Vijayanagara News : ಹಂಪಿಯ ಬೀದಿಬದಿ ವ್ಯಾಪಾರಿಯ ಪುತ್ರ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್‌ - Vistara News

ಕರ್ನಾಟಕ

Vijayanagara News : ಹಂಪಿಯ ಬೀದಿಬದಿ ವ್ಯಾಪಾರಿಯ ಪುತ್ರ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್‌

Vijayanagara News: ವಿಜಯನಗರ ಜಿಲ್ಲೆಯ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಪಕ್ಕದ ತುಂಗಭದ್ರ ನದಿ ದಂಡೆಯ ಮೇಲೆ ಚಹಾ ಮತ್ತು ಉಪಾಹಾರದ ಸಣ್ಣ ತಳ್ಳು ಗಾಡಿ ಹೊಂದಿರುವ ಎ. ಪದ್ಮಾವತಿ ಹಾಗೂ ಎ. ನರಸರಾಜ ಅವರ ಪುತ್ರ ಎ. ಪವನ್ ಕುಮಾರ್ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್‌ ಪಡೆದಿದ್ದಾರೆ.

VISTARANEWS.COM


on

Pawan Kumar got the 3rd rank in Mechanical Engineering at Vijayanagara district
ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್‌ ಪಡೆದ ಎ. ಪವನ್ ಕುಮಾರ್‌.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಜಯನಗರ: ಹಂಪಿಯ (Hampi) ಬೀದಿಬದಿಯ ವ್ಯಾಪಾರಿಯ ಪುತ್ರ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ (Mechanical Engineering) 3ನೇ ರ‍್ಯಾಂಕ್‌ (3rd rank) ಪಡೆದಿದ್ದಾರೆ.

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಪಕ್ಕದ ತುಂಗಭದ್ರ ನದಿ ದಂಡೆಯ ಮೇಲೆ ಚಹಾ ಮತ್ತು ಉಪಾಹಾರದ ಸಣ್ಣ ತಳ್ಳು ಗಾಡಿ ಹೊಂದಿರುವ ಎ. ಪದ್ಮಾವತಿ ಹಾಗೂ ಎ. ನರಸರಾಜ ಅವರ ಪುತ್ರ ಎ. ಪವನ್ ಕುಮಾರ್ ಎಂಬುವವರೇ ರ‍್ಯಾಂಕ್‌ ಗಳಿಸಿರುವ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ.

2022-23 ನೇ ಸಾಲಿನ ಶೈಕ್ಷಣಿಕ ಸಾಲಿನ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಒಟ್ಟು 9.46 ಸಿ.ಜಿ.ಪಿ.ಎ ಅಂಕ ಪಡೆದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ 3ನೇ ರ‍್ಯಾಂಕ್‌ ಅನ್ನು ಪಡೆದಿದ್ದಾರೆ.

ಇದನ್ನೂ ಓದಿ: IND vs WI 3rd Odi: ಐಷಾರಾಮಿ ಬೇಡ,ಮೂಲ ಸೌಕರ್ಯ ಒದಗಿಸಿ; ಹಾರ್ದಿಕ್​ ಪಾಂಡ್ಯ ಅಸಮಾಧಾನ

ಹೊಸಪೇಟೆಯ ಪ್ರೌಢದೇವರಾಯ ಕಾಲೇಜಿನ ವಿದ್ಯಾರ್ಥಿಯಾಗಿರುವ ಎ. ಪವನ್ ಕುಮಾರ್ ಬಡತನದಲ್ಲಿ ಅರಳಿದ ಪ್ರತಿಭೆಯಾಗಿದ್ದು, ತಂದೆ-ತಾಯಿ ದಿನನಿತ್ಯ ಬೀದಿ ಬದಿಯಲ್ಲಿ ವ್ಯಾಪಾರವನ್ನು ಮಾಡಿಕೊಂಡು ಕಷ್ಟಪಟ್ಟು ಮಗನನ್ನು ಓದಿಸಿದ್ದಾರೆ. ಎಂಜಿನಿಯರಿಂಗ್‌ ಪದವಿಯಲ್ಲಿ ಪುತ್ರ 3ನೇ ರ‍್ಯಾಂಕ್‌ ಪಡೆದಿರುವುದಕ್ಕೆ ದಂಪತಿ ಹರ್ಷ ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Theft Case: ಶಿರಾದಲ್ಲಿ ಪೊಲೀಸರಂತೆ ನಟಿಸಿ ಮಹಿಳೆಯ ಮಾಂಗಲ್ಯ ಕಳವು!

Theft Case: ಶಿರಾ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಬಳಿ ಪೊಲೀಸ್ ಅಧಿಕಾರಿಗಳಂತೆ ನಟಿಸಿ, ವಂಚಕರಿಬ್ಬರು ಮಹಿಳೆಯೊಬ್ಬರ 1.50 ಲಕ್ಷ ರೂ. ಮೌಲ್ಯದ 48 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿರುವ ಘಟನೆ ಜರುಗಿದೆ.

VISTARANEWS.COM


on

Mangalya chain was stolen by pretending to be a police in Shira
Koo

ಶಿರಾ: ಪೊಲೀಸ್ ಅಧಿಕಾರಿಗಳಂತೆ ನಟಿಸಿ, ವಂಚಕರಿಬ್ಬರು ಮಹಿಳೆಯೊಬ್ಬರ 1.50 ಲಕ್ಷ ರೂ. ಮೌಲ್ಯದ 48 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕದ್ದು (Theft Case) ಪರಾರಿಯಾಗಿರುವ ಘಟನೆ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಬಳಿ ಶುಕ್ರವಾರ ನಡೆದಿದೆ.

ತಾಲೂಕಿನ ಕಡವಿಗೆರೆ ಗ್ರಾಮದ ಅಶ್ವತ್ಥಮ್ಮ ಮಾಂಗಲ್ಯ ಸರ ಕಳೆದುಕೊಂಡವರು. ಅನಾರೋಗ್ಯದ ಹಿನ್ನೆಲೆಯಲ್ಲಿ ಮಾತ್ರೆಗಳನ್ನು ತೆಗೆದುಕೊಂಡು ಸ್ಥಳೀಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗ ಹೋಗುತ್ತಿರುವ ವೇಳೆ ಪೊಲೀಸರು ಎಂದು ಹೇಳಿಕೊಂಡ ಇಬ್ಬರು ಅಪರಿಚಿತರು ಗಮನ ಬೇರೆಡೆಗೆ ಸೆಳೆದು ಅಶ್ವತ್ಥಮ್ಮ ಅವರ ಬಂಗಾರದ ಸರ ತೆಗೆಸಿ, ಪೇಪರ್ ಕವರ್‌ನಲ್ಲಿ ಹಾಕುವಂತೆ ತಿಳಿಸಿದ್ದರು. ಬಳಿಕ ಆ ಕವರನ್ನು ಅಶ್ವಥಮ್ಮ ಅವರ ಬ್ಯಾಗ್‌ನಲ್ಲಿರಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Murder Case: ಹುಬ್ಬಳ್ಳಿಯಲ್ಲಿ ಚಾಕುವಿನಿಂದ ಇರಿದು ಯುವಕನ ಹತ್ಯೆ

ಅಲ್ಲಿಂದ ಸ್ವಲ್ಪ ದೂರ ತೆರಳಿದ್ದ ಅಶ್ವತ್ಥಮ್ಮ, ಬಳಿಕ ಬ್ಯಾಗ್‌ನಲ್ಲಿದ್ದ ಪೇಪರ್ ಕವರ್ ತೆಗೆದು ನೋಡಿದಾಗ ಆಘಾತ ಕಾದಿತ್ತು. ಪೇಪರ್ ಕವರ್‌ನಲ್ಲಿ ಚಿನ್ನದ ಮಾಂಗಲ್ಯ ಸರ ಇರಲಿಲ್ಲ. ಇದನ್ನು ಗಮನಿಸಿದ ತಕ್ಷಣವೇ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಬಳಿ ಬಂದು ನೋಡಿದಾಗ ವಂಚಕರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಅಶ್ವಥಮ್ಮ ನೀಡಿದ ದೂರಿನ ಮೇರೆಗೆ ಶಿರಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಕರ್ನಾಟಕ

Pralhad Joshi: ಕೇವಲ ಶೇ.0.1 ಮತ ಗಳಿಕೆ ಹೆಚ್ವಿದ್ದಕ್ಕೇ ಕಾಂಗ್ರೆಸ್ ಗೆದ್ದ ಭ್ರಮೆಯಲ್ಲಿದೆ; ಪ್ರಲ್ಹಾದ್ ಜೋಶಿ ಗೇಲಿ

Pralhad Joshi: ಕಳೆದ 3 ಲೋಕಸಭೆ ಚುನಾವಣೆಗಳಿಗೆ ಹೋಲಿಸಿದರೆ ಕಾಂಗ್ರೆಸ್ ನಮಗೆ ಸರಿ ಸಾಟಿಯೇ ಅಲ್ಲ. 2014, 2019 ಮತ್ತು 2024 ಈ ಮೂರೂ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದ ಸಂಖ್ಯೆ ಬಿಜೆಪಿಯ ಪ್ರಸ್ತುತ ಫಲಿತಾಂಶಕ್ಕೆ ಸಮವಿಲ್ಲ. ಕಾಂಗ್ರೆಸ್ ಈ ಮೂರೂ ಚುನಾವಣೆಗಳಲ್ಲಿ ಒಟ್ಟಾರೆ 140ರಿಂದ 150 ಸ್ಥಾನ ಗೆದ್ದರೆ ಬಿಜೆಪಿ ಒಂದೇ ಚುನಾವಣೆಯಲ್ಲಿ 240 ಸ್ಥಾನಗಳನ್ನು ಗೆದ್ದುಕೊಂಡಿದೆ. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಗೆ ಕಳೆದ ಬಾರಿಗಿಂತ ತುಸು ಕಡಿಮೆ ಸೀಟುಗಳು ಬಂದಿವೆ ನಿಜ. ಚುನಾವಣೆಯಿಂದ ಚುನಾವಣೆಗೆ ವ್ಯತ್ಯಾಸ ಆಗೋದು ಸಹಜವೇ. ಆದರೆ, ಇಡೀ ಇಂಡಿ ಕೂಟ ಪಡೆದ ಸ್ಥಾನಗಳೂ ಬಿಜೆಪಿಗೆ ಸರಿ ಸಮನಾಗಿಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಟೀಕಿಸಿದ್ದಾರೆ.

VISTARANEWS.COM


on

Union Minister Pralhad Joshi statement
Koo

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ (Lok Sabha Election) ಕೇವಲ ಶೇ.0.1 ರಷ್ಟು ವೋಟ್ ಶೇರ್ ಹೆಚ್ಚಿಸಿಕೊಂಡ ಕಾಂಗ್ರೆಸ್ (Congress) ಗೆದ್ದ ಭ್ರಮೆಯಲ್ಲಿದ್ದು, ಇಂಡಿ ಒಕ್ಕೂಟ ದೇಶದಲ್ಲಿ ಇಲ್ಲವೇ ಇಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಟೀಕಿಸಿದರು.

ಬೆಂಗಳೂರಿನಲ್ಲಿ ಇಂದು ಬಿಜೆಪಿ-ಜೆಡಿಎಸ್ ನೂತನ ಸಂಸದರಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ದೇಶದಲ್ಲಿ 230 ಸ್ಥಾನಗಳನ್ನು ಗೆದ್ದಿದ್ದು, ಇದು ಬಿಜೆಪಿ ಒಂದೇ ಪಕ್ಷ ಪಡೆದ ಸೀಟುಗಳಿಗೂ ಸರಿ ಸಮವಾಗಿಲ್ಲ. ಕಾಂಗ್ರೆಸ್ಸಿಗರು ವಾಸ್ತವ ಅರಿಯಲಿ ಎಂದು ಹೇಳಿದರು.

ಬಿಜೆಪಿಗೆ ಸಾಟಿಯೇ ಅಲ್ಲ ಕಾಂಗ್ರೆಸ್

ಕಳೆದ ಮೂರು ಲೋಕಸಭೆ ಚುನಾವಣೆಗಳಿಗೆ ಹೋಲಿಸಿದರೆ ಕಾಂಗ್ರೆಸ್ ನಮಗೆ ಸರಿ ಸಾಟಿಯೇ ಅಲ್ಲ. 2014, 2019 ಮತ್ತು 2024 ಈ ಮೂರೂ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದ ಸಂಖ್ಯೆ ಬಿಜೆಪಿಯ ಪ್ರಸ್ತುತ ಫಲಿತಾಂಶಕ್ಕೆ ಸಮವಿಲ್ಲ. ಕಾಂಗ್ರೆಸ್ ಈ ಮೂರೂ ಚುನಾವಣೆಗಳಲ್ಲಿ ಒಟ್ಟಾರೆ 140 ರಿಂದ 150 ಸ್ಥಾನ ಗೆದ್ದರೆ ಬಿಜೆಪಿ ಒಂದೇ ಚುನಾವಣೆಯಲ್ಲಿ 240 ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ಸಚಿವ ಜೋಶಿ ವಿಶ್ಲೇಷಿಸಿದರು.

ಇದನ್ನೂ ಓದಿ: HD Kumaraswamy: ಎಚ್‌ಎಂಟಿ ಕಾರ್ಖಾನೆಗೆ ಮರು ಜೀವ: ಎಚ್.ಡಿ. ಕುಮಾರಸ್ವಾಮಿ

ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಗೆ ಕಳೆದ ಬಾರಿಗಿಂತ ತುಸು ಕಡಿಮೆ ಸೀಟುಗಳು ಬಂದಿವೆ ನಿಜ. ಚುನಾವಣೆಯಿಂದ ಚುನಾವಣೆಗೆ ವ್ಯತ್ಯಾಸ ಆಗೋದು ಸಹಜವೇ. ಆದರೆ, ಇಡೀ ಇಂಡಿ ಕೂಟ ಪಡೆದ ಸ್ಥಾನಗಳೂ ಬಿಜೆಪಿಗೆ ಸರಿ ಸಮನಾಗಿಲ್ಲ ಎಂದು ಹೇಳಿದರು.

ಅರ್ಥವೇ ಇಲ್ಲದ ಇಂಡಿ ಕೂಟ

ಬಿಜೆಪಿಯನ್ನು ವಿರೋಧಿಸಲೆಂದೇ ಹುಟ್ಟಿಕೊಂಡ ಕಾಂಗ್ರೆಸ್ ನೇತೃತ್ವದ ಇಂಡಿ ಕೂಟಕ್ಕೆ ಅರ್ಥವೇ ಇಲ್ಲ. ದೇಶದಲ್ಲೆಲ್ಲೂ ಇಂಡಿಗೆ ನೆಲೆಯೇ ಇಲ್ಲ. ಇಂಡಿ ಕೂಟದಲ್ಲಿ ಸಮನ್ವಯತೆ ಇಲ್ಲವೆಂದು ಸಚಿವ ಪ್ರಲ್ಹಾದ್‌ ಜೋಶಿ ಟೀಕಿಸಿದರು.

ಬೆಂಗಳೂರಿನಲ್ಲಿ ಇಂದು ಬಿಜೆಪಿ-ಜೆಡಿಎಸ್ ನೂತನ ಸಂಸದರಿಗೆ ಅಭಿನಂದನೆ ಸಮಾರಂಭ ಜರುಗಿತು.

ಕೇರಳದಲ್ಲಿ ಇಂಡಿ ಕೂಟದಲ್ಲಿ ಪರಸ್ಪರ ಬಡಿದಾಟವಿದೆ. ದೆಹಲಿಯಲ್ಲಿ ಎಎಪಿ+ ಕಾಂಗ್ರೆಸ್ ಚುನಾವಣೆಗೆ ಹೋಗುತ್ತಿವೆ. ಪಂಜಾಬ್ ಅಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟವಿದೆ. ಹೀಗೆ ದೇಶದ ಎಲ್ಲೆಡೆಯೂ ಇಂಡಿ ಕೂಟದಲ್ಲಿ ಸಮನ್ವಯ ಇಲ್ಲವೇ ಇಲ್ಲ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ: KEA: ಕೆಇಎಯಿಂದ ಮೊದಲ ಬಾರಿ ಯಶಸ್ವಿ ವೆಬ್‌ಕಾಸ್ಟಿಂಗ್; 37 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಡಿಸಿಇಟಿ

ವಯನಾಡಲ್ಲಿ ಪ್ರಿಯಾಂಕಾಗೆ ಬೆಂಬಲ ಸಿಗುತ್ತದೆಯೇ?

ಪ್ರಿಯಾಂಕಾ ಗಾಂಧಿ ವಯನಾಡಲ್ಲಿ ಸ್ಪರ್ಧಿಸಲು ಹೊರಟಿದ್ದಾರೆ. ಸಿಪಿಐ, ಸಿಪಿಎಂ ಪಕ್ಷಗಳು ಅಲ್ಲಿ ನಿಮ್ಮನ್ನು ಬೆಂಬಲಿಸುತ್ತವೆಯೇ? ನೋಡಿಕೊಳ್ಳಿ ಎಂದು ಪ್ರಲ್ಹಾದ್‌ ಜೋಶಿ ಸವಾಲು ಹಾಕಿದರು.

NDA ಗೆಲುವಿನ ನಾಗಾಲೋಟ

ದೇಶದಲ್ಲಿ ಬಿಜೆಪಿ ನೇತೃತ್ವದ NDA ಗೆಲುವಿನ ನಾಗಾಲೋಟ ಮುಂದುವರೆಸಿದೆ. 10 ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. 7 ರಾಜ್ಯ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮತ ಪಡೆದಿದೆ. ಒಡಿಸ್ಸಾದಲ್ಲಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸುತ್ತಿದೆ. ಅರುಣಾಚಲ ಪ್ರದೇಶದಲ್ಲಿ 46 ಸ್ಥಾನಗಳನ್ನು ಗೆದ್ದು ಹೊಸ ದಾಖಲೆ ಬರೆದಿದೆ ಬಿಜೆಪಿ. ಆಂಧ್ರಪ್ರದೇಶದಲ್ಲಿ ಸಹ NDA ಆಡಳಿತದಲ್ಲಿದೆ. ಪಂಜಾಬ್ ಅಲ್ಲಿ ಅಪಪ್ರಚಾರದ ನಡುವೆಯೂ ಶೇ.10ರಷ್ಟು ಹೆಚ್ಚು ಮತ ಪಡೆದಿದ್ದೇವೆ ಎಂದು ಪ್ರಲ್ಹಾದ್‌ ಜೋಶಿ, ಎನ್‌ಡಿಎ ಸಾಧನೆಯನ್ನು ಬಿಚ್ಚಿಟ್ಟರು.

ಇದನ್ನೂ ಓದಿ: GST Council Meet : ನಕಲಿ ಬಿಲ್​ ತಡೆಗೆ ಬಯೋಮೆಟ್ರಿಕ್​ ವ್ಯವಸ್ಥೆ; ಜಿಎಸ್​ಟಿ ಕೌನ್ಸಿಲ್​ ಸಭೆಯಲ್ಲಿ ಹಲವು ನಿರ್ಧಾರಗಳು ಪ್ರಕಟ

ಕಾಂಗ್ರೆಸ್ 2 ಬಾರಿ ಸಮ್ಮಿಶ್ರ ಸರ್ಕಾರ ನಡೆಸಲಿಲ್ಲವೇ?

ಕೇಂದ್ರದಲ್ಲಿ ಕಾಂಗ್ರೆಸ್ 2 ಬಾರಿ ಸಮ್ಮಿಶ್ರ ಸರ್ಕಾರ ನಡೆಸಲಿಲ್ಲವೇ? ಎಂದು ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದರು. 2004ರಲ್ಲಿ ಕಾಂಗ್ರೆಸ್ 145 ಸೀಟು ಪಡೆದಿತ್ತು. ಬಿಜೆಪಿ 138 ಸೀಟು ಪಡೆದಿತ್ತು. ಆಗ ಕೇವಲ ಏಳೇ ಸೀಟು ಹೆಚ್ಚು ಪಡೆದು ಆಡಳಿತ ನಡೆಸಿದ ಕಾಂಗ್ರೆಸ್ ಈಗ 242 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿಯನ್ನು ಪ್ರಶ್ನಿಸುತ್ತಿದೆ ಎಂದು ವ್ಯಂಗ್ಯವಾಡಿದರು.

Continue Reading

ಕರ್ನಾಟಕ

Murder Case: ಹುಬ್ಬಳ್ಳಿಯಲ್ಲಿ ಚಾಕುವಿನಿಂದ ಇರಿದು ಯುವಕನ ಹತ್ಯೆ

Murder Case: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

VISTARANEWS.COM


on

Murder Case
Koo

ಹುಬ್ಬಳ್ಳಿ: ಚಾಕುವಿನಿಂದ ಇರಿದು ಯುವಕನ ಹತ್ಯೆ ಮಾಡಿರುವ ಘಟನೆ (Murder Case) ಹಳೇ ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ. ಎಲೆಕ್ಟ್ರಿಷಿಯನ್ ಆಕಾಶ ಮಠಪತಿ ಕೊಲೆಯಾದ ಯುವಕ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Actor Pratham: ನಟ ಪ್ರಥಮ್‌ಗೆ ಜೀವ ಬೆದರಿಕೆ; ದರ್ಶನ್ ಅಭಿಮಾನಿಗಳ ಮೇಲೆ ಬಿತ್ತು ಕೇಸ್‌

ಆಂತರಿಕ ಮಾಹಿತಿ ಸೋರಿಕೆ; ಮತ್ತಿಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

ತುಮಕೂರು: ಅಪರಾಧಿಗಳಿಗೆ ಪೊಲೀಸ್ ಇಲಾಖೆಯ ಆಂತರಿಕ ಮಾಹಿತಿ ಸೋರಿಕೆ ಆರೋಪದಲ್ಲಿ ತುಮಕೂರಿನಲ್ಲಿ ಮತ್ತಿಬ್ಬರು ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿದ್ದಾರೆ. ಹೊಸ ಬಡಾವಣೆ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಅಬ್ದುಲ್ ಘನಿ ಹಾಗೂ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಕಿರಣ್ ಅಮಾನತುಗೊಂಡವರು.

ಪತ್ರಕರ್ತರೊಬ್ಬರ ಕೊಲೆಯ ಸಂಚು ಸೇರಿ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧನದಲ್ಲಿರುವ ಆರೋಪಿಗಳಿಗೆ ಮಾಹಿತಿ ಸೋರಿಕೆ ಆರೋಪದಲ್ಲಿ ಜೂ.10ರಂದು ಐವರು ಪೊಲೀಸ್ ಸಿಬ್ಬಂದಿಯನ್ನು ಎಸ್‌ಪಿ ಅಶೋಕ್ ಅಮಾನತು ಮಾಡಿದ್ದರು. ಇದೀಗ ಮತ್ತೆ ಇಲಾಖೆಯ ಆಂತರಿಕ ಮಾಹಿತಿ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಅಮಾನತು ಮಾಡಲಾಗಿದೆ.

50 ವರ್ಷದ ಅಂಕಲ್‌ ಜತೆಗೆ 19ರ ಯುವತಿ ನಾಪತ್ತೆ

Love Case

ತುಮಕೂರು: ವಿವಾಹಿತ ಪುರುಷನೊಂದಿಗೆ ಕಾಲೇಜು ವಿದ್ಯಾರ್ಥಿನಿ (Love case) ನಾಪತ್ತೆ (Missing Case) ಆಗಿದ್ದು, ಕೆರೆಯ ದಡದಲ್ಲಿ ಇಬ್ಬರ ಚಪ್ಪಲಿಗಳು ಪತ್ತೆಯಾಗಿವೆ. ಕೆರೆ ಬಳಿ ಕಾರು ನಿಲ್ಲಿಸಿ ಮೊಬೈಲ್‌ಗಳನ್ನು ಕಾರಿನೊಳಗೆ ಇಟ್ಟು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಘಟನೆ ನಡೆದಿದೆ.

ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ಅನನ್ಯ (19) ಹಾಗೂ ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ (50) ನಾಪತ್ತೆಯಾದವರು. ವಯಸ್ಸಿನ ಅಂತರ ಇದ್ದರೂ, ಇವರಿಬ್ಬರ ನಡುವೆ ಅದ್ಹೇಗೋ ಪ್ರೀತಿ ಚಿಗುರಿತ್ತು. ಕದ್ದುಮುಚ್ಚಿ ಇದ್ದ ಇವರಿಬ್ಬರ ಪ್ರೀತಿ ಕುಟುಂಬಸ್ಥರಿಗೆ ತಿಳಿದುಹೋಗಿತ್ತು. ಈ ಪ್ರೀತಿಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರಿಂದ, ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಎನ್ನಲಾಗಿದೆ.

ಕಳೆದ 3 ದಿನಗಳ ಹಿಂದೆ ಅನನ್ಯ ಮನೆಯಿಂದ ನಾಪತ್ತೆಯಾಗಿದ್ದಳು. ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದ್ದರು. ಈ ನಡುವೆ ಮಾವತ್ತೂರು ಕೆರೆ ಬಳಿ ಆಕೆಯ ಚಪ್ಪಲಿ ಪತ್ತೆಯಾಗಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೋಟ್ ಸಹಾಯದಿಂದ ಕೆರೆಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ | Road Accident : ಯಮರೂಪಿಯಾಗಿ ಬಂದ ಟಾಟಾ ಏಸ್‌ ವಾಹನಕ್ಕೆ ಮೂವರು ಬಲಿ

ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಅನಿಲ್, ಕೊಳಾಲ ಪಿಎಸ್‌ಐ ರೇಣುಕಾ ಯಾದವ್, ಯೋಗೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನೂ ಈ ವಿಷಯ ಎಲ್ಲೆಡೆ ಹಬ್ಬುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಕೊಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading

ಬೆಂಗಳೂರು

Bengaluru News: ಐಟಿಐ ಸೆಂಟ್ರಲ್ ಶಾಲೆಯಲ್ಲಿ ಯೋಗ ದಿನಾಚರಣೆ

Bengaluru News: ಬೆಂಗಳೂರು ನಗರದ ಐ.ಟಿ.ಐ. ಸೆಂಟ್ರಲ್ ಶಾಲೆಯಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಎನ್.ಸಿ.ಸಿ. ತಂಡ ಹಾಗೂ ವಿದ್ಯಾರ್ಥಿಗಳಿಂದ ಹಲವು ಯೋಗಾಸನಗಳನ್ನು ಪ್ರದರ್ಶಿಸಲಾಯಿತು.

VISTARANEWS.COM


on

10th International Yoga Day celebration at ITI Central School Bengaluru
Koo

ಬೆಂಗಳೂರು: ನಗರದ ಐ.ಟಿ.ಐ ಸೆಂಟ್ರಲ್ ಶಾಲೆಯಲ್ಲಿ (Bengaluru News) 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (Yoga Day) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಎನ್.ಸಿ.ಸಿ. ತಂಡ ಹಾಗೂ ವಿದ್ಯಾರ್ಥಿಗಳಿಂದ ಹಲವು ಯೋಗಾಸನಗಳನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರಮತಿ ಪೊನ್ಮಲರ್ ಮಾತನಾಡಿ, ಯೋಗಾಭ್ಯಾಸದಿಂದ ಮನಸ್ಸು, ದೇಹ, ಆಲೋಚನೆ ಮತ್ತು ಕ್ರಿಯೆಗಳನ್ನು ಸಮಚಿತ್ತಗೊಳಿಸಲು ಸಹಕಾರಿಯಾಗಿದೆ. ಯೋಗ ಕೇವಲ ವ್ಯಾಯಾಮವಷ್ಟೇ ಅಲ್ಲದೇ ನಮ್ಮೆಲ್ಲರ ನಡುವೆ ಏಕತೆಯನ್ನು ಬಿಂಬಿಸುವ ಚಟುವಟಿಕೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: GST Council Meet : ನಕಲಿ ಬಿಲ್​ ತಡೆಗೆ ಬಯೋಮೆಟ್ರಿಕ್​ ವ್ಯವಸ್ಥೆ; ಜಿಎಸ್​ಟಿ ಕೌನ್ಸಿಲ್​ ಸಭೆಯಲ್ಲಿ ಹಲವು ನಿರ್ಧಾರಗಳು ಪ್ರಕಟ

ಯೋಗ ಪ್ರತಿಯೊಬ್ಬರ ಜೀವನದಲ್ಲೂ ಖಾಯಿಲೆ ಮುಕ್ತ , ಆರೋಗ್ಯವಂತ ಹಾಗೂ ಜೀವನಶೈಲಿಯನ್ನು ಬದಲಾಯಿಸಲು ಇರುವ ಒಂದು ವಿಶಿಷ್ಟ ಮಾರ್ಗ ಎಂದು ಹೇಳಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಐ.ಟಿ.ಐ ಸೆಂಟ್ರಲ್ ಶಾಲೆಯ ಎನ್.ಸಿ.ಸಿ ತಂಡ ಹಾಗೂ ವಿದ್ಯಾರ್ಥಿಗಳಿಂದ ಹಲವು ಯೋಗಾಸನಗಳನ್ನು ಎನ್.ಸಿ.ಸಿ. ಅಧಿಕಾರಿ ಬಾಲಕೃಷ್ಣ ವಿ.ಎಚ್. ಅವರ ಮಾರ್ಗದರ್ಶನದಲ್ಲಿ ಪ್ರದರ್ಶಿಸಲಾಯಿತು.

ಈ ವೇಳೆ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ತ್ರಿಕೋನಾಸನ, ಅರ್ಧಉಷ್ಟ್ರಾಸನ, ಶಶಾಂಕಾಸನ, ಸೇತುಬಂದಾಸನ, ಶಲಭಾಸನ, ಚಕ್ರಾಸನ, ಭುಜಂಗಾಸನ ಹಾಗೂ ಪ್ರಾಣಾಯಾಮಗಳನ್ನು ಪ್ರದರ್ಶಿಸಲಾಯಿತು. ಐ.ಟಿ.ಐ. ಕಾರ್ಖಾನೆಯ ವಿವಿಧ ಸ್ಥಳಗಳಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾಮಂದಿರ ಶಾಲೆ, ಐ.ಟಿ.ಐ. ಮಹಿಳಾ ಸಬಲೀಕರಣ ಸಮಿತಿಯಿಂದಲೂ ಯೋಗ ಕಾರ್ಯಕ್ರಮ ಜರುಗಿತು.

ಇದನ್ನೂ ಓದಿ: Job Alert: ಅಂಚೆ ಇಲಾಖೆಯಲ್ಲಿ 50,000ಕ್ಕೂ ಹೆಚ್ಚಿನ ಹುದ್ದೆಗೆ ಅರ್ಜಿ ಆಹ್ವಾನ

ಕಾರ್ಯಕ್ರಮದಲ್ಲಿ ಐ.ಟಿ.ಐ. ವಿದ್ಯಾಸಮಿತಿಯ ಆಡಳಿತಾಧಿಕಾರಿ ಲತಾ ಹಾಗೂ ಶಿಕ್ಷಕರು ಮತ್ತು ಇತರರು ಪಾಲ್ಗೊಂಡಿದ್ದರು.

Continue Reading
Advertisement
Menopausal Weight Gain
ಆರೋಗ್ಯ5 mins ago

Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?

Vastu Tips
ಧಾರ್ಮಿಕ35 mins ago

Vastu Tips: ತಿಳಿದಿರಲಿ, ಕನ್ನಡಿಯೂ ನುಡಿಯುತ್ತದೆ ನಮ್ಮ ಭವಿಷ್ಯ!

Virat kohli
ಪ್ರಮುಖ ಸುದ್ದಿ1 hour ago

Virat Kohli : ಐಸಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ ವಿರಾಟ್​ ಕೊಹ್ಲಿ

Dina bhavishya
ಭವಿಷ್ಯ1 hour ago

Dina Bhavishya : ಈ ರಾಶಿಯವರು ಮಡದಿಯ ಪ್ರೀತಿಗೆ ಸೋಲುವಿರಿ; ಮನೆಯಲ್ಲಿ ಸಂತೋಷದ ದಿನ

NEET UG
ಪ್ರಮುಖ ಸುದ್ದಿ6 hours ago

NEET UG : ನೀಟ್​ ಪರೀಕ್ಷೆ ಅಕ್ರಮಗಳ ತನಿಖೆ ಹೊಣೆ ಸಿಬಿಐಗೆ ಒಪ್ಪಿಸಿದ ಕೇಂದ್ರ ಸರ್ಕಾರ

T20 world cup 2024
ಪ್ರಮುಖ ಸುದ್ದಿ7 hours ago

T20 World Cup 2024 : ಬಾಂಗ್ಲಾದೇಶ ವಿರುದ್ಧ ಭಾರತಕ್ಕೆಭರ್ಜರಿ 50 ರನ್​ಗಳ ಭರ್ಜರಿ ಗೆಲುವು

Mangalya chain was stolen by pretending to be a police in Shira
ಕರ್ನಾಟಕ7 hours ago

Theft Case: ಶಿರಾದಲ್ಲಿ ಪೊಲೀಸರಂತೆ ನಟಿಸಿ ಮಹಿಳೆಯ ಮಾಂಗಲ್ಯ ಕಳವು!

Union Minister Pralhad Joshi statement
ಕರ್ನಾಟಕ7 hours ago

Pralhad Joshi: ಕೇವಲ ಶೇ.0.1 ಮತ ಗಳಿಕೆ ಹೆಚ್ವಿದ್ದಕ್ಕೇ ಕಾಂಗ್ರೆಸ್ ಗೆದ್ದ ಭ್ರಮೆಯಲ್ಲಿದೆ; ಪ್ರಲ್ಹಾದ್ ಜೋಶಿ ಗೇಲಿ

NEET-PG
ದೇಶ7 hours ago

NEET PG : ಪರೀಕ್ಷಾ ಅಕ್ರಮ; ನಾಳೆ ನಿಗದಿಯಾಗಿದ್ದ ನೀಟ್-ಪಿಜಿ ಪರೀಕ್ಷೆ ಮುಂದೂಡಿಕೆ

NEET UG row
ಪ್ರಮುಖ ಸುದ್ದಿ7 hours ago

NEET UG Row : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮುಖ್ಯಸ್ಥರನ್ನು ವಜಾಗೊಳಿಸಿದ ಕೇಂದ್ರ ಸರ್ಕಾರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ2 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ6 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ7 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ7 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌