Healthy eating tips for college students : ಕಾಲೇಜು ವಿದ್ಯಾರ್ಥಿಗಳ ಊಟದಲ್ಲಿ ಏನಿದ್ದರೆ ಸೂಕ್ತ? - Vistara News

ಶಿಕ್ಷಣ

Healthy eating tips for college students : ಕಾಲೇಜು ವಿದ್ಯಾರ್ಥಿಗಳ ಊಟದಲ್ಲಿ ಏನಿದ್ದರೆ ಸೂಕ್ತ?

ಊಟ-ತಿಂಡಿಯೆಲ್ಲಾ ಅಮ್ಮನ ಡಿಪಾರ್ಟ್ಮೆಂಟ್ ಎಂದು ನೆಮ್ಮದಿಯಿಂದಿದ್ದ ದಿನಗಳು ಮುಗಿದು, ಆಹಾರದ ಆಯ್ಕೆಯನ್ನು ತಾವೇ ಮಾಡಬೇಕಾದ ಹಾಸ್ಟೆಲ್/ಪಿಜಿ ದಿನಗಳು ಎದುರಾದಾಗ ಮೊದಲಿಗೆ ಎಡವಿದರೆ ಅಚ್ಚರಿಯಿಲ್ಲ. ಈ ಬಗ್ಗೆ ಉಪಯುಕ್ತ ಮಾಹಿತಿ.

VISTARANEWS.COM


on

childrens food
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಾಲೆಯ ದಿನಗಳ ಸೊಗಸೇ ಬೇರೆ. ಯಾವುದಕ್ಕೂ ತಲೆಬಿಸಿ ಮಾಡುವ ಕೆಲಸವೇ ಇಲ್ಲ, ಓದುವುದು ಮತ್ತು ಹವ್ಯಾಸಗಳನ್ನು ಬಿಟ್ಟು. ಒಮ್ಮೆ ಕಾಲೇಜಿಗೆ ಕಾಲಿಡುತ್ತಿದ್ದಂತೆ ಬದುಕು ಬದಲಾಗುತ್ತದೆ. ಸ್ನೇಹಿತರು, ಓದು-ಪಾಠ, ಓಡಾಟ, ತುಂಟಾಟಗಳು ಮಾತ್ರವೇ ಅಲ್ಲ ಊಟವೂ (healthy eating tips) ಬದಲಾಗಿ ಬಿಡುತ್ತದೆ. ಅದರಲ್ಲೂ ಮನೆ ಬಿಟ್ಟು ಬೇರೆ ಊರುಗಳಿಗೆ ಓದಲೆಂದು ಬಂದವರಿಗೆ ಅಮ್ಮನ ಕೈಯಡುಗೆ ಮತ್ತು ಮನೆಯ ಡಬ್ಬಿಯ ಸುಖವೂ ಇಲ್ಲದೆ, ಕಾಲೇಜ್‌ ಕ್ಯಾಂಟೀನು, ಹಾಸ್ಟೆಲ್‌ ಅಥವಾ ಪಿಜಿ ಆಹಾರವೇ ಪಾಲಿಗೆ ಬಂದ ಪಂಚಾಮೃತ. ಹಾಸ್ಟೆಲ್/ಪಿಜಿ ಊಟ ಇಷ್ಟವಾಗದಿದ್ದರೆ ಸಿಕ್ಕಿದ್ದನ್ನು ಸಿಕ್ಕಿದಲ್ಲಿ ತಿನ್ನುವುದು ಅನಿವಾರ್ಯವಾಗುತ್ತದೆ. ಇದಿಷ್ಟರ ನಡುವೆ ಸ್ನೇಹಿತರ ಆಕರ್ಷಣೆ, ಅವರು ಕರೆದಲ್ಲಿ ಹೋಗಲಾರೆನು-ಹೋಗದುಳಿಯಲಾರೆನು ಎಂಬಂಥ ಬವಣೆ. ಮಾತ್ರವಲ್ಲ, ಹೊಟ್ಟೆಗಿಳಿಯುವುದು ಜೇಬಿಗೂ ಭಾರವಾಗದಂತಿರಬೇಕು.

ಪದವಿಪೂರ್ವ ದಿನಗಳನ್ನು ಕಳೆದು ಪದವಿ ಅಥವಾ ಸ್ನಾತಕ ಪದವಿಗಳಿಗಾಗಿ ಮನೆಯಿಂದ ಹೊರಗೆ ಹೋಗುವ ವಿದ್ಯಾರ್ಥಿಗಳಲ್ಲಿ, ಅದರಲ್ಲೂ ಬೇರೆ ರಾಜ್ಯ ಅಥವಾ ಬೇರೆ ದೇಶಗಳಿಗೆ ಹೋಗುವ ವಿದ್ಯಾರ್ಥಿಗಳ ತೂಕ ಹೆಚ್ಚುವುದು ಸಾಮಾನ್ಯವಾಗಿ ಕಾಣುತ್ತದೆ. ಊಟ-ತಿಂಡಿಯೆಲ್ಲಾ ಅಮ್ಮನ ಡಿಪಾರ್ಟ್ಮೆಂಟು ಎಂದು ನೆಮ್ಮದಿಯಿಂದಿದ್ದ ದಿನಗಳ ಬದಲಿಗೆ, ಆಹಾರದ (healthy eating tips) ಆಯ್ಕೆಯನ್ನು ತಾವೇ ಮಾಡಬೇಕಾದ ದಿನಗಳು ಎದುರಾದಾಗ ಮೊದಲಿಗೆ ಎಡವುವುದು ಸಹಜವೇ. ಅಂದರೆ, ಒತ್ತಡದ ಓದಿನ ನಡುವೆ ಫಾಸ್ಟ್‌ಫುಡ್‌ಗಳನ್ನು ನಾಲಿಗೆ ಬಯಸುತ್ತದೆ. ನಡುರಾತ್ರಿ ಅಥವಾ ತಡರಾತ್ರಿಯವರೆಗೆ ಓದುವ ಸಂದರ್ಭದಲ್ಲಿ ಕಾಡುವ ಹಸಿವನ್ನು ತಣಿಸಲು ಚಿಪ್ಸ್‌ ತಕ್ಷಣಕ್ಕೆ ದೊರೆಯುತ್ತದೆ ಅಥವಾ ಫುಡ್‌ ಆಪ್‌ಗಳ ಮೂಲಕ ನೂಡಲ್ಸ್‌ ಅಥವಾ ಪೀಜಾ ಸುಲಭಕ್ಕೆ ಸಿಗುತ್ತದೆ. ಮಳೆಯ ಈ ದಿನಗಳಲ್ಲಿ ಸಮೋಸಾ, ಗೋಬಿಮಂಚೂರಿಗಳು ಪ್ರಿಯವಾಗಬಹುದು. ಹೀಗಾದರೆ ತೂಕ ಏರದೇ ಇನ್ನೇನಾಗುತ್ತದೆ? ಇದರ ಫಲಿತಾಂಶವೇನು ಎಂದು ನೋಡಿದರೆ- ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಕ್ಷೀಣಿಸಿ, ಪೌಷ್ಟಿಕ ಆಹಾರಗಳತ್ತ (healthy eating tips) ಒಲವು ಕಡಿಮೆಯಾಗಿ, ಕ್ಯಾಲರಿ ಹೆಚ್ಚಾದರೂ ಆಹಾರದ ಸತ್ವ ನಶಿಸಿ, ನಿದ್ದೆಯೂ ಕಡಿಮೆಯಾಗುವುದರ ಫಲವಾಗಿ ಜಾಣರಾಗಿದ್ದ ಮಕ್ಕಳು ಮಂಕುದಿಣ್ಣೆಯಂತಾಗುತ್ತಾರೆ. ಆರೋಗ್ಯವೂ ನಮಃಶಿವಾಯ ಎಂಬಂತಾಗಿ, ದೂರದೂರಿನಲ್ಲಿರುವ ಹೆತ್ತವರಿಗೆ ನಿತ್ಯವೂ ತಲೆಬಿಸಿ!

ಏನು ಮಾಡಬೇಕು?

ಇದೀಗ ಮುಂದಿನ ಪ್ರಶ್ನೆ. ಕಾಲೇಜು-ವಿದ್ಯಾರ್ಥಿ ಜೀವನದ ಒತ್ತಡದ ನಡುವೆ ಕಾಲಕಾಲಕ್ಕೆ ಸರಿಯಾಗಿ ಕೂತುಣ್ಣಬೇಕು, ದಿನಕ್ಕೆ ಎಂಟು ತಾಸು ನಿದ್ರಿಸಬೇಕು ಎಂಬಂಥ ಕ್ರಮಗಳು ಹೇಳುವುದಕ್ಕೆ ಸೂಕ್ತವಾದರೂ ಪಾಲನೆಗೆ ಕಷ್ಟ. ಹಾಗಾದರೆ ಏನು ಮಾಡಬಹುದು?

ಬೆಳಗಿನ ತಿಂಡಿ ಅಗತ್ಯ

ಎಷ್ಟೇ ಗಡಿಬಿಡಿ ಇದ್ದರೂ, ಬೆಳಗಿನ ಕ್ಲಾಸು, ಟ್ಯೂಷನ್ನುಗಳ ಧಾವಂತವಿದ್ದರೂ ಬೆಳಗಿನ ತಿಂಡಿಯನ್ನು ತಪ್ಪಿಸುವಂತಿಲ್ಲ. ರಾತ್ರಿಡೀ ಖಾಲಿಯಿದ್ದ ಹೊಟ್ಟೆಗೆ ಬೆಳಗ್ಗೆ ಆಹಾರ ನೀಡದಿದ್ದರೆ ಇಡೀ ದಿನದ ಕೆಲಸ ಕೆಡುತ್ತದೆ. ಕಾರಣ, ಏಕಾಗ್ರತೆ ಮೂಡುವುದಿಲ್ಲ. ಬೇರೇನೂ ಸಾಧ್ಯವಿಲ್ಲದಿದ್ದರೆ ಒಂದು ಮೊಟ್ಟೆ ಅಥವಾ ಒಂದು ಸೇಬು ತಿಂದು, ಹಾಲು ಕುಡಿದರೂ ಸರಿಯೆ- ಆದರೆ ಬೆಳಗಿನ ತಿಂಡಿ ಬೇಕು.

ಆಯ್ಕೆ ನಿಮ್ಮದೇ ತಾನೆ?

ಮನೆಯ ಆಹಾರ ಲಭ್ಯವಿದ್ದರೆ ಅದಕ್ಕಿಂತ ಸುಖ ಇನ್ನೊಂದಿಲ್ಲ. ನಿಮ್ಮ ಆರೋಗ್ಯಕ್ಕೆ ಯಾವುದು ಸೂಕ್ತ ಎಂಬುದು ಅಮ್ಮನ ಆಯ್ಕೆಯಾಗಿರುತ್ತದೆ. ಹಾಗಿಲ್ಲದಿದ್ದರೆ ಹೊರಗೆ ತಿನ್ನುವಾಗಲೂ ಒಂದಿಷ್ಟು ಆಯ್ಕೆ ನಿಮಗಿರಬಹುದು. ಉದಾ, ಸಂಜೆಯ ಕಳ್ಳ ಹಸಿವಿಗೆ ಮಸಾಲೆಪುರಿ, ಸಮೋಸಾಗಳ ಬದಲಿಗೆ ಬಾಳೆಹಣ್ಣಿನ ಮಿಲ್ಕ್‌ಶೇಕ್‌ ಅಥವಾ ಡ್ರೈಫ್ರೂಟ್‌/ ನಟ್‌ಗಳನ್ನೂ ಆಯ್ಕೆ ಮಾಡಬಹುದಲ್ಲ.

ಕ್ಯಾಲ್ಶಿಯಂ ಬೇಕು

ಹಾಲು ಸೇರುವುದಿಲ್ಲ, ಮೊಸರು ಅಭ್ಯಾಸವಿಲ್ಲ ಎಂಬಂಥ ಕಾರಣಗಳು ಬೇಕಾದಷ್ಟು ದೊರೆಯಬಹುದು ಹೇಳುವುದಕ್ಕೆ. ಆದರೆ ಈಗ ತಿನ್ನುವ ಆಹಾರಗಳೇ ನಾಳಿನ ಬದುಕಿನ ಗ್ರಾಸ ಎನ್ನುವುದು ನೆನಪಿರಲಿ. ಹಾಗಾಗಿ ಫ್ರೋಜನ್‌ ಯೋಗರ್ಟ್‌, ಕಡಿಮೆ ಕೊಬ್ಬಿರುವ ಚೀಸ್‌, ಪಾಲಕ್‌, ರಾಗಿ ಮುಂತಾದವು ಬೆಳವಣಿಗೆಯ ಹಂತವನ್ನು ಈಗಷ್ಟೇ ದಾಟಿರುವವರಿಗೆ ಬೇಕು.

ಜಂಕ್‌ ಬೇಕೆ?

ಸೋಡಾ, ಸಕ್ಕರೆ ಭರಿತ ಹಣ್ಣಿನ ರಸ, ಸ್ಪೋರ್ಟ್‌ ಡ್ರಿಂಕ್ಸ್‌ ಮುಂತಾದವು ದೇಹಕ್ಕೆ ಸಿಕ್ಕಾಪಟ್ಟೆ ಸಕ್ಕರೆ ಸೇರಿಸುತ್ತವೆ. ಸೀರಿಯಲ್‌ ತಿನ್ನುವ ಭರದಲ್ಲಿ ಸಕ್ಕರೆಭರ್ತಿ ಇರುವಂಥವು ಬೇಡ. ಸಾಲಡ್‌ ತಿನ್ನುವ ನೆಪದಲ್ಲಿ ಮೇಯೊನೀಸ್‌ ಅಥವಾ ಚೀಸ್‌ ಡ್ರೆಸ್ಸಿಂಗ್‌ ಸುರಿದುಕೊಂಡರೆ ಸರ್ವ ಬಣ್ಣ ಬಸಿ ನುಂಗಿದಂತಾಗುತ್ತದೆ. ಮರೆಯದಿರಿ, ದೇಹಕ್ಕೆ ಪೌಷ್ಟಿಕವಲ್ಲದ ಯಾವುದೇ ಕ್ಯಾಲರಿಯನ್ನೂ ಜಂಕ್‌ ಎಂದೇ ಪರಿಗಣಿಸಬಹುದು.

ಏನಿರಬೇಕು?

ಆರೋಗ್ಯಕರ ಊಟ ಅಂದುಕೊಂಡಷ್ಟು ಕಷ್ಟವಲ್ಲ ಎಂಬುದೇ ಖಷಿಯ ವಿಷಯ. ಉದಾ, ದಿನಕ್ಕೆರಡು ಬಾರಿ ಹಣ್ಣು-ತರಕಾರಿಗಳ ಸರ್ವಿಂಗ್‌ ಆವಶ್ಯಕ. ಅದು ಹಸಿ ತರಕಾರಿ ಆದರೂ ಸರಿ, ಪಲ್ಯದಂಥ ಖಾದ್ಯಗಳಾದರೂ ತೊಂದರೆಯಿಲ್ಲ. ಋತುಮಾನಕ್ಕೆ ತಕ್ಕ ಹಣ್ಣುಗಳು ತಿಂದಷ್ಟೂ ಒಳ್ಳೆಯದೇ. ಆಹಾರದ ಒಂದು ಭಾಗದಲ್ಲಿ ಅಕ್ಕಿ, ರಾಗಿ, ಜೋಳ, ಗೋಧಿಯಂಥ ಯಾವುದೇ ಧಾನ್ಯಗಳ ಖಾದ್ಯಗಳಿರಲಿ. ಜೊತೆಗೆ ಪನೀರ್‌, ತೋಫು, ಮೊಳಕೆ ಕಾಳುಗಳು, ಮೊಟ್ಟೆ, ಚಿಕನ್‌ ಮುಂತಾದ ಯಾವುದೇ ಬಗೆಯ ಪ್ರೊಟೀನ್‌ ಸ್ವಲ್ಪ ಬೇಕು. ಮೊಸರು ಸಹ ಊಟದ ಭಾಗವಾಗಿರಲಿ.

ನೀರು-ವ್ಯಾಯಾಮ

ಇವೆರಡೂ ಕಾಲೇಜು ಜೀವನದ ನಿತ್ಯ ಸಂಗಾತಿಗಳಾಗಿರಲಿ. ದಿನಕ್ಕೆ ಮೂರು ಲೀ. ನೀರು ಕುಡಿದು, ಬೆವರಿಳಿಯುವಂತೆ ವ್ಯಾಯಾಮ ಮಾಡಿ, ಒಳ್ಳೆಯ ಆಹಾರ ಸೇವಿಸಿದರೆ, ಇದಕ್ಕಿಂತ ದೊಡ್ಡ ಬ್ಯೂಟಿ ಸೀಕ್ರೆಟ್‌ ಯಾವುದಿದೆ ಹೇಳಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾರ್ವಭೌಮ ಗುರುಕುಲಕ್ಕೆ ಶೇ.100 ಫಲಿತಾಂಶ

SSLC Result 2024: ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತ ಮೂರನೇ ವರ್ಷ ಶೇಕಡಾ 100 ಫಲಿತಾಂಶ ಸಾಧಿಸಿದ್ದಾರೆ. ಸಾರ್ವಭೌಮ ಗುರುಕುಲ ಪಾರಂಪರಿಕ ಮತ್ತು ನವಯುಗದ ಸಮನ್ವಯ ಶಿಕ್ಷಣ ನೀಡುವ ದೇಶದ ಏಕೈಕ ಸಂಸ್ಥೆಯಾಗಿದ್ದು, ಪಾರಂಪರಿಕ ವಿಭಾಗದಲ್ಲಿ ಸಾಧನೆ ಮಾಡುವ ಜತೆಜತೆಗೆ ನವಯುಗ ಶಿಕ್ಷಣದಲ್ಲೂ ಯಾವುದೇ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಿಂತ ನಾವು ಕಡಿಮೆ ಇಲ್ಲ ಎನ್ನುವುದನ್ನು ಈ ಸಾಧನೆ ತೋರಿಸಿಕೊಟ್ಟಿದೆ ಎಂದು ಮಾರ್ಗದರ್ಶಕರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.

VISTARANEWS.COM


on

Koo

ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ (SSLC Result 2024) ಸತತ ಮೂರನೇ ವರ್ಷ ಶೇಕಡಾ 100 ಫಲಿತಾಂಶ ಸಾಧಿಸಿದ್ದಾರೆ.

ಸಾರ್ವಭೌಮ ಗುರುಕುಲ ಪಾರಂಪರಿಕ ಮತ್ತು ನವಯುಗದ ಸಮನ್ವಯ ಶಿಕ್ಷಣ ನೀಡುವ ದೇಶದ ಏಕೈಕ ಸಂಸ್ಥೆಯಾಗಿದ್ದು, ಪಾರಂಪರಿಕ ವಿಭಾಗದಲ್ಲಿ ಸಾಧನೆ ಮಾಡುವ ಜತೆಜತೆಗೆ ನವಯುಗ ಶಿಕ್ಷಣದಲ್ಲೂ ಯಾವುದೇ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಿಂತ ನಾವು ಕಡಿಮೆ ಇಲ್ಲ ಎನ್ನುವುದನ್ನು ಈ ಸಾಧನೆ ತೋರಿಸಿಕೊಟ್ಟಿದೆ ಎಂದು ಮಾರ್ಗದರ್ಶಕರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್!

ವಿವಿವಿ ಅಂಕಗಳಿಕೆ ಶಿಕ್ಷಣಕ್ಕೆ ಒತ್ತು ನೀಡದೇ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಒತ್ತು ನೀಡುತ್ತದೆ. ಆದಾಗ್ಯೂ ಅಂಕ ಗಳಿಕೆಯಲ್ಲೂ ನಮ್ಮ ವಿದ್ಯಾರ್ಥಿಗಳು ಮುಂದಿರುವುದು ಸಂಸ್ಥೆಯ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿ. ದೇಶದ ಭಾವಿ ಪ್ರಜೆಗಳ ಭದ್ರ ಭವಿಷ್ಯದ ಅಡಿಪಾಯ ಇದಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ಎಂದು ಅವರು ಆಶೀರ್ವದಿಸಿದ್ದಾರೆ.

ಪರೀಕ್ಷೆ ತೆಗೆದುಕೊಂಡ 33 ವಿದ್ಯಾರ್ಥಿಗಳ ಪೈಕಿ 19 ಮಂದಿ ಅತ್ಯುನ್ನತ ದರ್ಜೆಯಲ್ಲಿ 13 ಮಂದಿ ಪ್ರಥಮ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮುಖ್ಯ ಶಿಕ್ಷಕಿ ಸೌಭಾಗ್ಯ ಭಟ್ಟ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪನ್ನಗ ಎಸ್. ಭಟ್ 613 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದರೆ, 603 ಅಂಕ ಗಳಿಸಿದ ರಾಮಚಂದ್ರ ಉಪಾಧ್ಯ ಎರಡನೇ ಸ್ಥಾನ ಗಳಿಸಿದ್ದಾರೆ. ತಲಾ 600 ಅಂಕಗಳನ್ನು ಪಡೆದ ಎನ್. ತನ್ವಿ ಗೌರಿ ಮತ್ತು ಸುಮುಖ ಹೆಗಡೆ ಜಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Karnataka Weather : ಕೊಡಗು, ಕೊಪ್ಪಳ ಸೇರಿ ಹಲವೆಡೆ ಅಬ್ಬರಿಸುತ್ತಿರುವ ಗಾಳಿ- ಮಳೆ; ನಾಳೆಗೂ ವಾರ್ನಿಂಗ್‌

ಅತ್ಯುತ್ತಮ ಸಾಧನೆಗೆ ಕಾರಣವಾಗಿರುವ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಹೆಗಡೆ, ವಿವಿವಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ ಮತ್ತಿತರರು ಅಭಿನಂದಿಸಿದ್ದಾರೆ.

Continue Reading

ಉತ್ತರ ಕನ್ನಡ

SSLC Result 2024: ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಪ್ರೌಢಶಾಲೆಗಳ ಉತ್ತಮ ಸಾಧನೆ

SSLC Result 2024: 2023-24 ನೇ ಸಾಲಿನ ರಾಜ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಮೂರು ಪ್ರೌಢಶಾಲೆಗಳು ಉತ್ತಮ ಸಾಧನೆ ತೋರಿದೆ. ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ.98.48 ಫಲಿತಾಂಶ ದಾಖಲಿಸಿದ್ದು, ಶಾಲೆಯ ವಿದ್ಯಾರ್ಥಿನಿ ಪ್ರಣತಿ ವಿ. ಮೆಣಸುಮನೆ 625ಕ್ಕೆ 620 ಅಂಕ ಗಳಿಸಿ ರಾಜ್ಯಕ್ಕೆ 6ನೇ ಸ್ಥಾನ ಹಾಗೂ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದು ವಿಶೇಷವಾಗಿದೆ. ಅದೇ ರೀತಿ ಇಡಗುಂದಿಯ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣಗೊಂಡು ನೂರಕ್ಕೆ ನೂರು ಫಲಿತಾಂಶ ದಾಖಲಿಸಿ ಗಮನ ಸೆಳೆದಿದ್ದಾರೆ. ಯಲ್ಲಾಪುರದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯುೂ ಕೂಡಾ ಉತ್ತಮ ಸಾಧನೆ ಮಾಡಿದ್ದು ಶೇ.98.24 ಫಲಿತಾಂಶ ಪಡೆದಿದೆ.

VISTARANEWS.COM


on

Yallapur Vishwadarshana Group of institutions performed well in SSLC Result 2024
Koo

ಯಲ್ಲಾಪುರ: 2023-24ನೇ ಸಾಲಿನ ರಾಜ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ (SSLC Result 2024) ಪ್ರಕಟಗೊಂಡಿದ್ದು, ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಮೂರು ಪ್ರೌಢಶಾಲೆಗಳು ಉತ್ತಮ ಸಾಧನೆ ತೋರಿವೆ.

ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ.98.48 ಫಲಿತಾಂಶ ದಾಖಲಿಸಿದ್ದು, ಶಾಲೆಯ ವಿದ್ಯಾರ್ಥಿನಿ ಪ್ರಣತಿ ವಿ. ಮೆಣಸುಮನೆ 625ಕ್ಕೆ 620 ಅಂಕ ಗಳಿಸಿ ರಾಜ್ಯಕ್ಕೆ 6ನೇ ಸ್ಥಾನ ಹಾಗೂ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಅದೇ ರೀತಿ ಇಡಗುಂದಿಯ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣಗೊಂಡು ನೂರಕ್ಕೆ ನೂರು ಫಲಿತಾಂಶ ದಾಖಲಿಸಿ ಗಮನ ಸೆಳೆದಿದ್ದಾರೆ. ಪಟ್ಟಣದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯುೂ ಕೂಡ ಉತ್ತಮ ಸಾಧನೆ ಮಾಡಿದ್ದು, ಶೇ.98.24 ಫಲಿತಾಂಶ ಪಡೆದಿದೆ.

ಇದನ್ನೂ ಓದಿ: Olive Oil Benefits: ಆಲಿವ್‌ ಎಣ್ಣೆ ಕೇವಲ ಅಡುಗೆಗಲ್ಲ, ಮುಖದ ಚರ್ಮ ಹಾಗೂ ಕೂದಲ ಸೌಂದರ್ಯಕ್ಕೂ ಬೇಕು!

ಈ ಕುರಿತು ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ್‌ ಕೋಣೆಮನೆ ಅವರು ಸಂತಸ ವ್ಯಕ್ತಪಡಿಸಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. ವಿಶ್ವದರ್ಶನ ಶಿಕ್ಷಣ ಸಮೂಹವು ನಿರಂತರವಾಗಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮವಾದ ಪದವಿಪೂರ್ವ ಕಾಲೇಜು ಇದ್ದು, ಇಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಬಹುದಾಗಿದೆ. ಹತ್ತನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಸ್ವಂತ ಊರಿನಲ್ಲಿಯೇ ಮುಂದಿನ ಶಿಕ್ಷಣಕ್ಕಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆ: ಶೇ.98.48 ಫಲಿತಾಂಶ

ಪ್ರಣತಿ ವಿ. ಮೆಣಸುಮನೆ 625ಕ್ಕೆ 620 ಅಂಕ ಗಳಿಸಿ ಶೇ. 99.20 ಫಲಿತಾಂಶದೊಂದಿಗೆ ರಾಜ್ಯಕ್ಕೆ 6ನೇ ಸ್ಥಾನ, ಶಾಲೆಗೆ ಪ್ರಥಮ ಸ್ಥಾನ, ಸಿಂಚನಾ ಎಸ್. ಭಟ್ಟ 615 ಅಂಕ ಗಳಿಸಿ ಶೇ.98.40 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ, ತೇಜಸ್ ಎಸ್. ಹೆಗಡೆ 609 ಅಂಕ ಗಳಿಸಿ ಶೇ.97.44 ಫಲಿತಾಂಶದೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 66 ವಿದ್ಯಾರ್ಥಿಗಳಲ್ಲಿ 33 ಡಿಸ್ಟಿಂಕ್ಷನ್‌ನಲ್ಲಿ, 28 ವಿದ್ಯಾರ್ಥಿಗಳು ಪ್ರಥಮ ದರ್ಜೆ, 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿ: ಶೇ. 100% ಫಲಿತಾಂಶ ಸಾಧನೆ

ತಾಲೂಕಿನ ಇಡಗುಂದಿಯಲ್ಲಿರುವ ವಿಶ್ವದರ್ಶನ ಪ್ರೌಢಶಾಲೆಯು ಎಂಟನೇ ಬಾರಿಗೆ ನೂರಕ್ಕೆ ನೂರು ಸಾಧನೆ ಮಾಡಿದೆ. ಪರೀಕ್ಷೆಗೆ ಕುಳಿತ 35 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಗಣೇಶ ಶಾಂತಾರಾಮ ದೇಸಾಯಿ 587 (93.92%) ಪ್ರಥಮ ಸ್ಥಾನ, ನಂದಿತಾ ಮಹೇಶ ತಾಮ್ಸೆ 583 (93.28%) ದ್ವಿತೀಯ ಸ್ಥಾನ ಹಾಗೂ ಸುಬ್ರಹ್ಮಣ್ಯ ನಾರಾಯಣ ಭಟ್ಟ 571 (91.36%) ತೃತೀಯ ಸ್ಥಾನವನ್ನು ಗಳಿಸಿದ್ದಾರೆ.

ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆ, ಯಲ್ಲಾಪುರ: ಶೇ. 98.24 ಫಲಿತಾಂಶ

ಅನನ್ಯ ನಾಗೇಶ ಹೆಗಡೆ 579 ಅಂಕ ಗಳಿಸಿ ಪ್ರಥಮ ಸ್ಥಾನ, ವೇದಶ್ರೀ ವೆಂಕಟರಮಣ ಭಟ್ಟ 570 ಅಂಕ ಗಳಿಸಿ ದ್ವಿತೀಯ ಸ್ಥಾನ, ಪವನ್ ಚಂದ್ರಕಾಂತ ಮರಾಠಿ 563 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: Sensex Crash : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ, ಸೆನ್ಸೆಕ್ಸ್​ 1100 ಅಂಕಗಳಷ್ಟು ಪತನ

ಒಟ್ಟು 57 ವಿದ್ಯಾರ್ಥಿಗಳಲ್ಲಿ 10 ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್ 33 ವಿಧ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ 3 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

Continue Reading

ಕರ್ನಾಟಕ

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್!

SSLC Result 2024: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Result 2024) ಪ್ರಕಟಗೊಂಡಿದ್ದು, ಹಾಸನ ಜಿಲ್ಲೆಯಲ್ಲಿ ಅಪರೂಪದ ಪ್ರಸಂಗ ನಡೆದಿದೆ. ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್ ಆಗಿದ್ದಾರೆ. ಸಕಲೇಶಪುರ ತಾಲೂಕಿನ ಚಿನ್ನಳ್ಳಿ ಗ್ರಾಮದಲ್ಲಿ ಎರಡನೇ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ 38 ವರ್ಷದ ಜ್ಯೋತಿ.ಪಿ.ಆರ್. ಉತ್ತೀರ್ಣರಾಗಿದ್ದಾರೆ.

VISTARANEWS.COM


on

Mother passed SSLC exam with her son in Hassan
Koo

ಹಾಸನ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Result 2024) ಪ್ರಕಟಗೊಂಡಿದ್ದು, ಹಾಸನ ಜಿಲ್ಲೆಯಲ್ಲಿ ಅಪರೂಪದ ಪ್ರಸಂಗ ನಡೆದಿದೆ. ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್ ಆಗಿದ್ದಾರೆ. ಸಕಲೇಶಪುರ ತಾಲೂಕಿನ ಚಿನ್ನಳ್ಳಿ ಗ್ರಾಮದಲ್ಲಿ ಎರಡನೇ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ 38 ವರ್ಷದ ಜ್ಯೋತಿ ಪಿ.ಆರ್. ಉತ್ತೀರ್ಣರಾಗಿದ್ದಾರೆ.

ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ‌ಉತ್ತರ ಪತ್ರಿಕೆ ಮರು ಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಷ್ಟೆ ಅವಕಾಶ

ತಾಯಿ-ಮಗ ಪಾಸ್‌

ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಸಿದ್ದಣ್ಯಯ್ಯ ಹೈಸ್ಕೂಲ್‍ನಲ್ಲಿ ಮಗ ನಿತಿನ್ ಸಿ.ಬಿ. ಜತೆ ತಾಯಿ ಜ್ಯೋತಿ ಪಿ.ಆರ್. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದರು. 250 ಅಂಕ ಪಡೆದು ಜ್ಯೋತಿ ಪಿ.ಆರ್. ಉತ್ತಿರ್ಣರಾಗಿದ್ದಾರೆ. ನಿತಿನ್‌ ಸಿ.ಬಿ. 582 ಅಂಕ ಪಡೆದಿದ್ದಾರೆ. ಬಾಳ್ಳುಪೇಟೆಯಲ್ಲಿರುವ ವಿವೇಕ ಕಾನ್ವೆಂಟ್‍ನಲ್ಲಿ ನಿತಿನ್ ಸಿ.ಬಿ. ಓದುತ್ತಿದ್ದಾರೆ.

ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಉತ್ತೀರ್ಣರಾಗಿದ್ದಕ್ಕೆ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

SSLC Result 2024: ಎಸ್‌ಎಸ್‌ಎಲ್‌ಸಿ ‌ಉತ್ತರ ಪತ್ರಿಕೆ ಮರು ಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಷ್ಟೆ ಅವಕಾಶ

ರಾಜ್ಯಾದ್ಯಂತ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ (SSLC Result 2024) ಫಲಿತಾಂಶವು ಮೇ 9ರಂದು ಪ್ರಕಟಿಸಲಾಗಿದೆ. ಇದೀಗ ಪರೀಕ್ಷೆಯ ಉತ್ತರ ಪತ್ರಿಕೆಗಳ ಪ್ರತಿಗಳನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಸ್ಕ್ಯಾನ್‌ ಪ್ರತಿ, ಮರು ಎಣಿಕೆ ಮತ್ತು ಮರುಮೌಲ್ಯಮಾಪನಕ್ಕೆ ಮಂಡಳಿಯ ವೆಬ್‌ಸೈಟ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Karnataka Weather : ಕೊಡಗು, ಕೊಪ್ಪಳ ಸೇರಿ ಹಲವೆಡೆ ಅಬ್ಬರಿಸುತ್ತಿರುವ ಗಾಳಿ- ಮಳೆ; ನಾಳೆಗೂ ವಾರ್ನಿಂಗ್‌

ಮೇ 9ರಿಂದ 16ರವರೆಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿಯನ್ನು ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತರ ಪತ್ರಿಕೆಗಳ ಮರುಎಣಿಕೆಗೆ ಮತ್ತು ಮರು ಮೌಲ್ಯಮಾಪನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಮೇ 13ರಿಂದ 22ವರೆಗೆ ಅರ್ಜಿ ಸಲ್ಲಿಸಬಹುದು ಜತೆಗೆ ಶುಲ್ಕವನ್ನು ಪಾವತಿಬಹುದಾಗಿದೆ.

ಇನ್ನೂ ನೇರವಾಗಿ ಮರು ಎಣಿಕೆಗಾಗಿ ಭೌತಿಕವಾಗಿ ಅರ್ಜಿ ಸಲ್ಲಿಸುವಂತಿಲ್ಲ. ಬದಲಿಗೆ ಆನ್‌ಲೈನ್‌ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕಿದೆ. ಮರು ಎಣಿಕೆ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಬಂಧಪಟ್ಟ ವಿಷಯದ ಉತ್ತರ ಪತ್ರಿಕೆಯ ಸ್ಕ್ಯಾನ್‌ ಪ್ರತಿಯನ್ನು ಪಡೆಯಬೇಕು.

ಸ್ಕ್ಯಾನ್‌ ಪ್ರತಿಯನ್ನು ಪಡೆದ ನಂತರ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದರೆ, ಅದನ್ನೂ ಖಚಿತಪಡಿಸಿಕೊಂಡ ನಂತರವಷ್ಟೇ ಮರುಎಣಿಕೆಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಮರುಎಣಿಕೆಗಾಗಿ ಭೌತಿಕವಾಗಿ ಅರ್ಜಿಗಳನ್ನು ಸ್ವೀಕರಿಸುವುದನ್ನು ರದ್ದುಗೊಳಿಸಲಾಗಿದೆ. ಮರುಎಣಿಕೆ ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

ಇನ್ನೂ ಮರುಎಣಿಕೆಯು ಉಚಿತವಾಗಿದ್ದು ಪ್ರತ್ಯೇಕ ಶುಲ್ಕವಿರುವುದಿಲ್ಲ. ಮರು ಎಣಿಕೆ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದಲ್ಲಿ ಪರಿಶೀಲಿಸಿ, ನಂತರ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ: Sensex Crash : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ, ಸೆನ್ಸೆಕ್ಸ್​ 1100 ಅಂಕಗಳಷ್ಟು ಪತನ

ಸಹಾಯವಾಣಿಗೆ ಕರೆ ಮಾಡಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ, ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪಡೆಯುವ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಯಾವುದೇ ಮಾಹಿತಿ ಪಡೆಯಬಹುದಾಗಿದೆ. ಹೀಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಹಾಯವಾಣಿಯನ್ನು ಆರಂಭವಿಸಿದೆ. ವಿದ್ಯಾರ್ಥಿಗಳು ಸಹಾಯವಾಣಿ ಸಂಖ್ಯೆ 080 23310075, 23310076ಕ್ಕೆ ಕರೆ ಮಾಡಬಹುದು.

Continue Reading

ಮಂಡ್ಯ

SSLC Result 2024: ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ

SSLC Result 2024 : ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು (SSLC Student) ನೇಣಿಗೆ ಶರಣಾಗಿದ್ದಾಳೆ. ಪರೀಕ್ಷೆಯಲ್ಲಿ ಪಾಸ್‌ ಆಗಿದ್ದರೂ, ಫೇಲಾದೆ ಎಂದು ತಪ್ಪಾಗಿ ಭಾವಿಸಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ.

VISTARANEWS.COM


on

By

SSLC Result 2024
Koo

ಮಂಡ್ಯ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Result 2024) ಪ್ರಕಟಗೊಂಡಿದೆ. ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ್ದಾಳೆ.

ಅಮೃತ (16) ನೇಣಿಗೆ ಶರಣಾದ ವಿದ್ಯಾರ್ಥಿನಿ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಮೃತ ನಗರಕೆರೆ ಗ್ರಾಮದ ಸರ್ಕಾರಿ ಅನುದಾನಿತ ಪೂರ್ಣಿಮಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಅಮೃತ ಶೇ.57 ಅಂಕ ಪಡೆದು ತೇರ್ಗಡೆ ಹೊಂದಿದ್ದಳು.

ಆದರೆ ಪರೀಕ್ಷೆಯಲ್ಲಿ ಫೇಲ್‌ ಆಗಿಬಿಟ್ಟೆ ಎಂದು ತಿಳಿದು ಮನೆಯಲ್ಲಿ ಯಾರು ಇಲ್ಲದಾಗ ನೇಣಿಗೆ ಶರಣಾಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ:SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

ಕಟ್ಟಡದ ಮೇಲಿಂದ ಬಿದ್ದು ಯುವಕ ಸೂಸೈಡ್‌

ಬೆಂಗಳೂರು: ಪಿ.ಜಿ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾನೆ. ಬೆಂಗಳೂರಿನ ವೈಟ್ ಫಿಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಡ್ಕರ್ ನಗರದಲ್ಲಿ ಘಟನೆ ನಡೆದಿದೆ. ಕಲಬುರಗಿ ಮೂಲದ 28ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನಾ ಸ್ಥಳಕ್ಕೆ ವೈಟ್ ಫಿಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ. ಆದರೆ ಅಲೆದಾಡಿ ಸುಸ್ತಾದ ಯುವಕನಿಗೆ ಎಲ್ಲೂ ಕೆಲಸ ಸಿಕ್ಕಿರಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದು ತಾನು ವಾಸವಿದ್ದ ಪಿಜಿ ಕಟ್ಟಡದ ಮೇಲಿಂದ ಬಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
America v/s Russia
ಅವಿಭಾಗೀಕೃತ1 min ago

America v/s Russia:ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ; ರಷ್ಯಾ ಆರೋಪಕ್ಕೆ ಅಮೆರಿಕ ಹೇಳಿದ್ದೇನು?

Actor Prabhas
ಸಿನಿಮಾ14 mins ago

Actor Prabhas: ʼಕಣ್ಣಪ್ಪʼ ಚಿತ್ರಕ್ಕೆ ಎಂಟ್ರಿಕೊಟ್ಟ ಪ್ರಭಾಸ್‌; ಹೊಸ ಪೋಸ್ಟರ್‌ ರಿಲೀಸ್‌

Prajwal Revanna Case
ಕ್ರೈಂ17 mins ago

Prajwal Revanna case: ಪ್ರಜ್ವಲ್‌ ರೇವಣ್ಣ ಮೇಲೆ ಸುಳ್ಳು ಆರೋಪ ನೀಡಲು ಒತ್ತಡ: ಮಹಿಳೆ ದೂರು

karnataka SSLC result 2024
ಸಂಪಾದಕೀಯ36 mins ago

ವಿಸ್ತಾರ ಸಂಪಾದಕೀಯ: SSLC Result 2024: ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತದ ಜೊತೆಗೆ ಸಿಹಿ ಸುದ್ದಿಯೂ ಇದೆ

Digestion Tips
ಆರೋಗ್ಯ53 mins ago

Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

Karnataka Weather Forecast
ಮಳೆ1 hour ago

Karnataka Weather : 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ; ಗುಡುಗು ಸಹಿತ ಭಾರಿ ಮಳೆಗೆ ಯೆಲ್ಲೋ ಅಲರ್ಟ್‌ ಘೋಷಣೆ

Which Sweetener Is Better
ಆರೋಗ್ಯ2 hours ago

Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

Basavanna jayanti
ಧಾರ್ಮಿಕ2 hours ago

Basava Jayanti 2024: ಬದುಕಿನ ಪಾಠ ಕಲಿಸುವ ಬಸವಣ್ಣನ 10 ವಚನಗಳಿವು

Akshaya Tritiya 2024
ಪ್ರಮುಖ ಸುದ್ದಿ3 hours ago

Akshaya Tritiya 2024: ಸಕಲ ಸಮೃದ್ಧಿಗಳು ಕ್ಷಯಿಸದಂತೆ ಕಾಪಾಡುವ ಅಕ್ಷಯ ತೃತೀಯ

Dina Bhavishya
ಭವಿಷ್ಯ3 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ10 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ11 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ12 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ18 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ18 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ19 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು19 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ20 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು21 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

ಟ್ರೆಂಡಿಂಗ್‌