Assembly Session: ನಿಲುವಳಿಯನ್ನು 69ಕ್ಕೆ ಬದಲಿಸಿದ ಸ್ಪೀಕರ್‌: ಗ್ಯಾರಂಟಿ ಚರ್ಚೆಯಲ್ಲಿ ಬಿಜೆಪಿ ವಿರುದ್ಧ ಸರ್ಕಾರಕ್ಕೆ ಮೇಲುಗೈ - Vistara News

ಕರ್ನಾಟಕ

Assembly Session: ನಿಲುವಳಿಯನ್ನು 69ಕ್ಕೆ ಬದಲಿಸಿದ ಸ್ಪೀಕರ್‌: ಗ್ಯಾರಂಟಿ ಚರ್ಚೆಯಲ್ಲಿ ಬಿಜೆಪಿ ವಿರುದ್ಧ ಸರ್ಕಾರಕ್ಕೆ ಮೇಲುಗೈ

ಮಂಗಳವಾರ ದಿನಪೂರ್ತಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ವಿಧಾನಸಭೆಯಲ್ಲಿ (Assembly Session) ಬಹುತೇಕ ಕಾರ್ಯಕಲಾಪಗಳು ನಡೆದೇ ಇರಲಿಲ್ಲ.

VISTARANEWS.COM


on

Siddaramaiah and cheluvarayaswamy in assembly
ವಿಧಾನಸಭೆಯಲ್ಲಿ ಸಚಿವ ಚೆಲುವರಾಯಸ್ವಾಮಿ ಜತೆಗೆ ಸಿಎಂ ಸಿದ್ದರಾಮಯ್ಯ ಚರ್ಚೆ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಾಂಗ್ರೆಸ್‌ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಬೇಕು ಹಾಗೂ ರಾಜ್ಯದ ಹಣಕಾಸು ಸ್ಥಿತಿಗತಿಯ ಕುರಿತು ವಿಧಾನಸಭೆಯಲ್ಲಿ (Assembly Session) ನಿಯಮ 61ರ ಅಡಿಯಲ್ಲಿ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕು ಎಂಬ ಬಿಜೆಪಿ ಬೇಡಿಕೆಯನ್ನು ಸ್ಪೀಕರ್‌ ಯು.ಟಿ. ಖಾದರ್‌ ತಳ್ಳಿಹಾಕಿದ್ದಾರೆ.

ಮಂಗಳವಾರ ದಿನಪೂರ್ತಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಬಹುತೇಕ ಕಾರ್ಯಕಲಾಪಗಳು ನಡೆಯಲೇ ಇಲ್ಲ. ಬುಧವಾರವೂ ಈ ಕುರಿತು ಪ್ರತಿಭಟನೆ, ಮಾತಿನ ಚಕಮಕಿ ವಿಧಾನಸಭೆಯಲ್ಲಿ ನಡೆದವು.

ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ನಿಬಂಧನೆ ವಿಧಿಸಿ ಮೋಸ ಮಾಡಿದ ಎಂಬ ಆರ್‌. ಅಶೋಕ್‌ ಮಾತಿನ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತನಾಡಿದರು. ನೀವು ಯಡಿಯೂರಪ್ಪ ರನ್ನು ಸಿಎಂ ಮಾಡೋಕೆ ಎಷ್ಟು ದಿನ ತಗೊಂಡ್ರಿ..? ಯಡಿಯೂರಪ್ಪ ಕ್ಯಾಬಿನೆಟ್ ಮಾಡೋಕೆ ಎಷ್ಟು ದಿನ ತಗೊಂಡ್ರು ಅಂತಾ ಗೊತ್ತಿದೆ. ನಮ್ಮ ಗ್ಯಾರಂಟಿಗಳನ್ನು ಜನರು ಒಪ್ಪಿಕೊಂಡಿದ್ದಾರೆ ಎಂದರು.

ಇದಕ್ಕೆ ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದರು. ಇವರು ಚುನಾವಣೆಗೆ ಮುನ್ನ ಹೇಳಿದಂತೆ ಅಧಿಕಾರಕ್ಕೆ ಬಂದ ಮೇಲೆ ನಡೆದುಕೊಂಡಿಲ್ಲ. ಇದರಿಂದ ಮೋಸ ಆಗಿದೆ ಎಂದು ಹೇಳ್ತಿದ್ದೇವೆ ಎಂದರು.

ಇದಕ್ಕೆ ಉತ್ತರವಾಗಿ ಈ ಹಿಂದಿನ ಚುನಾವಣೆಯ ಬಿಜೆಪಿ ಪ್ರಣಾಳಿಕೆಯನ್ನು ಡಿ.ಕೆ. ಶಿವಕುಮಾರ್‌ ತೋರಿಸಿದರು. ಬಿಜೆಪಿ ನಡೆಸುತ್ತಿರುವುದುಪಶ್ಚಾತ್ತಾಪದ ಪ್ರತಿಭಟನೆ. ಜನರ ಸಮಸ್ಯೆ ಅರ್ಥ ಮಾಡಿಕೊಳ್ಳುವಲ್ಲಿ ಎಡವಿದೆವು ಎಂದು ಪಶ್ಚಾತ್ತಾಪದ ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದು 24 ಗಂಟೆ ಒಳಗೆ ಸಾಲಮನ್ನ ಅಂತ ಪ್ರಣಾಳಿಕೆಯಲ್ಲಿ ಹೇಳಿದ್ದರು. ಆದರೆ ಮಾಡಲಿಲ್ಲ. ಇವರಿಗೆ ಮಾನ ಮರ್ಯಾದೆ ಇಲ್ಲ. ಇವರ ನಿಲುವಳಿ ಸೂಚನೆ ತಿರಸ್ಕಾರ ಮಾಡಿ ಎಂದರು.

ಇದನ್ನೂ ಓದಿ: Assembly Session: ಮತಾಂತರ ನಿಷೇಧ, ಕೃಷಿ ಕಾನೂನುಗಳು ಈ ಅಧಿವೇಶನದಲ್ಲೇ ವಾಪಸ್‌: ಸದನ ಸಲಹಾ ಸಮಿತಿಯಲ್ಲಿ ಚರ್ಚೆ

ಸ್ಪೀಕರ್‌ ಯು.ಟಿ. ಖಾದರ್‌ ಅವರು ನಿಲುವಳಿ ಸೂಚನೆಯ ಬದಲಿಗೆ ನಿಯಮ 69 ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಘೋಷಿಸಿದರು. ನಿಲುವಳಿ ಸೂಚನೆಗೆ ಪಟ್ಟು ಹಿಡಿದ್ದ ಬಿಜೆಪಿಗೆ ಈ ಮೂಲಕ ಹಿನ್ನಡೆ ಆಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Actor Darshan : ಸಂಕಷ್ಟ ನಿವಾರಣೆಗಾಗಿ ದೇವರ ಮೊರೆ ಹೋದ ನಟ ದರ್ಶನ್‌ ಕುಟುಂಬಸ್ಥರು

Actor Darshan : ಕೊಲೆ ಕೇಸ್‌ನಲ್ಲಿ (Renukaswamy murder case) ಬಂಧಿಯಾಗಿರುವ ನಟ ದರ್ಶನ್‌ ಸಂಕಷ್ಟದಿಂದ ದೂರ ಆಗಲಿ ಎಂದು ಕುಟುಂಬಸ್ಥರು ದೇವರ ಮೊರೆ ಹೋಗಿದ್ದಾರೆ. ದರ್ಶನ್‌ ಅವರ ಸಹೋದರಿಯ ಪತಿಯಿಂದ ವಿಶೇಷ ಪೂಜೆ ಸಲ್ಲಿಸಿದ್ದಾರೆ.

VISTARANEWS.COM


on

By

Actor darshan
Koo

ಕಾರವಾರ: ಚಿತ್ರನಟ ದರ್ಶನ್ (Actor Darshan) ರೇಣುಕಾಸ್ವಾಮಿ ಹತ್ಯೆ (Renukaswamy murder case) ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪೊಲೀಸ್ ತನಿಖೆ ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಅವರ ಕುಟುಂಬಸ್ಥರು ಸಂಕಷ್ಟ ನಿವಾರಣೆಗಾಗಿ ದೇವರ ಮೊರೆ ಹೋಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾದಲ್ಲಿ ಉದ್ಯೋಗದಲ್ಲಿರುವ ದರ್ಶನ್ ಸಹೋದರಿ ದಿವ್ಯಾ ಅವರ ಪತಿ ಮಂಜುನಾಥ, ದರ್ಶನ್ ಒಳಿತಿಗಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೈಗಾದ ಟೌನ್‌ಶಿಪ್‌ನಲ್ಲಿರುವ ರಾಮಲಿಂಗೇಶ್ವರ, ಶನೇಶ್ವರ ದೇವಸ್ಥಾನದಲ್ಲಿ ದರ್ಶನ್ ಹೆಸರಿನಲ್ಲಿ ನವಗ್ರಹ ಪೂಜೆ, ಶನಿಶಾಂತಿ ಪೂಜೆ ಹಾಗೂ ವಿಶೇಷ‌ ಹೂವಿನ ಅಲಂಕಾರ ಪೂಜೆ ನೆರವೇರಿಸಿದ್ದಾರೆ. ದರ್ಶನ್ ಆದಷ್ಟು ಬೇಗ ಆರೋಪ ಮುಕ್ತರಾಗಿ ಹೊರಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: Snake Bite : ನಿದ್ದೆಗೆ ಜಾರಿದ 3 ವರ್ಷದ ಬಾಲಕನನ್ನು ಕಚ್ಚಿ ಸಾಯಿಸಿದ ನಾಗರಹಾವು

ಸಸ್ಯಾಹಾರಿ ಅಂದ್ರೂ ರೇಣುಕಾಸ್ವಾಮಿ ಬಾಯಿಗೆ ಬಿರಿಯಾನಿ ಮೂಳೆ ತುರುಕಿದ್ದ ಆರೋಪಿಗಳು!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renuka Swamy murder case) ಇನ್ನಿಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಈ ನಡುವೆ ಪ್ರಕರಣದಲ್ಲಿ (Actor Darshan) ಹೇಗೆಲ್ಲಾ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಲಾಗಿತ್ತು ಎಂಬ ವಿಷಯಗಳು ಒಂದೊಂದಾಗೆ ಬೆಳಕಿಗೆ ಬರುತ್ತಿವೆ. ಕಿಡ್ನ್ಯಾಪ್‌ ಆಗಿದ್ದ ದಿನ ಊಟ ಕೊಡಿಸಿದ್ದ ಡಿ ಗ್ಯಾಂಗ್, ನಾನು ಶಾಖಾಹಾರಿ ಎಂದರೂ ಬಿಡದೇ ರೇಣುಕಾಸ್ವಾಮಿ ಬಾಯಿಗೆ ಬಿರಿಯಾನಿ ಮೂಳೆ ತುರುಕಿದ್ದರು ಎನ್ನಲಾಗಿದೆ.

ಚಿತ್ರದುರ್ಗದಿಂದ ಜೂನ್‌ 8ರಂದು ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು. ನಂತರ ಆತನನ್ನು ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿಹಾಕಿ ಟಾರ್ಚರ್‌ ನೀಡಲಾಗಿದೆ. ಮಧ್ಯಾಹ್ನ ಊಟ ಕೊಡಿಸಿದಾಗ ನಾನು ಸಸ್ಯಹಾರಿ ಎಂದು ರೇಣುಕಾಸ್ವಾಮಿ ಹೇಳಿದ್ದಾನೆ. ಆದರೂ ಬಿಡದೆ ಆರೋಪಿಗಳು ಬಿರಿಯಾನಿ ತಿನ್ನಿಸಿದ್ದಾರೆ.

ಇದನ್ನೂ ಓದಿ | Actor Darshan: ಚಿನ್ನುಮರಿ ತಂಟೆಗೆ ಹೋದ್ರೆ ಒದೆ, ಪವಿತ್ರಾ ಗೌಡ ತಂಟೆಗೆ ಬಂದ್ರೆ ಕೊಲೆ; ಟ್ರೋಲ್ ಆಗುತ್ತಿದೆ ​ ದರ್ಶನ್​ ಕೊಲೆ ಕೇಸ್​​

ಬಲವಂತ ಮಾಡಿದಾಗ ಬಿರಿಯಾನಿ ತಿನ್ನದೆ ಕೆಳಗೆ ಉಗಿದಿದ್ದರಿಂದ ರೇಣುಕಾ ಸ್ವಾಮಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದ ಗ್ಯಾಂಗ್, ಬಾಸ್ ಬರುತ್ತಾರೆ ಒದೆ ತಿನ್ನಲು ರೆಡಿಯಾಗು. ಬಿರಿಯಾನಿ ತಿಂದ್ರೆ ಶಕ್ತಿ ಬರುತ್ತೆ ಎಂದು ಬಿರಿಯಾನಿ ತಿನ್ನಿಸಲು ಯತ್ನಿಸಿದ್ದಾರೆ. ಈ ಬಗ್ಗೆ ಪೊಲೀಸರ ಮುಂದೆ ಆರೋಪಿ ದೀಪಕ್ ಹೇಳಿಕೆ ಕೊಟ್ಟಿದ್ದಾನೆ.

ಕಿಡ್ನ್ಯಾಪ್ ಮಾಡಿಕೊಂಡು ಹೋಗುತ್ತಿದ್ದ ಸಿಸಿಟಿವಿ ಫುಟೇಜ್‌ ಲಭ್ಯ

ಡಿ ಗ್ಯಾಂಗ್‌ನಿಂದ ದುರ್ಗದ ಹುಡುಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿದ್ದ ಸಂದರ್ಭದ ಸ್ಫೋಟಕ ವಿಡಿಯೊ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. KA-11-B-7939 ಕಾರಿನಲ್ಲಿ ಜೂನ್ 8 ಬೆಳಗ್ಗೆ 11:30ಕ್ಕೆ ಗುಯಿಲಾಳ್ ಟೋಲ್ ಅನ್ನು ಗ್ಯಾಂಗ್ ಕ್ರಾಸ್ ಮಾಡಿತ್ತು. ಕಾರಿನ ಮುಂಭಾಗ ಡ್ರೈವರ್ ರವಿ ಮತ್ತು ರಾಘವೇಂದ್ರ ಕೂತಿರುವ ದೃಶ್ಯ ಸೆರೆಯಾಗಿದೆ.

ಹಿರಿಯೂರು ಮಾರ್ಗವಾಗಿ ಬೆಂಗಳೂರು ಕಡೆ ಪ್ರಯಾಣ ಮಾಡಿದ್ದ ಟೀಂ, ಟೋಲ್‌ನಲ್ಲಿ ವಿಐಪಿ ಕಾರ್ಡ್ ಪ್ರದರ್ಶನ ಮಾಡಿ, ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂದು ರಾಘವೇಂದ್ರ ಬಿಲ್ಡಪ್ ಕೊಟ್ಟು ಹೋಗಿದ್ದರು. ಬೆಂಗಳೂರಿಗೆ ಬಿಟ್ಟು ವಾಪಸ್ ಹೋಗುವಾಗ ಡ್ರೈವರ್ ರವಿ ಮಾತ್ರ ವಾಹನದಲ್ಲಿ ಕಾಣಿಸಿಕೊಂಡಿದ್ದಾರೆ. ಜೂನ್‌ 9 ಬೆಳಗಿನ ಜಾವ 4:30 ಕ್ಕೆ ಚಿತ್ರದುರ್ಗದತ್ತ ರವಿ ತೆರಳಿದ್ದ. ಈತ ಇನ್ನುಳಿದ ನಾಲ್ಕು ಮಂದಿ ಜೊತೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಬಿಟ್ಟು ಹೋಗಿದ್ದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿಕ್ಕಬಳ್ಳಾಪುರ

Snake Bite : ನಿದ್ದೆಗೆ ಜಾರಿದ 3 ವರ್ಷದ ಬಾಲಕನನ್ನು ಕಚ್ಚಿ ಸಾಯಿಸಿದ ನಾಗರಹಾವು

Snake Bite : ಮನೆ ಮುಂದಿನ ಜಾಗದಲ್ಲಿ ಮಲಗಿದ್ದ 3 ವರ್ಷದ ಬಾಲಕನನ್ನು ನಾಗರ ಹಾವು ಕಚ್ಚಿದೆ. ಕೂಡಲೇ ಪೋಷಕರು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆದಾಗಲೇ ವಿಷವೇರಿ ಬಾಲಕ ಮೃತಪಟ್ಟಿದ್ದಾನೆ.

VISTARANEWS.COM


on

By

snake bite
ಸಾಂದರ್ಭಿಕ ಚಿತ್ರ
Koo

ಚಿಕ್ಕಬಳ್ಳಾಪುರ: ನಾಗರಹಾವು ಕಚ್ಚಿ (Snake Bite) 3 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗುಮ್ಮವಾರಂಡ್ಲಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ದೀಕ್ಷಿತ್ (3) ಮೃತ ದುರ್ದೈವಿ.

ಮಾಲತಿ-ಸುರೇಶ ದಂಪತಿಯ ಏಕೈಕ ಪುತ್ರ ದೀಕ್ಷಿತ್ ಮನೆಯ ಕಾಂಪೌಂಡ್‌ನ ಮುಂದೆ ಮಲಗಿದ್ದಾಗ ನಾಗರಹಾವು ಕಚ್ಚಿದೆ. ಕೂಡಲೇ ಅಸ್ವಸ್ಥಗೊಂಡಿದ್ದ ದೀಕ್ಷಿತ್‌ನನ್ನು ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಸಕಾಲಕ್ಕೆ ಬಾಗೇಪಲ್ಲಿ ಆಸ್ಪತ್ರೆಯ ಸ್ಟಾಪ್ ನರ್ಸ್ ಬೋಮ್ಮಣ್ಣ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವೈದ್ಯರು ಬಂದು ನೋಡುವಷ್ಟರಲ್ಲಿ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು ಎಂದು ಪೋಷಕರು ಗೋಳಾಡಿದ್ದಾರೆ.

ಮೀನು ಹಿಡಿಯಲು ನದಿಗೆ ಇಳಿದವನು ನಾಪತ್ತೆ

ಕೃಷ್ಣ ನದಿಯಲ್ಲಿ ಮೀನುಗಾರಿಕೆಗೆ ಇಳಿದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಾವುಸಾಬ್ ಗಬಾಡೆ ನಾಪತ್ತೆಯಾದವರು.

Sanke Bite.. Drowned in water
ನಾಪತ್ತೆಯಾಗಿರುವ ಬಾವುಸಾಬ್‌ಗಾಗಿ ಹುಡುಕಾಟ

ನದಿಯಲ್ಲಿ ನಾಪತ್ತೆಯಾದ ಮೀನುಗಾರ ಬಾವುಸಾಬ್‌ ಗಬಾಡೆಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿಯಲ್ಲಿ ಶೋಧಕಾರ್ಯ ಮುಂದುವರಿದಿದೆ.

ಇದನ್ನೂ ಓದಿ: Tumkur Murder : ಬೈಕ್ ಆ್ಯಕ್ಸಿಡೆಂಟ್ ಕೇಸ್‌ಗೆ ಬಿಗ್ ಟ್ವಿಸ್ಟ್; ಎದುರಾಳಿಯನ್ನು ಕೊಂದ ಹಂತಕರು ಅರೆಸ್ಟ್‌

ಉಡುಪಿ: ಕಾರು ಪಲ್ಟಿಯಾಗಿ ಗಾಯ

ಉಡುಪಿ: ಡಿವೈಡರ್ ಕಲ್ಲುಗಳಿಗೆ ಬಡಿದ ಕಾರು ಪಲ್ಟಿಯಾದ ಘಟನೆ ಉಡುಪಿ-ಮಣಿಪಾಲ ಮಧ್ಯದ ಇಂದ್ರಾಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ. ಮಣಿಪಾಲದಿಂದ ಉಡುಪಿಯತ್ತ ತೆರಳುತ್ತಿದ್ದ ಫೋರ್ಡ್ ಫಿಗೊ ಕಾರು ಅಪಘಾತಕ್ಕೀಡಾಗಿದೆ ಎಂದು ಮೂಲಗಳು ತಿಳಿಸಿವೆ.

ಬೈಕ್‌ಗೆ ಹಾನಿ

ಆರಂಭದಲ್ಲಿ ಕಾರು ಡಿವೈಡರ್ ಕಲ್ಲಿಗೆ ಡಿಕ್ಕಿ ಹೊಡೆದಿತ್ತು. ತಕ್ಷಣ ಕಲ್ಲಿನ ತುಂಡು ಹಾರಿ ಸಮೀಪದಲ್ಲಿದ್ದ ಬೈಕ್‌ ಮೇಲೆ ಬಿದ್ದಿದೆ. ಇದರಿಂದ ಬೈಕಿಗೂ ತೀವ್ರ ಹಾನಿಯಾಗಿದ್ದು, ಅದೃಷ್ಟವಶಾತ್‌ ಬೈಕ್‌ ಸವಾರ ಬಚಾವಾಗಿದ್ದಾನೆ. ರಸ್ತೆ ಮಧ್ಯೆ ವಿಭಜಕವಾಗಿ ಬಳಸುತ್ತಿದ್ದ ಕಲ್ಲುಗಳು ಎಗರಿದ್ದು, ಟ್ರಾಫಿಕ್ ಪೊಲೀಸ್ ಮತ್ತು ಹೈವೇ ಅಥಾರಿಟಿ ನಿರ್ಲಕ್ಷ್ಯದಿಂದ ಇಂತಹ ಘಟನೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಚಿತ್ರದುರ್ಗದಲ್ಲಿ ಭೀಕರ ಅಪಘಾತ; ನಾಲ್ಕು ಮಂದಿ ಸಾವು

ಚಿತ್ರದುರ್ಗ: ಶನಿವಾರ ಮುಂಜಾನೆ ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದಲ್ಲಿ ಹಾದು ಹೋಗುವ NH 4 ರಲ್ಲಿ ಭೀಕರ ಅಪಘಾತ ನಡೆದಿದೆ. ನ್ಯಾಷನಲ್​ ಹೈವೇನಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ಹಿಂಬದಿಂದ ಲಾರಿಯೊಂದು ರಭಸದಿಂದ ಗುದ್ದಿದ ಪರಿಣಾಮ ಇಬ್ಬರು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭರಮಸಾಗರ ಹೋಬಳಿಯ ಚಿಕ್ಕಬೆನ್ನೂರು ಗ್ರಾಮದ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಲಾರಿ ಮತ್ತು ಕಾರು ಚಿತ್ರದುರ್ಗ ಕಡೆಯಿಂದ ದಾವಣಗೆರೆ ಕಡೆಗೆ ಹೊರಟಿತ್ತು. ಈ ವೇಳೆ ಅತಿ ವೇಗದಲ್ಲಿ ಬಂದ ಲಾರಿ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರಿನಲ್ಲಿದ್ದವರು ಒಂದೇ ಕುಟುಂಬಕ್ಕೆ ಸೇರಿದವರು ಇರಬೇಕು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಶನಿವಾರವಾಗಿದ್ದ ಕಾರಣ ಮುಂಜಾನೆ ತಮ್ಮ ಪ್ರಯಾಣ ಆರಂಭಿಸಿರಬಹುದು ಎಂದು ಹೇಳಲಾಗಿದೆ. 

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ತುಮಕೂರು

Tumkur Murder : ಬೈಕ್ ಆ್ಯಕ್ಸಿಡೆಂಟ್ ಕೇಸ್‌ಗೆ ಬಿಗ್ ಟ್ವಿಸ್ಟ್; ಎದುರಾಳಿಯನ್ನು ಕೊಂದ ಹಂತಕರು ಅರೆಸ್ಟ್‌

Tumkur Murder : ತುಮಕೂರಿನ ಬೈಕ್‌ ಆ್ಯಕ್ಸಿಡೆಂಟ್ ಕೇಸ್‌ಗೆ (Road Accident) ಬಿಗ್ ಟ್ವಿಸ್ಟ್ ಸಿಕ್ಕಿದೆ. ಎದುರಾಳಿಯನ್ನು ಕೊಲೆ (Murder Case) ಮಾಡಿ ಅಪಘಾತ ಎಂದು ಬಿಂಬಿಸಿದ್ದ ಹಂತಕರು ಐದೇ ದಿನದಲ್ಲಿ ಖಾಕಿ ಬಲೆಗೆ ಬಿದ್ದಿದ್ದಾರೆ.

VISTARANEWS.COM


on

By

tumkur Murder
ಸಾಂದರ್ಭಿಕ ಚಿತ್ರ
Koo

ತುಮಕೂರು: ತುಮಕೂರು (Tumkur Murder) ಜಿಲ್ಲೆಯ ಕುಣಿಗಲ್ ತಾಲೂಕಿನ ಬಾಗೇನಹಳ್ಳಿ ಗೇಟ್ ಬಳಿ ನಡೆದಿದ್ದ ಬೈಕ್ ಆ್ಯಕ್ಸಿಡೆಂಟ್ (Bike Accident) ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಳೆ ವೈಷಮ್ಯಕ್ಕೆ ಯುವಕನೊಬ್ಬ ಕೊಲೆಯಾಗಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಾಗೇನಹಳ್ಳಿ ಗ್ರಾಮದ ರಾಮಚಂದ್ರ (27) ಕೊಲೆಯಾದವನು.

ಪ್ರಕರಣ ಸಂಬಂಧ ಕುಣಿಗಲ್ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊತ್ತಗೆರೆ ಪಾಳ್ಯದ ಸೀನಾ ಅಲಿಯಾಸ್ ಶ್ರೀನಿವಾಸ್ (34), ಉಮೇಶ (32), ಚನ್ನಪ್ಪಗೌಡನಪಾಳ್ಯ ಗುರುರಾಜ್ (40), ಬಿದನಗೆರೆ ಗ್ರಾಮದ ಶಿವರಾಮ್ (38) ಹಾಗೂ ಸೊಬಗಾನಹಳ್ಳಿ ಗ್ರಾಮದ ಲಕ್ಷ್ಮಣ (36) ಬಂಧಿತ ಆರೋಪಿಗಳಾಗಿದ್ದಾರೆ.

tumkur murder
ಕೊಲೆಯಾದ ರಾಮಚಂದ್ರ

ಕಳೆದ ಎರಡು ವರ್ಷಗಳ ಹಿಂದೆ ರಾಮಚಂದ್ರ ಆರೋಪಿ ಶ್ರೀನಿವಾಸ್‌ಗೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಇದಾದ ಬಳಿಕ ರಾಮಚಂದ್ರ ಹಾಗೂ ಶ್ರೀನಿವಾಸ್ ಯಾವುದೇ ಗಲಾಟೆಗೆ ಹೋಗದೆ ಸುಮ್ಮನಿದ್ದರು. ಆದರೆ ಕೆಲ ದಿನಗಳ ಹಿಂದೆ ರಾಮಚಂದ್ರ ಮತ್ತೆ ಶ್ರೀನಿವಾಸನನ್ನು ಕೊಲೆ ಮಾಡುವುದಾಗಿ ಸ್ನೇಹಿತರು ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ.

ಈ ವಿಚಾರ ತಿಳಿದ ಶ್ರೀನಿವಾಸ್ ಇವನನ್ನು ಹೀಗೆ ಮಾಡಿಬಿಟ್ಟರೆ ನಮ್ಮನ್ನೇ ಮುಗಿಸ್ತಾನೆ ಎಂದು ರಾಮಚಂದ್ರನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ಅದರಂತೆ ಶ್ರೀನಿವಾಸ್‌ ತನ್ನ ನಾಲ್ವರು ಸ್ನೇಹಿತರ ಜತೆ ಸೇರಿಕೊಂಡು ಕಳೆದ ಜೂನ್ 10 ರಂದು ಬೈಕ್‌ನಲ್ಲಿ ಹೋಗುತ್ತಿದ್ದ ರಾಮಚಂದ್ರಗೆ ಕಾರಿನಿಂದ ಡಿಕ್ಕಿ ಹೊಡೆದು ಕೊಂದಿದ್ದರು. ಬಳಿಕ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ರಸ್ತೆ ಅಪಘಾತ ಎಂದು ಬಿಂಬಿಸಿ ಶ್ರೀನಿವಾಸ್‌ ಗ್ಯಾಂಗ್‌ ಎಸ್ಕೇಪ್ ಆಗಿತ್ತು.

ಮೊದಮೊದಲು ಪೊಲೀಸರು ಇದು ಅಪಘಾತ ಎಂದೇ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ ತನಿಖೆಗಿಳಿದು ಪರಿಶೀಲನೆ ನಡೆಸಿದಾಗಲೇ ಇದು ಅಪಘಾತವಲ್ಲ ಬದಲಿಗೆ ಕೊಲೆ ಎಂದು ತಿಳಿದುಬಂದಿತ್ತು. ಸದ್ಯ ಕುಣಿಗಲ್ ಪೊಲೀಸರು ಕೊಲೆಗೈದಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆಯು ಮುಂದುವರಿದಿದೆ.

ಇದನ್ನೂ ಓದಿ: Sapthami Gowda: ಲವ್‌ ಬ್ರೇಕಪ್‌ ಆಗಿದೆ, ಬಾಯ್‌ಫ್ರೆಂಡ್‌ ನನ್ನ ಜತೆ ಇಲ್ಲ ಎಂದ ಸಪ್ತಮಿ ಗೌಡ

ಕೃಷಿ ಇಲಾಖೆ ರಾಯಭಾರಿ ಹುದ್ದೆಯಿಂದ ಕೊಲೆ ಆರೋಪಿ ದರ್ಶನ್‌ ವಜಾ!

ಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿ ಪಾಲಾಗಿರುವ ನಟ ದರ್ಶನ್  (Actor Darshan) ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯೂ ಆಗಿದ್ದರು. ದರ್ಶನ್‌ 2021ರ ಫೆಬ್ರವರಿಯಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ದರ್ಶನ್‌ ಕೃಷಿ ಇಲಾಖೆಯ ರಾಯಭಾರಿಯಾಗಿದ್ದರು. ಇದೀಗ ರೇಣುಕಾಚಾರ್ಯ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿದೆ. ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ (Darshan) ಅವರು ಕೃಷಿ ಇಲಾಖೆಯ ರಾಯಭಾರಿ ಹುದ್ದೆಯಿಂದ ವಜಾ ಮಾಡುವುದು ಖಚಿತವಾಗಿದೆ. ದರ್ಶನ್‌ ಇನ್ನು ಕೃಷಿ ರಾಯಭಾರಿಯಾಗಿ ಮುಂದುವರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಈ ಬಗ್ಗೆ ಎಂ.ಬಿ ಪಾಟೀಲ್ ಮಾತನಾಡಿ ʻʻದರ್ಶನ್‌ಗೆ ರಾಜಮರ್ಯಾದೆಯ ಪ್ರಶ್ನೆಯೇ ಇಲ್ಲ. ಆರೋಪಿ ಆರೋಪಿಯೇ. ಆರೋಪ ಸಾಬೀತಾದರೆ ಅವರಿಗೆ ಶಿಕ್ಷೆ ಆಗುತ್ತದೆ. ದರ್ಶನ್ ಕೃಷಿ ಇಲಾಖೆ ರಾಯಭಾರಿಯಾಗಿ ಮುಂದುವರಿಯುವ ಪ್ರಶ್ನೆಯೇ ಇಲ್ಲ. ಈ ರೀತಿಯ ಘಟನೆ ಆದ ಬಳಿಕ ರಾಯಭಾರಿಯಾಗಿ ಮುಂದುವರಿಸಲು ಆಗುವುದಿಲ್ಲʼʼ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ವನ್ಯಜೀವಿ ಧಾಮದಲ್ಲಿ ಖಾಸಗಿ ವಾಹನ ಬಳಕೆ, ಬಾಡೂಟ, ಎಣ್ಣೆ ಪಾರ್ಟಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿತ್ತು. ವನ್ಯಜೀವಿ ಧಾಮದಲ್ಲಿ ಖಾಸಗಿ ವಾಹನ ಬಳಕೆ ಬಳಕೆ, ಅರಣ್ಯ ಸಿಬ್ಬಂದಿ ಜತೆ ‌ಬಾಡೂಟ, ಎಣ್ಣೆ ಪಾರ್ಟಿ ಮಾಡುವ ಮೂಲಕ ಅರಣ್ಯ ಮತ್ತು ವನ್ಯಜೀವಿ ಕಾಯ್ದೆ ಉಲ್ಲಂಘಿಸಿದ್ದಾರೆ ಎನ್ನಲಾಗಿತ್ತು. ನಟ ದರ್ಶನ್ ಅವರು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯೂ ಆಗಿದ್ದು, ಜಿಲ್ಲೆಯ ಮುತ್ತೋಡಿ, ಭದ್ರ ವನ್ಯಜೀವಿ ತಾಣದಲ್ಲಿ ಖಾಸಗಿ ವಾಹನ ಬಳಕೆ ಮಾಡಿದ್ದಾರೆ. ಅಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಸಿಬ್ಬಂದಿ ಜತೆ ‌ಬಾಡೂಟ, ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನಲಾಗಿತ್ತು. ವನ್ಯಜೀವಿ ಧಾಮಗಳಿಗೆ ದರ್ಶನ್ ಭೇಟಿ ನೀಡಿದ ಫೋಟೋಗಳು‌ ಸದ್ಯ ವೈರಲ್ ಆಗಿದ್ದವು.

ಇದನ್ನೂ ಓದಿ: Actor Darshan: ಎಷ್ಟೇ ದಿನ ಆದರೂ ಚಂದ್ರಣ್ಣನ ಶವ ಎತ್ತಲ್ಲ; ಅನು ತಂದೆ ನಿಧನಕ್ಕೆ ಸಂಬಂಧಿಕರ ಕಣ್ಣೀರು

ಅರಣ್ಯದ ಸೂಕ್ಷ್ಮ ಪ್ರದೇಶದಲ್ಲಿ ಖಾಸಗಿ ಕಾರುಗಳ ಬಳಕೆ ನಿಷಿದ್ಧ. ಆದರೂ ದರ್ಶನ್‌ ಅವರಿಗೆ ಖಾಸಗಿ ವಾಹನ ಬಳಸಲು ಅನುಮತಿ ನೀಡಲಾಗಿದೆ ಎಂದು ಚಿಕ್ಕಮಗಳೂರಿನ ಅರಣ್ಯ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದರು. ಸಾಮಾನ್ಯ ಜನರಿಗೆ ಮಾತ್ರ ಕಠಿಣ ನಿಯಮಗಳು, ಸೆಲೆಬ್ರಿಟಿಗಳಿಗಾದರೆ ನಿಯಮ ಅನ್ವಯಿಸಲ್ಲವೇ ಎಂದು ಜನರು ಪ್ರಶ್ನಿಸಿಸಿದ್ದರು.

ಮತ್ತೊಂದು ಪ್ರಕರಣದಲ್ಲಿ ಎಫ್‌ಐಆರ್‌

ಮೈಸೂರಿನ ಟಿ. ನರಸೀಪುರದಲ್ಲಿರುವ ಫಾರ್ಮ್ ಹೌಸ್‌ನಲ್ಲಿ ನಾಲ್ಕು ಬಾರ್‌ ಹೆಡೆಡ್‌ ಗೂಸ್‌ (ವಿಶಿಷ್ಟ ಪ್ರಭೇದದ ಬಾತುಕೋಳಿ)ಗಳನ್ನು ಸಾಕಿದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದರ್ಶನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಟ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎನ್ನಲಾಗಿದೆ. ಅರಣ್ಯ ಇಲಾಖೆಯ ವಿಚಕ್ಷಣಾ ವಿಭಾಗದಿಂದ ಎಫ್‌ಐಆರ್ ದಾಖಲಿಸಲಾಗಿದೆ. ಐದು ನೋಟಿಸ್‌ ನೀಡಿದ್ದು, ಇದುವರೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿಲ್ಲ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Actor Darshan: ಇಂದೇ ಪರಪ್ಪನ ಅಗ್ರಹಾರ ಸೇರ್ತಾರ ದರ್ಶನ್‌, ಪವಿತ್ರಾ ಗೌಡ?

Actor Darshan: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ ಮತ್ತು ಅವರ ಗೆಳತಿ ಪವಿತ್ರಾ ಗೌಡ ಇಂದೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಆಗುವ ಸಾಧ್ಯತೆ ಇದೆ. ಜೂನ್‌ 11ರಿಂದ ಜೂನ್‌ 17ರ ವರೆಗೆ ಪೊಲೀಸರು ದರ್ಶನ್‌ ಮತ್ತು ಪವಿತ್ರಾ ಗೌಡ ಅವರನ್ನು ವಶಕ್ಕೆ ಪಡೆದಿದ್ದರು. ಆದರೆ ಜೂನ್‌ 17ರಂದು ಸರ್ಕಾರಿ ರಜೆ ಇರುವುದರಿಂದ ಪೊಲೀಸರು ಎರಡು ದಿನಗಳ ಮೊದಲೇ ಕೋರಮಂಗಲದ ಜಡ್ಜ್​​​​ ನಿವಾಸಕ್ಕೆ ಇಬ್ಬರನ್ನು ಹಾಜರು ಪಡಿಸಲಿದ್ದಾರೆ ಎನ್ನಲಾಗಿದೆ.

VISTARANEWS.COM


on

Actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renuka Swamy murder case) ಕೊಲೆ ಆರೋಪದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ (Actor Darshan) ಮತ್ತು ಅವರ ಗೆಳತಿ ಪವಿತ್ರಾ ಗೌಡ ಇಂದೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಆಗುವ ಸಾಧ್ಯತೆ ಇದೆ. ಹೌದು, ಕೊಲೆ ಪ್ರಕರಣದಲ್ಲಿ ಎ 1 ಮತ್ತು ಎ 2 ಆರೋಪಿಗಳಾಗಿರುವ ದರ್ಶನ್‌ ಮತ್ತು ಪವಿತ್ರಾ ಗೌಡ ಅವರನ್ನು ಇಂದು ಜಡ್ಜ್‌ ಮುಂದೆ ಹಾಜರುಪಡಿಸಲಾಗುತ್ತಿದ್ದು, ಬಹುತೇಕ ಶಿಕ್ಷೆ ಜಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ಇಬ್ಬರೂ ಆತಂಕದಲ್ಲಿಯೇ ಸಮಯ ದೂಡುತ್ತಿದ್ದಾರೆ.

ಜೂನ್‌ 11ರಿಂದ ಜೂನ್‌ 17ರ ವರೆಗೆ ಪೊಲೀಸರು ದರ್ಶನ್‌ ಮತ್ತು ಪವಿತ್ರಾ ಗೌಡ ಅವರನ್ನು ವಶಕ್ಕೆ ಪಡೆದಿದ್ದರು. ಆದರೆ ಜೂನ್‌ 17ರಂದು ಸರ್ಕಾರಿ ರಜೆ ಇರುವುದರಿಂದ ಪೊಲೀಸರು ಎರಡು ದಿನಗಳ ಮೊದಲೇ ಕೋರಮಂಗಲದ ಜಡ್ಜ್​​​​ ನಿವಾಸಕ್ಕೆ ಇಬ್ಬರನ್ನು ಹಾಜರು ಪಡಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪೊಲೀಸರು ದರ್ಶನ್‌ ಅವರ ಪ್ರಾಥಮಿಕ ವಿಚಾರಣೆಯನ್ನು ಮುಗಿಸಿದ್ದಾರೆ. ಹೀಗಾಗಿ ದರ್ಶನ್‌ ಮತ್ತು ಪವಿತ್ರಾ ಗೌಡ ಇಬ್ಬರನ್ನೂ ನ್ಯಾಯಾಧೀಶರು ಪರಪ್ಪನ ಅಗ್ರಹಾರಕ್ಕೆ ಕಳುಹಿಸುವ ಸಾಧ್ಯತೆಯೇ ಹೆಚ್ಚಿದೆ.

ಮಧ್ಯಾಹ್ನದ ವೇಳೆಗೆ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರು ಪಡಿಸಲಾಗುವುದು ಎಂದು ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರನ್ನು ಈಗಾಗಲೇ ಮಹಿಳಾ ಸಾಂತ್ವನ ಕೇಂದ್ರದಿಂದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆ ತರಲಾಗಿದೆ. ಬಟ್ಟೆ, ಬ್ಯಾಗ್ ಸಮೇತ ಠಾಣೆಗೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆಗಮಿಸಿದ್ದು, ಪ್ರಕರಣದ ಬಗ್ಗೆ ಕಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದರ್ಶನ್ ವಿರುದ್ಧ ತೆರಯಲಾಗುತ್ತಾ ರೌಡಿಶೀಟ್?

ಸದ್ಯ ಹೀಗೊಂದು ಸಾಧ್ಯತೆ ಇದೆ ಎನ್ನುವ ಚರ್ಚೆ ಆರಂಭವಾಗಿದೆ. ದರ್ಶನ್ ವಿರುದ್ಧ ರೌಡಿಶೀಟ್ ತೆರೆಯುವ ಬಗ್ಗೆ ಕಾನೂನು ತಜ್ಞರ ಜತೆ ಪೊಲೀಸರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪದೇ ಪದೆ ಕ್ರೈಂನಲ್ಲಿ ಭಾಗಿಯಾಗಿದ್ದರೆ ರೌಡಿಶೀಟ್‌ ತೆರೆಯಬಹುದು. ಆದರೆ 2011ರ ಬಳಿಕ ದರ್ಶನ್ ವಿರುದ್ಧ ಯಾವುದೇ ಕ್ರೈಂ ಪ್ರಕರಣ ದಾಖಲಾಗಿಲ್ಲ. ಈಗ ಕೊಲೆ ಅರೋಪದಲ್ಲಿ ಬಂಧಿತರಾಗಿದ್ದಾರೆ. ಹೀಗಾಗಿ ಈ ಬಗ್ಗೆ ಕಾನೂನು ತಜ್ಞರ ಬಳಿ ಪೊಲೀಸರ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: Actor Darshan: ಪ್ರಾಯಶ್ಚಿತದ ಬೇಗೆಯಲ್ಲಿ ದರ್ಶನ್‌; ದುಃಖ ತೋಡಿಕೊಂಡ ಚಾಲೆಂಜಿಂಗ್‌ ಸ್ಟಾರ್‌ ಹೇಳಿದ್ದೇನು?

ದರ್ಶನ್‌ ಅವರ ಗೆಳತಿ ಪವಿತ್ರಾಗೌಡ ಅವರಿಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ್ದಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ದರ್ಶನ್‌ ಸೂಚನೆ ಕೊಟ್ಟಿದ್ದರಿಂದಲೇ ಈ ಕೃತ್ಯ ಎಸಗಿರುವುದಾಗಿ ಆರಂಭದಲ್ಲಿ ಬಂಧಿತರು ಬಾಯ್ಬಿಟ್ಟಿದ್ದರು. ಹೀಗಾಗಿ ಜೂನ್‌ 11ರಂದು ದರ್ಶನ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸ್‌ ವಶದಲ್ಲಿರುವ ದರ್ಶನ್‌ ಈಗ ಕೃತ್ಯದ ಬಗ್ಗೆ ಪ್ರಾಯಶ್ಚಿತ ಪಡುತ್ತಿದ್ದಾರೆ ಎಂದು ಆಪ್ತಮೂಲಗಳು ತಿಳಿಸಿವೆ.

Continue Reading
Advertisement
T20 World Cup 2024 Super 8
ಕ್ರಿಕೆಟ್13 mins ago

T20 World Cup 2024 Super 8: ಸೂಪರ್​-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್​ ಮೊದಲ ಎದುರಾಳಿ

Indresh Kumar
Lok Sabha Election 202415 mins ago

Indresh Kumar: ರಾಮ ಭಕ್ತರು ಅಧಿಕಾರದಲ್ಲಿದ್ದಾರೆ, ರಾಮ ವಿರೋಧಿಗಳು ಸೋತಿದ್ದಾರೆ; ಆರ್‌ಎಸ್‌ಎಸ್‌ ನಾಯಕನ ಹೊಸ ಹೇಳಿಕೆ

Actor darshan
ಉತ್ತರ ಕನ್ನಡ17 mins ago

Actor Darshan : ಸಂಕಷ್ಟ ನಿವಾರಣೆಗಾಗಿ ದೇವರ ಮೊರೆ ಹೋದ ನಟ ದರ್ಶನ್‌ ಕುಟುಂಬಸ್ಥರು

Gold Rate Today
ಚಿನ್ನದ ದರ22 mins ago

Gold Rate Today: ಮತ್ತೆ ಏರಿಕೆಯ ಹಾದಿಯಲ್ಲಿ ಚಿನ್ನದ ಬೆಲೆ; ಆಭರಣ ಖರೀದಿಯ ಮುನ್ನ ಇಂದಿನ ದರ ಗಮನಿಸಿ

Actor Darshan new statement to police
ಸ್ಯಾಂಡಲ್ ವುಡ್24 mins ago

Actor Darshan: ಎರಡೇ ಎರಡೇಟು ಬಿಟ್ಟಿದ್ದೆ, ಹಿಂಗಾಗೋಯ್ತು ಸಾರ್‌! ಪೊಲೀಸರ ಮುಂದೆ ದರ್ಶನ್‌ ಹೇಳಿಕೆ!

snake bite
ಚಿಕ್ಕಬಳ್ಳಾಪುರ39 mins ago

Snake Bite : ನಿದ್ದೆಗೆ ಜಾರಿದ 3 ವರ್ಷದ ಬಾಲಕನನ್ನು ಕಚ್ಚಿ ಸಾಯಿಸಿದ ನಾಗರಹಾವು

Actor Darshan case Film chamber visit to the renukaswamy house
ಸ್ಯಾಂಡಲ್ ವುಡ್51 mins ago

Actor Darshan:  ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟ ಚಲನಚಿತ್ರ ವಾಣಿಜ್ಯ ಮಂಡಳಿ

India Coach
ಕ್ರೀಡೆ57 mins ago

India Coach: ಕೋಚ್​ ಆಗುವ ಮುನ್ನವೇ ಗಂಭೀರ್​ಗೆ ಕಿವಿಮಾತು ಹೇಳಿದ ಅನಿಲ್ ಕುಂಬ್ಳೆ

tumkur Murder
ತುಮಕೂರು1 hour ago

Tumkur Murder : ಬೈಕ್ ಆ್ಯಕ್ಸಿಡೆಂಟ್ ಕೇಸ್‌ಗೆ ಬಿಗ್ ಟ್ವಿಸ್ಟ್; ಎದುರಾಳಿಯನ್ನು ಕೊಂದ ಹಂತಕರು ಅರೆಸ್ಟ್‌

Sapthami Gowda breakup story in stage
ಸ್ಯಾಂಡಲ್ ವುಡ್1 hour ago

Sapthami Gowda: ಲವ್‌ ಬ್ರೇಕಪ್‌ ಆಗಿದೆ, ಬಾಯ್‌ಫ್ರೆಂಡ್‌ ನನ್ನ ಜತೆ ಇಲ್ಲ ಎಂದ ಸಪ್ತಮಿ ಗೌಡ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ18 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು19 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು20 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ20 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

ಟ್ರೆಂಡಿಂಗ್‌