Rajasthan murder: ರಾಜಸ್ಥಾನದಲ್ಲಿ ದಾವತ್‌ ಸ್ಲೀಪರ್‌ ಸೆಲ್ ಸ್ಥಾಪಿಸಲು ಯತ್ನಿಸಿದ್ದ ಕನ್ಹಯ್ಯಲಾಲ್‌ ಹಂತಕರು - Vistara News

ಕ್ರೈಂ

Rajasthan murder: ರಾಜಸ್ಥಾನದಲ್ಲಿ ದಾವತ್‌ ಸ್ಲೀಪರ್‌ ಸೆಲ್ ಸ್ಥಾಪಿಸಲು ಯತ್ನಿಸಿದ್ದ ಕನ್ಹಯ್ಯಲಾಲ್‌ ಹಂತಕರು

Rajasthan murder: ನೂಪುರ್‌ ಶರ್ಮಾ ಅವರ ಹೇಳಿಕೆಯನ್ನು ಬೆಂಬಲಿಸಿ ಪೋಸ್ಟ್‌ ಹಾಕಿದ ಎಂಬ ನೆಪದಲ್ಲಿ ಕನ್ಹಯ್ಯ ಲಾಲ್‌ ಅವರ ಶಿರಚ್ಛೇದ ಮಾಡಿದ ಅಟ್ಟಾರಿ ಟೀಮ್‌ ರಾಜಸ್ಥಾನದಲ್ಲಿ ದಾವತ್‌ ಇಸ್ಲಾಮಿ ಸಂಸ್ಥೆಯ ಸ್ಲೀಪರ್‌ ಸೆಲ್‌ ಸ್ಥಾಪನೆಗೆ ಯತ್ನಿಸಿತ್ತು ಎಂಬ ಅಂಶ ಬಯಲಾಗಿದೆ.

VISTARANEWS.COM


on

dawat e islami
ಪಾಕಿಸ್ತಾನದ ಕರಾಚಿಯಲ್ಲಿರುವ ದಾವತ್‌ ಇ ಇಸ್ಲಾಮಿ ಸಂಘಟನೆಯ ಪ್ರಧಾನ ಕಚೇರಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೈಪುರ: ಉದಯಪುರದಲ್ಲಿ ಕನ್ಹಯ್ಯ ಲಾಲ್‌ ಅವರನ್ನು ಬರ್ಬರವಾಗಿ ಕೊಲೆ ಮಾಡಿದ ದುಷ್ಟರು ಪಾಕಿಸ್ತಾನದ ದಾವತ್‌ ಇ- ಇಸ್ಲಾಮಿ ಸಂಘಟನೆಯನ್ನು ರಾಜಸ್ಥಾನದಲ್ಲಿ ಬೆಳೆಸಲು ಪ್ರಯತ್ನ ನಡೆಸಿದ್ದರು. ಅದರ ಸ್ಲೀಪರ್ ಸೆಲ್‌ ಸ್ಥಾಪಿಸಲು ಮಾಡಿದ ಪ್ರಯತ್ನಗಳ ವಿವರಗಳೆಲ್ಲವೂ ಈಗ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಸಿಕ್ಕಿವೆ.

ಹಂತಕರಲ್ಲಿ ಒಬ್ಬನಾಗಿರುವ ಮೊಹಮ್ಮದ್‌ ರಿಯಾಜ್‌ ಅಟ್ಟಾರಿ ಪಾಕಿಸ್ತಾನದ ಧಾರ್ಮಿಕ ಮೂಲಭೂತವಾದಿ ಸಂಘಟನೆಯ ಜತೆ ನೇರ ಸಂಪರ್ಕ ಹೊಂದಿದ್ದು, ಅದರ ಸೂಚನೆಯಂತೆಯೇ ಇಲ್ಲಿ ಕಾರ್ಯಾಚರಿಸುತ್ತಿದ್ದ ಎಂಬ ಅಂಶ ಬಯಲಾಗಿದೆ. ನಿಜವೆಂದರೆ, ಕನ್ಹಯ್ಯ ಲಾಲ್‌ ಕೊಲೆಯನ್ನು ಕೂಡಾ ದಾವತ್‌ ಇ ಇಸ್ಲಾಮಿ ಸಂಘಟನೆಯ ಅಲ್ಲಿನ ಉಗ್ರರ ಸೂಚನೆಯಂತೆ ನಡೆಸಲಾಗಿದೆ ಎಂಬುದು ಗೊತ್ತಾಗಿದೆ. ಪ್ರವಾದಿ ಮಹಮ್ಮದ್‌ ಅವರನ್ನು ಅವಹೇಳನ ಮಾಡಿದ ನೂಪುರ್‌ ಶರ್ಮ ಅವರನ್ನು ಬೆಂಬಲಿಸಿದ ಕಾರಣಕ್ಕಾಗಿ ಕನ್ಹಯ್ಯ ಲಾಲ್‌ ಹತ್ಯೆ ನಡೆದಿದೆ ಎಂದು ಹೇಳಲಾಗಿದೆಯಾದರೂ ಹಂತಕರು ಅದಲ್ಲದೆ ಹೋದರೆ ಇನ್ನೊಂದು ಕಾರಣ ಇಟ್ಟುಕೊಂಡು ಶಿರಚ್ಛೇದದಂಥ ದುಷ್ಕೃತ್ಯವನ್ನು ನಡೆಸುವುದು ಖಚಿತವಾಗಿತ್ತು ಎನ್ನಲಾಗಿದೆ. ಒಂದು ಮೂಲದ ಪ್ರಕಾರ ರಿಯಾಜ್‌ ಮತ್ತು ತಂಡ ಉದಯಪುರದಲ್ಲೇ ಇನ್ನೂ ಎರಡು ಹತ್ಯೆಗೆ ಸಂಚು ನಡೆಸಿತ್ತು.

ದಾವತ್‌ ಸೇರಲು ಆಮಿಷ
ಪಾಕಿಸ್ತಾನದಲ್ಲಿ ಧಾರ್ಮಿಕ ಉಗ್ರ ಸಂಘಟನೆ ಎಂಬ ಕುಖ್ಯಾತಿ ಹೊಂದಿರುವ ದಾವತ್‌ – ಇ -ಇಸ್ಲಾಮಿ ಸಂಘಟನೆಯನ್ನು ರಾಜಸ್ಥಾನದಲ್ಲಿ ಬೆಳೆಸುವುದು, ಹಲವರನ್ನು ಈ ಸಂಘಟನೆಗೆ ಸೇರಿಸುವುದು ರಿಯಾಜ್‌ನ ಕೆಲಸವಾಗಿತ್ತು. ರಿಯಾಜ್‌ ಅಟ್ಟಾರಿ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿ ಬಾಡಿಗೆ ಮನೆ ಮಾಡಿಕೊಂಡು ಅಲ್ಲಿ ದಾವತ್‌ ಇಸ್ಲಾಮಿಯ ಪ್ರಚಾರ ಮಾಡುತ್ತಿದ್ದ. ಇದೊಂದು ಧಾರ್ಮಿಕ ಸಂಸ್ಥೆ ಎಂದು ನಂಬಿಸಿ ಅದಕ್ಕಾಗಿ ಹಣ ಸಂಗ್ರಹ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಮತಾಂತರ, ಧರ್ಮದ್ವೇಷ ಹರಡುವ ದಾವತ್‌

ದಾವತ್‌ ಇ ಇಸ್ಲಾಮಿ ಮೇಲ್ನೋಟಕ್ಕೆ ಒಂದು ಧಾರ್ಮಿಕ ಚಳವಳಿಯ ಹಾಗೇ ಇದೆ. ಇದು ಪ್ರವಾದಿ ಮೊಹಮ್ಮದರ ಸಂದೇಶವನ್ನು ಜಗತ್ತಿಗೆ ಸಾರುವ ಒಂದು ಸಂಸ್ಥೆ. ಇಸ್ಲಾಮಿಕ್‌ ಅಧ್ಯಯನಕ್ಕಾಗಿ ಆನ್‌ಲೈನ್‌ ಕೋರ್ಸ್‌ಗಳನ್ನು ಹೊಂದಿದೆ. ಜತೆಗೆ ಒಂದು ಟೀವಿ ಚಾನೆಲನ್ನು ಕೂಡಾ ನಡೆಸುತ್ತಿದೆ. ಇಸ್ಲಾಂಗೆ ಹೊಸದಾಗಿ ಬರುವವರಿಗೆ ವಿಶೇಷ ತರಬೇತಿ ನೀಡುವುದು ಅದರ ಕೆಲಸ. ಅಂದರೆ, ಮತಾಂತರ ಮತ್ತು ಮೂಲಭೂತವಾದವನ್ನು ತುಂಬುವ ಕೆಲಸವನ್ನೂ ಅದು ತಣ್ಣಗೆ ಮಾಡಿಕೊಂಡು ಬರುತ್ತಿದೆ.

ರಿಯಾಜ್‌ ಭಾರತದಲ್ಲಿ ಹಲವರ ಮನವೊಲಿಸಿ ದಾವತ್‌ ಇಸ್ಲಾಮಿಗೆ ಸೇರಿಸಲು ಸಂಚು ನಡೆಸಿದ್ದ. ಈ ವಿಚಾರವನ್ನು ಉದಯಪುರದ ರಿಕ್ಷಾ ಚಾಲಕರೊಬ್ಬರು ತನಿಖಾಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾರೆ.

ದಾವತ್‌ ಸೇರಲು ಚಾಲಕನಿಗೆ ಒತ್ತಡ

ರಿಯಾಜ್‌ ಅಟ್ಟಾರಿ ಮತ್ತು ಮಹಮ್ಮದ್‌ ಗೌಸ್‌ ವಾಸಿಸುವ ಪ್ರದೇಶದಲ್ಲೇ ಇರುವ ರಿಕ್ಷಾ ಚಾಲಕರೊಬ್ಬರನ್ನು ದಾವತ್‌ಗೆ ಸೇರುವಂತೆ ಬಲವಂತಪಡಿಸಲಾಗಿತ್ತು. ʻʻನಾನು ಅಟ್ಟಾರಿಯನ್ನು ಒಂದು ಶಾಪ್‌ನಲ್ಲಿ ಭೇಟಿ ಮಾಡಿದ್ದೆ. ಅವನು ನನಗೆ ದಾವತ್‌ ಸೇರುವಂತೆ ಕೋರಿದ್ದ. ನಮಾಜ್‌ ಗೆ ಬನ್ನಿ, ದೇವರ ಹೆಸರಲ್ಲಿ ದಾವತ್‌ ಇಸ್ಲಾಮಿಗೆ ಹಣ ಸಂಗ್ರಹಿಸೋಣ ಎಂದಿದ್ದʼʼ ಎಂದು ಚಾಲಕರು ತಿಳಿಸಿದ್ದಾರೆ. ರಿಯಾಜ್‌ ಮತ್ತು ಗೌಸ್‌ ಉದಯಪುರ ಪರಿಸರದಲ್ಲಿ ಇನ್ನೂ ಹಲವು ಮಂದಿಯನ್ನು ಇದೇ ರೀತಿ ಟಾರ್ಗೆಟ್‌ ಮಾಡಿದ್ದರು. ಪಾಕಿಸ್ತಾನಕ್ಕೆ ಹೋಗಿ ಬರೋಣ ಎಂದು ಒತ್ತಾಯಿಸಿದ್ದರು ಎಂದು ಚಾಲಕ ಹೇಳಿದ್ದಾರೆ.

ಕೊಲೆ ಮಾಡುವಂತೆ ಕೋರಿದ್ದ
ಈ ನಡುವೆ, ಕನ್ಹಯ್ಯ ಲಾಲ್‌ ಅವರನ್ನು ಕೊಲೆ ಮಾಡುವಂತೆ ಉದಯಪುರದ ಇಬ್ಬರು ಹುಡುಗರಾದ ಆಸಿಫ್‌ ಮತ್ತು ಮೊಹ್ಸಿನ್‌ ಅವರನ್ನು ಕೇಳಿಕೊಂಡಿದ್ದ. ಆದರೆ, ಅವರು ನೇರವಾಗಿ ಕೊಲೆ ಮಾಡಲು ನಿರಾಕರಿಸಿದ್ದರಿಂದ ಕೊನೆಗೆ ತಾನೇ ಈ ಕೃತ್ಯ ಮಾಡಿದ್ದಾನೆ ಎಂದು ಚಾಲಕ ಹೇಳಿದ್ದಾನೆ. ಒಟ್ಟಾರೆ ಸಂಚಿನಲ್ಲಿ ಈ ಇಬ್ಬರು ಭಾಗಿಯಾಗಿದ್ದು, ಅವರಿಗೆ ೧೪ ದಿನಗಳ ಪೊಲೀಸ್‌ ಕಸ್ಟಡಿ ವಿಧಿಸಲಾಗಿದೆ. ಈ ನಡುವೆ, ಸಂಚಿನಲ್ಲಿ ಪಾಲ್ಗೊಂಡ ಇನ್ನೂ ಇಬ್ಬರು ಆರೋಪಿಗಳಾದ ವಾಸಿಂ ಅಟ್ಟಾರಿ ಮತ್ತು ಅಖ್ತರ್‌ ರಾಜಾ ಎಂಬಿಬ್ಬರು ಉದಯಪುರ ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಕೂಡಾ ದಾವತ್‌ ಇಸ್ಲಾಮಿ ಸಂಘಟನೆ ಜತೆ ಸಂಬಂಧ ಹೊಂದಿದ್ದು, ತರಬೇತಿಗಾಗಿ ಪಾಕಿಸ್ತಾನಕ್ಕೂ ಹೋಗಿಬಂದಿದ್ದರು. ಇಲ್ಲಿ ದಾವತ್‌ ಸಂಸ್ಥೆಯನ್ನು ಬೆಳೆಸುವ ಪ್ರಯತ್ನದಲ್ಲೂ ತೊಡಗಿದ್ದರು.

ದಾವತ್‌ ಇ ಇಸ್ಲಾಮಿ ನಿರಾಕರಣೆ
ಈ ನಡುವೆ ಪಾಕಿಸ್ತಾನ ಕರಾಚಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ದಾವತ್‌ ಇ ಇಸ್ಲಾಮಿ ಸಂಘಟನೆ ಯಾವುದೇ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿದೆ. ತಾನು ಕೇವಲ ಧಾರ್ಮಿಕ ಕಾರ್ಯಗಳು, ಇಸ್ಲಾಮಿಕ್‌ ಬೋಧನೆಗಳಲ್ಲಷ್ಟೇ ಸಕ್ರಿಯವಾಗಿರುವುದಾಗಿ ಹೇಳಿದೆ.

ಇದನ್ನೂ ಓದಿ| Rajasthan murder: ಜೈಪುರದಲ್ಲಿ ಸರಣಿ ಸ್ಫೋಟಕ್ಕೆ ಸ್ಕೆಚ್‌ ಹಾಕಿದ್ದ ಕನ್ಹಯ್ಯ ಲಾಲ್‌ ಹಂತಕರು, NIA ತನಿಖೆ ವೇಳೆ ಬಯಲು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Theft Case : ಪಕ್ಕದ ಮನೆಗೆ ಕನ್ನ ಹಾಕಿದ ಚೋರ್‌ ದಂಪತಿ; ಕೆಲಸ ಕೊಟ್ಟ ಮಾಲೀಕನನ್ನೇ ದೋಚಿದ

Theft Case : ಬೆಂಗಳೂರಲ್ಲಿ ಪ್ರತ್ಯೇಕ ಕಡೆಗಳಲ್ಲಿ ನಡೆದ ಕಳ್ಳತನದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಕ್ಕದ ಮನೆಯನ್ನೇ ದೋಚಿದ ಚೋರ್‌ ದಂಪತಿ, ನಂಬಿ ಕೆಲಸ ಕೊಟ್ಟ ಮಾಲೀಕನ ಕಚೇರಿಗೆ ಕನ್ನ ಹಾಕಿದ ಕಳ್ಳ ಕೆಲಸಗಾರನನ್ನು ಜೈಲಿಗಟ್ಟಿದ್ದಾರೆ.

VISTARANEWS.COM


on

By

theft case
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಮನೆ ಕಟ್ಟಲೆಂದು ಮಗನಿಗೆ ಹೆಲ್ತ್‌ ಇನ್‌ಸೆಕ್ಟರ್‌ವೊಬ್ಬರು 50 ಲಕ್ಷ ರೂ. ಹಣ ಕೊಟ್ಟಿದ್ದರು. ಈ ವಿಷಯ ಮೊಮ್ಮಗಳಿಗೆ ಅದ್ಹೇಗೋ ಗೊತ್ತಾಗಿತ್ತು. ಕಂತೆ ಕಂತೆ ಹಣ ಕಂಡ ಮೊಮ್ಮಗಳು, ಆ ಹಣದಲ್ಲಿ ಫ್ರೆಂಡ್‌ ಜತೆಗೆ ಪಾರ್ಟಿ ಅಂತ ಮಸ್ತ್‌ ಮಜಾ ಮಾಡುತ್ತಿದ್ದಳು. ಆಕೆಯ ಲೈಫ್‌ಸ್ಟೈಲ್‌ ಕಂಡ ಪಕ್ಕದ ಮನೆ ದಂಪತಿ ಯುವತಿಗೆ ಬ್ಲಾಕ್‌ ಮಾಡಿ ಬರೋಬ್ಬರಿ 25 ಲಕ್ಷ ರೂ. ಸುಲಿಗೆ ಮಾಡಿದ್ದರು. ಅಷ್ಟಕ್ಕೆ ಸುಮ್ಮನಾಗದ ಈ ಖತರ್ನಾಕ್‌ ದಂಪತಿ ಮನೆಗಳ್ಳತನ (Theft Case) ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಇವರಿಗೆ ಸಾಥ್‌ ಕೊಟ್ಟ ರೌಡಿಶೀಟರ್‌ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ರೌಡಿಶೀಟರ್ ಸಲ್ಮಾನ್ ಖಾನ್ @ ಹಂಡ ಸಲ್ಮಾನ್, ಅಸ್ಘರ್ ಮೆಹಬಿ, ಫಾತಿಮಾ, ಮೋಹಿದ್ ರಜ್‌ ಬಂಧಿತ ಮನೆಗಳ್ಳರಾಗಿದ್ದರೆ. ಬಂಧಿತರಿಂದ 24 ಲಕ್ಷ ನಗದು,150 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈ ನಾಲ್ವರು ನೆರೆ ಮನೆಯ ನಾಜಿಮಾ ಅಪ್ಸಾನ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದರು.

theft case

ನಾಜಿಮಾ ಪತಿ ಮೊಹಮ್ಮದ್ ಸಾಬುದೀನ್‌ಗೆ ಅವರ ತಂದೆ 50 ಲಕ್ಷ ರೂ. ನೀಡಿದ್ದರು. ಸಾಬುದೀನ್ ತಂದೆ ಹೆಲ್ತ್ ಇನ್ಸ್‌ಪೆಕ್ಟರ್ ಆಗಿದ್ದರು. ಹೀಗಾಗಿ ಮನೆ ಖರೀದಿ ಮಾಡಲು ಸಾಬುದೀನ್‌ಗೆ 50 ಲಕ್ಷ ರೂ. ನೀಡಿದ್ದರು. ಅನಂತರ ಅನಾರೋಗ್ಯದಿಂದ ಮೃತಪಟ್ಟಿದ್ದರು. ನಾಜಿಮಾ ಮತ್ತು ಸಾಬುದೀನ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇದರಲ್ಲಿ ಎರಡನೇ ಮಗಳಿಗೆ ಮನೆಯಲ್ಲಿ ಹಣ ಇರುವುದು ಗೊತ್ತಾಗಿತ್ತು. ಪೋಷಕರಿಗೆ ತಿಳಿಯದಂತೆ 2ನೇ ಮಗಳು ಸ್ನೇಹಿತರ ಜತೆಗೆ ಪಾರ್ಟಿ ಮಾಡಲು ಹಣ ಖರ್ಚು ಮಾಡುತ್ತಿದ್ದಳು.

ಇದೆಲ್ಲವನ್ನು ಪಕ್ಕದ ಮನೆಯಲ್ಲಿದ್ದ ಫಾತಿಮಾ ಹಾಗೂ ಮೋಹಿದ್ ರಜ್‌ ದಂಪತಿ ಗಮನಿಸಿದ್ದರು. ಬಳಿಕ ನಿನ್ನ ತಂದೆ -ತಾಯಿಯನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಸಿ 2ನೇ ಮಗಳಿಂದ ಕಳೆದೊಂದು ಒಂದು ವರ್ಷದಿಂದ ಹಂತ ಹಂತವಾಗಿ 25 ಲಕ್ಷ ರೂ. ಸುಲಿಗೆ ಮಾಡಿದ್ದರು. ಹಣದ ರುಚಿಕೊಂಡ ಈ ಚೋರ್‌ ದಂಪತಿ ಮತ್ತಷ್ಟು ಹಣ ಇರಬಹುದು ಎಂದು ಹೊಂಚು ಹಾಕಿದ್ದರು. ಇದಕ್ಕಾಗಿ ರೌಡಿಶೀಟರ್ ಸಲ್ಮಾನ್ ಖಾನ್, ಅಸ್ಘರ್ ಮೆಹಬಿ ಸಂಪರ್ಕ ಮಾಡಿದ್ದರು. ಅವರ ಮೂಲಕ ಮನೆ ಕಳ್ಳತನ ಮಾಡಿಸಲು ಪ್ಲಾನ್ ಮಾಡಿದ್ದರು. ಬೇಸಿಗೆ ರಜೆ ಇದ್ದಿದ್ದನ್ನೇ ಬಂಡವಾಳ ಮಾಡಿಕೊಂಡಿದ್ದರು.

ಮೇ 7ರಂದು ಸಾಬುದ್ದೀನ್‌ನ ಮಕ್ಕಳಿಬ್ಬರು ಹುಟ್ಟೂರಾದ ಹಿರಿಯೂರಿಗೆ ತೆರಳಿದರು. ಇತ್ತ ಸಾಬುದ್ದೀನ್ ಕೆಲಸಕ್ಕೆ ಹೋದಾಗ, ಹಿಂಬದಿ ಬಾಗಿಲು ಮುರಿದು ಕಳ್ಳತನ ಮಾಡಿ ಮುಂಬೈ ಪರಾರಿ ಆಗಲು ಮುಂದಾಗಿದ್ದರು. ಮುಂಬೈ ಕಡೆಗೆ ಹೊರಟಿದ್ದ ಪ್ರಮುಖ ಆರೋಪಿಗಳಾದ ಸಲ್ಮಾನ್, ಅಸ್ಗರ್‌ನನ್ನು ಕೃತ್ಯದ ನಡೆದ 6 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಸಿಕ್ಕಿದ್ದು ಹೇಗೆ?

ಗಾಂಧಿನಗರ ವಿಆರ್‌ಎಲ್ ಬಸ್ ನಿಲ್ದಾಣ ಬಳಿ ಮೊಬೈಲ್ ಲೊಕೇಶನ್ ಆಫ್‌ ಆಗಿತ್ತು. ಹೀಗಾಗಿ ಆರೋಪಿಗಳು ಬಸ್‌ನಲ್ಲಿಯೆ ಹೊರಟಿರಬಹುದು ಎಂದು ಪೊಲೀಸರು ಶಂಕಿಸಿದರು. ಹಾಗಾಗಿ ಟ್ರಾವೆಲ್ ಏಜೆನ್ಸಿಗೆ ಆರೋಪಿಗಳ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಇಬ್ಬರ ಹೆಸರಲ್ಲಿ ಎಸ್‌ಆರ್‌ಎಸ್‌ ಬಸ್‌ನಲ್ಲಿ ಮುಂಬೈಗೆ ಟಿಕೆಟ್ ಬುಕ್ ಆಗಿತ್ತು. ಕೂಡಲೇ ಚಾಲಕನಿಗೆ ಕರೆ ಮಾಡಿ ಬಸ್‌ನಲ್ಲಿ ಆರೋಪಿಗಳಿರುವ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಚಾಲಕ ನೇರವಾಗಿ ಬಸ್‌ ಅನ್ನು ಚಿತ್ರದುರ್ಗ ರೂರಲ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದರು. ಕೂಡಲೇ ಚಿತ್ರದುರ್ಗ ರೂರಲ್ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಅಶೋಕನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:Road Accident: ಸ್ಕೂಟರ್‌ಗೆ ಟ್ರಕ್‌, ಲಾರಿಗೆ ಬಸ್‌, ಡಿವೈಡರ್‌ಗೆ ಕಾರು ಡಿಕ್ಕಿ; ಅಪಾಯದಿಂದ ಜಸ್ಟ್‌ ಮಿಸ್‌

ಕೆಲಸ ಕೊಟ್ಟ ಮಾಲೀಕನಿಗೆ ದ್ರೋಹ

ನಂಬಿ‌ ಕೆಲಸ ಕೊಟ್ಟ ಮಾಲೀಕನಿಗೆ ಕೆಲಸಗಾರನೊಬ್ಬ ದ್ರೋಹ ಬಗೆದಿದ್ದಾನೆ. ಮಾಲೀಕ ಹಣ ಇಡುವುದನ್ನು ನೋಡಿಕೊಂಡ ಕೆಲಸಗಾರ ಹಣವನ್ನೆಲ್ಲ ದೋಚಿ ಎಸ್ಕೇಪ್‌ ಆದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಹೇಶ್‌ ಎಂಬಾತ ಕೆ.ಎನ್.ಎಸ್ ಇನ್ಪ್ರಾಕ್ಚರ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದ. ಕಂಪೆನಿ ಮಾಲೀಕ ಕಛೇರಿಯಲ್ಲಿ ಹಣ ಇಡುವುದನ್ನು ಗಮನಿಸಿದ್ದ. ಕಛೇರಿಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಹಣ ದೋಚಿ ಪರಾರಿಯಾಗಿದ್ದ. ಪರಾರಿಯಾದ ಮಹೇಶ್‌ ಸುಬ್ರಮಣ್ಯದ ಮೂಲಕ ಮಡಿಕೇರಿಯ ಹೊಂ ಸ್ಟೇ ಸೇರಿಕೊಂಡು ತಲೆ ಮರೆಸಿಕೊಂಡಿದ್ದ.ಆರೋಪಿ ಮಾಹಿತಿ ಪಡೆದು ಮಡಿಕೇರಿಯಲ್ಲಿ ಹಣ ಸಹಿತ ಮಹೇಶ್‌ನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 24.50 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

ಕುಖ್ಯಾತ ಆರೋಪಿ ಅರೆಸ್ಟ್‌

ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರು ಕಾರ್ಯಚರಣೆ ನಡೆಸಿ ‌ಕುಖ್ಯಾತ ಕಳ್ಳನನ್ನು ಬಂಧಿಸಿದ್ದಾರೆ. ಮೂರು ಮನೆ ಕಳ್ಳತನ ‌ನಡೆಸಿ ತಲೆ ಮರೆಸಿಕೊಂಡಿದ್ದ ಸಯ್ಯದ್ ಅಹ್ಮದ್ @ ಸಯ್ಯದ್ ಬಂಧಿತ‌ ಆರೋಪಿಯಾಗಿದ್ದಾನೆ. ಬಂಧಿತನಿಂದ 653 ಗ್ರಾಂ ಚಿನ್ನಾಭರಣ 22 ಗ್ರಾಂ ವಜ್ರ ಸೇರಿದಂತೆ 1 ಕೆ.ಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಕೊಲೆ ಸೇರಿದಂತೆ 40 ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಬೆಂಗಳೂರು ಸೇರಿದಂತೆ ಮೈಸೂರಿನ ವಿವಿ ಪುರಂನಲ್ಲಿ ಕೈ ಚಳಕ ತೋರಿದ್ದಾನೆ

ವಿದೇಶಿಗರು ಅರೆಸ್ಟ್‌

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದಿಂದ ವಿಶೇಷ ಕಾರ್ಯಚರಣೆ ನಡೆಸಿ ವಿದೇಶಿಗರು ಸೇರಿ ಒಟ್ಟು ಎಂಟು ಜನರ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 2.74 ಕೋಟಿ ಮೌಲ್ಯದ ಡ್ರಗ್ಗ್ ವಶಕ್ಕೆ ಪಡೆಯಲಾಗಿದೆ. ಸಂಪಿಗೆಹಳ್ಳಿ, ವಿವಿಪುರಂ, ಕಾಟನ್ ಪೇಟೆ, ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

HD Revanna Released: ತಬ್ಬಿಕೊಂಡ ಎಚ್‌ಡಿಕೆ; ಕುಟುಂಬಸ್ಥರ ಕಂಡು ಕಣ್ಣೀರಿಟ್ಟ ರೇವಣ್ಣ, ಇಷ್ಟಾದರೂ ಬಾರದ ಭವಾನಿ!

HD Revanna Released: ಮನೆಗೆ ಧಾವಿಸಿದ ಹಿರಿಯ ಪುತ್ರ ಎಚ್.ಡಿ. ರೇವಣ್ಣ ಅವರಿಗೆ ಮೊದಲಿಗೆ ಬೆಳಗ್ಗೆ ಮನೆಯಲ್ಲಿ ಮಾಡಿಸಲಾಗಿದ್ದ ದೇವರ ಪೂಜೆಯ ಪ್ರಸಾದವನ್ನು ಕೊಡಲಾಯಿತು. ಬಳಿಕ ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತರು. ಊಟದ ಸಮಯದಲ್ಲಿ ರೇವಣ್ಣ ಅವರು ಎಸ್‌ಐಟಿ ವಶ ಹಾಗೂ ಜೈಲಿನಲ್ಲಿ ತಮಗಾದ ಕಹಿ ಅನುಭವಗಳನ್ನು ಹೇಳಿಕೊಂಡಿದ್ದಾರೆನ್ನಲಾಗಿದೆ. ಇನ್ನು ಭವಾನಿ ರೇವಣ್ಣ ಹಾಗೂ ಸೂರಜ್ ರೇವಣ್ಣ ಅಂತರ ಕಾಯ್ದುಕೊಂಡರಾ ಎಂಬ ಪ್ರಶ್ನೆ ಮೂಡುತ್ತಿದೆ.

VISTARANEWS.COM


on

HD Revanna released from jail Revanna Go straight to HD Deve Gowda house
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್.‌ ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಡಿ ಜೈಲಿನಲ್ಲಿದ್ದ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ ಅವರು ಜಾಮೀನು ಸಿಕ್ಕ ಮೇಲೆ ಬಿಡುಗಡೆಯಾಗಿ (HD Revanna Released) ಹೊರಬಂದಿದ್ದಾರೆ. ವಿಪರ್ಯಾಸವೆಂದರೆ ಅವರ ತಂದೆ ಉದ್ಘಾಟನೆ ಮಾಡಿದ್ದ ಪರಪ್ಪನ ಅಗ್ರಹಾರ ಜೈಲು ಸೇರಿ ಅಲ್ಲಿಂದ ಹೊರಬೇಕಾಯಿತು. ಇನ್ನು ರೇವಣ್ಣ ತಂದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ (HD Devegowda) ನಿವಾಸಕ್ಕೆ ತೆರಳಿದ್ದು, ಅವರನ್ನು ಕಂಡ ಕೂಡಲೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Devegowda) ತಬ್ಬಿಕೊಂಡು ಸ್ವಾಗತಿಸಿದರು. ಇನ್ನು ಕುಟುಂಬಸ್ಥರನ್ನು ಕಂಡಕೂಡಲೇ ರೇವಣ್ಣ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.

ಹನ್ನೊಂದು ದಿನಗಳ ಹಿಂದೆ ಇದೇ ದೇವೇಗೌಡರ ಮನೆಯಲ್ಲಿ ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದರು. ಈಗ ಸೀದಾ ಅಲ್ಲಿಗೇ ಎಚ್‌.ಡಿ. ರೇವಣ್ಣ ಬಂದಿದ್ದಾರೆ. ಇದಕ್ಕಿಂತ ಮುಂಚಿತವಾಗಿ ಎಚ್‌.ಡಿ. ದೇವೇಗೌಡರು ಮನೆಯಲ್ಲಿ ವಿಶೇಷ ಪೂಜೆಯನ್ನು ಮಾಡಿಸಿದ್ದರು. ರೇವಣ್ಣ ಮನೆಗೆ ಎಂಟ್ರಿ ಆದ ತಕ್ಷಣ ಅವರನ್ನು ತಬ್ಬಿಕೊಂಡ ಕುಮಾರಸ್ವಾಮಿ ಸಂತೈಸಿದರು. ಅಲ್ಲಿಂದ ಸೀದಾ ಒಳಗೆ ಹೋದ ರೇವಣ್ಣ ಅವರು ಎಚ್‌.ಡಿ. ದೇವೇಗೌಡರ ಕೋಣೆಗೆ ಎಂಟ್ರಿ ಕೊಟ್ಟರು.
ದೇವೇಗೌಡರನ್ನು ನೋಡಿ ಕಾಲಿಗೆ ಬಿದ್ದು ಕಣ್ಣೀರು ಹಾಕಿದರು ಎನ್ನಲಾಗಿದೆ. ಜತೆಗೆ ತಾಯಿ ಚನ್ನಮ್ಮ ಅವರ ಆಶೀರ್ವಾದವನ್ನೂ ಈ ವೇಳೆ ರೇವಣ್ಣ ಪಡೆದುಕೊಂಡರು.

ಭವಾನಿ ರೇವಣ್ಣ ನೆಗ್ಲೆಟ್‌?

ಎಚ್‌.ಡಿ. ರೇವಣ್ಣ ಅವರಿಗೆ ಸೋಮವಾರ ಸಂಜೆಯೇ ಬೇಲ್‌ ಸಿಕ್ಕರೂ ಭವಾನಿ ರೇವಣ್ಣ ಅವರ ಸುದ್ದಿಯೇ ಇಲ್ಲವಾಘಿದೆ. ಇನ್ನು ಪದ್ಮನಾಭ ನಗರದ ದೇವೇಗೌಡರ ನಿವಾಸಕ್ಕೂ ಅವರು ಆಗಮಿಸಲಿಲ್ಲ. ರೇವಣ್ಣ ಜೈಲಿಗೆ ಹೋದಾಗಲೂ ನೋಡಲು ಹೋಗಲಿಲ್ಲ. ರೇವಣ್ಣ ಎಸ್ಐಟಿ ಕಸ್ಟಡಿಯಲ್ಲಿ ಇದ್ದಾಗಲೂ ಬರಲಿಲ್ಲ. ಬಿಡುಗಡೆ ಆಗಿ ದೇವೇಗೌಡರ ನಿವಾಸಕ್ಕೆ ರೇವಣ್ಣ ಬಂದರೂ ಅತ್ತ ಕಡೆ ಸುಳಿಯದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಂತರ ಕಾಯ್ದುಕೊಂಡರಾ ಭವಾನಿ ಹಾಗೂ ಸೂರಜ್ ರೇವಣ್ಣ?

ಭವಾನಿ ರೇವಣ್ಣ ಹಾಗೂ ಸೂರಜ್ ರೇವಣ್ಣ ಅಂತರ ಕಾಯ್ದುಕೊಂಡರಾ ಎಂಬ ಪ್ರಶ್ನೆ ಮೂಡುತ್ತಿದೆ. ಈ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಗ್ಗೆ ಅಸಹನೆಯಾ? ಇಲ್ಲವೇ ಪ್ರಜ್ವಲ್ ಕೇಸ್‌ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೀಗೆ ಮಾಡುತ್ತಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.

ದೇವೇಗೌಡರ ಜತೆ ಊಟಕ್ಕೆ ಕುಳಿತ ಮಕ್ಕಳು; ಕಂಪ್ಲೇಂಟ್‌ ಹೇಳಿದರಾ ರೇವಣ್ಣ?

ಮನೆಗೆ ಧಾವಿಸಿದ ಹಿರಿಯ ಪುತ್ರ ಎಚ್.ಡಿ. ರೇವಣ್ಣ ಅವರಿಗೆ ಮೊದಲಿಗೆ ಬೆಳಗ್ಗೆ ಮನೆಯಲ್ಲಿ ಮಾಡಿಸಲಾಗಿದ್ದ ದೇವರ ಪೂಜೆಯ ಪ್ರಸಾದವನ್ನು ಕೊಡಲಾಯಿತು. ಬಳಿಕ ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತರು. ಊಟದ ಸಮಯದಲ್ಲಿ ರೇವಣ್ಣ ಅವರು ಎಸ್‌ಐಟಿ ವಶ ಹಾಗೂ ಜೈಲಿನಲ್ಲಿ ತಮಗಾದ ಕಹಿ ಅನುಭವಗಳನ್ನು ಹೇಳಿಕೊಂಡಿದ್ದಾರೆನ್ನಲಾಗಿದೆ.

ಎಸ್ಐಟಿ ಅಧಿಕಾರಿಗಳು ತನಿಖೆ ನೆಪದಲ್ಲಿ ಏನೆಲ್ಲ ಪ್ರಶ್ನೆಗಳನ್ನು ಕೇಳಿದರು? ಯಾವ ಮಾದರಿಯ ಪ್ರಶ್ನೆಗಳು ಇದ್ದವು? ಯಾವೆಲ್ಲ ಒತ್ತಡವನ್ನು ನೀಡಿದರು? ಎಂಬಿತ್ಯಾದಿ ವಿಷಯಗಳ ಬಗ್ಗೆ ಎಚ್‌.ಡಿ. ರೇವಣ್ಣ ಅವರು ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಜಕೀಯ ಷಡ್ಯಂತ್ರದ ಬಗ್ಗೆ ಚರ್ಚೆ?

ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ನಿಷ್ಪಕ್ಷಪಾತ ತನಿಖೆಯನ್ನು ನಡೆಸಲಾಗುತ್ತಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್‌ ಮಧ್ಯಪ್ರವೇಶ ಮಾಡಿದ್ದಾರೆ. ರಾಜಕೀಯವಾಗಿ ಏನೆಲ್ಲ ಷಡ್ಯಂತ್ರ ನಡೆಯುತ್ತಿದೆ ಎಂಬ ಬಗ್ಗೆ ಈಗಾಗಲೇ ಆರೋಪ ಮಾಡಿರುವ ಎಚ್.ಡಿ. ಕುಮಾರಸ್ವಾಮಿ ಅವರು ಈ ವಿಷಯವನ್ನು ರೇವಣ್ಣ ಮುಂದೆ ಪ್ರಸ್ತಾಪ ಮಾಡಿದ್ದಾರೆನ್ನಲಾಗಿದೆ. ಅಲ್ಲದೆ, ರಾಜಕೀಯ ಷಡ್ಯಂತ್ರದ ಜತೆಗೆ ಮುಂದಿನ ನಡೆ ಏನು ಎಂಬ ಬಗ್ಗೆಯೂ ತಂದೆ ಮತ್ತು ಮಕ್ಕಳು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: HD Revanna Released: ಜೈಲಿಂದ ಬಿಡುಗಡೆಯಾದ ಎಚ್.ಡಿ. ರೇವಣ್ಣ; ನೇರವಾಗಿ ದೇವೇಗೌಡರ ಮನೆಗೆ ದೌಡು

ಜೆಡಿಎಸ್‌ ಶಾಸಕರು, ಮುಖಂಡರ ಜತೆ ರೇವಣ್ಣ ಚರ್ಚೆ

ಈ ವೇಳೆ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಜೆಡಿಎಸ್‌ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಭೇಟಿ ನೀಡುತ್ತಿದ್ದಾರೆ. ಕೆ ಆರ್ ಪೇಟೆ ಶಾಸಕ ಎಚ್.ಡಿ. ಮಂಜುನಾಥ್, ಮಾಗಡಿ ಮಾಜಿ ಶಾಸಕ ಮಂಜುನಾಥ್ ಸೇರಿದಂತೆ ಹಲವರು ಆಗಮಿಸಿದ್ದಾರೆ. ಇನ್ನು ಎಚ್‌.ಡಿ. ರೇವಣ್ಣ ಸಹ ಕೆಲವು ಪ್ರಮುಖರ ಜತೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.

Continue Reading

ಕ್ರೈಂ

Road Accident: ಸ್ಕೂಟರ್‌ಗೆ ಟ್ರಕ್‌, ಲಾರಿಗೆ ಬಸ್‌, ಡಿವೈಡರ್‌ಗೆ ಕಾರು ಡಿಕ್ಕಿ; ಅಪಾಯದಿಂದ ಜಸ್ಟ್‌ ಮಿಸ್‌

Road Accident: ಪ್ರತ್ಯೇಕ ಕಡೆಗಳಲ್ಲಿ ಅಪಘಾತ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಉಡುಪಿಯಲ್ಲಿ ಸ್ಕೂಟರ್‌ಗೆ‌ ಟ್ರಕ್‌ ಡಿಕ್ಕಿ ಹೊಡೆದರೆ, ಮಂಡ್ಯದಲ್ಲಿ ಡಿವೈಡರ್‌ಗೆ ಕಾರು ಗುದ್ದಿದೆ. ಚಿತ್ರದುರ್ಗದಲ್ಲಿ ಲಾರಿ- ಬಸ್ ನಡುವೆ ಅಪಘಾತ ನಡೆದರೆ, ಚಿಕ್ಕಮಗಳೂರಲ್ಲಿ ರಸ್ತೆ ಮಧ್ಯೆ ಐರಾವತ ಬಸ್ ಹೊತ್ತಿ ಉರಿದಿದೆ.

VISTARANEWS.COM


on

By

Road Accident
Koo

ಉಡುಪಿ/ಮಂಡ್ಯ/ಚಿತ್ರದುರ್ಗ/ ಚಿಕ್ಕಮಗಳೂರು: ಪ್ರತ್ಯೇಕ ಕಡೆಗಳಲ್ಲಿ ನಡೆದ ನಾಲ್ಕು ಅಪಘಾತದಲ್ಲಿ ಪವಾಡ ಸದೃಶ್ಯದಂತೆ ಪಾರಾಗಿದ್ದಾರೆ. ಅಪಘಾತದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿಯ ಅಂಬಾಗಿಲು ಪೆರಂಪಳ್ಳಿ ಕ್ರಾಸ್ ಬಳಿ ಸ್ಕೂಟರ್‌ಗೆ ಟ್ರಕ್‌ವೊಂದು ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯ ಕಟ್ಟಡವೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಿಳೆಯೊಬ್ಬರು ಸ್ಕೂಟರ್‌ನಲ್ಲಿ ನೇರವಾಗಿ ಹೋಗುತ್ತಿದ್ದರು. ಈ ವೇಳೆ ಲೆಫ್ಟ್ ಟರ್ನ್ ತೆಗೆದುಕೊಳ್ಳುವ ಧಾವಂತದಲ್ಲಿ ಟ್ರಕ್‌ ಸ್ಕೂಟಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಮಹಿಳೆ ಸ್ಕೂಟರ್‌ ಸಮೇತ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಟ್ರಕ್ ಚಾಲಕ ತಕ್ಷಣ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ದುರಂತ ತಪ್ಪಿದೆ. ಒಂದು ತಿಂಗಳ ಹಿಂದೆಯಷ್ಟೇ ಇದೇ ಸ್ಥಳದಲ್ಲಿ ಇದೇ ರೀತಿಯ ಅಪಘಾತ ನಡೆದಿತ್ತು.

Road Accident

ಮಂಡ್ಯದಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ; ಮೂವರು ಗಂಭೀರ

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್‌ಗೆ ಕಾರೊಂದು ಗುದ್ದಿದೆ. ಮಂಡ್ಯದ ಹನಕೆರೆ ಗ್ರಾಮದ ಸಮೀಪದ ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಭೀಕರ ಅಪಘಾತ ನಡೆದಿದೆ. ಕೇರಳ ಮೂಲದ ಮೂವರಿಗೆ ಗಂಭೀರ ಗಾಯವಾಗಿದೆ. ಕೇರಳದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಹೈವೆಯಲ್ಲಿ ಉರುಳಿಬಿದ್ದು ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಗಾಯಾಳುಗಳು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Road Accident

ಚಿತ್ರದುರ್ಗದಲ್ಲಿ ಲಾರಿ- ಬಸ್ ನಡುವೆ ಅಪಘಾತ

ಚಿತ್ರದುರ್ಗ ತಾಲೂಕಿನ ವಿಜಾಪುರ ಗ್ರಾಮದದಲ್ಲಿ ಲಾರಿ ಹಾಗೂ ಬಸ್‌ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮಂಗಳವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಾವಣಗೆರೆ ಕಡೆಯಿಂದ ಬೆಂಗಳೂರಿಗೆ ವೋಲ್ವೋ ಬಸ್‌ ಹೊರಟಿತ್ತು. ಈ ವೇಳೆ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿಗೆ ಡಿಕ್ಕಿ ಹೊಡೆದು ವೋಲ್ವೋ ಬಸ್‌ ಜಮೀನಿಗೆ ನುಗ್ಗಿದೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:Love Failure : ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

ಚಿಕ್ಕಮಗಳೂರಲ್ಲಿ ರಸ್ತೆ ಮಧ್ಯೆ ಹೊತ್ತಿ ಉರಿದ ಐರಾವತ ಬಸ್

ಚಲಿಸುತ್ತಿದ್ದ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ. ಚಾಲಕನ-ನಿರ್ವಾಹಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಶಿವಮೊಗ್ಗದಿಂದ ಮೈಸೂರಿಗೆ ಹೋಗುತ್ತಿದ್ದ ಎ.ಸಿ ಬಸ್‌ನಲ್ಲಿ ಡ್ರೈವರ್-ಕಂಡಕ್ಟರ್ ಸೇರಿ 40 ಮಂದಿ ಪ್ರಯಣಿಕರಿದ್ದರು. ತರೀಕೆರೆ ತಾಲೂಕಿನ ನೇರಲಕೆರೆ ಕ್ರಾಸ್ ಬಳಿ ಬೆಳಗಿನ ಜಾವ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಇದನ್ನೂ ಗಮನಿಸಿದ ಚಾಲಕ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಬಳಿಕ ನೋಡನೋಡುತ್ತಿದ್ದ ಐರಾವತ ಎಸಿ ಸ್ಲೀಪರ್ ಬಸ್ ಸುಟ್ಟು ಕರಕಲಾಗಿದೆ. ವಿಷಯ ತಿಳಿದು ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

HD Revanna Released: ಜೈಲಿಂದ ಬಿಡುಗಡೆಯಾದ ಎಚ್.ಡಿ. ರೇವಣ್ಣ; ನೇರವಾಗಿ ದೇವೇಗೌಡರ ಮನೆಗೆ ದೌಡು

HD Revanna Released: ಕೊನೆಗೂ ಎಚ್‌.ಡಿ. ರೇವಣ್ಣ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು 11 ದಿನಗಳ ವನವಾಸದಿಂದ ಎಚ್.ಡಿ. ರೇವಣ್ಣ ಮುಕ್ತರಾದರು. ಈ ವೇಳೆ ರೇವಣ್ಣ ಪರ ವಕೀಲರು ಜಾಮೀನು ಷರತ್ತುಗಳನ್ನು ಪೂರೈಸಿದರು. ರೇವಣ್ಣ ಪಾಸ್ ಪೋರ್ಟ್, ಇಬ್ಬರು ಶ್ಯೂರಿಟಿ, ಐದು ಲಕ್ಷ ರೂಪಾಯಿ ಬಾಂಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ವಕೀಲರು ಸಲ್ಲಿಸಿದ ಬಳಿಕ ರೇವಣ್ಣ ಅವರನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಬೆಂಬಲಿಗರು ಎಚ್‌.ಡಿ. ರೇವಣ್ಣ ಅವರಿಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

VISTARANEWS.COM


on

HD Revanna released from jail Revanna Go straight to HD Deve Gowda house
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್.‌ ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಡಿ ಜೈಲಿನಲ್ಲಿರುವ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ (HD Revanna Bail) ಅವರಿಗೆ ಸೋಮವಾರ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ (ಮೇ 14) ಬಿಡುಗಡೆ (HD Revanna Released) ಮಾಡಲಾಗಿದೆ.

ಇದರಿಂದಾಗಿ ಒಟ್ಟು 11 ದಿನಗಳ ವನವಾಸದಿಂದ ಎಚ್.ಡಿ. ರೇವಣ್ಣ ಮುಕ್ತರಾದರು. ಈ ವೇಳೆ ರೇವಣ್ಣ ಪರ ವಕೀಲರು ಜಾಮೀನು ಷರತ್ತುಗಳನ್ನು ಪೂರೈಸಿದರು. ರೇವಣ್ಣ ಪಾಸ್ ಪೋರ್ಟ್, ಇಬ್ಬರು ಶ್ಯೂರಿಟಿ, ಐದು ಲಕ್ಷ ರೂಪಾಯಿ ಬಾಂಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ವಕೀಲರು ಸಲ್ಲಿಸಿದ ಬಳಿಕ ರೇವಣ್ಣ ಅವರನ್ನು ಬಿಡುಗಡೆ ಮಾಡಲಾಯಿತು.

HD Revanna released from jail Revanna Go straight to HD Deve Gowda house

ಗುಳಿಕ ಕಾಲದಲ್ಲಿಯೇ ರೇವಣ್ಣ ಜೈಲಿನಿಂದ ರಿಲೀಸ್

ಮಧ್ಯಾಹ್ನ 3:22 ರಿಂದ 5 ಗಂಟೆಯವರೆಗೆ ರಾಹುಕಾಲ ಇರುವ ಹಿನ್ನೆಲೆಯಲ್ಲಿ ಬಿಡುಗಡೆ ಪ್ರಕ್ರಿಯೆಯನ್ನು ಬೇಗ ಮಾಡಲಾಗಿದೆ. ಮಧ್ಯಾಹ್ನ 12.5 ರಿಂದ 1:39ರವರೆಗೆ ಗುಳಿಕ ಕಾಲ ಇದ್ದರಿಂದ 1.30ಕ್ಕೆ ರೇವಣ್ಣ ಜೈಲಿನಿಂದ ರಿಲೀಸ್‌ ಆಗಿದ್ದಾರೆ. ರೇವಣ್ಣ ಜೈಲಿನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಆದರೆ, ಅಲ್ಲಿ ಕ್ಷಣವೂ ನಿಲ್ಲದ ಎಚ್‌.ಡಿ. ರೇವಣ್ಣ ಸೀದಾ ಪದ್ಮನಾಭನಗರದಲ್ಲಿರುವ ಎಚ್‌.ಡಿ.ದ ದೇವೇಗೌಡ ಅವರ ನಿವಾಸಕ್ಕೆ ಹೊರಟಿದ್ದಾರೆ.

ಎಚ್.ಡಿ. ರೇವಣ್ಣಗೆ ಜಾಮೀನು ಸಿಗುವುದಕ್ಕೆ ಕಾರಣಗಳೇನು?

  • ರೇವಣ್ಣ ಅವರೇ ಕಿಡ್ನ್ಯಾಪ್ ಮಾಡಿಸಿದ್ದು ಎನ್ನುವುದಕ್ಕೆ ಸಾಕ್ಷಿ ಇಲ್ಲ.
  • ಸಿಆರ್‌ಪಿಸಿ ಅಡಿ ಸಂತ್ರಸ್ತೆ ನೀಡಿದ್ದ ಹೇಳಿಕೆಯಲ್ಲೂ ಪ್ರಸ್ತಾಪ ಇಲ್ಲ.
  • ರಿಮ್ಯಾಂಡ್ ಅಪ್ಲಿಕೇಶನ್‌ನಲ್ಲಿ ಸಾಕ್ಷಿ ಒದಗಿಸಲು ಎಸ್‌ಐಟಿ ವಿಫಲವಾಗಿದೆ.
  • ಎಚ್‌.ಡಿ. ರೇವಣ್ಣ ಸೂಚನೆ ಮೇರೆಗೆ ಸಂತ್ರಸ್ತೆ ಕಿಡ್ನ್ಯಾಪ್ ಅನ್ನಲು ಸಾಕ್ಷಿ ಇಲ್ಲ.

ರೇವಣ್ಣ ಅವರಿಗೆ ಏಕೆ ಜಾಮೀನು ಕೊಡಲಾಗುತ್ತಿದೆ ಎಂಬುದಾಗಿ ಈ ಮೇಲಿನ ಕಾರಣಗಳನ್ನು ಉಲ್ಲೇಖಿಸಿ, ನ್ಯಾಯಾಧೀಶರು ಸ್ಪಷ್ಟವಾಗಿ ಆದೇಶಿಸಿದ್ದಾರೆ. ಆದರೆ, ಕೆಲವು ಷರತ್ತುಗಳನ್ನು ನ್ಯಾಯಾಲಯವು ವಿಧಿಸಿದೆ.

8 ಷರತ್ತುಗಳನ್ನು ವಿಧಿಸಿ ಬೇಲ್ ಕೊಟ್ಟ ಕೋರ್ಟ್!

  1. 5 ಲಕ್ಷ ರೂಪಾಯಿ ಮೌಲ್ಯದ ಬಾಂಡ್‌ ಕೊಡಬೇಕು
  2. ಇಬ್ಬರ ಶ್ಯೂರಿಟಿಯನ್ನು ಒದಗಿಸಿಕೊಡಬೇಕು
  3. ಯಾವ ಕಾರಣಕ್ಕೂ ದೇಶ ಬಿಟ್ಟು ಹೋಗಬಾರದು
  4. ಕೇಸ್ ಆಗಿರುವ ಕೆ.ಆರ್.ನಗರಕ್ಕೆ ಹೋಗಬಾರದು
  5. ಎಸ್‌ಐಟಿ ತನಿಖೆಗೆ ಸೂಕ್ತ ಸಹಕಾರ ನೀಡಲೇಬೇಕು
  6. ಯಾವುದೇ ರೀತಿಯ ಸಾಕ್ಷ್ಯ ನಾಶ ಮಾಡಬಾರದು
  7. ಪಾಸ್ ಪೋರ್ಟ್ ಅನ್ನು ಕೋರ್ಟ್‌ಗೆ ಸಲ್ಲಿಸಬೇಕು.
  8. ನ್ಯಾಯಾಲಯದ ಅನುಮತಿ ಇಲ್ಲದೇ ರಾಜ್ಯದಿಂದ ಹೊರಹೋಗುವಂತಿಲ್ಲ.

ಸೋಮವಾರ ಕುತೂಹಲ ಮೂಡಿಸಿದ್ದ ಕೋರ್ಟ್‌ ಕಲಾಪ

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸೋಮವಾರ ಸತತ ನಾಲ್ಕು ಗಂಟೆಗಳ ಕಾಲ ವಾದ – ಪ್ರತಿವಾದಗಳು ನಡೆದಿವು. ಕಲಾಪ ಆರಂಭವಾಗುತ್ತಿದ್ದಂತೆ ವಾದ ಮಂಡಿಸಿದ ಎಸ್‌ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ, 2 ವಿಚಾರಗಳಿಗೆ ಸಂಬಂಧಿಸಿ ಆರೋಪಿಗೆ ಜಾಮೀನು ಕೊಡಬೇಡಿ. ಒಂದು ಪ್ರಕರಣದ ಗಂಭೀರತೆಯನ್ನು ನೋಡಬೇಕಿದ್ದು, ಇದರಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿದೆ. ಕಿಡ್ನ್ಯಾಪ್ ಕೇಸಲ್ಲೂ ಈಗಾಗಲೇ 2ನೇ ಆರೋಪಿ ಹೇಳಿಕೆಯನ್ನು ಪಡೆಯಲಾಗಿದೆ. ಈ ನಡುವೆ ಸಂತ್ರಸ್ತೆಯ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಂತ್ರಸ್ತೆ ಸ್ಪಷ್ಟನೆ ನೀಡಿದ್ದಾರೆ ಎಂಬುದಾಗಿ ವಿಡಿಯೊ ವೈರಲ್ ಬಗ್ಗೆ ಕೋರ್ಟ್‌ಗೆ ಮಾಹಿತಿಯನ್ನು ನೀಡಿದ್ದರು.

ಮೊದಲು ತನಿಖಾ ವರದಿ ಕೊಡಿ ಎಂದ ನ್ಯಾಯಾಧೀಶರು

ಈ ವೇಳೆ ಮಧ್ಯಪ್ರವೇಶ ಮಾಡಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್, ತನಿಖಾಧಿಕಾರಿಯ ಇನ್‌ವೆಸ್ಟಿಗೇಷನ್‌ ರಿಪೋರ್ಟ್ ಅನ್ನು ಮೊದಲು ಸಲ್ಲಿಸಿ. ಕಿಡ್ನ್ಯಾಪ್ ಕೇಸ್‌ ಸಂಬಂಧ ಏನೇನು ವಿಚಾರಗಳು ನಡೆದಿವೆ ಎಂಬುದನ್ನು ತಿಳಿಯಬೇಕು ಎಂದು ಎಸ್‌ಪಿಪಿಗೆ ಸೂಚಿಸಿದರು. ಆಗ ರೇವಣ್ಣ ಪರ ವಕೀಲ ಸಿ.ವಿ. ನಾಗೇಶ್‌, ತನಿಖಾ ವರದಿಯನ್ನು ನಮಗೂ ಕೊಟ್ಟಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದರು. ಈ ವೇಳೆ ಮುಚ್ಚಿದ ಲಕೋಟೆಯಲ್ಲಿ ಇನ್‌ವೆಸ್ಟಿಗೇಷನ್ ರಿಪೋರ್ಟ್‌ ಅನ್ನು ಸಲ್ಲಿಸಲಾಯಿತು. ಇದಕ್ಕೆ ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ರಿಂದ ಆಕ್ಷೇಪ ವ್ಯಕ್ತವಾಯಿತು. ಬಳಿಕ ತಮಗೂ ಒಂದು ಕಾಪಿ ನೀಡಲು ಕೇಳಿದ್ದು, ಅವರಿಗೂ ಒಂದು ಪ್ರತಿಯನ್ನು ನೀಡಲಾಯಿತು.

ಇದನ್ನೂ ಓದಿ: Karnataka Politics: ಆಪರೇಶನ್ ಕಮಲ ಆಗೋಕೆ ಸಾಧ್ಯಾನೇ ಇಲ್ಲ; ಇದು ಬಿಜೆಪಿಯ ಹಗಲುಗನಸು: ಸಿಎಂ ಸಿದ್ದರಾಮಯ್ಯ

ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲೇಖಿಸಿದ ಎಸ್‌ಪಿಪಿ

ಈ ವೇಳೆ ವಾದ ಮುಂದುವರಿಸಿದ ಜಯ್ನಾ ಕೊಠಾರಿ ಅವರು ಸುಪ್ರೀಂಕೋರ್ಟ್‌ ಕೇಸ್‌ ಸ್ಟಡಿಗಳನ್ನು ಉಲ್ಲೇಖಿಸಿದರು. ಕೆಲವು ತೀರ್ಪುಗಳನ್ನು ಓದಿ ಹೇಳಿದರು. ಕಿಡ್ನ್ಯಾಪ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ತೀರ್ಪುಗಳನ್ನು ಕೋರ್ಟ್‌ ಗಮನಕ್ಕೆ ತಂದರು. ಕಿಡ್ನ್ಯಾಪ್‌ ಪ್ರಕರಣದಲ್ಲಿ ಸೆಕ್ಷನ್‌ 364ಎ ಅಂದ್ರೆ ಜೀವಾವಧಿ ಶಿಕ್ಷೆ ಇದೆ. ಐಪಿಸಿ ಸೆಕ್ಷನ್‌ 364ಎ ಅಡಿಯಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಹೀಗಾಗಿ ಎಚ್.ಡಿ. ರೇವಣ್ಣ ಅವರಿಗೆ ಜಾಮೀನು ಕೊಡಬಾರದು ಎಂದು ವಾದ ಮಂಡಿಸಿದರು. ಶಿಕ್ಷೆಯ ಪ್ರಮಾಣದ ಗಂಭೀರತೆಯನ್ನು ಪರಿಗಣಿಸಿ ಬೇಲ್ ಅನ್ನು ಕೊಡಲೇಬಾರದು ಎಂದು ಮನವಿ ಮಾಡಿದರು.

ದೆಹಲಿ ಕೋರ್ಟ್‌ನ ಗುರುಚರಣ್ ಸಿಂಗ್‌ ಪ್ರಕರಣದ ಬಗ್ಗೆ ಉಲ್ಲೇಖ

ಗುರುಚರಣ್ ಸಿಂಗ್‌ ಪ್ರಕರಣದಲ್ಲಿ ಕೋರ್ಟ್‌ ಬೇಲ್ ತಿರಸ್ಕರಿಸಿತ್ತು. ಈಗ ರೇವಣ್ಣ ಪರ ದಾಖಲಾಗಿರುವ ಕೆ.ಆರ್.ನಗರ ಅಪಹರಣ ಪ್ರಕರಣವು ಒಂದು ಸೀರಿಯಸ್ ಕ್ರಿಮಿನಲ್ ಕೇಸ್ ಆಗಿದೆ ಎಂದು ವಾದ ಮಂಡಿಸಿ ಕೆಲವು ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ತೀರ್ಪುಗಳನ್ನು ಉಲ್ಲೇಖಿಸಿದರು.

ಆರೋಪಿ ಎಚ್‌.ಡಿ. ರೇವಣ್ಣ ಅವರ ಮಗ ಪ್ರಜ್ವಲ್‌ ರೇವಣ್ಣ ಕೂಡ ಬೇರೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಮಾಹಿತಿಯನ್ನು ಗೌಪ್ಯವಾಗಿಡಬೇಕು. ಕೆಲವು ಪ್ರಕರಣದಲ್ಲಿ ಮಾತ್ರ ಅಲ್ಲ, ಬೇರೆ ಪ್ರಕರಣಗಳಲ್ಲಿಯೂ ಈ ರೀತಿ ಸಂದರ್ಭದಲ್ಲಿ ಜಾಮೀನು ಕೊಟ್ಟರೆ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ. ಗಂಭೀರತೆ ಹೆಚ್ಚಿರುವ ಪ್ರಕರಣಗಳಲ್ಲಿ ಜಾಮೀನು ಕೊಡಬಾರದು. ಜಾಮೀನು ಕೊಡಬಾರದೆಂದು ಹಲವು ಕೋರ್ಟ್‌ಗಳ ತೀರ್ಪಿದೆ. ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪುಗಳನ್ನು ಕೊಠಾರಿ ಉಲ್ಲೇಖಿಸಿದರು.

ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇರುತ್ತದೆ. ಸಂತ್ರಸ್ತೆ ಮತ್ತು ಆಕೆಯ ಪುತ್ರನಿಗೆ ಜೀವ ಬೆದರಿಕೆಯೂ ಇದೆ. ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತ್ರಸ್ತೆಯ ಮಾಹಿತಿ ಗೌಪ್ಯವಾಗಿ ಇಡಬೇಕು. ಈ ಸಂದರ್ಭದಲ್ಲಿ ಸಂತ್ರಸ್ತೆ ಮಾಹಿತಿ ಗೌಪ್ಯವಾಗಿ ಇಡಲಿಲ್ಲ ಅಂದರೆ ಬೇರೆ ಯಾವ ಸಂತ್ರಸ್ತೆಯರು ಮುಂದೆ ಬಂದು ದೂರು ನೀಡುತ್ತಾರೆ? ರೇವಣ್ಣಗೆ ಜಾಮೀನು ನೀಡಲೇಬಾರದು. ಈ ಪರಿಸ್ಥಿತಿಯಲ್ಲಿ ರೇವಣ್ಣಗೆ ಜಾಮೀನು ನೀಡಿದರೆ ನ್ಯಾಯಾಂಗ ಹಾದಿಗೇ ಅಡಚಣೆಯಾಗುತ್ತದೆ ಎಂದು ಜಯ್ನಾ ಕೊಠಾರಿ ವಾದ ಮಂಡಿಸಿದರು.

ಈ ಕಾರಣಕ್ಕಾಗಿ ಜಾಮೀನು ನೀಡಬಾರದು

ರೇವಣ್ಣ ಪ್ರಭಾವಿಯಾಗಿದ್ದು, ಅವರ ಪುತ್ರ ಸಂಸದ ಪ್ರಜ್ವಲ್ ತಲೆಮರೆಸಿಕೊಂಡಿದ್ದಾರೆ. ಇದು ಕೇವಲ ಅಪಹರಣ ಪ್ರಕರಣ ಅಲ್ಲ, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಕಿಡ್ನ್ಯಾಪ್ ಆಗಿದೆ. ಪ್ರಕರಣದಲ್ಲಿ ಯಾವುದೇ ಮಹಿಳೆಯರು ದೂರು ನೀಡದಂತೆ ತಡೆಯುವ ಯತ್ನ ಇದಾಗಿದೆ. ಎಚ್.ಡಿ. ರೇವಣ್ಣಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಕಿಡ್ನ್ಯಾಪ್ ಪ್ರಕರಣದಲ್ಲಿ ಕೆಲವರ ಹೇಳಿಕೆ ಸಿಆರ್‌ಪಿಸಿ 164 ಅಡಿಯಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ಹೇಳಿಕೆ ದಾಖಲಿಸಬೇಕು ಎಂದು ಜಯ್ನಾ ಕೊಠಾರಿ ವಾದ ಮಂಡನೆ ಮಾಡಿ ಮುಗಿಸಿದರು.

ಜಯ್ನಾ ಕೊಠಾರಿ ಬಳಿಕ ಹೆಚ್ಚುವರಿ ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡನೆಯನ್ನು ಪ್ರಾರಂಭಿಸಿದರು. ಒಬ್ಬರು ವಾದ ಮಂಡಿಸಿದ್ರೆ ಸಾಕು ಎಂದು ವಕೀಲ ಸಿ.ವಿ.ನಾಗೇಶ್ ಆಕ್ಷೇಪಣೆ ವ್ಯಕ್ತಪಡಿಸಿದರು. ಒಂದೇ ಕೇಸ್‌ಗೆ ಇಬ್ಬರು ಎಸ್‌ಪಿಪಿಗಳ ವಾದದ ಬಗ್ಗೆ ಜಡ್ಜ್ ನಿರ್ಧಾರ ಮಾಡಬೇಕು ಎಂದು ನ್ಯಾಯಾಧೀಶರನ್ನು ಇದೇ ವೇಳೆ ಸಿ.ವಿ. ನಾಗೇಶ್ ಕೇಳಿದರು. ಅದಕ್ಕೆ ಅಶೋಕ್‌ ನಾಯ್ಕ್‌, ಎಷ್ಟು ಜನ ಬೇಕಾದರೂ ವಾದ ಮಾಡಿ ಅಂತಾ ನೀವೇ ಹೇಳಿದ್ದಿರಲ್ಲವೇ ಎಂದು ಸಿ.ಪಿ. ನಾಗೇಶ್‌ಗೆ ಪ್ರಶ್ನೆ ಮಾಡಿದರು.

ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸಂತ್ರಸ್ತೆಯರು ಇದ್ದಾರೆ. ಆದ್ದರಿಂದಲೇ ಎಸ್‌ಐಟಿ ಪರವಾಗಿ ಇಬ್ಬರು ಎಸ್‌ಪಿಪಿಗಳನ್ನು ನೇಮಿಸಲಾಗಿದೆ. ನಾನು ವಾದ ಮಾಡಿದರೆ ನಿಮಗೇನು ತೊಂದರೆ? ಎಂದು ಕೇಳಿ ಅಶೋಕ್ ನಾಯ್ಕ್ ವಾದ ಮುಂದುವರಿಸಿದರು.

ಇದನ್ನೂ ಓದಿ: Prajwal Revanna Case: ಪೆನ್‌ ಡ್ರೈವ್‌ ಹಂಚಿಕೆ ಆರೋಪ ಮಾಡಿದ್ದ ನವೀನ್‌ ಗೌಡ ಮೇಲೆ ಶಾಸಕ ಮಂಜು ದೂರು

ರೇವಣ್ಣಗೆ ಜಾಮೀನು ಕೊಡಬಾರದು. ಕಿಡ್ನ್ಯಾಪ್ ಪ್ರಕರಣದ ಸಂತ್ರಸ್ತೆಯ ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಆ ವೇಳೆ ಬರಲು ಆಗಲ್ಲ ಅಂದರೂ ಬಲವಂತವಾಗಿ ಕರೆದೊಯ್ದಿದ್ದಾರೆ. ಸಂತ್ರಸ್ತೆ ಅಪಹರಿಸಿ ರೇವಣ್ಣ ಆಪ್ತರ ತೋಟದ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಚುನಾವಣೆಗೆ ನಾಲ್ಕೈದು ದಿನ ಮುಂಚೆಯೇ ಸಂತ್ರಸ್ತೆಯನ್ನು ಕರೆದೊಯ್ದಿದ್ದಾರೆ. ಆನಂತರ ಕರೆದುಕೊಂಡು ಬಂದಿದ್ದಾರೆ ಎಂದು ಅಶೋಕ್ ನಾಯ್ಕ್ ವಾದಿಸಿದರು.

ರೇವಣ್ಣ ಪುತ್ರ ಪ್ರಜ್ವಲ್ ಯಾವ ಕಾರಣಕ್ಕಾಗಿ ದೇಶ ಬಿಟ್ಟು ಹೋಗಿದ್ದಾನೆ? ಇಲ್ಲಿ ಪ್ರಜ್ವಲ್ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ ಹೊಂದಿದ್ದಾರೆ. ಅವರ ತಂದೆ – ತಾಯಿಗೆ ಯಾವ ಕಾರಣ ಹೇಳಿ ಹೋಗಿದ್ದಾರೆ? ದೇಶದ ಬಗ್ಗೆ ಚರ್ಚೆ ಮಾಡುವುದಕ್ಕೆ ಏನಾದರೂ ಹೋಗಿದ್ದಾರಾ? ಎಂದು ಅಶೋಕ್‌ ನಾಯ್ಕ್‌ ಪ್ರಶ್ನೆ ಮಾಡಿದರು.

ತಾಯಿಯ ಮೇಲೆ ನಡೆದ ಅತ್ಯಾಚಾರ ದೃಶ್ಯವನ್ನು ದೂರುದಾರ ನೋಡಿದ್ದಾರೆ. ತನ್ನ ಸ್ನೇಹಿತರ ಮೊಬೈಲ್‌ನಲ್ಲಿ ತಾಯಿ ಮೇಲಿನ ದೌರ್ಜನ್ಯದ ವಿಡಿಯೊವನ್ನು ನೋಡಿದ್ದಾರೆ. ಅದಕ್ಕಿಂತ ದುರ್ದೈವದ ಸಂಗತಿ ಇನ್ನೇನಿದೆ ಹೇಳಿ? ನಾಲ್ಕು ದಿನಗಳ ಕಾಲ ಅನುಭವಿಸಿದ್ದ ಯಾತನೆಯನ್ನು ಸಂತ್ರಸ್ತೆ ಹೇಳಿಕೊಂಡಿದ್ದಾರೆ ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಭಾನುವಾರ ವೈರಲ್ ಆಗಿರುವ ಸಂತ್ರಸ್ತೆಯ ಸ್ಪಷ್ಟನೆಯುಳ್ಳ ವಿಡಿಯೊ ಬಗ್ಗೆ ಪ್ರಸ್ತಾಪಿಸಿದ ಎಸ್‌ಪಿಪಿ ಅಶೋಕ್‌ ನಾಯ್ಕ್‌, ವೈರಲ್ ಆಗಿರುವ ವಿಡಿಯೊದಲ್ಲಿ ರೇವಣ್ಣ ಕಿಡ್ನ್ಯಾಪ್ ಮಾಡಿಲ್ಲ ಅಂದಿದ್ದಾರೆ. ಈ ಮೂಲಕ ನ್ಯಾಯಾಲಯದ ದಾರಿಯನ್ನೇ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಆ ವಿಡಿಯೊದಲ್ಲಿ ಸಂತ್ರಸ್ತೆಯೇ ಕೆಲವು ವಿಚಾರವನ್ನು ಹೇಳಿಕೊಂಡಿದ್ದಾರೆ. ಯಾವ ರೀತಿ ಕಿಡ್ನ್ಯಾಪ್ ಮಾಡಲಾಗಿದೆ ಅಂತಾ ಎಸ್‌ಐಟಿ ಅವರಿಂದ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ನ್ಯಾಯಾಲಯಕ್ಕೆ ಎಸ್‌ಐಟಿ ತನಿಖೆ ಬಗ್ಗೆ ಮಾಹಿತಿ ನೀಡಿದ ಅಶೋಕ್ ನಾಯ್ಕ್, ಎಷ್ಟು ಜನ ಕಿಡ್ನ್ಯಾಪ್ ಮಾಡಿದರು? ಎಷ್ಟು ವಾಹನಗಳಲ್ಲಿ ಅಪಹರಣ ಮಾಡಿದರು? ಮಾರ್ಗ ಮಧ್ಯೆ ವಾಹನಗಳ ಬದಲಾವಣೆ ಮಾಡಲಾಗಿದೆಯಾ ಅಂತಲೂ ತನಿಖೆ ನಡೆದಿದೆ. ಕಿಡ್ನ್ಯಾಪ್ ಹೇಗೆ ಮಾಡಲಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ವಿವರಿಸಿದರು.

ಕಸ್ಟಡಿ ಹಾಗೂ ಜಾಮೀನು ಸಂಬಂಧ ರೇವಣ್ಣ ಪರ ವಕೀಲರು ವಾದ ಮಾಡಿದ್ದಾರೆ. ಆದರೆ ಇಲ್ಲಿ ಜಾಮೀನು ಕೊಟ್ಟರೆ ಏನು ಆಗುತ್ತೆ ಅಂತಾ, ಮುಂದೆ ಏನು ಆಗುತ್ತದೆ..? ಎರಡು ರೀತಿಯಲ್ಲಿ ನಾನು ವಾದ ಮಂಡಿಸುತ್ತೇನೆ. ಜಾಮೀನು ಕೊಟ್ಟರೆ ಏನಾಗುತ್ತದೆ? ಜಾಮೀನು ಕೊಡದಿದ್ದರೆ ಏನಾಗುತ್ತೆ ಎಂಬುದನ್ನು ಹೇಳುತ್ತೇನೆ. ನಿಮ್ಮ ವಾದದ ಅಂಶಗಳ ಕಾಪಿಯನ್ನು ಕೊಟ್ಟು ವಾದವನ್ನು ಮುಂದುವರಿಸಿ ಎಂದು ಈ ವೇಳೆ ನ್ಯಾಯಾಧೀಶರು ಹೇಳಿದರು.

ಎಚ್.ಡಿ.ರೇವಣ್ಣ ಸಲ್ಲಿಸಿರುವ ಜಾಮೀನಿಗೆ ಮಾನ್ಯತೆಯೇ ಕೊಡಬಾರದು ಎಂದು ಎಸ್‌ಐಟಿ ಪರ ಹೆಚ್ಚುವರಿ ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡಿಸಿದಾಗ ಮಧ್ಯಪ್ರವೇಶ ಮಾಡಿದ ನ್ಯಾಯಾಧೀಶರು, ಬೇಲ್ ಅರ್ಜಿ ಮಾನ್ಯತೆ ವಿಚಾರ ಏಕೆ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿದ ಅಶೋಕ್‌ ನಾಯ್ಕ್, ಬೇಲ್ ಅರ್ಜಿ ಮಾನ್ಯತೆ ಕುರಿತು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದರು. ಆಗ ಅಸಮಾಧಾನಗೊಂಡ ನ್ಯಾಯಾಧೀಶರು, ಈಗ ನಡೆಯುತ್ತಿರುವುದು ಬೇಲ್ ಅರ್ಜಿ ವಿಚಾರಣೆಯಾಗಿದೆ. ಅದರ ಸಂಬಂಧ ವಾದ ಮಾಡಿ ಎಂದು ಅಶೋಕ್‌ ನಾಯ್ಕ್‌ಗೆ ನ್ಯಾಯಾಧೀಶರು ಸೂಚನೆ ನೀಡಿದರು. ಅದು ಬಿಟ್ಟು ಪೊಲೀಸ್ ಕಸ್ಟಡಿ, ಜ್ಯುಡಿಷಿಯಲ್ ಕಸ್ಟಡಿ ಬಗ್ಗೆ ವಾದ ಏಕೆ? ಎಂದು ಕೇಳಿದರು.

ಆದರೆ, ಆಗ ವಾದ ಮಂಡಿಸಿದ ಅಶೋಕ್‌ ನಾಯ್ಕ್‌, ಹೀಗೆಯೇ ಆದರೆ ಈ ಕಿಡ್ನ್ಯಾಪ್ ಪ್ರಕರಣವು ಸುಪ್ರೀಂ ಕೋರ್ಟ್‌ಗೆ ಹೋಗಬೇಕು ಎಂದು ಹೇಳಿದರು. ಇದಕ್ಕೆ ಸಿ.ವಿ.ನಾಗೇಶ್ ಆಕ್ಷೇಪ ವ್ಯಕ್ತಪಡಿಸಿ, ನ್ಯಾಯಾಲಯಕ್ಕೇ ನೀವು ಬೆದರಿಕೆ ಹಾಕುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್‌ ನಾಯ್ಕ್‌, ಈ ವಿಚಾರಗಳನ್ನು ಮಾತ್ರ ನಾನು ಹೇಳುತ್ತಿದ್ದೇನೆಯೇ ಹೊರತು, ಬೆದರಿಕೆಯ ಪ್ರಶ್ನೆಯೇ ಇಲ್ಲ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಬೇಡಿ ಎಂದು ಸಿ.ವಿ. ನಾಗೇಶ್‌ಗೆ ಹೇಳಿದರು.

ಯಾವ ಕಾರಣಕ್ಕೆ ರೇವಣ್ಣಗೆ ಜಾಮೀನು ನೀಡಬಾರದು?

ಯಾವ ಕಾರಣಕ್ಕೆ ರೇವಣ್ಣಗೆ ಜಾಮೀನು ನೀಡಬಾರದು ಅಂತಾ ಹೇಳುತ್ತೇನೆ ಎಂದು ವಾದವನ್ನು ಮುಂದುವರಿಸಿದ ಎಸ್‌ಪಿಪಿ ಅಶೋಕ್ ನಾಯ್ಕ್, ವೋಟ್ ಹಾಕಿ.. ವೋಟ್‌ ಹಾಕಿ.. ಅಂತಾ ಜನರನ್ನೇ ಬೆದರಿಸುತ್ತಾರೆ. ಈ ರೇವಣ್ಣ ಅವರಿಗೆ ಜಾಮೀನು ಕೊಟ್ಟರೆ ಕಥೆ ಏನು ಸ್ವಾಮಿ? ವೋಟ್ ಹಾಕಲು ಸರತಿ ಸಾಲಲ್ಲಿ ನಿಂತಿದ್ದಾಗ ಮತದಾರರಿಗೆ ಬೆದರಿಕೆ ಹಾಕುತ್ತಾರೆ. 2019ರ ಚುನಾವಣೆ ವೇಳೆ ಮತ ಹಾಕುವ ವೇಳೆ ರೇವಣ್ಣ ಅವರೇ ಬೆದರಿಕೆ ಹಾಕಿದ್ದಾರೆ. ಅಲ್ಲಿ ಯಾರೂ ರೇವಣ್ಣ ಅವರನ್ನು ಕೇಳುವಂತಿಲ್ಲ. ಈಗ ಜಾಮೀನು ಕೊಟ್ಟರೆ ಕಥೆ ಏನ್‌ ಸ್ವಾಮಿ? ಅಧಿಕಾರಿಗಳು ಹಾಗೂ ಸರ್ಕಾರಿ ವಾಹನಗಳನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಎಲೆಕ್ಷನ್‌ ಟೈಮ್‌ನಲ್ಲಿ ಇವರು ಸರ್ಕಾರಿ ವಾಹನಗಳಲ್ಲಿಯೇ ಹಣ ಸಾಗಿಸುತ್ತಿದ್ದರು. ಈ ಎಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ಬೇಕಾದ ಎಲ್ಲ ದಾಖಲೆಗಳು ಇವೆ. ಆದ್ದರಿಂದ ರೇವಣ್ಣ ಅವರಿಗೆ ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂದು ಅಶೋಕ್‌ ನಾಯ್ಕ್‌ ವಾದ ಮಂಡಿಸಿದರು.

ಎಲೆಕ್ಷನ್‌ ಮುಗಿಯುವ ವಾರಕ್ಕೆ ಮುಂಚೆಯೇ ಫ್ಲೈಟ್‌ ಟಿಕೆಟ್‌ ಬುಕ್‌

ಒಂದು ಕಡೆ ಸಂತ್ರಸ್ತೆಯನ್ನು ಚುನಾವಣೆಗೆ ಮುಂಚೆಯೇ ಕರೆದೊಯ್ದಿರುತ್ತಾರೆ. ಇನ್ನೊಂದೆಡೆ ಎಲೆಕ್ಷನ್ ಮುಗಿಯೋದಕ್ಕೆ ಮುಂಚೆಯೇ ಫ್ಲೈಟ್ ಟಿಕೆಟ್‌ ಬುಕ್ ಆಗಿರುತ್ತದೆ. ಎಲೆಕ್ಷನ್ ಮುಗಿಯುವ ಒಂದು ವಾರ ಮೊದಲೇ ಟಿಕೆಟ್ ಬುಕಿಂಗ್ ಮಾಡಿದ್ದಾರೆ. ದೆಹಲಿಯ ಕಂಪನಿ ಮೂಲಕ ಫ್ಲೈಟ್ ಟಿಕೆಟ್ ಬುಕಿಂಗ್ ಆಗಿದೆ ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಕಿಡ್ನ್ಯಾಪ್ ಮಾಡಿದ ಬಳಿಕ ಸಂತ್ರಸ್ತೆಯನ್ನು ಅನೇಕ ಕಡೆಗೆ ಕರೆದೊಯ್ದಿದ್ದಾರೆ. ಈಗ ಆಕೆಯಿಂದ ಬಲವಂತವಾಗಿ ವಿಡಿಯೊ ಮೂಲಕ ಸ್ಪಷ್ಟನೆ ನೀಡಲಾಗಿದೆ. ಯಾರೂ ಕಿಡ್ನ್ಯಾಪ್ ಮಾಡಿಲ್ಲ ಅಂತ ಹೇಳಿಕೆಯ ಕೊಡಿಸಲು ಯತ್ನಿಸಿದ್ದಾರೆ. ಸಂತ್ರಸ್ತೆ ಮಹಿಳೆಯ ವಿಡಿಯೊ ಸ್ಪಷ್ಟನೆಯ ಸತ್ಯಾಸತ್ಯತೆ ಕುರಿತು ಪತ್ತೆ ಆಗಬೇಕು. ಕಿಡ್ನ್ಯಾಪ್ ಪ್ರಕರಣ ಸೇರಿದಂತೆ ಈ ಹಗರಣದಲ್ಲಿ ಹಲವು ಜನರು ಇದ್ದಾರೆ. ಎರಡು ದಿನಗಳಿಂದ ಕೆಲವರ ಬಂಧನ ಆಗಿದೆ. ಎಲ್ಲರೂ ಪ್ರಜ್ವಲ್‌ ರೇವಣ್ಣಗೆ ಗೊತ್ತಿರಬೇಕು ಅಂತ ಏನಿಲ್ಲ. ಬಂಧಿತ ಆರೋಪಿಗಳಿಂದ ಸಮಗ್ರ ಮಾಹಿತಿಯನ್ನು ಎಸ್‌ಐಟಿ ಕಲೆ ಹಾಕುತ್ತಿದೆ ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಸಮನ್ಸ್‌ ನೀಡಿದವರಿಗೆ ರೇವಣ್ಣರಿಂದ ಬೆದರಿಕೆ

ಮಾಜಿ ಸಚಿವ ಎಚ್.ಡಿ. ರೇವಣ್ಣ ಕುಟುಂಬಸ್ಥರು ಪ್ರಭಾವಸ್ಥರು, ಸಮನ್ಸ್ ನೀಡಿರುವ ತನಿಖಾಧಿಕಾರಿಗಳಿಗೇ ಎಚ್‌.ಡಿ. ರೇವಣ್ಣ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬೇಲ್ ಕೊಡಬಾರದು ಎಂದು ಎಸ್‌ಪಿಪಿ ಅಶೋಕ್ ನಾಯ್ಕ್‌ ವಾದ ಮಂಡಿಸಿದರು.

ಸಂತ್ರಸ್ತೆ ಹೇಳಿಕೆಯ ವಿಡಿಯೊ ವೈರಲ್‌ ಪ್ರಸ್ತಾಪ

ಸಂತ್ರಸ್ತೆ ವಿಡಿಯೊ ಹೇಳಿಕೆ ಭಾನುವಾರದಿಂದ ವೈರಲ್‌ ಆಗಿದೆ. ಈ ವಿಡಿಯೊವನ್ನು ಸಂತ್ರಸ್ತೆಗೆ ಹೆದರಿಸಿ ಮಾಡಲಾಗಿದೆ. ಈ ಬಗ್ಗೆ ಎಸ್ಐಟಿ ವಿಚಾರಣೆ ವೇಳೆ ಸಂತ್ರಸ್ತೆ ಹೇಳಿದ್ದಾರೆ. ತೋಟದ ಮನೆಯಲ್ಲಿ ಕೂಡಿ ಹಾಕಿದ್ದಾಗ ಸಂತ್ರಸ್ತೆಯ ವಿಡಿಯೊ ರೆಕಾರ್ಡ್ ಮಾಡಲಾಗಿದೆ. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲವೆಂದು ಅವರಿಂದ ಹೇಳಿಸಿದ್ದಾರೆ ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಸಿ.ವಿ.ನಾಗೇಶ್ ವಾದ

ಇಬ್ಬರೂ ಎಸ್‌ಪಿಪಿಗಳ ವಾದ ಮಂಡನೆ ನಂತರ ಮತ್ತೆ ಸಿ.ವಿ. ನಾಗೇಶ್ ವಾದವನ್ನು ಆರಂಭಿಸಿದರು. ಏಪ್ರಿಲ್ 29ಕ್ಕೆ ಕಿಡ್ನ್ಯಾಪ್ ಮಾಡಿದರೆ, ದೂರು ಕೊಡಲು ತಡ ಯಾಕೆ ಮಾಡಿದರು? ಸಂತ್ರಸ್ತ ಮಹಿಳೆ ಎಚ್.ಡಿ.ರೇವಣ್ಣ ಅವರ ಸಂಬಂಧಿಯಾಗಿದ್ದಾರೆ. ಸುಮಾರು ವರ್ಷ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಕೆಲಸ ಮಾಡಿದ್ದವರನ್ನು ಯಾಕೆ ಕಿಡ್ನ್ಯಾಪ್ ಮಾಡಬೇಕು? ಮನೆ ಕೆಲಸ ಮಾಡುತ್ತಿದ್ದರಲ್ಲ, ಕರೆದುಕೊಂಡು ಬನ್ನಿ ಅಂದಿರಬಹುದು. ಇಲ್ಲಿ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ರೇವಣ್ಣ ಅರೆಸ್ಟ್ ಆದ ದಿನವೇ ಸಂತ್ರಸ್ತೆ ಮಹಿಳೆ ಹುಣಸೂರಿನಲ್ಲಿ ಪತ್ತೆಯಾಗಿದ್ದಾರೆ. ಮೈಸೂರಿನ ಹುಣಸೂರು ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಪತ್ತೆ ಆಗಿದ್ದರು. ಸಂತ್ರಸ್ತ ಮಹಿಳೆ ಪ್ರಜ್ವಲ್ ರೇವಣ್ಣ ವಿರುದ್ಧ ಮಾತ್ರ ಆರೋಪಿಸಿದ್ದಾರೆ. ರೇವಣ್ಣ ವಿರುದ್ಧ ಸಂತ್ರಸ್ತೆ ಮಹಿಳೆ ಯಾವುದೇ ಆರೋಪವನ್ನು ಮಾಡಿಲ್ಲ ಎಂದು ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು.

ಸಂತ್ರಸ್ತ ಮಹಿಳೆಯಿಂದ ಪ್ರಜ್ವಲ್ ರೇವಣ್ಣ ವಿರುದ್ಧ ರೇಪ್ ಆರೋಪದ ಬಗ್ಗೆ ವಾದ ಮಂಡಿಸಿದ ಸಿ.ವಿ. ನಾಗೇಶ್‌, ಸಂತ್ರಸ್ತೆಯು ಸಿಆರ್‌ಪಿಸಿ 161 ಅಡಿಯಲ್ಲಿ ಹೇಳಿಕೆ ನೀಡುವಾಗ, ಕೇವಲ ಪ್ರಜ್ವಲ್‌ ವಿರುದ್ಧ ಅತ್ಯಾಚಾರ ಅಂತಾ ಆರೋಪ ಮಾಡಿದ್ದಾಳೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಎರಡು ರಿಮ್ಯಾಂಡ್‌ ಅರ್ಜಿ ಸಲ್ಲಿಕೆಯಾಗಿದೆ. ಕಿಡ್ನ್ಯಾಪ್ ಮಾಡಿದ್ದಾರೆ ಅಂತಾ ಮಹಿಳೆಯ ಮಗನಿಗೆ ಹೇಗೆ ಗೊತ್ತಾಯ್ತು? ಅದು ಊಹೆಯಷ್ಟೇ. ಸಂತ್ರಸ್ತೆಯ ಮಗನಿಗೆ ಯಾರೂ ಕಾಲ್ ಮಾಡಿ ಡಿಮ್ಯಾಂಡ್ ಮಾಡಿಲ್ಲ. ಇನ್ನು ಸಂತ್ರಸ್ತ ಮಹಿಳೆಯನ್ನು ಅಂದು ಹುಣಸೂರಿನ ಬಳಿ ರಕ್ಷಣೆ ಮಾಡಲಾಗಿದೆ. ಆಪ್ತ ಸಮಾಲೋಚನೆ ಮಾಡಿ, ಆಕೆಯನ್ನು ಸುರಕ್ಷಿತ ಕೊಠಡಿಯಲ್ಲಿಡಲಾಗಿದೆ. ಈ ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಿಲ್ಲ ಏಕೆ? ಇಲ್ಲಿಯ ತನಕ ರೇವಣ್ಣ ವಿರುದ್ಧ ಯಾವುದೇ ಸಾಕ್ಷಿಯನ್ನೂ ಸಂಗ್ರಹಿಸಿಲ್ಲ, ಸಂತ್ರಸ್ತೆಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಿಸಿಲ್ಲ. ಸಂತ್ರಸ್ತ ಮಹಿಳೆಯನ್ನು ಕೇವಲ ಆಪ್ತ ಸಮಾಲೋಚನೆಯಲ್ಲಿ ಇರಿಸಿದ್ದಾರೆ ಎಂದು ರೇವಣ್ಣ ಪರ ವಕೀಲ ಸಿ.ವಿ.ನಾಗೇಶ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಸಂತ್ರಸ್ತ ಮಹಿಳೆಯನ್ನು ಹುಣಸೂರಿನ ತೋಟದಿಂದ ರಕ್ಷಣೆ ಮಾಡಿದರಾ? ಎಸ್‌ಐಟಿ ಎಲ್ಲಿಂದ ಮಹಿಳೆಯನ್ನು ಕರೆತಂದರು? ಅವರ ಸಂಬಂಧಿಕರ ಮನೆಯಿಂದ ಸಂತ್ರಸ್ತೆಯನ್ನು ಕರೆ ತಂದಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಎರಡು ಕಡೆ ರೆಕಾರ್ಡ್ ಆಗಿದೆ. ಒಂದು ಕಡೆ ಫೋಟೋ ಶಾಪ್‌ವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೊಂದು ಕಡೆ ತರಕಾರಿ ಅಂಗಡಿ ಸಿಸಿ ಕ್ಯಾಮರಾದಲ್ಲಿ ಇದು ಸೆರೆಯಾಗಿದೆ. ಅನುಮತಿ ನೀಡಿದರೆ ಸೆರೆಯಾಗಿರುವ ದೃಶ್ಯವನ್ನು ತೋರಿಸಲು ನಾವು ಸಿದ್ಧ. ಈಗ ನ್ಯಾಯಾಲಯದಲ್ಲಿಯೇ ಪ್ಲೇ ಮಾಡುತ್ತೇವೆ. ಸ್ಪೆಷಲ್ ಇನ್‌ವೆಸ್ಟಿಗೇಷನ್ ಟೀಮ್ ವಿರುದ್ಧವೇ ಸಿ.ವಿ. ನಾಗೇಶ್ ಆರೋಪಿಸಿದರು.

ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್‌ಐಟಿಯವರೇ ಟ್ಯಾಂಪರಿಂಗ್ ಮಾಡುತ್ತಿದ್ದಾರೆ. ಆದರೆ, ಎಸ್‌ಪಿಪಿಯವರು ಸಂತ್ರಸ್ತೆ ಹೇಳಿಕೆಯನ್ನು ಟ್ಯಾಂಪರಿಂಗ್ ಆಗಿದೆ ಎಂದು ಹೇಳಿದ್ದಾರೆ. ವೈರಲ್ ಆದ ಸ್ಪಷ್ಟನೆ ವಿಡಿಯೊದಲ್ಲಿ ಸಂತ್ರಸ್ತೆಯೇ ಹೇಳಿಕೊಂಡಿದ್ದಾರೆ. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲವೆಂದಿದ್ದಾರೆ. ನಮ್ಮ ಕುಟುಂಬಕ್ಕೆ ತೊಂದರೆಯಾದರೆ ಅವರೇ ಹೊಣೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಂಬಂಧಿಕರ ಮನೆಯಲ್ಲಿದ್ದೇನೆ. ಬೇಗ ಬರುತ್ತೇನೆ ಎಂದೂ ಹೇಳಿದ್ದಾರೆ. ಯಾರೂ ಬೆದರಿಕೆ ಹಾಕಿಲ್ಲ, ಬಲವಂತವಾಗಿಯೂ ಕರೆದೊಯ್ದಿಲ್ಲ ಎಂದು ಹೇಳಿಕೊಂಡಿದ್ದಾರೆ. ಹೀಗೆಲ್ಲಾ ಸಂತ್ರಸ್ತೆಯೇ ವಿಡಿಯೊ ಮೂಲಕ ಹೇಳಿದ್ದಾರೆ. ಹಾಗಾಗಿ ಕಿಡ್ನ್ಯಾಪ್ ಹೇಗೆ ಆಗುತ್ತದೆ. ಈ ಕಾರಣಕ್ಕಾಗಿ ರೇವಣ್ಣ ಅವರಿಗೆ ಜಾಮೀನು ನೀಡಬೇಕು ಎಂದು ಸಿ.ವಿ. ನಾಗೇಶ್‌ ಕೋರಿದರು.

ಕಿಡ್ನ್ಯಾಪ್ ಪ್ರಕರಣದಲ್ಲಿ ಚುನಾವಣಾ ತಕರಾರು ಅರ್ಜಿ ತರುವುದು ಬೇಡ. ಎಸ್‌ಪಿಪಿ ವಾದದ ಅಂಶಗಳನ್ನು ಆಕ್ಷೇಪಿಸಿ ರೇವಣ್ಣ ಪರ ವಕೀಲರು ವಾದ ಮಂಡಿಸಿದರು. ಎಚ್.ಡಿ.ರೇವಣ್ಣ ವಿರುದ್ಧ ಕೇಳಿಬಂದಿರುವ ಆರೋಪಗಳು ಸಾಬೀತಾಗಿಲ್ಲ. ಹಿಂದಿನ ಕೇಸ್‌ಗಳು ಸಾಬೀತಾಗಿದ್ದರೆ ಯಾಕೆ ಎಲ್ಲವೂ ಬಿ ರಿಪೋರ್ಟ್ ಆಗುತ್ತಿತ್ತು? ಎಂದು ಪ್ರಶ್ನೆ ಮಾಡಿದರು.

ರಿಮ್ಯಾಂಡ್‌ ಅಪ್ಲಿಕೇಷನ್‌ನಲ್ಲಿ ಎಸ್‌ಐಟಿ ಲೋಪವೆಸಗಿದೆ. ಅದರಲ್ಲಿ ಸಂತ್ರಸ್ತೆಯ ಹೇಳಿಕೆ ಒಂದು ಪ್ಯಾರಾ ಇದೆ. ಅದು ಬಿಟ್ಟು ರಿಮ್ಯಾಂಡ್‌ ಅಪ್ಲಿಕೇಷನ್‌ನಲ್ಲಿ ಆರೋಪಿ ಹೇಳಿಕೆಯೇ ಇದೆ. ಸಂತ್ರಸ್ತ ಮಹಿಳೆಯ ಹೇಳಿಕೆ ಒಂದು ಪ್ಯಾರಾ ಬಿಟ್ಟರೆ ಬೇರೆ ಇಲ್ಲವೇ ಇಲ್ಲ. ಯಾವಾಗಲೂ ಹೇಳಿಕೆ ದಾಖಲು ಮಾಡಿಕೊಳ್ಳುವುದೇ ಎಸ್‌ಐಟಿ ಕೆಲಸನಾ? ಸಂತ್ರಸ್ತೆ ಏನು ಹೇಳ್ತಾರೆ? ಏನು ಹೇಳಲ್ಲ ಅಂತಾ ಹೇಳಿಕೆ ದಾಖಲಾಗಬೇಕು. ಆಕೆ ಎಸ್‌ಐಟಿ ಸುಪರ್ದಿಯಲ್ಲಿರುವಾಗ ಏನನ್ನೂ ಮಾಡಿಲ್ಲ. ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿರುವಂತೆ ಯಾವುದೇ ಸಾಕ್ಷಿ ಸಂಗ್ರಹಿಸಿಲ್ಲ. ಆದರೆ, ನ್ಯಾಯಾಲಯಕ್ಕೆ ಎಸ್ಐಟಿ ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಸಿದ್ದಾರೆ ಎಂದು ನಾಗೇಶ್ ಹೇಳಿದರು.

ಕಾಯ್ದೆ ಬಗ್ಗೆ ವಕೀಲರ ಆಕ್ಷೇಪ

ಸಂತ್ರಸ್ತೆ ಮೇಲೆ ಯಾವುದಾದರೂ ರೀತಿ ಹಲ್ಲೆ, ಬೆದರಿಕೆ ಇರಬೇಕು. ಆಗ ಮಾತ್ರ ಐಪಿಸಿ ಸೆಕ್ಷನ್‌ 364ಎ ಕಾಯ್ದೆ ಅನ್ವಯ ಆಗುತ್ತದಲ್ಲವೇ? ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತ್ರಸ್ತೆ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಹಾಗಾದರೆ ರೇವಣ್ಣ ವಿರುದ್ಧ ಸೆಕ್ಷನ್‌ 364ಎ ಹೇಗೆ ಅನ್ವಯ ಆಗುತ್ತದೆ? ಎಂದು ಸರ್ಕಾರದ ವಿಶೇಷ ಅಭಿಯೋಜಕರ (SPP) ವಾದಕ್ಕೆ ವಕೀಲ ಸಿ.ವಿ. ನಾಗೇಶ್ ಪ್ರತಿವಾದವನ್ನು ಮಂಡಿಸಿದರು.

ಕೊನೇ ಪಕ್ಷ ಸಂತ್ರಸ್ತೆಯ ಕುಟುಂಬದವರ ಮೇಲೂ ಹಲ್ಲೆ ನಡೆದಿಲ್ಲ. ಆರೋಪಿ ಸ್ಥಾನದಲ್ಲಿರುವ ರೇವಣ್ಣ ಯಾರ ಮೇಲೆಯೂ ಹಲ್ಲೆ ಮಾಡಿಲ್ಲ. ಆದರೂ ಕಿಡ್ನ್ಯಾಪ್ ಪ್ರಕರಣದಲ್ಲಿ ಸೆಕ್ಷನ್‌ 364ಎ ಹಾಕಿದ್ದು ಯಾಕೆ? ಈ ಸೆಕ್ಷನ್ ಹಾಕುವ ಪ್ರಮೇಯವೇ ಕಾಣುತ್ತಿಲ್ಲ. ಘಟನೆ ನಡೆದ ದಿನಕ್ಕೂ ಕೇಸ್ ದಾಖಲಾದ ದಿನಕ್ಕೂ ಅಂತರ ಇದೆ. ನಿಜವಾಗಿಯೂ ಕಿಡ್ನ್ಯಾಪ್ ಆಗಿದ್ದರೆ ಅಲ್ಲಿ ಡಿಮ್ಯಾಂಡ್ ಇರಬೇಕು. ಆದರೆ, ಬಲವಂತದ ಕಿಡ್ನ್ಯಾಪ್ ಆಗಿಲ್ಲ, ಯಾವುದೇ ಬೇಡಿಕೆ ಇಲ್ಲ ಎಂದು ವಾದಿಸಿದ ನಾಗೇಶ್‌, 364 ಎ ಸಂಬಂಧ ಹಲವು ಕೇಸ್‌ ಸ್ಟಡಿಗಳನ್ನು ಉಲ್ಲೇಖಿಸಿದರು. ಜಾರ್ಖಂಡ್ ಹೈಕೋರ್ಟ್‌ನ ರೋಹಿಣಿ ದೇವಿ ಪ್ರಕರಣವನ್ನು ಉಲ್ಲೇಖಿಸಿದರು.

ಈ ವೇಳೆ ತಮ್ಮ ಹಿಂದಿನ ವಾದಕ್ಕೆ ಕರೆಕ್ಷನ್ ಮಾಡಿಕೊಂಡ ವಕೀಲ ನಾಗೇಶ್, ಕಿಡ್ನ್ಯಾಪ್ ಸಂತ್ರಸ್ತೆ ರೇವಣ್ಣ ಅವರ ಸಂಬಂಧಿ ಅಲ್ಲ. ಮೊದಲು ಕೇಸ್ ದಾಖಲಿಸಿದ್ದ ಮಹಿಳೆ ಮಾತ್ರ ರೇವಣ್ಣರ ಸಂಬಂಧಿ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಕೇಸ್‌ನಲ್ಲಿನ ಸಂತ್ರಸ್ತೆ ಅಲ್ಲ. ಯಾರನ್ನಾದರೂ ಅಪಹರಿಸಿ, ಒತ್ತೆಯಾಳಾಗಿಟ್ಟುಕೊಂಡಲ್ಲಿ ಮಾತ್ರ ಸೆಕ್ಷನ್‌ 364ಎ ಆಗಬೇಕು. ಇಲ್ಲವಾದಲ್ಲಿ ಈ ರೀತಿ ಪ್ರಕರಣದಲ್ಲಿ ಸೆಕ್ಷನ್ 364ಎ ಸೆಕ್ಷನ್‌ ಹಾಕುವ ಅಗತ್ಯ ಇರಲ್ಲ. ಒತ್ತೆಯಾಳಾಗಿ ಇರಿಸಿಕೊಂಡು ದೌರ್ಜನ್ಯ ನಡೆಸಿ, ಕಿರುಕುಳ ನೀಡಿದರೆ ಅಪರಾಧ. ಪ್ರಾಣ ಹಾನಿ ಆಗುವಂತೆ ಹಲ್ಲೆ ಮಾಡುವುದು ಮಾತ್ರ ಅಪರಾಧ. ಇನ್ನು ವಿದೇಶದಲ್ಲಿರುವ ವ್ಯಕ್ತಿ ಕಿಡ್ನ್ಯಾಪ್ ಮಾಡಿಸಿದರೆ ಆಗ ಸೆಕ್ಷನ್‌ 365ಎ ಅನ್ವಯ ಆಗುತ್ತದೆ.
ಆದರೆ, ಈ ಕೆ.ಆರ್.ನಗರ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ 365ಎ ಅನ್ವಯ ಆಗಲ್ಲ. ಸಂತ್ರಸ್ತ ಮಹಿಳೆ ಎಚ್.ಡಿ. ರೇವಣ್ಣ ಅವರ ಮನೆಯಲ್ಲಿ 10 ವರ್ಷ ಕೆಲಸ ಮಾಡಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಈ ಪ್ರಕರಣದಲ್ಲಿ ಕಿಡ್ನ್ಯಾಪ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ರೇವಣ್ಣ ವಿರುದ್ಧ ಬಲವಾದ ಸಾಕ್ಷಿಗಳೇ ಇಲ್ಲ

ಕಿಡ್ನ್ಯಾಪ್ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ವಿರುದ್ಧ ಬಲವಾದ ಸಾಕ್ಷಿಗಳೇ ಇಲ್ಲ. ಆದರೂ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆಯಾಗುವ ಸೆಕ್ಷನ್‌ಗಳನ್ನು ಹಾಕಲಾಗಿದೆ. ಏನೇ ಆದರೂ ಈ ರೀತಿ ಪ್ರಕರಣದಲ್ಲಿ ಬೇಲ್ ಯಾಕೆ ನೀಡಬಾರದು? ಎಂದು ಕೆಲವು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಕೇಸ್ ಸ್ಟಡಿಗಳನ್ನು ಉಲ್ಲೇಖಿಸಿದರು. ಇನ್ನು ರೇವಣ್ಣ ವಿರುದ್ಧ ಪ್ರೈಮಾಫೇಸಿ ಸಾಬೀತಾಗುವ ಯಾವುದೇ ಆರೋಪವೂ ಇಲ್ಲ. ತಮಗೆ ಗೊತ್ತಿರುವವರನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡರೆ ತಪ್ಪೇನು? ಸಂತ್ರಸ್ತೆಯನ್ನು ಭವಾನಿ ರೇವಣ್ಣ ಮನೆಗೆ ಕರೆಸಿಕೊಂಡ ಕ್ರಮಕ್ಕೆ ಸಮರ್ಥನೆ ಮಾಡಿದರು.

ಸಂತ್ರಸ್ತ ಮಹಿಳೆಯನ್ನು ರಕ್ಷಿಸಿ 6 ದಿನವಾದರೂ ಸೂಕ್ತ ರೀತಿ ಹೇಳಿಕೆ ಪಡೆದಿಲ್ಲ. ಟ್ಯೂಷನ್‌ಗೆ ಹೋಗಿದ್ದ ಬಾಲಕನ ಕಿಡ್ನ್ಯಾಪ್ ಪ್ರಕರಣವನ್ನು ಇದೇ ವೇಳೆ ಉಲ್ಲೇಖಿಸಿದರು. ನಿಮ್ಮ ತಂದೆಗೆ ಅಪಘಾತವಾಗಿದೆ, ಆಸ್ಪತ್ರೆಯಲ್ಲಿದ್ದಾರೆಂದು ಹೇಳಿ ಅಪಹರಿಸಿದ್ದಾರೆ. ಬಾಲಕನನ್ನು ಅಪಹರಿಸಿದ ಬಳಿಕ ತಂದೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪೊಲೀಸರಿಗೆ ಎಲ್ಲಿಯೂ ಹೇಳದಂತೆ ಬೆದರಿಕೆಯನ್ನು ಹಾಕಿದ್ದರು. ಆದರೆ, ಎಚ್.ಡಿ.ರೇವಣ್ಣ ಪ್ರಕರಣದಲ್ಲಿ ಯಾವುದೇ ರೀತಿ ಬೆದರಿಕೆ, ಬೇಡಿಕೆ ಇಲ್ಲ. ಹಾಗಾಗಿ ಎಚ್.ಡಿ.ರೇವಣ್ಣ ಅವರಿಗೆ ಇದು ಜಾಮೀನು ನೀಡಬಹುದಾದ ಪ್ರಕರಣವಾಗಿದೆ ಎಂದು ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದರು.

ತುಮಕೂರು ಕಿಡ್ನ್ಯಾಪ್‌ ಕೇಸ್‌ ಉಲ್ಲೇಖ

ಇದೇ ವೇಳೆ ತುಮಕೂರಿನ ಕಿಡ್ನ್ಯಾಪ್ ಪ್ರಕರಣವೊಂದನ್ನು ಉಲ್ಲೇಖಿಸಿ ನಾಗೇಶ್ ವಾದ ಮಾಡಿದ್ದಾರೆ. ಎಸ್‌. ರಮೇಶ್ ವರ್ಸಸ್‌ ಸ್ಟೇಟ್ ಆಫ್ ಕರ್ನಾಟಕ ಪ್ರಕರಣದ ತೀರ್ಪು ಉಲ್ಲೇಖ ಮಾಡಿದ ನಾಗೇಶ್‌, ಕಾನೂನುಬಾಹಿರವಾಗಿ ಒತ್ತೆಯಾಳಾಗಿ ಇರಿಸಿಕೊಂಡರೇ ಮಾತ್ರ ಅಪರಾಧ. ಆದರೆ, ಕೆ.ಆರ್.ನಗರ ಕಿಡ್ನ್ಯಾಪ್ ಪ್ರಕರಣದಲ್ಲಿ ಈ ರೀತಿ ಬೆದರಿಕೆ ಪ್ರಶ್ನೆ ಇಲ್ಲ. ಆರೋಪಿ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧ ಇದ್ದರೆ ಬೇಲ್‌ ಬೇಡ. ಆಗ ಮಾತ್ರ ನ್ಯಾಯಾಲಯ ರೇವಣ್ಣರಿಗೆ ಜಾಮೀನು ತಿರಸ್ಕರಿಸುವ ಅವಕಾಶ ಇದೆ. ಆದರೆ, ಇಲ್ಲಿ ರೇವಣ್ಣ ವಿರುದ್ಧ ಯಾವುದೇ ರೀತಿಯ ಸಾಕ್ಷಿಗಳೇ ಕಾಣುತ್ತಿಲ್ಲ. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧ ಕಾಣುತ್ತಿಲ್ಲ. ಎಸ್‌ಐಟಿ ಸಲ್ಲಿಸಿದ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಸಿಆರ್‌ಪಿಸಿ 164 ಹೇಳಿಕೆ ದಾಖಲಿಸಿಲ್ಲ. ಆದರೂ ಜೀವಾವಧಿ ಶಿಕ್ಷೆ ನೀಡುವ ಅವಕಾಶ ಇರುವ ಸೆಕ್ಷನ್‌ 364ಎ ಹಾಕಿದ್ದಾರೆ. ಆರೋಪಿತ ರೇವಣ್ಣ ವಿರುದ್ಧ ಸಾಕ್ಷಿಗಳೂ ಇಲ್ಲ, ಸಾಂದರ್ಭಿಕ ಸಾಕ್ಷ್ಯವೂ ಇಲ್ಲ ಎಂದು ನಾಗೇಶ್‌ ಮಾಹಿತಿ ನೀಡಿದರು.

ತೀರ್ಪಿನ ಪ್ರತಿಗಾಗಿ ವಾದ – ಪ್ರತಿವಾದ

ಎಸ್‌ಐಟಿ ಉಲ್ಲೇಖಿಸಿದ ತೀರ್ಪುಗಳಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಲಾಗಿತ್ತು ಆದರೆ ರೇವಣ್ಣ ಪ್ರಕರಣದಲ್ಲಿ ಬೆದರಿಕೆ ಎಲ್ಲಿ ಹಾಕಿದ್ದಾರೆ? ಯಾವ ಬೇಡಿಕೆ ಇದೆ..? ಎಸ್‌ಐಟಿ ಕೇಸ್‌ ಸ್ಟಡಿಗೆ ಕೌಂಟರ್ ಕೊಟ್ಟು ರೇವಣ್ಣ ಪರ ವಕೀಲ ನಾಗೇಶ್ ವಾದ ಮಂಡಿಸುತ್ತಾ, ಕೆ.ಆರ್.ನಗರ ಕಿಡ್ನ್ಯಾಪ್ ಕೇಸಲ್ಲಿ 364ಎ ಹಾಕಲು ಬೇಕಾದ ಬೇಸಿಕ್ ಅಂಶಗಳಿಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿದರು. ಆದರೆ ಆ ಎಲ್ಲಾ ಪ್ರಕರಣಗಳಲ್ಲಿ ಬೆದರಿಕೆವೊಡ್ಡಿ ಹಣಕ್ಕಾಗಿ ಬೇಡಿಕೆ ಇರಿಸಲಾಗಿತ್ತು. ಇಲ್ಲಿ ದಾಖಲಾದ ಕಿಡ್ನ್ಯಾಪ್ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಆ ಆರೋಪಗಳಿಲ್ಲ ಎಂದು ವಾದಿಸಿದರು.

ಆಗ ಮಧ್ಯ ಪ್ರವೇಶ ಮಾಡಿದ ಜಯ್ನಾ ಕೊಠಾರಿ, ನೀವು ಉಲ್ಲೇಖಿಸುತ್ತಿರುವ ಪ್ರಕರಣಗಳ ತೀರ್ಪಿನ ಪ್ರತಿ ಕೊಡಿ ಎಂದು ಕೋರಿದರು. ಈ ನಡುವೆ ಎಸ್‌ಪಿಪಿ ಜಯ್ನಾ ಕೊಠಾರಿ ಹಾಗೂ ರೇವಣ್ಣ ವಕೀಲರ ಮಧ್ಯೆ ವಾದ ಪ್ರತಿವಾದ ನಡೆಯಿತು. ನೀವು ಕೇಳಿದ ಕೂಡಲೇ ಕೊಡಬೇಕು ಅಂತೇನಿಲ್ಲ ಎಂದು ಸಿ.ವಿ.ನಾಗೇಶ್ ಹೇಳಿದರು. ವರದಿಯಾಗಿರುವ ಪ್ರಕರಣಗಳನ್ನು ನೀವು ಓದಿಕೊಂಡಿರಬೇಕು ಎಂದು ನಾಗೇಶ್ ಕುಟುಕಿದರು. ಆದರೆ, ಯಾವ ಕೇಸ್ ಸ್ಟಡಿ ಉಲ್ಲೇಖಿಸುತ್ತೀರೋ ಅದರ ಪ್ರತಿಯನ್ನು ಕೊಡಿ ಎಂದು ಒತ್ತಾಯಿಸಿದರು.

ರೇವಣ್ಣ ವಿರುದ್ಧ ಆರೋಪಗಳೆಲ್ಲಾ ಊಹಾಪೋಹ, ರಾಜಕೀಯ ಪ್ರೇರಿತ. ಈ ರೀತಿಯಲ್ಲಿ ಆಧಾರರಹಿತ ಆರೋಪಗಳನ್ನು ಪರಿಗಣಿಸಬಾರದು. ರೇವಣ್ಣ 6 ಸಲ ಎಂಎಲ್‌ಎ ಆಗಿದ್ದವರು, ಕಾನೂನಿಗೆ ಸದಾ ತಲೆಬಾಗುತ್ತಾರೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಿ ಎಂದು ವಾದವನ್ನು ನಾಗೇಶ್‌ ಮುಕ್ತಾಯಗೊಳಿಸಿದರು.

ಇದನ್ನೂ ಓದಿ: Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

ಮತ್ತೆ ಎಸ್‌ಪಿಪಿ ವಾದಕ್ಕೆ ಜಡ್ಜ್‌ ಅವಕಾಶ

ಸಿ.ವಿ.ನಾಗೇಶ್ ಪ್ರತಿವಾದಕ್ಕೆ ಮತ್ತೆ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆಗೆ ಪ್ರಾರಂಭ ಮಾಡಿದರು. ಆಗ ಮಧ್ಯ ಪ್ರವೇಶ ಮಾಡಿದ ನ್ಯಾಯಾಧೀಶರು, ಮತ್ತೆ ಪ್ರತಿವಾದಕ್ಕೆ ಅವಕಾಶ ಇದೆಯೇ ಎಂದು ಪ್ರಶ್ನೆ ಮಾಡಿದರು. ಆಗ ಜಯ್ನಾ ಕೊಠಾರಿ, ಅವಕಾಶ ಇಲ್ಲ. ಆದರೆ, 5 ನಿಮಿಷ ಕಾಲಾವಕಾಶ ಕೊಡಿ ಎಂದು ಕೇಳಿಕೊಂಡರು. ಜಯ್ನಾ ಕೊಠಾರಿ ಮತ್ತೆ ವಾದ ಮಾಡಲು ನಾಗೇಶ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ, ಮತ್ತೆ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆಗೆ ಜಡ್ಜ್‌ ಅವಕಾಶ ನೀಡಿದರು. ಅಲ್ಲದೆ, ಎರಡೂ ರಿಮ್ಯಾಂಡ್ ಅಪ್ಲಿಕೇಷನ್ ಓದಲು ಹೇಳಿದರು.

ಮೇ 4ರಂದು ಸಂತ್ರಸ್ತೆ ರಕ್ಷಣೆ ಹಾಗೂ ಮೇ 5ರಂದೇ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಮೇ 5ರಂದೇ ಸಿಆರ್‌ಪಿಸಿ 161 ಅಡಿಯಲ್ಲಿ ಎಸ್‌ಐಟಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಯ್ನಾ ಕೊಠಾರಿ ಹೇಳಿದರು. ಆಗ ಮಧ್ಯಪ್ರವೇಶ ಮಾಡಿದ ನ್ಯಾಯಾಧೀಶರು, ಹೇಳಿಕೆ ದಾಖಲಿಸಿಕೊಂಡ ಬಗ್ಗೆ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಇದೆಯಾ? ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಎಲ್ಲಿ ಇದೆ ಓದಿ ಹೇಳಿ ಎಂದು ಕೇಳಿದರು. ಈ ವೇಳೆ ಎಸ್‌ಪಿಪಿಗೆ ಮಾಹಿತಿ ನೀಡುತ್ತಿದ್ದ ಎಸ್‌ಐಟಿ ಪೊಲೀಸರ ವಿರುದ್ಧ ಜಡ್ಜ್ ಗರಂ ಆದರು. ನಿಮಗೆ ಎಲ್ಲಿ ಬಂದು ಇನ್ಸ್‌ಟ್ರಕ್ಷನ್‌ ಕೊಡಬೇಕು ಅಂತಾ ಗೊತ್ತಾಗಲ್ವಾ? ಕೋರ್ಟ್‌ನಲ್ಲಾ ಬಂದು ಇನ್ಸ್‌ಟ್ರಕ್ಷನ್‌ ಕೊಡೋದು? ಎಂದು ಕೇಳಿದರು.

ಮತ್ತೆ ಲಿಖಿತ ವಾದ ಮಂಡಿಸಲು ಎಸ್‌ಪಿಪಿ ಜಯ್ನಾ ಕೊಠಾರಿ ಮನವಿ ಮಾಡಿದರು. ಆದಕ್ಕೆ ಪ್ರತಿಕ್ರಿಯಿಸಿದ ಜಡ್ಜ್ ಲಿಖಿತ ವಾದ ಇನ್ಯಾವಾಗ ಮಾಡ್ತೀರಾ? ನಾನು ಆದೇಶ ಪ್ರಕಟಿಸಲಿದ್ದೇನೆ ಎಂದು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಹೇಳಿದರು.

Continue Reading
Advertisement
Image-Fantastic Dragon Jewellery!
ಫ್ಯಾಷನ್20 mins ago

Fashion Trend: ಜೆನ್‌ ಜಿ ಹುಡುಗ-ಹುಡುಗಿಯರ ಆವರಿಸಿದ ಚಿತ್ರ-ವಿಚಿತ್ರ ಡ್ರಾಗನ್‌ ಜ್ಯುವೆಲರಿಗಳು!

Silicon City Hospital doctors successful surgery on girl suffering from Arterio Venus malpermation
ಬೆಂಗಳೂರು25 mins ago

Silicon City Hospital: ಲಕ್ಷಕ್ಕೆ ಇಬ್ಬರಿಗೆ ಬರುವ ಮೆದುಳಿನ ರಕ್ತನಾಳ ಒಡೆಯುವ ಕಾಯಿಲೆ; ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಬಾಲಕಿ ಪಾರು

CM Siddaramaiah says Our government is stable for 5 years BJP will disintegrate
Lok Sabha Election 202431 mins ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

Team India New Head Coach
ಕ್ರೀಡೆ34 mins ago

Team India New Head Coach: ಭಾರತ ತಂಡಕ್ಕೆ ಆಸೀಸ್ ಮಾಜಿ​ ಆಟಗಾರ ಕೋಚ್​ ಆಗುವುದು ನಿಶ್ಚಿತ

Money Guide
ಮನಿ-ಗೈಡ್45 mins ago

Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

Hebbal Flyover
ಪ್ರಮುಖ ಸುದ್ದಿ54 mins ago

Hebbal flyover: ಬಿಡಿಎ ಕಾಮಗಾರಿ; ಹೆಬ್ಬಾಳ ಮೇಲ್ಸೇತುವೆಗೆ ಕೆ.ಆರ್.ಪುರಂನಿಂದ ಬರುವ ವಾಹನಗಳಿಗೆ ನಿರ್ಬಂಧ

DK Shivakumar hits back at HD Kumaraswamy
ರಾಜಕೀಯ1 hour ago

HD Kumaraswamy: ಎಚ್‌ಡಿಕೆ ಯಾವ ತಿಮಿಂಗಿಲವನ್ನಾದರೂ ಹಿಡಿದು, ಬಡಿದು ನುಂಗಿಕೊಳ್ಳಲಿ: ಡಿಕೆ ಶಿವಕುಮಾರ್ ತಿರುಗೇಟು

theft case
ಬೆಂಗಳೂರು1 hour ago

Theft Case : ಪಕ್ಕದ ಮನೆಗೆ ಕನ್ನ ಹಾಕಿದ ಚೋರ್‌ ದಂಪತಿ; ಕೆಲಸ ಕೊಟ್ಟ ಮಾಲೀಕನನ್ನೇ ದೋಚಿದ

America
ವಿದೇಶ1 hour ago

America: ಶ್ವೇತಭವನದಲ್ಲಿ ಮೊಳಗಿದ ಸಾರೆ ಜಹಾನ್‌ ಸೇ ಅಚ್ಚಾ..ವಿಡಿಯೋ ನೋಡಿ

KL Rahul
ಕ್ರೀಡೆ2 hours ago

KL Rahul: ರಾಹುಲ್ ಆರ್​ಸಿಬಿಗೆ ಬರಲ್ಲ; ಔತಣ ಕೂಟಕ್ಕೆ ಕರೆದು ತಬ್ಬಿಕೊಂಡ ಸಂಜೀವ್ ಗೋಯೆಂಕಾ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

CM Siddaramaiah says Our government is stable for 5 years BJP will disintegrate
Lok Sabha Election 202431 mins ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20244 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ5 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು6 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ12 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ22 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ23 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ23 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ24 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ24 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌