Viral Video: ನಾಯಿ ಬೊಗಳುವುದು ಸಾಮಾನ್ಯ, ಹಾಡುವುದನ್ನು ಕೇಳಿದ್ದೀರಾ? - Vistara News

ವೈರಲ್ ನ್ಯೂಸ್

Viral Video: ನಾಯಿ ಬೊಗಳುವುದು ಸಾಮಾನ್ಯ, ಹಾಡುವುದನ್ನು ಕೇಳಿದ್ದೀರಾ?

ನಾಯಿಯೊಂದು ಲ್ಯಾಪ್‌ಟಾಪ್‌ನಲ್ಲಿ ಹಾಡು ಕೇಳಿ ತಾನೂ ಹಾಡನ್ನು ಹೇಳುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral Video) ಆಗಿದೆ.

VISTARANEWS.COM


on

singing dog
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರಾಣಿಗಳು ಮುದ್ದಾಗಿ ಆಟವನ್ನು ಆಡುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಆದರೆ ನೀವು ಎಲ್ಲಾದರೂ ಪ್ರಾಣಿಗಳು ಹಾಡು ಹೇಳುವುದನ್ನು ನೋಡಿದ್ದೀರಾ? ಇದೀಗ ನಾಯಿಯೊಂದು ಹಾಡು ಹೇಳುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡುತ್ತಿದ್ದು, ಆ ವಿಡಿಯೊ ಭಾರೀ ವೈರಲ್‌ (Viral Video) ಆಗಿದೆ.

ಇಂಥದ್ದೊಂದು ವಿಡಿಯೊವನ್ನು, ಪ್ರಾಣಿಗಳನ್ನು ರಕ್ಷಿಸಿ ಅವುಗಳನ್ನು ದತ್ತು ಕೊಡುವ ಸಂಸ್ಥೆಯಾದ ಸ್ಯಾಮ್ಸನ್‌ ಸ್ಯಾಂಕ್ಚುರಿ ರೆಸ್ಕ್ಯೂ ತಂಡವು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಸ್ವೀನಿ ಹೆಸರಿನ ಗಂಡು ನಾಯಿ ಹಾಡು ಹೇಳುವ ವಿಡಿಯೊ ಅದಾಗಿದೆ.

ಇದನ್ನೂ ಓದಿ: Viral News : ಇದೆಂಥಾ ಕ್ರೌರ್ಯ; ತಂದೆ ಮೇಲಿನ ಕೋಪಕ್ಕೆ ಮೂವರು ಮಕ್ಕಳಿಗೆ ಕಾರು ಗುದ್ದಿಸಿದ
ಲ್ಯಾಪ್‌ಟಾಪ್‌ನಲ್ಲಿ ಪ್ರಸಿದ್ಧ ಒಪೆರಾ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ. ಅದರ ಹಾಡನ್ನು ನಿಧಾನವಾಗಿ ಕೇಳಿಸಿಕೊಳ್ಳುವ ಸ್ವೀನಿ ಕೊನೆಯಲ್ಲಿ ತಾನೂ ಕೂಡ ಸಂಗೀತದಲ್ಲಿ ಮಗ್ನನಾಗಿ ಹಾಡನ್ನು ಹೇಳುವುದಕ್ಕೆ ಆರಂಭಿಸಿಬಿಡುತ್ತದೆ. ಇದರ ಮಧ್ಯದಲ್ಲಿ ಸ್ವೀನಿ ತನ್ನನ್ನು ವಿಡಿಯೊ ರೆಕಾರ್ಡ್‌ ಮಾಡುತ್ತಿದ್ದ ಮಹಿಳೆಯ ಕಡೆಯೂ ಆಗಾಗ ನೋಡುತ್ತದೆ. ಸ್ವೀನಿಯ ಹಾಡನ್ನು ಕೇಳಿಯ ಆ ಮಹಿಳೆ ಕೂಡ ಜೋರಾಗಿ ನಗಲಾರಂಭಿಸುತ್ತಾಳೆ.


ಈ ವಿಡಿಯೊವನ್ನು ಜುಲೈ 9ರಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 40 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. “ಸ್ವೀನಿಯನ್ನು ದತ್ತು ತೆಗೆದುಕೊಳ್ಳದೇ ಇರಲು ಕಾರಣಗಳೇ ಇಲ್ಲ. ಅವನು ಮುದ್ದಾಗಿದ್ದಾನೆ ಹಾಗೆಯೇ ಟ್ಯಾಲೆಂಟೆಡ್‌ ಕೂಡ ಇದ್ದಾನೆ” ಎಂದು ವಿಡಿಯೊಗೆ ಕ್ಯಾಪ್ಶನ್‌ ಕೊಡಲಾಗಿದೆ.

ಇದನ್ನೂ ಓದಿ: Viral News : 5 ಕೋಟಿ ರೂಪಾಯಿ ಮೌಲ್ಯದ ರೈಲು ಎಂಜಿನ್​ ಅನ್ನೇ ಕದ್ದೊಯ್ದ ಕಳ್ಳರು!
ಈ ವಿಡಿಯೊವನ್ನು 3.38 ಲಕ್ಷಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದಾರೆ. ಹಾಗೆಯೇ ಸಾವಿರಾರು ಮಂದಿ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಸಾವಿರಾರು ಮಂದಿ ವಿಡಿಯೊಗೆ ಥರಹೇವಾರು ಕಮೆಂಟ್‌ಗಳನ್ನು ಮಾಡಿದ್ದಾರೆ ಕೂಡ. “ಅಬ್ಬಬ್ಬಾ ಇದು ಸಿಂಗಿಂಗ್‌ ಡಾಗ್‌”, “ಎಷ್ಟು ಮುದ್ದಾಗಿದ್ದಾನೆ ಈ ಸ್ವೀನಿ”, “ಸಂಗೀತದ ಬಗ್ಗೆ ಈ ಸ್ವೀನಿಗೆ ಅದೆಷ್ಟು ಪ್ರೀತಿಯಿದೆ” ಎನ್ನುವಂತಹ ಹಲವಾರು ಕಮೆಂಟ್‌ಗಳು ಈ ವಿಡಿಯೊಗೆ ಬಂದಿವೆ. ಹಾಗೆಯೇ “ವಾವ್‌”, “ಸೂಪರ್‌”, “ಸ್ವೀಟ್‌”, “ಕ್ಯೂಟ್‌” ಎನ್ನುವಂತಹ ನೂರಾರು ಕಮೆಂಟ್‌ಗಳನ್ನು ಕಾಣಬಹುದಾಗಿದೆ. ಇನ್ನು ಕೆಲವರು ಸ್ವೀನಿಯನ್ನು ದತ್ತು ತೆಗೆದುಕೊಳ್ಳುವುದಕ್ಕೆ ಏನು ಪ್ರಕ್ರಿಯೆ ಇದೆ ಎಂದೂ ಪ್ರಶ್ನೆ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಪ್ರಮುಖ ಸುದ್ದಿ

Actor Darshan : ನಟ ದರ್ಶನ್ ಬಿಡುಗಡೆಗೆ ಮುಹೂರ್ತ ಫಿಕ್ಸ್; ಜನ್ಮ ಜಾತಕದ ಪ್ರಕಾರ ಶುಭ ಸಮಯ ಶುರು

Actor Darshan : ದರ್ಶನ್ ಬಿಡುಗಡೆ ಬಗ್ಗೆ ಜ್ಯೋತಿಷ್ಯ ಹೇಳುತ್ತಿರುವಾಗಲೇ ತಾಯಿ ಮೂಕಾಂಬಿಕಾ ದೇವಿ ಬಲಗಡೆ ಹೂ ಪ್ರಸಾದ ಕೊಟ್ಟಿದೆ. ದೇವಿಯ ಹೂ ಪ್ರಸಾದದಿಂದ ದರ್ಶನ್ ಬಿಡುಗಡೆಯನ್ನು ಜ್ಯೋತಿಷಿ ಡಾ ಲಕ್ಷ್ಮೀಕಾಂತ ಆಚಾರ್ಯ ದೃಢೀಕರಿಸಿದ್ದಾರೆ.

VISTARANEWS.COM


on

By

Actor darshan
Koo

ತುಮಕೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ (Actor Darshan) ಆಶ್ವೀಜ-ಕಾರ್ತಿಕ ಮಾಸದ ಮಧ್ಯ ಭಾಗದಲ್ಲಿ ಬಿಡುಗಡೆ ಆಗುತ್ತಾರೆ ಎಂದು ಸ್ಫೋಟಕ ಭವಿಷ್ಯವನ್ನು ಜ್ಯೋತಿಷಿ ಡಾ.ಲಕ್ಷ್ಮಿಕಾಂತ ಆಚಾರ್ಯ ನುಡಿದಿದ್ದಾರೆ. 2027ಕ್ಕೆ ಶನಿ ದಶಾಬುಕ್ತಿ ಪ್ರಾರಂಭವಾಗಲಿದ್ದು, ದರ್ಶನ್ ರಾಜಕೀಯ ಜೀವನ ತುಂಬಾ ಚೆನ್ನಾಗಿರಲಿದೆ. ತುಮಕೂರು ಸನಿಹದ ಚಿನಗ ಗ್ರಾಮದಲ್ಲಿ ನೆಲೆಸಿರುವ ಶ್ರೀ ಮೂಕಾಂಬಿಕಾ ದೇವಿ ಹೂ ಪ್ರಸಾದ ಕೊಡುವ ಮೂಲಕ ದರ್ಶನ್ ಬಿಡುಗಡೆಗೆ ಮುನ್ಸೂಚನೆ ಕೊಟ್ಟಿದ್ದಾಳೆ.

Actor darshan
ದರ್ಶನ್‌ ಕುರಿತು ಜ್ಯೋತಿಷ್ಯ ಹೇಳುವಾಗಲೇ ಬಲಗಡೆಯಿಂದ ಹೂ ಪ್ರಸಾದ ಕೊಟ್ಟ ದೇವಿ

ಮೂಕಾಂಬಿಕಾ ದೇವಿ ಆರಾಧಕರು, ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ ಅವರು ಈ ಬಗ್ಗೆ ಮಾತಾನಾಡಿದ್ದಾರೆ. ದರ್ಶನ್ ಬಿಡುಗಡೆ ಬಗ್ಗೆ ಜ್ಯೋತಿಷ್ಯ ಹೇಳುತ್ತಿರುವಾಗಲೇ ತಾಯಿ ಮೂಕಾಂಬಿಕಾ ದೇವಿ ಬಲಗಡೆ ಹೂ ಪ್ರಸಾದ ಕೊಟ್ಟಿದೆ. ದೇವಿಯ ಹೂ ಪ್ರಸಾದದಿಂದ ದರ್ಶನ್ ಬಿಡುಗಡೆ ದೃಢೀಕರಿಸಿದ್ದಾರೆ. ಕಾರ್ತಿಕ್ ಮಾಸದ ಅಂತ್ಯದೊಳಗೆ ನಟ ದರ್ಶನ್ ಬಿಡುಗಡೆ ಆಗುತ್ತಾರೆ. ದರ್ಶನ್ ಅವರ ಜನ್ಮ ಜಾತಕದ ಪ್ರಕಾರ ಶುಭ ಸಮಯ ಪ್ರಾರಂಭವಾಗಿದೆ. ದೇವಿಯ ಆಶೀರ್ವಾದ ಸಂಪೂರ್ಣ ಇದ್ದು, ಎಲ್ಲವೂ ಶುಭ ಆಗುತ್ತದೆ. ದರ್ಶನ್‌ರ ದಶಾಬುಕ್ತಿಗಳು ಅಂತ್ಯವಾಗಿ, ಶುಭ ದಶಾಬುಕ್ತಿಗಳು ಪ್ರಾರಂಭವಾಗಿವೆ. ಅಭಿಮಾನಿಗಳಿಗೆ ಯಾವುದೇ ರೀತಿಯ ಆತಂಕ ಬೇಡ. ಪೂಜೆ-ಪುನಸ್ಕಾರ ಎಲ್ಲವನ್ನೂ ನಡೆಸಿಕೊಂಡು ಬಂದಿರುವುದರಿಂದ ಆ ದೇವಿಯ ಅನುಗ್ರಹ ಇರುತ್ತದೆ. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ ಎಂದು ಜ್ಯೋತಿಷಿ ಡಾ.ಲಕ್ಷ್ಮೀಕಾಂತ ಆಚಾರ್ಯ ತಿಳಿಸಿದ್ದಾರೆ.

Actor darshan
Actor Darshan

ಈ ದೇವಿ ಹೂ ಪ್ರಸಾದ ಕೊಟ್ಟರೆ ಇಲ್ಲಿವರೆಗೂ ಯಾವುದೂ ಕೂಡ ಸುಳ್ಳಾಗಿಲ್ಲ. ಸಾಕಷ್ಟು ರೀತಿಯಲ್ಲಿ ಒಳ್ಳೆಯದಾಗಿದೆ ಎಂದು ಭಕ್ತಾಧಿಗಳು ಹೇಳಿಕೊಂಡು ಬಂದಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆ ಕೂಡ ಇದೆ. ನಟ ದರ್ಶನ್‌ಗೆ ಇಷ್ಟು ದಿವಸ ಜನ್ಮ‌ ಜಾತಕದಲ್ಲಿ ಗುರುದಶಾಬುಕ್ತಿ ನಡೆಯುತ್ತಿತ್ತು. 2027ಕ್ಕೆ ಶನಿ ದಶಾಬುಕ್ತಿ ಪ್ರಾರಂಭವಾಗಲಿದೆ. ದರ್ಶನ್ ರಾಜಕೀಯ ಜೀವನ ತುಂಬಾ ಚೆನ್ನಾಗಿರಲಿದೆ. 2027ರ ನಂತರ ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ. ಹಾಗಾಗಿ ಇದರಲ್ಲಿ ಯಾವುದೇ ಅನುಮಾನ ಬೇಡ. 2027ರ ನಂತರ ದರ್ಶನ್ ಜೀವನ ಶೈಲಿ ಬದಲಾಗಲಿದೆ. ಈಗ 2024ರ ಅಂತ್ಯದಲ್ಲಿ ಇದ್ದೇವೆ, 2025-2026ರ ನಂತರ 2027ರಿಂದ ಒಳ್ಳೆಯ ಸಮಯ ಪ್ರಾರಂಭವಾಗುತ್ತದೆ. ಒಳ್ಳೆಯ ರೀತಿಯ ಜೀವನ ಕಲ್ಪಿಸಿಕೊಡುತ್ತಾಳೆ. ರಾಜಕೀಯ ಪ್ರವೇಶದ ಯೋಗ ಕೂಡ ದರ್ಶನ್‌ಗೆ ಇದೆ. ದಶಾಬುಕ್ತಿಗಳು ಮನುಷ್ಯನ ಜೀವನ ಶೈಲಿಯನ್ನೇ ಬದಲಾಯಿಸಿ ಬಿಡುತ್ತದೆ.

Actor darshan
Actor Darshan

ಒಳ್ಳೆಯದು ಪ್ರಾರಂಭ ಆಗಬೇಕು ಅಂದಾಗ ಕೆಟ್ಟದು ನಮ್ಮ‌ ಕಣ್ಣಿಗೆ ಯಾವುದು ಕಾಣಿಸಲ್ಲ. ದೇವಿಯು ಆಶೀರ್ವಾದ ಮಾಡಿರುವುದರಿಂದ ಅವರ ಜೀವನ ಸುಗಮವಾಗಿ ನಡೆಯುತ್ತದೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಚಂಡಿಕಾ ಯಾಗ ಮಾಡಿಸಿದ್ದರು. ಆದಾದ ನಂತರ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಕ್ಷೇತ್ರಕ್ಕೆ ಸಿರಾದ ದಿವಂಗತ ಸತ್ಯನಾರಾಯಣ್, ವಾಸು, ಬೆಮೆಲ್ ಕಾಂತರಾಜು, ಗೌರಿಶಂಕರ್, ಸುರೇಶ್‌ಗೌಡ ಹಾಗೂ ಪರಮೇಶ್ವರ, ಮುದ್ದಹನುಮೇಗೌಡ ಸಾಕಷ್ಟು ರೀತಿಯ ರಾಜಕೀಯ ವ್ಯಕ್ತಿಗಳು ದೇವಿಯ ಆಶೀರ್ವಾದ ಪಡೆದಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಿರುವ ನಿದರ್ಶನಗಳಿವೆ ಎಂದು ತುಮಕೂರಿನಲ್ಲಿ ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ ತಿಳಿಸಿದ್ದಾರೆ.

Actor Darshan
Actor Darshan

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Robbery case : ಲವ್ವರ್ ಮೊಬೈಲ್‌ನಲ್ಲಿದ್ದ ತನ್ನ ಫೋಟೊ, ವಿಡಿಯೊ ಡಿಲೀಟ್‌ ಮಾಡಿಸಲು ಟೆಕ್ಕಿಯ ಖರ್ತನಾಕ್‌ ರಾಬರಿ ಪ್ಲ್ಯಾನ್‌

Robbery case : ಲವ್ವರ್‌ನಿಂದ ದೂರಾಗಲು ಟೆಕ್ಕಿಯೊಬ್ಬಳು ನಿರ್ಧರಿಸಿದ್ದಳು. ಆದರೆ ಆತನ ಮೊಬೈಲ್‌ನಲ್ಲಿ ಈಕೆಯ ಫೋಟೊ, ವಿಡಿಯೊ ಇತ್ತು. ಇದನ್ನೂ ಡಿಲೀಟ್‌ ಮಾಡಿಸಲು ಆಕೆ ರಾಬರಿ ಪ್ಲ್ಯಾನ್‌ ಮಾಡಿ ಸಿಕ್ಕಿಬಿದ್ದಿದ್ದಾಳೆ.

VISTARANEWS.COM


on

By

Techie robbery plans to delete her photo video from lovers mobile phone
ಶೃತಿ, ಸುರೇಶ್, ಮನೋಜ್, ವೆಂಕಟೇಶ್ ಹಾಗೂ ಹೊನ್ನಪ್ಪ ಬಂಧಿತ ಆರೋಪಿಗಳು
Koo

ಬೆಂಗಳೂರು: ಇತ್ತೀಚೆಗಂತೂ ಚಿತ್ರ-ವಿಚಿತ್ರದಲ್ಲಿ ಕ್ರೈಂಗಳು ನಡೆಯುತ್ತಿವೆ. ಲವ್ವರ್ ಮೊಬೈಲ್‌ನಲ್ಲಿದ್ದ ತನ್ನ ಫೋಟೊ ಹಾಗೂ ವಿಡಿಯೊಗಳನ್ನು ಡಿಲೀಟ್ ಮಾಡಿಸಲೆಂದು ಪ್ರಿಯತಮೆಯೇ ರಾಬರಿ ಮಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿನಿಮೀಯ ರೀತಿ ಪ್ರಿಯತಮೆಯೇ ಪ್ರಿಯಕರನ ಮೇಲೆ ರಾಬರಿ ಮಾಡಿಸಿ, ಟೆಕ್ಕಿ ಯುವತಿ ಸಿಕ್ಕಿಬಿದ್ದಿದ್ದಾಳೆ. ಬೆಂಗಳೂರಿನ ಬೆಳ್ಳಂದೂರು ಪೊಲೀಸರಿಂದ ಟೆಕ್ಕಿ ಶೃತಿ ಸೇರಿ ಮೂವರನ್ನು ಬಂಧಿಸಿದ್ದಾರೆ.

ಕಳೆದ ಸೆಪ್ಟೆಂಬರ್ 20 ರಂದು ಪ್ರಿಯಕರ ವಂಶಿಕೃಷ್ಣರೆಡ್ಡಿ ಎಂಬಾತ ಶೃತಿ ಭೇಟಿಗೆ ತೆರಳಿದ್ದ. ಭೇಟಿಯಾಗಿ ಹೊರಬರುತ್ತಿದ್ದಂತೆ ಸ್ವಿಫ್ಟ್ ಕಾರಿನಲ್ಲಿ ಬಂದ ಅಪರಿಚಿತರು ವಂಶಿಕೃಷ್ಣರೆಡ್ಡಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಜಗಳ ತೆಗೆದು ಆತನ ಬಳಿಯಿದ್ದ ಮೊಬೈಲ್ ಕಸಿದಿದ್ದರು. ವಂಶಿ ಜತೆಯಲ್ಲಿಯೇ ಇದ್ದ ಶೃತಿಯ ಮೊಬೈಲ್‌ ಅನ್ನು ಕಸಿದುಕೊಂಡಿದ್ದರು. ಬಳಿಕ ದೂರು ಕೊಡುವುದು ಬೇಡ ಮೊಬೈಲ್ ಹೋದರೆ ಹೋಯಿತು ಎಂದು ಬಾಯ್‌ಫ್ರೆಂಡ್‌ ವಂಶಿ ಮುಂದೆ ಶೃತಿ ಡ್ರಾಮಾ ಮಾಡಿದ್ದಳು.

ಆದರೆ ಇಷ್ಟಕ್ಕೆ ಸುಮ್ಮನಾಗದ ವಂಶಿಕೃಷ್ಣ ಬೆಳ್ಳಂದೂರು ಠಾಣೆಗೆ ತೆರಳಿ ಕಾರಿನ ನಂಬರ್ ಸಮೇತ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಪೊಲೀಸರು ತಮ್ಮದೇ ಸ್ಟೈಲ್‌ನಲ್ಲಿ ವಿಚಾರಣೆ ನಡೆಸಿದಾಗ, ಶೃತಿಯದ್ದೆ ಇದೆಲ್ಲ ಪ್ಲ್ಯಾನ್‌ ಎಂದು ತಿಳಿಸಿದ್ದರು. ಬೈಕ್‌ಗೆ ಡಿಕ್ಕಿ ಹೊಡೆದು ಮೊಬೈಲ್ ಕಸಿದುಕೊಳ್ಳಲು ಹೇಳಿದ್ದು ಎಂದು ತಿಳಿಸಿದ್ದಾರೆ.

ಪ್ರಿಯತಮನಿಂದ ದೂರವಾಗಲು ತೀರ್ಮಾನಿಸಿದ್ದ ಶೃತಿ

ಇತ್ತೀಚೆಗೆ ಪ್ರಿಯತಮ ವಂಶಿಕೃಷ್ಣನಿಂದ ದೂರವಾಗಲು ಶೃತಿ ಯತ್ನಿಸ್ತಿದ್ದಳು. ಆದರೆ ವಂಶಿಕೃಷ್ಣನ ಮೊಬೈಲ್‌ನಲ್ಲಿ ಶೃತಿಯ ಫೋಟೊಗಳಿದ್ದವು. ನೇರವಾಗಿ ಹೇಳಿದರೆ ಎಲ್ಲಿ ವಂಶಿಕೃಷ್ಣ ವಿರೋಧ ವ್ಯಕ್ತಪಡಿಸುತ್ತಾನೋ ಎಂದು ತಿಳಿದ ಶೃತಿ ಮೊಬೈಲ್ ರಾಬರಿ ಮಾಡುವ ಖರ್ತನಾಕ್ ಪ್ಲ್ಯಾನ್‌ ಮಾಡಿದ್ದಳು. ಸದ್ಯ ಆರೋಪಿ ಟೆಕ್ಕಿ ಶೃತಿ ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ. ಬೆಳ್ಳಂದೂರು ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಹಾವೇರಿ

Assault Case : ಮನೆಗೆ ಬಾರದ ಪತ್ನಿ; ಸಿಟ್ಟಾಗಿ ಮಾವ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ ಅಳಿಯ!

assault case : ಪತಿ- ಪತ್ನಿ ನಡುವಿನ ಜಗಳಕ್ಕೆ ಅಡಿಕೆ ಗಿಡಗಳು ಬಲಿಯಾಗಿವೆ. ಪತ್ನಿ ಮನೆಗೆ ಬಾರದ್ದಕ್ಕೆ ಕೋಪಗೊಂಡ ಅಳಿಯ ಮಾವನ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾನೆ.

VISTARANEWS.COM


on

By

assault case
Koo

ಹಾವೇರಿ : ಪತ್ನಿಯನ್ನು ಮನೆಗೆ ಕಳುಹಿಸಲಿಲ್ಲ ಎಂದು ಮಾವನ ಮೇಲೆ ಸಿಟ್ಟಾದ ಅಳಿಯನೊಬ್ಬ, ಅಡಕೆ ತೋಟ ನಾಶಪಡಿಸಿದ್ದಾನೆ. ಮಾವ ಬೆಳೆಸಿದ್ದ 106 ಅಡಿಕೆ ಗಿಡಗಳನ್ನು ಕಡಿದು ಸಿಟ್ಟು (Assault Case) ಹೊರಹಾಕಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಸಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

assault case
assault case

ದೇವೆಂದ್ರಪ್ಪ ಫಕ್ಕಿರಪ್ಪ ಗಾಣಿಗೇರಗೆ ಸೇರಿದ ಅಡಿಕೆ ತೋಟವನ್ನು ಅಳಿಯ ಬಸವರಾಜ್ ಎಂಬಾತ ಅಡಿಕೆ ಬೆಳೆ ನಾಶ ಮಾಡಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದ ಬಸವರಾಜ್ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ. ಆದರೆ ಪತ್ನಿ ಜತೆಗೆ ನಿತ್ಯವು ಜಗಳವಾಡುತ್ತಿದ್ದ. ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿ ತವರು ಮನೆ ಸೇರಿದ್ದಳು. ಮೂರು ತಿಂಗಳಿನಿಂದ ಪತ್ನಿ ತವರು ಮನೆಯಲ್ಲಿ ಇದ್ದಿದ್ದಕ್ಕೆ ಸಿಟ್ಟಾದ ಬಸವರಾಜ್‌, ಅಡಿಕೆ ತೋಟವನ್ನು ನಾಶ ಮಾಡಿದ್ದಾನೆ. ಪತಿ- ಪತ್ನಿ ನಡುವಿನ ಜಗಳಕ್ಕೆ ಅಡಕೆ ಗಿಡಗಳು ಬಲಿಯಾಗಿವೆ.

ಇದನ್ನೂ ಓದಿ: Murder Case : ಪತಿಗೆ ನಿದ್ರೆ ಮಾತ್ರೆ ಕೊಟ್ಟು ರಾತ್ರಿ ಹೊತ್ತು ಪ್ರಿಯಕರನ ಸೇರುತ್ತಿದ್ದಳು ಮಳ್ಳಿ! ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ

ಕುಡಿದು ಪೀಡಿಸುತ್ತಿದ್ದ ಅಳಿಯನಿಗೆ ಅತ್ತೆಯಿಂದ ಗೂಸಾ

ಬೆಳಗಾವಿ: ಕಂಠ ಪೂರ್ತಿ ಕುಡಿದು ಪೀಡಿಸುತ್ತಿದ್ದ ಅಳಿಯನಿಗೆ ಅತ್ತೆಯಿಂದ ಗೂಸಾ ಬಿದ್ದಿದೆ. ನಡುಬೀದಿಯಲ್ಲೇ ಕುಡುಕ ಅಳಿಯನ ಹಿಡಿದು ಅತ್ತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೆಳಗಾವಿ ತಾಲೂಕಿನ ಶಿಂಧೊಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದ ವ್ಯಕ್ತಿಯನ್ನು ಮನೆಗೆ ಕರೆದುಕೊಂಡು ಹೋಗಲು ಪತ್ನಿ, ಅತ್ತೆ ಹರಸಾಹಸ ಪಡುತ್ತಿದ್ದರು. ಮನೆಗೆ ಬರಲು ಹಿಂದೇಟ್ಟು ಹಾಕುತ್ತಿದ್ದ ಕುಡುಕ ಅಳಿಯನಿಗೆ ಕಪಾಳಮೋಕ್ಷ ಮಾಡಿ ಹಿಗ್ಗಾಮುಗ್ಗಾ ಥಳಿಸಿದರು. ಕುಡುಕನ ಅವಾಂತರಕ್ಕೆ ಸ್ಥಳೀಯರು ಹೈರಾಣಾದರು. ಜತೆಗೆ ಅಲ್ಲಿದ್ದವರೇ ವಿಡಿಯೊ ಮಾಡಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು ಗ್ರಾಮಾಂತರ

Viral News : ದೊಡ್ಡಬಳ್ಳಾಪುರದಲ್ಲಿ ಮಂಗನಾಟ; ಮನೆಯೊಳಗೆ ನುಗ್ಗಿ ತಿಂಡಿ ಸಿಗದ್ದಕ್ಕೆ ಐಫೋನ್‌ ಹೊತ್ತೊಯ್ದ ಕೋತಿ!

VISTARANEWS.COM


on

By

Monkey enters house in Doddaballapura takes away iPhone
Koo

ದೊಡ್ಡಬಳ್ಳಾಪುರ: ಮಹಿಳೆಯ ಐಫೋನ್ ಹೊತ್ತೊಯ್ದ ಕೋತಿಯೊಂದು ಟವರ್ ಏರಿದ ಘಟನೆ ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ (Viral News) ನಡೆದಿದೆ. ತುಳಸಿ ಎಂಬುವವರ ಮನೆಗೆ ನುಗ್ಗಿದ ಮಂಗವೊಂದು ತಿಂಡಿಗಾಗಿ ಹುಡುಕಾಡಿದೆ. ತಿಂಡಿ ಸಿಗದೆ ಇದ್ದಾಗ, ಚಾರ್ಜಿಂಗ್‌ ಹಾಕಿದ್ದ ಐಫೋನ್‌ ಕಂಡಿದೆ. ಕ್ಷಣಾರ್ಧದಲ್ಲೆ ಐಫೋನ್‌ ಹೊತ್ತೊಯ್ದು ಟವರ್ ಏರಿದಿದೆ. ಹೀಗಾಗಿ ಮೊಬೈಲ್‌ ವಾಪಸ್‌ ಪಡೆಯಲು ಮಹಿಳೆ ಹಾಗೂ ಸ್ಥಳೀಯರು ಹರಸಾಹಸ ಪಟ್ಟರು. ತಿಂಡಿ ಕೊಡುತ್ತೇವೆ ಎಂದರು ಮೊಬೈಲ್‌ ಕೊಡದೆ ಮಂಗನಾಟಕ್ಕೆ ಜನರು ಸುಸ್ತ್‌ ಆದರು.

ಜಿಂಕೆ ಬೇಟೆಯಾಡಿದ ಕಿಡಿಗೇಡಿಗಳು, ಕರೆಂಟ್‌ ಶಾಕ್‌ಗೆ ಕೋತಿ ಸಾವು

ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದ ಹೆದ್ದಾರಿ ಬದಿಯಲ್ಲಿ ಜಿಂಕೆಯ ಶವ ಪತ್ತೆಯಾಗಿದೆ. ಕಿಡಿಗೇಡಿಗಳು ಮುಂಜಾನೆ ಜಿಂಕೆಯನ್ನು ಕೊಂದು ಹೆದ್ದಾರಿ ಬದಿಯಲ್ಲಿ ಬಿಸಾಡಿದ್ದಾರೆ. ಬೆಳಗ್ಗೆ ಕೆಲವರು ವಾಕಿಂಗ್ ಹೋದಾಗ ಜಿಂಕೆ‌ ಮೃತದೇಹ ಪತ್ತೆಯಾಗಿದೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾಗಿದ್ದು, ಜಿಂಕೆಯನ್ನು ಬೇಟೆಯಾಡಿ ತಂದು ಬಿಸಾಕಿ ಹೋಗಿರುವ ಶಂಕೆ ಇದೆ. ಜಿಂಕೆ ಮೃತದೇಹ ಕಂಡು ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ವಿದ್ಯುತ್‌ ತಗುಲಿ ಮಂಗ ಸಾವು

ವಿದ್ಯುತ್ ತಗುಲಿ ಮಂಗವೊಂದು ಮೃತಪಟ್ಟಿದೆ. ಹೀಗಾಗಿ ಗ್ರಾಮಸ್ಥರು ಹಿಂದೂ ವಿಧಿವಿಧಾನದಂತೆ ಅಂತ್ಯಕ್ರಿಯೆ ನೇರವೆರಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಘಟನೆ ನಡೆದಿದೆ. ಮನುಷ್ಯರಿಗೆ ಅಂತ್ಯಕ್ರಿಯೆ ಮಾಡುವ ರೀತಿಯಲ್ಲಿ ಮಂಗನಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಊರು ತುಂಬಾ ಮೆರವಣಿಗೆ ಮಾಡಿ ಶವಸಂಸ್ಕಾರ ನೆರವೇರಿಸಿದ್ದಾರೆ.

ಇದನ್ನೂ ಓದಿ: Acid attack: ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಯುವಕನ ಮೇಲೆ ಆ್ಯಸಿಡ್ ದಾಳಿ!

ಚಾಮುಂಡಿ ಬೆಟ್ಟದಲ್ಲಿ ಹೆಬ್ಬಾವು ಪ್ರತ್ಯಕ್ಷ

ಚಾಮುಂಡಿ ಬೆಟ್ಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷಗೊಂಡಿದೆ. ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ತಡರಾತ್ರಿ ಬೃಹತ್ ಗಾತ್ರದ ಹೆಬ್ಬಾವು ರಸ್ತೆ ದಾಟುತ್ತಿರುವುದನ್ನು ಕಂಡು ವಾಹನ ಸವಾರರು ಗಾಬರಿಗೊಂಡಿದ್ದಾರೆ. ಹೆಬ್ಬಾವು ಅರಣ್ಯ ಪ್ರದೇಶದೊಳಗೆ ತೆರಳುವವರೆಗೆ ಕೆಲಕಾಲ ಅಲ್ಲೇ ನಿಂತು ವೀಕ್ಷಣೆ ಮಾಡಿದ ವಾಹನ ಸವಾರರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಮಲೆನಾಡಿನಲ್ಲಿ ಕಾಡಾನೆ ಹಾವಳಿ

ಮಲೆನಾಡಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಾಡಾನೆ ದಾಳಿಯಿಂದ ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ತಡರಾತ್ರಿ ಎರಡು ಕಾಡಾನೆಗಳು ದಾಳಿ ಮಾಡಿದೆ. ಪುರದಾಳು ಗ್ರಾಮದ ರಾಜೇಶ್ ಹಾಗೂ ಬೀರಪ್ಪ, ನಾಗರಾಜ್ ಎಂಬುವರ ತೋಟ-ಹೊಲದಲ್ಲಿರುವ ಬೆಳೆ ನಾಶವಾಗಿದೆ. ಅಡಿಕೆ ಹಾಗೂ ತೆಂಗಿನ ಮರಗಳನ್ನು ಬುಡಮೇಲು ಮಾಡಿದೆ. ಜೋಳ ಹಾಗೂ ಕಬ್ಬನ್ನು ನಾಶ ಮಾಡಿರುವುದರಿಂದ ಅರಣ್ಯ ಇಲಾಖೆಯ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ಆನೆಗಳ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಇಲಾಖೆ ವಿರುದ್ಧ ರೈತರ ಆಕ್ರೋಶಿಸಿದ್ದಾರೆ.

ಹಾಸನದಲ್ಲಿ ಬೀಟಮ್ಮ ಗ್ಯಾಂಗ್‌ ಹಾವಳಿ

ಹಾಸನ ಜಿಲ್ಲೆಯಲ್ಲಿ ಬೀಟಮ್ಮ ಗ್ಯಾಂಗ್ ಹಾವಳಿ ಮುಂದುವರಿದಿದೆ. ಕಾಡಾನೆಗಳ ಹಿಂಡು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹಾಸನದ ಬೇಲೂರು ತಾಲೂಕಿನ, ತಾವರೆಕೆರೆ ಗ್ರಾಮದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ಮಾಡಿದೆ. ಭತ್ತ, ಕಾಫಿ, ಬಾಳೆ, ನಾಟಿ ಮಾಡಿದ ಭತ್ತ ಸೇರಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿದೆ. ಬೀಟಮ್ಮ ಗ್ಯಾಂಗ್‌ನ ಹಾವಳಿಯಿಂದ ಗ್ರಾಮಸ್ಥರು ಬೇಸತ್ತಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actor darshan
ಪ್ರಮುಖ ಸುದ್ದಿ4 ಗಂಟೆಗಳು ago

Actor Darshan : ನಟ ದರ್ಶನ್ ಬಿಡುಗಡೆಗೆ ಮುಹೂರ್ತ ಫಿಕ್ಸ್; ಜನ್ಮ ಜಾತಕದ ಪ್ರಕಾರ ಶುಭ ಸಮಯ ಶುರು

KEA UGCET 2024
ಬೆಂಗಳೂರು4 ಗಂಟೆಗಳು ago

UGCET 2024 : ದ್ವಿತೀಯ ಪಿಯುಸಿ 3ನೇ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಆಪ್ಷನ್‌ ದಾಖಲಿಸಲು ಲಿಂಕ್‌ ಓಪನ್‌

ಚಿಕ್ಕೋಡಿ5 ಗಂಟೆಗಳು ago

Physical Abuse: ಬಾಲಕಿಯನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಅತ್ಯಾಚಾರವೆಸಗಿ ಕೊಂದಿದ್ದ ನೀಚನಿಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್‌

BBMP plans to make arrangements for food in areas where stray dogs do not get food
ಬೆಂಗಳೂರು6 ಗಂಟೆಗಳು ago

Street Dogs : ಬೀದಿನಾಯಿಗಳ ಹಸಿವು ನೀಗಿಸಲು ಮುಂದಾದ ಬಿಬಿಎಂಪಿ; ಸಾರ್ವಜನಿಕರು ಕೈ ಜೋಡಿಸುವಂತೆ ಮನವಿ

Cm Siddaramaiah
ಬೆಂಗಳೂರು6 ಗಂಟೆಗಳು ago

CM Siddaramaiah : ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಅಪೀಲು ಅರ್ಜಿ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ತೀರ್ಮಾನ

Mahalaya Amavasya on Gandhi Jayanti Poultry Association demands withdrawal of ban on sale of meat
ಬೆಂಗಳೂರು7 ಗಂಟೆಗಳು ago

Mahalaya Amavasya 2024: ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ; ಮಾಂಸ ಮಾರಾಟ ನಿಷೇಧ ಹಿಂಪಡೆಯುವಂತೆ ಒತ್ತಾಯ

Road Accident
ಬೆಂಗಳೂರು8 ಗಂಟೆಗಳು ago

Road Accident : ಆಟೋಗೆ ಲೋಡ್‌ ತುಂಬಿದ್ದ ಲಾರಿ ಡಿಕ್ಕಿ; ಚಾಲಕನ ನಿದ್ರೆ ಮಂಪರಿಗೆ ಜೀವ ಬಿಟ್ಟಳು ಯುವತಿ

Techie robbery plans to delete her photo video from lovers mobile phone
ಬೆಂಗಳೂರು9 ಗಂಟೆಗಳು ago

Robbery case : ಲವ್ವರ್ ಮೊಬೈಲ್‌ನಲ್ಲಿದ್ದ ತನ್ನ ಫೋಟೊ, ವಿಡಿಯೊ ಡಿಲೀಟ್‌ ಮಾಡಿಸಲು ಟೆಕ್ಕಿಯ ಖರ್ತನಾಕ್‌ ರಾಬರಿ ಪ್ಲ್ಯಾನ್‌

Hopcoms store loses charm in Bengaluru
ಬೆಂಗಳೂರು10 ಗಂಟೆಗಳು ago

HOPCOMS Outlets : ಬೆಂಗಳೂರಿನಲ್ಲಿ ಚಾರ್ಮ್‌ ಕಳೆದುಕೊಂಡ ಹಾಪ್‌ಕಾಮ್ಸ್‌ ಮಳಿಗೆ

fire accident
ಬೆಂಗಳೂರು ಗ್ರಾಮಾಂತರ11 ಗಂಟೆಗಳು ago

Fire Accident : ಹೊಸೂರು ಸಮೀಪದ ಟಾಟಾ ಕಂಪೆನಿಯಲ್ಲಿ ಭಾರಿ ಅಗ್ನಿ ಅವಘಡ; ಪ್ರಾಣ ಉಳಿಸಿಕೊಳ್ಳಲು ಓಡಿ ಬಂದ ಕಾರ್ಮಿಕರು ‌

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್4 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌