakur
ಕ್ರೀಡೆ19 mins ago

Shardul Thakur: ಶಾರ್ದೂಲ್‌ ಠಾಕೂರ್‌ಗೆ ಪಾದದ ಶಸ್ತ್ರಚಿಕಿತ್ಸೆ; ಮೂರು ತಿಂಗಳು ಕ್ರಿಕೆಟ್​ನಿಂದ ದೂರ 

NEET UG
ಪ್ರಮುಖ ಸುದ್ದಿ33 mins ago

NEET UG : 1563 ಅಭ್ಯರ್ಥಿಗಳ ಗ್ರೇಸ್ ಮಾರ್ಕ್​ ರದ್ದು, ಜೂನ್​ 23ರಂದು ಮರುಪರೀಕ್ಷೆ

G7 Summit
ದೇಶ41 mins ago

G7 Summit: ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೋದಿ ಮೊದಲ ವಿದೇಶ ಪ್ರವಾಸ ಇಂದು; ಇಟಲಿಯ ಜಿ7 ಶೃಂಗಸಭೆಯಲ್ಲಿ ಭಾಗಿ

Namma Metro
ಬೆಂಗಳೂರು55 mins ago

Namma Metro : ತಾಂತ್ರಿಕ ಸಮಸ್ಯೆಯಿಂದಾಗಿ ಮೆಟ್ರೋ ರೈಲು ಓಡಾಟದಲ್ಲಿ ವ್ಯತ್ಯಯ; ಕಾದು ಸುಸ್ತಾದ ಪ್ರಯಾಣಿಕರು

T20 World Cup Viral Video
ಕ್ರಿಕೆಟ್58 mins ago

T20 World Cup Viral Video: ಪಾಕ್​ ತಂಡದ ವೇಗಿಗೆ ತವರಿನ ಅಭಿಮಾನಿಗಳಿಂದಲೇ ಗೇಲಿ

Dengue Fever
ಪ್ರಮುಖ ಸುದ್ದಿ1 hour ago

Dengue Fever : ಡೆಂಗ್ಯೂ ಜ್ವರಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಬಲಿ

murder case
ಬೆಂಗಳೂರು1 hour ago

Murder Case : ಬೆಂಗಳೂರಿನಲ್ಲಿ ಬರ್ಬರ ಹತ್ಯೆ; ನಡು ರಸ್ತೆಯಲ್ಲೇ ರಕ್ತಕಾರಿದ ರೌಡಿಶೀಟರ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌