Assembly Session: ವಿಪಕ್ಷಕ್ಕೇ ವಿಪಕ್ಷವಾದ ಡೆಪ್ಯುಟಿ ಸ್ಪೀಕರ್: ಬಿ.ವೈ. ವಿಜಯೇಂದ್ರ ಮಾತಿನ ಸಮಯದಲ್ಲಿ‌ ಮಾತಿನ ಚಕಮಕಿ - Vistara News

ಕರ್ನಾಟಕ

Assembly Session: ವಿಪಕ್ಷಕ್ಕೇ ವಿಪಕ್ಷವಾದ ಡೆಪ್ಯುಟಿ ಸ್ಪೀಕರ್: ಬಿ.ವೈ. ವಿಜಯೇಂದ್ರ ಮಾತಿನ ಸಮಯದಲ್ಲಿ‌ ಮಾತಿನ ಚಕಮಕಿ

ಬಿ.ವೈ. ವಿಜಯೇಂದ್ರ ಅವರು ಅಪ್ಪನ ರೀತಿಯಲ್ಲೇ ಬಹಳ ಸಮರ್ಥವಾಗಿ ಮಾತನಾಡುತ್ತಿದ್ದಾರೆ. ಅವರನ್ನು ವಿಪಕ್ಷ ನಾಯಕನನ್ನಾಗಿ (Assembly Session) ಕೂರಿಸಿಬಿಡಿ ಎಂದು ಕಾಂಗ್ರೆಸ್‌ ಶಾಸಕ ನರೇಂದ್ರ ಸ್ವಾಮಿ ಸಲಹೆ ನೀಡಿದರು.

VISTARANEWS.COM


on

BY Vijayendra and Rudrappa Lamani
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಪೀಕರ್‌ ಕುರ್ಚಿಯಲ್ಲಿ ಕುಳಿತಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ವಿರೋಧ ಪಕ್ಷಕ್ಕೆ ವಿರೋಧ ಪಕ್ಷದವರಾಗಿ ಮಾತನಾಡಿದ್ದು ಬುಧವಾರ ವಿಧಾನಸಭೆಯಲ್ಲಿ (Assembly Session) ಬಿಜೆಪಿ ಸದಸ್ಯರನ್ನು ಅಚ್ಚರಿಗೊಳಿಸಿತು ಹಾಗೂ ಕೆರಳಿಸಿತು.

ರಾಜ್ಯಪಾಲರ ಭಾಷಣದ ಕುರಿತು ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್‌ ರಮೋದಿಯವರ ಸಾಧನೆ, 2014ರಿಂದ ದೇಶದಲ್ಲಿ ಆಗಿರುವ ಬದಲಾವಣೆಗಳ ಕುರಿತು ಹೆಚ್ಚು ಮಾಹಿತಿ ನೀಡುತ್ತಿದ್ದರು. ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ, ತಾವು ರಾಜ್ಯಪಾಲರ ಭಾಷಣದ ಕುರಿತು ಮಾತನಾಡುತ್ತಿದ್ದೀರೊ ಅಥವಾ ಕೇಂದ್ರ ಸರ್ಕಾರದ ಕುರಿತು ಮಾತನಾಡುತ್ತಿದ್ದೀರೋ ತಿಳಿಯುತ್ತಿಲ್ಲ ಎಂದರು.

ಈ ಸಮಯದಲ್ಲಿ ಬಿಜೆಪಿ ಸದಸ್ಯರು ಎದ್ದುನಿಂತು ಆಕ್ಷೇಪ ವ್ಯಕ್ತಪಡಿಸಿದರು. ಮೊದಲ ಬಾರಿಗೆ ಶಾಸಕರಾಗಿರುವವರಿಗೆ ಮಾತನಾಡಲು ಅವಕಾಶ ನೀಡಿ ಎಂದರು. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಸದಸ್ಯರನ್ನು ಸಮಾಧಾನಪಡಿಸುವುದು ಸಭಾಧ್ಯಕ್ಷರ ಸ್ಥಾನದಲ್ಲಿದ್ದವರು ಮಾಡುವ ಕೆಲಸ. ಆದರೆ ಅಚ್ಚರಿಯೆಂಬಂತೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು, ಕೇಂದ್ರ ಸರ್ಕಾರದ ಬಗ್ಗೆ ಹೇಗೂ ಮಾತನಾಡುತ್ತಿದ್ದೀರ. ಹಾಗೆಯೇ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆ ಎಂದೂ ಹೇಳಿದ್ದರು. ಅದನ್ನು ಏನು ಮಾಡಿದ್ದಾರೆ ಎಂಬ ಕುರಿತೂ ಹೇಳಿಬಿಡಿ ಎಂದರು.

ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಭಾಧ್ಯಕ್ಷ ಸ್ಥಾನದಲ್ಲಿದ್ದೇವೆ ಎನ್ನುವುದನ್ನು ಮರೆತು ಕಾಂಗ್ರೆಸ್‌ ಸದಸ್ಯರಂತೆ ಮಾತನಾಡುತ್ತಿದ್ದೀರ ಎಂದರು. ಈ ಸಮಯದಲ್ಲಿ ಮಾತು ಮುಂದುವರಿಸಿದ ವಿಜಯೇಂದ್ರ, ಬಜೆಟ್‌ ಸೇರಿದಂತೆ ಸದನದಲ್ಲಿ ಎಲ್ಲ ಸಮಯದಲ್ಲೂ ಕೇಂದ್ರ ಸರ್ಕಾರವನ್ನು ತೆಗಳುವ ಕೆಲಸ ಆಗುತ್ತಿದೆ. ವಿಪಕ್ಷ ಸದಸ್ಯನಾಗಿ ಹಾಗೂ ಬಿಜೆಪಿಯವನಾಗಿ ಈ ವಿಚಾರವನ್ನು ಹೇಳುವುದು ನನ್ನ ಕರ್ತವ್ಯ ಎಂದು ಮಾತು ಮುಂದುವರಿಸಿದರು.

ಮತ್ತೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು. ಕರೋನ ಮತ್ತು ಉಕ್ರೇನ್, ರಷ್ಯ ಮಹಾಯುದ್ಧದ ನಡುವೆಯೂ ದೇಶಕ್ಕೆ ಯಾವುದೇ ಸಮಸ್ಯೆ ಆಗದಂತೆ ಕರೋನ ವ್ಯಾಕ್ಸಿನೇಷನ್‌ ಮಾಡಿದರು. ದೇಶದ ರೈತರಿಗೆ ಸಬ್ಸಿಡಿ ದರದಲ್ಲಿ ಯೂರಿಯಾ ಕೊಡ್ತಿದ್ದಾರೆ. ಸ್ವಾತಂತ್ರ್ಯ ಬಂದ 75 ವರ್ಷದಲ್ಲಿ ಅತಿಹೆಚ್ಚು ಕಾಲ ಆಡಳಿತ ಮಾಡಿದ್ದು ಕಾಂಗ್ರೆಸ್. ಆದ್ರೆ ಇನ್ನೂ ಉಚಿತ ಗ್ಯಾರೆಂಟಿ ಕೊಡುವ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಯಾರು? ಎಂದರು. ಬಗರ್‌ಹುಕ್ಕುಂ ಸಮಸ್ಯೆ ಇನ್ನೂ ಇದೆ. ಮಲೆನಾಡಿನಲ್ಲಿ ಈ ಸಮಸ್ಯೆ ಇದ್ದು, ಮೂರು ತಲೆಮಾರಿನ ದಾಖಲೆ ನೀಡಿ ಎಂದು ಸರ್ಕಾರ ಕೇಳುತ್ತಿದೆ. ಈ ನಿಯಮದಲ್ಲಿ ಯಾರೂ ದಾಖಲೆ ತರಲು ಆಗುವುದಿಲ್ಲ ಎಂದರು.

ಇದನ್ನೂ ಓದಿ: Assembly Session: ಪ್ರಮಾಣ ವಚನ ಬಹಿಷ್ಕರಿಸಿದ್ದ ಶಾಸಕ ಈಗ ಡೆಪ್ಯುಟಿ ಸ್ಪೀಕರ್‌: ರುದ್ರಪ್ಪ ಲಮಾಣಿ ಅವಿರೋಧ ಆಯ್ಕೆ

ಈ ಸಮಯದಲ್ಲಿ ಮತ್ತೆ ಮಧ್ಯಪ್ರವೇಶಿಸಿದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು, ಅದನ್ನು ನಿಮ್ಮ ಸರ್ಕಾರವೇ ಮಾಡಬೇಕು. ಕೇಂದ್ರದಲ್ಲಿ ನಿಮ್ಮ ಸರ್ಕಾರವೇ ಇರುವುದರಿಂದ ಅದನ್ನು ಮಾಡಿಸಿಬಿಡಿ. ಇದರ ಸಮಸ್ಯೆಯೆ ಅರಿವು ನನಗೂ ಇದೆ ಎಂದರು. ಇದಕ್ಕೆ ಮತ್ತೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಉಪಸಭಾಧ್ಯಕ್ಷರು ಒಂದು ಪಕ್ಷದ ಪರವಾಗಿ ಮಾತನಾಡುತ್ತಿದ್ದಾರೆ ಎಂದರು.

ಮತ್ತೆ ಮಾತನಾಡಿದ ನರೇಂದ್ರ ಸ್ವಾಮಿ, ವಿಜಯೇಂದ್ರ ಅವರು ಅಪ್ಪನ ರೀತಿಯಲ್ಲೇ ಬಹಳ ಸಮರ್ಥವಾಗಿ ಮಾತನಾಡುತ್ತಿದ್ದಾರೆ. ಅವರನ್ನು ವಿಪಕ್ಷ ನಾಯಕನನ್ನಾಗಿ ಕೂರಿಸಿಬಿಡಿ, ನಾವು ಮಾತೇ ಆಡುವುದಿಲ್ಲ ಎಂದರು. ಇದನ್ನು ನಮ್ಮ ಪಕ್ಷ ನಿರ್ಧಾರ ಮಾಡುತ್ತದೆ ಎಂದು ಬಿಜೆಪಿ ಸದಸ್ಯರು ಹೇಳಿದರು.

ಮಾತು ಮುಂದುವರಿಸಿದ ವಿಜಯೇಂದ್ರ, ಕಾಂಗ್ರೆಸ್‌ ಪಕ್ಷವು ಕರ್ನಾಟಕವನ್ನು ಗೆದ್ದಿರಬಹುದು. ಆದರೆ ದೇಶವನ್ನು 2024ರಲ್ಲೂ ನರೇಂದ್ರ ಮೋದಿಯವರೇ ಗೆಲ್ಲಲಿದ್ದಾರೆ. ಅವರನ್ನು ಸುಖಾಸುಮ್ಮನೆ ಬೈಯುತ್ತಾ ಕೂರುವ ಬದಲಿಗೆ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆಯಿಡಿ. ರಾಜ್ಯಕ್ಕೆ ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಮಾಡಬೇಕು. ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎನ್ನುವಂತೆ ಐದು ಸುಳ್ಳು ಹೇಳಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಿದೆ. ಅದನ್ನು ಘೋಷಿಸಿದಂತೆ ಈಡೇರಿಸಿ ಎಂದು ತಿಳಿಸಿ ಮಾತು ಮುಗಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

ರಾಜಮಾರ್ಗ ಅಂಕಣ: ಅದು 1984ರಲ್ಲಿ ಮುಂಬೈಯಲ್ಲಿ ಜನ್ಮ ತಾಳಿದ ಮತ್ತು ಇಂದು ಭಾರತದ ನೂರಾರು ನಗರಗಳಿಗೆ ವಿಸ್ತರಿಸಿರುವ ಭಾರತದ ಟಾಪ್ ಮೋಸ್ಟ್ ಐಸ್ ಕ್ರೀಮ್ ಬ್ರಾಂಡ್ ಬೆಳೆದು ನಿಂತ ಕಥೆ ತುಂಬಾ ರೋಚಕ. ಅದರ ಹಿಂದಿರುವ ವಿಶನರಿ ಒಬ್ಬ ಹಣ್ಣಿನ ವ್ಯಾಪಾರಿಯ ಮಗ. ಅವರು ಮೂಲತಃ ಮುಲ್ಕಿಯವರು. ಹೆಸರು ರಘುನಂದನ್ ಶ್ರೀನಿವಾಸ್ ಕಾಮತ್.

VISTARANEWS.COM


on

natural ice cream 1 rajamarga coumn
Koo

ಮಂಗಳೂರಿನ ಒಬ್ಬ ಸಾಮಾನ್ಯ ಹಣ್ಣಿನ ವ್ಯಾಪಾರಿಯ ಮಗ 300 ಕೋಟಿ ರೂ. ವಾರ್ಷಿಕ ಆದಾಯದ ಕಂಪೆನಿಯನ್ನು ಕಟ್ಟಿದ ಕಥೆ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ʼನ್ಯಾಚುರಲ್ ಐಸ್ ಕ್ರೀಮ್’ (ಣಾಇಂದು ಯಾರಿಗೆ ಗೊತ್ತಿಲ್ಲ ಹೇಳಿ? ವೆನಿಲ್ಲಾ, ಸ್ಟ್ರಾಬೆರಿ, ಚಾಕೊಲೇಟ್ ಮೊದಲಾದ ಕೃತಕ ಫ್ಲೇವರಗಳ ಈ ಕಾಲದಲ್ಲಿ ತಾಜಾ ಹಣ್ಣುಗಳ ರುಚಿ ರುಚಿಯಾದ ತಿರುಳನ್ನು ಬೆರೆಸಿ ತಯಾರಿಸಿರುವ ಸ್ವಾದಿಷ್ಟವಾದ ಐಸ್ ಕ್ರೀಂ ಯಾರಿಗೆ ಇಷ್ಟ ಆಗೋದಿಲ್ಲ ಹೇಳಿ?

ಅದು 1984ರಲ್ಲಿ ಮುಂಬೈಯಲ್ಲಿ ಜನ್ಮ ತಾಳಿದ ಮತ್ತು ಇಂದು ಭಾರತದ ನೂರಾರು ನಗರಗಳಿಗೆ ವಿಸ್ತರಿಸಿರುವ ಭಾರತದ ಟಾಪ್ ಮೋಸ್ಟ್ ಐಸ್ ಕ್ರೀಮ್ ಬ್ರಾಂಡ್ ಬೆಳೆದು ನಿಂತ ಕಥೆ ತುಂಬಾ ರೋಚಕ. ಅದರ ಹಿಂದಿರುವ ವಿಶನರಿ ಒಬ್ಬ ಹಣ್ಣಿನ ವ್ಯಾಪಾರಿಯ ಮಗ. ಅವರು ಮೂಲತಃ ಮುಲ್ಕಿಯವರು. ಹೆಸರು ರಘುನಂದನ್ ಶ್ರೀನಿವಾಸ್ ಕಾಮತ್.

15ನೆಯ ವರ್ಷಕ್ಕೆ ಮುಂಬೈಗೆ ಹೊರಟರು

ಅವರ ತಂದೆ ಮೂಲ್ಕಿಯಲ್ಲಿ ಒಬ್ಬ ಸಣ್ಣ ಹಣ್ಣಿನ ವ್ಯಾಪಾರಿ ಆಗಿದ್ದರು. ಈ ಹುಡುಗ ರಘುನಂದನ್ ಕಾಮತ್ ಮನೆಯ ಏಳು ಮಂದಿ ಮಕ್ಕಳಲ್ಲಿ ಅತ್ಯಂತ ಕಿರಿಯರು. ಹುಟ್ಟಿದ್ದು 1954ರಲ್ಲಿ. ಮನೆಯಲ್ಲಿ ತೀವ್ರ ಬಡತನ ಇದ್ದ ಕಾರಣ ಶಿಕ್ಷಣ ಅರ್ಧಕ್ಕೆ ನಿಂತಿತು. ಅಪ್ಪನ ಜೊತೆ ಹೋಗಿ ಹಣ್ಣುಗಳನ್ನು ಕಿತ್ತು ತರುವುದು, ಒಳ್ಳೆಯ ಹಣ್ಣುಗಳನ್ನು ಆಯುವುದು ಅವರ ಕೆಲಸ. ಮುಂದೆ ಹಸಿವು ತಡೆಯಲು ಕಷ್ಟ ಆದಾಗ ಹದಿನೈದನೇ ವರ್ಷಕ್ಕೇ ಮುಂಬೈಗೆ ಪ್ರಯಾಣ ಬೆಳೆಸಿದರು.

ಅಲ್ಲಿ ಅವರ ಅಣ್ಣನ ಸಣ್ಣ ಹೋಟೆಲು ಇತ್ತು. ಅಲ್ಲಿ ಕೆಲಸ ಮಾಡುತ್ತ ರಘುನಂದನ್ ಹೋಟೆಲ್ ಕೆಲಸ ಕಲಿತರು. ಅಣ್ಣನ ಹೋಟೆಲಿನಲ್ಲಿ ವಿವಿಧ ಕಂಪೆನಿಯ ಐಸ್ ಕ್ರೀಮ್ ದೊರೆಯುತ್ತಿದ್ದವು. ಅವುಗಳೆಲ್ಲವೂ ಕೃತಕವಾದ ಫ್ಲೇವರ್ ಹೊಂದಿದ್ದವು. ನಾವ್ಯಾಕೆ ತಾಜಾ ಹಣ್ಣಿನ ತಿರುಳು ಇರುವ ಐಸ್ ಕ್ರೀಂ ಮಾಡಬಾರದು? ಎಂಬ ಯೋಚನೆಯು ಅವರ ಪುಟ್ಟ ಮೆದುಳಿಗೆ ಬಂದಿತು. ಅದನ್ನು ಅವರ ತನ್ನ ಅಣ್ಣನ ಜೊತೆಗೆ ಚರ್ಚೆ ಮಾಡಿದಾಗ ಅಣ್ಣ ರಿಸ್ಕ್ ತೆಗೆದುಕೊಳ್ಳಲು ಒಪ್ಪಲಿಲ್ಲ. ಬಂಡವಾಳ ಹಾಕೋದು ಸಾಧ್ಯವೇ ಇಲ್ಲ ಎಂದು ಬಿಟ್ಟರು. ಆದರೆ ರಘುನಂದನ್ ಕನಸು ಸಾಯಲೇ ಇಲ್ಲ.

1983ರಲ್ಲಿ ಜುಹೂನಲ್ಲಿ ಅವರ ಒಂದು ಸಣ್ಣ ಹೋಟೆಲು ಆರಂಭ ಮಾಡಿದರು.

ರಘುನಂದನ್ ಆರಂಭ ಮಾಡಿದ 200 ಚದರಡಿ ಜಾಗದ ಉಸಿರು ಕಟ್ಟುವ ಸಣ್ಣ ಹೋಟೆಲು ಅದು. ನಾಲ್ಕು ಜನ ಕೆಲಸದವರು. ಒಟ್ಟು ಆರು ಟೇಬಲಗಳು. ಪಾವ್ ಬಾಜಿ ಮತ್ತು ಕೆಲವೇ ಕೆಲವು ತಾಜಾ ಹಣ್ಣಿನ ಐಸ್ ಕ್ರೀಂ ತಯಾರಿಸಿ ಗ್ರಾಹಕರ ಮುಂದೆ ಅವರು ಇರಿಸಿದರು. ಆರಂಭದಲ್ಲಿ ಅನಾನಸು, ದ್ರಾಕ್ಷಿ, ಪಪ್ಪಾಯ, ಚಿಕ್ಕು, ಸೀಬೆ, ಮಾವು, ದಾಳಿಂಬೆ ಮೊದಲಾದ ಹಣ್ಣುಗಳ ಐಸ್ ಕ್ರೀಮ್ ರೆಡಿ ಆದವು.

ಮುಂಬೈಯ ಗ್ರಾಹಕರಿಗೆ ಈ ನ್ಯಾಚುರಲ್ ಐಸ್ ಕ್ರೀಂ ಭಾರೀ ಇಷ್ಟ ಆಯ್ತು. ಜನರು ಕ್ಯೂ ನಿಂತು ಐಸ್ ಕ್ರೀಮ್ ಚಪ್ಪರಿಸಿ ತಿಂದರು. ಜುಹೂ ನಗರದ ರಸ್ತೆಗಳಲ್ಲಿ ಇವರ ಕ್ರೀಮ್ ಪಾರ್ಲರ್ ಕಾರಣಕ್ಕೆ ಟ್ರಾಫಿಕ್ ಜಾಮ್ ಆಯಿತು! ಒಂದು ವರ್ಷ ಮುಗಿಯುವುದರ ಒಳಗೆ ಹತ್ತು ಹಣ್ಣಿನ ತಿರುಳು ಇರುವ ಐಸ್ ಕ್ರೀಮಗಳನ್ನು ಅವರು ರೆಡಿ ಮಾಡಿದ್ದರು. ಜನರಿಗೆ ತುಂಬಾ ತಾಜಾ ಆದ ಹಾಗೂ ಸ್ವಾದಿಷ್ಟತೆ ಇರುವ ಈ ಹಣ್ಣುಗಳ ಐಸ್ ಕ್ರೀಂ ರುಚಿ ತುಂಬಾನೇ ಇಷ್ಟ ಆಯ್ತು. ಕ್ರಮೇಣ ಪಾವ್ ಭಾಜಿ ನಿಲ್ಲಿಸಿ ಅವರು ಐಸ್ ಕ್ರೀಂ ಕಾರ್ನರ್ ಮಾತ್ರ ಮುಂದುವರೆಸಿದರು.

ನ್ಯಾಚುರಲ್ ಐಸ್ ಕ್ರೀಮ್ ಅಂದರೆ ರಾಜಿಯೇ ಇಲ್ಲದ ಗುಣಮಟ್ಟ ಮತ್ತು ಸ್ವಾದ

ರಘುನಂದನ್ ಕಾಮತ್ ಅವರ ದಣಿವರಿಯದ ಅದ್ಭುತ ಉತ್ಸಾಹ, ಸಂಶೋಧನಾ ಪ್ರವೃತ್ತಿ, ಗ್ರಾಹಕರ ಅಭಿರುಚಿ ರೀಡ್ ಮಾಡುವ ಕೌಶಲ ಮತ್ತು ಗುಣಮಟ್ಟ ಕಾಪಾಡುವ ಆಸ್ತೆ………ಇವುಗಳಿಂದ NATURALS ICE CREAM ಮುಂಬೈ ಮಹಾನಗರದ ಭಾರೀ ದೊಡ್ಡ ಬ್ರಾಂಡ್ ಆಗಿ ಬೆಳೆಯಲು ಹೆಚ್ಚು ವರ್ಷ ಬೇಕಾಗಲಿಲ್ಲ. Taste the original ಅನ್ನುವುದು ಅದರ ಟ್ಯಾಗ್ ಲೈನ್ ಆಗಿತ್ತು.

ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ಮುಂಬೈಯಲ್ಲಿ ಐದು ಸುಸಜ್ಜಿತ ಕ್ರೀಮ್ ಪಾರ್ಲರ್ ಉದ್ಘಾಟನೆ ಆದವು. ಪೇರಳೆ, ಸೀಯಾಳ, ಹಲಸಿನ ಹಣ್ಣು, ಮಸ್ಕ್ ಮೇಲನ್, ಕಲ್ಲಂಗಡಿ, ಮಾವಿನ ಹಣ್ಣು, ಲಿಚ್ಚಿ, ಫಿಗ್, ಸೀತಾ ಫಲ, ಜಾಮೂನ್, ತಾಳೆ ಹಣ್ಣು, ನೇರಳೆ ಹಣ್ಣುಗಳ ಐಸ್ ಕ್ರೀಂಗಳು ಭಾರೀ ಜನಪ್ರಿಯವಾದವು.

ಜಾಹೀರಾತಿಗೆ ವಿನಿಯೋಗ ಮಾಡಿದ್ದು 1% ದುಡ್ಡು ಮಾತ್ರ!

ಪಾರ್ಲರಗಳಲ್ಲಿ ಗ್ರಾಹಕರ ಅಭಿರುಚಿಗೆ ಅನುಗುಣವಾದ ವಾತಾವರಣವು ರೆಡಿ ಆಯ್ತು. ತರಬೇತು ಆದ ಸಿಬ್ಬಂದಿ ವರ್ಗ ಗ್ರಾಹಕರ ಸೇವೆಗೆ ಸಿದ್ಧವಾಯಿತು. ಗುಣಮಟ್ಟ ಮತ್ತು ಸ್ವಾದ ಚೆನ್ನಾಗಿದ್ದ ಕಾರಣ ಕಾಮತರು ಕೇವಲ ಒಂದು ಶೇಕಡಾ ವ್ಯಾಪಾರದ ದುಡ್ಡನ್ನು ಜಾಹೀರಾತಿಗೆ ಖರ್ಚು ಮಾಡಿದರು. ಅವರ ಐಸ್ ಕ್ರೀಮ್ ಗೆ ಅವರೇ ಬ್ರಾಂಡ್ ರಾಯಭಾರಿ ಆದರು. ಗ್ರಾಹಕರ ಬಾಯಿಂದ ಬಾಯಿಗೆ ತಲುಪುವ ಮೆಚ್ಚುಗೆಯ ಮಾತುಗಳೇ ಕಂಪೆನಿಗೆ ಜಾಹೀರಾತು ಆದವು. ಗ್ರಾಹಕರ ವಿಶ್ವಾಸವು ಹೆಚ್ಚಿದಂತೆ ಅವರ ಐಸ್ ಕ್ರೀಂ ಬಹಳ ದೊಡ್ಡ ಬ್ರಾಂಡ್ ಆಗಿ ಬೆಳೆಯಿತು.

ನಾವೀನ್ಯತೆ, ಸಂಶೋಧನೆ ಮತ್ತು ಬ್ರಾಂಡಿಂಗ್!

ಮುಂದೆ ದೂರದ ಊರುಗಳಿಂದ ಬೇಡಿಕೆ ಬಂದಾಗ ಐಸ್ ಕ್ರೀಂ ಸಾಗಾಟವು ತೊಂದರೆ ಆಯಿತು. ಆಗ ಕಾಮತರು ವಿಶೇಷವಾದ ಥರ್ಮೋಕೊಲ್ ಪ್ಯಾಕೇಜಿಂಗ್ ಇಂಡಸ್ಟ್ರಿ ಆರಂಭ ಮಾಡಿದರು. ಅದರಿಂದ ಐಸ್ ಕ್ರೀಮನ್ನು ದೀರ್ಘ ಕಾಲಕ್ಕೆ ಕಾಪಿಡಲು ಸಾಧ್ಯ ಆಯ್ತು. ರಘುನಂದನ್ ಕಾಮತ್ ಅವರ ಉತ್ಸಾಹಕ್ಕೆ ಎಣೆಯೇ ಇರಲಿಲ್ಲ. ಅವರು ಶುದ್ಧವಾದ ಹಾಲು, ಫಾರ್ಮ್ ಫ್ರೆಶ್ ತೋಟದ ಹಣ್ಣುಗಳು ಇಡೀ ವರ್ಷ ದೊರೆಯುವಂತೆ ಮಾಡಿದರು. ಕೆಲವೇ ಕೆಲವು ಸೀಸನಲ್ ಹಣ್ಣುಗಳ ಐಸ್ ಕ್ರೀಮ್ ಕೂಡ ಸಿದ್ಧವಾಯಿತು. ಎಲ್ಲಾ ಹಣ್ಣುಗಳನ್ನು ಅವರು ರೈತರಿಂದ ನೇರ ಖರೀದಿ ಮಾಡಿದರು. ಇದೆಲ್ಲದರ ಫಲವಾಗಿ ನ್ಯಾಚುರಲ್ ಐಸ್ ಕ್ರೀಂ ಕಂಪೆನಿಯು ಮುಂಬೈ ಮಹಾನಗರದ ಹೊರಗೆ ತನ್ನ ಶಾಖೆಗಳನ್ನು ತೆರೆಯಿತು. ಫ್ರಾಂಚೈಸಿಗಳಿಗೆ ಭಾರೀ ಬೇಡಿಕೆ ಬಂದಿತು.

ನ್ಯಾಚುರಲ್ ಐಸ್ ಕ್ರೀಂ ಬ್ರಾಂಡಿನ ಸೀಮೋಲ್ಲಂಘನ!

2015ರ ಹೊತ್ತಿಗೆ ಕಂಪೆನಿಯು 125 ಹಣ್ಣುಗಳ ತಿರುಳು ಇರುವ ಐಸ್ ಕ್ರೀಮ್ ರೆಡಿ ಮಾಡಿತು. ನೂರು ಕೋಟಿ ಟರ್ನ್ ಓವರ್ ದಾಖಲು ಮಾಡಿತು. ಭಾರತದ ನೂರಾರು ನಗರಗಳನ್ನು ತಲುಪಿತು. ಕೋಟಿ ಕೋಟಿ ಗ್ರಾಹಕರ ನಾಲಗೆಯಲ್ಲಿ ಸ್ವಾದದ ಸಿಗ್ನೇಚರ್ ಮಾಡಿ ಜನಪ್ರಿಯ ಆಯಿತು. 2020ರ ಹೊತ್ತಿಗೆ ಕಂಪೆನಿಯು ವಾರ್ಷಿಕ 330 ಕೋಟಿ ಟರ್ನ್ ಓವರ್ ದಾಖಲಿಸಿ ಭಾರೀ ದೊಡ್ಡ ದಾಖಲೆಯನ್ನು ಮಾಡಿತು. ಒಮ್ಮೆ 2009ರಲ್ಲಿ 3000 ಕಿಲೋಗ್ರಾಂ ತೂಗುವ ಒಂದೇ ಫ್ಲೇವರ್ ಇರುವ ಕ್ರೀಮ್ ಸ್ಲಾಬ್ ರೆಡಿ ಮಾಡಿ ಲಿಮ್ಕಾ ದಾಖಲೆ ಕೂಡ ಬರೆಯಿತು. ಅವರ ಸೌತೆಕಾಯೀ ತಿರುಳಿನ ಐಸ್ ಕ್ರೀಂ ರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆಯಿತು.

ಈಗ ನ್ಯಾಚುರಲ್ ಐಸ್ ಕ್ರೀಂಗೆ ಸ್ಪರ್ಧೆಯೇ ಇಲ್ಲ!

ಈಗ ರಘುನಂದನ್ ಕಾಮತ್ ಅವರ ಮಗ ಸಿದ್ಧಾಂತ ಕಾಮತ್ ಅಪ್ಪನ ಉದ್ಯಮದಲ್ಲಿ ಕೈ ಜೋಡಿಸಿದ್ದಾರೆ. ಭಾರತದ 150 ಮಹಾನಗರಗಳಲ್ಲಿ ಇಂದು ನ್ಯಾಚುರಲ್ ಐಸ್ ಕ್ರೀಮಿನ ಔಟ್ ಲೆಟ್ ಇವೆ. ಹನ್ನೊಂದು ರಾಜ್ಯಗಳ ಮಾರ್ಕೆಟ್ ಗೆದ್ದು ಆಗಿದೆ. ನೂರಾ ಹತ್ತೊಂಬತ್ತು ಫ್ರಾಂಚೈಸಿ ಸ್ಟೋರ್ ಇವೆ. ವಿದೇಶದ ನಗರಗಳಿಗೆ ನ್ಯಾಚುರಲ್ ಐಸ್ ಕ್ರೀಂ ತಲುಪಿಸುವ ಪ್ರಯತ್ನಗಳು ಆರಂಭ ಆಗಿವೆ. ಇಂದು ನ್ಯಾಚುರಲ್ ಐಸ್ ಕ್ರೀಂ ಭಾರತದ ಟಾಪ್ 3 ಫ್ಲೇವರಗಳಲ್ಲಿ ಸ್ಥಾನ ಪಡೆದಿದೆ! ಅದರ ಹಿಂದೆ ರಘುನಂದನ್ ಕಾಮತ್ ಎಂಬ ಉದ್ಯಮಿಯ ಪರಿಶ್ರಮ ಮತ್ತು ದುಡಿಮೆ ಇವೆ.

ಸಜ್ಜನಿಕೆಯ ಸಾಕಾರ ಮೂರ್ತಿ ಅವರು.

ಅಂತಹ ರಘುನಂದನ್ ಕಾಮತ್ ಅವರನ್ನು ಒಂದು ಸಮ್ಮೇಳನದಲ್ಲಿ ನಾನು ಭೇಟಿ ಮಾಡಿದ್ದೆ. ಅಂದು ಅವರು ಹೇಳಿದ ಮಾತು ನನಗೆ ಅದ್ಭುತವಾದ ಸ್ಫೂರ್ತಿ ನೀಡಿತ್ತು.

‘ವೆನಿಲ್ಲಾ, ಸ್ಟ್ರಾಬೆರಿ, ಚಾಕೊಲೇಟ್ ಮೊದಲಾದ ಕೃತಕ ಫ್ಲೇವರ್ ರೆಡಿ ಮಾಡಲು ನಾನು ಹೊರಟಿದ್ದರೆ ಇಷ್ಟೆಲ್ಲ ಕಷ್ಟ ಪಡುವ ಅಗತ್ಯವೇ ಇರಲಿಲ್ಲ. ಗ್ರಾಹಕರಿಗೆ ತಾಜಾ ಹಣ್ಣುಗಳ ಸ್ವಾದವನ್ನು ಐಸ್ ಕ್ರೀಂ ಮಾಧ್ಯಮದ ಮೂಲಕ ನೀಡಬೇಕು ಎಂಬುದು ನನ್ನ ಬಯಕೆ ಆಗಿತ್ತು. ಜನರಿಗೂ ಅದು ಇಷ್ಟ ಆಯ್ತು. ಇದು ನನ್ನ ಸಾಧನೆ ಏನೂ ಇಲ್ಲ. ನಾನು ನಂಬಿರುವ ದೇವರು ನನ್ನ ಕೈಯನ್ನು ಹಿಡಿದು ಮುನ್ನಡೆಸುತ್ತಿದ್ದಾರೆ’ ಎಂದಿದ್ದರು.

ಅಂತಹ ಕಾಮತರು ನಿನ್ನೆ ಮುಂಬೈಯಲ್ಲಿ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸು. ಸೊನ್ನೆಯಿಂದ ಉದ್ಯಮದ ಮಹಾ ಸಾಮ್ರಾಜ್ಯವನ್ನು ಕಟ್ಟಿದ ಆ ಚೇತನಕ್ಕೆ ನಮ್ಮ ಶ್ರದ್ಧಾಂಜಲಿ ಇರಲಿ.

ಭರತ ವಾಕ್ಯ

ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಹೆಚ್ಚಿನ ನಗರಗಳಲ್ಲಿ ನ್ಯಾಚುರಲ್ ಐಸ್ ಕ್ರೀಂ ಔಟ್‌ಲೆಟ್‌ಗಳಿವೆ. ಒಮ್ಮೆ ಭೇಟಿ ಕೊಡಿ ಮತ್ತು ತೋಟದ ಹಣ್ಣುಗಳ ಫ್ರೆಶ್ ರುಚಿ ಇರುವ ಐಸ್ ಕ್ರೀಂ ನೀವು ಸವಿದು ಇಷ್ಟಪಟ್ಟರೆ ನಮ್ಮ ರಘುನಂದನ್ ಕಾಮತ್ ಅವರಿಗೊಂದು ಶ್ರದ್ಧಾಂಜಲಿ ಹೇಳಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತದಲ್ಲಿ ಕಡ್ಡಾಯ ಮತದಾನ ಕಾನೂನು ಯಾಕೆ ಸಾಧ್ಯವಿಲ್ಲ?

Continue Reading

ಶ್ರದ್ಧಾಂಜಲಿ

Raghunandan Kamath: ʼನ್ಯಾಚುರಲ್ಸ್‌ʼ ಖ್ಯಾತಿಯ ʼಐಸ್‌ಕ್ರೀಂ ಮ್ಯಾನ್‌ʼ ರಘುನಂದನ ಕಾಮತ್‌ ಇನ್ನಿಲ್ಲ

Raghunandan Kamath: ರಘುನಂದನ್ ಅವರ ನ್ಯಾಚುರಲ್ ಐಸ್ಕ್ರೀಂ 135ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿದೆ. ವಾರ್ಷಿಕವಾಗಿ 400 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತಿದೆ. ಇವರ ಕಂಪನಿ ದೇಶದ ಟಾಪ್ 10 ಕಂಪನಿಗಳಲ್ಲಿ ಒಂದಾಗಿದೆ.

VISTARANEWS.COM


on

naturals ic cream raghunandan kamath
Koo

ಮುಂಬಯಿ: ಜನಪ್ರಿಯ ನ್ಯಾಚುರಲ್ಸ್ ಬ್ರಾಂಡ್‌ ಐಸ್‌ಕ್ರೀಂ (Naturals Ice cream) ಔಟ್‌ಲೆಟ್‌ಗಳನ್ನು ದೇಶಾದ್ಯಂತ ಸ್ಥಾಪಿಸಿ ಖ್ಯಾತಿ ಗಳಿಸಿ ʼದೇಶದ ಐಸ್‌ಕ್ರೀಂ ಮ್ಯಾನ್ʼ (India’s Ice cream man) ಎಂದೇ ಖ್ಯಾತಿ ಪಡೆದಿದ್ದ ಕರ್ನಾಟಕದ ಮಂಗಳೂರು ಮೂಲದ ರಘುನಂದನ್ ಕಾಮತ್ (75) (Raghunandan Kamath) ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

ಇವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಪತ್ನಿ, ಪುತ್ರರನ್ನು ಅಗಲಿದ್ದಾರೆ.

ಮೂಲ್ಕಿಯಲ್ಲಿ ಜನಿಸಿದ್ದ ರಘುನಂದನ್ ಅವರು ತಮ್ಮ ತಂದೆಯಿಂದ ಹಣ್ಣಿನ ವ್ಯಾಪಾರ ಹಾಗೂ ವಿವಿಧ ಹಣ್ಣುಗಳ ವಿಶಿಷ್ಟತೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಅದನ್ನು ವಿಶಿಷ್ಟ ರೀತಿಯಲ್ಲಿ ಐಸ್‌ಕ್ರೀಂನಲ್ಲಿ ಪ್ರಯೋಗಿಸಿದರು. ಇವರು ತಮ್ಮ 14ನೇ ವಯಸ್ಸಿನಲ್ಲಿ ಶಾಲೆ ತೊರೆದು ಮುಂಬೈಗೆ ತೆರಳಿ ಅಲ್ಲಿ ಸೋದರರ ಹೋಟೆಲ್‌ನಲ್ಲಿ ಕೆಲಸ ಆರಂಭಿಸಿದ್ದರು. ಬಳಿಕ 1984ರಲ್ಲಿ ನ್ಯಾಚುರಲ್ ಐಸ್‌ಕ್ರೀಂ ಎಂಬ ಸಂಸ್ಥೆಯನ್ನು ಕೇವಲ 4 ಸಿಬ್ಬಂದಿಯೊಂದಿಗೆ ಆರಂಭಿಸಿದರು.

ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪಾವ್ ಭಾಜಿ ಜೊತೆ ಐಸ್‌ಕ್ರೀಂ ಕೊಡಲು ಆರಂಭಿಸಿದರು. ಇದಾದ ಕೆಲವೇ ದಿನಗಳಲ್ಲಿ ಇವರ ಐಸ್‌ಕ್ರೀಂ ಜನಪ್ರಿಯತೆ ಹೆಚ್ಚಾಗಿ, ಮಾರುಕಟ್ಟೆಯಲ್ಲಿ ನ್ಯಾಚುರಲ್‌ ಐಸ್ಕ್ರೀಂ ರಾರಾಜಿಸಲು ಆರಂಭಿಸಿತು. ಇದಾದ ಮೊದಲ ವಾರದಲ್ಲಿಯೇ ಮುಂಬಯಿಯ ಜುಹೂದಲ್ಲಿದ್ದ ಅಂಗಡಿ ಒಂದೇ ವರ್ಷದಲ್ಲಿ 5 ಲಕ್ಷ ರೂ. ವಹಿವಾಟು ದಾಖಲಿಸಿತು. ಪ್ರಸ್ತುತ ರಘುನಂದನ್ ಅವರ ನ್ಯಾಚುರಲ್ ಐಸ್ಕ್ರೀಂ 135ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿದೆ. ವಾರ್ಷಿಕವಾಗಿ 400 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತಿದೆ. ಇವರ ಕಂಪನಿ ದೇಶದ ಟಾಪ್ 10 ಕಂಪನಿಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: HD Deve Gowda: ಈ ಅವಮಾನದಿಂದ ಪಾರು ಮಾಡು: 93ರ ಜನ್ಮದಿನಂದು ದೇವೇಗೌಡರ ಮೌನ ಪ್ರಾರ್ಥನೆ

Continue Reading

ಪ್ರಮುಖ ಸುದ್ದಿ

HD Deve Gowda: ಈ ಅವಮಾನದಿಂದ ಪಾರು ಮಾಡು: 93ರ ಜನ್ಮದಿನಂದು ದೇವೇಗೌಡರ ಮೌನ ಪ್ರಾರ್ಥನೆ

HD Deve Gowda: ಮೊಮ್ಮಗ ಪ್ರಜ್ವಲ್‌ ಪ್ರಕರಣ ತಂದಿಟ್ಟ ಸಂಕಷ್ಟದಿಂದ ನೊಂದಿರುವ ಗೌಡರು 92 ವರ್ಷದಲ್ಲಿ ಮೊದಲ ಬಾರಿಗೆ ಗಡ್ಡಧಾರಿಯಾಗಿದ್ದರು. ಇಂದು
ಜನ್ಮದಿನದ ನಿಮಿತ್ತ ಮತ್ತೆ ನೀಟ್‌ ಶೇವ್‌ ಮಾಡಿಕೊಂಡ ಗೌಡರು ಮುಂಜಾನೆ ಬೆಂಗಳೂರಿನ ಜೆಪಿ ನಗರ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರೆಳಿ ವಿಶೇಷ ಪೂಜೆ ಸಲ್ಲಿಸಿದರು.

VISTARANEWS.COM


on

hd deve gowda birthday
Koo

ಬೆಂಗಳೂರು: ದಣಿವರಿಯದ ನಾಯಕ, ರಾಜಕೀಯ ಭೀಷ್ಮ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು (HD Deve Gowda) ಇಂದು 93ರ ಹುಟ್ಟುಹಬ್ಬ (HD Deve Gowda birthday) ಆಚರಿಸಿಕೊಂಡಿದ್ದಾರೆ. ಆದರೆ ಸರಳವಾಗಿ ದೇವಾಲಯ ಭೇಟಿಯೊಂದಿಗೆ (Temple visit) ಆಚರಣೆ ಮುಗಿಸಿದ್ದು, ಯಾವುದೇ ಅದ್ಧೂರಿ ಸಂಭ್ರಮಾಚರಣೆಗೆ ತಡೆ ಹಾಕಿದ್ದಾರೆ. ಮೊಮ್ಮಗ (Prajwal Revanna Case) ನೀಡಿದ ಏಟಿನಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ ದೇವೇಗೌಡರು, ದೇವರ ಮುಂದೆ ಈ ಅವಮಾನದಿಂದ ಪಾರು ಮಾಡೆಂದು ಮೌನವಾಗಿ ಪ್ರಾರ್ಥಿಸಿದರು.

ಮೊಮ್ಮಗ ಪ್ರಜ್ವಲ್‌ ಪ್ರಕರಣ ತಂದಿಟ್ಟ ಸಂಕಷ್ಟದಿಂದ ನೊಂದಿರುವ ಗೌಡರು 92 ವರ್ಷದಲ್ಲಿ ಮೊದಲ ಬಾರಿಗೆ ಗಡ್ಡಧಾರಿಯಾಗಿದ್ದರು. ಇಂದು ಮನೆಯಿಂದ ಹೊರಗೆ ಬಂದು ದೇವಾಲಯಕ್ಕೆ ಹೊರಟ ಸಂದರ್ಭದಲ್ಲಿ ಮತ್ತೆ ನೀಟ್‌ ಶೇವ್‌ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ಅವರು ಬೆಂಗಳೂರಿನ ಜೆಪಿ ನಗರ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರೆಳಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಅವರು ಮತ್ತೆ ಮನೆ ಸೇರಿಕೊಂಡರು.

ಜನ್ಮದಿನವಾಗಿದ್ದರೂ ದೇವೇಗೌಡರ ನಿವಾಸದ ಮುಂದೆ ಇಂದು ಹಬ್ಬದ ವಾತಾವರಣ ಕಂಡುಬಂದಿಲ್ಲ. ಇಂದು ಯಾರನ್ನೂ ಭೇಟಿ ಆಗುವುದಿಲ್ಲ. ಇದ್ದಲ್ಲಿಂದಲೇ ಹಾರೈಸಿ ಎಂದು ದೇವೇಗೌಡರು ಸಂದೇಶ ರವಾನಿಸಿದ್ದಾರೆ. “ಇಂದು ನನ್ನ ಜನ್ಮ ದಿನ. ಮನೆ ಬಳಿ ಬಂದು ಯಾರೂ ಆಚರಣೆ ಮಾಡದಂತೆ ಮನವಿ ಮಾಡಿದ್ದೇನೆ. ಅವರು ಇದ್ದಲ್ಲಿಯೇ ಹಾರೈಸಿ ಎಂದು ಹೇಳಿದ್ದೇನೆ” ಎಂದಿದ್ದಾರೆ.

“ಪ್ರಜ್ವಲ್ ರೇವಣ್ಣ ಬಗ್ಗೆ, ರೇವಣ್ಣ ಪ್ರಕರಣ (HD Revanna Case) ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣ ಹೊರಗಡೆ ಹೋಗಿದ್ದಾರೆ. ರೇವಣ್ಣ ಪ್ರಕರಣದ ಜಾಮೀನು ಅರ್ಜಿ ಸೋಮವಾರ ವಿಚಾರಣೆ ಇದೆ. ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾನೂನಿನ ಪ್ರಕಾರ ಏನೇನು ಕ್ರಮ ಕೈಗೊಳ್ಳಬೇಕೊ ಅದನ್ನು ತೆಗೆದುಕೊಳ್ಳುವಂತೆ ಕುಮಾರಸ್ವಾಮಿಯವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಬಹಳ ಜನ ಇದ್ದಾರೆ. ಇದರಲ್ಲಿ ಯಾರೇ ಇದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ ಎಂದಿದ್ದಾರೆ. ಆ ಘಟನೆ ಬಗ್ಗೆ ಕುಮಾರಸ್ವಾಮಿಯವರು (HD Kumaraswamy) ಇಡೀ ನಮ್ಮ ಕುಟುಂಬದ ಪರವಾಗಿ ಮಾತನಾಡುತ್ತಾರೆ. ಕಾನೂನು ಏನಿದೆಯೋ ಆ ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ಕೈಗೊಳ್ಳಬೇಕೋ ಆ ಕ್ರಮ ಕೈಗೊಳ್ಳೋದು ಸರ್ಕಾರದ ಜವಾಬ್ದಾರಿ ಅಂತ ಹೇಳಿದ್ದಾರೆ. ನಾನು ಅದನ್ನು ಪುನರುಚ್ಚರಿಸುತ್ತೇನೆ” ಎಂದು ದೇವೇಗೌಡರು ಹೇಳಿದರು.

ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ದೇವರಾಜೇಗೌಡ 100 ಕೋಟಿ ರೂ. ಆಫರ್ ಆರೋಪದ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಅವರು, “ಇದೆಲ್ಲದಕ್ಕೂ ಕುಮಾರಸ್ವಾಮಿಯವರು ಉತ್ತರ ಕೊಟ್ಟಿದ್ದಾರೆ. ನಾನು ಅದರ ಬಗ್ಗೆ ಮಾತನಾಡೊಲ್ಲ. ಕುಮಾರ ಸ್ವಾಮಿಯವರು ಎಲ್ಲ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಹೋರಾಟದ ಛಲ ಇದೆ. ಹೀಗಾಗಿ ಅವರು ಎಲ್ಲ ವಿಚಾರವನ್ನೂ ಹೇಳ್ತಾರೆ. ಜೂನ್ 4ರ ನಂತರ ನಾನು ಮಾಧ್ಯಮಗಳ ಮುಂದೆ ಮಾತಾಡ್ತೀನಿ. ಅಲ್ಲಿಯವರೆಗೂ ನಾನು ಯಾರ ಜೊತೆಯೂ ಮಾತನಾಡೊಲ್ಲ” ಎಂದಿದ್ದಾರೆ.

“ಇದರಲ್ಲಿ ಅನೇಕ ಜನ ಇದ್ದಾರೆ. ನಾನು ಅವರ್ಯಾರ ಹೆಸರನ್ನೂ ಹೇಳಲು ಹೋಗಲ್ಲ. ಈ ವಿಚಾರದಲ್ಲಿ ಯಾರ್ಯಾರು ಇದ್ದಾರೆ ಅವರೆಲ್ಲರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ನ್ಯಾಯ ಸಿಗಬೇಕು. ಯಾವ ಹೆಣ್ಣು ಮಕ್ಕಳು ಅಪಾಯಕ್ಕೆ ಸಿಕ್ಕಿದ್ದಾರೆ, ಅವರಿಗೆ ಪರಿಹಾರ ನೀಡಬೇಕು. ಈ ಎಲ್ಲ ವಿಚಾರಗಳನ್ನು ಕುಮಾರಸ್ವಾಮಿ ಬಿಡಿಸಿ ಬಿಡಿಸಿ ಹೇಳಿದ್ದಾರೆ. ಪ್ರಜ್ವಲ್ ಬಗ್ಗೆ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಯಾವ ತಕರಾರೂ ಇಲ್ಲ. ಆದರೆ ರೇವಣ್ಣ ಅವರ ಬಗ್ಗೆ ಮಾಡಿರುವುದು ರಾಜ್ಯದ ಜನತೆಗೆ ಗೊತ್ತಿದೆ. ಯಾವ ರೀತಿ ಕೇಸ್ ದಾಖಲು ಮಾಡಿದ್ದಾರೆ ಅಂತ ನೋಡಿ. ಒಂದು ಕೇಸ್, ಮೂರು ಬೇಲ್ ಕೊಟ್ಟಿದ್ದಾರೆ. ಇನ್ನೊಂದು ನಾಡಿದ್ದು ಜಡ್ಜ್‌ಮೆಂಟ್ ಇದೆ. ಅದು ಯಾವ ರೀತಿ ನಡೆಯಿತು ಅನ್ನೋದನ್ನ ನಾನು ವಿಶ್ಲೇಷಣೆ ಮಾಡಲ್ಲ” ಎಂದಿದ್ದಾರೆ.

ಇದು ರಾಜಕೀಯವಾಗಿ ದೇವೆಗೌಡರ ಕುಟುಂಬಕ್ಕೆ ಹಿನ್ನಡೆ ಉಂಟುಮಾಡುವ ಕೆಲಸವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಿಜ, ಒಟ್ಟಾರೆ ಏನು ನಡೆದಿದೆ, ದೇವರಾಜೇಗೌಡರ ಹೇಳಿಕೆಯಂತೆ, ಇದರಲ್ಲಿ ತುಂಬ ಜನ ಇದ್ದಾರೆ. ಬೇರೆ ಬೇರೆಯವರೆಲ್ಲ ಇದ್ದಾರೆ” ಎಂದಿದ್ದಾರೆ.

“ಇವತ್ತು ನನ್ನ 91 ವರ್ಷ ಮುಗಿಯಿತು. ನಾನು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ. ನಾನು ನನ್ನ ಅಭಿಮಾನಿಗಳಿಗೆ ಈ ವರ್ಷದ ಹುಟ್ಟುಹಬ್ಬದ ಆಚರಣೆ ಮಾಡಬಾರದು ಅಂತ ವಿನಂತಿಸಿದ್ದೇನೆ. ಅಭಿಮಾನಿಗಳು ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ. ರಾಜ್ಯದ ಎಲ್ಲ ಅಭಿಮಾನಿಗಳಿಗೆ ಶುಭ ಕೋರುತ್ತೇನೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್‌ ಕೇಸ್‌ನಲ್ಲಿ ಶಾಮೀಲಾಗಲು ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್; ದೇವರಾಜೇಗೌಡ ಆರೋಪ

Continue Reading

ಪ್ರಮುಖ ಸುದ್ದಿ

SSLC Exam- 2: ಜೂ.14ರಿಂದ 2ನೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

SSLC Exam- 2: ಈ ನಡುವೆ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಲಾಗಿದೆ. ಮೇ 15ರಿಂದ ಜೂನ್‌ 5ರವರೆಗೆ ವಿಶೇಷ ಪರಿಹಾರ ಬೋಧನೆ ತರಗತಿ ನಡೆಸಲು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಈಗ ಸರ್ಕಾರದ ಸೂಚನೆ ಮೇರೆಗೆ ದಿನಾಂಕವನ್ನು ಮುಂದೂಡಿರುವ ಪ್ರೌಢ ಶಿಕ್ಷಣ ಇಲಾಖೆ, ವಿಶೇಷ ತರಗತಿಗಳನ್ನು ಮೇ 29ರಿಂದ ಜೂನ್‌ 13ರವರೆಗೆ ನಡೆಸಲು ಆದೇಶ ನೀಡಿದೆ.

VISTARANEWS.COM


on

SSLC exam
Koo

ಬೆಂಗಳೂರು: ಫಲಿತಾಂಶ (SSLC Result) ಸುಧಾರಣೆ ಹಾಗೂ ಮಕ್ಕಳ ಅನುಕೂಲಕ್ಕಾಗಿ ತೆಗೆದುಕೊಂಡ ಹೊಸ ಉಪಕ್ರಮವಾದ ಎಸ್‌ಎಸ್ಎಲ್‌ಸಿ ಪರೀಕ್ಷೆ- 2 (SSLC Exam- 2) ಪರೀಕ್ಷೆ ಜೂನ್ 14ರಿಂದ ಆರಂಭವಾಗಲಿದೆ. ಪರಿಷ್ಕೃತ ವೇಳಾಪಟ್ಟಿಯನ್ನು (time table) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಈ ಕುರಿತು ಮಂಡಳಿ ಮಹತ್ವದ ಮಾಹಿತಿಯನ್ನು ನೀಡಿದೆ.

ಈ ನಡುವೆ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಲಾಗಿದೆ. ಮೇ 15ರಿಂದ ಜೂನ್‌ 5ರವರೆಗೆ ವಿಶೇಷ ಪರಿಹಾರ ಬೋಧನೆ ತರಗತಿ ನಡೆಸಲು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಈಗ ಸರ್ಕಾರದ ಸೂಚನೆ ಮೇರೆಗೆ ದಿನಾಂಕವನ್ನು ಮುಂದೂಡಿರುವ ಪ್ರೌಢ ಶಿಕ್ಷಣ ಇಲಾಖೆ, ವಿಶೇಷ ತರಗತಿಗಳನ್ನು ಮೇ 29ರಿಂದ ಜೂನ್‌ 13ರವರೆಗೆ ನಡೆಸಲು ಆದೇಶ ನೀಡಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖದಲ್ಲಿ 2024ರ ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾದ ಹಾಗೂ C ಮತ್ತು C+ ಪಡೆದ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-2ರಲ್ಲಿ ಉತ್ತೀರ್ಣರಾಗಲು ತಯಾರಿಗೊಳಿಸಲು ಆಯಾ ಶಾಲೆಯ ವಿಷಯ ಬೋಧನಾ ಶಿಕ್ಷಕರಿಂದ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ದಿನಾಂಕ 15.05.2024 ರಿಂದ ದಿನಾಂಕ:05.06.2024ರವರೆಗೆ ನಡೆಸಲು ಸುತ್ತೋಲೆ ಹೊರಡಿಸಲಾಗಿತ್ತು.

ಇದೀಗ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ಸರ್ಕಾರದ ಸೂಚನೆಗಳನ್ವಯ ಮುಂದೂಡಲಾಗಿದ್ದು, ಇವುಗಳನ್ನು ದಿನಾಂಕ: 29/05/2024 ರಿಂದ ದಿನಾಂಕ: 13/06/2024 ರವರೆಗೆ ನಡೆಸಲು ತಿಳಿಸಿದೆ. 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-02ನ್ನು ದಿನಾಂಕ: 14/06/2024 ರಿಂದ ಪ್ರಾರಂಭಿಸಲಾಗುವುದು. ಸದರಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಇವರು ಪ್ರತ್ಯೇಕವಾಗಿ ಹೊರಡಿಸುತ್ತಾರೆ.

ಯಾರನ್ನು ಕೇಳಿ ಶೇ. 20 ಗ್ರೇಸ್‌ ಮಾರ್ಕ್ಸ್‌ ಕೊಟ್ಟಿರಿ? ಶಿಕ್ಷಣ ಇಲಾಖೆ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ!

ಬೆಂಗಳೂರು: ಬರ ಪರಿಹಾರ, ಮುಂಗಾರು ಮಳೆ, ಬಿತ್ತನೆ ಬೀಜ, ರಸ ಗೊಬ್ಬರ ವಿತರಣೆ, ಶಿಕ್ಷಣ, ಕಾನೂನು ಸುವ್ಯವಸ್ಥೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲು ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ (CM Siddaramaiah), ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 20 ಗ್ರೇಸ್‌ ಮಾರ್ಕ್ಸ್‌ (SSLC Grace Marks) ಕೊಟ್ಟಿದ್ದಕ್ಕೆ ಗರಂ ಆಗಿದ್ದಾರೆ. ಯಾರನ್ನು ಕೇಳಿ ಹೆಚ್ಚುವರಿ ಅಂಕವನ್ನು ಕೊಟ್ಟಿರಿ? ಶಿಕ್ಷಣ ಗುಣಮಟ್ಟ ಕುಸಿದಿದ್ದು ಏಕೆ? ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು.

ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯ, ಎಸ್‌ಎಸ್‌ಎಲ್‌ಸಿಗೆ ಗ್ರೇಸ್‌ ಮಾರ್ಕ್ಸ್‌ ಕೊಟ್ಟಿರುವ ಬಗ್ಗೆ ತೀವ್ರ ಅಸಮಾಧಾನವನ್ನು ಹೊರಹಾಕಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಶೇಕಡಾ 20 ಮಾರ್ಕ್ಸ್‌ ಅನ್ನು ಏಕೆ ಕೊಟ್ಟಿರಿ? ಯಾರನ್ನು ಕೇಳಿ ಹೆಚ್ಚುವರಿ ಅಂಕ ಕೊಟ್ಟಿರಿ? ಹೀಗೆ ಅಂಕ ಕೊಡುವ ಅಗತ್ಯತೆ ಏನಿತ್ತು? ಶಿಕ್ಷಣದ ಗುಣಮಟ್ಟ ಕುಸಿದಿದ್ದೇಕೆ? ಎಂದು ಶಿಕ್ಷಣ ಇಲಾಖೆ ಕಾರ್ಯದರ್ಶಿ ಮೇಲೆ ಗರಂ ಆಗಿದ್ದಲ್ಲದೆ, ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದರು.

ಗ್ರೇಸ್‌ ಮಾರ್ಕ್ಸ್‌ ಮರು ಪರಿಶೀಲಿಸಿ

ಗ್ರೇಸ್ ಮಾರ್ಕ್ಸ್ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ತಜ್ಞರು ಸೇರಿ ಹಲವರಿಂದ ವಿರೋಧಗಳು ಕೇಳಿ ಬರುತ್ತಿವೆ. ಮೊದಲೇ ನಮ್ಮ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪಗಳು ಬರುತ್ತಿವೆ. ಅದರ ಮಧ್ಯೆ ಇದೂ ಒಂದು ಸೇರಿಕೊಂಡಿದೆ. ಗ್ರೇಸ್ ಮಾರ್ಕ್ಸ್ ಕೊಡುವುದು ಅವೈಜ್ಞಾನಿಕ ಎಂಬ ಬಗ್ಗೆ ಅಭಿಪ್ರಾಯಗಳು ಬರುತ್ತಿವೆ. ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಸ್‌ ಮಾರ್ಕ್ಸ್ ಕೊಡುವ ಬಗ್ಗೆ ಮರುಪರಿಶೀಲನೆ ಮಾಡಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಇದನ್ನೂ ಓದಿ: Prajwal Revanna Case: ವಕೀಲ ದೇವರಾಜೇಗೌಡರಿಗೆ ನ್ಯಾಯಾಂಗ ಬಂಧನ; ಪೊಲೀಸ್‌ ಕಸ್ಟಡಿ ಅಂತ್ಯ

ಮುಂದಿನ ವರ್ಷ ಹೀಗಿರುವುದಿಲ್ಲ

ಈ ವೇಳೆ ಸಚಿವ ಮಧು ಬಂಗಾರಪ್ಪ ಮಾತನಾಡಿ, ಎಸ್‌ಎಸ್‌ಎಲ್‌ಸಿಯಲ್ಲಿ ಯಾವಾಗಲೂ ಶೇಕಡಾ 5ರಷ್ಟು ಗ್ರೇಸ್‌ ಮಾರ್ಕ್ಸ್‌ ಇತ್ತು. ಕೋವಿಡ್ ವೇಳೆ ಅದನ್ನು ಶೇಕಡಾ 10ಕ್ಕೆ ಏರಿಕೆ ಮಾಡಲಾಗಿತ್ತು. ಈ ಬಾರಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಳಕ್ಕಾಗಿ ಶೇಕಡಾ 20ರಷ್ಟು ಗ್ರೇಸ್‌ ಮಾರ್ಕ್ಸ್‌ ಕೊಟ್ಟು ಪಾಸ್‌ ಮಾಡಿದೆವು. ಇದು ಈ ವರ್ಷಕ್ಕೆ ಮಾತ್ರವಾಗಿದೆ. ಮುಂದಿನ ವರ್ಷದಿಂದ ಇದು ಮುಂದುವರಿಯುವುದಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಅಲ್ಲದೆ, ಇನ್ನು 15 ದಿನಗಳಲ್ಲಿ ಅಧಿಕೃತ ಮತ್ತು ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದು ತಿಳಿಸಿದರು.

ಗ್ರೇಸ್‌ ಮಾರ್ಕ್ಸ್‌ ಕೊಟ್ಟಿದ್ದರಿಂದ 1.70 ಲಕ್ಷ ವಿದ್ಯಾರ್ಥಿಗಳು ಪಾಸ್!

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. 2022-23ರಲ್ಲಿ 83.89% ಇದ್ದರೆ, ಈ ಬಾರಿ 73.40% ಮಂದಿ ಪಾಸ್, ಶೇಕಡಾ 10.49 ರಷ್ಟು ಫಲಿತಾಂಶ ಕುಸಿತವಾಗಿದೆ. ಇದು ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌ ಅನ್ನು ಕೊಟ್ಟು ಒಟ್ಟಾರೆ 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳನ್ನು ಪಾಸ್‌ ಮಾಡಲಾಗಿದೆ.

ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದ್ದು, ಶೇಕಡಾ 20 ಗ್ರೇಸ್ ಮಾರ್ಕ್ಸ್‌ ಕೊಟ್ಟರೂ ಕಡಿಮೆ ಫಲಿತಾಂಶ ದಾಖಲಾಗಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಗಮನಿಸಿದಾಗ ಅಪಾರ ಸಂಖ್ಯೆಯಲ್ಲಿ ಅಂದರೆ ಕಳೆದ ಬಾರಿಗಿಂತ ಶೇಕಡಾ 30ರಷ್ಟು ಕುಸಿತವನ್ನು ಕಾಣಲಾಗಿತ್ತು. ಇದರಿಂದ ಚಿಂತೆಗೊಳಗಾದ ಶಿಕ್ಷಣ ಇಲಾಖೆಯು ಕೊನೆಗೆ ಪಾಸಿಂಗ್‌ ಮಾರ್ಕ್ಸ್‌ ಅನ್ನೇ ಕಡಿಮೆ ಮಾಡಿದೆ.

ಅಂದರೆ ಈ ವರೆಗೆ ಇದ್ದ ಪಾಸಿಂಗ್‌ ಮಾರ್ಕ್ಸ್‌ ಶೇಕಡಾ 35 ಅನ್ನು ಶೇಕಡಾ 25ಕ್ಕೆ ಇಳಿಸಿದೆ. ಅಂದರೆ 35 ಅಂಕಗಳ ಬದಲಿಗೆ 25 ಅಂಕವನ್ನು ಪಡೆದ ವಿದ್ಯಾರ್ಥಿಯೂ ಪಾಸ್‌ ಎಂದು ಮಾಡಲಾಗಿದೆ. ಅಲ್ಲದೆ, ಕೃಪಾಂಕದ ಪ್ರಮಾಣವನ್ನು ಶೇ. 10 ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಈ ಎರಡೂ ಕ್ರಮದಿಂದಾಗಿ ಒಟ್ಟಾರೆ 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಈ ಕ್ರಮದ ನಂತರ ಒಟ್ಟಾರೆ ಫಲಿತಾಂಶವು ಶೇಕಡಾ 73.40ರಷ್ಟಾಗಿದೆ. ಇಲ್ಲದಿದ್ದರೆ ಭಾರಿ ಪ್ರಮಾಣದಲ್ಲಿ ಮಕ್ಕಳು ಅನುತ್ತೀರ್ಣರಾಗುತ್ತಿದ್ದರು.

Continue Reading
Advertisement
Singer Suchitra makes shocking aligeations against shahrukh khan
ಬಾಲಿವುಡ್6 mins ago

Singer Suchitra: ಶಾರುಖ್ – ಕರಣ್ ಸಲಿಂಗಿಗಳು ಎಂದು ಹೇಳಿ ವಿವಾದ ಸೃಷ್ಟಿಸಿದ ತಮಿಳು ಗಾಯಕಿ!

Lok Sabha Election 2024
ವೈರಲ್ ನ್ಯೂಸ್16 mins ago

Lok Sabha Election 2024: ʼನನ್ನ ಸ್ಟೈಲು ಬೇರೇನೆ…ʼ; ಕತ್ತೆ ಮೂಲಕ ಪ್ರಚಾರ ನಡೆಸುವ ಅಭ್ಯರ್ಥಿಯ ಕಾರ್ಯ ವೈಖರಿ ಈಗ ವೈರಲ್‌

IPL 2024
ಕ್ರೀಡೆ18 mins ago

IPL 2024 : ಹಾರ್ದಿಕ್ ಪಾಂಡ್ಯಗೆ ನಿಷೇಧ ಹೇರಿದ ಬಿಸಿಸಿಐ; ಮುಂದಿನ ಪಂದ್ಯದಲ್ಲಿ ಆಡದಂತೆ ತಾಕೀತು

natural ice cream 1 rajamarga coumn
ಅಂಕಣ24 mins ago

ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

naturals ic cream raghunandan kamath
ಶ್ರದ್ಧಾಂಜಲಿ51 mins ago

Raghunandan Kamath: ʼನ್ಯಾಚುರಲ್ಸ್‌ʼ ಖ್ಯಾತಿಯ ʼಐಸ್‌ಕ್ರೀಂ ಮ್ಯಾನ್‌ʼ ರಘುನಂದನ ಕಾಮತ್‌ ಇನ್ನಿಲ್ಲ

IPL 2024
ಪ್ರಮುಖ ಸುದ್ದಿ55 mins ago

IPL 2024 : ಸಹ ಆಟಗಾರ ರೊಮಾರಿಯೊ ಶೆಫರ್ಡ್​ಗೆ ಆಟೋಗ್ರಾಫ್​ ಕೊಟ್ಟ ರೋಹಿತ್​ , ಚಿತ್ರಗಳು ಇಲ್ಲಿವೆ

Kajal Aggarwal Kannappa Movie Entry
ಟಾಲಿವುಡ್1 hour ago

Kajal Aggarwal: ವಿಷ್ಣು ಮಂಚು `ಕಣ್ಣಪ್ಪ’ ಚಿತ್ರಕ್ಕೆ ಕಾಜಲ್ ಅಗರ್​ವಾಲ್​​ ಎಂಟ್ರಿ; ಪಾತ್ರ ಏನಿರಬಹುದು?

White House
ವಿದೇಶ1 hour ago

White House: ಭಾರತದಲ್ಲಿದೆ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ: ಅಮೆರಿಕದ ಮೆಚ್ಚುಗೆ; ಮೋದಿ ನಾಯಕತ್ವಕ್ಕೂ ಸಿಕ್ತು ಶಹಬ್ಬಾಸ್‌ಗಿರಿ

IPL 2024
ಕ್ರೀಡೆ1 hour ago

IPL 2024 : ಆರ್​ಸಿಬಿ- ಚೆನ್ನೈ ಪಂದ್ಯದ ವೇಳೆ ಮಳೆ ಬಂದು ರದ್ದಾದರೆ ಮುಂದೇನಾಗುವುದು?

hd deve gowda birthday
ಪ್ರಮುಖ ಸುದ್ದಿ1 hour ago

HD Deve Gowda: ಈ ಅವಮಾನದಿಂದ ಪಾರು ಮಾಡು: 93ರ ಜನ್ಮದಿನಂದು ದೇವೇಗೌಡರ ಮೌನ ಪ್ರಾರ್ಥನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ14 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌