Political Rivalry : ರಾಜಕೀಯ ವೈಷಮ್ಯ; ಗುತ್ತಿಗೆ ನೌಕರಿಯಿಂದ JDS ಬೆಂಬಲಿಗನ ಹೊರಗಟ್ಟಿದ ಸುನಿಲ್‌ ಬೋಸ್‌? - Vistara News

ಕರ್ನಾಟಕ

Political Rivalry : ರಾಜಕೀಯ ವೈಷಮ್ಯ; ಗುತ್ತಿಗೆ ನೌಕರಿಯಿಂದ JDS ಬೆಂಬಲಿಗನ ಹೊರಗಟ್ಟಿದ ಸುನಿಲ್‌ ಬೋಸ್‌?

Political Rivalry : ರಾಜ್ಯದಲ್ಲಿ ವರ್ಗಾವಣೆ ರಾಜಕೀಯ ಜೋರಾಗಿ ನಡೆಯುತ್ತಿದೆ ಎಂಬ ಆಪಾದನೆಗಳ ನಡುವೆ ಹೊಸ ಆಪಾದನೆ ಕೇಳಿಬಂದಿದೆ. ಗುತ್ತಿಗೆ ನೌಕರನೊಬ್ಬನ್ನು ಕಿತ್ತು ಹಾಕಿದ ಆರೋಪವಿದು.

VISTARANEWS.COM


on

Shivakumar sunil bose
ಶಿವಕುಮಾರ್‌ ಮತ್ತು ಸುನಿಲ್‌ ಬೋಸ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ರಾಜ್ಯದಲ್ಲಿ ವರ್ಗಾವಣೆಯಲ್ಲಿ ದಂಧೆ (Transfer Politics) ಮತ್ತು ರಾಜಕೀಯ ನಡೆಯುತ್ತಿದೆ ಎಂಬ ಆರೋಪ ಒಂದು ಕಡೆಯಾದರೆ ಇನ್ನೊಂದು ಕಡೆಯಲ್ಲಿ ಬೇರೆ ಪಕ್ಷದ ಬೆಂಬಲಿಗರು ಎಂಬ ಕಾರಣಕ್ಕೆ ಕೆಲವು ಸರ್ಕಾರಿ ಉದ್ಯೋಗಿಗಳನ್ನು ಮಾತ್ರವಲ್ಲ, ಗುತ್ತಿಗೆ ನೌಕರರ (Contract workers) ಮೇಲೂ ದ್ವೇಷ ಸಾಧಿಸುವ (Political Rivalry) ಘಟನೆಗಳು ಕೇಳಿಬರುತ್ತಿವೆ. ಈ ಹಿಂದೆ ಕೃಷಿ ಸಚಿವ ಚೆಲುವರಾಯ ಸ್ವಾಮಿ (Chaluvaraya Swamy) ಅವರು ಜೆಡಿಎಸ್‌ ಬೆಂಬಲಿಗರು ಎಂಬ ಕಾರಣಕ್ಕಾಗಿ ಜಗದೀಶ್‌ ಎಂಬ ಕೆಎಸ್‌ಆರ್‌ಟಿಸಿ ಚಾಲಕರನ್ನು ವರ್ಗಾವಣೆ ಮಾಡಿ ವಿವಾದಕ್ಕೆ ಒಳಗಾದರೆ ಈಗ ಒಬ್ಬ ಗುತ್ತಿಗೆ ನೌಕರನನ್ನು ಕೆಲಸದಿಂದ ಕಿತ್ತುಹಾಕಿದ ಆರೋಪವನ್ನು ಎದುರಿಸುತ್ತಿದ್ದಾರೆ ಸಚಿವ ಡಾ. ಎಚ್‌.ಸಿ. ಮಹದೇವಪ್ಪ (Dr. HC Mahadevappa) ಅವರ ಪುತ್ರ ಸುನಿಲ್‌ ಬೋಸ್‌ (Sunil Bose).

ಕೆಲವೇ ದಿನಗಳ ಹಿಂದೆ ತಿ. ನರಸೀಪುರದ ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ ನಾಯಕ್‌ ಕೊಲೆ ಪ್ರಕರಣದಲ್ಲಿ ಸುನಿಲ್‌ ಬೋಸ್‌ ಅವರ ಆಪ್ತರ ಹೆಸರು ಕೇಳಿಬಂದರೆ ಈಗ ಇನ್ನೊಂದು ಆರೋಪ ಅವರ ಬಗಲೇರಿದೆ.

ಏನಿದು ಗುತ್ತಿಗೆ ನೌಕರನ್ನು ಕೆಲಸದಿಂದ ಬಿಡಿಸಿದ ಆರೋಪ

ಮುಡುಕುತೊರೆ ಏತ ನೀರಾವರಿಯಲ್ಲಿ ಕಳೆದ 8 ವರ್ಷಗಳಿಂದ ಗುತ್ತಿಗೆ ನೌಕರನಾಗಿರುವ ಶಿವಕುಮಾರ್‌ ಮತ್ತು ನವೀದ್‌ ಎಂಬವರನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ. ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್‌ ಕುಮಾರ್‌ ಅವರ ಸೂಚನೆಯ ಮೇರೆಗೆ ಕೆಲಸದಿಂದ ಕಿತ್ತುಹಾಕಲಾಗಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ. ಮತ್ತು ಒಂದೊಮ್ಮೆ ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕಾದರೆ ಅವರೇ ಶಿಫಾರಸು ಮಾಡಬೇಕು ಎಂದಿದ್ದಾರೆ.

ಈ ಬಗ್ಗೆ ಕೆಲಸ ಕಳೆದುಕೊಂಡಿರುವ ಶಿವಕುಮಾರ್‌ ಅವರು ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ʻʻಮುಡುಕುತೊರೆ ಏತ ನೀರಾವರಿಯಲ್ಲಿ ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಯಾರೋ ರಾಜಕೀಯ ವ್ಯಕ್ತಿಗಳು ಹೇಳಿದರು ಅಂತ ನಮ್ಮನ್ನು ಕೆಲಸದಿಂದ ತೆಗೆದಿದ್ದಾರೆ. ಇದರಿಂದ ನಮಗೆ ತುಂಬಾ ಅನ್ಯಾಯವಾಗಿದೆ. ಮುಂದೆ ಏನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲ. ನಾಲ್ಕೂವರೆ ಸಾವಿರ ರೂ ಸಂಬಳದಿಂದಲೂ ಕೆಲಸ ಮಾಡುತ್ತ ಬಂದಿದ್ದೇವೆ. ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಕೆಲಸದಿಂದ ತೆಗೆಯುವಂತೆ ಹೇಳಿದ್ದಾರೆ. ಬೇಕಿದ್ರೆ ಸುನಿಲ್ ಬೋಸ್ ಅವರಿಂದಲೇ ಫೋನ್ ಮಾಡಿಸುವಂತೆ ಅಧಿಕಾರಿಗಳು ಹೇಳುತ್ತಿದ್ದಾರೆʼʼ ಎಂದು ಕೆಲಸ ಕಳೆದುಕೊಂಡ ನೌಕರ ಶಿವಕುಮಾರ್ ಅಳಲು ತೋಡಿಕೊಂಡಿದ್ದಾರೆ.

ನೀರಾವರಿ ಇಲಾಖೆ ಎಂಜಿನಿಯರ್‌ ಸೋಮಣ್ಣ ಹೇಳುವುದೇನು?

ಈ ನಡುವೆ, ಸಚಿವ ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌ ಅವರ ಸೂಚನೆಯ ಮೇರೆಗೆ ಶಿವಕುಮಾರ್‌ ಮತ್ತು ನವೀದ್‌ ಅವರನ್ನು ಕೆಲಸದಿಂದ ಕಿತ್ತು ಹಾಕಿರುವ ನೀರಾವರಿ ಇಲಾಖೆ ಎಂಜಿನಿಯರ್‌ ಸೋಮಣ್ಣ ಅವರು ಜೆಡಿಎಸ್‌ಗೆ ಕೆಲಸ ಮಾಡಿದ ಕಾರಣಕ್ಕಾಗಿಯೇ ಕೆಲಸದಿಂದ ತೆಗೆಯಲಾಗಿದೆ ಎಂದು ಹೇಳಿದ್ದಾರೆ. ಶಿವಕುಮಾರ್‌ ಮತ್ತು ಸೋಮಣ್ಣ ಅವರು ಮಾತನಾಡಿರುವ ಆಡಿಯೊವೊಂದು ಈಗ ಬಯಲಾಗಿದೆ.

ಎಂಜಿನಿಯರ್‌ ಸೋಮಣ್ಣ ಹೇಳಿದ್ದೇನು?

ಶಿವಕುಮಾರ್‌ ಅವರು ಸೋಮಣ್ಣ ಜತೆಗೆ ದೂರವಾಣಿ ಮೂಲ ಮಾತನಾಡಿದ ಆಡಿಯೋ ವೈರಲ್ ಆಗಿದೆ.

ʻʻʻಹೊರ ಗುತ್ತಿಗೆ ಕೆಲಸದ ಬಗ್ಗೆ ನನಗೆ ಕೇಳಬೇಡಿ. ಕೆಲಸ ಮಾಡಿದರೂ ಸುನೀಲ್ ಬೋಸ್ ಹೇಳಿದರೆ ಮಾತ್ರ ಹಣ ಕೊಡುತ್ತೇವೆ. ನೀವು ಬೇರೆ ಪಕ್ಷಕ್ಕೆ ಕೆಲಸ ಮಾಡಿದ್ದರಿಂದ ಹೀಗಾಗಿದೆʼʼ ಎಂದು ಸೋಮಣ್ಣ ಹೇಳುತ್ತಾರೆ.

ʻʻನಾನು ಯಾವ ಪಕ್ಷದ ಪರವಾಗಿಯೂ ಕೆಲಸ ಮಾಡಿಲ್ಲ. ನಾನು 8 ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಏಕಾ ಏಕಿ ಕೆಲಸದಿಂದ ತೆಗೆದರೆ ಹೇಗೆʼʼ ಎಂದು ಪ್ರಶ್ನೆ ಮಾಡಿದ್ದಾರೆ.

ಆಗ ಸೋಮಣ್ಣ, ʻʻ8 ವರ್ಷ ಆದರೂ ಸರಿ, 10 ವರ್ಷದಿಂದ ಕೆಲಸ ಮಾಡಿದ್ದರು ಸರಿ. ಶಾಶ್ವತ ಇರುವ ನಮ್ಮಂಥವರನ್ನೇ ತೆಗೆಯುತ್ತಾರೆ. ಯಾರು ಆಡಳಿತದಲ್ಲಿ ಇರುತ್ತಾರೆ ಅವರ ಮಾತು ಕೇಳಬೇಕು. ನಿಮ್ಮ ಸಂಸದರು ಹೇಳಿದರೂ ಆಗುವುದಿಲ್ಲ. ನೀವು ಏನಾದರೂ ಮಾಡಿಕೊಳ್ಳಿ ನಮಗೆ ಗೊತ್ತಿಲ್ಲ.ʼʼ ಎಂದು ಉತ್ತರಿಸಿದ್ದಾರೆ.

ಅರೋಪಗಳನ್ನು ಅಲ್ಲಗಳೆದ ಸುನಿಲ್‌ ಬೋಸ್‌

ಈ ನಡುವೆ, ತಿ.ನರಸೀಪುರದಲ್ಲಿ ಗುತ್ತಿಗೆ ನೌಕರನನ್ನು ಕೆಲಸದಿಂದ ತೆಗೆಸಿದ ಆರೋಪವನ್ನು ಅಲ್ಲಗಳೆದಿದ್ದಾರೆ ಡಾ.ಎಚ್‌.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌.

ʻʻನಾನು ಯಾರನ್ನು ಕೆಲಸದಿಂದ ತೆಗೆಯುವಂತೆ ಹೇಳಿಲ್ಲ. ಅಧಿಕಾರಿ ಯಾಕಾಗಿ ನನ್ನ ಹೆಸರು ಬಳಸಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ಅಧಿಕಾರಿಗೆ ಸ್ಪಷ್ಟನೆ ಕೇಳುತ್ತೇನೆ. ಗುತ್ತಿಗೆ ನೌಕರರನ್ನು ಕೆಲಸ ತೆಗೆದುಕೊಳ್ಳಲು ಅವಧಿಯ ಮಾನದಂಡ ಇರುತ್ತೆ. ನಂತರ ಅವರನ್ನು ಉಳಿಸಿಕೊಳ್ಳಲುಬಹುದು, ತೆಗೆಯಲೂ ಬಹುದು. ಈ ಪ್ರಕರಣದಲ್ಲಿ ಆ ವ್ಯಕ್ತಿಯನ್ನು ಉಳಿಸಿಕೊಳ್ಳೋದು ಬಿಡೋದು ಅಧಿಕಾರಿಗೆ ಬಿಟ್ಟಿದ್ದು. ನಾನು ಹಸ್ತಕ್ಷೇಪ ಮಾಡುವುದಿಲ್ಲʼʼ ಎಂದು ಸುನಿಲ್‌ ಬೋಸ್‌ ಸ್ಪಷ್ಟಪಡಿಸಿದರು.

ʻʻಚುನಾವಣೆಯಲ್ಲಿ ಪ್ರತಿಮನೆಯನ್ನು ಸುತ್ತಾಡಿ ತಂದೆಯನ್ನು ಗೆಲ್ಲಿಸಿದ್ದೇನೆ. ಜನರ ಕೆಲಸ ಮಾಡಿಕೊಡುವುದು ನನ್ನ ಜವಾಬ್ದಾರಿ. ಅಷ್ಟನ್ನು ನಾನು ಮಾಡುತ್ತಿದ್ದೇನೆʼʼ ಎಂದು ಹೇಳುವ ಮೂಲಕ ತಂದೆಯ ಅಧಿಕಾರಿವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಾ ಎಂಬ ಪ್ರಶ್ನೆಗೆ ಸುನೀಲ್ ಬೋಸ್ ಜಾಣ್ಮೆಯ ಉತ್ತರ ನೀಡಿದರು.

ಇದನ್ನೂ ಓದಿ : Transfer controversy ; ಜೆಡಿಎಸ್‌ ಪರ ಲೈನ್‌ಮ್ಯಾನ್‌ ವರ್ಗ; ಚಲುವರಾಯಸ್ವಾಮಿ ವಿರುದ್ಧ ಮತ್ತೊಂದು ಆರೋಪ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Yamaha: ಬೆಂಗಳೂರಿನಲ್ಲಿ ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದ ಯಮಹಾ

India Yamaha: ಬೆಂಗಳೂರಿನಲ್ಲಿ ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈ. ಲಿಮಿಟೆಡ್‌ನ ಹೊಸ ಅತ್ಯಾಧುನಿಕ “ಬ್ಲೂ ಸ್ಕ್ವೇರ್” ಔಟ್‌ಲೆಟ್ ಅನ್ನು ತೆರೆದಿದೆ. ಬೆಂಗಳೂರು ವರ್ತೂರು ಹೋಬಳಿಯ ಅಂಬಲಿಪುರದಲ್ಲಿ ಮೋಟೋ ವರ್ಲ್ಡ್ ಹೆಸರಿನಲ್ಲಿ ಈ ಹೊಸ ಔಟ್‌ಲೆಟ್ ಅನ್ನು ಪ್ರಾರಂಭಿಸಲಾಗಿದೆ.ಯಮಹಾ ಬ್ಲೂ ಸ್ಕ್ವೇರ್ ಶೋರೂಮ್‌ಗಳನ್ನು ಗ್ರಾಹಕರಿಗೆ ವೈಯಕ್ತೀಕರಿಸಿದ ವಿಧಾನದಲ್ಲಿ ಅತ್ಯುತ್ತಮ ಮಾರಾಟ, ಸರ್ವೀಸ್ ಮತ್ತು ನೆರವನ್ನು ನೀಡುವ ಮೂಲಕ ಉತ್ತಮ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

VISTARANEWS.COM


on

Yamaha has opened a new Blue Square outlet in Bengaluru
Koo

ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ (India Yamaha Motor Pvt Ltd) ಪ್ರೈ. ಲಿಮಿಟೆಡ್, ಬೆಂಗಳೂರಿನಲ್ಲಿ ಹೊಸ ಅತ್ಯಾಧುನಿಕ “ಬ್ಲೂ ಸ್ಕ್ವೇರ್” ಔಟ್‌ಲೆಟ್ ಅನ್ನು ತೆರೆದಿದೆ. ಬೆಂಗಳೂರು ವರ್ತೂರು ಹೋಬಳಿಯ ಅಂಬಲಿಪುರದಲ್ಲಿ ಮೋಟೋ ವರ್ಲ್ಡ್ ಹೆಸರಿನಲ್ಲಿ ಈ ಹೊಸ ಔಟ್‌ಲೆಟ್ ಅನ್ನು ಪ್ರಾರಂಭಿಸಲಾಗಿದ್ದು, ಈ ಔಟ್‌ಲೆಟ್ 7,100 ಚದರ ಅಡಿಯಷ್ಟು ವಿಶಾಲವಾಗಿದೆ. ಯಮಹಾ ಬ್ಲೂ ಸ್ಕ್ವೇರ್ ಶೋರೂಮ್‌ಗಳನ್ನು ಗ್ರಾಹಕರಿಗೆ ವೈಯಕ್ತೀಕರಿಸಿದ ವಿಧಾನದಲ್ಲಿ ಅತ್ಯುತ್ತಮ ಮಾರಾಟ, ಸರ್ವೀಸ್ ಮತ್ತು ನೆರವನ್ನು ನೀಡುವ ಮೂಲಕ ಉತ್ತಮ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಬ್ಲೂ ಸ್ಕ್ವೇರ್ ಔಟ್‌ಲೆಟ್ ಯಮಹಾ ಬ್ರ್ಯಾಂಡ್‌ನ ಹುಮ್ಮಸ್ಸನ್ನು ದಾಟಿಸುತ್ತದೆ ಮತ್ತು ಗ್ರಾಹಕರಿಗೆ ಸಂಪೂರ್ಣ ಸೇವೆಯನ್ನು ಒದಗಿಸುವಂತೆ ವಿನ್ಯಾಸಗೊಂಡಿದೆ. ವೈಯಕ್ತೀಕರಿಸಿದ ವಿಧಾನದ ಮೂಲಕ ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತಿದ್ದು, ಪ್ರತಿಯೊಬ್ಬ ಗ್ರಾಹಕರು ತೃಪ್ತಿಕರ ಸೇವೆ ಪಡೆಯಲಿದ್ದಾರೆ. ಈ ವಿಶೇಷವಾದ ಔಟ್‌ಲೆಟ್‌ಗಳನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಅನುವು ಮಾಡಿಕೊಟ್ಟಿರುವ ಬ್ರ್ಯಾಂಡ್ ಗ್ರಾಹಕರಿಗೆ ಯಮಹಾ ರೇಸಿಂಗ್ ಜಗತ್ತಿಗೆ ಪ್ರವೇಶಿಸುವ ಅವಕಾಶವನ್ನೂ ನೀಡುತ್ತಿದೆ.

ಇದನ್ನೂ ಓದಿ: Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

ಈ ಪ್ರೀಮಿಯಂ ಔಟ್‌ಲೆಟ್‌ಗಳ ಪ್ರತಿಯೊಂದು ವಿಭಾಗವನ್ನೂ ಅಂತರರಾಷ್ಟ್ರೀಯ ಮೋಟಾರ್‌ ಸ್ಪೋರ್ಟ್‌ಗಳಲ್ಲಿ ತೊಡಗಿಸಿಕೊಂಡಿರುವ ಜಾಗತಿಕ ಬ್ರ್ಯಾಂಡ್‌ ಆದ ಯಮಹಾ ಜತೆಗೆ ಸಂಬಂಧ ಹೊಂದುವ ಹೆಮ್ಮೆಯ ಭಾವವನ್ನು ಮೂಡಿಸುವಂತೆ ಚಿಂತನಶೀಲವಾಗಿ ರಚಿಸಲಾಗಿದೆ. ಯಮಹಾ, ಬ್ರ್ಯಾಂಡ್‌ನ ಹೆಮ್ಮೆಯ ರೇಸಿಂಗ್ ಪರಂಪರೆಯನ್ನು ಪ್ರತಿನಿಧಿಸುವ “ಬ್ಲೂ (ನೀಲಿ)” ಬಣ್ಣ ಮತ್ತು ಗ್ರಾಹಕರು ಯಮಹಾದ ಹರ್ಷದಾಯಕ ಮತ್ತು ಸೊಗಸಾದ ಶ್ರೇಣಿಯ ದ್ವಿಚಕ್ರ ವಾಹನಗಳೊಂದಿಗೆ ಸಂಪರ್ಕ ಸಾಧಿಸಲು ರಚಿಸಲಾದ ಪ್ಲಾಟ್‌ಫಾರ್ಮ್ ಅನ್ನು ಸಂಕೇತಿಸುವ “ಸ್ಕ್ವೇರ್” ಸಂಯೋಜನೆಯ ಮೂಲಕ ಗ್ರಾಹಕರೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸಿದೆ.

ಉದ್ಯಮ-ಪ್ರಧಾನ ಅನುಭವವನ್ನು ಒದಗಿಸುವುದರ ಜತೆಗೆ, ಈ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳು ಬ್ಲೂ ಸ್ಟ್ರೀಕ್ಸ್ ರೈಡರ್‌ಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ಯಮಹಾದ ವಿಶೇಷ ಬೈಕರ್ ಸಮುದಾಯದ ಸವಾರರು ಇತರ ಸವಾರರನ್ನು ಭೇಟಿ ಮಾಡಲು ಮತ್ತು ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಹೊಸ ಔಟ್‌ಲೆಟ್ ಸೇರಿದಂತೆ ಈಗ ಕರ್ನಾಟಕ ಮಾರುಕಟ್ಟೆಯಲ್ಲಿ ಯಮಹಾ 23 ಎಕ್ಸ್‌ಕ್ಲೂಸಿವ್ ಬ್ಲೂ ಸ್ಕ್ವೇರ್ ಶೋ ರೂಂಗಳನ್ನು ಹೊಂದಿದೆ.

ಯಮಹಾದ ಸೂಪರ್‌ಸ್ಪೋರ್ಟ್ ಆರ್3 (321ಸಿಸಿ), ಟಾರ್ಕ್-ರಿಚ್ ಎಂಟಿ -03 (321 ಸಿಸಿ) ಮತ್ತು ಮ್ಯಾಕ್ಸಿ-ಸ್ಪೋರ್ಟ್ಸ್ ಏರಾಕ್ಸ್(155 ಸಿಸಿ) ಮತ್ತು ಏರಾಕ್ಸ್ ವರ್ಷನ್ ಎಸ್ (155 ಸಿಸಿ)ಗಳನ್ನು ಬ್ಲೂ ಸ್ಕ್ವೇರ್ ಶೋರೂಮ್‌ಗಳ ಮೂಲಕ ವಿಶೇಷವಾಗಿ ಮಾರಾಟ ಮಾಡಲಾಗುತ್ತದೆ. ಈ ಪ್ರೀಮಿಯಂ ಔಟ್‌ಲೆಟ್‌ಗಳು ವೈಝಡ್‌ಎಫ್‌-ಆರ್‌15 ಎಂ (155 ಸಿಸಿ), ವೈಝಡ್‌ಎಫ್‌-ಆರ್‌15 ವಿ4 (155ಸಿಸಿ), ವೈಝಡ್‌ಎಫ್‌-ಆರ್‌15ಎಸ್ ವಿ3 (155 ಸಿಸಿ), ಎಂಟಿ-15 ವಿ2 (155 ಸಿಸಿ), ಬ್ಲೂ ಕೋರ್ ತಂತ್ರಜ್ಞಾನ ಆಧರಿತ ಮಾಡೆಲ್ ಗಳಾದ ಎಫ್‌ಝಡ್‌ಎಸ್‌-ಎಫ್‌ಐ ವರ್ಷನ್ 4.0 (149 ಸಿಸಿ), ಎಫ್‌ಝಡ್‌ಎಸ್‌-ಎಫ್‌ಐ ವರ್ಷನ್ 3.0 (149 ಸಿಸಿ), ಎಫ್‌ಝಡ್‌-ಎಫ್‌ಐ ವರ್ಷನ್ 3.0 (149 ಸಿಸಿ), ಎಫ್‌ಝಡ್‌-ಎಕ್ಸ್ (149 ಸಿಸಿ), ಮತ್ತು ಸ್ಕೂಟರ್ ಗಳಾದ ಫ್ಯಾಸಿನೋ 125 ಎಫ್ಐ ಹೈಬ್ರಿಡ್ (125 ಸಿಸಿ), ರೇ ಝಡ್ಆರ್ 125 ಎಫ್ಐ ಹೈಬ್ರಿಡ್ (125 ಸಿಸಿ), ರೇ ಝಡ್ಆರ್ ಸ್ಟ್ರೀಟ್ ರಾಲಿ 125 ಎಫ್ಐ ಹೈಬ್ರಿಡ್ (125 ಸಿಸಿ) ಮುಂತಾದ ನವೀಕರಿಸಿದ ಲೈನ್-ಅಪ್‌ಗಳನ್ನು ಪ್ರದರ್ಶಿಸಲಾಗುತ್ತದೆ.

ಇದನ್ನೂ ಓದಿ: Vastu Tips: ನೆಲ ಒರೆಸುವಾಗಲೂ ವಾಸ್ತು ನಿಯಮ ಪಾಲಿಸಲೇಬೇಕು!

ಹೆಚ್ಚು ಸಮಗ್ರವಾದ ಅನುಭವವನ್ನು ಒದಗಿಸುವ ಭರವಸೆಯನ್ನು ನೀಡುತ್ತಾ, ಈ ಪ್ರೀಮಿಯಂ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳು ಯಮಹಾದ ನಿಜವಾದ ಆ್ಯಕ್ಸೆಸರೀಸ್‌ಗಳು, ಅಧಿಕೃತ ಉಡುಪುಗಳು ಮತ್ತು ಯಮಹಾ ನಿಜವಾದ ಬಿಡಿಭಾಗಗಳನ್ನು ಗ್ರಾಹಕರಿಗೆ ಪ್ರದರ್ಶನ ಮತ್ತು ಮಾರಾಟ ಮಾಡುತ್ತವೆ.

Continue Reading

ಕರ್ನಾಟಕ

Neha Hiremath: ಲಿಂಗಾಯತಳಾದ ನೇಹಾ ಹಿರೇಮಠ ಎಸ್‌ಸಿ ಪ್ರಮಾಣಪತ್ರ ಮಾಡಿಸಿದ್ದೇಕೆ? ಸರ್ಟಿಫಿಕೇಟ್‌ ಫೋಟೊ ಈಗ ವೈರಲ್

Neha Hiremath: ನೇಹಾ ಹಿರೇಮಠ ಅವರು ಬೆಂಗಳೂರಿನ ಬೇಗೂರು ರೋಡ್‌, ಹೊಂಗಸಂದ್ರದ ವಾರ್ಡ್‌ ನಂಬರ್‌ 135ರಲ್ಲಿ ವಾಸವಿರುವುದಾಗಿ ವಿಳಾಸ ನೀಡಿ, ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವುದು ಮತ್ತೊಂದು ಚರ್ಚೆಯ ವಿಷಯವಾಗಿದೆ. ಇವರು ಎಸ್‌ಸಿ ಪ್ರಮಾಣಪತ್ರ ಪಡೆದಿರುವುದಕ್ಕೆ ಹಲವು ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

VISTARANEWS.COM


on

Neha Hiremath
Koo

ಬೆಂಗಳೂರು: ದೇಶಾದ್ಯಂತ ಸುದ್ದಿಯಾಗಿದ್ದ ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ (Neha Murder Case) ಹೊಸ ಟ್ವಿಸ್ಟ್‌ ಸಿಕ್ಕಿದೆ. ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ, ಲಿಂಗಾಯತ ಸಮುದಾಯದ ನೇಹಾ ಹಿರೇಮಠ ಅವರು ಪಡೆದಿರುವ ಪರಿಶಿಷ್ಟ ಜಾತಿ ಪ್ರಮಾಣಪತ್ರವೀಗ (Caste Certificate) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಲಿಂಗಾಯತ ಸಮುದಾಯದ ನಿರಂಜನ ಹಿರೇಮಠ ಅವರ ಪುತ್ರಿಯಾದ ನೇಹಾ ಹಿರೇಮಠ ಅವರು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದುಕೊಂಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಏ.18 ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ ಹಿರಮೇಠ ಪುತ್ರಿ ನೇಹಾ ಕೊಲೆ ನಡೆದಿತ್ತು. ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಫಯಾಜ್‌ ಎಂಬಾತನನ್ನು ಬಂಧಿಸಲಾಗಿದ್ದು, ಇದು ಲವ್‌ ಜಿಹಾದ್‌ ಎಂಬ ಆರೋಪಗಳೂ ಕೇಳಿಬಂದಿದ್ದವು. ನೇಹಾಳನ್ನು ಕೊಂದಿದ್ದ ಆರೋಪಿ ಫಯಾಜ್‌ನನ್ನು ಸಿಐಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಫಯಾಜ್ ತಂದೆ-ತಾಯಿ ಸೇರಿ 10 ಕ್ಕೂ ಹೆಚ್ಚು ಜನರ ವಿಚಾರಣೆ ಮಾಡಲಾಗಿದೆ. ಇದರ ಬೆನ್ನಲ್ಲೇ, ನೇಹಾ ಹಿರೇಮಠ ಜಾತಿ ಪ್ರಮಾಣಪತ್ರವು ವೈರಲ್‌ ಆಗಿದೆ.

Neha Murder Case

ಬೆಂಗಳೂರು ವಿಳಾಸ ನೀಡಿದ್ದೇಕೆ?

ನೇಹಾ ಹಿರೇಮಠ ಅವರು ಬೆಂಗಳೂರಿನ ಬೇಗೂರು ರೋಡ್‌, ಹೊಂಗಸಂದ್ರದ ವಾರ್ಡ್‌ ನಂಬರ್‌ 135ರಲ್ಲಿ ವಾಸವಿರುವುದಾಗಿ ವಿಳಾಸ ನೀಡಿ, ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವುದು ಮತ್ತೊಂದು ಚರ್ಚೆಯ ವಿಷಯವಾಗಿದೆ. ಮೊದಲಿಗೆ ನೇಹಾ ಹಿರೇಮಠ ಅವರು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿದ್ದೇಕೆ? ಹುಬ್ಬಳ್ಳಿಯವರಾದ ಅವರು ಅದಕ್ಕೆ, ಬೆಂಗಳೂರು ವಿಳಾಸ ನೀಡಿದ್ದೇಕೆ? ನೇಹಾ ಹಿರೇಮಠ ಅವರು ಇದ್ದಿದ್ದು ಬೆಂಗಳೂರಿನಲ್ಲಾ? ಅಥವಾ ಹುಬ್ಬಳ್ಳಿಯಲ್ಲಾ ಎಂಬುದು ಸೇರಿ ಹಲವು ಪ್ರಶ್ನೆಗಳು ಮಾಡಿವೆ.

ಸಮತಾ ಸೇನೆ ಆಕ್ರೋಶ

ನೇಹಾ ಹಿರೇಮಠ ಅವರು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿರುವುದಕ್ಕೆ ಹುಬ್ಬಳ್ಳಿಯಲ್ಲಿ ಸಮತಾ ಸೇನೆಯು ಆಕ್ರೋಶ ವ್ಯಕ್ತಪಡಿಸಿದೆ. “ಹುಬ್ಬಳ್ಳಿ ನಿವಾಸಿಯಾದ ನೇಹಾ ಹಿರೇಮಠ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಅಲ್ಲದೆ, ಅವರು ಬೆಂಗಳೂರು ವಿಳಾಸ ನೀಡಿ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಇದು ಪರಿಶಿಷ್ಟರ ಹಕ್ಕುಗಳನ್ನು ಕಸಿಯುವ ಹುನ್ನಾರವಾಗಿದೆ” ಎಂದು ಸಂಘಟನೆಯು ದೂರಿದೆ. ಅಷ್ಟೇ ಅಲ್ಲ, ಅವರ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯವನ್ನು ಆಗ್ರಹಿಸಿದೆ.

ಇದನ್ನೂ ಓದಿ: Murder Case: ʼನೇಹಾ ಹಿರೇಮಠ ಥರ ಕೊಲೆ ಮಾಡ್ತೀನಿ…ʼ ಎಂದವನು ಮಾಡಿಯೇ ಬಿಟ್ಟ! ಪಾಗಲ್‌ ಪ್ರೇಮಿಯಿಂದ ಮತ್ತೊಬ್ಬ ಯುವತಿಯ ಹತ್ಯೆ

Continue Reading

ಧಾರ್ಮಿಕ

Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

Koppala News: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಮಹಾರಥೋತ್ಸವವು ಶುಕ್ರವಾರ ಅಪಾರ ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು.

VISTARANEWS.COM


on

Sri Huligemma Devi Maharathotsava in Hulagi
Koo

ಕೊಪ್ಪಳ: ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಅಪಾರ ಭಕ್ತಸಾಗರದ ನಡುವೆ ಮಹಾರಥೋತ್ಸವವು ವಿಜೃಂಭಣೆಯಿಂದ (Koppala News) ಜರುಗಿತು.

ಇದನ್ನೂ ಓದಿ: Old Students Association: ಸರ್ಕಾರಿ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘ, ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಲು ಆದೇಶ

ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಹುಲಗಿಯ ಶ್ರೀ ಹುಲಿಗೆಮ್ಮ ದೇವಿಯ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರದಿಂದ ಜೂನ್ 3 ರ ಸೋಮವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶುಕ್ರವಾರ ಸಂಜೆ ಮಹಾರಥೋತ್ಸವವು ಲಕ್ಷಾಂತರ ಭಕ್ತಾಧಿಗಳ ಸಮೂಹದ ನಡುವೆ ಅದ್ದೂರಿಯಾಗಿ ನಡೆಯಿತು.

ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭಾಗಿ

ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವದಲ್ಲಿ ಭಕ್ತರ ಉಧೋ ಉಧೋ ಘೋಷಣೆ ಮುಗಿಲು ಮುಟ್ಟಿತ್ತು. ಭಕ್ತವೃಂದ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ, ಭಕ್ತಿ ಭಾವ ಮೆರೆದರು. ಕರ್ನಾಟಕದ ವಿವಿಧ ಜಿಲ್ಲೆಗಳ ಮತ್ತು ಆಂಧ್ರಪ್ರದೇಶದ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳ ಸುಮಾರು ಐದು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಜಾತ್ರೆಗೆ ಆಗಮಿಸಿ, ಮಹಾರಥೋತ್ಸವವನ್ನು ಕಣ್ತುಂಬಿಕೊಂಡರು.

ರಥೋತ್ಸವ ಸಂದರ್ಭದಲ್ಲಿ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ್ ಸುತಗುಂಡಿ ಹಾಗೂ ಕೊಪ್ಪಳ ಮತ್ತು ಗಂಗಾವತಿ ಡಿವೈಎಸ್ಪಿಗಳು ಹಾಗೂ ಇತರರು ಉಪಸ್ಥಿತರಿದ್ದರು

Continue Reading

ಆರೋಗ್ಯ

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

Vijayanagara News: ದಡಾರಾ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು ಎಂದು ವಿಜಯನರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

VISTARANEWS.COM


on

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly
Koo

ಹೊಸಪೇಟೆ: ದಡಾರಾ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವು ಜಿಲ್ಲೆಯಲ್ಲಿ (Vijayanagara News) ಅಚ್ಚುಕಟ್ಟಾಗಿ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ದಡಾರಾ ಮತ್ತು ರುಬೆಲ್ಲಾ 2024 ಡಿಸೆಂಬರ್‌ದೊಳಗೆ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾರ್ಯಕ್ರಮಗಳು ಶಿಸ್ತುಬದ್ಧವಾಗಿ ನಡೆಯಬೇಕು. ಮಗುವಿಗೆ 9 ತಿಂಗಳ ತುಂಬಿದ ನಂತರ ಮೊದಲನೇ ಡೋಸ್ ನೀಡಬೇಕು. ಆ ಬಳಿಕ ಒಂದೂವರೆ ವರ್ಷಕ್ಕೆ ಎರಡನೇ ಡೋಸ್ ನೀಡುವ ಕಾರ್ಯವು ಜಿಲ್ಲೆಯಲ್ಲಿ ಶೇ. 100ರಷ್ಟು ಆಗಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಇದನ್ನೂ ಓದಿ: Forest Man Of India: ಇವರೇ ನೋಡಿ ಭಾರತದ ಫಾರೆಸ್ಟ್‌ ಮ್ಯಾನ್‌; ಏಕಾಂಗಿಯಾಗಿ 1,360 ಎಕ್ರೆಯಲ್ಲಿ ಕಾಡು ಬೆಳೆಸಿದ ಸಾಹಸಿ

ಮಕ್ಕಳಿಗೆ ಲಸಿಕೆಯನ್ನು ಹಾಕಿಸಲು ಕೆಲವೊಮ್ಮೆ ಗ್ರಾಮೀಣ ಪ್ರದೇಶದ ಜನರು ಸಹಕರಿಸುವುದಿಲ್ಲ. ಆದ್ದರಿಂದ ದಡಾರ ಮತ್ತು ರುಬೆಲ್ಲಾ ಲಸಿಕೆಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರ, ಮಹಿಳಾ ಸಂಘ-ಸಂಸ್ಥೆಗಳ, ಆಶಾ ಕಾರ್ಯಕರ್ತೆಯರ ಸಹಕಾರ ಪಡೆದುಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಶಂಕರ್ ನಾಯ್ಕ್ ಎಲ್. ಮಾತನಾಡಿ, ಗ್ರಾಮೀಣ ಭಾಗದ ಕೆಲ ಜನರು ಮೂಢ ನಂಬಿಕೆಗಳಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಆರೋಗ್ಯ ಇಲಾಖೆಯ ಯಾವುದೇ ಲಸಿಕೆ ಮತ್ತು ಅದರ ಮಹತ್ವದ ಕುರಿತು ವ್ಯಾಪಕವಾಗಿ ಜನರಿಗೆ ತಿಳಿವಳಿಕೆ ಮೂಡಿಸುವ ಕಾರ್ಯವು ಲಸಿಕಾ ಅಭಿಯಾನದ ಜತೆಜತೆಗೆ ಸಾಗಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಮಕ್ಕಳಲ್ಲಿ ಜ್ವರ ಮತ್ತು ತದ್ದು ಕಂಡು ಬರುತ್ತಿದ್ದಲ್ಲಿ ಪಾಲಕರು ನಿರ್ಲಕ್ಷ್ಯ ಮಾಡಬಾರದು. ಅಂತಹ ಮಕ್ಕಳಿದ್ದಲ್ಲಿ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಜ್ವರ ಮತ್ತು ತದ್ದು ಕಂಡು ಬರುವ ಮಕ್ಕಳೇನಾದರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ ಈ ಬಗ್ಗೆ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗೆ ವರದಿ ಮಾಡಬೇಕು ಎಂದು ತಿಳಿಸಿದರು.

ಎನ್‌ಪಿಎಸ್‌ಪಿ ಸರ್ವೆಲನ್ಸ್ ನೋಡಲ್ ಅಧಿಕಾರಿ ಡಾ.ಶ್ರೀಧರ ಆರ್.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಸ್ವಲ್ಪ ಕಡೆ ವರುಣ ಸಾಧಾರಣ, ಗಾಳಿ ರಭಸ ಅಸಾಧಾರಣ

ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಡಾ.ಷಣ್ಮುಖ ನಾಯ್ಕ ಬಿ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ ಎಂ.ಪಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಕೆ.ಕಮಲಮ್ಮ, ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ. ರಾಧಿಕಾ, ಹೊಸಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಭಾಸ್ಕರ್, ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಜಗದೀಶ್ ಪಾಟ್ನೆ ಸೇರಿದಂತೆ ಇತರರು ಇದ್ದರು.

Continue Reading
Advertisement
Lok Sabha Election
ದೇಶ50 mins ago

Lok Sabha Election: ಇಂದು ಕೊನೇ ಹಂತದ ಮತದಾನ; ಸಂಜೆ ಎಕ್ಸಿಟ್‌ ಪೋಲ್, ಇಂದೇ ತಿಳಿಯಲಿದೆ ಭವಿಷ್ಯ!

Dina Bhavishya
ಭವಿಷ್ಯ51 mins ago

Dina Bhavishya : ತಿಂಗಳ ಮೊದಲ ದಿನವೇ ಉದ್ಯೋಗದ ಸ್ಥಳದಲ್ಲಿ ಈ ರಾಶಿಯವರಿಗೆ ಕಿರಿಕಿರಿ ಅನುಭವ

Anti Islam Rally
ವಿದೇಶ6 hours ago

Anti Islam Rally: ಇಸ್ಲಾಂ ವಿರೋಧಿ ರ‍್ಯಾಲಿಯಲ್ಲಿ ಸಿಕ್ಕಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ; ಗುಂಡಿಕ್ಕಿದ ಪೊಲೀಸರು

Modi Meditation
ದೇಶ6 hours ago

Modi Meditation: ವಿವೇಕಾನಂದರ ಮೂರ್ತಿ ಎದುರು ಮೋದಿ ಗಾಢ ಧ್ಯಾನ; ಇಲ್ಲಿವೆ ಫೋಟೊಗಳು

Yamaha has opened a new Blue Square outlet in Bengaluru
ಬೆಂಗಳೂರು8 hours ago

Yamaha: ಬೆಂಗಳೂರಿನಲ್ಲಿ ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದ ಯಮಹಾ

Neha Hiremath
ಕರ್ನಾಟಕ8 hours ago

Neha Hiremath: ಲಿಂಗಾಯತಳಾದ ನೇಹಾ ಹಿರೇಮಠ ಎಸ್‌ಸಿ ಪ್ರಮಾಣಪತ್ರ ಮಾಡಿಸಿದ್ದೇಕೆ? ಸರ್ಟಿಫಿಕೇಟ್‌ ಫೋಟೊ ಈಗ ವೈರಲ್

Kanyakumari Tour
ಪ್ರವಾಸ9 hours ago

Kanyakumari Tour: ನಿಮ್ಮ ಕನ್ಯಾಕುಮಾರಿ ಪ್ರವಾಸದ ಪಟ್ಟಿಯಲ್ಲಿರಲಿ ಈ 10 ಸಂಗತಿಗಳು

Sri Huligemma Devi Maharathotsava in Hulagi
ಧಾರ್ಮಿಕ9 hours ago

Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly
ಆರೋಗ್ಯ9 hours ago

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

District administration all preparations for vote counting says DC Prashanth Kumar Mishra
ಬಳ್ಳಾರಿ9 hours ago

Lok Sabha Election 2024: ಮತ ಎಣಿಕೆಗೆ ಬಳ್ಳಾರಿ ಜಿಲ್ಲಾಡಳಿತ ಸಕಲ ಸಿದ್ಧತೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌