BJP Karnataka: ನಾನೇ ವಿಪಕ್ಷ ನಾಯಕನಾಗುವೆ ಎಂದ ಯತ್ನಾಳ್‌:‌ ಅಸಾಧ್ಯ ಎಂದ ಸಿದ್ದರಾಮಯ್ಯ - Vistara News

ಕರ್ನಾಟಕ

BJP Karnataka: ನಾನೇ ವಿಪಕ್ಷ ನಾಯಕನಾಗುವೆ ಎಂದ ಯತ್ನಾಳ್‌:‌ ಅಸಾಧ್ಯ ಎಂದ ಸಿದ್ದರಾಮಯ್ಯ

ರಾಜ್ಯ ಬಿಜೆಪಿ (BJP Karnataka) ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡುವ ಕುರಿತು ಸಿದ್ದರಾಮಯ್ಯ ಮಾತನಾಡಿದರು.

VISTARANEWS.COM


on

Basanagouda patil yatnal siddaramaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಚುನಾವಣೆ ಫಲಿತಾಂಶ ಹೊರಬಂದು ತಿಂಗಳು ಕಳೆದರೂ ವಿಧಾನಸಭೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡದ ಬಿಜೆಪಿ (BJP Karnataka) ನಡೆಯು ಪದೇಪದೆ ಚರ್ಚೆಗೆ ಬರುತ್ತಲೇ ಇದೆ. ಬುಧವಾರ ವಿಧಾನಸಭೆಯಲ್ಲಿ ಈ ವಿಚಾರ ಮತ್ತೆ ಚರ್ಚೆಗೆ ಬಂದಿತು.

ಪದೇಪದೆ ಅನೇಕ ವಿಚಾರಗಳಲ್ಲಿ ಎದ್ದುನಿಂತು ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ನೀವು ಎಷ್ಟೇ ಬಾರಿ ಎದ್ದು ನಿಂತುಕೊಂಡು ಮಾತನಾಡಿದರೂ ವಿಪಕ್ಷ ನಾಯಕ ಆಗಲ್ಲ ಎಂದರು.

ಇದಕ್ಕೆ ಉತ್ತರಿಸಿದ ಯತ್ನಾಳ್‌, ಹಾಗಾದರೆ ನೀವು ನಮ್ಮವರ ಜತೆ ಅಡ್ಜೆಸ್ಟ್ಮೆಂಟ್ ಆಗಿದ್ದೀರಿ ಅಂತ ಆಯಿತು ಎಂದರು. ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನಾನು ಯಾವತ್ತೂ ವಿಪಕ್ಷ ನಾಯಕರಾದವರ ಜತೆ ಮಾತನಾಡಿಲ್ಲ. ಮಂತ್ರಿಗಳ ಜತೆ ಸಹ ಮಾತನಾಡಿಲ್ಲ. ಯಾರಾದರೂ ಸಾಬೀತುಪಡಿಸಲಿ ರಾಜಕೀಯ ನಿವೃತ್ತಿ ಆಗ್ತೀನಿ. ನಾನು ಯಾರ ಮನೆಗೂ ಹೋಗಿಲ್ಲ ಎಂದರು.

ಇದನ್ನೂ ಓದಿ: Assembly Session: ವಿಧಾನಸಭೆಯಲ್ಲಿ ಯತ್ನಾಳ್‌-ಡಿಕೆಶಿ ಗುದ್ದಾಟ: ಸಂಧಾನ ಸಭೆಯನ್ನೂ ಬಹಿಷ್ಕರಿಸಿದ ಬಿಜೆಪಿ

ಮನೆಗೆ ಹೋಗದಿದ್ರೆ ಏನು? ಹೋಟೆಲ್‌ಗೆ ಹೋಗಬಹುದು ಎಂದು ಯತ್ನಾಳ್‌ ಕಾಲೆಳೆದರು. ನಾನು ಎಲ್ಲೂ ಹೋಗಿಲ್ಲ. ಪ್ರತಿಪಕ್ಷ ನಾಯಕನ ರೇಸ್‌ನಲ್ಲಿ ಆರಗ ಜ್ಞಾನೇಂದ್ರ ಹೆಸರು ಇಲ್ಲ. ಅಶ್ವತ್ಥನಾರಾಯಣ, ಆರ್. ಆಶೋಕ್ ಹೆಸರು ಇದೆ ಎಂದರು. ಅಶೋಕ್‌ ಮತ್ತು ಅಶ್ವತ್ಥನಾರಾಯಣ ಇದನ್ನು ನಿರಾಕರಿಸಿದರೂ, ನಿಮ್ಮಿಬ್ಬರ ಹೆಸರು ಚರ್ಚೆ ಆಗುತ್ತಿದೆ. ನನ್ನ ಮಾಹಿತಿ ಪ್ರಕಾರ ಯತ್ನಾಳ್ ಆಗಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ನೀವು ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆಗಲ್ಲ ಎಂದಿರಿ. ಅಪ್ಪನಾಣೆ ಅವರು ಸಿಎಂ ಆಗಲ್ಲ ಎಂದಿದ್ದರೂ ಅವರು ಸಿಎಂ ಆಗಿಬಿಟ್ಟರು ಎಂದು ಕಿಚಾಯಿಸಿದರು. ಇದಕ್ಕೆ ಯತ್ನಾಳ್‌ ಪ್ರತಿಕ್ರಿಯಿಸಿ, ನೀವು ಹೇಳಿದಕ್ಕಾದ್ರೂ ನಾನು ಪ್ರತಿಪಕ್ಷ ನಾಯಕ ಆಗುತ್ತೇನೆ ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Udupi Tour: ಉಡುಪಿಗೆ ಹೋದಾಗ ನೀವು ನೋಡಲೇಬೇಕಾದ 10 ಸ್ಥಳಗಳಿವು

ಆಧ್ಯಾತ್ಮಿಕತೆ, ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಅನುಭವಗಳ ಪರಿಪೂರ್ಣ ಮಿಶ್ರಣವನ್ನು ನೀಡುವ ಉಡುಪಿ ಸ್ಮರಣೀಯ ಪ್ರವಾಸಕ್ಕೆ (Udupi Tour) ಸೂಕ್ತವಾದ ತಾಣವಾಗಿದೆ. ಸಾಹಸ, ವಿಶ್ರಾಂತಿ ಅಥವಾ ಆಧ್ಯಾತ್ಮಿಕತೆಯ ಅನುಭವದಲ್ಲಿ ಮಿಂದೇಳಲು ಬಯಸಿದರೆ ಇಲ್ಲಿಗೊಮ್ಮೆ ಭೇಟಿ ನೀಡಲು ಮರೆಯದಿರಿ.

VISTARANEWS.COM


on

By

Udupi Tour
Koo

ಕೃಷ್ಣನ ನಾಡು ಉಡುಪಿಯಲ್ಲಿ ಪ್ರವಾಸಿಗರನ್ನು (Udupi Tour) ಸೆಳೆಯುವ ಹಲವಾರು ತಾಣಗಳಿವೆ. ಸ್ನೇಹಿತರು, ಬಂಧುಗಳೊಂದಿಗೆ ಉಡುಪಿಗೆ ಭೇಟಿ ನೀಡಿದಾಗ ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ, ಪಾಕಶಾಲೆಯ ಸವಿರುಚಿ, ನಯನ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಮರೆಯದಿರಿ.

ಕರ್ನಾಟಕದ (karnataka) ಕರಾವಳಿ ಪ್ರದೇಶದಲ್ಲಿ ( coastal region) ನೆಲೆಸಿರುವ ಉಡುಪಿಯು ಹಲವಾರು ಸುಂದರ ಅನುಭವಗಳನ್ನು ನೀಡುತ್ತದೆ. ಸ್ಮರಣೀಯ ಪ್ರವಾಸಕ್ಕೆ ಇದೊಂದು ಸೂಕ್ತ ತಾಣವಾಗಿದೆ. ಪ್ರಾಚೀನ ದೇವಾಲಯಗಳಿಂದ (temples) ಹಿಡಿದು ಸುಂದರ ಕಡಲತೀರಗಳವರೆಗೆ (beach).. ಉಡುಪಿಯಲ್ಲಿ ಭೇಟಿ ನೀಡಬಹುದಾದ ಕೆಲವು ಅತ್ಯುತ್ತಮ ತಾಣಗಳಿವೆ.


ಶ್ರೀ ಕೃಷ್ಣ ದೇವಾಲಯ

ಉಡುಪಿಯ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕೃಷ್ಣ ದೇವಸ್ಥಾನದಿಂದ ಪ್ರವಾಸವನ್ನು ಆರಂಭಿಸಬಹುದು. ಭಗವಾನ್ ಕೃಷ್ಣನಿಗೆ ಸಮರ್ಪಿತವಾಗಿರುವ ಈ ದೇವಾಲಯವು ವಿಶಿಷ್ಟವಾದ ವಾಸ್ತುಶಿಲ್ಪ ಮತ್ತು ಧಾರ್ಮಿಕ ಮಹತ್ವಕ್ಕಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಹಲವು ಆಚರಣೆಗಳು ಯಾತ್ರಿಕರನ್ನು ಸಮ್ಮೋಹನಗೊಳಿಸುವುದು.


ಮಲ್ಪೆ ಬೀಚ್

ವಿಶ್ರಾಂತಿ ಬಯಸಿದರೆ ಮಲ್ಪೆ ಬೀಚ್‌ ಗಿಂತ ಉತ್ತಮ ತಾಣ ಬೇರೆ ಇಲ್ಲ. ಚಿನ್ನದ ಮರಳು ಮತ್ತು ಆಕಾಶ ನೀಲಿ ನೀರಿನ ಸುಂದರವಾದ ದೃಶ್ಯವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಬಿಸಿಲಿನಲ್ಲಿ ಬೇಯುತ್ತಿರಲಿ, ದಡದಲ್ಲಿ ಆರಾಮವಾಗಿ ಅಡ್ಡಾಡುತ್ತಿರಲಿ ಅಥವಾ ಪ್ಯಾರಾಸೈಲಿಂಗ್ ಮತ್ತು ಜೆಟ್-ಸ್ಕೀಯಿಂಗ್‌ನಂತಹ ರೋಮಾಂಚಕ ಜಲ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು.


ಸೇಂಟ್ ಮೇರಿಸ್ ದ್ವೀಪ

ಮಲ್ಪೆ ಬೀಚ್‌ನಿಂದ ಸೇಂಟ್ ಮೇರಿಸ್ ದ್ವೀಪಕ್ಕೆ ಚಿಕ್ಕದಾದ ದೋಣಿ ವಿಹಾರವನ್ನು ನಡೆಸಬಹುದು. ಇದು ವಿಶಿಷ್ಟವಾದ ಕಲ್ಲಿನ ರಚನೆಗಳು ಮತ್ತು ಪ್ರಾಚೀನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.


ಮಣಿಪಾಲ

ಶೈಕ್ಷಣಿಕ ಸಂಸ್ಥೆಗಳು, ಉತ್ಸಾಹಭರಿತ ಕೆಫೆಗಳು ಮತ್ತು ಸಾಂಸ್ಕೃತಿಕ ಆಕರ್ಷಣೆಗಳಿಗೆ ನೆಲೆಯಾಗಿರುವ ಮಣಿಪಾಲದ ರೋಮಾಂಚಕ ಪಟ್ಟಣವನ್ನು ಸುತ್ತಾಡಬಹುದು. ಇಲ್ಲಿನ ಮಣಿಪಾಲ್ ವಿಶ್ವವಿದ್ಯಾನಿಲಯದ ಕ್ಯಾಂಪಸ್, ಹೆರಿಟೇಜ್ ವಿಲೇಜ್, ತಾರಾಲಯ ಸೇರಿದಂತೆ ಪ್ರವಾಸಿಗರು ಇಷ್ಟಪಡುವ ಇನ್ನೂ ಅನೇಕ ತಾಣಗಳು ಇಲ್ಲಿವೆ. ಸ್ಥಳೀಯ ತಿನಿಸುಗಳಲ್ಲಿ ರುಚಿಕರವಾದ ಬೀದಿ ಆಹಾರವನ್ನು ಇಲ್ಲಿ ಸವಿಯಬಹುದು.


ಪಡುಕೆರೆ ಬೀಚ್

ಪಡುಕೆರೆ ಬೀಚ್‌ನಲ್ಲಿ ನಗರದ ಜೀವನದ ಜಂಜಾಟದಿಂದ ದೂರವಾಗಿ ಪ್ರಶಾಂತ ಸಮುದ್ರ ತೀರದಲ್ಲಿ ಸುತ್ತಾಡಬಹುದು. ಕಡಲ ತೀರವಾಸಿಗಳ ಜನ ಜೀವನವನ್ನು ಕಾಣಬಹುದು. ಶಾಂತವಾದ ವಾತಾವರಣ ಮತ್ತು ವಿಹಂಗಮ ನೋಟಗಳಿಗೆ ಹೆಸರುವಾಸಿಯಾದ ಪ್ರಶಾಂತ ಕರಾವಳಿ ಇದನ್ನು ಸ್ವರ್ಗ ಮಾಡಿದೆ.


ಆನೆಗುಡ್ಡೆ ವಿನಾಯಕ ದೇವಸ್ಥಾನ

ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಗಣಪತಿಗೆ ಪೂಜೆ ಸಲ್ಲಿಸಿ. ಹಚ್ಚ ಹಸಿರಿನ ಬೆಟ್ಟಗಳ ನಡುವೆ ನೆಲೆಸಿರುವ ಈ ಪವಿತ್ರ ಕ್ಷೇತ್ರದಲ್ಲಿ ದೇವಾಲಯದ ಸಂಕೀರ್ಣ ವಾಸ್ತುಶೈಲಿಯನ್ನು ಗಮನಿಸಿ. ಹತ್ತಿರದಲ್ಲೇ ಇರುವ ನೀರಿನ ನಡುವೆ ನೆಲೆಯಾಗಿರುವ ಈಶ್ವರ ದೇವಾಲಯಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬೇಡಿ.


ಕೂಡ್ಲು ಜಲಪಾತ

ಪಶ್ಚಿಮ ಘಟ್ಟಗಳಲ್ಲಿ ಅಡಗಿರುವ ಗುಪ್ತ ರತ್ನವಾದ ಕೂಡ್ಲು ಜಲಪಾತವನ್ನು ತಲುಪಲು ಹಸಿರು ಕಾಡುಗಳ ಮೂಲಕ ರಮಣೀಯವಾದ ಚಾರಣವನ್ನು ಪ್ರಾರಂಭಿಸಿ. ಹಸಿರು ಎಲೆಗಳು ಮತ್ತು ಚಿಲಿಪಿಲಿ ಹಕ್ಕಿಗಳಿಂದ ಸುತ್ತುವರೆದಿರುವ ನೀರಿನ ಸೌಂದರ್ಯ ನಿಮ್ಮ ತನುಮನವನ್ನು ತಣಿಸುವ ಅನುಭವ ಕೊಡುವುದು.


ಕಾಪು ಬೀಚ್

ಕಾಪು ಬೀಚ್‌ನ ಪ್ರಶಾಂತ ತೀರದಲ್ಲಿ ಪ್ರಾಚೀನ ಮರಳುಗಳು ಅರೇಬಿಯನ್ ಸಮುದ್ರದ ಶಾಂತ ಅಲೆಗಳನ್ನು ಸಂಧಿಸುತ್ತವೆ. ಸ್ನೇಹಿತರೊಂದಿಗೆ ವಿರಾಮದ ಪಿಕ್ನಿಕ್ ಅನ್ನು ಇಲ್ಲಿ ಆನಂದಿಸಬಹುದು. ಕಡಲತೀರದ ಮೇಲೆ ಮರಳು ಕೋಟೆಗಳನ್ನು ನಿರ್ಮಿಸಿ ಮತ್ತು ಕರಾವಳಿಯ ಉದ್ದಕ್ಕೂ ಇರುವ ಸ್ಥಳೀಯ ತಿನಿಸುಗಳಲ್ಲಿ ತಾಜಾ ಸಮುದ್ರಾಹಾರ ಭಕ್ಷ್ಯಗಳನ್ನು ಸವಿಯಬಹುದು.


ಅಂಬಲಪಾಡಿ ಮಹಾಕಾಳಿ ದೇವಸ್ಥಾನ

ದೈವಿಕ ಸೆಳವು ಕೊಡುವ ಅಂಬಲಪಾಡಿ ಮಹಾಕಾಳಿ ದೇವಾಲಯ ಸಾಕಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುವುದು. ದೇವಾಲಯದ ವಾಸ್ತುಶಿಲ್ಪದ ಭವ್ಯತೆಗೆ ಸಾಕ್ಷಿಯಾಗಿದೆ. ಇಲ್ಲಿನ ಉತ್ಸವಗಳು ರೋಮಾಂಚನ ಉಂಟು ಮಾಡುತ್ತದೆ.


ಇದನ್ನೂ ಓದಿ: Mangalore Tour: ಮಂಗಳೂರಿಗೆ ಬಂದರೆ ಈ ಸ್ಥಳಗಳಿಗೆ ಭೇಟಿ ಕೊಡಲು ಮರೆಯದಿರಿ

ಉಡುಪಿ ಪಾರಂಪರಿಕ ಗ್ರಾಮ

ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ ಸಾಂಸ್ಕೃತಿಕ ಎನ್‌ಕ್ಲೇವ್ ಉಡುಪಿ ಹೆರಿಟೇಜ್ ವಿಲೇಜ್‌ ಗೆ ಭೇಟಿ ನೀಡಲು ಸಮಯ ಮೀಸಲಿಡಿ. ಪಾರಂಪರಿಕ ಮನೆಗಳಿಂದ ಕೂಡಿದ ವಿಲಕ್ಷಣ ಬೀದಿಗಳಲ್ಲಿ ಸ್ಥಳೀಯ ಕುಶಲಕರ್ಮಿಗಳ ಕಾರ್ಯಾಗಾರಗಳನ್ನು ಕಾಣಬಹುದು.

Continue Reading

ಶಿವಮೊಗ್ಗ

Shivamogga News: ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು

Shivamogga News: ಸೊರಬ ತಾಲೂಕಿನ ಚಂದ್ರಗುತ್ತಿಯ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಆಗೀ ಹುಣ್ಣಿಮೆಯ ಪ್ರಯುಕ್ತ ಗುರುವಾರ ಸಾವಿರಾರು ಭಕ್ತರು ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು.

VISTARANEWS.COM


on

Agee hunnime Thousands of devotees have darshan of Shri Renukamba Devi of Chandragutti
Koo

ಸೊರಬ: ತಾಲೂಕಿನ ಚಂದ್ರಗುತ್ತಿಯ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ (Chandragutti Shri Renukamba Devi temple) ಆಗೀ ಹುಣ್ಣಿಮೆಯ ಪ್ರಯುಕ್ತ ಗುರುವಾರ ಸಾವಿರಾರು ಭಕ್ತರು ಆಗಮಿಸಿ, ವಿಶೇಷ ಪೂಜೆ (Shivamogga News) ಸಲ್ಲಿಸಿದರು.

ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಹರಿಹರ, ಶಿಕಾರಿಪುರ, ಹಾನಗಲ್, ವಿಜಯಪುರ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಸೇರಿದಂತೆ ಉತ್ತರ ಕರ್ನಾಟಕ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀ ರೇಣುಕಾದೇವಿಯ ದರ್ಶನ ಪಡೆದು ಉಧೋ ಉಧೋ ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು.

ಇದನ್ನೂ ಓದಿ: Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌

ಹುಣ್ಣಿಮೆ ಹಿನ್ನೆಲೆ ದೇವಸ್ಥಾನದ ಆವರಣದಲ್ಲಿರುವ ಪರಿವಾರ ದೇವರುಗಳಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಭೈರಪ್ಪ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಿಯ ಹೆಸರಿನಲ್ಲಿ ಭಕ್ತರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿದರು. ಧಾರ್ಮಿಕ ಸೇವೆ, ಹರಕೆ ಸಲ್ಲಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರು ಕುಟುಂಬ ಸಮೇತರಾಗಿ ಸಹ ಭೋಜನ ಮಾಡುವ ದೃಶ್ಯವೂ ಕಂಡುಬಂದಿತು.

ಇದನ್ನೂ ಓದಿ: Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

ಪ್ರತಿ ಹುಣ್ಣಿಮೆ ಮತ್ತು ವಿಶೇಷ ದಿನಗಳಲ್ಲಿ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಶೀ ರೇಣುಕಾಂಬ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಆದರೆ ರಸ್ತೆ ಕಿರಿದಾದ ಕಾರಣ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸುಮಾರು 1 ಗಂಟೆ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಸ್ಥಳೀಯ ಜನಪ್ರತಿನಿಧಿಗಳು ಚಂದ್ರಗುತ್ತಿ ಮುಖ್ಯ ರಸ್ತೆಯನ್ನು ಅಗಲಿಕರಿಸಿ ವ್ಯವಸ್ಥಿತವಾದ ರಸ್ತೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Continue Reading

ಕೊಪ್ಪಳ

Koppala News: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ್ದ ಹುಲಗಿ ಕಟ್ಟೆಯ ಶಾಸನ ಪತ್ತೆ

Koppala News: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ್ದ ಹುಲಗಿ ಕಟ್ಟೆಯ ಶಾಸನವೊಂದು ಕೊಪ್ಪಳ ತಾಲೂಕಿನ ಹೊಳೆ ಮುದ್ಲಾಪುರದ ಬಳಿ ಪತ್ತೆಯಾಗಿದೆ. ಈ ಶಾಸನವು ತುಂಗಾಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಹುಲಗಿಯ ಅಣೆಕಟ್ಟೆಯ ಹೊಳೆ ಮುದ್ಲಾಪುರದ ಹತ್ತಿರದ ಅಣೆಕಟ್ಟಿನ ಪಕ್ಕದಲ್ಲಿ ಹುಟ್ಟುಬಂಡೆಯಲ್ಲಿದೆ.

VISTARANEWS.COM


on

an inscription of Hulagi Katte built during the Vijayanagara kings was discovered
Koo

ಕೊಪ್ಪಳ: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ್ದ ಹುಲಗಿ ಕಟ್ಟೆಯ ಶಾಸನವೊಂದು ತಾಲೂಕಿನ (Koppala News) ಹೊಳೆ ಮುದ್ಲಾಪುರದ ಬಳಿ ಪತ್ತೆಯಾಗಿದೆ.

ತಾಲೂಕಿನ ಹೊಳೆ ಮುದ್ಲಾಪುರದ ಬಳಿ ಹುಲಗಿ ಅಣೆಕಟ್ಟೆಯ ಹತ್ತಿರ ವಿಜಯನಗರ ಕಾಲುವೆ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮ, ವಿಜಯನಗರ ಕಾಲುವೆಗಳ ಆಧುನಿಕರಣ ಯೋಜನೆ ನಂ-1 ಮುನಿರಾಬಾದ್‌ನ ತುಂಗಾಭದ್ರ ಜಲಾಶಯ ವಿಭಾಗದವರು ಕಾಮಗಾರಿ ಕೈಗೊಳ್ಳುವಾಗ ಶಾಸನವು ಇರುವ ಬಗ್ಗೆ ಮಾಹಿತಿಯನ್ನು ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಗೆ ವಿಜಯನಗರ ಕಾಲುವೆ ಯೋಜನೆಯ ಸಂವಹನ ಮತ್ತು ದಾಖಲಾತಿ ತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ ತಿಳಿಸಿದ್ದರು. ಕಮಲಾಪುರ-ಹಂಪಿಯ ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ.ಆರ್.ಶೇಜೇಶ್ವರ ಹಾಗೂ ಪುರಾತತ್ವ ಇಲಾಖೆಯ ಸಹಾಯಕ ಡಾ.ಆರ್. ಮಂಜನಾಯ್ಕ ಅವರು ಕ್ಷೇತ್ರ ಕಾರ್ಯ ಕೈಗೊಂಡಾಗ ಅಲ್ಲಿ ಆರು ಸಾಲಿನ ವಿಜಯನಗರ ಅರಸರ ಕಾಲದ ಶಾಸನವು ಕಂಡುಬಂದಿದೆ.

ಇದನ್ನೂ ಓದಿ: Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

ಶಾಸನವು ತುಂಗಾಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಹುಲಗಿಯ ಅಣೆಕಟ್ಟೆಯ ಹೊಳೆ ಮುದ್ಲಾಪುರದ ಹತ್ತಿರದ ಅಣೆಕಟ್ಟಿನ ಪಕ್ಕದಲ್ಲಿ ಹುಟ್ಟುಬಂಡೆಯಲ್ಲಿದೆ. ಇದು 14 ಆಡಿ ಉದ್ದ ಹಾಗೂ 3 ಆಡಿ ಆಗಲವಾಗಿದ್ದು ಆರು ಸಾಲಿನ ಕನ್ನಡ ಶಾಸನವಾಗಿದೆ. ಈ ಶಾಸನವು ತುಂಗಾಭದ್ರ ನೀರಿನಿಂದ ಮುಳುಗಿರುತ್ತಿತ್ತು ಈ ವರ್ಷ ಮಳೆ ಕಡಿಮೆ ಇದ್ದರಿಂದ ಶಾಸನವು ಕಂಡು ಬಂದಿದೆ.‌

ಇದನ್ನೂ ಓದಿ: Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌

ಶಾಸನದ ಸಾರಾಂಶ

ವಿಜಯನಗರದ ಅರಸರ ಮಹಾಪ್ರಧಾನ ನಾಗಂಣದಂಣನಾಯಕನು ಮಲಿನಾಥದೇವರ ವಾಯುವ್ಯಕ್ಕೆ ಕಲಊರ ಎಂಬ ಸ್ಥಳದಲ್ಲಿ ತುಂಗಾಭದ್ರ ನದಿಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿಸುತ್ತಾರೆ. ಈ ಕಟ್ಟೆಗೆ ಹುಲಿಗಿಯಕಟ್ಟಿ ಎಂಬ ಉಲ್ಲೇಖವಿದೆ. ಇಲ್ಲಿಂದ ಒಂದು ಕಾಲುವೆಯನ್ನು ನಿರ್ಮಿಸಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಗೆ ನೀರನ್ನು ಕಾಲುವೆಯ ಮುಖಾಂತರ ನೀರನ್ನು ಹರಿಸಿರುವುದು ಈ ಶಾಸನದಿಂದ ತಿಳಿದುಬರುತ್ತದೆ. ಇದರಲ್ಲಿ ಕಾಲುವೆಯ ಉಲ್ಲೇಖವು ಸಹ ಇದೆ. ಶಾಸನವನ್ನು ಡಾ.ಜಗದೀಶ ಅಗಸಿಬಾಗಿಲ ಓದಿದ್ದು,ಈ ಶಾಸನದ ಕುರಿತು ಇಲಾಖೆಯಿಂದ ಹೆಚ್ಚಿನ ಅಧ್ಯಯನ ನಡೆಯುತ್ತಿದೆ ಎಂದು ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ.ಆರ್. ಶೇಜೇಶ್ವರ ತಿಳಿಸಿದ್ದಾರೆ.

Continue Reading

ಕರ್ನಾಟಕ

Mysore News: ಅಂತರ್ಜಾತಿ ವಿವಾಹ ಆಗುವ ಆಸೆ ಇತ್ತು, ಆದರೆ ಆ ಹುಡುಗಿ ಒಪ್ಪಲಿಲ್ಲ ಎಂದ ಸಿದ್ದರಾಮಯ್ಯ

Mysore News: ನನಗೂ ಅಂತರ್ಜಾತಿ ವಿವಾಹ ಆಗುವ ಆಸೆ ಇತ್ತು. ಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಹುಡುಗಿಯೂ ಒಪ್ಪಲಿಲ್ಲ, ಅವರ ಮನೆಯವರೂ ಒಪ್ಪಲಿಲ್ಲ ಎಂದು ತಮ್ಮ ಕಾಲೇಜು ದಿನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.

VISTARANEWS.COM


on

CM Siddaramaiah inaugurated the website of the inter caste marriage registration website in Mysore
Koo

ಮೈಸೂರು: ಅಂತರ್ಜಾತಿ ವಿವಾಹಗಳಿಂದ ಜಾತಿ ನಾಶ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Mysore News) ಅಭಿಪ್ರಾಯಪಟ್ಟರು. ನನಗೂ ಅಂತರ್ಜಾತಿ ವಿವಾಹ ಆಗುವ ಆಸೆ ಇತ್ತು. ಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಆ ಹುಡುಗಿ ಒಪ್ಪಲಿಲ್ಲ, ಅವರ ಮನೆಯವರೂ ಒಪ್ಪಲಿಲ್ಲ ಎಂದು ತಮ್ಮ ಕಾಲೇಜು ದಿನಗಳನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

ಮೈಸೂರಿನಲ್ಲಿ ಜನ ಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೇದಿಕೆಯ ವೆಬ್‌ಸೈಟ್ ಉದ್ಘಾಟಿಸಿ ಮಾತನಾಡಿದ ಅವರು, ಅಂತರ್ಜಾತಿ ವಿವಾಹಗಳ ಜತೆಗೆ ಮಹಿಳೆಯರಿಗೆ ಹಾಗೂ ಎಲ್ಲಾ ವರ್ಗದ ದುರ್ಬಲರಿಗೆ ಆರ್ಥಿಕ ಶಕ್ತಿ ಸಿಕ್ಕಾಗ ಸಮಾಜದಲ್ಲಿ ಚಲನೆಯುಂಟಾಗುತ್ತದೆ. ಸಮ ಸಮಾಜದ ಆಶಯ ಈಡೇರಲು, ಜಾತಿ ನಾಶವಾಗಲು ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ: Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌

ನಮ್ಮ ಸರ್ಕಾರ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ ಎಂದ ಅವರು, ಅಂಬೇಡ್ಕರ್ ಮತ್ತು ಕುವೆಂಪು ಅವರ ಆಶಯದಂತೆ ಸಮ ಸಮಾಜ ನಿರ್ಮಾಣ ಆಗಬೇಕಾದರೆ ಅಂತರ್ಜಾತಿ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

Continue Reading
Advertisement
WhatsApp AI
ತಂತ್ರಜ್ಞಾನ59 seconds ago

WhatsApp AI: WhatsAppಗೂ ಬಂತು ಎಐ; ನಿಮ್ಮ ಪ್ರೊಫೈಲ್‌ ಫೋಟೊ ಇನ್ನು AI ಜನರೇಟೆಡ್!‌

T20 world cup 2024
ಕ್ರೀಡೆ9 mins ago

T20 World Cup 2024 : ಭಾರತ ತಂಡ ವಿಶ್ವ ಕಪ್​ ಗೆಲ್ಲುವುದಿಲ್ಲ; ಇಂಗ್ಲೆಂಡ್​ ಮಾಜಿ ಆಟಗಾರನ ಭವಿಷ್ಯ

Udupi Tour
ಪ್ರವಾಸ11 mins ago

Udupi Tour: ಉಡುಪಿಗೆ ಹೋದಾಗ ನೀವು ನೋಡಲೇಬೇಕಾದ 10 ಸ್ಥಳಗಳಿವು

Agee hunnime Thousands of devotees have darshan of Shri Renukamba Devi of Chandragutti
ಶಿವಮೊಗ್ಗ15 mins ago

Shivamogga News: ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು

an inscription of Hulagi Katte built during the Vijayanagara kings was discovered
ಕೊಪ್ಪಳ16 mins ago

Koppala News: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ್ದ ಹುಲಗಿ ಕಟ್ಟೆಯ ಶಾಸನ ಪತ್ತೆ

CM Siddaramaiah inaugurated the website of the inter caste marriage registration website in Mysore
ಕರ್ನಾಟಕ18 mins ago

Mysore News: ಅಂತರ್ಜಾತಿ ವಿವಾಹ ಆಗುವ ಆಸೆ ಇತ್ತು, ಆದರೆ ಆ ಹುಡುಗಿ ಒಪ್ಪಲಿಲ್ಲ ಎಂದ ಸಿದ್ದರಾಮಯ್ಯ

COMEDK UGET 2024 Result Declared Tomorrow Afternoon How to view and download
ಶಿಕ್ಷಣ21 mins ago

COMEDK UGET 2024: ನಾಳೆ ಮಧ್ಯಾಹ್ನ ಕಾಮೆಡ್‌ – ಕೆ ಫಲಿತಾಂಶ ಪ್ರಕಟ; ವೀಕ್ಷಣೆ, ಡೌನ್‌ಲೋಡ್‌ ಮಾಡಿಕೊಳ್ಳೋದು ಹೇಗೆ?

IPL 2024
ಪ್ರಮುಖ ಸುದ್ದಿ52 mins ago

IPL 2024 : ಸಚಿನ್​, ಧೋನಿ, ರೋಹಿತ್​; ಒಂದೇ ಜಾಹೀರಾತಿನಲ್ಲಿ ಮೂರು ಪೀಳಿಗೆಯ ನಾಯಕರು; ಇಲ್ಲಿದೆ ವಿಡಿಯೊ

Share Market
ದೇಶ1 hour ago

Share Market: ಸೆನ್ಸೆಕ್ಸ್‌ ನೆಗೆತ, ನಿಫ್ಟಿ ಜಿಗಿತ; ಮೋದಿ ಭವಿಷ್ಯ ನಿಜವಾಗುತ್ತಾ? ಇಂದಿನ ಏರಿಕೆಗೆ ಕಾರಣಗಳು ಗೊತ್ತಾ?

IPL 2024
ಪ್ರಮುಖ ಸುದ್ದಿ1 hour ago

IPL 2024 : ಮಾಜಿ ನಾಯಕ ಶೇನ್​ ವಾರ್ನ್​ ದಾಖಲೆ ಸರಿಗಟ್ಟಿದ ಸಂಜು ಸ್ಯಾಮ್ಸನ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ17 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌