Viral News: ಪಕ್ಕದ ಮನೆಯವರ 32 ಮರ ಕಡಿದವನಿಗೆ 12 ಕೋಟಿ ರೂ. ದಂಡ, ಕತ್ತರಿಸಲು ಕಾರಣ ವಿಚಿತ್ರ - Vistara News

ವಿದೇಶ

Viral News: ಪಕ್ಕದ ಮನೆಯವರ 32 ಮರ ಕಡಿದವನಿಗೆ 12 ಕೋಟಿ ರೂ. ದಂಡ, ಕತ್ತರಿಸಲು ಕಾರಣ ವಿಚಿತ್ರ

Viral News: ಪಕ್ಕದ ಮನೆಯವರ ಮೇಲಿನ ಸೇಡು ಹಾಗೂ ಮನೆಯ ಅಂಗಳದಲ್ಲಿ ನಿಂತರೆ ಆಕಾಶ ಇನ್ನಷ್ಟು ಸ್ವಚ್ಛಂದವಾಗಿ ಕಾಣಲಿ ಎಂದು ವ್ಯಕ್ತಿಯೊಬ್ಬ ಪಕ್ಕದ ಮನೆಯವರ 32 ಮರಗಳನ್ನು ಕಡಿಸಿದ್ದಾನೆ. ಇಂತಹ ಹೀನ ಕೃತ್ಯ ಎಸಗಿದವನಿಗೆ ಕೋರ್ಟ್‌ ತಕ್ಕ ಶಾಸ್ತಿಯನ್ನೇ ಮಾಡಿದೆ.

VISTARANEWS.COM


on

Man Who Cut Trees has to pay huge fine
ಸಾಂದರ್ಭಿಕ ಚಿತ್ರ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಮೆರಿಕ: ಹಾಗೆ ತುಂಬ ಜನ ಇರುತ್ತಾರೆ. ಸುಖಾಸುಮ್ಮನೆ ಬೇರೆಯವರೊಂದಿಗೆ ಸಣ್ಣ ವಿಷಯಕ್ಕೆ ಜಗಳವಾಡುತ್ತಾರೆ. ತಮ್ಮ ಸ್ವಾರ್ಥವೇ ಮೇಲು, ತಮಗೇ ಎಲ್ಲವೂ ದಕ್ಕಬೇಕು ಎಂಬ ಮನೋಭಾವ ಹೊಂದಿರುತ್ತಾರೆ. ಹೀಗೆ, ಸ್ವಾರ್ಥಕ್ಕಾಗಿ ಇವರು ಕೆಲವೊಮ್ಮೆ ಇರಲಾರದೆ ಇರುವೆ ಬಿಟ್ಟುಕೊಳ್ಳುತ್ತಾರೆ. ಹೀಗೆ, ತನ್ನ ಸ್ವಾರ್ಥಕ್ಕಾಗಿ ಅಮೆರಿಕದಲ್ಲಿ ವ್ಯಕ್ತಿಯೊಬ್ಬ ಪಕ್ಕದ ಮನೆಯವರ 32 ಮರಗಳನ್ನು ಕಡಿಸಿದ್ದಾನೆ. ಇಂತಹ ಮಹಾಪರಾಧಕ್ಕಾಗಿ ಆತನಿಗೆ ಸುಮಾರು 12 ಕೋಟಿ ರೂಪಾಯಿ (Viral News) ದಂಡ ಬಿದ್ದಿದೆ.

ಅಮೆರಿಕದ ನ್ಯೂಜೆರ್ಸಿಯ ನಿವಾಸಿಯಾದ ಗ್ರ್ಯಾಂಟ್‌ ಹೇಬರ್‌ ಎಂಬಾತನು ತನ್ನ ಪಕ್ಕದ ಮನೆಯವರ ಮೇಲಿನ ಸೇಡು ಹಾಗೂ ಮರಗಳು ಇಲ್ಲದಿದ್ದರೆ ಆಕಾಶ ಇನ್ನಷ್ಟು ಸ್ವಚ್ಛಂದವಾಗಿ ಕಾಣಿಸುತ್ತದೆ ಎಂದು ಆಳುಗಳನ್ನು ಕಳುಹಿಸಿ ಸಮಿಹ್‌ ಶಿನ್‌ವೇ ಎಂಬುವರ ಮರಗಳನ್ನು ಕಡಿಸಿದ್ದಾನೆ. ಇದಕ್ಕಾಗಿ ಗ್ರ್ಯಾಂಟ್‌ ಹೇದರ್‌ಗೆ ನ್ಯಾಯಾಲಯವು 1.5 ದಶಲಕ್ಷ ಡಾಲರ್‌ ದಂಡ ವಿಧಿಸಿದೆ.

“ನನ್ನ ಜಮೀನಿನಲ್ಲಿ ಬೆಳೆಯಲಾದ ಓಕ್‌, ಬಿರ್ಚ್‌ ಹಾಗೂ ಮಾಪಲ್ಸ್‌ ಮರಗಳನ್ನು ಗ್ರ್ಯಾಂಡ್‌ ಹೇಬರ್‌ನು ಕಡಿಸಿದ್ದಾನೆ. ನನ್ನ ಜಮೀನಿನಲ್ಲಿ ಗರಗಸಗಳ ಶಬ್ದ ಕೇಳಿಸಿದ ಕಾರಣ ಓಡಿಹೋಗಿ ನೋಡಿದೆ. ಸುಮಾರು ಜನ ಮರಗಳನ್ನು ಕತ್ತರಿಸುತ್ತಿದ್ದನ್ನು ಕಂಡು ಆಕಾಶವೇ ಕುಸಿದು ಬಿದ್ದಂತಾಯಿತು. ತುಂಬ ವರ್ಷಗಳಿಂದ ಮುತುವರ್ಜಿ ವಹಿಸಿ ಮರಗಳನ್ನು ಬೆಳೆಸಿದ್ದೆ. ಗ್ರ್ಯಾಂಟ್‌ ಹೇಬರ್‌ ಇಂತಹ ಹೇಯ ಕೆಲಸ ಮಾಡಿಸಿದ್ದಾನೆ” ಎಂದು ಸಮಿಹ್‌ ಶಿನ್‌ವೇ ತಿಳಿಸಿದ್ದಾರೆ.

ಇದನ್ನೂ ಓದಿ: Viral News: 30 ವರ್ಷದ ಹಳೆಯ ಏರ್‌ ಪಾಸ್‌ ಮೂಲಕ ಒಂದೇ ವರ್ಷದಲ್ಲಿ 373 ವಿಮಾನ ಪ್ರಯಾಣ ಮಾಡಿದ!

ಮರಗಳನ್ನು ಕಡಿಸಿದ ಅಪರಾಧ, ಸಮಿಹ್‌ ಶಿನ್‌ವೇ ಅವರು ಮತ್ತೆ ಜಮೀನನ್ನು ಹದಗೊಳಿಸಿ, ಮರಗಳ ಬೇರುಗಳನ್ನು ತೆಗೆಸಿ, ಬೇರೆ ತಳಿಯ ಸಸಿಗಳನ್ನು ನೆಟ್ಟು, ಅವುಗಳು ಮರವಾಗುವತನಕ ಕಾಯಬೇಕಾದದ್ದನ್ನು ಪರಿಗಣಿಸಿ ನ್ಯಾಯಾಲಯವು ಒಂದು 12 ಕೋಟಿ ರೂಪಾಯಿ ದಂಡ ವಿಧಿಸಿದೆ. ಹಾಗೆ ನೋಡಿದರೆ, ಉಗ್ರರ ನಿಗ್ರಹ ಕಂಪನಿಯೊಂದಕ್ಕೆ ಗ್ರ್ಯಾಂಟ್‌ ಹೇಬರ್‌ ಸಿಇಒ ಆಗಿದ್ದಾನೆ. ಶಿಕ್ಷಣ, ಕಂಪನಿ, ಸ್ಟೇಟಸ್‌ ಎಲ್ಲವೂ ಇದೆ. ಆದರೆ, ಒಂದು ವರ್ಷದಿಂದ ಸಮಿಹ್‌ ಶಿನ್‌ವೇ ಜತೆ ಜಗಳವಾಡುತ್ತಿದ್ದ ಹೇಬರ್‌, ಕೊನೆಗೆ ಇಂತಹ ಹೀನ ಕೃತ್ಯ ಎಸಗಿದ್ದಾನೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವಿದೇಶ

Indian Origin Crow: ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು ಕೊಲ್ಲಲು ಕೀನ್ಯಾ ನಿರ್ಧರಿಸಿದ್ದೇಕೆ?

2024ರ ಅಂತ್ಯದ ವೇಳೆಗೆ ಅಂದರೆ ಮುಂಬರುವ ಆರು ತಿಂಗಳಲ್ಲಿ ಭಾರತೀಯ ಮೂಲದ ಕಾಗೆಗಳನ್ನು(Indian Origin Crow) ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲುವುದಾಗಿ ಕೀನ್ಯಾ ಸರ್ಕಾರ ಘೋಷಿಸಿದೆ. 10 ಲಕ್ಷ ಕಾಗೆಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ ಯಾಕೆ ಗೊತ್ತೇ? ಇಲ್ಲಿದೆ ಮಾಹಿತಿ.

VISTARANEWS.COM


on

By

Indian Origin Crow
Koo

ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು (Indian Origin Crow) ಈ ವರ್ಷಾಂತ್ಯದ ವೇಳೆಗೆ ಕೊಲ್ಲಲು ಕೀನ್ಯಾ (Kenya) ಯೋಜನೆ ಹಾಕಿಕೊಂಡಿದೆ. ಕಾಗೆಯು ಪ್ರಾಥಮಿಕ ಪರಿಸರ ವ್ಯವಸ್ಥೆಯ ಭಾಗವಲ್ಲ. ಈ ಕಾಗೆಗಳು ದಶಕಗಳಿಂದ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು, ಸ್ಥಳೀಯ ಪಕ್ಷಿಗಳನ್ನು ಸಾಯಿಸುತ್ತಿವೆ ಎಂದು ಕೀನ್ಯಾದ ವನ್ಯಜೀವಿ ಇಲಾಖೆ (Wildlife Department) ಹೇಳಿದೆ.

2024ರ ಅಂತ್ಯದ ವೇಳೆಗೆ ಅಂದರೆ ಮುಂಬರುವ ಆರು ತಿಂಗಳಲ್ಲಿ ಭಾರತೀಯ ಮೂಲದ ಕಾಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲುವುದಾಗಿ ಕೀನ್ಯಾ ಸರ್ಕಾರ ಘೋಷಿಸಿದೆ. 10 ಲಕ್ಷ ಕಾಗೆಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಭಾರತೀಯ ಮೂಲದ ಕಾಗೆಗಳನ್ನು ‘ಆಕ್ರಮಣಕಾರಿ ವಿದೇಶಿ ಪಕ್ಷಿಗಳು’ ಎಂದು ಕರೆದಿರುವ ಕೀನ್ಯಾದ ವನ್ಯಜೀವಿ ಪ್ರಾಧಿಕಾರವು ಈ ಕಾಗೆಗಳು ಪೂರ್ವ ಆಫ್ರಿಕಾಕ್ಕೆ ಸ್ಥಳೀಯವಾಗಿಲ್ಲ ಎಂದಿದೆ.

ಕಳೆದ ಕೆಲವು ವರ್ಷಗಳಲ್ಲಿ ಕರಾವಳಿ ನಗರಗಳಾದ ಮೊಂಬಾಸಾ, ಮಲಿಂಡಿ, ಕಿಲಿಫಿ ಮತ್ತು ವಟಮುಗಳಲ್ಲಿ ಅವುಗಳ ಸಂಖ್ಯೆಯು ವೇಗವಾಗಿ ಹೆಚ್ಚಾಗಿದೆ. ಇದರಿಂದ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು 1 ಮಿಲಿಯನ್ ಕಾಗೆಗಳನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಹೊಟೇಲ್ ಉದ್ಯಮದ ಪ್ರತಿನಿಧಿಗಳು ಮತ್ತು ಕಾಗೆ ನಿಯಂತ್ರಣದಲ್ಲಿ ಪರಿಣತಿ ಹೊಂದಿರುವ ವೈದ್ಯರನ್ನು ಒಳಗೊಂಡ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಹೊಟೇಲ್ ಉದ್ಯಮಕ್ಕೆ ತೊಂದರೆ

ವನ್ಯಜೀವಿ ಪ್ರಾಧಿಕಾರವು ನೀಡಿರುವ ಹೇಳಿಕೆಯಲ್ಲಿ ಕರಾವಳಿ ನಗರಗಳ ಹೊಟೇಲ್ ಉದ್ಯಮಕ್ಕೆ ಈ ಕಾಗೆಗಳು ದೊಡ್ಡ ಸಮಸ್ಯೆಯಾಗುತ್ತಿವೆ. ಕಾಗೆಗಳಿಂದ ಪ್ರವಾಸಿಗರು ತೆರೆದ ಜಾಗದಲ್ಲಿ ಕುಳಿತು ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೊಟೇಲ್ ಉದ್ಯಮಕ್ಕೆ ಸಂಬಂಧಿಸಿದವರು ಸಹ ಕಾಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಅವುಗಳ ಮೇಲೆ ನಿಯಂತ್ರಣಕ್ಕೆ ಒತ್ತಾಯಿಸುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದ ಕಾಗೆಗಳನ್ನು ನಿರ್ಮೂಲನೆ ಮಾಡಲು ನಿರ್ಧರಿಸಲಾಗಿದೆ ಎಂದು ಕೀನ್ಯಾ ವನ್ಯಜೀವಿ ಪ್ರಾಧಿಕಾರ ತಿಳಿಸಿದೆ.

ಯಾರಿಗೆ ಅಪಾಯ?

ಕೀನ್ಯಾದಲ್ಲಿ ಕಾಗೆಗಳಿಂದಾಗಿ ಅನೇಕ ಪಕ್ಷಿಗಳು ಅಳಿವಿನಂಚಿನಲ್ಲಿವೆ. ಅಂತಹ ಪಕ್ಷಿಗಳನ್ನು ಕಾಗೆಗಳು ನಿರಂತರವಾಗಿ ಬೇಟೆಯಾಡುತ್ತಿವೆ ಎಂದು ವನ್ಯಜೀವಿ ಪ್ರಾಧಿಕಾರ ತಿಳಿಸಿದೆ.

ಇದನ್ನೂ ಓದಿ: Norway Tour: ಜಗತ್ತಿನ ಕೊನೆಯ ದೇಶ ಇದು! ಇಲ್ಲಿ 6 ತಿಂಗಳು ಹಗಲು, 6 ತಿಂಗಳು ರಾತ್ರಿ!

ಈ ಕಾಗೆಗಳು ಸಣ್ಣ ಸ್ಥಳೀಯ ಪಕ್ಷಿಗಳ ಗೂಡುಗಳನ್ನು ನಾಶಪಡಿಸುತ್ತವೆ ಮತ್ತು ಅವುಗಳ ಮೊಟ್ಟೆಗಳು ಮತ್ತು ಮರಿಗಳನ್ನು ತಿನ್ನುತ್ತವೆ, ಇದರಿಂದಾಗಿ ಅನೇಕ ಪಕ್ಷಿ ಪ್ರಭೇದಗಳು ಕಡಿಮೆಯಾಗುತ್ತಿವೆ ಎಂದು ಕೀನ್ಯಾದ ಪಕ್ಷಿವಿಜ್ಞಾನಿ ಕಾಲಿನ್ ಜಾಕ್ಸನ್ ತಿಳಿಸಿದ್ದಾರೆ.

ಸ್ಥಳೀಯ ಪಕ್ಷಿಗಳ ಕೊರತೆಯಿಂದ ಪರಿಸರ ಸಂರಕ್ಷಣೆಗೆ ತೊಂದರೆಯಾಗಿದೆ. ಕಾಗೆಗಳ ಹೆಚ್ಚುತ್ತಿರುವ ಸಂಖ್ಯೆಯ ಪರಿಣಾಮವು ಅಂತಹ ಪಕ್ಷಿಗಳ ಮೇಲೆ ಮಾತ್ರವಲ್ಲ ಇಡೀ ಪರಿಸರ ವ್ಯವಸ್ಥೆಯು ಪರಿಣಾಮ ಬೀರುತ್ತಿದೆ ಎಂದು ಕೀನ್ಯಾ ಹೇಳಿದೆ.

Continue Reading

ವಿದೇಶ

World’s Newest Countries: ಇವು ವಿಶ್ವದ 10 ಹೊಸ ರಾಷ್ಟ್ರಗಳು! ಏನು ಈ ರಾಷ್ಟ್ರಗಳ ವಿಶೇಷ?

ಸಮಯದೊಂದಿಗೆ ಜಾಗತಿಕವಾಗಿಯೂ ಹಲವಾರು ಬದಲಾವಣೆಗಳು ಆಗುತ್ತಲೇ ಇರುತ್ತದೆ. ಪ್ರಸ್ತುತ ಜಗತ್ತಿನಲ್ಲಿ 195 ದೇಶಗಳಿವೆ. ಇವುಗಳಲ್ಲಿ ಕೆಲವು ಸಾಕಷ್ಟು ಹಳೆಯವು ಮತ್ತು ಕೆಲವು ಸಾಕಷ್ಟು ಹೊಸದು. ಇದರಲ್ಲಿ ಹತ್ತು ರಾಷ್ಟ್ರಗಳು ಕಳೆದ ಎರಡು ದಶಕಗಳಲ್ಲಿ (World’s Newest Countries) ಸ್ಥಾಪನೆಯಾಗಿರುವುದು. ಈ ಹತ್ತು ದೇಶಗಳ ಸಂಕ್ಪಿಪ್ತ ಪರಿಚಯ ಇಲ್ಲಿದೆ.

VISTARANEWS.COM


on

By

World's Newest Countries
Koo

ಕಳೆದ ಎರಡು ದಶಕಗಳಲ್ಲಿ ವಿಶ್ವದಲ್ಲಿ ಹತ್ತು ಹೊಸ ರಾಷ್ಟ್ರಗಳು (World’s Newest Countries) ರೂಪುಗೊಂಡಿದ್ದು, ಇದರಲ್ಲಿ ದಕ್ಷಿಣ ಸುಡಾನ್ (South Sudan) ಇತ್ತೀಚೆಗೆಷ್ಟೇ ಹುಟ್ಟಿಕೊಂಡಿದೆ. ಸಾಕಷ್ಟು ಸವಾಲುಗಳನ್ನು ಎದುರಿಸಿ ರೂಪುಗೊಂಡಿರುವ ಈ ಹೊಸ ರಾಷ್ಟ್ರಗಳು ಅನೇಕ ಅವಕಾಶಗಳನ್ನೂ ಸೃಷ್ಟಿಸಿದೆ.

ದಕ್ಷಿಣ ಸೂಡಾನ್ ಇದೀಗ ವಿಶ್ವದ ಹೊಸ ದೇಶಗಳ ಪಟ್ಟಿಯಲ್ಲಿದೆ. 2011ರ ಜುಲೈ 9ರಂದು ಸ್ವತಂತ್ರಗೊಂಡ (gained independence) ದಕ್ಷಿಣ ಸುಡಾನ್ ಈಗ ವಿಶ್ವದಲ್ಲಿ ಅಸ್ತಿತ್ವದಲ್ಲಿರುವ ಹೊಸ ದೇಶವಾಗಿದೆ. ಇದರೊಂದಿಗೆ ಹೊಸ ದೇಶಗಳ ಪಟ್ಟಿಯಲ್ಲಿ ಕೊಸೊವೊ (Kosovo), ಮಾಂಟೆನೆಗ್ರೊ (Montenegro), ಸೆರ್ಬಿಯಾ (Serbia), ಪೂರ್ವ ಟಿಮೋರ್ (East Timor) , ಪಲಾವ್ (Palau), ಎರಿಟ್ರಿಯಾ (Eritrea), ಜೆಕ್ ರಿಪಬ್ಲಿಕ್ (Czech Republic), ಸ್ಲೋವಾಕಿಯಾ (Slovakia) ಮತ್ತು ಕ್ರೊಯೇಷಿಯಾ (Croatia) ಕೂಡ ಸೇರ್ಪಡೆಯಾಗಿದೆ.

ಸಮಯದೊಂದಿಗೆ ಜಾಗತಿಕವಾಗಿಯೂ ಹಲವಾರು ಬದಲಾವಣೆಗಳು ಆಗುತ್ತಲೇ ಇರುತ್ತದೆ. ಪ್ರಸ್ತುತ ಜಗತ್ತಿನಲ್ಲಿ 195 ದೇಶಗಳಿವೆ. ಇವುಗಳಲ್ಲಿ ಕೆಲವು ಸಾಕಷ್ಟು ಹಳೆಯವು ಮತ್ತು ಕೆಲವು ಸಾಕಷ್ಟು ಹೊಸದು. ಇದರಲ್ಲಿ ಹತ್ತು ರಾಷ್ಟ್ರಗಳು ಕಳೆದ ಎರಡು ದಶಕಗಳಲ್ಲಿ ಸ್ಥಾಪನೆಯಾಗಿರುವುದು.

ಇತ್ತೀಚಿಗೆ ಸ್ಥಾಪನೆಯಾಗಿರುವ ಪ್ರಪಂಚದ ಹೊಸ ಅಥವಾ ಕಿರಿಯ ರಾಷ್ಟ್ರಗಳು ಅನನ್ಯ ಸವಾಲುಗಳನ್ನು ಎದುರಿಸುತ್ತಿರುವ ನಡುವೆ ಇಲ್ಲಿ ಸಾಕಷ್ಟು ಅವಕಾಶಗಳೂ ಎದ್ದು ಕಾಣುತ್ತಿವೆ. ದಶಕಗಳ ಸಂಘರ್ಷದಿಂದ ಹುಟ್ಟಿದ ದಕ್ಷಿಣ ಸುಡಾನ್‌ನಿಂದ ಹಿಡಿದು ಕೊಸೊವೊ ಅಂತಾರಾಷ್ಟ್ರೀಯ ಮನ್ನಣೆಯ ಹಾದಿಯನ್ನು ಪಡೆಯುವವರೆಗೆ ಪ್ರತಿಯೊಂದು ದೇಶಗಳು ವಿಶಿಷ್ಟವಾದ ಇತಿಹಾಸವನ್ನು ಹೊಂದಿವೆ.

ದಕ್ಷಿಣ ಸುಡಾನ್

2011ರ ಜುಲೈ 9ರಂದು ಸ್ವಾತಂತ್ರ್ಯ ಪಡೆದ ದಕ್ಷಿಣ ಸುಡಾನ್ ಈ ಮೂಲಕ ದಶಕಗಳ ಅಂತರ್ಯುದ್ಧದಕ್ಕೆ ಅಂತ್ಯವನ್ನು ಹಾಡಿತ್ತು. ವೈವಿಧ್ಯಮಯ ಜನಾಂಗೀಯ ಗುಂಪುಗಳಿಗೆ ಮತ್ತು ರಾಜಕೀಯ ಸ್ಥಿರತೆಯ ಹೋರಾಟಗಳಿಗೆ ಈ ರಾಷ್ಟ್ರ ಹೆಸರುವಾಸಿಯಾಗಿದೆ.


ಕೊಸೊವೊ

2008ರ ಫೆಬ್ರವರಿ 17ರಂದು ಸೆರ್ಬಿಯಾದಿಂದ ಕೊಸೊವೊ ಸ್ವಾತಂತ್ರ್ಯವನ್ನು ಘೋಷಿಸಿತು. ಅನೇಕ ದೇಶಗಳಿಂದ ಗುರುತಿಸಲ್ಪಟ್ಟಿದ್ದರೂ ಅಂತಾರಾಷ್ಟ್ರೀಯ ಮನ್ನಣೆ ಪಡೆಯುವಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.


ಮಾಂಟೆನೆಗ್ರೊ

2006ರ ಜೂನ್ 3ರಂದು ಜನಾಭಿಪ್ರಾಯ ಸಂಗ್ರಹಣೆಯ ಅನಂತರ ಮಾಂಟೆನೆಗ್ರೊ ಸ್ಟೇಟ್ ಯೂನಿಯನ್ ಆಫ್ ಸರ್ಬಿಯಾ ಮತ್ತು ಮಾಂಟೆನೆಗ್ರೊದಿಂದ ಸ್ವಾತಂತ್ರ್ಯವನ್ನು ಘೋಷಿಸಿತು. ಇದು ಆಡ್ರಿಯಾಟಿಕ್ ಕರಾವಳಿಗಳಿಗೆ ಹೆಸರುವಾಸಿಯಾಗಿದೆ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯತ್ವಕ್ಕಾಗಿ ಅಭ್ಯರ್ಥಿಯಾಗಿದೆ.


ಸೆರ್ಬಿಯಾ

ಸೆರ್ಬಿಯಾ ಮತ್ತು ಮಾಂಟೆನೆಗ್ರೊ ರಾಜ್ಯ ಒಕ್ಕೂಟದ ವಿಸರ್ಜನೆಯ ಅನಂತರ ಸೆರ್ಬಿಯಾ 2006ರ ಜೂನ್ 5ರಂದು ಸ್ವಾತಂತ್ರ್ಯವನ್ನು ಘೋಷಿಸಿತು. ಇದು ಆರ್ಥಿಕ ಸುಧಾರಣೆಗಳು ಮತ್ತು ಯುರೋಪಿಯನ್ ಏಕೀಕರಣದ ಮೇಲೆ ಕೇಂದ್ರೀಕರಿಸಿದೆ.


ಪೂರ್ವ ಟಿಮೋರ್

2002ರ ಮೇ 20ರಂದು ರೂಪುಗೊಂಡ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಟಿಮೋರ್- ಲೆಸ್ಟೆ, ಆಗ್ನೇಯ ಏಷ್ಯಾದ ಒಂದು ಸುಂದರವಾದ ದ್ವೀಪ ರಾಷ್ಟ್ರವಾಗಿದೆ.


ಪಲಾವ್

1994ರ ಅಕ್ಟೋಬರ್ 1ರಂದು ಪಲಾವ್ ರಾಷ್ಟ್ರ ಕಾಂಪ್ಯಾಕ್ಟ್ ಆಫ್ ಫ್ರೀ ಅಸೋಸಿಯೇಷನ್ ​​ಅಡಿಯಲ್ಲಿ ಯುನೈಟೆಡ್ ಸ್ಟೇಟ್ಸ್ ನಿಂದ ಸ್ವತಂತ್ರವಾಯಿತು. ಇದು ಸಮುದ್ರದ ಜೀವವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆಯಲ್ಲಿನ ಪ್ರಯತ್ನಗಳಿಗೆ ಹೆಸರುವಾಸಿಯಾಗಿದೆ.


ಎರಿಟ್ರಿಯಾ

ಸುದೀರ್ಘ ಸ್ವಾತಂತ್ರ್ಯ ಹೋರಾಟದ ಅನಂತರ 1993ರ ಮೇ 24ರಂದು ಎರಿಟ್ರಿಯಾ ಇಥಿಯೋಪಿಯಾದಿಂದ ಸ್ವಾತಂತ್ರ್ಯ ಪಡೆಯಿತು. ಇದು ಆಡಳಿತ, ಮಾನವ ಹಕ್ಕುಗಳು ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.


ಜೆಕ್ ಗಣರಾಜ್ಯ

ಜೆಕೊಸ್ಲೊವಾಕಿಯಾದ ಶಾಂತಿಯುತ ವಿಸರ್ಜನೆಯ ಅನಂತರ 1993ರ ಜನವರಿ 1ರಂದು ಜೆಕ್ ರಿಪಬ್ಲಿಕ್ ಅಥವಾ ಜೆಕಿಯಾ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ಪ್ರಾಗ್ ಅದರ ರಾಜಧಾನಿ. ಇದು ವಾಸ್ತುಶಿಲ್ಪದ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.

ಇದನ್ನೂ ಓದಿ: Sam Pitroda: ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷರಾಗಿ ಸ್ಯಾಮ್‌ ಪಿತ್ರೋಡಾ ಮತ್ತೆ ನೇಮಕ; ದಕ್ಷಿಣ ಭಾರತೀಯರನ್ನು ಆಫ್ರಿಕನ್ನರಿಗೆ ಹೋಲಿಸಿದ್ದ ನಾಯಕ


ಸ್ಲೋವಾಕಿಯಾ

ಜೆಕೊಸ್ಲೊವಾಕಿಯಾದ ಇತರ ಅರ್ಧಭಾಗವಾದ ಸ್ಲೋವಾಕಿಯಾ ಕೂಡ 1993ರ ಜನವರಿ 1ರಂದು ಸ್ವಾತಂತ್ರ್ಯವನ್ನು ಗಳಿಸಿತು. ಜೆಕ್ ಗಣರಾಜ್ಯದೊಂದಿಗೆ ಪ್ರತ್ಯೇಕ ರಾಷ್ಟ್ರವಾಯಿತು.


ಕ್ರೊಯೇಷಿಯಾ

ಕ್ರೊಯೇಷಿಯಾ ಗಣರಾಜ್ಯವು 1991ರ ಜೂನ್ 25ರಂದು ಸ್ವಾತಂತ್ರ್ಯವನ್ನು ಘೋಷಿಸಿತು. ಕ್ರೊಯೇಷಿಯಾ ಯುರೋಪ್‌ನಲ್ಲಿ ರೋಮಾಂಚಕ ಪ್ರವಾಸಿ ತಾಣವಾಗಿ ಹೆಚ್ಚು ಜನಪ್ರಿಯವಾಗುತ್ತಿದೆ.

Continue Reading

Latest

Women Arrest: ಅತ್ಯಾಚಾರಿಗೆ ಬೈದಿದ್ದಕ್ಕೆ ಜೈಲುಪಾಲಾದ ಮಹಿಳೆ! ಇದೆಂಥಾ ನ್ಯಾಯ?

Women Arrest: ಹ್ಯಾಂಬರ್ಗ್ ನ ಸಿಟಿ ಪಾರ್ಕ್ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ 10 ಮಂದಿ ಯುವಕರು ಸೇರಿ ಕ್ರೂರವಾಗಿ ಅತ್ಯಾಚಾರ ಎಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ 10ಮಂದಿಯಲ್ಲಿ ಒಬ್ಬನಿಗೆ ಶಿಕ್ಷೆ ವಿಧಿಸಿ ಉಳಿದವರನ್ನು ಮುಕ್ತಗೊಳಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅದರಲ್ಲಿ ಒಬ್ಬನ ಹೆಸರು ಮತ್ತು ಮೊಬೈಲ್ ಸಂಖ್ಯೆ ಸೋರಿಕೆಯಾಗಿತ್ತು. ಆಗ ಈ ಘಟನೆಯಿಂದ ಕುಪಿತಳಾದ 20 ವರ್ಷದ ಜರ್ಮನ್ ಮಹಿಳೆಯೊಬ್ಬರು ಆ ವ್ಯಕ್ತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಲು ಶುರು ಮಾಡಿದ್ದಾಳೆ. ಈ ಬಗ್ಗೆ ಆತ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಹ್ಯಾಂಬರ್ಗ್ ವಾಂಡ್ಸ್ಬೆಕ್ ಜಿಲ್ಲಾ ನ್ಯಾಯಾಲಯ ಮಹಿಳೆಯನ್ನು ದೋಷಿ ಎಂದು ಪರಿಗಣಿಸಿ ಅವಮಾನ ಮತ್ತು ಬೆದರಿಕೆಗಾಗಿ ಆಕೆಗೆ 48 ಗಂಟೆಗಳ ಕಾಲ ಜೈಲು ಶಿಕ್ಷೆ ವಿಧಿಸಿ, ವಾರಾಂತ್ಯದಲ್ಲಿ ಜೈಲಿನಲ್ಲಿ ಬಂಧಿಯಾಗಿರಲು ಆದೇಶಿಸಿದೆ.

VISTARANEWS.COM


on

Women Arrest
Koo

ಜರ್ಮನಿ : 2020ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯೊಬ್ಬನ ಬಗ್ಗೆ ಅವಮಾನವೀಯ ಹೇಳಿಕೆ ನೀಡಿದ 20 ವರ್ಷದ ಜರ್ಮನ್ ಮಹಿಳೆಗೆ ಜೈಲು ಶಿಕ್ಷೆ (Women Arrest) ವಿಧಿಸಲಾಗಿದೆ ಹಾಗೂ ಮಹಿಳೆ ವಾರಾಂತ್ಯವನ್ನು ಜೈಲಿನಲ್ಲಿ ಕಳೆಯಲು ಆದೇಶಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

2020ರಲ್ಲಿ ಹ್ಯಾಂಬರ್ಗ್ ನ ಸಿಟಿ ಪಾರ್ಕ್ ನಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 16-20 ವರ್ಷದೊಳಗಿನ 10 ಮಂದಿ ಯುವಕರು ಸೇರಿ ಕ್ರೂರವಾಗಿ ಅತ್ಯಾಚಾರ ಎಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ 10 ಮಂದಿಯಲ್ಲಿ ಒಬ್ಬನಿಗೆ ಶಿಕ್ಷೆ ವಿಧಿಸಿ ಉಳಿದವರನ್ನು ಮುಕ್ತಗೊಳಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅದರಲ್ಲಿ ಒಬ್ಬನ ಹೆಸರು ಮತ್ತು ಮೊಬೈಲ್ ಸಂಖ್ಯೆ ಸೋರಿಕೆಯಾಗಿತ್ತು. ಆಗ ಈ ಘಟನೆಯಿಂದ ಕುಪಿತಳಾದ 20 ವರ್ಷದ ಜರ್ಮನ್ ಮಹಿಳೆಯೊಬ್ಬರು ಆ ವ್ಯಕ್ತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಲು ಶುರು ಮಾಡಿದ್ದಳು. ಇದರಿಂದ ಆ ವ್ಯಕ್ತಿಗೆ ಹೊರಗಡೆ ಮುಖ ತೋರಿಸಲೂ ಕಷ್ಟವಾಗಿದೆ. ಆದರೆ ಆ ಮಹಿಳೆಗೂ ಸಂತ್ರಸ್ತ ಬಾಲಕಿ ಹಾಗೂ ಅತ್ಯಾಚಾರಿಗಳಿಗೂ ಯಾವುದೇ ಸಂಬಂಧವಿರಲಿಲ್ಲ.

ಅತ್ಯಾಚಾರ ನಡೆದ ಸ್ಥಳ

ಹಾಗಾಗಿ ಈ ಬಗ್ಗೆ ಆತ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಹ್ಯಾಂಬರ್ಗ್ ವಾಂಡ್ಸ್ಬೆಕ್ ಜಿಲ್ಲಾ ನ್ಯಾಯಾಲಯ ಮಹಿಳೆಯನ್ನು ದೋಷಿ ಎಂದು ಪರಿಗಣಿಸಿ ಅವಮಾನ ಮತ್ತು ಬೆದರಿಕೆಗಾಗಿ ಆಕೆಗೆ 48 ಗಂಟೆಗಳ ಕಾಲ ಜೈಲು ಶಿಕ್ಷೆ ವಿಧಿಸಿ, ವಾರಾಂತ್ಯದಲ್ಲಿ ಜೈಲಿನಲ್ಲಿ ಬಂಧಿಯಾಗಿರಲು ಆದೇಶಿಸಿದೆ. ಅದರಂತೆ ಆಕೆಗೆ ಶುಕ್ರವಾರ ಸಂಜೆಯಿಂದ ಭಾನುವಾರ ಸಂಜೆಯವರೆಗೆ ಹ್ಯಾನೋಫರ್ ಸಂಡ್ ಯುವ ಬಂಧನ ಕೇಂದ್ರದಲ್ಲಿ ಬಂಧಿಯಾಗಿರಲು ಸೂಚಿಸಲಾಗಿದೆ.

ಹ್ಯಾಂಬರ್ಗ್‌ ಸಿಟಿ ಪಾರ್ಕ್‌

ಹಾಗೇ ಕೊಲೆ ಬೆದರಿಕೆಗಳು, ಹಿಂಸೆ ಮತ್ತು ಜನಾಂಗೀಯ ನಿಂದನೆ ಸೇರಿದಂತೆ ಅತ್ಯಾಚಾರಿಗಳ ಬಗ್ಗೆ ಇದೇ ರೀತಿಯ ಅವಮಾನವೀಯ ಹೇಳಿಕೆಗಳ ಕುರಿತು ಪೊಲೀಸರು ಇತರ 140 ಮಂದಿಯನ್ನು ತನಿಖೆ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಮಹಿಳೆಗೆ ಶಿಕ್ಷೆಯಾದ ಹಿನ್ನಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ನ್ಯಾಯಾಧೀಶರ ವಿರುದ್ಧ ಕಿಡಿಕಾರಿದ್ದಾರೆ. ಅವರ ತೀರ್ಪನ್ನು ತಪ್ಪು ಎಂದು ದೂಷಿಸಿದ್ದಾರೆ. ಹಾಗೇ ಆಕೆ ಅತ್ಯಾಚಾರಿ ಯುವಕನಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆಯುವಂತಾಗಿದೆ ಎಂದು ಜನರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

ಸೆಪ್ಟೆಂಬರ್ 19, 2020ರಲ್ಲಿ ಹ್ಯಾಂಬರ್ಗ್ ನ ಸಿಟಿ ಪಾರ್ಕ್ ನಲ್ಲಿ ರಾತ್ರಿ ನಡೆದ ಉತ್ಸವದಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಕುಡಿದ ಮತ್ತಿನಲ್ಲಿದ್ದ 10 ಮಂದಿ ಪುರುಷರು ಸೇರಿ ಆಕೆಯನ್ನು ಪೊದೆಗೆ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಪ್ರಕರಣವು ಪ್ರಪಂಚದಾದ್ಯಂತ ಆಘಾತವನ್ನುಂಟು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಕೋರ್ಟ್ ಗೆ ಒಪ್ಪಿಸಿದ್ದಾರೆ. ಕೋರ್ಟ್ ಅವರಲ್ಲಿ 19 ವರ್ಷದ ಯುವಕನಿಗೆ ಎರಡು ವರ್ಷ ಎಂಟು ತಿಂಗಳು ಜೈಲು ಶಿಕ್ಷೆ ವಿಧಿಸಿದರೆ ಒಬ್ಬನನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು, ಉಳಿದ ಎಂಟು ಮಂದಿಗೆ ಮುಕ್ತವಾಗಿ ನಡೆಯಲು ಅವಕಾಶ ನೀಡಲಾಗಿದೆ.

Continue Reading

ಕ್ರೈಂ

Indian Origin Doctor: ಅಮೆರಿಕದಲ್ಲಿ ಪತ್ನಿ ಮಕ್ಕಳ ಕೊಲೆಗೆ ಯತ್ನ; ಭಾರತೀಯ ಮೂಲದ ವೈದ್ಯನಿಗೆ ಜೈಲು ಶಿಕ್ಷೆ ಬದಲು ಮಾನಸಿಕ ಚಿಕಿತ್ಸೆ

Indian Origin Doctor: ಕ್ಯಾಲಿಫೋರ್ನಿಯಾದಲ್ಲಿ ರೇಡಿಯಾಲಾಜಿಸ್ಟ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಧರ್ಮೇಶ್‌ ಪಟೇಲ್‌, ಕಳೆದ ವರ್ಷ ತನ್ನ ಟೆಸ್ಲಾ ಕಾರಿನಲ್ಲಿ ಪತ್ನಿ ನೇಹಾ ಹಾಗೂ ಇಬ್ಬರು ಮಕ್ಕಳು ಕಾರಿನಲ್ಲಿ ಕರೆದೊಯ್ದು ಬಂಡೆಗೆ ಡಿಕ್ಕಿ ಹೊಡೆಸಿದ್ದ. ಪರಿಣಾಮವಾಗಿ ಕಾರು 250 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದ. ಬಿದ್ದ ರಭಸಕ್ಕೆ ಕಾರು ನಜ್ಜುಗುಜ್ಜಾಗಿತ್ತು. ಆದರೆ ಚಮತ್ಕಾರ ಎಂಬಂತೆ ಇಡೀ ಕುಟುಂಬ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿತ್ತು. ಇದಾದ ಬಳಿಕ ಕೇಸ್‌ ದಾಖಲಾಗಿದ್ದು, ಪೊಲೀಸ್‌ ತನಿಖೆ ವೇಳೆ ತನ್ನ ಪತಿ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಒಪ್ಪಿಕೊಂಡಿದ್ದಳು. ಆದರೆ ಆತನ ವಿರುದ್ಧ ಮೊಕದ್ದಮೆ ಹೂಡಲು ನಿರಾಕರಿಸಿದ್ದಳು.

VISTARANEWS.COM


on

Indian Origin Doctor
Koo

ನ್ಯೂಯಾರ್ಕ್‌: ಕಾರು ಡಿಕ್ಕಿ ಹೊಡೆಸಿ ಪತ್ನಿ ಮತ್ತು ಇಬ್ಬರು ಮಕ್ಕಳ ಹತ್ಯೆಗೆ ಯತ್ನಿಸಿದ್ದ ಭಾರತೀಯ ಮೂಲದ ವೈದ್ಯ(Indian Origin Doctor)ನಿಗೆ ಜೈಲು ಶಿಕ್ಷೆ ನೀಡಲು ಕೋರ್ಟ್‌(Court) ನಿರಾಕರಿಸಿದ್ದು, ಆತನನ್ನು ಮಾನಸಿಕ ಚಿಕಿತ್ಸೆಗೊಳಪಡಿಸುವಂತೆ ಸೂಚನೆ ನೀಡಿದೆ. ಭಾರತೀಯ ಮೂಲದ ವೈದ್ಯ ಧರ್ಮೇಶ್‌ ಪಟೇಲ್‌(Dharmesh Patel) ಎಂಬಾತ ತನ್ನ ಪತ್ನಿ ಹಾಗೂ 7 ಮತ್ತು 4 ವರ್ಷ ಮಕ್ಕಳ ಹತ್ಯೆಗೆ ಯತ್ನಿಸಿದ್ದ. ಅದೃಷ್ಟವಶಾತ್‌ ಎಲ್ಲರೂ ಅಪಾಯದಿಂದ ಪಾರಾಗಿದ್ದರು.

ಕ್ಯಾಲಿಫೋರ್ನಿಯಾದಲ್ಲಿ ರೇಡಿಯಾಲಾಜಿಸ್ಟ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಧರ್ಮೇಶ್‌ ಪಟೇಲ್‌, ಕಳೆದ ವರ್ಷ ತನ್ನ ಟೆಸ್ಲಾ ಕಾರಿನಲ್ಲಿ ಪತ್ನಿ ನೇಹಾ ಹಾಗೂ ಇಬ್ಬರು ಮಕ್ಕಳು ಕಾರಿನಲ್ಲಿ ಕರೆದೊಯ್ದು ಬಂಡೆಗೆ ಡಿಕ್ಕಿ ಹೊಡೆಸಿದ್ದ. ಪರಿಣಾಮವಾಗಿ ಕಾರು 250 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದ. ಬಿದ್ದ ರಭಸಕ್ಕೆ ಕಾರು ನಜ್ಜುಗುಜ್ಜಾಗಿತ್ತು. ಆದರೆ ಚಮತ್ಕಾರ ಎಂಬಂತೆ ಇಡೀ ಕುಟುಂಬ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿತ್ತು. ಇದಾದ ಬಳಿಕ ಕೇಸ್‌ ದಾಖಲಾಗಿದ್ದು, ಪೊಲೀಸ್‌ ತನಿಖೆ ವೇಳೆ ತನ್ನ ಪತಿ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಒಪ್ಪಿಕೊಂಡಿದ್ದಳು. ಆದರೆ ಆತನ ವಿರುದ್ಧ ಮೊಕದ್ದಮೆ ಹೂಡಲು ನಿರಾಕರಿಸಿದ್ದಳು.

ಅದಾಗ್ಯೂ ಪ್ರಕರಣದ ಸಂಬಂಧ ಕೋರ್ಟ್‌ ವಿಚಾರಣೆ ಮುಂದುವರೆದಿದೆ. ಧರ್ಮೇಶ್‌ ತನ್ನ ಮಕ್ಕಳು ಮಾನವ ಕಳ್ಳಸಾಗಾಟದ ದಂಧೆಗೆ ಬಲಿಯಾಗುತ್ತಾರೆ ಎಂಬ ಭೀತಿಯಲ್ಲಿದ್ದ. ಇದೇ ಕಾರಣದಿಂದ ಈ ಕೃತ್ಯ ಎಸಗಿದ್ದಾನೆ. ಆತ ಮಾನಸಿಕ ಖಿನ್ನತೆಗೊಳಗಾಗಿದ್ದಾನೆ. ಆತ ಸ್ಕಿಜೋಆಫೆಕ್ಟಿವ್ ಡಿಸಾರ್ಡರ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾನೆ. ಘಟನೆಗೂ ಒಂದು ವಾರ ಹಿಂದೆ ಹೆಜ್ಜೆ ಸಪ್ಪಳ ಕೇಳಿಸಿಕೊಂಡು ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದೇ ಭಾವಿಸಿ ಭೀತಿಗೊಳಗಾಗಿದ್ದ. ವಾಸ್ತವದಲ್ಲಿ ಇಲ್ಲದಿರುವ ವಿಚಾರವನ್ನು ಇದೇ ಎಂದು ಭಾವಿಸಿಕೊಳ್ಳುವಂತಹ ಮಾನಸಿಕ ಸಮಸ್ಯೆಗೆ ಅವರು ತುತ್ತಾಗಿದ್ದಾರೆ ಎಂದು ವೈದ್ಯರು ಕೋರ್ಟ್‌ಗೆ ತಿಳಿಸಿದರು.

ಆತನಿಗೆ ತನ್ನ ಮಕ್ಕಳು ಅಪಹರಣಕ್ಕೊಳಗಾಗುತ್ತಾರೆ. ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂಬೆಲ್ಲಾ ಕಲ್ಪನೆ ಮಾಡಿಕೊಂಡು ಈ ರೀತಿ ಕೃತ್ಯ ಎಸಗಿದ್ದಾನೆ ಎಂದು ಕೋರ್ಟ್‌ಗೆ ವೈದ್ಯರು ಮನವರಿಕೆ ಮಾಡಿಕೊಟ್ಟರು. ಈ ಎಲ್ಲಾ ವಾದವನ್ನು ಪರಿಗಣಿಸಿದ ಕೋರ್ಟ್‌ ಧರ್ಮೇಂದ್ರ ಪಟೇಲ್‌ನನ್ನು ತಕ್ಷಣ ಮಾನಸಿಕ ಚಿಕಿತ್ಸೆಗೊಳಪಡಿಸಬೇಕು. ಮಾನಸಿಕ ಸ್ಥಿಮಿತ ಸರಿ ಇರದಿರುವ ವ್ಯಕ್ತಿಯಿಂದ ಆಗಿರುವ ಅಪರಾಧಕ್ಕೆ ಶಿಕ್ಷೆ ನೀಡಲು ಸಾಧ್ಯವಿಲ್ಲ. ಬದಲಾಗಿ ಆತನಿಗೆ ಚಿಕಿತ್ಸೆ ನೀಡುವುದೇ ಸೂಕ್ತ. ಆತನನ್ನು ಜಿಪಿಎಸ್‌ ಮೂಲಕ ಮೇಲ್ವಿಚಾರಣೆ ಮಾಡುತ್ತಾ, ವಾರಕ್ಕೆ ಒಂದು ಬಾರಿ ಆತನ ಮಾನಸಿಕ ಸ್ಥಿತಿಗತಿ, ಚಿಕಿತ್ಸೆ ಬಗ್ಗೆ ಕೋರ್ಟ್‌ಗೆ ವರದಿ ನೀಡಬೇಕು. ಆತನಿಗೆ ದೇಶ ಬಿಟ್ಟು ಹೋಗಲು ಅನುಮತಿ ನಿರಾಕರಿಸಲಾಗಿದೆ. ಅಲ್ಲದೇ ಆತನ ಡ್ರೈವಿಂಗ್‌ ಲೈಸೆನ್ಸ್‌ ಮತ್ತು ಪಾಸ್‌ಪೋರ್ಟನ್ನು ಅಧಿಕಾರಿಗಳಿಗೆ ಒಪ್ಪಿಸಬೇಕು ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ:Hijab Ban: ತರಗತಿಯಲ್ಲಿ ಹಿಜಾಬ್‌, ಬುರ್ಖಾ ನಿಷೇಧ; ಕಾಲೇಜು ಆದೇಶ ಎತ್ತಿಹಿಡಿದ ಹೈಕೋರ್ಟ್‌

Continue Reading
Advertisement
airtel price hike
ಪ್ರಮುಖ ಸುದ್ದಿ51 seconds ago

Airtel Price Hike: ಜಿಯೋ ನಂತರ ಏರ್‌ಟೆಲ್‌ ಡೇಟಾ ಬಳಕೆದಾರರ ಜೇಬಿಗೂ ಕತ್ತರಿ; 20% ದರ ಏರಿಕೆ

murder Case in Kalaburagi
ಕಲಬುರಗಿ3 mins ago

Murder case : ಗಾಣಗಾಪುರ ದತ್ತನ ದರ್ಶನಕ್ಕೆ ಆಗಮಿಸಿದ ಭಕ್ತನ ಬರ್ಬರ ಹತ್ಯೆ

Actor Darshan special appeal to the fans
ಸ್ಯಾಂಡಲ್ ವುಡ್18 mins ago

Actor Darshan: ಪರಪ್ಪನ ಅಗ್ರಹಾರದಿಂದಲೇ ಅಭಿಮಾನಿಗಳ ಬಳಿ ದರ್ಶನ್‌ ವಿಶೇಷ ಮನವಿ; ಏನದು?

D. K. Shivakumar
ಕ್ರೀಡೆ22 mins ago

D. K. Shivakumar: ಫೈನಲ್​ ಪ್ರವೇಶಿಸಿದ ಭಾರತ ತಂಡಕ್ಕೆ ಶುಭ ಹಾರೈಸಿದ ಡಿಸಿಎಂ ಶಿವಕುಮಾರ್‌

Self Harming
ಕ್ರೈಂ24 mins ago

Self Harming : ಸಾಲಗಾರರ ಕಾಟ; ಇಲಿ ಪಾಷಣ ಸೇವಿಸಿ ಜೀವ ಬಿಟ್ಟ ಮೆಕ್ಯಾನಿಕ್

Gold Rate Today
ವಾಣಿಜ್ಯ34 mins ago

Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಎಷ್ಟಿದೆ ದರ?

Sonu Srinivas Gowda harassed by darshan fans
ಸ್ಯಾಂಡಲ್ ವುಡ್37 mins ago

Sonu Srinivas Gowda: ದರ್ಶನ್‌ ಬಗ್ಗೆ ಮಾತನಾಡಿಲ್ಲ ಎಂದು ಸೋನು ಶ್ರೀನಿವಾಸ್ ಗೌಡಗೆ ಕಿರುಕುಳ ಕೊಟ್ಟ ದಚ್ಚು ಫ್ಯಾನ್ಸ್‌!

Paris Olympics 2024
ಕ್ರೀಡೆ58 mins ago

Paris Olympics 2024: ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಆ್ಯತ್ಲೀಟ್‌ಗಳಿಗೆ ಶುಭ ಕೋರಿದ ರಾಷ್ಟ್ರಪತಿ ಮುರ್ಮು

haveri accident tt
ಪ್ರಮುಖ ಸುದ್ದಿ1 hour ago

Haveri Accident: ಪೂಜೆ ಮಾಡಿಸಿಕೊಂಡು ಬಂದ ಹೊಸ ವಾಹನ 13 ಜನರ ಬಲಿ ಪಡೆಯಿತು!

Rohit Sharma
ಕ್ರೀಡೆ1 hour ago

Rohit Sharma: ಕೊಹ್ಲಿ, ಧೋನಿ ಬಳಿಕ ನಾಯಕನಾಗಿ ವಿಶೇಷ ದಾಖಲೆ ಬರೆದ ರೋಹಿತ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ16 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ18 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು19 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ23 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 weeks ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌