Viral Video: ಐಸ್‌ಕ್ರೀಂ ಕಡ್ಡಿ, ಬೆಂಕಿ ಪೊಟ್ಟಣದ ನೆರಳಿನಲ್ಲೇ ಕಿಂಗ್‌ ಕೊಹ್ಲಿ ಚಿತ್ರ! ಕಲಾವಿದನಿಗೊಂದು ಸಲಾಂ - Vistara News

ವೈರಲ್ ನ್ಯೂಸ್

Viral Video: ಐಸ್‌ಕ್ರೀಂ ಕಡ್ಡಿ, ಬೆಂಕಿ ಪೊಟ್ಟಣದ ನೆರಳಿನಲ್ಲೇ ಕಿಂಗ್‌ ಕೊಹ್ಲಿ ಚಿತ್ರ! ಕಲಾವಿದನಿಗೊಂದು ಸಲಾಂ

ಕಲಾವಿದನೊಬ್ಬ ಬೆಂಕಿ ಪೊಟ್ಟಣ ಮತ್ತು ಐಸ್‌ಕ್ರೀಂ ಕಡ್ಡಿಗಳನ್ನು ಬಳಸಿಕೊಂಡು ಅದರ ನೆರಳಿನಲ್ಲಿ ವಿರಾಟ್‌ ಕೊಹ್ಲಿ ಭಾವಚಿತ್ರ ಕಾಣುವಂತಹ ಕಲಾಕೃತಿ ರಚಿಸಿದ್ದಾನೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

VISTARANEWS.COM


on

virat kohli art
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇದು ಡಿಜಿಟಲ್‌ ಯುಗ. ಅದಕ್ಕೆ ತಕ್ಕಂತೆ ಆರ್ಟಿಫಿಶಲ್‌ ಇಂಟೆಲಿಜೆನ್ಸ್‌ ತಯಾರಿಸುವ ಹಲವಾರು ವಿಶೇಷ ಫೋಟೋಗಳನ್ನು ನಾವು ನೋಡುತ್ತಿರುತ್ತವೇ. ಅವುಗಳನ್ನೇ ಆಶ್ಚರ್ಯದಿಂದ ಕಾಣುತ್ತೇವೆ. ಆದರೆ ಈ ಕಾಲದಲ್ಲಿಯೂ ಕೂಡ ಸಣ್ಣ ಪುಟ್ಟ ಸಾಮಾಗ್ರಿಗಳನ್ನೇ ಬಳಸಿಕೊಂಡು ವಿಶೇಷವಾದ ಕಲಾಕೃತಿಗಳನ್ನು ರಚಿಸುವ ಹಲವು ಕಲಾವಿದರು ನಮ್ಮ ನಿಮ್ಮೆಲ್ಲರ ನಡುವೆಯೇ ಇದ್ದಾರೆ. ಅಂತವರಲ್ಲಿ ಒಬ್ಬರಾಗಿರುವ ಶಿಂತು ಮೌರ್ಯ ಅವರ ಕಲೆಯ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು (Viral Video) ಮಾಡುತ್ತಿದೆ.

ಶಿಂತು ಅವರು ಬೆಂಕಿ ಪೊಟ್ಟಣ ಹಾಗೂ ಐಸ್‌ಕ್ರೀಂನ ಕಡ್ಡಿಗಳನ್ನೇ ಬಳಸಿಕೊಂಡು ಕಲಾಕೃತಿ ರಚಿಸುವ ವಿಶೇಷ ಪ್ರತಿಭೆಯನ್ನು ಹೊಂದಿದ್ದಾರೆ. ಅದರಂತೆ ಅವರು ಇತ್ತೀಚೆಗೆ ಬೆಂಕಿ ಪೊಟ್ಟಣ ಮತ್ತು ಐಸ್‌ಕ್ರೀಂ ಕಡ್ಡಿ ಬಳಸಿಕೊಂಡು ವಿಶೇಷವಾದ ಕಲಾಕೃತಿಯೊಂದನ್ನು ರಚಿಸಿದ್ದಾರೆ. ಆ ಕಲಾಕೃತಿಯ ಎದುರಿಗೆ ಲೈಟ್‌ ಹಾಕಿದರೆ ಅದರ ನೆರಳಿನಲ್ಲಿ ಭಾರತದ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಅವರ ಭಾವಚಿತ್ರ ಮೂಡುವಂತಹ ವಿಶೇಷವಾದ ಕಲಾಕೃತಿ ಅದಾಗಿದೆ.

ಇದನ್ನೂ ಓದಿ: Viral video: ಹಿಂಡು ತಪ್ಪಿಸಿಕೊಂಡ ಕಾಡಾನೆ ಮರಿ ಕರೆದರೆ ಏನು ಮಾಡುತ್ತೆ ನೋಡಿ!
ಕಲಾಕೃತಿ ಮಾಡುವುದಕ್ಕೆ ತಾನು ಪಟ್ಟ ಕಷ್ಟವನ್ನು ಶಿಂತು ತಮ್ಮ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ರೂಪದಲ್ಲಿ ಹಂಚಿಕೊಂಡಿದ್ದಾರೆ. ಆ ಕಲಾಕೃತಿ ನಿರ್ಮಾಣ ಮಾಡುವುದಕ್ಕೆಂದು ಬರೋಬ್ಬರಿ ಮೂರು ದಿನಗಳ ಸಮಯ ತೆಗೆದುಕೊಂಡಿದ್ದಾಗಿ ಅವರು ವಿಡಿಯೊದ ಕ್ಯಾಪ್ಶನ್‌ನಲ್ಲಿ ಹೇಳಿದ್ದಾರೆ. ಹಾಗೆಯೇ ಕಲಾಕೃತಿ ಬಗ್ಗೆ ನಿಮಗೆ ಏನೆನ್ನಿಸಿತು ಎಂದು ಕಾಮೆಂಟ್‌ ಮೂಲಕ ತಿಳಿಸಿ ಎಂದೂ ಕೇಳಿಕೊಂಡಿದ್ದಾರೆ.


ಈ ವಿಶೇಷ ಕಲೆಯ ವಿಡಿಯೊವನ್ನು ಜುಲೈ 9ರಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 1.25 ಕೋಟಿಗೂ ಅಧಿಕ ಜನರಿಂದ ವೀಕ್ಷಣೆಗೊಂಡಿದೆ. 16 ಲಕ್ಷಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಸಾವಿರಾರು ಜನರು ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಹಾಗೆಯೇ ಸಾವಿರಾರು ಜನರು ಈ ಪ್ರತಿಭೆಯ ಬಗ್ಗೆ ಕಾಮೆಂಟ್‌ಗಳ ಮೂಲಕ ಮೆಚ್ಚುಗೆಯ ಮಹಾಪೂರವನ್ನೇ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಧೋನಿಯೊಂದಿಗಿನ ವಿಡಿಯೊ ಹರಿಬಿಟ್ಟ ಗಗನಸಖಿ!
“ಈ ವಿಡಿಯೊವನ್ನು ವಿರಾಟ್‌ ಅವರು ನೋಡಿದರೆ ಚೆನ್ನಾಗಿರುತ್ತದೆ”, “ಇದು ನಿಜಕ್ಕೂ ಅದ್ಭುತವಾದ ಹಾಗೂ ವಿಶೇಷವಾದ ಪ್ರತಿಭೆ. ನೀವು ಇನ್ನಷ್ಟು ಬೆಳೆಯುವಂತಾಗಲಿ”, “ವಿರಾಟ್‌ ಕೊಹ್ಲಿ ಅವರೇ, ಇದು ನಿಮಗಾಗಿ”, “ನನ್ನ ದೇವರು, ನನ್ನ ಸ್ಫೂರ್ತಿ. ಕ್ರಿಕೆಟ್‌ನ ರಾಜ ಕಿಂಗ್‌ ಕೊಹ್ಲಿ” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಅದಲ್ಲದೆ “ವಾವ್‌”, “ಸೂಪರ್‌”, “ಅಮೇಜಿಂಗ್‌” ಎನ್ನುವಂತಹ ನೂರಾರು ಕಾಮೆಂಟ್‌ಗಳನ್ನು ನಾವು ಕಾಣಬಹುದಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Deadly Attack: ಹಾಡಹಗಲೇ ಶಿವಸೇನೆ ಮುಖಂಡನ ಮೇಲೆ ಡೆಡ್ಲಿ ಅಟ್ಯಾಕ್‌- ವಿಡಿಯೋ ಇದೆ

Deadly Attack: ಥಾಪರ್‌ ಆಸ್ಪತ್ರೆಯಿಂದ ಹೊರ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಲು ಶುರು ಮಾಡುತ್ತಾರೆ. ಆಗ ದಾಳಿಕೋರರಲ್ಲಿ ಒಬ್ಬ ಕತ್ತಿಯಿಂದ ಥಾಪರ್ ತಲೆಯ ಮೇಲೆ ಬಿಡದೇ ಹೊಡೆಯಲು ಶುರು ಮಾಡುತ್ತಾನೆ. ಥಾಪರ್ ಕೈ ಜೋಡಿಸಿ ಬಿಟ್ಟು ಬಿಡಿ ಎಂದು ಅಂಗಾಲಾಚುತ್ತಿದ್ದರೂ ಅದನ್ನು ಲೆಕ್ಕಿಸದೇ ಆತನ ಮೇಲೆ ನಿರಂತರ ದಾಳಿ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Deadly Attack
Koo

ಚಂಢಿಗಡ: ಪಂಜಾಬ್‌ನ ಶಿವಸೇನೆ ಮುಖಂಡ(Shivsena Leader)ನ ಮೇಲೆ ನಾಲ್ವರು ದುಷ್ಕರ್ಮಿಗಳು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ(Deadly Attack) ನಡೆಸಿರುವ ಘಟನೆ ಲುಧಿಯಾನದಲ್ಲಿ ನಡೆದಿದೆ. ಶಿವಸೇನೆ ನಾಯಕ ಸಂದೀಪ್‌ ಥಾಪರ್‌ ಅಲಿಯಾಸ್‌ ಗೋರಾ ಮೇಲೆ ಸ್ಕೂಟರ್‌ನಲ್ಲಿ ಬಂದ ನಿಹಾಂಗ್ ಉಡುಪಿನಲ್ಲಿದ್ದ ನಾಲ್ವರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಇನ್ನು ಘಟನೆ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದ್ದು, ವೈರಲ್‌(Viral Video) ಆಗಿದೆ.

ವೈರಲ್‌ ವಿಡಿಯೋದಲ್ಲೇನಿದೆ?

ಥಾಪರ್‌ ಆಸ್ಪತ್ರೆಯಿಂದ ಹೊರ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಲು ಶುರು ಮಾಡುತ್ತಾರೆ. ಆಗ ದಾಳಿಕೋರರಲ್ಲಿ ಒಬ್ಬ ಕತ್ತಿಯಿಂದ ಥಾಪರ್ ತಲೆಯ ಮೇಲೆ ಬಿಡದೇ ಹೊಡೆಯಲು ಶುರು ಮಾಡುತ್ತಾನೆ. ಥಾಪರ್ ಕೈ ಜೋಡಿಸಿ ಬಿಟ್ಟು ಬಿಡಿ ಎಂದು ಅಂಗಾಲಾಚುತ್ತಿದ್ದರೂ ಅದನ್ನು ಲೆಕ್ಕಿಸದೇ ಆತನ ಮೇಲೆ ನಿರಂತರ ದಾಳಿ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮತ್ತೊಬ್ಬ ನಿಹಾಂಗ್ ಕತ್ತಿಯಿಂದ ದಾಳಿ ಮುಂದುವರಿಸಿದಾಗ ಶಿವಸೇನಾ ಪಂಜಾಬ್ ನಾಯಕ ಬ್ಯಾಲೆನ್ಸ್‌ ಕಳೆದುಕೊಂಡು ಸ್ಕೂಟರ್ ಸಮೇತ ರಸ್ತೆಯಲ್ಲಿ ಬಿದ್ದಿದ್ದಾರೆ. ಅಲ್ಲೇ ಇದ್ದ ಪ್ರಯಾಣಿಕರು ಆಘಾತದಿಂದ ನೋಡುತ್ತಿದ್ದಂತೆ ದಾಳಿಕೋರರು ಸ್ಕೂಟರ್​​ನಲ್ಲಿ ಪರಾರಿಯಾಗಿದ್ದಾರೆ.

ಸ್ಥಳದಲ್ಲಿ ಅನೇಕ ಜನ ಥಾಪರ್‌ ಸಹಾಯಕ್ಕೆ ಬರಲೇ ಇಲ್ಲ. ಟ್ರಸ್ಟ್‌ನ ಸಂಸ್ಥಾಪಕ-ಅಧ್ಯಕ್ಷ ರವೀಂದರ್ ಅರೋರಾ ಅವರ ನಾಲ್ಕನೇ ಪುಣ್ಯತಿಥಿಯ ಅಂಗವಾಗಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಥಾಪರ್ ಅವರು ಸಂವೇದನಾ ಟ್ರಸ್ಟ್ ಎಂಬ ಎನ್‌ಜಿಒ ಕಚೇರಿಯಿಂದ ಸಿವಿಲ್ ಆಸ್ಪತ್ರೆ ಬಳಿ ತೆರಳಿದ ನಂತರ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಮಾರಣಾಂತಿಕ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಥಾಪರ್‌ನನ್ನು ಸ್ಥಳೀಯ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಅವರನ್ನು ಸ್ಥಳೀಯ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಯಿತು. ಅಪರಿಚಿತ ದಾಳಿಕೋರರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಜಸ್ಕಿರಂಜಿತ್ ಸಿಂಗ್ ತೇಜಾ ತಿಳಿಸಿದ್ದಾರೆ.

ಘಟನೆಯ ನಂತರ, ಶಿವಸೇನಾ ಪಂಜಾಬ್ ನಾಯಕರು ಸಿವಿಲ್ ಆಸ್ಪತ್ರೆಯ ಹೊರಗೆ ಜಮಾಯಿಸಿ ಪಂಜಾಬ್ ಸರ್ಕಾರ ಮತ್ತು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ಥಾಪರ್‌ಗೆ ಮೂವರು ಬಂದೂಕುಧಾರಿಗಳ ಭದ್ರತೆ ನೀಡಲಾಗಿತ್ತು. ಪೊಲೀಸರು ಒಂದು ವಾರದ ಹಿಂದೆ ಅವರ ಭದ್ರತೆಯನ್ನು ಹಿಂತೆಗೆದುಕೊಂಡರು. ಇದರ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ. ಥಾಪರ್‌ ಮೇಲಿನ ದಾಳಿಗೆ ಹಿಂದೂ ಸಂಘಟನೆ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ. ಹಿಂದೂ ಮುಖಂಡರಿಗೆ ಸರ್ಕಾರ ಭದ್ರತೆ ನೀಡುತ್ತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯ ಮೇಲೆ ಇಂತಹ ಕ್ರೂರ ದಾಳಿ ಖಂಡನೀಯ. ಇದು ನಿವಾಸಿಗಳಲ್ಲಿ ಭೀತಿ ಮೂಡಿಸಿದೆ ಎಂದಿದ್ದಾರೆ.

ಇದನ್ನೂ ಓದಿ:Self Harming: ಮೊದಲ ರಾತ್ರಿಯ ಟೆನ್ಶನ್‌ಗೆ ವರ ಆತ್ಮಹತ್ಯೆ? ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ

Continue Reading

Latest

Viral Video: ಮೆಟ್ರೋದಲ್ಲಿ ಕೋತಿ ಚೇಷ್ಟೆಗೆ ಕೊನೆಯೇ ಇಲ್ಲ! ಈ ಮಂಗ್ಯಾನ ಡ್ಯಾನ್ಸ್‌ ನೋಡಿ!

Viral Video: ಬ್ಲೂ ಲೈನ್ ದೆಹಲಿ ಮೆಟ್ರೋದಲ್ಲಿ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರು ನಟಿಸಿದ ʼRRR’ಚಿತ್ರದ ಜನಪ್ರಿಯ ಹಾಡಾದ “ನಾಚೋ ನಾಚೋ”ಗೆ ಯುವಕನೊಬ್ಬ ಹುಚ್ಚೆದ್ದು ಡ್ಯಾನ್ಸ್‌ ಮಾಡಿದ್ದಾನೆ. ಅವನ ಈ ಡ್ಯಾನ್ಸ್ ಕೆಲವು ಪ್ರಯಾಣಿಕರಿಗೆ ಮನೋರಂಜನೆ ನೀಡಿದರೆ, ಇನ್ನು ಕೆಲವರಿಗೆ ಇದರಿಂದ ಕಿರಿಕಿರಿಯಾಗಿದೆ. ಈ ವಿಡಿಯೊ ಇರುವ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

VISTARANEWS.COM


on

Viral Video
Koo

ನವದೆಹಲಿ: ಕೆಲವರಿಗೆ ಡ್ಯಾನ್ಸ್‌ ಎಂದರೆ ವಿಪರೀತ ಮೋಹವಿರುತ್ತದೆ. ಹಾಡು ಕಿವಿಗೆ ಬಿದ್ದಾಕ್ಷಣ ಕಾಲು ಕೂಡ ನಿಲ್ಲಲ್ಲ. ಈಗಂತೂ ಸಾರ್ವಜನಿಕ ಸ್ಥಳವೆಂದೂ ನೋಡದೇ ಕುಣಿಯುವುದಕ್ಕೆ ಶುರು ಮಾಡುತ್ತಾರೆ. ಇಲ್ಲೊಬ್ಬ ವ್ಯಕ್ತಿ ಹಾಡೊಂದಕ್ಕೆ ಸಾರ್ವಜನಿಕ ಸ್ಥಳದಲ್ಲಿ ಹುಚ್ಚೆದ್ದು ಕುಣಿದಿದ್ದು, ಅವರ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಸಚಿನ್ ಎಂಬ ವ್ಯಕ್ತಿ ಬ್ಲೂ ಲೈನ್ ದೆಹಲಿ ಮೆಟ್ರೋದಲ್ಲಿ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್‌ ಅವರು ನಟಿಸಿದ ‘ಆರ್‌ಆರ್‌ಆರ್’ ಚಿತ್ರದ ಜನಪ್ರಿಯ ಹಾಡಾದ “ನಾಚೋ ನಾಚೋ” ಗೆ ಉತ್ಸಾಹದಿಂದ ಡ್ಯಾನ್ಸ್ ಮಾಡಿದ್ದಾನೆ.

ಅವನ ಈ ಡ್ಯಾನ್ಸ್ ಕೆಲವು ಪ್ರಯಾಣಿಕರಿಗೆ ಮನೋರಂಜನೆ ನೀಡಿದರೆ ಕೆಲವರಿಗೆ ಇದರಿಂದ ಅಡ್ಡಿಯಾಗಿದೆ ಎನ್ನಲಾಗಿದೆ. ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದು, ವೈರಲ್ ಆಗಿದೆ. ಈ ವೈರಲ್ ವಿಡಿಯೊದಲ್ಲಿ ಸಚಿನ್ ಮೆಟ್ರೋ ರೈಲಿನಲ್ಲಿ ಮಧ್ಯದಲ್ಲಿ ನಿಂತು ಹಾಡಿಗೆ ಉತ್ಸಾಹದಿಂದ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿರುವುದನ್ನು ಮೊದಲು ಕಾಣಿಸುತ್ತದೆ. ನಂತರ ಇಂದ್ರಪ್ರಸ್ಥ ನಿಲ್ದಾಣದಲ್ಲಿ ಮೆಟ್ರೋ ನಿಂತು ಬಾಗಿಲು ತೆರೆಯುತ್ತಿದ್ದಂತೆ, ಅವನು ಪ್ಲಾಟ್‍ಫಾರ್ಮ್ ನಿಂದ ಹೊರಗೆ ಓಡಿ ಕುಳಿದು ಮತ್ತೆ ಬೋಗಿಗೆ ಪ್ರವೇಶಿಸಿ ಡ್ಯಾನ್ಸ್ ಮಾಡುತ್ತಾನೆ. ನಂತರ ಅವನು ಜಿಗಿದು ತನ್ನ ಡ್ಯಾನ್ಸ್ ಅನ್ನು ಹಂತ ಹಂತವಾಗಿ ಮುಂದುವರಿಸುತ್ತಾನೆ, ಇದು ಅವನ ಸ್ನೇಹಿತರು ಮತ್ತು ಸಹ ಪ್ರಯಾಣಿಕರಿಗೆ ಆಶ್ಚರ್ಯ ಮತ್ತು ಮನರಂಜನೆಯನ್ನು ನೀಡುತ್ತದೆ. ಕೆಲವರು ಈ ಡ್ಯಾನ್ಸ್ ನೋಡಿ ಸುಮ್ಮನಿದ್ದರೆ ಕೆಲವರ ಮುಖದಲ್ಲಿ ನಗು ಮೂಡಿದೆ ಎನ್ನಲಾಗಿದೆ.

ಈ ಪೋಸ್ಟ್ ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ಇದಕ್ಕೆ 13.8 ಮಿಲಿಯನ್ ವೀವ್ಸ್ ಹಾಗೂ ಒಂದು ಮಿಲಿಯನ್ ಲೈಕ್ಸ್ ಬಂದಿದೆ. ಸಚಿನ್ ಡ್ಯಾನ್ಸ್‌ಗೆ ಹಲವು ನೆಟ್ಟಿಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿನ್ ಅವರ ಈ ಕೃತ್ಯಕ್ಕೆ ಜನರು ನಿರಾಶೆಗೊಂಡಿದ್ದಾರೆ.

ಈ ಹಿಂದೆ ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬಳು ಡ್ಯಾನ್ಸ್ ಮಾಡಿದ್ದು, ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಆಗಿದೆ. ವಿಡಿಯೋದಲ್ಲಿ ಆಕೆ ಕಪ್ಪು ಸೀರೆಯಲ್ಲಿ ಕಾಣಿಸಿಕೊಂಡಿದ್ದಳು.

ಇದನ್ನೂ ಓದಿ: ಬುಲೆಟ್‌ ಮೇಲೆ ಬಂದ ಹುಡುಗಿ ಆಟೊ ಚಾಲಕನ ಬುರುಡೆ ಒಡೆದಳು!

Viral Video

ಅವಳು ವಿಮಾನದ ಮಧ್ಯದಲ್ಲಿ ನಿಂತು ಡ್ಯಾನ್ಸ್‌ ಮಾಡಿದ್ದಳು. ಈಕೆಯ ಡ್ಯಾನ್ಸ್‌ ನೋಡಿ ಇತರ ಪ್ರಯಾಣಿಕರು ಕಿರಿಕಿರಿ ಅನುಭವಿಸಿದ್ದರು.

Continue Reading

ಕ್ರೀಡೆ

Virat Kohli’s Phone Wallpaper: ಕೊಹ್ಲಿಯ ಮೊಬೈಲ್​ ​ವಾಲ್​ ಪೇಪರ್​ನಲ್ಲಿರುವ ವ್ಯಕ್ತಿ ಯಾರು? ಇವರ ಹಿನ್ನಲೆ ಏನು?

Virat Kohli’s Phone Wallpaper: ಕೊಹ್ಲಿ ಮಾತ್ರವದಲ್ಲದೆ, ಆ್ಯಪಲ್‌ ಸಿಇಒ ಸ್ಟೀವ್ ಜಾಬ್ಸ್, ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಸೇರಿ ಜಗತ್ತಿನಾದ್ಯಂತ ಹಲವು ಪ್ರಸಿದ್ಧ ರಾಜಕಾರಣಿಗಳು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ಕೈಗಾರಿಕೋದ್ಯಮಿಗಳೆಲ್ಲ ಬಾಬಾ ಭಕ್ತರಾಗಿದ್ದಾರೆ

VISTARANEWS.COM


on

Virat Kohli's Phone Wallpaper
Koo

ಮುಂಬಯಿ: ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ(Virat Kohli) ಅವರು ಮೊಬೈಲ್​ನ ಹೋಮ್​ ಸ್ಕ್ರೀನ್​ನಲ್ಲಿರುವ(Virat Kohli’s phone wallpaper) ಫೋಟೊ ಒಂದು ವೈರಲ್​ ಆಗಿದ್ದು, ಈ ಫೋಟೊದಲ್ಲಿರುವ ವ್ಯಕ್ತಿ ಯಾರೆಂದು ತಿಳಿದುಕೊಳ್ಳುವ ಆಸಕ್ತಿ ಮತ್ತು ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.​

ಹೌದು ವಿರಾಟ್​ ಮೊಬೈಲ್​ ವಾಲ್​ ಪೇಪರ್​ನಲ್ಲಿರುವ ಫೋಟೊ ನೀಮ್ ಕರೋಲಿ ಬಾಬಾ ಅವರದ್ದಾಗಿದೆ. ವಿರಾಟ್​ ಕೊಹ್ಲಿ ಅವರು 2 ವರ್ಷಗಳ ಕಾಲ ತಮ್ಮ ಬ್ಯಾಟಿಂಗ್​ ಫಾರ್ಮ್​ ಕಳೆದುಕೊಂಡು ಇನ್ನೇನು ತಮ್ಮ ಕ್ರಿಕೆಟ್​ ವೃತ್ತಿ ಜೀವನ ಕೊನೆಗೊಳ್ಳುತ್ತದೆ ಎನ್ನುವಷ್ಟರಲ್ಲಿ ಕೊಹ್ಲಿ ಅವರನ್ನು ಪತ್ನಿ ಅನುಷ್ಕಾ ಶರ್ಮ ಕರೋಲಿ ಬಾಬಾ ಆಶ್ರಮಕ್ಕೆ ಕರೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದಾಗಿ ಕೊಹ್ಲಿ ಆಡಿದ ಮರು ಪಂದ್ಯದಲ್ಲೇ ಶತಕ ಬಾರಿಸಿ ಸಂಭ್ರಮಿಸಿದ್ದರು. ಈ ಪವಾಡ ನಡೆದಾಗಿನಿಂದಲೂ ಕೊಹ್ಲಿ ಅವರು ಕರೋಲಿ ಬಾಬಾ ಅವರ ಭಕ್ತರಾಗಿದ್ದಾರೆ.

ಕೊಹ್ಲಿ ಮಾತ್ರವದಲ್ಲದೆ, ಆ್ಯಪಲ್‌ ಸಿಇಒ ಸ್ಟೀವ್ ಜಾಬ್ಸ್, ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಸೇರಿ ಜಗತ್ತಿನಾದ್ಯಂತ ಹಲವು ಪ್ರಸಿದ್ಧ ರಾಜಕಾರಣಿಗಳು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ಕೈಗಾರಿಕೋದ್ಯಮಿಗಳೆಲ್ಲ ಬಾಬಾ ಭಕ್ತರಾಗಿದ್ದಾರೆ. ಕೊಹ್ಲಿ ಬಿಡುವು ಸಿಕ್ಕ ವೇಳೆ ಕುಟುಂಬ ಸಮೇತರಾಗಿ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡುತ್ತಿರುತ್ತಾರೆ.

ಇದನ್ನೂ ಓದಿ Team India’s Victory Parade: ಟೀಮ್ ಇಂಡಿಯಾದ ವಿಕ್ಟರಿ ಪೆರೇಡ್​ನಲ್ಲಿ ಹಲವು ಅಭಿಮಾನಿಗಳಿಗೆ ಗಾಯ; ಆಸ್ಪತ್ರೆಗೆ ದಾಖಲು

ಯಾರು ಈ ಕರೋಲಿ ಬಾಬಾ?


ಕರೋಲಿ ಬಾಬಾರನ್ನು ಅವರ ಭಕ್ತರು ಭಗವಾನ್ ಹನುಮಂತನ ಅವತಾರವೆಂದೇ ನಂಬುತ್ತಾರೆ. ತಾನೊಬ್ಬ ಸಾಮಾನ್ಯ ವ್ಯಕ್ತಿ ಎಂದು ಸ್ವತಃ ಬಾಬಾ ಹೇಳಿದ್ದರೂ ಕೂಡ ಭಕ್ತರು ಮಾತ್ರ ಅವರನ್ನು ಪೂಜಿಸುವುದು ನಿಲ್ಲಿಸಿಲ್ಲ. ನೀಮ್ ಕರೋಲಿ ಬಾಬಾ ಅವರ ಮೂಲ ಹೆಸರು ಲಕ್ಷ್ಮೀನಾರಾಯಣ ಶರ್ಮಾ. ಬಾಬಾರ ಜೀವನದಲ್ಲಿ ನಡೆದ ಅನೇಕ ಘಟನೆಗಳು ಅವರ ಸಾಮರ್ಥ್ಯ, ಶಕ್ತಿ ಮತ್ತು ದಯೆಯಿಂದ ಅವರನ್ನು ಆಂಜನೇಯನ ಅವತಾರವೆಂದು ಪರಿಗಣಿಸಲಾಗಿದೆ.

ಲಂಡನ್​ಗೆ ತೆರಳಿದ ಕೊಹ್ಲಿ


ಟೀಮ್​ ಇಂಡಿಯಾ ವಿಜಯೋತ್ಸವ ಆಚರಣೆ ಮುಗಿದ ತಕ್ಷಣ ವಿರಾಟ್​ ಕೊಹ್ಲಿ ಅವರು ಲಂಡನ್​ಗೆ ಪ್ರಯಾಣಿಸಿದ್ದಾರೆ. ಪತ್ನಿ ಅನುಷ್ಕಾ ಮತ್ತು ಇಬ್ಬರು ಮಕ್ಕಳು ಲಂಡನ್​ನಲ್ಲಿರುವ ಕಾರಣ ಕುಟುಂಬದ ಜತೆ ಕಾಲ ಕಳೆಯಲು ಕೊಹ್ಲಿ ನೇರವಾಗಿ ಮುಂಬೈನಿಂದ ಲಂಡನ್​ ವಿಮಾನ ಏರಿದ್ದಾರೆ.

ಕುಟುಂಬಕ್ಕೆ ಮೊದಲ ಪ್ರಾಧಾನ್ಯತೆ ನೀಡುವ ಕೊಹ್ಲಿ ಯಾವುದೇ ಪಂದ್ಯ ಇರಲಿ ಇದು ಮುಕ್ತಾಯಗೊಂಡ ತಕ್ಷಣ ಪತ್ನಿಗೆ ವಿಡಿಯೊ ಕಾಲ್​ ಮಾಡಿ ಮಾತನಾಡುತ್ತಾರೆ. ಕೆಲವೊಮ್ಮೆ ಕ್ರಿಕೆಟ್​ ಸರಣಿ ಇದ್ದರೂ ಕೂಡ ಇದರಿಂದ ಹಿಂದೆ ಸರಿದು ಕುಟುಂಬದ ಜತೆ ಕಾಲ ಕಳೆಯುತ್ತಾರೆ. ಟಿ20 ವಿಶ್ವಕಪ್​ ಗೆದ್ದ ಬಳಿಕವೂ ಕೂಡ ಕೊಹ್ಲಿ ಪತ್ನಿಗೆ ಕರೆ ಮಾಡಿ ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ. ಜತೆಗೆ ಪುಟ್ಟ ಮಗುವಿಗೆ ಫ್ಲೈಯಿಂಗ್ ಕಿಸ್ ನೀಡಿದ ವಿಡಿಯೊ ಕೂಡ ವೈರಲ್​ ಆಗಿತ್ತು.

ಕೊಹ್ಲಿ ಮತ್ತು ಅನುಷ್ಕಾ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಈ ಜೋಡಿ ಸೇವಾ (seVVA) ಎಂಬ ಹೆಸರಿನ ಎನ್​ಜಿವೊ ನಡೆಸುತ್ತಿದ್ದು ಈ ಮೂಲಕ ಹಲವರಿಗೆ ಸಹಾಯವನ್ನು ಮಾಡುತ್ತಿದ್ದಾರೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಕೊಹ್ಲಿ ಕೂಡ ತನ್ನ ಬದುಕಿನಲ್ಲಿ ಅನುಷ್ಕಾ ಮುಖ್ಯ ಪಾತ್ರಹಿಸಿರುದಾಗಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು.

Continue Reading

ದಾವಣಗೆರೆ

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

Medical negligence: ವೈದ್ಯನೊಬ್ಬನ ನಿರ್ಲಕ್ಷ್ಯಕ್ಕೆ ಶಿಶುವೊಂದು ಕಣ್ಣು ಬಿಡುವ ಮುನ್ನವೇ ಕಣ್ಣು ಮುಚ್ಚಿದೆ. ಸಿಸೇರಿಯನ್ ಮಾಡುವಾಗ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗವನ್ನೇ ವೈದ್ಯ ಕೊಯ್ದಿದ್ದಾನೆ. ಪರಿಣಾಮ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ.

VISTARANEWS.COM


on

By

Medical negligence
ವೈದ್ಯ ನಿಜಾಮುದ್ದೀನ್ ಯಡವಟ್ಟಿಗೆ ಮಗು ಸಾವು
Koo

ದಾವಣಗೆರೆ: ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯಕ್ಕೆ (Medical negligence) ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ವೈದ್ಯನ ಭಾರೀ ಯಡವಟ್ಟಿಗೆ ಹುಟ್ಟಿದಾಕ್ಷಣ ಮಗುವೊಂದು ಪ್ರಾಣವನ್ನೇ ಕಳೆದುಕೊಂಡಿದೆ. ವೈದ್ಯನೊಬ್ಬ ಹೆರಿಗೆ ಮಾಡುವಾಗ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗವನ್ನೇ ಕೊಯ್ದಿದ್ದಾನೆ.

ದಾವಣಗೆರೆ ಕೊಂಡಜ್ಜಿ ರಸ್ತೆಯಲ್ಲಿರುವ ಅರ್ಜುನ್ ಎಂಬುವವರ ಪತ್ನಿ ಅಮೃತಾ ಹೆರಿಗೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ನಾರ್ಮಲ್‌ ಡೆಲಿವರಿ ಆಗದ ಹಿನ್ನೆಲೆಯಲ್ಲಿ ಸಿಸೇರಿಯನ್ ಮಾಡಲು ವೈದ್ಯರು ಮುಂದಾಗಿದ್ದರು. ಅದರಂತೆ ಕಳೆದ ಜೂನ್ 27ರಂದು ಅಮೃತಾಗೆ ಸಿಸೇರಿಯನ್ ಮಾಡಿ ಮಗು ತೆಗೆಯಲಾಗಿತ್ತು.

ಆದರೆ ಸಿಸೇರಿಯನ್‌ ಮಾಡುವಾಗ ವೈದ್ಯ ನಿಜಾಮುದ್ದೀನ್ ಮಗು ತೆಗೆಯುವಾಗ ಮರ್ಮಾಂಗವನ್ನೇ ಕೊಯ್ದಿದ್ದಾರೆ. ನಂತರ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಕೂಡಲೇ ಜಿಲ್ಲಾಸ್ಪತ್ರೆಯಿಂದ ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಶುಕ್ರವಾರ ಮೃತಪಟ್ಟಿದೆ.

ಮಗುವಿನ ಸಾವಿಗೆ ವೈದ್ಯರು ಕಾರಣ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದರು. ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟಿಸಿ, ಮಗುವಿನ ಸಾವಿಗೆ ಕಾರಣನಾದ ವೈದ್ಯನನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.

Medical negligence

ಇದನ್ನೂ ಓದಿ: Medical Ethics : ಎದೆ ನೋವೆಂದು ಕ್ಲಿನಿಕ್​ಗೆ ಬಂದ ಯುವತಿ; ತಪಾಸಣೆ ನೆಪದಲ್ಲಿ ಅಂಗಿ ಬಿಚ್ಚಿಸಿ ಮುತ್ತಿಟ್ಟ ವೈದ್ಯ; ಕೇಸ್​ ದಾಖಲಿಸಲು ಕೋರ್ಟ್​ ಸೂಚನೆ

ಮೊದಲ ರಾತ್ರಿಯ ಟೆನ್ಶನ್‌ಗೆ ವರ ಆತ್ಮಹತ್ಯೆ? ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ

ಮದುವೆಯಾದ ಮೇಲೆ ಗಂಡನ ಮನೆಗೆ ಬರುವ ವಧು ತನ್ನ ಪತಿಯ ಜೊತೆ ಸುಖವಾಗಿ ಸಂಸಾರ ನಡೆಸುವಂತಹ ಹಲವಾರು ಕನಸುಗಳನ್ನು ಹೊತ್ತು ಬರುತ್ತಾಳೆ. ಆದರೆ ಅಂತಹ ವಧುವಿನ ಕನಸು ಕ್ಷಣಮಾತ್ರದಲ್ಲಿ ನುಚ್ಚು ನೂರಾದರೆ ಅವಳಿಗೆ ಆಘಾತವಾಗುವುದು ಖಂಡಿತ. ಅಂತಹದೊಂದು ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ. ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು ಮೊದಲ ರಾತ್ರಿಗಾಗಿ ಕೋಣೆಗೆ ಹಾಲು ತೆಗೆದುಕೊಂಡು ಹೋದಾಗ ಅಲ್ಲಿ ವರನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Self Harming) ಶರಣಾಗಿದ್ದ.

ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ರತನ್ಪುರ ಗ್ರಾಮದಲ್ಲಿ ಸಂಭ್ರಮದ ಮದುವೆ ಆಚರಣೆಗಳು ಮುಗಿದು ವಧು ಮೊದಲ ರಾತ್ರಿಗೆಂದು ವರನಿಗೆ ಹಾಲು ತೆಗೆದುಕೊಂಡು ಕೋಣೆಗೆ ಹೋದಾಗ ವರನು ಆತ್ಮಹತ್ಯೆ ಮಾಡಿಕೊಂಡಿದ್ದನು. ಇದರಿಂದ ಆ ಕುಟುಂಬದಲ್ಲಿ ಗೋಳಾಟ ಮುಗಿಲುಮುಟ್ಟಿದೆ.

Self Harming

24 ವರ್ಷದ ಸತ್ಯೇಂದ್ರ ಆತ್ಮಹತ್ಯೆ ಮಾಡಿಕೊಂಡ ವರ. ಈತ ಆತನ ವಧು ವಿನಿತಾ ಕುಮಾರಿ ಅವರೊಂದಿಗೆ ಅದ್ಧೂರಿಯಾಗಿ ಮದುವೆಯಾಗಿದ್ದು, ನಂತರ ದಿಬ್ಬಣ ಭರ್ಜರಿ ಮೆರವಣಿಗೆಯೊಂದಿಗೆ ಆತನ ಗ್ರಾಮಕ್ಕೆ ಮರಳಿದೆ. ನವವಿವಾಹಿತ ವಧುವನ್ನು ಮನೆಗೆ ಸಂಭ್ರಮದಿಂದ ಸ್ವಾಗತಿಸಲಾಗಿತ್ತು. ಹಾಗೇ ವಧುವರರ ಮೊದಲ ರಾತ್ರಿಗೆಂದು ಸಿದ್ಧತೆ ನಡೆಯುತ್ತಿದ್ದು, ವಧು ಹಾಲು ಹಿಡಿದುಕೊಂಡು ಪತಿಯ ಕೋಣೆಗೆ ಹೋದಾಗ ಆತ ಮದುವೆಯ ಉಡುಗೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಇದನ್ನು ಕಂಡು ವಧು ಆಘಾತಕ್ಕೊಳಗಾಗಿದ್ದಾಳೆ. ಈ ಸುದ್ದಿ ಕುಟುಂಬಸ್ಥರು ಮತ್ತು ಅತಿಥಿಗಳಿಗೆ ನಂಬಲು ಅಸಾಧ್ಯವಾಗಿದೆ.

ಈ ಬಗ್ಗೆ ಉಸ್ರಾಹರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸತೇಂದ್ರ ಅವರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದರೆ ಸತ್ಯೇಂದ್ರ ಅವರ ಆತ್ಮಹತ್ಯೆಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಮೊದಲ ರಾತ್ರಿಯ ಟೆನ್ಶನ್‌ಗೆ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸತ್ಯೇಂದ್ರ ಅವರ ಅಕಾಲಿಕ ಸಾವಿನ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಸಂಭ್ರಮಾಚರಣೆಯಲ್ಲಿ ತೇಲಾಡುತ್ತಿದ್ದ ಕುಟುಂಬವನ್ನು ಈ ಘಟನೆ ಶೋಕಾಚರಣೆಯಲ್ಲಿ ಮುಳುಗುವಂತೆ ಮಾಡಿದೆ. ಇನ್ನೂ ಮದುವೆಯಾಗಿ ಕ್ಷಣಗಳೇ ಕಳೆದಿದ್ದು, ಜೀವನಪರ್ಯಂತ ಒಟ್ಟಿಗೆ ಇರುತ್ತಾನೆ ಎಂದು ಭಾವಿಸಿದ ಪತಿ ಸಾವಿಗೆ ಶರಣಾಗಿದ್ದನ್ನು ಕಂಡು ವಧು ಆಘಾತಕ್ಕೊಳಗಾಗಿದ್ದಾಳೆ. ಅಲ್ಲದೇ ಸಾಲಸೂಲ ಮಾಡಿ ಮಗಳು ಗಂಡನ ಮನೆಯಲ್ಲಿ ಸುಖವಾಗಿರಲಿ ಎಂದು ಬಯಸಿದ ಆಕೆಯ ಪೋಷಕರಿಗೆ ಈ ಘಟನೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತೆ ಭಾಸವಾಗಿದೆ. ಒಟ್ಟಾರೆ ಈ ಮದುವೆ ಸಂಭ್ರಮ ದುರಂತದ ತಿರುವು ತೆಗೆದುಕೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Deadly Attack
ದೇಶ11 mins ago

Deadly Attack: ಹಾಡಹಗಲೇ ಶಿವಸೇನೆ ಮುಖಂಡನ ಮೇಲೆ ಡೆಡ್ಲಿ ಅಟ್ಯಾಕ್‌- ವಿಡಿಯೋ ಇದೆ

Viral Video
Latest14 mins ago

Viral Video: ಮೆಟ್ರೋದಲ್ಲಿ ಕೋತಿ ಚೇಷ್ಟೆಗೆ ಕೊನೆಯೇ ಇಲ್ಲ! ಈ ಮಂಗ್ಯಾನ ಡ್ಯಾನ್ಸ್‌ ನೋಡಿ!

Anganwadi workers should make good use of mobile phones says MLA Channareddy Patil Thunnur
ಯಾದಗಿರಿ24 mins ago

Yadgiri News: ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಉಪಯುಕ್ತ : ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

congratulation ceremony for Dr. Jinadatta Hadagali on 7th July in Dharwad
ಧಾರವಾಡ26 mins ago

Dharwad News: ಧಾರವಾಡದಲ್ಲಿ ಜು.7ರಂದು ಡಾ. ಜಿನದತ್ತ ಅ. ಹಡಗಲಿಗೆ ಅಭಿನಂದನಾ ಸಮಾರಂಭ

Virat kohli
ಪ್ರಮುಖ ಸುದ್ದಿ28 mins ago

Virat Kohli : ನಿವೃತ್ತಿ ಬಳಿಕ ಪತ್ನಿ ಜತೆ ಲಂಡನ್​ಗೆ ತೆರಳಿ ನೆಲೆಸಲಿದ್ದಾರೆ ವಿರಾಟ್​ ಕೊಹ್ಲಿ,

Porn Passport
ವಿದೇಶ31 mins ago

Porn Passport: ಪೋರ್ನ್ ಪಾಸ್‌ಪೋರ್ಟ್! ಅಶ್ಲೀಲ ವಿಡಿಯೊ ವೀಕ್ಷಿಸಲು ಇದು ಕಡ್ಡಾಯ!!

Lalu Prasad Yadav
ದೇಶ32 mins ago

Lalu Prasad Yadav: ಮುಂದಿನ ತಿಂಗಳು ಮೋದಿ ರಾಜೀನಾಮೆ; ಲಾಲು ಪ್ರಸಾದ್‌ ಯಾದವ್‌ ಸ್ಫೋಟಕ ಭವಿಷ್ಯ

New Fashion Trend
ಫ್ಯಾಷನ್49 mins ago

New Fashion Trend: ಜೆನ್‌ ಜಿ ಹುಡುಗ-ಹುಡುಗಿಯರ ಬೆರಳನ್ನು ಆಕ್ರಮಿಸಿದ ಫಂಕಿ ಉಂಗುರಗಳು!

CM Siddaramaiah
ಕರ್ನಾಟಕ1 hour ago

CM Siddaramaiah: ವಸತಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಸಿಎಂ ಸಿದ್ದರಾಮಯ್ಯ

karnataka Weather Forecast
ಮಳೆ2 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ3 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ4 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ6 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ7 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು9 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು9 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ13 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಟ್ರೆಂಡಿಂಗ್‌